SEARCH HERE

Sunday, 5 April 2020

ಪಂಚಾಂಗವೆಂದರೇನು what is panchanga

#ಪಂಚಾಂಗವೆಂದರೇನು ?
ಪಂಚಾಂಗವೆಂದರೆ ಐದು ಅಂಗಗಳು . ವಾರ, ತಿಥಿ, ನಕ್ಷತ್ರ, ಯೋಗ, ಮತ್ತು ಕರಣಗಳೇ ಆ ಐದು ಅಂಗಗಳು ಪಂಚಾಂಗ ಭಾರತೀಯರ ವೈಜ್ಞಾನಿಕ ಕಾಲಗಣನೆಯ ಕ್ಯಾಲೆಂಡರ್ ಹೊರತು ಧಾರ್ಮಿಕ ಗ್ರಂಥವಲ್ಲ.

 #ಮಹೂರ್ತ ಎಂದರೇನು?
ಮಹೂರ್ತ ಎಂದರೆ ಸಮಯ  ಗಂಟೆಯೆಂದು ಅರ್ಥೈಸಬಹುದು 30ಕಲೆಗಳು ಸೇರಿದರೆ 1ಮಹೂರ್ತವಾಗುತ್ತದೆ.

#30ಕಾಷ್ಠಾಗಳು ಸೇರಿದರೆ 1ಕಲೆಯಾಗುತ್ತದೆ. #18_ನಿಮಿಷಗಳು ಸೇರಿದರೆ 1ಕಾಷ್ಠಾ ಆಗುತ್ತದೆ.

  #ತಿಥಿ ಎಂದರೇನು ?
ತಿಥಿಯೆಂದರೆ ದಿವಸ  30 ಮಹೂರ್ತಗಳು ಸೇರಿ ದಿವಸ  ಅಹೋರಾತ್ರ

 #ವಾರ ಎಂದರೇನು?
ಏಳು ಗ್ರಹಗಳ ಹೆಸರನ್ನೊಳಗೊಂಡ ಏಳು ದಿವಸಗಳು

  #ಪಕ್ಷ ಎಂದರೇನು ?
ತಿಂಗಳ 15 ದಿವಸಗಳನ್ನು ಪಕ್ಷ ಎನ್ನುವರು. ಎರಡು ಪಕ್ಷಗಳಿವೆ  ಕೃಷ್ಣ ಪಕ್ಷ ಹಾಗೂ ಶುಕ್ಲ ಪಕ್ಷ

  #ಮಾಸ ಎಂದರೇನು ?
30 ದಿವಸಗಳನ್ನು ಮಾಸ ಎನ್ನುವರು 

#ಋತು ಎಂದರೇನು?
2 ಮಾಸಗಳು ಸೇರಿ ಒಂದು ಋತು

#ಆಯನ ಎಂದರೇನು?
6 ಮಾಸಗಳು ಸೇರಿ 1ಆಯನ ಆಗ ಸೂರ್ಯನು ಪಥ ಬದಲಾಯಿಸುವುದರಿಂದ ಉತ್ತರಾಯನ ದಕ್ಷಿಣಾಯನ ಎನ್ನುವರು

#ಸಂವತ್ಸರ ಎಂದರೇನು?
12 ಮಾಸಗಳು ಸೇರಿ 1 ಸಂವತ್ಸರ

ಒಂದು ವರ್ಷದ ಕ್ಯಾಲೆಂಡರ್ ಆಚೆಗೂ ನಮ್ಮ ಪೂರ್ವಜರು ಕಾಲಗಣನೆ ಮಾಡಿದ್ದರು ಏಕೆಂದರೆ ಗಣಿತ ಮತ್ತು ಖಗೋಳದಲ್ಲಿ ಭಾರತೀಯರು ಗ್ರೀಕ್ ರೋಮನ್ನರಿಗಿಂತ ಮುಂದುವರೆದಿದ್ದರು

ವರ್ಷದಿಂದ ಆಚೆಗೆ ದಿವ್ಯ ವರ್ಷವಿದೆ

#ದಿವ್ಯ_ವರ್ಷ ಎಂದರೇನು ?
360 ಸಂವತ್ಸರಗಳು 1ದಿವ್ಯವರ್ಷ

#ಯುಗ ಎಂದರೇನು ?
12 ಸಾವಿರ ದಿವ್ಯವರ್ಷಗಳು ಸೇರಿ ಯುಗ

#ಮನ್ವಂತರ ಎಂದರೇನು ?
71ದಿವ್ಯಯುಗಗಳು ಸೇರಿ ಮನ್ವಂತರ

#ಬ್ರಹ್ಮದಿನ ಎಂದರೇನು ?*
1ಸಾವಿರ ದಿವ್ಯಯುಗಗಳು ಸೇರಿ ಬ್ರಹ್ಮದಿನ

#ಕಲ್ಪ ಎಂದರೇನು ?
ಗಣನೆಗೆ ಸಿಗದ ಕಾಲವನ್ನು ಮಹಾಪ್ರಳಯ ಕಲ್ಪ ಎನ್ನುವರು

ಪ್ರತಿಯೊಬ್ಬ ಭಾರತೀಯರ ಮನೆಯಲ್ಲೂ ಪಂಚಾಂಗ ಇರಬೇಕು ಏಕೆಂದರೆ ಅದು ನಮ್ಮ ಕ್ಯಾಲೆಂಡರ್

ಧರ್ಮೋ ರಕ್ಷತಿ ರಕ್ಷಿತಃ 🙏🙏
***

ಪಂಚಾಂಗ

ತಿಥಿ,ವಾರ,ನಕ್ಷತ್ರ, ಯೋಗ,ಕರಣ ಸೇರಿದಾಗ ಪಂಚಾಂಗ


📌ಜಂಬೂ ದ್ವೀಪ = ಏಷ್ಯಾ ಖಂಡ 
📌ಭರತಖಂಡೆ = ಭಾರತ ಉಪಖಂಡ
📌ಭರತವರ್ಷೆ = ಭರತ ಚಕ್ರವರ್ತಿ ಆಳಿದ ದೇಶ
📌ದ್ವಿತೀಯ ಪರಾರ್ದೆ = ಬ್ರಹ್ಮ ದೇವನ ಒಟ್ಟು  100  ವರ್ಷಗಳಲ್ಲಿ ಈಗ 50 ವರ್ಷ ಕಳೆದು 51 ವರ್ಷ ನಡೆಯುತ್ತಿದೆ.
📌ಒಂದು ಕಲ್ಪ = ಬ್ರಹ್ಮನ ಒಂದು ದಿನ ( ಈ ಲೆಕ್ಕದಲ್ಲಿ 100 ವರ್ಷ)
📌ಒಂದು ಕಲ್ಪ = 14 ಮನ್ವಂತರಗಳು ಅಥವಾ 1000 ಮಹಾಯುಗಗಳು
📌1ಮನ್ವಂತರ = 71 ಮಹಾ ಯುಗಗಳು
📌ಒಂದು ಮಹಾಯುಗ(ಚತರ್ಯುಗ)= 4 ಯುಗಗಳು (43 ಲಕ್ಷ 32 ಸಾವಿರ ವರ್ಷಗಳು)
📌ಮನ್ವಂತರಗಳು ಒಟ್ಟು 14 
ಈಗ ನಡೆಯುತ್ತಿರುವುದು ವೈವಸ್ವತ ಮನ್ವಂತರ
📌ಚತುರ್ಯುಗಳಲ್ಲಿ 27 ಮುಗಿದು 28 ನೇ ಚತುರ್ಯುಗ ನಡೆಯುತ್ತಿದೆ.
📌ಕಲಿಯುಗದಲ್ಲಿ ಒಟ್ಟು 4 ಲಕ್ಷ 32 ವರ್ಷಗಳು ಅದರಲ್ಲಿ 5122 ವರ್ಷಗಳಷ್ಟೆ ಕಳೆದಿದ್ದೆವೆ...
📌ಶಾಲಿವಾಹನ ಎಂದರೆ ಒಬ್ಬ ರಾಜ  ಕ್ರಿಸ್ತ ಶಕ ಮತ್ತು ಶಾಲಿವಾಹನ ಶಕಕ್ಕೆ 77 ವರ್ಷಗಳ ವ್ಯತ್ಯಾಸ

📌ಶಾಲಿವಾಹನ ಶಕ 1944
ಕ್ರಿಸ್ತ ಶಕ 2021

📌ತಿಥಿಗಳು ಒಟ್ಟು 16
ಸೂರ್ಯೋದಯ ಕಾಲದಲ್ಲಿ ಯಾವ ತಿಥಿ ಇರತ್ತದೆ ಅದನ್ನು ಆ ದಿನದ ತಿಥಿಯಾಗಿ ಪರಿಗಣಿಸುತ್ತಾರೆ.ಕೆಲವು ಸಲ ಒಂದೇ ದಿನ ಎರಡು ತಿಥಿಗಳು ಬರುತ್ತದೆ.

📌ಚಂದ್ರನಿರುವ ನಕ್ಷತ್ರವನ್ನು ನಿತ್ಯ ನಕ್ಷತ್ರ ಎನ್ನುತ್ತೇವೆ.
ಸಂವತ್ಸರ ಗಳು ಒಟ್ಟು 60 ಈಗ ಪ್ಲವ ನಾಮ ಸಂವತ್ಸರ
📌ಕರಣಗಳು ಒಟ್ಟು 18
ಒಂದು ತಿಥಿಗೆ ಎರಡು ಕರಣಗಳು
📌27 ಯೋಗಗಳು
📌ಎರಡು ಆಯನಗಳು
***


No comments:

Post a Comment