SEARCH HERE

Tuesday, 1 January 2019

guru pournima or vyasa poornima ashada pournima ಗುರು ಪೂರ್ಣಿಮಾ



Guru Poornima 

गुकारस्तु अन्धकारः रुकारस्तन्निवर्तकः ।
अन्धकार निरोधित्वात् |गुरुरित्यभिधीयते ॥

The word Guru is derived
from two words, 'Gu' and 'Ru'. The
Sanskrit root "Gu" means darkness
or ignorance. "Ru" denotes the
remover of that darkness. Therefore
one who removes darkness of our
ignorance is a Guru .


 ಗುರು ಸ್ಮರಣೆಯಿಂದ ಸಕಲ ಆಪತ್ತು ಪರಿಹಾರ !
Guru Pournima also called Vyasa Poornima  - Two events generally we come across in Hindu calendar related to Sri Veda Vyasa.

One is Veda Vyasa Jayanthi celebrated on 13th lunar day (Trayodasi) of waxing period (sukla paksha) of Vaisakha Masam. It is believed to be the day Sri Veda Vyasa was born.

The other is Guru Pournima also called Vyasa Poornima falling on the 15th day (full Moon day) of Aashada Masa.

An incarnation of Lord Vishnu; He is also called as Lord Veda Vyasa or Vyasa Bhagavantha.

Regarded as the Aadi Guru, greatest of all Gurus, a Guru of Gurus He is adored even today by one and all and whose powers and knowledge are unsurpassed.

Great sages like Lord Veda Vyasa are responsible for the unassailable and grand Hindu Philosophy, civilization and culture ie. Bhaarateeya Samskriti.

Hindu heritage and culture would be indebted to this illustrious seer Sage Sri VedaVyasaru forever.

Perhaps the most befitting way to pay our respects and obeisance to this great legendary divine Sage would be, by living according to his ideals and propagating his noble and divine works.

Vyaasam Vasishhta Naptaaram Shakteh Pautramakalmasham
Paraasharaatmajam Vande Shukataatam Taponidhim;

Vyasaaya Vishnu Roopaaya Vyaasa Roopaaya Vishnave 
Namo Vai Brahma Nidhaye Vaasishtaaya Namo Namah;

KrishnaDvaipayanam Vyasam sarvalokahite ratam
VedaabjaBhaskaram Vande Samadhinilayam Munim

MEANING:

Salutations to that Vyasa who is free from all defects; 
who is a treasure of austerities, 
who is the great-grandson of sage Vasishta, 
grand-son of Shakti, 
son of Parasara and 
father of Sukha.

My repeated salutations are to Vyasa, 
who is a form of Lord Vishnu and 
to Vishnu who is a form of Vyasa, 
who is a descendent of sage Vasishta, 
who is a treasure of Brahman.

Let us worship sage (Muni) Vyasa 
who is Krishna Dvaipayana, 
who is devoted to the welfare of the world, 
who is like a Sun to the Vedas.

SRI VEDAVYASA - The Divine Literary Incarnation of Lord Vishnu

Lord Sri Krishna says in Bhagawadgita - Vibhoothi Yoga that, "Of all sages, I am Vyasa” ("Muneenamapyaham Vyasah")

He was also called as Badarayana meaning the one who is an inhabitant of Badarika forest which is full of Jujube trees. His hermitage is believed to be in Badari Kshethra.

Originally Vyasa was called as Krishna Dvaipaayana. Since Vyasa was dark (Krishna) in colour and born on an island (Dweepa) in Yamuna river he was called Krishna Dvaipaayana;

He was called VedaVyasa since he had organized Vedas into four divisions.

Since He was descent to Sage Vasishta he was also known as Vasishta Krishna;

Put together he is known as VedaVyasa – Krishna Dwaipayana – Badarayana -VasistaKrishna

Vyasa does not indicate/signify the name of an individual. It is a role/status/title like that of Indra or Sapta Rishi that keeps befalling on divine sacred persons based on their merits.

As per Vishnu Purana, Vyasa will be present in every 3rd age (Yuga) of the quartet ie. Dwapara Yuga to take up the divine literary works, reorganize and edit the scripts (Vedas and Puranas) and to inculcate the spiritual knowledge.

Thus 28 Vyasas have passed through in this Manvanthara and the divine scripts have been reorganized 28 times. In the first Dwapara Yuga it was Chaturmukha Brahma himself and in the second age it was Prajapathi Manu who acted as Vyasa; so on......

We are currently in the 28th Maha Yuga of this Manvanthara (Vaivasvatha Manvanthara) in which Dwapara Yuga has already passed through. In this 28th Dwapara Yuga, Lord Vishnu himself took birth as Vyasa in order to fulfill the promise given to the sage Parasara.

Vyasa whom we all know and heard of in Mahabharatha was the 28th Vyasa of this Manvanthara who was also a contemporary of Lord Sri Krishna born to Sage Parashara and Sathyavathi;

ವ್ಯಾಸಾಯ ಭವನಾಶಾಯ ಶ್ರೀಶಾಯ ಗುಣರಾಶಯೇ |
ಹೃದ್ಯಾಯ ಶುದ್ಧವಿದ್ಯಾಯ ಮಧ್ವಾಯ ಚ ನಮೋ ನಮಃ |

Literally Vyasa means one who explains, elaborates, describes, compiles, arranges. Generally we find the word Vyasa Kartha in the literary world meaning the one who has authored/scripted an article on a topic. In terms of Vedic/Divine literature Vyasa has become a legend.

Sri Madhvacharya the Poornaprajna the one who is equipped with thorough and comprehensive knowledge is at the service of Lord Vedavyaasa (incarnation of Lord Vishnu) in establishing the Hari Sarvottamattva.

Hari Sarvottama - Vaayu Jeevottama
Sri GururRaajo Vijayate



****

Guru Paurnima - Vyas pooja - 

The Indian tradition gives the highest status to guru, equal to that of the Trinity - Brahma, Vishnu and Mahesh; he is called Para-Brahma. Although it is a misnomer, an exaggeration, the status given to a guru is not wholly unfounded, for he dispels the darkness of life, and leads his disciples to the divine path of spirituality.

A guru is an evolved soul, who, having acquired a very deep spiritual knowledge, and living spiritual life, dispels the impenetrable darkness of ignorance that the worldly life is filled with, and shows his disciples the spiritual path that leads to God. Not only does he show them the spiritual path, but he also continues to lead them on it, as a torchbearer, even after he departs from the world. 

Attainment of salvation is the very purpose of life, and it is the guru, the only one, who, by destroying the darkness of ignorance, helps his followers release from the cycle of birth and death and leads them to Lord Vishnu's Abode of No Return; therefore, he is called Para-Brahma. 

The name - Para-Brahma is a misnomer in the case of other gurus, but it is true in the case of the Sage Vedavyasa; Shri Vedavyasa is Lord Narayana Himself, the Supreme Being, who incarnated as Vyasa, to help mankind attain His Lotus Feet. He is the "Aadi Guru". 

Today, on the occasion of Guru Paurnima, let us pray to Bhagawan Vedavyasa, the Adi Guru, through our guru, who has been leading us on the path from darkness to the realm of divine light.
****

Sri Gurubhyo Namah

Aashada maasa Poornime, its also known as Guru Poornima or Vyasa Poornima. 

Guru is the one who gives us lessons about the different aspects of life (personal, spiritual, religious and educational). When it comes to personal life, Mother starts being our guru even before our birth when we are in the womb. She is our first guru. We get acquainted from here on with many gurus, close family, friends, teachers from Kindergarten to the Doctoral, post doctoral days. There is no day when you would not learn from someone else, just that we dont notice and acknowledge that we have learnt something in that day. 

We cease to exist the day we cease to learn. We start accumulating aham the day we stop acknowledging that we have learnt from someone. 

Sriman Narayana through Uddava has given all of us the sublime 3rd Geethe, called Uddava geethe where in he gives a beautiful picture of how we have been surrounded with gurus everywhere from the mother earth, nature in every form. Would advice to go through the 11th chapter of Bhaghawatha for more details on this with your guru. 

The path of Jnana (Knowledge), Bhakti (Devotion) and Vairagya (Detachment) is only possible with the guidance of Guru. Take some time today and visit your guru(s), get their blessings for leading a successful year ahead. 

Sriman Narayana in form of Sri Veda Vyasa devaru gave us works to learn about the way of living and leading others. This yuga of Kaliyuga, whatever you achieve is only fruitful when we have learnt from a guru and also acknowledge the fact of having learnt from others without aham. 

Wishing you all a very happy Guru Poornima day.  


Lets have the darshana of the paramaguru and gurus and pray to them that we remain grounded. learn and teach others everyday. 

*******

guruparaMpare namana

brahmaaMtaa guravaH sAkShAt iShTaM daivam shriyaH patiH |
AchAryAH shrImad AchAryAH saMtu mE janma janmani ||

poorNapraj~jakRutaM bhAShyamadau tadbhAvapUrvakam |
yO vyAkarOnnamastasmai padmanAbhAKyayOginE ||

sasItA mUlarAmArcha kOshEga japatEH sthitA |
yEnAnItA namastasmai shrImanRuhari bhikShavE ||

sAdhitAKila sattattwaM bAdhitAKila durmatam |
bOdhitAKila sanmArgaM mAdhavAKyayatiM bhikShavE ||

yO vidyAraNya vipinaMtattwamasyasinA&cCinat
shrImad akShObhyatIrthAya namastasmaimahAtmanE ||

mithyAsiddhAMta durdhwAMta vidhwaMsana vicakShaNaH |
jayatIrthAkhya taraNirbhAsatAM nO hRudaMbarE ||

chitraiH padaishcha gaMbhIraiH vAkyaiH mAnair akhaMditaiH|
gurubhaavam vyaMjayantI bhaati shrI jayatIrtha vaak ||

kaMsadhwaMsipadhAMbhOja saMsaktOhaMsapuMgavaH |
brahmaNya gururAjAkhyO vartatAM mama mAnasE ||

j~jAnabhaktivairAgyabhaktyAdikalyANaguNAshAlinaH |
lakShmInArAyaNamunIn vaMdE vidyAgurUnmama ||

arthikalpita kalpoyam pratyarthi gaja kesarI |
vyaasatiirtha gururbhuuyAd asmad iShTaartha siddhaye |

yEna vEdAMta bhAShyANi vivRutAni mahAtmanA
taM vaMdE vyAsatIrthAKyaM vEdAMtArthaprasiddhayE|

tapOvidyA viraktyAdi sadguNau GAkarAnaham |
vaadiraaja gurUn vaMdE hayagrIva dayAshrayAn ||

bhaktAnAM mAnasAm bhOja bhAnave kAmadhEnavE |
namatAM kalpatarave vijayIMdra guravE namaH ||

kAle phalati surudrumaH chiMtAmaNirapi yAchane daataa |
varArthi sakalam abhIShTaM darshana mAtrAt shrIpAdarAjo muniH||

tamvaMde nRusiMha tIrtha nilayam shrI vyAsarAt pujitam |
dhyAyaMtam manasA nRusiMha charaNam shrI pAdarAjam gurum ||

bhAvabOdha kRutaM sEvE raghUttama mahaagurum |
yachChiShya shiShya shiShyaadyAH TippaNyaachaarya saMjitAH ||

pujyAya rAghavEMdrAya satyadharma ratAya cha |
bhajatAm kalpavRukShAya namatAm kAmadhEnavE ||

durvAdi dhwAMtaravayE vaiShNavEMdIvarEMdavE
shrIraaghavEMdraguravE namOtyaMtadayALavE

ApAda mouLi paryaMtaM guruNAM AkRutiM smarEt |
tEna viGnAH praNashyaMti siddhyaMti cha manOrathAH ||

pRuthvI maMDala madhyasthAH poorNabOdha matAnugAH |
vaiShNava viShNuhRudayastAnnamasyE gurUnmama ||
*******


ಗುರುಪರಂಪರೆ ನಮನ

ಬ್ರಹ್ಮಾಂತಾ ಗುರವಃ ಸಾಕ್ಷಾತ್ ಇಷ್ಟಂ ದೈವಮ್ ಶ್ರಿಯಃ ಪತಿಃ |
ಆಚಾರ್ಯಾಃ ಶ್ರೀಮದ್ ಆಚಾರ್ಯಾಃ ಸಂತು ಮೇ ಜನ್ಮ ಜನ್ಮನಿ ||

ಪೂರ್ಣಪ್ರಜ್ಞಕೃತಂ ಭಾಷ್ಯಮದೌ ತದ್ಭಾವಪೂರ್ವಕಮ್ |
ಯೋ ವ್ಯಾಕರೋನ್ನಮಸ್ತಸ್ಮೈ ಪದ್ಮನಾಭಾಖ್ಯಯೋಗಿನೇ ||

ಸಸೀತಾ ಮೂಲರಾಮಾರ್ಚ ಕೋಶೇಗ ಜಪತೇಃ ಸ್ಥಿತಾ |
ಯೇನಾನೀತಾ ನಮಸ್ತಸ್ಮೈ ಶ್ರೀಮನೃಹರಿ ಭಿಕ್ಷವೇ ||

ಸಾಧಿತಾಖಿಲ ಸತ್ತತ್ತ್ವಂ ಬಾಧಿತಾಖಿಲ ದುರ್ಮತಮ್ |
ಬೋಧಿತಾಖಿಲ ಸನ್ಮಾರ್ಗಂ ಮಾಧವಾಖ್ಯಯತಿಂ ಭಿಕ್ಷವೇ ||

ಯೋ ವಿದ್ಯಾರಣ್ಯ ವಿಪಿನಂತತ್ತ್ವಮಸ್ಯಸಿನಾಽಚ್ಛಿನತ್
ಶ್ರೀಮದ್ ಅಕ್ಷೋಭ್ಯತೀರ್ಥಾಯ ನಮಸ್ತಸ್ಮೈಮಹಾತ್ಮನೇ ||

ಮಿಥ್ಯಾಸಿದ್ಧಾಂತ ದುರ್ಧ್ವಾಂತ ವಿಧ್ವಂಸನ ವಿಚಕ್ಷಣಃ |
ಜಯತೀರ್ಥಾಖ್ಯ ತರಣಿರ್ಭಾಸತಾಂ ನೋ ಹೃದಂಬರೇ ||

ಚಿತ್ರೈಃ ಪದೈಶ್ಚ ಗಂಭೀರೈಃ ವಾಕ್ಯೈಃ ಮಾನೈರ್ ಅಖಂದಿತೈಃ|
ಗುರುಭಾವಮ್ ವ್ಯಂಜಯನ್ತೀ ಭಾತಿ ಶ್ರೀ ಜಯತೀರ್ಥ ವಾಕ್ ||

ಕಂಸಧ್ವಂಸಿಪಧಾಂಭೋಜ ಸಂಸಕ್ತೋಹಂಸಪುಂಗವಃ |
ಬ್ರಹ್ಮಣ್ಯ ಗುರುರಾಜಾಖ್ಯೋ ವರ್ತತಾಂ ಮಮ ಮಾನಸೇ ||

ಜ್ಞಾನಭಕ್ತಿವೈರಾಗ್ಯಭಕ್ತ್ಯಾದಿಕಲ್ಯಾಣಗುಣಾಶಾಲಿನಃ |
ಲಕ್ಷ್ಮೀನಾರಾಯಣಮುನೀನ್ ವಂದೇ ವಿದ್ಯಾಗುರೂನ್ಮಮ ||

ಕಾಲೆ ಫಲತಿ ಸುರುದ್ರುಮಃ ಚಿಂತಾಮಣಿರಪಿ ಯಾಚನೆ ದಾತಾ |
ವರಾರ್ಥಿ ಸಕಲಮ್ ಅಭೀಷ್ಟಂ ದರ್ಶನ ಮಾತ್ರಾತ್ ಶ್ರೀಪಾದರಾಜೊ ಮುನಿಃ||

ಅರ್ಥಿಕಲ್ಪಿತ ಕಲ್ಪೊಯಮ್ ಪ್ರತ್ಯರ್ಥಿ ಗಜ ಕೆಸರೀ |
ವ್ಯಾಸತಿಇರ್ಥ ಗುರುರ್ಭುಉಯಾದ್ ಅಸ್ಮದ್ ಇಷ್ಟಾರ್ಥ ಸಿದ್ಧಯೆ |

ಯೇನ ವೇದಾಂತ ಭಾಷ್ಯಾಣಿ ವಿವೃತಾನಿ ಮಹಾತ್ಮನಾ
ತಂ ವಂದೇ ವ್ಯಾಸತೀರ್ಥಾಖ್ಯಂ ವೇದಾಂತಾರ್ಥಪ್ರಸಿದ್ಧಯೇ|

ತಪೋವಿದ್ಯಾ ವಿರಕ್ತ್ಯಾದಿ ಸದ್ಗುಣೌ ಘಾಕರಾನಹಮ್ |
ವಾದಿರಾಜ ಗುರೂನ್ ವಂದೇ ಹಯಗ್ರೀವ ದಯಾಶ್ರಯಾನ್ ||

ಭಕ್ತಾನಾಂ ಮಾನಸಾಮ್ ಭೋಜ ಭಾನವೆ ಕಾಮಧೇನವೇ |
ನಮತಾಂ ಕಲ್ಪತರವೆ ವಿಜಯೀಂದ್ರ ಗುರವೇ ನಮಃ ||

ತಮ್ವಂದೆ ನೃಸಿಂಹ ತೀರ್ಥ ನಿಲಯಮ್ ಶ್ರೀ ವ್ಯಾಸರಾತ್ ಪುಜಿತಮ್ |
ಧ್ಯಾಯಂತಮ್ ಮನಸಾ ನೃಸಿಂಹ ಚರಣಮ್ ಶ್ರೀ ಪಾದರಾಜಮ್ ಗುರುಮ್ ||

ಭಾವಬೋಧ ಕೃತಂ ಸೇವೇ ರಘೂತ್ತಮ ಮಹಾಗುರುಮ್ |
ಯಚ್ಛಿಷ್ಯ ಶಿಷ್ಯ ಶಿಷ್ಯಾದ್ಯಾಃ ಟಿಪ್ಪಣ್ಯಾಚಾರ್ಯ ಸಂಜಿತಾಃ ||

ಪುಜ್ಯಾಯ ರಾಘವೇಂದ್ರಾಯ ಸತ್ಯಧರ್ಮ ರತಾಯ ಚ |
ಭಜತಾಮ್ ಕಲ್ಪವೃಕ್ಷಾಯ ನಮತಾಮ್ ಕಾಮಧೇನವೇ ||

ದುರ್ವಾದಿ ಧ್ವಾಂತರವಯೇ ವೈಷ್ಣವೇಂದೀವರೇಂದವೇ
ಶ್ರೀರಾಘವೇಂದ್ರಗುರವೇ ನಮೋತ್ಯಂತದಯಾಳವೇ

ಆಪಾದ ಮೌಳಿ ಪರ್ಯಂತಂ ಗುರುಣಾಂ ಆಕೃತಿಂ ಸ್ಮರೇತ್ |
ತೇನ ವಿಘ್ನಾಃ ಪ್ರಣಶ್ಯಂತಿ ಸಿದ್ಧ್ಯಂತಿ ಚ ಮನೋರಥಾಃ ||

ಪೃಥ್ವೀ ಮಂಡಲ ಮಧ್ಯಸ್ಥಾಃ ಪೂರ್ಣಬೋಧ ಮತಾನುಗಾಃ |
ವೈಷ್ಣವ ವಿಷ್ಣುಹೃದಯಸ್ತಾನ್ನಮಸ್ಯೇ ಗುರೂನ್ಮಮ ||
******

ಗುರು ಪೂರ್ಣಿಮೆ

ಆಷಾಢ ಮಾಸದ ಹುಣ್ಣಿಮೆಯ ದಿನವನ್ನು ಗುರು ಪೂರ್ಣಿಮೆ ಎಂದು ಆಚರಿಸುತ್ತಾರೆ. ಇದೇ ಹಿಂದೂಗಳ ಪಾಲಿಗೆ ನಿಜವಾದ ಶಿಕ್ಷಕರ ದಿನ ಅರ್ಥಾತ್ Teacher’s Day. ಇದನ್ನು ವ್ಯಾಸ ಪೂರ್ಣಿಮೆ ಎಂದೂ ಕರೆಯುತ್ತಾರೆ. ಏಕೆಂದರೆ, ಇದು ವಿಷ್ಣುವಿನ ಇನ್ನೊಂದು ಅವತಾರ ಎಂದೇ ಪರಿಗಣಿತರಾದ ಭಗವಾನ್ ವೇದವ್ಯಾಸ ಜನ್ಮದಿನ.

ವೇದವ್ಯಾಸರ ಮೂಲ ಹೆಸರು ಕೃಷ್ಣ ದ್ವೈಪಾಯನ. ತಂದೆ ಪರಾಶರ ಮುನಿಗಳು ಹಾಗೂ ತಾಯಿ ಸತ್ಯವತೀ ದೇವಿ. ಒಮ್ಮೆ ಮಹರ್ಷಿ ಪರಾಶರರು ನಾವೆಯೊಂದರಲ್ಲಿ ಗಂಗಾ ನದಿಯನ್ನು ದಾಟುತ್ತಿರುವಾಗ ಆ ನಾವೆಯನ್ನು  ನಡೆಸುವ ಬೆಸ್ತರ ಕನ್ಯೆಯ ಮೈಯಿಂದ ಮೀನು ಕೊಳೆತಾಗ ಬರುವಂತಹ ಕೆಟ್ಟ ವಾಸನೆ ಬರುತ್ತಿತ್ತು. ಆಕೆಯ ಹೆಸರು “ಸತ್ಯವತಿ”. ಆಕೆಯ ದೇಹದಿಂದ ಮೀನಿನ ವಾಸನೆ ಬರುತ್ತಿದ್ದುದರಿಂದ ಆಕೆಯನ್ನು “ಮತ್ಸ್ಯಗಂಧೀ” ಎಂದೂ ಮತ್ತು ಆ ವಾಸನೆಯು ಯೋಜನ ದೂರದವರೆಗೂ ಪಸರಿಸುತ್ತಿದ್ದುದರಿಂದ ಆಕೆಯನ್ನು “ಯೋಜನಗಂಧೀ” ಎಂದೂ ಕರೆಯುತ್ತಿದ್ದರು.

ಆಕೆಯು ಮೂಲತಃ ಬೆಸ್ತರವಳಲ್ಲ. ಆಕೆಯ ಜನ್ಮ ವೃತ್ತಾಂತವು ಬಹಳ ವಿಚಿತ್ರವಾಗಿದೆ. ಮೃಗಬೇಟೆಗೆಂದು ಕಾಡಿಗೆ ಹೋದ ಚೇದಿ ದೇಶದ ಅರಸ ಉಪರಿಚರ ವಸು ಎಂಬವನು ಅಲ್ಲಿ ಹರಿಣಗಳ ಮೈಥುನವನ್ನು ನೋಡುತ್ತಾನೆ. ಇದರಿಂದ ಆತ ಕಾಮೋದ್ರಿಕ್ತನಾದಾಗ ಅವನಿಗೆ ವೀರ್ಯ ಸ್ಖಲನವಾಗುತ್ತದೆ. ವೀರ್ಯನಾಶವು ಭ್ರೂಣಹತ್ಯೆಗೆ ಸಮ ಎಂಬುದನ್ನು ಮನಗಂಡು ವಸುವು ಅದನ್ನು ಒಂದು ಗಿಡುಗ ಪಕ್ಷಿಯ ಮೂಲಕ ಅರಮನೆಯಲ್ಲಿರುವ ತನ್ನ ಪತ್ನಿ ಗಿರಿಕೆಗೆ ಕಳುಹಿಸುತ್ತಾನೆ. ಆ ಗಿಡುಗವು ಆಕಾಶ ಮಾರ್ಗದಲ್ಲಿ ಹಾರುತ್ತಾ ಹೋಗುತ್ತಿರುವಾಗ ಇನ್ನೊಂದು ಗಿಡುಗವು ಅದನ್ನು ನೋಡಿ, ಅದರ ಬಾಯಿಯಲ್ಲಿರುವುದು ಮಾಂಸದ ಚೂರು ಎಂಬುದಾಗಿ ಭ್ರಮಿಸಿ, ಆಹಾರಕ್ಕಾಗಿ ಜಗಳಕ್ಕೆ ತೊಡಗುತ್ತದೆ. ಹಾಗೆ ಜಗಳ ಆಡುವಾಗ ಗಿಡುಗದ ಬಾಯಿಯಲ್ಲಿರುವ ವೀರ್ಯವು ಎರಡು ತುಂಡುಗಳಾಗಿ ಕೆಳಗಡೆ ಇರುವ ಗಂಗಾ ನದಿಗೆ ಬೀಳುತ್ತದೆ.

ಬ್ರಹ್ಮನ ಶಾಪದ ಕಾರಣದಿಂದಾಗಿ ಆ ನದಿಯಲ್ಲಿ ಮತ್ಸ್ಯಕನ್ಯೆಯಾಗಿ ಜೀವಿಸುತ್ತಿದ್ದ “ಅದ್ರಿಕೆ” ಎಂಬ ಅಪ್ಸರೆಯು ಆ ವೀರ್ಯದ ತುಂಡುಗಳೆರಡನ್ನು ನುಂಗುತ್ತಾಳೆ. ಪರಿಣಾಮವಾಗಿ ಆ ಮೀನು ಗರ್ಭವತಿಯಾಗುತ್ತದೆ. ಮುಂದೆ ಒಂದು ದಿನ ಬೆಸ್ತರ ಗುರಿಕಾರನಾದ ದಾಶರಾಜ ಕಂಧರನಿಗೆ ಆ ಮೀನು ಸಿಗುತ್ತದೆ. ಅವನು ಅದರ ಹೊಟ್ಟೆಯನ್ನು ಸೀಳಿದಾಗ ಅದರಲ್ಲಿ ಅವಳಿ ಶಿಶುಗಳು ಒಂದು ಗಂಡು ಮತ್ತು ಒಂದು ಹೆಣ್ಣು ಶಿಶುಗಳು ಕಾಣಿಸುತ್ತವೆ. ಕಂಧರನಿಂದ ಸೀಳಲ್ಪಟ್ಟು ಮತ್ಸ್ಯಕನ್ಯೆಯು ಕೊಲ್ಲಲ್ಪಟ್ಟಾಗ ಶಾಪವಿಮೋಚನೆಗೊಂಡ ಅದ್ರಿಕೆಯು ಪ್ರತ್ಯಕ್ಷಳಾಗಿ ಆ ಅವಳಿ ಮಕ್ಕಳನ್ನು ವಸುರಾಜನಿಗೆ ಒಪ್ಪಿಸುವಂತೆ ತಿಳಿಸಿ ಆಕೆ ಅದೃಶ್ಯಳಾಗುತ್ತಾಳೆ.
ಅವಳ ಆಣತಿಯಂತೆ ಕಂಧರನು ಆ ಎರಡು ಶಿಶುಗಳನ್ನು ವಸುರಾಜನಿಗೆ ಒಪ್ಪಿಸಿದಾಗ ಆತ ಗಂಡು ಶಿಶುವನ್ನು ಮಾತ್ರ ಸ್ವೀಕರಿಸಿ, ಆ ಮಗುವಿಗೆ “ಮತ್ಸ್ಯ” ಎಂಬ ಹೆಸರನ್ನಿರಿಸಿ ತಾನೇ ಸಾಕಿಕೊಳ್ಳುತ್ತಾನೆ. ಮುಂದೆ ಆತನೇ “ಮತ್ಸ್ಯರಾಜ”ನಾಗುತ್ತಾನೆ. ಹೆಣ್ಣು ಶಿಶುವಿಗೆ “ಮತ್ಸ್ಯಗಂಧೀ” ಎಂಬ ಹೆಸರನ್ನಿರಿಸಿ ಕಂದರನಿಗೆ ಮರಳಿಸಿ ಸಾಕಿಕೊಳ್ಳುವಂತೆ ಆದೇಶಿಸುತ್ತಾನೆ. ಹೀಗೆ ಬೆಸ್ತನಾದ ಕಂಧರನ ಸಾಕು ಮಗಳಾಗಿ ಬೆಳೆದವಳೇ ಈ ಮತ್ಸ್ಯಗಂಧಿ. ಆಕೆಯು ವಸುದೇವರಿಂದ ಶಾಪಗ್ರಸ್ತಳಾಗಿದ್ದುದರಿಂದ ಆಕೆಯ ದೇಹದಿಂದ ಕೆಟ್ಟ ವಾಸನೆ ಬರುತ್ತಿತ್ತು.
ಆಕೆಯು ಪರಾಶರ ಮುನಿಗಳ ಪಾದಕ್ಕೆರಗುತ್ತಾಳೆ. ಅಲ್ಲದೇ “ವಿಷ್ಣುವಿನ ಅಂಶವಿರುವ ತಾವು ನನ್ನ ಶಾಪ ವಿಮೋಚನೆ ಮಾಡಬೇಕು” ಎಂದು ಆಕೆ ಪರಾಶರರನ್ನು ಪ್ರಾರ್ಥಿಸುತ್ತಾಳೆ. ಆಗ ಮಹರ್ಷಿಗಳು ಆಕೆಯನ್ನು ಸ್ಪರ್ಶಿಸಿ ಅವಳ ಶಾಪ ವಿಮೋಚನೆ ಮಾಡುತ್ತಾರೆ. ಆಗ ಅವಳು ಸುರೂಪಿಯಾಗಿ ಸುಗಂಧವನ್ನು ಹೊರ ಹೊಮ್ಮಿಸುವ “ಯೋಜನಗಂಧಿ”ಯಾಗುತ್ತಾಳೆ. 

ತ್ರಿಕಾಲ ಜ್ಞಾನಿಗಳಾದ ಪರಾಶರರು ಆಕೆಯ ಭವಿಷ್ಯವನ್ನು ಅರಿತು “ಯೋಜನಗಂಧೀ , ಒಬ್ಬ ಮಹಾಮುನಿಯ ಮಹಾಮಾತೆಯಾಗುವ ಯೋಗ ನಿನಗಿದೆ. ಹೀಗಾಗಿ ನಾನು ಲೋಕಕಲ್ಯಾಣಕ್ಕಾಗಿ ನಿನ್ನ ಸಮಾಗಮವನ್ನು ಬಯಸುತ್ತಿದ್ದೇನೆ. ಹಾಗಂತ ನೀನು ಶಿಶುವನ್ನು ನವಮಾಸ ಪರ್ಯಂತ ಗರ್ಭದಲ್ಲಿ ಧರಿಸುವ ಅಗತ್ಯವಿಲ್ಲ. ನಮ್ಮಿಬ್ಬರ ಸಮಾಗಮವಾದ ಕೂಡಲೇ ಒಬ್ಬ ಮಹಾಪುರುಷನ ಜನನವಾಗುತ್ತದೆ. ಅಲ್ಲದೇ ಶಿಶುವನ್ನು ಪಡೆದ ಮೇಲೆ ನಿನ್ನ ಕನ್ಯೆತನವು ಕೂಡಾ ನಾಶವಾಗುವುದಿಲ್ಲ. ನಮ್ಮ ಮಿಲನದಿಂದ ಜನಿಸುವ ಆ ತೇಜೋವಂತ ಮಗನಿಂದ ಮುಂದೆ ಲೋಕ ಕಲ್ಯಾಣವಾಗುವುದು” ಎನ್ನುತ್ತಾರೆ.
ಸತ್ಯವತಿಯು ಅದಕ್ಕೆ ಒಪ್ಪುತ್ತಾಳೆ. ನಂತರ ಪರಾಶರರು ಅಲ್ಲಿಯೇ ಸಮೀಪದಲ್ಲಿದ್ದ  ದ್ವೀಪದಲ್ಲಿ ಅಗ್ನಿಯನ್ನು ಸ್ಥಾಪಿಸಿ, ಗಾಂಧರ್ವ ರೀತಿಯಲ್ಲಿ ಆಕೆಯನ್ನು ವಿವಾಹವಾಗುತ್ತಾರೆ. ಇವರಿಬ್ಬರಿಂದ ಜನಿಸಿದ ಮಗುವೇ “ಕೃಷ್ಣ ದ್ವೈಪಾಯನ”. ಅಂದರೆ ವ್ಯಾಸರು. ‘ಕೃಷ್ಣ’ ಎಂದರೆ ‘ಕಪ್ಪು’ ಎಂತಲೂ , ‘ದ್ವೈಪಾಯನ’ ಎಂದರೆ ಸುತ್ತಲೂ ನೀರು ಇರುವ ಪ್ರದೇಶ ಅಂದರೆ ದ್ವೀಪ ಎಂತಲೂ ಅರ್ಥ. ಹೀಗೆ ವ್ಯಾಸರ ಬಣ್ಣ ಕಪ್ಪಾಗಿದ್ದು ದ್ವೀಪದಲ್ಲಿ ಜನಿಸಿದವರಾದ್ದರಿಂದ ಕೃಷ್ಣದ್ವೈಪಾಯನ ಎಂಬ ಹೆಸರು ಬಂದಿತು. ಈ ದ್ವೀಪವು ಈಗಿನ ಕಾಲದ ಉತ್ತರ ಪ್ರದೇಶದ ಜಲುವಾ ಜಿಲ್ಲೆಯ 'ಕಲ್ಪಿ' ಎನ್ನುವ ಸ್ಥಳದ ಬಳಿಯಿದೆ.

ಹುಟ್ಟಿದ ಕ್ಷಣವೇ ಅಳುವುದಕ್ಕೆ ಬದಲಾಗಿ ಕೃಷ್ಣದ್ವೈಪಾಯನರು ದೊಡ್ಡವರಾಗಿ ಬೆಳೆದು ತಾಯಿ ಸತ್ಯವತಿಯ ಪಾದಕ್ಕೆ ಎರಗಿ “ಮಾತೃದೇವೋಭವ” ಎನ್ನುತ್ತಾ ವಂದಿಸುತ್ತಾರೆ. ಅಲ್ಲದೇ “ತಾಯೇ ನಿನಗೆ ಕಷ್ಟಕಾಲ ಒದಗಿದಾಗ ನನ್ನನ್ನು ಸ್ಮರಿಸಿಕೋ, ತಕ್ಷಣ ನಾನು ಪ್ರತ್ಯಕ್ಷನಾಗಿ ನಿನ್ನ ಇಷ್ಟಾರ್ಥಗಳನ್ನು ನೆರವೇರಿಸುತ್ತೇನೆ” ಎಂದು ಹೇಳಿ ಅಲ್ಲಿಂದ ಬದರಿಕಾಶ್ರಮಕ್ಕೆ ಹೊರಟು ಹೋಗುತ್ತಾರೆ. ಅಲ್ಲಿ ತಾಪಸ ಜೀವನ ನಡೆಸಿ ಅತಿ ಪ್ರಮುಖ ಋಷಿಗಳಲ್ಲಿ ಒಬ್ಬರಾಗಿ ಪರಿಗಣಿತರಾಗುತ್ತಾರೆ.
ಪುರಾಣಗಳಲ್ಲಿ ಇವರನ್ನು ವಿಷ್ಣುವಿನ ಒಂದು ಅವತಾರವೆಂದೇ ಪರಿಗಣಿಸಲಾಗಿದೆ. 

ಹಿಂದೂ ಪುರಾಣದ ಪ್ರಕಾರ ಇರುವ ಏಳು ಚಿರಂಜೀವಿಗಳಲ್ಲಿ ಇವರೂ ಒಬ್ಬರು. ಕೃಷ್ಣದ್ವೈಪಾಯನರು ತಮ್ಮ ಕಾಲದಲ್ಲಿ ಅಸ್ತಿತ್ವದಲ್ಲಿದ್ದ ಎಲ್ಲ ವೈದಿಕ ಋಕ್ಕುಗಳನ್ನು ಸಂಗ್ರಹಿಸಿ, ಯಜ್ಞ ಯಾಗಾದಿ ಧಾರ್ಮಿಕ ವಿಧಿಗಳಲ್ಲಿನ ಅವುಗಳ ಬಳಕೆಯ ಆಧಾರದ ಮೇಲೆ ಅವುಗಳನ್ನು ಋಗ್ವೇದ, ಯಜುರ್ವೇದ, ಸಾಮವೇದ ಮತ್ತು ಅಥರ್ವವೇದ ಎಂಬ ನಾಲ್ಕು ಭಾಗಗಳನ್ನಾಗಿ ವಿಭಾಗಿಸಿ, ಅವುಗಳನ್ನು ಕ್ರಮವಾಗಿ ತಮ್ಮ ನಾಲ್ಕು ಮುಖ್ಯ ಶಿಷ್ಯರಾದ ಪೈಲ, ವೈಶಂಪಾಯನ, ಜೈಮಿನಿ ಮತ್ತು ಸುಮಂತು ಮುನಿಗಳಿಗೆ ಬೋಧಿಸಿದರು.
ಆ ನಾಲ್ಕು ಮುನಿಗಳು ತಮ್ಮ ಶಿಷ್ಯ ಪರಂಪರೆಗೆ ಆ ವೇದವನ್ನು ಬೋಧಿಸಿದರು. ಹೀಗೇ ವೇದ ಪಾಠವು ಇಂದಿಗೂ ಗುರುಗಳಿಂದ ಶಿಷ್ಯರಿಗೆ ನಡೆಯುತ್ತಿದೆ. ಹೀಗೆ ವೇದವನ್ನು ವಿಭಜಿಸಿದುದರಿಂದ ಕೃಷ್ಣದ್ವೈಪಾಯನರಿಗೆ "ವೇದವ್ಯಾಸ" ಎಂಬ ಗೌರವ ನಾಮ ದೊರೆಯಿತು. 

ಭಗವಾನ್ ವೇದವ್ಯಾಸರು ನಾಲ್ಕು ವೇದಗಳನ್ನು ರಚಿಸಿದ್ದಲ್ಲದೇ, 18 ಪುರಾಣಗಳನ್ನು, ಮಹಾಭಾರತ ಮತ್ತು ಶ್ರೀಮದ್ಭಾಗವತವನ್ನು ರಚಿಸಿದ ಮಹಾತ್ಮರಾಗಿದ್ದಾರೆ. ವೇದಾಧ್ಯಯನಕ್ಕೆ ನಾಂದಿ ಹಾಡಿದ ವೇದವ್ಯಾಸ ಮಹರ್ಷಿಗಳು ಗುರುಗಳಿಗೆ ಗುರುಗಳಾಗಿ ಪರಮ ಗುರುಗಳಾಗಿದ್ದಾರೆ. ಹೀಗಾಗಿ ಅವರ ಜನ್ಮ ದಿನವಾದ ಈ ಹುಣ್ಣಿಮೆಯ ದಿನವನ್ನು ಗುರುಪೂರ್ಣಿಮೆ ಎಂದು ಆಚರಿಸುವುದು ಅರ್ಥಪೂರ್ಣವಾಗಿದೆ.

ಹಿಂದೂಗಳಲ್ಲಿ ತಂದೆ ತಾಯಿಯ ನಂತರದ ಸ್ಥಾನ ಗುರುವಿನದ್ದಾಗಿದೆ. ನಮ್ಮ ಭವಿಷ್ಯವನ್ನು ರೂಪಿಸಿ ನಮ್ಮನ್ನು ವಿದ್ಯಾವಂತರನ್ನಾಗಿ ಮತ್ತು ಬುದ್ಧಿವಂತರನ್ನಾಗಿ ಮಾಡುವ ಜವಾಬ್ದಾರಿ ನಮ್ಮ ಗುರಗಳದ್ದಾಗಿದೆ. ಆದ್ದರಿಂದಲೇ ಗುರು ಪೂರ್ಣಿಮೆಯಂದು ಗುರುಗಳಿಗೆ ಗೌರವ ತೋರುವ ಸಲುವಾಗಿ ಈ ದಿನವನ್ನು ಆಚರಿಸಲಾಗುತ್ತದೆ. ವ್ಯಾಸರ ನೆನಪಿಗಾಗಿ ಈ ದಿವಸವನ್ನು ಆಚರಿಸಲಾಗುತ್ತದೆ. ಹಲವಾರು ದೇವಸ್ಥಾನಗಳಲ್ಲಿ ವ್ಯಾಸರ ಪೂಜೆಯನ್ನು ನೆರವೇರಿಸಲಾಗುತ್ತದೆ. ಇದೇ ದಿನದಂದು ಗುರುಗಳ ಪಾದಪೂಜೆಗಳನ್ನು ಮಾಡುತ್ತಾರೆ. ಕೆಲವು ಕಡೆ ಯತಿಗಳು ಇದೇ ಗುರುಪೂರ್ಣಿಮೆಯಂದು ಚಾತುರ್ಮಾಸ್ಯವನ್ನು ಆರಂಭಿಸುತ್ತಾರೆ. ವೇದವ್ಯಾಸರು ಇದೇ ದಿನದಂದು ಬ್ರಹ್ಮಸೂತ್ರಗಳ ರಚನೆ ಪ್ರಾರಂಭಿಸಿದರಂತೆ. ಇದರ ಸ್ಮರಣಾರ್ಥಕವಾಗಿ ಈ ದಿನದಂದು ಬ್ರಹ್ಮಸೂತ್ರಗಳ ಪಠಣ ಮಾಡಲಾಗುತ್ತದೆ. ಏಕಲವ್ಯನು ಇದೇ ದಿನದಂದು ತನ್ನ ಗುರು ದ್ರೋಣಾಚಾರ್ಯರಿಗೆ ಗುರು ಕಾಣಿಕೆಯಾಗಿ ತನ್ನ ಬಲಗೈ ಹೆಬ್ಬೆರಳನ್ನೇ ಕತ್ತರಿಸಿಕೊಟ್ಟನಂತೆ.

ಬೌದ್ಧರಿಗೂ ಗುರು ಪೂರ್ಣಿಮೆಯು ಮಹತ್ವದ ದಿನವಾಗಿದೆ. ಸಾಂಪ್ರದಾಯಿಕವಾಗಿ ಬೌದ್ಧರು ಬುದ್ಧನಿಗೆ ಗೌರವ ಅರ್ಪಿಸುವ ದಿನವನ್ನಾಗಿ ಗುರುಪೂರ್ಣಿಮೆಯನ್ನು ಆಚರಿಸುತ್ತಾರೆ. ಬೌದ್ಧರು ಈ ಹಬ್ಬವನ್ನು ಗೌತಮ ಬುದ್ಧನ ಪ್ರಥಮ ಧರ್ಮೋಪದೇಶದ ಅಂಗವಾಗಿ ಆಚರಿಸುತ್ತಾರೆ.

- ಹರಿಕೃಷ್ಣ ಹೊಳ್ಳ , ಬ್ರಹ್ಮಾವರ.
***

ಗುರು ಮಹಿಮೆ ...

ಆಷಾಢ ಮಾಸದ ಹುಣ್ಣಿಮೆಯ ದಿನ ನಾವು ಆಚರಿಸುವ, ಶ್ರೇಷ್ಠವಾದ ಹಬ್ಬವೆಂದರೆ “ಗುರು ಪೂರ್ಣಿಮೆ”. ಈ ದಿನ ನಾವು ನಮ್ಮ ಗುರುಗಳಿಗೆ ವಂದನೆ ಸಲ್ಲಿಸುವ ದಿನ. ಗುರುವಿನ ಮಹತ್ವವನ್ನು ಸಾರುವ ದಿನ. ಗುರು ನಮಗೆ ಜೀವನದಲ್ಲಿ ಸರಿಯಾದ ದಿಕ್ಕು ಸೂಚಿಸುವ, ನಮ್ಮ ಕೈ ಹಿಡಿದು ನಡೆಸುವ, ಪರಮಾತ್ಮನ ಅರಿವನ್ನು ತಿಳಿಯಲು ನಮ್ಮೊಳಗಿರುವ ನಮ್ಮ ಆತ್ಮವನ್ನು ಜಾಗೃತಿಗೊಳಿಸುವ ಮಹತ್ವದ ವ್ಯಕ್ತಿ.ಆಧ್ಯಾತ್ಮದ ಹಾದಿಯಲ್ಲಿ ನಮ್ಮನ್ನು ನಡೆಸಿ, ನಮ್ಮ ಗುರಿ ಮುಟ್ಟಲು ಸಹಾಯ ಮಾಡುವವನೇ “ಗುರು”.ಹುಡುಕಿದರೆ ಸಿಗುವವನಲ್ಲ ಗುರು, ನಮ್ಮನ್ನು ಹುಡುಕಿ, ನಾವು ಗುರುವನ್ನು ಕಾಣುವ ಮಟ್ಟಿಗೆ ಸಾಧನೆ ಮಾಡಿದ್ದರೆ ತಾನಾಗೇ ನಮ್ಮ ಬಳಿಗೆ ಬರುವವನು. ನಾವು ಗುರುವಿನ ಮುಖಾಂತರವೇ ಪರಮಾತ್ಮನ ಅರಿವು ಅರಿಯಬೇಕಾಗಿರುವುದರಿಂದ, ನಾವು ಆಷಾದ ಪೌರ್ಣಮಿಯಂದು ಮಾತ್ರ ಗುರುವನ್ನು ಪೂಜಿಸದೆ.. ಅನು ದಿನ, ಅನು ಕ್ಷಣ, ಗುರುವನ್ನು ಅಂತರಂಗದಲ್ಲೇ ಪೂಜಿಸುತ್ತಾ ನಮ್ಮನ್ನು ನಾವು ಸಮರ್ಪಿಸಿಕೊಳ್ಳಬೇಕು. ಹೀಗೆ ನನ್ನದೇನೂ ಇಲ್ಲವೆಂಬ ಭಾವ ನಮ್ಮಲ್ಲಿ ಸದಾ ಜಾಗೃತವಾಗಿಟ್ಟುಕೊಂಡು, ಗುರುವಿನಲ್ಲಿ ಶರಣಾದರೆ ಮಾತ್ರ ನಮ್ಮ ಗುರಿ ಮುಟ್ಟುವ ಪ್ರಯತ್ನ ಸಫಲವಾಗುತ್ತದೆ.

ಉಪನಿಷತ್ತಿನ ಪ್ರಕಾರ “ಗು” ಎಂದರೆ ಅಂಧಕಾರವೆಂದೂ “ರು” ಎಂದರೆ ದೂರೀಕರಿಸುವವ ಅಥವಾ ಅಜ್ಞಾನದ ಅಂಧಕಾರವನ್ನು ನಿವಾರಿಸಿ ಜ್ಞಾನದ ಹಾದಿಗೆ ನಡೆಸುವವ ಎಂಬ ಅರ್ಥವಾಗುತ್ತದೆ.ಸಂಸ್ಕೃತದಲ್ಲಿ “ಗುರು” ಪದಕ್ಕೆ ಭಾರವಾದ ಎನ್ನುವ ಅರ್ಥವೂ ಇದೆಯೆನ್ನುತ್ತಾರೆ. ಯಾರು ಜ್ಞಾನದಿಂದ ಭಾರವಾಗಿರುವನೋ ಅವನೇ ಗುರು ಎಂದು ಅರ್ಥೈಸಬಹುದೇನೋ.

ಸ್ಕಂದ ಪುರಾಣದ “ಗುರುಗೀತೆ”ಯಲ್ಲಿ ಗುರುವನ್ನು ನಂದಾದೀಪದಂತೆ ಬೆಳಗುವ ಜ್ಯೋತಿಯಂತೆ ಎಂದು ಗುರುವಿನ ಹಿರಿಮೆಯನ್ನು ವಿಸ್ತಾರವಾಗಿ ತಿಳಿಸಿಲಾಗಿದೆ :

ಅಖಂಡ ಮಂಡಲಾಕಾರಂ ವ್ಯಾಪ್ತಂ ಯೇನಾ ಚರಾಚರಂ |

ತತ್ಪದಂ ದರ್ಶಿತಂ ಯೇನಾ ತಸ್ಮೈ ಶ್ರೀಗುರವೇ ನಮಃ |

ಆದಿಗುರು ಶ್ರೀ ಶಂಕರಾಚಾರ್ಯರು ಗುರು ಸ್ತೋತ್ರವನ್ನು ಹೀಗೆ ಹೇಳುತ್ತಾರೆ :

ಗುರುರ್ಬ್ರಹ್ಮಾ ಗುರುರ್ವಿಷ್ಣುಃ | ಗುರುರ್ದೇವೋ ಮಹೇಶ್ವರಃ |

ಗುರುಸ್ಸಾಕ್ಶಾತ್ ಪರಬ್ರಹ್ಮಃ | ತಸ್ಮೈ ಶ್ರೀ ಗುರವೇ ನಮಃ ||

ಗುರುವು ಬ್ರಹ್ಮ, ವಿಷ್ಣು ಮತ್ತು ಮಹೇಶ್ವರನ ಸ್ವರೂಪಿಯಾಗಿದ್ದು, ಅದಕ್ಕೂ ಮಿಗಿಲಾದ ಪರಬ್ರಹ್ಮ ತತ್ತ್ವವೇ ಆಗಿದ್ದಾನೆ. ಅಂಥ ಗುರುವಿಗೆ ಪ್ರಣಾಮಗಳು ಎಂಬ ಅರ್ಥವಾಗುತ್ತದೆ.

ಅಜ್ಞಾನ ತಿಮಿರಾಂಧಸ್ಯ ಜ್ಞಾನಾಂಜನ ಶಲಾಕಯಾ |

ಚಕ್ಷುರುನ್ಮೀಲಿತಂ ಯೇನ ತಸ್ಮೈ ಶ್ರೀ ಗುರವೇ ನಮಃ ||

ಅಂದರೆ ನಮ್ಮಲ್ಲಿರುವ ಅಜ್ಞಾನವೆಂಬ ಕಣ್ಣಿಗೆ ಅಂಟಿದ ಅಂಧಕಾರವನ್ನು ಜ್ಞಾನವೆಂಬ ಕಡ್ಡಿಯಿಂದ ಗುಣಪಡಿಸಿ, ಶಿಷ್ಯನ ಏಳಿಗೆಗೆ ಬೇಕಾದ ಸೋಪಾನವನ್ನು ಹತ್ತಿಸುವ, ಸಾಧನೆಯ ಮಾರ್ಗದರ್ಶನ ಮಾಡುವ ಶ್ರೀ ಗುರುವಿಗೆ ವಂದನೆಗಳು.

ಹೀಗೆ ನಮ್ಮ ಪರಂಪರೆಯಲ್ಲಿ ಅನಾದಿ ಕಾಲದಿಂದಲೂ ಗುರುವಿನ ಮಹತ್ವವನ್ನು ಸಾರುತ್ತಾ
ನ ಗುರೋರಧಿಕಂ ತತ್ವಂ, ನ ಗುರೋರಧಿಕಂ ತಪಃ |
ತತ್ವ ಜ್ಞಾನಾತ್ ಪರಂ ನಾಸ್ತಿ, ತಸ್ಮೈ ಶ್ರೀ ಗುರವೇ ನಮಃ ||
ಅಂದರೆ ಗುರುವಿಗಿಂತ ಮೀರಿದ ತತ್ವ, ತಪಸ್ಸು ಬೇರೆ ಯಾವುದೂ ಇಲ್ಲ. ಜ್ಞಾನದ ದಾರಿದೀಪ ತೋರುವವನಾದ ಶ್ರೀ ಗುರುವೇ ನಿನಗೆ ವಂದನೆಗಳು ಎಂದು ಹೇಳಿದ್ದಾರೆ.

ಶಾಶ್ವತವಾದ ಆನಂದವನ್ನು ಹೊಂದುವುದು ಸದ್ಗುರುವಿನ ಅನುಗ್ರಹದಿಂದ ಮಾತ್ರವೇ ಸಾಧ್ಯವೆಂದು ಶ್ರೀ ಶಂಕರಾಚಾರ್ಯರು ತಮ್ಮ ಗುರ್ವಷ್ಟಕಮ್ ನಲ್ಲಿ ಕೂಡ ಹೀಗೆ ಹೇಳಿದ್ದಾರೆ :

ಶರೀರಂ ಸುರೂಪಂ ತಥಾ ವಾ ಕಲತ್ರಂ

ಯಶಶ್ಚಾರು ಚಿತ್ರಂ ಧನಂ ಮೇರುತುಲ್ಯಮ್ ||೧||

ಕಲತ್ರಂ ಧನಂ ಪುತ್ರಪೌತ್ರಾದಿ ಸರ್ವಂ

ಗೃಹಂ ಬಾಂಧವಾಃ ಸರ್ವಮೇತದ್ಧಿ ಜಾತಮ್ ||೨||

ನಮಗೆ ಸುಂದರ ಶರೀರ, ಅಪಾರ ಅಂತಸ್ತು, ಕೀರ್ತಿ, ಸಂಸಾರ ಎಲ್ಲವೂ ಇದ್ದರೂ ಗುರುವಿನ ಚರಣಗಳಲ್ಲಿ ಭಕ್ತಿ ಶ್ರದ್ಧೆ ಇಲ್ಲದವನಿಗೆ ಮೋಕ್ಷವಿಲ್ಲ.

ಷಡಂಗಾದಿವೇದೋ ಮುಖೇ ಶಾಸ್ತ್ರವಿದ್ಯಾ

ಕವಿತ್ವಾದಿ ಗದ್ಯಂ ಸುಪದ್ಯಂ ಕರೋತಿ ||೩||

ವೇದ, ಶಾಸ್ತ್ರ ಪಾರಂಗತನಾಗಿ ಅನೇಕ ವಿದ್ಯೆಗಳನ್ನು ತಿಳಿದವನಾಗಿದ್ದರೂ ಕೂಡ ಸದ್ಗುರುವಿನ ಚರಣಗಳಲ್ಲಿ ನಿಷ್ಠೆ ಇಡದಿದ್ದರೆ ಮುಕ್ತಿಯಿಲ್ಲ.

ವಿದೇಶೇಷು ಮಾನ್ಯಃ ಸ್ವದೇಶೇಷು ಧನ್ಯಃ

ಸದಾಚಾರವೃತ್ತೇಷು ಮತ್ತೋ ನಾ ಚಾನ್ಯಃ ||೪||

ವಿದೇಶಗಳಲ್ಲಿ ತುಂಬಾ ಹೆಸರು ಮಾಡಿ, ಸ್ವದೇಶದಲ್ಲಿ ಆಚಾರ ಪಾಲಿಸಿ, ಎಲ್ಲರಿಗಿಂತ ಶ್ರೇಷ್ಠ ವ್ಯಕ್ತಿ ಎಂಬ ಹೆಸರು ಪಡೆದಿದ್ದರೂ ಸಹ ಗುರುಚರಣಗಳಲ್ಲಿ ಭಕ್ತಿ ಇಲ್ಲದವನ ಜೀವನ ನಿರರ್ಥಕ.

ಕ್ಷಮಾಮಂಡಲೇ ಭೂಪಭೂಪಾಲಬೃಂದೈ:

ಸದಾ ಸೇವಿತಂ ಯಸ್ಯ ಪಾದಾರವಿಂದಮ್ ||೫||

ಭೂಮಂಡಲದಲ್ಲಿ ಅನೇಕರಿಂದ ಪಾದ ಪೂಜಿಸಿ ಕೊಳ್ಳುವಂತಹ ವ್ಯಕ್ತಿಯಾಗಿದ್ದರೂ ಕೂಡ ತನ್ನ ಗುರುಗಳ ಪಾದ ಪೂಜಿಸದವನು ಮೇರು ವ್ಯಕ್ತಿತ್ವದವನಾಗಿದ್ದರೂ ವ್ಯರ್ಥವೇ.

ಯಶೋ ಮೇ ಗತಂ ದಿಕ್ಷು ದಾನಪ್ರತಾಪಾತ್

ಜಗದ್ವಸ್ತು ಸರ್ವಂ ಕರೇ ಯತ್ಪ್ರಸಾದಾತ್ ||೬||

ಅನೇಕ ದಾನ ಧರ್ಮಗಳನ್ನು ಮಾಡಿ ಇಡೀ ಜಗತ್ತನ್ನೇ ಗೆದ್ದಿರುವೆನೆಂದು ಕೊಂಡಾಗಲೂ ಅವನು ತನ್ನ ಗುರುವಿನ ಅನುಗ್ರಹಕ್ಕೆ ಪಾತ್ರನಾಗದಿದ್ದರೆ ಎಲ್ಲವೂ ತೃಣ ಮಾತ್ರವೇ.

ನ ಭೋಗೇ ನ ಯೋಗೇ ನ ವಾ ವಾಜಿರಾಜೌ

ನ ಕಾಂತಾಮುಖೇ ನೈವ ವಿತ್ತೇಷು ಚಿತ್ತಮ್ ||೭||

ಲೌಕಿಕದ ಎಲ್ಲಾ ವ್ಯಾಪಾರಗಳಲ್ಲಿ ಆಸಕ್ತಿ ತೊರೆದಿದ್ದರೂ ಕೂಡ ಆ ವ್ಯಕ್ತಿಯ ಮನಸ್ಸು ಅಚಲವಾಗಿ ಗುರು ಚರಣಗಳಲ್ಲಿ ಶ್ರದ್ಧೆ ಹೊಂದಿರದಿದ್ದರೆ ಅವನ ವೈರಾಗ್ಯ ಉಪಯೋಗವಿಲ್ಲದ್ದು, ಮೋಕ್ಷವನ್ನು ಹೊಂದಲಾರ.

ಅರಣ್ಯೇ ನ ವಾ ಸ್ವಸ್ಯ ಗೇಹೇ ನ ಕಾರ್ಯೇ

ನ ದೇಹೇ ಮನೋ ವರ್ತತೇ ಮೇ ತ್ವನರ್ಘ್ಯೇ ||೮||

ಸಮಸ್ತವನ್ನೂ ತ್ಯಜಿಸಿ, ಅರಣ್ಯದಲ್ಲಿ ವಾಸಿಸಿದರೂ ಕೂಡ, ಗುರುಚರಣಗಳಿಗೆ ಶರಣಾಗತನಾಗದಿದ್ದರೆ ಆತ ಸಂಸಾರ ಬಂಧನದಿಂದ ಮುಕ್ತನಾಗುವುದು ಸುಳ್ಳು.

ಹೀಗೆ ಮೇಲಿನ ಶ್ಲೋಕಗಳಲ್ಲಿ ನಾವು ಬದುಕಿನಲ್ಲಿ ಏನೆಲ್ಲಾ ಸಾಧಿಸಿದ್ದರೂ, ತ್ಯಜಿಸಿದ್ದರೂ, ಗುರುವಿನ ಕರುಣೆ ಯಿಲ್ಲದೆ ಎಲ್ಲವೂ ವ್ಯರ್ಥ ಎಂದು ತಿಳಿಸುತ್ತಾಪ್ರತಿಯೊಂದು ಶ್ಲೋಕದ ಕೊನೆಗೂ ಮನಶ್ಚೇನ್ನ ಲಗ್ನಂ ಗುರೋರಂಘ್ರಿಪದ್ಮೇ | ತತಃ ಕಿಂ ತತಃ ಕಿಂ ತತಃ ಕಿಂ ತತಃ ಕಿಮ್ || ಎಂಬ ಮಾತನ್ನು ಪದೇ ಪದೇ ಪುನಶ್ಚರಣ ಮಾಡುತ್ತಾ ಗುರುವಿನ ಪಾದಗಳಲ್ಲಿ ಮನಸ್ಸನ್ನು ನಿಲ್ಲಿಸದಿದ್ದರೆ ನಮ್ಮ ಸಾಧನೆ ಕಷ್ಟಸಾಧ್ಯ ಎನ್ನುತ್ತಾ ಗುರುವಿನ ಮಹತ್ವವನ್ನು ವಿವರಿಸುತ್ತಾರೆ.

ಆದಿ ಗುರು ಶ್ರೀ ಶಂಕರಾಚಾರ್ಯರು ಹಿಂದೂ ಧರ್ಮದಪುನರ್ಸ್ಥಾಪನೆ ಮತ್ತು ಪ್ರಚಾರ ಕಾರ್ಯಕ್ಕಾಗಿಯೇ ಬಂದವರು. ಅವರು ಅದ್ವೈತ ಸಿದ್ಧಾಂತವನ್ನು ಪ್ರತಿಪಾದಿಸಿದರು. ನಂತರ ಬಂದವರು ಶ್ರೀ ರಾಮಾನುಜಾಚಾರ್ಯರು ಮತ್ತು ಇವರು ವಿಶಿಷ್ಟಾದ್ವೈತ ಸಿದ್ಧಾಂತವನ್ನು ಪ್ರತಿಪಾದಿಸಿದರು. ಇವರಿಬ್ಬರ ನಂತರ ಬಂದವರು ಶ್ರೀ ಮಧ್ವಾಚಾರ್ಯರು. ಆಚಾರ್ಯ ತ್ರಯರೆಂದೇ ಗುರುತಿಸಲ್ಪಡುವರು ನಮ್ಮ ಈ ಮೂವರು ಶ್ರೇಷ್ಠ ಗುರುಗಳು. ಅದ್ವೈತ, ವಿಶಿಷ್ಟಾದ್ವೈತ ಹಾಗೂ ದ್ವೈತ ಸಿದ್ಧಾಂತಗಳನ್ನು ಅನುಸರಿಸುವ ಗುರು ಪರಂಪರೆಯೇ ಬೆಳೆಯಿತು ಮತ್ತು ಈಗಲೂ ಅನೇಕ ಶಾಖೆಗಳಾಗಿ ವಿಭಜಿತವಾಗಿದ್ದರೂ, ಪರಂಪರೆ ಮುಂದುವರೆದಿದೆ. ಈ ಪರಂಪರೆಯಲ್ಲಿ ಈಗಿರುವ ಗುರುವಿನ ಗುರುವಿಗೆ ಪರಮಗುರು ಎಂದೂ, ಪರಮ ಗುರುವಿನ ಗುರುವನ್ನು ಪರಾಪರ ಗುರು ಎಂದೂ, ಪರಾಪರ ಗುರುವಿನ ಗುರುವನ್ನು ಪರಮೇಷ್ಠಿ ಗುರು ಎಂದೂ ಗುರುತಿಸಲ್ಪಡುತ್ತಾರೆ. “ಗುರು ಪೂರ್ಣಿಮೆ’ ಯಂದುಸಮಸ್ತ ಗುರು ಪರಂಪರೆಯೇ ಪೂಜಿಸಲ್ಪಡುತ್ತದೆ.

ವೇದದಲ್ಲಿನ ಬ್ರಹ್ಮ ತತ್ವವನ್ನು ಅರಿತಿದ್ದ ವಿಷ್ಣುವಿನಅವತಾರವೆಂದೇ ಕರೆಯಲ್ಪಡುವ ಶ್ರೀ ವೇದವ್ಯಾಸರನ್ನು ನಾವು ವಿಶೇಷವಾಗಿ ನಮ್ಮ ಗುರು ಪರಂಪರೆಯ ಜೊತೆಗೇ “ಗುರು ಪೂರ್ಣಿಮೆ” ಯಂದು ಪೂಜಿಸುತ್ತೇವೆ.ಲೋಕಗುರು ಪರಮಗುರು ಎಂದೇ ಪ್ರಖ್ಯಾತರಾಗಿದ್ದರು ಶ್ರೀ ವೇದವ್ಯಾಸರು. ವೇದಗಳನ್ನು ನಾಲ್ಕು ವಿಭಾಗಗಳಾಗಿ ವಿಂಗಡಿಸಿದ್ದರಿಂದ ಇವರನ್ನು ವೇದವ್ಯಾಸರೆಂದು ಕರೆದರು. ಇಡೀ ಮಾನವ ಕುಲಕ್ಕೇ ಒಳಿತಾಗಲೆಂದು ಮತ್ತು ವೇದಗಳ ರಹಸ್ಯ ಸಾಮಾನ್ಯರೂ ಅರಿಯುವಂತಾಗ ಬೇಕೆಂದು ಅವರು ನಮಗಾಗಿ “ಮಹಾಭಾರತ”ವೆಂಬ ಲಕ್ಷ್ಯ ಶ್ಲೋಕಗಳಿರುವ “ಪಂಚಮವೇದ”ವನ್ನು ರಚಿಸಿ ಕೊಟ್ಟರು. ಜೊತೆಗೇ ಭಾಗವತವನ್ನೂ ಮತ್ತು ಹದಿನೆಂಟು ಪುರಾಣಗಳನ್ನೂ ರಚಿಸಿಕೊಟ್ಟರು. ಇಂತಹ ಪುಣ್ಯಾತ್ಮರು ವೇದವ್ಯಾಸರು.ಆದ್ದರಿಂದಲೇ ಅವರನ್ನು ಲೋಕಗುರುವೆಂದು ಕರೆದು ಶ್ರದ್ಧೆ ಹಾಗೂ ಭಕ್ತಿಯಿಂದ ಗುರು ಪೂರ್ಣಿಮೆಯಂದು ಪೂಜಿಸುತ್ತೇವೆ.

“ಗುರು” ಎನ್ನುವುದು ಒಬ್ಬ ವ್ಯಕ್ತಿ ಎಂದು ನೋಡದೆ ನಾವು ಒಂದು ಶಕ್ತಿ ಎಂದು ಅರ್ಥೈಸಿ ಕೊಂಡರೆ ನಮಗೆ ಗುರುವಿನ ಮಹತ್ವ ಇನ್ನೂ ಹೆಚ್ಚು ಆಳವಾಗಿ ತಿಳಿಯುತ್ತದೆ. ಬೇರೆ ಬೇರೆ ಗುರುಗಳು ಭೌತಿಕ ಶರೀರದಿಂದ ಅಂದರೆ ಹೊರಗಿನಿಂದ ನೋಡಲು ವ್ಯತ್ಯಾಸವಾಗಿದ್ದರೂ ಅವರೆಲ್ಲರ ಒಳಗಿನ “ಗುರು ತತ್ವ” ಮಾತ್ರ ಒಂದೇ ಆಗಿರುತ್ತದೆ. ಅವೆರೆಲ್ಲರೂ ಹೊರ ಹೊಮ್ಮಿಸುವ, ಪಸರಿಸುವ ಲಹರಿಗಳು ತುಂಬಾ ಚೈತನ್ಯದಾಯಕವಾಗಿರುತ್ತದೆ. ಗುರುವಿಗೆ ಯಾವಾಗಲೂ ಶಿಷ್ಯನ

ಉನ್ನತಿಯ, ಬೆಳವಣಿಗೆಯ ಚಿಂತನೆಯೇ ಆಗಿರುತ್ತದೆ.ಗುರು ತನ್ನ ಶಿಷ್ಯನನ್ನು ತಾನೇ ಹುಡುಕಿ ಕೊಳ್ಳುತ್ತಾನೆ. ಶಿಷ್ಯ ಸಿಕ್ಕಿದ ಕ್ಷಣವೇ ಗುರು ಶಿಷ್ಯನ ಏಳಿಗೆಯ “ಸಂಕಲ್ಪ” ಮಾಡಿಕೊಂಡು ಬಿಟ್ಟಿರುತ್ತಾನೆ.

ನಮ್ಮ ಉಪನಿಷತ್ತು, ಪುರಾಣಗಳು, ವೇದ, ಶಾಸ್ತ್ರಗಳೆಲ್ಲದರಲ್ಲೂ ಮತ್ತು ವಿಶೇಷವಾಗಿ ಭಕ್ತಿ ಮಾರ್ಗದಲ್ಲೂ ಗುರುವಿಗೆ ಅತ್ಯಂತ ಮಹತ್ವದ ಸ್ಥಾನವಿದೆ. ಭಗವದ್ಗೀತೆಯಲ್ಲಿ ಶ್ರೀಕೃಷ್ಣ – ಅರ್ಜುನರ ಸಂಬಂಧ ಮತ್ತು ರಾಮಾಯಣದಲ್ಲಿ ಶ್ರೀರಾಮ – ಹನುಮರ ಸಂಬಂಧಗಳು ಗುರು – ಶಿಷ್ಯರ ಸಂಬಂಧಕ್ಕೆ ಅತಿ ಸೂಕ್ತವಾದ ನಿದರ್ಶನಗಳು.

ಕೈವಾರ ತಾತಯ್ಯ ಎಂದೇ ಪ್ರಸಿದ್ಧರಾಗಿರುವ ಶ್ರೀ ಯೋಗಿನಾರೇಯಣರ ಬ್ರಹ್ಮಾಂಡಪುರಿ ಶತಕದಲ್ಲಿ ಕೂಡ ತಾತಯ್ಯನವರು ಗುರುವಿನ ಮಹತ್ವವನ್ನು ಸಾರುವ ಮಾತುಗಳನ್ನು ಆಡಿದ್ದಾರೆ :

ಬ್ರಹ್ಮರುದ್ರುಲಕೈನ - ಭಾವಿಂಪ ಶಕ್ಯಮಾ

ಆಧ್ಯಾತ್ಮವಿದ್ಯ ಗುರುಕೀಲು ಮಹಿಮ

ಆಧ್ಯಾತ್ಮ ವಿದ್ಯೆಗೆ ಗುರುವಿನ ಮಾರ್ಗದರ್ಶನ ಬೇಕೇ ಬೇಕು ; ಗುರುವಿಲ್ಲದಿದ್ದರೆ ಬ್ರಹ್ಮರುದ್ರರಿಗೂ ಅಶಕ್ಯ. ಆತ್ಮ ಸಾಕ್ಷಾತ್ಕಾರವಾಗಲು ಆಧ್ಯಾತ್ಮವಿದ್ಯ "ಗುರುಕೀಲು ಮಹಿಮೆ" - ಎಂಬುದು ಆಳವಾದ ತತ್ವಾರ್ಥ ಪದ. ಇದು ಮನಸ್ಸಿನ ಸಂಸ್ಕಾರಕ್ಕೆ ಹತ್ತಿರವಾದದ್ದು. ಭ್ರಮೆಗಳನ್ನು ಸ್ಪಷ್ಟವಾಗಿ ಹೇಳಿದ್ದಾರೆ. "ಗುರುಕೀಲು" ಎಂದರೆ ಗುರುದೇವನು ಕಲಿಸಿಕೊಟ್ಟ ಕೀಲಿಕೈನಂತಹ ಸಾಧನಸೂತ್ರವೆಂದು ಅರ್ಥವಾಗುತ್ತದೆ. ತಾತಯ್ಯನವರು ಗುರುವಿಗೆ 'ಮಾತೃಸ್ಥಾನ' ಕೊಟ್ಟಿದ್ದಾರೆ. ಯೋಗ್ಯ ಹಾಗೂ ಸದ್ಗುರುವಿನ ಪಾದಗಳಿಗೆ ಶರಣಾದರೆ ಆತ ಉಪದೇಶ ಕೊಟ್ಟು ಉದ್ಧರಿಸುತ್ತಾನೆ. ನೀನು ಹುಡುಕುತ್ತಿರುವ ಕುರಿಮರಿ ನಿನ್ನ ಕಂಕುಳಲ್ಲೇ ಇದೆ ಎಂದು ನಮ್ಮಲ್ಲೇ ಇರುವ ದೇವರನ್ನು ತೋರಿಸುತ್ತಾನೆ, ಸಾಧನಮಾರ್ಗ ಕಲಿಸುತ್ತಾನೆ. ಅದೇ ಗುರುಮಾರ್ಗ, ಅದು ಗುರುಸೂತ್ರ, ಅದೇ ಗುರುಕೀಲು. ಮನಸ್ಸನ್ನು ನಿಲ್ಲಿಸಲು ಜ್ಞಾನಬೋಧೆ ಮಾಡಿ ಗುರುವು ಸಾಧನಮಾರ್ಗ ತೋರಿಸುತ್ತಾನೆ.

ಗುರು ಪರಂಪರೆ ಹಾಗೂ ಗುರು-ಶಿಷ್ಯರ ಅತ್ಯಂತ ನಿಕಟ ಸಂಬಂಧವು ಮುಂದುವರೆದು ನಮ್ಮ ದಾಸಸಾಹಿತ್ಯದಲ್ಲೂ ಗಾಢವಾಗಿ ಕಾಣಬಹುದಾಗಿದೆ.....

******

year 2021
" ಶ್ರೀ ಹರಿ ವಾಯು ಗುರುಗಳ ಸ್ಮರಣೆ "
" ಶ್ರೀ ವೇದವ್ಯಾಸಂ ವಂದೇ ಜಗದ್ಗುರುಮ್ "
" ಈ ದಿನ ದಿನಾಂಕ : 24.07.2021 ಶನಿವಾರ ಶ್ರೀ ವ್ಯಾಸ ಪೌರ್ಣಿಮಾ "
( ಗುರು ಪೌರ್ಣಿಮಾ )
" ಶ್ರೀಮದಾಚಾರ್ಯರಿಂದ ಶ್ರೀ ವೇದವ್ಯಾಸರ ಮುಖ ವರ್ಣನೆ "
ಸಾಕಲಾಸ್ತಕಲಂಕಕಾಲಿಮಸ್ಫುರದಿಂದು-
ಪ್ರಕರೋರುವಿಭ್ರಮಮ್ ।
ಅಧರೀಕುರುತೇ ಸ್ವಶೋಭಯಾ 
ವದನಂ ದೇವಶಿಖಾಮಣೇರಿದಮ್ ।।
ವಿವರಣೆ :
ದೇವಶಿಖಾಮಣೇ: = ದೇವೋತ್ತಮನಾದ ಈ ಶ್ರೀ ವೇದವ್ಯಾಸದೇವರ
ಇದಂ = ಎದುರಿಗೆ ಕಾಣಿಸುತ್ತಿರುವ
ವದನಂ = ಮುಖವು
ಸ್ವಶೋಭಯಾ = ತನ್ನ ಕಾಂತಿಯಿಂದ
ಸಕಲ = ಹದಿನಾರು ಕಲೆಗಳಿಂದ ಕೂಡಿದ
ಅಸ್ತ = ಹೋಗಲಾಡಿಸಲ್ಪಟ್ಟ
ಕಲಂಕಕಾಲಿಮ = ಕಳಂಕದ ಕಪ್ಪುಳ್ಳ
ಸ್ಫುರತ್ = ಪ್ರಕಾಶಮಾನವಾದ
ಇಂದು = ಚಂದ್ರರ
ಪ್ರಕರ = ಸಮೂಹದ
ಉರುವಿಭ್ರಮಮ್ = ಹೆಚ್ಚಾದ ವಿಲಾಸವನ್ನು
ಅಧರೀಕುರುತೇ = ತಿರಸ್ಕರಿಸುತ್ತದೆ!!
ಶ್ರೀ ವೇದವ್ಯಾಸದೇವರು ದೇವದೇವೋತ್ತಮರು - ಸರ್ವೋತ್ತಮರು. 
ಇವರ ಮುಖವು ಜಗದ್ವಿಲಕ್ಷಣವಾದ ಕಾಂತಿಯಿಂದ ತುಂಬಿದೆ. 
ತಮ್ಮಲ್ಲಿರುವ ಕಲಂಕದ ಕಪ್ಪನ್ನು ಪರಿಹರಿಸಿಕೊಂಡ ಅಸಂಖ್ಯಾತ ಪೂರ್ಣಚಂದ್ರರ ಸಮೂಹದ ಕಾಂತಿಯನ್ನೂ ಈ ಮುಖವು ಧಿಕ್ಕರಿಸುತ್ತದೆ. 
ಅನಂತ ನಿಷ್ಕಲಂಕ ಚಂದ್ರರ ಕಾಂತಿಗಿಂತಲೂ ಹೆಚ್ಚು ಕಾಂತಿಯುಳ್ಳದ್ದಾಗಿದೆ!!
ಶ್ರೀ ಜಗನ್ನಾಥದಾಸರು....
ವೇದಪೀಠ ವಿರಿಂಚಿ ಭವ । ಶ ।
ಕ್ರಾದಿ ಸುರ ವಿಜ್ಞಾನದಾಯಕ ।
ಮೋದ ಚಿನ್ಮಯ ಗಾತ್ರ -
ಲೋಕ ಪವಿತ್ರ ಸುಚರಿತ್ರ ।।
ಛೇದ ಭೇದ ವಿಷಾದ । ಕುಟಿಲಾಂ ।
ತಾದಿ ಮಧ್ಯ ವಿದೂರ । ಆದಾ ।
ನಾದಿ ಕಾರಣ ಬಾದರಾಯಣ -
ಪಾಹಿ ಸತ್ರಾಣ ।। 1 - 7 ||
ವಿವರಣೆ :
ವೇದಪೀಠ = ವೇದಾಭಿಮಾನಿಯಾದ ಶ್ರೀ ಮಹಾಲಕ್ಷ್ಮೀ ದೇವಿಯರೇ ಪೀಠ.
ಅಂದರೆ ಶ್ರೀ ಮಹಾಲಕ್ಷ್ಮ್ಯಾತ್ಮಕ ರೂಪವಾದ ಚಿತ್ರಾಸಸವನ್ನೇ ಪೀಠವನ್ನಾಗಿ ಉಳ್ಳವರು ಶ್ರೀ ವೇದವ್ಯಾಸರು
ವಿರಿಂಚಿ ಈ ಚತುರ್ಮುಖ ಬ್ರಹ್ಮದೇವರು
ಭವ = ಶ್ರೀ ಮಹಾರುದ್ರದೇವರು
ಶಕ್ರ = ಶ್ರೀ ಇಂದ್ರದೇವರು
ಆದಿ = ಮೊದಲಾದ
ಸುರ = ದೇವತೆಗಳಿಗೆ
ವಿಜ್ಞಾನದಾಯಕ = ವಿಶೇಷ ಜ್ಞಾನವನ್ನು ಕೊಡುವವರೇ
ಮೋದ ಚಿನ್ಮಯ ಗಾತ್ರ = ಜ್ಞಾನಾನಂದಾತ್ಮಕವಾದ ಅಪ್ರಾಕೃತ ದೇಹ ಉಳ್ಳವರು
ಲೋಕ = ಚತುರ್ದಶ ಲೋಕಗಳನ್ನೂ
ಪವಿತ್ರ = ಪವಿತ್ರವನ್ನಾಗಿ ಮಾಡುವ
ಸುಚರಿತ್ರ = ಪರಮ ಶ್ರೇಷ್ಠವಾದ ಮಹಿಮೆ ಉಳ್ಳ
" ಛೇದ ವಿದೂರ "
ಆಯುಧಗಳಿಂದ ಕತ್ತರಿಸಲ್ಪಡಲಾರದದೇಹ ಉಳ್ಳವರು
" ಭೇದ ವಿದೂರ "
ಮನಸ್ಸನ್ನು ಒಡೆಯುವ ಅಥವಾ ಮನೋಸ್ಥೈರ್ಯವನ್ನು ಅಸ್ಥಿರ ಗೊಳಿಸುವುದೇ ಮೊದಲಾದ ದೋಷ ರಹಿತನಾದವರು
ವಿಷಾದ ವಿದೂರ = ವ್ಯಸನ ರಹಿತ
ಕುಟಿಲ ವಿದೂರ = ಕಪಟ ವಂಚನೆಗಳಿಲ್ಲದವರು
ಅಂತ್ಯ ವಿದೂರ = ನಾಶ ರಹಿತ
ಆದಿ ವಿದೂರ = ಜನ್ಮ ರಹಿತ
" ಮಧ್ಯ ವಿದೂರ "
ಆದಿ ಅಂತ್ಯಗಳಿಲ್ಲದವನಿಗೆ ಮಧ್ಯ ವಿದೂರ ಎಂಬುವುದು ಸುಸ್ಪಷ್ಟ
ಆದಾನಾ = ಸೃಷ್ಟಿ, ಸ್ಥಿತಿ ಮತ್ತು ಪ್ರಳಯ ಕರ್ತೃನಾದ
ಆದಿ ಕಾರಣ = ಇವೆ ಮೊದಲಾದವುಗಳಿಗೆ ಕಾರಣೀಭೂತನಾದವರು
" ಬಾದರಾಯಣ "
ಬೋರೆ ಮರಗಳಿಂದ ಕೂಡಿದ ವನಕ್ಕೆ " ಬಾದರ " ಯೆಂದು ಹೆಸರು. 
ಅಲ್ಲಿ ವಾಸ ಮಾಡುವುದರಿಂದ " ಬಾದರಾಯಣ ". 
ಅಂದರೆ ಬದರಿಕಾಶ್ರಯ ವಾಸಿಗಳು ಎಂದರ್ಥ.
ಪಾಹಿ = ನಮ್ಮನ್ನು ರಕ್ಷಿಸು
ಸತ್ರಾಣ = ಸಜ್ಜನ ರಕ್ಷಕರೇ!!
" ಶ್ರೀ ವ್ಯಾಸವಿಠಲ ಕೃತ ಶ್ರೀಮದಾಚಾರ್ಯ ಸ್ತುತಿ "
ಸೂತ್ರಾನಾಮಕ ಸುಂದರನೇಕ ।
ಸೂತ್ರಾನಾಮಕ ।। ಪಲ್ಲವಿ ।।
ಶ್ರೀ ಜಯಾಪತಿ ಸಂಕರ್ಷಣನಿಂದ ಶ್ರೀ ವಾಯುದೇವರು ಸೂತ್ರನಾಮಕರಾಗಿ ಜನಿಸಿದರು. 
32 ಸುಲಕ್ಷಣಗಳಿಂದ ಕೂಡಿದ ಶರೀರವುಳ್ಳ ಸುಂದರ ನಾಮಕರು!!
ಜ್ಞಾನಾದಾಯಕಾ ಆನಂದತೀರ್ಥ ।
ದೀನಾ ಪೋಷಕಾ ।
ಭಾನುಕೋಟಿ ತೇಜ ವ್ಯಾಸವಿಠಲನ ।
ಧ್ಯಾನದೊಳಿಹ ಮಮ ಮಾನಸ ಹಂಸಾ ।।
ಶೇಷ್ಠವಾದ ಸಮೀಚೀನವಾದ ಭಗವತ್ಸಂಬಂಧವಾದ ಜ್ಞಾನವನ್ನು ನೀಡುವ - ಕೋಟಿ ಸೂರ್ಯ ಪ್ರಕಾಶಮಾನನಾದ ಶ್ರೀ ಪರಮಾತ್ಮ ನನ್ನ ಹೃದಯ ಸರೋವರದಲ್ಲಿ ವಿಹರಿಸುವ 
ಹಂಸದೋಪಾದಿಯಲ್ಲಿರುವವರು!!
ಶ್ರೀ ವಾದೀಂದ್ರತೀರ್ಥರು...
ಉದ್ವೇಲ ವ್ಯಾಸತಂತ್ರ ವ್ಯವಸಿತ-
ನಿಖಿಲಾಭಿಜ್ಞ ಹೃದ್ಯಾನವಿದ್ಯಾ
ನಂತತ್ರಯ್ಯಂತ ಭಾವ ಪ್ರಕಟನ-
ಘಟನಾ ಸರ್ವತಂತ್ರ ಸ್ವತಂತ್ರೇ ।
ಸಂವರ್ಣೇ ಮಂತ್ರವರ್ಣೇರನಿತರ -
ವಿಷಯ ಸ್ಪರ್ಷಿಭಿ: ಪಾವಮಾನೇ
ರೂಪೇ ಲೋಕೈಕದೀಪೇ ಪ್ರಸರತು -
ಹೃದಯಂ ಮಾಮಕಂ ಮಧ್ವನಾಮ್ನಿ ।। 4 ।।
ಸೀಮಾತೀತವಾದ ಸಿ ವೇದವ್ಯಾಸದೇವರು ರಚಿಸಿದ ಬ್ರಹ್ಮಮೀಮಾಂಸಾದಿ ಶಾಸ್ತ್ರಗಳಿಂದ ಚೆನ್ನಾಗಿ ತಿಳಿಯಲ್ಪಟ್ಟು ಸಮಸ್ತ ಪ್ರಮೇಯಗಳನ್ನೂ ಅರಿತ - ಮನೋಹರವೂ, ದೋಷ ರಹಿತವೂ - ಅಪರಿಮಿತವೂ ಆದ ಸಕಲ ಉಪನಿಷತ್ತುಗಳ ಅಭಿಪ್ರಾಯಗಳನ್ನು ಹೊಂದಿಸುವುದು ಮತ್ತು ಸ್ಥಾಪನೆ ಮಾಡುವುದರಲ್ಲಿಯೂ ಹಾಗೂ ಎಲ್ಲಾ ಸಿದ್ಧಾಂತ ಶಾಸ್ತ್ರಗಳಲ್ಲಿಯೂ ಬೇರೊಬ್ಬರ ಆಕ್ಷೇಪಣೆಯಿಲ್ಲದೆ ಸ್ವಯಂ ಸಮರ್ಥರೂ ಆದ  ಶ್ರೀ ವಾಯುದೇವರನ್ನು ಬಿಟ್ಟು ಮತ್ತೊಬ್ಬರನ್ನೂ ಪ್ರತಿಪಾದಿಸದಿರುವ " ಬಳಿತ್ಥಾ ಸೂಕ್ತ "....
" ಬಟ್ ತದ್ದರ್ಶನಮಿತ್ಥಮೇವ ನಿಹಿತಮ್ "
" ಪ್ರಲಯೇsಪಿ ಪ್ರತಿಭಾತಪರಾವರಃ ಮುಖ್ಯವಾಯುರ್ನಿತ್ಯಸಮಃ "
" ಅಮೃತೋ ವಾಯುನಿರ್ಧಿಷ್ಟ: ನಿತ್ಯಜ್ಞಾನಾತ್ಮಕತ್ವತಃ "
ಯೆಂದು ವೇದ ಭಾಗಗಳಲ್ಲಿ - ಅನುವ್ಯಾಖ್ಯಾನ ಮತ್ತು ಬೃಹತ್ಭಾಷ್ಯದಲ್ಲಿ ಬರುವ ಸ್ತೋತ್ರಗಳಿಂದ ಪ್ರತಿಪಾದ್ಯರಾದ, ಮುಖ್ಯವಾಗಿ ಜನರಿಗೆ ಜ್ಞಾನ ಪ್ರಕಾಶವಾದ, ಶ್ರೀ ವಾಯುದೇವರ ಸಂಬಂಧಿಯಾದ, ಪವಿತ್ರೀಕರಣ ಸಮರ್ಥವಾದ " ಶ್ರೀಮಧ್ವ " ರೆಂಬ ಶ್ರೀ ವಾಯುದೇವರ ಅವತಾರದಲ್ಲಿ ನನ್ನ ಮನಸ್ಸು ನೆಲೆಗೊಳ್ಳಲಿ!!
ಶ್ರೀ ಮಧ್ವವಿಜಯ...
ಮುಕುಂದಭಕ್ತೈ ಗುರುಭಕ್ತಿಜಾಯೈ -
ಸತಾಂ ಪ್ರಸತ್ತೈ ಚ ನಿರಂತರಾಯೈ ।
ಗರೀಯಸೀ೦ ವಿಶ್ವಗುರೋರ್ವಿ-
ಶುದ್ಧಾ೦ ವಕ್ಷ್ಯಾಮಿ -
ವಾಯೋರವತಾರಲೀಲಾಮ್ ।।
ಶ್ರೀ ವಾಯುದೇವರು ಮೋಕ್ಷ ಯೋಗ ಜೀವರಿಗೆ ಗುರುವಾಗಿರುವುದರಿಂದ " ವಿಶ್ವಗುರು " ಯೆಂದೆನಿಸಿರುವರು. 
ಶ್ರೀ ವಾಯುದೇವರು ಶ್ರೀ ಹನುಮದವತಾರ, ಶ್ರೀ ಭೀಮಸೇನಾವತಾರ, ಶ್ರೀ ಮಧ್ವಾವತಾರಗಳೆಂಬ ಮೂರು ಅವತಾರಗಳನ್ನು ಸ್ವೀಕರಿಸಿರುವರು.
ಆ ಮೂರು ಅವತಾರಗಳಲ್ಲಿಯೂ ನಾನಾ ವಿಧಗಳಾದ ಲೀಲೆಗಳನ್ನು ಮಾಡಿರುವರು. 
ಆ ಲೀಲೆಗಳೆಲ್ಲವೂ ಪರಿಶುದ್ಧವಾದವುಗಳೂ - ಅತಿ ಶ್ರೇಷ್ಠವಾದವುಗಳೂ ಮತ್ತು ಮೋಕ್ಷಕ್ಕೆ ಸಾಧನವಾದವುಗಳು.
ಮೋಕ್ಷದಾಯಕವಾದದ್ದು ಮುಕುಂದನ ಭಕ್ತಿ. 
ಆ ಮುಕುಂದನ ಭಕ್ತಿ ಗುರುಗಳ ಭಕ್ತಿಯಿಂದ ಹುಟ್ಟುತ್ತದೆ. 
ಅದು ಮಾತ್ರವಲ್ಲ. ಸಜ್ಜನರ ಅನುಗ್ರಹವೂ ಮುಕುಂದನ ಭಕ್ತಿಗೆ ಸಾಧನವಾಗುತ್ತದೆ. 
ಆ ಸಜ್ಜನರ ಅನುಗ್ರಹವನ್ನು ಎಡೆಬಿಡದಂತೆ ಸಾಧಿಸಬೇಕು. ಅದಕ್ಕಾಗಿ ಶ್ರೀ ವಾಯುದೇವರ ಅವತಾರ ಲೀಲೆಗಳನ್ನು ಹೇಳುವೆನು!!
" ಶ್ರೀ ಸಹ್ಲಾದಾಂಶ ಜಗನ್ನಾಥಾದಾಸರು " ಹರಿಕಥಾಮೃತಸಾರ - ಮಂಗಳಾಚರಣ ಸಂಧಿ " ಯಲ್ಲಿ...
ಆರು ಮೂರೆರಡೊಂದು ಸಾವಿರ ।
ಮೂರೆರಡು ಶತ ಶ್ವಾಸ ಜಪಗಳ ।
ಮೂರು ವಿಧ ಜೀವರೊಳಗಬ್ಜಜಕಲ್ಪಪರಿಯಂತ ।।
ತಾ ರಚಿಸಿ ಸತ್ವರಿಗೆ ಸುಖ । ಸಂ ।
ಸಾರ ಮಿಶ್ರರಿಗಧಮ । ಜನರಿಗ ।
ಪಾರ ದುಃಖಗಳೀವ ಗುರು ಪವಮಾನ ಸಲಹೆಮ್ಮ ।।
" ಆರು ಮೂರೆರಡೊಂದು ಸಾವಿರ "
6 x 3 = 18 + 2 + 1 = 21 x 1000 = 21000
" ಮೂರೆರಡು ಶತ "
3 x 2 = 6 x 100 = 600
ಒಟ್ಟು = 21600
ಶ್ವಾಸ ಜಪಗಳ = 21600 ಶ್ವಾಸ ಜಪಗಳ ಷಡಕ್ಷರ ಹಂಸ ಮಂತ್ರ ಜಪಗಳನ್ನು ಪ್ರತಿ ದಿವಸದಲ್ಲಿ
ಮೂರು ವಿಧ ಜೀವರೊಳಗೆ = ಸಾತ್ವಿಕ, ರಾಜಸ, ತಾಮಸ ಜೀವಿಗಳಲ್ಲಿದ್ದು
ಅಬ್ಜಜ ಕಲ್ಪ ಪರಿಯಂತ = ಶ್ರೀ ಚತುರ್ಮುಖ ಬ್ರಹ್ಮದೇವರ ಕಲ್ಪ ಪರ್ಯಂತ
ತಾ = ತಾವು ( ಶ್ರೀ ವಾಯುದೇವರು
ರಚಿಸಿ = ಜಪಿಸಿ
ಸತ್ವರಿಗೆ ಸುಖ = ಸಾತ್ವಿಕ ಜೀವಿಗಳಿಗೆ ಮುಕ್ತಿ ಸುಖವನ್ನೂ
" ಸಂಸಾರ ಮಿಶ್ರರಿಗೆ "
ರಾಜಸ ಜೀವಿಗಳಿಗೆ ಸುಖ ದುಃಖ ಮಿಶ್ರವಾದ ಸಂಸಾರವನ್ನು
ಅಧಮ ಜನರಿಗೆ ಅಪಾರ ದುಃಖಗಳ = ತಾಮಸ ಜನರಿಗೆ 
ಸಹಿಸಲಸಾಧ್ಯವಾದ ದುಃಖಗಳುಳ್ಳ ಅಂಧಃತಮಸ್ಸನ್ನು
ಈವ = ಕೊಡುವ
" ಗುರು ಪವಮಾನ "
ಗುರುಗಳಾದ ಶ್ರೀ ವಾಯುದೇವರೇ ( ಶ್ರೀ ಮುಖ್ಯಪ್ರಾಣದೇವರೇ )
" ಸಲಹೆಮ್ಮ "
ನಮ್ಮನ್ನು ಪಂಚಭೇದ ತಾರತಮ್ಯಾದಿ - ಹರಿ ಸರ್ವೋತ್ತಮತ್ವಾದಿ ಜ್ಞಾನ ಕೊಟ್ಟು ಕಾಪಾಡಿರಿ!!
" ಶ್ರೀ ಅಪ್ಪಣ್ಣಾಚಾರ್ಯ ಕೃತ ಶ್ರೀ ರಾಘವೇಂದ್ರತೀರ್ಥರು "
ಅಪರೊಕ್ಷೀಕೃತಶ್ರೀಶಃ 
ಸುಮುಪೇಕ್ಷಿತ ಭಾವಜ: ।
ಅಪೇಕ್ಷಿತಪ್ರದಾತಾನ್ಯೋ 
ರಾಘವೇಂದ್ರಾನ್ನ ವಿದ್ಯತೇ ।।
ಅಪರೊಕ್ಷೀಕೃತ = ಪ್ರತ್ಯಕ್ಷವಾಗುವಂತೆ ಮಾಡಲ್ಪಟ್ಟ
ಶ್ರೀಶಃ = ಶ್ರೀ ಮಹಾಲಕ್ಷ್ಮೀಪತಿಯಾದ ಶ್ರೀ ಹರಿಯುಳ್ಳ
ಸಮುಪೇಕ್ಷಿತ = ಅತ್ಯಂತ ಉದಾಸೀನ ಮಾಡಲ್ಪಟ್ಟ
ಭಾವಜ: = ಮನೋವಿಕಾರಗಳಿಂದ ಹುಟ್ಟಿದ ಮನ್ಮಥನುಳ್ಳ
ಅಪೇಕ್ಷಿತಪ್ರದಾತಾ = ಸರ್ವರಿಂದಲೂ ಅಪೇಕ್ಷಿಸಲ್ಪಟ್ಟ ಫಲಗಳನ್ನು ಚೆನ್ನಾಗಿ ಕೊಡುವವರು
ರಾಘವೇಂದ್ರಾತ್ = ಶ್ರೀ ರಾಘವೇಂದ್ರತೀರ್ಥರ ದೆಸೆಯಿಂದ
ಅನ್ಯ: = ಮತ್ತೊಬ್ಬರು
ನ ವಿದ್ಯತೇ = ಇಲ್ಲ
ಶ್ರೀ ರಾಘವೇಂದ್ರ : ಸಕಾಲಪ್ರದಾತ
ಸ್ವಪಾದಕಂಜದ್ವಯ ಭಕ್ತಿಮದ್ಭ್ಯ: ।
ಅಘಾದ್ರಿಸಂಭೇದನ ದೃಷ್ಟಿವಜ್ರ:
ಕ್ಷಮಾಸುರೇಂದ್ರೋsವತು ಮಾಂ ಸದಾsಯಮ್ ।।
ತಮ್ಮ ಪಾದ ಕಮಲಗಳಲ್ಲಿ ಭಕ್ತಿಯುಳ್ಳವರಿಗೆ ಸಕಲ ಅಭೀಷ್ಟಗಳನ್ನು ಕೊಡುವ - ಪಾಪಗಳೆಂಬ ಪರ್ವತವನ್ನು ಸಂಪೂರ್ಣ ನಾಶಗೊಳಿಸುವಲ್ಲಿ ಸಮರ್ಥವಾದ ದೃಷ್ಟಿಯೆಂಬ ವಜ್ರಾಯುಧವುಳ್ಳ ದೇವತೆಗಳಲ್ಲಿ ಮತ್ತು ಬ್ರಾಹ್ಮಣರಲ್ಲಿ ಶ್ರೇಷ್ಠರಾದ ಶ್ರೀ ರಾಘವೇಂದ್ರತೀರ್ಥರು ನಮ್ಮ ಸದಾ ರಕ್ಷಿಸಲಿ!!
ಸಕಲ ಪ್ರದಾತ = ಎಲ್ಲವನ್ನು ಕೊಡುವವರು ಎಂದರ್ಥ.
ಕಲಾ = ಲಕ್ಷ್ಮೀ
" ಕಲಯಾ ಸಹಿತಃ ಸಕಲ: " ಎಂದರೆ = ಶ್ರೀ ಮಹಾವಿಷ್ಣು
" ಮಹಾಭಾರತ " ದಲ್ಲಿ...
" ನಿಷ್ಕಲಂ ಸಕಲಂ ಬ್ರಹ್ಮ ನಿರ್ಗುಣಂ ಗುಣ ಗೋಚರಮ್ " - ಎಂದು ಶ್ರೀ ಮಹಾವಿಷ್ಣುವನ್ನು " ಸಕಲ " ಎಂದು ಹೇಳುತ್ತದೆ.
ಸಕಲಂ = ಪರಬ್ರಹ್ಮ
ದದಾತಿ = ಶಿಷ್ಯೇಭ್ಯಃ
ಉಪದಿಶತಿ = ಭಕ್ತರಿಗೋಸ್ಕರ ಭಗವಂತನನ್ನು ಕುರಿತು ತಮ್ಮ ಗ್ರಂಥಗಳ ಉಪದೇಶಗಳ ಮೂಲಕ
" ತದ್ದಾನಂ ಚಾಧ್ಯಪನೇನ ವ್ಯಾಖ್ಯಯ ವಿಲಿಖ್ಯ ಅರ್ಪಣೇನ ಚ " ಎಂದು ಶ್ರೀ ರಾಯರೇ ಸ್ವತಃ ಖಂಡಾರ್ಥದಲ್ಲಿ ಹೇಳಿರುವಂತೆ..
ವಿಷ್ಣು ಸರ್ವೋತ್ತಮತ್ವ ಜ್ಞಾನವನ್ನು ನೀಡಿ ಮೋಕ್ಷವನ್ನು ಪಡೆಯುವ ಅರ್ಹತೆಯನ್ನು ಕೊಡುವವರು ಶ್ರೀ ರಾಘವೇಂದ್ರತೀರ್ಥ ಗುರುಸಾರ್ವಭೌಮರು.
" ಸ್ವಪಾದಕಂಜದ್ವಯ ಭಕ್ತಿಮದ್ಭ್ಯ: " ಎಂಬಲ್ಲಿ " ಸ್ವ " ಶಬ್ದವು " ಸ್ವತಂತ್ರ "ಎಂಬ ಅರ್ಥವನ್ನು ಹೇಳುತ್ತದೆ.
ಶ್ರೀಮದಾಚಾರ್ಯರು " ತತ್ತ್ವಸಂಖ್ಯಾನ " ದಲ್ಲಿ ತತ್ತ್ವಗಳನ್ನು ವಿಭಾಗಿಸುವಾಗ....
ಸ್ವತಂತ್ರಮಸ್ವತಂತ್ರ೦ ಚ 
ದ್ವಿವಿಧಂ ತತ್ತ್ವಮಿಷ್ಯತೇ ।
ಸ್ವತಂತ್ರೋ ಭಗವಾನ್ವಿಷ್ಣು: ।।
ಎಂದು " ವಿಷ್ಣುವೇ ಸ್ವತಂತ್ರ ತತ್ತ್ವ " ವೆಂದು ಹೇಳಿದ್ದಾರೆ. 
ಹಾಗಾದರೆ ಸ್ವತಂತ್ರನಾದ ಶ್ರೀ ಮಹಾವಿಷ್ಣುವಿನ ಪಾದ ಕಮಲಗಳಲ್ಲಿ ಭಕ್ತಿಯುಳ್ಳವರೆಂದು ಅರ್ಥವಾಗುತ್ತದೆ.
ಅಂದರೆ, ಶ್ರೀ ಪರಮಾತ್ಮನಲ್ಲಿ ಭಕ್ತಿ ಇರುವವರಿಗೆ ಮಾತ್ರ ಸಕಲಪ್ರದಾತರು. 
ಭಗವದ್ವೇಷಿಗಳನ್ನು ಶ್ರೀ ರಾಯರು ಎಂದಿಗೂ ಅನುಗ್ರಹಿಸಲಾರರು.
ಅಂಥಹಾ ಶ್ರೀ ಹರಿಯಲ್ಲಿ ಭಕ್ತಿಯುಳ್ಳವರು ಶ್ರೀ ರಾಯರ ಭಕ್ತರೂ ಆಗಿದ್ದಾರೆ!!
" ಕ್ಷಮಾಸುರೇಂದ್ರ: " ಅಂದರೆ...
1. ತಮ್ಮ ಶಮದಮಾದಿ ಗುಣಗಳಿಂದಲೂ; ತತ್ತ್ವ ಜ್ಞಾನದಿಂದಲೂ ಈ ಭೂಮಿಯ ಮೇಲೆ ಶ್ರೀ ರಾಘವೇಂದ್ರತೀರ್ಥ ಗುರುಸಾರ್ವಭೌಮರು ಪ್ರಕಾಶಿಸುವರು.
2. ಈ ಭೂಮಿಯಲ್ಲಿ ಭಕ್ತರ ಇಷ್ಠಾರ್ಥಗಳನ್ನು ಈಡೇರಿಸುವವರಲ್ಲಿ ಅಗ್ರಗಣ್ಯರು.
3. ಈ ಭೂಮಿಯಲ್ಲಿ ಅಸುರರಾಗಿ ( ಶ್ರೀ ಪ್ರಹ್ಲಾದರಾಜ ) ಅವತರಿಸಿದರೂ ಶ್ರೀ ಹರಿಯ ಪರಮ ಭಕ್ತರು.
4. ಶ್ರೀ ಮುಖ್ಯಪ್ರಾಣದೇವರಲ್ಲಿ ಅವರ ಶಾಸ್ತ್ರ ವ್ಯಾಖ್ಯಾನಗಳಿಂದ ಭಕ್ತಿ ಮಾಡುವ ಭಕ್ತರಲ್ಲಿ ಶ್ರೇಷ್ಠರು ಶ್ರೀ ರಾಯರು!!
ಶ್ರೀ ರಾಘವೇಂದ್ರತೀರ್ಥ ಗುರುಸಾರ್ವಭೌಮರು ಶ್ರೀ ಪ್ರಹ್ಲಾದಾವತಾರದಲ್ಲಿ ಶ್ರೀ ನಾರದ ಮಹರ್ಷಿಗಳ ಅನುಗ್ರಹದಿಂದ ಗರ್ಭದಲ್ಲಿರುವಾಗಲೇ ಭಗವಂತನನ್ನು ಸಾಕ್ಷಾತ್ಕರಿಸಿಕೊಂಡವರು. 
ಅಂದಿನಿಂದ ಇಂದಿನವರೆಗೂ ಸಾಕ್ಷಾತ್ಕರಿಸಿಕೊಳ್ಳುತ್ತಿರುವವರು. 
ಜಿತೇಂದ್ರಿಯರು. ಭಕ್ತರ ಸಮಸ್ತ ಅಭಿಲಾಷೆಗಳನ್ನು ಸಂಪೂರ್ಣವಾಗಿ ಕೊಡುವುದಕ್ಕೆ ಅತ್ಯಂತ ಸಮರ್ಥರು ನಮ್ಮ ಶ್ರೀ ಗುರುರಾಜ ಗುರುಸಾರ್ವಭೌಮರು!!
ಶ್ರೀ ಗುರುಶ್ರೀಶವಿಠಲರು...
ಹಲವು ತೀರ್ಥಗಳೇಕೆ -
ಹಲವು ಕ್ಷೇತ್ರಗಳೇಕೆ ।
ಫಲ ಸುಲಭದಲ್ಲಿರಲು ।
ಬಲವು ಇದ್ದದ್ದರೊಳು -
ಪ್ರದಕ್ಷಿಣೆ ಸುಪದಜಲ ।
ತಲೆಯಲ್ಲಿ ಧರಿಸಿ ನಿತ್ಯ ।
ಮಲ ರಹಿತನು ಆಗಿ -
ದಂಡ ಪ್ರಣಾಮವ ಮಾಡೆ ।
ಒಲಿವರು ಕರುಣದಲಿ ಬೇಗ ।
ಜಲಜನಾಭನು ನಾಲ್ಕು -
ರೂಪದಿಂದಿವರಲ್ಲಿ ।
ಸಿಲುಕಿ ಪೂಜೆಗೊಂಬ -
ಸತತ ಮೋಕ್ಷದಾತಾ ।।
ನೋಡಲೇ ಮನವೆ -
ಕೊಂಡಾಡು ಗುರುಗಳ ಪಾದ ।
ಈಡು ಯಿಲ್ಲವೋ ಪುಣ್ಯಕೆ ।
ನಾಡೊಳಗೆ ಗುರುರಾಘವೇಂದ್ರರ -
ಸೇವೆ ಮಾಡಿದವ ಪರಮ ಧನ್ಯ - ಮಾನ್ಯ ।।
ಪ್ರಮಾಣ :
" ಶ್ರೀ ಮನ್ಮಹಾಭಾರತ ತಾತ್ಪರ್ಯ ನಿರ್ಣಯ " ದಲ್ಲಿ...
ಕ್ಷೇತ್ರಂ ತದಾಸೀದ್ಧರಿ ಲೋಕ ಸಮ್ಮಿತಮ್ ।
ಯದೀಯುರತ್ರಾಖಿಲ ಸಜ್ಜನಾ ಯುತಿಮ್ ।
ನಾನಾಪ್ತ ಕಾಮಶ್ಚ ಯತೋ -
ಬಭೂವುರ್ನ್ನಿಯತ್ನ ದೃಶ್ಯಶ್ಚ ಯತ್ರೋsತ್ರ ಕೇಶವಃ ।।
1. ಎಲ್ಲಿ ಸಕಲ ಸಜ್ಜನರ ಸಮ್ಮೇಳವೋ;
2. ತಮ್ಮ ತಮ್ಮ ಕಾಮನೆಗಳನ್ನು ಪಡೆಯದವರು ಇರಲಿಲ್ಲವೋ;
3. ಪ್ರಯತ್ನವಿಲ್ಲದೆ ಜಗನ್ನಾಥನಾದ ಶ್ರೀ ಹರಿಯ ದರ್ಶನ ಆಗುವುದೋ
ಅಂಥಹಾ ಕ್ಷೇತ್ರ ( ಕುರುಕ್ಷೇತ್ರವು ) ಶ್ರೀ ಹರಿಯ ಮಂದಿರವಾದ ವೈಕುಂಠ ಸಮವಾಯಿತೆಂದು ಶ್ರೀಮದಾಚಾರ್ಯರು ಹೇಳಿದ ಪ್ರಮೇಯವು ಶ್ರೀ ಲಕ್ಷ್ಮೀನಾರಾಯಣರ ನಿತ್ಯ ಸಾನ್ನಿಧಾನಯುಕ್ತರೂ - ಶ್ರೀ ವಾಯುದೇವರ ನಿತ್ಯಾವೇಶಯುಕ್ತರು ಆದ ಶ್ರೀ ರಾಘವೇಂದ್ರತೀರ್ಥ ಗುರುಸಾರ್ವಭೌಮರು ನೆಲೆ ನಿಂತ ಶ್ರೀ ಕ್ಷೇತ್ರ ಮಂತ್ರಾಲಯಕ್ಕೂ ಅನ್ವಯವಾಗುತ್ತದೆ.
ಎಲ್ಲರಿಗೂ ಗುರುಕಾರುಣ್ಯವೇ ಶ್ರೇಷ್ಠ ರಕ್ಷಾ ಕವಚ.
" ಗುರು ಪೌರ್ಣಿಮಾ ಶುಭಾಶಯಗಳು "
by ಆಚಾರ್ಯ ನಾಗರಾಜು ಹಾವೇರಿ
    ಗುರು ವಿಜಯ ಪ್ರತಿಷ್ಠಾನ
*
" ಶ್ರೀ ಕೃಷ್ಣ೦ ವಂದೇ ಜಗದ್ಗುರುಮ್ "
ಹರಿದಾಸರಾದವರು ಹೇಗೆ ಇರಬೇಕು?
ಅವರು ಯಾವ ರೆಟಿ ಭಕ್ತಿಯನ್ನು ಆಚರಿಸಬೇಕು?
ಗುರುವಿನ ಅನುಗ್ರಹ ಹೇಗೆ ಸಂಪಾದಿಸಬೇಕು?
ಅವರ ಮುಖ್ಯ ಲಕ್ಷಣಗಳು ಯಾವುವು?
ಎಂಬುದನ್ನು ಕುರಿತು ಶ್ರೀ ಪುರಂದರದಾಸರು ಅತ್ಯದ್ಭುತವಾಗಿ ತಿಳಿಸಿದ್ದಾರೆ.
ಸಾಧಕರಾದ ಶ್ರೀ ಹರಿ ಭಕ್ತರಿಗೆ ಪದೇ ಪದೇ ನಿರಾಶೆಗಳು ಸಂಭವಿಸಬಹುದು.
ಯಾವ ಭಕ್ತರಿಗೂ ನೆನೆದ ಕೂಡಲೇ ದೈವ ಸಾಕ್ಷಾತ್ಕಾರವಾಗುವುದಿಲ್ಲ.
ಅದಕ್ಕಾಗಿ ಅವರು ಮೊದಲು ಗುರುವಿನ ಉಪದೇಶವನ್ನು ಪಡೆದು - ಅನಂತರ ಸಂತತವಾಗಿ ಶ್ರಮಿಸಬೇಕಾಗುತ್ತದೆ.
ಗುರು ಕರುಣವನ್ನು ದೊರಕಿಸಿಕೊಳ್ಳದೆ ಹರಿ ಕರುಣಕ್ಕೆ ಒಮ್ಮಿಂದೊಮ್ಮೆಗೆ ಆಶೆ ಪಟ್ಟರೆ ಅದು ನಿರರ್ಥಕವಾಗುವುದು.
ಅದಕ್ಕಾಗಿ ಮೊದಲು ಗುರುವಿನ ಗುಲಾಮನಾಗಿ ಅವರ ಕೃಪಾಮಯವಾದ ಬೋಧೆಯನ್ನು ಪಡೆಯಬೇಕು.
ಗುರು ಕರುಣ ಹೊಂದುವುದು -
ಪರಮ ದುರ್ಲಭವಯ್ಯ ।
ಪರಿ ಪರಿ ವ್ರತಾಳಗಳಾ-
ಚರಿಸಲು ಫಲವೇನು ।
ಶರೀರಾದಿ ಪುತ್ರ ಮಿತ್ರ -
ಕಳತ್ರ ಬಾಂಧವರು ।
ಇರಿಸೋರೆ ಸದ್ಗತಿಗೆ -
ಸಾಧನವು ನಿರುತವು ।
ಗುರು ಪಾದ ನಿಜವಾಗಿ -
ಮನದಲ್ಲರಿತು ಭಜಿಸಲು ।
ಅಖಿಳ ಸಂಪದವಕ್ಕು -
ಪುರಂದರ  ವಿಠ್ಠಲ ।।
ಯೆಂದು ತಿಳಿಸುವರು.
ಇಂಥಾ ಅಮೂಲ್ಯವಾದ ಗುರು ಕರುಣದ ಪ್ರಾಪ್ತಿ ಶ್ರೀ ಹರಿ ಭಕ್ತರ ಜೀವನದಲ್ಲಿ ಅತ್ಯಂತ ಪುಣ್ಯೋದಯದ ಗಳಿಗೆಯೇ ಸರಿ!
ಶ್ರೀ ಪುರಂದರ ದಾಸರಿಗೆ ಶ್ರೀ ವ್ಯಾಸರಾಜ ಗುರುಸಾರ್ವಭೌಮರ ಕರುಣೆ ದೊರೆತ ಸಂದರ್ಭದಲ್ಲಿ ಶ್ರೀ ದಾಸವರ್ಯರು ಮೈ ಮರೆತು ಹಾಡಿರುವ ಒಂದು ಉಗಾಭೋಗವನ್ನು ಈ ಸಂದರ್ಭದಲ್ಲಿ ನೆನೆಯುವುದು ನಮ್ಮ ಧರ್ಮ.
" ಪುರಂದರ  ವಿಠ್ಠಲ " ನೆಂಬ ಅಂಕಿತವನ್ನು ಗುರುಗಳಿಂದ ಪಡೆದ ಆ ದಿನ ಶ್ರೀ ಪುರಂದರ ದಾಸರ ಜೀವನದಲ್ಲಿ ಚಿರಸ್ಮರಣೀಯವಾದುದು.
ಇಂದಿನ ದಿನವೇ ಶುಭದಿನವು ।
ಇಂದಿನ ವಾರ ಶುಭವಾರ ।
ಇಂದಿನ ತಾರೆ ಶುಭತಾರೆ ।
ಇಂದಿನ ಯೋಗ ಶುಭಯೋಗ ।
ಇಂದಿನ ಕರಣ ಶುಭಕರಣ ।
ಇಂದಿನ ಲಗ್ನ ಶುಭಲಗ್ನ ।
ಇಂದು ಪುರಂದರರಾಯನ । ಪಾ ।
ಡಿದ ದಿನವೇ ಶುಭದಿನವೂ ।।
ಯೆನ್ನುವ ಈ ಮಾತುಗಳಲ್ಲಿ ಎಷ್ಟು ಭಾವಾವೇಶವೂ - ಎಷ್ಟು ಹರ್ಷವೂ ಮಿಡಿಯುತ್ತಿವೆಯೆನ್ನುವುದನ್ನು ಹೆಚ್ಚು ವಿವರಿಸಬೇಕಾಗಿಲ್ಲ.
ಹರಿದಾಸರು ಪರಮ ದುರ್ಲಭವಾದ ಗುರು ಕರುಣವನ್ನು ಸಂಪಾದಿಸಿದ ಮೇಲೆ ಶ್ರೀ ಹರಿಯನ್ನು ಸಾಕ್ಷಾತ್ತಾಗಿ ಕಾಣುವುದಕ್ಕೆ ಮುಂಚೆ ನೂರಾರು ಅಗ್ನಿ ಪರೀಕ್ಷೆಗಳಲ್ಲಿ ತೇರ್ಗಡೆಯಾಗಬೇಕು.
ನಿನ್ನ ಭಕ್ತರೆನಿಸಿದ ಜನರು ಭಂಗ ಪಡಲಿಬೇಕು ।
ದಿನ ಪ್ರತಿದಿನ ಅನ್ನ ಉದಕ ವಸ್ತ್ರಗಳು ಕಾಣದೆ ಇರಬೇಕು ।
ಬೆನ್ಹತ್ತಿ ರೋಗಗಳು ಹತ್ತಿ ಇರಲು ಬೇಕು ।
ತನ್ನವರ ಕೈಯಿಂದ ಛೀ ಎನಿಸಿಕೊಳಬೇಕು ।
ಪನ್ನಂಗ ಶಯನ ಶ್ರೀ ಪುರಂದರ  ವಿಠ್ಠಲ ।।
ಯೆಂದು ಮನಗಾಣುವರು.
ನಿರಾಶೆಯೇ ಚಿತ್ತ ಸಂಸ್ಕಾರಕ್ಕೆ ಸಿದ್ಧೌಷಧವೆಂದು ಅರಿವಾದ ಮೇಲೆ ಹರಿದಾಸರು ಬೇರಾವುದಕ್ಕೂ ಹೆದರಲಾರರು.
ಒಂದೊಂದು ನಿರಾಶೆಯೂ ತನ್ನ ಗುರಿಯನ್ನು ಸಾಧಿಸುವುದಕ್ಕೆ ಒಂದೊಂದು ಮೆಟ್ಟಲು ಎಂದು ಭಾವಿಸುವರು.
ಮೇಲಿಂದ ಮೇಲೆ ಕಷ್ಟಗಳೇ ಬರಲಿ ಎಂದು ಅವುಗಳನ್ನೇ ಹಿಂಬಾಲಿಸಿ ಹೋಗುವುದಕ್ಕೂ ಸಹ ಅವರ ಮನಸ್ಸು ಅನುವಾಗುವುದು.
ತಿಂಬರೆ ಅನ್ನ ಹುಟ್ಟಲಿ ಬೇಡ ।
ಅನ್ನ ಹುಟ್ಟಿದರೆ ಬಟ್ಟೆ ದೊರಕಲಿ ಬೇಡ ।
ಬಟ್ಟೆ ದೊರಕಿದರೆ ಇಂಪು ತೋರಲಿಬೇಡ ।
ಇಂಪು ನಿನ್ನ ಪಾದಾರವಿಂದದಲಿ ಸಂತೋಷ ತೋರಿಸಯ್ಯ ।
ಇಂದಿರಾರಾಧ್ಯ ಶ್ರೀ ಪುರಂದರ  ವಿಠ್ಠಲ ।।
ಎಂದು ಭಾವಿಸುವಲ್ಲಿ ಎಲ್ಲವೂ ಶ್ರೀ ಹರಿ ಪರಮಾತ್ಮನ ಅನುಗ್ರಹವೆಂದೇ ತೋರಿ ಬಂದು - ಅವರ ಭಕ್ತಿ ದೃಢವಾಗುವುದು.
ಆದುದರಿಂದ ಈ ಬಗೆಯಾದ ನೋವು - ನಿರಾಶೆಗಳು ಹೆಚ್ಚಿದಂತೆಲ್ಲ ಅವರ ಸ್ಥೈರ್ಯ ಬಳಿಯುವುದು.
ಹರಿ ನೀ ಒಲಿದಂತೆ ಮಾಡು ।
ಒಲಿದರೆ ತಿರಿದಂತೆ ಮಾಡು ।
ತಿರಿದರೆ ದಾರು ನೀಡದಂತೆ ಮಾಡು ।
ದಾರು ನೀಡಿದರೆ ಪೊಟ್ಟೆ ತುಂಬದಂತೆ ಮಾಡು ।
ಪೊಟ್ಟೆ ತುಂಬಿದರೆ ಬಟ್ಟೆ ದೊರೆಯದಂತೆ ಮಾಡು ।
ಬಟ್ಟೆ ದೊರೆತರೆ ಇಂಬು ದೊರೆಯದಂತೆ ಮಾಡು ।
ಇಂಬು ದೊರೆಯದಿದ್ದರೆ ರಂಗ ನಿನ್ನ ಪಾದಾರವಿಂದದಲ್ಲಿ ।
ಇಂಬಿಟ್ಟು ಸಲಹೋ ಪುರಂದರ  ವಿಠ್ಠಲ ।।
ಯೆಂಬುದಾಗಿ - ಹರಿಭಕ್ತರಾದವರೇ ಒಂದಾದ ಮೇಲೆ ಒಂದರಂತೆ ಕಷ್ಟ - ನಷ್ಟಗಳನ್ನು ತನಗೆ ತಾನೇ ಬಯಸುತ್ತಿದ್ದರೆ - ಯಾವ ದೇವರಿಗೆ ತಾನೇ ಮನಸ್ಸು ಕರಗದು!
ನಿಜ !
ಬಂದದ್ದೆಲ್ಲ ಬರಲಿ ।  ಗೋ ।
ವಿಂದನ ದಯವೊಂದಿರಲಿ ।।
" ಆದದ್ದೆಲ್ಲ ಒಳಿತೇ ಆಯಿತು "
ಯೆಂಬ ಹರಿದಾಸರಿಗೆ ಕಷ್ಟವೂ ಒಂದೇ - ಸುಖವೂ ಒಂದೇ !
ತನ್ನದು ಎಂಬ ಮಾಮಕಾರವಿಲ್ಲದ ಹರಿದಾಸರ ಹೃದಯದಲ್ಲಿ ಸರ್ವವೂ ಶ್ರೀ ಹರಿ ಪರಮಾತ್ಮನಿಗೆ ಅರ್ಪಣೆಯಾಗಿರುತ್ತದೆ.
ಕಾವ ದಾವಿವವು ನೀನೆ ಕೊಲುವ ದೈವವು ನೀನೆ ।
ಕೈವಲ್ಯ ಫಲದಾತ ಕೇಶವನು ನೀನೆ ।
ಯಾವ ದೈವಕ್ಕೆ ಈ ವೈಭವವನು ಕಾಣೆ ।
ರಾವಣಾಂತಕ ಸ್ವಾಮಿ ಪುರಂದರ  ವಿಠ್ಠಲ ।।
ಯೆಂಬುದಾಗಿ ದೇವರಲ್ಲಿ ಅಚ್ಛಳಿಯದ ನಂಬಿಕೆಯನ್ನು ಇಟ್ಟುಕೊಂಡು....
ಕಡೆ ಹಾಯಿಸುವುದು ನಿನ್ನ ಭಾರ ।  ನಿನ್ನ ನೆನೆಯುವುದು ಎನ್ನ ಭಾರ । ಎನ್ನ ಸತಿ ಸುತರಿಗೆ ಹರಿ ನೀನೇ ಗತಿ ।  ನಿನಗೆ ಒಪ್ಪಿಸುವುದು ಎನ್ನ ರೀತಿ । ಪಡಿ ಹಾಕಿ ಸಲಹುವುದು ನಿನ್ನ ಧರ್ಮ । ನಿ । ನ್ನಡಿಗಳಿಗೆ ನಮಿಸುವುದು ಎನ್ನ ಕರ್ಮ । ಎನ್ನ ತಪ್ಪುಗಳೆಣಿಸೆ ಸಲ್ಲ । ನಿನ್ಹೊರತು ಬದುಕುವುದು ಎನ್ನದಲ್ಲ । ನಿನ್ನ ಚಿತ್ತಕ್ಕಾಗಿ ಮಾನಾಭಿಮಾನ । ನಾನೊಪ್ಪಿಸಿ ಕೊಡದಿರೆ ಅಪಮಾನ । ಹರಿಯೆ ನಿನಗೆ ನಾ ಮೊರೆಯಿಡುವೆ ।  ಪುರಂದರ  ವಿಠ್ಠಲ ನಿನ್ನ ಪಾಡುವೆ ।।
ಹಾಗೆಯೇ...
ಮಾತಾಪಿತರು ನಿನಗಂದೆ ಮಾರಿದರೆನ್ನ ।
ನಾಥನೇ ನೀ ಸಲಹದಿದ್ದರೆ ದೇವ ।
ಯಾತಕೆ ಭಕ್ತವತ್ಸಲನೆಂದೆನಿಸಿಕೊಂಡೆ ।
ನಾ ತಡೆಯೆನೊ ನಿನ್ನ ಬಿರುದಿಗಂಜುವನಲ್ಲ ।
ಸಾತ್ವಿಕ ದೈವವೇ ಸಲಹೋ ಎನ್ನ । ಪ್ರ ।
ಖ್ಯಾತ ಪುರುಷ ಶ್ರೀ ಪುರಂದರ  ವಿಠ್ಠಲ ।।
ಎಂದು ಹೇಳಿ - ಅನವರತವೂ ಇಷ್ಟ ದೇವರಲ್ಲಿ ಮನಸ್ಸನ್ನು ದೃಢಗೊಳಿಸುವುದು ಹರಿದಾಸರ ಮನೋಧರ್ಮ.
ಬೇರೆ ಯಾವ ಚಿಂತನೆಯೂ ಹರಿದಾಸರ ಮನಸ್ಸಿನಲ್ಲಿ ಸುಳಿಯದು.
ಹಾಡಿದರೆ ಎನ್ನೊಡೆಯನ ಹಾಡುವೆ ।
ಬೇಡಿದರೆ ಎನ್ನೊಡೆಯನ ಬೇಡುವೆ ।
ಒಡೆಯಗೆ ಒಡಲನು ತೋರುತ ಎನ್ನ ।
ಬಡತನ ಬಿನ್ನಹ ಮಾಡುವೆ ।
ಒಡಯ ಪುರಂದರ  ವಿಠ್ಠಲರಾಯನ ।
ಅಡಿಗಳನು ಸಾರಿ ಬದುಕುವೆ ।।
ಎಂಬ ಈ ಮಾತುಗಳನ್ನು ಶ್ರೀ ಪುರಂದರದಾಸರು ತಮ್ಮ ವಿಶಿಷ್ಟವನ್ನೂ ಶ್ರೀ ಹರಿ ಪರಮಾತ್ಮನಿಗೆ ಹೇಗೆ ಮೀಸಲಾಗಿ ಒಪ್ಪಿಸಿಕೊಟ್ಟರು ಎನ್ನುವ ಸೊಗಸಾದ ಚಿತ್ರವು ಗೋಚರವಾಗುತ್ತದೆ.
ಇಷ್ಟು ಅನನ್ಯ ಚಿತ್ತದಿಂದ ಧ್ಯಾನ ಮಾಯುತ್ತಿರುವ ಭಕ್ತರನ್ನು ಕಂಡರೆ - ಶ್ರೀ ಹರಿ ಪರಮಾತ್ಮನಿಗೆ ಆನಂದವಾಗುವುದರಲ್ಲಿ ಸಂದೇಹವಿಲ್ಲ.
ಆದರೆ, ಶ್ರೀ ಹರಿ ಪರಮಾತ್ಮನಿಗೆ ತನ್ನ ಭಕ್ತರೊಂದಿಗೆ ಅಲ್ಪ ಸ್ವಲ್ಪವಾದರೂ ಸರಸವಾಡಬೇಕೆಂದು ಆಸೆಯೋ ಏನೋ!
ಏಕೆಂದರೆ... ಪರಮಾತ್ಮನು ತನ್ನ ಭಕ್ತರು...
ಮಲಗಿ ಪಾಡಿದರೆ ಕುಳಿತು ಕೇಳುವನು ।
ಕುಳಿತು  ಪಾಡಿದರೆ ನಿಂತು ಕೇಳುವನು ।
ನಿಂತು  ಪಾಡಿದರೆ ನಲಿದು ಕೇಳುವನು ।
ನಲಿದು ಪಾಡಿದರೆಸ್ವರ್ಗ ಸೂರೆ -
ಬಿಟ್ಟನೆಂಬ  ಪುರಂದರ  ವಿಠ್ಠಲ ।।
ಎಂಬುದಾಗಿ ಇನ್ನೊಂದು ಸಂದರ್ಭದಲ್ಲಿ ಶ್ರೀ ಪುರಂದರ ದಾಸರು ಬಹಳ ಮನೋಹರವಾಗಿ ಹಾಡಿರುತ್ತಾರೆ.
ಸರ್ವದಾ " ದೇವರು - ದೇವರು " ಎಂದು ಹಾತೊರೆಯುವ ಭಕ್ತರನ್ನು ಕಂಡರೆ ಕೆಲವರಿಗೆ ಹಿಡಿಯಲಾದರಷ್ಟು ನಗು ಬರಬಹುದು - ಹುಚ್ಚನೆಂದು ಹಾಸ್ಯ ಮಾಡಿ ಹೀಯಾಳಿಸಬಹುದು.
ದಾಸರಂಥವರಿಗೂ ಈ ಸ್ಥಿತಿ ತಪ್ಪಿದ್ದಲ್ಲ.
ಆದರೆ, ನೂರೆಂಟು ನೋವು ನಿರಾಶೆಗಳನ್ನು ಅನುಭವಿಸಲು ಸಿದ್ಧವಾಗಿರುವ ಪುಣ್ಯಾತ್ಮರಿಗೆ ಇದೊಂದು ತಾನೆ ಏನು ಮಾಡಲಾದೀತು?
ಹೊಗಳಿಕೆಗಿಂತಲೂ ತೆಗಳಿಕೆಯೇ ಮೇಲು ಎನ್ನುವ ದಾಸರಿಗೆ ಈ ಮೂದಲಿಕೆಯೂ ಸಹ ಒಂದು ರೀತಿಯಲ್ಲಿ ಗ್ರಾಹ್ಯವೆನ್ನಿಸುತ್ತದೆ.
ಹಂಗಿಸಿ ಹಂಗಿಸಿ ಎನಗೆ ಹರಿನಾಮ ನಿಲಿಸಿದರು ।
ಭಂಗಿಸಿ ಭಂಗಿಸಿ ಎನಗೆ ಬಯಲಾಸೆ ಕೆಡಿಸಿದರು ।
ಕಂಗೆಡಿಸಿ ಕಾಮ ಕ್ರೋಧವ ಬಿಡಿಸಿದರು ।
ಹಿಂದೆ ನಿಂದಿಸಿದವರೆ ಎನ್ನ ಬಂಧು ಬಳಗ ।
ಬಾಯಿಬಡಕರಿಂದ ನಾನು ಬದುಕಿದೆನೋ ಹರಿಯೇ ।
ಕಾಡಿ ಕಾಡಿ ಕೈವಲ್ಯಕ್ಕೆ ಪಥವಿತ್ತರು ।
ಕಾಸು ಹುಟ್ಟದಂತೆ ಪ್ರಾಯಶ್ಚಿತ್ತ ಮಾಡಿದರು ।
ಮೀಸಲು ಮಾಡಿಸಿದರು ಹರಿಯ ಒಡವೆಯೆಂದು ।
ಲೇಸು ಕೊಡೊ ನಮ್ಮಪ್ಪ ಪುರಂದರ  ವಿಠ್ಠಲ ನಿನ್ನ ।
ದಾಸರ ದಾಸನೆಂದೆನಿಸಯ್ಯ ಹರಿಯೇ ।।
ಎನ್ನುವರು - ಈ ಮಾತುಗಳನ್ನು ಕೇಳಿದರೆ ಶ್ರೀ ಪುರಂದರದಾಸರ ಸಹನೆ ಎಷ್ಟುಮಟ್ಟಿನದು ಎಂಬುದು ಸ್ಪಷ್ಟವಾಗುತ್ತದೆ.
ಇಷ್ಟು ಪರಿಪಕ್ವವಾದ ಮನಸ್ಸಿಗೆ ಪ್ರತಿಯೊಂದು ತೊಡಕು ಒಂದು ಹೂಮಾಲೆಯಾಗುತ್ತದೆ.
ಪ್ರತಿಯೊಂದು ತೆಗಳಿಕೆಯೂ ಹೆಚ್ಚು ಚೇಚ್ಚಾಗಿ ಹುಮ್ಮಸ್ಸನ್ನುಂಟು ಮಾಡುತ್ತದೆ.
ಎಲ್ಲರಿಗೂ ಗುರುಕಾರುಣ್ಯವೇ ಶ್ರೇಷ್ಠ ರಕ್ಷಾ ಕವಚ.
" ಗುರು ಪೌರ್ಣಿಮಾ ಶುಭಾಶಯಗಳು "
ಆಚಾರ್ಯ ನಾಗರಾಜು ಹಾವೇರಿ
ಗುರು ವಿಜಯ ಪ್ರತಿಷ್ಠಾನ
***




No comments:

Post a Comment