ಅಷ್ಟಮಿ ದಾರ ಕಟ್ಟಿಕೊಳ್ಳುವ ಕಥೆ🙏ಪೂಜ್ಯ ಮೊಕಾಶಿ ಆಚಾರ್ಯರ ವಾಣಿಯಲ್ಲಿ
This festival is celebrated widely in North Karnataka. This festival falls on the 8th day of the Hindu month Bhadrapada, August – September of Gregorian calendar.
Ele Astami is also known as Jeshta Devi Pooja.
Those families who have been celebrating this festival since generations usually perform the pooja. The ritual is very similar to Swarna Gowri Vratha.
The only difference in this festival is that 16 threads dipped in turmeric paste are tied with flowers and kept in front of the idol.
This is then tied on the neck of the ladies who perform the pooja.
*******
HOW TO PERFORM THE VRATHA
It is one of the popular vrathas observed during Jyeshta nakshatra hence known as Jyeshta Gowri Vratha.
This three-day puja usually starts on the 6th day of Bhadrapad month and ends on the 8th day of the month.
Married women perform Haldi-kumkum celebrations and distribute several types of offerings among them.
The procedure of puja may differ from caste to caste and region to region.
Generally, Goddess Gauri is offered special prayers and after the puja the idol is immersed in water. This vratha is also known as Shodasha Uma Vratha as the number ‘16’ has special significance in this puja. Gauri is referred to as Mahalakshmi in some households of North Karnataka.
Devotees bring Jyeshta Gauri to their homes in pairs such as Jyeshtha – Kanishtha, Sakhi – Parvati etc. Devotees place the Goddess in various forms like pebbles, masks, decorations, haldi, or clay idols. Terda plants are used to place the mask of Gauri upon it. Pebbles (5 or 7) are also used to symbolize the Goddess.
16 types of special recipes, and Aarti with 16 lamps are offered to Gauri Mata.
Jyeshta Gauri Vrat katha is associated with the demolition of a demon in the hands of the Goddess. The story is recited during the puja.
On the third day, Jyeshta Gauri idol is immersed in water bodies.
The first day of the puja is known as Jyeshta Gowri Avahana
the second day as Jyeshta Gowri pooja
and the third day is referred to as Jyeshta Gowri Visarjana
According to the legend mentioned in Scriptures, during the battle between the deities and the demons, the wives of the deities (Gods) were harassed. All the women went to Goddess Sri Mahalakshmi and worshipped her to demolish the demons. Appeased by the prayers, Sri Mahalakshmi vanquished the demons on Ashtami, the eighth day of Shukla Paksha in Bhadrapda Month to relieve the deities from the dangers.
To commemorate this, Goddess Mahalakshmi is worshipped in the form of Jyeshta Gauri Devi on Bhadrapada Ashtami.
We invoke Gauri on the day in order to welcome the deity of knowledge and the supernatural powers which accompany Lord Ganesha. To surrender ourselves to Gauri and Ganesha, we invoke Gauri on this day with a great sense of gratitude.
According to the religious practices, Ganesha Pujan creates the frequencies in the house of the performer. The performer can get the benefits of these frequencies with Gauri Avahan and Puja.
*********
ಭಾದ್ರಪದ ಶುಕ್ಲ ಜೇಷ್ಠಾ ನಕ್ಷತ್ರದಂದು. ಗ್ರಹಸ್ಥರ ಸೇವೆ. ಹಿಂದಿನ ದಿನ ರಾತ್ರಿ ದೇವರಿಗೆ ಹತ್ತಿಯೇರಿಸಿ, ಪ್ರಸಾದ ರುಪದ ಹತ್ತಿಯಿಂದ ಎಳೆ ತಯಾರಿಸುವುದು. ಎಳೆಗಳ ಪೂಜೆ ಮಾಡಿ ವೃತದಾರಿಗಳಿಗೆ ನೀಡುವುದು. ಶುಕ್ಲ ಸಪ್ತಮಿಯಿಂದ ಪ್ರಾರಂಭಗೊಂಡು ದಶಮಿಯ ಪರ್ಯಂತ ನಡೆಯುವ ಈ ಆರಾಧನೆಯಲ್ಲಿ ಲಕ್ಷ್ಮೀ, ವಿಷ್ಣು, ಕೇದಾರೇಶ್ವರ, ಪಶುಪತಿ, ನವದುರ್ಗಾ, ಧಾನ್ಯ ಶಂಕರಿ ದೇವತೆಗಳನ್ನು ಆರಾಧಿಸಲಾಗುವುದು.
ಪ್ರತಿ ವರ್ಷವೂ ಭಾದ್ರಪದ ಶುದ್ಧ ಅಷ್ಟಮಿ ದಿನ ಹಿಂದೆ ದೇವಸ್ಥಾನಗಳಲ್ಲಿ ಎಳೆ ಗೌರಮ್ಮನನ್ನು ಕೂರಿಸುತ್ತಿದ್ದರು. ಅಷ್ಟಮಿ ದಿನ ರಾತ್ರಿ ಪೂಜೆ ಮಾಡುವುದು ವಾಡಿಕೆ. ನವಮಿಯಂದು ಬೆಳೆಗ್ಗೆ ಅಷ್ಟಮಿ ದೇವಕಾರ್ಯವಿದ್ದ ಮನೆಯವರು ದೇವಸ್ಥಾನಕ್ಕೆ ಹೋಗಿ ಎಳೆತಂದು ದೇವರಿಗೆ ರುದ್ರಾಭಿಷೇಕ ಪೂಜೆ ಮಾಡಿ ಎಳೆಗೆ ಪೂಜೆ ಮಾಡಿ ಬಂದವರಿಗೆಲ್ಲಾ ತೀರ್ಥಪ್ರಸಾದಕೊಟ್ಟು ಕೈಗೆ ಎಳೆ ಕಟ್ಟುವರು. (ಬಂದ ಜನರಿಗೆಲ್ಲಾ ಕಟ್ಟಿ ಎರಡು ಎಳೆ ಉಳಿಯುವಂತೆ ಎಳೆ ತರಬೇಕೆಂಬುವುದು ವಾಡಿಕೆ) ನಂತರ ಬಂದ ನೆಂಟರಿಷ್ಟರಿಗೆಲ್ಲಾ ಹಸ್ತೋದಕ ಹಾಕುವುದು.
ಮಹಾಲಕ್ಷ್ಮಿ, ಕೇದಾರೇಶ್ವರ, ಧನ್ಯಶಂಕರ ಮೂರು ದೇವರಿಗೂ ಪೂಜೆ ನೈವೇದ್ಯೆ ಮಹಾಲಕ್ಷ್ಮಿಗೆ ಹುಗ್ಗಿ ನೈವೇದ್ಯೆ, ಕೇದಾರೇಶ್ವರನಿಗೆ ಒಬ್ಬಟ್ಟು, ಗೋಧಿಯಲ್ಲಿ ಮಾಡಿದ ಪದಾರ್ಥ ಧಾನ್ಯ ಶಂಕರನಿಗೆ ಪಾಯಸ ಹೊಸಮಡಿಕೆಗೆ ಸುಣ್ಣದಲ್ಲಿ ದೇವರನ್ನು ಚಿತ್ರಿಸಿ ಅದರ ತುಂಬಾ ಧಾನ್ಯವನ್ನು ತುಂಬಿಟ್ಟು ಪೂಜಿಸುತ್ತಿದ್ದರು.
ಎಳೆಗೌರಿ ಇಟ್ಟ ಮನೆಯಲ್ಲಿ ನಾಲ್ಕು ಬಗೆಯ ಅನ್ನ, ನಾಲ್ಕು ಬಗೆಯ ಕಡುಬು, ಎರಡು ಪಲ್ಯ, ಎರಡು ಕೋಸಂಬರಿ, ತೊವ್ವೆ, ಸಾರು, ಪಾಯಿಸ, ಮಜ್ಜಿಗೆ ಪದಾರ್ಥ ನೈವೇದ್ಯೆ ಮಾಡಬೇಕು. ಈಗ ಇಷ್ಟೆಲ್ಲಾ ಮಾಡಲು ಆಗದ ಕಾರಣ ಮನೆದೇವರಿಗೆ ರುದ್ರಾಭಿಷೇಕ ಪೂಜೆ ಮಾಡಿ ಹುಗ್ಗಿ ಪಾಯಸ ಮಾಡಿ ನೈವೇದ್ಯ ಮಾಡಿ ಇಬ್ಬರಿಗೆ ಹಸ್ತೋದಕ ಹಾಕುವರು.
ಮಲೆನಾಡು - ಸಪ್ತಮಿಯಿಂದ ಪ್ರಾರಂಭಗೊಂಡು ದಶಮಿಯ ಪರ್ಯಂತ ನಡೆಯುವ ಈ ಆರಾಧನೆಯಲ್ಲಿ ಲಕ್ಷ್ಮೀ, ವಿಷ್ಣು, ಕೇದಾರೇಶ್ವರ, ಪಶುಪತಿ, ನವದುರ್ಗಾ, ಧಾನ್ಯ ಶಂಕರಿ ದೇವತೆಗಳನ್ನು ಆರಾಧಿಸಲಾಗುವುದು. ಈ ಆರಾಧನೆಯು ಇಲ್ಲಿನ ಬ್ರಾಹ್ಮಣ, ಮಡಿವಾಳ, ಗೊಲ್ಲ. ದೈವಜ್ಞರುಗಳ ಮನೆಗಳಲ್ಲಿ ಕಾಣಬಹುದು.
relevant question here is
Laxmi is wife of lord vishnu whereas gauri is wife of lord shiva. Then why mahalakshmi pooja in bhadrapada called both laxmipoojan and gauri poojan.
**********
ಅಷ್ಟಮೀ ಗೌರೀ ಪೂಜೆ ಮಾಡಿದಳು||
ಸುಭದ್ರೆ ಅಚ್ಚಮುತ್ತಿನ ಆರತಿಯನ್ನೆತ್ತಿದಳು||ಪ||
ಅಚ್ಯುತಾನ ಆಜ್ಞೆಯಿಂದ ಅತಿ ಭಕ್ತಿಯಿಂದ
ಮುತ್ತೈದೆತನ ಕೊಡುವ ಪುತ್ರ-ಪೌತ್ರ ಭಾಗ್ಯ ನೀಡುವ||ಅ.ಪ||
ಇಂದ್ರನಂದನನ ಸತಿಯಳು ಸುಭದ್ರೆ
ಮಿಂದುಮಡಿಯನ್ನುಟ್ಟು ಬಂದಳು
ಗಂಧ ಕುಂಕುಮ ಪರಿಮಳ ವಸ್ತ್ರ
ಚಂದವಾದ ಧೂಪ ದೀಪ ದುಂಡು ಮಲ್ಲಿಗೆ
ಗೌರಿಗೆ ಮುಡಿಸಿ ಮಂಗಳಾರತಿ ಎತ್ತಿದಳು||1||
ಭಗಿನಿ ಕೇಳೇ ಭಾವಶುದ್ಧದಿ ಭಾದ್ರಪದ ಶುದ್ಧ
ಅಷ್ಟಮೀ ಗೌರೀ ಕಥೆಯನು
ಹಿರಿಯ ಹೆಂಡತಿ ಪುರದ ಹೊರಗೆ ಇಟ್ಟಿರಲು
ಶಿರಿಯ ದೇವಿಯ ದಾರ ಕಟ್ಟಿ ದೊರೆಗೆ
ಒಲಿದು ಶಿರಿಯು ಬಂತು||2||
ಶತ್ರುಗಳನೇ ಜಯಿಸಿ ಬರುವರು ಪಾಂಡವರು
ಅಪಮೃತ್ಯು ಬರಲು ಅಂಜಿ ಓಡಲು
ಪಾಂಚಾಲಿ ಸಹಿತ ದೊರೆಗಳು ವನದೊಳಗೆ
ಅಜ್ಞಾತವಾಸ ಗೆದ್ದು ಬರುವ ಪರಿಯ ಕೇಳ್ಯಾಳು||3||
ಶಂಕರಗಂಡನ ಕಥೆಯ ಕೇಳಿ ಕಂಕಣ ಕೈಗೆ ದಾರ ಕಟ್ಟಿ
ಪಂಕಜೋದರನ ರಾಣಿ ಶಂಕೆ ಇಲ್ಲದೆ ವರವ ಕೊಡುವಳು
ಪಂಚಭಕ್ಷ್ಯ ಪಾಯಸ ಘೃತಗಳು ಮುಂಚೆ
ಲಕ್ಷ್ಮೀದೇವಿಗೆ ಎಡೆಮಾಡಿ ಬಡಿಸುವಳು||4||
**********
vijayavani article
ಅಷ್ಟ ಸೌಭಾಗ್ಯ ನೀಡುವ ಅಷ್ಟಮಿ ಗೌರಿ - ನಿರ್ಮಲಾ ಬಟ್ಟಲ, ಬೆಳಗಾವಿ
ಮುತ್ತೈದೆಯರು ಬಯಸುವ ಅಷ್ಟ ಸೌಭಾಗ್ಯಗಳನ್ನು ನೀಡಲು ಸಾಕ್ಷಾತ್ ಶಿವನ ಪತ್ನಿ ಗೌರಿಯು ಭೂಲೋಕಕ್ಕೆ ಬರುವ ದಿನವೇ ಭಾದ್ರಪದ ಮಾಸದ ಅಷ್ಟಮಿ ತಿಥಿ. ಭಾದ್ರಪದ ಮಾಸವೆಂದರೆ ಶಿವನ ಪರಿವಾರವೇ ಭೂಲೋಕಕ್ಕೆ ಬಂದು ಪೂಜೆಗೊಳ್ಳುವ ಮಾಸ. ಚತುರ್ಥಿಯೆಂದು ಗಣಪನಿಗೆ ಪೂಜೆಯಾದರೆ, ಅಷ್ಟಮಿಯಂದು ಗೌರಿಗೆ ಪೂಜೆ. ರಾಜ್ಯದೆಲ್ಲೆಡೆ ಗೌರಿಯನ್ನು ಭಕ್ತಿಭಾವಗಳಿಂದ ಪೂಜಿಸುತ್ತಾರೆ. ಉತ್ತರ ಕರ್ನಾಟಕದಲ್ಲಿ ಆಚರಿಸಲ್ಪಡುವ ಅಷ್ಟಮಿ ಗೌರಿ ಪೂಜೆ ವಿಶೇಷ ಮತ್ತು ವಿಭಿನ್ನವಾದುದು. ಇಲ್ಲಿನ ಆಚರಣೆ ಮಹಾರಾಷ್ಟ್ರದ ಸಂಪ್ರದಾಯದ ಪ್ರಭಾವಕ್ಕೆ ಒಳಪಟ್ಟಿದೆ. ಮೂರು ದಿನಗಳ ಕಾಲ ಹಬ್ಬವನ್ನು ಆಚರಿಸಲಾಗುತ್ತದೆ. ಭಾದ್ರಪದ ಮಾಸದ ಅಷ್ಟಮಿ ತಿಥಿಯ ಅನುರಾಧಾ ನಕ್ಷತ್ರದಂದು ಗೌರಿಯನ್ನು ಆಹ್ವಾನಿಸುತ್ತಾರೆ. ಅಂದು ತಳಿರು ತೋರಣ ಕಟ್ಟಿ, ರಂಗೋಲಿ ಬಿಡಿಸಿ, ಹೂ, ಹಣ್ಣು, ಅರಿಶಿಣ, ಕುಂಕುಮ, ಗಂಧ ಅಕ್ಷತೆ ಮತ್ತು ಆರತಿಯೊಂದಿಗೆ ಬಾವಿ ಅಥವಾ ನೀರಿನ ಮೂಲವಿರುವ ಸ್ಥಳಕ್ಕೆ ಹೋಗಿ ಐದು ಚಿಕ್ಕ ಚಿಕ್ಕ ಕಲ್ಲುಗಳನ್ನಿಟ್ಟು ಗಂಗೆಯನ್ನು ಶ್ರದ್ಧಾಭಕ್ತಿಯಿಂದ ಪೂಜೆ ಮಾಡಿ ಐದು ತರಹದ ಹೂ ಎಲೆಗಳು, ಅಂದರೆ ಅರಿಶಿಣ, ಮಾವು, ಸಂಪಿಗೆ, ವೀಳ್ಯದೆಲೆ ಹಾಗೂ ಗೌರಿ ಹೂವನ್ನು ನೀರು ತುಂಬಿದ ತಾಮ್ರದ ಕಳಶದಲ್ಲಿಟ್ಟು, ಮನೆಯಲ್ಲಿರುವ ಕುಮಾರಿಯು ಗೌರಿಯನ್ನು ಆಹ್ವಾನಿಸುತ್ತಾಳೆ. ಪೂಜೆ ಮಾಡಿ ತಂದ ಕಳಶವನ್ನು ಗಣಪತಿಯ ಪಕ್ಕದಲ್ಲಿಡುತ್ತಾರೆ. ಅಂದು ಗೌರಿಗೆ ಐದು ತರಹದ ಸೊಪ್ಪುಗಳಿಂದ ಪಲ್ಯ ಮತ್ತು ಜೋಳದ ಭಕ್ರಿ (ರೊಟ್ಟಿ)ಯನ್ನು ನೈವೇದ್ಯ ಮಾಡುತ್ತಾರೆ.
ಎರಡನೆಯ ದಿನ ಜ್ಯೇಷ್ಠಾ ನಕ್ಷತ್ರದಂದು ಜ್ಯೇಷ್ಠಾ ಗೌರಿಯ ಪೂಜೆ ನಡೆಯುತ್ತದೆ. ಹೊಸ ಮಡಿಕೆಗೆ ಅಲಂಕಾರ ಮಾಡಿ ಗೌರಿಯ ಮೂರ್ತಿಯನ್ನು ಕೂಡಿಸಿ ಹೊಸ ಸೀರೆ, ಕುಪ್ಪಸ, ಆಭರಣಗಳನ್ನು ತೊಡಿಸುತ್ತಾರೆ. ಗೆಜ್ಜೆವಸ್ತ್ರ, ಹೂ, ಹಾರ, ದಂಡೆಯಿಂದ ಗೌರಿಯನ್ನು ಅತ್ಯಂತ ಸುಂದರವಾಗಿ ಅಲಂಕಾರ ಮಾಡುತ್ತಾರೆ. ಅಂದು ಗೌರಿಗೆ ಪ್ರಿಯವಾದ ಹೋಳಿಗೆ, ಕರಿಗಡಬು, ಪಾಯಸ, ಕರ್ಜಿಕಾಯಿ, ಚಕ್ಕುಲಿ, ಕೋಡುಬಳೆ, ಜೋಳದ ವಡೆ, ಕೋಸಂಬರಿ ಹೀಗೆ ಹದಿನಾರು ತರಹದ ಪಕ್ವಾನ್ನಗಳನ್ನು ಮಾಡಿ ನೈವೇದ್ಯ ಮಾಡುತ್ತಾರೆ.
ಗೌರಿಯ ಉಡಿಯಲ್ಲಿ ಹೊಸ ಹತ್ತಿಯನ್ನು ಇಟ್ಟು ಪೂಜೆ ಮಾಡಿ ನೂಲು ತೆಗೆದು ದಾರಗಳನ್ನು ಮಾಡುತ್ತಾರೆ. ಬಂಧುಬಾಂಧವರನ್ನು ಆಹ್ವಾನಿಸಿ ಸಂಭ್ರಮದಿಂದ ಹಬ್ಬ ಆಚರಿಸುತ್ತಾರೆ.
ಮೂರನೆಯ ದಿನ ಮೂಲಾ ನಕ್ಷತ್ರದಂದು ನಿಸರ್ಗಪ್ರಿಯಳಾದ ಗೌರಿಗೆ ಮುತೆôದೆಯರೆಲ್ಲ ಸೇರಿ ಗರಿಕೆ, ವೀಳ್ಯದೆಲೆ, ಮಾವು, ಅರಿಶಿಣ, ಸಂಪಿಗೆ ಎಲೆ ಹಾಗೂ ಹೂಗಳಿಂದ ಹೊಸ ನೂಲಿಗೆ ಕಟ್ಟಿ ಜ್ಯೇಷ್ಠಾ ಗೌರಿಯ ಉಡಿಯಲ್ಲಿ ಇಡುತ್ತಾರೆ. ಇನ್ನು ಕೆಲವರು ಮನೆಯಲ್ಲಿ ಮಕ್ಕಳು ಮತ್ತು ಪುರುಷರ ಹೆಸರಿಗೆ ಐದು ಎಳೆಯ ನೂಲಿನ ದಾರ ಮಾಡಿದರೆ, ಮನೆಯ ಮುತೆôದೆಯರು ಹನ್ನೊಂದು ಎಳೆ, ಹದಿನಾರು ಎಳೆ, ಇಪ್ಪತ್ತೊಂದು ಎಳೆ ಹೀಗೆ ವಿವಿಧ ಎಳೆಗಳ ಹಾರವನ್ನು ಮಾಡಿ ಅದಕ್ಕೆ ಪೂಜೆಗಿಟ್ಟ ಎಲ್ಲ ಮಂಗಳದ್ರವ್ಯಗಳಾದ ಅರಿಶಿಣ ಕೊಂಬು, ಎಲೆ ಕೊನ್ನರಿ, ರೇಷ್ಮೆ ನೂಲು, ಕಂಬಳಿ ನೂಲುಗಳನ್ನು ದಾರಕ್ಕೆ ಕಟ್ಟುತ್ತಾರೆ. ಇದನ್ನು ಅಷ್ಟಮಿ ದಾರ ಎಂದು ಕರೆಯುತ್ತಾರೆ. ಗೌರಿ ಹೆಸರಿನಲ್ಲಿ ದಾರವನ್ನು ಧರಿಸಿಕೊಂಡು ಅಖಂಡ ಸೌಭಾಗ್ಯ ನೀಡೆಂದು ಬೇಡಿಕೊಳ್ಳುತ್ತಾರೆ. ಅಂದು ಅನ್ನಬೆಲ್ಲ ನೈವೇದ್ಯ ಮಾಡಿ ಪ್ರಸಾದವನ್ನು ಅಂಗೈಗೆ ಕೊಡುತ್ತಾರೆ, ಪ್ರಸಾದವನ್ನು ಅಂಗೈಯಲ್ಲಿ ತೆಗೆದುಕೊಂಡವರು ಕೈ ತೊಳೆದುಕೊಳ್ಳದೆ ಧಾನ್ಯಗಳ ಚೀಲಗಳಿಗೆ ಅಥವಾ ಶೇಖರಿಸಿಟ್ಟ ಧಾನ್ಯಗಳಲ್ಲಿ ಕೈ ಒರೆಸುವುದರಿಂದ ಧಾನ್ಯ ಸಂಪತ್ತು ವೃದ್ಧಿಯಾಗುತ್ತದೆ ಎನ್ನುವ ನಂಬಿಕೆ ಇದೆ. ಅಂದು ಸಾಯಂಕಾಲ ಗೌರಿಯನ್ನು ವಿಸರ್ಜನೆ ಮಾಡುವುದರೊಂದಿಗೆ ಜ್ಯೇಷ್ಠಾ ಗೌರಿಯ ಆಚರಣೆ ಕೊನೆಗೊಳ್ಳುತ್ತದೆ.
ಪೂಜೆಯ ಹಿನ್ನೆಲೆ
ಭೂಮಿಯ ಮೇಲೆ ಅಸುರರು ದಾಳಿಮಾಡಿ, ಪುರುಷರನ್ನೆಲ್ಲ ಬಂಧನದಲ್ಲಿರಿಸಿ ಹಿಂಸಿಸುತ್ತಿದ್ದರು. ಆಗ ಮಹಿಳೆಯರೆಲ್ಲ ಸೇರಿ ಗೌರಿಯ ಬಳಿ ಬಂದು ರಾಕ್ಷಸರ ಬಂಧನದಲ್ಲಿರುವ ತಮ್ಮ ಪತಿಯರನ್ನು ರಕ್ಷಿಸಿ ಸೌಭಾಗ್ಯ ಕಾಪಾಡಬೇಕೆಂದು ಬೇಡಿಕೊಂಡರು. ಪಾರ್ವತಿಯು ಭಾದ್ರಪದ ಮಾಸದ ಅಷ್ಟಮಿಯ ದಿನ ರಾಕ್ಷಸರನ್ನು ಸಂಹರಿಸಿ ಬಂಧನದಲ್ಲಿರುವವರನ್ನು ರಕ್ಷಿಸುತ್ತಾಳೆ. ಆಗ ಎಲ್ಲ ಸುಮಂಗಲೆಯರು ತಮ್ಮನ್ನು ರಕ್ಷಿಸಿದ ಕೃತಜ್ಞತೆಗಾಗಿ ಗೌರಿಯನ್ನು ಶ್ರದ್ಧಾಭಕ್ತಿಯಿಂದ ಆಹ್ವಾನಿಸಿ ಅವಳನ್ನು ಸಿಂಗರಿಸಿ ತಮಗೂ ಅಖಂಡ ಸೌಭಾಗ್ಯ, ಧನ, ಧಾನ್ಯ, ಆರೋಗ್ಯ, ಬುದ್ಧಿ, ಶಾಂತಿ, ಸುಖವನ್ನು ಕರುಣಿಸೆಂದು ಪ್ರಾರ್ಥಿಸುತ್ತಾರೆ. ಗೌರಿಯನ್ನು ಪೂಜಿಸುವವರಿಗೆ ಅಷ್ಟೈಶ್ವರ್ಯ ನೀಡುವಳೆಂಬ ನಂಬಿಕೆಯೂ ಇದೆ.
info from kaduhoovu.wordpress website
ಶ್ರಾವಣಮಾಸ
“ಏನೂ ಗೌರಿ ತಂಬಿಗಿ ಇಳಿಸಿ ಕೊಡ್ರೀ ಮ್ಯಾಲಿಂದು. ತಗಡಿನ ಚಿಲಕದ ಡಬ್ಯಾಗ ಇಟ್ಟೇನಿ, ಹಪ್ಪಳ ಸಂಡಿಗಿ ಡಬ್ಬಿಗೋಳ ಜೋಡಿ” ಮಾವನವರಿಗೆ ಹೇಳುತ್ತಾ ನನ್ನ ಕಡೆ ತಿರುಗಿದರು ಅತ್ತೆ. ” ತಿಜೋರಿ ಒಳಗ ಇಡಬಾರದು ತಂಗಿ, ಬೆಳ್ಳಿ ತಂಬಿಗಿ, ತಾಟು ಇಂತಹ ದೊಡ್ಡ ಸಾಮಾನು. ಹಿಂಗ ತಗಡಿನ ಡಬ್ಯಾಗ ಇಡಬೇಕು.ತಿಳಕೋ. ಏನ ಸಂಸಾರ ಮಾಡತಾವೋ ಏನೋ. ಇಗಾ ನಿಮ್ಮ ಮಾವ ತಂಬಿಗಿ, ಗೌರಿ ಮಾರಿ ಇಳಿಸಿ ಕೊಟ್ಟಿಂದ ಲಕಲಕ ತಿಕ್ಕಿ ವರೆಸಿ ಬಿಸಲಾಗಿಡು. ತಂಬಿಗಿ ಒಳಗ ಕಡಲೇ ಬೇಳೆ ತುಂಬೋ ಪದ್ಧತಿ ನಮ್ ಮನ್ಯಾಗ. ಆಮೇಲೆ ಆ ಕಡಲೇಬ್ಯಾಳೀ ಸಿಹಿ ಮಾಡಿ ಮನೀ ಮಂದಿ ಮಾತ್ರ ಉಣ್ಣಬೇಕು. ಹಸಿ ಉಳಿದ್ರೆ ಬ್ಯಾಳೀ ಕೆಡತಾವ. ತಿಳೀತಾ? ಆಮ್ಯಾಲ ನಾಜೂಕಾಗಿ ಕಣ್ಣು, ಹುಬ್ಬು ಬಾಯಿ ಎಲ್ಲಾ ತೀಡು. ಕಾಡಿಗಿ ಮೀಸಲು ಅದ ನೋಡಲ್ಲೇ ಮನ್ಯಾಗ ಮಾಡಿದ್ದು.ಲಕ್ಷ್ಮೀ ಹಣೆಗೆ ಕುಂಕುಮ ಹಚ್ಚೋಕಿಂತ ಮೊದಲ ಒಂಚೂರು ಬೆಲ್ಲ ಬಟ್ಟಿನ್ಯಾಗ ತಿಕ್ಕಿ ಗೌರಿ ಹಣಿಗೆ ಹಚ್ಚಿ, ಮ್ಯಾಲ ಕುಂಕುಮ ಹಚ್ಚು.”
ಅದರಂತೆ ಗೌರಿ ತಂಬಿಗಿ ತೊಳೆದು, ಒರೆಸಿ, ಬಿಸಲಿಗಿಟ್ಟು ಕಣ್ಣು, ಬಾಯಿ ಎಲ್ಲ ತೀಡುತ್ತಿದ್ದೆ. ಶ್ರಾವಣ ಮಾಸದಲ್ಲಿ ಲಕ್ಷ್ಮಿಯ ಪ್ರತಿಷ್ಠಾಪನೆ ಮಾಡಿ ಐದು ವಾರಗಳು ಪೂಜಿಸುವ ಪದ್ದತಿ ನಮ್ಮಲ್ಲಿ. ಎಳೆ ಅಷ್ಟಮಿ ಜ್ಯೇಷ್ಠಾದೇವಿಯನ್ನೂ (ಲಕ್ಷ್ಮಿಯ ಅಕ್ಕ ದರಿದ್ರದೇವಿಯಂತೆ ಇವಳು) ಕೂಡಿಸಿ ಇಬ್ಬರನ್ನೂ ಒಟ್ಟಿಗೆ ಪೂಜಿಸಿ ಭಾದ್ರಪದ ನವಮಿಯಂದು ಇಬ್ಬರದೂ ವಿಸರ್ಜನೆ.
ಹಿಂದಿನ ದಿನದ ತಯಾರಿ ಇದು. ” ಏನ್ರೀ… ಚಹಾ ಕುಡಿದು ಬಜಾರಕ್ಕ ಹೋಗಿ ಬರ್ರೀ. ನಾಳೀಗ ಸೊಪ್ಪು ಏನರ ಒಂದು, ಬೆಂಡೆಕಾಯಿ ಕಾಯಿರಸಕ್ಕೆ, ಕೋಸಂಬರಿಗೆ ಸೌತೆಕಾಯಿ, ತೊಂಡೀಕಾಯಿ ಭಾತಿಗೆ.25 ಮಂದೀ ಲೆಕ್ಕ ಅದ ನೋಡ್ರಿ ನಾಳೆಗೆ. ಮತ್ತ ಕರಿಬೇವು, ಕೊತ್ತಂಬರಿ, ಅಲಾ, ನಿಂಬೆಹಣ್ಣು ಸೈಯ ಸೈ. ನಾಳೆ ಹೋಳಿಗೀನ ಇರಲಿ ಹೌದಿಲ್ಲೋ. ಎರಡನೇ ಶುಕ್ರವಾರ ಕರಿಗಡಬು ಮಾಡಿಸ್ತೇನೀ. ಮತ್ತೆ ಶ್ಯಾವಿಗಿ ಪಾಯಸಾ ಇರಲಿ ಅಲಾ? ಬೆಣ್ಣೆ 2 ಕೆಜಿ ತಂದಬಿಡರೀ, ಕಾಸಿ ಇಡತೇನಿ. ವೀಳ್ಯದೆಲೆ ಎಳೇವು ನೋಡಿ ತಗೊಂಬರ್ರೀ. ಕಾಚು, ಯಾಲಕ್ಕೀ, ಲವಂಗಾನೂ ತಂದೇ ಬಿಡ್ರೀ ಬಿಡಿ ಹೂವು ತಗೊಂಬರ್ರೀ. ನಾರಿನ್ಯಾಗ ಕಟ್ಕೋತೇನಿ. ಕತ್ತಲಾಗೋದರಾಗ ಮನಿ ಸೇರಕೋರಿ. ರಿಕ್ಷಾಕ್ ಬರ್ರೀ. ಸಾಮಾನು ಭಾಳ ಆಗತಾವ. ದರಿದ್ರ ಶಾಣೇತನಾ ಮಾಡಬ್ಯಾಡ್ರೀ. ಮತ್ತ ಈಗ ಹೇಳೇನೀ ನಾಳೆ ಪೂಜಾ ಆದಿಂದ ಹೊರಗ ರೊಕ್ಕ ಕೊಡಂಗಿಲ್ಲಾ. ಎಲ್ಲಾ ಮರೀಲಾರದ ತಗೊಂಬರ್ರೀ. “ಮಾವನವರು ಚೀಲ ಹಿಡಿದು ಬಜಾರಿಗೆ ಹೊರಡುತ್ತಿದ್ದರು.
ಶ್ರಾವಣಮಾಸದ ತಯಾರಿ ಹದಿನೈದು ದಿನ ಮೊದಲೇ ಆರಂಭವಾಗುತ್ತಿತ್ತು. ಅಡಿಗೆಮನೆಯ ಡಬ್ಬಗಳನ್ನು ತೊಳೆಯುವುದರಿಂದ ಹಿಡಿದು. ಆಮೇಲೆ ದೇವರ ಮಂಟಪದ ಪಾಲಿಶ್. ಅಗಸೇಎಣ್ಣೆ ತಂದು ಮೇಲೇ ಉಜ್ಜಿ ಪಾಲಿಶ್ ಮಾಡುತ್ತಿದ್ದರು ಮಾವ. ಆಮೇಲೆ ಹಾಲು, ಮೊಸರು ಇಡುವ ಮಾಡ, ಗೌರಿ ಕಪಾಟಾಗಿ ಪರಿವರ್ತನವಾಗುತ್ತಿತ್ತು. ಆ ಪುಟ್ಟ ಮಾಡಕ್ಕೆ ಸುಣ್ಣ ಬಳಿದು, ಕಾರಣೆ ಮಾಡುತ್ತಿದ್ದರು.’ ಶ್ರೀಕಾರ, ಲಕ್ಷ್ಮೀ ಪ್ರಸನ್ನ ‘ನಾನೇ ಬರೆಯಬೇಕು. ಆಮೇಲೆ ಬೆಳ್ಳಿ ತೋರಣ ತಿಕ್ಕಿ ಮಾಡಕ್ಕೆ ಕಟ್ಟಬೇಕು. ಬೆಳ್ಳಿಯ ಬಾಳೆಯಕಂಬ, ಕೇದಗೆ ತಿಕ್ಕಿಡಬೇಕು. ಪಕ್ಕದಲ್ಲೇ ಇದ್ದ ಮಾವಿನಮರದಿಂದ ತೋರಣಕ್ಕೆ ಎಲೆ ತಗೆಸಿ, ಮನೆಬಾಗಿಲಿಗೂ, ಗೌರಿಯ ಕಪಾಟಿಗೂ ಕಟ್ಟಬೇಕು. ಗೌರಿ ಕಪಾಟಿಗೆ ಬಾಳೆಯ ನಾರಿನಲ್ಲಿ. ಜಾಜಿ, ಸೂಜಿ ಮಲ್ಲಿಗೆ ಮೊಗ್ಗು ಬಿಡಿಸುವುದು ನಂತರದ ಕೆಲಸ.” ಜಿಗಿ ಮ್ಯಾಲ. ನೋಡ ಅಲ್ಲೇ ಮಗ್ಗೀ ಉಳದೇ ಬಿಟ್ಟಾವ. ಮಾಳಿಗೀಗೂ ಹೋಗು. ಅಲ್ಲೀವೂ ಮಗ್ಗೀ ಹರೀಬೇಕೂ..” ಕೆಳಗಡೆ ನಿಂತು ನಮ್ಮತ್ತೀ ಕೈ ತೋರಿಸುತ್ತಾ ಇದ್ದರೆ, ನಾನು ಆ ಎಲ್ಲಾ ಮಗ್ಗಿಗಳನ್ನು ಬಿಡಿಸಬೇಕು. ಬುಟ್ಟಿ ತುಂಬಾ ತುಂಬಿದ ಮೊಗ್ಗುಗಳನ್ನು ಮಾಲೆ ಕಟ್ಟುವುದು ಆಮೇಲಿನ ಕೆಲಸ.” ಮಲ್ಲಿಗೀ ಮಾಲೀ ಕಟ್ಟೀ ನಿನಗ ಬ್ಯಾರೆ ಇಟ್ಟೇನಿ. ತಗೊಳವಾ. ಎಂಥಾ ಚಂದ ಶ್ಯಾವಂತಿಗಿ ದಂಡೀ ಕಟ್ಟೇನೀ, ಏಳು ಮಲ್ಲಿಗೆ ತೂಕದಾಕೀ ನೀನು ನಾಜೂಕನಾರೀ, ಶ್ಯಾವಂತಿಗಿ ಇಟಗೋಳಂಗಿಲ್ಲಲಾ. ಉದ್ದ, ಮೊಣಕಾಲು ತನಕ ಕೂದಲ, ಖೋಡಿ… ಹೂ ಹಾಕ್ಕೊಂಡರ ಕೂದಲಾ ಪೀಕತಾವ ಅಂತದ ಮಂಗ್ಯಾ. ಮಲ್ಲಿಗೀ ಹೂನರ ಇಟಗೋ. ಆತಾ?” ” ಹೂನ್ರೀ. ಸೂಜಿಮಲ್ಲಿಗಿ ಸೇರತಾವ ನನಗ. ಇಟಗೋತೇನರೀ. ”
ಶ್ರಾವಣಮಾಸಕ್ಕಾಗಿ ಮೀಸಲು ಮಸಾಲೆಪುಡಿ, ಚಟ್ನಿಪುಡಿ, ಮೆಂಥೆಹಿಟ್ಟು ಎಲ್ಲಾ ಹದಿನೈದು ದಿನಗಳ ಮೊದಲೇ ಸಿದ್ದವಾಗಿರಬೇಕು. ನಾಗರಪಂಚಮಿಗೆ ತಂಬಿಟ್ಟು, ಎಳ್ಳು ಚಿಗಳಿ ಮತ್ತು ಅರಳು ಜೋಳ ಹುರಿಯುವ ಕೆಲಸ ಶುರುವಾದಾಗಲೇ ಇವುಗಳೂ ತಯಾರಾಗಬೇಕು. ಗೌರಿ ಕೂತಾಗ ಒಂದು ತಿಂಗಳು ಹುರಿಯುವಂತಿಲ್ಲ. ನಮ್ಮತ್ತೆ ಎಲ್ಲ ಮಸಾಲೆ ಸಾಮಾನುಗಳನ್ನು ತಟ್ಟೆಯಲ್ಲಿ ಜೋಡಿಸಿಟ್ಟು ‘ನೋಡಿ ಕಲ್ಕೋ ಎಲ್ಲಾ’ ಎಂದು ಹೇಳಿ, ತಾವು ಹುರಿಯಲು ಕೂಡುತ್ತಿದ್ದರು. ಅವೆಲ್ಲ ಆರಿದ ಮೇಲೆ ಮಿಕ್ಸಿಗೆ ಹಾಕಿ ಡಬ್ಬಗಳಲ್ಲಿ ಒತ್ತಿ, ಒತ್ತಿ ತುಂಬಿಡುವುದು ನನ್ನ ಕೆಲಸ. “ಡಬ್ಬಿಗೆ ತುಂಬೋ ಮುಂದ ದೇವರ ಹೆಸರು ತಗೊಂಡು ಒತ್ತಿ, ಒತ್ತಿ ತುಂಬಬೇಕು. ಆತಾ. ” ಹೂನ್ರೀ. ಇವರದು, ಭಾವಜೀದು ಹೆಸರೇ ತಗೊಂಬಿಡತೇನಿ, ಗೋವಿಂದ, ನಾರಾಯಣ ಅಂತ… “ನಾನು ತರ್ಲೆ. ಏನಕ್ಕೋ ಬಂದಿದ್ದ ಅಡುಗೆಯ ಕಮಲಾಬಾಯಿ ಬಾಯಿಗೆ ಸೆರಗು ಹಿಡಿದು ಕಿಸಕ್ಕನೇ ನಕ್ಕಾಗ, ನಮ್ಮತ್ತೀ ತಲೆ ಎತ್ತಿ ಒಮ್ಮೆ ನನ್ನ ನೋಡಿದ್ದರು. ಅಷ್ಟೇ ನಾನು ಗಪ್ ಚುಪ್.
ಅಷ್ಟರಲ್ಲಿ ಹೊರಗೆ ಬಳೆಗಾರ. ” ತಂಗೀ ಹೋಗಿ ಕೈತುಂಬಾ ಬಳಿ ಇಟಗೊಂಡ ಬಾ. ಪಾಟಿ, ಬಿಲ್ವಾರ ಇಟಗೊಂಡು ಛಂದಾಗಿ ಒಂದು ಡಜನ್ ಇಟಗೋ ಚಿಕ್ಕಿ ಬಳಿ. ಗೌರಿ ಕೂತಾಗ ಬಳಿ ತಗದು, ಹಾಕಿ ಮಾಡಂಗಿಲ್ಲಾ. ಗುತ್ತಾಗಿ ಇಟಗೋ. ಇಗಾ ಮುತೈದಿ ಬಂದಾಳ ಕಮಲಾಬಾಯಿ, ಅಕಿಗೂ ಇಡಸು ಬಳಿ. ಮತ್ತ ಕುಪ್ಪಸಾ ಏನರ ಹೊಲಿಲಿಕ್ ಕೊಡೋ ಹಂಗಿದ್ದರ ಈಗ ಕೊಟ್ಟು ಬಂದಬಿಡು ಗೌರಿ ಕೂತಿಂದ ಅರಿವಿ ಕತ್ತರಸಬಾರದು.” ಅಮ್ಮನ ಮನೆಯಲ್ಲಿಯೂ ಶ್ರಾವಣಮಾಸದ ಗೌರಿ ಇದ್ದಳಾದರೂ, ನನ್ನ ಮದುವೆಯವರೆಗೂ ಅಜ್ಜಿ ಊರಿನಲ್ಲಿ ಗೌರಿ ಕೂಡಿಸುತ್ತಿದ್ದರಿಂದ, ಮತ್ತು ಮಡಿ ಜಾಸ್ತಿ ಇದ್ದ ಕಾರಣ ಮಕ್ಕಳ ಲೆಕ್ಕದಲ್ಲಿ ಹೊರಗೇ ಕಾಲಕಳೆದ ನೆನಪು. ಹೀಗಾಗಿ ಪದ್ಧತಿ ಎಲ್ಲಾ ಕಲಿತದ್ದು ನಮ್ಮ ಅತ್ತೆಯ ಕೈಯಲ್ಲೇ. ಭಯಭಕ್ತಿಯಿಂದ ‘ಯಾರೋ ಹಿರಿಯ ಮುತೈದೆ ಬಂದು ಒಂದೂವರೆ ತಿಂಗಳು ನಮ್ಮ ಮನೆಯಲ್ಲಿ ಇರುತ್ತಾಳೆ. ಅವಳು ಇರುವವರೆಗೂ ಏನೂ ಅಪಚಾರ ಆಗಬಾರದು, ಎಂಬ ಅವರ ಕಳಕಳಿ, ಆಪ್ತಭಾವವೇ ತುಂಬಾ ಇಷ್ಟವಾಗುತ್ತಿತ್ತು ನನಗೆ.
ಹಬ್ಬದ ಹಿಂದಿನ ದಿನದ ತಯಾರಿ ಹೇಳ್ತಾ ಇದ್ದ್ನೆಲಾ, “ಹೂವಿನ ಮಾಲೀ ಎಲ್ಲಾ ಕಟ್ಟಿ ಒದ್ದಿ ಪಂಜಾದಾಗ ಸುತ್ತಿ ಮಾಡದಾಗ ಇಡು. ನಾನು ಹೋಗಿ ಮುತೈದೆಗೆ ಎಣ್ಣೆ, ಕುಂಕುಮ ಕೊಟ್ಟು ಬರತೇನಿ. ಅಡಿಗಿ ಕಮಲಾಬಾಯಿ ಬರತಾಳ.ಅಕೀ ಜೋಡಿ ಏನೂ ಅಗಾವಪಣ ಮಾತಾಡಬ್ಯಾಡ. ನಿಮ್ಮ ಸೊಸಿಗ ಹೇಳಿದ್ದೆ ಅಂದ ಬಿಡತಾಳ ನೋಡ ಅಕಿ. ನೀ ಬೈಸಿಗೋತಿ ಆಮೇಲೆ ನನ್ನ ಕಡೆ, ಅತ್ತೀ ಮನೀ ಸೊಸಿ.” ನನಗೆ ತಾಕೀತು ಮಾಡಿ ಹೊರಡುತ್ತಿದ್ದರು.
ಅವರಂದಂತೆ ಮುಂದೇ ಐದೇ ನಿಮಿಷದಲ್ಲಿ ಕಮಲಾಬಾಯಿ ಹಾಜರು.” ನನಗೂ ಒಂದು ಮಡಿಸೀರಿ ಹಾಕ್ಯಾರಿಲ್ಲವಾ ನಿಮ್ಮತ್ತೀ? ಮಡಿ ನೀರು ತುಂಬಿ ಇಟ್ಟಾರೋ ಇಲ್ಲೋ? ಮುಂಜಾನೆ ಕರೆಂಟ್ ಹೋತಂದರ ಮಡಿನೀರಿಗ ತತ್ವಾರ ಆಗತದ. “ನಮ್ಮತ್ತೆ ಗಿಂತಲೂ ಒಂದು ಕೈ ಮೇಲೆ ಶಿಸ್ತು ಈಕೆ. ಯಥಾ ಆಜ್ಞೆ ನಾನು ತುಟಿಪಿಟಕ್ಕೆನಲಿಲ್ಲ.” ಈಗ ಬರತಾರೀ ಅಮ್ಮಾ. ಮುತೈದಿಗ ಹೇಳಲಿಕ್ ಹೋಗ್ಯಾರ್ರೀ. ”
ಬಂದಮೇಲೆ ” ತಂಗೀ, ಪುಡಿ ಅವಲಕ್ಕಿ ಕಲಸ ಹೋಗು ಒಂದು ಬುಟ್ಟಿ. ಕಲಸೀ ಕ್ಯಾನನ್ಯಾಗ ತುಂಬಿ ಇಡು. ನಾಳೆ ಅಡಿಗಿ ತಡಾ ಆದ್ರ ಬೇಕಾಗ್ತದ ಮುಂಜಾನೀಗ. ಹುಡುಗುರು, ಪಡಗುರು ಬರತಾವ. ಏನೂ… ನನ್ನನ್ನು ಒಳಗೆ ಕಳಿಸುತ್ತಿದ್ದರು. “ಹೂನ್ರೀ” ನಾನು ಅವಲಕ್ಕಿ ಹಚ್ಚಲು ಒಲೆಯ ಮುಂದೆ ಕೂಡುತ್ತಿದ್ದೆ.” ಶೇಂಗಾ, ಪುಠಾಣಿ, ಚಟ್ನಿಪುಡಿ, ಮೆಂಥೆಹಿಟ್ಟು ಕೈಬಿಟ್ಟು ಹಾಕು. ಒಗ್ಗರಣೆ ಒಳಗ ನಾಕ ಕಾಳು ಅಜವಾನ ಹಾಕು. ಪಚನ ಆಗತದ “
“ಇಗಾ ಕಮಲಾಬಾಯಿ ಕೇಳ್ರವಾ ಇಲ್ಲೇ. ಮಡಿನೀರು ಮಡಿಬಟ್ಟೀ ಎಲ್ಲಾ ಆಗೇದ. ಹೋಳಿಗಿನ ಅದ ನಾಳೀಗೆ. ಮ್ಯಾಲ ಬುರುಬುರಿ, ಪಲ್ಯಾ, ಚಟ್ನಿ, ಕೋಸಂಬರಿ, ಕಾಯಿರಸಾ ಅಂತೂ ಸೈ. ಭಾತು ಮಾಡತೀರೋ, ಚಿತ್ರಾನ್ನ ಮಾಡತೀರೋ ನೋಡ್ರೀ. 25 ಮಂದೀ ಲೆಕ್ಕ ನಾಳಿಗೆ. ನಾನೂ ನಿಮ್ಮ ಜೋಡಿ ಮಡೀಲೇ ಬರತೇನಿ. ಇಬ್ಬರೂ ಕೂಡಿದ್ರ ಏನ ಆಗಾಧ ಇಷ್ಟು ಅಡಿಗೀ. ಒಬ್ಬಕಿನೇ 60 ಮಂದಿ ಅಡಿಗಿ ಮಾಡತಿದ್ದೆ. ಸುಡಗಾಡ ಮೊಣಕಾಲು ಬ್ಯಾನೀ ಬಂದು ಅಪಾತ ಆಗೇನೀ. ” ” ಮಾಮೀ, ನಾಳೀಗೆ ಮೂರು ಮನೀ ಅಡಿಗಿ ಬಂದಾವ. ನಾನರ ಈಗs ದುಡಕೋಬೇಕಲ್ರೀ ಬಡವೀ. ಮುಂಜಾನೆ ಆರಕ್ಕ ಬರಬೇಕಂತ ಮಾಡೇನಿ ನಿಮ್ಮಲ್ಲೆ. ಏನಂತೀರಿ “ಕಮಲಾಬಾಯಿ. ” ಅಯ್ಯ ನಮ್ಮವ್ವಾ ಹಿಂಗ ಅಂದ್ರ ಹೆಂಗ? ಎಲ್ಲಾ ಮನೀ ಮುಗಿಸಿ ಕಡೀಕೇ ಬರ್ರೀ ನಮ್ಮನೀಗೆ. ಮುಂಜಾನೆ ಮಾಡಿಟ್ಟ ಹೋದರ ಆರಿ ಅಂಗಾರ ಆಗತದ ಅಡಿಗೆಲ್ಲಾ. ಆದ್ರ ಎಲ್ಲೂ ಏನೂ ಬಾಯಾಗ ಹಾಕ್ಕೋ ಬ್ಯಾಡ್ರಿ. ಇಲ್ಲಿ ಬಂದು ಇನ್ನೊಮ್ಮೆ ಮೈತೊಕ್ಕೊಂಡು ಮಡಿಸೀರಿ ಉಟಗೊಂಡು, ಅಡಿಗೀಗ ಕೂಡಬೇಕು. ತಿಳೀತಾ. ಅಚಾಹುಚಾ ಮಡಿ ಬಗೀಹರಿಯಂಗಿಲ್ಲಾ ನನಗ. ಬಡವೀ ಪಾಪ ದುಡಕೋರಿ, ನಾ ಯಾಕ ಬ್ಯಾಡ ಅನ್ಲೀ? ಆಮ್ಯಾಲ ಇಲ್ಲೇ ಹೊಟ್ಟಿತುಂಬಾ ಉಂಡು ಹೋಗಿರಂತ. ನೀವು ಬರೋದರಾಗ ಎಲ್ಲಾ ಒಲಿ ಮುಂದ ತಯಾರಿ ಇಟ್ಟಿರತೇನೀ. ಬರ್ರೀ. “” ನಿಮ್ಮ ಶಿಸ್ತೇನು ಗೊತ್ತಿಲ್ಲೇನ್ರವಾ ನನಗ. ಆತು ಬರಿತೇನೀ. “ಹೊರಡುತ್ತಿದ್ದರು ಕಮಲಾಬಾಯಿ.
ಅಷ್ಟರಲ್ಲಿ ಬಜಾರಿಗೆ ಹೋಗಿದ್ದ ಮಾವ ವಾಪಸ್ ಬಂದಿರುತ್ತಿದ್ದರು. ಕಾಯಿಪಲ್ಲೆ ಎಲ್ಲಾ ತೆಗೆದು ನೋಡುತ್ತಾ” ಪಡುವಲಕಾಯಿ ಎಂಥ ಛಲೋ ಅವರೀ… ಏ ತಂಗೀ ಸರೂ ಮಾಮೀ ಮನೀಗೆ, ಲಕ್ಷ್ಮಿ ಬಾಯೀ ಮನೀಗೆ, ಮುಂಚಳಂಕರ ಮನೀಗೇ ಒಂದೊಂದು ಪಡುವಲಕಾಯಿ ಕೊಟ್ಟು ಬಾ ಹೋಗು. ನೈವೇದ್ಯಕ್ಕ ಆಗತದ. ತಂದಾರೋ ಇಲ್ಲೋ ಪಾಪ.ಮಾತಾಡಿಕೋತ ಕೂತು ಬಿಡಬ್ಯಾಡ. ಲಗೂನ ಬಾ ಮತ್ತ.” ನನಗೆ ಅತ್ಯಂತ ಪ್ರೀತಿಯ ಕೆಲಸ ಇದು. ಕೈಯಲ್ಲಿ ಪಡುವಲಕಾಯಿಗಳನ್ನು ಹಿಡಿದು ಹೊರಡುತ್ತಿದ್ದೆ. ಎಲ್ಲಾ ಮನೆಗಳಿಗೂ ಕೊಟ್ಟು, ಅವರು ಕೊಟ್ಟ ಕುಂಬಳಕಾಯಿಯೋ ಮತ್ಯಾವುದೋ ತರಕಾರಿ ಹಿಡಿದು ಮನೆಗೆ ಬರುತ್ತಿದ್ದೆ. ಎಲ್ಲರ ಮನೆಯಲ್ಲೂ ಗೌರಿಯ ನೈವೇದ್ಯಕ್ಕೆ ಎಲ್ಲಾ ಸಿಗಲಿ ಎಂದು ಆ ಹಿರಿಯ ಗೆಳತಿಯರು ವಿಚಾರ ಮಾಡುತ್ತಿದ್ದುದೇ ಅದ್ಭುತ ವಿಚಾರ ನನ್ನ ಪಾಲಿಗೆ.
“ಇಗಾ ಕೇಳರಿಲ್ಲೇ ನೈವೇದ್ಯ ಬಡಿಸೋದಾಗೋ ಪುರುಸೊತ್ತಿಲ್ದೇ ಜಾಂಗಟೀ ಕೊಟ್ಟಬಿಡ್ರೀ ಹುಡುಗುರ ಕೈಗೆ. ಸರೂಬಾಯಿ ಮನೀಕಿಂತ ಮೊದಲ ನಮ್ಮ ಮನ್ಯಾಗ ಗಂಟೀ ಬಾರಸಬೇಕು ಈಗ ಹೇಳಿಬಿಟ್ಟೇನೀ. ಬಾಜೂ ಮನೀಯವರಂತೂ ಸುಸ್ತ ಹಡೀ. ಅವರದೇನ ಜಲ್ದಿ ಆಗಂಗಿಲ್ಲಾ. ಓಣ್ಯಾಗs ನಮ್ಮ ಮನ್ಯಾಗೇ ಫರ್ಸ್ಟ್ ಆಗಬೇಕು ಆರತಿ…” ನನಗೋ ನಗು. “ಅಲ್ರೀ ಅಮ್ಮಾ, ಅವರೆಲ್ಲ ನಿಮ್ಮ ಗೆಳತ್ಯಾರು ಅಂತ ಪಡುವಲಕಾಯಿ ಕೊಟ್ರೀ,ಮತ್ತ ಈಗs ಹಿಂಗ… “ಅಯ್ಯ, ಅದು ಬ್ಯಾರೆ, ಇದು ಬ್ಯಾರೆ. ಹಿರಸ ಇರಬೇಕು ಮನಷಾಗ. ಅಂದ್ರ ನಾಕ ಮಂದೀ ವಾ ವಾ ಅನ್ನೋಹಂಗ ಬಾಳೆವು ಮಾಡತೀರೀ.” “ಹೂನ್ರೀ.” ಒಂದೇ ಉತ್ತರ ನಂದು.
ಸಂಜೆಗೇ ಎಲ್ಲಾ ತರಕಾರಿ ಆರಿಸಿ, ಸ್ವಚ್ಛ ಮಾಡಿ, ತೊಳೆದು, ಹೆಚ್ಚಿ ಇಡುತ್ತಿದ್ದರು. “ಇಗಾ ವೀಳ್ಯದೆಲೆ ಒರೆಸಿ ಇಡು ತಂಗೀ. ಮುಂಜಾನೆ ವೀಡಾ ಮಾಡಿಡು. ದೇವರಿಗೆ ಎರಡು, ಮನಷಾರಿಗೆ ತಲೀಗೊಂದೊಂದು. ಎರಡು ನಮನಿ ವೀಡಾ ಮಾಡೋದು ಕಲಸ್ತೀನಿ ಬಾ. “ಎಲೆಗಳನ್ನು ಮಡಚುತ್ತಾ ವೀಡಾ ಮಾಡಿ ಮೇಲೊಂದು ಎಲೆ ಮಡಿಚಿಡುತ್ತಾ, ಲವಂಗ ಚುಚ್ಚಿ ವೀಡಾ ಮಾಡುವುದನ್ನು ಹೇಳಿಕೊಟ್ಟರು.” ಮುಂಜಾನೆ ನಸಕಲೇ ಎದ್ದು ಎಣ್ಣೆ ಹಚ್ಚಿ ಎರಕೋಳವಾ. ಮಂದಿ ಮಕ್ಕಳು ಬರೋದರಾಗ ಚಂದಾಗಿ ಒಂದ ಹೆಳ್ಳು ಹಾಕ್ಕೊಂಡು,(ನಾನು ಆಗ ದಿನಾ ಸಾಮಾನ್ಯವಾಗಿ ಎರಡು ಜಡೆ ಹಾಕಿಕೊಳ್ಳುತ್ತಿದ್ದುದು ಅದಕ್ಕೇ ಈ ಮಾತು) ಹೂವು ಹಾಕ್ಕೊಂಡು ಶಿಸ್ತ ಆಗಿ ತಯಾರಾಗು. ಚಂದಂದು ಅಂಚು ಸೆರಗಿನ ಸೀರೀ ಉಟಗೋ. ತಾವೂ ದಿನಕ್ಕೆ ಮೂರು ಸೀರೆ, ತುರುಬಿಗೆ ಮೂರು ಮಾಲೆಗಳನ್ನು ಬದಲಾಯಿಸುತ್ತಿದ್ದ ಅವರಿಗೆ ಸೊಸೆಯರೂ ಹಾಗೆಯೇ ಇರಬೇಕೆಂಬ ಆಸೆ. “ಏನ ದತ್ತಗೇಡಿ ದೈವಾ ಅಂತೇನೀ ಈಗಿನ ಹುಡುಗೀರದು. ಛಂದಾಗಿ ಉಟ್ಟು, ತೊಟ್ಟು ಮಾಡಲಿಕ್ಕೂ ಬ್ಯಾಸರಿಕಿ” ಗೊಣಗುತ್ತಿದ್ದರು. “ನಸಕಲೇ ಎದ್ದು ಅಂಗಳಕಸಾ, ಥಳೀ ಹಾಕಿ ರಂಗೋಲಿ ಹಾಕವಾ. ದೊಡ್ಡ ರಂಗೋಲಿ ಹಾಕು. “” ಹೂನ್ರೀ. ” ರಂಗೋಲಿ ಹಾಕುವುದು ನನಗೂ ಅತ್ಯಂತ ಇಷ್ಟದ ಕೆಲಸ.
ಮರುದಿನ ಬೆಳಿಗ್ಗಿನ ಜಾವವೇ ಎಬ್ಬಿಸುತ್ತಿದ್ದರು. ಕಸ, ಕಡ್ಡಿ ರಂಗೋಲಿ, ಅಭ್ಯಂಗಗಳಾಗುವ ಹೊತ್ತಿಗೆ ಒಬ್ಬೊಬ್ಬರಾಗಿ ಅತಿಥಿಗಳು ಬರಲಾರಂಭಿಸುತ್ತಿದ್ದರು. ಅತ್ತಿಗೆ, ನಾದಿನಿ, ಅವರ ಮಕ್ಕಳು, ಮಾವನವರ ಅಕ್ಕ ಹೀಗೆ ಸುಮಾರು ಜನ. ಯಾರಾದರೂ ಹಚ್ಚಿದವಲಕ್ಕಿಗೆ ಸೌತೆಕಾಯಿ, ಹಸಿಕೊಬ್ಬರಿ, ನಿಂಬೆಹಣ್ಣು, ಕೊತ್ತಂಬರಿಸೊಪ್ಪು ಹಾಕಿ ಕಲಿಸುತ್ತಿದ್ದರು. “ಸೀಗೇರೋ ಹಂಗ ತಿನಬ್ಯಾಡ್ರೀ ಅವಲಕ್ಕೀ. ಹೋಳಿಗಿ ಹಂಗೇ ಕೂಡತಾವ ಇಲ್ಲೇ. ಎಲ್ಲರಿಗೂ ಹಾಳ್ಯಾಗ ಹಾಕಿ ಕೊಡ್ರೀ ಅವಲಕ್ಕಿ.” ಅಡುಗೆಮನೆಯಿಂದಲೇ ಕೂಗು ಬರುತ್ತಿತ್ತು. ಹೂಂ ಅನ್ನುತ್ತಲೇ ಎಲ್ಲರೂ ಅವಲಕ್ಕಿ ಸಮಾರಾಧನೆ ಮಾಡುತ್ತಿದ್ದೆವು. “ಅಡುಗೆ ಅರ್ಧ ಆದಮ್ಯಾಲ ಹೇಳು, ನಾ ಮೈಗೆ ಇಳಿತೀನೀ” ಮಾವನವರು. “ಅಯ್ಯ ಪುರಸೊತ್ತು ಹಿಡಿರೀ. ಮೇಲ್ನೀರು ಹಾಕಲಿಕ್ಕೆ ಕೈಯರ ಬಿಡುವಾಗಬೇಕೋ ಬ್ಯಾಡೋ ನನಗ” ಗದರುತ್ತಿದ್ದರು.
ಕಮಲಾಬಾಯಿ 10 ಗಂಟೆಗೆ ಸರಿಯಾಗಿ ಬಂದು ಮೈತೊಳೆದುಕೊಂಡು, ಮಡಿಸೀರೆಯುಟ್ಟು ಅಡುಗೆಗೆ ಕೂಡುತ್ತಿದ್ದರು. ಎರಡೂ ಕೈಯಿಂದ ಹಿಟ್ಟು ಉಳ್ಳೀ ಹಾಕುತ್ತಿದ್ದ ಆಕೆ ನನಗೆ ನಿಜಕ್ಕೂ ಆಶ್ಚರ್ಯ. ಚಕಚಕ ಅಡುಗೆ ಮಾಡಿ ಮುಗಿಸುತ್ತಿದ್ದರು. ಸಾರಿಗೆ ಉಪ್ಪು ಹಾಕಿದೆಯೋ ಇಲ್ಲವೋ ಎಂದು ಸಾರಿನ ಪರಿಮಳದಿಂದಲೇ ಗುರುತು ಹಿಡಿಯುತ್ತಿದ್ದರು ಆಕೆ. “ಬ್ಯಾಳೀ ಕುದ್ದಿಲ್ರೆವಾ. ನಾಕು ಸೌತೆಕಾಯಿ ಹೋಳು ಕೊಡ್ರೀ. ಬ್ಯಾಳ್ಯಾಗ ಒಗದರ ಹಣ್ಣಾಗಿ ಕುದೀತಾವ.” ಕಣ್ಣರಳಿಸಿ ನೋಡುತ್ತಿದ್ದ ನನ್ನ ಪಾಲಿಗೆ ದೊಡ್ಡ ವಿಜ್ಞಾನಿ ಆಕೆ. ಸುಟ್ಟ ಮುಂಗೈಗೆ ಖಾರದಪುಡಿ, ಎಣ್ಣೆ ಕಲಸಿ ಹಚ್ಚುತ್ತಾ ಅಡುಗೆ ಮುಂದುವರೆಸುತ್ತಿದ್ದ ಆಕೆಯ ಮುಖದಲ್ಲಿ ಮಂದಹಾಸ ಯಾವಾಗಲೂ. ಆಕೆಯ ಎರಡು ಹೋಳಿಗೆ ಆಗುವಷ್ಟರಲ್ಲಿ ಅತ್ತೆ ಗೌರಿಯ ಪ್ರತಿಷ್ಠಾಪನೆ ಮಾಡುತ್ತಿದ್ದರು.
ಮುತ್ತಿನ ಕಿವಿಯೋಲೆ, ನತ್ತು ಹಾಕಿಕೊಂಡು ಶೃಂಗಾರಗೊಂಡ ಗೌರಿ ಸುಂದರವಾಗಿ ಶೋಭಿಸುತ್ತಿದ್ದಳು. ಕೇದಗೆ, ಮಲ್ಲಿಗೆಯ ದಂಡೆ, ಅರಿಸಿಣ, ಕುಂಕುಮ ಹಚ್ಚಿ ಗೌರಿಗೆ ಉಡಿ ತುಂಬಿ ಹೂರಣದ ಆರತಿ ಬೆಳಗುತ್ತಿದ್ದರು. ಅಷ್ಟರಲ್ಲಿ ಮಾವನವರ ದೇವರಪೂಜೆಯೂ ಮುಗಿದಿರುತ್ತಿತ್ತು. ಜಾಂಗಟೆಗಾಗಿ ಮೊಮ್ಮಕ್ಕಳ ಮಧ್ಯೆ ಜಗಳ. ಕೊನೆಗೆ ತಟ್ಟೆ, ಚಮಚಗಳನ್ನು ಅಡ್ಜಸ್ಟ್ ಮಾಡಿಕೊಡುಷ್ಟರಲ್ಲಿ ಸುಸ್ತು. “ಲಗೂನ ಬಾರಸಲಿಕ್ಕ ಸುರು ಮಾಡ್ರೋ, ಸರೂಬಾಯೀ ಮನ್ಯಾಗ ಜಾಂಗಟೀ ಬಾರಿಸಿಬಿಡ್ತಾರ…” ಅತ್ತೆಯವರು. ಎಲ್ಲರೂ ಗೊಳ್ ಅಂತ ನಗು. ದೇವರಿಗೆ ಆರತಿ ಆದಮೇಲೆ ನಮ್ಮೆಲ್ಲರನ್ನೂ ಕೂಡಿಸಿ ಆರತಿ ಮಾಡುತ್ತಿದ್ದರು. ಹಬ್ಬಕ್ಕೆ ಬರಲಾಗದ ಮಕ್ಕಳು, ಮೊಮ್ಮಕ್ಕಳನ್ನು ನೆನೆಸಿಕೊಳ್ಳುತ್ತಾ, ಅವರಿರುವ ಊರುಗಳ ದಿಕ್ಕಿಗೇ ಆರತಿ ಮಾಡುತ್ತಿದ್ದರು. ಎಂತಹ ಮುಗ್ಧತೆ. ತನ್ನ ಯಾವ ಮಕ್ಕಳೂ ವಂಚಿತರಾಗಬಾರದೆಂಬ ತಾಯಿ ಪ್ರೀತಿ.
ಮುತೈದೆಗೆ ಮೊದಲು ತೀರ್ಥ ಕೊಟ್ಟು, ಉಡಿ ತುಂಬಿದ ನಂತರ ಉಳಿದವರಿಗೆ. “ಇಗಾ, ಉಡಿ ಮತ್ತ ದಕ್ಷಿಣೀ ಈ ಡಬ್ಯಾಗ ಇಟ್ಟು ಬಿಡ್ರೀ. ಇವತ್ತು ಹೊರಗಡೆ ಏನೂ ಕೊಡೋ ಹಂಗಿಲ್ಲ. ನಾಳೆ ಊಟಕ್ಕ ಬಂದಾಗ ಒಯ್ಯಿರಂತ.” ಅತ್ತೆ ಹೇಳುತ್ತಿದ್ದರೆ ಆಕೆ ಹೂಂ ಅನ್ನುತ್ತಿದ್ದರು. ನಂತರದ ಊಟದ ಕಾರ್ಯಕ್ರಮ ನನ್ನ ನಿಜವಾದ ಪರೀಕ್ಷೆ. ” ಕುಡಿ ಎಡಕ್ಕ ಬರೋಹಂಗ ಬಾಳೆಎಲೆ ಹಾಕು. ರಂಗೋಲಿ ಎಲ್ಲಾ ಎಲಿಗೂ ಬ್ಯಾರೆ ಬ್ಯಾರೆ ಹಾಕಬೇಕು. ಇಲ್ಲಾ ಎಂಜಲು ಆಗತದ.ಉಪ್ಪು, ಪಲ್ಯ, ಚಟ್ನಿ ಎಲ್ಲಾ ಕರೆಕ್ಟ್ ಅದರದರ ಜಾಗಾಕ್ಕಿರಬೇಕು. ಎಲಿ ಮುಂದ ಬಂದುಕೂಡೋಕ್ಕಿಂತ ಮೊದಲ ಅನ್ನಾ ಹಾಕಬಾರದು. ಸೀರಿ ನೀರಿಗಿ ಕಾಲಾಗ ಹಿಡಕೋ. ಹೆರಳು ಗಂಟು ಹಾಕ್ಕೋ. ಮುಂದ ಬೀಳತದ. ಬಗ್ಗಿ ಸಾವಕಾಶ ಬಡಸು. ಮೊದಲ ಸಣ್ಣ ಹುಡುಗರಿಗೆ ಹಾಕಬೇಕು. ಗಂಡಸರ ಎಲಿ ನೋಡಕೋತ ಇರಬೇಕು. ಏನ ತೀರೇದೋ ನೋಡಿಕೊಂಡು ಕೇಳಿ ಬಡಿಸಬೇಕು. ಎಲ್ಲರಿಗೂ ಹಂಚ ಮ್ಯಾಲಿನ ಬಿಸಿ ಹೋಳಿಗೇನೇ ಹಾಕು. ಹಾಲು, ತುಪ್ಪ ಕೇಳು… ” ಎಲ್ಲರ ಊಟ, ಗೋಮೆಗಳಾದಿಂದ ಅವರಿಗೆಲ್ಲಾ ಎಲೆ, ಅಡಿಕೆ ಕೊಟ್ಟು ಆಮೇಲೆ ಅತ್ತೆ, ನಾವು ಸೊಸೆಯರು, ಅಡಿಗೆ ಕಮಲಾಬಾಯಿ ಎಲ್ಲರೂ ಒಟ್ಟಿಗೆ ಊಟಕ್ಕೆ ಕೂಡುತ್ತಿದ್ದೆವು.” ಉಡಸಾರಣೆ, ಉಪಗಾರಣೆ ಎಲ್ಲಾ ಮುಗಿಸಿ ವೀಡಾ ಹಾಕ್ಕೊಂಡ ಅಡ್ಡಾಗರೆವಾ ನೀವೂ. ಖಾಜಾಬಿಗೆ (ಮನೆಕೆಲಸದವಳು) ಹೊಟ್ಟೆ ತುಂಬಾ ಊಟಕ್ಕ ಹಾಕ್ರೀ. “ಹೇಳಿ ತಾವೂ ತುಸು ಮಲಗುತ್ತಿದ್ದರು. ಸಂಜೆ ದೀಪ ಹಚ್ಚಿದ ಬಳಿಕ ಶುಕ್ರವಾರದ ಹಾಡು ಅವರು ಹಾಡುತ್ತಿದ್ದರೆ ಎಲ್ಲರೂ ಮುಂದೆ ಕೂತು ಕೇಳಲೇಬೇಕು. “ತಂಗೀ ಶುಕ್ರವಾರಕ್ಕ ಪುಠಾಣಿ ಸಕ್ರೀ ನೈವೇದ್ಯ ಇಡಬೇಕು. ಶನಿವಾರ ಬರೀ ಸಕ್ಕರಿ. ಅಡಗಿ ತಿಳಕೋರಿ. ಶುಕ್ರವಾರ ಹಬ್ಬದಡಗಿ, ಶನಿವಾರ ಭಕ್ರೀ, ನುಚ್ಚು, ಹಿಂಡಿಪಲ್ಯಾ. ಥೇಟ್ ಹಾಡಿನ್ಯಾಗ ಇದ್ದಂಗೇ ಅಡಿಗಿ ಮಾಡಬೇಕು. ಶುಕ್ರವಾರದ ಆರತಿಗೆ ಹೂರಣ, ಶನಿವಾರಕ್ಕ ಹಿಟ್ಟಿನ ಆರತಿ ಮಾಡಬೇಕು. ನನ್ನ ನಂತರ ನೀವೇ ಇದನ್ನೆಲ್ಲಾ ನಡೆಸಿಕೊಂಡು ಹೋಗಬೇಕಲವಾ. ಛಂತಾಗಿ ಕಲಕೋರಿ. “
ಶ್ರಾವಣಮಾಸದ ಈ ಸಂಭ್ರಮ ಮುಂದೆ ಗಣೇಶನ ಹಬ್ಬ, ಆಮೇಲೆ ನಾಲ್ಕು ದಿನಕ್ಕೆ ಎಳೆ ಅಷ್ಟಮಿಯವರೆಗೂ ನಡೆಯುತ್ತಿತ್ತು. ಇಡೀ ಓಣಿ ಹಬ್ಬದ ಸಡಗರದಿಂದ ಸಂಭ್ರಮಿಸುತ್ತಿತ್ತು. ಈಗಲೂ ಅದೇ ಓಣಿ, ಅದೇ ಶ್ರಾವಣ. ಅವೇ ಅಡುಗೆಗಳು. ಆದರೆ ಆ ಹಿರಿಯ ತಲೆಗಳೂ ಇಲ್ಲ. ಆ ಸಂಭ್ರಮವೂ ಉಳಿದಿಲ್ಲ. ಎಲ್ಲರ ಜೇಬು ತುಂಬಾ ಕಾಂಚಾಣವಿದೆ. ಆದರೆ ಆಸ್ವಾದಿಸುವ ಸಮಯವೂ ಇಲ್ಲ. ಆಸಕ್ತಿಯೂ ಇಲ್ಲ. ಎಲ್ಲಕ್ಕಿಂತ ಮಿಗಿಲಾಗಿ ನಾವೆಲ್ಲ ಜಾಣರಾಗುತ್ತಿದ್ದೇವೆ. ವಿಚಾರವಂತರಾಗುತ್ತಿದ್ದೇವೆ. ನಮ್ಮ ಮುಗ್ಧತೆಯನ್ನೂ, ಅದು ತಂದು ಕೊಡುತ್ತಿದ್ದ ಪುಟ್ಟ ಪುಟ್ಟ ಸುಖ ಸಂತೋಷಗಳನ್ನೂ ಕಳೆದುಕೊಳ್ಳುತ್ತಿದ್ದೇವೆ. ಧಾವಂತದ ಬದುಕಿನಲ್ಲಿ ಈ ಖುಷಿಯ ನಾಲ್ಕಾರು ಕ್ಷಣಗಳನ್ನು, ಶ್ರಾವಣದ ಈ ದಿನಗಳಲ್ಲಿ ಉಡಿ ತುಂಬೋಣ. ತುಂಬಿಸಿಕೊಳ್ಳೋಣ ಬನ್ನಿ.
*******
*******
18 Aug 2020
ಈ ಬಾರಿಯ ಜ್ಯೇಷ್ಠಾ ಗೌರಿಯ ಆವಾಹನೆ-ಪೂಜೆಯ ದಿನಾಂಕಗಳು ರಾಯರ ಮಠದ ಪಂಚಾಂಗದ ಪ್ರಕಾರ ಇಂತಿದೆ:
ತಿಥಿಯನ್ನು ಹಿಡಿದು ಮಾಡುವವರಿಗೆ
25-08-2020 ಆವಾಹನೆ
26-08-2020ಪೂಜೆ
27-08-2020 ದೋರಬಂಧನ ವಿಸರ್ಜನೆ
ನಕ್ಷತ್ರ ಹಿಡಿದು ಮಾಡುವವರಿಗೆ
26-08-2020 ಆವಾಹನೆ
27-08-2020 ಪೂಜೆ
28-08-2020 ದೋರಬಂಧನ ವಿಸರ್ಜನೆ
-ಪಂಚಾಂಗ ಸಂಶೋಧನಾ ಮಂಡಳಿ
**************
ಕಥೆ:
ಜೋಕುಮಾರ ಹುಟ್ಟಿ ಜಗವೆಲ್ಲ
1.ಭಾದ್ರಪದ ಮಾಸದ ಅಷ್ಟಮಿಯ ದಿನದಂದು ಹುಟ್ಟಿದ ಜೋಕುಮಾರ “ಜೋಕ” ಎಂಬ ಮುನಿಯ ಮಗನೆಂದೂ, ಜೇಷ್ಠಾ ದೇವಿಯ ಮಗನೆಂದೂ ಹೇಳಲಾಗುತ್ತಿದೆ. ಹುಟ್ಟಿದೊಡನೆ ಆತ ತನ್ನ ಕಾಮುಕ ಪ್ರವೃತ್ತಿಯಿಂದ ಊರವರಿಗೆಲ್ಲ ಹೊರೆಯಾಗಿ ಹೋಗುತ್ತಾನೆ.
2. ಆತನು ಶಿವನ ಗಣಗಲ್ಲಿರುವವನು, ಆತ ಗಣಪತಿಯೊಂದಿಗೆ ಬರುವನು ಆದರೆ ಆತನಿಗೆ 7 ದಿನಗಳ ಆಯಸ್ಸು ಹೀಗೆ ಅನೇಕ ಕಥೆಗಳಿವೆ.
3.ಒಮ್ಮೆ ಮಳೆಹೋಗಿ ಬೆಳೆ ಒಣಗುತ್ತದೆ. ಆಗ ಜೋಕುಮಾರ ತನ್ನಕುದುರೆ ಏರಿ ಹೊಲಗದ್ದೆಗಳಲ್ಲಿ ಸಂಚರಿಸುತ್ತಾನೆ. ಅವನು ತನ್ನ ಮೇಲು ಹೊದಿಕೆ ಒಮ್ಮೆ ಜೋರಾಗಿ ಆಕಾಶಕ್ಕೆ ಬೀಸಿದಾಗ ಮೋಡಗಳು ಮಳೆ ಸುರಿಸುತ್ತವೆ ಎಂಬ ಕಥೆಯಲ್ಲಿ ಉಲ್ಲೇಖವಾಗಿದೆ.
4.ಜೀವಿತ ಏಳು ದಿನಗಳಲ್ಲಿ ಏಳು ಅವತಾರ ಪಡೆದು ಸ್ತ್ರೀಯರನ್ನುಮೋಹಿಸುತ್ತಾನೆ. ಒಮ್ಮೆ ಮಡಿವಾಳರ ಯುವತಿ ಅವಳನ್ನು ಇಷ್ಟಪಡುತ್ತಾಳೆ. ಜೋಕುಮಾರನನ್ನು ಸಹಿಸದ ಆ ಯುವತಿ ತಂದೆ ಜೋಕುಮಾರನ ತಲೆ ಕತ್ತರಿಸಿ ನದಿಗೆ ಬಿಸಾಡುತ್ತಾನೆ. ಆ ತಲೆಯು ಒಬ್ಬಬೆಸ್ತರಿಗೆ ಸಿಗುತ್ತದೆ. ತಮ್ಮ ಬೆಳೆಗಳನ್ನು ರಕ್ಷಿಸಿ ನಮ್ಮ ಬದುಕಿಗೆ ಆಧಾರವಾದ ಜೋಕುಮಾರನ ತಲೆಯನ್ನು ಊರಿಗೆ ತಂದು ಊರವರೆಲ್ಲ ಸೇರಿ ಜೋಕುಮಾರನಿಗೆ ಪೂಜೆ ಸಲ್ಲಿಸಿದರು ಎಂದು ಕಥೆಯಲ್ಲಿ ಇವನನ್ನು ವರ್ಣಿಸಲಾಗುತ್ತದೆ.
ಮೂರ್ತಿ ನಿರ್ಮಾಣ:
ಇಂಥ ಜೋಕುಮಾರ ಹುಟ್ಟುವುದು ವಿಶ್ವಕರ್ಮರ ಮನೆಯಲ್ಲಿ. ಮಣ್ಣಿನಿಂದ ತಿದ್ದಿ, ತೀಡಿದ ಅತ್ಯಂತ ಚೆಲುವಿನಿಂದ ಕೂಡಿದ ಮೂರ್ತಿ ಇದಾಗಿರುತ್ತದೆ. ಮೂರ್ತಿ ಮಾಡಿದವರಿಗೆ ಕೊಡಬೇಕಾದ ಗೌರವ ಧನದೊಂದಿಗೆ ಎಲೆ. ಅಡಿಕೆ, ಉಲುಪಿ (ಹಿಟ್ಟು, ಬೇಳೆ, ಬೆಲ್ಲ, ಅಕ್ಕಿ) ಕೊಟ್ಟು ಪೂಜಿಸಿ ಬುಟ್ಟಿಯಲ್ಲಿಟ್ಟುಕೊಂಡು ಮೊದಲು ಗೌಡರ ಮನೆಗೆ ತರುತ್ತಾರೆ. ಗೌಡರ ಮನೆಯಲ್ಲಿ ಪೂಜೆಯಾದನಂತರ ಅವರು ಕೊಡುವ ಬಿಳಿ ಬಟ್ಟೆಯನ್ನು ಜೋಕುಮಾರನಿಗೆ ಹೊದಿಸಿ ಬೆಣ್ಣೆಯನ್ನು ಬಾಯಿಗೆ ಸವರಿ ಏಳು ದಿನಗಳ ಕಾಲ ಊರಿನ ಪ್ರತಿ ಮನೆಮನೆಗೂ ಜೋಕುಮಾರನನ್ನು ಕರೆದುಕೊಂಡು ಹೋಗುತ್ತಾರೆ.
ಮೆರವಣಿಗೆ:
ವಾಲ್ಮೆಕಿ ಜನಾಂಗದ, ಕೋಲಕಾರ, ಕಬ್ಬಲಿಗರ, ಅಂಬಿಗರ ಜನಾಂಗದ ಮಹಿಳೆಯರೇ ಹೆಚ್ಚಾಗಿ ಈ ಜೋಕುಮಾರನನ್ನು ಹೊತ್ತು ತಿರುಗುವ ಉಸ್ತುವಾರಿ ನೋಡಿಕೊಳ್ಳುತ್ತಾರೆ. ಪ್ರತಿ ಮನೆಗೆ ಹೋದಾಗ ಕಟ್ಟೆಯ ಮೇಲೆ ಜೋಕುಮಾರನನ್ನು ಇಟ್ಟು ಆತನಿಗೆ ಸಂಬಂಧಿಸಿದ ಹಾಡುಗಳನ್ನು ಹೇಳುತ್ತಾರೆ. ಆ ಹಾಡುಗಳಲ್ಲಿ ಆತನ ಜನನ, ಉಡಾಳತನ, ಆತನ ಕೊಲೆ, ನಂತರದಲ್ಲಿ “ಅಡ್ಡಡ್ಡ ಮಳೆಯಾಗಿ, ಗೊಡ್ಡೆಮ್ಮೆ ಹೈನಾಗಿ” ಎಲ್ಲವೂ ಬರುತ್ತವೆ. ಮನೆಯವರು ಕೊಡುವ ಜೋಳಕ್ಕೆ ಪ್ರತಿಯಾಗಿ ಮೊರದಲ್ಲಿ ಐದಾರು ಕಾಳು ಜೋಳ, ಬೇವಿನ ಸೊಪ್ಪು, ಒಂದಿಷ್ಟು ನುಚ್ಚನ್ನು ಇಡುತ್ತಾರೆ. ಜೋಳದ ಕಾಳನ್ನು, ಬೇವಿನ ಸೊಪ್ಪನ್ನು ಕಾಳಿನ ಸಂಗ್ರಹದಲ್ಲಿ ಹಾಕುತ್ತಾರೆ. ಹೀಗೆ ಮಾಡುವುದರಿಂದ ಪೈರುಗಳು ಹುಲುಸಾಗುತ್ತವೆ. ಧಾನ್ಯಗಳಿಗೆ ಹುಳು ಬಾಧೆ ಕಾಣಿಸಿಕೊಳ್ಳುವುದಿಲ್ಲ ಎನ್ನುವುದು ರೈತರ ನಂಬಿಕೆ.
ಶಾಪ (ಚವತಿ ಚಂದ್ರನ ರೀತಿ)
ಮಧ್ಯರಾತ್ರಿಯನಂತರವೇ ಜೋಕು ಮಾರನನ್ನು ಹೊತ್ತು ಕೇರಿಗೆ ಕರೆತರುತ್ತಾರೆ. ಕೇರಿಯ ಚಾವಡಿಯಲ್ಲೊಬ್ಬ ಬೆನ್ನು ಹಿಂದಕ್ಕೆ ಮಾಡಿಯೇ ಜೋಕುಮಾರನ ಬುಟ್ಟಿಯನ್ನು ತೆಗೆದುಕೊಳ್ಳುತ್ತಾನೆ. ಇಲ್ಲಿಯೂ ಬುಟ್ಟಿ ಕೊಡುವವ, ತೆಗೆದುಕೊಳ್ಳುವವ ಪರಸ್ಪರ ಒಬ್ಬರ ಮುಖವನ್ನು ಇನ್ನೊಬ್ಬರು ನೋಡುವಂತಿಲ್ಲ. ನಂತರ ಬುಟ್ಟಿಯಲ್ಲಿದ್ದ ಕಡುಬುಗಳನ್ನು ತೆಗೆಯುತ್ತಾರೆ. ಅದೇ ಸಮಯದಲ್ಲಿ ಚಾವಡಿ ಕಟ್ಟೆಯ ಮೇಲೆ ಜೋಕುಮಾರನ ಬುಟ್ಟಿಯ ಸಮೀಪ ಬಾರಿ ಮುಳ್ಳಿನ ಕಂಟಿಯನ್ನಿಟ್ಟಿರುತ್ತಾರೆ.
ಸಾವು (ಆಚರಣೆ ಕಡೆಯ ಕ್ಷಣ, ಹಲವು ವೈವಿಧ್ಯಮಯ ಆಚರಣೆ)
ವೇಶ್ಯೆಯರು ಚಾವಡಿಯಲ್ಲಿಟ್ಟಿರುವ ಜೋಕುಮಾರನ ಬುಟ್ಟಿಯ ಸುತ್ತಲೂ ಸುತ್ತುತ್ತಿರಬೇಕಾದರೆ ಪಕ್ಕದಲ್ಲಿರಿಸಲಾಗಿರುವ ಮುಳ್ಳಿನ ಕಂಟಿ ಅವರ ಸೀರೆಗೆ ಸಿಕ್ಕಿ ಜಗ್ಗಿದಾಗ “ಜೋಕುಮಾರ ನಮ್ಮನ್ನು ಹಿಡಿದುಕೊಳ್ಳಲು ಬಂದ, ನಮ್ಮ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ” ಎಂದು ಭೂಮ್ಯಾಕಾಶ ಬಿರಿಯುವಂತೆ ಬಾಯಿ ಮಾಡತೊಡಗುತ್ತಾರೆ. ಅದನ್ನು ಕೇಳಿದವರೆಲ್ಲ ಓಡಿ ಬಂದು ಜೋಕುಮಾರನನ್ನು ಒಣಕೆಯಿಂದ ಹಿಗ್ಗಾಮುಗ್ಗಾ ಥಳಿಸಿ ಕೊಂದು ಹಾಕುತ್ತಾರೆ.
ಜೋಕುಮಾರ ತನ್ನ ಹುಟ್ಟಿನ ನಂತರದ ಏಳನೇ ದಿನ ಹರಿಜನ ಕೇರಿಗೆ ಹೋಗಿ ತನ್ನ ಕೀಟಲೆಯಿಂದ ಮಾತಂಗಿಯರ ಕೈಗೆ ಸಿಕ್ಕು ಕಣ್ಣು ಕಿತ್ತಿಸಿಕೊಳ್ಳುತ್ತಾನೆ. ಮರಳಿ ಕಣ್ಣು ಕಳೆದುಕೊಂಡು ಕೇರಿಗೆ ಬಂದ ಜೋಕುಮಾರನನ್ನು ಹಿರಿಯರೊಬ್ಬರು ಒನಕೆಯಿಂದ ಆತನ ತಲೆ ಕುಟ್ಟಿ ರಾತ್ರಿ ಪಟ್ಟಣದ ಜಾಪಾನ್ ತೋಟದಲ್ಲಿ ಬಾವಿಯಲ್ಲಿ ಎಸೆಯುವುದು ಸಂಪ್ರದಾಯ.
ಕೊನೆಯ ದಿನ ಗುರುತಿಸಿದ ಮನೆಯಲ್ಲಿ ಜೋಕುಮಾರನ ಮೂರ್ತಿಗೆ ಚೂರಿ ಹಾಕುವರು. ನಂತರ ಜೋಕುಮಾರ ಸತ್ತನೆಂದು ಅಗಸರ ಬಂಡೆ ಅಡಿ ಮಣ್ಣಿನಲ್ಲಿ ಹೂತು ಹಾಕಿ ಬರುವರು. ಹೀಗೆ ಹೂತಿಡುವ ಸಂದರ್ಭದಲ್ಲಿ ವಿಧಿ ವಿಧಾನಗಳಿವೆ. ನಂತರ ಸಂಚರಿಸಿದ ಸಂದರ್ಭದಲ್ಲಿ ದೊರೆತ ಧಾನ್ಯಗಳಿಂದ ಅಡುಗೆ ಮಾಡಿ ಸಾಮೂಹಿಕ ಭೋಜನ ಮಾಡುವರು.
ಆತನ ಅಳಲು(ಶ್ರಾದ್ಧಾ)
ಹೀಗೆ ಏಳು ದಿನ ಬದುಕುವ ಜೋಕಪ್ಪ ಏಳನೇ ದಿನ ಸಾಯುತ್ತಾನೆ. ಅಂದೇ ಅಳಲು-ಅಂಬಲಿ ಎಂಬ ವಿಶಿಷ್ಟ ಆಚರಣೆ ಹೊಲಗಳಲ್ಲಿ ನಡೆಯುತ್ತದೆ. ರೊಟ್ಟಿ-ಬುತ್ತಿ ಕಟ್ಟಿಕೊಂಡು ಹೊಲಗಳಿಗೆ ಹೊಗಿ ಭೂತಾಯಿಯ ಪೂಜೆ ಮಾಡಿ ಮನೆಮಂದಿಯೆಲ್ಲಾ ಸೇರಿ ಉಂಡುಬರುವುದು ಸಂಪ್ರದಾಯ. ಅಷ್ಟೇ ಅಲ್ಲ ಈ ಅಳಲಿನಲ್ಲಿ ಹೊಸಬಟ್ಟೆ ಉಡುವಂತಿಲ್ಲ, ಒಡವೆ-ವಾಹನ ಖರೀದಿಸುವಂತಿಲ್ಲ, ಶುಭಕಾರ್ಯ ಮಾಡುವಂತಿಲ್ಲ ಎಂಬುದು ಜನಪದರ ಸ್ವಯಂಘೋಷಿತ ಸಂವಿಧಾನ.
ಜೋಕುಮಾರನ ಮರೆಯುವುದು:
ಜೋಕುಮಾರನ ಮರಣದ ನಂತರ ಅಗಸರು ಬಟ್ಟೆ ಒಗೆಯುವ ಹಳ್ಳದ ದಂಡೆಗೋ, ಕೆರೆಯ ಸಮೀಪವೋ, ನದಿ ದಂಡೆಗೋ ಒಯ್ದು ಬಿಸಾಕುತ್ತಾರೆ. ಜೋಕುಮಾರನು ಸತ್ತ ಸುದ್ದಿ ತಿಳಿದ ನಂತರವೇ ಏಳು ದಿನಗಳ ಕಾಲ ಜೋಕುಮಾರನನ್ನು ಹೊತ್ತು ತಿರುಗಿದ ಮಹಿಳೆಯರು ತಲೆಗೆ ನೀರು ಹಾಕಿಕೊಂಡು ಸ್ನಾನ ಮಾಡುತ್ತಾರೆ. ಆ ಮೇಲೆ ಮೂರು ದಿನಗಳ ಕಾಲ ಊರಿನ ಯಾವ ಮಡಿವಾಳರೂ ಬಟ್ಟೆಗಳನ್ನು ಒಗೆಯುವಂತಿಲ್ಲ. ಜೋಕುಮಾರನನ್ನು ಬಿಸಾಕಿದ ಸ್ಥಳದಲ್ಲಿ ಕಲ್ಲಿಟ್ಟು ಪೂಜಿಸಿ ಎಡೆ ತೋರಿಸಿ “ದಿನ” ಮಾಡಿ ಮುಗಿಸಿ ತಮ್ಮ ಕಾಯಕ ಪ್ರಾರಂಭಿಸುತ್ತಾರೆ.
ಹಾಡು:
ಅಡ್ಡಡ್ಡ ಮಳೆ ಬಂದು, ದೊಡ್ಡ ದೊಡ್ಡ ಕೆರೆ ತುಂಬಿ, ಗೊಡ್ಡಗಳೆಲ್ಲ ಹೈನಾಗಿ ಜೋಕುಮಾರ, ಜೋಕುಮಾರ...
ಜೋಕುಮಾರ.... ಮಡಿವಾಳ ಕೇರಿ ಹೊಕ್ಕಾನ ಜೋಕುಮಾರ ಮುಡಿತುಂಬಾ ಹೂವ ಮುಡಿದಂತ ಚೆಲುವಿನ ತನ್ನ ಮಡಿಯಂದಾ ಜೋಕಮಾರ.
***********
Here is the link to know about vruta in kannada
**********
https://www.youtube.com/watch?v=j0aUSDltYGg&feature=youtu.be*******
18 Aug 2020
ಈ ಬಾರಿಯ ಜ್ಯೇಷ್ಠಾ ಗೌರಿಯ ಆವಾಹನೆ-ಪೂಜೆಯ ದಿನಾಂಕಗಳು ರಾಯರ ಮಠದ ಪಂಚಾಂಗದ ಪ್ರಕಾರ ಇಂತಿದೆ:
ತಿಥಿಯನ್ನು ಹಿಡಿದು ಮಾಡುವವರಿಗೆ
25-08-2020 ಆವಾಹನೆ
26-08-2020ಪೂಜೆ
27-08-2020 ದೋರಬಂಧನ ವಿಸರ್ಜನೆ
ನಕ್ಷತ್ರ ಹಿಡಿದು ಮಾಡುವವರಿಗೆ
26-08-2020 ಆವಾಹನೆ
27-08-2020 ಪೂಜೆ
28-08-2020 ದೋರಬಂಧನ ವಿಸರ್ಜನೆ
-ಪಂಚಾಂಗ ಸಂಶೋಧನಾ ಮಂಡಳಿ
**************
ಕಥೆ:
ಜೋಕುಮಾರ ಹುಟ್ಟಿ ಜಗವೆಲ್ಲ
1.ಭಾದ್ರಪದ ಮಾಸದ ಅಷ್ಟಮಿಯ ದಿನದಂದು ಹುಟ್ಟಿದ ಜೋಕುಮಾರ “ಜೋಕ” ಎಂಬ ಮುನಿಯ ಮಗನೆಂದೂ, ಜೇಷ್ಠಾ ದೇವಿಯ ಮಗನೆಂದೂ ಹೇಳಲಾಗುತ್ತಿದೆ. ಹುಟ್ಟಿದೊಡನೆ ಆತ ತನ್ನ ಕಾಮುಕ ಪ್ರವೃತ್ತಿಯಿಂದ ಊರವರಿಗೆಲ್ಲ ಹೊರೆಯಾಗಿ ಹೋಗುತ್ತಾನೆ.
2. ಆತನು ಶಿವನ ಗಣಗಲ್ಲಿರುವವನು, ಆತ ಗಣಪತಿಯೊಂದಿಗೆ ಬರುವನು ಆದರೆ ಆತನಿಗೆ 7 ದಿನಗಳ ಆಯಸ್ಸು ಹೀಗೆ ಅನೇಕ ಕಥೆಗಳಿವೆ.
3.ಒಮ್ಮೆ ಮಳೆಹೋಗಿ ಬೆಳೆ ಒಣಗುತ್ತದೆ. ಆಗ ಜೋಕುಮಾರ ತನ್ನಕುದುರೆ ಏರಿ ಹೊಲಗದ್ದೆಗಳಲ್ಲಿ ಸಂಚರಿಸುತ್ತಾನೆ. ಅವನು ತನ್ನ ಮೇಲು ಹೊದಿಕೆ ಒಮ್ಮೆ ಜೋರಾಗಿ ಆಕಾಶಕ್ಕೆ ಬೀಸಿದಾಗ ಮೋಡಗಳು ಮಳೆ ಸುರಿಸುತ್ತವೆ ಎಂಬ ಕಥೆಯಲ್ಲಿ ಉಲ್ಲೇಖವಾಗಿದೆ.
4.ಜೀವಿತ ಏಳು ದಿನಗಳಲ್ಲಿ ಏಳು ಅವತಾರ ಪಡೆದು ಸ್ತ್ರೀಯರನ್ನುಮೋಹಿಸುತ್ತಾನೆ. ಒಮ್ಮೆ ಮಡಿವಾಳರ ಯುವತಿ ಅವಳನ್ನು ಇಷ್ಟಪಡುತ್ತಾಳೆ. ಜೋಕುಮಾರನನ್ನು ಸಹಿಸದ ಆ ಯುವತಿ ತಂದೆ ಜೋಕುಮಾರನ ತಲೆ ಕತ್ತರಿಸಿ ನದಿಗೆ ಬಿಸಾಡುತ್ತಾನೆ. ಆ ತಲೆಯು ಒಬ್ಬಬೆಸ್ತರಿಗೆ ಸಿಗುತ್ತದೆ. ತಮ್ಮ ಬೆಳೆಗಳನ್ನು ರಕ್ಷಿಸಿ ನಮ್ಮ ಬದುಕಿಗೆ ಆಧಾರವಾದ ಜೋಕುಮಾರನ ತಲೆಯನ್ನು ಊರಿಗೆ ತಂದು ಊರವರೆಲ್ಲ ಸೇರಿ ಜೋಕುಮಾರನಿಗೆ ಪೂಜೆ ಸಲ್ಲಿಸಿದರು ಎಂದು ಕಥೆಯಲ್ಲಿ ಇವನನ್ನು ವರ್ಣಿಸಲಾಗುತ್ತದೆ.
ಮೂರ್ತಿ ನಿರ್ಮಾಣ:
ಇಂಥ ಜೋಕುಮಾರ ಹುಟ್ಟುವುದು ವಿಶ್ವಕರ್ಮರ ಮನೆಯಲ್ಲಿ. ಮಣ್ಣಿನಿಂದ ತಿದ್ದಿ, ತೀಡಿದ ಅತ್ಯಂತ ಚೆಲುವಿನಿಂದ ಕೂಡಿದ ಮೂರ್ತಿ ಇದಾಗಿರುತ್ತದೆ. ಮೂರ್ತಿ ಮಾಡಿದವರಿಗೆ ಕೊಡಬೇಕಾದ ಗೌರವ ಧನದೊಂದಿಗೆ ಎಲೆ. ಅಡಿಕೆ, ಉಲುಪಿ (ಹಿಟ್ಟು, ಬೇಳೆ, ಬೆಲ್ಲ, ಅಕ್ಕಿ) ಕೊಟ್ಟು ಪೂಜಿಸಿ ಬುಟ್ಟಿಯಲ್ಲಿಟ್ಟುಕೊಂಡು ಮೊದಲು ಗೌಡರ ಮನೆಗೆ ತರುತ್ತಾರೆ. ಗೌಡರ ಮನೆಯಲ್ಲಿ ಪೂಜೆಯಾದನಂತರ ಅವರು ಕೊಡುವ ಬಿಳಿ ಬಟ್ಟೆಯನ್ನು ಜೋಕುಮಾರನಿಗೆ ಹೊದಿಸಿ ಬೆಣ್ಣೆಯನ್ನು ಬಾಯಿಗೆ ಸವರಿ ಏಳು ದಿನಗಳ ಕಾಲ ಊರಿನ ಪ್ರತಿ ಮನೆಮನೆಗೂ ಜೋಕುಮಾರನನ್ನು ಕರೆದುಕೊಂಡು ಹೋಗುತ್ತಾರೆ.
ಮೆರವಣಿಗೆ:
ವಾಲ್ಮೆಕಿ ಜನಾಂಗದ, ಕೋಲಕಾರ, ಕಬ್ಬಲಿಗರ, ಅಂಬಿಗರ ಜನಾಂಗದ ಮಹಿಳೆಯರೇ ಹೆಚ್ಚಾಗಿ ಈ ಜೋಕುಮಾರನನ್ನು ಹೊತ್ತು ತಿರುಗುವ ಉಸ್ತುವಾರಿ ನೋಡಿಕೊಳ್ಳುತ್ತಾರೆ. ಪ್ರತಿ ಮನೆಗೆ ಹೋದಾಗ ಕಟ್ಟೆಯ ಮೇಲೆ ಜೋಕುಮಾರನನ್ನು ಇಟ್ಟು ಆತನಿಗೆ ಸಂಬಂಧಿಸಿದ ಹಾಡುಗಳನ್ನು ಹೇಳುತ್ತಾರೆ. ಆ ಹಾಡುಗಳಲ್ಲಿ ಆತನ ಜನನ, ಉಡಾಳತನ, ಆತನ ಕೊಲೆ, ನಂತರದಲ್ಲಿ “ಅಡ್ಡಡ್ಡ ಮಳೆಯಾಗಿ, ಗೊಡ್ಡೆಮ್ಮೆ ಹೈನಾಗಿ” ಎಲ್ಲವೂ ಬರುತ್ತವೆ. ಮನೆಯವರು ಕೊಡುವ ಜೋಳಕ್ಕೆ ಪ್ರತಿಯಾಗಿ ಮೊರದಲ್ಲಿ ಐದಾರು ಕಾಳು ಜೋಳ, ಬೇವಿನ ಸೊಪ್ಪು, ಒಂದಿಷ್ಟು ನುಚ್ಚನ್ನು ಇಡುತ್ತಾರೆ. ಜೋಳದ ಕಾಳನ್ನು, ಬೇವಿನ ಸೊಪ್ಪನ್ನು ಕಾಳಿನ ಸಂಗ್ರಹದಲ್ಲಿ ಹಾಕುತ್ತಾರೆ. ಹೀಗೆ ಮಾಡುವುದರಿಂದ ಪೈರುಗಳು ಹುಲುಸಾಗುತ್ತವೆ. ಧಾನ್ಯಗಳಿಗೆ ಹುಳು ಬಾಧೆ ಕಾಣಿಸಿಕೊಳ್ಳುವುದಿಲ್ಲ ಎನ್ನುವುದು ರೈತರ ನಂಬಿಕೆ.
ಶಾಪ (ಚವತಿ ಚಂದ್ರನ ರೀತಿ)
ಮಧ್ಯರಾತ್ರಿಯನಂತರವೇ ಜೋಕು ಮಾರನನ್ನು ಹೊತ್ತು ಕೇರಿಗೆ ಕರೆತರುತ್ತಾರೆ. ಕೇರಿಯ ಚಾವಡಿಯಲ್ಲೊಬ್ಬ ಬೆನ್ನು ಹಿಂದಕ್ಕೆ ಮಾಡಿಯೇ ಜೋಕುಮಾರನ ಬುಟ್ಟಿಯನ್ನು ತೆಗೆದುಕೊಳ್ಳುತ್ತಾನೆ. ಇಲ್ಲಿಯೂ ಬುಟ್ಟಿ ಕೊಡುವವ, ತೆಗೆದುಕೊಳ್ಳುವವ ಪರಸ್ಪರ ಒಬ್ಬರ ಮುಖವನ್ನು ಇನ್ನೊಬ್ಬರು ನೋಡುವಂತಿಲ್ಲ. ನಂತರ ಬುಟ್ಟಿಯಲ್ಲಿದ್ದ ಕಡುಬುಗಳನ್ನು ತೆಗೆಯುತ್ತಾರೆ. ಅದೇ ಸಮಯದಲ್ಲಿ ಚಾವಡಿ ಕಟ್ಟೆಯ ಮೇಲೆ ಜೋಕುಮಾರನ ಬುಟ್ಟಿಯ ಸಮೀಪ ಬಾರಿ ಮುಳ್ಳಿನ ಕಂಟಿಯನ್ನಿಟ್ಟಿರುತ್ತಾರೆ.
ಸಾವು (ಆಚರಣೆ ಕಡೆಯ ಕ್ಷಣ, ಹಲವು ವೈವಿಧ್ಯಮಯ ಆಚರಣೆ)
ವೇಶ್ಯೆಯರು ಚಾವಡಿಯಲ್ಲಿಟ್ಟಿರುವ ಜೋಕುಮಾರನ ಬುಟ್ಟಿಯ ಸುತ್ತಲೂ ಸುತ್ತುತ್ತಿರಬೇಕಾದರೆ ಪಕ್ಕದಲ್ಲಿರಿಸಲಾಗಿರುವ ಮುಳ್ಳಿನ ಕಂಟಿ ಅವರ ಸೀರೆಗೆ ಸಿಕ್ಕಿ ಜಗ್ಗಿದಾಗ “ಜೋಕುಮಾರ ನಮ್ಮನ್ನು ಹಿಡಿದುಕೊಳ್ಳಲು ಬಂದ, ನಮ್ಮ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ” ಎಂದು ಭೂಮ್ಯಾಕಾಶ ಬಿರಿಯುವಂತೆ ಬಾಯಿ ಮಾಡತೊಡಗುತ್ತಾರೆ. ಅದನ್ನು ಕೇಳಿದವರೆಲ್ಲ ಓಡಿ ಬಂದು ಜೋಕುಮಾರನನ್ನು ಒಣಕೆಯಿಂದ ಹಿಗ್ಗಾಮುಗ್ಗಾ ಥಳಿಸಿ ಕೊಂದು ಹಾಕುತ್ತಾರೆ.
ಜೋಕುಮಾರ ತನ್ನ ಹುಟ್ಟಿನ ನಂತರದ ಏಳನೇ ದಿನ ಹರಿಜನ ಕೇರಿಗೆ ಹೋಗಿ ತನ್ನ ಕೀಟಲೆಯಿಂದ ಮಾತಂಗಿಯರ ಕೈಗೆ ಸಿಕ್ಕು ಕಣ್ಣು ಕಿತ್ತಿಸಿಕೊಳ್ಳುತ್ತಾನೆ. ಮರಳಿ ಕಣ್ಣು ಕಳೆದುಕೊಂಡು ಕೇರಿಗೆ ಬಂದ ಜೋಕುಮಾರನನ್ನು ಹಿರಿಯರೊಬ್ಬರು ಒನಕೆಯಿಂದ ಆತನ ತಲೆ ಕುಟ್ಟಿ ರಾತ್ರಿ ಪಟ್ಟಣದ ಜಾಪಾನ್ ತೋಟದಲ್ಲಿ ಬಾವಿಯಲ್ಲಿ ಎಸೆಯುವುದು ಸಂಪ್ರದಾಯ.
ಕೊನೆಯ ದಿನ ಗುರುತಿಸಿದ ಮನೆಯಲ್ಲಿ ಜೋಕುಮಾರನ ಮೂರ್ತಿಗೆ ಚೂರಿ ಹಾಕುವರು. ನಂತರ ಜೋಕುಮಾರ ಸತ್ತನೆಂದು ಅಗಸರ ಬಂಡೆ ಅಡಿ ಮಣ್ಣಿನಲ್ಲಿ ಹೂತು ಹಾಕಿ ಬರುವರು. ಹೀಗೆ ಹೂತಿಡುವ ಸಂದರ್ಭದಲ್ಲಿ ವಿಧಿ ವಿಧಾನಗಳಿವೆ. ನಂತರ ಸಂಚರಿಸಿದ ಸಂದರ್ಭದಲ್ಲಿ ದೊರೆತ ಧಾನ್ಯಗಳಿಂದ ಅಡುಗೆ ಮಾಡಿ ಸಾಮೂಹಿಕ ಭೋಜನ ಮಾಡುವರು.
ಆತನ ಅಳಲು(ಶ್ರಾದ್ಧಾ)
ಹೀಗೆ ಏಳು ದಿನ ಬದುಕುವ ಜೋಕಪ್ಪ ಏಳನೇ ದಿನ ಸಾಯುತ್ತಾನೆ. ಅಂದೇ ಅಳಲು-ಅಂಬಲಿ ಎಂಬ ವಿಶಿಷ್ಟ ಆಚರಣೆ ಹೊಲಗಳಲ್ಲಿ ನಡೆಯುತ್ತದೆ. ರೊಟ್ಟಿ-ಬುತ್ತಿ ಕಟ್ಟಿಕೊಂಡು ಹೊಲಗಳಿಗೆ ಹೊಗಿ ಭೂತಾಯಿಯ ಪೂಜೆ ಮಾಡಿ ಮನೆಮಂದಿಯೆಲ್ಲಾ ಸೇರಿ ಉಂಡುಬರುವುದು ಸಂಪ್ರದಾಯ. ಅಷ್ಟೇ ಅಲ್ಲ ಈ ಅಳಲಿನಲ್ಲಿ ಹೊಸಬಟ್ಟೆ ಉಡುವಂತಿಲ್ಲ, ಒಡವೆ-ವಾಹನ ಖರೀದಿಸುವಂತಿಲ್ಲ, ಶುಭಕಾರ್ಯ ಮಾಡುವಂತಿಲ್ಲ ಎಂಬುದು ಜನಪದರ ಸ್ವಯಂಘೋಷಿತ ಸಂವಿಧಾನ.
ಜೋಕುಮಾರನ ಮರೆಯುವುದು:
ಜೋಕುಮಾರನ ಮರಣದ ನಂತರ ಅಗಸರು ಬಟ್ಟೆ ಒಗೆಯುವ ಹಳ್ಳದ ದಂಡೆಗೋ, ಕೆರೆಯ ಸಮೀಪವೋ, ನದಿ ದಂಡೆಗೋ ಒಯ್ದು ಬಿಸಾಕುತ್ತಾರೆ. ಜೋಕುಮಾರನು ಸತ್ತ ಸುದ್ದಿ ತಿಳಿದ ನಂತರವೇ ಏಳು ದಿನಗಳ ಕಾಲ ಜೋಕುಮಾರನನ್ನು ಹೊತ್ತು ತಿರುಗಿದ ಮಹಿಳೆಯರು ತಲೆಗೆ ನೀರು ಹಾಕಿಕೊಂಡು ಸ್ನಾನ ಮಾಡುತ್ತಾರೆ. ಆ ಮೇಲೆ ಮೂರು ದಿನಗಳ ಕಾಲ ಊರಿನ ಯಾವ ಮಡಿವಾಳರೂ ಬಟ್ಟೆಗಳನ್ನು ಒಗೆಯುವಂತಿಲ್ಲ. ಜೋಕುಮಾರನನ್ನು ಬಿಸಾಕಿದ ಸ್ಥಳದಲ್ಲಿ ಕಲ್ಲಿಟ್ಟು ಪೂಜಿಸಿ ಎಡೆ ತೋರಿಸಿ “ದಿನ” ಮಾಡಿ ಮುಗಿಸಿ ತಮ್ಮ ಕಾಯಕ ಪ್ರಾರಂಭಿಸುತ್ತಾರೆ.
ಹಾಡು:
ಅಡ್ಡಡ್ಡ ಮಳೆ ಬಂದು, ದೊಡ್ಡ ದೊಡ್ಡ ಕೆರೆ ತುಂಬಿ, ಗೊಡ್ಡಗಳೆಲ್ಲ ಹೈನಾಗಿ ಜೋಕುಮಾರ, ಜೋಕುಮಾರ...
ಜೋಕುಮಾರ.... ಮಡಿವಾಳ ಕೇರಿ ಹೊಕ್ಕಾನ ಜೋಕುಮಾರ ಮುಡಿತುಂಬಾ ಹೂವ ಮುಡಿದಂತ ಚೆಲುವಿನ ತನ್ನ ಮಡಿಯಂದಾ ಜೋಕಮಾರ.
***********
No comments:
Post a Comment