note: administering medication based on following articles is purely at your risk. consult right doctors whom you believe and counter check on internet.
following articles are by ಡಾ.ಮಲ್ಲಿಕಾರ್ಜುನ ಡಂಬಳ
ಅಥರ್ವ ಆಯುರ್ವೇದ ಸಂಶೋಧನಾ ಸಂಸ್ಥೆ M-93438 55135
ಆಸ್ಪತ್ರೆ ರಹಿತ ಆರೋಗ್ಯಕ್ಕೆ ಆಯುರ್ವೇದ
01.05.2020. ಸಂಚಿಕೆ-122
✍️:
ಅಡುಗೆಮನೆಯೇ ಆಸ್ಪತ್ರೆ ; ಆಹಾರವೇ ಔಷಧ
ಅರ್ಧರೋಗ ಹರಿ ಕ್ಷುಧಾ,
ಸರ್ವ ರೋಗ ಹರಿ ನಿದ್ರಾ||
ಅಪಘಾತ, ವಿಷ, ವಿದ್ಯುದಾಘಾತಗಳನ್ನು ಹೊರತುಪಡಿಸಿ,
"ಯಾವುದೇ ರೋಗಗಳನ್ನು 21 ದಿನಗಳಲ್ಲಿ ಶೇಕಡಾ 80 ರಷ್ಟು ನಿವಾರಣೆ ಮಾಡಿಕೊಳ್ಳುವ ಸುಲಭ ಉಪಾಯಗಳು.
(ಒಂದೇ ಷರತ್ತು ಎಂದರೆ ಈ ಅಂಶಗಳಲ್ಲಿ ಒಂದನ್ನೂ ಬಿಡದೇ ಪಾಲಿಸಬೇಕು.)
************
ಅರ್ಧ ರೋಗ ಹರಿ ಕ್ಷುಧಾ(ಹಸಿವು):
• ಇಂದಿನ ಬಹು ರೋಗಗಳ ಮೂಲ ಕಾರಣವೇ ಹಸಿವಿನ ಅಸಮರ್ಪಕ ನಿರ್ವಹಣೆ
• ಹಸಿವಾಗದೇ ಊಟ ಮಾಡಬಾರದು
• ಹಸಿದೂ ಸಹ ಉಪವಾಸ ಇರಬಾರದು
• ಹಸಿವನ್ನು ನಿವಾರಿಸಲು ತೋಚಿದ್ದನ್ನು ತಿನ್ನಬಾರದು.
• ಯಾವುದನ್ನು ತಿನ್ನಬಾರದು- ಟೀ, ಕಾಫಿ, ಬಿಸ್ಕೆಟ್, ಚಾಕೊಲೇಟ್, ಕರಿದ ಪದಾರ್ಥ, ಮೇಲಿನಿಂದ ವಗ್ಗರಣೆ ಕಲಸಿದ ಅನ್ನಗಳು, ಅವಲಕ್ಕಿ ಮುಂತಾದವು, ಉದ್ದು ಹಾಕಿದ ಇಡ್ಲಿ ದೋಸೆ ಪಡ್ಡುಗಳು, ಮೊಳಕೆ ಕಾಳುಗಳು, ಆಲೂ, ಗೆಣಸು, ಗಿಣ್ಣ, ಮಾಂಸಾಹಾರ, ಮೊಟ್ಟೆ, ಕಲ್ಲಂಗಡಿ, ಬಾಳೆಹಣ್ಣು, ಮೊಸರು, ಅತಿಯಾದ ಉಪ್ಪಿನಕಾಯಿ, ಕೊಂಡು ತಂದ ಉಪ್ಪಿನಕಾಯಿ, ಪಾಮ್ ಆಯಿಲ್ ನಿಂದ ತಯಾರಿಸಿದ ಆಹಾರ, ಬಾಯಾರಿಕೆ ಆಗದೇ ನೀರು ಸೇವಿಸುವುದು(ಅತಿಯಾಗಿ ಸೇವಿಸುವುದು), ಯಾವುದೇ ಪ್ಯಾಕ್ಡ್ ಆಹಾರ, ನೀರು ಕಡಿಮೆ ಹಾಕಿ ತಯಾರಿಸಿದ ಉದುರು/ಗಟ್ಟಿ ಆಹಾರ ಪದಾರ್ಥ.
21 ದಿನ ಏನನ್ನು ಸೇವಿಸಬಹುದು?
• ದಿನಕ್ಕೆ ಎರಡು ಬಾರಿ ಮಾತ್ರ ಆಹಾರ ಸೇವಿಸಿ.
• ಹಸಿವಾದ ಮೇಲೆಯೇ ಊಟ ಮಾಡಿ.
• ಹೊಟ್ಟೆ ಬಿರಿಯುವಹಾಗೆ ತಿನ್ನದಿರಿ
• ಮಧ್ಯಾಹ್ನ ಅನ್ನದ ಗಂಜಿ ಸೇವಿಸಿ
• ಜೋಳ, ರಾಗಿ, ಅಕ್ಕಿ ಪದಾರ್ಥಳು, ಅತ್ಯಂತ ಸ್ವಲ್ಪ ಹೆಸರುಬೇಳೆ, ಬೇಯಿಸಿದ ವಿವಿಧ ತರಕಾರಿಗಳು, ಸೈಂಧವ ಉಪ್ಪು, ಶುದ್ಧ ತುಪ್ಪ, ಶುದ್ಧ ಹಾಲು, ಆಗತಾನೇ ಕಡೆದ ಹುಳಿ ಇರದ ಮಜ್ಜಿಗೆ(ಉಪ್ಪು ಹಾಕಿರಬೇಕು).
• ಆಹಾರ ತಯಾರಿಕೆಯಲ್ಲಿ ಯಥೇಚ್ಛವಾಗಿ ನೀರನ್ನು ಬಳಸಿರಬೇಕು.
• ಅರ್ಧ ಶಕ್ತಿ ಖರ್ಚಾಗುವ ವರೆಗೆ(ಹಣೆಯಲ್ಲಿ ಬೆವರು ಬರುವವರೆಗೆ) ಮಾತ್ರ ಕೆಲಸ ಮಾಡಿ
• ಜ್ವರಾದಿ ರೋಗಿಗಳಾದಲ್ಲಿ ಕೆಲಸ ಬೇಡವೇಬೇಡ.
ಸರ್ವರೋಗಹರಿ ನಿದ್ರಾ
• ರಾತ್ರಿ ಆಹಾರ ಅರ್ಧ ಪ್ರಮಾಣದಲ್ಲಿ ಏಳು ಗಂಟೆಗೇ ಸೇವಿಸಿ
• ಎಂಟು ಗಂಟೆಯ ವರೆಗೆ ಹಿತವಾಗಿ ಮಾತನಾಡಿ
• ಒಂಭತ್ತು ಗಂಟೆಗೆ ಮಲಗಿ
• ಬೆಳಿಗ್ಗೆ ಐದು ಗಂಟೆಗೆ ಎಳುವುದು.
• ಹಗಲು ನಿದ್ದೆ ಎಷ್ಟೂ ಬೇಡ.
ಕೇವಲ 21 ದಿನಗಳ ಕಾಲ ನಿಮ್ಮ ಇಷ್ಟದೈವದ ವ್ರತ ಎಂಬಂತೆ ಪಾಲಿಸಿ, ಪರಿಣಾಮವನ್ನು ಮರೆಯದೇ ತಿಳಿಸಿ.
**********
ಆಸ್ಪತ್ರೆ ರಹಿತ ಆರೋಗ್ಯಕ್ಕೆ ಆಯುರ್ವೇದ
02.05.2020. ಸಂಚಿಕೆ-123
✍️:
ತುಪ್ಪ ತಿನ್ನಬಾರದೇಕೆ?
ಅನೇಕ ವೈದ್ಯರು ಹೇಳುತ್ತಾರೆ, ತುಪ್ಪ ತಿನ್ನಬೇಡಿ ಕೊಲೆಸ್ಟರಾಲ್ ಹೆಚ್ಚುತ್ತದೆ.
ವಾಸ್ತವದಲ್ಲಿ ಇದು ಸುಳ್ಳು
ಆ ವೈದ್ಯಕೀಯ ಪುಸ್ತಕವು ಭಾರತದಲ್ಲಿ ತಯಾರಿಸುವ ತುಪ್ಪದ ವಿಧಾನವನ್ನು ತಿಳಿದಿಲ್ಲ, ಎರಡಕ್ಕೂ ಅಪಾರ ವ್ಯತ್ಯಾಸ ಇದೆ.
ಹಾಲಿನ ಕೊಬ್ಬನ್ನು ಬೇರ್ಪಸಿ ಚೀಜ್ ಎಂದು ಕರೆಯುವ ಅದು ನಮ್ಮ ನವನೀತ(ಬೆಣ್ಣೆ)ಕ್ಕೆ ಯಾವರೀತಿಯಿಂದಲೂ ಸಮಾನವಲ್ಲ.
ಚೀಜ್ ಕರಗಿಸಿದರೆ ಬರುವ ತೈಲದಂತ ಪದಾರ್ಥವನ್ನು ನಮ್ಮ ತುಪ್ಪಕ್ಕೆ ಹೋಲಿಸುವುದು ಸರಿಯಲ್ಲ, ಇದೊಂದು ಕೊಬ್ಬುಳ್ಳ ದ್ರವ.
ಇಂದು ಮಾರುಕಟ್ಟೆಯಲ್ಲಿ ದೊರೆಯುವ ತುಪ್ಪದ ಹೆಸರಿನ ಎಲ್ಲವೂ ಹಾಲಿನಿಂದ ಬೇರ್ಪಟ್ಟ ಕೊಬ್ಬಿನ ಅಂಶವೇ ಆಗಿವೆ.
ಇವುಗಳ ಸೇವನೆಯು ಖಂಡಿತಾ ರಕ್ತದ ಕೊಬ್ಬನ್ನು ಹೆಚ್ಚಿಸುತ್ತದೆ.
ಯಾವುದು ನಿಜವಾದ ತುಪ್ಪ?
ಘೃತಂ ಸಂಸ್ಕಾರಸ್ಯ ಅನುವರ್ತನಾತ್
-ಅಷ್ಟಾಂಗ ಹೃದಯ ಸೂತ್ರಸ್ಥಾನ
ಹಾಲನ್ನು ಹದವಾಗಿ ಕಾಯಿಸಿ, ಹೆಪ್ಪುಹಾಕಿ ಮೊಸರು ಮಾಡಿ, ನಂತರ ಕಡೆದು ಮಜ್ಜಿಗೆ ಮತ್ತು ಬೆಣ್ಣೆ ಪಡೆದು, ಉತ್ತಮ ಸಂಸ್ಕಾರದಿಂದ ತೆಗೆವ ಸ್ನೇಹ ಘೃತ, ಘೀ, ತುಪ್ಪ ಎನಿಸಿಕೊಳ್ಳುತ್ತದೆ.
ಆದರೆ, ಈ ಪದ್ಧತಿಯೇ ಇಲ್ಲದ ಪಾಶ್ಚಾತ್ಯ ರಾಷ್ಟ್ರಗಳ ಭಾಷೆಯಲ್ಲಿ ತುಪ್ಪಕ್ಕೆ ಸಮಾನಾರ್ಥಕ ಪದವೇ ಇಲ್ಲ, ಸಂಸ್ಕೃತ ಭಾಷೆಯ ಎರವಲು ಪಡೆದು Ghee ಎನ್ನುತ್ತಾರೆ.
ನಿಜವಾದ ತುಪ್ಪ ಸೇವನೆಯ ಲಾಭ-
• ಇದು ಮೆದುಳನ್ನೂ, ನರ ಮಂಡಲವನ್ನೂ ಚುರುಕುಗೊಳಿಸುತ್ತದೆ.
• ಮೂಳೆಗಳ ಸಾಂದ್ರತೆಯನ್ನು ವರ್ಧಿಸುತ್ತದೆ
• ಸಮರ್ಥ ರಕ್ತದ ಕಣಗಳನ್ನು ಉತ್ಪತ್ತಿ ಮಾಡುತ್ತದೆ
• ಹೈಪೋಥೈರಾಯ್ಡಿಸಮ್ ಅನ್ನು ತಡೆದು ನಿವಾರಿಸುತ್ತದೆ.
• ಚರ್ಮಕ್ಕೆ ಮತ್ತು ಕೂದಲುಗಳ ಕಾಂತಿಯನ್ನು ವರ್ಧಿಸುತ್ತದೆ
• ರೋಗನಿರೋಧಕ ಶಕ್ತಿ ಹೆಚ್ಚುತ್ತದೆ.
• ಹಾಗಾಗಿ ಮೊದಲು ಮನೆಯಲ್ಲೇ ತುಪ್ಪ ಮಾಡೋಣ.
• ನಿತ್ಯವೂ ಬಳಸಿ ಸದೃಢರಾಗೋಣ.
************
ಆಸ್ಪತ್ರೆ ರಹಿತ ಆರೋಗ್ಯಕ್ಕೆ ಆಯುರ್ವೇದ
22.05.2020. ಸಂಚಿಕೆ-143
✍️:
ಮಳೆಗಾಲದ ಆಹಾರಗಳು
ಏನು ತಿಂದರೂ ಪಿತ್ತ ಹೆಚ್ಚಾಗುವ ಕಾಲ ಇದು, ಇದಕ್ಕೆ ಕಾರಣ ದೂಷಿತ ಜಲ.
ಹೊಸ ಮಳೆ ಆರಂಭದಲ್ಲಿ, ಅದುವರೆಗೆ ನೆಲದಲ್ಲಿ ಸತ್ತು ಬಿದ್ದ ಪ್ರಾಣಿಗಳು, ಹೊಲಸುಗಳು ಎಲ್ಲವೂ ಮಳೆಯ ನೀರು ಕೊಚ್ಚಿಕೊಂಡು ತರುತ್ತದೆ. ನದಿಗಳ ನೀರು ಪೂರ್ಣ ಶ್ಲೇಷ್ಮ-ಪಿತ್ತಕಾರಕ. ಬೋರ್ ವೆಲ್ ನೀರುಗಳೂ ಸಹ ಉಷ್ಣಪಿತ್ತಕಾರಕ. ಹಾಗಾಗಿ ಪಿತ್ತ ದೋಷ ಸಂಚಯವಾಗದಂತೆ ಮಾಡಲು ಸಾಧ್ಯವಿಲ್ಲ.
ಆದರೆ ಪಿತ್ತಶಮನ ಮಾಡುವ ಆಹಾರ ಪದ್ಧತಿಗಳನ್ನು ಪಾಲಿಸಿದರೆ ನಿಯಂತ್ರಣದಲ್ಲಿಟ್ಟು ಮುಂದೆ ಚಳಿಗಾಲದಲ್ಲಿ ಪಿತ್ತಪ್ರಕೋಪಗೊಳ್ಳುವ ರೋಗಗಳಿಂದ ದೂರ ಇರಬಹುದು
ಪಿತ್ತ ಶಾಮಕ ಆಹಾರಗಳು:
ಅಕ್ಕಿಯ ಅನ್ನ
ಜೋಳದ ರೊಟ್ಟಿ, ಮುದ್ದೆ
ರಾಗಿಯ ರೊಟ್ಟಿ, ಮುದ್ದೆ
ನವಣೆ( ಅಂದರೆ ಅಲ್ಪಪ್ರಮಾಣದಲ್ಲಿ ಬಳಸಬಹುದಾದ ತೃಣಧಾನ್ಯಗಳು)
ಬೂದು ಕುಂಬಳಕಾಯಿ
ಹೆಸರು
ಪಡುವಲ(ಕಲ್ಲಪಟ್ಟಲಕಾಯಿ)
ಹಾಗಲಕಾಯಿ
ಹೀರೆಕಾಯಿ
ಚೌಳಿಕಾಯಿ
ತುಪ್ಪದಹೀರೆಕಾಯಿ
ಹಾಲು
ತುಪ್ಪ
ಸ್ವಲ್ಪವೂ ಹುಳಿಬಾರದ ಮಜ್ಜಿಗೆ
ಸೈಂಧವ ಉಪ್ಪು
ಅರಿಶಿಣ
ಮರದ ಅರಿಶಿಣ
ಬಜೆ
ಕಾಚು
ಅಕ್ರೋಟು
ಖರ್ಜೂರ
ಹಲಸು
ಜೇಷ್ಟಮಧು
ಕಬ್ಬು
ಜೇನುತುಪ್ಪ
ಒಣದ್ರಾಕ್ಷಿ
ಸಿಹಿ ದಾಳಿಂಬೆ
ಶ್ರೀಗಂಧ
ಬೇಲದಹಣ್ಣು(ಕಪಿತ್ಥ)
ಬೆಟ್ಟದ ನೆಲ್ಲಿಕಾಯಿ
ಪಿತ್ತ ಶಾಮಕವಿಹಾರಗಳು:
ಇವುಗಳನ್ನು ನಾಳೆ ನೋಡೋಣ
***********
ಆಸ್ಪತ್ರೆ ರಹಿತ ಆರೋಗ್ಯಕ್ಕೆ ಆಯುರ್ವೇದ
23.05.2020. ಸಂಚಿಕೆ-144
✍️:
ಮಳೆಗಾಲದ ಆಚರಣೆಗಳು
ಮಳೆಗಾಲ ಪಿತ್ತವನ್ನು ಹೆಚ್ಚಿಸುತ್ತದೆ ಎಂದು ನೋಡಿದ್ದೇವೆ. ಆದರೆ ಈ ಪಿತ್ತವು ಕೇವಲ ಉಷ್ಣವಲ್ಲ. ಉಷ್ಣವೂ ದ್ರವರೂಪಿಯಾಗಿಯೂ ಇರುತ್ತದೆ. ಆದ್ದರಿಂದ ಕೇಲವ ತಂಪು ಮಾಡುವ ಆಹಾರವಿಹಾರಗಳು ತೊಂದರೆಯನ್ನು ತರುತ್ತವೆ.
ಮಳೆಗಾಲದ ಆಚಾರಗಳು:
• ಯಾವಕಾರಣಕ್ಕೂ ತಪ್ಪದೇ ಸಮಯಕ್ಕೆ ಸರಿಯಾಗಿ ಊಟ ಮಾಡುವುದು.
• ಜೀರ್ಣ ಶಕ್ತಿಯ ಮುಕ್ಕಾಲು ಭಾಗ ಮಾತ್ರ ಆಹಾರ ಸೇವಿಸಿ. ಹೊಟ್ಟೆ ಭಾರ ಎನಿಸಿದರೆ, ಊಟದ ಸಮಯದಲ್ಲಿ ಅಕ್ಕಿಯನ್ನು ಹುರಿದ ಗಂಜಿ ಸೇವಿಸಿ.
• ಈ ಕಾಲದಲ್ಲಿ ಕೆಲ ಸಮಯ ನಾವು ಬೆಚ್ಚಗೂ ಇರಬೇಕು, ಕೆಲ ಸಮಯ ತಣ್ಣಗೂ ಇರಬೇಕು, ಹಾಗಾಗಿ ಸಮಯ ನೋಡಿ ಬಟ್ಟೆಗಳನ್ನು ತೊಡುವುದನ್ನು ಮರೆಯಬೇಡಿ. ಇದು ಪಿತ್ತಕ್ಕೆ ಶ್ರೇಷ್ಠ ಉಪಚಾರ.
• ಕಾಲನ್ನು ಬೆಚ್ಚಗೆ ಇಡಿ. ಮನಸ್ಸನ್ನು ಶಾಂತವಾಗಿಡಿ.
• ಕೋಪ, ಸಿಟ್ಟು, ಅಸೂಹೆ, ಆತಂಕಗಳಿಂದ ದೂರ ಇರುವುದು.
• ಸಾಧ್ಯವಾದಷ್ಟು, ದಾನ ಸತ್ಕರ್ಮಗಳನ್ನು ಮಾಡಿ, ಇದರಿಂದ ಮನಸ್ಸು ಪ್ರಸನ್ನವಾಗಿ ಶಾಂತಿ ಲಭಿಸಿ ಒಮ್ಮೆಗೇ ಪಿತ್ತ ನಿಗ್ರಹವಾಗುತ್ತದೆ.
• ನೆಮ್ಮದಿಯ ನಿದ್ದೆಯು ಪಿತ್ತಕ್ಕೆ ಅತ್ಯಂತ ಪರಿಣಾಮಕಾರೀ ಚಿಕಿತ್ಸೆಯಾಗಿದೆ.
• ಸುರಿವ ಮಳೆಯನ್ನು ನೋಡುತ್ತಾ ಮಕ್ಕಳೊಂದಿಗೆ ಸಂಭ್ರಮಿಸಿ, ಗುಡುಗು, ಸಿಡಿಲು ಮಳೆಗಳ ಮನೋಹರ ಸತ್ಯ ಕಥೆಗಳನ್ನು ಹೇಳಿ.
• ಮಳೆಗಾಲದಲ್ಲಿ ಸೋಂಕಿನ ರೋಗಗಳು ಜಾಸ್ತಿ ಎಂದು ಪದೇ ಪದೇ ಹೆದರಿಸುವ ಟಿ.ವ್ಹಿ. ಜಾಹಿರಾತುಗಳು ಪೂರ್ಣ ಸತ್ಯವಲ್ಲ.
• ಈ ಸೋಂಕುಗಳನ್ನು ಎದುರಿಸಿ, ಕೆಲ ಕಾಲ ಜ್ವರ ಬರಬಹುದು, ಆತಂಕ ಬೇಡ, ಉತ್ತಮ ರೋಗನಿರೋಧಕ ಶಕ್ತಿ ಬರುತ್ತದೆ.
• ಒಂದೆರೆಡು ತುಳಸಿ ದಳಗಳನ್ನು ನಿತ್ಯ ಸೇವಿಸಿ ಅಥವಾ ಅಮೃತ ಬಳ್ಳಿ ಸಿಕ್ಕರೆ ಅದರ ಕಷಾಯ ಸೇವಿಸಿ ಅಥವಾ ನೆಲನೆಲ್ಲಿ ಅಥವಾ ಕಿರುನೆಲ್ಲಿ ಸಿಕ್ಕರೆ ರಸ ತೆಗೆದು ಸೇವಿಸಿ. ಎಲ್ಲವೂ ಒಮ್ಮೆಗೇ ಬೇಡ ಯಾವುದಾದರೂ ಒಂದನ್ನು ಬಳಸಿ.
**********
ಆಸ್ಪತ್ರೆ ರಹಿತ ಆರೋಗ್ಯಕ್ಕೆ ಆಯುರ್ವೇದ
03.05.2020. ಸಂಚಿಕೆ-124
✍️:
ಅಮೃತವೂ ಮತ್ತು ವಿಷವೂ ಆಗಬಲ್ಲ ಮಜ್ಜಿಗೆ
.........ತಕ್ರಂ ಶಕ್ರಸ್ಯ ದುರ್ಲಭಮ್|
(ಶಕ್ರ=ದೇವೇಂದ್ರ)
ದೇವೇಂದ್ರನಿಗೂ ದುರ್ಲಭವಾದ "ಮಜ್ಜಿಗೆಯನ್ನು ಭೂಲೋಕದ ಅಮೃತ!" ಎನ್ನುತ್ತಾರೆ ಏಕೆ?
ನಮ್ಮ ಶರೀರ ಆರೋಗ್ಯದಿಂದ ಇರಲು- ಆಹಾರ ಪಚನವಾಗಬೇಕು ಮತ್ತು ಹೀರಿಕೊಳ್ಳಬೇಕು. ಎರಡರಲ್ಲಿ ಒಂದರ ಕೊರತೆಯಾದರೂ ಕಾಲಕ್ರಮದಲ್ಲಿ ನೂರಾರು ರೋಗಗಳು ಬರುತ್ತವೆ.
ಮಜ್ಜಿಗೆಯು ಈ ಎರಡೂ ಕೆಲಸಗಳನ್ನು ಸಮರ್ಪಕವಾಗಿ ಮಾಡುತ್ತದೆ, ಆದ್ದರಿಂದ ಇದು ಅಮೃತ.
ತಾಜಾ ಮೊಸರಿನಿಂದ ಆಗತಾನೇ ತಯಾರಾದ ಹುಳಿ ಇಲ್ಲದ ಮಜ್ಜೆಗೆಗೆ ಸೈಂಧವ ಲವಣ(ಶ್ರೇಷ್ಠ ಉಪ್ಪು) ಸೇರಿಸಿ ಸೇವಿಸಿದರೆ ಮಾತ್ರ ಅದು ಅಮೃತ.
ಆದರೆ ಉಪ್ಪನ್ನು ಸೇರಿಸದೇ ಕುಡಿದ ಮಜ್ಜಿಗೆಯು ಆಹಾರ ಪಚನವಾಗುವ ಮೆದಲೇ ಶೀಘ್ರವಾಗಿ ಹೀರುವ ಪ್ರಯತ್ನದಲ್ಲಿ ಪೋರ್ಟಲ್ ಸಿಸ್ಟಂ ಗೆ ಒತ್ತಡ ಹಾಕಿ ಮೂಲವ್ಯಾಧಿಯನ್ನು ತರುತ್ತದೆ!!
ಉಪ್ಪನ್ನು ಸೇರಿಸಿದರೆ ಮಾತ್ರ ಮೂಲವ್ಯಾಧಿಯನ್ನು ಬುಡ ಸಮೇತ ನಿವಾರಿಸುತ್ತದೆ!!
ಹುಳಿ ಮಜ್ಜಿಗೆ ರಕ್ತದಲ್ಲಿ ಪಿತ್ತವನ್ನು ವರ್ಧಿಸಿ ರಕ್ತಪಿತ್ತವನ್ನುಂಟುಮಾಡುತ್ತದೆ. ಒಮ್ಮೆ ರಕ್ತಪಿತ್ತ ಬಂತೆಂದರೆ ಈ ಶರೀರ ನೂರಾರು ರೋಗಗಳಿಗೆ ಆಶ್ರಯತಾಣವಾಗುತ್ತದೆ.
ತಯಾರಾಗಿ 48 ನಿಮಿಷಗಳ ಒಳಗೇ ಸೈಂದವ ಉಪ್ಪು ಸೇರಿಸಿ ಸೇವಿಸಿದ ಮಜ್ಜೆಗೆಯು ರಕ್ತಪಿತ್ತ ನಾಶಕ, ಅದರ ನಂತರದ್ದು ರಕ್ತಪಿತ್ತವನ್ನು ಉಂಟುಮಾಡುತ್ತದೆ!!
ನಮ್ಮ ದುರದೃಷ್ಟ ಎಂದರೆ, ಫ್ರಿಜ್ ನಲ್ಲಿಟ್ಟು, ಎರೆಡು ಮೂರು ದಿನ ಹಿಂದೆ ತಯಾರಾದ ಪ್ಯಾಕ್ಡ್ ಮಜ್ಜಿಗೆಯನ್ನು ತಂಪಾಗಲೆಂದು ಕುಡಿದು ಶರೀರವನ್ನು ಸುಟ್ಟುಕೊಳ್ಳುತ್ತಿದ್ದೇವೆ!!
*************
ಆಸ್ಪತ್ರೆ ರಹಿತ ಆರೋಗ್ಯಕ್ಕೆ ಆಯುರ್ವೇದ
04.05.2020. ಸಂಚಿಕೆ-125
✍️:
ಶ್ರೇಷ್ಠ ಅನ್ನ ಯಾವುದು?
ಧಾನ್ಯಂ ಲಘು ಸಂವತ್ಸರೋಷಿತಮ್ ||
ಧೌತಸ್ತು ವಿಮಲಃ.....ಸುಪ್ರಸ್ರುತ...ಓದನೋ ಲಘುಃ |
ನವ ಧಾನ್ಯಂ ಅಭಿಷ್ಯಂದಿ|
ಅಧೌತೋ, ಅಪ್ರಸ್ರುತೋ, ಅಸ್ವಿನ್ನಃ, ಶೀತಶ್ಚಾ....ಓದನೋ ಗುರುಃ ||
-ಸುಶ್ರುತ ಸಂಹಿತಾ
ಶ್ರೇಷ್ಠ ಅನ್ನ:
• ಒಂದು ವರ್ಷ ಹಳೆಯದಾದ ಅಕ್ಕಿಯಿಂದ ತಯಾರಿಸಿದ ಅನ್ನ
• ಅನ್ನ ಮಾಡುವ ಮೊದಲು ಶುದ್ಧ ನೀರಿನಿಂದ ಚನ್ನಾಗಿ ತೊಳೆಯ ಬೇಕು.
• ತೊಳೆದ ನೀರನ್ನು ಸೋಸಿ ಚಲ್ಲಬೇಕು.
• ಬಹಳ ನೀರಿನಿಂದ ಚನ್ನಾಗಿ ಬೆಂದಿರಬೇಕು.
• ಅನ್ನ ಬೆಂದ ನಂತರ ಉಳಿದ ಗಂಜಿಯನ್ನು ಬಸಿದು ತೆಗೆಯಬೇಕು.
ಶ್ರೇಷ್ಠ ಅನ್ನದ ಗುಣ:
• ಇದು ಮನೋಜ್ಞ ಭಾವ ಕೊಡುತ್ತದೆ, ನೋಡಿದರೆ ಊಟ ಮಾಡಲು ಇಚ್ಛೆಯಾಗುತ್ತದೆ.
• ವಿಶೇಷ ಪರಿಮಳವನ್ನು ಹೊರಸೂಸುತ್ತದೆ
• ಪಚನಕ್ಕೆ ಹಗುರವಾಗಿರುತ್ತದೆ
• ಶೀಘ್ರವಾಗಿ ಬಲವನ್ನು ಕೊಡುತ್ತದೆ
ನಿಂದ್ಯವಾದ / ಅಯೋಗ್ಯ ಅನ್ನ:
• ತೊಳೆಯದೇ ಮಾಡಿದ
• ಗಟ್ಟಿಯಾಗಿ ಬೇಯಿಸಿದ(ಬೇಗ ಕೆಡಬಾರದೆಂದು ಹೋಟೆಲ್ ಮತ್ತು ಸಮಾರಂಭಗಳಲ್ಲಿ ಗಟ್ಟಿಯಾಗಿ ತಯರಿಸುತ್ತಾರೆ, ಅದರಿಂದಲೇ ಹೊಟ್ಟೆ ಭಾರವಾಗುವುದು)
• ಬಸಿಯದೇ ತಯಾರಿಸಿದ ಅನ್ನ(ಕುಕ್ಕರ್ ಅನ್ನ, ನೀರನ್ನು ಇಂಗಿಸಿದ ಅನ್ನ)
• ನೀರನ್ನು ಇಂಗಿಸಿದರೆ ಅದರ ಪೋಷಕಾಂಶಗಳು ನಷ್ಟವಾಗುವುದಿಲ್ಲ ಎಂಬ ತಪ್ಪು ಗ್ರಹಿಕೆ ಇದೆ, ಇದು ಸತ್ಯಕ್ಕೆ ದೂರ.
• ಒಣಗಿದ ಅನ್ನ(ತಯಾರಾಗಿ 90 ನಿಮಿಷ ಕಳೆದ ಅನ್ನ)
• ಪಚನಕ್ಕೆ ಭಾರವಾಗುತ್ತದೆ.
• ಪೋಷಕ ಭಾವಗಳನ್ನು ಧಾತುಗಳಿಗೆ ಕೊಡುವ ಬದಲು, ಹೊಟ್ಟೆಯಲ್ಲಿ ಗ್ಯಾಸ್ ಉಂಟುಮಾಡಿ, ಅಲ್ಲಿ ಉಂಟಾಗುವ ಉರಿಗೆ ಆಹಾರವಾಗುತ್ತಿರುತ್ತದೆ, ಮತ್ತಷ್ಟು ಉರಿಯುತ್ತದೆ. ಇದು ಸೋಡಾ ಹಾಕಿರುವ ಅನ್ನ ಎಂದು ಬಹಳ ನಂಬುತ್ತಾರೆ. ವಾಸ್ತವದಲ್ಲಿ ಇದು ಗಟ್ಟಿಯಾಗಿ, ಅರೆಬೆಂದ ಅನ್ನ.
**********
ಆಸ್ಪತ್ರೆ ರಹಿತ ಆರೋಗ್ಯಕ್ಕೆ ಆಯುರ್ವೇದ
06.05.2020. ಸಂಚಿಕೆ-126
✍️:
ನೇರ ಬೆಂಕಿಯಲ್ಲಿ ಬೇಯಿಸುವ ಗೋಧಿ ರೋಟಿ
ನಿತ್ಯವೂ ಶಾರೀರಿಕ ಶ್ರಮದ ಕೆಲಸ ಮಾಡಿ ಚನ್ನಾಗಿ ಹಸಿಯುವ ವ್ಯಕ್ತಿಗೆ ಮಾತ್ರ ಗೋಧಿ ರೋಟಿ ಪ್ರಶಸ್ತವಾದದ್ದು.
ಶುಷ್ಕ ಗೋಧೂಮ......ಅಂಗಾರೇ ಅಪಿ ತಾಂ ಪಚೇತ್...ರೋಟಿಕಾ... ಬಲಕೃತ್....ದೀಪ್ತಾಗ್ನಿನಾಂ ಪ್ರಪೂಜಿತಾ ||
-ಭಾವಪ್ರಕಾಶ ನಿಘಂಟು
ಗೋಧಿಹಿಟ್ಟಿನಿಂದ ದಪ್ಪ ರೊಟ್ಟಿಯನ್ನು ಮಾಡಿ, ಹಂಚಿನ ಮೇಲೆ ಕಾಯಿಸಿ ನಂತರ ನೇರ ಕೆಂಪಾದ ಕೆಂಡದಲ್ಲಿ ಸುಡುವ ರೊಟ್ಟಿಗೆ "ರೋಟಿಕಾ" ಎಂದು ಹೆಸರು.
"ರುಚಿಕರ" ವಾದ ಈ ರೋಟಿಯು "ಬಲಕರ", "ಪುಷ್ಟಿಕರ" "ಧಾತುವರ್ಧಕ" "ವೀರ್ಯವರ್ಧಕ" "ವಾತನಾಶಕ"
ಆದರೆ ಪಚನಕ್ಕೆ ಅತ್ಯಂತ "ಗುರು" ಆದ್ದರಿಂದ ರೋಟಿಯು ಸ್ವತಃ ಈ ಎಲ್ಲಾ ಗುಣಗಳನ್ನು ನಮಗೆ ತಂದುಕೊಡುವುದಿಲ್ಲ.
ಆದ್ದರಿಂದ,
ಸ್ವಲ್ಪವೇ ಶ್ರಮಪಡುವವರು, ಅಜೀರ್ಣ, ಆಮ್ಲಪಿತ್ತ ಇರುವವರು, ರೋಟಿಕಾ ಸೇವಿಸಿದರೆ, ಅದರ ಅಧಿಕಾಂಶ ಕರಗದೇ, ಶಕ್ತಿ ಬಿಡುಗಡೆ ಮಾಡದೇ ಜೀವಕೋಶಗಳಲ್ಲಿ ಸಂಚಯವಾಗಯತ್ತದೆ. ಕಾಲಾಂತರದಲ್ಲಿ ಇದರ ಪ್ರಮಾಣ ಹೆಚ್ಚುತ್ತಾ ವಿಷರೂಪ ತಾಳುತ್ತದೆ, ಈ ವಿಷವನ್ನು ನಿರ್ವಹಿಸಲು ಯಕೃತ್, ಮಾಂಸಖಂಡಗಳು, ಪ್ಯಾಂಕ್ರಿಯಾಸ್, ಕಿಡ್ನಿಗಳು ಹೋರಾಡಿ ರೋಗಕ್ಕೆ ತುತ್ತಾಗುತ್ತವೆ.
ಪ್ರಿಯ ಆರೋಗ್ಯಾಭಿಲಾಷಿಗಳೇ,
ಇಂತಹ ಇನ್ನೂ ಅನೇಕ "ಗುರು" ಆಹಾರಗಳಿವೆ. ಅವನ್ನು ತಿನ್ನಲು ನಿಮ್ಮ ನಾಲಿಗೆ ಇಷ್ಟಪಟ್ಟರೆ, ದಯಮಾಡಿ ಶಾರೀರಿಕ ಶ್ರಮದ ಕೆಲಸಗಳನ್ನು ನಿತ್ಯವೂ ಮಾಡಿ ನಂತರವಷ್ಟೆ ಸೇವಸಿ, ರೋಟಿಯ ಎಲ್ಲಾ ಲಾಭಗಳನ್ನೂ ಗಳಿಸಿ.
ಶ್ರಮರಹಿತವಾಗಿ ಸೇವಿಸಿದರೆ, ಅನ್ಯಾಯವಾಗಿ ಅಕಾಲದಲ್ಲಿ ಆಸ್ಪತ್ರೆ, ರೋಗ, ಹಾಸಿಗೆ ಎಂದು ನಮ್ಮ ಜೀವನದ ಮರಳಿ ಗಳಿಸಲಾಗದ ಅತ್ಯಮೂಲ್ಯ ಆನಂದವನ್ನು ಶಾಶ್ವತವಾಗಿ ಕಳೆದುಕೊಳ್ಳುತ್ತೇವೆ.
***********
ಆಸ್ಪತ್ರೆ ರಹಿತ ಆರೋಗ್ಯಕ್ಕೆ ಆಯುರ್ವೇದ
06.05.2020. ಸಂಚಿಕೆ-127
✍️:
• ಹೊಟ್ಟೆಯುಬ್ಬರ • ಎದೆಯ ಎಡಭಾಗದ ಒತ್ತಡ • ತಡಯಲಾರದ ತೀವ್ರ ಹಸಿವು ಅಥವಾ • ಹಸಿವಾಗದಿರುವಿಕೆಗಳಿಗೆ ಸರಳ ಪರಿಹಾರ
ಈ ಎಲ್ಲ ಲಕ್ಷಣಗಳಿಗೆ ಕಾರಣ ದೊಡ್ಡಕರುಳಿನಲ್ಲಿ ಉತ್ಪತ್ತಿಯಾಗುವ ವಿಕೃತ ವಾಯು.
ಲಾಜ ಮಂಡೋ.....ಪಾಚನ ದೀಪನ |
ವಾತಾನುಲೋಮನ ಹೃದ್ಯಃ ಪಿಪ್ಪಲಿ ನಾಗರಾಯುತಃ ||
-ಸುಶ್ರುತ ಸಂಹಿತಾ
ಭತ್ತ ಅಥವಾ ಜೋಳವನ್ನು ಹುರಿದು "ಅರಳುಗಳನ್ನು"( Like pop corn) ತಯಾರಿಸಿ, ಅವುಗಳನ್ನು ನೀರಿನಲ್ಲಿ ಬೇಯಿಸಿ ಗಂಜಿ ತಯಾರಿಸಿ, ರುಚಿಗೆ ತಕ್ಕಷ್ಟು ಸೈಂಧವ ಉಪ್ಪು(ಸಿಗದಿದ್ದರೆ ಅಡುಗೆ ಉಪ್ಪು), ಅರ್ಧ ಗ್ರಾಂ ಸಣ್ಣ ಹಿಪ್ಪಲಿ ಪುಡಿ ಮತ್ತು ಅರ್ಧ ಗ್ರಾಂ ಶುಂಠಿ ಪುಡಿಯನ್ನು ಹಾಕಿ ಕದಡಿ ಕುಡಿಯಬೇಕು.
ದಿನದಲ್ಲಿ ಎರೆಡುಬಾರಿ ಈ ಗಂಜಿಯನ್ನೂ ಮತ್ತು ಒಂದು ಬಾರಿ ಬಸಿದು ತಯಾರಿಸಿದ ಅನ್ನ, ತರಕಾರಿ ಸಂಬಾರು ಸೇವಿಸಿ.
ಈ ಪದ್ಧತಿಯ 3 ರಿಂದ 5 ದಿನ ಪಾಲನೆಯಿಂದ ನಿವೃತ್ತಿಯಾಗುವ ಲಕ್ಷಣಗಳು:
ವಾತವನ್ನು ಹೊರಹಾಕುತ್ತದೆ ಮತ್ತು ಹೊಸದಾಗಿ ಉತ್ಪತ್ತಿಯಾಗದಂತೆ ತಡೆದು ಹೊಟ್ಟೆಯುಬ್ಬರವನ್ನು ನಿವಾರಿಸುತ್ತದೆ.
ಸಾಮಾನ್ಯವಾಗಿ descending colon ನಲ್ಲಿರುವ ಗ್ಯಾಸ್ ನಿಂದ ಎದೆಯ ಎಡಭಾಗದ ಒತ್ತುತ್ತದೆ. ಗ್ಯಾಸ್ ಹೊರಹೋಗುವ ಕಾರಣ ಇದು ನಿವೃತ್ತಿಯಾಗುತ್ತದೆ.
ಅಗ್ನಿ ದೀಪನವಾಗುವ ಕಾರಣ ಹಸಿವಾಗುತ್ತದೆ, ಶೇಷ ಆಹಾರ ಪಾಚನವಾಗುವ ಕಾರಣ ತೀವ್ರ ಹಸಿವು ಅಥವಾ ಸಂಕಟ ಆಗುವುದೇ ಇಲ್ಲ.
***********
ಆಸ್ಪತ್ರೆ ರಹಿತ ಆರೋಗ್ಯಕ್ಕೆ ಆಯುರ್ವೇದ
07.05.2020. ಸಂಚಿಕೆ-128
✍️:
ಅವಲಕ್ಕಿಯನ್ನು ಎಷ್ಟು ತಿನ್ನಬಹುದು?
ಶ್ರೀ ಕೃಷ್ಣನಿಗೆ ಪ್ರಿಯವಾದ ಅವಲಕ್ಕಿಯನ್ನು "ಪೃಥುಕಾ" ಎನ್ನುತ್ತೇವೆ.
ಅನೇಕರು ಇದನ್ನು ಯಥೇಚ್ಛವಾಗಿ ಮತ್ತು ಕೆಲವುಕಡೆ ಉಪವಾಸ ಮುಗಿಸಿ ತಿನ್ನುವ ರೂಢಿ ಇಟ್ಟುಕೊಂಡಿದ್ದಾರೆ!! ಇದು ಸರಿಯೆ?
ಪೃಥುಕಾ ಗುರವೋ ಭೃಷ್ಟಾನ್ ಭಕ್ಷಯೇತ್ ಅಲ್ಪ ಶಸ್ತು ತಾನ್ ||
-ಚರಕ ಸಂಹಿತಾ
ಅವಲಕ್ಕಿಯು ಪಚನಕ್ಕೆ ಅತ್ಯಂತ ಕಷ್ಟಕರವಾದದ್ದು, ನಿಧಾನವಾಗಿ ಜೀರ್ಣವಾಗುತ್ತದೆ, ಜೀರ್ಣವಾಗುವಾಗ ಪಿತ್ತದ ಅವಸ್ಥೆಯಲ್ಲಿ ಬಹಳಕಾಲ ಇರುತ್ತದೆ. ವಾತವನ್ನು ಆವರಿಸುತ್ತದೆ.
ಆದ್ದರಿಂದ, ಅವಲಕ್ಕಿಯನ್ನು ಸೇವಿಸಿದಾಗ ಹೊಟ್ಟೆ ಭಾರ, ಅಜೀರ್ಣ, ಬೇಗ ಹಸಿವಾಗದಂತೆ ಮಾಡುತ್ತದೆ.
ಆದರೆ ಅವಲಕ್ಕಿ ಕೆಟ್ಟದ್ದಲ್ಲ, ಅನೇಕ ಪೋಷಕ ಗುಣಗಳನ್ನು ಹೊಂದಿದೆ.
........ವಾತ ನಾಶನಾಃ ಶ್ಲೇಷ್ಮಲಾ ಅಪಿ |
ಸಕ್ಷೀರಾ.......ಬಲ್ಯಾ ಬಿನ್ನಮಲಾಶ್ಚ ತೇ ||
-ಭಾವಪ್ರಕಾಶ ನಿಘಂಟು
ಅವಲಕ್ಕಿ ಬೇಗ ಜೀರ್ಣವಾದರೆ ಮಾತ್ರ ಒಳ್ಳೆಯದು.
ಅವಲಕ್ಕಿಯ ಪೋಷಕ ಗುಣಗಳನ್ನು ಪಡೆಯಲು ಏನು ಮಾಡಬೇಕು?
ಆಚಾರ್ಯರು, ಸಕ್ಷೀರಾ ಬೃಂಹಣಾ.......ಭೃಷ್ಟಾನ್ ಭಕ್ಷಯೇತ್ ಅಲ್ಪ....| ಎಂದಿರುವುದರಿಂದ,
ಅವಲಕ್ಕಿಯನ್ನು ಹುರಿದು, ಹಾಲಿನಲ್ಲಿ ಬೆರೆಸಿ, ಅತ್ಯಲ್ಪ ಪ್ರಮಾಣದಲ್ಲಿ ಸೇವಿಸಿ, ಜೀರ್ಣ ಆಗುವವರೆಗೆ ಏನನ್ನೂ ತಿನ್ನಬಾರದು, ಆಗ-
• ಅದು ಬೇಗ ಜೀರ್ಣವಾಗುತ್ತದೆ.
• ಬಹಳ ಸಮಯ ಪಿತ್ತದ ಅವಸ್ಥೆಯಲ್ಲಿ ಇರುವುದಿಲ್ಲ.
• ವಾತವನ್ನು ನಿವಾರಿಸುತ್ತದೆ.
• ಶರೀರವನ್ನು ಗಟ್ಟಿ ಮಾಡುತ್ತದೆ.
• ಬಲವನ್ನು ಕೊಡುತ್ತದೆ.
• ಲೈಂಗಿಕ ಬಲವನ್ನು ವರ್ಧಿಸುತ್ತದೆ.
• ಮಲಬದ್ಧತೆಯನ್ನೂ ನಿವಾರಿಸುತ್ತದೆ.
ವಿ. ಸೂಚನೆ:
ಪ್ರಮಾಣ ಹೆಚ್ಚಾದರೆ, ಹುರಿಯದೇ ತಿಂದರೆ, ವಗ್ಗರಣೆ ಕಲಸಿ ತಿಂದರೆ ಅದರ ಎಲ್ಲ ಲಾಭಗಳ ಬದಲು ವಾತ-ಪಿತ್ತದ ರೋಗಗಳನ್ನು ತರುತ್ತದೆ.
ಉಪವಾಸ ಮುಗಿದಾಗಲಂತೂ ಅವಲಕ್ಕಿ ಸೇವನೆ ಹಾನಿಕರ.
**********
ಆಸ್ಪತ್ರೆ ರಹಿತ ಆರೋಗ್ಯಕ್ಕೆ ಆಯುರ್ವೇದ
08.05.2020. ಸಂಚಿಕೆ-129
08.05.2020. ಸಂಚಿಕೆ-129
✍️:
ಎಲ್ಲರ ಪ್ರಿಯ ಅವರೆಕಾಯಿ ಆರೋಗ್ಯಪ್ರಿಯವಲ್ಲ
ಸುಗ್ಗಿ ಬಂದರೆ, ರಾಶಿ ರಾಶಿ ಅವರೆಕಾಯಿ ಮಾರಾಟ ಮತ್ತು ಮನೆಯ ಎಲ್ಲ ತಿಂಡಿಗಳ ಜೊತೆ ಅವರೆಕಾಳು ಸೇರುವುದು ಇತ್ತೀಚಿಗೆ ಸಾಮಾನ್ಯವಾಗಿದೆ.
ಅದರ ಸಾಧಕ ಬಾಧಕಗಳನ್ನು ನೋಡೋಣ
ನಿಷ್ಪಾವೋ.....ರುಚ್ಯೋ ವಿಪಾಕೇ ಆಮ್ಲೋ....ಸ್ತನ್ಯ, ಪಿತ್ತಾಸ್ರ, ಮೂತ್ರ-ವಾತ ವಿಭಂದಕೃತ್ |
ವಿದಾಹಿ, ಉಷ್ಣೋ, ವಿಷ, ಶ್ಲೇಷ್ಮ, ಶೋಥ, ಹೃತ್, ಶುಕ್ರ ನಾಶನಮ್ ||
-ಭಾವಪ್ರಕಾಶ ನಿಘಂಟು
ಅತ್ಯಂತ ಕಡಿಮೆ ಪ್ರಮಾಣದಲ್ಲಿ ಮತ್ತು ಇಡೀ ಸುಗ್ಗಿಗೆ ಒಂದೆರೆಡು ಬಾರಿ ಮಾತ್ರ ಸೇವಿಸಬಹುದಾದ ಕಾಳು ಎಂದರೆ ಅವರೆ. ಅದನ್ನೂ ಸಹ ಚನ್ನಾಗಿ ಬೇಯಿಸಿ ಸಿಪ್ಪೆ ತೆಗೆದು ತಿನ್ನಬೇಕು.
ಲಾಭಗಳು-
• ತಿನ್ನಲು ರುಚಿಯಾಗಿರುತ್ತದೆ.
• ಕಫವನ್ನು ಒಣಗಿಸುವ ಕಾರಣ ಶರೀರದ ಯಾವುದೇ ಭಾಗದಲ್ಲಿ ಕ್ರಿಮಿಗಳಿಂದ ಉಂಟಾದ ಕೀವು, ನೀರು ಸೇರುವುದನ್ನೂ ಮತ್ತು ಒಸರುವುದನ್ನೂ ನಿಲ್ಲಿಸುತ್ತದೆ.
ಅವರೆಯಿಂದ ದುಷ್ಪರಿಣಾಮಗಳೇ ಹೆಚ್ಚು
ಜೀರ್ಣವಾಗುವ ಎಲ್ಲಾ ಹಂತದಲ್ಲೂ ಅಂದರೆ ಕರುಳು ಮತ್ತು ಜೀವಕೋಶಗಳ ಹಂತದಲ್ಲೂ ಸಹ ಆಮ್ಲೀಯತೆಯನ್ನು ವೃದ್ಧಿಮಾಡುತ್ತದೆ.
ಸ್ತ್ರೀಯರ ಎದೆಹಾಲನ್ನು ವರ್ಧಿಸುತ್ತದೆ, ಆದರೆ ಅದನ್ನು ಕುಡಿದ ಮಕ್ಕಳು ಹೊಟ್ಟೆಯುಬ್ಬರದಿಂದ ಮತ್ತು ಮಾಂಸಖಂಡಗಳ ಸ್ನಿಗ್ಧತೆ ಒಣಗುವ ಕಾರಣ ನೋವಿನಿಂದ ತೊಂದರೆ ಅನುಭವಿಸುತ್ತಾರೆ.
ರಕ್ತಪಿತ್ತವನ್ನು ಅತ್ಯಂತ ಶೀಘ್ರವಾಗಿ ಹೆಚ್ಚಿಸುತ್ತದೆ. Uric acid ಜಾಸ್ತಿ ಇರುವವರ ರಕ್ತವನ್ನು ಇನ್ನಷ್ಟೂ ಕೆಡಿಸಿ, ಮಾಂಸಖಂಡಗಳ ಬಿಗಿತವನ್ನೂ, ಸಂಧಿಗಳ ರೋಗಗಳನ್ನೂ ತರುತ್ತದೆ.
ಮೂತ್ರವನ್ನು ಉತ್ಪತ್ತಿ ಮಾಡುವಲ್ಲಿ ಮತ್ತು ಹೊರಹಾಕುವಲ್ಲಿ ಪ್ರತಿರೋಧವನ್ನು ಒಡ್ಡುವ ಕಾರಣ ಕಿಡ್ನಿಗಳ ಸೋಸುವಿಕೆಯ ಮೇಲೆ ಬಲವಾದ ದುಷ್ಪರಿಣಾಮವನ್ನು ಉಂಟುಮಾಡುತ್ತದೆ.
ಮಲವನ್ನು ತಡೆಯುವ ಮತ್ತು ಗ್ಯಾಸ್ ಉತ್ಪತ್ತಿ ಮಾಡುವ ಕಾರಣ ಸರ್ವಶರೀರದಲ್ಲಿ ಬಾಧೆಯನ್ನು ಉಂಟುಮಾಡುತ್ತದೆ.
ಶುಕ್ರನಾಶಕ ಅಂದರೆ, ಉಷ್ಣಗುಣ ಪ್ರಧಾನವಾಗಿರುವುದರಿಂದ ವೀರ್ಯವನ್ನು ತೆಳುವಾಗಿಸುತ್ತದೆ ಮತ್ತು ಲೈಂಗಿಕ ಸಾಮರ್ಥ್ಯವನ್ನು ಕ್ಷೀಣಿಸುತ್ತದೆ.
ರಕ್ತದಲ್ಲಿ ವಿಷಯುಕ್ತ ರಾಸಾಯನಿಕಗಳನ್ನು(uric acid, ammonia... ect.,) ಹೆಚ್ಚಿಸಿ ಅಪಾಯ ತರುತ್ತದೆ.
ಅನೇಕರಿಗೆ ಚಿಕನ್-ಗ್ಯೂನ್ಯಾ ದಂತಹ ಕೀಲು ಮೂಳೆಗೆ ಸಂಬಂಧಿಸಿದ ವೈರಲ್ ಕಾಯಿಲೆ ಬರಲು ಈ ರೀತಿಯ ಆಹಾರಗಳಿಂದ ರಸಧಾತು ಕ್ಷೀಣವಾಗುವ ಕ್ರಿಯೆಯೇ ಬಹುಪಾಲು ಕಾರಣವಾಗಿದೆ.
ಕೇವಲ ರುಚಿ ಎಂದು ಯಾವುದೇ ಆಹಾರ ಪದಾರ್ಥಗಳನ್ನು ನಿಯಂತ್ರಣ ಮೀರಿ ಬಳಸುವ ಮೊದಲು, ಅದರ ಸಾಧಕ ಬಾಧಕಗಳನ್ನು ತಿಳಿಯುವುದು ಒಳಿತು.
**********
ಆಸ್ಪತ್ರೆ ರಹಿತ ಆರೋಗ್ಯಕ್ಕೆ ಆಯುರ್ವೇದ
10.05.2020. ಸಂಚಿಕೆ-131
✍️:
ಉದ್ದಿನ ವಡೆ ಗೋಧಿ ಪೂರಿ
ಅತ್ಯಂತ ರೋಗಕಾರವಾಗಿ ತಯಾರಿಸಿ ಸೇವಿಸುತ್ತಿದ್ದೇವೆ.
ಅದನ್ನು ಆರೋಗ್ಯಕರವಾಗಿ ಸೇವಿಸುವುದು ಹೇಗೆ?
ಮಾಷಾಣಾಂ ಪಿಷ್ಟಿಕಾಂ.....
ತಯಾ ಪಿಷ್ಟಿಕಯಾ.......ಕೃತ ಪೋಲಿಕಾ ||
ತೈಲೇನ ಪಕ್ವಾ ಸಾ ಪೂರಿಕಾ.....|
ರುಚ್ಯಾ.....ಗುರುಃ, ಬಲ್ಯಾ.....ಪಿತ್ತಾಸ್ರ ದೂಷಿಕಾ || ಚಕ್ಷುಃ ತೇಜೋಹರೀ, ಉಷ್ಣ ಪಾಕೇ, ವಾತನಾಶಿನಿ |
ತಥೈವ ಘೃತ ಪಕ್ವಾಪಿ ಚಕ್ಷುಷ್ಯಾ ರಕ್ತಪಿತ್ತಹೃತ್ ||
-ಭಾವಪ್ರಕಾಶ ನಿಘಂಟು
ಎಣ್ಣೆಯಲ್ಲಿ ಕರಿದು ತಯಾರಿಸುವ ಎಲ್ಲರ ಪ್ರಿಯ ಉದ್ದಿನ ವಡೆ, ಗೋಧಿ ಹಿಟ್ಟಿನ ಪೂರಿಗಳು (ಈಗ ನಾವು ತಯಾರಿಸುತ್ತಿರುವ ವಿಧಾನ) ಆರೋಗ್ಯಕ್ಕೆ ಅತ್ಯಂತ ಹಾನಿಕಾರಕ. ಇದರಿಂದ ಬರುವ ರೋಗಗಳು-
ಅಜೀರ್ಣ, ಉದರಭಾರ, ಉಷ್ಣಕಾರಕ ಮತ್ತು
ರಕ್ತಪಿತ್ತ ಅಂದರೆ
ಬಿ.ಪಿ
ರಕ್ತನಾಳ ಕಟ್ಟುವುದರಿಂದ ಬರುವ
ಹೃದಯದ ತೊಂದರೆಗಳು..
ಮೆದುಳು ತೊಂದರೆಗಳಾದ ಪಕ್ಷಾಘಾತ....
ಕಿಡ್ನಿ ಸೋಸುವಿಕೆ ಹಾಳಾಗುವ ನೆಫ್ರೋಪತಿ....
ಮುಂತಾದ ಸೂಕ್ಷ್ಮ ರಕ್ತನಾಳಗಳ ರೋಗಗಳು....
ಚಕ್ಷುವಿನ ತೇಜಸ್ಸನ್ನು ಹಾಳು ಮಾಡುತ್ತದೆ, ಅಂದರೆ ಅವಧಿ ಪೂರ್ವ ನೇತ್ರಶಕ್ತಿ ಕುಂದುತ್ತದೆ.
ಅದೇ ವಡೆ ಫೂರಿಗಳನ್ನು-
ಶುದ್ಧ ಬೆಣ್ಣೆಯಿಂದ ತಯಾರಿಸಿದ ಶುದ್ಧ ತುಪ್ಪದಲ್ಲಿ ಕರಿದು ತಯಾರಿಸಿ ಸೇವಿಸಿದರೆ-
ಸೂಕ್ಷ್ಮರಕ್ತನಾಳಗಳು ಬಲ
• ಬಲವನ್ನು ಕೊಡುತ್ತದೆ.
• ಚಕ್ಷುವಿನ ತೇಜಸ್ಸು ವರ್ಧಿಸುತ್ತದೆ. ವೃದ್ಧಾವಸ್ಥೆವರೆಗೂ ನೇತ್ರಶಕ್ತಿ ಚನ್ನಾಗಿರುತ್ತದೆ.
• ರಕ್ತಪಿತ್ತ ನಿವಾರಣೆಯಾಗುವುದರಿಂದ- ಬಿ.ಪಿ, ಹೃದಯದ ತೊಂದರೆಗಳು, ಪಕ್ಷಾಘಾತಾದಿ ಮೆದುಳಿನ ತೊಂದರೆ, ಕಿಡ್ನಿ ತೊಂದರೆಗಳು ನಿವಾರಣೆಯಾಗುತ್ತವೆ.
ಎಚ್ಚರಿಕೆ-
ತುಪ್ಪದಲ್ಲಿ ತಯಾರಿಸಿದರೂ ಸಹ ಪದೇ, ಪದೇ ಸೇವನೆ ಯಾರಿಗೂ ಯೋಗ್ಯವಲ್ಲ.
ಶ್ರಮವಹಿಸಿ ಕೆಲಸ ಮಾಡದೇ ಸೇವಿಸುವುದು ರೋಗವನ್ನು ತರುತ್ತದೆ.
ತೂಕ ಹೆಚ್ಚಾಗುತ್ತಿರುವವರು ಸೇವಿಸುವುದು ಯೋಗ್ಯವಲ್ಲ.
************
ಆಸ್ಪತ್ರೆ ರಹಿತ ಆರೋಗ್ಯಕ್ಕೆ ಆಯುರ್ವೇದ
11.04.2020. ಸಂಚಿಕೆ-132
✍️:
ಜಿಲೇಬಿಯು ಆರೋಗ್ಯಕ್ಕೆ ಅತ್ಯುತ್ತಮ. ಆದರೆ ಅಲ್ಪ ಪ್ರಮಾಣದಲ್ಲಿ ಸೇವಿಸಿದರೆ ಮಾತ್ರ ಲಾಭಕಾರಿ.
ಏಷಾ ಕುಂಡಲಿನೀ ನಾಮ್ನಾ ಪುಷ್ಟಿ, ಕಾಂತಿ, ಬಲಪ್ರದಾ |
ಧಾತುವೃದ್ಧಿಕರೀ, ವೃಷ್ಯಾ ರುಚ್ಯಾ ಚ ಕ್ಷಿಪ್ರತರ್ಪಣೀ ||
-ಭಾವಪ್ರಕಾಶ ನಿಘಂಟು
ಜಿಲೇಬಿ ತಯಾರಿಕೆಯಲ್ಲಿ ಸ್ವಲ್ಪ ಬದಲಾವಣೆ ಮಾಡಿಕೊಂಡರೆ ಅದನ್ನು ಅತ್ಯಂತ ಆರೋಗ್ಯಕರವಾಗಿ ಪುಷ್ಟಿಕರವಾಗಿಸಿಕೊಳ್ಳಬಹುದು.
ಸಂಸ್ಕೃತಭಾಷೆಯಲ್ಲಿ "ಕುಂಡಲಿನೀ" ಎಂದು ಕರೆಸಿಕೊಳ್ಳುವ "ಜಿಲೇಬಿ" ಯನ್ನು ಪುಷ್ಟಿಕರವಾಗಿಸಿಕೊಳ್ಳುವ ವಿಧಾನ:
ಜಿಲೇಬಿ ತಯಾರಿಕೆಯಲ್ಲಿ-
ಮೈದಾಹಿಟ್ಟಿನ ಬದಲು "ಉದ್ದಿನಹಿಟ್ಟ"ನ್ನೂ
ಎಣ್ಣೆಯ ಬದಲು "ತುಪ್ಪ"ವನ್ನು ಬಳಸಬೇಕು.
ಈ ಎರಡು ಬದಲಾವಣೆಗಳಿಂದ ಜಿಲೇಬಿ ಈ ಕೆಳಗಿನ ಲಾಭವನ್ನು ಕೊಡುತ್ತದೆ
• ಅತ್ಯಂತ ರುಚಿಯಾಗಿರುತ್ತದೆ.
• ಪುಷ್ಟಿ ಅಂದರೆ ಮಾಂಸಖಂಡಗಳನ್ನು ವರ್ಧಿಸಿ, ದೃಢತೆಯನ್ನು ಕೊಡುತ್ತದೆ.
• ಕಾಂತಿ, ಅಂದರೆ ಚರ್ಮದ ಪದರಗಳಲ್ಲಿನ ರಸಧಾತುವನ್ನು ತುಂಬಿಸಿ ಹೊಳಪನ್ನು ಕೊಡುತ್ತದೆ
• ಬಲಕಾರಕ
• ಧಾತುವೃದ್ಧಿ ಅಂದರೆ ರಸಾದಿ ಎಲ್ಲಾ ಧಾತುಗಳನ್ನು ವೃದ್ಧಿಮಾಡುತ್ತದೆ.
• ವೃಷ್ಯ ಅಂದರೆ ಲೈಂಗಿಕ ಶಕ್ತಿಯನ್ನು ವರ್ಧಿಸುತ್ತದೆ.
ಆತ್ಮೀಯರೇ,
ಈ ಎಲ್ಲಾ ಲಾಭಗಳನ್ನು ಪಡೆಯಬೇಕಾದರೆ ನಮ್ಮ ಉದರವನ್ನು ಗಮನದಲ್ಲಿಟ್ಟುಕೊಂಡು ಜೀರ್ಣಿಸುವಷ್ಟು ಪ್ರಮಾಣದಲ್ಲಿ ಮಾತ್ರ ಸೇವಿಸಬೇಕು.
ಜಿಹ್ವಾ ಚಾಪಲ್ಯದಿಂದ ಅಥವಾ ಬೇಗ ಲಾಭಗಳಿಸುವ ಉದ್ದೇಶದಿಂದ ಪ್ರಮಾಣಾತಿಸೇವನೆ ಮಾಡಿದರೆ ಹಾನಿಯನ್ನುಂಟುಮಾಡುತ್ತದೆ.
**********
ಆಸ್ಪತ್ರೆ ರಹಿತ ಆರೋಗ್ಯಕ್ಕೆ ಆಯುರ್ವೇದ
12.05.2020. ಸಂಚಿಕೆ-133
✍️:
ಆರೋಗ್ಯಪ್ರದ ಲಾಡು(ಮೋದಕ)
ಲಘುಃ ಗ್ರಾಹಿ ತ್ರಿದೋಷಘ್ನಃ...... ರುಚಿಪ್ರದಃ ಚಕ್ಷುಷ್ಯೋ, ಜ್ವರಹೃತ್, ಬಲ್ಯ ಸಂತರ್ಪಣೋ ಮುದ್ಗ ಮೋದಕಃ||
-ಭಾವಪ್ರಕಾಶ ನಿಘಂಟು
ಮೋದಕ =ಲಡ್ಡುಂಡೆ
ಮುದ್ಗ = ಹೆಸರು ಬೇಳೆ
ಬಹು ಜನರ ಪ್ರಿಯ ಲಾಡನ್ನು ಆಚಾರ್ಯರ ಮತದಂತೆ ತಯಾರಿಸಿದರೆ ರುಚಿಯ ಜೊತೆಗೆ ಆರೋಗ್ಯವನ್ನೂ ಪಡೆಯಬಹುದು.
ಆದರೆ ಈಗ ವಿನಾಯಕನ ಪೂಜೆಯಲ್ಲಿ ತಯಾರಿಸುವ ಮೋದಕವು ಕಾಲಾಂತರದಲ್ಲಿ ವಿಕೃತಗೊಂಡ ರೂಪವಾಗಿದೆ.
ಆರೋಗ್ಯಪ್ರದ ಲಾಡು / ಮೋದಕ ತಯಾರಿಸುವ ವಿಧಾನ:-
ಹೆಸರು ಬೇಳೆಯ ನಯವಾದ ಹಿಟ್ಟನ್ನು ನೀರಿನಲ್ಲಿ ಕಲಸಿ ಕಾಳುಗಳು ಬರುವಂತೆ ಜರಡಿಯ ಮೂಲಕ ಹಾಕಿ, ತುಪ್ಪದಲ್ಲಿ ಕರಿದು, ಸಕ್ಕರೆ ಪಾಕದಲ್ಲಿ ಅದ್ದಿ ಉಂಡೆಗಳನ್ನು ಕಟ್ಟಬೇಕು. ( ಪ್ರಚಲಿತದಲ್ಲಿರುವ ಮೋತಿಚೂರ್ / ಬೂಂದಿ ಲಾಡು / ಲಡ್ಡುಂಡೆಯಲ್ಲಿ ಕಡಲೆಹಿಟ್ಟಿನ ಬದಲು ಹೆಸರುಬೇಳೆ ಹಿಟ್ಟನ್ನೂ, ಎಣ್ಣೆಯ ಬದಲು ತುಪ್ಪವನ್ನೂ ಬಳಸಿದರಾಯಿತು)
ಲಾಭಗಳು-
• ಪಚನಕ್ಕೆ ಹಗುರ
• ಕರುಳು ಪೋಷಕಾಂಶಗಳನ್ನು ಹೀರಿಕೊಳ್ಳುವಂತೆ ಮಾಡುತ್ತದೆ.
• ತ್ರಿದೋಷಹರ
• ಶರೀರದಲ್ಲಿ ಉಷ್ಣತೆಯನ್ನು ಉಂಟುಮಾಡುವುದಿಲ್ಲ
• ಸೋಂಕು ರಹಿತ ಜ್ವರವನ್ನು ನಿಯಂತ್ರಿಸುತ್ತದೆ.
• ನೇತ್ರಹಿತಕಾರಕ / ದೃಷ್ಟಿ ಇಂದ್ರಿಯ ಬಲಕಾರಕ
• ಸರ್ವಧಾತು ಪೋಷಕ, ಬಲಕಾರಕ
• ರುಚಿಕರವಾಗಿದೆ.
ಸೂಚನೆ:-
ಈ ಎಲ್ಲಾ ಲಾಭಗಳಿಗಾಗಿ ನಿಮ್ಮ ನಿಮ್ಮ ಜೀರ್ಣ ಶಕ್ತಿಯನ್ನೂ, ಶಾರೀರಿಕ ಶ್ರಮವನ್ನೂ ಗಮನದಲ್ಲಿಟ್ಟುಕೊಂಡು ಸೇವಿಸಬೇಕು.
**********
-ಭಾವಪ್ರಕಾಶ ನಿಘಂಟು
ಮೋದಕ =ಲಡ್ಡುಂಡೆ
ಮುದ್ಗ = ಹೆಸರು ಬೇಳೆ
ಬಹು ಜನರ ಪ್ರಿಯ ಲಾಡನ್ನು ಆಚಾರ್ಯರ ಮತದಂತೆ ತಯಾರಿಸಿದರೆ ರುಚಿಯ ಜೊತೆಗೆ ಆರೋಗ್ಯವನ್ನೂ ಪಡೆಯಬಹುದು.
ಆದರೆ ಈಗ ವಿನಾಯಕನ ಪೂಜೆಯಲ್ಲಿ ತಯಾರಿಸುವ ಮೋದಕವು ಕಾಲಾಂತರದಲ್ಲಿ ವಿಕೃತಗೊಂಡ ರೂಪವಾಗಿದೆ.
ಆರೋಗ್ಯಪ್ರದ ಲಾಡು / ಮೋದಕ ತಯಾರಿಸುವ ವಿಧಾನ:-
ಹೆಸರು ಬೇಳೆಯ ನಯವಾದ ಹಿಟ್ಟನ್ನು ನೀರಿನಲ್ಲಿ ಕಲಸಿ ಕಾಳುಗಳು ಬರುವಂತೆ ಜರಡಿಯ ಮೂಲಕ ಹಾಕಿ, ತುಪ್ಪದಲ್ಲಿ ಕರಿದು, ಸಕ್ಕರೆ ಪಾಕದಲ್ಲಿ ಅದ್ದಿ ಉಂಡೆಗಳನ್ನು ಕಟ್ಟಬೇಕು. ( ಪ್ರಚಲಿತದಲ್ಲಿರುವ ಮೋತಿಚೂರ್ / ಬೂಂದಿ ಲಾಡು / ಲಡ್ಡುಂಡೆಯಲ್ಲಿ ಕಡಲೆಹಿಟ್ಟಿನ ಬದಲು ಹೆಸರುಬೇಳೆ ಹಿಟ್ಟನ್ನೂ, ಎಣ್ಣೆಯ ಬದಲು ತುಪ್ಪವನ್ನೂ ಬಳಸಿದರಾಯಿತು)
ಲಾಭಗಳು-
• ಪಚನಕ್ಕೆ ಹಗುರ
• ಕರುಳು ಪೋಷಕಾಂಶಗಳನ್ನು ಹೀರಿಕೊಳ್ಳುವಂತೆ ಮಾಡುತ್ತದೆ.
• ತ್ರಿದೋಷಹರ
• ಶರೀರದಲ್ಲಿ ಉಷ್ಣತೆಯನ್ನು ಉಂಟುಮಾಡುವುದಿಲ್ಲ
• ಸೋಂಕು ರಹಿತ ಜ್ವರವನ್ನು ನಿಯಂತ್ರಿಸುತ್ತದೆ.
• ನೇತ್ರಹಿತಕಾರಕ / ದೃಷ್ಟಿ ಇಂದ್ರಿಯ ಬಲಕಾರಕ
• ಸರ್ವಧಾತು ಪೋಷಕ, ಬಲಕಾರಕ
• ರುಚಿಕರವಾಗಿದೆ.
ಸೂಚನೆ:-
ಈ ಎಲ್ಲಾ ಲಾಭಗಳಿಗಾಗಿ ನಿಮ್ಮ ನಿಮ್ಮ ಜೀರ್ಣ ಶಕ್ತಿಯನ್ನೂ, ಶಾರೀರಿಕ ಶ್ರಮವನ್ನೂ ಗಮನದಲ್ಲಿಟ್ಟುಕೊಂಡು ಸೇವಿಸಬೇಕು.
**********
ಕೊರೋನಾ ಕೊರೋನಾ ಕೊರೋನಾ CORONA COVID 19
24.03.2020
ಕಾಳು ಮೆಣಸು ಬಳಸಿರಿ- ಕೊರೋನಾ ತಡೆಯಿರಿ:
(ಸನಾತನ ವೈದ್ಯ ಪದ್ಧತಿಯ ಸ್ಪಷ್ಟ ಉಲ್ಲೇಖ ಮತ್ತು ಅದರ ವೈಜ್ಞಾನಿಕ ವಿವರಣೆ ಸಹಿತ)
ಇದೊಂದು ಅದ್ಭುತ ರಾಮಬಾಣ, ತಾಳ್ಮೆಯಿಂದ ಸಂಪೂರ್ಣ ಓದಿ, ಪಾಲಿಸಿ.
ಈ ಸಂದೇಶದ ಕಾರಣ 👉
ಕೊರೋನಾ ತಡೆಗೆ ಆಯುರ್ವೇದ ಔಷಧ ಯೋಜನೆಗೆ ಅವಕಾಶ ಕೊಡಿ ಎಂದು ಕೋರಿಕೊಂಡರೂ-
ನಿಮ್ಮ ಔಷಧವನ್ನು ಕೊರೋನಾ ಮೇಲೆ ಕ್ಲಿನಿಕಲ್ ಟ್ರಯಲ್ ಮಾಡಿರುವ ಬಗ್ಗೆ ದೃಢೀಕರಿಸಿ ಎಂದು ಕೇಳಿಸಿಕೊಳ್ಳಲ್ಪಟ್ಟಿದ್ದೇವೆ. ತಮಾಷೆ ಎಂದರೆ ಈಗ ಮಾಡುತ್ತಿರುವ ಯಾವ ಚಿಕಿತ್ಸೆಯೂ ಕೊರೋನಾ ಮೇಲೆ ಕ್ಲಿನಿಕಲ್ ಟ್ರಯಲ್ ಮಾಡಿ ಯಶಸ್ವಿಯಾದಂತಹುವೇನಲ್ಲ.!
ಮತ್ತು
ಕ್ಲಿನಿಕಲ್ ಟ್ರಯಲ್ ಗೆ ಬೇಕಾಗುವ ಸಮಯದಲ್ಲಿ ಅದೆಷ್ಟು ಜನರಿಗೆ ಈ ಮಾರಿ ತಗುಲುವುದು?!
ಮತ್ತು
ಕಾಳು ಮೆಣಸು ನಿತ್ಯಬಳಕೆಯ ವಸ್ತು ಇದು ಯಾವುದೋ ಹೊಸ ಕೃತಕ ಸೃಷ್ಟಿತ ದ್ರವ್ಯವೇನಲ್ಲ.
ಈ ಎಲ್ಲಾ ಕಾರಣಗಳನ್ನು ಮುಂದಿಟ್ಟುಕೊಂಡು, ಈ ವಿವರಣೆಯನ್ನು ಹಂಚುತ್ತಿದ್ದೇವೆ. ದಿವ್ಯ ಶಕ್ತಿಯೊಂದು ಈ ಸಂದೇಶ ರವಾನಿಸಲು ಪ್ರೇರಣೆ ನೀಡಿದೆ.
• ಹೌದು ಕಾಳು ಮೆಣಸು ಒಂದು ಅತ್ಯದ್ಭುತ ಔಷಧ.
• ಯಾರು ಏನೇ ಹೇಳಲಿ, 21 ದಿನಗಳ ಕಾಲ ವೈಜ್ಞಾನಿಕ ರೀತಿಯಲ್ಲಿ ಕಾಳು ಮೆಣಸು ಉಪಯೋಗಿಸಿ.
• ಇದಕ್ಕೆ ಯಾವುದೇ ಆಧುನಿಕ ಸಂಶೋಧನೆಯ ಪುರಾವೆಗಳಿಗೆ ಕಾಯಬೇಡಿ.
• ತುರ್ತು ಸ್ಥಿತಿಯಲ್ಲಿ ಆಪದ್ಧರ್ಮ ಅನುಸರಿಸಿ, ನಿಮ್ಮ ಮನೆಗೆ ಬರುವುದನ್ನು ತಡೆಯಿರಿ.
• ಜೀವ ಮೊದಲು-ಪುರಾವೆ ನಂತರ ಹಾಗೆಯೇ
ಫಲಿತಾಂಶ ಮೊದಲು-ಸಂಶೋಧನೆ ನಂತರ.
ಸದ್ಯಕ್ಕೆ ಸಮಯವಿಲ್ಲ ಸಂಪೂರ್ಣವಾಗಿ ನಮ್ಮನ್ನು ಸಂರಕ್ಷಿಸಿಕೊಳ್ಳೋಣ, ನಂತರ ಮಾತನಾಡೋಣ.
ಚರಕ, ಸುಶ್ರುತ, ಭಾವಪ್ರಕಾಶ-ಕೈಯದೇವ-ರಾಜ ನಿಘಂಟುಗಳ ಉಲ್ಲೇಖ-
ಮರೀಚಂ ಜಂತು ಸಂತಾನ ನಾಶನಮ್
ಶ್ವಾಸ ಶೂಲಘ್ನಮ್ ಶ್ವಾಸ ಶೂಲ,
ಕ್ರಿಮೀನ್ ಹರೇತ್ ವಿಷಘ್ನಂ,
ಭೂತನಾಶನಮ್ ಅವೃಷ್ಯಂ
ಶ್ಲೇಷ್ಮ ಪ್ರಸೇಕ ಛೇದಿತ್ವಾತ್ ಶೋಷಣತ್ವಾತ್
**
ಕಾಳು ಮೆಣಸಿನಲ್ಲಿರುವ ರಾಸಾಯನಿಕಗಳು-
(Chemicals in pepper)
Piperene
Piperethine
Piperolein A & B
Feruperine
Dehydroferuperine
Citronellol
Criptone
Dehydrocarveol
Alpha & Beta Pinene
Piperonal
Camphene
Beta Caryophyllene
Beta Alanine
Pipecolic acid
Carotene
Ascorbic acid (Vitamin C)
Pipercide
etc.,
(ನೆಟ್ ನಲ್ಲಿ ಎಲ್ಲಾ ರಾಸಾಯನಿಕಗಳ ಕಾರ್ಯವನ್ನು ತಿಳಿಯಬಹುದು)
ವೈಶಿಷ್ಟ್ಯ ಏನೆಂದರೆ,
ಕಾಳು ಮೆಣಸಿನಲ್ಲಿ ಈ ಎಲ್ಲಾ ರಾಸಾಯನಿಕಗಳೂ ಹರ್ಬಲ್ ಕಾಂಪ್ಲೆಕ್ ರೂಪದಲ್ಲಿರುವವು ಮತ್ತು ಈ ಎಲ್ಲ ರಾಸಾಯನಿಕಗಳ ಪ್ರತ್ಯೇಕ ಕಾರ್ಯಗಳಿಗಿಂತ ವಿಭಿನ್ನವಾಗಿ ಕಾರ್ಯನಿರ್ವಹಿಸಿ ನಮ್ಮನ್ನು ಸಂರಕ್ಷಿಸುತ್ತವೆ.
ಒಟ್ಟಾರೆ ಈ ರಾಸಾಯನಿಕಗಳ ಇರುವಿಕೆ ಮತ್ತು ಚರಕಾದಿ ಮಹರ್ಷಿಗಳು ಹೇಳುವ ದ್ರವ್ಯ ಕಾರ್ಮುಕತಾ ಗಮನಿಸಿದರೆ ಹೀಗೆ ತಿಳಿಯಬಹುದು. 👇
"ಕಾಳು ಮೆಣಸು ಪ್ರಾಣವಹ ಶ್ರೋತಸ್ಸುಗಳ ಅವಯವಗಳಾದ ಮೂಗು, ಗಂಟಲು, ಕ್ಲೋಮ(trachea) ಮತ್ತು ಫುಪ್ಪಸಗಳ ಆಳದವರೆಗೆ ಕೆಲಸ ಮಾಡುತ್ತದೆ ಎಂಬುದು ಅತ್ಯಂತ ಸ್ಪಷ್ಟ."
ಇದು ಫುಪ್ಪುಸಾದಿ ಅವಯವಗಳ ಮೇಲೆ ದುಷ್ಪರಿಣಾಮ ಬೀರುವ ಯಾವುದೇ ಕ್ರಿಮಿ ಮತ್ತು ಕ್ರಿಮಿಗಳ ಸಂತಾನವನ್ನೇ ನಾಶ ಮಾಡುತ್ತದೆ.
ಕ್ರಿಮಿಗಳನ್ನು ಛೇದನ(ಅವುಗಳ DNA chain ಅನ್ನು ಒಡೆಯುವುದು)ಮಾಡುವುದು ಮತ್ತು ಅವುಗಳ ಸಂತಾನಾಭಿವೃದ್ಧಿ(replication)ಯನ್ನು ಶೋಷಣ ಅಂದರೆ ಒಣಗಿಸಿ ಬಿಡುವುದು.
"ಶ್ಲೇಷ್ಮ ಪ್ರಸೇಕ" ಅಂದರೆ ಕ್ರಿಮಿ ಬೀಡುಬಿಟ್ಟಿರುವ, ಬಿಡುತ್ತಿರುವ ಸ್ಥಾನದಿಂದ ಅವುಗಳನ್ನು ಬಡಿದೆಬ್ಬಿಸಿ ಹೊರ ತಳ್ಳಲು ತಯಾರಿ ಮಾಡುವುದು. (ಸ್ಥಾನಾತ್ ಚಲಿತಃ ಬಹಿರ್ ಅ ನಿರ್ಯಾತಿ) ಕಫದೊಂದಿಗೆ ವೈರಸ್ ಗಳನ್ನೂ ಉತ್ಲೇಶ ಗೊಳಿಸಿ ಒಣಗಿಸುವುದು ಅಥವಾ ಹೊರ ತಳ್ಳುವುದು.
ಈ ಕಾರ್ಯಗಳಿಂದ-
"ಶ್ವಾಸ" ಅಂದರೆ ಉಸಿರಾಟದ ತೊಂದರೆ ಮತ್ತು ಅದರಿಂದಾಗುವ ಶೂಲ(ಎದೆ ನೋವು)ವನ್ನು ಕಾಳು ಮೆಣಸು ನಿವಾರಿಸುತ್ತದೆ.
*********
ಒಟ್ಟಾರೆ ಹೇಗೆ ಕಾರ್ಯ ನಿರ್ವಹಿಸುತ್ತದೆ ತಿಳಿಯಿರಿ:
ನಮ್ಮ ಗಂಟಲಿನಲ್ಲಿ ಮೊದಲ ಸ್ಥಾನವನ್ನು ಕಂಡುಕೊಳ್ಳುವ ಕೊರೋನಾ ವೈರಸ್, ಅಲ್ಲಿ ಇರುವ ನಮ್ಮ ರೋಗನಿರೋಧಕ ಶಕ್ತಿಯನ್ನು ಸೆದೆಬಡಿಯುತ್ತದೆ. ಈ ಹಂತದಲ್ಲೇ ಅದನ್ನು ನಾವು ಸೆದೆಬಡಿಯುವುದು ಜಾಣತನ. ಫುಪ್ಪಸದ ಸನಿಹಕ್ಕೆ ವೈರಸ್ ಜಾರದಂತೆ ತಡೆಯುವುದಾದರೆ, ಯುದ್ಧವನ್ನು ಗೆದ್ದಂತೆಯೇ ಸರಿ.
ಅತ್ಯಮೂಲ್ಯ ಮಾಹಿತಿ:
ಮೆಣಸಿನ ಬಳಕೆಯ ವಿಧಾನವನ್ನು ಇಲ್ಲಿ ಹೇಳುವಂತೆಯೇ ಪಾಲಿಸಬೇಕು, ಇಲ್ಲವಾದಲ್ಲಿ ಫಲಿತಾಂಶ ಶೂನ್ಯ!!! ಏಕೆಂದರೆ ಪ್ರತಿಯೊಂದಕ್ಕೂ ನಿರ್ದಿಷ್ಟ ವೈಜ್ಞಾನಿಕ ಕಾರಣ ಇದೆ ಮತ್ತು ಇಲ್ಲಿ ಹೇಳುವ ಆಹಾರ ಪಾನೀಯಗಳ ವಿಷಯಗಳು ವೈರಸ್ ಗಳಿಗೆ ಆಹಾರ ನಿಲ್ಲಿಸುವ, ನಮ್ಮ ರೋಗನಿರೋಧಕ ಶಕ್ತಿಯನ್ನು ವರ್ಧಿಸುವ ಕಾರ್ಯದಲ್ಲಿ ತೊಡಗುತ್ತವೆ.
ಕೊರೋನಾವನ್ನು ಈ ಎಲ್ಲಾ ಕೋನಗಳಿಂದ ಸೆದೆಬಡಿಯದೇ ವಿಧಿಯಿಲ್ಲ. ಸಣ್ಣ ವೈರಸ್ ಆಗಿದ್ದರೆ ನಮ್ಮ ರೋಗನಿರೋಧಕ ಶಕ್ತಿಯೇ ಅದನ್ನು ತಡೆಯುತ್ತಿತ್ತು. ಆದರೆ ಇದೊಂದು ದೈತ್ಯ ಹಾಗಾಗಿ ಔಷಧ ಪ್ರಯೋಗಕ್ಕೆ ನಿರ್ದಿಷ್ಟ ವಿಧಿವಿಧಾನಗಳನ್ನು ಪಾಲಿಸುವುದು ಅನಿವಾರ್ಯ.
*********
ಕಾಳು ಮೆಣಸನ್ನು ಬಳಸುವ ವಿಧಾನ
ರಾತ್ರಿ ಮಲಗಿದ ಸಮಯವನ್ನು ಬಿಟ್ಟು ಪ್ರತಿ 3 ಗಂಟೆಗೊಮ್ಮೆ ಬಳಸಬೇಕು.
• ಮೊದಲು ಬಾಯಿಯಲ್ಲಿರುವ ಎಲ್ಲಾ ಜೊಲ್ಲುರಸವನ್ನು ಚನ್ನಾಗಿ ನುಂಗಿಬಿಡಿ.
• ಎರೆಡು ಕಾಳುಮೆಣಸನ್ನು ಎರಡೂ ದವಡೆಯಲ್ಲಿ ಇಟ್ಟುಕೊಂಡು ನಿಧಾನವಾಗಿ ಅಗೆಯಿರಿ.
• ಸ್ವಲ್ಪ ಜೊಲ್ಲು ಮಿಶ್ರವಾದೊಡನೇ ಮೆಣಸು ವಿಶಿಷ್ಟ ಔಷಧಿ ಭಾವವನ್ನು ಪಡೆಯುತ್ತದೆ.
• ಆಗ ನಿಧಾನವಾಗಿ ಗಂಟಲಿಗೆ ತಳ್ಳಿ, ನುಂಗುವ ಪ್ರಯತ್ನ ಬೇಡ.
• ಈ ಅಮೃತೋಪಮ ಸಮ್ಮಿಶ್ರಣವನ್ನು ನಿಧಾನವಾಗಿ ಗಂಟಲಿಗೆ ತಳ್ಳುತ್ತಲೇ ಇರಿ
• ತಾನಾಗಿ ಸಹಜವಾಗಿ ಗಂಟಲಿನಿಂದ ಜಾರಿ ಉದರ ಸೇರುವ ತನಕ ಹಾಗೇ ಬಿಡಿ.
• ಗಂಟಲು ಸ್ವಲ್ಪ ಉರಿಯಬಹುದು, ಅದು ಕೇವಲ 1-2 ನಿಮಿಷಗಳು ಮಾತ್ರ, ನಂತರ ತಾನೇ ಕಡಿಮೆಯಾಗುತ್ತದೆ.
• ಸುಕೋಮಲ ದೇಹಿಗಳು, ಮಕ್ಕಳು ಉರಿ ತಡೆಯದಿದ್ದರೆ ಒಂದು ಅಗುಳು ಉಪ್ಪನ್ನು ಕೊಡಿ. ನೀರು, ಹಾಲು, ಮೊಸರು, ಮಜ್ಜಿಗೆ, ಸಕ್ಕರೆ, ಬೆಲ್ಲ, ತುಪ್ಪ, ಅಡಿಕೆ, ಚಾಕೊಲೇಟ್, ಚಹಾ ಟೀ ಕೊಟ್ಟರೆ ಹೊಳೆಯಲ್ಲಿ ಹುಣಸೆ ಹಿಂಡಿದಂತೆ ವ್ಯರ್ಥ.
• ಉರಿ ಮೂತ್ರ ಬಂದರೆ ಮಾತ್ರ ಎರಡರ ಬದಲು ಒಂದು ಕಾಳು ಮೆಣಸನ್ನೋ ಅಥವಾ 4-5 ಗಂಟೆಗೊಮ್ಮೆಯೋ ಸೇವಿಸುವುದನ್ನೂ ಅಥವಾ ಎರಡನ್ನೂ ಪಾಲಿಸಬಹುದು.
ಈ ವಿಧಾನವು ಯಾವುದೇ ವೈರಸ್ಸನ್ನು ಗಂಟಲಿನಲ್ಲೇ ಕೊಂದುಹಾಕುತ್ತದೆ ಮತ್ತು ಹೊಟ್ಟೆಯೊಳಕ್ಕೆ ತಳ್ಳಿ ಅಲ್ಲಿ ಸ್ವಭಾವದಿಂದ ಇರುವ Concentrated HCL ಆ್ಯಸಿಡ್ ನಲ್ಲಿ ಕರಗಿಸಿ ಇಲ್ಲವಾಗಿಸಿಬಿಡುತ್ತದೆ.
ವೈರಸ್ ನಿವಾರಣಾ ಪೇಯ:
ನಾಲ್ಕು ಜನರಿಗೆ ಬೇಕಾದಷ್ಟು ಪ್ರಮಾಣ-
ಶುಂಠಿ -1/2 ಚಮಚ
ಶುದ್ಧ ಹರಿಶಿಣ ಪುಡಿ- 1/4 ಚಮಚ
ಬೆಳ್ಳುಳ್ಳಿ- 8 ಬೇಳೆ
ಕಾಳು ಮೆಣಸು-16
ಎಲ್ಲದರ ಪುಡಿಯನ್ನು ಒಂದೂವರೆ ಟೀ ಗ್ಲಾಸ್ ನೀರನ್ನು ಹಾಕಿ ಕುದಿಸಿ ಸೋಸಿ ನಂತರ ಸ್ವಲ್ಪ ಬೆಲ್ಲ ಸೇರಿಸಿ.
ಪ್ರತಿ ಹಗಲು 2 ಗಂಟೆಗೊಮ್ಮೆ ಕೇವಲ 1/4 ಗ್ಲಾಸ್ ಮಾತ್ರ ಸೇವಿಸಿ.
ಮಕ್ಕಳಿಗೆ ಕುಡಿಯಲು ಕಷ್ಟವಾದರೆ ಮಾತ್ರ ಸ್ವಲ್ಪ ಹಾಲನ್ನು ಬಳಸಬಹುದು. ಇಲ್ಲವಾದರೆ ಹಾಲು ಬೇಡವೇ ಬೇಡ.
ಇದು ರೋಗನಿರೋಧಕ ಶಕ್ತಿಯನ್ನು ವರ್ಧಿಸುತ್ತದೆ. ಇದರ ರಾಸಾಯನಿಕಗಳು ಫುಪ್ಪುಸದ ಸೋಂಕಿನ ವಿರುದ್ಧ ಹೋರಾಡುವ ಕಿಣ್ವಗಳನ್ನೂ, ಹಾರ್ಮೋನ್ ಗಳನ್ನೂ ಶರೀರದ ಅವಶ್ಯಕತೆಗೆ ತಕ್ಕಂತೆ ಕಾಲಕಾಲಕ್ಕೆ ಬಿಡುತ್ತಾ ಜೀವಕೋಶಗಳೊಳಗೆ ಅಥವಾ ಉದರದೊಳಗೆ ಬಂದ ವೈರಸ್ ನ ಚೈನ್ ತುಂಡರಿಸುತ್ತದೆ.
ಇದನ್ನು ಬಾಯಿ ಚಪಲಕ್ಕೋ, ಒಳ್ಳೆಯದೆಂದು ಹೇಳಿದ್ದಾರೆಂದೋ ಅತಿಪ್ರಮಾಣದಲ್ಲಿ ಸೇವಿಸಬಾರದು. ಉಪ್ಪು ರುಚಿಕಾರಕ ಆದರೆ ಸ್ವಲ್ಪ ಹೆಚ್ಚು ಮಾಡಿದರೂ ತಿನ್ನಲಾಗದಷ್ಟು ರುಚಿಯನ್ನು ಕೆಡಿಸುವಂತೆ, ಇದರ ಅತಿಸೇವನೆ ಔಷಧಿಯಾಗಿ ಕೆಲಸ ಮಾಡುವ ಬದಲು ಉತ್ತೇಜಕವಾಗುತ್ತದೆ.(ಇಂದಿನ ಮದ್ಯಪಾನ, ಚಹಾ ಕಾಫಿಗಳಾದಂತೆ)
ಆಗಾಗ ಬಿಸಿ ನೀರು ಸೇವನೆ
ಹೌದು ಬೇಸಿಗೆ ಇದೆ ಆದರೆ, ಆಗಾಗ ಸ್ವಲ್ಪ ಪ್ರಮಾಣದ ಬಿಸಿ ನೀರು ಗಂಟಲಿನ ಕಫವನ್ನು ಛೇದಿಸಲು ಅತ್ಯಂತ ಸಹಾಯಕ.
ಆಹಾರ ಪಾಲನೆ:
ಈ ವಿಷಯದಲ್ಲಿ ಎಂಥಹ ದುರ್ವಿಧಿ ನಮ್ಮದು-
ಜನರಿಗೆ ಗೊತ್ತಿಲ್ಲವೂ, ವಿಜ್ಞಾನ ಹೇಳುತ್ತಿಲ್ಲವೋ ಅಂತೂ ಸರಕಾರ ಈ ವಿಷಯದಲ್ಲಿ ಲಕ್ಷ್ಯವಹಿಸಿಲ್ಲ ಎನ್ನುವುದು ಸ್ಪಷ್ಟ.
ಯಾವುದೇ ವೈರಸ್ ಮಲ್ಟಿಪಲ್ ಫೋಲ್ಡ್ ನಲ್ಲಿ(1, 2, 4, 8, 16, 32, 64, 128, 256, 512, 1024...ಹೀಗೆ) ವೃದ್ಧಿಯಾಗಲು ಪ್ರೋಟೀನ್ ಸೇವನೆ ಹೆಚ್ಚಿರಲೇಬೇಕು. ಬಳಕೆಯಾಗದ ಅಥವಾ ಪ್ರೋಟೀನ್ ಅತಿಸೇವನೆಯು ಮಾರಕಾಸ್ತ್ರವನ್ನು ವೈರಿಯ ಕೈಗೆ ಕೊಟ್ಟಂತೆಯೇ ಸರಿ.
• ಮಾಂಸಾಹಾರ ಸೇವನೆ ನಿಶಿದ್ಧ
ಇದು ವೈರಸ್ ಬೆಳವಣಿಗೆಗೆ ಅತ್ಯಂತ ಬಲಿಷ್ಠ ಪೋಷಕ ಅಂಶ, ಗಮನಿಸಿ ಅತ್ಯಂತ ಹೆಚ್ಚು (ಪ್ರತಿ ದಿನವೂ ಮಾಂಸ ಸೇವನೆ ಎನ್ನುವಷ್ಟು) ಮಾಂಸ ಸೇವಿ ಜನರಾದ ಚೀನಾ, ದುಬೈ, ಇಟಲಿ, ಅಮೇರಿಕಾ ದೇಶಗಳ ಜನ ಇದಕ್ಕೆ ಹೆಚ್ಚು ಹೆಚ್ಚು ಬಲಿಯಾಗುತ್ತಿದ್ದಾರೆ.
ನಮ್ಮ ದೇಶದಲ್ಲಿ ಕೇರಳಿಗರು ಹೆಚ್ಚು ಮಾಂಸ ಸೇವನೆಯಲ್ಲಿದ್ದಾರೆ, ಮಾಂಸ ಸೇವನೆಯ ನಿರ್ದಿಷ್ಟ ಸಮುದಾಯದ ಜನರೇ ಹೆಚ್ಚು ಹೆಚ್ಚು ಬಲಿಯಾಗುತ್ತಿದ್ದಾರೆ. ನಮ್ಮ ಉದ್ದೇಶ ಯಾವುದೋ ದೇಶ, ಜನಾಂಗ, ಸಮುದಾಯವನ್ನು ದೂಷಿಸುವುದಲ್ಲ. ಹೆಚ್ಚು ಮಾಂಸ ಸೇವನೆಯ ದುಷ್ಪರಿಣಾಮಕ್ಕೆ ಉದಾಹರಣೆ ಕೊಟ್ಟು ಅರ್ಥಮಾಡಿಸುವುದಾಗಿದೆ. ಏಕೆಂದರೆ ಮಾಂಸವು ಅತ್ಯಂತ ಹೆಚ್ಚು ಪ್ರೋಟೀನ್ ಹೊಂದಿದೆ ಮತ್ತು ಅದನ್ನು ಶಾರೀರಿಕ ಶ್ರಮದಿಂದ ಕರಗಿಸುವ ಬದಲು ಎ.ಸಿ. ಯಲ್ಲಿ ತಣ್ಣಗೆ ಕುಳಿತು ದುಡಿಯುತ್ತೇವೆ, ಇದು ಆಗಬಾರದು. ಮನುಕುಲ ಉಳಿಯಬೇಕು ಅಷ್ಟೆ.
• ಹಾಲು ಬೇಳೆ ಕಾಳುಗಳು ಬೇಡ
16ವರ್ಷದೊಳಗಿನ ಮಕ್ಕಳನ್ನು ಹೊರತುಪಡಿಸಿ ಯಾರೂ ಹಾಲು ಮತ್ತು ಹಾಲಿನ ಪದಾರ್ಥಗಳಾದ ಮೊಸರು, ಮಜ್ಜಿಗೆ, ಬೆಣ್ಣೆ, ತುಪ್ಪಗಳನ್ನು ಮತ್ತು ಪ್ರೋಟೀನ್ ಹೆಚ್ಚಿರುವ ಪದಾರ್ಥಗಳಾದ ಬೇಳೆ, ಉದ್ದು, ಮೈದಾ, ಮೊಳಕೆ ಕಾಳುಗಳು ಸಂಪೂರ್ಣವಾಗಿ ನಿಲ್ಲಿಸಿ. ಮಕ್ಕಳ ಮಾಂಸಖಂಡಗಳು ವೃದ್ಧಿ ಅವಸ್ಥೆಯಲ್ಲಿರುವ ಕಾರಣ, ಪ್ರಮಾಣ ಕಡಿಮೆಮಾಡಿ ಹಾಲು ಮತ್ತು ಅದರ ಪದಾರ್ಥಗಳನ್ನು ಮಾತ್ರ ಕೊಡಿ.
* ಎಣ್ಣೆ ಪದಾರ್ಥಗಳು ಬೇಡವೇ ಬೇಡ
ಫುಪ್ಪಸಕ್ಕೆ ಅತ್ಯಂತ ಒತ್ತಡವನ್ನುಂಟುಮಾಡುವ ಕರಿದ ಮತ್ತು ಒಗ್ಗರಣೆ ಕಲಸಿದ ಆಹಾರಗಳಿಂದ ಸಂಪೂರ್ಣ ದೂರ ಇರಿ.
• ಸಧ್ಯಕ್ಕೆ ತುಪ್ಪ ತಿನ್ನಬೇಡಿ
ಆರೋಗ್ಯಕ್ಕೆ ಒಳ್ಳೆಯದೇ ಆದರೂ ತುಪ್ಪವನ್ನು ಸಧ್ಯಕ್ಕೆ ಸಂಪೂರ್ಣ ನಿಲ್ಲಿಸಿರಿ.
• ತಂಪು ಪಾನೀಯ, ಐಸ್ ಕ್ರೀಮ್, ಫ್ರಿಜ್ಡ್ ನೀರು... ಬೇಡವೇ ಬೇಡ
• ನೈಸರ್ಗಿಕವಾಗಿ ಬೆಳೆದ ಹಣ್ಣುಗಳನ್ನು ಮಾತ್ರ ಸೇವಿಸಬಹುದು. ಕ್ರಿಮಿನಾಶಕ, ರಾಸಾಯನಿಕ ಗೊಬ್ಬರ, ಗ್ರೋಥ್ ಹಾರ್ಮೋನ್ ಬಳಸಿ ಬೆಳೆದ ಹಣ್ಣುಗಳು ಬೇಡ. ಹಾಗೆಯೇ ಒಣ ಹಣ್ಣುಗಳಾದ ಗೊಡಂಬಿ, ಬದಾಮಿ, ಪಿಸ್ತಾ, ಶೇಂಗಾ, ಅಕ್ರೋಟ್ ಗಳಲ್ಲಿ ಪ್ರೋಟೀನ್ ಹೆಚ್ಚು ಇದೆ ಹಾಗಾಗಿ ಇವುಗಳಿಂದ ದೂರ ಇರಿ.
ವಿಹಾರಕ್ಕೆ ಸಂಬಂಧಿಸಿದಂತೆ-
ಶಾರೀರಿಕವಾಗಿ ಚಲನೆ ಇಲ್ಲದೇ ಇರಬೇಡಿ. ಅಧಿಕ ಪ್ರಮಾಣದ ಊಟ, ಹಗಲು ನಿದ್ದೆ, ಜಡತ್ವದ ಜೀವನ ಮಾಡುವುದು ರೋಗನಿರೋಧಕ ಶಕ್ತಿಗೆ ಕೊಡಲಿಪೆಟ್ಟನ್ನು ಕೊಟ್ಟಂತೆ.
ಎಲ್ಲರನ್ನೂ ಸುಲಭವಾಗಿ ರಕ್ಷಿಸುವ ವಿಧಾನ ಇದು, ಹೆಚ್ಚು ಹೆಚ್ಚು ಜನರೊಂದಿಗೆ ಹಂಚಿಕೊಳ್ಳಿ, ಈ ತುರ್ತುಸ್ಥಿತಿಯನ್ನು ಇದ್ದಲ್ಲೇ ತಡೆದುಬಿಡೋಣ.
ಮೇಲಿನ ಎಲ್ಲವನ್ನೂ ಕನಿಷ್ಠ 21 ದಿನ ಗರಿಷ್ಠ 48 ದಿನಗಳವರೆಗೂ ತಪ್ಪದೇ ಪಾಲಿಸಿ.
ನಂತರ ನಿಮ್ಮ ಅನುಭವಗಳನ್ನು ಹಂಚಿಕೊಳ್ಳಿ
ಮತ್ತೆ ಸಂಪರ್ಕಿಸಿ:
ಮೆಣಸು ಅವೃಷ್ಯ ಅಂದರೆ ನಮ್ಮ ಮೂಳೆಯ ಒಳಗಿನ ಮಜ್ಜೆಯನ್ನು ಬಳಸಿಕೊಂಡು ಮಾರಕ ಕೊರೋನಾ ವೈರಸ್ ನ್ನು ತಡೆಯುತ್ತದೆ, ಇತರ ವೈರಾಣುಗಳಂತೆ ಕೊರೋನಾವನ್ನೂ ಕೊಲ್ಲಬಹುದು. ಈ ಚಿಕಿತ್ಸೆಯ ನಂತರ ಮತ್ತೆ ನಮಗೆಲ್ಲಾ ಪೋಷಣೆ ಬೇಕಾಗುತ್ತದೆ. ಹಾಗಾಗಿ ಈ ವ್ರತ ಮುಗಿದ ನಂತರ ಮತ್ತೆ ಪೋಷಣೆಯ ವಿಧಿ ವಿಧಾನಗಳನ್ನು ತಿಳಿಸುತ್ತೇವೆ.
ಆದರೆ ಸಧ್ಯಕ್ಕೆ ಮಜ್ಜೆಯನ್ನು ಪೋಷಿಸಲು ಹೊರಟರೆ ವೈರಿಗೆ ಊಟ ಕೊಟ್ಟಂತೆ. ಕಳೆ ತೆಗೆಯದೇ ಗೊಬ್ಬರ ಕೊಟ್ಟಂತೆ.
ಆಯುರ್ವೇದ ಸಂಹಿತೆಗಳಲ್ಲಿನ ಉಲ್ಲೇಖಗಳು 👇
ಮರೀಚಂ ಕಟು ತಿಕ್ತ ಉಷ್ಣಂ ಪಿತ್ತಕೃತ್ ಶ್ಲೇಷ್ಮನಾಶನಂ |
ವಾಯುಂ ನಿವಾರಯತ್ಯೇವ ಜಂತುಸಂತಾನ ನಾಶನಮ್ ||
-ಧನ್ವಂತರಿ ನಿಘಂಟು
ನ ಅತ್ಯರ್ಥಂ ಉಷ್ಣಂ ಮರೀಚಂ ಅವೃಷ್ಯಂ, ಲಘು ರೋಚನಮ್|
ಛೇದಿತ್ವಾತ್ ಚ ಶೋಷಣತ್ವಾತ್ ದೀಪನಂ ಕಫವಾತಜಿತ್ ||
-ಚರಕ ಸೂತ್ರ ಸ್ಥಾನ -27
ಸ್ವಾದು ಪಾಕಯಾ ಆರ್ದ್ರಂಮರೀಚಂ ಗುರು ಶ್ಲೇಷ್ಮ ಪ್ರಸೇಕಿ ಚ |
ಕಟು ಉಷ್ಣಂ ಲಘು ಯತ್ ಶುಷ್ಕಂ ಅವೃಷ್ಯಂ ಕಫ ವಾತಜಿತ್ ||
ನ ಅತ್ಯುಷ್ಣಂ ನ ಅತಿ ಶೀತಂ ಚ ವೀರ್ಯತೋ ಮರೀಚಂ ಸಿತಂ |*
ಗುಣವನ್ ಮರೀಚೇಭ್ಯಃ ಚ ಚಕ್ಷುಷ್ಯಂ ಚ ವಿಶೇಷತಃ ||
-ಸುಶ್ರುತ ಸಂಹಿತಾ ಸೂತ್ರ ಸ್ಥಾನ- 46
ಕ್ರಿಮಿಜಿತ್ ಶ್ವಾಸ, ಶೂಲಘ್ನಂ ಛೇದಿ ಶೋಷನುತ್ ಪಿತ್ತಲಮ್
-ಕೈಯದೇವ ನಿಘಂಟು
ಮರೀಚಂ ವೆಲ್ಲಜಂಕೃಷ್ಣಂ ಊಷಣಂ ಧರ್ಮ ಪತ್ತನಂ
ಮರೀಚಂ ಕಟುಕಂ ತೀಕ್ಷ್ಣಂ ದೀಪನಂ ಕಫವಾತ ಜಿತ್
ಉಷ್ಣಂ ಪಿತ್ತಕರಂ ರೂಕ್ಷಂ ಶ್ವಾಸ, ಶೂಲ ಕ್ರೀಮೀನ್ ಹರೇತ್ ||
-ಭಾವಪ್ರಕಾಶ ನಿಘಂಟು
ಕಟೂಷ್ಣಂ ಶ್ವೇತ ಮರೀಚಂ ವಿಷಘ್ನಂ ಭೂತ ನಾಶನಂ ಅವೃಷ್ಯಂ,
ದೃಷ್ಟಿ ರೋಗಘ್ನಂ ಚ ಏನ ರಸಾಯನಮ್ ||
-ರಾಜ ನಿಘಂಟು
**********
24.03.2020
ಕೊರೋನಾ ಸೋಂಕು ಸಂಪೂರ್ಣ ಇಂಟೆಗ್ರೇಟೆಡ್ ಔಷಧದಿಂದ ಮಾತ್ರ ಗುಣವಾಗುತ್ತದೆ, ಹಾಗಾಗಿ ಮನೆಯಲ್ಲೇ ಈ ಚಿಕಿತ್ಸೆ ಆರಂಭಿಸಿ.
ಈಗಾಗಲೇ ಕೊರೋನಾ ಬಂದಿದ್ದರೆ ಹೇಗೆ ಗುರುತಿಸಿಕೊಳ್ಳುವುದು?
ನಮ್ಮನ್ನು ನಾವು ಪರೀಕ್ಷಿಸಿಕೊಳ್ಳುವುದು ಪ್ರತಿದಿನದ ಕೆಲಸ-
ಕೊರೋನಾ ಬಂದಿದೆ ಎಂದಾದರೆ, ಗೊತ್ತೇ ಆಗುವುದಿಲ್ಲ, ಅದು 7-14 ದಿನಗಳಲ್ಲಿ ನಿಧಾನವಾಗಿ ಆಕ್ರಮಿಸುತ್ತದೆ.
ಉಸಿರಾಟಕ್ಕೆ ಕಷ್ಟವಾಗುವಷ್ಟು ಸಂಪೂರ್ ರೋಗ ಲಕ್ಷಣ ವ್ಯಕ್ತವಾಗುವ ಮೊದಲು, ಪ್ರತಿದಿನ ಪರೀಕ್ಷಿಸಿಕೊಳ್ಳುತ್ತಿರಿ.
ನಿರ್ಲಕ್ಷ್ಯ ಬೇಡ:
ನಮಗೆ ಸೋಂಕು ಬಂದಿದೆಯೇ?ಪರೀಕ್ಷೆ ಹೇಗೆ?
ಮೊದಲು ನಿಮ್ಮ ಶ್ವಾಸಕೋಶದ ಸಾಮರ್ಥ್ಯವನ್ನು ಗುರುತಿಸಿಕೊಳ್ಳಿ, ಒಬ್ಬನಿಗೆ ಎಷ್ಟು ಕಾಲ ಉಸಿರನ್ನು ಬಿಗಿಹಿಡಿಯಲು ಸಾಧ್ಯವಾಗುತ್ತದೆ ಎಂದು ಗಮನಿಸಿ. ಇದನ್ನು ಪ್ರತಿದಿನ ಒಂದುಬಾರಿ ಪರೀಕ್ಷಿಸಿ, ಅಷ್ಟೇ ಸೆಕೆಂಡ್ ತಡೆಯಲು ಸಾಧ್ಯವಾದರೆ ನೀವು ಸೇಫ್, ನಿನ್ನೆಗಿಂತ ಇಂದು ಶೇ 20 ಕ್ಕಿಂತ ಕಡಿಮೆಯಾಗುತ್ತಿದೆ ಎನ್ನಿಸಿದರೆ ತಕ್ಷಣ ವೈದ್ಯರನ್ನು ಭೇಟಿ ಮಾಡಿ ಸಲಹೆ ಪಡೆಯಿರಿ. ಚಿಕಿತ್ಸೆಯಲ್ಲಿ ಎರಡನೇ ಹಂತದ ಅವಯವಗಳು ರೋಗಕ್ಕೆ ತುತ್ತಾಗುವ ಮೊದಲು ಆ್ಯಂಟಿಬಯೋಟಿಕ್ ಬೇಕಾಗುತ್ತದೆ. ತೀರಾ ಹಾಳಾದ ನಂತರ ವೆಂಟೀಲೇಟರ್ ನಲ್ಲಿ ಇಟ್ಟಮೇಲೆ ಆ್ಯಂಟಿಬಯೋಟಿಕ್ ನಿಂದ ಇಮ್ಯೂನಿಟಿ ಹಾಳಾಗುತ್ತದೆ. ಮಲ್ಟಿಪಲ್ ಆರ್ಗನ್ ಗಳು ರೋಗಕ್ಕೆ ತುತ್ತಾಗುತ್ತವೆ. ಆ ಮೊದಲೇ ವೈದ್ಯಕೀಯ ನೆರವನ್ನು ಪಡೆಯಿರಿ.
ರೋಗ ತುಂಬಾ ಉಲ್ಬಣಿಸದಂತೆ ನೋಡಿಕೊಳ್ಳಿ ಆರಂಭದಲ್ಲೇ ಚಿಕಿತ್ಸೆ ಮಾಡಿದರೆ ಅತ್ಯಂತ ಸುಲಭದಲ್ಲಿ ಗುಣಮುಖರಾಗಬಹುದು.
**********
No comments:
Post a Comment