SEARCH HERE

Wednesday 10 July 2019

ಚಂದ್ರ ಗ್ರಹಣ chandra grahana lunar eclipse 16 july 2019



Grahana Vichara 

Grahana period:

17th Wednesday early morning 1.32am to 4.30am.

Food consumption allowed till :  16th Tuesday 4.32pm


Sparsha - WED 01.32 am

Madhya -. WED 03.01 am
Moksha -. WED 04.30 am

Phalaaphala:

Dosha/ Anishta phala -
Dhanu, Makara, Vrishabha & Kanya

Mishra phala -

Mesha, Mithuna, Simha & Vrishchika

Shubha phala -


Kumbha, Meena, Karkataka & Tulaa

*******


ಕೇತುಗ್ರಸ್ತ ಚಂದ್ರ ಗ್ರಹಣ

ದಿನಾಂಕ 16.7.2019ನೇ ಮಂಗಳವಾರ

ಸ್ಪರ್ಶ ಕಾಲ ರಾತ್ರಿ 1.30

ಮಧ್ಯಕಾಲ ರಾತ್ರಿ 3.00

ಮೋಕ್ಷಕಾಲ ರಾತ್ರಿ 4.30

ಭೋಜನ ವಿಚಾರ –

ಮಧ್ಯಾಹ್ನ 2.00 ಗಂಟೆಯೊಳಗೆ ಆಹಾರ ಸೇವಿಸಿ.

ಅನಾರೋಗ್ಯವಿರುವವರು, ವೃದ್ಧರು ಸಂಜೆ 6.00 ಒಳಗೆ ಆಹಾರ ಸೇವಿಸಿ.

ತರ್ಪಣ ವಿಚಾರ –

ರಾತ್ರಿ 3.00 ಗಂಟೆ ನಂತರ ರಾತ್ರಿ 4.20 ರ ಒಳಗೆ ತರ್ಪಣ ನಡೆಸತಕ್ಕದ್ದು.

ಶ್ರಾದ್ಧ ವಿಚಾರ –

ಮಂಗಳವಾರ ನಡೆಸಬೇಕಾದ ಶ್ರಾದ್ಧವನ್ನು ಬುಧವಾರ ನಡೆಸಬೇಕು.

ಶಾಂತಿ ಮಾಡಿಸಬೇಕಾದ ರಾಶಿಯವರು –

ಧನಸ್ಸು, ವೃಶ್ಚಿಕ, ಮಕರ, ಮಿಥುನ ರಾಶಿಯವರು ಗ್ರಹಣ ಶಾಂತಿ ಮಾಡಿಸಬೇಕು.

ಶಾಂತಿ ಮಾಡಿಸಬೇಕಾದ ನಕ್ಷತ್ರದವರು –

ಪೂರ್ವಾಷಾಡ, ಉತ್ತರಾಷಾಡ, ಶ್ರವಣ, ಕೃತ್ತಿಕಾ, ಉತ್ತರ, ರೋಹಿಣಿ, ಹಸ್ತ ನಕ್ಷತ್ರದವರು ಗ್ರಹಣ ಶಾಂತಿ ಮಾಡಿಸಬೇಕು.

ಗ್ರಹಣಶಾಂತಿ

ಚಂದ್ರಶಾಂತಿ ಮಾಡಿಸಿ, ಅಕ್ಕಿ ದಾನ ಮಾಡಿ.

ಕೇತು ಗ್ರಹ ಶಾಂತಿ ಮಾಡಿಸಿ ಹುರುಳಿ ದಾನ ಮಾಡಿ.

ಗ್ರಹಣ ಜನನ ವಿಚಾರ

ಗ್ರಹಣ ದಿನ ಮಗು ಜನನವಾದರೆ ರೋಗ , ಕಷ್ಟ, ದಾರಿದ್ರ್ಯ, ಅಪಮೃತ್ಯು ತೊಂದರೆ ಉಂಟಾಗುತ್ತದೆ.

ಪರಿಹಾರ : ಉಪರಾಗ ಶಾಂತಿ ಮಾಡಿಸಬೇಕು‌ .

ಗ್ರಹಣ ಫಲ

ಗ್ರಹಣವು ಧನಸ್ಸು ರಾಶಿಯಲ್ಲಿ ಆಗುತ್ತಿರುವುದರಿಂದ ವೈದ್ಯರಿಗೆ, ಪೀಠಾಧಿಪತಿಗಳಿಗೆ, ಧರ್ಮ ಪ್ರಚಾರಕರಿಗೆ, ಮುಖ್ಯಮಂತ್ರಿ, ಮಂತ್ರಿಗಳಿಗೆ(ರಾಜ) ತುಂಬಾ ತೊಂದರೆ ಅಧಿಕಾರ ನಷ್ಟ, ಆರೋಗ್ಯ ಸಮಸ್ಯೆ ತಮ್ಮವರಿಂದ ಕಷ್ಟ ಉಂಟಾಗುತ್ತದೆ.

ಕೆಲವೆಡೆ ಅನಾವೃಷ್ಟಿ, ಕೆಲವೆಡೆ ಒಳ್ಳೆಯ ಪಸಲು ಬಂದರು , ರೋಗ ಉಂಟಾಗುತ್ತದೆ. ರಾಜಕೀಯದಲ್ಲಿ ದೊಡ್ಡ ದೊಂಬರಾಟ ನಡೆಯುತ್ತದೆ.ರಾಜನು( ಮುಖ್ಯಮಂತ್ರಿ) ಆರು ತಿಂಗಳ ಒಳಗೆ ಪದವಿ ಕಳೆದುಕೊಳುತ್ತಾನೆ. ಹೊಸ ರಾಜ (ಮುಖ್ಯಮಂತ್ರಿ) ಬಂದರು ತನ್ನವರೆ ತೊಂದರೆ ಕೊಡುತ್ತಾರೆ.

ಮೊದಲು ಸೂರ್ಯಗ್ರಣವಾಗಿರುವುದರಿಂದ ರಾಷ್ಟ್ರನಾಯಕರಿಗೆ ಸುಖವುಂಟು, ರಾಜ್ಯ ದಲ್ಲಿ ಕಲಹ ಪ್ರದವು.

ಚಂದ್ರನಿಗೆ ಶುಕ್ರನ ದೃಷ್ಟಿ ಇರುವುದರಿಂದ ಬೆಳೆ ನಾಶವಾಗುತ್ತದೆ. ರಾಷ್ಟ್ರದಲ್ಲಿ ಹೆಣ್ಣು‌ಮಕ್ಕಳು ವಿಶೇಷ ಗೌರವ ಅನಜಭವಿಸುತ್ತಾರೆ, ರಾಜ್ಯ ಸ್ತ್ರೀಯರಿಗೆ ತೊಂದರೆಯುಂಟು.

ಚಂದ್ರನಿಗೆ ಶನಿ ದೃಷ್ಟಿ ಇರುವುದರಿಂದ ವೃಷ್ಟಿ ನಾಶ, ಹೆಚ್ಚು ಗಾಳಿ, ಬರಗಾಲ, ನಿತ್ಯ ಜೀವನದ ಪದಾರ್ಥ , ವಸ್ತುಗಳ ಬೆಲೆ ಹೆಚ್ಚಾಗಿ ಜನರಿಗೆ ತೊಂದರೆ.

ಚಂದ್ರನು ಕೇತು ಜೊತೆ ಇರುವುದರಿಂದ ದೇಶ, ವಿದೇಶದಲ್ಲಿ ಅಗ್ನಿಪ್ರಕೋಪಗಳು, ಭೂಕಂಪನ, ಪ್ರಕೃತಿ ವಿಕೋಪ ಉಂಟಾಗಯತ್ತದೆ. ರಾಹುವಿನ ಸಂಬಂಧ ಇರುವುದರಿಂದ ಸುನಾಮಿ ತರದ ಘಟನೆಗಳು ಸಂಭವಿಸುತ್ತದೆ, ಅನೇಕ ಪ್ರದೇಶ, ಗ್ರಾಮಗಳು ನೀರಿನಲ್ಲಿ ಮುಳುಗಬಹುದು.

ರಾಶಿ ಫಲ
ಧನಸ್ಸು ರಾಶಿಯವರಿಗೆ ಮೃತ್ಯುಭಯ, ಅಪಘಾತ

ವೃಶ್ಚಿಕ ರಾಶಿಯವರಿಗೆ ದ್ರವ್ಯ ನಾಶ, ಸಾಲ ಬಾಧೆ

ತುಲಾ ರಾಶಿಯವರಿಗೆ ಲಕ್ಷ್ಮೀ ಪ್ರಾಪ್ತಿ, ಲೋನ್ ಸಾಕ್ಷನ್ ಆಗುತ್ತದೆ, ಹಳೆಯ ದುಡ್ಡು ಬರುವ ಸಾಧ್ಯತೆ.

ಕನ್ಯಾ ರಾಶಿಯವರಿಗೆ  ದೈಹಿಕ ಪೀಡೆ ಅನಾರೋಗ್ಯ, ಮನೆಯಲ್ಲಿ ಕಲಹ, ಆಸ್ತಿ ವಿಚಾರದಲ್ಲಿ ಜಗಳ.

ಸಿಂಹ ರಾಶಿಯವರ ಮಕ್ಕಳಿಗೆ ತೊಂದರೆ

ಕಟಕ ರಾಶಿಯವರಿಗೆ ಸೌಖ್ಯ ಪ್ರದವು

ಮಿಥುನ ರಾಶಿಯವರಿಗೆ ದಾಂಪತ್ಯ ಕಲಹ, ಗಂಡ, ಹೆಂಡತಿಯರಿಗೆ ತೊಂದರೆ

ವೃಷಭ ರಾಶಿಯವರಿಗೆ ಮೃತ್ಯು ಭಯ, ಅಕಾಲಿಕ ರೋಗ ಬಾಧೆ

ಮೇಷ ರಾಶಿಯವರಿಗೆ ಮಾನನಾಶ, ಅವಮಾನ, ಕೆಲಸಗಳು ವಿಳಂಬವಾಗುತ್ತವೆ.

ಮೀನ ರಾಶಿಯವರಿಗೆ ಸುಖ ಪ್ರದವು

ಕುಂಭ ರಾಶಿಯವರಿಗೆ ಲಾಭ

ಮಕರ ರಾಶಿಯವರಿಗೆ ನಷ್ಟ, ತೊಂದರೆ.
ಆರು ತಿಂಗಳು ಉತ್ತರಾಷಾಡ ನಕ್ಷತ್ರದಲ್ಲಿ ಯಾವುದೇ ಶುಭ ಕಾರ್ಯ ಮಾಡಬೇಡಿ.

ಅನಿಷ್ಟ ಗ್ರಹಣ ಶಾಂತಿ ಪರಿಹಾರಕ್ಕೆ ಹೀಗೆ ಮಾಡಿ-
ದೊಡ್ಡಸಾಸಿವೆ, ಅರಿಶಿನ, ಚಂಗಲ ಕೋಷ್ಠಕ, ಲೋಧ್ರ ಚಕ್ಕೆ, ಮುರಾಮಾಂಸಿ ಅಥವಾ ಭತ್ತದ ಹರಳು, ಬಾಳೆ ಬೇರು ಇಷ್ಟನ್ನು ನೀರಿನಲ್ಲಿ ಹಾಕಿ , ಅದರಿಂದ ಸ್ನಾನ ಮಾಡುವುದರಿಂದ ಗ್ರಹಣ ದೋಷ ನಿವಾರಣೆಯಾಗಯತ್ತದೆ.

******
Grahana dosha pariharaartha stotra to be chanted– 

( in Kannada,  Tamil, Telugu and Hindi) 

 Every body shall chant the following Mantra during Chandra Grahana, for parihaara,  irrespective of whether the Grahana effect for their nakshatra is there or not.

ಯೋಸೌ ವಜ್ರಧರೋ ದೇವ: ಆದಿತ್ಯಾನಾಂ ಪ್ರಭುರ್ಮತ: |

ಸಹಸ್ರನಯನ: ಶಕ್ರೋ ಗ್ರಹಪೀಡಾಂ ವ್ಯಪೋಹತು |
ಮುಖಂ ಯ: ಸರ್ವದೇವಾನಾಂ ಸಪ್ತಾರ್ಚಿರಮಿತದ್ಯುತಿ: |
ಚಂದ್ರೋಪರಾಗಸಂಭೂತಾಂ ಅಗ್ನೇ: ಪೀಡಾಂ ವ್ಯಪೋಹತು|
ಯ: ಕರ್ಮಸಾಕ್ಷೀ ಲೋಕಾನಾಂ ಧರ್ಮೋ ಮಹಿಷವಾಹನ: |
ಯಮಶ್ಚಂದ್ರೋಪರಾಗೋತ್ಥಾಂ ಗ್ರಹಪೀಡಾಂ ವ್ಯಪೋಹತು |
ರಕ್ಷೋಗಣಾಧಿಪ: ಸಾಕ್ಷಾತ್ ನೀಲಾಂಜನಸಮಪ್ರಭ: |
ಖಡ್ಗಹಸ್ತೋಽತಿಭೀಮಶ್ಚ ಗ್ರಹಪೀಡಾಂ ವ್ಯಪೋಹತು ||
ನಾಗಪಾಶಧರೋ ದೇವ: ಸದಾ ಮಕರವಾಹನ: |
ಸ ಜಲಾಧಿಪತಿರ್ದೇವ: ಗ್ರಹಪೀಡಾಂ ವ್ಯಪೋಹತು ||
ಪ್ರಾಣರೂಪೋ ಹಿ ಲೋಕಾನಾಂ ಸದಾ ಕೃಷ್ಣಮೃಗಪ್ರಿಯ: |
ವಾಯುಶ್ಚಂದ್ರೋಪರಾಗೋತ್ಥಾಂ ಗ್ರಹಪೀಡಾಂ ವ್ಯಪೋಹತು ||
ಯೋಽಸೌ ನಿಧಿಪತಿರ್ದೇವ: ಖಡ್ಗಶೂಲಗದಾಧರ: |
ಚಂದ್ರೋಪರಾಗಕಲುಷಂ ಧನದೋಽತ್ರ ವ್ಯಪೋಹತು |
ಯೋಽಸಾವಿಂದುಧರೋ ದೇವ: ಪಿನಾಕೀ ವೃಷವಾಹನ: |
ಚಂದ್ರೋಪರಾಗಪಾಪಾನಿ ಸ ನಾಶಯತು ಶಂಕರ:||
ತ್ರೈಲೋಕ್ಯೇ ಯಾನಿ ಭೂತಾನಿ ಸ್ಥಾವರಾಣಿ ಚರಾಣಿ ಚ|
ಬ್ರಹ್ಮವಿಷ್ಣುರ್ಕರುದ್ರಾಶ್ಚ ದಹಂತು ಮಮ ಪಾತಕಂ ||

योसौ वज्रधरो देव: आदित्यानां प्रभुर्मत: ।

सहस्रनयन: शक्रो ग्रहपीडां व्यपोहतु ।
मुखं य: सर्वदेवानां सप्तार्चिरमितद्युति: ।
चंद्रोपरागसंभूतां अग्ने: पीडां व्यपोहतु।
य: कर्मसाक्षी लोकानां धर्मो महिषवाहन: ।
यमश्चंद्रोपरागोत्थां ग्रहपीडां व्यपोहतु ।
रक्षोगणाधिप: साक्षात् नीलांजनसमप्रभ: ।
खड्गहस्तोऽतिभीमश्च ग्रहपीडां व्यपोहतु ॥
नागपाशधरो देव: सदा मकरवाहन: ।
स जलाधिपतिर्देव: ग्रहपीडां व्यपोहतु ॥
प्राणरूपो हि लोकानां सदा कृष्णमृगप्रिय: ।
वायुश्चंद्रोपरागोत्थां ग्रहपीडां व्यपोहतु ॥
योऽसौ निधिपतिर्देव: खड्गशूलगदाधर: ।
चंद्रोपरागकलुषं धनदोऽत्र व्यपोहतु ।
योऽसाविंदुधरो देव: पिनाकी वृषवाहन: ।
चंद्रोपरागपापानि स नाशयतु शंकर:॥
त्रैलोक्ये यानि भूतानि स्थावराणि चराणि च।

ब्रह्मविष्णुर्करुद्राश्च दहंतु मम पातकं ॥

********


ಓಂ ಶ್ರೀ ಗುರುಭ್ಯೋ ನಮಃ 🕉           ‌           ‌       ‌        ‌       ‌        ‌          ‌                                ‌      ‌            ‌                                                                                                                                                     ಕೇತುಗ್ರಸ್ತ ಸಂಪೂರ್ಣ ಚಂದ್ರಗ್ರಹಣ

ಶ್ರೀ ವಿಕಾರಿ ನಾಮ ಸಂವತ್ಸರದ ಆಷಾಏ ಶುಕ್ಲ ಪೂರ್ಣಿಮಾ 16-07-2019 ಮಂಗಳವಾರ ಉತ್ತರಾಷಾಢ  ನಕ್ಷತ್ರದಲ್ಲಿ, *ಧನಸ್ಸು ಹಾಗೂ ಮಕರ ರಾಶಿಯಲ್ಲಿ, ಮೇಷ, ವೃಷಭ ಮತ್ತು ಮಿಥುನ ಲಗ್ನಗಳಲ್ಲಿ , ಕೇತುಗ್ರಸ್ತ  ಚಂದ್ರ ಗ್ರಹಣ ಸಂಭವಿಸುತ್ತದೆ.

ಗ್ರಹಣ ಸ್ಷರ್ಶಕಾಲ : 16/07/2019 - 17/07/2019...
ಗ್ರಹಣ ಸ್ಪರ್ಶ ಕಾಲ :   ಮಧ್ಯ ರಾತ್ರಿ 01-30 am
ಗ್ರಹಣ ಮಧ್ಯ ಕಾಲ : ಮುಂಜಾನೆ 03-00 am
ಗ್ರಹಣ ಮೋಕ್ಷ ಕಾಲ : ಮುಂಜಾನೆ 04-30 am

ಗ್ರಹಣವು ಭಾರತ ದೇಶಕ್ಕೆ ಕಾಣಿಸುವುದರಿಂದ ಗ್ರಹಣಾಚರಣೆ ಇರುತ್ತದೆ.

ಆಷಾಢ ಮಾಸದ ಶುಕ್ಲ ಪೌರ್ಣಿಮೆ ಯಂದು ಕೇತುಗ್ರಸ್ತ ಚಂದ್ರ ಗ್ರಹಣ ಸಂಭವಿಸಲಿದ್ದು, ಸ್ಪರ್ಶ ಕಾಲ 16/07/2019 ಮಧ್ಯ ರಾತ್ರಿ (17/07/2019) 01-30  ರಿಂದ ಪ್ರಾರಂಭವಾಗಿ ರಾತ್ರಿ 04-30 ಕ್ಕೆ ಮೋಕ್ಷ ಕಾಲವಾಗಿರುತ್ತದೆ.

೧. ಭೋಜನ ವಿಚಾರ :

ಈ ದಿನ ಸೂರ್ಯೋದಯಾದಿ ಹಗಲು 12-29 ಗಂಟೆಯೊಳಗೆ ಆಹಾರ ಸೇವಿಸಬಹುದು.  ಬಾಲಕರು, ವೃದ್ಧರು, ರೋಗಿಗಳು, ಅಶಕ್ತರು ಈ ದಿನ ಹಗಲು 03-10 ಗಂಟೆಯವರೆಗೂ ಆಹಾರ ಸೇವಿಸಬಹುದು.

೨. ತರ್ಪಣ ವಿಚಾರ :

ಈ ದಿನ ಗ್ರಹಣ ಮಧ್ಯಕಾಲಾನಂತರ ಅಂದರೆ ರಾತ್ರಿ 03-00 ಗಂಟೆಯ ನಂತರ ಗ್ರಹಣ ಮೋಕ್ಷ ಕಾಲಕ್ಕೆ ಮುಂಚೆ ತರ್ಪಣ ಮಾಡುವುದು.

೩. ಶ್ರಾದ್ಧ ವಿಚಾರ :

ದಿನಾಂಕ : 16-07-2019 ಮಂಗಳವಾರ ನಡೆಸತಕ್ಕ ಆಷಾಢ ಶುಕ್ಲ ಪೌರ್ಣಿಮೆ ಶ್ರಾದ್ಧವನ್ನು ಮಾರನೇ ದಿನ
17-07-2019 ಬುಧವಾರ ನಡೆಸುವುದು.

೪. ಶಾಂತಿ ವಿಚಾರ :

" ಉತ್ತರಾಷಾಢ" ನಕ್ಷತ್ರದವರೂ, " ಧನಸ್ಸು ಮತ್ತು ಮಕರ" ರಾಶಿಯವರೂ, " ಮೇಷ, ವೃಷಭ ಹಾಗೂ ಮಿಥುನ " ಲಗ್ನಗಳಲ್ಲಿ ಜನಿಸಿದವರೂ ಇಲ್ಲಿ ಕೊಟ್ಟಿರುವ ಶ್ಲೋಕವನ್ನು ಒಂದು ಕಾಗದದ ಮೇಲೆ ಬರೆದು ಗ್ರಹಣ ಮುಗಿಯುವವರೆಗೂ ತಮ್ಮಲ್ಲಿಟ್ಟುಕೊಂಡು, ಗ್ರಹಣ ಮೋಕ್ಷಾ ನಂತರ ಯಥಾಶಕ್ತಿ ದಕ್ಷಿಣೆ ಸಮೇತ ದಾನ ಮಾಡತಕ್ಕದ್ದು.

ಶ್ಲೋಕ :

ಯೋ ಸೌ ವಜ್ರಧರೋ ದೇವಃ ಆದಿತ್ಯಾನಾಂ ಪ್ರಭುರ್ಮತಃ |

ಚಂದ್ರ ಗ್ರಹೋಪರಾಗೋತ್ಥ ಗ್ರಹಪೀಡಾಂ ವ್ಯಪೋಹತು || 1 ||

ಯೋ ಸೌ ದಂಡಧರೋ ದೇವಃ ಯಮೋ ಮಹಿಷವಾಹನಃ |

ಚಂದ್ರ ಗ್ರಹೋಪರಾಗೋತ್ಥ ಗ್ರಹಪೀಡಾಂ ವ್ಯಪೋಹತು || 2 ||

ಯೋ ಸೌ ಶೂಲಧರೋ ದೇವಃ ಪಿನಾಕೀ ವೃಷವಾಹನಃ |

ಚಂದ್ರ ಗ್ರಹೋಪರಾಗೋತ್ಥ ಗ್ರಹಪೀಡಾಂ ವ್ಯಪೋಹತು || 3 ||  ‌                                              ‌                                               


ಗ್ರಹಣಕಾಲದಲ್ಲಿ ಪಾಲಿಸ ಬೇಕಾದ ಆಚರಣೆಗಳು :-                                           
ಗ್ರಹಣದ ಆಚರಣೆ ಶಾಸ್ತ್ರದ ವಚನ, ಎಂದರೆ ಭಗವಂತನ ಆದೇಶ. ಪರಮಾತ್ಮ ನಮ್ಮ ಬದುಕಿಗೆ ಹಾಕಿದ ಸಂವಿಧಾನ ಅದು. ಅವಶ್ಯವಾಗಿ ಆಚರಣೆ ಮಾಡಲೇಬೇಕು. ಗ್ರಹಣ ಕಾಲವನ್ನು ಸೂತಕ ಸಮಯ ಎಂದು ಪರಿಗಣಿಸಲಾಗುತ್ತದೆ, ಏಕೆಂದರೆ ಆ ಸಮಯ ಬಹಳ ಅಶುಭ ಕಾಲವಾಗಿರುತ್ತದೆ.


೧. ಗ್ರಹಣದ ಆರಂಭ ಅಂತ್ಯಗಳಲ್ಲಿ ಸ್ನಾನವನ್ನು ಮಾಡಲೇಬೇಕು.

೨. ಗ್ರಹಣದ ಆರಂಭದಲ್ಲಿ ಮಾಡುವ ಸ್ನಾನದಿಂದ ಜಪ-ಪಾರಾಯಣ-ದಾನಾದಿಗಳಿಗೆ ಮಾತ್ರ ಅಧಿಕಾರ. ಊಟ, ಉಪಾಹಾರಗಳಿಗಿಲ್ಲ.                    ‌                                                                                                        ‌                                                                                          ೩. ಚಂದ್ರ ಗ್ರಹಣದ ಸೂತಕ ವು ಗ್ರಹಣ ಆರಂಭದ ಒಂಬತ್ತು ಗಂಟೆಗಳ ಮೊದಲು ಆರಂಭವಾಗುತ್ತದೆ. ಗ್ರಹಣ ಮೋಕ್ಷ ಕಾಲದ ನಂತರ ಮಾಡುವ ಸ್ನಾನದ ನಂತರ ಸೂತಕ ಮುಕ್ತಾಯವಾಗುತ್ತದೆ.

೪. ಗ್ರಹಣ ಕಾಲದಲ್ಲಿ ಯಾವುದೇ ದ್ರವ ಅಹಾರವಾಗಲಿ ಅಥವಾ ಘನ ಆಹಾರವಾಗಲಿ ಸ್ವೀಕರಿಸಬಾರದು.                   ‌      ‌                             ‌                                                                 ೫. ಗ್ರಹಣ ಮೋಕ್ಷ ಕಾಲದ  ನಂತರವೇ ಸ್ನಾನ, ಪೂಜೆ ಸಲ್ಲಿಸಿ, ಅಡುಗೆ ಮಾಡಿ,  ಊಟ ಮಾಡಬೇಕು. ಗ್ರಹಣಕ್ಕಿಂತ ಮುಂಚೆ ಮಾಡಿಟ್ಟು ಅಥವಾ ಗ್ರಹಣಕಾಲದಲ್ಲಿ ಮಾಡಿಟ್ಟು ತಿನ್ನಬಾರದು.      ‌                                                         
೬. ದೇವಾಲಯ ಅಥವಾ ಪೂಜಾ ಸ್ಥಳಗಳಿಗೆ ಪ್ರವೇಶ ಹಾಗೂ ದೇವರ ಮೂರ್ತಿಗಳ ಸ್ಪರ್ಶವನ್ನು ಮಾಡಬಾರದು.                                      ‌                                                                               ೭. ಶೌಚಾಲಯದ ಬಳಕೆಯನ್ನು ಮಾಡಬಾರದು.                           ‌                    ‌                                                                     ೮. ಗ್ರಹಣ ಕಾಲದಲ್ಲಿ ಲೈಂಗಿಕ ಸಂಪರ್ಕ ಯಾವುದೇ ಕಾರಣಕ್ಕೂ ಮಾಡಬಾರದು ಹಾಗೂ ಅಲಂಕಾರ ಮಾಡಿಕೊಳ್ಳಬಾರದು.       ‌             ‌                                                                                   ೯.  "ಸರ್ವೇಷಾಮೇವ ವರ್ಣಾನಾಂ ಸೂತಕಂ ರಾಹುಸೂತಕೇ"
ಎಲ್ಲಾ ವರ್ಣದವರೂ ಗ್ರಹಣ ಕಾಲದಲ್ಲಿ ಮೈಲಿಗೆಯನ್ನು ಆಚರಿಸಬೇಕು.
 ‌                                                                              ೧೦.  ಗ್ರಹಣ ಮೋಕ್ಷ ಕಾಲದ ನಂತರ ಅಗತ್ಯವಾಗಿ ಸ್ನಾನ ಮಾಡಲೇಬೇಕು. ಪವಿತ್ರ ಗಂಗಾಜಲ ಅಥವಾ ಗೋಮೂತ್ರವನ್ನು ಮನೆಯ ಎಲ್ಲಾ ಭಾಗಗಳಲ್ಲಿಯೂ ಪ್ರೋಕ್ಷಿಸಬೇಕು.  ‌                ‌            ‌                                                           
೧೧. ಜನನ ಶೌಚವಿರುವವರು, ಮೃತ ಶೌಚವಿರುವವರು ಮತ್ತು ರಜಸ್ವಲೆಯಾದವರೂ ಸಹ ಗ್ರಹಣದ ಸ್ಪರ್ಶಸ್ನಾನ, ಮುಕ್ತಿಸ್ನಾನಗಳನ್ನು ಮಾಡಲೇಬೇಕು. ಆದರೆ, ಅವರು ಜಪ ಪಾರಾಯಣಗಳನ್ನು ಮಾಡಬಾರದು.

೧೨. ಗ್ರಹಣದ ಎರಡೂ ಸ್ನಾನಗಳಲ್ಲಿ ಉಟ್ಟ ಬಟ್ಟೆಯಲ್ಲಿಯೇ ಸ್ನಾನ ಮಾಡಬೇಕು.

೧೩‌. ಗ್ರಹಣ ಕಾಲದಲ್ಲಿ ನದಿಗಳಲ್ಲಿ, ಮಹಾನದಿಗಳಲ್ಲಿ ಮಾಡುವ ಸ್ನಾನ ಅತೀ ಶ್ರೇಷ್ಠ. ಸಮುದ್ರ ಸ್ನಾನ ಸರ್ವೋತ್ತಮ.

೧೪. ಗ್ರಹಣಕಾಲದಲ್ಲಿ ಬಿಸಿನೀರಿನ ಸ್ನಾನ ಮಾಡಬಾರದು ಎಂದು ಯಮನ ಆದೇಶವಿದೆ. ತೀರ ಅಶಕ್ತರಾದವರು ಮಾತ್ರ ಬಿಸಿನೀರಿನಿಂದ ಸ್ನಾನವನ್ನು ಮಾಡಬೇಕು.

೧೫. ಯಾರ ಮನೆಯಲ್ಲಿ ಬಾವಿ ಮುಂತಾದವುಗಳಿಂದ ಗ್ರಹಣದ ನಂತರ ಶುದ್ಧ ನೀರನ್ನು ತೆಗೆದುಕೊಳ್ಳಲು ಸಾಧ್ಯವಿದೆಯೋ ಅಂತಹವರು ಹಾಗೆಯೇ ಮಾಡಬೇಕು. ಯಾರ ಮನೆಯಲ್ಲಿ ನೀರನ್ನು ಹಿಡಿದಿಟ್ಟುಕೊಳ್ಳುವ ಅನಿವಾರ್ಯತೆ ಇದೆ ಅಂತಹವರು ನೀರಿನ ಪಾತ್ರೆಗಳ (ಹಾಲು, ಮೊಸರು, ತುಪ್ಪ ಮತ್ತು ಎಣ್ಣೆಯಲ್ಲಿ ಕರಿದ ಪದಾರ್ಥಗಳು ಇತರೆ) ಮೇಲೆ ದರ್ಭೆಯನ್ನು ಹಾಕಿರಬೇಕು.


೧೬. ಗ್ರಹಣ ಆರಂಭದಿಂದ ಅಂತ್ಯದ ಕಾಲದವರೆಗೂ ದೇವರಸ್ಮರಣೆ, ನಮಸ್ಕಾರ, ಜಪ, ಪಾರಾಯಣಗಳನ್ನು ಮಾಡಬೇಕು.  ಹೋಮ, ಶ್ರಾದ್ಧ, ಪಾರಾಯಣ, ದಾನಗಳನ್ನು ಮಾಡಬೇಕು.      ‌     ‌       ‌        ‌                                                                        ‌                                                                              ಸೂಚನೆ:  ಆ ದಿನ ಸೂರ್ಯೋದಯಾದಿ ಹಗಲು 12-29 ಗಂಟೆಯೊಳಗೆ ಆಹಾರವನ್ನು ಸ್ವೀಕರಿಸಬಹುದು. ಬಾಲಕರು, ಅಶಕ್ತರು, ರೋಗಿಗಳು, ಹಗಲು 03-10 ಗಂಟೆಯವರೆಗೆ ಲಘು ಆಹಾರವನ್ನು ಸ್ವೀಕರಿಸಬಹುದು. ಆ ನಂತರ ಅವರೂ ಸಹ ಸ್ವೀಕರಿಸಬಾರದು.                                                                                             ‌‌                                         ‌       ‌        ‌                                                                     ‌                                                                                                                                        ರಾಶಿಗಳಿಗೆ ಗ್ರಹಣ ಫಲ           ‌           ‌     ‌      ‌                             ‌                                                                                    ‌ ❇ ಶುಭ ಫಲ : ಮೇಷ, ಕನ್ಯಾ, ತುಲಾ, ವೃಶ್ಚಿಕ, ಮೀನ  ‌                                                                              ✴ ಮಿಶ್ರ ಫಲ : ವೃಷಭ, ಕುಂಭ                                                         🛑 ಅಶುಭ ಫಲ : ಧನಸ್ಸು, ಮಕರ, ಮಿಥುನ, ಕಟಕ,
*******


No comments:

Post a Comment