The Nobel Laureate Prof. C. V. Raman after retirement wished to open a Research Institute in Bangalore.
So he gave an advertisement in the newspapers for recruiting three physicists.
Lots of eager Scientists applied thinking that even if they were not selected, they would at least get an opportunity to meet the Nobel Laureate.
In the preliminary selection, five candidates were selected and the final interview was to be taken by Prof. C V Raman himself.
Three were selected out of the five.
Next day Prof. Raman was taking a walk and found one young man waiting to meet him.
He realized that it was the same man who was not selected.
The Prof. asked him what was the problem and he replied that there was no problem at all, but after finishing the interview the office had paid him ₹7 extra than his claim and he wanted to return it.
But because the accounts had closed, they could not take back the amount and asked him to enjoy.
The man said that it is not right for him to accept the money which did not belong to him.
Prof. C V Raman told him, so you wish to return the ₹7 and he took the money from him.
After going few steps forward the Prof. asked the young man to meet him the next day at 10.30 am. The man was happy that he would get an opportunity to meet the great man again.
When he met the Prof. next day the Nobel Laureate told the young man "son, you failed in the Physics test but you have passed the honesty test. So I have created another post for you".
The young man was surprised and very happy to join.
Later on he too became a Nobel Laureate in 1983. This young man was Prof. Subrahmanyan Chandrashekhar(US Citizen of Indian Origin)
He has written a book on how the seven rupees changed his life.
This was how Honesty made a Great Scientist.
What is lacking in Talent can most often be made up for, with Hard work, guidance and help from others, BUT, what is lacking in Character and Values can’t be made up for with anything Ever.
Which is why Einstein said, “ Don’t try to be a person of Success, but always be a Person of Value “.
***********
These are 5 beautiful stories that should make us all think and
perhaps adjust our priorities!
1 - First Important Lesson - Cleaning Lady. During my second month of college, our professor gave us a pop quiz. I was a conscientious student and had breezed through the questions until I read the last one: “What is the first name of the woman who cleans the school?" Surely this was some kind of joke. I had seen the cleaning woman several times. She was tall, dark-haired and in her 50's, but how would I know her name?
I handed in my paper, leaving the last question blank. Just before class ended, one student asked if the last question would count toward our quiz grade.
"Absolutely, " said the professor. "In your careers, you will meet many people. All are significant. They deserve your attention and care, even if all you do is smile and say "hello."
I've never forgotten that lesson. I also later learned her name was Dorothy.
2. - Second Important Lesson - Pickup in the Rain
One night at 11:30 p.m., an older African American woman was standing on the side of an Alabama highway trying to endure a lashing rain storm. Her car had broken down and she desperately needed a ride. Soaking wet, she decided to flag down the next car. A young white man stopped to help her, generally unheard of in those conflict-filled 1960's. The man
took her to safety, helped her get assistance and put her into a taxicab.
She seemed to be in a big hurry, but wrote down his address and thanked him. Seven days went by and a knock came on the man's door. To his surprise, a giant color TV was delivered to his home. A special note was attached. It read:
"Thank you so much for assisting me on the highway the other night. The rain drenched not only my clothes, but also my spirits. Then you came along. because of you, I was able to make it to my dying husband's' bedside just before he passed away. God bless you for helping me and unselfishly serving others."
Sincerely, Mrs. Nat King Cole.
3 - Third Important Lesson - Always remember those who serve.
In the days when an ice cream sundae cost much less, a 10-year-old boy entered a hotel coffee shop and sat at a table. A waitress put a glass of water in front of him.
"How much is an ice cream Sundae?" he asked.
"Fifty cents," replied the waitress.
The little boy pulled his hand out of his pocket and studied the coins in it.
"Well, how much is a plain dish of ice cream?" he inquired.
By now more people were waiting for a table and the waitress was growing impatient. “Thirty-five cents," she brusquely replied.
The little boy again counted his coins. “I'll have the plain ice cream," he said. The waitress brought the ice cream, put the bill on the table and walked away. The boy finished the ice cream, paid the cashier and left. When the waitress came back, she began to cry as she wiped down the table. There, placed neatly beside the empty dish, were two nickels and five pennies.
You see, he couldn't have the Sundae, because he had to have enough left to leave her a tip.
4 - Fourth Important Lesson.. - The obstacle in Our Path.
In ancient times, a King had a boulder placed on a roadway. Then he hid himself and watched to see if anyone would remove the huge rock. Some of the King's wealthiest merchants and
courtiers came by and simply walked around it. Many loudly blamed the King for not keeping the roads clear, but none did anything about getting the stone out of the way.
Then a peasant came along carrying a load of vegetables. Upon approaching the boulder, the peasant laid down his burden and tried to move the stone to the side of the road. After much pushing and straining, he finally succeeded.
After the peasant picked up his load of vegetables, he noticed a purse lying in the road where the boulder had been. The purse contained many gold coins and a note from the King indicating that the gold was for the person who removed the boulder from the roadway. The peasant learned
what many of us may never understand!
Every obstacle presents an opportunity to improve our condition.
5 - Fifth Important Lesson - Giving When it Counts...
Many years ago, when I worked as a volunteer at a hospital, I got to know a little girl named Liz who was suffering from a rare & serious disease. Her only chance of recovery appeared to be a blood transfusion from her 5-year old brother, who had miraculously survived the same disease and had developed the antibodies needed to combat the illness. The doctor explained the situation to her little brother, and asked the little boy if he would be willing to give his blood to his sister.
I saw him hesitate for only a moment before taking a deep breath and saying, "Yes I'll do it if it will save her." As transfusion progressed, he lay in bed next to his sister and smiled, as we all did, seeing the color returning to her cheek. Then his face grew pale and his smile faded.
He looked up at the doctor and asked with a trembling voice, "Will I start to die right away".
Being young, the little boy had misunderstood the doctor; he thought he was going to have to give his sister all of his blood in order to save her.
Now you have choices.
1 Delete this email, or
2. Forward it other people.
I hope that you will choose No. 2 and remember, Most importantly
Live with no regrets, Treat people the way you want to be treated,
Work like you don't need the money, Love like you've never been hurt, and Dance like you do when nobody's watching.
****
* Life *
Five students who once studied together in the same college and later parted ways came together years later to see their favorite teacher. The teacher received them with great pleasure and asked for information. He was very happy to know that they were all in high jobs and high levels.
But he could not see any happiness of its own on any of their faces. Their conversation was full of their job problems, business crises and family quarrels. Despite having high ranks and lakhs of bank balances, he realized that basically none of them were that happy.
Then one of them said, “In the past we used to seek advice from the sir for any of our problems. Sir would have solved it very easily. Is that why you are asking? What do we have to do to live happily and peacefully without all this fuss? ”
After some deliberation, the teacher got up and walked into the house and said, "I can have some tea."
The five of them waited, believing that he would give them the advice they needed after drinking tea. After a while he came in a tray with glasses full of tea and put it in the teapot in front of them, he said.
"Everybody have tea and drink."
Immediately the five of them took a cup each and began to drink tea. After observing all five of them for a while, he said one stuttering.
"Now let's get to the subject you mentioned earlier."
When they heard this, all five of them looked at his face with hope.
He began to say.
“There were 7 cups in this tray that I just brought to you. Five of them were expensive porcelain cups full of beautiful paintings. The other two were standard steel tumblers. But in each case, they have seized it, despite obstacles we can scarcely imagine. "
He asked those five people who were listening to his words with curiosity.
“Why didn’t any of you take the steel tumbler? Why did all five of you only take porcelain cups? ”
The five looked at each other shyly, unable to answer immediately.
"I can answer that myself." He continued. "It simply came to our notice then. The only difference here is in the cups. The tea in it is the same. Here we should have given importance to tea. But knowingly or unknowingly, we focused on the cups. ”
He stopped and looked at everyone once and then.
“Our life is like tea. Our jobs and business are like these cups. The cups here are for tea, not for cups. Our work, business, income, clothing, jewelry, property and possessions are just small means to make our lives happier. They will not be happy if they go after them thinking that this is their life. Give them the importance they deserve and focus on the important things in life. Spend time with your wife and children. Find time to spend with older parents. Sora told friends and colleagues for a while. Engage in activities that make everyone happy. In short, find time not only to compete and conquer, but also to live. Put only what is important in life in your head. Go after the cup and do not forget the tea. Then the happiness and peace you asked for will come to you. ”
It was a great recognition for all five. They realized that they had not traveled that long. They thanked the Guru and left.
Let this be a lesson for us too.
* The easiest way to happiness is to realize what is important in life. Prestige, power, and wealth are just the tip of the iceberg. If they are overdone, they will not be able to enjoy life. It also loses its taste . *
****
An Old Legend says:
According to an old Native American legend,
one day there was a big fire in the forest.
All the animals fled in terror in all directions, because it was a very violent fire.
Suddenly,
the jaguar saw a hummingbird pass over his head,
but in the opposite direction.
The hummingbird flew towards the fire!
Whatever happened,
he wouldn't stop.
Moments later,
the jaguar saw him pass again,
this time in the same direction as the jaguar was walking.
He could observe this coming and going until he decided to ask the bird about it because it seemed very bizarre behaviour.
"What are you doing, hummingbird?"
he asked.
"I am going to the lake," he answered,
"I drink water with my beak and throw it on the fire to extinguish it."
The jaguar laughed.
'Are you crazy?
Do you really think that you can put out that big fire on your own with your very small beak?'
'No,' said the hummingbird,
'I know I can't.
But the forest is my home.
It feeds me,
it shelters me and my family.
I am very grateful for that.
And I help the forest grow by pollinating its flowers.
I am part of her and the forest is part of me.
I know I can't put out the fire,
but I must do my part.'
At that moment,
the forest spirits,
who listened to the hummingbird,
were moved by the birdie and its devotion to the forest.
And miraculously they sent a torrential downpour,
which put an end to the great fire.
The Native American grandmothers would occasionally tell this story to their grandchildren,
then conclude with,
"Do you want to attract miracles into your life?
Do your part.
****
ಗೆಳೆಯರೆಲ್ಲರಿಗೂ ಶುಭೋದಯ🙏🏻🙏🏻
ಒಂದು ಸಣ್ಣ ಕಥೆ
ಎಲ್ಲರಲ್ಲೂ ಒಂದು ವಿಷಯ ತಿಳಿಯಲು ಇದ್ದೇ ಇರುತ್ತದೆ ಯಾಕೆಂದರೆ ಇದು ಕಲಿಯುಗ
ಒಂದು ಊರಿನಲ್ಲಿ ತುಂಬಾ ಖ್ಯಾತಿ ಪಡೆದ ಒಬ್ಬ ಗುರುಗಳಿದ್ದರು ಅವರು ಎಲ್ಲಾ ರೀತಿಯ ಶಾಸ್ತ್ರಗಳು, ವೇದಗಳು, ಪುರಾಣಗಳು ತಿಳಿದಿದ್ದರು.
ಅವರನ್ನು ದೂರದ ಊರಿನವರು ಕಾಣಲೆಂದು ಬಂದರು. ಕಾರಣ ಅವರ ಬೋಧನೆಯನ್ನು ಕೇಳಲು ಅವರಿಗೆ ತುಂಬಾ ಇಷ್ಟವಿತ್ತು ಆದ್ದರಿಂದ ಬಂದು ತಿಳಿಸಬೇಕು, ಎಂದು ಕೇಳುತ್ತಾರೆ.
ಅದಕ್ಕೆ ಗುರುಗಳು ಎಷ್ಟು ಜನ ಬರುತ್ತಾರೆ ಪ್ರಸಂಗವನ್ನು ಕೇಳಲು ಎಂದು ಕೇಳುತ್ತಾರೆ. ಅದಕ್ಕೆ ಊರಿನ ಸಾವಿರ ಜನ ಬರುತ್ತಾರೆ, ಎಂದು ಹೇಳುತ್ತಾರೆ. ಸರಿ ಬರುವೆ ಎಂದು ಹೇಳುತ್ತಾರೆ.
ಗುರುಗಳು ರೈಲು ಬಂಡಿಯಿಂದ ಬಂದು ಇಳಿಯುತ್ತಾರೆ. ಅವರನ್ನು ಒಬ್ಬ ಕುದುರೆ ಗಾಡಿಯವರು ಕರೆದುಕೊಂಡು ಹೋಗಲು ಬಂದಿರುತ್ತಾರೆ.
ಕುದುರೆ ಗಾಡಿಯಲ್ಲಿ ಪ್ರಯಾಣ ಮಾಡುತ್ತಿರುವಾಗ ಭಾರೀ ಮಳೆ ಬರುತ್ತಿರುತ್ತದೆ, ಅವರು ಜಾಗ ತಲುಪಿದ ಮೇಲೆ ಅವರಿಗೆ ಸಿದ್ಧಪಡಿಸಿದ ವೇದಿಕೆಯನ್ನು ನೋಡಿ ಆಶ್ಚರ್ಯ ಪಟ್ಟುಕೊಳ್ಳುತ್ತಾರೆ. ತುಂಬಾ ಸೌಂದರ್ಯವಿರುತ್ತದೆ ಹೆಚ್ಚಿನ ಸಂಖ್ಯೆಯಲ್ಲಿ ಜನರೂ ಸಹ ಇರುತ್ತಾರೆ.
ವೇದಿಕೆಯ ಮೇಲೆ ಕುಳಿತುಕೊಳ್ಳಲು ಹೋಗುತ್ತಿರುವಾಗಲೇ ವೇದಿಕೆಯಿಂದ ಮತ್ತು ಹೊರಗಡೆ ಕೂತಿರುವಂತೆ ಎಲ್ಲಾ ಜನರು ಸಹ ಮಳೆಯಿಂದಾಗಿ ಓಡಿ ಹೋಗುತ್ತಾರೆ. ಗುರುಗಳು ಕುದುರೆ ಕಾರನ್ನು ನೋಡಿ ಏನಿದು ಹೀಗಾಗಿ ಹೋಯಿತಲ್ಲ ನಾನು ಏನು ಮಾಡುವುದು ಎಂದು ಕೇಳುತ್ತಾರೆ.
ಅದಕ್ಕೆ ಆತ ಗುರುಗಳೇ ನಾನು ಒಬ್ಬ ಸಣ್ಣ ಕುದುರೆ ಗಾಡಿ ಇಟ್ಟುಕೊಂಡು ಇಪ್ಪತ್ತು ಕುದುರೆಗಳನ್ನು ಸಾಕುತ್ತಿರುವ ವ್ಯಕ್ತಿ ನನಗೇನು ಗೊತ್ತಿಲ್ಲ, ಆದರೆ ಒಂದು ವಿಷಯ, ಕುದುರೆಗೆ ಹುಲ್ಲು ಕಳೆದು ಅದರ ಕೋಣೆಗೆ ಹೋದರೆ ಎಲ್ಲಾ ಕುದುರೆಗಳು ಕೋಣೆಯಿಂದ ಹೊರ ಓಡಿ ಹೋಗುತ್ತದೆ, ಯಾವುದು ಒಂದು ಕುದುರೆ ನಿಂತಿರುತ್ತದೆ ಆ ಒಂದು ಕುದುರೆಗೆ ನಾನು ಹುಲ್ಲನ್ನು ಹಾಕುವೆ ಎಂದು ಹೇಳುತ್ತಾನೆ ;
ಗುರುಗಳಿಗೆ ಸ್ವಲ್ಪ ಮುಖ ಬಾಡುತ್ತದೆ ಎಲ್ಲರೂ ಹೋದರೇನಂತೆ ಬಾಪಾ ನಾನು ನಿನಗೆ ಬೋಧನೆಯನ್ನು ಮಾಡುವೆ ಎಂದು ಕರೆದು ಕೂಡಿಸಿಕೊಂಡು ಬೇಕಾದಷ್ಟು ವಿಷಯಗಳನ್ನು ಹೇಳುತ್ತಿರುತ್ತಾರೆ. ತತ್ತ್ವಗಳು ಮಂತ್ರಗಳು ಪುಣ್ಯದ ಬಗ್ಗೆ ಸ್ವರ್ಗದ ಬಗ್ಗೆ ನರಕದ ಬಗ್ಗೆ ಅಂತ ಬೇಕಾದ ವಿಷಯಗಳನ್ನು ತಿಳಿಸುತ್ತಾರೆ. ಎಲ್ಲವೂ ಮುಗಿದ ನಂತರ,
ನಾನು ತಿಳಿಸಿದ ವಿಷಯಗಳು ಹೇಗಿತ್ತು ಮತ್ತು ನನ್ನ ಮಾತು ಹೇಗಿತ್ತು ಅಂತ ಗುರುಗಳು ಕುದುರೆ ಗಾಡಿಯವನ ಬಳಿ ಕೇಳುತ್ತಾರೆ,
ಗುರುಗಳೇ ನಾನು ಇಪ್ಪತ್ತು ಕುದುರೆ ಸಾಕುವವನು ನನಗೇನೂ ತಿಳಿದಿಲ್ಲ ಆದರೆ ಒಂದು ಮಾತ್ರ ತಿಳಿದಿದೆ ನಾನು ಹುಲ್ಲು ಹಾಕುವಾಗ ಹೋದರೆ ಅಲ್ಲಿ ಒಂದು ಕುದುರೆ ಮಾತ್ರ ಇರುತ್ತಿತ್ತು ಅದಕ್ಕೆ ಎಷ್ಟು ಹುಲ್ಲು ಬೇಕು ಅಷ್ಟು ಮಾತ್ರ ಹಾಕುತ್ತಿದ್ದೆ, ಇಪ್ಪತ್ತು ಕುದುರೆಗೆ ಬೇಕಾಗಿರುವಷ್ಟು ಹುಲ್ಲನ್ನು ಒಂದೇ ಕುದುರೆಗೆ ಹಾಕುತ್ತಿರಲಿಲ್ಲ ಎಂದು ಹೇಳುತ್ತಾನೆ.
ಗುರುಗಳು ಈ ಮಾತನ್ನು ಕೇಳಿ ಒಂದು ಕ್ಷಣ ಚಕಿತಕೊಳ್ಳುತ್ತಾರೆ (ಇದರಿಂದ ನಾವು ತಿಳಿಯುವುದು) ಯಾರಿಗೆ ಯಾವ ವಿಷಯ ಬೇಕೋ, ಆ ವಿಷಯ ಮಾತ್ರ ತಿಳಿಸಬೇಕು, ಮತ್ತು ಯಾರಿಗೆ ಯಾವ ವಿಷಯ ತಿಳಿಸಬೇಕು ಎಂದು ನಾವು ಮೊದಲು ತಿಳಿದಿರಬೇಕು ನಾವು ಯಾರಿಗೆ ಯಾವ ವಿಷಯದ ಬಗ್ಗೆ ತಿಳಿಸಬೇಕು ಎಂದು ತಿಳಿಯದೆ ನಾವು ಬೋಧನೆ ಮಾಡಿದರೆ ನಾವು ಮುಠ್ಠಾಳರಾಗಬೇಕಾಗುತದೆ ಎಂದು ಗುರುಗಳು ಅರಿತುಕೊಳ್ಳುತ್ತಾರೆ.
ಅದಕ್ಕೆ ಹೇಳುವುದು ಇದು ಕಲಿಯುಗ ಕಲಿ ಕಲಿ ಕಲಿ ನಾವು ಎಷ್ಟು ಕಲಿತರೂ ನಮಗೆ ಅದು ಸಾಲುವುದಿಲ್ಲ.
******
*ನಾಡಿನ ಪೂಜ್ಯರಿಗೆ ಬಂಧುಬಾಂಧವರಿಗೆ ಹಾಗೂ ಮಿತ್ರರಿಗೆ
ತುಂಬಾ ಮನಮುಟ್ಟುವ ಕಥೆ ದಯವಿಟ್ಟು ಸಂಪೂರ್ಣ ಓದಿ.*
*ಒಂದು ಕಪ್ ಮೊಸರೂ, ಅಪ್ಪನ ಬಿಸಿಯುಸಿರೂ. *
ಬೆಂಗಳೂರಿನ ಯಶವಂತಪುರದಿಂದ ಹಾಸನಕ್ಕೆ ಅಥವಾ ತುಮಕೂರಿಗೆ ಹೋಗುವ ದಾರಿಯಲ್ಲೇ ಗೊರಗುಂಟೆಪಾಳ್ಯವಿದೆ. ಅಲ್ಲಿಂದ ಹೆಬ್ಬಾಳಕ್ಕೆ ಹೋಗುವ ರಸ್ತೆಯಲ್ಲಿ ಅರ್ಧ ಕಿಲೋ ಮೀಟರ್ ಹೋದರೆ, ಸ್ಟ್ಯಾಂಡರ್ಡ್ ಮೆಕ್ಯಾನಿಕಲ್ ವರ್ಕ್ಸ್ ಫ್ಯಾಕ್ಟರಿ ಸಿಗುತ್ತದೆ. ಹೆಚ್ಚಿನ ಸದ್ದಾಗದಂತೆ ಕಾರ್ಯ ನಿರ್ವಹಿಸುವ ವಿದೇಶಿ ನಿರ್ಮಿತ ಯಂತ್ರಗಳು ಅಲ್ಲಿವೆ. ಫ್ಯಾನ್, ರೆಫ್ರಿಜರೇಟರ್, ಟಿ.ವಿ. ಗಳಿಗೆ ಅಗತ್ಯವಾಗಿ ಬೇಕಾಗುವ ಬಿಡಿಭಾಗಗಳನ್ನು ಅಲ್ಲಿ ಉತ್ಪಾದಿಸಲಾಗುತ್ತದೆ. ಎಲ್ಲಾ ಪ್ರಮುಖ ಕಂಪನಿಗಳಿಗೂ ಬಿಡಿ ಭಾಗಗಳನ್ನು ಸಪ್ಲೈ ಮಾಡುತ್ತಿರುವುದರಿಂದ ಸ್ಟ್ಯಾoಡರ್ಡ್ ಮೆಕ್ಯಾನಿಕಲ್ಸ್ ಫ್ಯಾಕ್ಟರಿಗೆ ಒಳ್ಳೆಯ ಹೆಸರೂ ಇದೆ.
ಈ ಫ್ಯಾಕ್ಟರಿ ಮಾಲೀಕನೇ ರಂಗಸ್ವಾಮಿ. ಈತ, ಅರಸೀಕೆರೆ ಸಮೀಪದ ಹಳ್ಳಿಯವನು. ಸಿದ್ದಗಂಗಾ ಮಠದಲ್ಲಿ ಹೈಸ್ಕೂಲು, ತುಮಕೂರಿನಲ್ಲಿ ಐಟಿಐ ಓದಿದವನು ಸೀದಾ ಬಂದಿದ್ದು ಪೀಣ್ಯಕ್ಕೆ. ಹೆಲ್ಪರ್ ಆಗಿ ಒಂದು ಫ್ಯಾಕ್ಟರಿ ಸೇರಿಕೊಂಡವನು ಐದು ವರ್ಷದಲ್ಲಿ ಎಲ್ಲ ಬಗೆಯ ಕೆಲಸ ಕಲಿತ. ನಂತರ ಮಾರ್ಕೆಟಿಂಗ್ ಮ್ಯಾನೇಜರ್ ಆದ. ಮಾರಾಟಕ್ಕೆ ಸಂಬಂಧಿಸಿದ ಆಳ-ಅಗಲಗಳು ರಂಗಸ್ವಾಮಿಗೆ ಪರಿಚಯವಾದದ್ದೇ ಆಗ. ಹತ್ತಾರು ಕಂಪನಿಗಳ ಮುಖ್ಯಸ್ಥರ ಒಡನಾಟ, ವಿಶ್ವಾಸ, ಅಲ್ಲಿನ ವಹಿವಾಟುಗಳಿಗೆ ಇರುವ ಬೇಡಿಕೆಯನ್ನು ಗಮನಿಸಿದ ನಂತರ, ಹೇಗಿದ್ರೂ ಎಲ್ಲ ಕೆಲಸದ ಬಗ್ಗೆ ಗೊತ್ತಿದೆ. ಒಂದೆರಡು ಕಂಪನಿಗಳಿಂದ ಕಾಂಟ್ರಾಕ್ಟ್ ತಗೊಂಡು ಸ್ಪೇರ್ ಪಾರ್ಟ್ಸ್ ಉತ್ಪಾಾದನೆಯ ಸ್ವಂತ ಫ್ಯಾಕ್ಟರಿ ಶುರು ಮಾಡಿದ್ರೆ ಹೇಗೆ ಎಂಬ ಯೋಚನೆಯೂ ಅವನಿಗೆ ಬಂತು.
ರಂಗಸ್ವಾಮಿ ತಡಮಾಡಲಿಲ್ಲ. ಒಂದು ಪುಟ್ಟ ಶೆಡ್‌ನಲ್ಲಿ ಫ್ಯಾಕ್ಟರಿಯನ್ನು ಆರಂಭಿಸಿಯೇಬಿಟ್ಟ. ಯೌವನದ ಹುಮ್ಮಸ್ಸು ಹಾಗೂ ಗೆಲ್ಲಬೇಕೆಂಬ ಹಠದಿಂದ ಹಗಲಿರುಳೂ ದುಡಿದ. ಪರಿಣಾಮ, ಕೆಲವೇ ದಿನಗಳಲ್ಲಿ ರಂಗಸ್ವಾಮಿಯ ಬ್ಯಾಂಕ್ ಬ್ಯಾಲೆನ್ಸ್ ದುಪ್ಪಟ್ಟಾಯಿತು. ಅದುವರೆಗೂ ಸೆಕೆಂಡ್ ಹ್ಯಾಂಡ್ ಹೀರೋ ಹೋಂಡಾದಲ್ಲಿ ಓಡಾಡುತ್ತಿದ್ದವನು, ಒಟ್ಟಿಗೇ ಎರಡು ಕಾರ್ ಖರೀದಿಸುವಷ್ಟು ಶ್ರೀಮಂತನಾದ. 25 ಮಂದಿಗೆ ಕೆಲಸ ಕೊಟ್ಟ. ಫ್ಯಾಕ್ಟರಿಗೆ ಸ್ವಂತ ಬಿಲ್ಡಿಂಗ್ ಕಟ್ಟಿಸಿದ. ವಾಸಕ್ಕೆ, ಯಶವಂತಪುರದಲ್ಲೇ ಒಂದು ಮನೆ ಖರೀದಿಸಿದ. ಇಷ್ಟೆಲ್ಲ ಆದಮೇಲೆ, ರಂಗಸ್ವಾಮಿಯ ಯಶೋ ಗಾಥೆ ನೂರಾರು ಮಂದಿಯನ್ನು ತಲುಪಿತು. ಹೇಗಿದ್ದವನು ಹೇಗಾಗಿಬಿಟ್ಟ ಅಲ್ವ ಎಂದು ಎಲ್ಲರೂ ಬೆರಗಾಗುವ ವೇಳೆಗೇ, ಹಳೇ ಪರಿಚಯದ ಹುಡುಗಿಯೊಂದಿಗೆ ಮದುವೆಯಾದ ರಂಗಸ್ವಾಮಿ, ವರ್ಷದ ನಂತರ ಗಂಡು ಮಗುವಿನ ತಂದೆಯೂ ಆದ.
ಕೈ ತುಂಬಾ ವರಮಾನ ಕೊಡುವ ಕೆಲಸ, ಮನ ಮೆಚ್ಚಿದ ಹೆಂಡತಿ, ಖುಷಿ ಹೆಚ್ಚಿಸುವ ಮಗ, ಸಮಾಜದಲ್ಲಿ ವಿಶೇಷ ಸ್ಥಾನಮಾನ, ಯಾರಿಗೂ ಸಾಲ ಕೊಡಬೇಕಿಲ್ಲ ಎಂಬ ನಿರಾಳ ಭಾವ... ಲೈಫ್ ಈಸ್ ಬ್ಯೂಟಿಫುಲ್ ಎನ್ನಲು ಇಷ್ಟು ಸಾಕಲ್ಲವೇ ? ರಂಗಸ್ವಾಮಿಯೂ ಇಂಥದೇ ಸಂಭ್ರಮದಲ್ಲಿದ್ದ. ಆಗಲೇ, ಯಾರೂ ನಿರೀಕ್ಷಿಸದ ಆಘಾತವೊಂದು ಅವನನ್ನು ಅಪ್ಪಳಿಸಿತು. ಅದೊಂದು ದಿನ ಮಾರ್ಕೆಟ್‌ಗೆ ಹೋಗಿ ವಾಪಸಾಗುತ್ತಿದ್ದ ರಂಗಸ್ವಾಮಿಯ ಪತ್ನಿಗೆ ವೇಗವಾಗಿ ಬಂದ ಲಾರಿಯೊಂದು ಡಿಕ್ಕಿ ಹೊಡೆದ ಪರಿಣಾಮ ಆಕೆ
ಮರಳಿ ಬಾರದ ಲೋಕಕ್ಕೆ ಹೋದಳು.
***
‘ಈಗಾಗ್ಲೇ ನನಗೂ ನಲವತ್ತೈದು ತುಂಬಿದೆ. ಮಗ 7ನೇ ಕ್ಲಾಸ್‌ಗೆ ಬಂದಿದಾನೆ. ಹೀಗಿರುವಾಗ ಇನ್ನೊಂದು ಮದುವೆಯಾಗಿ ಸಾಧಿಸೋದೇನಿದೆ ? ಸೆಕೆಂಡ್ ಮ್ಯಾರೇಜ್ ಮಾಡ್ಕೊಂಡೆ ಅಂತಿಟ್ಕೊಳ್ಳಿ, ಹೊಸದಾಗಿ ಬಂದ ಹೆಂಡತಿ ನನ್ನ ಮಗನನ್ನು ತಿರಸ್ಕಾರದಿಂದ ನೋಡಿಬಿಟ್ರೆ, ಅಥವಾ ಹೆಂಡತಿಯ ಮೇಲಿನ ಮೋಹದಿಂದ ನಾನೇ ವಿಲನ್ ಥರಾ ವರ್ತಿಸಿಬಿಟ್ರೆ? ಬೇಡ ಬೇಡ. ಇಂಥ ಸಂದರ್ಭಗಳು ಜೊತೆಯಾಗೋದೇ ಬೇಡ. ನನಗಿನ್ನು ಮಗನೇ ಸರ್ವಸ್ವ . ಹೆಂಡತಿಯ ನೆನಪನ್ನು ಜೊತೆಗಿಟ್ಟುಕೊಂಡೇ ಇವನನ್ನು ಚೆನ್ನಾಗಿ ಓದಿಸ್ತೇನೆ...’. ಎರಡನೇ ಮದುವೆ ಮಾಡಿಕೊಳ್ಳಪ್ಪಾ ಎಂದು ಒತ್ತಾಯಿಸಲು ಬಂದ ಬಂಧುಗಳು ಹಾಗೂ ಹಿತೈಷಿಗಳಿಗೆ ರಂಗಸ್ವಾಮಿ ಹೇಳಿದ ಖಡಕ್ ಮಾತುಗಳಿವು.
ರಂಗಸ್ವಾಮಿ ಮಾತಿಗೆ ತಪ್ಪಲಿಲ್ಲ. ಅವನು ಮಗನನ್ನು ಕಣ್ರೆಪ್ಪೆಯಷ್ಟು ಜೋಪಾನವಾಗಿ ನೋಡಿಕೊಂಡ. ಒಳ್ಳೆಯ ಕಾಲೇಜಿನಲ್ಲಿ ಎಂಜಿನಿಯರಿಂಗ್ ಓದಿಸಿದ. ನನಗೆ ನೀನೇ ಪ್ರಪಂಚ. ನೀನು ಜೊತೆಗಿಲ್ಲದೆ ನಾನು ಬದುಕಲಾರೆ ಎಂಬುದನ್ನು ಪರೋಕ್ಷವಾಗಿ ಮನದಟ್ಟು ಮಾಡಿಕೊಟ್ಟ. ಮುಂದೊಂದು ದಿನ- ‘ನನ್ನ ಕ್ಲಾಸ್ ಮೇಟ್ ಹುಡುಗೀನ ಲವ್ ಮಾಡಿದೀನಪ್ಪಾ. ಅವಳನ್ನೇ ಮದುವೆ ಆಗ್ತೀನಿ. ಅವರ ಮನೇಲಿ ಒಪ್ಪಿದಾರೆ. ನಿನ್ನ ಒಪ್ಪಿಗೆ ಬೇಕಪ್ಪಾ...’ ವಿಧೇಯನಾಗಿಯೇ ಹೇಳಿದ್ದ ಮಗ. ರಂಗಸ್ವಾಮಿ ಅದನ್ನೂ ಆಕ್ಷೇಪಿಸಲಿಲ್ಲ. ಅದ್ಧೂರಿಯಾಗಿ ಮದುವೆ ಮಾಡಿಕೊಟ್ಟ. ಇದಾಗಿ ವರ್ಷ ಕಳೆಯುತ್ತಲೇ ಫ್ಯಾಕ್ಟರಿ ವ್ಯವಹಾರವನ್ನೆಲ್ಲ ಮಗನಿಗೆ ವಹಿಸಿಕೊಟ್ಟು, ‘ನನಗೆ ವಯಸ್ಸಾಯಿತು ಕಣಪ್ಪಾ. ರೆಸ್ಟ್ ಬೇಕು ಅನ್ನಿಸ್ತಿದೆ. ಇನ್ಮುಂದೆ ನಾನು ಮನೇಲಿರ್ತೀನಿ. ಶ್ರದ್ಧೆ ಮತ್ತು ಎಚ್ಚರದಿಂದ ಫ್ಯಾಕ್ಟರಿ ನಡೆಸ್ಕೊಂಡು ಹೋಗು’ ಎಂದಿದ್ದ. ಮರುದಿನವೇ ವಕೀಲರ ಜೊತೆಗೂ ಮಾತಾಡಿ ಫ್ಯಾಕ್ಟರಿಯನ್ನು ಮಗನ ಹೆಸರಿಗೆ ರಿಜಿಸ್ಟ್ರೇಷನ್ ಮಾಡಿಸಿಬಿಟ್ಟ.
ಚಿತ್ರಾನ್ನ-ಕಾಯಿಚಟ್ನಿ, ದೋಸೆ-ಜಾಮೂನ್, ಬಿಸಿಬೇಳೆಬಾತ್- ಚಿಪ್ಸ್, ವಾಂಗೀಬಾತ್-ಆಲೂಬೋಂಡಾ, ಪಲಾವ್-ಗಟ್ಟಿಮೊಸರು- ಹೀಗೆ ಪ್ರತಿಯೊಂದು ತಿಂಡಿಗೂ ಒಂದು ಸೈಡ್ ಐಟಂ ಇರಬೇಕು ಎಂಬುದು ರಂಗಸ್ವಾಮಿಯ ಆಸೆಯಾಗಿತ್ತು. ಅದರಲ್ಲೂ ಪಲಾವ್-ಮೊಸರು ಅವನ ಮೆಚ್ಚಿನ ತಿಂಡಿಯಾಗಿತ್ತು. ನಾವು ಎಷ್ಟು ದಿನ ಇರ್ತೀವೋ ಗೊತ್ತಿಲ್ಲ. ಇರುವಷ್ಟು ದಿನ ಚೆನ್ನಾಗಿ ತಿಂದುಂಡು ಬಾಳಬೇಕು ಎಂಬುದು ಅವನ ವಾದವಾಗಿತ್ತು.
ಅವತ್ತು ರಂಗಸ್ವಾಮಿಯ ಮಗ ಜಾಗಿಂಗ್ ಮುಗಿಸಿ ಬಾಗಿಲ ಬಳಿ ಬಂದಾಗಲೇ ಪಲಾವ್‌ನ ಘಮ ಮೂಗಿಗೆ ಅಡರಿತು. ಓಹ್, ಇವತ್ತು ಅಪ್ಪನ ಫೇವರಿಟ್ ತಿಂಡಿ ಎಂದುಕೊಂಡು ಅವನು ಒಳಬರುವುದಕ್ಕೂ, ಡೈನಿಂಗ್ ಟೇಬಲ್ ಮುಂದೆ ತಿಂಡಿಗೆ ಕುಳಿತಿದ್ದ ರಂಗಸ್ವಾಮಿ- ಸ್ವಲ್ಪ ಮೊಸರು ಇದ್ರೆ ಕೊಡಮ್ಮ. ಪಲಾವ್ ಜೊತೆ ಮೊಸರು ಕೊಡೋದನ್ನೇ ಮರೆತಿದ್ದೀಯಲ್ಲ.. ಅನ್ನುವುದಕ್ಕೂ ಸರಿಹೋಯಿತು. ರಂಗಸ್ವಾಮಿಯ ಸೊಸೆ ಸರ್ರನೆ ಹೊರಬಂದವಳೇ- ‘ಇಲ್ಲ, ಮೊಸರಿಲ್ಲ; ಮೊಸರು ಖಾಲಿಯಾಗಿದೆ’ ಅಂದು ಭರ್ರನೆ ಹೋಗಿಬಿಟ್ಟಳು. ಹೌದಾ ? ಹೋಗ್ಲಿ ಬಿಡಮ್ಮ ಎನ್ನುತ್ತಾ ರಂಗಸ್ವಾಮಿ ತಿಂಡಿಯ ಶಾಸ್ತ್ರ ಮುಗಿಸಿದ.
ದಿನವೂ ಹೆಂಡತಿಯೊಂದಿಗೆ ತಿಂಡಿ ತಿಂದು ನಂತರ ಫ್ಯಾಕ್ಟರಿಗೆ ಹೋಗುವುದು ರಂಗಸ್ವಾಮಿಯ ಮಗನ ದಿನಚರಿಯಾಗಿತ್ತು. ಅವತ್ತೂ ಹಾಗೆಯೇ ತಿಂಡಿಗೆ ಕೂತವನು ಅಸಹನೆ ಮತ್ತು ಗೊಂದಲದಿಂದ ಹೆಂಡತಿಯನ್ನು ನೋಡಿದ. ಕಾರಣ; ಹೆಂಡತಿ ತಂದಿಟ್ಟ ತಿಂಡಿಯೊಂದಿಗೆ ಅರ್ಧ ಲೀಟರಿನಷ್ಟು ಗಟ್ಟಿ ಮೊಸರಿತ್ತು. ''ಅಪ್ಪ ಕೇಳಿದಾಗ ಮೊಸರೇ ಇಲ್ಲ ಅಂದೆಯಲ್ಲ ? ಇದು ಎಲ್ಲಿತ್ತು ? ಯಾಕೆ ಸುಳ್ಳು ಹೇಳ್ದೆ ?'' ಎಂದು ಪ್ರಶ್ನಿಸಿದ. ಆಕೆ- ‘ಗಟ್ಟಿಯಾಗಿ ಮಾತಾಡಬೇಡಿ. ಸೈಲೆಂಟಾಗಿ ತಿಂಡಿ ತಿನ್ನಿ. ನಿಮ್ಮಪ್ಪ ಕೇಳ್ತಾರೆ ಅಂತ ಅವರು ಕೇಳಿದ್ದನ್ನೆಲ್ಲ ಕೊಡೋಕಾಗುತ್ತಾ ? ಬಾಯಿ ಚಪಲ ಯಾವತ್ತೂ ಒಳ್ಳೆಯದಲ್ಲ. ಇವತ್ತು ಮೊಸರು ಕೇಳ್ತಾರೆ. ನಾಳೆ ತುಪ್ಪಾನೇ ಬೇಕು ಅಂತಾರೆ. ಕೇಳಿದ್ದನ್ನೆಲ್ಲ ರೆಡಿ ಮಾಡಿ ಇಟ್ಕೊoಡಿರೋಕೆ ಆಗುತ್ತಾ ?’ ಅಂದುಬಿಟ್ಟಳು. ತಿರುಗಿ ಮಾತಾಡಿದರೆ ಜಗಳ ಆಗುತ್ತೆ. ಜಗಳ ಆಗಿಬಿಟ್ರೆ ರಾತ್ರಿ ಅನ್ನೋದು ನರಕ ಆಗುತ್ತೆ. ಉಹೂಂ, ಅಂಥ ಪರಿಸ್ಥಿತಿ ಜೊತೆಯಾಗಬಾರದು ಎಂದು ಯೋಚಿಸಿದ ರಂಗಸ್ವಾಮಿಯ ಮಗ, ಮೌನವಾಗಿ ಫ್ಯಾಕ್ಟರಿಗೆ ಹೋಗಿಬಿಟ್ಟ. ರಂಗಸ್ವಾಮಿ, ಮನೆಯ ಹೊರಗಿನ ಕೈ ತೋಟದಲ್ಲಿ ಇದ್ದುದರಿಂದ ಗಂಡ-ಹೆಂಡಿರ ದುಸುಮುಸು ಅವನಿಗೆ ಗೊತ್ತಾಗಲೇ ಇಲ್ಲ.
ಅವತ್ತು ನಾಲ್ಕೈದು ಕಂಪನಿಗಳ ಮುಖಂಡರೊಂದಿಗೆ ಹೋಟೆಲೊಂದರಲ್ಲಿ ವ್ಯವಹಾರ ಸಂಬಂಧಿ ಮೀಟಿಂಗ್ ನಡೆಸಬೇಕಾಗಿ ಬಂತು. ಊಟದ ಸಮಯದಲ್ಲಿ ಅವರೆಲ್ಲಾ- ''ಊಟ ಬೇಡ, ದೋಸೆ ವಡಾ ಥರದ ಐಟಮ್ಸ್ ತಗೊಳ್ಳೋಣ. ಕಡೆಗೆ ಮೊಸರನ್ನ ಇರಲಿ''ಎಂದರು. ಮೊಸರನ್ನದಲ್ಲಿದ್ದ ಕೆನೆಮೊಸರು, ದಾಳಿಂಬೆ, ಗೋಡಂಬಿಯ ಚೂರುಗಳನ್ನು ಕಂಡಾಗ ಛಕ್ಕನೆ, ಮೊಸರು ಇದ್ಯಾ ಎಂದು ಕೇಳಿದ ಅಪ್ಪನ ಮುಖವೇ ಎದುರು ಕಂಡಂತಾಗಿ ರಂಗಸ್ವಾಮಿಯ ಮಗ ತತ್ತರಿಸಿಹೋದ. ತನಗಾಗಿ ಏನೆಲ್ಲಾ ತ್ಯಾಗ ಮಾಡಿದ ತಂದೆಗೆ ಒಂದು ಕಪ್ ಗಟ್ಟಿ ಮೊಸರು ಕೊಡಲು ಆಗಲಿಲ್ಲವಲ್ಲ ಎಂಬ ಚಿಂತೆ ಅವನನ್ನು ಕ್ಷಣಕ್ಷಣಕ್ಕೂ ಕಾಡತೊಡಗಿತು.
ಉಹೂಂ, ಅವನ ಹೆಂಡತಿಗೆ ಇಂಥ ಯಾವ ‘ಗಿಲ್ಟ್ ಕೂಡ ಇರಲಿಲ್ಲ. ಪ್ರತಿಯೊಂದು ತಿಂಡಿಗೂ ಮತ್ತೊಂದು ಸೈಡ್ ಐಟಂ ಹಾಕಿಕೊಡೋಕೆ ಇದೇನು ಹೋಟ್ಲಾ? ಇಡೀ ದಿನ ಮನೇಲಿ ಇರೋರು ಕೊಟ್ಟಿದ್ದನ್ನು ತಿಂದುಕೊಂಡು ತೆಪ್ಪಗಿರಬೇಕು ಅಲ್ವ ಎಂದೇ ಅವಳು ವಾದಿಸಿದಳು. ಬೆಡ್‌ರೂಂ, ಜಗಳದ ತಾಣವಾದರೆ ಇಡೀ ದಿನದ ಕೆಲಸ ಕೆಡುತ್ತೆ ಎಂದು ಗೊತ್ತಿದ್ದುದರಿಂದ ರಂಗಸ್ವಾಮಿಯ ಮಗ ಹೆಂಡತಿಗೆ ಎದುರು ಮಾತಾಡಲು ಹೋಗಲಿಲ್ಲ.
ಹೀಗೇ ವಾರ ಕಳೆಯಿತು. ಅವತ್ತೊಂದು ದಿನ- ‘ಯಾವುದೋ ಕೋರ್ಟ್ ಕೇಸ್ ಬಂದಿದೆಯಪ್ಪಾ. ನನಗೆ ಸ್ವಲ್ಪ ಕನ್‌ಫ್ಯೂಶನ್ ಇದೆ. ನೀನು ಜೊತೆಗಿದ್ರೆ ದೊಡ್ಡ ಧೈರ್ಯ. ಮಧ್ಯಾಹ್ನ ಬೇಗ ಬಂದ್ಬಿಡೋಣ...’ ಎಂದೆಲ್ಲ ಹೇಳಿ ಆ ಮಗರಾಯ ತಂದೆಯೊಂದಿಗೆ ಕೋರ್ಟ್‌ಗೆ ಬಂದ. ಅಲ್ಲಿ ನೋಡಿದರೆ- ಫ್ಯಾಕ್ಟರಿ, ಮನೆ ಮತ್ತು ಇಡೀ ಆಸ್ತಿಯನ್ನು ರಂಗಸ್ವಾಮಿಯ ಹೆಸರಿಗೆ ಮರು ವರ್ಗಾಯಿಸಿದ ದಾಖಲೆ ಪತ್ರಗಳಿದ್ದವು. ಅವಕ್ಕೆಲ್ಲಾ ತುಂಬಾ ಒತ್ತಾಯದಿಂದಲೇ ಸಹಿ ಹಾಕಿಸಿದ ಮಗ- ‘ಅಪ್ಪಾ, ನೀನು ಇನ್ನೊಂದು ಮದುವೆ ಮಾಡ್ಕೊಳಪ್ಪಾ. ಜನ ಏನಾದ್ರೂ ಅಂದುಕೊಳ್ಳಲಿ. ಅದರ ಬಗ್ಗೆ ಚಿಂತೆ ಮಾಡ್ಬೇಡ. ನಿನ್ನ ಜೊತೆಗೆ ನಾನಿರ್ತೀನಿ. ಈ ವಿಷಯದಲ್ಲಿ ನಿಂಗೆ ಸಪೋರ್ಟ್ ಮಾಡ್ತೀನಿ. ದಯವಿಟ್ಟು ಇನ್ನೊಂದು ಮದುವೆ ಮಾಡ್ಕೊ..’ ಅಂದ.
ಈ ಮಾತುಗಳಿಂದ ರಂಗಸ್ವಾಮಿಗೆ ಅಚ್ಚರಿಯಾಯಿತು. ‘ಯಾಕಪ್ಪಾ? ಯಾಕೆ ಹೀಗೆ ಹೇಳ್ತಿದೀಯ? ನಿನಗೆ ಏನಾದ್ರೂ ಕೊರತೆ ಆಯ್ತಾ? ನಾನು ನಿನಗೆ ಹೊರೆ ಅನ್ನಿಸಿಬಿಟ್ನಾ? ಏನಾದ್ರೂ ತಪ್ಪು ಮಾಡಿದೀನೇನೋ ನಾನು? ಎಲ್ಲವನ್ನೂ ನನ್ನ ಹೆಸರಿಗೇ ಮಾಡಿಸಿದೀಯಲ್ಲ ಯಾಕೋ..,
ಈ ಮಾತುಗಳನ್ನು ಅಷ್ಟಕ್ಕೇ ತಡೆದ ರಂಗಸ್ವಾಮಿಯ ಮಗ ಹೇಳಿದ: ಛೆ,ಛೆ ಖಂಡಿತ ನಿನ್ನಿಂದ ಯಾವುದೇ ತಪ್ಪಾಗಿಲ್ಲಪ್ಪಾ. ಪ್ರತಿ ಹೆಂಗಸು, ತನ್ನ ಗಂಡ ಮತ್ತು ಮಕ್ಕಳ ಬಗ್ಗೆ ಮಾತ್ರ ವಿಶೇಷ ಕಾಳಜಿ ವಹಿಸ್ತಾಳೆ. ಉಳಿದವರನ್ನು ನಿರ್ಲಕ್ಷ್ಯದಿಂದ ನೋಡೋದು ಅವಳಿಗೆ ಅಭ್ಯಾಸ ಆಗಿಬಿಟ್ಟಿರುತ್ತೆ. ಅಂಥದೊಂದು ನಿರ್ಲಕ್ಷ್ಯದ ಅನುಭವ ನಿನಗೆ ಎಂದೆಂದೂ ಆಗದಿರಲಿ ಎಂಬ ಸದಾಶಯದಿಂದಲೇ ಇನ್ನೊಂದು ಮದುವೆ ಆಗು ಅಂತ ಒತ್ತಾಯಿಸ್ತಾ ಇದೀನಿ. ನಾಳೆಯಿಂದ ನಾನು ಹೆಂಡತಿಯೊಂದಿಗೆ ಬಾಡಿಗೆ ಮನೆಗೆ ಹೋಗ್ತೇನೆ. ಫ್ಯಾಕ್ಟರಿಗೆ ನೀನು ಎಂ.ಡಿ., ನೀನೇ ಸಿ.ಇ.ಒ. ನಾನು ಒಬ್ಬ ನೌಕರನಾಗಿ ಕೆಲಸ ಮಾಡ್ತೀನಿ. ನಮ್ಮಲ್ಲಿ ಎಂಜಿನಿಯರ್‌ಗಳಿಗೆ ಕೊಡ್ತೀಯಲ್ಲ; ಅಷ್ಟೇ ಸಂಬಳವನ್ನು ನನಗೂ ಕೊಡು. ಒಂದು ಬಟ್ಟಲಿನಷ್ಟು ಮೊಸರು ಸಂಪಾದಿಸಲು ಮನುಷ್ಯನಿಗೆ ಎಷ್ಟು ಕಷ್ಟ ಇದೆ ಎಂಬುದನ್ನು ನನ್ನ ಹೆಂಡತಿಗೆ ಪರಿಚಯ ಮಾಡಿಕೊಡಬೇಕು. ಅದರ ಜೊತೆಗೆ, ವೃದ್ಧಾಪ್ಯದಲ್ಲಿ ತುಂಬಾ ಮುತುವರ್ಜಿಯಿಂದ ನೋಡಿಕೊಳ್ಳುವ ಒಬ್ಬರು ನಿನ್ನೊಂದಿಗೆ ಇರುವಂತೆ ವ್ಯವಸ್ಥೆ ಮಾಡಬೇಕು. ಫ್ಯಾಕ್ಟರಿಯನ್ನು ನಿನ್ನ ಹೆಸರಿಗೆ ವರ್ಗಾಯಿಸಿದ್ದಕ್ಕೆ, ನಾಳೆಯಿಂದ ಒಬ್ಬ ಆರ್ಡಿನರಿ ನೌಕರನಾಗಿ ಕೆಲಸಕ್ಕೆ ಬರ್ತಿರೋದಕ್ಕೆ ಬೇರೆ ಯಾವ ಕಾರಣವೂ ಇಲ್ಲ. ಒಳ್ಳೇದಾಗ್ಲಿ ಅಂತ ಆಶೀರ್ವದಿಸಪ್ಪ...’
ರಂಗಸ್ವಾಮಿ ಏನೂ ಮಾತಾಡಲಿಲ್ಲ. ನಡೆದಿರುವುದೇನೆಂದು ತನಗೆ ಅರ್ಥವಾಗಿದೆ ಎಂಬಂತೆ ಮಗನನ್ನು ಮೆಚ್ಚುಗೆಯಿಂದ ನೋಡಿದ.
ಅವನನ್ನು ಬಾಚಿ ತಬ್ಬಿಕೊಂಡು ಹಣೆಗೆ ಮುತ್ತಿಟ್ಟ........
ಮಕ್ಕಳಿಗೆ ಸಂಸ್ಕಾರ ಕಲಿಸಿದರೆ ಸಾಕು,
ಅವರೇ ಅವರ ಜೀವನವನ್ನ ಸುಂದರ ಮಾಡಿಕೊಳ್ಳುತ್ತಾರೆ,
ಹಣ, ಆಸ್ತಿ, ಬ್ಯಾಂಕ್ ಬ್ಯಾಲೆನ್ಸ್ ಎಲ್ಲಾ ವ್ಯರ್ಥ....
ಇಂತಿ ನಿಮ್ಮ ಹಿತೈಷಿ ಶಾಂತಕುಮಾರ್ ಗುರೂಜಿ ವಿಜಯಪುರ
****
ಆ ಕಾಲದಲ್ಲಿ ಸಂಜೆ ಹೆಂಡತಿ ಜತೆ ವಾಕಿಂಗ್ ಹೋಗು ವುದೂ ಒಂದು ಸಂಪ್ರದಾಯವಾಗಿತ್ತು. ಬೀChi ಕೂಡ ವಾಕಿಂಗ್‌ಗೆ ಹೊರಟಿದ್ದರು. ಹಾಗೆ ಹೋಗುತ್ತಿರು ವಾಗ ಮಾರ್ಗ ಮಧ್ಯದಲ್ಲಿ ಕಂಡ ಹುಬ್ಬಳ್ಳಿಯ ಕೊಪ್ಪಿಕರ್ ರಸ್ತೆಯಲ್ಲಿರುವ ‘ಸಾಹಿತ್ಯ ಭಂಡಾರ’ದತ್ತ ಕೈತೋರಿ “ಇದೇ ನನ್ನ ಆಫೀಸು, ಈ ಪುಸ್ತಕದಂಗಡಿಯಲ್ಲಿಯೇ ನಾನು ಹೆಚ್ಚು ಕಾಲ ಕಳೆಯುತ್ತೇನೆ” ಎಂದು ಹೆಂಡತಿಗೆ ಹೇಳುತ್ತಾರೆ.
ಸರಕಾರಿ ಗುಮಾಸ್ತರಾಗಿದ್ದ ಬೀಚಿಯವರು ಸಂಜೆ ಕಳೆಯುತ್ತಿದ್ದುದೇ ಸಾಹಿತ್ಯ ಭಂಡಾರದಲ್ಲಿ. ಬೀಚಿಯವರ ಮಾತು ಕೇಳಿಸಿಕೊಂಡ ಅವರ ಪತ್ನಿ “ಅಲ್ಲಿ ಯಾವ ಪುಸ್ತಕಗಳಿವೆ? ತೆಲುಗು ಪುಸ್ತಕಗಳಿ ವೆಯೇ?” ಎಂದು ಕೇಳುತ್ತಾರೆ. “ಇದು ಹುಬ್ಬಳ್ಳಿ” ಎಂದು ನಗುತ್ತಾ ಹೇಳಿದ ಬೀಚಿ, “ಸುಡುಗಾಡು ಕನ್ನಡ ಪುಸ್ತಕ ಮಾರತಾರ” ಎಂದರು. ಇಂಗ್ಲಿಷ್ ಸಾಹಿತ್ಯದಿಂದ ಬಹುವಾಗಿ ಪ್ರಭಾವಿತರಾಗಿದ್ದ ಅವರು, ಕನ್ನಡ ಪುಸ್ತಕಗಳನ್ನು ಕಣ್ಣೆತ್ತಿಯೂ ನೋಡಿದವರಲ್ಲ.
ಅಂದು ಬೀಚಿಯವರು ‘ಸಾಹಿತ್ಯ ಭಂಡಾರ’ದ ಬಗ್ಗೆ ಹೇಳಿದ್ದನ್ನು ನೆನಪಿಟ್ಟುಕೊಂಡಿದ್ದ ಅವರ ಹೆಂಡತಿ, “ಮಧ್ಯಾಹ್ನ ಕಳೆಯುವುದೇ ಕಷ್ಟವಾಗುತ್ತಿದೆ. ಯಾವುದಾದರೂ ಕನ್ನಡ ಪುಸ್ತಕ ತಂದುಕೊಡಿ” ಎಂದು ಒಂದು ದಿನ ಗಂಡನನ್ನು ಕೇಳಿದರು. ಎಂದಿನಂತೆ ಮರುದಿನ ಸಂಜೆ ಸಾಹಿತ್ಯ ಭಂಡಾರಕ್ಕೆ ಬಂದ ಬೀಚಿ, “ಯಾವುದಾದರೂ ಕನ್ನಡದ ಕಥೆ ಪುಸ್ತಕ ಕೊಡಿ. ನನ್ನ ಹೆಂಡತಿ ಪೀಡಿಸುತ್ತಿದ್ದಾಳೆ. ಓದಿಯಾದ ಮೇಲೆ ತಂದುಕೊಡುತ್ತೇನೆ” ಎಂದು ಸಾಹಿತ್ಯ ಭಂಡಾರ ಸ್ಥಾಪಕರೂ ಹಾಗೂ ಮಾಲೀಕರೂ ಆಗಿದ್ದ ಗೋವಿಂದರಾಯರನ್ನು ಕೇಳಿದರು. ಸೌಜನ್ಯಕ್ಕೆ ಹೆಸರಾಗಿದ್ದ ಗೋವಿಂದರಾಯರು ನಗು ನಗುತ್ತಲೇ ಕಪಾಟದಿಂದ ಪುಸ್ತಕವೊಂದನ್ನು ಹೊರತೆಗೆದು ಕವರ್‌ಗೆ ಹಾಕಿಕೊಟ್ಟರು. ಬೀಚಿ ಯವರು ಅದನ್ನು ಬಿಡಿಸಿಯೂ ನೋಡಲಿಲ್ಲ. “ಅಂಚೆ ಜವಾನನ ಕೆಲಸ ಮಾಡಿದೆ” ಎಂದು ಅವರೇ ತಮ್ಮ ‘ಭಯಾಗ್ರಫಿ”ಯಲ್ಲಿ ಹೇಳಿಕೊಂಡಿದ್ದಾರೆ. ಹೆಂಡತಿಗೆ ಪುಸ್ತಕ ತಂದುಕೊಟ್ಟು, ತಲೆನೋವು ತಪ್ಪಿತು ಎಂದು ಸುಮ್ಮನಾದರು. ಆದರೆ ಮರುದಿನ ಮಧ್ಯಾಹ್ನ ಊಟಕ್ಕೆಂದು ಕಚೇರಿಯಿಂದ ಮನೆಗೆ ಹೋದರೆ ಪುಸ್ತಕವನ್ನು ಕೈಯಲ್ಲಿ ಹಿಡಿದುಕೊಂಡಿದ್ದ ಅವರ ಪತ್ನಿ ಬಿಕ್ಕಳಿಸಿ ಅಳುತ್ತಿದ್ದಾರೆ! ಆಶ್ಚರ್ಯಚಕಿತರಾದ ಬೀಚಿ, “ಕನ್ನಡ ಓದಲಿಕ್ಕೆ ಬರುತ್ತಿಲ್ಲ ಅಂತ ಅಳುತ್ತಿದ್ದೀಯೇನು?” ಎಂದು ಕೇಳಿದರು. ಬಳ್ಳಾರಿ ಜಿಲ್ಲೆಯಲ್ಲಿ ಹುಟ್ಟಿ, ಬೆಳೆದಿದ್ದ ಆಕೆಗೆ ಕನ್ನಡ ಓದುವುದಕ್ಕೆ ಕಷ್ಟವಾಗುತ್ತಿದೆ ಎಂಬುದು ಬೀಚಿಯವರ ಊಹೆಯಾಗಿತ್ತು. ಆದರೆ “ಕನ್ನಡ ಮತ್ತು ತೆಲುಗು ಲಿಪಿಗಳಲ್ಲಿ ಯಾವ ಮಹಾಭೇದವಿದೆ? ಒಂದರ ಲಿಪಿಯನ್ನು ತಿಳಿದವರು ಎರಡನ್ನೂ ಓದಬಹುದು” ಎಂದು ಕಣ್ಣೊರೆಸಿಕೊಳ್ಳುತ್ತಾ ಹೇಳಿದ ಆಕೆ, “ಪುಸ್ತಕ ಬಹಳ ಚೆನ್ನಾಗಿದೆ. ಇದನ್ನೊಮ್ಮೆ ನೀವೂ ಓದಬೇಕು” ಎಂದರು! ಇದ್ಯಾವ ಗ್ರಹಚಾರ ಎಂದುಕೊಂಡ ಬೀಚಿ, “ನೀನಂತೂ ಓದಿ ಮುಗಿಸು” ಎಂದು ಊಟಕ್ಕೆ ಅಣಿ ಯಾದರು. ಇತ್ತ ಪುಸ್ತಕವನ್ನು ಓದಿ ಮುಗಿಸಿದ ಕೂಡಲೇ ಕಾಟ ಶುರುವಿಟ್ಟುಕೊಂಡರು ಪತ್ನಿ. ‘ಒಮ್ಮೆ ನೀವೂ ಓದಿ’ ಎಂದು ಗಂಡನ ದುಂಬಾಲು ಬಿದ್ದರು. “ಹೆಂಡತಿಗಾಗಿ ಯಾರ್‍ಯಾರೋ ಏನೇನೋ ಮಾಡಿದ್ದಾರೆ. ಬ್ರಿಟನ್ ರಾಜ ೬ನೇ ಜಾರ್ಜ್ ಪತ್ನಿಗಾಗಿ ಸಿಂಹಾ ಸನವನ್ನೇ ತ್ಯಾಗ ಮಾಡಲಿಲ್ಲವೆ? ಮದುವೆಯಾದವನು ಎಂತಹ ತ್ಯಾಗಗಳಿಗೂ ಸಿದ್ಧನಾಗಬೇಕು” ಎಂದುಕೊಂಡ ಬೀಚಿ, ಪತ್ನಿಯ ಮಾತಿಗೆ ತಲೆಯಾಡಿಸಿದರು.
ಮರುದಿನ ರೈಲು ಪ್ರಯಾಣವಿತ್ತು.
ಆದರೆ ರೈಲಿನಲ್ಲಿ ಕನ್ನಡ ಪುಸ್ತಕ ಓದಿದರೆ ಮಾನ ಉಳಿಯುವುದಿಲ್ಲ. ಕನ್ನಡ ಪುಸ್ತಕ ಓದುತ್ತಿರುವುದನ್ನು ನೋಡಿ, ಯಾರಾದರೂ ಬೀಡಿ ಕೇಳಿದರೆ ಏನು ಗತಿ? ಎಂದುಕೊಂಡ ಬೀಚಿ, ‘ಇಲಸ್ಟ್ರೇಟೆಡ್ ವೀಕ್ಲಿ’ ಮ್ಯಾಗಝಿನ್‌ನೊಳಗೆ ಕನ್ನಡ ಪುಸ್ತಕವನ್ನಿಟ್ಟುಕೊಂಡು ಓದಲಾರಂಭಿಸಿದರು. ಆರಂಭ ಮಾಡಿದ್ದಷ್ಟೇ ಗೊತ್ತು, ಕಣ್ಣುಗಳು ಅದೆಷ್ಟು ಬಾರಿ ಜಿನುಗಿದ್ದವೋ ಗೊತ್ತಿಲ್ಲ! ‘ಕನ್ನಡದಲ್ಲೂ ಒಳ್ಳೆಯ ಬರಹಗಾರರಿದ್ದಾರೆ ಎಂಬುದು ಅರಿವಾಯಿತು. ಆ ಶುಭಮುಹೂರ್ತದಲ್ಲಿ ಕನ್ನಡದಲ್ಲಿ ದೀಕ್ಷೆ ಸ್ವೀಕರಿಸಿದೆ’ ಎನ್ನುತ್ತಾರೆ ಬೀಚಿ.
ರೈಲಿನಲ್ಲಿ ಅವರು ಓದಿದ್ದು ಅನಕೃ ಅವರ ‘ಸಂಧ್ಯಾರಾಗ”!
ಆ ಘಟನೆ ಬೀಚಿಯವರ ಮೇಲೆ ಎಷ್ಟು ಪ್ರಭಾವ ಬೀರಿತೆಂದರೆ ಅನಕೃ ಅವರ ಪರಿಚಯ ಬಯಸಿ ಹೊರಟರು. ಕನ್ನಡ ಸಾರಸ್ವತ ಲೋಕಕ್ಕೆ ಕಾಲಿಟ್ಟರು, ಅವರನ್ನು ಪತ್ರಿಕೋದ್ಯಮವೂ ಆಕರ್ಷಿಸದೇ ಬಿಡಲಿಲ್ಲ. ಆ ಕಾಲದಲ್ಲಿ ಪಾಟೀಲ ಪುಟ್ಟಪ್ಪನವರ “ವಿಶಾಲ ಕರ್ನಾಟಕ” ಉತ್ತರ ಕರ್ನಾಟಕದ ಒಂದು ಜನಪ್ರಿಯ ಪತ್ರಿಕೆಯಾಗಿತ್ತು. ಹೊಸ ಪ್ರತಿಭೆಗಳಿಗಾಗಿ ತಡಕಾಡುತ್ತಿದ್ದ ಪಾಟೀಲ ಪುಟ್ಟಪ್ಪನವರಿಗೆ ಕಂಡಿದ್ದು ಬೀಚಿ. ಅವರ ಒತ್ತಾಯಕ್ಕೆ ಮಣಿದ ಬೀಚಿಯವರು ಒಂದು ಅಂಕಣ ಶುರುಮಾಡಿದ್ದರು. “ಕೆನೆ ಮೊಸರು” ಎಂಬ ಹೆಸರಿನ ಅಂಕಣದಲ್ಲಿ ಸಕಾಲಿಕ ವಿಷಯ ಗಳ ಬಗ್ಗೆ ಬರೆಯುತ್ತಿದ್ದ ಬೀಚಿ, ಲೇಖನದ ಕೊನೆಯಲ್ಲಿ ಒಂದು ಜೋಕು ಬರೆಯುತ್ತಿದ್ದರು. ಆ ಜೋಕು ಎಷ್ಟು ಜನಪ್ರಿಯತೆ ಪಡೆಯಿತೆಂದರೆ ಒಮ್ಮೆ ಬೀಚಿಯವರು ಏಕಾಏಕಿ ಅಂಕಣ ಬರೆಯುವುದನ್ನು ನಿಲ್ಲಿಸಿದಾಗ, ಓದುಗರ ಪತ್ರಗಳು ಕಚೇರಿಗೆ ದಾಳಿಯಿಟ್ಟವು. ಸಂಪಾದಕರಾಗಿದ್ದ ಪಾಪು, ‘ಕೆನೆ ಮೊಸರು’ ಹೆಸರಿನಡಿ ಬೀಚಿಯವರ ಫೋಟೋ ಹಾಕಿ, “ಹುಡುಕಿ ಕೊಡಿ” ಎಂದು ಪ್ರಕಟಿಸಿ ಬಿಟ್ಟರು! ಅದೆಲ್ಲಿದ್ದರೋ ಏನೋ ಕಚೇರಿಗೆ ಓಡಿಬಂದ ಬೀಚಿ, ಇನ್ನು ಮುಂದೆ ತಪ್ಪದೆ ಅಂಕಣ ಬರೆಯುವುದಾಗಿ ವಾಗ್ದಾನ ಮಾಡಿದರು. ಅವರು ಲೇಖನದ ಕೊನೆಯಲ್ಲಿ ಬರೆಯುತ್ತಿದ್ದ ಜೋಕುಗಳ ಸಂಗ್ರಹವೇ “ತಿಂಮನ ತಲೆ”. ೧೯೫೦ರಲ್ಲಿ ಮೊದಲ ಮುದ್ರಣ ಕಂಡ “ತಿಂಮನ ತಲೆ” ಮೂವತ್ತಕ್ಕೂ ಹೆಚ್ಚು ಮರುಮುದ್ರಣಗಳನ್ನು ಕಂಡಿದೆ. ಅಷ್ಟೇ ಅಲ್ಲ, ಇಂದಿಗೂ ಕನ್ನಡ ಸಾರಸ್ವತ ಲೋಕದಲ್ಲಿ ಅಂತಹ ಅದ್ಭುತ ಜೋಕುಗಳನ್ನು ಕಾಣಲು ಸಾಧ್ಯವಿಲ್ಲ .
*******
ಬ್ಯೂಟಿಫುಲ್ ಮನಸುಗಳು
ಒಂದು ಕ್ಲಾಸ್ ರೂಮ್ ನಲ್ಲಿ ಸುಮಾರು ವಿದ್ಯಾರ್ಥಿಗಳಿದ್ದರು. ಅವರಲ್ಲಿ ಒಬ್ಬ ಎದ್ದು ನಿಂತು ಪ್ರೊಫೆಸರ್ ಗೆ ಹೇಳಿದ ಸರ್ ನನ್ನ ತಂದೆ ನನ್ನ ಜನ್ಮ ದಿನಕ್ಕೆ ಒಂದು ದುಬಾರಿ ಗಡಿಯಾರವನ್ನು ಉಡುಗೊರೆಯಾಗಿ ಕೊಟ್ಟಿದ್ದರು. ಈ 5 ನಿಮಿಷದ ಬ್ರೇಕ್ ನಲ್ಲಿ ಅದನ್ನು ಇಲ್ಲಿಯೇ ಬಿಟ್ಟು ಹೊರಗೆ ಹೋಗಿದ್ದೆ, ಬಂದು ನೋಡಿದರೆ ಕಾಣುತ್ತಿಲ್ಲ. ಆಗ ಪ್ರೊಫೆಸರ್ ವಿಚಾರ ಮಾಡಲಾಗಿ ಈ ಹುಡುಗ ಹೊರಗೆ ಹೋಗಿ ಒಳಗೆ ಬರುವವರೆಗೆ ಕ್ಲಾಸ್ ರೂಮ್ ಒಳಗಿರುವ ಯಾವನೋ ಒಬ್ಬ ಕದ್ದಿರುತ್ತಾನೆ ಎಂದು ಊಹಿಸಿದರು.
ಎಲ್ಲಾ ವಿದ್ಯಾರ್ಥಿಗಳಿಗೆ ಎದ್ದು ನಿಲ್ಲಿಸಿ ತಮ್ಮ ತಮ್ಮ ಕರ್ಚೀಫಿನಿಂದ ತಮ್ಮ ಕಣ್ಣುಗಳನ್ನು ಕಟ್ಟಿಕೊಳ್ಳಲು ತಿಳಿಸಿದರು. ಒಬ್ಬೊಬ್ಬರನ್ನು ಮೈಮುಟ್ಟಿ ಹುಡುಕುತ್ತಾ ಬಂದಾಗ ಒಬ್ಬನ ಜೇಬಿನಲ್ಲಿ ಅದು ಸಿಕ್ಕಿತು. ಅದನ್ನು ಕಳೆದುಕೊಂಡ ವಿದ್ಯಾರ್ಥಿಗೆ ಒಪ್ಪಿಸಿ, ಎಲ್ಲರಿಗೂ ಕಣ್ಣಿನ ಬಟ್ಟೆ ತೆಗೆಯಲು ತಿಳಿಸಿದರು. ಎಂದಿನಂತೆ ಪಾಠ ಮುಂದುವರೆಯಿತು.
ಆದರೆ ಗಡಿಯಾರ ಕದ್ದ ವಿದ್ಯಾರ್ಥಿಯ ಮನದಲ್ಲಿ ಭಯ, ಆತಂಕ ಶುರುವಾಗಿತ್ತು. ಇಂದೋ ನಾಳೆಯೋ ನಾನು ಕಳ್ಳ ಎಂದು ಎಲ್ಲರ ಮುಂದೆ ಬಹಿರಂಗವಾಗಿ ವಿಷಯ ತಿಳಿಸುತ್ತಾರೆ. ಆಗ ನನ್ನ ಗತಿ ಏನಾಗಬೇಕು ಎಂದು ಆತಂಕದಿಂದಲೇ ಕ್ಲಾಸಿಗೆ ಬರುತ್ತಿದ್ದ. ಹೀಗೆ ದಿನಗಳು ಕಳೆದು, ತಿಂಗಳುಗಳು ಕಳೆದು, ವರ್ಷವೇ ಕಳೆದು ಹೋಯಿತು. ಆ ವಿಷಯ ಯಾರಿಗೂ ಗೊತ್ತಾಗಲಿಲ್ಲ. ಎಲ್ಲಾ ವಿದ್ಯಾರ್ಥಿಗಳು ಪರೀಕ್ಷೆ ಮುಗಿಸಿ ಕಾಲೇಜಿನಿಂದ ನಿರ್ಗಮಿಸಿ ಹೋದರು.
ಹಲವು ವರ್ಷಗಳ ನಂತರ ಗಡಿಯಾರ ಕದ್ದ ವಿದ್ಯಾರ್ಥಿ ದೊಡ್ಡ ಬಿಸಿನೆಸ್ ಮ್ಯಾನ್ ಆಗಿ ಒಳ್ಳೆಯ ಹೆಸರು ಮಾಡಿದ್ದ. ಮುಂದೆ ಒಂದು ದಿನ ಆ ಕಾಲೇಜಿನ ವಿದ್ಯಾರ್ಥಿಗಳ ರಿಯೂನಿಯನ್ ಕಾರ್ಯಕ್ರಮದ ಮುಖ್ಯ ಆಕರ್ಷಣೆಯಾಗಿ ಅದೇ ಹುಡುಗ ಕಾಲೇಜಿಗೆ ಬಂದ. ಆತ ನೇರವಾಗಿ ಅದೇ ಪ್ರೊಫೆಸರ್ ಹತ್ತಿರ ಬಂದು ಕಾಲಿಗೆ ನಮಸ್ಕರಿಸಿ ಚಿಕ್ಕ ದನಿಯಲ್ಲಿ ಹೇಳಿದ ಸರ್ ಇಂದು ನಾನು ಜೀವಂತವಾಗಿರಲು ನೀವೇ ಕಾರಣ. ನನ್ನ ಇವತ್ತಿನ ಈ ಸಾಧನೆಗೆ ನೀವು ಮಾತ್ರ ಕಾರಣ. ಆಗ ಆ ಪ್ರೊಫೆಸರ್ ಆಶ್ಚರ್ಯಚಕಿತರಾಗಿ ನಾನು ಹೇಗೆ ಕಾರಣ ಮಗು ಎಂದರು.
ಸರ್ ಅಂದು ನಾನು ಆ ಗಡಿಯಾರವನ್ನು ಕದ್ದ ವಿಷಯ ನೀವು ಯಾರಿಗೂ ಹೇಳಲಿಲ್ಲ ಬಹಿರಂಗಪಡಿಸಲಿಲ್ಲ. ನನ್ನ ಹೆಸರು ಬಹಿರಂಗವಾದ ದಿನ ನಾನು ಆತ್ಮಹತ್ಯೆ ಮಾಡಿಕೊಳ್ಳಬೇಕೆಂದು ನಿರ್ಧಾರ ಮಾಡಿದ್ದೆ. ಅದೆಷ್ಟು ದಿನ ಕಳೆದರೂ ನೀವು ಈ ವಿಷಯವನ್ನು ಬಹಿರಂಗಪಡಿಸಲಿಲ್ಲ. ಆದ್ದರಿಂದ ನಾನು ಅಂದೇ ನಿರ್ಧರಿಸಿದೆ. ಇನ್ನು ಜೀವನದಲ್ಲಿ ನಿಯತ್ತಾಗಿ ಬದುಕಬೇಕೆಂದು. ಈ ನನ್ನ ಬದಲಾವಣೆಗೆ ಅವಕಾಶ ಕಲ್ಪಿಸಿಕೊಟ್ಟಿದ್ದು ನೀವೇ. ಆದ್ದರಿಂದ ನೀವೇ ನನ್ನ ದೇವರು ಎಂದ.
ಪ್ರೊಫೆಸರ್ ಆಶ್ಚರ್ಯಚಕಿತರಾಗಿ ಹೌದೇ! ಆ ವಿದ್ಯಾರ್ಥಿ ನೀನೆಯೋ? ನನಗೂ ಗೊತ್ತಿರಲಿಲ್ಲ ಎಂದರು. ಆ ದಿನ ನಾನು ಎಲ್ಲಾ ವಿದ್ಯಾರ್ಥಿಗಳ ಕಣ್ಣನ್ನು ಕಟ್ಟಿಸಿ, ನಾನು ಕೂಡ ನನ್ನ ಕಣ್ಣುಗಳನ್ನು ಕಟ್ಟಿಕೊಂಡಿದ್ದೆ. ಏಕೆಂದರೆ ಕದ್ದಿರುವ ವಿದ್ಯಾರ್ಥಿ ಯಾರೇ ಆಗಿರಲಿ, ಅವನು ನನ್ನ ವಿದ್ಯಾರ್ಥಿಯೇ. ನನ್ನ ದೃಷ್ಟಿಕೋನದಲ್ಲಿ ನನ್ನ ಯಾವ ವಿದ್ಯಾರ್ಥಿಯೂ ಕೆಳಮಟ್ಟದಲ್ಲಿ ಗುರುತಿಸಿಕೊಳ್ಳಬಾರದು. ಹೀಗಾಗಿ ನನಗೂ ಇವತ್ತೇ ತಿಳಿಯಿತು ಆ ವಿದ್ಯಾರ್ಥಿ ನೀನೇ ಎಂದು.
ಎದುರಿಗೆ ನಿಂತ ವಿದ್ಯಾರ್ಥಿಯ ಕಣ್ಣಾಲೆಗಳು ತುಂಬಿ ಹರಿಯತೊಡಗಿತ್ತು. ಮತ್ತೊಮ್ಮೆ ಗುರುಗಳ ಪಾದಕ್ಕೆ ಹಣೆ ಮುಟ್ಟಿ ನಮಸ್ಕರಿಸಿ ಈ ನಿಮ್ಮ ಕ್ಷಮಾ ಗುಣದಿಂದ ನಾನು ಮತ್ತೆ ಮನುಷ್ಯನಾಗಿರುವೆ ಎಂದ.
******
ಇಂದಿನ ಯುಗದಲ್ಲಿ ಪ್ರತಿ ವ್ಯಕ್ತಿಯೂ ಇನ್ನೊಬ್ಬರ ತಪ್ಪುಗಳನ್ನು ಹುಡುಕಿ ಎತ್ತಿತೋರಿಸುವ ಕಾರ್ಯದಲ್ಲಿಯೇ ಮಗ್ನನಾಗಿರುತ್ತಾನೆ.
1) ಪರಿವಾರದಲ್ಲಿ ಅಣ್ಣ-ತಮ್ಮಂದಿರ, ಅಪ್ಪ-ಅಮ್ಮಂದಿರ, ಮಕ್ಕಳ, ಹೆಂಡತಿಯ ತಪ್ಪುಗಳು.
2) ಕೆಲಸದಲ್ಲಿ ಹಿರಿಯ ಅಧಿಕಾರಿಯ, ಸಹೋದ್ಯೋಗಿಯ ತಪ್ಪುಗಳು.
3) ಸಮಾಜದ, ಸರಕಾರಗಳ ತಪ್ಪುಗಳು.
4) ಮುಖ ಪುಸ್ತಕದಲ್ಲಂತೂ ಹಗಲು ರಾತ್ರಿ ಕೆಲವರ ಕೆಲಸವೇ ಇದು.
-- ಯಾರೋ ಒಬ್ಬ ತಿಳಿದೋ ತಿಳಿಯದೆಯೋ ತಪ್ಪು ಮಾಡಿದ್ದು ಗೊತ್ತಾದಲ್ಲಿ ಅವರನ್ನು ಕ್ಷಮಿಸಿಬಿಡಿ. ಅವನಿಗೆ ಅಥವಾ ಅವಳಿಗೆ ತನ್ನ ಆತ್ಮ ಗೌರವ (self-respect) ಉಳಿಸಿಕೊಳ್ಳಲು ಒಂದು ಅವಕಾಶ ಮಾಡಿಕೊಡಿ.
-- ತಪ್ಪಿತಸ್ಥ ಎಂದು ತಿಳಿದ ಮೇಲೂ ತನ್ನನ್ನು ತಾನು ಸುಧಾರಿಸಿಕೊಳ್ಳಲು ಒಂದು ಅವಕಾಶ ಕೊಟ್ಟು ಸುಮ್ಮನಾಗಿ ಬಿಡಿ. ಅವನು ಅಥವಾ ಅವಳು ಮುಖ ಮೇಲೆತ್ತಿ ಬದುಕಲು ಒಂದು ಅವಕಾಶ ಕಲ್ಪಿಸಿಕೊಟ್ಟಂತಾಗುತ್ತದೆ.
ಇಂದಿನ ಯುಗದ ತಪ್ಪು ಹುಡುಕುವವರ ಮಧ್ಯೆ "ಕ್ಷಮಿಸುವ ಬ್ಯೂಟಿಫುಲ್ ಮನಸುಗಳು" ನಾವಾಗೋಣ. "ಕ್ಷಮಿಸುವುದು ಮತ್ತು ಕ್ಷಮೆ ಕೇಳುವುದು ಶಕ್ತಿಶಾಲಿಗಳ ಸಾಮರ್ಥ್ಯವೇ ಹೊರತು ಹೇಡಿಗಳದ್ದಲ್ಲ."🙏🌹🤝
*****
( ಡಿಸೆಂಬರ್ 6 ರಂದು ಉದಯವಾಣಿ ದಿನಪತ್ರಿಕೆಯ ಕಲ್ಲು ಸಕ್ಕರೆ ಅಂಕಣದಲ್ಲಿ ಪ್ರಕಟವಾದ ಬರಹ)
#ನೀವು_ಓದಲೇಬೇಕು
ಮಕ್ಕಳು ಜೊತೆಗಿದ್ದರೆ ಸಾಕು: ಅವರಿಗೆ ಏನಾದರೂ ಬುದ್ಧಿಮಾತು ಹೇಳುವುದು ಅಪ್ಪನಿಗೆ ಅಭ್ಯಾಸವಾಗಿಬಿಟ್ಟಿತ್ತು. ಬುದ್ಧಿಮಾತನ್ನಷ್ಟೇ ಹೇಳಿ ಅವರು ಸುಮ್ಮನಾಗುತ್ತಿರಲಿಲ್ಲ, ಅದಕ್ಕೆ ಹೊಂದುವಂಥ ಒಂದು ಉಪಕಥೆಯನ್ನೂ ಹೇಳುತ್ತಿದ್ದರು. '' ನಾನು ಹೇಳುವುದನ್ನು ಗಮನವಿಟ್ಟು ಕೇಳಿಸ್ಕೊಳ್ಳಿ. ನೀವು ಮುಂದೊಮ್ಮೆ ಕಷ್ಟಕ್ಕೆ ಸಿಕ್ಕಿಕೊಂಡಾಗ ಈ ಮಾತುಗಳ ಮಹತ್ವ ಗೊತ್ತಾಗುತ್ತೆ ನಿಮಗೆ...'' ಎನ್ನುತ್ತಿದ್ದರು. ಈ ಬಗೆಯ ಮಾತುಗಳು, ನನ್ನನ್ನೂ ಸೇರಿದಂತೆ ಹೆಚ್ಚಿನವರಿಗೆ ಇಷ್ಟವಾಗುತ್ತಿರಲಿಲ್ಲ. ಹಾಗಾಗಿ, ಏನಾದರೂ ಕಾರಣ ಹೇಳಿ ಅಪ್ಪನ '' ಕೊರೆತದಿಂದ'' ಪಾರಾಗುತ್ತಿದ್ದೆವು. ಮದುವೆಯಾದ ಮೇಲಂತೂ, ಅಪ್ಪನಿಂದ ದೂರ ಉಳಿಯಲು ನನಗೊಂದು ಪ್ರಬಲ ಕಾರಣವೇ ಸಿಕ್ಕಿಬಿಟ್ಟಿತು. ಸದಾ ಹೆಂಡತಿಯ ಹಿಂದೆಯೇ ಅಲೆಯುತ್ತಾ ಅಪ್ಪನನ್ನು ಅವಾಯ್ಡ್ ಮಾಡತೊಡಗಿದೆ. ಕಡೆಗೊಮ್ಮೆ, ಪಕ್ಕದ ಜಿಲ್ಲೆಗೆ ಟ್ರಾನ್ಸ್ ಫರ್ ಆಗಿದ್ದನ್ನೇ ನೆಪಮಾಡಿಕೊಂಡು ಸಂಸಾರದೊಂದಿಗೆ ಶಿಫ್ಟ್ ಆಗಿಬಿಟ್ಟೆ. ಹೆತ್ತವರ ಜೊತೆಗೇ ಉಳಿದರೆ, ಯಾವ್ಯಾವುದೋ ಜವಾಬ್ದಾರಿಗಳು ಮೈಮೇಲೆ ಬೀಳ್ತಾನೇ ಇರ್ತವೆ. ಪ್ರೈವೆಸಿ ಅನ್ನುವುದೇ ಇರೋದಿಲ್ಲ. ಹೀಗಾದರೆ ನಾನು ಲೈಫ್ ನ ಎಂಜಾಯ್ ಮಾಡುವುದು ಯಾವಾಗ ಅನ್ನುವುದು ನನ್ನ ನಿಲುವಾಗಿತ್ತು.
ಹೀಗೇ ೧೦ ವರ್ಷಗಳು ಕಳೆದುಹೋದವು. ಈ ಅವಧಿಯಲ್ಲಿ ಇಬ್ಬರು ಮಕ್ಕಳು ಮನೆ ತುಂಬಿದ್ದರು.ಬಿ ಪಿ ಜೊತೆಯಾಗಿತ್ತು. ಸ್ವಲ್ಪ ಹೊಟ್ಟೆ ಬಂದಿತ್ತು. ಅತ್ತ, ಕಾಲನ ಹೊಡೆತದಿಂದ ಅಪ್ಪನೂ ಡಲ್ ಆಗಿದ್ದ. ಈ ಸುದೀರ್ಘ ಅವಧಿಯಲ್ಲಿ ವರ್ಷವರ್ಷವೂ ಹಬ್ಬ- ಹರಿದಿನ, ಸಂಬಂಧಿಗಳ ಮದುವೆ, ಮತ್ಯಾವುದೋ ಕುಟುಂಬದ ಕಾರ್ಯಕ್ರಮದ ನೆಪದಲ್ಲಿ ವರ್ಷಕ್ಕೆ ಐದಾರು ಬಾರಿ ಊರಿಗೆ ಹೋಗಿದ್ದೆನೇನೋ. ಈಗ ಇದ್ದಕ್ಕಿದ್ದಂತೆ, ಅಪ್ಪನನ್ನು ನೋಡಬೇಕು, ಅವನ ಮಾತು ಕೇಳಬೇಕು, ಅವನೊಂದಿಗೆ ಒಂದಷ್ಟು ದಿನಗಳನ್ನು ಕಳೆಯಬೇಕೆಂದು ತೀವ್ರವಾಗಿ ಅನಿಸತೊಡಗಿತು. ಅದೇ ಸಮಯಕ್ಕೆ ಮಕ್ಕಳಿಗೆ ಬೇಸಿಗೆ ರಜೆಯೂ ಶುರುವಾಯಿತು. ಹೇಗಿದ್ರೂ ರಜೆಯಿದೆ. ಹತ್ತಿಪ್ಪತ್ತು ದಿನ ಊರಲ್ಲಿದ್ದು ಬರೋಣ ಎಂಬ ನಿರ್ದಾರದೊಂದಿಗೆ ಎಲ್ಲರೂ ಹೊರಟೆವು.
ಅದೊಂದು ಮಧ್ಯಾಹ್ನ ನಿಂಬೆಹಣ್ಣಿನ ಜ್ಯುಸ್ ಕುಡಿದು ಲೋಟವನ್ನು ಕೆಳಗಿಡುತ್ತಾ ಅಪ್ಪ ಹೇಳಿದರು: ಒಂದು ಬುದ್ಧಿಮಾತು ಹೇಳ್ತೇನೆ ಕಣಯ್ಯಾ. ಜೀವನದಲ್ಲಿ ಯಾವತ್ತೂ ಫ್ರೆಂಡ್ ಗಳನ್ನೂ ಮರೆಯಬೇಡ. ದಿನಕ್ಕೊಮ್ಮೆಯಾದ್ರೂ ಅವರನ್ನು ಮಾತಾಡಿಸು. ನಾಳೆಗೆ ಹೇಗೋ ಏನೋ...
ಕಷ್ಟಕಾಲದಲ್ಲಿ ಫ್ರೆಂಡ್ ಗಳು ಬೇಕಾಗ್ತಾರೆ... ''
ಈ ಮಾತಲ್ಲಿ ನನಗಂತೂ ನಂಬಿಕೆ ಇರಲಿಲ್ಲ. ಫ್ರೆಂಡ್ ಗಳಿಂದ ತೊಂದರೆಯೇ ಜಾಸ್ತಿ ಅನ್ನುವುದು ನನ್ನ ನಂಬಿಕೆಯಾಗಿತ್ತು. ಏಕೆಂದರೆ, ಒಂದಿಬ್ಬರು ಗೆಳೆಯರು ಸಾಲ ಪಡೆದು ಅದನ್ನು ವಾಪಸ್ ಮಾಡದೆ ಸತಾಯಿಸುತ್ತಿದ್ದರು. ಇನ್ನೊಂದಿಬ್ಬರು, ಹೊಟ್ಟೆಕಿಚ್ಚಿನಿಂದ ಕುದಿಯುತ್ತಿದ್ದರು. ಮತ್ತೊಬ್ಬ, ನನ್ನ ಮೇಲೆ ಇಲ್ಲಸಲ್ಲದ ಗಾಸಿಪ್ ಹಬ್ಬಿಸಿದ್ದ! ಇದನ್ನೆಲ್ಲಾ ಅಪ್ಪನಿಗೆ ಹೇಳಿ, ಇಂಥಾ ಫ್ರೆಂಡ್ ಗಳಿಂದ ಏನಪ್ಪಾ ಉಪಯೋಗ? ಇವರೆಲ್ಲಾ ಕಾಸಿನ ಅಗತ್ಯ ಇದ್ದಾಗ ಮಾತ್ರ ಬರ್ತಾರೆ. ಇಂಥವರು ಇದ್ರೆಷ್ಟು, ಬಿಟ್ಟರೆಷ್ಟು?"ಅಂದೆ.
''ಛೆ ಛೆ, ಅಂಥವರಲ್ಲ ಕಣಯ್ಯಾ. ನಿನ್ನ ಬಾಲ್ಯದ ಗೆಳೆಯರು ಅಂತ ಇದ್ದಾರಲ್ಲ, ಅವರಲ್ಲಿ ಎಷ್ಟೋ ಜನ ಈವರೆಗೂ ನಿನ್ನಿಂದ ಯಾವುದೇ ಸಹಾಯ ಕೇಳಿಲ್ಲ. ಆದ್ರೆ ಈಗಲೂ ತುಂಬಾ ಪ್ರೀತಿ- ವಿಶ್ವಾಸ ತೋರಿಸ್ತಾರೆ. ನೀನೇನು ಮಾಡಿದ್ದೀಯಾ ಅಂದ್ರೆ- ನಿನ್ನದೇ ಆಫೀಸ್ ನ, ನಿನ್ನಂತೆಯೇ ಸಂಬಳ ಪಡೆಯುವ ಜನರನ್ನು ಹತ್ತಿರ ಬಿಟ್ಕೊಂಡಿದೀಯ. ಅವರನ್ನೇ ಫ್ರೆಂಡ್ಸ್ ಅಂತ ತಿಳಿದಿದ್ದೀಯ. ಅದನ್ನೇ ತಪ್ಪು ಅನ್ನೋದು. ಇವರೆಲ್ಲಾ ನೀನು ಚೆನ್ನಾಗಿರುವಷ್ಟು ದಿನ ಮಾತ್ರ ನಿನ್ನ ಜೊತೆ ಇರ್ತಾರೆ. ನಾಳೆ ಅಕಸ್ಮಾತ್ ನೀನು ಏನಾದರೂ ತೊಂದರೆಗೆ ಸಿಕ್ಕಿಕೊಂಡರೆ- ತಕ್ಷಣ ಇವರೆಲ್ಲಾ ಮಾಯಾ ಆಗ್ತಾರೆ. ಅಂಥವರಿಂದ ಪ್ರಯೋಜನವಿಲ್ಲ. ಯಾವುದೇ ಪ್ರತಿಫಲ ಬಯಸದೇ ಬಂದು ನಾಲ್ಕು ಸಮಾಧಾನದ ಮಾತಾಡ್ತಾರಲ್ಲ; ಅಂಥವರು ಬೇಕು. ಅಂಥವರ ಜೊತೆ ಕಾಂಟ್ಯಾಕ್ಟ್ ಇಟ್ಕೋ..'' ಅಂದರು ಅಪ್ಪ. ಅಷ್ಟಕ್ಕೇ ಸುಮ್ಮನಾಗದೆ ಐದಾರು ಜನರ ಹೆಸರನ್ನೂ ಸೂಚಿಸಿದರು.
ಅಪ್ಪ ಹೇಳಿದ್ದಕ್ಕೆಲ್ಲಾ ತಲೆಯಾಡಿಸಿಕೊಂಡು ಕೂರಲು ಆಗುತ್ತಾ? ಫ್ರೆಂಡ್ಸ್ ಅಂತ ಹೊರಟ್ರೆ, ಫ್ಯಾಮಿಲಿ ನ ಮಿಸ್ ಮಾಡ್ಕೋಬೇಕಾಗುತ್ತೆ. ನಮಗೆ ಫ್ಯಾಮಿಲಿ ಮುಖ್ಯ. ಫ್ಯಾಮಿಲಿ ಜೊತೆ ಲೈಫ್ ನ ಎಂಜಾಯ್ ಮಾಡಬೇಕು. ಮಕ್ಕಳನ್ನು ಚೆನ್ನಾಗಿ ಓದಿಸಬೇಕು. ನಾವು ರಿಟೈರ್ಡ್ ಆಗುವ ಮೊದಲೇ ಅವರಿಗೊಂದು ಕೆಲಸ ಸಿಗುವ ಹಾಗೆ ನೋಡ್ಕೋಬೇಕು... ಇಷ್ಟೇ ನನ್ನ ತಲೆಯಲ್ಲಿತ್ತು. ಹಾಗಾಗಿ ನನ್ನಿಷ್ಟದಂತೆಯೇ ಬದುಕಿಬಿಟ್ಟೆ. ಆದರೆ ಅಪ್ಪನ ಮಾತುಗಳು ಮೇಲಿಂದಮೇಲೆ ನೆನಪಾಗುತ್ತಲೇ ಇದ್ದವು. ಆಗೆಲ್ಲಾ ಅನಿವಾರ್ಯವಾಗಿ ಬಾಲ್ಯದ ಗೆಳೆಯರಿಗೆ ಫೋನ್ ಮಾಡಿ ಅಥವಾ ಎಲ್ಲಾದರೂ ಭೇಟಿ ಮಾಡಿ ನಾಲ್ಕಾರು ಮಾತಾಡಿ ಸುಮ್ಮನಾಗುತ್ತಿದ್ದೆ.
ಓಡುವ ಕಾಲಕ್ಕೆ ಯಾವ ತಡೆ? ಅಪ್ಪನೀಗ ಗೋಡೆಯ ಮೇಲಿನ ಚಿತ್ರವಾಗಿದ್ದರು. ಇನ್ಮುಂದೆ ಮನೆಗೆ ನಾನೇ ಹಿರಿಯ ಅಂದುಕೊಳ್ಳುವ ವೇಳೆಗೆ ನನಗೂ 60 ವರ್ಷ ತುಂಬಿ, ಸೇವೆಯಿಂದ ನಿವೃತ್ತಿಯೂ ಆಯಿತು. '' ಕೆಲಸ ಇಲ್ಲ ಎಂದು ಗೊತ್ತಾದ ತಕ್ಷಣ, ಅದುವರೆಗೂ ಸುತ್ತಲೂಇರುತ್ತಿದ್ದ ಜನ ಮಾಯವಾದರು. ಈ ಮಧ್ಯೆ ಮತ್ತೆ ಮೂರು ವರ್ಷ ಕಳೆಯುವುದರೊಳಗೆ ಹೆಂಡತಿಗೆ ಏನೇನೋ ದೈಹಿಕ ತೊಂದರೆಗಳು ಕಾಣಿಸಿಕೊಂಡವು. ಇನ್ನೊಂದು ಕಡೆ ಮಕ್ಕಳು ನಾನು ಹೇಳಿದ್ದಕ್ಕೆಲ್ಲಾ ತಕರಾರು ತೆಗೆಯತೊಡಗಿದ್ದರು. ಕೆಲಸ ಹುಡುಕಿಕೊಂಡು ಬೇರೆ ಊರಿಗೆ ಅಥವಾ ಬೇರೆ ದೇಶಕ್ಕೆ ಹೋಗಿಬಿಡುವ ಮಾತನ್ನಾಡಿದರು.
ಅಲ್ರಯ್ಯ, ನೀವು ಹೋಗಿಬಿಟ್ರೆ ನಮ್ಮನ್ನು ನೋಡಿಕೊಳ್ಳೋರು ಯಾರು? ಅಂದರೆ, ಅದಕ್ಕೆ ಉತ್ತರಿಸಲೇ ಇಲ್ಲ. ಮರುದಿನ ಇದೇ ಪ್ರಶ್ನೆಯನ್ನು ಸ್ವಲ್ಪ ಜೋರಾಗಿ ಕೇಳಿದಾಗ- ''ಅದಕ್ಕೆಲ್ಲಾ ನಾವೇನು ಮಾಡೋಕಾಗುತ್ತೆ? ನಮಗೆ ನಮ್ಮ ಲೈಫ್ ಮುಖ್ಯ'' ಅಂದುಬಿಟ್ಟರು.
ಮಕ್ಕಳು ಆಸೆಪಟ್ಟಂತೆಯೇ ನಾನು ಬದುಕಿದ್ದೆ. ಅವರನ್ನು ಚೆನ್ನಾಗಿ ಸಾಕಲು- ಓದಿಸಲು ಇನ್ನಿಲ್ಲದ ರಿಸ್ಕ್ ತೆಗೆದುಕೊಂಡಿದ್ದೆ. ನನಗೆ ಫ್ಯಾಮಿಲಿಯೇ ಮುಖ್ಯ ಅನ್ನುತ್ತಾ ಗೆಳೆಯರು- ಬಂಧುಗಳನ್ನು ದೂರಮಾಡಿದ್ದೆ. ಆದರೀಗ, ಆ ಮಕ್ಕಳೇ ನನ್ನಿಂದ ದೂರ ಹೋಗುವ ಹವಣಿಕೆಯಲ್ಲಿದ್ದರು. ಒರಟಾಗಿ ಮಾತಾಡಿದ್ದರು. ಇಂಥದೊಂದು ಸಂದರ್ಭದ ಕಲ್ಪನೆಯೂ ನನಗಿರಲಿಲ್ಲ. ಇದೇ ಯೋಚನೆಯಲ್ಲಿ ಹಣ್ಣಾದೆ. ಅವತ್ತೊಮ್ಮೆ ತಲೆಸುತ್ತು ಬಂದಂತಾಗಿ...
ಮತ್ತೆ ಎಚ್ಚರವಾದಾಗ ಆಸ್ಪತ್ರೆಯಲ್ಲಿದ್ದೆ. ಯಾಕೋ ವಿಪರೀತ ಮಾತಾಡಬೇಕು ಅನ್ನಿಸಿತು. ಮನಸ್ಸಿನ ನೋವನ್ನೆಲ್ಲಾ ಹೇಳಿಕೊಳ್ಳಬೇಕನ್ನಿಸಿತು. ಆದರೆ, ನನ್ನ ಮಾತು
ಕೇಳಿಸಿಕೊಳ್ಳಲು ಅಲ್ಲಿ ಯಾರೂ ಇರಲಿಲ್ಲ. ಮಕ್ಕಳು ಆಫೀಸ್ ಗೆ ಹೋಗಿಬಿಟ್ಟಿದ್ದರು. ಹೆಂಡತಿ ಊಟ ತರಲೆಂದು ಮನೆಗೆ ಹೋಗಿದ್ದಳು. ಅಪ್ಪನ ಮಾತುಗಳು ನೆನಪಾಗಿದ್ದೇ ಆಗ. ಒಮ್ಮೆ ಕಾಲ್ ಮಾಡಿ ನೋಡೋಣ ಅಂದುಕೊಂಡು, ಬಾಲ್ಯದ ಇಬ್ಬರು ಗೆಳೆಯರಿಗೆ ಫೋನ್ ಮಾಡಿ
ವಿಷಯ ತಿಳಿಸಿದೆ. ಇದಾಗಿ ಎರಡು ಗಂಟೆಗಳು ಕಳೆದಿಲ್ಲ, ಒಬ್ಬಿಬ್ಬರಲ್ಲ; ಚಡ್ಡಿ ದೋಸ್ತ್ ಗಳಾಗಿದ್ದ ನಾಲ್ವರು ಗೆಳೆಯರು ಬಂದರು! ಅವರಿಗೆ ನನ್ನಿಂದ ಯಾವ ಸಹಾಯವೂ ಆಗಿರಲಿಲ್ಲ. ಸಂಸಾರ ಮೊದಲು, ಸಂಬಂಧ ಆಮೇಲೆ ಅನ್ನುವ ಹಮ್ಮಿನಲ್ಲಿ ನಾನು ಅವರೆಲ್ಲರ ಜೊತೆ
ಬೇಕಾಬಿಟ್ಟಿ ಮಾತಾಡಿದ್ದೆ. ಅದೆಲ್ಲಾ ನೆನಪಾಗಿ ನಾಚಿಕೆಯಾಯಿತು.
ಉಹೂಂ, ಆ ಗೆಳೆಯರು ಅದೇನನ್ನೂ ನೆನಪಿಸಲಿಲ್ಲ. '' ನಾವೆಲ್ಲಾ ನಿನ್ನ ಜೊತೆಗೆ ಇರ್ತೇವೆ. ಏನೂ ಆಗಲ್ಲ ನಿನಗೆ. ಧೈರ್ಯವಾಗಿರು. ನೀನು ಆಸ್ಪತ್ರೆಯಲ್ಲಿ ಇರುವಷ್ಟೂ ದಿನ ಬೆಳಗ್ಗೆ ಇಬ್ಬರು, ಮಧ್ಯಾಹ್ನ ಇಬ್ಬರು ಬಂದು ಕಂಪನಿ ಕೊಡ್ತೇವೆ. ನನ್ನ ಮಗನನ್ನು ಕಷ್ಟಕಾಲದಲ್ಲಿ ನೋಡ್ಕೊಳ್ರಪ್ಪಾ ಅಂತ ನಿಮ್ಮ ತಂದೆ ಹಿಂದೊಮ್ಮೆ ಹೇಳಿದ್ರು, ಅದೂ ನೆನಪಿದೆ ನಮಗೆ...'' ಅಂದರು. ಅಷ್ಟೇ ಅಲ್ಲ, ಆಸ್ಪತ್ರೆಯಲ್ಲಿ ಇದ್ದಷ್ಟೂ ದಿನ ತಪ್ಪದೇ ಬಂದರು. ನನ್ನ ಮಾತುಗಳಿಗೆ ಕಿವಿಯಾದರು. ಕಷ್ಟಗಳಿಗೆ ಹೆಗಲಾದರು. ಒಂಟಿತನಕ್ಕೆ ಜೊತೆಯಾದರು.
ಕಡೆಗೊಂದು ದಿನ ಡಿಸ್ಚಾರ್ಜ್ ಆದಾಗ, ಆಸ್ಪತ್ರೆಯಿಂದ ಮನೆಗೂ ಅವರೇ ಕರೆತಂದರು. ಅರ್ಧ ಗಂಟೆ ಜೊತೆಗಿದ್ದು, ಧೈರ್ಯ ಹೇಳಿ ಎದ್ದುಹೋದರು.
ಆಗಲೇ ಮತ್ತೊಮ್ಮೆ ಅಪ್ಪ ಹೇಳಿದ್ದ ಮಾತುಗಳು ನೆನಪಿಗೆ ಬಂದವು: '' ಜೀವನದಲ್ಲಿ ಯಾವತ್ತೂ ಫ್ರೆಂಡ್ ಗಳನ್ನೂ ಮರೆಯಬೇಡ. ಆಗಾಗ ಅವರನ್ನು ಮಾತಾಡಿಸು. ಕಷ್ಟಕಾಲದಲ್ಲಿ ಫ್ರೆಂಡ್ ಗಳು ಬೇಕಾಗ್ತಾರೆ... ''
ಅಂದಹಾಗೆ, ಫ್ರೆಂಡ್ ಗಳನ್ನು ಆಗಾಗ ಮಾತಾಡಿಸ್ತಾ ಇದ್ದೀರಿ ತಾನೇ?
*******
ತಂದೆ-ಮಕ್ಕಳ ಈ ಕೃತಜ್ನ್ಯತೆಯ ಪರಿ
🌹🌹🌹🌹🌹
ತುಂಬಾ ಬಡತನದಲ್ಲಿ ಬೆಳೆದ ಒಬ್ಬ ಆರ್ಡಿನರಿ ಅಂಚೆ ಕಚೇರಿಯ ಉದ್ಯೋಗಿ. ತನ್ನ ಇಬ್ಬರು ಮಕ್ಕಳನ್ನು ಚೆನ್ನಾಗಿ ಓದಿಸಿ ಉದ್ಯೋಗಸ್ಥರನ್ನಾಗಿ ಮಾಡಿ ವಿದೇಶಗಳಲ್ಲಿ ವಾಸ್ತವ್ಯ ಹೂಡುವ ಹಾಗೇ ಮಾಡಿದ.
ಇಬ್ಬರು ಮಕ್ಕಳಿಗೆ ಮದುವೆಯಾಗಿ ಮಕ್ಕಳಾದವು .ಇಬ್ಬರೂ ಸುಖೀ ಸಂಸಾರಸ್ಥರೇ. ಆದರೆ ತಂದೆಗೆ ಊರಿಂದೂರಿಗೆ ವರ್ಗಾವಣೆಗಳಾಗುತ್ತಾ ಕೊನೆಗೆ ಆಂದ್ರಪ್ರದೇಶದ ಚಿಂತಲಪಲ್ಲಿ ಎಂಬ ಕಚೇರಿಯಲ್ಲಿ ನಿವೃತ್ತಿ ಸ್ಥಾನಕ್ಕೆ ಬಂದು ನಿಂತರು.
ನಿವೃತ್ತಿಯು ಆಯಿತು, ಈಗ ಅಪ್ಪನಿಗೆ ಚಿಂತೆ.
ಮಕ್ಕಳಿಗೆ ಫೋನಾಯಿಸುತ್ತಾರೆ "ಒಂದೆರಡು ದಿನ ಊರಿಗೆ ಬಂದುಹೋಗಲು ಸಾಧ್ಯವೇ" ಎಂದು.
ಮಕ್ಕಳು ಸಹ ಒಪ್ಪುತ್ತಾರೆ .ಆದರೆ ಮಕ್ಕಳು ಒಂದೆರಡು ದಿನವಲ್ಲದೆ ಒಂದು ತಿಂಗಳು ರಜೆ ಮಾಡಿ ಊರಿಗೆ ಬರುತ್ತಾರೆ.
ಬಂದ ಮಕ್ಕಳಿಗೆ ತಂದೆ ಹೇಳುತ್ತಾರೆ "ನಿಮಗೊಂದು ವಿಷಯ ತಿಳಿಸಬೇಕಿದೆ "ಎಂದು.
"ನನ್ನ ನಿವೃತ್ತಿಯಾಗಿದೆ. ಹಾಗೆಯೇ ನನ್ನ ಖಾತೆಗೆ ಒಂದಷ್ಟು ಲಕ್ಷ ಪಿ ಎಫ್ ಹಣವು ಬಂದಿದೆ. ನೀವಿಬ್ಬರು ಆ ಹಣವನ್ನು ಹಂಚಿಕೊಂಡರೆ ನಾನು ನನ್ನ ಪೆನ್ಶನ್ ಹಣದಲ್ಲಿ ನಿಮ್ಮ ತಾಯಿಯನ್ನು ಸಾಕಬಲ್ಲೆ. ಈ ಸುದ್ದಿ ಹೇಳಲಿಕ್ಕೆಂದೇ ನಿಮ್ಮನ್ನು ಕರೆಸಿದೆ ಎಂದು ಮತ್ತೆ ಒಂದೆರಡು ದಿನ ಒಟ್ಟಿಗೆ ಎಲ್ಲರೂ ಎಲ್ಲಾದರೂ ಸುತ್ತಿ ಬರೋಣವೆಂದು" ಇಚ್ಛೆ ವ್ಯಕ್ತಪಡಿಸುತ್ತಾರೆ.
ಅದಕ್ಕೆ ಮಕ್ಕಳು ಹೇಳುತ್ತಾರೆ
"ಮೊದಲ ಸಲ ಕೆಲಸ ಮಾಡಿದ ಅಂಚೆ ಕಚೇರಿಯಾದ ಉಡುಪಿಯ ಹಿತ್ತಲುಮನೆ ಎಂಬ ಗ್ರಾಮಕ್ಕೆ ಹೋಗಿ ಬರೋಣ"ಎಂದು ಹೇಳುತ್ತಾರೆ,
ತಂದೆಗೆ ಆಶ್ಚರ್ಯ ಆ ಗ್ರಾಮದ್ಲಲೇನಿದೆ ಎಂದು ಆದರೂ ಮಕ್ಕಳಿಗೆ ನಿರಾಸೆಗೊಳಿಸದೆ ಹೊರಟುನಿಲ್ಲುತ್ತಾರೆ.
ಆ ಗ್ರಾಮದಲ್ಲಿ ಮೊದಲು ಕೆಲಸ ಮಾಡುವ ಸಮಯದಲ್ಲಿ ವಾಸ್ತವ್ಯ ಹೂಡಿದ್ದ ಗುಡಿಸಲು ಚೊಕ್ಕವಾದ ಮನೆ. ತನ್ನ ಮಕ್ಕಳು ಆಟವಾಡಿದ್ದ ಅಂಗಳ ಹಸಿರುಮಯವಾಗಿದೆ. ಆಗ ನೆಟ್ಟ ಸಸಿಗಳು ಮರಗಳಾಗಿವೆ. ತೆಂಗಿನ ಮರ ತುಂಬಾ ಕಾಯಿಗಳಿವೆ. ಎತ್ತ ನೋಡಿದರು ಹಸಿರು ಮನೆಯ ಕಂಪೌಂಡಿನ ಒಳಗೆ ಪರಿಶುದ್ಧ ತುಳಸಿ ಗಿಡ ಗೇಟು ಪ್ರವೇಶಿಸುವಷ್ಟರಲ್ಲಿ ಒಬ್ಬ ಆಳು ಬಂದು ಗೇಟಿನ ಬೀಗದ ಕೀಲಿ
ಮಗನ ಕೈ ಗೆ ಇಡುತ್ತಾನೆ. ಮಗ ಬೀಗ ತೆಗೆದು ಒಳ ಬಂದಾಗ ತಂದೆಗೆ ಎಲ್ಲವೂ ಅಯೋಮಯ ಈ ಆಳು ಯಾರು, ಈ ಮನೆಗೆ ಏಕೆ ಬಂದೆವು, ಎಲ್ಲವೂ ನಿಗೂಢವೇ...
ಮನೆಯ ಒಳಗೆ ಬರುವಷ್ಟರಲ್ಲಿ ಎಲ್ಲವೂ ಸ್ವಚ್ಛಂದ ಸ್ವಚ್ಛಂದ...
ತಂದೆ ಏನೋ ಕೇಳಲು ಬರುವಷ್ಟರಲ್ಲಿ ಮಕ್ಕಳೇ ಮಾತನಾಡಲು ಶುರು ಮಾಡುತ್ತಾರೆ "ಅಪ್ಪ.... ನಿಮ್ಮ ನಿವೃತ್ತಿ ಹತ್ತಿರವಿದೆಯೆಂದು ತಿಳಿಯಿತು .ಈ ಸ್ಥಳ ನಿಮಗೆ ತುಂಬಾ ಇಷ್ಟವೆಂದು ಒಂದು ವರ್ಷದ ಹಿಂದೆ ಈ ಸ್ಥಳವನ್ನು ನಾವೇ ಕೊಂಡುಕೊಂಡಿದ್ದೇವೆ. ವರ್ಗಾವಣೆಗಳಿಂದ ಬಸವಳಿದಿದ್ದೀರಿ
ಸಾಕು ನಿಮ್ಮ ನೆಮ್ಮದಿಗೆ ಒಂದು ಮನೆ ಇರಬೇಕು ಎಂದು ನಿಮಗೆ ತಿಳಿಸದೆ ನಾವಿಬ್ಬರು ಬಂದು ಇಲ್ಲಿ ಎಲ್ಲವೂ ಸರಿಪಡಿಸಿ ಹೋದೆವು ನಿಮ್ಮ
ಪಿ ಎಫ್ ಹಣ ಖಾತೆಯಲ್ಲೇ ಇರಲಿ ನಮ್ಮನ್ನು ಬಡತನದಲ್ಲಿ ಓದಿಸಿದಿರಿ ,ಬೆಳೆಸಿದಿರಿ ನಾವು ಈಗ ಸದೃಢರಾಗಿದ್ದೇವೆ .ನಮ್ಮ ಮಕ್ಕಳನ್ನು ನಿಮ್ಮಲ್ಲಿಯೇ ಬಿಟ್ಟು ಹೋಗುತ್ತೇವೆ. ಅವರು ನಿಮ್ಮ ಅಡಿಯಲ್ಲಿ ಬೆಳೆದರೆ ನಮ್ಮ ಸಂಸ್ಕೃತಿ ಸಂಪ್ರದಾಯಗಳು ಅವರಿಗೂ ತಿಳಿಯುತ್ತದೆ.
ಅಮ್ಮನನ್ನು ಚೆನ್ನಾಗಿ ನೋಡಿಕೊಳ್ಳಿ ನಿಮ್ಮ ಆರೋಗ್ಯದ ಕಡೆ ಗಮನ ಕೊಡಿ .ಮೊಮ್ಮಕ್ಕಳನ್ನು ಓದಿಸಿ ಕೆಲಸಕ್ಕೆಂದು ಆಳು ಇದ್ದಾನೆ. ಪ್ರತಿ ತಿಂಗಳು ಅವನ ಸಂಬಳವನ್ನು ಅವನ ಖಾತೆಗೆ ತುಂಬುತ್ತೇವೆ .ನಮ್ಮ ಮನೆಯ ಪಕ್ಕದಲ್ಲೇ ಅವನಿಗೂ ವಾಸ್ತವ್ಯವಿದೆ. ವರ್ಷಕ್ಕೊಮ್ಮೆ ತಪ್ಪದೆ ಬಂದುಹೋಗುತ್ತೇವೆ. ಎಂದು ಹೇಳುವಷ್ಟರಲ್ಲಿ
ಅಪ್ಪನ ಕಣ್ಣಾಲಿಗಳು ತುಂಬಿ, ಮೂಕಪ್ರೇಕ್ಷಕರಾಗಿ
ಬಿಟ್ಟರು. ಪ್ರತಿಯೊಬ್ಬ ಮಕ್ಕಳು ಇದೇ ತರಹ ನಡೆದುಕೊಂಡರೆ ಸಮಾಜದಲ್ಲಿ ವ್ರದ್ಧಾಶ್ರಮಗಳ ಅಗತ್ಯತೆ ಉದ್ಭವಿಸುವುದಿಲ್ಲ. ಪ್ರತಿಯೊಬ್ಬ ಪಾಲಕರು ಸಂತೋಷದಿಂದ ಜೀವನ ನಡೆಸಬಹುದು. ಇಂತಹ ಉತ್ತಮ ಮಾರ್ಗದಲ್ಲಿ ನಾವು - ನೀವು ಸಾಗೋಣ.
*ಮಕ್ಕಳೆಂದರೆ .....
.....ಹೀಗಿರಬೇಕು
*****
ಚಿಕ್ಕ ಕಥೆ
ಅಮ್ಮ ಹೆಂಡತಿ ಮಕ್ಕಳು
"ನಿವೃತ್ತಿಯಾದ ಮೊದಲ ದಿನ ನಾನು ಮೊದಲು ಮಾಡುವ ಕೆಲಸವೆಂದರೆ ನನ್ನ ಅಮ್ಮನನ್ನು
ವೃದ್ಧಾಶ್ರಮಕ್ಕೆ ಸೇರಿಸುವುದು..."
ನನ್ನ ಮನೆಯಲ್ಲಿ ನಾನು ಈ ಮಾತುಗಳನ್ನು ಹೇಳುತ್ತ ಹೇಳುತ್ತ ಒಂದು ವರುಷವಾಯಿತು.....
ಇನ್ನು ಈ ಕೆಲಸವನ್ನು ಮುಂದು ಹಾಕುವಂತಿಲ್ಲ...
ಯಾಕೆಂದರೆ ನಿನ್ನೆ ನನಗೆ ನಿವೃತ್ತಿ ಯಾಯಿತು...
ನನ್ನ ಹೆಂಡತಿ ಮಕ್ಕಳೆಲ್ಲ ಈ ದಿನಕ್ಕಾಗಿಯೇ ಕಾದು ಕುಳಿತವರಂತೆ ಇದ್ದಾರೆ..
ನನ್ನ ಅಮ್ಮ ಆರೋಗ್ಯವಾಗಿಯೇ ಇದ್ದವಳು,ಸುಮಾರು ಎರಡೂವರೆ ವರುಷಗಳಿಂದ ಅನಾರೋಗ್ಯಕ್ಕೆ ಬಿದ್ದಳು...
ಇತ್ತೀಚೆಗೆ ಒಂದು ವರುಷದಿಂದ
ಮಲ ಮೂತ್ರ ವಿಸರ್ಜನೆಯ ಮೇಲೆ ಕೂಡಾ ಅವಳಿಗೆ ನಿಯಂತ್ರಣವಿಲ್ಲ...
ಬೆಳಗ್ಗೆ ರಾತ್ರಿ ಅವಳನ್ನು ನಾನು ನೋಡಿ ಕೊಳ್ಳಬಲ್ಲೆ...
ಆದರೆ ನಾನು ಕೆಲಸಕ್ಕೆ ಹೋದಾಗ ಅವಳನ್ನು ನೋಡಿ ಕೊಳ್ಳಬೇಕಾದವಳು ಇವಳೇ ... ಅಂದರೆ ನನ್ನ ಹೆಂಡತಿಯೇ...
ನನಗಾದರೂ ಅವಳು
ತಾಯಿ..ನನ್ನವಳಿಗೆ ಅವಳು ತಾಯಿಯಾ..?
ನನ್ನ ಸಿಡುಕಿನ ನೋಟಕ್ಕೆ ಬೆದರಿ ಇವಳು ಅತ್ತೆಯ ಚಾಕರಿ ಮಾಡುತ್ತಿದ್ದಾಳೆ.
ಆದರೆ ಇವಳ ಮುಖದಲ್ಲೊಂದು ತಿರಸ್ಕಾರದ ನೋಟ ಚಿರ ಸ್ಥಾಯಿಯಾಗಿ ನಿಂತ ಹಾಗೆ ನನಗೆ ಕಾಣಿಸುತ್ತಿದೆ..
ಇವಳಿಗಾದರೂ ಈ ಭಾವ ಸಹಜವೇ...ಹೊರಗಿನಿಂದ ಬಂದವಳು....
ಆದರೆ ನನ್ನ
ಮಕ್ಕಳಿಗೂ ಅನಾರೋಗ್ಯದ ಅಜ್ಜಿ ಬೇಡವೆನ್ನಿಸುವುದು ನನಗೆ ದಿಗಿಲು ಹುಟ್ಟಿಸುವುದು.....
ಅಭಿಲಾಷ್ ಆದರೂ ಹುಡುಗ...ಮುಲಾಜಿಲ್ಲದೆ ಹೇಳಿದ್ದ"ಅಮ್ಮಾ ನನ್ನ ಫ್ರೆಂಡ್ಸ್ ಇರುವಾಗ ಅಜ್ಜಿಯನ್ನು ಹೊರಗೆ ಬಿಡಬೇಡ"
ಆದರೆ ನನ್ನ ಮಗಳು ಶಿಶಿರ "ಅಬ್ಬಾ ,ಅಜ್ಜಿ ಗಬ್ಬು ನಾತ...ವ್ಯಾಕ್" ಅಂದಾಗ ಸಿಟ್ಟು ನೆತ್ತಿಗೇರಿತ್ತು...
"ಮಕ್ಕಳೇ..ಸ್ವಲ್ಪ ಕಾಲ ಸಹಿಸಿ..ನನ್ನ ಅಮ್ಮನನ್ನು ವೃದ್ಧಾಶ್ರಮಕ್ಕೆ ಸೇರಿಸುವ " ಅಂದಿದ್ದೆ...
ಹೆಂಡತಿ ಮಕ್ಕಳೇನೋ ಸುಮ್ಮನಾದರು...
ಆದರೆ ಅಮ್ಮ ಅಂದಿನಿಂದ ಮತ್ತಷ್ಟು ಮೌನಿಯಾದಳು...
ಇಂದು ನನ್ನ ನಿವೃತ್ತಿಯ ಮೊದಲ ದಿನ.
ಅಮ್ಮನ ಪ್ರಾತಃ ವಿಧಿಗಳನ್ನೆಲ್ಲ
ಮುಗಿಸಿ ನಾವು ಹೊರಟು ನಿಂತೆವು...
ಯಾಕೋ ಹೆಂಡತಿ ಮಕ್ಕಳೂ ಹೊರಟು ನಿಂತರು...
ಅಮ್ಮನ ಮುಖದಲ್ಲಿ ಕಳೆ ಇಲ್ಲ...
"ವೃದ್ಧಾಶ್ರಮಕ್ಕೆ ಸೇರಿಸುತ್ತೇನೆ " ಎಂದ ಮಗನ ಮಾತು ಇವಳ ಕಿವಿಗೂ ಬಿದ್ದಿರಬೇಕು.
ಬಲಿ ಪೀಠಕ್ಕೆ ಕರೆದೊಯ್ಯುವ ಮೇಕೆಯಂತೆ ಉಸಿರೆತ್ತದೆ ಮಗ ಕರೆದಲ್ಲಿ ಬರುತ್ತಾಳೆ.
ನಾವೆಲ್ಲರೂ ಕಾರಿನಲ್ಲಿ ಕುಳಿತೆವು.
ಮಗರಾಯ ಕಾರನ್ನು ಚಲಾಯಿಸುತ್ತೇನೆ ಅಂದ.
ಅವನಿಗೆ ಕೊಡದೆ ನಾನೇ ಕಾರನ್ನು ಚಲಾಯಿಸಿಕೊಂಡು ಬಂದೆ..
ಒಂದು ಹಂಚಿನ ಮನೆಯ ಬಳಿ ಕಾರು ನಿಲ್ಲಿಸಿದೆ..
ಹಾರನ್ ಮಾಡಿದೆ..
ಮನೆಯೊಳಗಿನಿಂದ ನನ್ನ ಗೆಳೆಯ ಓಡೋಡಿ ಬಂದ..
ನಾನು ಕಾರಿನ ಬಾಗಿಲು ತೆಗೆದು ಅಮ್ಮನನ್ನು ಕೆಳಗಿಳಿಸಿದೆ..
"ವೃದ್ಧಾಶ್ರಮ ಅಲ್ವಾ..?" ಹೆಂಡತಿ
ಬಾಯಿ ತೆಗೆದಳು...
ನಾನು ಮಾತನಾಡದೆ ಅಮ್ಮನನ್ನು ಕರೆದು ಕೊಂಡು ಮನೆಯ ಒಳಗೆ ಕರೆದು ಕೊಂಡು ಬಂದೆ...
ಒಂದು ಬೆಡ್ ರೂಂ...ಒಂದು ಹಾಲ್ ಒಂದು ಕಿಚನ್....ನನ್ನ ಗೆಳೆಯ ಸರಿಯಾದ ಚಿಕ್ಕ ಮನೆಯನ್ನೇ ಆಯ್ದು ಕೊಂಡಿದ್ದ.
ಬಾಡಿಗೆಯ ಮನೆ...ಗೆಳೆಯ ಮನೆಯ ಕೀಲಿ ಕೈ ಕೊಟ್ಟು ಹೊರಟ..
"ಏನಿದು ಆವಾಂತರ... ಅತ್ತೆಯನ್ನು ಇಲ್ಲಿ ನೋಡಿ ಕೊಳ್ಳುವವರು ಯಾರು?"
ನನ್ನವಳ ಪ್ರಶ್ನೆ..
"ಅವಳ ಮಗ ನಾನು ಜೀವದಲ್ಲಿ ಇದ್ದೇನೆ" ನನ್ನ ಉತ್ತರ.
"ಅಂದರೆ ನೀವು ಇಲ್ಲಿ ನಿಂತು ಅಮ್ಮನನ್ನು ನೋಡಿ ಕೊಳ್ಳುತ್ತೀರಾ?"
"ಹಾಗೆಂದು ಕೊಳ್ಳಬಹುದು" ಎಂದೆ...
"ನಮ್ಮ ಗತಿ..?" ಹೆಂಡತಿಯ ಪ್ರಶ್ನೆ...
"ಮನೆಯ ಖರ್ಚು ನನ್ನದೇ" ನನ್ನ ಉತ್ತರ.
"ಮನೆಯಲ್ಲಿ ನೀವಿಲ್ಲದೆ ಇದ್ದರೆ ಭಯ ಅಗುತ್ತೆ".
"ಮಗ ನನಗಿಂತ ಎತ್ತರಕ್ಕೆ ಬೆಳೆದು ನಿಂತಿದ್ದಾನೆ.ಏನು ಭಯವೇ" ಅಂದೆ.
"ಅಯ್ಯೋ ನೀವಿಲ್ಲದ ಮನೆಯೆ".
ಇವಳ ಕಣ್ಣಲ್ಲಿ ಗಂಗಾ ಪ್ರವಾಹ..
ಅಮ್ಮನ ಕಣ್ಣಲ್ಲಿ ಅಶ್ರುಧಾರೆ..
ಅವಳನ್ನು ವೃದ್ದಾಶ್ರಮಕ್ಕೆ ಸೇರಿಸುತ್ತೇನೆ ಅಂದು ಕೊಂಡಿರಬೇಕು..
ಈಗ ಅವಳ ಕಣ್ಣಲ್ಲಿ ಸಂತೋಷ ಉಕ್ಕಿ ಹರಿಯುತ್ತಿದೆ.
ಅವಳನ್ನು ಮಂಚದ ಮೇಲೆ ಮಲಗಿಸಿದೆ...
ಮಗ, ಮಗಳು, ಇವಳು ಎಲ್ಲರು
ಸ್ತಬ್ಧ ಚಿತ್ರದ ಹಾಗೆ ಮೂಗರಾಗಿದ್ದಾರೆ..
ಮಗ ಬಾಯಿ ತೆಗೆದ"ಅಪ್ಪಾ ಇದೆಲ್ಲ ಏನು nonsence...?
ನಾನೆಂದೆ"ಮಗಾ ನಿನಗೆ ನಿನ್ನ ಫ್ರೆಂಡ್ಸ್ ಮನೆಗೆ ಬರುವಾಗ ನನ್ನ ಅಮ್ಮ ಮನೆಯಲ್ಲಿದ್ದರೆ..ಅದು shame....ಅನ್ನಿಸುತ್ತಿತ್ತಲ್ಲ...ಅದು nonsense...
"ನಾನೂ ಅಮ್ಮ ಇಲ್ಲಿರುತ್ತೇವೆ..ನೀವು ಮನೆಗೆ ಹೋಗಿ ಮಗೂ..ಚೆನ್ನಾಗಿರಿ".
"ಅಪ್ಪಾ "
ಮಗಳು ಮಾತಿಲ್ಲದೆ ನಿಂತ ಅಣ್ಣನ ಸಹಾಯಕ್ಕೆ ಬರುತ್ತಾಳೆ, "ಅಜ್ಜಿಗೆ ನೀನೊಬ್ಬನೇ ಮಗನಾ. ಮೂರು ಮಂದಿ ಮಕ್ಕಳಲ್ವಾ...ನೀನೆ ಯಾಕೆ ಅಜ್ಜಿಯನ್ನು ನೋಡಿಕೊಳ್ಳ ಬೇಕು...?"
ಇದು ಇವಳ ಮಾತಲ್ಲ...ಯಾವತ್ತೋ ಇವಳ ಅಮ್ಮನಾಡಿದ ಮಾತು..ಅದನ್ನೇ
ಉರು ಹೊಡೆದು ಹೇಳುತ್ತಿದ್ದಾಳೆ...ನನ್ನವಳು ಏನೂ ತಿಳಿಯದ ಹಾಗೆ ಕುಳಿತಿದ್ದಾಳೆ.
"ಮಗಳೇ... ನನಗಾಗ ಆರೇಳು ವರ್ಷ ಇರಬಹುದು.ಅಪ್ಪ ತೀರಿ ಹೋಗಿ ಎರಡೋ ಮೂರೋ ವರ್ಷಗಳಾಗಿತ್ತು. ... ನನಗೆ ವಾಂತಿ ಭೇದಿ ಆರಂಭವಾಯಿತು...ನಮ್ಮದು ಹಳ್ಳಿ... ವಾಹನದ ಸೌಕರ್ಯ ಇರಲಿಲ್ಲ ಮಗಾ...ಹಳ್ಳಿಯ ನಾಟಿ ಮದ್ದು ನಾಟಲಿಲ್ಲ.
ಮಗೂ... ನಾನು ಬದುಕುವ ಆಸೆ ಯಾರಿಗೂ ಇರಲಿಲ್ಲವಂತೆ.
ಅರೆ ನಿರ್ಜೀವ ಸ್ಥಿತಿಯಲ್ಲಿದ್ದ ನನ್ನನ್ನು ಇದೇ ನನ್ನ ಅಮ್ಮ ಆ ಹೆಗಲ ಮೇಲೆ ಹಾಕಿ ಆರು ಮೈಲು ನಡೆದು ವೈದ್ಯರ ಹತ್ತಿರ ಕೊಂಡು ಹೋಗಿ ಇಂಜೆಕ್ಷನ್ ಚುಚ್ಚಿಸಿ ಮತ್ತೆ ಆರು ಮೈಲು ಹೊತ್ತು ನಡೆದು.ಬದುಕಿಸಿದಳು.
ದೇವಾ...ಇಂತಹ ಅಮ್ಮನಿಗೆ ಈಗ ಮಲಮೂತ್ರದ ಮೇಲೆ ನಿಯಂತ್ರಣ ಇಲ್ಲ ಮಗೂ.
ಹೆಣ್ಣಾದ ನಿನಗೂ ನಿನ್ನಮ್ಮನಿಗೂ ಇದು ಅಸಹ್ಯ ಅಂತ ಆದರೆ ,ನನ್ನ ಅಣ್ಣಂದಿರ ಹೆಂಡಂದಿರಿಗೂ ನನ್ನ ಅಮ್ಮ ಈ ವೃದ್ಧಾಪ್ಯದಲ್ಲಿ ಅಸಹ್ಯವೇ ಆಗುವಳು ಮಗೂ....
ಈ ಪ್ರಾಯದಲ್ಲಿ ಅವಳು ಯಾರಿಗಾದರೂ ಅಸಹ್ಯ ಅನ್ನಿಸಿದರೆ ಅವಳ ಮಗನಾದ ನನಗೆ ಹೇಗಾಗಬೇಡ...?
ಬೇಡ ಮಗೂ ,ನನ್ನ ಅಮ್ಮ ನನಗೆ ಅಸಹ್ಯವಲ್ಲ...ಸಾಯುವವರೆಗೆ ನಾನು ಅವಳಿಗೆ ಮಗನಂತೆ ಅಲ್ಲ... ಮಗಳಂತೆ ಅವಳ ಸೇವೆ ಮಾಡುತ್ತೇನೆ.. ನೀವು ಹೋಗಿ...ನಾನು ವಾರಕ್ಕೊಮ್ಮೆ ಮನೆಗೆ ಬಂದು ಹೋಗುತ್ತೇನೆ....ಅಮ್ಮನಿರುವ ವರೆಗೆ ಮಾತ್ರ..."
ಹೆಂಡತಿ ಕೈ ಜೋಡಿಸುತ್ತಾಳೆ.."ಬನ್ನಿ ನಮ್ಮದು ತಪ್ಪಾಯ್ತು,ಅತ್ತೆಯನ್ನು ಅಮ್ಮ ಅಂತ ತಿಳಿದು ಕೊಳ್ಳುತ್ತೇನೆ.ನೀವಿಲ್ಲದ ಮನೆ ನನಗೆ ಮನೆಯೇ...ಹೋಗುವ ಬನ್ನಿ.." ಅವಳಿಗೆ ಗಾಬರಿಯಾಗಿದೆ.
ಮಕ್ಕಳೇ ,
ನಾನು ಹೇಳುತ್ತೇನೆ,ಈ ಮಲ ಮೂತ್ರಗಳೆಲ್ಲ ಮಾನವನ ಜೀವನದ ಅನಿವಾರ್ಯ ಸಂಗತಿಗಳು...ಅದು ಬೇಡ ಅನ್ನಿಸಿದರೆ ಯಾವ ಹೆಣ್ಣೂ ಹೆರಲಾರಳು...ಯಾವ ದಾದಿಯೂ ಕೂಡಾ ಸೇವೆ ಸಲ್ಲಿಸಲಾರಳು .. ಯಾವ ಡಾಕ್ಟರ್ ಕೂಡಾ ಡಾಕ್ಟರ್ ಅಗಲಾರ.....
ಇನ್ನು ಬದುಕಿ ಉಳಿದರೆ ನಾನೂ ಮುದುಕನಾಗುತ್ತೇನೆ...ಆರೋಗ್ಯದ ವಿಷಯ ನನ್ನ ಕೈಯಲ್ಲಿ ಇಲ್ಲ..ನನ್ನಮ್ಮನಿಗಾದರೂ ನಾನಿದ್ದೆ...ಈಗಿನ ಮಕ್ಕಳು ನಮ್ಮ ಕೊನೆಗಾಲದಲ್ಲಿ ನಮ್ಮ ಸೇವೆ
ಮಾಡಬೇಕೆಂಬ ನಿರೀಕ್ಷೆಯೂ ತಪ್ಪೆ...
ನೀವು ಮನೆಗೆ ಹೋಗಿ... ವೃದ್ಧರಿಲ್ಲದ ಮನೆ ಸ್ವಚ್ಛ ಸುಂದರ ಮತ್ತು ನೆಮ್ಮದಿಯದ್ದು ಹೋಗಿ ಬನ್ನಿ"
ಮಗ ಕದಲಿ ಹೋದ
"ಅಪ್ಪಾ ಮಕ್ಕಳು ತಪ್ಪು ಮಾಡಿದರೆ ಕ್ಷಮಿಸಬೇಕಾದುದು,ತಪ್ಪಿದ್ದರೆ ಸರಿ ದಾರಿಯಲ್ಲಿ ನಡೆಸಬೇಕಾದುದು ಹಿರಿಯರ ನೀತಿಯಲ್ಲವೇನಪ್ಪ...ನೀವು ನಮ್ಮ ಕಣ್ಣ ತೆರೆಸಿದಿರಿ...ನಿಮ್ಮ ಅಮ್ಮನನ್ನು ನೀವು ನೋಡಿಕೊಂಡಂತೆ ನಾವು ಕೂಡ ಅಜ್ಜಿಯನ್ನೂ , ನಿಮ್ಮಿಬ್ಬರನ್ನೂ ಕೊನೆ ಕಾಲದ ವರೆಗೆ ಪ್ರೀತಿ.. ಗೌರವದಿಂದ ನೋಡಿ ಕೊಳ್ಳುತ್ತೇವೆ.."
ಮೂವರೂ ಅಳುತ್ತಾ ನನ್ನ ಕಾಲಿಗೆ ಬಿದ್ದರು...ನಾನೆಂದೆ "ನೀವು ಬೀಳಬೇಕಾದುದು ಈ ಕಾಲುಗಳಿಗಲ್ಲ..ಆ ಕಾಲುಗಳಿಗೆ".
ಅಮ್ಮನಿಗೆ ಎಷ್ಟು ಅರ್ಥವಾಯಿತೋ...ಅವಳ ಸೊಸೆಯೂ ಮೊಮ್ಮಕ್ಕಳೂ ಅವಳ ಕಡ್ಡಿಯಂತಿರುವ ಕಾಲಿಗೆ ಬೀಳುವಾಗ ಅವಳ ಒಣ ಕಣ್ಣುಗಳು ಒದ್ದೆಯಾಗಿದ್ದವು..
ಇದು ಕಥೆಯಲ್ಲ..
ನಮ್ಮ ಮುಂದಿರುವ ಹಿರಿಯ ಜೀವಗಳ ವ್ಯಥೆ.
ಬರಹ ಕೃಪೆ:
ಬರೆದವರು ಯಾರೆಂದು ತಿಳಿದಿಲ್ಲ.
*****
ಸ್ತ್ರೀ ಹೇಗಿರಬೇಕೆನ್ನುವುದೇ ಅಲ್ಲ
ಪುರುಷ ಕೂಡಾ ಹೇಗಿರಬೇಕೆನ್ನುವುದು ಧರ್ಮ ಶಾಸ್ತ್ರದಲ್ಲಿ ಹೇಳಲಾಗಿದೆ.
ಕಾರ್ಯೇಷು ಯೋಗೀ ಕರಣೇಷು ದಕ್ಷ:
ರೂಪೇ ಚ ಕೃಷ್ಣ: ಕ್ಷಮಯಾ ತು ರಾಮಃ:
ಭೋಜ್ಯೇಷು ತೃಪ್ತಃ: ಸುಖ ದುಃಖ ಮಿತ್ರಂ
ಷಟ್ಕರ್ಮಯುಕ್ತ: ಖಲು ಧರ್ಮನಾಥ:
1. ಕಾರ್ಯೇಷು ಯೋಗೀ
ಕೆಲಸ ಮಾಡುವುದರಲ್ಲಿ ಒಬ್ಬ ಯೋಗಿಯಂತೆ ಪ್ರತಿಫಲವನ್ನಪೇಕ್ಷಿಸದೆ ಮಾಡಬೇಕು
2.ಕರಣೇಷು ದಕ್ಷ:🏹
ಕುಟುಂಬವನ್ನು ನಡೆಸುವುದರಲ್ಲಿ, ಕೆಲಸ ಕಾರ್ಯಗಳನ್ನು ನಿರ್ವಹಿಸುವುದರಲ್ಲಿ, ದಕ್ಷತೆಯಿಂದಲೂ, ಸಂಯಮದಿಂದಲೂ ವ್ಯವಹರಿಸಬೇಕು, ಸಮರ್ಥನಾಗಿರಬೇಕು.
3. ರೂಪೇಚ ಕೃಷ್ಣ:
ರೂಪದಲ್ಲಿ ಕೃಷ್ಣನಂತೆ ಇರಬೇಕು, ಅಂದ್ರೆ ಎಂದಿಗೂ ಉತ್ಸಾಹದಿಂದಲೂ, ಸಂತೋಷದಿಂದಲೂ ಇರಬೇಕು.
4. ಕ್ಷಮಯಾ ತು ರಾಮಃ
ಸಂಯಮದಲ್ಲಿ ರಾಮನಂತೆಯೂ, ಏಕಪತ್ನಿವ್ರತಸ್ತನಂತೆಯೂ, ಮರ್ಯಾದಾ ಪುರುಷೋತ್ತಮನಾಗಿಯೂ, ರಾಮನಂತೆ ಕ್ಷಮಿಸುವ ಗುಣ ಹೊಂದಿರುವವನು ಆಗಿರಬೇಕು.
5. ಭೋಜ್ಯೇಷು ತೃಪ್ತಃ:
ಪತ್ನಿ/ ತಾಯಿ ಬಡಿಸಿದ ಊಟವನ್ನು ಸಂತೃಪ್ತಿಯಿಂದ (ಕೊಂಕು ನುಡಿಯದೆ,)
ಉಣ್ಣಬೇಕು.
6. ಸುಖ ದುಃಖ ಮಿತ್ರಂ
ಪತ್ನಿಯ ಎಲ್ಲಾ ಸುಖ ದುಃಖಗಳಲ್ಲಿ , ಕುಟುಂಬದ ನೋವು ನಲಿವುಗಳಲ್ಲಿ, ಮಿತ್ರನಂತೆ ಜೊತೆಯಾಗಿರಬೇಕು. ಎಲ್ಲಾ ಸರಿ-ತಪ್ಪುಗಳನ್ನು ಹಂಚಿಕೊಳ್ಳುವಂತವನಾಗಿರ ಬೇಕು.
ಈ ಎಲ್ಲಾ ಗುಣಗಳುಳ್ಳವನು ಆದರ್ಶ ಪುರುಷನಾಗುತ್ತಾನೆ.
*****
family story
ಪತ್ನಿ ತೀರಿಕೊಂಡು ಇಂದಿಗೆ ನಾಲ್ಕು ದಿನಗಳಾಯಿತು....
ಆಕೆಯ ಅಂತ್ಯಸಂಸ್ಕಾರಕ್ಕೆ ಆಗಮಿಸಿದ ಸಂಬಂಧಿಕರು ಒಬ್ಬೊಬ್ಬರಾಗಿ ಹೊರಟು ಹೋದರು...
ಕೊನೆಗೆ ಸಾವಿನ ಗಂಧವಿರುವ ಆ ಮನೆಯಲ್ಲಿ ನಾನು ಮತ್ತು ನನ್ನ ಮಕ್ಕಳು ಮಾತ್ರವಾಗಿ ಬಾಕಿಯಾದೆವು...
ಆಕೆ ಜೊತೆಯಲ್ಲಿಲ್ಲ ಎಂಬುದನ್ನು ನಂಬುವುದಕ್ಕೂ ನನಗೆ ಕಷ್ಟವಾಗುತ್ತಿದೆ....
ರೀ... ಇಲ್ಲಿ ನೋಡಿ... ಅಂತ ಹೇಳುತ್ತಾ ನನ್ನ ಬಳಿ ಓಡಿ ಬರುವುದನ್ನು ನಿನ್ನೆ ಎಂಬಂತೆ ನಾನು ನೆನಪಿಸಿಕೊಂಡೆ...
ನಮ್ಮನ್ನು ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತಿಸಿ ಸೋತು ಹೋದ ನತದೃಷ್ಟೆಯಾಗಿದ್ದಳು ಆಕೆ.....
ನಮ್ಮ ಮೇಲಿನ ಅತಿಯಾದ ಪ್ರೀತಿಯಿಂದಲೇ ಇರಬೇಕು ಆಕೆ ಯಾವತ್ತೂ ನಮ್ಮಿಂದ ದೂರ ಹೋಗಿರಲಿಲ್ಲ....
ತವರು ಮನೆಗೆ ಹೋದರೂ ಕೂಡಾ ಮನೆಯಲ್ಲಿ ಅವರು ಮತ್ತು ಮಕ್ಕಳು ಮಾತ್ರ ಇರೋದು ಅಂತ ಕಾರಣ ಹೇಳಿ ಸಂಜೆಯಾಗುತ್ತಲೇ ಓಡೋಡಿ ಮನೆ ತಲುಪುತ್ತಿದ್ದಳು...
ನಿಜವಾಗಿಯೂ ಆಕೆ ಆಕೆಯ ಮನೆಗೆ ಹೋಗುವುದು ನನಗೆ ಇಷ್ಟವಿರಲಿಲ್ಲ.... ಅದು ಆಕೆಯ ಮೇಲಿನ ಪ್ರೀತಿಯಿಂದಾಗಿರಲಿಲ್ಲ. ಬದಲಾಗಿ, ಆಕೆ ಹೋದರೆ, ನಮಗೆ ಅಡುಗೆ ಮಾಡಿ ಬಡಿಸುವವರು ಯಾರೂ ಇಲ್ಲ ಎಂಬ ಸ್ವಾರ್ಥವಾದ ಕಾರಣವಾಗಿತ್ತು...
ನಾನು ಮತ್ತು ಮಕ್ಕಳು ರಜಾದಿನಗಳಲ್ಲಿ ಟಿ ವಿಯ ಮುಂದೆ ಒಂದೊಂದು ಕಾರ್ಯಕ್ರಮವನ್ನು ನೋಡಿ ಖುಷಿಪಡುವಾಗ, ಅಡುಗೆ ಮನೆಯಲ್ಲಿ ಅಡುಗೆ ಮಾಡುವುದರಲ್ಲಿ ನಿರತಳಾಗಿರುತ್ತಿದ್ದಳು ಆಕೆ...
ಯಾವಾಗಲಾದರೂ ಸ್ವಲ್ಪ ಟಿ ವಿ ನೋಡೋದಕ್ಕೆ ನಮ್ಮ ಜೊತೆ ಬಂದು ಕುಳಿತರೆ, - ಅಮ್ಮಾ ನೀರು...
ಲೇ.. ಸ್ವಲ್ಪ ಟೀ ಮಾಡು...
ಅಂತ ಎಲ್ಲಾ ಹೇಳಿ ಆಕೆಯನ್ನು ನಾವು ಆ ಅಡುಗೆ ಕೋಣೆಗೇ ವಾಪಾಸ್ ಕಳುಹಿಸುತ್ತಿದ್ದೆವು...
ನಾನು ಹೇಳದೆಯೇ ಎಲ್ಲವನ್ನೂ ಅರ್ಥ ಮಾಡಿಕೊಂಡು ನನ್ನ ಎಲ್ಲಾ ಕೆಲಸಗಳನ್ನೂ ಮಾಡುತ್ತಿದ್ದಳು...
ಇಂದು ಈಗ ಒಂದು ಕಪ್ ಟೀ ಮಾಡಿಕೊಡಲಿಕ್ಕೋ...,
ಒಂದು ಲೋಟ ನೀರು ಕೊಡಲಿಕ್ಕೋ, ಆಕೆ ಜೊತೆಯಲ್ಲಿಲ್ಲ ಎಂಬ ಕಟು ಸತ್ಯವನ್ನು ನಾನು ನೋವಿನಿಂದಲೇ ಅರಿತೆ.....
ಯಾವುದಕ್ಕೂ ಆಕೆ ದೂರುಗಳನ್ನು ಹೇಳಿದವಳಲ್ಲಾ... ಒಂದು ಒಳ್ಳೆಯ ಸೀರೆ ಕೂಡಾ ನಾನು ಖರೀದಿಸಿಕೊಟ್ಟಿರಲಿಲ್ಲ......
ಒಂದು ಸಿನೆಮಾ ನೋಡಲು ಕೂಡಾ ಆಕೆಯನ್ನು ಜೊತೆಯಲ್ಲಿ ಕರಕ್ಕೊಂಡೋಗಿರಲಿಲ್ಲ...
ಕ್ಲಬ್, ಪಾರ್ಟಿ ಅಂತ ನಾನು ತಡವಾಗಿ ಮನೆಗೆ ಬರುವಾಗ ಆಕೆ ಗಾಬರಿಯಿಂದ ಯಾಕೆ ತಡವಾಯಿತು ಅಂತ ಕೇಳುವಾಗ ನಾನು ಆಕೆಯ ಪ್ರಶ್ನೆಯನ್ನು ಲೆಕ್ಕಿಸದೆ ನಿರ್ಲಕ್ಷಿಸುತ್ತಿದ್ದೆ.....
ರೀ... ನೋಡಿ.. ಕರೆಂಟ್ ಬಿಲ್ ಪಾವತಿಸಬೇಕಾದ ಕೊನೆಯ ದಿನ ನಾಳೆ...
ನೋಡಿ ಹಾಲಿನವನಿಗೆ ದುಡ್ಡು ಕೊಡಬೇಕಾದ ಸಮಯ ಹತ್ತಿರ ಬಂತು...
ಪೇಪರ್ ನವ ನಿನ್ನೆ ದುಡ್ಡು ಕೇಳಿ ಹೋದ...
ಮಕ್ಕಳ ಶಾಲೆಯ ಫೀಸ್ ನಾಳೆನೇ ಕೊಡಬೇಕು ರೀ.....
ನೋಡಿ ನಿಮ್ಮ ಬಿ ಪಿ ಯ ಮಾತ್ರೆ ಖಾಲಿಯಾಗಿದೆ...
ಹಾಗೆ ಆಕೆಯ ಬಯಕೆ ಮತ್ತು ಬೇಡಿಕೆಗಳನ್ನು ಬಿಟ್ಟು, ಉಳಿದ ಎಲ್ಲವನ್ನೂ ಸಮಯಕ್ಕೆ ಸರಿಯಾಗಿ ಆಕೆ ನೆನಪಿಸುವಳು.....
ಇನ್ನು ಹಾಗೆ ನೆನಪಿಸುವವರು ಯಾರೂ ಇಲ್ಲ..
ರಾತ್ರಿ ಕೆಲಸವೆಲ್ಲಾ ಮುಗಿಸಿ, ನನ್ನ ಪಕ್ಕದಲ್ಲಿ ಬಂದು ಮಲಗುವಾಗ, ಎದೆ ನೋಯುತ್ತಿದೆ, ಕಾಲು ನೋಯುತ್ತಿದೆ ಅಂತ ಆಕೆ ಹೇಳುವಾಗ, - ಅದು ನಿನಗೆ ಮನೆಯಲ್ಲಿ ಏನೂ ಕೆಲಸವಿಲ್ಲದೆ ಸುಮ್ಮನೆ ಕುಳಿತುಕೊಳ್ಳುತ್ತಿಯಲ್ಲಾ..
ಬೆಳಿಗ್ಗೆ ಐದು ಗಂಟೆಗೆ ಎದ್ದು ಸ್ವಲ್ಪ ವಾಕಿಂಗ್ ಮಾಡಿದರೆ ಎಲ್ಲಾ ಸರಿಹೋಗುತ್ತೆ.. ಅಂತ ನಾನು ಹೇಳುವಾಗ, ಆಕೆಯ ಕಣ್ಣುಗಳು ತುಂಬುವುದನ್ನು ನಾನು ನೋಡದ ಹಾಗೆ ನಟಿಸುತ್ತಾ ತಿರುಗಿ ಮಲಗುತ್ತಿದ್ದೆ...
ಕೊನೆಗೆ ಆ ಎದೆ ನೋವು ಹಾರ್ಟ್ ಅ್ಯಟೇಕ್ ನ ರೂಪದಲ್ಲಿ ಬಂದು ಆಕೆಯನ್ನು ಕರಕೊಂಡು ಹೋಗುವಷ್ಟರಲ್ಲಿ ಆಕೆಯ ನೋವನ್ನು ಅರ್ಥಮಾಡಿಕೊಳ್ಳಲು ತುಂಬಾ ತಡಮಾಡಿಬಿಟ್ಟೆ...
ಮನೆಗೆಲಸಗಳನ್ನು ಮಾಡುತ್ತಾ , ಆಕೆಯ ನೆನಪುಗಳೊಂದಿಗೆ ಇಂದಿಗೆ ನಾಲ್ಕು ದಿನಗಳನ್ನು ದೂಡಿ ಮುಗಿಸಿದೆ... ಮನೆಗೆಲಸ ಅಷ್ಟು ಸುಲಭವಲ್ಲ ಎಂಬ ಕಟುಸತ್ಯವನ್ನು ಬಹುಬೇಗನೆ ಅರಿತುಕೊಂಡೆ.....
ಆಕೆಯನ್ನು ದೂರಿದ ದಿನಗಳನ್ನು, ಚುಚ್ಚು ಮಾತುಗಳಿಂದ ಆಕೆಯನ್ನು ನೋಯಿಸಿದ ದಿನಗಳನ್ನು ನಾನು ಶಪಿಸುತ್ತಾ ಸ್ವತಃ ಮರುಗತೊಡಗಿದೆ....
ನಾನು ಕೆಲಸಕ್ಕೆ ಹೋಗಲು ಹೊರಡುವಾಗ, ಐರನ್ ಮಾಡಿಟ್ಟ ಬಟ್ಟೆಗಾಗಿ ಹುಡುಕಾಡಿದೆ.....
ರೀ... ನೀವು ಈ ಕಂದು ಬಣ್ಣದ ಶರ್ಟ್ ಧರಿಸಿ... ಇದು ನಿಮಗೆ ಚೆನ್ನಾಗಿ ಕಾಣಿಸುತ್ತಿದೆ. ಅಂತ ಆಕೆ ಹೇಳುವ ಹಾಗೆ ನನಗೆ ಅನಿಸಿತು......
ಸಂಜೆ ಕೆಲಸ ಮುಗಿಸಿ ಮನೆಗೆ ಬಂದ ನನಗಾಗಿ ಯಾರೂ ಬಾಗಿಲು ತೆರೆಯಲಿಲ್ಲ......
ನನ್ನ ಬರುವಿಕೆಗಾಗಿ ಯಾರೂ ಕಾದು ಕೂರಲಿಲ್ಲ....
ಯಾಕೆ ಇಷ್ಟು ತಡಮಾಡಿ ಬಂದಿದ್ದೀರಿ ಅಂತ ಯಾರೂ ನನ್ನತ್ರ ಗಾಬರಿಯಿಂದ ಕೇಳಲಿಲ್ಲ....
ಕೊನೆಗೆ ನಾನು ಬಾಗಿಲನ್ನು ದೂಡಿ ಒಳಗೆ ಹೋದಾಗ, ಹಾಲ್ ನಲ್ಲಿ ನಾನು ಬಂದದ್ದು ಕೂಡಾ ಅರಿಯದೆ, ಮಕ್ಕಳು ಮೊಬೈಲ್ ನಲ್ಲಿ ಮಗ್ನರಾಗಿದ್ದರು... ಅವರ ಪಕ್ಕದಲ್ಲಿ ತಿಂದ ಪಾತ್ರೆಗಳು ಎಲ್ಲವೂ ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದನ್ನು ನಾನು ದುಃಖದಿಂದ ನೋಡಿದೆ....
ಆಕೆಯಿದ್ದಾಗ ಸ್ವಚ್ಛವಾಗಿದ್ದ ಮನೆಯು ಇಂದು ಆಕೆಯಿಲ್ಲದಾಗ ಹೀನವಾಗಿ ಇರುವ ಮನೆಯ ಅವ್ಯವಸ್ಥೆಯನ್ನು ನೋಡಿ, ನನ್ನ ಹೃದಯವು ಮರುಗಿತು...
ಸ್ನಾನ ಮುಗಿಸಿ, ಒಂದು ಕಪ್ ಟೀ ಗಾಗಿ ನಾನು ಅಡುಗೆ ಮನೆಗೆ ಹೋದೆ...
ವಾಷ್ ಬೆಯ್ಸನ್ ನಲ್ಲಿ
ಊಟ ಮಾಡಿದ ತಟ್ಟೆಗಳು ಮತ್ತು ನೂಡಲ್ಸ್ ನ ಖಾಲಿ ಪ್ಯಾಕೆಟ್ ಗಳು ಮಾತ್ರ ನನಗೆ ಕಾಣಿಸಿತು....
ಪಾತ್ರೆಗಳನ್ನೆಲ್ಲಾ ಕ್ಲೀನ್ ಮಾಡಿ, ಫ್ರಿಡ್ಜ್ ನಿಂದ ಒಂದು ಆ್ಯಪಲ್ ತೆಗೆದು ಕಟ್ ಮಾಡಿ ತಿಂದು ಬೆಡ್ ರೂಮಿಗೆ ಬಂದು ಮಲಗಿದೆ....
ಲೈಟ್ ಆಫ್ ಮಾಡುವುದಕ್ಕೆ ಮುಂಚೆ ಗೋಡೆಯ ಮೇಲೆ ತೂಗುಹಾಕಿದ ಆಕೆಯ ಮುಗುಳ್ನಗುವ ಭಾವಚಿತ್ರವನ್ನೊಮ್ಮೆ ತುಂಬಾ ದುಃಖದಿಂದಲೇ ನಾನು ನೋಡಿದೆ.....,.
ಆಕೆಯನ್ನು ನಿರ್ಲಕ್ಷಿಸದೇ ಇದ್ದಿದ್ದರೆ, ಇಂದು ನಾನು ಸಂತೋಷದಿಂದ ಇರುತ್ತಿದ್ದೆ ಅಂತ ನೆನೆದು ಎರಡು ಹನಿ ಕಣ್ಣೀರು ನನ್ನ ಕಣ್ಣಿಂದ ಸುರಿಯಿತು.....
ಈ ಕಥೆಯನ್ನು ಓದಿದವರಲ್ಲಿ ಈ ಕಥೆಯ ಕಥಾ ನಾಯಕ ನಾನೇ ಅಂತ ಯೋಚಿಸುವವರು ಅನೇಕರು ಇರಬಹುದಲ್ಲವೇ...?
ಅಂತಹವರಿಗೆ ನಾನು ಹೇಳಬಯಸುವುದೇನೆಂದರೆ -
ಕಣ್ಣುಗಳಿರುವಾಗಲೇ ಅದರ ಬೆಲೆ ಗೊತ್ತಾಗುವುದು...
ಕಣ್ಣಿನ ದೃಷ್ಟಿ ನಷ್ಟವಾದ ನಂತರ ಕಣ್ಣಿನ ಮಹತ್ವವನ್ನು ಹೇಳಿ ಏನೂ ಪ್ರಯೋಜನವಿಲ್ಲ.
*****
-Padma Sirish
No comments:
Post a Comment