SEARCH HERE

Wednesday, 7 October 2020

ಆರೋಗ್ಯ ಫ್ಯಾನ್ ಗಾಳಿ use of fan air

 11.10.2020

ಆಸ್ಪತ್ರೆ ರಹಿತ ಆರೋಗ್ಯಕ್ಕೆ ಆಯುರ್ವೇದ 

ಸಂಚಿಕೆ-285

••••••••••••••••

✍️: ಇಂದಿನ ವಿಷಯ:


ಫ್ಯಾನ್ ಗಾಳಿ ಮೈಕೈ ನೋವು ತರುತ್ತದೆ.

•••••••••••••••••••••••••••••••••••••••

ಜೀವಿಗಳ ಶರೀರದಲ್ಲಿ, ವಿಕೃತಗೊಂಡ

ವಾತದಿಂದ  → ಎಲ್ಲಾ ರೀತಿಯ ನೋವುಗಳೂ

ಪಿತ್ತದಿಂದ → ಎಲ್ಲಾ ರೀತಿಯ ದಾಹ(ಉರಿ)ಗಳೂ

ಕಫದಿಂದ → ಎಲ್ಲಾ ರೀತಿಯ ಊತಗಳೂ ಉಂಟಾಗುತ್ತವೆ.


ಇನ್ನೂ ಸ್ಪಷ್ಟವಾಗಿ ಹೇಳಬೇಕೆಂದರೆ,

ವಿಕೃತ

ವಾತವಿಲ್ಲದೇ → ನೋವು ಬರುವುದಿಲ್ಲ

ಪಿತ್ತವಿಲ್ಲದೇ → ದಾಹ(ಉರಿ) ಸಾಧ್ಯವಿಲ್ಲ

ಕಫವಿಲ್ಲದೇ → ಊತ ಅಸಾಧ್ಯ


•••••

ವಾತವು,

1)ಧಾತುಕ್ಷಯ ಮತ್ತು 2)ಮಾರ್ಗಾವರೋಧ ಈ ಎರೆಡು ಕಾರಣಗಳಿಂದ ಹೆಚ್ಚುತ್ತದೆ.


1. ಧಾತುಕ್ಷಯ:- 

ಅಂದರೆ ಈ ಶರೀರಕ್ಕೆ ಒಂದು ನಿರ್ದಿಷ್ಟ ಆಕಾರವನ್ನು ಕೊಟ್ಟ ಮತ್ತು ಅದು ಕೆಲಸಮಾಡಲು ಸಾಮರ್ಥ್ಯವನ್ನು ತುಂಬುವ ಅಂಶಗಳಿಗೆ ಧಾತುಗಳೆಂದು ಹೆಸರು, ಅವು ರಸ, ರಕ್ತ, ಮಾಂಸ,‌ ಮೇದಸ್ಸು, ಅಸ್ಥಿ, ಮಜ್ಜೆ ಮತ್ತು ಶುಕ್ರ(ವೀರ್ಯ) ಎಂದು ಸಪ್ತ ಧಾತುಗಳಿವೆ.‌ ಇವುಗಳು ನಿತ್ಯವೂ ಸ್ವಲ್ಪ ಸ್ವಲ್ಪ ಸವೆಯುತ್ತವೆ ಮತ್ತು ತುಂಬುತ್ತವೆ. ಒಂದು ದಿನ‌ ಕೇವಲ ಕೆಲಸಗಳಿಂದ ಸವೆದು‌ ತುಂಬದೇ(ಊಟಮಾಡದೇ) ಹೋದರೆ ಮತ್ತು ಊಟಮಾಡಿಯೂ ರಕ್ತನಾಳಗಳು ಆಹಾರ-ಗಾಳಿ-ನೀರುಗಳನ್ನು ಸರಿಯಾಗಿ ಪೂರೈಸದೇಹೋದರೆ ಇಡೀ ಶರೀರ ನೋವು, ಆಯಾಸ/ಸುಸ್ತುಗಳಿಂದ ತುಂಬುತ್ತದೆ.


ಹಾಗೆಯೇ, ಫ್ಯಾನ್ ಗಾಳಿ ಏನುಮಾಡುತ್ತದೆ ನೋಡೋಣ

👇

2. ಮಾರ್ಗಾವರೋಧ:

ವಾತವು ಸದಾ ಚಲನೆಯಿಂದ ಕೂಡಿರುತ್ತದೆ, ಈ ಶರೀರದಲ್ಲಿ ಎಲ್ಲಾ ಧಾತುಗಳು ಸರಿ ಇದ್ದೂ ವಾತದ ಉಪಸ್ಥಿತಿ ಇಲ್ಲ ಎಂದರೆ ಚಲನೆ ಅಸಾಧ್ಯ. ಉದಾಹರಣೆಗೆ- ಪಾರ್ಶ್ವವಾಯು ಪೀಡಿತರ ಕೈ-ಕಾಲುಗಳಿಗೆ ರಕ್ತ, ಆಹಾರ, ಆಮ್ಲಜನಕ, ನೀರು ಎಲ್ಲಾ ಬರುತ್ತದೆ, ಪೋಷಣೆಯೂ ಆಗುತ್ತಿರುತ್ತದೆ, ಆದರೆ ವಾತದ ಅನಿಪಸ್ಥಿತಿಯ ಕಾರಣದಿಂದ ಚಲನೆಯೇ ಇರುವುದಿಲ್ಲ. ಹಾಗೆಯೇ ಸರ್ವ ಶರೀರದ ಒಂದು ಸಣ್ಣ ಚಲನೆ ಇದೆ ಎಂದರೆ ಅದು ವಾತದಿಂದ ಮಾತ್ರ ಸಾಧ್ಯ. ಇದನ್ನು ಹೊರ ಜಗತ್ತಿನಲ್ಲಿ ಗಾಳಿ ಎಂದು ಕರೆದರೆ ಆಂತರಿಕ ಜಗತ್ತಿನಲ್ಲಿ ವಾತದೋಷ ಎಂದು ಕರೆಯುತ್ತಾರೆ.‌ 


•••••


ವಾಸ್ತವದಲ್ಲಿ ಫ್ಯಾನ್ ಗಾಳಿಗೆ ಮಲಗಿದರೆ ಏನಾಗುತ್ತದೆ?

ನಿರಂತರ ಬೀಸುವ ಗಾಳಿಯಿಂದ ಶರೀರದ ಧಾತುಗಳು ಒಣಗುವುದನ್ನು ತಪ್ಪಿಸಲು ಚರ್ಮದ ಪದರದಿಂದ ಆರಂಭಿಸಿ ಮಾಂಸದವರೆಗೆ ಧಾತುಗಳು ಮುದುಡಿಕೊಂಡು ತಮ್ಮನ್ನು ತಾವು ರಕ್ಷಿಸಿಕೊಳ್ಳುತ್ತವೆ.(ಚಳಿಗಾಳಿ ಬೀಸುವಾಗ ಮೈ ಮುದುಡಿಕೊಳ್ಳುವಂತೆ).


ನೋವು ಏಕೆ ಬರುತ್ತದೆ?:

• ಚರ್ಮದ ಪದರಗಳಲ್ಲಿನ "ವೇದಿನಿ(ಸಂವೇದಿನಿ)" ಮತ್ತು "ರೋಹಿಣಿ" ಹೆಸರಿನ‌ ಎರೆಡು ಪದರಗಳು ನರಗಳನ್ನೂ ಮತ್ತು ರಕ್ತನಾಳಗಳನ್ನೂ ಹೊಂದಿರುತ್ತವೆ. ಫ್ಯಾನ್ ಗಾಳಿಯಿಂದ ಚರ್ಮದ "ರೋಹಿಣಿ ಪದರ"ದಲ್ಲಿನ ಅತಿಸೂಕ್ಷ್ಮ ರಕ್ತನಾಳಗಳು ಮುದುಡಿಕೊಂಡು ರಕ್ತಸಂಚಾರ ಕ್ಷೀಣಗೊಳ್ಳುತ್ತದೆ ಆಗ ಇಡೀ ಮಾಂಸಖಂಡಗಳಿಗೆ ಆಹಾರ, ನೀರು ಮತ್ತು ಆಮ್ಲಜನಕ ಪೂರೈಕೆಯಾಗದೇ ಕ್ಷೀಣಗೊಂಡು ಕೆಲಸಮಾಡಲು ಕಷ್ಟ ಎನ್ನಿಸುವಂತೆ ನೋವುಗಳನ್ನು ತರುತ್ತದೆ. 


• ಚರ್ಮದ "ಸಂವೇದಿನಿ ಪದರ"ದಲ್ಲಿನ ನರಗಳು ಫ್ಯಾನ್ ಗಾಳಿಯನ್ನು ಸೆಳೆದುಕೊಂಡು ಶರೀರದಲ್ಲಿ ವಾತವನ್ನು ವೃದ್ಧಿಮಾಡುತ್ತವೆ. ಚಲನೆಯನ್ನು ಹೆಚ್ಚಿಸಲು ನೋಡುತ್ತವೆ. ಮುದುಡಿದ ಸೂಕ್ಷ್ಮ ರಕ್ತನಾಳಗಳ ಕಾರಣದಿಂದ ಆಹಾರ, ಆಮ್ಲಜನಕ, ನೀರುಗಳ ಸರಿಯಾದ ಪೂರೈಕೆಯಾಗದೇ ಇದ್ದರೂ ಸಹ ವೃದ್ಧಿಯಾದ ವಾತವು ಮಾಂಸಧಾತುಗಳಲ್ಲಿ ಒತ್ತಡದಿಂದ ಕೆಲಸಮಾಡುವಂತೆ ಪ್ರಚೋದಿಸುತ್ತದೆ ಆಗ ಅಲ್ಲಿ "ಸುಸ್ತು ಕಾಣಿಸಿಕೊಳ್ಳುತ್ತದೆ"


• ಫ್ಯಾನ್ ಗಾಳಿಯಿಂದ ಪ್ರಕೋಪಗೊಂಡ ವಾತವು ಸಂವೇದಿನಿ ತ್ವಚೆಯಲ್ಲಿನ ನರಗಳ ಮಿಡಿತವನ್ನು ವರ್ಧಿಸಿಬಿಡುತ್ತವೆ. ಅಲ್ಲಿ ಸಂಕೋಚ(ಮುದುಡಿಕೊಂಡಿರುವ) ಗೊಂಡಿರುವ ಚರ್ಮ‌ಮಾಂಸಗಳು ವಾತಕ್ಕೆ ಮಾರ್ಗ ಅವರೋಧ ಉಂಟುಮಾಡಿ ಕೆಲಸಮಾಡಲು ತಡೆಯೊಡ್ಡುತ್ತವೆ. ಆಗ ಮೈ ಕತ್ತರಿಸಿದಂತೆ ನೋವು ಕಾಣುತ್ತದೆ.


•••••••••••••

ಆತ್ಮೀಯರೇ,

ಫ್ಯಾನ್ ಗಾಳಿಗೆ ಮೈಒಡ್ಡದಿರೋಣ, ಆರೋಗ್ಯ ಕಾಪಾಡಿಕೊಳ್ಳೋಣ, ಆದರೆ ಫ್ಯಾನ್ ಬಳಸದಿದ್ದರೆ ಸೊಳ್ಳೆ, ಶಖೆ.....ಮುಂತಾದ ಕೆಲ ಸಮಸ್ಯೆಗಳಿವೆ, ಅವುಗಳಿಗೆ ಪರಿಹಾರವೇನು? ಎಂಬ ನಿಮ್ಮ ಪ್ರಶ್ನೆಗೆ ನಾಳಿನ ಸಂಚಿಕೆಯಲ್ಲಿ ಉತ್ತರ ಹುಡುಕೋಣ.

**********

12.10.2020

ಆಸ್ಪತ್ರೆ ರಹಿತ ಆರೋಗ್ಯಕ್ಕೆ ಆಯುರ್ವೇದ 

ಸಂಚಿಕೆ-286

••••••••••••••••

✍️: ಇಂದಿನ ವಿಷಯ:


ಫ್ಯಾನ್ ಗಾಳಿಯನ್ನು ಮೈಕೈ ನೋವು ತರದಂತೆ ಬಳಸುವುದು ಹೇಗೆ?

•••••••••••••••••••••••••••••••••••••••

ನಾವು ಫ್ಯಾನ್ ಅನ್ನು ಬಳಸುವುದು ಏಕೆ?


1. ತಂಪಿಗಾಗಿ

2. ಸೊಳ್ಳೆಗಳಿಂದ ದೂರ ಇರಲು

3. ರೂಢಿಯಾಗಿರುವುದರಿಂದ

ಹಾಗೂ

4. ಶರೀರದಲ್ಲಿ ಅನಗತ್ಯ ಕೊಬ್ಬು ಶೇಖರಣೆಯಾಗಿ ತುಂಬಾ ಸೆಖೆ ಅನುಭವಿಸುವ ಕಾರಣದಿಂದ


1. ತಂಪಿಗಾಗಿ ಫ್ಯಾನ್ ಬಳಕೆ-

ಫ್ಯಾನ್ ಗಾಳಿ ಅಡಿ ಕುಳಿತು ತಂಪನ್ನು ಬಯಸುವುದು ಯಾವ ರೀತಿಯಿಂದಲೂ ಸರಿಯಲ್ಲ, ಗಾಳಿ ಯೋಗವಾಹಿ(ತನ್ನತನ ಕಳೆದುಕೊಂಡು, ಜೊತೆ ಸೇರಿದ ಪದಾರ್ಥದ ಭಾವ ವರ್ಧಿಸುವುದು) ಗುಣ ಹೊಂದಿದೆ. ಗಾಳಿ ಬಿಸಿ ವಸ್ತುವಿನ ಸಂಪರ್ಕಕ್ಕೆ ಬಂದರೆ ಬಿಸಿ, ತಂಪಿನ ಸಂಪರ್ಕಕ್ಕೆ ಬಂದರೆ ತಂಪು, ಸುಗಂಧದ ಜೊತೆಗೆ ಸುಗಂಧ, ದುರ್ಗಂಧದ ಜೊತೆ ದುರ್ಗಂಧ.....

ಹಾಗಾಗಿ,

ತಂಪಿಗಾಗಿ ಫ್ಯಾನ್ ಬಳಕೆ ಲಾಭಕರವಲ್ಲ, ಅನಾರೋಗ್ಯಕರ.


ಪರಿಹಾರ:

Air cooler ನ್ನು ಕಿಟಕಿಗೆ ಕಟ್ಟಿ, ಗಾಳಿ ರೂಮ್ ಒಳಕ್ಕೆ ಬರುವಂತೆ ಮಾಡಿ, ಯಾವಕಾರಣಕ್ಕೂ ಅದರ ಗಾಳಿ ಶರೀರಕ್ಕೆ ತಾಕದೇ ರೂಂ ಒಳಕ್ಕೆ ಮಾತ್ರ ಬರುವಂತೆ ನೋಡಿಕೊಳ್ಳಿ. ಇದರ ನೀರನ್ನು ದಿನವೂ ಬದಲಾಯಿಸುವುದನ್ನು ಮರೆಯಬಾರದು.

ಅಥವಾ

ಒಂದು ಗೋಡೆ ಫ್ಯಾನ್ ಅನ್ನು ಕಿಟಕಿಗೆ ಕಟ್ಟಿ, ಹೊರಗಿನ ಗಾಳಿ ರೂಂ ಒಳಕ್ಕೆ ಮಾತ್ರ ಬರುವಂತೆ ಇಟ್ಟುಕೊಳ್ಳಿ, ಮನೆಯ ಹೊರಗಿನಿಂದ ಕಿಟಕಿಗೆ ಒಂದು ದಪ್ಪನಾದ ಜಮಖಾನ ಅಥವಾ ನಾರಿನಿಂದ ತಯಾರಿಸಿದ ಚೀಲದಂತ ವಸ್ತುವನ್ನು ಕಟ್ಟಿ ಅದನ್ನು ದಿನಕ್ಕೆ ಒಂದು ಅಥವಾ ಎರಡು ಬಾರಿ ತಣ್ಣನೆಯ ನೀರಿನಿಂದ ತೋಯಿಸಿಬಿಡಿ, ಒಳಗೆ ಕಟ್ಟಿದ ಫ್ಯಾನ್ ಎಳೆಯುವ ಗಾಳಿ ಆ ತಂಪು ಪದರವನ್ನು ದಾಟಿ ಬರುವ ಕಾರಣ ರೂಂ ಅನ್ನು ತಣ್ಣಗೆ ಇಡುತ್ತದೆ. ಯಾವ ಕಾರಣಕ್ಕೂ ಅದು ನೇರ ಶರೀರಕ್ಕೆ ತಾಕದಂತೆ ನೋಡಿಕೊಳ್ಳಿ.


2. ಸೊಳ್ಳೆಗಳಿಂದ ರಕ್ಷಣೆ ಪಡೆಯಲು: 

ಸೊಳ್ಳೆಬತ್ತಿ, 

ಸೊಳ್ಳೆನಾಶಕ ದ್ರವೌಷಧ(Liquidators)

ಫ್ಯಾನ್ ಗಳನ್ನು ಬಳಸಿ ಸೊಳ್ಳೆ ನಿವಾರಿಸುತ್ತೇವೆ ಎನುವುದು ಶುದ್ಧ ಸುಳ್ಳು. ಇವೆಲ್ಲವೂ ಆರೋಗ್ಯದ ಬದಲು ರೋಗ ತರುತ್ತವೆ.


ಪರಿಹಾರ:

ವಿಶಾಲವಾದ ಮತ್ತು ಎತ್ತರವಾಗಿರುವಂತೆ ತಯಾರಿಸಿದ ಸೊಳ್ಳೆಪರದೆಯೇ ಶ್ರೇಷ್ಠ ಪರಿಹಾರ. 


3. ರೂಢಿಗೆ ಫ್ಯಾನ್ ಬಳಕೆ:

ಫ್ಯಾನ್ ಬಳಕೆ ರೋಗಕಾರಕವಾದ ಕಾರಣ, ನಿಧಾನವಾಗಿಯಾದರೂ ಇದನ್ನು ಬಿಟ್ಟುಬಿಡಿ, ಅದೇ ಪರಿಹಾರ.


ಕಷ್ಟಕರವಾದ ಅವಸ್ಥೆ ಎಂದರೆ ಈ ಕೆಳಗಿನದು

👇

4. ಸ್ಥೌಲ್ಯತೆಯ ಕಾರಣ ಸೆಖೆಯಾಗುವುದರಿಂದ:

ಆಯುರ್ವೇದ ಆಚಾರ್ಯರು ಇದನ್ನು "ಸ್ವೇದಾಬಾಧಃ" ಎಂದಿರುವರು. ಸೆಖೆ ಮತ್ತು ಅತಿಯಾದ ಬೆವರು ಸ್ಥೂಲರನ್ನು ಅತಿಯಾಗಿ ಹಿಂಸಿಸುತ್ತದೆ. 


ತಾತ್ಕಾಲಿಕ ಪರಿಹಾರ:

ಫ್ಯಾನ್ ಬದಲು ಏರ್ ಕೂಲರ್ ಬಳಸಬಹುದು ಮತ್ತು ಗೋಡೆ ಫ್ಯಾನ್ ಕಿಟಕಿಗೆ ಕಟ್ಟಿಯೂ ಬಳಸಬಹುದು.

ಆದರೆ ನಿಜವಾದ ಕಾರಣ ಕಂಡುಹಿಡಿದು ಶಾಶ್ವತವಾಗಿ ನಿವಾರಿಸುವುದೇ ವೈದ್ಯನ ಕರ್ತವ್ಯ.


"ಕೆಲವರು ತೆಳ್ಳನೆ ದೇಹ ಹೊಂದಿದ್ದರೂ ಸಹ ಸೆಖೆಯಿಂದ ಬಾಧೆ ಪಡುತ್ತಿರುತ್ತಾರೆ. ವಾಸ್ತವದಲ್ಲಿ ರಕ್ತದಲ್ಲಿ "ಸಂಕ್ಲೇದ" ಎಂಬ ವಿಕೃತ ಬೆವರು ಇರುತ್ತದೆ, ಅದು ಉತ್ಪತ್ತಿಯಾಗುವುದನ್ನು ನಿಲ್ಲಿಸಿದರೆ ಪರಿಹಾರ ಸಾಧ್ಯ, ಇದು ತಕ್ಷಣಕ್ಕೇ ಮಾಡಿಕೊಳ್ಳುವ ಪರಿಹಾರವಂತೂ ಅಲ್ಲ.


*************


13.10.2020

ಆಸ್ಪತ್ರೆ ರಹಿತ ಆರೋಗ್ಯಕ್ಕೆ ಆಯುರ್ವೇದ 

ಸಂಚಿಕೆ-287

••••••••••••••••

✍️: ಇಂದಿನ ವಿಷಯ:


ಸ್ಥೌಲ್ಯತೆಯ ಕಾರಣದಿಂದ ಸದಾ ಸೆಖೆಯಾಗುವುದನ್ನು ತಡೆಯುವುದು ಹೇಗೆ? 

•••••••••••••••••••••••••••••••••••••••

ಆಯುರ್ವೇದ ಆಚಾರ್ಯರು ಇದನ್ನು "ಸ್ವೇದಾಬಾಧಃ" ಎಂದಿರುವರು. ಸೆಖೆ ಮತ್ತು ಅತಿಯಾದ ಬೆವರು ಸ್ಥೂಲರನ್ನು(ದಪ್ಪ ಇರುವವರು) ಅತಿಯಾಗಿ ಹಿಂಸಿಸುತ್ತದೆ. 

ಇಂಥವರು, ಸೆಖೆ ತಡೆಯಲು ಫ್ಯಾನ್ ಬದಲು ಏರ್ ಕೂಲರ್ ಬಳಸಬಹುದು ಮತ್ತು ಗೋಡೆ ಫ್ಯಾನ್ ಕಿಟಕಿಗೆ ಕಟ್ಟಿಯೂ ಬಳಸಬಹುದು. ಆದರೆ ಇದು ತಾತ್ಕಾಲಿಕ ಪರಿಹಾರ ಮಾತ್ರ.


ನಿಜವಾದ ಕಾರಣ ಕಂಡುಹಿಡಿದು ಶಾಶ್ವತವಾಗಿ ನಿವಾರಿಸುವುದೇ ವೈದ್ಯನ ಕರ್ತವ್ಯ.


ಕೆಲವರು ತೆಳ್ಳನೆ ದೇಹ ಹೊಂದಿದ್ದರೂ ಸಹ ಸೆಖೆಯಿಂದ ಬಾಧೆ ಪಡುತ್ತಿರುತ್ತಾರೆ. ವಾಸ್ತವದಲ್ಲಿ ಇದಕ್ಕೆ ಕಾಣ ರಕ್ತದಲ್ಲಿರುವ "ಸಂಕ್ಲೇದ" ಎಂಬ ಹೆಸರಿನ ವಿಕೃತ ಬೆವರು. ಅದು ಉತ್ಪತ್ತಿಯಾಗುವುದನ್ನು ನಿಲ್ಲಿಸಿದರೆ ಶಾಶ್ವತ ಪರಿಹಾರವಾಗುವುದು, ಇದು ಒಂದೇ ದಿನಕ್ಕೆ ಮಾಡಿಕೊಳ್ಳುವ ಪರಿಹಾರವಂತೂ ಖಂಡಿತಾ ಅಲ್ಲ.


🔻 "ಸಂಕ್ಲೇದ" ನಿವಾರಕ ಉಪಾಯಗಳು👇


ಗಂಡಿಗೆ 25 ವರ್ಷದವರೆಗೆ ಸೆಖೆಯಾಗುವುದು, ಚೆನ್ನಾಗಿ ಬೆವರುವುದು, ಸಾಮಾನ್ಯ.

ಹೆಣ್ಣಿಗೆ 12ವರ್ಷದ ವರೆಗೆ ಈ ಲಕ್ಷಣ ಸಾಮಾನ್ಯ.


ಆ ವಯಸ್ಸಿನ ನಂತರ ಫ್ಯಾನ್ ಇಲ್ಲದೇ ಮಲಗಲು ಸಾಧ್ಯವಿಲ್ಲ ಎಂದರೆ ಶರೀರದಲ್ಲಿ "ಸಂಕ್ಲೇದ" ಎಂಬ ವಿಕೃತ ಬೆವರು ಇದೆ ಎಂದೇ ಅರ್ಥ. ನಾವು ಹಿಂದಿನ ಸಂಚಿಕೆಗಳಲ್ಲಿ ನೋಡಿದಂತೆ "ಕ್ಲೇದ" ಎಂಬ ಜಿಡ್ಡಿನ ಅಂಶ ಶರೀರದಿಂದ ಮೂತ್ರ ಮತ್ತು ಬೆವರಿನ ಮೂಲಕ ಹೊರಹೋಗುತ್ತಿರುತ್ತದೆ. 

ಈ ಜಿಡ್ಡಿನ ಕಣಗಳ ಗಾತ್ರ ದೊಡ್ಡದಾದಲ್ಲಿ ಅದನ್ನು "ಸಂಕ್ಲೇದ" ಎಂದು ಕರೆಯುತ್ತೇವೆ. ಇದು ಸುಲಭವಾಗಿ ಬೆವರಿನಿಂದಾಗಲೀ ಮೂತ್ರದಿಂದಾಗಲೀ ಹೊರಹೋಗುವುದಿಲ್ಲ. ರಕ್ತದಲ್ಲೇ ಉಳಿಯುವ ಈ ದೊಡ್ಡ ಗಾತ್ರದ ಜಿಡ್ಡಿನ ಕಣಗಳು (ಕೊಬ್ಬಿನಂಶವು ಜೀರ್ಣವಾದ ನಂತರ ಉಳಿಯುವ ಮಲರೂಪೀ ಜಿಡ್ಡು) ಬಿಸಿಯನ್ನು ಹೊರಹಾಕುತ್ತವೆ. ಆಗ ಮನುಷ್ಯನಿಗೆ ಹೆಚ್ಚು ಬಾಯಾರಿಕೆ ಮತ್ತು ತಣ್ಣನೆಯ ಜಾಗ ದೇಹಕ್ಕೆ ಹಿತ ಎನಿಸುತ್ತದೆ. 

ಉದಾಹರಣೆಗೆ: ಪೂರಿ, ದೋಸೆ, ಕರಿದ ಪದಾರ್ಥ, ಚಿತ್ರಾನ್ನ ಮುಂತಾದವುಗಳ ಸೇವನೆಯ ನಂತರ ಪ್ರತಿಯೊಬ್ಬರೂ ಬಾಯಾರಿಕೆಯಿಂದ ಬಳಲುವುದು ಇದೇ ಕಾರಣಕ್ಕಾಗಿ.


ಇದನ್ನು ಹಾಗೆಯೇ ಬಿಟ್ಟರೆ, ಕೆಲ ವರ್ಷಗಳ ನಂತರ ಮಧುಮೇಹವು ಬರುತ್ತದೆ. ಇನ್ನೂ ನಿಯಂತ್ರಣ ಮಾಡದಿದ್ದರೆ ಮೂತ್ರಪಿಂಡಗಳ ಮೂಲಕ ಹೊರಹೋಗಲು ಸಫಲವಾಗುವ ಈ ಸಂಕ್ಲೇದವು ಅವುಗಳ ಸೋಸುವ ಪೊರೆಯಲ್ಲಿ ದೊಡ್ಡ ರಂಧ್ರಗಳನ್ನು ಮಾಡಿ ಮೂತ್ರಪಿಂಡಗಳನ್ನು ಹಾನಿಗೊಳಿಸುತ್ತದೆ. ಹೀಗೆ ಶರೀರದ ಸಂಕ್ಲೇದ ಖಾಲಿಯಾಗುತ್ತದೆ. ಮೂತ್ರಪಿಂಡಗಳು ಹಾಳಾದವರಿಗೆ ಅದುವರೆಗೆ ಇದ್ದ ಸೆಖೆ ಹೋಗಿ ತೀವ್ರ ಸ್ವರೂಪದ ಚಳಿಯನ್ನು ಅನುಭವಿಸುತ್ತಾರೆ.


👉ಪರಿಹಾರವೇನು?

ಒಂದೆರಡು ದಿನಗಳಲ್ಲೇ ಸೆಖೆಯಿಂದ ಮುಕ್ತಿ ಹೊಂದುವುದು ಅಸಾಧ್ಯ. ಈ ಸಂಕ್ಲೇದದ ಕಣಗಳು ಕೇವಲ ರಕ್ತದಲ್ಲಿ ಮಾತ್ರ ಉಳಿಯದೇ ಧಾತುಗಳಲ್ಲಿ ಲೀನವಾಗಿರುತ್ತವೆ. ಹಾಗಾಗಿ, ಮನುಷ್ಯ ತೀವ್ರ ಸೆಖೆಯಿಂದ ಬಳಲುತ್ತಿರುತ್ತಾನೆ. ಇದಕ್ಕೆ ವ್ಯಕ್ತಿಯು ಸ್ಥೂಲಕಾಯನಾಗಿರಲೇಬೇಕೆಂಬ ನಿಯಮವೇನಿಲ್ಲ. 


ಯಾರಿಗೆ ಅಕಾಲದಲ್ಲಿ ಹೆಚ್ಚು ಹೆಚ್ಚು ಸೆಖೆ ಎನ್ನಿಸುತ್ತದೆಯೋ ಅವರೆಲ್ಲಾ ಪಾಲಿಸಲೇಬೇಕಾದ ಸರಳ ನಿಯಮಗಳೆಂದರೆ👇


◆ 21 ದಿನಗಳ ಕಾಲ ಜಿಡ್ಡಿನ ಅಂಶವನ್ನು ಸಂಪೂರ್ಣ ನಿಲ್ಲಿಸಿ.

◆ 6 ರಿಂದ 8 ಇಂಚು ಉದ್ದದ ಅಮೃತಬಳ್ಳಿಯು ಕಾಂಡವನ್ನು ದಿನಕ್ಕೆರಡು ಬಾರಿ ಅಗೆದು ತಿನ್ನಿ.

◆ ಮೊಸರು, ಉದ್ದು, ಸಿಹಿಪದಾರ್ಥ ಇವು ಸಂಕ್ಲೇದವನ್ನು ಹೆಚ್ಚು ಮಾಡುವುದರಿಂದ ಸಂಪೂರ್ಣ ನಿಲ್ಲಿಸಿ. 

◆ಸಾಮಾನ್ಯವಾಗಿ 21 ದಿನಗಳಲ್ಲಿ ಸೆಖೆ ನಿಯಂತ್ರಣಕ್ಕೆ ಬರುತ್ತದೆ. ಒಂದೊಮ್ಮೆ, ಇನ್ನೂ ಬಾರದಿದ್ದಲ್ಲಿ 48 ದಿನಗಳ ಕಾಲ ಮುಂದುವರೆಸಿ. 

◆ಈ ವಿಧಾನ ಮುಗಿದ ನಂತರ ಸಾಂಬಾರ್-ಪಲ್ಯಗಳಲ್ಲಿ ಮಾತ್ರ ಎಣ್ಣೆಯನ್ನು ಬಳಸಿ, ವಿಶೇಷ ದಿನಗಲ್ಲಿ ಮಾತ್ರ ಸಿಹಿಯನ್ನು ಬಳಸಿ. 

Fermented ಆಹಾರವನ್ನು ಸೇವಿಸಬೇಡಿ. 


🔻ವಿಶೇಷ ಸೂಚನೆ👇

 1️⃣ಮಕ್ಕಳಲ್ಲಿ , 25 ವರ್ಷದ ಒಳಗಿನ ಯುವಕರಲ್ಲಿ ಉಂಟಾಗುವ ಸೆಖೆಯು ಅನಾರೋಗ್ಯಕರವಲ್ಲದ ಕಾರಣ ಮೇಲಿನ ನಿಯಮ ಅನ್ವಯಿಸುವುದಿಲ್ಲ. 


2️⃣ಮುಟ್ಟು ನಿಲ್ಲುವ ಕಾಲದಲ್ಲಿ ಮಹಿಳೆಯರಿಗೆ ಉಂಟಾಗುವ ಸೆಖೆಯು ಹಾರ್ಮೋನ್ ಗಳ ವ್ಯತ್ಯಾಸದಿಂದ ಉಂಟಾಗಿರುತ್ತದೆ. ಆದಾಗ್ಯೂ ಮೇಲಿನ ನಿಯಮಗಳನ್ನು ಪಾಲಿಸಿದರೆ ಶೇಕಡಾ 50 ರಷ್ಟು ಸೆಖೆ ನಿವೃತ್ತಿಯಾಗುತ್ತದೆ. ಉಳಿಯುವ ಸೆಕೆಯು ಅಂಶಕ್ಕೆ ಕೆಲಕಾಲ ಆಯುರ್ವೇದದ ಚಿಕಿತ್ಸೆಯನ್ನು ಮಾಡಿದರೆ ಸಂಪೂರ್ಣ ಗುಣಮುಖರಾಗುತ್ತಾರೆ. 



🍀🍀ಸರ್ವದಾ ಸ್ವಾಸ್ಥ್ಯ ನಿಮ್ಮದಾಗಲಿ🍀🍀

                      ಹಾಗೆಯೇ 

      🍀ಸ್ವಾಸ್ಥ್ಯ ಸರ್ವರದ್ದೂ ಆಗಲಿ🍀


••••••••••••••••••••••••••••••••••••••••••

ರೋಗನಿರೋಧಕಶಕ್ತಿವರ್ಧಕ 38 ಔಷಧಿ ದ್ರವ್ಯಗಳನ್ನೊಳಗೊಂಡ ಕಷಾಯ ಚೂರ್ಣಕ್ಕಾಗಿ ಸಂಪರ್ಕಿಸಿ:

📞 9148702645

9606616165


🙏ಧನ್ಯವಾದಗಳು🙏

**********


No comments:

Post a Comment