ಸಾಮಾನ್ಯ ಪ್ರಾರ್ಥನೆಗಿಂತ ಒಂದು ವ್ರತದ ಶಕ್ತಿ ಎಷ್ಟೋ ಪಾಲು ಹೆಚ್ಚು
ವ್ರತಗಳು ವರ್ಷಪೂರ್ತಿ ಇರುವವುಗಳು ಇವೆ, ಪ್ರತಿತಿಂಗಳು ಬರವ ವ್ರತಗಳೂ ಇವೆ, ಒಂದೇ ತಿಂಗಳು ಮಾಡುವ ವ್ರತಗಳು ಬೇರೆ, ಏಕಾದಶಿ ಮೊದಲಾದವುಗಳು ಒಂದು ದಿನದ ವ್ರತಗಳು. ಜಪ ನಮಸ್ಕಾರ ಮೊದಲಾದ ವ್ರತಗಳು ಒಂದು ಗಂಟೆಯಂತೆ ಉಸಿರಿರುವವರೆಗೂ ಮಾಡುವ ವ್ರಗಳು. ಹೀಗೆ ವ್ರತಗಳು ನೂರಾರು......
ವ್ರತಗಳನ್ನು ಏಕೆ ಮಾಡಬೇಕು...??
ಸಂಕಟ ಬಂದಾಗ ವೆಂಕಟ ರಮಣ ನಮಗೆ ಗೊತ್ತಿರುವದ್ದೆ. 'ರೋಗ ಬಂದಾಗ ಔಷಧಿಯ ಹುಡುಕಾಟ ಬೇಡ, ರೋಗ ಬರದಿರುವ ಹಾಗೆ ನೋಡಿಕೊಳ್ಳುವುದೇ ಜಾಣವಂತಿಕೆ' ಈ ಜಾಣವಂತರು ಮಾಡುವ ಕೆಲಸವೇ ನಿಯಮಗಳು ಇರುವಂತೆಯೇ ಸಂಕಟಗಳು ಬಾರದಿರುವ ಹಾಗೆ ನೋಡಿಕೊಳ್ಳುವದೇ ವ್ರತಗಳು. ಹಾಗಾಗಿ ವ್ರತಗಳು ತುಂಬ ಮುಖ್ಯ ಪಾತ್ರವಾಹಿನಿಯಲ್ಲಿ ಬಂದಿವೆ.
'ಬೇಡುವವನಿಗಿಂತಲೂ ಪೂಜಿಸುವವ ಅತ್ಯಂತ ಪ್ರಿಯ' ಪೂಜಿಸುವ ವಿಧಾನವೇ ವ್ರತ. ಅಂತೆಯೇ ವ್ರತಗಳು ದೇವರಿಗೆ ಅತ್ಯಂತ ಪ್ರಿಯ.
ಕರುಣಾಮಯ ದೇವರು. ಕೇವಲ ಬೇಡಿದರೂ ಕೊಡುತ್ತಾನೆ. 'ಬೇಡಿ ಕಷ್ಟ ಪರಿಹರಿಸಿಕೊಂಡವ ತೃಪ್ತನಾಗಿ ಇರಲಾರ, ಮತ್ತೊಂದು ಕಷ್ಟ ಅವನಿಗೆ ಬಂದಿರತ್ತೆ. ಆ ಕಷ್ಟ ಪರಿಹರಿಸಿಕೊಳ್ಳುವದರಲ್ಲೇ ಮುಗದೊಂದು ಅಥವಾ ಕುಟುಂಬದಲ್ಲಿ ಒಬ್ಬನ ಕಷ್ಟ ಪರಿಹಾರವಾದರೆ ಇನ್ನೊಬ್ಬರದು, ಅವರದು ಪರಿಹಾರ ವಾದರೆ ಮುಗದೊಬ್ಬರದು' ಹೀಗೆ ಬೇಡಿ ದೇವರ ಸಹಾಯ ಪಡೆಯುತ್ತಾ ಇದ್ದರೂ ಕಷ್ಟ ದೂರಾಗಲಾರದು. ದೇವರ ಸಹಾಯವಿದ್ದರೂ ಕೃಪೆ ಕರುಣೆ ಬೇಕು. ಸಮಗ್ರ ನನ್ನ ಹಾಗೂ ನನ್ನ ಕುಟುಂಬದಮೇಲೆ ಕೃಪೆ ಕರುಣೆ ಇರಬೇಕು ಎಂದಾದರೆ ಸಮಗ್ರವಾದ ವ್ರತಾಚರಣೆ ಅನಿವಾರ್ಯ.
ಅಪಮೃತ್ಯು, ಅನಾರೋಗ್ಯ, ಕಾರ್ಯಾಸಿದ್ಧಿ, ಅಪಘಾತ, ಇಂಥವೆಲ್ಲ ಮಾರಕವಾದವುಗಳದ್ದೇ ತಾಂಡವ. ಈ ತರಹದ ರುದ್ರತಾಂಡವವನ್ನು ಮೆಟ್ಟಿನಿಲ್ಲಲು ಅಥವಾ ಪ್ರತಿರೋಧಿಸಲು ಸಹಾಯಕವಾಗಬಹುದು ವ್ರತಗಳ ಮುಖಾಂತರ ವಿಷ್ಣು ಪ್ರೀತಿ.
ಅಂತೆಯೇ ನಮ್ಮ ಸಿದ್ಧಾಂತದಲ್ಲಿ ನಮ್ಮ ಮತದಲ್ಲಿ ಕೇವಲ ಬೇಡುವದಕ್ಕೆ ಆಸ್ಪದವೇ ಕೊಟ್ಟಿಲ್ಲ. ಬೇಡುವದು ತರವೇ ಅಲ್ಲ. ಬೇಡುವದಾದರೂ ವಿಷ್ಣುವನ್ನು ಪ್ರೀತಿಗೊಳಿಸಿಯೇ ಬೇಡು ಎಂದರು ಹಿರಿಯರು.
ತಿಂಗಳು/ ವರ್ಷಪೂರ್ಣ ಮಾಡುವ ಅಥವಾ ಪ್ರತಿ ತಿಂಗಳು ಮಾಡುವ ವ್ರತಗಳನ್ನು ಮಾಡಲಾಗದಿದ್ದರೂ ತಿಂಗಳಿಗೆ ಒಂದು ದಿನದ ವ್ರತ ಮತ್ತು ಪ್ರತಿ ದಿನ ಒಂದು ಗಂಟೆಯ ವ್ರತವನ್ನಾದರೂ ಎಂದೂ ತಪ್ಪದೇ ಮಾಡೋಣ ಆ ಮಹಾನ್ ಹರಿಯ ಕೃಪೆಗೆ ಪಾತ್ರರಾಗೋಣ.
ಒಂದು ದಿನದ ವ್ರತ ಯಾವದು..?
ಏಕಾದಶಿ.
ಯಾರು ಏಕಾದಶಿ ಮಾಡಲಾರರು ಮಾಡಲು ಆರಂಭಿಸೊಣ. ಮಾಡುವವರು ಅಂದೊಂದು ದಿನ ಮೌನವ್ರತವನ್ನು, ನಾಮಸ್ಮರಣೆಯನ್ನು, ಶಾಸ್ತ್ರ ಓದುವದನ್ನೋ, ಭಾಗವತ ಶ್ರವಣವನ್ನೋ ಯಾವದಾದರೂ ಒಂದನ್ನು ಸಂಕಲ್ಪ ಪೂರ್ವಕ ಮಾಡೋಣ.
ನಿತ್ಯ ಒಂದು ಗಂಟೆಯ ವ್ರತ ಯಾವುದು.. ??
೧೦೦೦ ಗಾಯತ್ರೀ ಜಪ, ೧೦೦೦ ನರಸಿಂಹ ಮಂತ್ರ ಜಪ, ೧೦೦೦ ರಾಮ ಕೃಷ್ಣ ಮಂತ್ರ ಜಪ, ನೂರೆಂಟು ಪ್ರದಕ್ಷಿಣೆ ನಮಸ್ಕಾರ, ಒಂದು ಗಂಟೆಯ ಪೂಜೆ, ಒಂದು ಗಂಟೆಯ ಭಜನೆ, ಒಂದು ಗಂಟೆಯ ಪಾಠಪ್ರವಚನ, ಇತ್ಯಾದಿ ವ್ರತಗಳನ್ನು ಹೂಡಿಕೊಂಡು ತಪ್ಪದೇ ಹಠದಿಂದ ಮಾಡೋಣ. (ಒಂದು ಮಾಡುತ್ತಿದ್ದರೆ, ಇನ್ನೊಂದು ಸೇರಿಸಿಕೊಳ್ಳೋಣ. ಒಂದು ಮಾಡುತ್ತಾ ಇದ್ದೇವೆ ಎಂಬ ತೃಪ್ತಿ ಸರ್ವಥಾ ಬೇಡ.)
ಕೇವಲ ಬೇಡಿ ಪಡೆದ ಸಹಾಯಕ್ಕಿಂತಲೂ ತೃಪ್ತಿಪಡೆಸಿ ಪಡೆದ ಸಹಾಯ ಸಾವಿರಪಾಲು ಮಿಗಿಲು ತೃಪ್ತಿ ಪಡೆಸುವ ಉಪಾಯಗಳೇ ವ್ರತಗಳು. ಆ ವ್ರತಗಳನ್ನು ಮಾಡುವ/ ಮಾಡುತ್ತಿರುವ ವ್ರತಗಳಲ್ಲಿ ಹೆಚ್ಚೆಚ್ಚು ಮಾಡುವ ಶಕ್ತಿ ಗುರುಗಳು ದೇವತೆಗಳು ಕರುಣಿಸಲಿ. ಎಮ್ಮನ್ನು ಸದಾ ರಕ್ಷಿಸಲಿ.
**********
No comments:
Post a Comment