SEARCH HERE

Tuesday, 31 March 2020

ಆರೋಗ್ಯ ಆಸ್ಪತ್ರೆ ರಹಿತ ಆರೋಗ್ಯಕ್ಕೆ ಆಯುರ್ವೇದ ayurveda medicines for good health

note: administering medication based on following articles is purely at your risk.  consult right doctors whom you believe and counter check on internet.

following articles are by ಡಾ.ಮಲ್ಲಿಕಾರ್ಜುನ ಡಂಬಳ
ಅಥರ್ವ ಆಯುರ್ವೇದ ಸಂಶೋಧನಾ ಸಂಸ್ಥೆ  M-93438 55135
*******************************
MORE ON
PANCHAKARMA-click--> ಆಯುರ್ವೇದ ಪಂಚಕರ್ಮ ಚಿಕಿತ್ಸೆ 
*********


ಆಸ್ಪತ್ರೆ ರಹಿತ ಆರೋಗ್ಯಕ್ಕೆ ಆಯುರ್ವೇದ-64

ಮೂಳೆಯ ಸಾಮರ್ಥ್ಯವನ್ನು ವೃದ್ಧಿಸುವುದು ಹೇಗೆ?

ಯತ್ ದ್ರವ್ಯಂ ಸ್ನಿಗ್ಧತ್ವಂ,‌ ಖರತ್ವಂ, ಶೋಷಣತ್ವಂ ತತ್ ಅಸ್ಥಿನಾಂ ವರ್ಧಯಂತಿ |

ಮೂಳೆ ವರ್ಧಕ ಅಂಶಗಳು
 ಮೂಳೆ ಉತ್ಪತ್ತಿಗೆ ಬೇಕಾಗುವ ಅಂಶಗಳು ಎರೆಡು- 
1) ತುಪ್ಪ ಸೇವನೆ(ಸ್ನಿಗ್ಧತ್ವಂ)
ಮತ್ತು 
2) ಶಾರೀರಿಕ ಶ್ರಮ(ಖರತ್ವಂ, ಶೋಷಣತ್ವಂ) 
ಈ ಎರಡರಲ್ಲಿ ಕೇವಲ ಒಂದು ಮಾತ್ರ ಪಾಲಿಸಿದರೆ ನಮ್ಮ ತೂಕ ಹೆಚ್ಚುತ್ತದೆ ಅಥವಾ ಮೂಳೆ ಸವೆಯುತ್ತದೆ.

ಆದರೆ,
ವಿ.ಸೂಚನೆ: ತುಪ್ಪ (ಅಥವಾ ಯಾವುದೇ ಶಕ್ತಿಯುತ ಆಹಾರ) ಸೇವನೆಯ ತಕ್ಷಣ ಶಾರೀರಿಕ ವ್ಯಾಯಾಮ ಮಾಡುವುದು ಬೇಡ, ಅದರಿಂದ ಮೂಳೆ ಉತ್ಪತಿಗೆ ಮೊದಲೇ ಶರೀರದ ಸಂಧಿ, ಮಾಂಸಗಳಲ್ಲಿ ಗುಂಟುಗಳಾಗುತ್ತವೆ, ರುಮ್ಯಾಟಿಸಮ್ ಬರಬಹುದು.

 ಶಾರೀರಿಕ ಕೆಲಸ ಮಾಡದೇ ಮೂಳೆಯ ಬೆಳವಣಿಗೆ ಮತ್ತು ಮಾಂಸ ಖಂಡಗಳ ಗಟ್ಟಿತನ ಬರುವುದು ಸಾಧ್ಯವೇ ಇಲ್ಲ, ಆದರೆ ಶಾರೀರಿಕ ಶ್ರಮಕ್ಕೆ ಒಂದು ಸೂಕ್ತ ವಿಧಾನ ಅನುಸರಿಸಬೇಕು.

1) ತುಪ್ಪಸೇವನೆ ವಿಧಾನ

•  ಗಟ್ಟಿತುಪ್ಪ ತಿನ್ನ ಬಾರದು,  ತುಪ್ಪದ ಪಾತ್ರೆಯನ್ನು ನೇರವಾಗಿ ಬೆಂಕಿಗೆ ಇಟ್ಟು ಕರಗಿಸಬಾರದು, ಅದರ ಬದಲು ಬಿಸಿ ಅಥವಾ ಕುದಿಯುವ ನೀರಿಗೆ ಇಟ್ಟು ಕರಗಿಸಿರಿ, ಏಕೆಂದರೆ ನೀರು 100°c  ಗಿಂತ ಹೆಚ್ಚು ಬಿಸಿಯಾಗುವುದಿಲ್ಲ. ಆಗ ತುಪ್ಪ ಹೊಗೆಯಾಡುವಷ್ಟು ಅಥವಾ ಆವಿಯಾಗುವಷ್ಟು ಬಿಸಿ ಯಾಗುವುದಿಲ್ಲ. ಹೊಗೆಯಾಡಿದ ತುಪ್ಪವನ್ನು ಚೆಲ್ಲಿಬಿಡುವುದೇ ಲೇಸು. ಹಣ ದಂಡ ವಾಗುತ್ತದೆ ಆದರೆ ಆರೋಗ್ಯ ಉಳಿಯುತ್ತದೆ.

•  ನಾನು ತುಪ್ಪವನ್ನೇ ತಿನ್ನುವುದಿಲ್ಲ ಎನ್ನುವರ ಮೂಳೆ ಬೇಗ ಸವೆಯುತ್ತವೆ ಮತ್ತು ಮಜ್ಜಾ ಧಾತು ಒಣಗುವ ಕಾರಣ, ಅದರಿಂದ ಉತ್ಪತ್ತಿಯಾಗುವ ರಕ್ತ ಮತ್ತು ಅದರ ಉಪಧಾತುಗಳಾದ ರಕ್ತ ನಾಳಗಳೂ ಒಣಗಿ ಹೃದಯ, ಮೆದುಳಿನ, ಕಿಡ್ನಿಯ ತೊಂದರೆಗಳು ಬರುವ ಸಂಭವ ಹೆಚ್ಚು.

 ವೈದ್ಯರು ಹೇಳುತ್ತಾರೆ ತುಪ್ಪ ಸೇವನೆಯಿಂದ ಕೊಲೆಸ್ಟ್ರಾಲ್ ಹೆಚ್ಚುತ್ತದೆ ಅಪಾಯ! ಎಂದು, ಅದರ ವಿಚಾರವನ್ನು ಮುಂದೆ ತಿಳಿಸುತ್ತೇವೆ. 
ಯಾವ ರಾಸಾಯನಿಕಗಳು ನಮ್ಮ ಆಹಾರದಲ್ಲಿ ಹೇಗಿರುವವೋ ಹಾಗೇ ಶರೀರದಲ್ಲಿ ಹೆಚ್ಚಾಗುವುದಿದ್ದರೆ ಎಲ್ಲಾ ರಾಸಾಯನಿಕಗಳನ್ನ ಬಳಸಿ ಎಲ್ಲಾ ರೋಗಗಳನ್ನು ನಿಯಂತ್ರಿಸಬಹುದಿತ್ತು ಅಲ್ಲವೇ? 
ಆರೋಗ್ಯಕ್ಕೆ ನಮ್ಮ ಜೀರ್ಣ ಕ್ರಿಯೆಯೇ ಪ್ರಧಾನ ಪಾತ್ರದಾರಿ ಹಾಗಾಗಿ ಸೇವಿಸಿದ ಅನ್ನ ಜೀರ್ಣವಾಗಲು ಕೆಲಸಗಳನ್ನು ಯಥೇಚ್ಛ ಮಾಡಿ ಮತ್ತು ನಿಮ್ಮ ಮಕ್ಕಳಿಂದ ಹೆಚ್ಚು ಶಾರೀರಿಕ ಶ್ರಮ ಆಗುವ ಆಟಗಳನ್ನು ಆಡಿಸಿ.

•  ಕೊಲೆಸ್ಟ್ರಾಲ್ ಕೊಂಚ ಹೆಚ್ಚಿರಿವುದು ಉತ್ತಮ ಅದಕ್ಕೆ ಕೊಬ್ಬನ್ನು ಒಣಗಿಸುವ ಮಾತ್ರೆ ಸೇವಿಸಿದರೆ ರಕ್ತನಾಳ ಒಣಗುವ ಜೊತೆಗೆ ಮೂಳೆ ಸವೆತವು  ಹೆಚ್ಚುತ್ತದೆ.

•  ಕೊಲೆಸ್ಟ್ರಾಲ್  ಕಡಿಮೆ ಮಾಡಿಕೊಳ್ಳಲು ನಿತ್ಯ statin(atorvastatin, rosuvastatin) ಮಾತ್ರೆ ಸೇವಿಸುವ ಜನರು ದಯವಿಟ್ಟು ಗಮನಿಸಿ ನಿಮ್ಮ ಸಂದು ಕೀಲುಗಳು ಬೇಗ ನೋವು, ಸವೆತ ಬರುತ್ತವೆ. statin ಮಾತ್ರೆಗಳಿಂದ ಅಲ್ಲಿರುವ ನೈಸರ್ಗಿಕ lubricating liquid ಒಣಗುತ್ತದೆ. 

•  ಕೊಲೆಸ್ಟ್ರಾಲ್  ಭೂತಕ್ಕೆ ಹೆದರಿ ಕೊಬ್ಬನ್ನು ಕರಗಿಸುವ ಮಾತ್ರೆ ಸೇವಿಸುವ ಬದಲು, ಶಾರೀರಿಕ ಶ್ರಮದಿಂದ ಕರಗಿಸಿದರೆ ಅದೇ ಕೊಬ್ಬು ಮೂಳೆಯಾಗಿಬಿಡುತ್ತದೆ. ಮಾತ್ರೆಯಿಂದ ಒಣಗಿಸಿದರೆ ಅದೇ ರೋಗವಾಗುತ್ತದೆ ಎರಡನ್ನು ಬಿಟ್ಟು ತುಪ್ಪ ತಿನ್ನುವುದನ್ನೇ ಬಿಟ್ಟರೆ ಮೂಳೆ ಉತ್ಪತ್ತಿ ಸರಿಯಾಗಿ ಆಗುವುದೇ ಇಲ್ಲ, ಆಗ ಎಷ್ಟೇ calcium ಮಾತ್ರೆ ತಿಂದರೂ ಮೂಳೆ ಬೆಳೆಯದು, ಎಷ್ಟೇ iron ಮಾತ್ರೆ ತಿಂದರು ರಕ್ತ ಹೆಚ್ಚಾಗದು, ಏನೇ ನಿಗಾವಹಿಸಿದರೂ hypothyroidism ತಪ್ಪಿಸಲಾಗದು, ಎಷ್ಟು ಉಪವಾಸ ಮಾಡಿದರೂ ತೂಕ ಇಳಿಯದು.

 ಮಜ್ಜಾದಿಂದಲೇ ರಕ್ತ ಕಣಗಳು ಉಂಟಾಗುವುದರಿಂದ, ತುಪ್ಪ ತಿನ್ನದೆ ಗಟ್ಟಿ ಮೂಳೆ ಮತ್ತು ಸಾರ ಮಜ್ಜಾ ಉತ್ಪತ್ತಿಯಾಗದು. ರಕ್ತೋತ್ಪತಿ ಕ್ಷೀಣಿಸುತ್ತದೆ. ಎಷ್ಟೇ iron ಮಾತ್ರೆ ತಿಂದರೂ ರಕ್ತ ಕಣಗಳೇಇಲ್ಲದೆ iron ಹೊರ ಹೋಗುತ್ತದೆ.

 ರಕ್ತಕಣಗಳಿಗೆ ಶಕ್ತಿ ಇಲ್ಲದೆ ಹೋಗುವುದರಿಂದ ಚಿಕ್ಕ ಚಿಕ್ಕ ರಕ್ತ ಕಣಗಳು ಬಿಡುಗಡೆಯಾಗುತ್ತವೆ, ಇದು ಹೇಗೆಂದರೆ, ಒಂದಿಬ್ಬರು ದೊಡ್ಡವರು ಸುಲಭದಲ್ಲಿ ಮಾಡಿಮುಗಿಸುವ ಕೆಲಸಕ್ಕೆ, ನೂರಾರು ಅತೀ ಪುಟ್ಟ ಮಕ್ಕಳನ್ನು ಕಳಿಸಿದರೆ ಸಾಧ್ಯವಾದೀತೇ? ಈಗ ಹೆಚ್ಚಿನ ಜನರ ರಕ್ತದಲ್ಲಿ ಕಣಗಳ ಸಂಖ್ಯೆ ಸಾಮಾನ್ಯಕ್ಕಿಂತ ಹೆಚ್ಚು, ಗಾತ್ರ ಅತ್ಯಂತ ಸಣ್ಣ ಮತ್ತು immature cells, ಇದೇ ಕಾಲಾಂತರದಲ್ಲಿ hypothyrodism  ಗೆ ತಿರುಗುತ್ತದೆ. ಇದೇ ರಕ್ತ ಹೀನತೆಯ ಕಾರಣ ಮೇದಸ್ಸಿನಲ್ಲಿ ಜೀರ್ಣ ಕ್ರಿಯೆ ಕುಂದುವುದರಿಂದ ಉಪವಾಸ ಮಾಡಿದರೂ ತೂಕ ಇಳಿಯದು.

ತುಪ್ಪ ಎಂದರೆ ಶುದ್ಧ ಹಸುವಿನ ತುಪ್ಪ ಎಂದು ಗ್ರಹಿಸಿ ಬಳಸುವುದು ಶ್ರೇಷ್ಠ.

 ಜನರು ಅತ್ಯಂತ ಶ್ರದ್ಧೆ ಇಟ್ಟು ಅವರ ನೂರಾರು ಉತ್ಪನ್ನಗಳನ್ನು ಬಳಸುವ ಹೆಸರಾಂತ ತಯಾರಕರೊಬ್ಬರು ತಮ್ಮ ಕಂಪನಿಯಿಂದ "ಶುದ್ಧ ಹಸುವಿನ ತುಪ್ಪ" ಎಂಬ ಹೆಸರಿನಲ್ಲಿ ಕಳಪೆದರ್ಜೆಯ ತುಪ್ಪವನ್ನು ಭಾರತಾದ್ಯಂತ ಮಾರಾಟ ಮಾಡುತ್ತಿದ್ದಾರೆ!! ಆ ಬಗ್ಗೆ ಗಮನವಿರಲಿ.

 ಶುದ್ಧ ಹಸುವಿನ ತುಪ್ಪ ಸಿಗದಿದ್ದರೆ, ಯೋಚನೆ ಬೇಡ, ಮನೆಯಲ್ಲೇ ಹಾಲನ್ನು ಕಾಯಿಸಿ, ಹೆಪ್ಪು ಹಾಕಿ, ಕಡೆದು, ಬೆಣ್ಣೆ ತಗೆದು ಕಾಯಿಸಿ ತುಪ್ಪ ಮಾಡಿ ಬಳಸಿ. ಈ ರೀತಿ ಸಂಸ್ಕರಿಸದೇ, ನೇರ ಹಾಲಿನಿಂದಲೇ ಕೊಬ್ಬನ್ನು ತೆಗೆದು ತಯಾರಿಸಿದ ತುಪ್ಪ ಸೇವನೆಯು ಮೂಳೆ, ಮಜ್ಜೆ, ರಕ್ತ ಆಗುವ ಬದಲು ಕೊಬ್ಬನ್ನು  ಹೆಚ್ಚಿಸುತ್ತದೆ. ವೈದ್ಯರು ಹೇಳುವ ದುರ್ಗುಣದ ತುಪ್ಪ ಇದು ಇದನ್ನು ತುಪ್ಪ ಎನ್ನುವ ಬದಲು "ಅಸಂಸ್ಕಾರಿತ ಕೊಬ್ಬು" ಎಂದು ಕರೆಯಬಹುದು .
ಹೆಚ್ಚಿನ ಮಾಹಿತಿಗೆ ಆಯುರ್ವೇದ ವೈದ್ಯರನ್ನು ಸಂಪರ್ಕಿಸಿ.
ಡಾ.ಮಲ್ಲಿಕಾರ್ಜುನ ಡಂಬಳ
ಅಥರ್ವ ಆಯುರ್ವೇದ ಸಂಶೋಧನಾ ಸಂಸ್ಥೆ
ಶಿವಮೊಗ್ಗ ದಾವಣಗೆರೆ ಬೆಂಗಳೂರು ಕಾಂಗ್ರಾ(ಹಿ.ಪ್ರ)
************


ಆಸ್ಪತ್ರೆ ರಹಿತ ಆರೋಗ್ಯಕ್ಕೆ ಆಯುರ್ವೇದ
18.05.2020.       ಸಂಚಿಕೆ-139
✍️: 
ಸಂವೃದ್ಧ ಸುಂದರ ಕೇಶಕ್ಕೆ "ಆಯುರ್ವೇದದ ತೈಲ"

ನೀವೇ ತಯರಾರಿಸಿ, ಬಳಸಿ
ಸುಂದರ ಕೇಶ‌‌ ವ್ಯಕ್ತಿವನ್ನೇ ಬಿಂಬಿಸುತ್ತದೆ.
ರಾಸಾಯನಿಕ ರಹಿತ ಆಯುರ್ವೇದೀಯ ಕೇಶ ತೈಲ ತಯಾರಿಸುವ ಸರಳ ವಿಧಾನ:

ಬೇಕಾಗುವ ದ್ರವ್ಯಗಳು

ಶುದ್ಧ ಕೊಬ್ಬರಿ ಎಣ್ಣೆ - 500‌ ಮಿ.ಲಿ.
ಶುದ್ಧ ಬೆಟ್ಟದ ನೆಲ್ಲಿಕಾಯಿ ಪುಡಿ- 40 ಗ್ರಾಂ
ಭೃಂಗರಾಜ ಇಡೀ ಗಿಡದ ಪುಡಿ- 40 ಗ್ರಾಂ
ಎಳ್ಳು- 40 ಗ್ರಾಂ
ಕಬ್ಬಿಣದ ಪುಡಿ- 5 ಗ್ರಾಂ
ನಳದ ನೀರು- 2 ಲೀಟರ್

ಎಲ್ಲವನ್ನೂ ಕೂಡಿಸಿ ಒಂದು ಕಬ್ಬಿಣದ ಅಥವಾ ಸ್ಟೀಲ್ ಪಾತ್ರೆಯಲ್ಲಿ ಹಾಕಿ ನಿಧಾನವಾಗಿ ಉರಿಯುವ ಬೆಂಕಿಯ ಮೇಲೆ ಇಟ್ಟು ಚಮಚದಿಂದ ತಿರುವುತ್ತಾ ಕಾಯಿಸುತ್ತಿರಬೇಕು.

ನೀರೆಲ್ಲಾ ಆವಿಯಾಗಿ ತೈಲಸಿದ್ಧ ಲಕ್ಷಣ ಬಂದಾಗ ಅಂದರೆ ಔಷದಯುಕ್ತ ಕೊಬ್ಬರಿ ಎಣ್ಣೆ ಉಳಿದ ಮೇಲೆ ಒಲೆಯಿಂದ ಇಳಿಸಿರಿ.

ತೈಲಸಿದ್ಧ ಲಕ್ಷಣ ಗುರುತಿಸುವುದು ಹೇಗೆ? 
• ತೈಲ ತಯಾರಿಕೆಯಾಗುವವರೆಗೂ ಚಮಚದಿಂದ ತಿರುಗಿಸುತ್ತಿರಬೇಕು.
• ಒಳಗಿರುವ ದ್ರವ್ಯಗಳನ್ನು ಪರೀಕ್ಷಿಸಿದರೆ ಗಟ್ಟಿಯಾಗಿರುತ್ತವೆ(ಚಕ್ಕುಲಿಯ ಪುಡಿಯಂತೆ) ಆಗ ನೀರಿನ ಅಂಶ ಸಂಪೂರ್ಣ ಆವಿಯಾಗಿ ಹೋಗಿರುತ್ತದೆ‌ ಎಂದು ಅರ್ಥ.

ನಂತರ

ಸ್ವಲ್ಪ ಬಿಸಿ ಇರುವಾಗಲೇ ಸೋಸಿ ಇಡಿ. 
ಸ್ವತಃ ತಣ್ಣಗಾದ ಮೇಲೆ ಸೂಕ್ತವಾದ ಪಾತ್ರೆಯೊಳಗೆ ಸಂಗ್ರಹಿಸಿ ನಿತ್ಯವೂ ಬಳಸಿರಿ.
ಹಿಂದೆ ಎಂದೂ ಕಾಣದಷ್ಟು ಲಾಭಗಳನ್ನು ಈ ಸರಳ ವಿಧಾನದಿಂದ ಕಾಣುವಿರಿ.
ಇಲ್ಲಿ ಹೇಳಿರುವ ದ್ರವ್ಯಗಳನ್ನು ಹೊರತುಪಡಿಸಿ ಬೇರೆ ಯಾವ ದ್ರವ್ಯಗಳನ್ನೂ ಸೇರಿಸಬೇಡಿ.

ವಿ. ಸೂಚನೆ:
ಹೆಚ್ಚಿನ ಲಾಭ ಗಳಿಸಲು ಹೀಗೆ ಮಾಡಿ-
√ ನಿತ್ಯವೂ ಎರೆಡು ಬಾರಿಯಾದರೂ ಹಾಲು ಮತ್ತು ಅನ್ನವನ್ನು ಮಾತ್ರ ಸೇವನೆ ಮಾಡಿ.
√ ಚಹಾ ಕಾಫಿಯನ್ನು ನಿಲ್ಲಿಸಿ, ಆ ಸಮಯದಲ್ಲಿ ಹಾಲನ್ನು ಸೇವಿಸಿ.
√ ರಾತ್ರಿ ಬೇಗ ಮಲಗಿ ಮತ್ತು ಚನ್ನಾಗಿ ನಿದ್ದೆ ಮಾಡಿ.
********


ಆಸ್ಪತ್ರೆ ರಹಿತ ಆರೋಗ್ಯಕ್ಕೆ ಆಯುರ್ವೇದ
21.05.2020.       ಸಂಚಿಕೆ-142
✍️: 
"ವಾತ ಕಂಟಕ" ಅಂದರೆ
ಬೆಳಿಗ್ಗೆ ಎದ್ದಾಗ ಹಿಮ್ಮಡಿ(ಆ್ಯಂಕಲ್ ಸಂಧಿ) ನೋವು, 10-20 ಹೆಜ್ಜೆ ನಡೆಯಲು ಕಷ್ಟವಾಗುವುದು. 

35-40 ವರ್ಷ ದಾಟಿದ ನಂತರ ಅನೇಕರು ಅದರಲ್ಲೂ ವಿಶೇಷವಾಗಿ ಸ್ತ್ರೀಯರು ಈ ತೊಂದರೆಯನ್ನು ಅನುಭವಿಸುತ್ತಾರೆ.

ಏಕೆ ಹೀಗಾಗುತ್ತದೆ?
ಸಂಧಿಯಲ್ಲಿರುವ ಶ್ಲೇಷಕ ಕಫ ಎನ್ನುವ ಸ್ನಿಗ್ಧದ್ರವವು ತಾತ್ಕಾಲಿಕವಾಗಿ ಗಟ್ಟಿಯಾಗುವುದರಿಂದ ಕೆಲ ಹೆಜ್ಜೆಗಳನ್ನು ಇಡಲು ಕಷ್ಟವಾಗುತ್ತದೆ. ಸ್ವಲ್ಪ ನೆಡಿಗೆಯ ನಂತರ ಚಲನೆಯ ಕಾರಣ ಸಂಧಿಯಲ್ಲಿ ಬಿಸಿ ಹೆಚ್ಚಿ ಆ ಸಂಧಿದ್ರವವು ಕರಗಿ ಸ್ವಸ್ಥಿತಿಗೆ ಬರುವುದರಿಂದ ನೋವು ನಿವಾರಣೆಯಾಗುತ್ತದೆ.

ಅಜೀರ್ಣವೇ ಈ ತೊಂದರೆಗೆ ಪ್ರಮುಖ ಕಾರಣ. ಅಜೀರ್ಣವು ಉದರ ಅಥವಾ ರಕ್ತದೊಂದಿಗೆ ಹರಿಯುವ ರಸದಲ್ಲಿ ಇರುತ್ತದೆ. ಅಜೀರ್ಣದ ಸ್ವಭಾವವೇ ಪಿಚ್ಛಿಲ ಅಂದರೆ ಅಂಟಾಗಿರುವುದು.

ಇದರ ಸಂಪೂರ್ಣ ನಿವಾರಣೆಗೆ-

• ಕನಿಷ್ಟಪಕ್ಷ ಒಂದು ವರ್ಷ ಅಜೀರ್ಣ ಆಗದಂತೆ ನೋಡಿಕೊಳ್ಳುವುದು.

• ಕಟ್ಟಡಕ್ಕೆ ಬಳಸುವ ಮಣ್ಣಿನ ಇಟ್ಟಿಗೆಯನ್ನು ಬಿಸಿಮಾಡಿ ಹಿಮ್ಮಡಿಯಿಂದ ಅದನ್ನು ತುಳಿಯುತ್ತಾ‌ ಹಿಮ್ಮಡಿಯನ್ನು ಬಿಸಿಮಾಡಿಕೊಳ್ಳಿ- ಕನಿಷ್ಟ 15 ದಿನಗಳಕಾಲ ಇದನ್ನು ಮಾಡಿ.

ಸೂಚನೆ- ಇಟ್ಟಿಗೆಯಿಂದ ಹೊರಡುವ ಶಾಖಕ್ಕೆ ಇರುವ ಗುಣ ಬಿಸಿನೀರಿಗಾಗಲೀ, ಬಿಸಿನೀರನ್ನು ತುಂಬಿದ ರಬ್ಬರ್ ಚೀಲಕ್ಕಾಗಲೀ ಇರುವುದೇ ಇಲ್ಲ, ದಯಮಾಡಿ ಪರ್ಯಾಯ ಶಾಖದ ಬಗ್ಗೆ ಯೋಚಿಸದೇ ಇಟ್ಟಿಗೆಯನ್ನೇ ಬಳಸಿ. 
**********



ಆಸ್ಪತ್ರೆ ರಹಿತ ಆರೋಗ್ಯಕ್ಕೆ ಆಯುರ್ವೇದ
19.05.2020.       ಸಂಚಿಕೆ-140
✍️: 
ಯೂಕ(Lice - ಹೇನು)    ಕಾರಣ ಮತ್ತು ಪರಿಹಾರ

ಯೂಕ ಕಾರಣಗಳು:-
ಸ್ವಾದು ಅಮ್ಲ ದ್ರವಪಾನೈಶ್ಚ........
ಕ್ರಿಮೀನ್ ಬಹು ವಿಧ ಆಕಾರಾನ್ ಕರೋತಿ ವಿವಿಧಾಶ್ರಯಾನ್||
- ಸುಶೃತ ಸಂಹಿತಾ

• ಕಲಸಿ ಇಟ್ಟರೆ ಹುಳಿಯಾಗುವ ಪದಾರ್ಥಗಳನ್ನು ನಿತ್ಯ ಸೇವಿಸುವುದು
• ಬೇಯಿಸಿದ ದ್ರವರೂಪಿ ಆಹಾರವನ್ನು 6 ತಾಸುಗಳ ಅಥವಾ ಹುಳಿ ಬಂದ ನಂತರ ಸೇವಿಸುವುದರಿಂದ, 
• ಸಕ್ಕರೆ ಅಥವಾ ಬೆಲ್ಲದ ಪಾನಕಗಳ (ಜಾಮೂನು, ರಸಗುಲ್ಲ ಪಾನಕ ಇತ್ಯಾದಿ) ಪದೇ ಪದೇ ಸೇವನೆಯಿಂದ
 ಮತ್ತು 
• ಸಾಮಕಫ ( ಸಿಹಿ ಹುಳಿಯುಕ್ತ ತೇಗು ಅಥವಾ ವಾಂತಿ ಬರುವುದು)ವನ್ನು ತಡೆಯುವುದು.

ಉತ್ಪತ್ತಿ ಹೇಗೆ?: 

ಮೇಲಿನ ಕಾರಣಗಳಿಂದ ಉತ್ಪತ್ತಿಯಾಗುವ ಈ ಹುಳಿ ಮಿಶ್ರಿತ ಸಿಹಿ ದ್ರವವು(ಶುಕ್ತಪಾಕ ದ್ರವ) ರಕ್ತದಲ್ಲಿ ಸೇರಿ ಕಫದ ಸ್ವಸ್ಥಾನವಾದ ಶರೀರದ ಊರ್ಧ್ವಭಾಗವಾದ ತಲೆಯನ್ನು ಸೇರುತ್ತದೆ. 
ಅಲ್ಲಿ ಎಲ್ಲರಿಗೂ ಸಹಜವಾಗಿಯೇ ಇರುವ ಸ್ವೇದಜ ಕ್ರಿಮಿ(ಬೆವರಿನ ಕ್ರಿಮಿ)ಗಳಿಗೆ ಹೆಚ್ಚಿನ‌ಪೋಷಣೆ ಸಿಕ್ಕುವುದರಿಂದ ಯೂಕಗಳು ಬೆಳೆಯುತ್ತವೆ.

ಪಿತ್ತ ದೂಷಿತವಾದರೆ ಇದೇ ಶುಕ್ತಪಾಕ ದ್ರವವು ಉದರ‌ಕ್ರಿಮಿಗಳನ್ನೂ, ವಿವಿಧ ಚರ್ಮರೋಗಗಳನ್ನೂ ಉಂಟುಮಾಡುತ್ತದೆ.

ಪರಿಹಾರ:
ಕ್ರಿಮಿ ಉತ್ಪತ್ತಿಸ್ಥಾನ ಮತ್ತು ವ್ಯಕ್ತಸ್ಥಾನ ಎರಡೂ ಭಾಗಗಳಿಗೆ ಚಿಕಿತ್ಸಿಸಿದರೆ ಮಾತ್ರ ಶಾಶ್ವತ ನಿವಾರಣೆ ಸಾಧ್ಯ.

1) ಅವುಗಳಿಗೆ ಸಿಗುವ ಆಹಾರವನ್ನು ಪೂರ್ಣರೂಪದಿಂದ ನಿಲ್ಲಿಸಬೇಕು.
2) ಯೂಕ ನಾಶಕ ತೈಲ ಹಚ್ಚುವುದು

ದತ್ತೂರಪತ್ರ ಕಲ್ಕೇನ........... ಯೂಕಾ ನಾಶಯತಿ ಕ್ಷಣಾತ್|| 
- ಭಾವಪ್ರಕಾಶ ನಿಘಂಟು

ಯೂಕನಾಶಕ ತೈಲ:
ದತ್ತೂರಪತ್ರವನ್ನು ಹಿಂಡಿದ ರಸ 400 ಮಿ.ಲಿ. 
ಸಾಸುವೆ ಎಣ್ಣೆ 100 ಮಿ.ಲಿ.
ದತ್ತೂರಪತ್ರದ  ಕಲ್ಕ (ನುಣ್ಣಗೆ ರುಬ್ಬಿದ ಎಲೆ) 25 ಗ್ರಾಂ
ಇವೆಲ್ಲವನ್ನೂ ಕಬ್ಬಿಣ ಅಥವಾ ಸ್ಟೀಲ್ (S.S) ಪಾತ್ರೆಯಲ್ಲಿ ಹಾಕಿ ನಿದಾನವಾಗಿ ಉರಿಯುವ ಬೆಂಕಿಯ ಮೇಲೆ ಇಟ್ಟು ಚಮಚದಿಂದ ತಿರುವುತ್ತಾ ಇರಬೇಕು.
ನೀರೆಲ್ಲಾ ಆವಿಯಾಗಿ ತೈಲಸಿದ್ಧ ಲಕ್ಷಣ ಬಂದಾಗ ಅಂದರೆ ಔಷಧಯುಕ್ತ ಸಾಸುವೆ ಎಣ್ಣೆ ಉಳಿದ ಮೇಲೆ ಒಲೆಯಿಂದ ಇಳಿಸಿರಿ.

ತೈಲಸಿದ್ಧ ಲಕ್ಷಣ ಗುರುತಿಸುವುದು ಹೇಗೆ? 
• ತೈಲ ತಯಾರಿಕೆಯಾಗುವವರೆಗೂ ಚಮಚದಿಂದ ತಿರುಗಿಸುತ್ತಿರಬೇಕು.
• ಒಳಗಿರುವ ದ್ರವ್ಯಗಳನ್ನು ಪರೀಕ್ಷಿಸಿದರೆ ಗಟ್ಟಿಯಾಗಿರುತ್ತವೆ(ಚಕ್ಕುಲಿಯ ಪುಡಿಯಂತೆ) ಆಗ ನೀರಿನ ಅಂಶ ಸಂಪೂರ್ಣ ಆವಿಯಾಗಿ ಹೋಗಿರುತ್ತದೆ‌ ಎಂದು ಅರ್ಥ.
ನಂತರ
ಸ್ವಲ್ಪ ಬಿಸಿ ಇರುವಾಗಲೇ ಸೋಸಿ ಇಡಿ. ಸ್ವತಃ ತಣ್ಣಗಾದ ಮೇಲೆ ಸೂಕ್ತವಾದ ಪಾತ್ರೆಯೊಳಗೆ ಸಂಗ್ರಹಿಸಿರಿ.

ಬಳಸುವ ವಿಧಾನ:
ತಲೆಬುಡಕ್ಕೆ ಈ ಔಷಧಸಿದ್ಧ ತೈಲವನ್ನು ಹಚ್ಚುತ್ತಲೇ ಕ್ರಿಮಿನಾಶವಾಗುತ್ತವೆ!!

ದತ್ತೂರತೈಲ ಹಚ್ಚಿದ ಅರ್ಧಗಂಟೆಯ ನಂತರ, ಬೆಚ್ಚನೆಯ ನೀರಿನಿಂದ ತಲೆಯನ್ನು ತೊಳೆಯಬೇಕು. ಹೇನು ಸಂಪೂರ್ಣ ನಿವಾರಣೆಯಾಗುವವರೆಗೂ ವಾರಕ್ಕೊಮ್ಮೆಯಂತೆ ಪ್ರಯೋಗಿಸಬೇಕು.
********

ಆಸ್ಪತ್ರೆ ರಹಿತ ಆರೋಗ್ಯಕ್ಕೆ ಆಯುರ್ವೇದ
16.05.2020.       ಸಂಚಿಕೆ-137
✍️: 
ರುಮಟಾಯ್ಡ್ ಅರ್ಥ್ರೈಟೀಸ್ ವೈರಲ್ ಅರ್ಥ್ರೈಟೀಸ್
(ಚಿಕುನ್ ಗೂನ್ಯಾ...)
ಕಾರಣ ಮತ್ತು ನಿವಾರಣೋಪಾಯಗಳು.

ಸಮಾಧಾನವಾಗಿ ಓದಿ, ಅರ್ಥ್ರೈಟೀಸ್ ನಿಂದ ಶಾಶ್ವತವಾಗಿ ದೂರ ಇರಿ.

ವಿರುದ್ಧ ಆಹಾರ ಚೇಷ್ಟಸ್ಯ ಮಂದಾಗ್ನಿಃ ನಿಶ್ಚಲಸ್ಯಚ |
ಸ್ನಿಗ್ಧಂ ಭುಕ್ತವತೋ ಹಿ ಅನ್ನಂ ವ್ಯಾಯಾಮಂ‌ ಕುರ್ವತಃ ತಥಾ || 
...........ಸಂಧಿ ಪ್ರವೇಶಕೌ |....... ಆಮವಾತಃ ಸ ಉಚ್ಯತೇ ||
- ಮಾಧವ ನಿದಾನ-25

ಆಮವಾತ  ಅಥವಾ ರುಮಟಾಯ್ಡ್ ಅರ್ಥ್ರೈಟೀಸ್ ಅಥವಾ
ವೈರಲ್ ಅರ್ಥ್ರೈಟೀಸ್ ಗೆ ಕಾರಣಗಳು :

• ಜೀರ್ಣಶಕ್ತಿಗಿಂತ ಹೆಚ್ಚಿನ ಆಹಾರ ಸೇವನೆ - ಇದರಿಂದ ಆಹಾರ ರಸವು ಜೀವಕೋಶಗಳೊಳಗಿನ ಪಚನ ಶಕ್ತಿಯನ್ನು ಲಕ್ಷಿಸದೇ ನೇರ ಸಂಧಿಗಳಿಗೆ ಹೋಗಿ, ಅಲ್ಲಿನ ರಕ್ಷಣೆಯೊಂದಿಗೆ ಯುದ್ಧ ಸಾರುತ್ತದೆ. ಅದರ ಪರಿಣಾಮವೇ ಊತ, ಬಿಸಿ, ತೀವ್ರ ನೋವು.

• ಊಟದ ನಂತರ 90 ನಿಮಿಷ ಬೆವರು ಬರುವಂತೆ ಯಾವುದೇ ಕೆಲಸ ಮಾಡುವುದು- ಇದರಿಂದ ಆಹಾರ ರಸವನ್ನು ಬೆವರು ತನ್ನಕಡೆಗೆ ಸೆಳೆಯುತ್ತದೆ, ಆಗ ಚರ್ಮದ ರೋಗಗಳು ಬರುತ್ತವೆ, ಚರ್ಮ ದೃಢವಾಗಿದ್ದರೆ ಸಂಧಿಗಳಿಗೆ ತಲುಪಿ ರೋಗ‌ತರುತ್ತದೆ.

• ರುಚಿಗೆ ಗಮನ ಕೊಟ್ಟು ಅಧಿಕ ಪ್ರಮಾಣದಲ್ಲಿ ಆಹಾರ ಸೇವಿಸಿ, ಕೆಲಸ ಮಾಡದೇ ಇದ್ದರೂ, ಹಗಲು ನಿದ್ದೆ ಮಾಡಿದರೂ ಇದೇ ರೋಗ ಬರುತ್ತದೆ- ಏಕೆಂದರೆ, ಆಹಾರ ರಸವು ನಿಧಾನವಾಗಿ ಅಂಟಿನಂತೆ ಆಗಿ, ನಿಧಾನವಾಗಿ ರಕ್ತದ ಮುಖಾಂತರ ಚರ್ಮ ಅಥವಾ ಸಂಧಿಗಳನ್ನು ಸೇರುತ್ತದೆ, ಅಲ್ಲಿ ರುಮ್ಯಾಟಿಸಮ್ ತರುತ್ತದೆ.

• ಅತಿಯಾದ ಮೊಸರು, ಉದ್ದು, ಚಪಾತಿ, ಬೇಕರಿಗಳ ಸೇವನೆ- ಅಗ್ನಿ ಶಕ್ತಿಗುಂದುತ್ತದೆ..

• ಹೊಟ್ಟೆತುಂಬ ಆಹಾರ ಸೇವಿಸಿ, ಪ್ರಯಾಣ ಮಾಡುವುದು, ತಡರಾತ್ರಿ ನಿದ್ದೆ ಮಾಡುವುದು- ಇದರಿಂದ ಸಂಧಿಗಳು ಒಣಗುವ ಕಾರಣ ಬೇಗ ಅಂದರೆ ಪಚನಪೂರ್ವ ಆಹಾರ ರಸವನ್ನು ತನ್ನೆಡೆ ಸೆಳೆದುಕೊಂಡ ಸಂಧಿಗಳು ರೋಗಕ್ಕೆ ತುತ್ತಾಗುತ್ತವೆ.

ನಿವಾರೋಪಾಯಗಳನ್ನು ನಾಳಿನ ಸಂಚಿಕೆಯಲ್ಲಿ ನೋಡೋಣ
**************


ಆಸ್ಪತ್ರೆ ರಹಿತ ಆರೋಗ್ಯಕ್ಕೆ ಆಯುರ್ವೇದ
17.05.2020.       ಸಂಚಿಕೆ-138
✍️: 
ರುಮಟಾಯ್ಡ್ ಅರ್ಥ್ರೈಟೀಸ್, Part 2

ವೈರಲ್ ಅರ್ಥ್ರೈಟೀಸ್(ಚಿಕುನ್ ಗೂನ್ಯಾ...)ಗಳನ್ನು ಯಾವುದೇ ಸೈಡ್ ಎಫೆಕ್ಟ್ ಇಲ್ಲದೇ ನಿವಾರಿಸುವುದು ಹೇಗೆ?

ನಿಮಗೆ ಗೊತ್ತಿರಲಿ, ಇಂದಿನ ಅಲೋಪಥಿ ಅರ್ಥ್ರೈಟೀಸ್ ಚಿಕಿತ್ಸೆಗಳು ಆ ರೋಗಕ್ಕಿಂತ ಭಯಾನಕ ಅಡ್ಡ ಪರಿಣಾಮಗಳನ್ನು ಹೊಂದಿವೆ, ಈ ಚಿಕಿತ್ಸೆಗಳ ಸುಳಿಜಾಲದಲ್ಲಿ ಸಿಲುಕಿ ಒದ್ದಾಡಿರಿ...!!

ಚಿಕಿತ್ಸಾ ಸೂತ್ರ:
.....ಲಂಘನಂ, ಸ್ವೇದನಂ, ತಿಕ್ತ ದೀಪನಾನಿ ಕಟೂ ನಿ ಚ | ವಿರೇಚನಂ, ಸ್ನೇಹಪಾನಂ, ಬಸ್ತಯಃ ಆಮ‌ಮಾರುತೇ || 
-ಚಕ್ರದತ್ತ ಸಂಹಿತಾ- 25

ಈ ಎಲ್ಲಾ ಚಿಕಿತ್ಸೆಗಳನ್ನು ಆಯುರ್ವೇದ ವಿಶೇಷ ಚಿಕಿತ್ಸಕರು ಮಾಡುತ್ತಾರೆ.

ರೋಗ ಬಲ ಮತ್ತು ರೋಗಿ ಬಲದ ಆಧಾರದಲ್ಲಿ ಚಿಕಿತ್ಸೆಯ ಫಲಿತಾಂಶ ಮತ್ತು ಸಮಯ ನಿರ್ಧಾರವಾಗುವ ಕಾರಣ,‌ ಅವಸರಿಸದೇ, ವೈದ್ಯನ ಸೂಚನೆಗಳ ಜೊತೆಗೆ, ಪಂಚಕರ್ಮ ಚಿಕಿತ್ಸೆಗಳನ್ನು ಪಡೆದರೆ ಶಾಶ್ವತವಾಗಿ ಗುಣಪಡಿಸಿ ಕೊಳ್ಳಬಹುದು. 

ಆದಾಗ್ಯೂ ನಮ್ಮ ಜೀವನದಲ್ಲಿ ಮಾಡಿಕೊಳ್ಳುವ ಕೆಲ ಸಣ್ಣ ಬದಲಾವಣೆಗಳಿಂದ ಯಾವುದೇ ಅಡ್ಡಪರಿಣಾಮಗಳಿಲ್ಲದೇ ಅರ್ಥ್ರೈಟೀಸನ್ನು ತಡೆಯಬಹುದು ಅಥವಾ ರೋಗ ಬಂದಮೇಲೆ ಆಗುವ ತೀವ್ರ ಹಿಂಸಾತ್ಮಕ ನೋವನ್ನು ಕಡಿಮೆ ಮಾಡಿಕೊಳ್ಳಬಹುದು.

ವಾಲುಕಾ ಸ್ವೇದ / ಮರಳಿನ ಶಾಖ:
ಮರಳನ್ನು ಹಂಚಿನ ಮೇಲೆ ಚನ್ನಾಗಿ ಹುರಿದು / ಬಿಸಿ ಮಾಡಿ, ಅದನ್ನು ಬಟ್ಟೆಯಲ್ಲಿ ಹಾಕಿ ಗಂಟು ಕಟ್ಟಿಕೊಂಡು ನೋವಿರುವ ಸ್ಥಳಗಳಿಗೆ ಶಾಖ ಕೊಟ್ಟರೆ, ನೋವು ನಿವಾರಕ ಮಾತ್ರೆಗಳಿಗಿಂತ ಶೀಘ್ರ ಮತ್ತು ಪರಿಣಾಮಕಾರಿ ಉಪಶಮನ ದೊರೆಯುತ್ತದೆ.

ಹಸಿ ಶುಂಠಿ ಮತ್ತು ಅಜಮೋದ ಸೇವನೆ:
ಆಹಾರದ ಮೊದಲು ಒಂದು ಚಮಚ ಹಸಿ ಶುಂಠಿ ರಸಕ್ಕೆ ಸ್ವಲ್ಪ ಶುದ್ಧ ಬೆಲ್ಲ ಸೇರಿಸಿ ಕುಡಿಯುವುದು.
ಆಹಾರದ ನಂತರ ಎರೆಡು ಚಿಟಿಗೆ ಓಮ ಕಾಳು(ಅಜ್ವಾಯನ್) ಅಗೆದು ನುಂಗಬೇಕು.
ಪ್ರತಿ ಆಹಾರ ಸೇವನೆ ನಂತರ ಒಂದು ಗ್ಲಾಸ್ ಬಿಸಿ-ಬಿಸಿ ನೀರನ್ನು ಕುಡಿಯಬೇಕು.

ಪಾಲಿಸಲೇಬೇಕಾದ ಬಹು ಮುಖ್ಯ ಅಂಶ:
ಹಿಂದಿನ‌ಸಂಚಿಕೆಯಲ್ಲಿ ಹೇಳಿದ ಅರ್ಥ್ರೈಟೀಸ್ ಕಾರಣಗಳನ್ನು ಬಿಡದೇ ಏನು ಮಾಡಿದರೂ ಪ್ರಯೋಜನವಿಲ್ಲ. ಹಾಗಾಗಿ ನಿರ್ದಾಕ್ಷಿಣ್ಯವಾಗಿ ರೋಗ ಉತ್ಪತ್ತಿ ಕಾರಣಗಳನ್ನು ಕೈ ಬಿಡಿ.
****************


ಆಸ್ಪತ್ರೆ ರಹಿತ ಆರೋಗ್ಯಕ್ಕೆ ಆಯುರ್ವೇದ
13.04.2020.       ಸಂಚಿಕೆ-134


✍️: 
ಫಂಗಲ್ ಸೋಂಕಿನ ಚರ್ಮ ವ್ಯಾಧಿ ಕಾರಣಗಳು, ರೋಗ ಬರುವ ವಿಧಾನ.
ಬಹುತೇಕ ಜನರು ಫಂಗಲ್ ಸೋಂಕಿನಿಂದ ಪದೇ ಪದೇ ಬಳಲುತ್ತಿರುತ್ತಾರೆ. ಅದರ ಕಾರಣ ಮತ್ತು ನಿವಾರಣೋಪಾಯಗಳನ್ನು ನೋಡೋಣ

ಕಾರಣಗಳನ್ನು ತ್ಯಾಗ ಮಾಡಿದರೆ ನಿಶ್ಚಯವಾಗಿ ಸಂಪೂರ್ಣ ನಿವಾರಣೆ ಸಾಧ್ಯ.

ಪದೇ ಪದೇ ಫಂಗಲ್ ನಿವಾರಣಾ ಔಷಧ ಸೇವಿಸಿದರೆ ಬಹು ಅಪಾಯ ಇರುತ್ತದೆ. ಹಾಗೆಂದು ಫಂಗಸ್ ಬೆಳೆಯಲು ಬಿಟ್ಟರೆ ಇನ್ನೂ ಹೆಚ್ಚಿನ ಅಪಾಯ.

ತ್ಯಜಿಸಲೇಬೇಕಾದ ಫಂಗಲ್ ವ್ಯಾಧಿಯ ಕಾರಣಗಳು:

ಶೀತೋಷ್ಣ....ಸಂತರ್ಪಣಾಪತರ್ಪಣ.....ವ್ಯವಾಯ, ವ್ಯಾಯಾಮ,........, ಭಯ, ಶ್ರಮ, ಸಂತಾಪೋ... ಶೀತೋದಕಂ.....ವಿದಗ್ಧಂ....ಛರ್ದಿ ಚ ಪ್ರತಿಘ್ನತಃ....ತ್ವಕ್ ಆದೀನ್ ದೂಷಯಂತಃ.......||
-ಚರಕ ಸಂಹಿತಾ ನಿದಾನ ಸ್ಥಾನ-5

ಉಷ್ಣಕಾಲದಲ್ಲಿ ಬಿಸಿಲಿನಿಂದ ಬಂದ ತಕ್ಷಣ ಅತಿ ಶೀತ ಜಲ ಕುಡಿಯುವುದು.

ಅತಿಪ್ರಮಾಣದ ಆಹಾರ ಸೇವಿಸಿ, ಅದು ಜೀರ್ಣವಾಗುವ ಮೊದಲೇ ಲೈಂಗಿಕ ಕ್ರಿಯೆಯಲ್ಲಿ ತೊಡಗುವುದು.

ಶರೀರವನ್ನು ಸೂಕ್ತ ಆಹಾರಗಳಿಂದ ಪೋಷಣೆ ಮಾಡಿಕೊಳ್ಳದೆ ಪದೇ ಪದೇ  ಲೈಂಗಿಕ ಕ್ರಿಯೆಯಲ್ಲಿ ತೊಡಗಿಕೊಳ್ಳುವುದು.

ಅಜೀರ್ಣದಿಂದ ಹುಳಿತೇಗು, ಹುಳಿವಾಂತಿ ಆಗುತ್ತಿರುವಾಗ ಅಥವಾ ವಾಂತಿ ಬಂದಂತಾಗುವ ಅವಸ್ಥೆಯನ್ನು, ವಾಂತಿ ತಡೆಯುವ anti vomitic ಔಷಧಿಗಳಿಂದ ನಿಲ್ಲಿಸಿಬಿಡುವುದು.

ಅಜೀರ್ಣದಲ್ಲಿ ಮತ್ತೆ ಮತ್ತೆ ಆಹಾರ ಸೇವಿಸುವುದು.
ಪದೇ ಪದೇ ಚಿಂತೆಯಿಂದ ಕೊರಗುವುದು
ಸಣ್ಣ ಕಾರಣಗಳಿಗೆ ಭಯಪಡುವುದು.
ರಾತ್ರಿ ನಿದ್ದೆ ಕೆಡುವುದು.

*************

ಆಸ್ಪತ್ರೆ ರಹಿತ ಆರೋಗ್ಯಕ್ಕೆ ಆಯುರ್ವೇದ

14.04.2020.       ಸಂಚಿಕೆ-135
✍️: 
ಫಂಗಲ್ ಸೋಂಕಿನ ಚರ್ಮ ವ್ಯಾಧಿ ಕಾರಣಗಳು Part 2
ಮತ್ತು ಅವುಗಳಂದ ಫಂಗಲ್ ಸೋಂಕು ‌ಹೇಗೆ ಬರುತ್ತದೆ? ನೋಡೋಣ.

ಬಹುತೇಕ ಜನರು ಫಂಗಲ್ ಸೋಂಕಿಗೆ ಪದೇ ಪದೇ ಆ್ಯಂಟಿ ಫಂಗಲ್ ಔಷಧ ಸೇವನೆ ಮಾಡುತ್ತಿರುತ್ತಾರೆ, ಆದರೆ ಇದು ಒಳ್ಳೆಯದಲ್ಲ. ನಿವಾರಿಸಿಕೊಳ್ಳದೇ ಇರುವುದೂ ಸರಿಯಲ್ಲ.

ಹಿಂದಿನ ಸಂಚಿಕೆಗಳಲ್ಲಿ ಹೇಳಿದ ಕಾರಣಗಳನ್ನು ತ್ಯಾಗ ಮಾಡಿದರೆ ನಿಶ್ಚಯವಾಗಿ ಸಂಪೂರ್ಣ ನಿವಾರಣೆ ಸಾಧ್ಯ.

ಈ ಆಹಾರ, ವಿಹಾರಾದಿ ಕಾರಣಗಳಿಗೂ, ಫಂಗಲ್ ಸೋಂಕಿನ ಕ್ರಿಮಿ ಚರ್ಮವನ್ನು ಆಕ್ರಮಿಸುವುದಕ್ಕೂ ಸಂಬಂಧ ಇದೆಯೇ?!!

ಹೌದು ಇದೆ,
ಶೀತೋಷ್ಣಾದಿ ಕಾರಣಗಳಿಂದ, ಚರ್ಮದ ಪದರಗಳಲ್ಲಿ ತುಂಬಿಕೊಳ್ಳುವ ಸ್ನಿಗ್ಧವಾಗಿರಬೇಕಾದ ದ್ರವವು(lubricating fluid) ಸಾರಹೀನವಾಗಿ ನೀರಿನಂತಾಗುವುದು. ಅದು ಸಶಕ್ತ ಎಣ್ಣೆಯ ಅಂಶವನ್ನು ಕಳೆದುಕೊಂಡು, ತನ್ನ ಸಹಜ ಉಷ್ಣತೆಯನ್ನು ಹಿಡಿದಿಟ್ಟುಕೊಳ್ಳಲಾಗದೇ ಚರ್ಮದ ಶಕ್ತಿ ಕುಂದುತ್ತದೆ, ಅದು ಅರ್ಧ ಜೀವಂತ ಅವಸ್ಥೆಗೆ ಬರುತ್ತದೆ.

ಫಂಗಲ್ ಸೋಂಕಿನ ಭಾಗವನ್ನು ಗಮನಿಸಿ,‌ ಆ ಚರ್ಮ ಜೀವಂತವೂ ಅಲ್ಲ‌ ನಿರ್ಜೀವವೂ ಅಲ್ಲ ಎನ್ನುವಂತೆ ಇರುತ್ತದೆ. 

ಹೀಗೆ ವಾತಾವರಣದೊಂದಿಗಿನ ತನ್ನ ಪ್ರತಿರೋಧ ಶಕ್ತಿಯನ್ನು ಕ್ಷೀಣಿಸಿಕೊಂಡ ಚರ್ಮವನ್ನು ಫಂಗಲ್ ಸೋಂಕಿನ ಕಣಗಳು ಮುತ್ತಿ ತಿನ್ನಲು ಆರಂಭಿಸುತ್ತವೆ.
ಇದನ್ನೇ ನಿರ್ಜೀವ ಚರ್ಮದಿಂದ ಒಣಗಿದ ಪುಡಿ ಉದುರಿಸುವ ಫಂಗಲ್ ಸೋಂಕು ಎನ್ನುತ್ತೇವೆ. 

ಚರ್ಮವು ಉಷ್ಣತೆಯನ್ನು ಹಿಡಿದುಕೊಳ್ಳದಿರುವುದೇ ಫಂಗಲ್ ಸೋಂಕಿಗೆ ಕಾರಣ. ವೈದ್ಯರು ಹೇಳುವ ಹೊರಗಿನಿಂದ ತೊಡುವ ಹಸಿಯದಾದ ಒಳುಡುಪುಗಳು ಕೇವಲ ಸಣ್ಣ ಸಹಾಯಕ ಕಾರಣ.
ಪರಿಹಾರವನ್ನು ನಾಳೆ ನೋಡೋಣ.
*************




ಆಸ್ಪತ್ರೆ ರಹಿತ ಆರೋಗ್ಯಕ್ಕೆ ಆಯುರ್ವೇದ
15.05.2020.       ಸಂಚಿಕೆ-136
✍️: 
ಫಂಗಲ್ ಸೋಂಕಿನ ಚರ್ಮ ವ್ಯಾಧಿ ನಿವಾರಣೋಪಾಯಗಳು Part 3

ಫಂಗಲ್ ಸೋಂಕಿಗೆ ಪದೇ ಪದೇ ಆ್ಯಂಟಿ ಫಂಗಲ್ ಔಷಧ ಸೇವನೆ ಒಳ್ಳೆಯದಲ್ಲ. ನಿವಾರಿಸಿಕೊಳ್ಳದೇ ಇರುವುದೂ ಸರಿಯಲ್ಲ.

ಸರಳ ಉಪಾಯಗಳನ್ನು ಪಾಲಿಸಿ ಫಂಗಲ್ ಸೋಂಕನ್ನು ಶಾಶ್ವತವಾಗಿ ನಿವಾರಿಸಿಕೊಳ್ಳಬಹುದು.

• ವಾರಕ್ಕೊಮ್ಮೆ ಅಥವಾ ಹದಿನೈದು ದಿನಕ್ಕೊಮ್ಮೆ ಉಪ್ಪು ನೀರು ಕುಡಿದು ವಾಂತಿ ಮಾಡಿಕೊಳ್ಳಿ(ಬೆಳಿಗ್ಗೆ ಆರು ಗಂಟೆಗೆ)- ಇದರಿಂದ ಚರ್ಮದಲ್ಲಿನ ವಿಕೃತ ದ್ರವ ಹೊರಬಂದುಬಿಡುತ್ತದೆ.
• ವಾಂತಿಯ ನಂತರ ಆ ದಿನ ಎರೆಡು ಬಾರಿ ಮಾತ್ರ ಹಗುರವಾದ ಆಹಾರ ಸೇವಿಸಿ,‌ ಅಂದರೆ ಮೆತ್ತನೆ ಅನ್ನ ಮತ್ತು ಬೇಯಿಸಿದ ತರಕಾರಿ ಸಂಬಾರು- ಇದರಿಂದ ಆಹಾರ ಪೂರ್ಣ ಪಚನವಾಗಿ ಪೋಷಕಾಂಶಗಳು ಚರ್ಮಕ್ಕೆ ಬಲಕೊಡುತ್ತವೆ.
• ಯಾವುದೇ ಕಾರಣಕ್ಕೂ ಹಸಿ ತರಕಾರಿ ಕಾಳು ಸೇವನೆ ಬೇಡ- ಇದರಿಂದ ಹೆಚ್ಚು ಹೆಚ್ಚು ಅಜೀರ್ಣವಾಗುತ್ತದೆ. ನೆನಪಿರಲಿ‌ ಅಜೀರ್ಣವೇ ಚರ್ಮದ ಕಾಯಿಲೆಗಳ ಶತ್ರು.
• ಹುಳಿ(ಉಪ್ಪಿನಕಾಯಿ, ವೀನು, ಉದ್ದು, ಬಿಸ್ಕೆಟ್, ಮೊಸರು, ಸಿಹಿ ತಿಂಡಿಗಳು ಮತ್ತು ಅತಿಯಾದ ಆಹಾರ ಸೇವನೆ) ಬರಿಸುವ ಆಹಾರ ಸೇವನೆ ಬೇಡವೇ ಬೇಡ- ಹುಳಿ ಯಾವಾಗಲೂ ಚರ್ಮದ ಶಕ್ತಿಯನ್ನು ಕುಂದುತ್ತದೆ.

• ಪೂರ್ಣ ನಿವಾರಣೆಯಾಗುವ ತನಕ ದಿನಕ್ಕೆ ಎರೆಡು ಊಟ ಮಾಡಿ, ಬೇಗ ಆಹಾರ ಸೇವನೆ ಮಾಡಿ, ತಾಜಾ ಆಹಾರ ಸೇವಿಸಿ.

• ಬೆಟ್ಟದ ನೆಲ್ಲಿಕಾಯಿ(ಕೃತಕವಾಗಿ ಬೆಳೆದ ನೆಲ್ಲಿಕಾಯಿ ಬೇಡವೇಬೇಡ) ರಸವನ್ನು ನಿತ್ಯ ಸೇವಿಸಿ- 
√ ಬೆಳಿಗ್ಗೆ ಏಳು ಗಂಟೆಗೆ ಒಂದು ತಾಜಾ ನೆಲ್ಲಿಕಾಯಿಯನ್ನು ಅಥವಾ ಒಂದು ಗ್ರಾಂ ಪ್ರಮಾಣದ ಒಣ ನೆಲ್ಲಿಕಾಯಿ ಪುಡಿಯನ್ನು ಜೇನುತುಪ್ಪದೊಂದಿಗೆ ಸೇವಿಸಿ.
√ ಕನಿಷ್ಠ ಆರು ವಾರಗಳ ಕಾಲ ಸೆವಿಸಿ.
√ ಆರು ತಿಂಗಳವರೆಗೆ ಸೇವಿಸುವುದು ಉತ್ತಮ.
• ಚನ್ನಾಗಿ ನಿದ್ದೆ ಮಾಡಿ.
• ಅನಾವಶ್ಯಕ, ಅನಗತ್ಯ, ಬಗೆಹರಿಯದ ಚಿಂತೆಗಳಿಂದ ನಿರ್ದಾಕ್ಷಿಣ್ಯವಾಗಿ ಹೊರಬನ್ನಿ.
*********


ಆಸ್ಪತ್ರೆ ರಹಿತ ಆರೋಗ್ಯಕ್ಕೆ ಆಯುರ್ವೇದ
20.05.2020.       ಸಂಚಿಕೆ-141
✍️: 
ಚರ್ಮದ ಅಲರ್ಜಿ ಅಥವಾ ಪಿತ್ತಗಂಧೆಗಳು

ಸಂಸ್ಕೃತದಲ್ಲಿ "ಶೀತಪಿತ್ತ, ಉದರ್ದ, ಕೋಠ" ಎಂದು ಕರೆಸಿಕೊಳ್ಳುವ ತೀವ್ರ ತುರಿಕೆಯುಳ್ಳ ಪಿತ್ತದ ಗಂಧೆಗಳಿಗೆ ಶಾಶ್ವತ ಪರಿಹಾರ ಸಾಧ್ಯ.

ಈ ತೊಂದರೆಗೆ ಸಿಟ್ರಿಜಿನ್ ಮುಂತಾದ ಆ್ಯಂಟಿ ಹಿಸ್ಟಮಿನ್ ಮಾತ್ರೆಗಳಿಂದ ಪರಿಹಾರ ಕಂಡುಕೊಳ್ಳುತ್ತಿರುವಿರಿ ಎಂದರೆ ನಿಜಾರ್ಥದಲ್ಲಿ ಕೆಲ ವರ್ಷಗಳಲ್ಲಿ ದೊಡ್ಡ ದೊಡ್ಡ ತೊಂದರೆಗಳಿಗೆ ಈಡಾಗುವುದು ಖಂಡಿತಾ.

ಚರ್ಮದಲ್ಲಿ ಪಿತ್ತ ಗಂಧೆಗಳು ಏಳಲು ಕಾರಣ: 
ತುಂಬಾ ತಂಪಾದ ಗಾಳಿಯಲ್ಲಿ ಇರುವುದು,‌ ಮಲಗುವುದು.
ಪದೇ‌ ಪದೇ ಸಿಹಿ ಪದಾರ್ಥಗಳನ್ನು ಸೇವಿಸುವುದು
ಪದೇ ಪದೇ ಹುಳಿ ಪದಾರ್ಥಗಳಾದ- ಹುಳಿ‌ಮಜ್ಜಿಗೆ, ಮೊಸರು, ಉದ್ದು ಹಾಕಿ ನೆನೆಸಿದ ಹಿಟ್ಟಿನಿಂದ ತಯಾರಿಸಿದ ಪದಾರ್ಥಗಳು, ಉಪ್ಪಿನಕಾಯಿ, ಬೇಕರಿ ತಿನಿಸುಗಳನ್ನು ಸೇವಿಸುವುದು

ಅಜೀರ್ಣ, ಹುಳಿತೇಗು, ಹುಳಿವಾಂತಿ ಬರುವಂತಹ ಅಂದರೆ ಪಚನಕ್ಕೆ ಕಷ್ಟವಾಗುವ ಆಹಾರ ಸೇವಿಸುವುದು.

ಪರಿಹಾರ ಏನು?

ಅತ್ಯಂತ ಸರಳವಾಗಿ ತಡೆಯಬಹುದು, ಹೋಗಲಾಡಿಸಿಕೊಳ್ಳಬಹುದು.
ಮೊದಲೇ ತಿಳಿಸಿದ ಅಲರ್ಜಿ ಬರುವ ಎಲ್ಲಾ ಕಾರಣಗಳನ್ನು ನಿಲ್ಲಿಸಿಬಿಡಿ.
ಶುದ್ಧ ಅರಿಶಿಣ ಪುಡಿಯನ್ನು ಬಿಸಿ ಹಾಲಿನಲ್ಲಿ ಹಾಕಿಕೊಂಡು ದಿನಕ್ಕೆ ಎರೆಡುಬಾರಿ ಸೇವಿಸಿ.
ಕಡಿಮೆ ಆಗದಿದ್ದರೆ ಯಕೃತ್ ಒಳಗೆ ಅಲರ್ಜಿ ಉಂಟುಮಾಡುವ ತೊಂದರೆ ಇರುತ್ತದೆ. ಆದ ಕಾರಣ,
"ಆಯುರ್ವೇದ ವೈದ್ಯರನ್ನು ಕಾಣುವುದು."
ಅವರು ಕೊಡುವ ಔಷಧವನ್ನು ಕಹಿ ಎಂದು ದೂರದೇ ಸೇವಿಸುವುದು.
*********


ಆಸ್ಪತ್ರೆ ರಹಿತ ಆರೋಗ್ಯಕ್ಕೆ ಆಯುರ್ವೇದ
09.05.2020.       ಸಂಚಿಕೆ-130
✍️: 
ಕೆಲವರು ಎಷ್ಟೇ ಮದ್ಯ, ತಂಬಾಕು, ಅಪಥ್ಯ ಆಹಾರ... ಮುಂತಾದವನ್ನು ಸೇವಿಸಿದರೂ ಏನೂ ಆಗದು ಏಕೆ?

ಬಹಳ ಜನರು ನಮಗೆ ಈ ಪ್ರಶ್ನೆ ಕೇಳುತ್ತಿರುತ್ತಾರೆ. ಇನ್ನೂ ಅನೇಕರ ಮನಸ್ಸಿನಲ್ಲಿ ಈ ಸಂದೇಹ ಇದೆ.

ಶುಕ್ರಾರ್ತವಸ್ಥೈರ್ಜನ್ಮ......ವಿಷೇಣೇವ ವಿಷಕ್ರಿಮೇ ತೈ.............
-ವಾಗ್ಭಟ ಸೂತ್ರಸ್ಥಾನ

ಈ ಶರೀರಕ್ಕೆ ಯಾವ ರಸಪ್ರಧಾನ ಆಹಾರ ಶ್ರೇಷ್ಠ, ಯಾವುದು ಅಶ್ರೇಷ್ಠ ಮತ್ತು ಯಾವ ಪದಾರ್ಥ ಅಮೃತ ಯಾವುದು ವಿಷ ಎಂದು ನಮ್ಮ ತಂದೆ-ತಾಯಿಯ ಬೀಜ ಸಂಯೋಗದ ಸಮಯದಲ್ಲಿಯೇ ನಿರ್ಧಾರವಾಗುತ್ತದೆ.

ಕೆಲವರಿಗೆ ಕೆಲವು ಆಹಾರ ಅಲರ್ಜಿಯಾಗುವುದಿಲ್ಲವೇ? ಅದಕ್ಕೆ ಕಾರಣ ಇದೇ ಅಂಶ.

ವಿಷಪೂರಿತ ಪ್ರಾಣಿಗಳಿಗಳ ರಕ್ತದಲ್ಲಿ ತನ್ನ ವಿಷ ಹರಿದಾಡಿದರೂ ಅದರಿಂದ ಆ ಪ್ರಾಣಿ ಸಾಯುವುದಿಲ್ಲ, ಎಂದು ಉಪಮೆ ಕೊಡುತ್ತಾರೆ ಆಚಾರ್ಯರು. ಅಂದರೆ ಹಾವು ತನ್ನ ವಿಷದಿಂದ ಎಂದೂ ಸಾಯುವುದಿಲ್ಲ.

ಹಾಗಾದರೆ ಇದು ಅನ್ಯಾಯವೇ?

ಕೆಲವರು ಮಾಂಸಾಹಾರ, ಮದ್ಯ ಸೇವನೆಯ ದುಷ್ಪರಿಣಾಮಕ್ಕೆ ಒಳಗಾಗುವುದಿಲ್ಲ ಅಥವಾ ತುಂಬಾ ದೀರ್ಘಕಾಲದ ನಂತರ ಸ್ವಲ್ಪವೇ ತೊಂದರೆ ಅನುಭವಿಸುತ್ತಾರೆ....!! ಇದು ಅನ್ಯಾಯ ಎಂದು ಕೆಲವರಿಗೆ ಅನ್ನಿಸುತ್ತದೆ.

ನಿಜ ಕಾರಣ ಇದು:

ಜೀವಿಯ ಮನಸ್ಸು ಸಾತ್ವಿಕವಾದಷ್ಟೂ ಆಹಾರ ಸೂಕ್ಷ್ಮವಾಗುತ್ತಾ ಸಾಗುತ್ತದೆ. ಅದೇ ಮನಸ್ಸು ತಮೋಪ್ರಧಾನವಾದರೆ ಅದರ ಆಹಾರ ಸ್ಥೂಲವಾಗುತ್ತದೆ.

ಸ್ಥೂಲ ಆಹಾರ ಎಂದರೆ ಸಂಸ್ಕಾರ ರಹಿತ, ಕುಸಂಸ್ಕೃತ, ತಂಗಳು...ಮುಂತಾದವು. ಇವು ಕೆಲವರಿಗೆ ಏನೂ ತೊಂದರೆ ಮಾಡವು.

ಸೂಕ್ಷ್ಮ ಎಂದರೆ, ಆಗತಾನೇ ತಯಾರಾದ ತಾಜಾ ಆಹಾರ, ಚನ್ನಾಗಿ ಬೇಯಿಸಿದ, ಮೃದು, ಬಿಸಿ ಮತ್ತು ಸೇವಿಸುವಾಗಿನ ಹಿತವಾದ ಮತ್ತು ಹಿತಕರ ವಾತಾವರಣ, ಆಹಾರ ಕೊಡುವವರ ಮನಸ್ಸಿನ ಸೂಕ್ಷ್ಮತೆಗಳೂ ಮತ್ತು ಅವರ ನಡವಳಿಕೆಗಳೂ ಸೇರುತ್ತವೆ. ಇನ್ನೂ ಕೆಲವರಿಗೆ, ಬೇರೆಯವರ ಮನೆಯಲ್ಲಿ ತಿಂದರೇ ಆಗುವುದಿಲ್ಲ, ಇಂತವರು ಮದ್ಯ, ಅಪಥ್ಯ ಆಹರ ಎಂದು ಹೋದರೆ ರೋಗ ಬರುವುದು ಖಂಡಿತ.

ಹಾಗಾಗಿ 
ನಮಗೆ ಒಗ್ಗುವ ಆಹಾರ ನಮ್ಮದು, ಬೇರೆಯವರ ಆಹಾರ ನಮ್ಮದಲ್ಲ.

ಈ ವಿಷಯದಲ್ಲಿ ಇನ್ನೂ ಅನೇಕ ಅಂಶಗಳ ಸೂಕ್ಷ್ಮ ಭಂಡಾರವೇ ಇದೆ, ಅದು ತಿಳಿದರೆ ಹೆಚ್ಚು ಕಡಿಮೆ ರೋಗಗಳು ಬರುವುದೇ ಇಲ್ಲ. ಅದರ ಸಾರ ಮಾತ್ರ ನೋಡುವುದಾದರೆ- "ಹೇ ಮನುಜ ನಿನಗೆ ಯಾವ ರೀತಿಯಿಂದಲೂ ತೊಂದರೆ ಕೊಡದ, ಸುಲಭವಾಗಿ ಜೀರ್ಣವಾಗುವ ಆಹಾರಗಳನ್ನು ಸೇವಿಸು ಮತ್ತು ಸುಲಭವಾಗಿ ಅರ್ಥವಾಗುವ, ಮನಸ್ಸಿಗೆ ಹಿಂಸೆಯಾಗದ ಕಾಯಕವನ್ನು (ವಿಹಾರಗಳನ್ನು) ಪಾಲಿಸು"
ಇದೇ ಆರೋಗ್ಯದ ಗುಟ್ಟು
**********

ಆಸ್ಪತ್ರೆ ರಹಿತ ಆರೋಗ್ಯಕ್ಕೆ ಆಯುರ್ವೇದ
06.05.2020.       ಸಂಚಿಕೆ-127

✍️: 
• ಹೊಟ್ಟೆಯುಬ್ಬರ • ಎದೆಯ ಎಡಭಾಗದ ಒತ್ತಡ • ತಡಯಲಾರದ ತೀವ್ರ ಹಸಿವು ಅಥವಾ • ಹಸಿವಾಗದಿರುವಿಕೆಗಳಿಗೆ ಸರಳ ಪರಿಹಾರ

ಈ ಎಲ್ಲ ಲಕ್ಷಣಗಳಿಗೆ ಕಾರಣ ದೊಡ್ಡಕರುಳಿನಲ್ಲಿ ಉತ್ಪತ್ತಿಯಾಗುವ ವಿಕೃತ ವಾಯು.

ಲಾಜ ಮಂಡೋ.....ಪಾಚನ ದೀಪನ |
ವಾತಾನುಲೋಮನ ಹೃದ್ಯಃ ಪಿಪ್ಪಲಿ ನಾಗರಾಯುತಃ ||

-ಸುಶ್ರುತ ಸಂಹಿತಾ

ಭತ್ತ ಅಥವಾ ಜೋಳವನ್ನು ಹುರಿದು "ಅರಳುಗಳನ್ನು"( Like pop corn) ತಯಾರಿಸಿ, ಅವುಗಳನ್ನು ನೀರಿನಲ್ಲಿ ಬೇಯಿಸಿ ಗಂಜಿ ತಯಾರಿಸಿ, ರುಚಿಗೆ ತಕ್ಕಷ್ಟು ಸೈಂಧವ ಉಪ್ಪು(ಸಿಗದಿದ್ದರೆ ಅಡುಗೆ ಉಪ್ಪು), ಅರ್ಧ ಗ್ರಾಂ ಸಣ್ಣ ಹಿಪ್ಪಲಿ ಪುಡಿ ಮತ್ತು ಅರ್ಧ ಗ್ರಾಂ ಶುಂಠಿ ಪುಡಿಯನ್ನು ಹಾಕಿ  ಕದಡಿ ಕುಡಿಯಬೇಕು. 
ದಿನದಲ್ಲಿ ಎರೆಡುಬಾರಿ ಈ ಗಂಜಿಯನ್ನೂ ಮತ್ತು ಒಂದು ಬಾರಿ ಬಸಿದು ತಯಾರಿಸಿದ ಅನ್ನ, ತರಕಾರಿ ಸಂಬಾರು ಸೇವಿಸಿ.

ಈ ಪದ್ಧತಿಯ 3 ರಿಂದ 5 ದಿನ ಪಾಲನೆಯಿಂದ ನಿವೃತ್ತಿಯಾಗುವ ಲಕ್ಷಣಗಳು:
ವಾತವನ್ನು ಹೊರಹಾಕುತ್ತದೆ ಮತ್ತು ಹೊಸದಾಗಿ ಉತ್ಪತ್ತಿಯಾಗದಂತೆ ತಡೆದು ಹೊಟ್ಟೆಯುಬ್ಬರವನ್ನು ನಿವಾರಿಸುತ್ತದೆ.

ಸಾಮಾನ್ಯವಾಗಿ descending colon ನಲ್ಲಿರುವ ಗ್ಯಾಸ್ ನಿಂದ ಎದೆಯ ಎಡಭಾಗದ ಒತ್ತುತ್ತದೆ. ಗ್ಯಾಸ್ ಹೊರಹೋಗುವ ಕಾರಣ ಇದು ನಿವೃತ್ತಿಯಾಗುತ್ತದೆ.

ಅಗ್ನಿ ದೀಪನವಾಗುವ ಕಾರಣ ಹಸಿವಾಗುತ್ತದೆ, ಶೇಷ ಆಹಾರ ಪಾಚನವಾಗುವ ಕಾರಣ ತೀವ್ರ ಹಸಿವು ಅಥವಾ ಸಂಕಟ ಆಗುವುದೇ ಇಲ್ಲ.
**********


ಆಸ್ಪತ್ರೆ ರಹಿತ ಆರೋಗ್ಯಕ್ಕೆ ಆಯುರ್ವೇದ
28.04.2020.       ಸಂಚಿಕೆ-119

✍️: 
ಬಿ.ಪಿ, ಹೃದ್ರೋಗ, ಕಿಡ್ನಿ ತೊಂದರೆ,ಅಜೀರ್ಣ, ಹೊಟ್ಟೆಯಲ್ಲಿ ಉರಿಹೈಪೋಥೈರಾಯ್ಡಿಸಮ್, ಕಾಲುಬಾವು, ಊಟದ ನಂತರ ಮತ್ತು ಬರುವಿಕೆ, ರಕ್ತಹೀನತೆ,  ಸದಾ ಮನದಲ್ಲಿ ಅಸಂತುಷ್ಟಿಯಾಗಿರುವುದು ಹಾಗೂ ರತಿಸುಖ ಇಲ್ಲದಿರುವಿಕೆಗೆ ಕಾರಣ ರಕ್ತಪಿತ್ತ ಎಂಬ ಮಾಹಾನ್ ಕಾಯಿಲೆ.
**********
ಇಷ್ಟೆಲ್ಲಾ ರೋಗಗಳಿಗೆ ಆಯುರ್ವೇದಾಚಾರ್ಯರು ಹೇಳುವ ಮೂಲ ಕಾರಣ ಒಂದೇ ರಕ್ತಪಿತ್ತ

ಕ್ರೋಧ, ಶೋಕ....ವಿರುದ್ಧಾನ್ನ, ಕಟ್ವಮ್ಲ ಲವಣ......ವಿದಹ್ಯತಿ ಆಶು ಶೋಣಿತಮ್||
ಸದನಂ, ಶಿತಕಾಮಿತ್ವ......ಭವಿಷ್ಯತಿ ||
ದೌರ್ಬಲ್ಯ....ಮದಾಃ....ಹೃದ್ಯತುಲ್ಯಾ ಚ ಪೀಡಾ...ವಿರತಿಃ ಅಪಿ ರತೇ ರಕ್ತಪಿತ್ತೋಪಸರ್ಗಾಃ ||
-ಸುಶೃತ ಸಂಹಿತಾ

ರಕ್ತವು ತನ್ನ ಸ್ವಭಾವವಾದ ಕಿಂಚಿತ್ ಕ್ಷಾರತ್ವವನ್ನು ಕಳೆದುಕೊಂಡು, ಆಮ್ಲತ್ವನ್ನು ಅಥವಾ ಅತಿಯಾದ ಕ್ಷಾರತ್ವವನ್ನು ಹೊಂದುವುದರಿಂದ, ಇಡೀ ಶರೀರದಲ್ಲಿ ಸಂಚರಿಸುವ ರಕ್ತವು ಎಲ್ಲಾ ಅವಯವ ಧಾತುಗಳನ್ನು ಕೆಡಿಸುತ್ತಾ ಮಾಹಾನ್ ಕಾಯಿಲೆಗಳ ಗುಂಪನ್ನೇ ಹೊತ್ತು ತರುತ್ತದೆ.‌ ಅದು ಯಾವ ಅವಯವದ ಮೇಲೆ ಪರಿಣಾಮ ಬೀರುತ್ತದೆ ಎನ್ನುವುದರ ಮೇಲೆ‌ಒಬ್ಬರಿಗೆ ಒಂದೊಂದು ರೀತಿಯ ರೋಗಗಳು ಬರುತ್ತವೆ.

ಈ ಕೆಳಗಿನ‌ ಲಕ್ಷಣ ಉಳ್ಳವರು ರಕ್ತಪಿತ್ತದಿಂದ ಬಾಧೆಗೊಳಗಾಗಿರುತ್ತರೆ. ತಪ್ಪಿಸಿಕೊಳ್ಳುವುದು ಅತ್ಯಂತ ಸುಲಭ ಅದಕ್ಕೆ ಹೇಳಿರುವ ಕಾರಣಗಳನ್ನು ಮುಲಾಜಿಲ್ಲದೇ ತ್ಯಜಿಸಿ ಪೂರ್ಣ ಗುಣಮುಖರಾಗಬಹುದು.
1. ಅಂಗಗಳಲ್ಲಿ ಆಯಾಸ / ದುರ್ಬಲತಾ.
2. ಶರೀರ ತಂಪನ್ನು ಅಪೇಕ್ಷೆ ಪಡುವುದು.
3. ವಾಂತಿ ಆಭಾಸ/ವಾಂತಿ ಆಗುವುದು.
4. ದಾರಿನಡೆದರೆ ಬಹಳ ಉಸಿರು ಬಿಡುವುದು.
5. ಉಂಡ ತಕ್ಷಣ ಮತ್ತೇರುವುದು.
6. ಏನು ತಿಂದರೂ ದೂರವಾಗದ ರಕ್ತಹೀನತೆ
7. ಶರೀರದಲ್ಲಿ ಉರಿ.
8. ಹಲವರಿಗೆ ಮೂರ್ಛೆ ಬರುವುದು.
9. ಆಹಾರ ಸೇವನೆ ನಂತರ ಅಜೀರ್ಣ, ಹೊಟ್ಟೆ ಉಬ್ಬರ, ಉರಿ.
10. ಹೃದಯದ ಭಾಗದಲ್ಲಿ ಭಾರ/ನೋವು.
11. ಬಹಳ ಬಾಯಾರಿಕೆ, ಬಾಯಿ‌ಒಣಗುವಿಕೆ.
12. ಧ್ವನಿ ಕ್ಷಿಣಿಸುವಿಕೆ.
13. ತಲೆಯಲ್ಲಿ ನೋವು / ಹೊಡೆತ / ತಾಪ.
14. ದುರ್ವಾಸನೆಯುಕ್ತ ಉಗುಳು.
15. ಆಹಾರದ ಇಚ್ಛೆ ಇಲ್ಲದಿರುವುದು.
16. ಲೈಂಗಿಕ ಕ್ರಿಯೆ ಇಚ್ಛೆಯಾಗದಿರುವಿಕೆ.
17. ಕೈ ಕಾಲುಗಳಲ್ಲಿ‌ ಊತ
18. ಫುಪ್ಪಸದ ಶಕ್ತಿ ಕ್ಷೀಣಿಸುವಿಕೆ
19. ಶರೀರ ಒಣಗುವಿಕೆ
20. ಕೆಲವು ಬಾರಿ ರಕ್ತಸ್ರಾವ ಆಗುವಿಕೆ
***********

ಆಸ್ಪತ್ರೆ ರಹಿತ ಆರೋಗ್ಯಕ್ಕೆ ಆಯುರ್ವೇದ
29.04.2020.       ಸಂಚಿಕೆ-120


✍️: ರಕ್ತಪಿತ್ತವನ್ನು ತಡೆಯೋಣ Part 2
ಅನೇಕ ರೋಗಗಳಿಗೆ ಕಾರಣವಾದ ರಕ್ತಪಿತ್ತ ತಡೆ ಸುಲಭ. ಅದರ ಉತ್ಪತ್ತಿಯ ಕಾರಣಗಳನ್ನು ಬಿಟ್ಟರೆ ಸಾಕು.

ಆದರೆ, ಇಂದಿನ ನಮ್ಮ ನಿತ್ಯದ ಆಹಾರಗಳಲ್ಲಿ‌ ಹೆಚ್ಚಿನವು ರಕ್ತಪಿತ್ತವನ್ನು ಮಾಡುತ್ತಿವೆ!!!
ದೊಡ್ಡ ದೊಡ್ಡ ಕಾಯಿಲೆಗಳಿಂದ ನರಳುವ ಬದಲು ಆಹಾರ ಬದಲಿಸಿ ಸುಖವಾಗಿರೋಣ.

ರಕ್ತಪಿತ್ತ ಕಾರಣಗಳು:

ಕ್ರೋಧ, ಶೋಕ, ಭಯ...ಕಟ್ವಮ್ಲಲವಣ.....ವಿದಾಹಿನಃ ನಿತ್ಯಮಭ್ಯಾಸತೋ......ಆಶು ಶೋಣಿತಮ್||
-ಸುಶೃತ ಸಂಹಿತಾ

ರಕ್ತಪಿತ್ತ ಕಾರಣಗಳು:

1. ಸಿಟ್ಟು
2. ದುಃಖ
3. ಭಯ
4. ಆಯಾಸ
5. ವಿರುದ್ಧ ಆಹಾರ
6. ಬಿಸಿಲು-ಬೆಂಕಿ ಬಳಿ ಇರುವುದು
7. ಖಾರ-ಉಪ್ಪು-ಹುಳಿ-ಕ್ಷಾರ
8. ತೀಕ್ಷ್ಣ ಮಸಾಲೆ
9. ತಿಂದರೆ ಅಜೀರ್ಣವಾಗುವ ಆಹಾರ
10. ಹಾರಕ, ನವಣೆ ಮುಂತಾದ ತೃಣಧಾನ್ಯಗಳು
11. ಅವರೆಕಾಳು
12. ಉದ್ದು
13. ಹುರುಳಿಕಾಳು
14. ಮೊಸರು
15. ಮಜ್ಜಿಗೆ
16. ನೀರು ಬೆರೆಸದ ಮಜ್ಜಿಗೆ
17. ಹುಳಿಗಂಜಿ
18. ಆಲೂ
19. ಗೆಣಸು
20. ಮೂಲಂಗಿ
21. ಬೆಳ್ಳುಳ್ಳಿ
22. ಈರುಳ್ಳಿ
23. ಮದ್ಯಪಾನ
24. ಮುದ್ದೆ, ಮೈದಾ,‌ಗೋಧಿ
25. ಶರೀರ ಬಿಸಿ ಇರುವಾಗ ಅತಿಯಾದ ನೀರು
26. ಶರೀರ ಬಿಸಿ ಇರುವಾಗ ಹಸಿ ಹಾಲು

ಇವುಗಳನ್ನು ಹೆಚ್ಚಿನ ಪ್ರಮಾಣದಲ್ಲಿ, ಪದೇ ಪದೇ ಸೇವಿಸುವ ರೂಢಿ ರಕ್ತಪಿತ್ತಕ್ಕೆ ಕಾರಣ

ಆದಾಗ್ಯೂ ನಾವು ಇಡ್ಲಿ ದೋಸೆ ಹೆಸರಿನಲ್ಲಿ‌ ಉದ್ದುಬೆರೆಸಿದ ಹುಳಿ ಹಿಟ್ಟನ್ನು ನಿತ್ಯವೂ ಸೇವಿಸುವ ರೂಢಿ ಮಾಡಿಕೊಂಡ ಕಾರಣ ಅತ್ಯಂತ ಶೋಚನೀಯ ರೋಗಗಳಿಗೆ ತುತ್ತಾಗುತ್ತಿದ್ದೇವೆ.

ಏಕೆಂದರೆ?
ಈ ಆಹಾರಗಳು ಹುಳಿ, ತೀಕ್ಷ್ಣ, ಕ್ಷಾರಗಳಿಂದ ಕೂಡಿದ ದ್ರವವನ್ನು ರಕ್ತಕ್ಕೆ ಸೇರಿಸುತ್ತದೆ. ರಕ್ತದ‌ಪ್ರಮಾಣ ವಿಕೃತವಾಗಿ ವೃದ್ಧಿಯಾಗುತ್ತದೆ  ಇದು ರಕ್ತನಾಳಗಳ ಶಕ್ತಿಯನ್ನು ಕುಗ್ಗಿಸುತ್ತದೆ ಮತ್ತು ಹೃದಯವು‌ ಹೆಚ್ಚಿನ ರಕ್ತವನ್ನು ಪಂಪ್ ಮಾಡಲು ಕಷ್ಟಪಡುತ್ತದೆ.
ವಿಕೃತ ದ್ರವಸ್ರಾವದಿಂದ ಕೂಡಿದ ರಕ್ತವು ಶರೀರದ ಯಾವುದೇ ಅಂಗದೊಳಗೆ ತನ್ನ ಹುಳಿದ್ರವವನ್ನು ಸೇರಿಸಿ ಭಯಾನಕ ರೋಗಗಳನ್ನು ತರುತ್ತದೆ. 

ಏನು ಮಾಡಬಹುದು?
ಸದ್ಯಕ್ಕೆ 21 ದಿನ ಇವುಗಳನ್ನು ಸಂಪೂರ್ಣ ತ್ಯಜಿಸಿ. ನಂತರ ಯಾವುದೇ ಆಹಾರವನ್ನು ಹುಳಿಯಾಗಿಸಿಕೊಳ್ಳದೇ ಸೇವಿಸಿ ಮತ್ತು ಕ್ರೋಧ ಚಿಂತೆ ದುಃಖಗಳಿಂದ ಕೊರಗುವುದನ್ನು ಬಿಡಿ.
ಭಯಾನಕ ರೋಗಗಳಿಂದ ರಕ್ಷಿಸಿಕೊಳ್ಳಿ
**********

ಆಸ್ಪತ್ರೆ ರಹಿತ ಆರೋಗ್ಯಕ್ಕೆ ಆಯುರ್ವೇದ
30.04.2020.       ಸಂಚಿಕೆ-121
✍️: 
ರಕ್ತಪಿತ್ತದಲ್ಲಿ ಸೇವಿಸಬಹುದಾದ ಆಹಾರಗಳು ಮತ್ತು ಪಾಲಿಸಬೇಕಾದ ನಿಯಮ Part 3

ಸೇವಿಸಬಹುದಾದ ಆಹಾರಗಳು
ಷಷ್ಟಿಕ ಶಾಲಿ(ಅರವತ್ತು ದಿನಗಳಲ್ಲಿ ಬೆಳೆಯುವ ಅಕ್ಕಿ)

ಪ್ರಿಯಂಗು(ನವಣೆ, ಕಂಗು)ಬೆಣ್ಣೆ, ತುಪ್ಪ ಅಥವಾ ಹಾಲಿನ ಜೊತೆಗೆ ಮಾತ್ರ ಬಳಸುವುದು.

ಹಳೆಯ ಕಾಡುಭತ್ತ
ಜವೆಗೋಧಿ
ಹಳೆಯ ಸಣ್ಣಕ್ಕಿ
ಹೆಸರುಬೇಳೆ
ಚನ್ನಂಗಿ ಬೇಳೆ
ತೊಗರಿ
ಮಡಿಕೆಕಾಳು
ಮರ್ಮಿ(ನದಿಯ ಮೀನು)
ಭಾರತೀಯ ಹಸುವಿನ ಹಾಲು

ಹಸುವಿನ ತುಪ್ಪ(ಮೊಸರು ಕಡೆದು ಮಜ್ಜಿಗೆಯಿಂದ ತೆಗೆದ ಬೆಣ್ಣೆಯಿಂದ ತಯಾರಾದ ತುಪ್ಪ
(ಸೂ: ಅಂಗಡಿಯ ತುಪ್ಪ ಕೇವಲ ಕೊಬ್ಬು ಆದ್ದರಿಂದ ಬೇಡ)

ಆಡಿನ‌ಹಾಲು ಮತ್ತು ತುಪ್ಪ
ಎಮ್ಮೆಯ ತುಪ್ಪ(ಎಮ್ಮೆ ಹಾಲು ಬೇಡ)
ಹರವೆ ಸೊಪ್ಪು
ಪಡುವಲಕಾಯಿ
ಬೆತ್ತದ ಕುಡಿ(ಬಿದಿರ ಕಳಿಲು)
ಹಳೆಯ ಬೂದು ಕುಂಬಳ
ತಾಳೆಹಣ್ಣು
ಕಲ್ಲುಸಕ್ಕರೆ(ಇಂದು ಶುದ್ಧ ಕಲ್ಲುಸಕ್ಕರೆ ಸಿಗುವುದು ದುರ್ಲಭ)
ಬಿಲ್ವಪತ್ರೆ ಕಾಯಿ
ಶುದ್ದ ದಾಳಿಂಬೆ ಹಣ್ಣು(ವಾಣಿಜ್ಯ ಕೃಷಿಯ ಹಣ್ಣು ಬೇಡ)
ಖರ್ಜೂರ
ಬೆಟ್ಟದ ನೆಲ್ಲಿಕಾಯಿ
ಸಬ್ಬಸಿಗೆ ಸೊಪ್ಪು
ಶತಾವರಿ
ಎಳೆಯ ತೆಂಗಿನ ಕೊಬ್ಬರಿ
ತಾವರೆ ದಂಟು, ತಾವರೆ ಗಡ್ಡೆ
ಬೆಳವಲಹಣ್ಣು
ಸೋರೆಕಾಯಿ
ಬೇವಿನ ಎಲೆ
ನೆಲಬೇವು
ಭತ್ತದ ಹರಳು
ಅಕ್ಕಿಯ ಹಿಟ್ಟು ಮತ್ತು ಹುರಿಹಿಟ್ಟು
ಹುಳಿ ಇರದ ದ್ರಾಕ್ಷಿ
ಶುದ್ಧ ಜೇನುತುಪ್ಪ
ಎಣ್ಣೆ ಅಭ್ಯಂಗ
ಶ್ರೀಗಂಧ ಮುಂತಾದ ತಣ್ಣನೆ ಲೇಪ
ಕಬ್ಬು
ತಣ್ಣೀರ ಸ್ನಾನ, ಸೇಚನ(ಜಲ ಧಾರ)
ಶತದೌತ ಘೃತ
ತಂಪಾದ ಹಿತಕರ ಗಾಳಿ
ಮನೋನುಕೂಲವಾದ ಕಥೆಗಳು
ಶೀತಲಭೂಮಿ ಮತ್ತು ಮನೆ
ಮಣಿಧಾರಣ
ಬಾಳೆ, ತಾವರೆ ಎಲೆಗಳ ಎಲೆಯ ಹಾಸಿಗೆ
ಬಾಳೆನಾರಿನ ವಸ್ತ್ರ
ಪಚ್ಚೆ ಕರ್ಪೂರ
ಪತಿ ಪತ್ನಿಯರ ಪರಸ್ಪರ ಹಿತವಚನಗಳು

ಇವೆಲ್ಲವನ್ನು ಪ್ರಮಾಣವರಿತು ಮಿತವಾಗಿ ಬಳಸಬೇಕು, ಒಳ್ಳೆಯದೆಂದು ಅತಿಯಾಗಿ ಬಳಸಿದರೆ, ಖಂಡಿತ ಬೇರೆ ವಿಧದ ರೋಗಗಳು ಬರುತ್ತವೆ.
**********


ಆಸ್ಪತ್ರೆ ರಹಿತ ಆರೋಗ್ಯಕ್ಕೆ ಆಯುರ್ವೇದ-88
28.03.2020


ಫುಪ್ಪುಸ, ಎದೆ ಮತ್ತು ಶಿರಸ್ಸಿನಲ್ಲಿ ಬರತಕ್ಕ ಹೆಚ್ಚಿನ ತೊಂದರೆಗಳ ಸಮೂಲ ನಿರ್ಮೂಲನೆಗೆ ಈ  ಚೈತ್ರಮಾಸವು ಸರಿಯಾದ ಕಾಲ.

ಸದ್ಯಕ್ಕೆ ವೈರಸ್ ನಿಂದ ಫುಫ್ಫುಸವು ಹಾಳಾಗುತ್ತಿದೆ, ಈ ಸಂದರ್ಭದಲ್ಲಿ ವಮನ ವಸಂತ ಎಂಬ ಆಯುರ್ವೇದದ ಅತ್ಯಂತ ಶ್ರೇಷ್ಠ ಶೋಧನ ಚಿಕಿತ್ಸೆಯನ್ನು  ಪಡೆಯಿರಿ ತನ್ಮೂಲಕ ಫುಫ್ಫುಸಾದಿ ಅವಯವಗಳ ಸಂರಕ್ಷಣೆ ಮತ್ತು ಅವುಗಳ ಸಾಮರ್ಥವನ್ನು ವರ್ಧಿಸಿಕೊಳ್ಳಿ.

ವಸಂತ ಋತು, ಅಂದರೆ ಚೈತ್ರ ವೈಶಾಖಗಳನ್ನೊಳಗೊಂಡ ( ಮಾರ್ಚ, ಎಪ್ರಿಲ್) ಈ ಎರಡು ಮಾಸಗಳಲ್ಲಿ ನಮ್ಮ ಶರೀರದಲ್ಲಿ ರೋಗಕ್ಕೆ ಬಲಕೊಡುವ ಅಂಶಗಳು ಹೆಚ್ಚುವುದರಿಂದ ಕೊರೊನಾ ಅಷ್ಟೆ ಅಲ್ಲ , ಇನ್ನೂ ಅನೇಕ ರೀತಿಯ ವೈರಾಣುಗಳು, ಬ್ಯಾಕ್ಟೀರಿಯಾಗಳಿಗೆ ಯಥೇಚ್ಛ ಆಹಾರವನ್ನು ಒದಗಿಸಿಕೊಡುತ್ತವೆ. 
ಇಂತಹ ರೋಗೋತ್ಪಾದಕ ಸೂಕ್ಷ್ಮಜೀವಿಗಳಿಂದ ಮನುಕುಲವನ್ನು ರಕ್ಷಿಸಿಕೊಳ್ಳಲು ಆಯುರ್ವೇದಾಚಾರ್ಯರು ಪ್ರತಿ ವರ್ಷ ಚೈತ್ರ ಮಾಸದಲ್ಲಿ ವಾಂತಿ ಮಾಡಿಸಿಕೊಳ್ಳುವಂತೆ ತಿಳಿಸಿದ್ದಾರೆ. 
ಅಲ್ಲದೇ, ಭಾರತೀಯ ಸಂಸ್ಕೃತಿಯಲ್ಲಿ ಚೈತ್ರಮಾಸದ ಒಂಭತ್ತು ದಿನಗಳ ಕಾಲ "ವಸಂತ ನವರಾತ್ರಿ" ಹೆಸರಿನಲ್ಲಿ ಉಪವಾಸ ಮಾಡಲು ತಿಳಿಸುತ್ತಾ ಇಂತಹ ರೋಗಗಳಿಗೆ ಆಹಾರವನ್ನೇ ನಿಲ್ಲಿಸಿ ವರ್ಷದ ಯಾವ ಕಾಲದಲ್ಲಾದರೂ ಬರಬಹುದಾದ ಕ್ರಿಮಿಗಳಿಂದ ಸಂಪೂರ್ಣ ಸುರಕ್ಷೆಯ ಸೂತ್ರವನ್ನು ಸಂಪ್ರದಾಯದ ಹೆಸರಿನಲ್ಲಿ ಆಚರಿಸುತ್ತಾರೆ.

ಇದರಿಂದ ವಿಶ್ವ ಶ್ರೇಷ್ಠ ಪರಂಪರೆಯ ತವರಾಗಿದೆ ಭಾರತ.

ಶೀತೋದ್ಭವಂ ದೋಷಚಯಂ ವಸಂತೇ ವಿಶೋಧಯನ್ |
-ಅಷ್ಟಾಂಗ ಹೃದಯ, ರೋಗ ಅನುತ್ಪಾದನೀಯ ಅಧ್ಯಾಯ-4

ಕಾಲ ಸ್ವಭಾವದಿಂದ ಹೇಮಂತ - ಶಿಶಿರ ಋತುಗಳಲ್ಲಿ(ಡಿಸೆಂಬರ್ ಜನೆವರಿ) ಸಂಚಯವಾಗುವ ರೋಗೋತ್ಪಾದಕ ದೋಷವನ್ನು  ವಸಂತದಲ್ಲಿ (ಚೈತ್ರ ಮಾಸದ ಆರಂಭದಲ್ಲಿ) ಪಂಚಕರ್ಮ ಚಿಕಿತ್ಸೆಯಾದ ವಮನ ಚಿಕಿತ್ಸೆ (ಔಷಧಗಳಿಂದ ವಾಂತಿ ಮಾಡಿಸಬೇಕು.)
ಇದನ್ನು "ವಮನ ವಸಂತ" ಎಂದು ಕರೆಯುತ್ತೇವೆ.

ಈ ವಾಂತಿ ಚಿಕಿತ್ಸೆಯಿಂದ ನಮ್ಮ ಶರೀರದ ಕಫ ಸ್ಥಾನಗಳಾದ ಮೇದಸ್ಸು, ಫುಫ್ಫುಸ, ಹೃದಯ, ಗಂಟಲು, ಕಿವಿ, ಕಣ್ಣು ಮೂಗು, ಬಾಯಿ, ಸೈನಸ್, ಮೆದುಳು, ಕುತ್ತಿಗೆ, ಸರ್ವೈಕಲ್ ಡಿಸ್ಕ್, ಬ್ರೇಕಿಯಲ್ ಪ್ಲೆಕ್ಸಸ್, ಕೈಗಳ ಸೆಳೆತ- ಈ ಎಲ್ಲಾ ಭಾಗಗಳ ಸವೆತ, ಊತ, ಸೋಂಕುಗಳನ್ನು ಖಚಿತವಾಗಿ ತಡೆಯಬಹುದು ಮತ್ತು ಮುಂದಿನ ಒಂದು ವರ್ಷದ ಕಾಲ ಆ ಎಲ್ಲಾ ಅವಯವಗಳೂ ಸುಲಭದಲ್ಲಿ ತೊಂದರೆ(ಸೋಂಕು, ಊತ  ಮುಂತಾದ) ಗೊಳಗಾಗದಂತೆ ತಡೆಯಬಹುದು (ಅಭಿಘಾತ, ಅಪಘಾತಗಳನ್ನು ಹೊರತುಪಡಿಸಿ).

ವೈಜ್ಞಾನಿಕ ವಿವರಣೆ:
ಶೀತಕಾಲದಲ್ಲಿ ಸಹಜವಾಗಿ ಹಸಿವು ಹೆಚ್ಚುವುದರಿಂದ ಹೆಚ್ಚು ಆಹಾರ ಸೇವಿಸುತ್ತೇವೆ ಹಾಗಾಗಿ ಶರೀರವು ಬಲವನ್ನು ಆಹಾರದ ರೂಪದಲ್ಲಿ ಸಂಗ್ರಹಿಸುತ್ತದೆ. 
ಈ ಸಂಗ್ರಹಿತ ಆಹಾರವು ವಸಂತ ಋತುವಿನ ತಾಪಮಾನಕ್ಕೆ ಕರಗಿ ಜೀವಕೋಶಗಳಿಂದ  ಒಮ್ಮೆಗೇ ಬಿಡುಗಡೆಯಾಗಿ ಈ ಶರೀರಕ್ಕೆ ಹೆಚ್ಚುವರಿಯಾಗುವುದರಿಂದ ಮೇಲೆ ಸೂಚಿತ ಅವಯಗಳಲ್ಲಿ  ಊತದಂತಹ ರೋಗಗಳು ಬರುತ್ತವೆ ಮತ್ತು ಈ ಹೆಚ್ಚುವರಿ ಆಹಾರವು ಸೂಕ್ಷ್ಮ ಜೀವಿಗಳಿಗೆ ಆಹಾರವಾಗಿ ಸೋಂಕನ್ನು ಉಂಟು ಮಾಡುತ್ತದೆ.

‌ಎಚ್ಚರಿಕೆ: 
ವಾಂತಿ ಮಾಡಿಸಿ ದೋಷವನ್ನು ಹೊರಹಾಕಲೇಬೇಕಾದ ಅಥವಾ ಉಪವಾಸ ಮಾಡಿ ದೋಷ ಕರಗುವಂತೆ ನೋಡಿಕೊಳ್ಳಲೇಬೇಕಾದ ಈ ಚೈತ್ರ ಮಾಸದಲ್ಲಿ ಸನಾತನ ಭಾರತೀಯ ಚಿಕಿತ್ಸೆ (ಆಯುರ್ವೇದ), ಸಂಪ್ರದಾಯಗಳನ್ನು ಗಾಳಿಗೆ ತೂರಿ ಹೊಟ್ಟೆ ಬಿರಿಯುವಂತೆ (ವಿಶೇಷವಾಗಿ ರಾತ್ರಿ ಆಹಾರವನ್ನು) ತಿನ್ನುವವರು ಅನೇಕರಿದ್ದಾರೆ. ಇವರುಗಳು ಸೂಕ್ಷ್ಮ ಜೀವಿಗಳಿಂದ, ಅವಯವಗಳ ಊತದಿಂದ‌ ಅಥವಾ/ಮತ್ತು ಮೆದಸ್ಸು ಹೆಚ್ಚುವುದರಿಂದ ಇಂದೋ ನಾಳೆಯೋ ತೊಂದರೆಯನ್ನು ಅನುಭವಿಸುವುದು ತಪ್ಪಿದ್ದಲ್ಲ.

ವಮನ ಚಿಕಿತ್ಸೆ: 
ಆಯುರ್ವೇದದ ವಿಶಿಷ್ಠ ಪಂಚಕರ್ಮ ಚಿಕಿತ್ಸೆಯಾದ ವಮನವನ್ನು( ವಾಂತಿ) ಸುಕ್ತ ತಜ್ಞರಲ್ಲಿ ಪಡೆದುಕೊಳ್ಳಿ ಅಥವಾ ಮನೆಯಲ್ಲೇ ಪಾಕ್ಷಿಕವಾಗಿ (ಹದಿನೈದು ದಿನಗಳಿಗೊಮ್ಮೆ) ಸುಖವಾಗಿ ನಿದ್ದೆಯಾದ ಮರುದಿನ ಬೆಳಿಗ್ಗೆ ಮಲ- ಮೂತ್ರ ಪ್ರವೃತ್ತಿಯ ನಂತರ ಬೆಳಿಗ್ಗೆ 6 ಗಂಟೆಗೆ ಸರಿಯಾಗಿ ಉಗುರು ಬೆಚ್ಚಗಿನ ನೀರನ್ನು ಹೊಟ್ಟೆ ತುಂಬುವವರಿಗೆ ಕುಡಿದು, ಮೆಲೆ ಒಂದು ಗ್ಲಾಸು ಸೈಂಧವ ಉಪ್ಪನ್ನು ಬೆರೆಸಿದ ನೀರನ್ನು ಕುಡಿದು, ಬಾಯಿಯಲ್ಲಿ ಬೆರಳು ಹಾಕಿ ವಾಂತಿಯನ್ನು ಮಾಡಿಬಿಡಬೇಕು.

ವಿ.ಸೂಚನೆ: 
1. ಮಾರ್ಚ್ ಆರಂಭದಿಂದ ಎಪ್ರಿಲ್ ಅಂತ್ಯದವರೆಗೂ ಪ್ರತಿ 15 ದಿನಗಳಿಗೊಮ್ಮೆ ಈ ವಿಧಾನವನ್ನು ಅನುಸರಿಸಿ ವಾಂತಿ ಮಾಡಿರಿ, ನಂತರ ಅಗತ್ಯವಿಲ್ಲ.
2. ಹನ್ನೆರಡು ವರ್ಷದೊಳಗಿನ ಮಕ್ಕಳು ಮತ್ತು ಅರವತ್ತು ವರ್ಷದ ಮೇಲ್ಪಟ್ಟವರು ಈ ಚಿಕಿತ್ಸೆಯನ್ನು ತೆಗೆದುಕೊಳ್ಳಬಾರದು.
3. ಬಿಡುಗಡೆಯಾದ ಸಂಪೂರ್ಣ ಆಹಾರವನ್ನು ನಿತ್ಯವೂ ಶಾರೀರಿಕ ಶ್ರಮದಿಂದ ಖರ್ಚುಮಾಡುವ ರೈತರು, ಕೂಲಿ ಕಾರ್ಮಿಕರು ಉಪವಾಸ ಮಾಡುವ ಅಥವಾ ವಾಂತಿ ಮಾಡಿಕೊಳ್ಳುವ ಅಗತ್ಯ ಇಲ್ಲ.

ಉಪಸಂಹಾರ: 
ಈ ಸೂಕ್ಷ್ಮತೆಯನ್ನರಿತು ಒಮ್ಮೆಲೇ ವಿಪರೀತವಾಗಿ ಬಿಡುಗಡೆಯಾಗುವ ಆಹಾರವನ್ನು ಒಂಭತ್ತು ದಿನಗಳ ಉಪವಾಸದಿಂದ ಅಥವಾ ವಸಂತಕಾಲದ ವಾಂತಿ ಚಿಕಿತ್ಸೆಯಿಂದ ನಿಗ್ರಹಿಸಿಕೊಂಡಲ್ಲಿ ಸಾಮಾನ್ಯದಿಂದ ಅತಿ ಗಂಭೀರದವರೆಗಿನ ಅನೇಕ ರೋಗಗಳನ್ನ ತಡೆಯಬಹುದು.
************


ಆಸ್ಪತ್ರೆ ರಹಿತ ಆರೋಗ್ಯಕ್ಕೆ ಆಯುರ್ವೇದ-81
21.03.2020


ಓಜಸ್ಸು ಅಥವಾ ತೇಜಸ್ಸು - ಓಜಸ್ಸೇ ನಮ್ಮ ಇಮ್ಯುನಿಟಿ Part 1
ಇಂದು ಎಲ್ಲರ ಬಾಯಿಯಲ್ಲೂ ಕೊರೋನಾ ಎಂಬ ದೈತ್ಯನ ಚಿಂತನೆಯೇ ತುಂಬಿದೆ, ಅವನನ್ನು ಎದುರಿಸಿ ಮೆಟ್ಟಿನಿಲ್ಲುವ ರಾಮಬಾಣ ನಮ್ಮ ಶರೀರದಲ್ಲೇ ಇದೆ, ಸ್ವಲ್ಪ ಗಮನದಿಂದ ಅದನ್ನು ವರ್ಧಿಸಿಕೊಂಡರೆ ಇಂತಹ ಅನೇಕ ದೈತ್ಯರೋಗಗಳನ್ನು ಮೆಟ್ಟಿ ನಿಲ್ಲಬಹುದು.

ಅದೇ ಓಜಸ್ಸು ಅಥವಾ ತೇಜಸ್ಸು

ಓಜಸ್ಸೇ ನಮ್ಮ ಇಮ್ಯುನಿಟಿ, ಅದುವೇ ಸರ್ವರೀತಿಯ ಬಲ, ಅದೇ ಜೀವನ.

ಪ್ರಾಣಧಾರಣೆಯ ಧಾತುವೇ ಓಜಸ್ಸು.

ಓಜಸ್ತು ತೇಜೋ ಧಾತೂನಾಂಶುಕ್ರಾಂತಾನಾಂ ಪರಂ ಸ್ಮೃತಮ್
-ಅಷ್ಟಾಂಗ ಹೃದಯ

........ಅಗ್ನೌ ..…..ಯುಕ್ತೇ ಚಿರಂ ಜೀವತಿ ಅನಾಮಯಾ
-ಚರಕ ಸಂಹಿತಾ

ಅಗ್ನಿಯು ತನ್ನ ತೇಜಸ್ಸಿನಿಂದಲೇ ಕಾರ್ಯನಿರ್ವಹಿಸುತ್ತದೆ.
ಅಗ್ನಿಯು ಎಲ್ಲಾ ಧಾತುಗಳಲ್ಲಿ ತಕ್ಕಷ್ಟಿ ಪ್ರಮಾಣದಲ್ಲಿ ಸುಸ್ಥಿರವಾಗಿ ಇದ್ದರೆ ಆ ಶರೀರವು ಚಿರಕಾಲ ಜೀವಿಸುವುದಲ್ಲದೇ, ಅನಾಮಯ ಅಂದರೆ ರೋಗ ರಹಿತವಾಗಿ ಜೀವಿಸುತ್ತದೆ ಎಂದರ್ಥ.

ಎಲ್ಲಾ ಧಾತುಗಳಲ್ಲಿ ತೇಜಸ್ಸಿನ ರೂಪದಲ್ಲಿ ಸ್ಥಿರವಾಗಿ ಇರುವ ಅಂಶವನ್ನೇ ಪ್ರಾಣ ಎನ್ನುತ್ತೇವೆ, ಇದೇ ಓಜಸ್ಸು. ಇದು ಸ್ವಭಾವತಃ ತಾನು ಸೌಮ್ಯ,  ಆದರೂ ಸ್ಪರ್ಶದಲ್ಲಿ ಬೆಚ್ಚಗೆ ಇರುತ್ತದೆ.  ಇದನ್ನೇ ಆಡುಭಾಷೆಯಲ್ಲಿ ಬಿಸಿರಕ್ತದ ಯುವಕ ಎನ್ನುತ್ತಾರೆ. ಯೌವನದಲ್ಲಿ ಓಜಸ್ಸು ಉಚ್ಛ್ರಾಯ ಸ್ಥಿತಿಯನ್ನು ತಲುಪುತ್ತದೆ. ವಯಸ್ಸು ಇಳಿದಂತೆ ಓಜಸ್ಸು ಕ್ಷೀಣಿಸುತ್ತದೆ, ಆಗ ಶರೀರ ತಣ್ಣಗಾಗುತ್ತಾ ಸಾಗುತ್ತದೆ. ಆಗ ಶರೀರದಲ್ಲಿ ಸ್ವಲ್ಪ ಜ್ವರ ಬಂದರೂ ತಡೆಯದಂತೆ ಅಥವಾ ಸದಾ ಜ್ವರ ಇರುವಂತೆ ಭಾಸವಾಗುತ್ತದೆ.

ಕೊನೆಗೆ ಶಾಂತೇ ಅಗ್ನೌ ಮ್ರೀಯತೇ ಅಂದರೆ ತೇಜಸ್ಸು ಶಾಂತವಾದರೆ ಮೃತ್ಯುವಾಗುತ್ತದೆ.

ಓಜಸ್ಸು ನಮ್ಮ ಸಂರಕ್ಷಕ-
ಶರೀರದಲ್ಲಿ ಓಜಸ್ಸು ಸುಸ್ಥಿರವಾಗಿ ಇರುವವರೆಗೂ, ಹೊರಗಿನ ಅಥವಾ ಒಳಗಿನ ಯಾವ ಜೀವಿಯೂ ದೇಹಕ್ಕೆ ರೋಗವನ್ನು ತರಲು ಅಸಾಧ್ಯ. ಯಾವುದೇ ರೋಗಾಣುಗಳು ಇಂತಹ ಸಶಕ್ತ ತೇಜಸ್ಸಿನ/ ಓಜಸ್ಸಿನ ದೇಹದ ಹೊರಪದರದಿಂದ ಬಹುದೂರವೇ ಉಳಿಯುತ್ತವೆ. ಅದೇ ಕಾಂತಿ ಅಥವಾ ಆರಾ ಎಂದು ಕರೆಯುತ್ತೇವೆ. ಆದ್ದರಿಂದಲೇ ಆರೋಗ್ಯವಂತ ಮಕ್ಕಳ ಯುವಕ ಯುವತಿಯರ ತ್ವಚೆಯ ಕಾಂತಿ ಹೆಚ್ಚಿರುತ್ತದೆ. 

ಒಂದೊಮ್ಮೆ ಪ್ರಭಾವದಿಂದ ರೋಗಾಣುಗಳು ಹತ್ತಿರ ಬಂದರೆ, ಶರೀರವನ್ನು ಪ್ರವೇಶಿಸಿದರೆ ಅಲ್ಲಿ ಅವುಗಳು ಜೀರ್ಣವಾಗಿ ಬಿಡುತ್ತವೆ.
ಇನ್ನೂ ಪ್ರಭಾವದಿಂದ ರೋಗಾಣುಗಳು ನೆಲೆ ನಿಂತರೂ ವಿಕೃತಿಯನ್ನು ತರುವಷ್ಟು ಸಮರ್ಥವಾಗಿರುವುದಿಲ್ಲ.

ಇದೇ ಓಜಸ್ಸು 

ಓಜಸ್ಸಿನ ಸ್ಥಾನಗಳು:
ಸರ್ವಶರೀರ ಮತ್ತು ಹೃದಯ

ಸ್ಥಾನ 1. ಸರ್ವಶರೀರ-
ಇಲ್ಲಿ ದೇಹವರ್ಧಕ, ಆರೋಗ್ಯಕಾರಕ ಮತ್ತು ರೋಗನಿರೋಧಕವಾಗಿಯೂ ಕಾರ್ಯ ನಿರ್ವಹಿಸುತ್ತದೆ.

ಮತ್ತು 

ಸ್ಥಾನ 2.ಹೃದಯ-

ಹೃದಯ ಎಂದರೆ heart ಅಲ್ಲ, vital points of body ಎನ್ನಬಹುದು.
ಇಲ್ಲಿ ಪ್ರಮಾಣ ಕಡಿಮೆಯಾಗಿದ್ದರೂ ಪ್ರಾಣವನ್ನು ಧಾರಣೆ ಮಾಡಿಕೊಂಡೂ, ಅದನ್ನು ಕಾಪಾಡಿಕೊಂಡು ಇರುತ್ತದೆ

ಓಜಸ್ಸನ್ನು ವೃದ್ಧಿಮಾಡಿಕೊಳ್ಳುವುದು ಹೇಗೆ?
***********

ಆಸ್ಪತ್ರೆ ರಹಿತ ಆರೋಗ್ಯಕ್ಕೆ ಆಯುರ್ವೇದ-85
25.03.2020


ಓಜಸ್ಸು ಮೂರು ರೂಪಗಳಿಂದ ಬರುತ್ತದೆ Part 2

• ಸಹಜ
• ಕಾಲಜ ಮತ್ತು 
• ಯುಕ್ತಿಕೃತ 

ಯುಕ್ತಿಕೃತ ರೋಗ ನಿರೋಧಕ ಶಕ್ತಿ(ಓಜಸ್ಸು)

ನಮ್ಮ ಬುದ್ಧಿವಂತಿಕೆ ಮತ್ತು ಪ್ರಯತ್ನದಿಂದ ಗಳಿಸಿಕೊಳ್ಳುವ ಓಜಸ್ಸನ್ನು ಯುಕ್ತಿಕೃತ ಎನ್ನುತ್ತೇವೆ.
..............ಯುಕ್ತಿಕೃತಂ ಚ |
.......ತದ್ ಆಹಾರ ಚೇಷ್ಟಾ ಯೋಗಜಮ್||
-ಚರಕ ಸಂಹಿತಾ

ಯುಕ್ತಿಕೃತ ಬಲ:
ನಮ್ಮ ಆಹಾರ + ನಮ್ಮ ನಿತ್ಯದ ಕೆಲಸ ಇವುಗಳ ನಡುವಿನ ಸಮ್ಯಕ್ ಯೋಗದಿಂದ(ಹೊಂದಾಣಿಕೆಯಿಂದ) ಬರುವ ಶಕ್ತಿಯೇ ಯುಕ್ತಿಕೃತ ಓಜಸ್ಸು. ಇದನ್ನೇ "ಯುಕ್ತಿಕೃತ ರೋಗನಿರೋಧಕ ಬಲ"‌ ಎನ್ನುತ್ತೇವೆ.

ನಾವು ಸೇವಿಸುವ ಆಹಾರ ಮತ್ತು ಮಾಡುವ ಕೆಲಸ(ಶಾರೀರಿಕ ಶ್ರಮ)ಕಾರ್ಯಗಳ ತಾಳ ಮೇಳಗಳನ್ನು ನಿರ್ದಾಕ್ಷಿಣ್ಯವಾಗಿ ಸರಿದೂಗಿಸಿಕೊಳ್ಳುವುದರಿಂದ ಮಾತ್ರ ರೋಗ ನಿರೋಧಕ ಶಕ್ತಿಯನ್ನು ಉತ್ಕೃಷ್ಟ ಮಟ್ಟದಲ್ಲಿ ಇಟ್ಟುಕೊಳ್ಳಬಹುದು.

ಆಹಾರ ಚೇಷ್ಟಾ ಯೋಗಜಂ  ಎಂದರೆ ಈ ಎರಡರ ಸಮ್ಯಕ್ ಹೊಂದಾಣಿಕೆ, ಅಂದರೆ  ಅತ್ಯಂತ ಪೌಷ್ಟಿಕ ಆಹಾರ ಸೇವಿಸಿ, ಎ.ಸಿ.ಕೊಠಡಿಯಲ್ಲಿ ಕೆಲಸ ಮಾಡುವ ನೌಕರಿಯಲ್ಲಿದ್ದರೆ, ತಿಂದ ಆಹಾರದ ಶಕ್ತಿ ಬಳಕೆಯಾಗದೇ ರೋಗಪಾಚಕ ಶಕ್ತಿ ಕುಂಠಿತವಾಗಿ, ಅನಗತ್ಯ ಶಕ್ತಿ ವೃದ್ಧಿಯಾಗಿ ಮಧುಮೇಹ, ಸ್ಥೌಲ್ಯ, ಥೈರಾಯ್ಡಿಸಮ್, ಹೃದಯ, ಮೆದುಳು ಮುಂತಾದ ತೊಂದರೆಗಳನ್ನೂ ಮತ್ತು ಬ್ಯಾಕ್ಟೀರಿಯಾ, ವೈರಸ್, ಫಂಗಲ್, ಪ್ರೊಟೋಸೋವಲ್ ಮುಂತಾದ ಸೋಂಕಿನ ರೋಗಗಳನ್ನೂ ತರುತ್ತದೆ.

ಆದರೆ ಇನ್ನೂ ಬೆಳವಣಿಗೆ ವಯಸ್ಸಿರುವ ಮಕ್ಕಳು, ಹೆಚ್ಚಿನ ಶಾರೀರಿಕ ಶ್ರಮದಿಂದ ದುಡಿಯುವವರು ಕನಿಷ್ಟ ಶಕ್ತಿಯ ಆಹಾರ ಸೇವಿಸಿ ಅಪೌಷ್ಟಿಕತೆಯಿಂದ ದಿನದೂಡುತ್ತಿದ್ದರೆ, ಧಾತುಗಳು ಕ್ಷೀಣ ಬಲವನ್ನು ಅಥವಾ ಕ್ಷೀಣ ಓಜಸ್ಸನ್ನು ಹೊಂದುತ್ತವೆ. ಇವುಗಳಿಂದ ಅಪತರ್ಪಣ ಜನ್ಯ ಕಾಯಿಲೆಗಳಾದ ಹೈಪೋಥೈರಾಯ್ಡಿಸಮ್, ಮೂಳೆಸವೆತೆ, ಅಲ್ಪ ಬಲ, ಮೈಗ್ರೇನ್‌, ಅತಿಯಾದ ಆಮ್ಲಪಿತ್ತ, ಬೇಗ ಮುಪ್ಪು ಬರುವುದು, ಭಂಗು ಮುಂತಾದ ಚರ್ಮದ ರೋಗಗಳು ಮತ್ತು ಕ್ಷಯ, ನಿಮೋನಿಯಾ, ಟೈಫಾಯ್ಡ, ಮೂತ್ರದ ವಿಕಾರಗಳು ಮುಂತಾದ ಕಾಯಿಲೆಗಳು ಬರುತ್ತವೆ. 

ಪರಿಹಾರ
ನಮ್ಮ ಹಿಂದಿನವರನ್ನು ಮರೆತದ್ದರಿಂದ, ಸರಿಯಾದ ಸಾಮಾನ್ಯ ತಿಳುವಳಿಕೆಯ ಕೊರತೆಯಿಂದ ಮತ್ತು ಇಂದಿನ ವಿಜ್ಞಾನದ ಅಪೂರ್ಣತೆಯಿಂದಾಗಿ ಅತ್ಯಂತ ಸರಳವಾಗಿ  ಗಳಿಸಬಹುದಾದ ಯುಕ್ತಿಕೃತ ಓಜಸ್ ಅಥವಾ ರೋಗನಿರೋಧಕ ಶಕ್ತಿಯನ್ನು ಕೇವಲ ವ್ಯಾಕ್ಸೀನ್ ಗಳೆಂಬ ಸುಪ್ತ ರೋಗಾಣುಗಳ ಮುಖಾಂತರ ಬೆಳೆಸಿಕೊಳ್ಳಲು ಯತ್ನಿಸುತ್ತಿದ್ದೇವೆ. ಇದು ಸರಯಾದ ಮಾರ್ಗವಾಗಿವಕಂಡರೂ ಪರಿಪೂರ್ಣವಲ್ಲ. ಏಕೆಂದರೆ ವ್ಯಾಕ್ಸೀನ್ ಗಳ ವಿರುದ್ಧ ನಮ್ಮ ಶರೀರ ಸೂಕ್ತವಾದ ಆಂಟಿಬಾಡಿಯನ್ನು ಉತ್ಪಾದಿಸಿಕೊಳ್ಳಲು ನಮ್ಮ ಆಹಾರ ಮತ್ತು ಅದನ್ನು ಸರಿಯಾಗಿ ಕರಗಿಸುವ ನಿತ್ಯಕರ್ಮಗಳ ನಡುವೆ ಹೊಂದಾಣಿಕೆಯುಳ್ಳ ವ್ಯವಸ್ಥೆ 
ಅತ್ಯಂತ ಪ್ರಮುಖವಾಗುತ್ತದೆ.

ಒಂದೇ ಮಾತಿನಲ್ಲಿ ಹೇಳುವುದಾದರೆ-
ತಿಂದಷ್ಟೆ ಕೆಲಸ ಮಾಡಿ ಅಥವಾ ಕೆಲಸ ಮಾಡಿದಷ್ಟೇ ತಿನ್ನಿ 

ಬೆವರು ಹರಿಸದೇ ತಿನ್ನುವ ವ್ಯಕ್ತಿ  ಮತ್ತು  ಬೆವರು ಹರಿಸಿಯೂ ತಿನ್ನದ ವ್ಯಕ್ತಿ ಇಬ್ಬರೂ ಯುಕ್ತಿಕೃತ ಓಜಸ್ಸನ್ನು ಪಡೆಯಲಾರರು

ಆಯುರ್ವೇದ ಒಂದು "ಸಹಜ ಜೀವನ ಕಲೆ" ಅದನ್ನು ವಿದೇಯದಿಂದ ಅನುಸರಿಸಲು ಆಚಾರ್ಯರು‌ ಹೇಳುತ್ತಾರೆ.
...........ಆಯುರ್ವೇದ ಉಪದೇಶೇಷು ವಿಧೇಯ ಪರಮಾದರಃ ||
-ಅಷ್ಟಾಂಗ ಹೃದಯ
************



ಆಸ್ಪತ್ರೆ ರಹಿತ ಆರೋಗ್ಯಕ್ಕೆ ಆಯುರ್ವೇದ-83
23.03.2020

ಓಜಸ್ಸನ್ನು(ಬಲ, ರೋಗ ನಿರೋಧಕ ಶಕ್ತಿ, ಪ್ರಾಣ ಧಾರಣ ಶಕ್ತಿ)  ವೃದ್ಧಿಮಾಡಿಕೊಳ್ಳುವುದು ಹೇಗೆ? Part 3

• ಸಹಜ ಓಜಸ್ಸು
• ಕಾಲಕೃತ ಓಜಸ್ಸು
• ಆಹಾರ-ಔಷಧ ಪ್ರಯೋಗ ಸಿದ್ಧ ಓಜಸ್ಸು


ಸಹಜ ಓಜಸ್ಸನ್ನು ಪಡೆಯುವುದು
1. ಓಜ ಕ್ಷಯದ ಕಾರಣಗಳನ್ನು ತಡೆಯುವುದು.(ಕಳೆದ ಸಂಚಿಕೆಯಲ್ಲಿ ನೋಡಲಾಗಿದೆ)

2. ಓಜೋವರ್ಧಕ ವಿಧಿ ವಿಧಾನಗಳನ್ನ ಪಾಲಿಸುವುದು...


ಓಜೋ ವರ್ಧಕ ವಿಧಿ ವಿಧಾನಗಳು

1. ಮಧುರಗಣ ಔಷಧಿಗಳಿಂದ ತಯಾರಾದ ಕ್ಷೀರ ಸೇವನೆ: 
ಮಧುರರಸವು(carbohydrates) ಹುಟ್ಟಿನಿಂದ ಮರಣ ಪರ್ಯಂತ ಸರ್ವರಿಗೂ ಸಾತ್ಮ್ಯವಾದ(ಹೊಂದಿಕೊಳ್ಳುವ), ಬಾಯಿಯಲ್ಲಿ ಇಟ್ಟಾಗ ಯಾವುದೇ ಭಾವ ವ್ಯತ್ಯಾಸಗಳನ್ನು ಮಾಡದ,‌ಆಹ್ಲಾದಕರವಾದ ಮತ್ತು ಜಠರ ಪ್ರವೇಶಿಸಿದ ನಂತರ ಮಧುರ ವಿಪಾಕ ಎಂಬ  ಶರೀರ ವರ್ಧಕ ಭಾವವಾದ ಸಶಕ್ತ ಆಹಾರ ರಸವನ್ನು ಉತ್ಪತ್ತಿ ಮಾಡುವ ಎಲ್ಲಾ ದ್ರವ್ಯಗಳನ್ನು ಮಧುರ ರಸ ಎನ್ನುತ್ತಾರೆ. 

 ಇವು ನಾಲಿಗೆಗೂ, ಉದರಕ್ಕೂ ಮತ್ತು ವಿಪಾಕ(ಧಾತು ಉತ್ಪತ್ತಿ) ಹಂತದಲ್ಲೂ ಮಧುರ ಭಾವವನ್ನೂ ಮತ್ತು ಸೌಮ್ಯಭಾವವನ್ನು ಹೊಂದಿವೆ. 

• ಮಧುರಗಣದ ಧಾನ್ಯಗಳಾದ ಶಾಲೀ (ಅಕ್ಕಿ), ರಾಗಿ, ಜೋಳ, ಗೋಧಿ, ಖರ್ಜೂರ, ಅಂಜೂರ, ಹಲಸು, ತೊಂಡೆ, ನೆಲಗುಂಬಳ, ಹಾಲುಗುಂಬಳ, ಕಬ್ಬು ಮುಂದಾದವುಗಳಿಂದ ತಯಾರಿಸಿದ ಕ್ಷೀರ, ಪಾಯಸಗಳನ್ನು  ಪ್ರಯೋಗಿಸಬೇಕು

• ಮಧುರ ಗಣದ ಮಾಂಸಾಹಾರ ದ್ರವ್ಯಗಳಾದ ಮೇದಸ್ಸು, ಅಸ್ಥಿಯ ಒಳಭಾಗ ಮಜ್ಜೆಗಳಿಂದ ತೆಗೆದ ಬೇಯಿಸಿದ ರಸವನ್ನು ಸೇವಿಸಬೇಕು.

• ಮಧುರ ಗಣದ ಲೋಹವಾದ ಸ್ವರ್ಣಭಸ್ಮ ಸೇರಿಸಿದ ಘೃತ ಅಥವಾ ಮಧು(ಜೇನುತುಪ್ಪ) ವನ್ನು ಸೇವಿಸಬೇಕು.

ಈ ವಿಧಾನಗಳಿಂದ ಓಜಸ್ಸು(ವ್ಯಾಧಿಕ್ಷಮತ್ವ- ರೋಗನಿರೋಧಕ ಶಕ್ತಿ) ಸಹಜವಾಗಿ ವೃದ್ಧಿಯಾಗುತ್ತದೆ. 

2. ಮಾಂಸರಸ ಪ್ರಯೋಗ:
ಮಾಂಸಾಹಾರದಲ್ಲಿ ಪ್ರಾಣಿಯ ಎಲ್ಲಾ ಅಂಗಗಳು ಓಜೋ ವೃದ್ಧಿಗೆ ಸಹಾಯ ಮಾಡಲಾರವು. ಪ್ರಧಾನವಾಗಿ ಪ್ರಾಣಿಯ ಮೇದಸ್ಸು- ಮೆದುಳು- ಮೂಳೆಯೊಳಗಿನ ಮಜ್ಜೆಯು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.

 ಸಾಮಾನ್ಯಂ ವೃದ್ಧಿ ಕಾರಣಂ ಸಿದ್ಧಾಂತದ ಅನ್ವಯ ಪ್ರಾಣಿ ದೇಹದ ಮೇದಸ್ಸು ಮೆದುಳು ನಮ್ಮ ಶರೀರದ ಸಾರ ಮೇದವನ್ನು ಮತ್ತು ಅದರ ಮಜ್ಜೆಯು ನಮ್ಮ ಶರೀರದ ಮಜ್ಜೆ ( ಸ್ಟೆಮ್ ಸೆಲ್ಸ್) ಯನ್ನು  ವೃದ್ಧಿ ಮಾಡುತ್ತದೆ. 
ಸೂಚನೆ: ಇಲ್ಲಿ ಗಮನಿಸಲೇ ಬೇಕಾದ ಅಂಶ ಎಂದರೆ ನಮ್ಮ ಜೀರ್ಣಕ್ರಿಯೆಗೆ ಸಹಾಯವಾಗುವ ನಿತ್ಯವೂ ನಿಯಮಿತ ಪ್ರಮಾಣದ ಆಹಾರ, ವ್ಯಾಯಾಮ ಮತ್ತು ನಿದ್ರೆಗಳು ಅತ್ಯಾವಶ್ಯಕ. ಏಕೆಂದರೆ, ಜೀರ್ಣವಾಗದ ಮೇದಸ್ಸು ಮಜ್ಜೆಯು ಯಾವ ಉಪಕಾರವನ್ನೂ ಮಾಡಲಾರದು. 

3. ಅಸಾತ್ಮ್ಯಾಹಾರಗಳ ತ್ಯಾಗ:
ಸಾತ್ಮ್ಯ ಆಹಾರ ಎಂದರೆ, ಯಾವುದನ್ನು ಸೇವಿಸಿದರೆ ಅದು ಸುಲಭವಾಗಿ ಜೀರ್ಣವಾಗಿ, ರಕ್ತಗತವಾಗಿ, ಧಾತುಗಳಾಗಿ ಕೊನೆಗೆ ಮನಸ್ಸಾಗಿ ಬದಲಾಗಿ ಜೀವಾತ್ಮ ನ ನಿತ್ಯ ವ್ಯಾಪಾರಕ್ಕೆ ಸಹಕಾರ ನೀಡುವುದೋ ಅದು ಸಾತ್ಮ್ಯ(ಸ+ಆತ್ಮ) ಆಹಾರ. 
ಒಟ್ಟಾರೆ ಆತ್ಮಗತವಾಗುವ ಆಹಾರವನ್ನು ಸಾತ್ಮ್ಯ ಆಹಾರ ಎನ್ನಲಾಗಿದೆ.
ಅಸಾತ್ಮ್ಯ ಎಂದರೆ ಒಗ್ಗದಿರುವ ಆಹಾರ ಎಂದರ್ಥ, ಅದನ್ನು ಗುರುತಿಸುವುದು ಸುಲಭ- ಆಹಾರ ಸೇವನೆ ನಂತರ *ಹೊಟ್ಟೆ ಭಾರವಾದರೆ, *ಬೆಳಿಗ್ಗೆ ಎದ್ದ ನಂತರವೂ ಉತ್ಸಾಹ ಇರದಿದ್ದರೆ, *ಬೆಳಿಗ್ಗೆ ಸಹಜವಾಗಿ ಮಲ-ಮೂತ್ರಗಳ ಪ್ರವೃತ್ತಿ ಆಗದಿದ್ದರೆ, *ಬೆಳಿಗ್ಗೆ ಮೂರ್ನಾಲ್ಕು ಬಾರಿ ಬೇಧಿಯಾದರೆ, *ಇಂದ್ರಿಯಗಳು ಪ್ರಸನ್ನ ಎನಿಸದಿದ್ದರೆ(ಇಂದ್ರಿಯಗಳು ತಮ್ಮ ವಿಷಯಗಳನ್ನು ಬೇಡ ಎನಿಸಿಕೊಂಡರೆ) ಸೇವಿಸಿದ ಆಹಾರ ಅಸಾತ್ಮ್ಯ ಎಂದು ಗ್ರಹಿಸಬೇಕು, ಮತ್ತು ಇದು ಓಜಸ್ಸನ್ನು ವರ್ಧಿಸುವ ಬದಲು ತಮಸ್ಸನ್ನು ಅಂದರೆ ರೋಗಗಳಿಗೆ ಆಹಾರವನ್ನೂ ಒದಗಿಸುತ್ತದೆ. ಹಾಗಾಗಿ ತ್ಯಜಿಸಬೇಕು.

ಅಸಾತ್ಮ್ಯ ಆಹಾರಗಳ ಪಟ್ಟಿ:
ಗೋಧಿ(ವಿಶೇಷವಾಗಿ ಚಪಾತಿ), ಉದ್ದಿನಬೇಳೆ, ಮೈದಾ ಹಿಟ್ಟು(ಬಿಸ್ಕೆಟ್, ಬ್ರೆಡ್, ಕೇಕ್...)ಕರಿದ ಪದಾರ್ಥಗಳು, ವಗ್ಗರಣೆಯನ್ನು ಮೇಲಿನಿಂದ ಕಲಸಿದ ಚಿತ್ರಾನ್ನ,ಫ್ರೈಡ್ ರೈಸ್, ಎಣ್ಣೆ ಕಲಸಿದ ಅವಲಕ್ಕಿ, ಮಸಾಲ ಮಂಡಕ್ಕಿ(ಚುರುಮುರಿ/ ಕಳ್ಳೆಪುರಿ), ಅನೇಕ ಹಸಿ ತರಕಾರಿಗಳು, ಮೊಳಕೆ ಕಾಳುಗಳು, ಬಿಸಿಲು ನಾಡಿನಲ್ಲಿದ್ದೂ ಮೀನು ಸೇವನೆ ಮುಂತಾದವು ಮತ್ತು ಯಾವುದನ್ನು ಸೇವಿಸಿದರೆ ಹೊಟ್ಟೆಯುಬ್ಬರವಾಗುತ್ತದೋ ಅದು ಅಸಾತ್ಮ್ಯ ಆಹಾರ.

4. ಸೂಕ್ಷ್ಮಾವಲೋಕಿತ ಆಹಾರ ಸೇವನೆ.
ಆಹಾರವು ತಾಜಾ ಇರಬೇಕು, ಸುಖೋಷ್ಣವಾಗಿರಬೇಕು, ಒಣಗಿದಂತೆ ಇರಬಾರದು, ಮೃದುವಾಗಿರಬೇಕು ಆದರೆ ಹಿಂದಿನದಿನದ ಹಿಟ್ಟಿನಿಂದ  ಮಾಡಿರಬಾರದು(ಇಡ್ಲಿ, ದೋಸೆಗಳು), ಆಹಾರದೊಳಗೇ ನೀರಿನ ಅಂಶ ಇರಬೇಕೇ ಹೊರತು, ದಿನವೆಲ್ಲಾ ಅತಿಪ್ರಮಾಣದ ನೀರನ್ನು ಸೇವಿಸುತ್ತಿರಬಾರದು,
ಹಸಿವಾದ ನಂತರ ಉಪವಾಸ ಇರಬಾರದು, ಹಸಿವಿಲ್ಲದೇ ಊಟಮಾಡಬಾರದು, ತಡರಾತ್ರಿ ಊಟ ಮಾಡಬಾರದು.
ಇವೆಲ್ಲಾ ಧಾತುಗಳ ಸಾರಭಾಗವನ್ನೂ, ಮನಸ್ಸನ್ನೂ  ಪೋಷಿಸುವಂತವಲ್ಲ! ಕೇವಲ ಸ್ಥೂಲ ಶರೀರವನ್ನು ಮಾತ್ರ ಗಮನದಲ್ಲಿಟ್ಟುಕೊಂಡು ಯೋಜಿಸಿದ ಆಹಾರದ ವಿಧಿಗಳು.

5. ಬ್ರಹ್ಮಚರ್ಯ ಪಾಲನೆ:
ಓಜಸ್ತು ತೇಜೋ ಧಾತುನಾಂ, ಶುಕ್ರಾಂತಾನಾಂ ಪರಂ ಸ್ಮೃತಮ್
ಶುಕ್ರ ಅಂದರೆ ಮೈಥುನಾ ನಂತರ ಸ್ರವಿಸುವ ಶಕ್ತಿಯುತ ಶ್ವೇತ ದ್ರವ್ಯ, ಇದು ಓಜಸ್ಸನ್ನು ಪ್ರಬಲ & ಪ್ರಧಾನವಾಗಿ ಹೆಚ್ಚಿಸುತ್ತದೆ. ಬೇರೆಲ್ಲಾ ಧಾತುಗಳಂತೆ ಶುಕ್ರಧಾತುವಿಗೆ ಮಲವೆಂಬುದು ಇಲ್ಲ ಅಥವಾ ಅತ್ಯಂತ ಕಡಿಮೆ ಇರುತ್ತದೆ. ಅದರಿಂದ ಪೋಷಣೆಯಾಗುವ ಓಜಸ್ಸಿಗೆ ಮಲವೇ ಇಲ್ಲ. ಅಂದರೆ ಓಜಸ್ಸು ಕೇವಲ ಶಕ್ತಿ ಇರುವ ತೇಜಸ್ಸು, ಇದು ವಿದ್ಯುತ್ತಿನಂತೆ. ಇದು ನಮ್ಮಲ್ಲಿ ಎಷ್ಟು ಹೆಚ್ಚೋ ಅಷ್ಟು ರೋಗನಿರೋಧಕ ಶಕ್ತಿ ಹೆಚ್ಚು.

7. ಸಮಯೋಚಿತ ನಿದ್ರಾ

ಜೀವಿಗೆ ನಿದ್ರೆಯಿಂದಲೇ, ಚಯಾಪಚಯಕ್ರಿಯೆ ಸಹಜವಾಗಿ ನಡೆಯುತ್ತದೆ. ತಡರಾತ್ರಿ ನಿದ್ದೆ, ತಡವಾಗಿ ಏಳುವುದರಿಂದ ಓಜಸ್ಸಿನ ಸೌಮ್ಯತ್ವ ನಾಶವಾಗಿ, ರೋಗನಿರೋಧಕ ಬಲ ಕುಗ್ಗಿಹೋಗುತ್ತದೆ. ಅತಿಯಾದ ನಿದ್ರೆ ಕೆಡುವುದು ಶೀಘ್ರ ಜರಾ ಮರಣಕ್ಕೆ ಕಾರಣ ಎಂದು ಆಚಾರ್ಯರು ತಿಳಿಸಿದ್ದಾರೆ.
***********

ಆಸ್ಪತ್ರೆ ರಹಿತ ಆರೋಗ್ಯಕ್ಕೆ ಆಯುರ್ವೇದ-82
22.03.2020

ಓಜಸ್ಸನ್ನು(ಬಲ, ರೋಗ ನಿರೋಧಕ ಶಕ್ತಿ, ಪ್ರಾಣ ಧಾರಣ ಶಕ್ತಿ)  ವೃದ್ಧಿಮಾಡಿಕೊಳ್ಳುವುದು ಹೇಗೆ? Part 4

• ಸಹಜ ಓಜಸ್ಸು
• ಕಾಲಕೃತ ಓಜಸ್ಸು
• ಆಹಾರ-ಔಷಧ ಪ್ರಯೋಗ ಸಿದ್ಧ ಓಜಸ್ಸು

ಸಹಜ ಓಜಸ್ಸನ್ನು ಪಡೆಯುವುದು
1. ಓಜ ಕ್ಷಯದ ಕಾರಣಗಳನ್ನು ತಡೆಯುವುದು.
2. ಓಜೋವರ್ಧಕ ವಿಧಿ ವಿಧಾನಗಳನ್ನ ಪಾಲಿಸುವುದು...

ಓಜ ಕ್ಷಯಕ್ಕೆ ಕಾರಣ
ಓಜಃ ಕ್ಷೀಯತ...... ಶ್ರಮಾಧಿಭಿಃ
-ಅಷ್ಟಾಂಗ ಹೃದಯ

• ಕೋಪ
• ಹಸಿವನ್ನ ತಡೆಯುವುದು
• ಚಿಂತೆ ಮಾಡುವುದು
• ಶೋಕ ( ದುಃಖ)
• ಅತಿಸಾಹಸ
• ಭ್ರಮ (ತಲೆಸುತ್ತು)ಇರುವಾಗ ಖಾರ-ಒಗರು-ಶುಷ್ಕ ಪದಾರ್ಥಗಳನ್ನು  ಸೇವಿಸುವುದು.
• ನಿದ್ದಗೆಡುವುದು.. ಮುಂತಾದವು.

ಕೋಪ- 
ಕ್ರೋಧಾತ್ ಪಿತ್ತಂ ಅಂದರೆ, ಕೋಪದಿಂದ ಶರೀರದ ಉಷ್ಣವು ವೃದ್ಧಿಯಾಗಿ, ಧಾತುಗಳು ಬೆಂದು ಹೋಗಿ (ಮೆದುವಾಗಿ) ತಮ್ಮ ಸೌಮ್ಯ ಭಾವವನ್ನೂ, ತತ್ಸಂಬಂಧಿ ತೇಜಸ್ಸನ್ನು ಕಳೆದುಕೊಂಡು ಓಜೋ ಕ್ಷಯಕ್ಕೆ ಕಾರಣವಾಗುತ್ತದೆ. 
ಈ ಹಂತದಲ್ಲಿ ಧಾತುಗಳು ಸುಲಭವಾಗಿ ರೋಗಗಳಿಗೆ ತುತ್ತಾಗುತ್ತವೆ.

ಸದೃಢಶರೀರ ಮತ್ತು  ಪ್ರಶಾಂತ ಮನಸ್ಸಿನಿಂದ ಮಾತ್ರ ಸಹಜವಾದ ಓಜಸ್ಸು ಬರುತ್ತದೆ.
ಸಹಜಂ ಯತ್ ಶರೀರ ಸತ್ವಯೊಃ
ಇದು ಯಾವ ಕಾಲದಲ್ಲೂ ಸಹಜವಾಗಿ ಇರುವ ರೋಗ ನಿರೋಧಕ ಶಕ್ತಿಯಾಗಿದೆ.

ಕ್ಷುದ್ಧಾರಣ- 
ಹಸಿವು ಅಗ್ನಿ ವೃದ್ಧಿಯ ಸಂಕೇತ. ಈ ಪ್ರವೃದ್ಧ ಅಗ್ನಿಯನ್ನು ತಡೆಯುವುದರಿಂದ ಅದು ಧಾತುಗಳನ್ನು  ಪಾಕಮಾಡಿ(ಬೇಯಿಸಿ) ಜೀರ್ಣಿಸುತ್ತದೆ. ವಿಪರೀತ ಕ್ಷಯಗೊಂಡ ಶರೀರದಲ್ಲಿನ ಮನಸ್ಸು ಚಾಂಚಲ್ಯಕ್ಕೊಳಗಾಗಿ ಮತ್ತೂ ಅಹಿತ ಆಚರಣೆಗಳನ್ನು ಮಾಡುವುದರಿಂದ ಓಜಸ್ಸು ಕ್ಷೀಣಿಸುತ್ತಲೇ ಸಾಗಿ ಒಂದೇ ಬಾರಿಗೆ ಅನೇಕ ರೋಗಗಳನ್ನು (ರಾಜಯಕ್ಷ್ಮ) ತರುತ್ತದೆ.

ಚಿಂತಾ - ಶೋಕ- ಧಾತುಕ್ಷಯ ಕಾರಣಗಳಲ್ಲಿ "ವಾತ ವೃದ್ಧಿಯು" ಒಂದು ಪ್ರಧಾನ ಕಾರಣವಾಗಿದೆ. 
ಕಾಮ ಶೋಕ ಭಯಾತ್ ವಾಯುಃ ಅಂದರೆ ಮನಸ್ಸಿನ ಅನಿಯಂತ್ರಿತ ಇಚ್ಛೆ, ದುಃಖ, ಭಯಗ ಈ ಮೂರರಿಂದ ವಾತವು ನೇರವಾಗಿ ಗಂಭೀರ ಧಾತುಗಳಲ್ಲಿ ವೃದ್ಧಿಯಾಗುತ್ತದೆ(ಅಚಯ ಪ್ರಕೋಪ).
ಇದು  ಧಾತುಗಳನ್ನು ಒಣಗಿಸುವುದರಿಂದ ಶೀಘ್ರದಲ್ಲಿ ಮುಪ್ಪನ್ನು ತರುತ್ತದೆ.  ಈ ಹಂತವು ಸಹಜವಾಗಿ ಓಜೋ ಕ್ಷಯಕ್ಕೆ ಕಾರಣವಾಗುತ್ತದೆ.

ಶ್ರಮ-ಅತಿಸಾಹಸ
ತನ್ನ ಸಾಮಾರ್ಥ್ಯವನ್ನ ಮೀರಿ ಉಸಿರು ಬಿಗಿ ಹಿಡಿದು ತೂಕ ಎತ್ತುವುದು, ಶ್ರಮಿಕ ಕೆಲಸ ಮಾಡುವುದು ಮುಂತಾದವುಗಳಿಂದ ಪುಪ್ಪುಸಗಳ ಅತಿಸೂಕ್ಷ್ಮ  ರಕ್ತನಾಳಗಳು ಒಡೆಯುವುದರಿಂದ (ಉರಃ ಕ್ಷತ) ಅಥವಾ ಸಾಮರ್ಥ್ಯವನ್ನು ಕಳೆದುಕೊಳ್ಳುವುದರಿಂದ, ಶರೀರದ ಚಯಾಪಚಯಕ್ಕೆ ಅಗತ್ಯವಿರುವಷ್ಟು ಆಮ್ಲಜನಕ ದೊರೆಯದೆ, ಜೀವಕೋಶಗಳು ಆಹಾರ, ಗಾಳಿಯಿಂದ ವಂಚಿತವಾಗುತ್ತವೆ. ಇದು ಓಜೋ ಕ್ಷಯಕ್ಕೆ ಗಂಭೀರ ಪರಿಣಾಮವಾಗಿದೆ.

ಭ್ರಮಸ್ಥಂ ಕಟ್ವಾದಿ ಸೇವನ-
ರಜೋಪಿತ್ತಾನಿಲಾಭ್ಯಾಮ್ ಭ್ರಮಃ|
ಶರೀರದಲ್ಲಿ ಉಷ್ಣತ್ವ(ಪಿತ್ತ), ಮನಸ್ಸಿನಲ್ಲಿ ರಜೋಗುಣ, ಶರೀರ-ಮನ ಎರಡರಲ್ಲೂ ವಾತ ಪ್ರಕೋಪ ಆದಂತಹ ಅವಸ್ಥೆಯಲ್ಲಿ ತಲೆಸುತ್ತು ಬರುತ್ತದೆ, ಈ ಕಾರಣಗಳನ್ನು ಮತ್ತಷ್ಟು ವರ್ಧಿಸುವ ಖಾರ, ಒಗರು, ಕ್ಷಾರ, ಒಣ ಅಥವಾ ನೀರು ಕಡಿಮೆ ಇರುವ ಆಹಾರಗಳನ್ನು ಸೇವಿಸಿದರೆ, ಶರೀರ ಮನಸ್ಸುಗಳಲ್ಲಿ ಅತಿಮಾತ್ರ ಸೌಮ್ಯ ಗುಣ ಕ್ಷಯವಾಗಿ ಓಜಸ್ಸು ಅಸ್ಥಿರವಾಗುತ್ತದೆ. ತೀವ್ರತರ ಮನೋ ಶಾರೀರಿಕ ವ್ಯಾಧಿಕ್ಷಮತ್ವ ನಶಿಸಿ ಶಾರೀರಿಕ ಮತ್ತು ಮಾನಸಿಕ ರೋಗಗಳಿಗೆ ಸುಲಭವಾಗಿ ತುತ್ತಾಗುತ್ತದೆ.

ನಿರಂತರ ನಿದ್ದೆಗೆಡುವುದು
ರಾತ್ರಿ ಜಾಗರಣೆ ಸ್ವಭಾವತಃ ಶರೀರದ ಸಂಧುಗಳನ್ನು ಒಣಗಿಸಿಬಿಡುತ್ತದೆ. ಇದೇ ಕಾರಣದಿಂದ ನಿದ್ದೆಗೆಟ್ಟ ಮರುದಿನ  ಕೈಬೆರಳುಗಳ ಸಂಧಿಗಳ ಚಲನೆಯಲ್ಲಿ ಕಷ್ಟ ಎನ್ನಿಸುವುದು ನಮ್ಮೆಲ್ಲರ ಅನುಭವಕ್ಕೆ ಬಂದಿರುತ್ತದೆ. ಸಂಧುಗಳು ಒಣಗಿದರೆ ಅಲ್ಲಿರುವ ಸೌಮ್ಯ ದ್ರವವು ಸಾಂದ್ರತೆಯನ್ನು ಕಳೆದುಕೊಂಡು  ಶರೀರದ ಸರ್ವ ಧಾತುಗಳಿಂದ ಸೌಮ್ಯಭಾವವನ್ನು ಹೀರಿ, ಒಣಗಿಸಿ, ಸಂಧಿ ಆಶ್ರಿತ ಜ್ರರದಿಂದ ನಿರಂತರವಾಗಿ ಮತ್ತು ಶೀಘ್ರವಾಗಿ ಓಜಸ್ಸನ್ನು ಕಳೆಯುತ್ತದೆ.

ಪರಿಹಾರ
ಮೇಲಿನ ಎಲ್ಲಾ ಕಾರಣಗಳನ್ನು ಕೈಬಿಡುವುದೇ ಮೊಟ್ಟ ಮೊದಲ ಮತ್ತು ಅತ್ಯುತ್ತಮ ಪರಿಹಾರ.
ಉಳಿದಂತೆ ಚಿಕಿತ್ಸೆ ಎಂದಿಗೂ ಎರಡನೇ ಸಾಲಿನ ಪರಿಹಾರ.
**********




ಆಸ್ಪತ್ರೆ ರಹಿತ ಆರೋಗ್ಯಕ್ಕೆ ಆಯುರ್ವೇದ-78
18.03.2020

ಧಾರಣೀಯ ವೇಗಗಳು
(ರೋಗಗಳು ಬರಬಾರದೆಂದರೆ ಯಾವ ಕಾರಣಗಳನ್ನೂ ಹೇಳದೇ ತಡೆಯಲೇ ಬೇಕಾದ ವೃತ್ತಿಗಳು)


ಇದುವರೆಗೆ ಆಚಾರ್ಯರು ಹೇಳಿದ ತಡೆಯಬಾರದ ವೃತ್ತಿಗಳನ್ನು ನೋಡಿದೆವು, ಆದರೆ ಇಂದು 
"ತುರ್ತಾಗಿ ತಡೆಯಲೇಬೇಕಾದ ವೃತ್ತಿಗಳ ಬಗ್ಗೆ ಹೇಳುತ್ತಾರೆ”

ಸಹಜವಾಗಿ ಬಂದ ಮಾನಸಿಕ ವೃತ್ತಿಗಳನ್ನು ತಡೆಯದಿದ್ದರೆ ಅತ್ಯಂತ ಅಪಾಯಕರ!!

ಧಾರಯೇತ್ತು ಸದಾ ವೇಗಾನ್ ............... |
ಲೋಭ ಈರ್ಷಾ ದ್ವೇಷ ಮಾತ್ಸರ್ಯ ರಾಗಾದೀನಾಂ ಜಿತೇಂದ್ರಿಯಃ||25||
-ಅಷ್ಟಾಂಗ ಹೃದಯ, ರೋಗ ಅನುತ್ಪಾದನೀಯ ಅಧ್ಯಾಯ-4

ಎಲ್ಲರಿಗೂ ಗೊತ್ತಿರುವಂತೆ
"ಅರಿ ಷಟ್"(ಆರು ವೈರಿಗೆಳು)ಗಳನ್ನು  ಬುದ್ಧಿಪೂರ್ವಕವಾಗಿ ತಡೆಯಲೇಬೇಕು.


ಗಮನಿಸಿ: ಜ್ವರಾದಿ ರೋಗಗಳೆಂದೋ ಅಥವಾ ಇನ್ನಾವುದೇ ರೋಗವನ್ನು ಮೊದಲು ಹೇಳದೇ-
ರಾಗಾದಿ ರೋಗಗಳು.... ಎಂದಿದ್ದಾರೆ ಮಹರ್ಷಿ ವಾಗ್ಭಟಾಚಾರ್ಯರು. ಅಂದರೆ ಎಲ್ಲಾ ರೋಗಗಳ ಮೂಲ ಇಚ್ಛೆ ಅಥವಾ ಆಸೆ.
ಈ ಹುಟ್ಟು ಸಹ ರೋಗ ಎನ್ನುತ್ತದೆ ವೇದ. 
ಇರಲಿ,
ಒಟ್ಟಾರೆ, ಇಚ್ಚೆಯು ರೋಗದ ಮೂಲ....


ಕಾಮ ಕ್ರೋಧ ಲೋಭ ಮೋಹ ಮದ ಮಾತ್ಸರ್ಯಗಳ ಅರ್ಥ ಎಲ್ಲರಿಗೂ ತಿಳಿದಿರುವಂತದ್ದೇ ಆಗಿದೆ.


ಇವುಗಳ ವೃತ್ತಿಯನ್ನು ತಡೆಯದಿದ್ದರೆ ಏನಾಗುತ್ತದೆ ನೋಡೋಣ-
ಕಾಮ ಶೋಕ ಭಯಾತ್ ವಾಯುಃ
ಕ್ರೋಧಾತ್ ಪಿತ್ತಮ್
ಅಂದರೆ ಮನದಲ್ಲಿ ಉಂಟಾಗುವ ಕಾಮಾದಿಗಳಿಂದ ವಾತವೂ, ಕ್ರೋಧದಿಂದ ಪಿತ್ತವೂ ವರ್ಧಿಸುತ್ತದೆ. 
ಹೀಗೆ ಮನದ ಕಾರಣದಿಂದ ಶರೀರದಲ್ಲಿ ವೃದ್ಧಿಯಾದ ವಾತ-ಪಿತ್ತ ದೋಷಗಳು ಅತ್ಯಂತ ಸಹಜವಾಗಿ ರಕ್ತದ, ರಕ್ತನಾಳಗಳ ರೋಗಗಳನ್ನು ತರುತ್ತವೆ, ಏಕೆಂದರೆ ರಕ್ತವು ಪಿತ್ತ ದ ಅಂಶದಿಂದಲೇ ಆಗಿದೆ ಮತ್ತು ಇದು ಸದಾ ವಾತ ದಿಂದ ಚಲಿಸುತ್ತಿರುತ್ತದೆ.


ರಕ್ತ ಮತ್ತು ರಕ್ತನಾಳಗಳ ವಿಕೃತಿಯು ಅನೇಕ ರೋಗಗಳನ್ನು ಸುಲಭವಾಗಿ ತರುತ್ತವೆ. ಅತ್ಯುತ್ತಮ ಆಹಾರ ಸೇವಿಸಿದರೂ ಆಹಾರವನ್ನು ಸರ್ವಶರೀರದ ಧಾತುಗಳಿಗೆ ಹಂಚುವ ವಾಕಹವಾದ ರಕ್ತವೇ ದೂಷಿತವಾಗಿದ್ದರೆ ಆ ಆಹಾರವೂ ದೂಷಿತವಾಗುತ್ತದೆ.  ಮಳೆನೀರು ಶುದ್ಧವಾಗಿರುತ್ತದೆ, ಆದರೆ ಮಳೆ ಬಿದ್ದ ಸ್ಥಳದ ಮಣ್ಣಿನ ಗುಣವನ್ನು ಹೊಂದುವಂತೆ, ನಮ್ಮ ಆಹಾರ ರಕ್ತದ ಗುಣವನ್ನೇ ಹೊಂದಿ ದೂಷಿತವಾಗಿ ಎಲ್ಲಾ ಧಾತುಗಳಿಗೂ ದೂಷಿತ ಆಹಾರ ತಲುಪುತ್ತದೆ.‌ ಇದೇ ಎಲ್ಲಾ ರೋಗಗಳ ಅತ್ಯಂತ ಹತ್ತಿರದ ಕಾರಣ. 
ಇದೇ ಕಾರಣದಿಂದ ಸುಶ್ರುತಾಚಾರ್ಯರು ರಕ್ತವನ್ನು ಪ್ರಧಾನ ದೋಷ ಎಂದು ಕರೆದಿದ್ದಾರೆ.


ಯಾವ ವ್ಯಕ್ತಿಯ ಮನಸ್ಸು ದೂಷಿತವೋ ಆತನ ರಕ್ತ ದೂಷಿತ, ಅದರಿಂದ ರಕ್ತದ ಮೂಲಸ್ಥಾನ ಯಕೃತ್ ದೂಷಿತವಾಗಿ ಆ ಕಾರಣದಿಂದ ವ್ಯಕ್ತಿಯ ಸರ್ವಾವಯವಗಳೂ ದೂಷಿತ, ಅದನ್ನೇ ರಕ್ತಪಿತ್ತ ಎಂಬ ಬಹುದೊಡ್ಡ ಪ್ರಕರಣವನ್ನು ಆಚಾರ್ಯರು ಹೇಳಿದ್ದಾರೆ. ಇಂದಿನ gastritis, esophagitis, colitis, pancreatitis, hepatitis, sinusitis, cellulites, nephritis, cystitis, meningitis.....
 itis, itis, itis !!! ಮುಂತಾದ ಎಲ್ಲವೂ ಈ ರಕ್ತ ಮತ್ತು ಪಿತ್ತದಿಂದಾದ ಊತಗಳು... 


ಹಾಗಾಗಿ ಈ "ರೋಗ ಸಮೂಹಗಳ ಮೂಲವೇ ರಕ್ತ ದುಷ್ಟಿ, ರಕ್ತ ದುಷ್ಟಿಯ ಅತ್ಯಂತ ಹತ್ತಿರದ ಮೂಲವೇ, ಮನೋ ದುಷ್ಟಿ"

ವಾತ ದೋಷದ ಸಂಪರ್ಕದಿಂದ ರಕ್ತನಾಳಗಳು ತಮ್ಮ ಗಾತ್ರದಲ್ಲಿ (ವ್ಯಾಸದಲ್ಲಿ) ವ್ಯತ್ಯಸ್ಥವಾಗುತ್ತವೆ. ಈ  ಸಂಕೋಚ ಮತ್ತು ಅತಿ ವಿಕಸನದಿಂದಲೇ, ಯಕೃತ್ತು,  ಹೃದಯ, ಮೆದುಳು, ಮೂತ್ರಪಿಂಡ, ಮಾಂಸಖಂಡ, ಚರ್ಮ, ಇಂದ್ರಿಯ ಮುಂತಾದವುಗಳಿಗೆ ರಕ್ತ, ಗಾಳಿ, ನೀರು, ಆಹಾರ, ಕಶ್ಮಲಗಳ ವ್ಯಾಪಾರ ನೆಡೆಯದೇ ದಾರುಣ ರೋಗಗಳು ಬರುತ್ತವೆ. 
ಉದಾ: BP, Cardiac problems, Renal problems...... etc.,


.........ತನ್ಯೋ, ಮಹತ್ಯೋ ವಾ ವಾತೇ ಸಿರಾಗತೇ||
-ಚರಕ ಸಂಹಿತಾ
ತನುತ್ವ=ಸಂಕೋಚ
ಮಹತ್ವ=ವಿಕಸನ


ಇಂದಿನ ಟಿ.ವಿ. ಸುದ್ದಿಗಳು ನಿರಂತರ ಭಯವನ್ನೇ ಹುಟ್ಟಿಸುವಲ್ಲಿ‌ ಅಗ್ರಶ್ರೇಣಿಯಲ್ಲಿ ನಿಲ್ಲುತ್ತವೆ.


ದೂರದ ಅಪರಿಚಿತರಿಗೆ ತೊಂದರೆ ಆದಾಗ, ಕರುಣೆ ಉದಿಸುವಂತೆ ಅಥವಾ ಪ್ರೀತಿಯಿಂದ ಸೇವೆಮಾಡುವಂತೆ ಪ್ರೇರೇಪಿಸುವ ಬದಲು. ಭಯ ಹುಟ್ಟಿಸುವ ರೀತಿಯಲ್ಲಿ ಬರುವ ಸುದ್ದಿಗಳು, ನಮ್ಮ ರಕ್ತನಾಳಗಳಲ್ಲಿ ಒತ್ತಡ ತಂದು BP ಹೆಚ್ಚುತ್ತಿದ್ದು ಅತ್ಯಂತ ಖೇದಕರ.
*************




ಆಸ್ಪತ್ರೆ ರಹಿತ ಆರೋಗ್ಯಕ್ಕೆ ಆಯುರ್ವೇದ-76

16.03.2020


ರೋಗಾನ್ ಅನುತ್ಪಾದನೀಯ ಅಧ್ಯಾಯದಲ್ಲಿ ಬರುವ-

ಅಧಾರಣೀಯ ವೇಗಗಳು(ತಡೆಯಬಾರದ ವೃತ್ತಿಗಳು)

ಇಂದಿನ ವಿಷಯ- ವಾಂತಿ

ಸಹಜವಾಗಿ ಬಂದ ವಾಂತಿಯನ್ನು ತಡೆಯುವು ಅಪಾಯಕರ!!



ವಿಸರ್ಪ ಕೋಠ ಕುಷ್ಠ ಅಕ್ಷಿಕಂಡೂ ಪಾಂಡ್ವಾಮಯ ಜ್ವರಾಃ |

…………………………………………….ವಮೇಃ||18||

-ಅಷ್ಟಾಂಗ ಹೃದಯ, ರೋಗಾನ್ ಅನುತ್ಪಾದನೀಯ ಅಧ್ಯಾಯ-4



ಸಹಜವಾಗಿ ಬಂದ ವಾಂತಿಯನ್ನು ಔಷಧಗಳಿಂದ ತಡೆದು ಅಪಾಯವನ್ನು ತಂದುಕೊಳ್ಳದಿರಿ. ಯಾವುದೇ ಅಲರ್ಜಿ ಚರ್ಮಕ್ಕೆ ಬಂದರೆ ಏನರ್ಥ? ಎಂದರೆ ಜಠರದಲ್ಲಿ ಅತ್ಯಂತ ಹುಳಿ ಅಂಶ ತನ್ನ ಸ್ಥಾನದಿಂದ ಹೊರಬಂದಿರುತ್ತದೆ ಅಥವಾ ಚ್ಯುತವಾಗಿರುತ್ತದೆ. ಹೀಗೆ ಸ್ಥಾನಚ್ಯುತ ಪಿತ್ತವು(ಹುಳಿ) ರಕ್ತನಾಳಗಳನ್ನು ಆಶ್ರಯಿಸಿ ಚರ್ಮದ ಪದರುಗಳಿಗೆ ಬಂದು ಸೇರುತ್ತದೆ, ನಮ್ಮ ಜಠರ ಮತ್ತು ಚರ್ಮಕ್ಕೆ ಹಾಗೆಯೇ ಜಠರ ಮತ್ತು ಶ್ವಾಸಕೋಶಗಳಿಗೆ ಅತ್ಯಂತ ನಿಕಟ ನಂಟಿರುತ್ತದೆ, ಗ್ಯಾಸ್ಟ್ರೈಟೀಸ್ ಆದಾಗ ಹಲವುಬಾರಿ ಮುಂಗೈಗಳ ಮೇಲೆ ನೀರುಗುಳ್ಳೆಗಳು ಬಂದಿರುವುದನ್ನು ಕಾಣುತ್ತೇವೆ ಇನ್ನೂ ಹಲವು ಬಾರಿ ಅಸ್ತಮಾದಂತೆ ಉಸಿರಾಟದ ತೊಂದರೆ ಬರುತ್ತದೆ ಆದರೆ ಅದು ನಿಜವಾಘಿಯೂ ಅಸ್ತಮಾ ಆಗಿರುವುದಿಲ್ಲ! ಇಲ್ಲೆಲ್ಲಾ ಜಠರಕ್ಕೆ ಚಿಕಿತ್ಸೆ ಮಾಡಿದರೆ ಸಾಕು ಪೂರ್ಣ ಪ್ರಮಾಣದ ನಿವೃತ್ತಿ ಸಾಧ್ಯ. ಆದರೆ ಈ ಅಲರ್ಜಿ ಕೆಲವುಬಾರಿ ಪ್ರಾಣವನ್ನೇ ತೆಗೆಯುವ ಹಂತಕ್ಕೂ ತಲುಪುತ್ತದೆ. ಹೆಚ್ಚಾದ ಪಿತ್ತವು ವಾಂತಿಯಾಗದೇ ಇದ್ದಾಗ ಕೆಲವೇ ಸಮಯದಲ್ಲಿ ಚರ್ಮದ ಅಥವಾ ಪುಪ್ಪುಸದ ಅಲರ್ಜಿಗಳು ಬರುವುದು ಬಹಳ ಜನರ ಅನುಭವಕ್ಕೆ ಬಂದಿದೆ ಅಲ್ಲವೇ?



ವಾಂತಿಯನ್ನು ತಡೆದರೆ ಬರುವ ರೋಗಗಳು:



1. ವಿಸರ್ಪ (ಸರ್ಪಸುತ್ತು)

2. ಕೋಠ (ಪಿತ್ತ ಗಂಧೆಗಳು, ಅಲರ್ಜಿ)

3. ಕುಷ್ಠ (ಅಲರ್ಜಿ ಹೊರತು ಎಲ್ಲಾ ವಿಧದ ಚರ್ಮದ ಕಾಯಿಲೆಗಳು, ಕೇವಲ ಲೆಪ್ರಸಿ ಅಲ್ಲ)

4. ಅಕ್ಷಿ ಕಂಡೂ (ಕಣ್ಣಿನ ತುರಿಕೆ)

5. ಪಾಂಡು (ರಕ್ತಹೀನತೆ)

6. ಜ್ವರ 

7. ಕಾಸ (ಕೆಮ್ಮು)

8. ಶ್ವಾಸ (ದಮ್ಮು)

9. ಹೃಲ್ಲಾಸ (ವಾಕರಿಸಿ ಬರುವುದು)

10. ವ್ಯಂಗ (ಚಿಟ್ಟೆಯಾಕಾರದ ಮುಖದ, ಮೈಮೇಲಿನ ಕಪ್ಪು ಛಾಯೆಯ ಕಂದು ಕಲೆಗಳು)

11. ಶೋಥ (ಬಾವು)



1.ವಿಸರ್ಪ (ಸರ್ಪಸುತ್ತು)-

ಮೈಗ್ರೇನ್ ತಲೆನೋವು ಬಂದು ವಾಂತಿಯಿಂದ, ಪಿತ್ತದ ಉಷ್ಣ ಹೊರಹೋಗುತ್ತದೆ. ಆದರೆ ಇದನ್ನು ಔಷಧಿ ಸೇವಿನೆಯಿಂದ ತಲೆನೋವನ್ನು ತಡೆಯುವ ಅಭ್ಯಾಸ ಮಾಡಿಕೊಂಡರೆ, ಆ ಉಷ್ಣತೆ ಅಲ್ಲಿಯೇ ಉಳಿದು ಕಾಲಾನಂತರ ಚರ್ಮಕ್ಕೆ ಸರಿಯುತ್ತದೆ. ಬಾಹ್ಯ ನರಗಳ ತಂತುಗಳಿರುವ ವೇದಿನಿ ಎಂಬ ಹೆಸರಿನ ಚರ್ಮದ ಪದರದಲ್ಲಿ ಸೇರಿ ಅಲ್ಲಿನ ತಂಪು ರಸ ಕ್ಷೀಣಿಸುವಂತೆ ಮಾಡುತ್ತಿರುತ್ತದೆ, ಸೂಕ್ತ ಸಮಯದಲ್ಲಿ, ಅಲ್ಲಿನ ರಸ ಕ್ಷೀಣವಾದಾಗ ಹರ್ಪಿಸ್ ಎಂಬ ವೈರಸ್ ದಾಳಿಮಾಡುತ್ತದೆ ಆಗ ನರಗಳನ್ನು ಆಶ್ರಯಿಸಿ ಘೋರ ರೂಪದ ಸರ್ಪಹುಣ್ಣು ಬರುತ್ತದೆ. ಇದನ್ನು ಕೇವಲ ವೈರಲ್ ಇನ್ಫೆಕ್ಸೆನ್ ಎಂದು ಆಧುನಿಕ ಪದ್ಧತಿ ಕರೆಯುತ್ತದೆ. ಆದರೆ ನಿಜವಾಗಿಯೂ ಇದು ಚರ್ಮದ ಇಮ್ಯುನಿಟೀ(ಸಾಮರ್ಥ್ಯ) ಕುಸಿದ ಅವಸ್ಥೆಯಾಗಿದೆ. ನಮ್ಮ ಇಮ್ಯೂನ್‌ ಸಿಸ್ಟಂ ಹಾಳಾಗದೇ ಯಾವ ವೈರಸ್ ಗಳೂ ದಾಳಿ ಮಾಡುವುದಿಲ್ಲ.



2.ಕೋಠ (ಪಿತ್ತ ಗಂಧೆಗಳು, ಅಲರ್ಜಿ)

ಇದೂ ಸಹ ಪಿತ್ತ ಚರ್ಮಕ್ಕೆ ಹರಿದುಬಂದ ಅವಸ್ಥೆ, ಆದರೆ ಇಲ್ಲಿ ಆಶ್ರಯ ನೀಡುವ ಚರ್ಮದ ಪದರ ಎಂದರೆ ತಿಳಿಹಳದಿ-ಕಪ್ಪುಕೆಂಪು ವರ್ಣದ ಶ್ವೇತ-ಲೋಹಿತ ಎಂಬ ಹೆಸರಿನ ಮೇಲ್ಭಾಗದ ಚರ್ಮ. ಈ ಸಂದರ್ಭದಲ್ಲಿ ಕೇವಲ ಅಲರ್ಜಿ ಎಂದು ಗ್ರಹಿಸಿ ಸಿಟ್ರಿಜಿನ್, ಮೊಂಟಾಲುಕಾಷ್ಟ್ ಮಾತ್ರೆ ಸೇವಿಸಿ ಹಿಸ್ಟಮಿನ್ ಗಳನ್ನು ತಡೆದರೆ. ಪಿತ್ತ ಬೇರೇ ಸ್ಥಾನಕ್ಕೆ ವರ್ಗಾವಣೆಯಾಗುತ್ತದೆ, ಪುಪ್ಪುಸಕ್ಕೆ ಸೇರಿ ಶ್ವಾಸರೋಗ ತರುತ್ತದೆ. ಇಲ್ಲಿ ಉಪ್ಪಿನ‌ಜಲ ಸೇವಿಸಿ ವಾಂತಿ ಮಾಡಿದರೆ ಸಾಕು, ಯಾವ ವ್ಯತಿರಿಕ್ತ ಪರಿಣಾಮ ಇಲ್ಲದೇ ಗುಣವಾಗುತ್ತದೆ ಮತ್ತು ಬಹಳ ಕಾಲ ಮರಳಿ ಬರುವುದಿಲ್ಲ.



3.ಕುಷ್ಠ (ಅಲರ್ಜಿ ಹೊರತು ಎಲ್ಲಾ ವಿಧದ ಚರ್ಮದ ಕಾಯಿಲೆಗಳು, ಕೇವಲ ಲೆಪ್ರಸಿ ಅಲ್ಲ)

ಕುಷ್ಟ ಎಂಬ ಹೇಸರೇ ಮನುಷ್ಯರನ್ನು ಹೆದರಿಸುತ್ತದೆ. ಆದರೆ ಆಯುರ್ವೇದದಲ್ಲಿ ಮಹಾಕುಷ್ಠಗಳಲ್ಲಿನ ಮುಂದಿನ ಅಸಸ್ಥೆಗಳಾದ ಉಪದ್ರವದ/ಗಂಭೀರ ಧಾತುಗಗಳನ್ನು ಆಶ್ರಯಿಸಿದ ಕುಷ್ಠವನ್ನು ಲೆಪ್ರಸಿ ಎನ್ನುತ್ತಾರೆ. ಅದಕ್ಕಿಂತ ಕೆಳಹಂತದ ಅನೇಕ ಚರ್ಮದ ವ್ಯಾಧಿಗಳನ್ನು 7 ವಿಧದ ಮಹಾಕುಷ್ಠ ಮತ್ತು 13 ವಿಧದ ಕ್ಷುದ್ರಕುಷ್ಠಗಳು ಎಂದು ಹೇಳಿದ್ದಾರೆ.

ಚರ್ಮದ ರಸಕ್ಕೆ ಪಿತ್ತ ಸೇರುತ್ತಾ ಕೊನೆಗೆ ರಸವೇ ತನ್ನ ಸ್ವಭಾವವಾದ ತಂಪನ್ನು ಬಿಟ್ಟು ಉಷ್ಣಭಾವ(ಪಿತ್ತಭಾವ)ವನ್ನು ಹೊಂದುತ್ತದೆ. ಆಗ ಚರ್ಮದ ಏಳೂ ಪದರಗಳಲ್ಲಿ ಬೇರೇ ಬೇರೇ ವಿಧದ ಕಾಯಿಲೆಗಳು ಬರುತ್ತವೆ. 

ಉಳಿದವುಗಳನ್ನು ನಾಳೆ ನೋಡೋಣ.

**************

ಆಸ್ಪತ್ರೆ ರಹಿತ ಆರೋಗ್ಯಕ್ಕೆ ಆಯುರ್ವೇದ-77

17.03.2020


ರೋಗ ಅನುತ್ಪಾದನೀಯ ಅಧ್ಯಾಯದಲ್ಲಿ ಬರುವ-

ಅಧಾರಣೀಯ ವೇಗಗಳು(ತಡೆಯಬಾರದ ವೃತ್ತಿಗಳು)

 ವಾಂತಿ-

ಸಹಜವಾಗಿ ಬಂದ ವಾಂತಿಯನ್ನು ತಡೆಯುವುದು ಅಪಾಯಕರ!!



ವಿಸರ್ಪ ಕೋಠ ಕುಷ್ಠ ಅಕ್ಷಿಕಂಡೂ ಪಾಂಡ್ವಾಮಯ ಜ್ವರಾಃ |…………………………………………….ವಮೇಃ||18||

-ಅಷ್ಟಾಂಗ ಹೃದಯ, ರೋಗ ಅನುತ್ಪಾದನೀಯ ಅಧ್ಯಾಯ-4



ವಾಂತಿಯನ್ನು ತಡೆದರೆ ಬರುವ ರೋಗಗಳಲ್ಲಿ‌ ಇಂದು ಮುಂದಿನವುಗಳನ್ನು‌ ನೋಡೋಣ



4. ಅಕ್ಷಿ ಕಂಡೂ (ಕಣ್ಣಿನ ತುರಿಕೆ)

5. ಪಾಂಡು (ರಕ್ತಹೀನತೆ)

6. ಜ್ವರ 

7. ಕಾಸ (ಕೆಮ್ಮು)

8. ಶ್ವಾಸ (ದಮ್ಮು)

9. ಹೃಲ್ಲಾಸ (ವಾಕರಿಸಿ ಬರುವುದು)

10. ವ್ಯಂಗ (ಚಿಟ್ಟೆಯಾಕಾರದ ಮುಖದ, ಮೈಮೇಲಿನ ಕಪ್ಪು ಛಾಯೆಯ ಕಂದು ಕಲೆಗಳು)

11. ಶೋಥ (ಬಾವು)


4) ಅಕ್ಷಿಕಂಡೂ(ಕಣ್ಣಿನ ತುರಿಕೆ):

ನೇತ್ರವು ಯಾವಾಗಲೂ ಅಂಟಿನಂತಹ ದ್ರವದ(ಮಲಕಫ) ಪ್ರಭಾವದಿಂದ ತೊಂದರೆಗೊಳಗಾಗುತ್ತದೆ. ತಡೆಹಿಡಿದ ವಾಂತಿಯು, ಪಿತ್ತಮಿಶ್ರಿತ ಕಫವನ್ನು ವರ್ತ್ಮ(ಕಣ್ಣುರಪ್ಪೆ) ಮತ್ತು ಪಕ್ಷ್ಮ(ಕಣ್ಗೂದಲು)ಗಳ ಸಂಧಿಯಲ್ಲಿ ಸೇರಿ ತುರಿಕೆಯನ್ನು ಉಂಟುಮಾಡುತ್ತದೆ. ಮತ್ತೆ ಮತ್ತೆ ಮರುಕಳಿಸಿದರೆ ಶುಕ್ಲ(conjunctiva) ಕೃಷ್ಣ(cornea) ಮಂಡಲದ ಆಳದ ತೊಂದರೆಗಳಿಗೆ ದಾರಿಯಾಗುತ್ತದೆ. ಆಯುರ್ವೇದದಲ್ಲಿ ನೇತ್ರಕ್ಕೆ ವಿಶೇಷ ಚಿಕಿತ್ಸೆಯನ್ನು ಶಾಲಾಖ್ಯ ತಂತ್ರದಲ್ಲಿ ಹೇಳಿದ್ದಾರೆ. ಅದರ ಅನ್ವಯ ಚಿಕಿತ್ಸೆ ಮಾಡಬೇಕಾಗುತ್ತದೆ.


5. ಪಾಂಡು:

ರಕ್ತ ಉತ್ಪತ್ತಿ ಪ್ರಾಕೃತ ಪಿತ್ತದಿಂದಲೇ ಆಗುತ್ತದೆ. ಆದರೆ ವಾಂತಿಯಿಂದ ಬರುವ ಪಿತ್ತ ಸ್ಥಾನಚ್ಯುತವಾಗಿರುವಂತದ್ದು, ಇದು ಶರೀರದಲ್ಲಿ ಯಾವುದೇ ರೀತಿಯ ಪೋಷಣೆ/ಬಲವನ್ನು ಕೊಡದು, ಇದನ್ನು ತಡೆಯುವುದರುಂದ ರಕ್ತ ಉತ್ಪತ್ತಿಗೆ ಬರಬೇಕಾದ ಹೊಸ ಮತ್ತು ಶುದ್ಧಪಿತ್ತಕ್ಕೂ ಅವರೋಧ ಉಂಟಾಗಿ(ರಸ ಧಾತವಿನಲ್ಲಿ ಅವರೋಧ) ರಕ್ತಹೀನತೆ ಆರಂಭವಾಗಿ ಹೆಚ್ಚಾಗುತ್ತಾ ಸಾಗುತ್ತದೆ. ಇದನ್ನೇ ಪಾಂಡುರೋಗ ಎನ್ನುತ್ತೇವೆ.


6. ಜ್ವರ-

ಯಾವುದೇ ಸೋಂಕಿಲ್ಲದೇ ಜ್ವರ ಬರುತ್ತದೆಯೇ?! ಅಚ್ಚರಿಯಾದರೂ ಸತ್ಯ. ಮಕ್ಕಳನ್ನು ಗಮನಿಸಿ, ಅಜೀರ್ಣದಲ್ಲಿ ಜ್ವರ ಬರುತ್ತದೆ, ವಾಂತಿಯಾದ ತಕ್ಷಣ ನಿವೃತ್ತಿಯಾಗುತ್ತದೆ. ಛರ್ದಿ(ವಾಂತಿ)ಯನ್ನು ತಡೆದರೆ ಅಜೀರ್ಣ ಅಥವಾ ಆಮಜ್ವರ ಬರುತ್ತದೆ.


7&8. ಕಾಸ(ಕೆಮ್ಮು), ಶ್ವಾಸ(ದಮ್ಮು)

ವಾಂತಿ ತಡೆಯಿಂದ ಉಂಟಾದ ಅಲರ್ಜಿಕಾರಕ ಉತ್ಕ್ಲೇಶ ಪಿತ್ತ ಚರ್ಮವನ್ನು ಬಿಟ್ಟು ಪುಪ್ಪುಸಗಳನ್ನು ಆಶ್ರಯಿಸಿದರೆ ಕೆಮ್ಮು ದಮ್ಮು ಉಂಟಾಗುತ್ತವೆ.


9. ಹೃಲ್ಲಾಸ

ಅಂದರೆ ಬಾಯಿಯಲ್ಲಿ ಜುಳುಜುಳು ನೀರು ಬರುವುದು.  ವಾಂತಿಯನ್ನು ಔಷಧಗಳಿಂದ ತಡೆದಾಗ ವಾಕರಿಕೆ ಬಹಳ ಕಾಲದವರೆಗೆ ಇರುತ್ತದೆ. ವಾಂತಿ ಆಗುವ ಲಕ್ಷಣ ಇರುತ್ತದೆ ಆದರೆ ವಾಂತಿ ನಿಲ್ಲುತ್ತದೆ. ಅದು ಕಾಲಾಂತರದಲ್ಲಿ ಅಪಾಯಕರವೇ ಸರಿ.



ವಾಂತಿ ತಡೆದರೆ ಬರುವ ಎಲ್ಲಾ ವ್ಯಾಪತ್ತುಗಳೂ ಎಲ್ಲರಿಗೂ ಬರುವುದಿಲ್ಲ. ನಮ್ಮ ವಯಸ್ಸು, ಕಾಲ, ಬಲಗಳನ್ನು ಆಧರಿಸಿ ಬೇರೇ ಬೇರೆ ತೊಂದರೆಗಳು ಬರುತ್ತವೆ.


10. ವ್ಯಂಗ:

ಇಂದು ಬಹಳ ಜನರ ಸೌಂದರ್ಯವನ್ನು ಕಿತ್ತುಕೊಂಡ,‌ ಮುಖದ ಮೇಲೆ ಬರುವ ಚಿಟ್ಟೆಯಾಕಾರದ ತಾಮ್ರವರ್ಣದ ಕಲೆಗೆ ವ್ಯಂಗ ಎಂದು ಹೆಸರು.

ಚರ್ಮಕ್ಕೆ ವರ್ಣ ಕೊಡುವ, ರೋಹಿಣಿ ಮತ್ತು ತಾಮ್ರ ಎಂಬ ಹೆಸರಿನ ತ್ವಚೆಯ ಪದರದಲ್ಲಿ ಬಹಳಕಾಲದಿಂದ ಪಿತ್ತ ಸಂಚಯವಾಗಿ ಅಲ್ಲಿನ‌ರಕ್ತನಾಳಗಳನ್ನು ಒಣಗಿಸಿದರೆ ಈ ತೊಂದರೆ ಬರುತ್ತದೆ. ವಾಂತಿ ತಡೆಯುವ ಅಭ್ಯಾಸ ಬಹಳ ಕಾಲ ಇರುವವರಿಗೆ ಇದು ಹೆಚ್ಚು.

ಬಹಳ ಜನ ಕೇಳಬಹುದು ನಮಗೆಲ್ಲಾ ವ್ಯಂಗ ಇದೆ ನಾವು ವಾಂತಿ ತಡೆಹಿಡಿದಿಲ್ಲ ಎಂದು. ಗಮನಿಸಿ: ಚಹಾ-ಕಾಫಿಗಳ ರೂಢಿ ಹೆಚ್ಚಿರುವವರು ತಲೆನೋವು ಬರುವ ಮೊದಲೇ ಅಂದರೆ ಪಿತ್ತ ಉತ್ಕ್ಲೇಶ ಆಗುವ ಮೊದಲೇ ಅದನ್ನು ತಮ್ಮ ಪ್ರಿಯ ಪಾನೀಯಗಳಿಂದ ತಡೆದು ಬಿಡಿತ್ತಾರೆ. ಅಯ್ಯೋ ಕುಡಿಯದಿದ್ದರೆ ತಲೆನೋವು-ವಾಂತಿ ಬಂದುಬಿಡುತ್ತದೆ, ಎಂದು ಸಬೂಬು ಕೊಟ್ಟು ಸೇವಿಸುವವರೇ ನೀವು ವಾಂತಿಯನ್ನು ತಡೆಯುತ್ತಿದ್ದೀರಿ ಎಂದೇ ಅರ್ಥ.


11. ಶೋಥ:

ಶೋಥ ಎಂದರೆ ಬಾವು, ಇಂದು ಬಹಳ ಜನರಿಗೆ ಪಿತ್ತದಿಂದಲೇ ಬಾವು ಬರುತ್ತಿದೆ, ಇದೊಂದು ದೊಡ್ಡ ಮತ್ತು ಅತ್ಯಗತ್ಯವಾಗಿ ಚರ್ಚೆಯಾಗಲೇ ಬೇಕಾದ ವಿಷಯ. ಈ ಜಗದ ಇಂದಿನ ಶೇ.75 ಕಾಯಿಲೆ ಈ ಶೋಥದ್ದೇ....ಸಧ್ಯಕ್ಕೆ ಹೇಳುವುದಾದರೆ, ಉದರ, ಅನ್ನನಾಳ, ಗಂಟಲುಗಳಲ್ಲಿ ಊತಬರುವುದು(........itis) ಮತ್ತು ಬಾಯಿಹುಣ್ಣಿನ ರೂಪದಲ್ಲಿ ಬರುವ ಊತ ಎಂದು ಗ್ರಹಿಸೋಣ.

***************



ಆಸ್ಪತ್ರೆ ರಹಿತ ಆರೋಗ್ಯಕ್ಕೆ ಆಯುರ್ವೇದ-64
04.03.2020

ಮೂಳೆಯ ಸಾಮರ್ಥ್ಯವನ್ನು ವೃದ್ಧಿಸುವುದು ಹೇಗೆ?

ಯತ್ ದ್ರವ್ಯಂ ಸ್ನಿಗ್ಧತ್ವಂ,‌ ಖರತ್ವಂ, ಶೋಷಣತ್ವಂ ತತ್ ಅಸ್ಥಿನಾಂ ವರ್ಧಯಂತಿ |

ಮೂಳೆ ವರ್ಧಕ ಅಂಶಗಳು
 ಮೂಳೆ ಉತ್ಪತ್ತಿಗೆ ಬೇಕಾಗುವ ಅಂಶಗಳು ಎರೆಡು- 
1) ತುಪ್ಪ ಸೇವನೆ(ಸ್ನಿಗ್ಧತ್ವಂ)
ಮತ್ತು 
2) ಶಾರೀರಿಕ ಶ್ರಮ(ಖರತ್ವಂ, ಶೋಷಣತ್ವಂ) 
ಈ ಎರಡರಲ್ಲಿ ಕೇವಲ ಒಂದು ಮಾತ್ರ ಪಾಲಿಸಿದರೆ ನಮ್ಮ ತೂಕ ಹೆಚ್ಚುತ್ತದೆ ಅಥವಾ ಮೂಳೆ ಸವೆಯುತ್ತದೆ.

ಆದರೆ,
ವಿ.ಸೂಚನೆ: ತುಪ್ಪ (ಅಥವಾ ಯಾವುದೇ ಶಕ್ತಿಯುತ ಆಹಾರ) ಸೇವನೆಯ ತಕ್ಷಣ ಶಾರೀರಿಕ ವ್ಯಾಯಾಮ ಮಾಡುವುದು ಬೇಡ, ಅದರಿಂದ ಮೂಳೆ ಉತ್ಪತಿಗೆ ಮೊದಲೇ ಶರೀರದ ಸಂಧಿ, ಮಾಂಸಗಳಲ್ಲಿ ಗುಂಟುಗಳಾಗುತ್ತವೆ, ರುಮ್ಯಾಟಿಸಮ್ ಬರಬಹುದು.

 ಶಾರೀರಿಕ ಕೆಲಸ ಮಾಡದೇ ಮೂಳೆಯ ಬೆಳವಣಿಗೆ ಮತ್ತು ಮಾಂಸ ಖಂಡಗಳ ಗಟ್ಟಿತನ ಬರುವುದು ಸಾಧ್ಯವೇ ಇಲ್ಲ, ಆದರೆ ಶಾರೀರಿಕ ಶ್ರಮಕ್ಕೆ ಒಂದು ಸೂಕ್ತ ವಿಧಾನ ಅನುಸರಿಸಬೇಕು.

1) ತುಪ್ಪಸೇವನೆ ವಿಧಾನ

•  ಗಟ್ಟಿತುಪ್ಪ ತಿನ್ನ ಬಾರದು,  ತುಪ್ಪದ ಪಾತ್ರೆಯನ್ನು ನೇರವಾಗಿ ಬೆಂಕಿಗೆ ಇಟ್ಟು ಕರಗಿಸಬಾರದು, ಅದರ ಬದಲು ಬಿಸಿ ಅಥವಾ ಕುದಿಯುವ ನೀರಿಗೆ ಇಟ್ಟು ಕರಗಿಸಿರಿ, ಏಕೆಂದರೆ ನೀರು 100°c  ಗಿಂತ ಹೆಚ್ಚು ಬಿಸಿಯಾಗುವುದಿಲ್ಲ. ಆಗ ತುಪ್ಪ ಹೊಗೆಯಾಡುವಷ್ಟು ಅಥವಾ ಆವಿಯಾಗುವಷ್ಟು ಬಿಸಿ ಯಾಗುವುದಿಲ್ಲ. ಹೊಗೆಯಾಡಿದ ತುಪ್ಪವನ್ನು ಚೆಲ್ಲಿಬಿಡುವುದೇ ಲೇಸು. ಹಣ ದಂಡ ವಾಗುತ್ತದೆ ಆದರೆ ಆರೋಗ್ಯ ಉಳಿಯುತ್ತದೆ.

•  ನಾನು ತುಪ್ಪವನ್ನೇ ತಿನ್ನುವುದಿಲ್ಲ ಎನ್ನುವರ ಮೂಳೆ ಬೇಗ ಸವೆಯುತ್ತವೆ ಮತ್ತು ಮಜ್ಜಾ ಧಾತು ಒಣಗುವ ಕಾರಣ, ಅದರಿಂದ ಉತ್ಪತ್ತಿಯಾಗುವ ರಕ್ತ ಮತ್ತು ಅದರ ಉಪಧಾತುಗಳಾದ ರಕ್ತ ನಾಳಗಳೂ ಒಣಗಿ ಹೃದಯ, ಮೆದುಳಿನ, ಕಿಡ್ನಿಯ ತೊಂದರೆಗಳು ಬರುವ ಸಂಭವ ಹೆಚ್ಚು.

 ವೈದ್ಯರು ಹೇಳುತ್ತಾರೆ ತುಪ್ಪ ಸೇವನೆಯಿಂದ ಕೊಲೆಸ್ಟ್ರಾಲ್ ಹೆಚ್ಚುತ್ತದೆ ಅಪಾಯ! ಎಂದು, ಅದರ ವಿಚಾರವನ್ನು ಮುಂದೆ ತಿಳಿಸುತ್ತೇವೆ. 
ಯಾವ ರಾಸಾಯನಿಕಗಳು ನಮ್ಮ ಆಹಾರದಲ್ಲಿ ಹೇಗಿರುವವೋ ಹಾಗೇ ಶರೀರದಲ್ಲಿ ಹೆಚ್ಚಾಗುವುದಿದ್ದರೆ ಎಲ್ಲಾ ರಾಸಾಯನಿಕಗಳನ್ನ ಬಳಸಿ ಎಲ್ಲಾ ರೋಗಗಳನ್ನು ನಿಯಂತ್ರಿಸಬಹುದಿತ್ತು ಅಲ್ಲವೇ? 
ಆರೋಗ್ಯಕ್ಕೆ ನಮ್ಮ ಜೀರ್ಣ ಕ್ರಿಯೆಯೇ ಪ್ರಧಾನ ಪಾತ್ರದಾರಿ ಹಾಗಾಗಿ ಸೇವಿಸಿದ ಅನ್ನ ಜೀರ್ಣವಾಗಲು ಕೆಲಸಗಳನ್ನು ಯಥೇಚ್ಛ ಮಾಡಿ ಮತ್ತು ನಿಮ್ಮ ಮಕ್ಕಳಿಂದ ಹೆಚ್ಚು ಶಾರೀರಿಕ ಶ್ರಮ ಆಗುವ ಆಟಗಳನ್ನು ಆಡಿಸಿ.

•  ಕೊಲೆಸ್ಟ್ರಾಲ್ ಕೊಂಚ ಹೆಚ್ಚಿರಿವುದು ಉತ್ತಮ ಅದಕ್ಕೆ ಕೊಬ್ಬನ್ನು ಒಣಗಿಸುವ ಮಾತ್ರೆ ಸೇವಿಸಿದರೆ ರಕ್ತನಾಳ ಒಣಗುವ ಜೊತೆಗೆ ಮೂಳೆ ಸವೆತವು  ಹೆಚ್ಚುತ್ತದೆ.

•  ಕೊಲೆಸ್ಟ್ರಾಲ್  ಕಡಿಮೆ ಮಾಡಿಕೊಳ್ಳಲು ನಿತ್ಯ statin(atorvastatin, rosuvastatin) ಮಾತ್ರೆ ಸೇವಿಸುವ ಜನರು ದಯವಿಟ್ಟು ಗಮನಿಸಿ ನಿಮ್ಮ ಸಂದು ಕೀಲುಗಳು ಬೇಗ ನೋವು, ಸವೆತ ಬರುತ್ತವೆ. statin ಮಾತ್ರೆಗಳಿಂದ ಅಲ್ಲಿರುವ ನೈಸರ್ಗಿಕ lubricating liquid ಒಣಗುತ್ತದೆ. 

•  ಕೊಲೆಸ್ಟ್ರಾಲ್  ಭೂತಕ್ಕೆ ಹೆದರಿ ಕೊಬ್ಬನ್ನು ಕರಗಿಸುವ ಮಾತ್ರೆ ಸೇವಿಸುವ ಬದಲು, ಶಾರೀರಿಕ ಶ್ರಮದಿಂದ ಕರಗಿಸಿದರೆ ಅದೇ ಕೊಬ್ಬು ಮೂಳೆಯಾಗಿಬಿಡುತ್ತದೆ. ಮಾತ್ರೆಯಿಂದ ಒಣಗಿಸಿದರೆ ಅದೇ ರೋಗವಾಗುತ್ತದೆ ಎರಡನ್ನು ಬಿಟ್ಟು ತುಪ್ಪ ತಿನ್ನುವುದನ್ನೇ ಬಿಟ್ಟರೆ ಮೂಳೆ ಉತ್ಪತ್ತಿ ಸರಿಯಾಗಿ ಆಗುವುದೇ ಇಲ್ಲ, ಆಗ ಎಷ್ಟೇ calcium ಮಾತ್ರೆ ತಿಂದರೂ ಮೂಳೆ ಬೆಳೆಯದು, ಎಷ್ಟೇ iron ಮಾತ್ರೆ ತಿಂದರು ರಕ್ತ ಹೆಚ್ಚಾಗದು, ಏನೇ ನಿಗಾವಹಿಸಿದರೂ hypothyroidism ತಪ್ಪಿಸಲಾಗದು, ಎಷ್ಟು ಉಪವಾಸ ಮಾಡಿದರೂ ತೂಕ ಇಳಿಯದು.

 ಮಜ್ಜಾದಿಂದಲೇ ರಕ್ತ ಕಣಗಳು ಉಂಟಾಗುವುದರಿಂದ, ತುಪ್ಪ ತಿನ್ನದೆ ಗಟ್ಟಿ ಮೂಳೆ ಮತ್ತು ಸಾರ ಮಜ್ಜಾ ಉತ್ಪತ್ತಿಯಾಗದು. ರಕ್ತೋತ್ಪತಿ ಕ್ಷೀಣಿಸುತ್ತದೆ. ಎಷ್ಟೇ iron ಮಾತ್ರೆ ತಿಂದರೂ ರಕ್ತ ಕಣಗಳೇಇಲ್ಲದೆ iron ಹೊರ ಹೋಗುತ್ತದೆ.

 ರಕ್ತಕಣಗಳಿಗೆ ಶಕ್ತಿ ಇಲ್ಲದೆ ಹೋಗುವುದರಿಂದ ಚಿಕ್ಕ ಚಿಕ್ಕ ರಕ್ತ ಕಣಗಳು ಬಿಡುಗಡೆಯಾಗುತ್ತವೆ, ಇದು ಹೇಗೆಂದರೆ, ಒಂದಿಬ್ಬರು ದೊಡ್ಡವರು ಸುಲಭದಲ್ಲಿ ಮಾಡಿಮುಗಿಸುವ ಕೆಲಸಕ್ಕೆ, ನೂರಾರು ಅತೀ ಪುಟ್ಟ ಮಕ್ಕಳನ್ನು ಕಳಿಸಿದರೆ ಸಾಧ್ಯವಾದೀತೇ? ಈಗ ಹೆಚ್ಚಿನ ಜನರ ರಕ್ತದಲ್ಲಿ ಕಣಗಳ ಸಂಖ್ಯೆ ಸಾಮಾನ್ಯಕ್ಕಿಂತ ಹೆಚ್ಚು, ಗಾತ್ರ ಅತ್ಯಂತ ಸಣ್ಣ ಮತ್ತು immature cells, ಇದೇ ಕಾಲಾಂತರದಲ್ಲಿ hypothyrodism  ಗೆ ತಿರುಗುತ್ತದೆ. ಇದೇ ರಕ್ತ ಹೀನತೆಯ ಕಾರಣ ಮೇದಸ್ಸಿನಲ್ಲಿ ಜೀರ್ಣ ಕ್ರಿಯೆ ಕುಂದುವುದರಿಂದ ಉಪವಾಸ ಮಾಡಿದರೂ ತೂಕ ಇಳಿಯದು.

ತುಪ್ಪ ಎಂದರೆ ಶುದ್ಧ ಹಸುವಿನ ತುಪ್ಪ ಎಂದು ಗ್ರಹಿಸಿ ಬಳಸುವುದು ಶ್ರೇಷ್ಠ.

 ಜನರು ಅತ್ಯಂತ ಶ್ರದ್ಧೆ ಇಟ್ಟು ಅವರ ನೂರಾರು ಉತ್ಪನ್ನಗಳನ್ನು ಬಳಸುವ ಹೆಸರಾಂತ ತಯಾರಕರೊಬ್ಬರು ತಮ್ಮ ಕಂಪನಿಯಿಂದ "ಶುದ್ಧ ಹಸುವಿನ ತುಪ್ಪ" ಎಂಬ ಹೆಸರಿನಲ್ಲಿ ಕಳಪೆದರ್ಜೆಯ ತುಪ್ಪವನ್ನು ಭಾರತಾದ್ಯಂತ ಮಾರಾಟ ಮಾಡುತ್ತಿದ್ದಾರೆ!! ಆ ಬಗ್ಗೆ ಗಮನವಿರಲಿ.

 ಶುದ್ಧ ಹಸುವಿನ ತುಪ್ಪ ಸಿಗದಿದ್ದರೆ, ಯೋಚನೆ ಬೇಡ, ಮನೆಯಲ್ಲೇ ಹಾಲನ್ನು ಕಾಯಿಸಿ, ಹೆಪ್ಪು ಹಾಕಿ, ಕಡೆದು, ಬೆಣ್ಣೆ ತಗೆದು ಕಾಯಿಸಿ ತುಪ್ಪ ಮಾಡಿ ಬಳಸಿ. ಈ ರೀತಿ ಸಂಸ್ಕರಿಸದೇ, ನೇರ ಹಾಲಿನಿಂದಲೇ ಕೊಬ್ಬನ್ನು ತೆಗೆದು ತಯಾರಿಸಿದ ತುಪ್ಪ ಸೇವನೆಯು ಮೂಳೆ, ಮಜ್ಜೆ, ರಕ್ತ ಆಗುವ ಬದಲು ಕೊಬ್ಬನ್ನು  ಹೆಚ್ಚಿಸುತ್ತದೆ. ವೈದ್ಯರು ಹೇಳುವ ದುರ್ಗುಣದ ತುಪ್ಪ ಇದು ಇದನ್ನು ತುಪ್ಪ ಎನ್ನುವ ಬದಲು "ಅಸಂಸ್ಕಾರಿತ ಕೊಬ್ಬು" ಎಂದು ಕರೆಯಬಹುದು .
**********





ಕೊರೋನಾ ಕೊರೋನಾ ಕೊರೋನಾ CORONA COVID 19



24.03.2020

ಕಾಳು ಮೆಣಸು ಬಳಸಿರಿ- ಕೊರೋನಾ ತಡೆಯಿರಿ:

(ಸನಾತನ ವೈದ್ಯ ಪದ್ಧತಿಯ ಸ್ಪಷ್ಟ ಉಲ್ಲೇಖ ಮತ್ತು ಅದರ ವೈಜ್ಞಾನಿಕ ವಿವರಣೆ ಸಹಿತ)



ಇದೊಂದು ಅದ್ಭುತ ರಾಮಬಾಣ, ತಾಳ್ಮೆಯಿಂದ ಸಂಪೂರ್ಣ ಓದಿ, ಪಾಲಿಸಿ.



ಈ ಸಂದೇಶದ ಕಾರಣ 👉

ಕೊರೋನಾ ತಡೆಗೆ ಆಯುರ್ವೇದ ಔಷಧ ಯೋಜನೆಗೆ ಅವಕಾಶ ಕೊಡಿ ಎಂದು ಕೋರಿಕೊಂಡರೂ- 

ನಿಮ್ಮ ಔಷಧವನ್ನು ಕೊರೋನಾ ಮೇಲೆ ಕ್ಲಿನಿಕಲ್ ಟ್ರಯಲ್ ಮಾಡಿರುವ ಬಗ್ಗೆ ದೃಢೀಕರಿಸಿ ಎಂದು ಕೇಳಿಸಿಕೊಳ್ಳಲ್ಪಟ್ಟಿದ್ದೇವೆ. ತಮಾಷೆ ಎಂದರೆ ಈಗ ಮಾಡುತ್ತಿರುವ ಯಾವ ಚಿಕಿತ್ಸೆಯೂ ಕೊರೋನಾ ಮೇಲೆ ಕ್ಲಿನಿಕಲ್ ಟ್ರಯಲ್ ಮಾಡಿ ಯಶಸ್ವಿಯಾದಂತಹುವೇನಲ್ಲ.!

ಮತ್ತು

ಕ್ಲಿನಿಕಲ್ ಟ್ರಯಲ್ ಗೆ ಬೇಕಾಗುವ ಸಮಯದಲ್ಲಿ ಅದೆಷ್ಟು ಜನರಿಗೆ ಈ ಮಾರಿ ತಗುಲುವುದು?!

ಮತ್ತು 

ಕಾಳು ಮೆಣಸು ನಿತ್ಯಬಳಕೆಯ ವಸ್ತು ಇದು ಯಾವುದೋ ಹೊಸ ಕೃತಕ ಸೃಷ್ಟಿತ ದ್ರವ್ಯವೇನಲ್ಲ.



ಈ ಎಲ್ಲಾ ಕಾರಣಗಳನ್ನು ಮುಂದಿಟ್ಟುಕೊಂಡು, ಈ ವಿವರಣೆಯನ್ನು ಹಂಚುತ್ತಿದ್ದೇವೆ. ದಿವ್ಯ ಶಕ್ತಿಯೊಂದು ಈ ಸಂದೇಶ ರವಾನಿಸಲು ಪ್ರೇರಣೆ ನೀಡಿದೆ.



• ಹೌದು ಕಾಳು ಮೆಣಸು ಒಂದು ಅತ್ಯದ್ಭುತ ಔಷಧ.

• ಯಾರು ಏನೇ ಹೇಳಲಿ, 21 ದಿನಗಳ ಕಾಲ ವೈಜ್ಞಾನಿಕ ರೀತಿಯಲ್ಲಿ ಕಾಳು ಮೆಣಸು ಉಪಯೋಗಿಸಿ.

• ಇದಕ್ಕೆ ಯಾವುದೇ ಆಧುನಿಕ ಸಂಶೋಧನೆಯ ಪುರಾವೆಗಳಿಗೆ ಕಾಯಬೇಡಿ.

• ತುರ್ತು ಸ್ಥಿತಿಯಲ್ಲಿ ಆಪದ್ಧರ್ಮ ಅನುಸರಿಸಿ, ನಿಮ್ಮ ಮನೆಗೆ ಬರುವುದನ್ನು ತಡೆಯಿರಿ.

• ಜೀವ ಮೊದಲು-ಪುರಾವೆ ನಂತರ ಹಾಗೆಯೇ

ಫಲಿತಾಂಶ ಮೊದಲು-ಸಂಶೋಧನೆ ನಂತರ.

ಸದ್ಯಕ್ಕೆ ಸಮಯವಿಲ್ಲ ಸಂಪೂರ್ಣವಾಗಿ ನಮ್ಮನ್ನು ಸಂರಕ್ಷಿಸಿಕೊಳ್ಳೋಣ, ನಂತರ ಮಾತನಾಡೋಣ.



ಚರಕ, ಸುಶ್ರುತ, ಭಾವಪ್ರಕಾಶ-ಕೈಯದೇವ-ರಾಜ ನಿಘಂಟುಗಳ ಉಲ್ಲೇಖ-

ಮರೀಚಂ ಜಂತು ಸಂತಾನ ನಾಶನಮ್



ಶ್ವಾಸ ಶೂಲಘ್ನಮ್ ಶ್ವಾಸ ಶೂಲ, 
ಕ್ರಿಮೀನ್ ಹರೇತ್ ವಿಷಘ್ನಂ, 
ಭೂತನಾಶನಮ್ ಅವೃಷ್ಯಂ

ಶ್ಲೇಷ್ಮ ಪ್ರಸೇಕ ಛೇದಿತ್ವಾತ್ ಶೋಷಣತ್ವಾತ್

**



ಕಾಳು ಮೆಣಸಿನಲ್ಲಿರುವ ರಾಸಾಯನಿಕಗಳು-

(Chemicals in pepper)



Piperene

Piperethine

Piperolein A & B

Feruperine

Dehydroferuperine

Citronellol 

Criptone

Dehydrocarveol

Alpha & Beta Pinene

Piperonal

Camphene

Beta Caryophyllene

Beta Alanine

Pipecolic acid

Carotene

Ascorbic acid (Vitamin C)

Pipercide

etc.,

(ನೆಟ್ ನಲ್ಲಿ ಎಲ್ಲಾ ರಾಸಾಯನಿಕಗಳ ಕಾರ್ಯವನ್ನು ತಿಳಿಯಬಹುದು)



ವೈಶಿಷ್ಟ್ಯ ಏನೆಂದರೆ,

ಕಾಳು ಮೆಣಸಿನಲ್ಲಿ ಈ ಎಲ್ಲಾ ರಾಸಾಯನಿಕಗಳೂ ಹರ್ಬಲ್ ಕಾಂಪ್ಲೆಕ್ ರೂಪದಲ್ಲಿರುವವು ಮತ್ತು ಈ ಎಲ್ಲ ರಾಸಾಯನಿಕಗಳ ಪ್ರತ್ಯೇಕ ಕಾರ್ಯಗಳಿಗಿಂತ ವಿಭಿನ್ನವಾಗಿ ಕಾರ್ಯನಿರ್ವಹಿಸಿ ನಮ್ಮನ್ನು ಸಂರಕ್ಷಿಸುತ್ತವೆ.



ಒಟ್ಟಾರೆ ಈ ರಾಸಾಯನಿಕಗಳ ಇರುವಿಕೆ ಮತ್ತು ಚರಕಾದಿ ಮಹರ್ಷಿಗಳು ಹೇಳುವ ದ್ರವ್ಯ ಕಾರ್ಮುಕತಾ ಗಮನಿಸಿದರೆ ಹೀಗೆ ತಿಳಿಯಬಹುದು. 👇



"ಕಾಳು ಮೆಣಸು ಪ್ರಾಣವಹ ಶ್ರೋತಸ್ಸುಗಳ ಅವಯವಗಳಾದ ಮೂಗು, ಗಂಟಲು, ಕ್ಲೋಮ(trachea) ಮತ್ತು ಫುಪ್ಪಸಗಳ ಆಳದವರೆಗೆ ಕೆಲಸ ಮಾಡುತ್ತದೆ ಎಂಬುದು ಅತ್ಯಂತ ಸ್ಪಷ್ಟ."



ಇದು ಫುಪ್ಪುಸಾದಿ ಅವಯವಗಳ ಮೇಲೆ ದುಷ್ಪರಿಣಾಮ ಬೀರುವ ಯಾವುದೇ ಕ್ರಿಮಿ ಮತ್ತು ಕ್ರಿಮಿಗಳ ಸಂತಾನವನ್ನೇ ನಾಶ ಮಾಡುತ್ತದೆ.



ಕ್ರಿಮಿಗಳನ್ನು ಛೇದನ(ಅವುಗಳ DNA chain ಅನ್ನು ಒಡೆಯುವುದು)ಮಾಡುವುದು ಮತ್ತು ಅವುಗಳ ಸಂತಾನಾಭಿವೃದ್ಧಿ(replication)ಯನ್ನು ಶೋಷಣ ಅಂದರೆ ಒಣಗಿಸಿ ಬಿಡುವುದು.



"ಶ್ಲೇಷ್ಮ ಪ್ರಸೇಕ" ಅಂದರೆ ಕ್ರಿಮಿ ಬೀಡುಬಿಟ್ಟಿರುವ, ಬಿಡುತ್ತಿರುವ ಸ್ಥಾನದಿಂದ ಅವುಗಳನ್ನು ಬಡಿದೆಬ್ಬಿಸಿ ಹೊರ ತಳ್ಳಲು  ತಯಾರಿ ಮಾಡುವುದು. (ಸ್ಥಾನಾತ್ ಚಲಿತಃ ಬಹಿರ್ ಅ ನಿರ್ಯಾತಿ) ಕಫದೊಂದಿಗೆ ವೈರಸ್ ಗಳನ್ನೂ ಉತ್ಲೇಶ ಗೊಳಿಸಿ ಒಣಗಿಸುವುದು ಅಥವಾ ಹೊರ ತಳ್ಳುವುದು.



ಈ ಕಾರ್ಯಗಳಿಂದ-

"ಶ್ವಾಸ" ಅಂದರೆ ಉಸಿರಾಟದ ತೊಂದರೆ ಮತ್ತು ಅದರಿಂದಾಗುವ ಶೂಲ(ಎದೆ ನೋವು)ವನ್ನು ಕಾಳು ಮೆಣಸು ನಿವಾರಿಸುತ್ತದೆ.

*********



ಒಟ್ಟಾರೆ ಹೇಗೆ ಕಾರ್ಯ ನಿರ್ವಹಿಸುತ್ತದೆ ತಿಳಿಯಿರಿ:



ನಮ್ಮ ಗಂಟಲಿನಲ್ಲಿ ಮೊದಲ ಸ್ಥಾನವನ್ನು ಕಂಡುಕೊಳ್ಳುವ ಕೊರೋನಾ ವೈರಸ್, ಅಲ್ಲಿ ಇರುವ ನಮ್ಮ ರೋಗನಿರೋಧಕ ಶಕ್ತಿಯನ್ನು ಸೆದೆಬಡಿಯುತ್ತದೆ. ಈ ಹಂತದಲ್ಲೇ ಅದನ್ನು ನಾವು ಸೆದೆಬಡಿಯುವುದು ಜಾಣತನ. ಫುಪ್ಪಸದ ಸನಿಹಕ್ಕೆ ವೈರಸ್ ಜಾರದಂತೆ ತಡೆಯುವುದಾದರೆ, ಯುದ್ಧವನ್ನು ಗೆದ್ದಂತೆಯೇ ಸರಿ. 



ಅತ್ಯಮೂಲ್ಯ ಮಾಹಿತಿ:

ಮೆಣಸಿನ ಬಳಕೆಯ ವಿಧಾನವನ್ನು ಇಲ್ಲಿ ಹೇಳುವಂತೆಯೇ ಪಾಲಿಸಬೇಕು, ಇಲ್ಲವಾದಲ್ಲಿ ಫಲಿತಾಂಶ ಶೂನ್ಯ!!! ಏಕೆಂದರೆ ಪ್ರತಿಯೊಂದಕ್ಕೂ ನಿರ್ದಿಷ್ಟ ವೈಜ್ಞಾನಿಕ ಕಾರಣ ಇದೆ ಮತ್ತು ಇಲ್ಲಿ ಹೇಳುವ ಆಹಾರ ಪಾನೀಯಗಳ ವಿಷಯಗಳು ವೈರಸ್ ಗಳಿಗೆ ಆಹಾರ ನಿಲ್ಲಿಸುವ, ನಮ್ಮ ರೋಗನಿರೋಧಕ ಶಕ್ತಿಯನ್ನು ವರ್ಧಿಸುವ ಕಾರ್ಯದಲ್ಲಿ ತೊಡಗುತ್ತವೆ.



ಕೊರೋನಾವನ್ನು ಈ ಎಲ್ಲಾ ಕೋನಗಳಿಂದ ಸೆದೆಬಡಿಯದೇ ವಿಧಿಯಿಲ್ಲ. ಸಣ್ಣ ವೈರಸ್ ಆಗಿದ್ದರೆ ನಮ್ಮ ರೋಗನಿರೋಧಕ ಶಕ್ತಿಯೇ ಅದನ್ನು ತಡೆಯುತ್ತಿತ್ತು. ಆದರೆ ಇದೊಂದು ದೈತ್ಯ ಹಾಗಾಗಿ ಔಷಧ ಪ್ರಯೋಗಕ್ಕೆ ನಿರ್ದಿಷ್ಟ ವಿಧಿವಿಧಾನಗಳನ್ನು ಪಾಲಿಸುವುದು ಅನಿವಾರ್ಯ. 

*********



ಕಾಳು ಮೆಣಸನ್ನು ಬಳಸುವ ವಿಧಾನ



ರಾತ್ರಿ ಮಲಗಿದ ಸಮಯವನ್ನು ಬಿಟ್ಟು ಪ್ರತಿ 3 ಗಂಟೆಗೊಮ್ಮೆ ಬಳಸಬೇಕು.

• ಮೊದಲು ಬಾಯಿಯಲ್ಲಿರುವ ಎಲ್ಲಾ ಜೊಲ್ಲುರಸವನ್ನು ಚನ್ನಾಗಿ   ನುಂಗಿಬಿಡಿ.

• ಎರೆಡು ಕಾಳುಮೆಣಸನ್ನು ಎರಡೂ ದವಡೆಯಲ್ಲಿ ಇಟ್ಟುಕೊಂಡು ನಿಧಾನವಾಗಿ ಅಗೆಯಿರಿ.

• ಸ್ವಲ್ಪ ಜೊಲ್ಲು ಮಿಶ್ರವಾದೊಡನೇ ಮೆಣಸು ವಿಶಿಷ್ಟ ಔಷಧಿ ಭಾವವನ್ನು ಪಡೆಯುತ್ತದೆ.

• ಆಗ ನಿಧಾನವಾಗಿ ಗಂಟಲಿಗೆ ತಳ್ಳಿ, ನುಂಗುವ ಪ್ರಯತ್ನ ಬೇಡ.

• ಈ ಅಮೃತೋಪಮ ಸಮ್ಮಿಶ್ರಣವನ್ನು ನಿಧಾನವಾಗಿ ಗಂಟಲಿಗೆ ತಳ್ಳುತ್ತಲೇ ಇರಿ

• ತಾನಾಗಿ ಸಹಜವಾಗಿ ಗಂಟಲಿನಿಂದ ಜಾರಿ ಉದರ ಸೇರುವ ತನಕ ಹಾಗೇ ಬಿಡಿ.

• ಗಂಟಲು ಸ್ವಲ್ಪ ಉರಿಯಬಹುದು,‌ ಅದು ಕೇವಲ 1-2 ನಿಮಿಷಗಳು ಮಾತ್ರ, ನಂತರ ತಾನೇ ಕಡಿಮೆಯಾಗುತ್ತದೆ.

• ಸುಕೋಮಲ ದೇಹಿಗಳು, ಮಕ್ಕಳು ಉರಿ ತಡೆಯದಿದ್ದರೆ ಒಂದು ಅಗುಳು ಉಪ್ಪನ್ನು ಕೊಡಿ. ನೀರು, ಹಾಲು, ಮೊಸರು, ಮಜ್ಜಿಗೆ, ಸಕ್ಕರೆ, ಬೆಲ್ಲ, ತುಪ್ಪ, ಅಡಿಕೆ, ಚಾಕೊಲೇಟ್, ಚಹಾ ಟೀ ಕೊಟ್ಟರೆ ಹೊಳೆಯಲ್ಲಿ ಹುಣಸೆ ಹಿಂಡಿದಂತೆ ವ್ಯರ್ಥ.

• ಉರಿ ಮೂತ್ರ ಬಂದರೆ ಮಾತ್ರ ಎರಡರ ಬದಲು ಒಂದು ಕಾಳು ಮೆಣಸನ್ನೋ ಅಥವಾ 4-5 ಗಂಟೆಗೊಮ್ಮೆಯೋ ಸೇವಿಸುವುದನ್ನೂ ಅಥವಾ ಎರಡನ್ನೂ ಪಾಲಿಸಬಹುದು.



ಈ ವಿಧಾನವು ಯಾವುದೇ ವೈರಸ್ಸನ್ನು ಗಂಟಲಿನಲ್ಲೇ ಕೊಂದುಹಾಕುತ್ತದೆ ಮತ್ತು ಹೊಟ್ಟೆಯೊಳಕ್ಕೆ ತಳ್ಳಿ ಅಲ್ಲಿ ಸ್ವಭಾವದಿಂದ ಇರುವ Concentrated HCL ಆ್ಯಸಿಡ್ ನಲ್ಲಿ ಕರಗಿಸಿ ಇಲ್ಲವಾಗಿಸಿಬಿಡುತ್ತದೆ.



ವೈರಸ್ ನಿವಾರಣಾ ಪೇಯ:



ನಾಲ್ಕು ಜನರಿಗೆ ಬೇಕಾದಷ್ಟು ಪ್ರಮಾಣ-

ಶುಂಠಿ -1/2 ಚಮಚ

ಶುದ್ಧ ಹರಿಶಿಣ ಪುಡಿ- 1/4 ಚಮಚ

ಬೆಳ್ಳುಳ್ಳಿ- 8 ಬೇಳೆ

ಕಾಳು ಮೆಣಸು-16



ಎಲ್ಲದರ ಪುಡಿಯನ್ನು ಒಂದೂವರೆ ಟೀ ಗ್ಲಾಸ್ ನೀರನ್ನು ಹಾಕಿ ಕುದಿಸಿ ಸೋಸಿ ನಂತರ ಸ್ವಲ್ಪ ಬೆಲ್ಲ ಸೇರಿಸಿ.

ಪ್ರತಿ ಹಗಲು 2 ಗಂಟೆಗೊಮ್ಮೆ  ಕೇವಲ 1/4 ಗ್ಲಾಸ್ ಮಾತ್ರ ಸೇವಿಸಿ.

ಮಕ್ಕಳಿಗೆ ಕುಡಿಯಲು ಕಷ್ಟವಾದರೆ ಮಾತ್ರ ಸ್ವಲ್ಪ ಹಾಲನ್ನು ಬಳಸಬಹುದು. ಇಲ್ಲವಾದರೆ ಹಾಲು ಬೇಡವೇ ಬೇಡ.

ಇದು ರೋಗನಿರೋಧಕ ಶಕ್ತಿಯನ್ನು ವರ್ಧಿಸುತ್ತದೆ. ಇದರ ರಾಸಾಯನಿಕಗಳು ಫುಪ್ಪುಸದ ಸೋಂಕಿನ ವಿರುದ್ಧ ಹೋರಾಡುವ ಕಿಣ್ವಗಳನ್ನೂ, ಹಾರ್ಮೋನ್ ಗಳನ್ನೂ ಶರೀರದ ಅವಶ್ಯಕತೆಗೆ ತಕ್ಕಂತೆ ಕಾಲಕಾಲಕ್ಕೆ ಬಿಡುತ್ತಾ ಜೀವಕೋಶಗಳೊಳಗೆ ಅಥವಾ ಉದರದೊಳಗೆ ಬಂದ ವೈರಸ್ ನ ಚೈನ್ ತುಂಡರಿಸುತ್ತದೆ.



ಇದನ್ನು ಬಾಯಿ ಚಪಲಕ್ಕೋ, ಒಳ್ಳೆಯದೆಂದು ಹೇಳಿದ್ದಾರೆಂದೋ ಅತಿಪ್ರಮಾಣದಲ್ಲಿ ಸೇವಿಸಬಾರದು. ಉಪ್ಪು ರುಚಿಕಾರಕ ಆದರೆ ಸ್ವಲ್ಪ ಹೆಚ್ಚು ಮಾಡಿದರೂ ತಿನ್ನಲಾಗದಷ್ಟು ರುಚಿಯನ್ನು ಕೆಡಿಸುವಂತೆ, ಇದರ ಅತಿಸೇವನೆ ಔಷಧಿಯಾಗಿ ಕೆಲಸ ಮಾಡುವ ಬದಲು ಉತ್ತೇಜಕವಾಗುತ್ತದೆ.(ಇಂದಿನ ಮದ್ಯಪಾನ, ಚಹಾ ಕಾಫಿಗಳಾದಂತೆ)



ಆಗಾಗ ಬಿಸಿ ನೀರು ಸೇವನೆ

ಹೌದು ಬೇಸಿಗೆ ಇದೆ ಆದರೆ, ಆಗಾಗ ಸ್ವಲ್ಪ ಪ್ರಮಾಣದ ಬಿಸಿ ನೀರು ಗಂಟಲಿನ ಕಫವನ್ನು ಛೇದಿಸಲು ಅತ್ಯಂತ ಸಹಾಯಕ.



ಆಹಾರ ಪಾಲನೆ:
ಈ ವಿಷಯದಲ್ಲಿ ಎಂಥಹ ದುರ್ವಿಧಿ ನಮ್ಮದು-
ಜನರಿಗೆ ಗೊತ್ತಿಲ್ಲವೂ, ವಿಜ್ಞಾನ ಹೇಳುತ್ತಿಲ್ಲವೋ ಅಂತೂ ಸರಕಾರ ಈ ವಿಷಯದಲ್ಲಿ ಲಕ್ಷ್ಯವಹಿಸಿಲ್ಲ ಎನ್ನುವುದು ಸ್ಪಷ್ಟ.



ಯಾವುದೇ ವೈರಸ್ ಮಲ್ಟಿಪಲ್ ಫೋಲ್ಡ್ ನಲ್ಲಿ(1, 2, 4, 8, 16, 32, 64, 128, 256, 512, 1024...ಹೀಗೆ) ವೃದ್ಧಿಯಾಗಲು ಪ್ರೋಟೀನ್ ಸೇವನೆ ಹೆಚ್ಚಿರಲೇಬೇಕು.  ಬಳಕೆಯಾಗದ ಅಥವಾ ಪ್ರೋಟೀನ್ ಅತಿಸೇವನೆಯು ಮಾರಕಾಸ್ತ್ರವನ್ನು ವೈರಿಯ ಕೈಗೆ ಕೊಟ್ಟಂತೆಯೇ ಸರಿ.
• ಮಾಂಸಾಹಾರ ಸೇವನೆ ನಿಶಿದ್ಧ

ಇದು ವೈರಸ್ ಬೆಳವಣಿಗೆಗೆ ಅತ್ಯಂತ ಬಲಿಷ್ಠ ಪೋಷಕ ಅಂಶ, ಗಮನಿಸಿ ಅತ್ಯಂತ ಹೆಚ್ಚು (ಪ್ರತಿ ದಿನವೂ ಮಾಂಸ ಸೇವನೆ ಎನ್ನುವಷ್ಟು) ಮಾಂಸ ಸೇವಿ ಜನರಾದ ಚೀನಾ, ದುಬೈ, ಇಟಲಿ, ಅಮೇರಿಕಾ ದೇಶಗಳ ಜನ ಇದಕ್ಕೆ ಹೆಚ್ಚು ಹೆಚ್ಚು ಬಲಿಯಾಗುತ್ತಿದ್ದಾರೆ.

ನಮ್ಮ ದೇಶದಲ್ಲಿ ಕೇರಳಿಗರು ಹೆಚ್ಚು ಮಾಂಸ ಸೇವನೆಯಲ್ಲಿದ್ದಾರೆ, ಮಾಂಸ ಸೇವನೆಯ ನಿರ್ದಿಷ್ಟ ಸಮುದಾಯದ ಜನರೇ ಹೆಚ್ಚು ಹೆಚ್ಚು ಬಲಿಯಾಗುತ್ತಿದ್ದಾರೆ. ನಮ್ಮ ಉದ್ದೇಶ ಯಾವುದೋ ದೇಶ, ಜನಾಂಗ, ಸಮುದಾಯವನ್ನು ದೂಷಿಸುವುದಲ್ಲ. ಹೆಚ್ಚು ಮಾಂಸ ಸೇವನೆಯ ದುಷ್ಪರಿಣಾಮಕ್ಕೆ ಉದಾಹರಣೆ ಕೊಟ್ಟು ಅರ್ಥಮಾಡಿಸುವುದಾಗಿದೆ. ಏಕೆಂದರೆ ಮಾಂಸವು ಅತ್ಯಂತ ಹೆಚ್ಚು ಪ್ರೋಟೀನ್ ಹೊಂದಿದೆ ಮತ್ತು ಅದನ್ನು ಶಾರೀರಿಕ ಶ್ರಮದಿಂದ ಕರಗಿಸುವ ಬದಲು ಎ.ಸಿ. ಯಲ್ಲಿ ತಣ್ಣಗೆ ಕುಳಿತು ದುಡಿಯುತ್ತೇವೆ, ಇದು ಆಗಬಾರದು. ಮನುಕುಲ ಉಳಿಯಬೇಕು ಅಷ್ಟೆ.

• ಹಾಲು ಬೇಳೆ ಕಾಳುಗಳು ಬೇಡ
16ವರ್ಷದೊಳಗಿನ ಮಕ್ಕಳನ್ನು ಹೊರತುಪಡಿಸಿ ಯಾರೂ ಹಾಲು ಮತ್ತು ಹಾಲಿನ ಪದಾರ್ಥಗಳಾದ ಮೊಸರು, ಮಜ್ಜಿಗೆ, ಬೆಣ್ಣೆ, ತುಪ್ಪಗಳನ್ನು ಮತ್ತು ಪ್ರೋಟೀನ್ ಹೆಚ್ಚಿರುವ ಪದಾರ್ಥಗಳಾದ ಬೇಳೆ, ಉದ್ದು, ಮೈದಾ, ಮೊಳಕೆ ಕಾಳುಗಳು ಸಂಪೂರ್ಣವಾಗಿ ನಿಲ್ಲಿಸಿ. ಮಕ್ಕಳ ಮಾಂಸಖಂಡಗಳು ವೃದ್ಧಿ ಅವಸ್ಥೆಯಲ್ಲಿರುವ ಕಾರಣ, ಪ್ರಮಾಣ ಕಡಿಮೆ‌ಮಾಡಿ ಹಾಲು ಮತ್ತು ಅದರ ಪದಾರ್ಥಗಳನ್ನು ಮಾತ್ರ ಕೊಡಿ.
* ಎಣ್ಣೆ ಪದಾರ್ಥಗಳು ಬೇಡವೇ ಬೇಡ

ಫುಪ್ಪಸಕ್ಕೆ ಅತ್ಯಂತ ಒತ್ತಡವನ್ನುಂಟುಮಾಡುವ ಕರಿದ ಮತ್ತು ಒಗ್ಗರಣೆ ಕಲಸಿದ ಆಹಾರಗಳಿಂದ ಸಂಪೂರ್ಣ ದೂರ ಇರಿ.

• ಸಧ್ಯಕ್ಕೆ ತುಪ್ಪ ತಿನ್ನಬೇಡಿ

ಆರೋಗ್ಯಕ್ಕೆ ಒಳ್ಳೆಯದೇ ಆದರೂ ತುಪ್ಪವನ್ನು ಸಧ್ಯಕ್ಕೆ  ಸಂಪೂರ್ಣ ನಿಲ್ಲಿಸಿರಿ.
• ತಂಪು ಪಾನೀಯ, ಐಸ್ ಕ್ರೀಮ್, ಫ್ರಿಜ್ಡ್ ನೀರು... ಬೇಡವೇ ಬೇಡ
• ನೈಸರ್ಗಿಕವಾಗಿ ಬೆಳೆದ ಹಣ್ಣುಗಳನ್ನು ಮಾತ್ರ ಸೇವಿಸಬಹುದು. ಕ್ರಿಮಿನಾಶಕ, ರಾಸಾಯನಿಕ ಗೊಬ್ಬರ, ಗ್ರೋಥ್ ಹಾರ್ಮೋನ್ ಬಳಸಿ ಬೆಳೆದ‌ ಹಣ್ಣುಗಳು ಬೇಡ. ಹಾಗೆಯೇ ಒಣ ಹಣ್ಣುಗಳಾದ ಗೊಡಂಬಿ, ಬದಾಮಿ, ಪಿಸ್ತಾ, ಶೇಂಗಾ, ಅಕ್ರೋಟ್ ಗಳಲ್ಲಿ ಪ್ರೋಟೀನ್ ಹೆಚ್ಚು ಇದೆ ಹಾಗಾಗಿ ಇವುಗಳಿಂದ ದೂರ ಇರಿ.


ವಿಹಾರಕ್ಕೆ ಸಂಬಂಧಿಸಿದಂತೆ-

ಶಾರೀರಿಕವಾಗಿ ಚಲನೆ ಇಲ್ಲದೇ ಇರಬೇಡಿ. ಅಧಿಕ ಪ್ರಮಾಣದ ಊಟ, ಹಗಲು ನಿದ್ದೆ, ಜಡತ್ವದ ಜೀವನ ಮಾಡುವುದು ರೋಗನಿರೋಧಕ ಶಕ್ತಿಗೆ ಕೊಡಲಿಪೆಟ್ಟನ್ನು ಕೊಟ್ಟಂತೆ.



ಎಲ್ಲರನ್ನೂ ಸುಲಭವಾಗಿ ರಕ್ಷಿಸುವ ವಿಧಾನ ಇದು, ಹೆಚ್ಚು ಹೆಚ್ಚು ಜನರೊಂದಿಗೆ ಹಂಚಿಕೊಳ್ಳಿ, ಈ ತುರ್ತುಸ್ಥಿತಿಯನ್ನು ಇದ್ದಲ್ಲೇ ತಡೆದುಬಿಡೋಣ.



ಮೇಲಿನ ಎಲ್ಲವನ್ನೂ ಕನಿಷ್ಠ 21 ದಿನ ಗರಿಷ್ಠ 48 ದಿನಗಳವರೆಗೂ ತಪ್ಪದೇ ಪಾಲಿಸಿ.
ನಂತರ ನಿಮ್ಮ ಅನುಭವಗಳನ್ನು ಹಂಚಿಕೊಳ್ಳಿ

ಮತ್ತೆ ಸಂಪರ್ಕಿಸಿ:



ಮೆಣಸು ಅವೃಷ್ಯ ಅಂದರೆ ನಮ್ಮ ಮೂಳೆಯ ಒಳಗಿನ ಮಜ್ಜೆಯನ್ನು ಬಳಸಿಕೊಂಡು ಮಾರಕ ಕೊರೋನಾ ವೈರಸ್ ನ್ನು ತಡೆಯುತ್ತದೆ, ಇತರ ವೈರಾಣುಗಳಂತೆ ಕೊರೋನಾವನ್ನೂ ಕೊಲ್ಲಬಹುದು. ಈ ಚಿಕಿತ್ಸೆಯ ನಂತರ ಮತ್ತೆ ನಮಗೆಲ್ಲಾ ಪೋಷಣೆ ಬೇಕಾಗುತ್ತದೆ. ಹಾಗಾಗಿ ಈ ವ್ರತ ಮುಗಿದ ನಂತರ ಮತ್ತೆ ಪೋಷಣೆಯ ವಿಧಿ ವಿಧಾನಗಳನ್ನು ತಿಳಿಸುತ್ತೇವೆ.



ಆದರೆ ಸಧ್ಯಕ್ಕೆ ಮಜ್ಜೆಯನ್ನು ಪೋಷಿಸಲು ಹೊರಟರೆ ವೈರಿಗೆ ಊಟ ಕೊಟ್ಟಂತೆ. ಕಳೆ ತೆಗೆಯದೇ ಗೊಬ್ಬರ ಕೊಟ್ಟಂತೆ.



ಆಯುರ್ವೇದ ಸಂಹಿತೆಗಳಲ್ಲಿನ ಉಲ್ಲೇಖಗಳು 👇



ಮರೀಚಂ ಕಟು ತಿಕ್ತ ಉಷ್ಣಂ ಪಿತ್ತಕೃತ್ ಶ್ಲೇಷ್ಮನಾಶನಂ |

ವಾಯುಂ ನಿವಾರಯತ್ಯೇವ ಜಂತುಸಂತಾನ ನಾಶನಮ್ ||

-ಧನ್ವಂತರಿ ನಿಘಂಟು



ನ ಅತ್ಯರ್ಥಂ ಉಷ್ಣಂ ಮರೀಚಂ ಅವೃಷ್ಯಂ, ಲಘು ರೋಚನಮ್|

ಛೇದಿತ್ವಾತ್ ಚ ಶೋಷಣತ್ವಾತ್ ದೀಪನಂ ಕಫವಾತಜಿತ್ ||

-ಚರಕ ಸೂತ್ರ ಸ್ಥಾನ -27



ಸ್ವಾದು ಪಾಕಯಾ ಆರ್ದ್ರಂ‌ಮರೀಚಂ ಗುರು ಶ್ಲೇಷ್ಮ ಪ್ರಸೇಕಿ ಚ |

ಕಟು ಉಷ್ಣಂ‌ ಲಘು ಯತ್ ಶುಷ್ಕಂ‌ ಅವೃಷ್ಯಂ ಕಫ ವಾತಜಿತ್ ||

ನ ಅತ್ಯುಷ್ಣಂ ನ ಅತಿ ಶೀತಂ ಚ ವೀರ್ಯತೋ ಮರೀಚಂ ಸಿತಂ |*

ಗುಣವನ್ ಮರೀಚೇಭ್ಯಃ ಚ ಚಕ್ಷುಷ್ಯಂ ಚ ವಿಶೇಷತಃ ||

-ಸುಶ್ರುತ ಸಂಹಿತಾ ಸೂತ್ರ ಸ್ಥಾನ- 46


ಕ್ರಿಮಿಜಿತ್ ಶ್ವಾಸ, ಶೂಲಘ್ನಂ ಛೇದಿ ಶೋಷನುತ್ ಪಿತ್ತಲಮ್

-ಕೈಯದೇವ ನಿಘಂಟು



ಮರೀಚಂ ವೆಲ್ಲಜಂ‌ಕೃಷ್ಣಂ ಊಷಣಂ ಧರ್ಮ ಪತ್ತನಂ

ಮರೀಚಂ ಕಟುಕಂ ತೀಕ್ಷ್ಣಂ‌ ದೀಪನಂ ಕಫವಾತ ಜಿತ್

ಉಷ್ಣಂ‌ ಪಿತ್ತಕರಂ ರೂಕ್ಷಂ ಶ್ವಾಸ, ಶೂಲ ಕ್ರೀಮೀನ್ ಹರೇತ್ ||

-ಭಾವಪ್ರಕಾಶ ನಿಘಂಟು



ಕಟೂಷ್ಣಂ ಶ್ವೇತ ಮರೀಚಂ ವಿಷಘ್ನಂ‌ ಭೂತ ನಾಶನಂ ಅವೃಷ್ಯಂ, 
ದೃಷ್ಟಿ ರೋಗಘ್ನಂ ಚ ಏನ ರಸಾಯನಮ್ ||

-ರಾಜ ನಿಘಂಟು

**********



ಆಸ್ಪತ್ರೆ ರಹಿತ ಆರೋಗ್ಯಕ್ಕೆ ಆಯುರ್ವೇದ-80
20.03.2020


ರೋಗ ನಿರೋಧಕ ಶಕ್ತಿ   (helps for preventing corona covid 19)

ಈಗ ಇರುವ, ಮುಂದೆ ಬರುವ ಸರ್ವ ರೋಗಗಳನ್ನೂ ತಡೆಯುವಂತಹ ರೋಗನಿರೋಧಕ ಶಕ್ತಿಯನ್ನು ಪಡೆಯುವುದು ಹೇಗೆ?

ರಸಾದೀನಾಂ ಶುಕ್ರಾಂತನಾಂ ಧಾತೂನಾಂ ಯತ್ ಪರಂ ತೇಜಸ್ ತತ್ ಖಲು ಓಜಸ್ ತತ್ತ ಏವ ಬಲಂ ಇತ್ಯುಚ್ಯತೇ ಸ್ವಶಾಸ್ತ್ರ ಸಿದ್ಧಾಂತಾತ್......||

-ಸುಶ್ರುತ ಸಂಹಿತಾ

ತ್ರಿವಿಧ ಬಲಂ ಇತಿ ಸಹಜ, ಕಾಲಜ, ಯುಕ್ತಿಕೃತಂ ಚ |

..................ತದ್ ಆಹಾರ ಚೇಷ್ಟಾ ಯೋಗಜಮ್||
-ಚರಕ ಸಂಹಿತಾ

ಯಾವುದೇ ರೋಗವನ್ನು-  ನಿರೋಧಿಸುವ, ವಿರೋಧಿಸುವ, ಗೆಲ್ಲುವ ಶಕ್ತಿಗೆ ಓಜಸ್ಸು ಅಥವಾ ಬಲ ಎನ್ನುತ್ತೇವೆ. ಇದು ರಸಾದಿ ಸಪ್ತಧಾತುಗಳ ತೇಜಸ್ಸು, ಸಾರಭಾಗ, ಅಥವಾ ಸಾರ ಬಲವೇ ಆಗಿದೆ.


ಸಪ್ತ ಧಾತುಗಳಲ್ಲಿ ಪ್ರಕಟವಾಗುವ ಅತ್ಯಂತ ಶ್ರೇಷ್ಠ ಅಂಶ ಎಂದರೆ ಅದರ ತೇಜಸ್ಸು ಅಥವಾ ಪ್ರಭೆ


ಓಸಸ್ವೀ ಪುರುಷರ ಬಾಹ್ಯ ಅಭ್ಯಂತರ ಆರೋಗ್ಯ ಅತ್ಯಂತ ಸ್ಥಿರವಾಗಿಯೂ ಮತ್ತು ಸರ್ವರೋತಿಯಿಂದಲೂ ಆನಂದದಾಯಕವಾಗಿ ಇರುತ್ತದೆ. 


ಯಾವುದೇ ವೈರಸ್, ಬ್ಯಾಕ್ಟೀರಿಯಾ ಮುಂತಾದ ಸೋಂಕಿನ ರೋಗಗಳು ಈ ತೇಜಸ್ಸನ್ನು ಅತಿಕ್ರಮಿಸಿ ಒಳಕ್ಕೆ ಬರಲು ಅಸಾಧ್ಯ 
ಮತ್ತು 
ಯಾವುದೇ ಮೆಟಬಾಲಿಕ್, ಅಟೋ ಇಮ್ಯೂನ್ ತೊಂದರೆಗಳೂ ಸುಲಭದಲ್ಲಿ ಬರುವುದು ಸಾಧ್ಯವಿಲ್ಲ.
(ಸಧ್ಯಕ್ಕೆ ಭಯಪಡಿಸುತ್ತಿರುವ ಕೊರೋನಾ ವೈರಸ್ ಕೂಡಾ ಓಜಸ್ಸಿನಿಂದ ಹೊಸಕಿಹೋಗುತ್ತದೆ.)

ಇಂತಹ ಶ್ರೇಷ್ಠ ಬಲವನ್ನು ಗಳಿಸಿ ಆರೋಗ್ಯದಿಂದ, ಆತ್ಮವಿಶ್ವಾಸದಿಂದ ಇರುವುದೆ ಹೇಗೆ ನೋಡೋಣ-

ಬಲವು ಯಾವ ರೂಪಗಳಿಂದ ಬರುತ್ತದೆ?


• ಸಹಜ

• ಕಾಲಜ ಮತ್ತು 
• ಯುಕ್ತಿಕೃತ ಎಂದು ಮೂರು ರೀತಿಯಲ್ಲಿ ಬಲವು ಬರುತ್ತದೆ.

ಸಹಜ ಬಲ= ಶರೀರ+ಮನಸ್ಸು ಗಳಲ್ಲಿ ಇರುವ ಸ್ವಭಾವಿಕ ಬಲ.


ಜನ್ಮತಃ ಸದೃಢ ಶರೀರ ಬರಲು, ತಾಯಿಯ ಆಹಾರ ಪದ್ಧತಿ ಅತ್ಯಂತ ಪ್ರಮುಖ ಪಾತ್ರವನ್ನು ವಹಿಸುತ್ತದೆ. ಗರ್ಭಿಣಿಯಾಗುವ ಮೊದಲು, ಗರ್ಭಧಾರಣೆಯ ನಂತರ ಎದೆ ಹಾಲು ಬಿಡಿಸುವ ತನಕ ತಾನು ಸೇವಿಸುವ ನಿಯಮಿತ ಸ್ವಸ್ಥಪೂರ್ಣ ಆಹಾರ ಮಗುವಿನ ಜನ್ಮಪೂರ್ತಿ ಆರೋಗ್ಯದಿಂದ ಇಡುತ್ತದೆ.

ಹಾಗೇ ತಾಯಿಯ ಚಿಂತನೆಯು ಮಗುವಿನ ಮನೋ ದೃಢತೆಗೂ ಕಾರಣವಾಗುತ್ತದೆ.

ತಂದೆಯ ಆತ್ಮವಿಶ್ವಾಸ ಮಗುವಿಗೆ ಅತ್ಯಂತ ಸಹಜವಾಗಿ ಬರುತ್ತದೆ. 


ಇದು ಅತ್ಯಂತ ಶ್ರೇಷ್ಠ ಬಲವಾಗಿದೆ,‌ ಯಾವುದರಿಂದಲೂ, ಯಾವಕಾಲದಲ್ಲೂ ಸುಲಭವಾಗಿ ಹಾನಿಯಾಗದ ಸಹಜ ಬಲ ಇದಾಗಿದೆ. ನವ ದಂಪತಿಗಳು ಸ್ವಲ್ಪ ಇತ್ತ ಗಮನಹರಿಸಿದರೆ ಅತ್ಯಂತ ಶ್ರೇಷ್ಠ ಪ್ರಭಾವೀ ವ್ಯಕ್ತಿತ್ವದ ಕುಲೋತ್ತಮ ಶಿಶುವನ್ನು ಪಡೆಯಬಹುದು.


ಕಾಲಜ ಬಲ:= ಋತು  (ಕಾಲ) ಮತ್ತು ಶರೀರದ ವಯಸ್ಸನ್ನೂ ಆಶ್ರಯಿಸಿ ಬರುವ ಬಲ


ಹೇಮಂತ ಮತ್ತು ಶಿಶಿರ ಋತುಗಳು- ಪೃಥ್ವಿಗೂ, ಇಲ್ಲಿನ ಜೀವಗಳಿಗೂ ಸಹಜವಾಗಿ ಬಲವನ್ನು ಓಜಸ್ಸನ್ನು, ನೀಡುತ್ತವೆ. ಏಕೆಂದರೆ,

ಈ ಕಾಲದಲ್ಲಿ ರಾತ್ರಿ ದೀರ್ಘವಾಗಿರುತ್ತದೆ, ಜೀವಿಗಳಿಗೆ ಹೆಚ್ಚು ವಿಶ್ರಾಂತಿ ದೊರೆಯುತ್ತದೆ. ಮತ್ತು ಬೆವರು ಬರದ ಕಾರಣ, ಜೀರ್ಣಶಕ್ತಿ ಅತ್ಯುತ್ತಮವಾಗಿರುತ್ತದೆ. ಸೇವಿಸಿದ ಸರ್ವರೀತಿಯ ಆಹಾರ ಪಚನವಾಗಿ ಧಾತುಗಳಿಗೆ ಬಲವನ್ನು ಕೊಡುತ್ತದೆ.

ಆದರೆ ಇದು ಅವನ ವಯೋ ಅವಲಂಬಿತ. ಈ ಕಾಲಗಳು ವೃದ್ಧನಿಗೂ, ಯುವಕನಿಗೂ ಒಂದೇ ರೀತಿಯ ಬಲವನ್ನು ಕೊಡಲು ಸಾಧ್ಯವಿಲ್ಲ.


ಯುಕ್ತಿಕೃತ ಬಲ:= ನಾವು ಸೇವಿಸುವ ಆಹಾರ ಮತ್ತು ಮಾಡುವ ಕೆಲಸ(ಶಾರೀರಿಕ ಶ್ರಮ)ಕಾರ್ಯಗಳಿಂದ ತಂದುಕೊಳ್ಳುವ ಬಲ.


ಈ ಶರೀರ ಯಾವುದರಿಂದ ಆಗಿದೆ? ಯಾವ ಆಹಾರ ಯೋಗ್ಯ? ಎಂದು ತಿಳಿದು ಋತುಚರ್ಯ ಪಾಲಿಸುವುದೇ ಇದರ ಲಾಭ ಗಳಿಸಲು ಇರುವ ಉಪಾಯ.

ಮತ್ತು
ಯಾವ ಕೆಲಸಗಳು ಶರೀರ ವರ್ಧನೆಗೆ ಬಲಕೊಡುತ್ತವೆ? ಮತ್ತು ಯಾವ ಕೆಲಸಗಳು ಮನಸ್ಸನ್ನು ಸ್ಥಿರವಾಗಿಡುತ್ತವೆ, ಎಂಬ ಜ್ಞಾನವನ್ನೇ ಬೋಧಿಸುವ ಆಯುರ್ವೇ್ "ಜೀವನ ಕಲೆ" ಯನ್ನು ವಿದೇಯದಿಂದ ಅನುಸರಿಸಲು ಆಚಾರ್ಯರು‌ ಹೇಳುತ್ತಾರೆ.
...........ಆಯುರ್ವೇದ ಉಪದೇಶೇಷು ವಿಧೇಯ ಪರಮಾದರಃ ||
-ಅಷ್ಟಾಂಗ ಹೃದಯ
**************



24.03.2020



ಕೊರೋನಾ ಸೋಂಕು ಸಂಪೂರ್ಣ ಇಂಟೆಗ್ರೇಟೆಡ್ ಔಷಧದಿಂದ ಮಾತ್ರ ಗುಣವಾಗುತ್ತದೆ, ಹಾಗಾಗಿ ಮನೆಯಲ್ಲೇ ಈ ಚಿಕಿತ್ಸೆ ಆರಂಭಿಸಿ.

ಈಗಾಗಲೇ ಕೊರೋನಾ ಬಂದಿದ್ದರೆ ಹೇಗೆ ಗುರುತಿಸಿಕೊಳ್ಳುವುದು?

ನಮ್ಮನ್ನು ನಾವು ಪರೀಕ್ಷಿಸಿಕೊಳ್ಳುವುದು ಪ್ರತಿದಿನದ ಕೆಲಸ-

ಕೊರೋನಾ ಬಂದಿದೆ ಎಂದಾದರೆ, ಗೊತ್ತೇ ಆಗುವುದಿಲ್ಲ, ಅದು 7-14 ದಿನಗಳಲ್ಲಿ ನಿಧಾನವಾಗಿ ಆಕ್ರಮಿಸುತ್ತದೆ. 

ಉಸಿರಾಟಕ್ಕೆ ಕಷ್ಟವಾಗುವಷ್ಟು ಸಂಪೂರ್ ರೋಗ ಲಕ್ಷಣ ವ್ಯಕ್ತವಾಗುವ ಮೊದಲು, ಪ್ರತಿದಿನ ಪರೀಕ್ಷಿಸಿಕೊಳ್ಳುತ್ತಿರಿ.



ನಿರ್ಲಕ್ಷ್ಯ ಬೇಡ:

ನಮಗೆ ಸೋಂಕು ಬಂದಿದೆಯೇ?ಪರೀಕ್ಷೆ ಹೇಗೆ?

ಮೊದಲು ನಿಮ್ಮ ಶ್ವಾಸಕೋಶದ ಸಾಮರ್ಥ್ಯವನ್ನು ಗುರುತಿಸಿಕೊಳ್ಳಿ, ಒಬ್ಬನಿಗೆ ಎಷ್ಟು ಕಾಲ ಉಸಿರನ್ನು ಬಿಗಿಹಿಡಿಯಲು ಸಾಧ್ಯವಾಗುತ್ತದೆ ಎಂದು ಗಮನಿಸಿ. ಇದನ್ನು ಪ್ರತಿದಿನ ಒಂದುಬಾರಿ ಪರೀಕ್ಷಿಸಿ, ಅಷ್ಟೇ ಸೆಕೆಂಡ್ ತಡೆಯಲು ಸಾಧ್ಯವಾದರೆ ನೀವು ಸೇಫ್, ನಿನ್ನೆಗಿಂತ ಇಂದು ಶೇ 20 ಕ್ಕಿಂತ  ಕಡಿಮೆಯಾಗುತ್ತಿದೆ ಎನ್ನಿಸಿದರೆ ತಕ್ಷಣ ವೈದ್ಯರನ್ನು ಭೇಟಿ ಮಾಡಿ ಸಲಹೆ ಪಡೆಯಿರಿ. ಚಿಕಿತ್ಸೆಯಲ್ಲಿ ಎರಡನೇ ಹಂತದ ಅವಯವಗಳು ರೋಗಕ್ಕೆ ತುತ್ತಾಗುವ ಮೊದಲು ಆ್ಯಂಟಿಬಯೋಟಿಕ್ ಬೇಕಾಗುತ್ತದೆ. ತೀರಾ ಹಾಳಾದ ನಂತರ ವೆಂಟೀಲೇಟರ್ ನಲ್ಲಿ ಇಟ್ಟಮೇಲೆ ಆ್ಯಂಟಿಬಯೋಟಿಕ್ ನಿಂದ ಇಮ್ಯೂನಿಟಿ ಹಾಳಾಗುತ್ತದೆ. ಮಲ್ಟಿಪಲ್ ಆರ್ಗನ್ ಗಳು ರೋಗಕ್ಕೆ ತುತ್ತಾಗುತ್ತವೆ. ಆ ಮೊದಲೇ ವೈದ್ಯಕೀಯ ನೆರವನ್ನು ಪಡೆಯಿರಿ.



ರೋಗ ತುಂಬಾ ಉಲ್ಬಣಿಸದಂತೆ ನೋಡಿಕೊಳ್ಳಿ ಆರಂಭದಲ್ಲೇ ಚಿಕಿತ್ಸೆ ಮಾಡಿದರೆ ಅತ್ಯಂತ ಸುಲಭದಲ್ಲಿ ಗುಣಮುಖರಾಗಬಹುದು.


ಪೂಜ್ಯ ಶ್ರೀ ತೇಜಾನಂದ ಸ್ವಾಮಿಜೀ

ಹಂಪಸಾಗರ, ಬಳ್ಳಾರಿ ಜಿಲ್ಲೆ.

ಡಾ.ಮಲ್ಲಿಕಾರ್ಜುನ ಡಂಬಳ

ಅಥರ್ವ ಆಯುರ್ವೇದ ಸಂಶೋಧನಾ ಸಂಸ್ಥೆ

ಶಿವಮೊಗ್ಗ, ದಾವಣಗೆರೆ, ಬೆಂಗಳೂರು.



9686883578

9343855135

ಎಲ್ಲಾ ಸಂಖ್ಯೆಗಳೂ ವಾಟ್ಸಪ್ ಸಂಪರ್ಕಕ್ಕೆ ಮಾತ್ರ

email:

dr.rasvin@gmail.

**********


ಆತ್ಮೀಯರೇ,
ತಮ್ಮಲ್ಲಿ ನಮ್ಮ ವಿನಂತಿ 🙏
ದಯವಿಟ್ಟು ಕೆಳಗಿನ ವಿಧಾನವನ್ನು ಅನುಸರಿಸಿ,  "ಆಸ್ಪತ್ರೆ ರಹಿತ ಜೀವನ " ದ ಟೆಲಿಗ್ರಾಂ ಗುಂಪಿಗೆ ಸೇರಿ ನಿತ್ಯವೂ ಈ ಸಂದೇಶಗಳನ್ನು ಪಡೆಯಬಹುದು.
ಮೊದಲು ಗೂಗಲ್ ಪ್ಲೇ ಸ್ಟೋರ್ ಗೆ ಹೋಗಿ "telegram app" ಅನ್ನು ಇನ್ ಸ್ಟಾಲ್ ಮಾಡಿಕೊಳ್ಳಿ
ನಂತರ ನಿಮ್ಮ ಮೊಬೈಲ್ ಸಂಖ್ಯೆಯನ್ನು ಅಲ್ಲಿನ ಸೂಚನೆಗಳನ್ನು ಅನುಸರಿಸಿ ನೊಂದಾಯಿಸಿಕೊಳ್ಳಿ.

ಆನಂತರ 
https://t.me/hospitalfreelife_kan

ಈ ಲಿಂಕ್ ಬಳಸಿ ಗುಂಪಿಗೆ ಸೇರಿರಿ
ಗುಂಪೊಂದಕ್ಕೆ 2 ಲಕ್ಷ ಸದಸ್ಯರಿಗೆ ಅವಕಾಶವಿರುವ ಟೆಲಿಗ್ರಾಂ ಗುಂಪಿನಲ್ಲಿ ತಮ್ಮ ಸ್ನೇಹಿತರನ್ನು ತಾವೇ ನೇರವಾಗಿ  ಸೇರಿಸಬಹುದು ಮತ್ತು ಹಿಂದಿನ ಸಂಚಿಕೆಗಳನ್ನೂ ನೋಡಬಹುದು.
ವಂದನೆಗಳು
🙏🙏🙏🙏🙏

ಈ ಗುಂಪುಗಳ ಅಡ್ಮಿನ್ ಗಳಾದ
ಡಾ.ಸುಮತಿ.ಬಿ.ಸಿ
ಡಾ.ಚಂದ್ರಕಲಾ
ಡಾ.ಪ್ರಕೃತಿ ಮಂಚಾಲೆ
ಡಾ.ಸಿದ್ದೇಶ್ ಕೆ. ಎಂ
ಡಾ.ನವೀನ್ ಶರ್ಮ
ಡಾ.ಶಿವಕುಮಾರ್ ಟಿ
ಡಾ.ಅಖಿಲ್ ವ್ಯಾಸ್
ಧನ್ಯವಾದಗಳು
🙏🙏🙏

No comments:

Post a Comment