SEARCH HERE

Tuesday, 24 November 2020

jokes haasya 04 KANNADA

 




😄 😜 😁  😂 😡 🚶‍♂

****









***

ವಾಕಿಂಗ್ ಬಗ್ಗೆ ಒಂದಿಷ್ಟು........ ಹಾಗೇ ಸುಮ್ಮನೆ.... 🤣🤣

1. ಡಾಕ್ಟರ್ ಹೇಳುವ ಮೊದಲೇ ಶುರು ಮಾಡಿದರೆ ಅದು ಮಾರ್ನಿಂಗ್ ವಾಕ್ .

2. ಡಾಕ್ಟರ್ ಹೇಳಿದ ಮೇಲೆ ಶುರುವಿಟ್ಟುಕೊಳ್ಳೊದು ವಾರ್ನಿಂಗ್ ವಾಕ್. 

3. ಬೆಳಗ್ಗೆ ಒಬ್ಬರಿಗೊಬ್ಬರು ಚೆನ್ನಾಗಿ ಅರ್ಥ ಮಾಡಿಕೊಂಡಿರುವ ಗಂಡ-ಹೆಂಡತಿಯದು  ಕಪಲ್   ವಾಕ್. 

4. ಇನ್ನೊಬ್ಬರ ಮೇಲಿನ ಹೊಟ್ಟೆ ಕಿಚ್ಚಿನಿಂದ ಪೈಪೋಟಿಗಾಗಿ ಶುರುವಿಟ್ಟುಕೊಂಡರೆ ಅದು ಬರ್ನಿಂಗ್ ವಾಕ್. 

5. ದಿನದ ಕಠಿಣ ಪರಿಶ್ರಮದ ನಡುವೆ/ನಂತರ ನಡೆದರೆ ರಿಫ್ರೆಷಿಂಗ್ ವಾಕ್. 

6. ಯಾರನ್ನೂ ಲೆಕ್ಕಿಸದೆ ಜೋರಾಗಿ ನಡೆದರೆ ಅದೇ ಬ್ರಿಸ್ಕ್ ವಾಕ್. 

***

ಹುಲಿಯಂತಿದ್ದ 🐅🐅 ನನ್ನೆಲ್ಲ ಮಿತ್ರರಿಗೆ, ಸಂಬಂಧಿಕರಿಗೆ..  ಜನ್ಮ ನೀಡಿದ ಏಲ್ಲಾ ತಾಯಂದಿರರಿಗೆ ಹಾಗೂ ಆ ಏಲ್ಲಾ ಹುಲಿಗಳನ್ನ🐅🐅 ಇಲಿಗಳಾಗಿ 🐁🐁 ಪರಿವರ್ತಿಸಿದ ಅವರ ಧರ್ಮಪತ್ನಿಯರಿಗೆ
Happy women's day.

***


ಹೆಂಡತಿ.... ಏನ್ರಿ ಗಂಡಸರು ಸತ್ತರೆ ಸ್ವರ್ಗಕ್ಕೆ ಹೋಗ್ತಾರಂತೆ ನಿಜವೇನ್ರಿ🤔

ಗಂಡ.... ಹೌದು 😊

ಹೆಂಡತಿ..... ಅಲ್ಲಿ ನಿಮಗೆ ಏನು ಸಿಗುತ್ತೇರಿ ?

ಗಂಡ... ರಂಬಾ ಸಿಗ್ತಾಳೆ

ಹೆಂಡತಿ.. ನಮಗೆ ?

ಗಂಡ..... ಮಂಗ ಸಿಗುತ್ತೆ 😜

ಹೆಂಡತಿ.... ಇದು ಅನ್ಯಾಯ ರೀ. ನಿಮಗಾದರೆ ಇಲ್ಲೂ ರಂಬೆ ಅಲ್ಲೂ ರಂಬೆ

ನಮಗಾದರೇ ಇಲ್ಲೂ ಮಂಗ ಅಲ್ಲೂ ಮಂಗ

😂😂

***


ಗಂಡಸರು ಹಣೆಬರಹ:.....

ಬಾಲ್ಯದಲ್ಲಿ ಅಮ್ಮ ಹೇಳುತ್ತಾಳೆ 

ಮಗು ನಿನಗೆ ಗೊತ್ತಾಗಲ್ಲ ಸುಮ್ಮನಿರು ಅಂತ....

ಯೌವನದಲ್ಲಿ ಮಡದಿ ಹೇಳುತ್ತಾಳೆ, 

ರೀ ನಿಮಗೆ ಗೊತ್ತಾಗಲ್ಲ ಸುಮ್ಮನಿರಿ ಅಂತ....

ವೃದ್ಧಾಪ್ಯದಲ್ಲಿ ಮಕ್ಕಳು ಹೇಳುತ್ತಾರೆ, 

ಅಪ್ಪಾ ನಿಮಗೆ ಗೊತ್ತಾಗಲ್ಲ ಸುಮ್ಮನಿರಿ ಅಂತ...

ಅಲ್ಲಾ.... ಯಾವಾಗ ನಮಗೆ ಗೊತ್ತಾಗುವುದು ಅಂತ????🤪😜🤪

***


ಮೊದ್ಲೇಲ್ಲಾ ಮನೆಗೆ ನೆಂಟರು ಬಂದ್ರೆ , ಪರವಾಗಿಲ್ಲ ಬನ್ನಿ ನಾಯಿಗೆ ಇಂಜೆಕ್ಷನ್ ಹಾಕಿದೆ ಅಂತಾ ಇದ್ವಿ...😛

ಈಗ...ಪರವಾಗಿಲ್ಲ ಬನ್ನಿ , ನಾವೆಲ್ಲಾ ಇಂಜೆಕ್ಷನ್ ಹಾಕಿಸಿಕೊಂಡಿದೀವಿ ಅನ್ನೋ ಪರಿಸ್ಥಿತಿ ಬಂತು...🤣🤣😂

***

ರಾತ್ರಿ ಮಲಗಿದಾಗ ಮಂಚದ ಕೆಳಗೆ 🛌ಯಾರೊ ಇದ್ದಾರೆ ಅನ್ಸುತ್ತೆ, ನೋಡಿದ್ರೆ ಯಾರೂ ಇರಲ್ಲ , ಡಾಕ್ಟರೇ .. 🙆‍♂️
ಮಾನಸಿಕ ಕಾಯಿಲೆ ಡಾಕ್ಟರ್: 🤷‍ ಇದನ್ನ Under Cot Disorder ಅಂತ ಕರೀತೀವಿ, ಇದಕ್ಕೆ solution ಇದೆ. ನೀವು ಹಲವಾರು sittings ಬರಬೇಕಾಗುತ್ತೆ.
Fees ಎಷ್ಟು ಡಾಕ್ಟ್ರೆ ?
500 per sitting 
ಸರಿ, ಮತ್ತೇ ಬರ್ತೀನಿ ಅಂತೇಳಿ ಹೊರಡ್ತಾನೆ.
ಸ್ವಲ್ಪ ದಿನಗಳ ನಂತರ ದಾರಿಯಲ್ಲಿ ಸಿಕ್ದಾಗ ಡಾಕ್ಟರ್ 
 ಕೇಳ್ತಾನೆ,ಯಾಕೆ ಮತ್ತೆ ನೀವು ಬರ್ಲಿಲ್ಲ ನಾಗೇಶ್ ..?
ನನ್ನ friend ಗೆ ಒಂದ್ ಕ್ವಾಟ್ರು, ದಂ ಬಿರಿಯಾನಿ ಕೊಡ್ಸಿದ್ದಕ್ಕೆ ಒಳ್ಳೆ suggestion ಕೊಟ್ಟ..
🤔ಏನದು ?
ಮಂಚ ಮಾರಿ ಚಾಪೆ ಹಾಸ್ಕೊಂಡು ಮಲ್ಕೊ ಅಂದ.
***


#ಹೆಂಡತಿ : ಏನ್ರೀ ಇಷ್ಟು ಬೇಗ ಆಫೀಸಿನಿಂದ ಬಂದ್ರೀ..??
#ಗಂಡ : ನಾ ಕಾಫಿ ಕುಡಿಯಲು ಹೊರಗೆ ಹೋಗಿದ್ದಾಗ , ನಮ್ಮ ಆಫೀಸಿನ  ಛಾವಣಿ ಕುಸಿದು ಎಲ್ಲರೂ  ಪ್ರಾಣ ಕಳಕೊಂಡರು..
#ಹೆಂಡತಿ : ಅಬ್ಬಾ ದೇವರು🙏🙏 ದೊಡ್ಡೋನು.. ನಿಮಗೇನೂ ಆಗಲಿಲ್ಲವಲ್ಲಾ 
#ಗಂಡ : ಪ್ರಾಣ ಕಳೆದುಕೊಂಡ ಮನೆಯವರಿಗೆಲ್ಲ ಒಂದು ಕೋಟಿ ರೂ ಪರಿಹಾರ ಕೊಡ್ತಿದಾರೆ ..
#ಹೆಂಡತಿ : ಹಾಳಾದ ಕಾಫಿ ದುರಭ್ಯಾಸ ಅದ್ಯಾವತ್ತು ಬಿಡ್ತೀರೋ...
***

20 ವರ್ಷಗಳ ನಂತರ ಹಳೆಯ ವಿದ್ಯಾರ್ಥಿಗಳು ಗ್ರೂಪ್ ಮಾಡಿದರು..

ತನ್ನ ಹಳೆಯ ಶಾಲಾ ಸಹಪಾಟಿಗೆ ಒಬ್ಬ ಮೆಸೇಜ್ ಹಾಕಿದ..

Hi Sweetheart  ಹೇಗಿದ್ದೀಯಾ..!? Missing You ❤️

ಆ ಕಡೆಯಿಂದ ರಿಪ್ಲೈ ಬಂತು..

ಮಮ್ಮಿದೂ ಮದುವೆ ಆಗಿದೆ ಅಂಕಲ್.. ನೀವು ಬೇಗ ಮದ್ವೇ ಆಗಿ...

Online ಕ್ಲಾಸ್ ನಡಿತಿದೆ..

ಮಮ್ಮಿ ಮೊಬೈಲ್‌ ಈಗ ನನ್ನ ಹತ್ರ ಇದೆ..!!

😂🙈😂🙈🤣

****


ಹೆಂಡ್ತಿ ಗಂಡನಿಗೆ ಹೇಳಿದಳು.ರೀ ನೀವು ಬುದ್ಧಿವಂತ ಬುದ್ಧಿವಂತ ಅಂತ ಕೊಚ್ಕೋತೀರಲ್ಲ ನನ್ನದೊಂದು ಪ್ರಶ್ನೆ ಇದೆ ಉತ್ತರ ಕೊಡಿ ನೋಡೋಣ ! 

ಗಂಡ:ಗತ್ತಿನಿಂದ ಹೇಳಿದ ಕೇಳು 😎

ಹೆಂಡತಿ: ಶಿವ ಪಾರ್ವತಿ ಜೊತೆ ನಿಂತಾಗಲೆಲ್ಲ ಕೈಯಲ್ಲಿ ತ್ರಿಶೂಲ ಇದ್ದೇ ಇದೆ.

 ವಿಷ್ಣು ಲಕ್ಷ್ಮಿ ಜೊತೆ ನಿಂತಾಗಲೆಲ್ಲ  ಸುದರ್ಶನ ಚಕ್ರ ಇದ್ದೇ ಇದೆ,ರಾಮ ಮತ್ತು ಸೀತೆ ಒಟ್ಟಾಗಿರುವಾಗ ಬಿಲ್ಲು ಇದೆ , ಆದರೆ ಕೃಷ್ಣ ಮತ್ತು ರಾಧೆ ಜೊತೆಯಲ್ಲಿರುವಾಗ ಆಯುಧ ಇರದೇ ಕೊಳಲು ಇರುತ್ತಲ್ಲ ಯಾಕೆ ?

ಗಂಡ :ಚಿನ್ನಾ ವೆರಿ ಸಿಂಪಲ್ ರಾಮ, ಶಿವ,ವಿಷ್ಣು ನಿಂತಿದ್ದು ತಮ್ಮ ಹೆಂಡತಿ ಜೊತೆ. ಕೃಷ್ಣ ನಿಂತಿದ್ದು ತನ್ನ ಲವ್ವರ್ ಜೊತೆ 😜 ಯಾರು ತನ್ನ ಹೆಂಡ್ತಿ ಜೊತೆ ನಿಲ್ತಾರೋ ಅವರಿಗೆ ಆಯುಧ ಬೇಕೇ ಬೇಕು 😇

ಹೆಂಡ್ತಿ ಗಪ್ಚುಪ್ 🤣🤣

******

ಯಾರ ಹೆಂಡತಿ ಚೆನ್ನಾಗಿ ಅಡುಗೆ ಮಾಡ್ತಾಳೋ

ಅವರ ಜೀವನ ಸುಗ್ಗಿ

ಯಾರ ಹೆಂಡತಿಗೆ ಅಡುಗೆ ಚೆನ್ನಾಗಿ ಬರಲ್ವೋ

ಅವರ ಜೀವನ ಮ್ಯಾಗ್ಗಿ

ಯಾರ ಹೆಂಡತಿಗೆ ಅಡುಗೆಯೇ ಬರಲ್ವೋ

ಅವರ ಜೀವನ Swiggy😀😀

***


ಹೀಗೂ ಉಂಟು!!! ಅಂತೆ...
😌🙃😳😄
ವಾಸ್ಕೋ-ಡ-ಗಾಮ ಭಾರತವನ್ನು ಕಂಡು ಹಿಡಿಯಲು ಹೊರಟಾಗ ಇನ್ನೂ ಮದುವೆಯಾಗಿರಲಿಲ್ಲ .
ಅಕಸ್ಮಾತ್ ಮದುವೆಯಾಗಿದ್ದರೆ ಆತ ಕಂಡು ಹಿಡಿಯುತ್ತಲೇ ಇರಲಿಲ್ಲ!
ಕಾರಣ ? ಈ ಪ್ರಶ್ನೆಗಳು . . .
* ಎಲ್ಲಿಗೆ ಹೋಗ್ತಾ ಇದ್ದೀಯ?
* ಹೇಗೆ ಹೋಗ್ತೀಯಾ ?
* ಏನ್ ಹುಡುಕಲಿಕ್ಕೆ ?
* ಆದರಿಂದ ನಮಗೇನ್ ಸಿಗುತ್ತೆ ?
* ಯಾರ್ ಜತೆ ಹೋಗ್ತೀಯ?
* ನೀನೊಬ್ನೇ ಯಾಕ್ ಹೋಗ್ಬೇಕು ?
* ನೀನ್ ಹೋದಮೇಲೆ ನಾನೊಬ್ಳೇ ಏನ್ ಮಾಡ್ಲಿ ?
* ನಾನೂ ಬರ್ಲಾ ?
* ಯಾವಾಗ ವಾಪಸ್ ಬರ್ತೀಯಾ ?
* ಏನ್ ತರ್ತೀಯ ?
* ಅಲ್ಲಿ ಎಲ್ಲಿ ಉಳ್ಕೊತೀಯ ?
* ನಿಂಗೆ ನನ್ ಮಿಸ್ ಮಾಡ್ಕೋತಾ ಇದ್ದೀನಿ ಅಂತ ಫೀಲ್ ಆಗೋಲ್ವಾ ?
*ಚಿಕ್ಕ ಪಾಪು ಎಕ್ಸಾಂ ಹತ್ರ ಬಂತು
ಗೊತ್ತಲ್ವಾ ?
* ದೊಡ್ಡ ಪಾಪು ಬರ್ತ್ ಡೇ ಗೊತ್ತಲ್ವಾ?
* ನನ್ನ ಬಿಟ್ಟೋಗೋಕೇ ಕಾಯ್ತಿರ್ತೀರಿ ಅಲ್ವಾ?
* ಅಲ್ಲಿ ಯಾವಳಾದ್ರೂ ಸಿಕ್ಕರೆ ನನ್ನ ಮರೆತೋಗ್ತೀಯಾ?
* ನನ್ ಬಿಟ್ಟೋಗೋಕೆ ಮನಸ್ಸಾದ್ರೂ ಅದ್ ಹೇಗೆ ಬರುತ್ತೋ ನಿಂಗೆ
* ನನ್ಮೇಲೆ ನಿಂಗೆ ನಿಜವಾಗ್ಲೂ ಪ್ರೀತಿ ಇದೆಯಾ?

😡😝😁😰😳😂😊*

***

😜😀😀👇🏾👇🏾👇🏾😀😀😜

ಆ ಗಂಡ—ಹೆಂಡತಿಗೆ ಜಗಳ ಯಾವಾಗಲೂ ಆಗುತ್ತಲೇ ಇರುತ್ತೆ. 

ಒಬ್ಬರನ್ನೊಬ್ಬರು ಕೊಲ್ಲುವ ಹಾಗೆ ಆಡುತ್ತಾರೆ

ಗಂಡ ಒಮ್ಮೆ  ಹೆಂಡತಿಗೆ ಹೇಳಿದ....

"ನಿನಗೆ ಇಷ್ಟವಾಗದಂತಹ ಕೆಲವು ಸಂಗತಿಗಳು ನನ್ನಲ್ಲಿದೆˌ ನನಗೆ ಇಷ್ಟವಾಗದಂತಹ ಕೆಲವು ಸಂಗತಿ ನಿನ್ನಲ್ಲೂ ಇವೆ. ಅವು ಯಾವುದೆಲ್ಲ ಎಂಬುವುದನ್ನ ನಾವು ಪರಸ್ಪರ ಚರ್ಚಿಸೋಣ.......

ಅದಕ್ಕೆ ಒಂದು ಕೆಲಸ ಮಾಡೋಣˌ

ನನ್ನಲ್ಲಿ ಇಷ್ಟವಾಗದಂತಹ ಕಾರ್ಯಗಳನ್ನು ಒಂದು ಕಾಗದದಲ್ಲಿ ಬರೆ.

ನಿನ್ನಲ್ಲಿ ಇಷ್ಟವಾಗದಂತಹ ಕಾರ್ಯವನ್ನು ನಾನೂ ಬರೆಯುತ್ತೇನೆˌ ಮತ್ತೆ ಪರಸ್ಪರ ಕೂತು ಚರ್ಚಿಸಿ ಆ ಮೂಲಕ ಪರಿಹಾರ ಹುಡ್ಕೋಣ.....

ಹೆಂಡತಿ ತಲೆ ಆಡಿಸಿದಳು.

ಗಂಡ ಕೆಲಸಕ್ಕೆ ಹೋದ, ಬರೆಯಲು ಪ್ರಾರಂಭಿಸಿದ....

ಸರಿಸುಮಾರು ನಾಲ್ಕು ಪುಟಗಳಷ್ಟು ಬರೆದ.

ಚಿಕ್ಕ ಚಿಕ್ಕ ವಿಷಯವನ್ನೂ ಕೂಡ ಬರೆಯದೇ ಬಿಡಲಿಲ್ಲ.

ಹೆಂಡತಿ  ಕೂತು ಯೋಚಿಸಿ ಬರೆದ ಕಾಗದವನ್ನು ಮಡಚಿ ಅಡಿಗೆ ಕೋಣೆಯಲ್ಲಿ ಇಟ್ಟಳು.

ಗಂಡ ಮನೆಗೆ ಬಂದ. ನಂತರ ಹೆಂಡತಿ ಚಹಾ ನೀಡಿ ಕೇಳಿದಳುˌ

"ಸರಿˌ ಓದೋಣವೇ....?

ಗಂಡ ಓದಿದ. ಹೆಂಡತಿಯ ಚಿಕ್ಕಚಿಕ್ಕ ತಪ್ಪುಗಳನ್ನೂ ಬಿಡದೆ ಬರೆದಿದ್ದಾನೆ.

"ಅದಾವುದೂ ಅವನು ಮರೆತಿಲ್ಲವಲ್ಲ" ಎಂದು ಹೆಂಡತಿ ಕಣ್ಣಲ್ಲಿ ತನ್ನಷ್ಟಕ್ಕೆ ಕಣ್ಣೀರು ಬಂತು.

ಅಬ್ಬಾ ಬೇಕುಫಾ ಎಂಥಾ ಮೆಮರಿ ಅದಕ್ಕೆ.....ಅಂದುಕೊಂಡಳು.

ಹೆಂಡತಿ ತನ್ನ ಪತ್ರ ತಂದಳು.

ಆತ ಆ ಪತ್ರ ಬಿಡಿಸಿ ನೋಡಿದಾಗˌ ಬರೀ ಒಂದು ರಂಗೋಲಿ ಚಿತ್ರ...... ಮಿಕ್ಕ ಹಾಗೆ ಖಾಲಿ ಪೇಪರ್ .....ಏನೂ ಬರೆದಿಲ್ಲˌ.

ಗಂಡನಿಗೆ ಆಶ್ಟರ್ಯವಾಯ್ತುˌ "ಅರೆˌ ಏನೂ ಬರೆದಿಲ್ವಲ್ಲˌ" ಅಂತ ಕೇಳಿದ.

ಹೆಂಡತಿ ಹೇಳಿದಳು....

ಆ ಪೇಪರ್ ಎಷ್ಟು ಶುಧ್ಧವಾಗಿದಿಯೋˌ ನನ್ನ ಮನಸ್ಸು ಕೂಡ ಅಷ್ಟೇ ಶುಧ್ಧ ನಿನ್ನ ವಿಷಯದಲ್ಲಿˌ ನಿನ್ನ ಯಾವ ತಪ್ಪನ್ನೂ ನಾನು ಮನಸ್ಸಿನಲ್ಲಿಟ್ಟಿಲ್ಲˌ 

ನೀನು ಮಾಡುತ್ತಿದ್ದ ಪ್ರತಿಯೊಂದು ತಕರಾರನ್ನೂ ಪ್ರೀತಿಯಾಗಿಯೇ ನಾನು ಕಾಣುತ್ತಿದ್ದೆˌ 

ಆದ್ದರಿಂದ ನಿನ್ನ ಬಗ್ಗೆ ನನಗೆ ಏನೂ ಬರೆಯಲು ಇಲ್ಲವೇಇಲ್ಲ....

ಇದನ್ನು ಕೇಳಿದ ಅವನಿಗೆ, ಅರಿವಿಲ್ಲದೇ ಕಣ್ಣೀರು ಧಾರಾಕಾರವಾಗಿ ಬರತೊಡಗಿತುˌ ಹೆಂಡತಿಯನ್ನು ಬಿಗಿದಪ್ಪಿದ.

ಅವನ ತಪ್ಪಿನ ಅರಿವಾಯ್ತು...

ಹೆಂಡತಿ ಮನಸ್ಸಿನಲ್ಲೇ ನಕ್ಕಳು. ಪೆದ್ದ ಮುಂಡೆದು ಈಗಲೂ ಹಳ್ಳಕ್ಕೆ ಬಿತ್ತು,

****


ತಿಮ್ಮನ ಮನೆಗೆ ಐದು ಜನ ಬಾಲ್ಯದ ಗೆಳೆಯರು ಬಂದರು..

ಚಹಾ ಮಾಡಲು ತಿಮ್ಮ ತನ್ನ ಹೆಂಡತಿಗೆ ಹೇಳಿದ.

ಹೆಂಡತಿ ಹೇಳಿದಳು ಮನೇಲಿ ಸಕ್ಕರೆ ಇಲ್ಲ ತಗೊಂಡು ಬನ್ನಿ ಅಂತ.. 

ತಿಮ್ಮ ಹೇಳಿದ ಪರವಾಗಿಲ್ಲ, ಸಕ್ಕರೆ ಇಲ್ಲದೇ ಮಾಡು, ನಾನು ಅವರನ್ನು ಸಂಭಾಳಿಸುತ್ತೇನೆ ಅಂದ.

'ಸರಿ' ಎಂದು ಹೆಂಡತಿ ಚಹಾ ಮಾಡಿದಳು.  ಐದು ಕಪ್ ಚಾ ಮಾಡಿ ಗೆಳೆಯರಿಗೆ ಕೊಡುತ್ತಾ ತಿಮ್ಮ ಹೇಳಿದ, ಇದರಲ್ಲಿ ಒಂದು ಕಪ್ ಗೆ ಸಕ್ಕರೆ ಹಾಕಿಲ್ಲ, 

ಅದು ಯಾರಿಗೆ  ಬರುತ್ತೋ ಅವರ ಮನೆಗೆ ಮುಂದಿನ ಭಾನುವಾರ ಎಲ್ಲರೂ ಊಟಕ್ಕೆ ಹೋಗೋಣ ಅಂದ..

ಚಹಾ  ಕುಡಿದಾದ ಮೇಲೆ ತಿಮ್ಮ ಕೇಳಿದ ಸಕ್ಕರೆ ಹಾಕದೇ ಇದ್ದ ಕಪ್ ಯಾರಿಗೆ ಬಂತು..??!!

ಎಲ್ಲರೂ ಹೇಳಿದರು.. ನಮಗೆ ಸಕ್ಕರೆ ಸ್ವಲ್ಪ ಜಾಸ್ತಿಯಾಗಿತ್ತು..!!

😀😂🤣🤣

***

Neighbour - ನೀವು ನಿಮ್ಮ ಹೆಂಡತಿಯನ್ನು ಡಾರ್ಲಿಂಗ್ ಸ್ವೀಟಿ ಅಂತ ಕರೀತಿರಲ್ಲಾ? ನೀವು ಈಗಲೂ ಅವರನ್ನು ಅಷ್ಟೊಂದು ಪ್ರೀತಿಸುತ್ತೀರಾ?

Middleaged man - ಅದರಲ್ಲಿ ಪ್ರೀತಿ ಗೀತಿ ಏನೂಇಲ್ಲ. ನನಗೆ ಅವಳ ಹೆಸರು ಆಗಾಗ ಮರೆತು ಹೋಗುತ್ತೆ. ಹಾಗೆ ಅವಳಿಗ ಹೇಳೋಕ್ಕಾಗೋಲ್ಲ.ಅದಕ್ಕೆ ನಾನು ಒಮ್ಮೆ ಡಾರ್ಲಿಂಗ್ ಇನ್ನೊಮ್ಮೆ ಸ್ವೀಟಿ ಹೀಗೆ ಕರೆಯೋದು‌ ಅದು ಅವಳಿಗೆ ಖುಷಿ ಕೊಡುತ್ತೆ.
***

ಬರುವ ಫೆಬ್ರವರಿ ಮತ್ತೆ ನಿಮ್ಮ ಜೀವಿತಾವಧಿಯಲ್ಲಿ ಬರಲು ಸಾಧ್ಯವಿಲ್ಲ.  ಏಕೆಂದರೆ ಈ ವರ್ಷ 2021 ಫೆಬ್ರವರಿಯಲ್ಲಿ 4 ಭಾನುವಾರಗಳು, 4 ಸೋಮವಾರಗಳು, 4 ಮಂಗಳವಾರಗಳು, 4 ಬುಧವಾರಗಳು, 4 ನೇ ದಿನಗಳು, 4 ಶುಕ್ರವಾರಗಳು ಮತ್ತು 4 ಶನಿವಾರಗಳಿವೆ.  ಇದು ಪ್ರತಿ 823 ವರ್ಷಗಳಿಗೊಮ್ಮೆ ಸಂಭವಿಸುತ್ತದೆ.  ಇದನ್ನು ಹಣದ ಚೀಲಗಳು ಎಂದು ಕರೆಯಲಾಗುತ್ತದೆ.  ಚೈನೀಸ್ ಫೆಂಗ್ ಶೂಯಿ ಆಧರಿಸಿ.  ಓದಿದ 11 ನಿಮಿಷಗಳಲ್ಲಿ ಕಳುಹಿಸಿ. ಆದ್ದರಿಂದ ಕನಿಷ್ಠ 5 ಜನರಿಗೆ ಅಥವಾ 5 ಗ್ರೂಪ್‌ಗೆ ಕಳುಹಿಸಿ ಮತ್ತು ಹಣವು 4 ದಿನಗಳಲ್ಲಿ ಬರುತ್ತದೆ.  💰

***

ನಮ್ಮ ಉತ್ತರ ಕರ್ನಾಟಕದ ಮಂದಿಯ ಸರ್ನೇಮ್ ಭಾರೀ ಚಂದ! "ಮಜಾ ಮಜಾ" ಇರತಾವ. ದ.ಕನ್ನಡದಂಗ್ ಭಟ್ಟ, ಶೆಟ್ಟಿ ಹಿಂಗ ಕಾಮನ್ ಹೆಸರು ಇಟಗೊಳ್ಳಲ್ಲರಿ.ಯಾಕಂದ್ರ ಏಕ ವಚನ ಆಗ್ತದ, ಯಾರರ "ಲೇ!, ಶೆಟ್ಟಿ ಬಾರಲಾ ಅಂತ ಮಂದ್ಯಾಗ ಕರದ್ರ ಮಯಾ೯ದಿ ಪ್ರಶ್ನಿ..ಅದಕ್ಕ, ಶೆಟ್ಟೆಪ್ಪನವರ,ಪಟ್ಟಣಶೆಟ್ಟಿ,ಕೋರಿಶೆಟ್ಟರ್,ಹಿಂಗೆಲ್ಲ ಇಟಗೊತಾರ. ಒಂಥರ self respect maintain ಮಾಡ್ತಾರ.

ಧರಿಸುವ ಬಟ್ಟೆಯ👕👖 surname: ವಸ್ತ್ರದ, ಪಟ್ಟೆದ್, ತಾಡಪತ್ರಿ, ಧೋತ್ರದ್, ಕುಬಸದ್,ಟೊಪಗಿ,ಚೊಣ್ಣದ್,ಲಂಗೊಟಿ, ಕಂಬಳಿ, ಹರಕಂಗಿ ,ಕಚ್ಚೆರಕಪ್ನವರ, ...

ಬಾಂಡೆ ಸಾಮಾನುಗಳ🍴🍽 ಸರ್ನೇಮ್: ಬಾಂಡಗೆ, ತಂಬೆಣ್ಣನವರ, ವಾಟಿಗೆ, ಹಂಡಿನವರ, ತಾಟಗೊಳ್, ತೋಪದ್.

ಸಿಹಿ ತಿನಿಸುಗಳ🍘🍡🍮 ಸರ್ನೇಮ್: ಬೆಲ್ಲದ್, ಸಕ್ಕರಿ,ಅಂಟಿನ್,ಉಂಡಿ.

ಕೆಲವರು ಜಂಟಿ🍟 ಪದದ ಸರ್ನೆಮ್: ಬುರಬುರೆ,ಗಲಗಲಿ,ಕುರಕುರೆ,ಜಿಗಜಿನ್ನಿ, ಜಗಜಂಪಿ.

ಪ್ರಾಣಿ ಗಳ🐯🐮 ಹೆಸರೂ ಸರ್ನೆಮ್ ಇಟಗೊಂಡಾರ: ಎಮ್ಮಿ, ಗೊಡ್ಡೆಮ್ಮಿ, ಕರಡಿ,ಹುಲಿ,ಜಿಂಕಿ,ಚೋಳದ್,ಚೋಳಪ್ಪನವರ್,ಹಾವುನೂರ್,ಆನೆಗುಂದಿ,ಹಂದಿಗೋಳ.

ಮನಿಯ🏡🏠 ಮೇಲೂ ಸರ್ನೇಮ್: ಮೇಲಿನಮನಿ, ಕೆಳಗಿನಮನಿ, ಗುಡಸಲಮನಿ,ಹುಲಮನಿ,ಹಂಚಿನಮನಿ,ಹಾದಿಮನಿ,ಕಡೇಮನಿ,ಅಗಸಿಮನಿ,ಕಳ್ಳಿಮನಿ.

ಪಕ್ಷಿಗಳನ್ನು🐔🐦🐤 ಬಿಟ್ಟಿಲ್ಲ.: ಚಿಟಗುಬ್ಬಿ, ಗುಬ್ಬಿ, ಕಾಗಿ, ಗೂಗಿಕೊಳ್ಳ, ಕೋಗಿಲಕರ್, ಗಿಣಿಮಾವ.

ಇನ್ ಹಲವರು Handicapped🚨 ತರಹ ಹೆಸರು: ಕುರುಡಿಕೇರಿ, ಕಿವುಡಸಣ್ಣವರ್,ಕುಂಟೆಪ್ಪನವರ್,ಮೂಕಣ್ಣವರ್.

🍆🍅🌶ಅಡುಗಿ ಸಾಮಾನ ಸರ್ನೆಮ್: ಉಳ್ಳಾಗಡ್ಡಿ, ಬಳ್ಳೊಳ್ಳಿ, ಮೆಣಸಿನಕಾಯಿ,ಲಿಂಬಿಕಾಯಿ,ಚುರಮುರಿ,ತುರಮರಿ,ಪುಟಾಣಿ,ಕಡ್ಲಿ,ಟೆಂಗಿನಕಾಯಿ,ಖಾರಪುಡಿ,ಕಡ್ಡಿಪುಡಿ.

ಗಿಡ ಮರಗಳ🌴🌾 ಸರ್ನೇಮ್: ಬಿಳಿ ಎಲಿ, ಇಪ್ಪೆ ಎಲಿ, ಬಾರಿಗಿಡದ್, ಜಾಲಿಮರದ್,ತೋಟರ,ತೋಟದ್...

ಆಭರಣಗಳ ಸರ್ನೇಮ್👑🌟

ಬಂಗಾರಿ,ಚಿನ್ನಪ್ನವರ್,ಬೆಳ್ಳಿ,ವಂಕಿಯವರ್,

ಮೀಸಿಗಡ್ಡನೂ ಬಿಟ್ಟಿಲ್ಲ..

ಮೀಸೆ,ಗಡ್ಡದವರ,ಗಡ್ಡದೇವರಮಠ,ಜಡಿಮಠ.

ಊರನ್ಯಾಗಿನ ⬜⬜ಕಟ್ಟೆಗಳನ್ನು ಬಿಟ್ಟಿಲ್ಲ: ಹುಣಸಿಕಟ್ಟಿ, ಬೆವಿನಕಟ್ಟಿ, ತೋರಣಕಟ್ಟಿ, ಬಾವಿಕಟ್ಟಿ, ಬನ್ನಿಕಟ್ಟಿ, ಗೊಂಜಾಳಕಟ್ಟಿ, ಮಾವಿನಕಟ್ಟಿ, ತಾಳಿಕಟ್ಟಿ. ಹೀಗೆ ಇನ್ನೂ ಬಾಳ್ ಬಾಳ ಅದಾವು...😀😅😂😎

ಇನ್ ಊರಿನ ಹೆಸರೂ ಅಡ್ರೆಸ್ ಆಗಿ ಕೆಲ್ಸಾ ಮಾಡ್ತವು.

ನಂದ ತಗೋರಿ... ಹಂದ್ರಾಳ, ಶ್ರೀಂಗಾರತೋಟ, ಡಂಬಳ, ಬರದೂರ, ತಿಮ್ಮಾಪುರ, ಕಲಬುರ್ಗಿ,

ಇನ್ ಕೆಲವರ ಗುಣಲಕ್ಷಣಗಳು ಅಡ್ರೆಸ್ ಆಗಿರ್ತಾವು.

ರೊಡ್ಡಪ್ನೋರು,ಗಿಡ್ಡಪ್ನೋರು,ಚುಂಚಣ್ಣೋರು.

ಇನ್ ಸೈನಿಕ್ರು ಬಳ್ಸೋ ಆಯುಧಗಳ ಹೆಸರು ಅಡ್ರೆಸ್ ಆಗಿರ್ತಾವು. ಈಟಿ,ಕತ್ತಿ,ಬಿಚುಕತ್ತಿ,ಬಾಣದ...

ಇನ್ ಅಡಿಗಿಗೆ ಬಳಸೋ ಪದಾರ್ಥಗಳ ಮೇಲೂ ಸರ್ನೇಮ್ ಇರ್ತಾವು. ಅರಿಶಿಣದ, ಬ್ಯಾಳಿ, ಹುರಕಡ್ಲಿ, ಪುಟಾಣಿ, ಮಾವಿನಕಾಯಿ,ಸೊಪ್ಪಿನ....

🤝ನಮ್ಮ ಉತ್ತರ ಕನಾ೯ಟಕ ನಮ್ಮ ಹೆಮ್ಮೆ ಅಲ್ಲವೇ🤝

ಇನ್ನೂ ಭಾಳ ಅದಾವ್ರಿ, ಮನಷಾನ್ಯ ಅಂಗಾಂಗಗಳು ಸಹಿತ ಅದಾವು. ಉದಾ: ತೆಲೆಬಕ್ಕನವರ, ಸಣ್ಣತೆಲಿ, ದೊಡ್ಡ ತೆಲಿ, ಎಕ್ಕುಂಡಿ, ಚಿಟಕುಂಡಿ,  ಹಿಂಗs ಇನ್ನೂ ಭಾಳ ಛಲೋ ಛಲೋ ಅಡ್ಡಹೆಸರು ಅದಾವು. 🤔ನೆನಪ ಆದಂಗ ತಿಳಸ್ತೇನ್ರೀ. ನಮಸ್ಕಾರ್ರೀ

***

ಗಂಡ ಹೆಂಡತಿಯನ್ನು ಬೆಳಿಗ್ಗೆ ಎಬ್ಬಿಸುತ್ತಾನೆ...

ಗಂಡ: ಬಾರೇ,ಬೆಳಿಗ್ಗೆ ಯೋಗಾ ಮಾಡಿದ್ರೆ ಒಳ್ಳೆಯದು..

ಹೆಂಡತಿ: ನೀವು ಹೇಳೋದು ಏನೂಂತಾ...? ನಾನು ದಪ್ಪ ಅಂತಾನ...?

ಗಂ: ಇಲ್ಲ..ಯೋಗಾ ಆರೋಗ್ಯಕ್ಕೆ ಒಳ್ಳೆಯದು ಅಂತ.

ಹೆಂ: ಅಂದ್ರೆ ನನ್ನ ಆರೋಗ್ಯ ಸರಿ ಇಲ್ಲ ಅಂತಾನ...??

ಗಂ: ಹೋಗ್ಲಿ ಬಿಡು.ಏಳಬೇಡ...

ಹೆಂ: ಅಂದರೆ ನಾನು ಸೋಮಾರಿ ಅಂತಾನಾ...???

ಗಂ: ಹಾಗಲ್ಲ.ನಿನಗೆ ನಾನು ಹೇಳಿದ್ದು ಅರ್ಥ ಆಗಿಲ್ಲ.

ಹೆಂ: ಅಂದ್ರೆ ನಾನು ನಿಮ್ಮನ್ನ ಅರ್ಥ ಮಾಡಿಕೊಂಡಿಲ್ಲ ಅಂತ ನಿಮ್ಮರ್ಥ..!!!

ಗಂ: ನಾನು ಹಾಗೆ ಹೇಳಲಿಲ್ಲ

ಹೆಂ: ಅಂದರೆ ನಾನು ಸುಳ್ಳು ಹೇಳ್ತೀನಿ ಅಂತಾನಾ....????

ಗಂ: ಏ.... ಸುಮ್ಮನೆ ಬೆಳಿಗ್ಗೆ ಬೆಳಿಗ್ಗೆ ತಲೆ ತಿನ್ನಬೇಡ.

ಹೆಂ: ಅಂದ್ರೆ ನಾನು ಜಗಳಗಂಟಿ ಅಂತಾನಾ...?????

ಗಂ: ಹೋಗ್ಲಿ ಬಿಡು.. ನಾನೂ ಯೋಗಕ್ಕೆ ಹೋಗದಿರೋದೇ ಒಳ್ಳೆದು.. 

ಹೆಂ: ನೋಡಿ ಅದೇ ನಾನು ಹೇಳಿದ್ದು. ನಿಮಗೂ ಹೋಗಕ್ಕೆ ಮನಸ್ಸಿರಲಿಲ್ಲ.. ಸುಮ್ಮನೆ ನನ್ನ ತಲೆ ಮೇಲೆ ಗೂಬೆ ಕೂರ್ಸೋದು....!!!!

ಗಂ:  ಸರಿ ಮಹಾತಾಯಿ.. ನೀನು ನಿದ್ದೆ ಮಾಡು.. ನಾನು ಒಬ್ನೇ ಹೋಗ್ತೀನಿ.. ಸರೀನಾ...??

ಹೆಂ: ಅದೇ... ನಿಮಗೆ ಎಲ್ಲ ಕಡೆಗೂ ಒಬ್ರೇ ಹೋಗಕ್ಕೆ ಇಷ್ಟ ಅಂತ ನಂಗೊತ್ತು...

ಗಂ: ಅಯ್ಯೋ ಮಹಾತಾಯಿ.. ನಿಲ್ಸು.. ನನ್ನ ತಲೆ ಸುತ್ತುತ್ತಾ ಇದೆ...

ಹೆಂ: ಅದೇ ನೋಡಿ.. ನಿಮಗೆ ಯಾವಾಗ್ಲೂ ನಿಮ್ಮ ಆರೋಗ್ಯದ ಬಗ್ಗೆಯೇ ಯೋಚನೆ. ನನ್ನ ಬಗ್ಗೆ ಚೂರೂ ಚಿಂತೆಯಿಲ್ಲ ನಿಮಗೆ...

"ಅಖಿಲ ಕರ್ನಾಟಕ ಅಸಹಾಯಕ,ಅಮಾಯಕ ಗಂಡಂದಿರ ಪರವಾಗಿ",

**


ರಾಮಾಯಣದ ವಾನರರಲ್ಲಿ ಶಕ್ತಿಶಾಲಿ ಎಂದರೆ ವಾಲಿ.

ವಾಲಿ ಯಾರ ಜೊತೆಯಾದರೂ ಯುದ್ಧ ಮಾಡುವಾಗ, ಎದುರಾಳಿಯ ಅರ್ಧ ಶಕ್ತಿ ಅವನಿಗೆ ಬರುತ್ತಿತ್ತು.

ಕಲಿಯುಗದಲ್ಲಿ ಕೂಡ ಹಾಗೇ.

ಯಾರು ಹೆಂಡತಿಯ ಜೊತೆ ಜಗಳ ಮಾಡುತ್ತಾರೋ ಅವರ ಅರ್ಧ ಶಕ್ತಿ ಹೆಂಡತಿಗೆ ಹೋಗುತ್ತದೆ. ಹಾಗೂ ತಲೆ ಸುತ್ತಿದ ಹಾಗೆ ಆಗುತ್ತದೆ.

ಅದಕ್ಕೆ ಹೆಂಡತಿಯನ್ನು "ಘರ್ ವಾಲಿ" ಎನ್ನುತ್ತಾರೆ.

😂😂

***


ಸಾಧು ಒಬ್ಬರು ಕುಡುಕನನ್ನು ಕುರಿತು: ಕುಡಿದು ಕುಡಿದು ಸತ್ತರೆ ನರಕಕ್ಕೆ ಹೋಗ್ತೀಯ.

ಕುಡುಕ: ನಂದು ಬಿಡಿ, ಮದ್ಯ ಮಾರುವವನು ನರಕಕ್ಕೆ ಹೋಗ್ತಾನ?

ಸಾಧು: ಹೋಗ್ತಾನೆ

ಕುಡುಕ: ಚಿಪ್ಸ್, ಚಿಕನ್ ಕಬಾಬ್ ಮಾರುವವನು?

ಸಾಧು: ಅವನೂ ಹೋಗ್ತಾನೆ?

ಕುಡುಕ: ಇಷ್ಟು ಸಾಕು ಸ್ವಾಮಿಗಳೇ ಅವರಿಬ್ಬರೂ ಇದ್ದರೆ ಅದೇ ನನಗೆ ಸ್ವರ್ಗ !! 

😝😝😝

***

 ಒಮ್ಮೆ ನಕ್ಕು ಬಿಡಿ

ಕೆಸರಿನಲ್ಲಿ ಮಲಗಿದ ಎಮ್ಮೆ 🐃

ಸೀರಿಯಲ್ ನೋಡಲು ಕುಳಿತ ಹೆಣ್ಣು 👩

ಯಾವತ್ತೂ ಬೇಗ ಎದ್ದು ಬರುವುದಿಲ್ಲ...

😂😂😆😆

ಗ್ಯಾರೇಜಿಗೆ ಹೋಗಿ ಬಂದ ಬೈಕು...

ತವರಿಗೆ ಹೋಗಿ ಬಂದ ವೈಫು...

ಒಂದೆರಡು ದಿನ ಆದ ಮೇಲೇನೇ ದಾರಿಗೆ ಬರೋದು!

😂😂😀😀

ಮಹಿಳೆಯರಿಗೆ ಕಪಾಟು ತೆರೆದರೆ ಎರಡೇ ಚಿಂತೆ...

​ತೊಡುವುದಕ್ಕೆ ಬಟ್ಟೆ ಇಲ್ಲ​

ಇಡುವುದಕ್ಕೆ ಜಾಗವಿಲ್ಲ...

😂😂😀😀

ಹೆಲ್ಮೆಟ್ ಮತ್ತು ಹೆಂಡತಿ ಇಬ್ಬರ ಸ್ವಭಾವ ಒಂದೇ...

ತಲೆ ಮೇಲೆ ಇಟ್ಟುಕೊಂಡ್ರೆ ನೀವು ಸೇಫ್ ಆಗಿರ್ತೀರಿ

😂😂😂

ಅಪ್ಪ : ಯಾಕೋ ಶಾಲೆಗೆ ಹೋಗಿಲ್ಲ?​

ಪುಟ್ಟ : ನಿನ್ನೆ ನಮ್ಮನ್ನೆಲ್ಲಾ ತೂಕ ಮಾಡಿದ್ದಾರೆ... ಇವತ್ತು ಮಾರಿ ಬಿಡ್ತಾರೇನೋ ಅಂತ ಹೋಗಿಲ್ಲ!

😂🤦‍♂😂

ಹೆಂಡತಿ: ಈ ಮನೇಲಿ ನಾನ್ ಇರಬೇಕು, ಇಲ್ಲ ನಿಮ್ಮ ಅಮ್ಮ ಇರಬೇಕು...

ಗಂಡ: ಇಬ್ರೂ ಬೇಕಾಗಿಲ್ಲ!! ಕೆಲಸದವಳು ಒಬ್ಬಳಿದ್ರೆ ಸಾಕು...

😉😜😝

ಅಪಘಾತ ವಲಯದ ಸೂಚನಾಫಲಕದ ಹೊಸ ಸಾಲು:

ಎಚ್ಚರಿಕೆ:-

ನಿಧಾನವಾಗಿ ಹೋಗದಿದ್ದಲ್ಲಿ

​ನಿಧನ​ವಾಗಿ ಹೋಗುವಿರಿ!

😂😂😂

ಜಗತ್ತಲ್ಲಿ ಹುಡುಗರ ಬಗ್ಗೆ ಇರೋ ದೊಡ್ಡ ತಪ್ಪು ತಿಳುವಳಿಕೆ:

"ಮದುವೆ ಆದ್ಮೇಲೆ ಹುಡುಗ ಸರಿಹೋಗ್ತಾನೆ"....!!!

😉😂😉


ಲೇಡೀಸ್ ಹಾಸ್ಟೆಲ್ ಗೆ ಬೆಂಕಿ ಹತ್ತಿಕೊಂಡಿತು‌. ಪಕ್ಕದ ಹಾಸ್ಟಲಿನ ಹುಡುಗರು ಮುಗಿಬಿದ್ದರು. ಆಗ ದೂರದರ್ಶನದಲ್ಲಿ ಬಂದ ಬ್ರೇಕಿಂಗ್ ನ್ಯೂಸ್ - "ಹಾಸ್ಟಲ್ ಗೆ ಹತ್ತಿದ್ದ ಬೆಂಕಿಯನ್ನು ಹತೋಟಿಗೆ ತರಲಾಗಿದೆ. ಆದರೆ ಹುಡುಗರನ್ನು ಹತೋಟಿಗೆ ತರುವುದು ಕಷ್ಟವಾಗಿದೆ"

😀😀😀😀😀😀

ಮದುವೆ ಮನೆಯಲ್ಲಿ ಚಪ್ಪಲಿ ಕಳೆದುಕೊಂಡವನ ಕವಿತೆ:

ಒಂದು ಜೋಡಿ ಸೇರುವುದನ್ನು ನೋಡಲು ಬಂದು 

ಇನ್ನೊಂದು ಜೋಡಿಯನ್ನ ಕಳೆದುಕೊಂಡೆ...

😜😝😁

ಸೋಮ : ನಿಂಗೆ ಎಷ್ಟು ಮಕ್ಳು? 🤔

ಗುಂಡ : 7, ಪುನಃ ಗರ್ಭಿಣಿ... 😊

ಸೋಮ : ಅಷ್ಟೊಂದು ಮಕ್ಳ? 😱

ಗುಂಡ : ಹೆಂಡ್ತಿನ ಯಾವತ್ತೂ ಖಾಲಿ ಹೊಟ್ಟೇಲಿ ಇಡಲ್ಲ ಅಂತ ಮಾವಂಗೆ ಮಾತು ಕೊಟ್ಟಿದ್ದೆ...

😂😂😜😜

ಮಗ: ಅಮ್ಮಾ ನನಗೆ ಈ ಅಂಗಡಿಯಿಂದ ಪಟಾಕಿ ಕೊಡ್ಸು...

ಅಮ್ಮ: ಅಯ್ಯೋ ಕರ್ಮ... ಅದು ಪಟಾಕಿ ಅಂಗಡಿ ಅಲ್ವೋ... ಅದು ladies hostel

ಮಗ: ಮತ್ತೆ ಅಪ್ಪ ನೆನ್ನೆ ಅವರ ಫ್ರೆಂಡ್ ಹತ್ರ ಹೇಳ್ತಿದ್ದರು ಇಲ್ಲಿ ಮಸ್ತ್ ಪಟಾಕಿಗಳಿವೆ ಅಂತ...

😂😂😂

ಹೆಂಡತಿ (ಸಿಟ್ಟಿನಿಂದ) : ನಿಮ್ಮನ್ನು ಮದುವೆ ಆಗೋ ಬದಲು ನಾನು ಒಬ್ಬ ರಾಕ್ಷಸನ್ನ ಮದುವೆ ಆಗಿದ್ರೂ ಎಷ್ಟೋ ಸುಖವಾಗಿರ್ತಿದ್ದೆ...

ಗಂಡ : ಹಾಗೆಲ್ಲ ರಕ್ತಸಂಬಂಧದಲ್ಲಿ ಮದುವೆ ಆಗಬಾರದು ಕಣೇ ಒಳ್ಳೇದಲ್ಲ! 😜

***

ಪರಿಚಯದವರ ಹುಡುಗ ಬಂದು...

"ಬನ್ನಿ ಅಂಕಲ್ ಹೋಗೋಣ" ಅಂದ...

"ನೀನ್ಯಾಕೋ ಬರೋಕ್ ಹೋದೇ ಲೋಕೇಶಾ..." ಅಂದೆ...

ನೀವೇ ಹೇಳುದ್ರಂತಲ್ಲಾ ಅಂಕಲ್  ನಮ್ಮಪ್ಪನ ಹತ್ರಾ "ಲೋಕೇಶನ್ ಕಳ್ಸು ಬರ್ತೀನಿ" ಅಂತಾ....ಬನ್ನಿ ಬನ್ನಿ... ಅಂದ...

ಅಯ್ಯೋ ಭಗ್ವಂತಾ...😎

#Location

***


ಜಗಳವಾಡಿ ಮೂರ್ ದಿನ ಆಗಿತ್ತು. ಹೆಂಡತಿ ಗಂಡನ ಜೊತೆ ಮಾತು ಬಿಟ್ಟಿದ್ದಳು👇🤔😲

ಎಷ್ಟೂಂತ ಬಾಯಿ ಮುಚ್ಕೊಂಡಿರಕ್ಕಾಗುತ್ತೆ ಪಾಪಾ ಹೆಂಡತಿಗೆ. ಬಾಯಿ ನೋಯಕ್ಕೆ ಶುರುವಾಯ್ತು.

ಕಡೆಗೆ ಹೆಂಡತಿ ಅಂದ್ಲು:

"ಏನೋ ಗಂಡ ಹೆಂಡತಿ ಅಂದ್ರೆ ಒಂದ್ ಮಾತು ಬರುತ್ತೆ ಒಂದು ಹೋಗುತ್ತೆ. ಅದಕ್ಕೇ ಇಷ್ಟ್ ದಿನ ಬಾಯ್ಮುಚ್ಕೊಂಡಿರ್ಬೇಕಾ? 😠😲😧 ಇವಾಗ ನಾನು ಹತ್ತರವರೆಗೂ ಎಣಿಸ್ತೀನಿ. ಮಾತಾಡಿಲ್ಲಾಂದ್ರೆ ನಮ್ಮಮ್ಮನ ಮನೆಗೆ ಹೋಗ್ತೀನಿ ಅಷ್ಟೇ 😠😲"

ಹತ್ ನಿಮಿಷ ಆದ್ರೂ ಗಂಡ ಕಮಕ್ ಕಿಮಕ್ಕನ್ಲಿಲ್ಲ.

ಹೆಂಡತಿ ಎಣಿಸೋಕೆ ಶುರು ಹಚ್ಕೊಂಡ್ಲು.

ಒನ್..

ಟೂ..

ಥ್ರೀ..

ಉಹೂಂ. ಗಂಡ ಗಪ್ ಚುಪ್ 😷🙉🙊🙈🤔

ಹೆಂಡತಿ ಹತ್ತು ನಿಮಿಷ ಬಿಟ್ಟು.. 😧😲👇🙉

ಫೋರ್..

ಫೈವ್..

ಅಂದ್ಲು. 😠🤔

ಗಂಡ.. ಉಹೂಂ. ಬಾಯಿ ಬಿಡಲಿಲ್ಲ. 🙉🙈🙊👇

ಸಿಕ್ಸ್..

ಸೆವೆನ್.. 😵😧🙈🙊👇

(ಗಂಡ ಒಳಗೊಳಗೇ ಹಿಗ್ಗಿ ಹೀರೇಕಾಯಿ ಆಗಿದ್ದರೂ ತೋರಿಸಿಕೊಳ್ಳಲಿಲ್ಲ). 😷

ಕ್ಲೈಮ್ಯಾಕ್ಸು.. ಕೊನೆಯ ಹಂತಕ್ಕೆ.. 

ಎಯ್ಟ್

ಅಂದ್ಲು ಹೆಂಡತಿ.. 🙉🙈🙊👇

ಉಹೂಂ.. ಗಂಡ ಚುಪ್ ಚಾಪ್.

ನೈನ್..🙉🙈🙊😧😲👇

(ಗಂಡಂಗೆ ಎದ್ದು ಕುಣಿಯೋವಷ್ಟು ಖುಷಿ).

👇👇👇👇👇👇👇

ಹೆಂಡತಿ ಏನ್ಮಾಡಿದ್ಲು ಅಂದ್ರೆ..

👇👇🙉🙈🙊👇👇

ಎಲೆವನ್ ಅಂತ ಅಂದ್ಲು

🙊😲🙊🤔🙊😧🙊😧🙊🤯🙊😔🙊

ಗಂಡಂಗೆ ಕೋಪ ಬಂತು

🤔😲😧🙉🙈🙊😞🤯👇👇

"ಲೇಯ್ ಸರಿಯಾಗಿ ಎಣಿಸೋಕು ಬರಲ್ವಲ್ಲೆ

ನಿನಗೆ  ನೈನ್ ಆದಮೇಲೆ ಟೆನ್ ಬರುತ್ತೆ ಅಷ್ಟು ಗೊತ್ತಾಗಲ್ವೆ" ಅಂತ

ಕಿರುಚಿದ

🙊🙉🙉🤔😲😧😔👇👇👇

ಹೆಂಡತಿ ಅಂದ್ಲು..👇👇

"ಅಬ್ಬಾ!! ದೇವ್ರು ದೊಡ್ಡೋನು ಕಂಡ್ರೀ.. ಟೆನ್ ಅಂತ ಹೇಳುವುದರ ಒಳಗೇ ನೀವು ಬಾಯಿ ಬಿಟ್ರಿ. ಇಲ್ದಿದ್ದರೆ ನಮ್ಮಮ್ಮನ ಮನೆಗೆ ಹೋಗ್ತಿದ್ದೆ. ಪಾಪ ನಿಮಗೆಷ್ಟು ತೊಂದರೆ ಆಗ್ತಿತ್ತು ಅಲ್ವಾ!!! ಸ್ವಲ್ಪತಾಳಿ ಇದೇ ಖುಷೀಲಿ ಒಳ್ಳೆಯ ಪಾಯಸ ಮಾಡ್ತೀನಿ 🏃🏃🏃" ಅಂತ ಕಿಚನ್ನಿಗೆ ಓಡಿ ಹೋದ್ಲು..! 

😭😳😟🤔😞👇

ಗಂಡ ಈ ಘಟನೆಯನ್ನು ತನ್ನ ಆತ್ಮಚರಿತ್ರೆಯಲ್ಲಿ "ತಾಳ್ಮೆ ಕಳೆದುಕೊಳ್ಳುವುದರಿಂದ ಆಗುವ ಅನಾಹುತಗಳು" ಎಂಬ ಅಧ್ಯಾಯದಲ್ಲಿ ಈ ಘಟನೆಯನ್ನು ಸೇರಿಸಿದ್ದಾನಂತೆ. 

😊😄😁😆😃

***

KITTY PARTY

ಒಂದು ಮನೆಯಲ್ಲಿ ಮಹಿಳೆಯರ ಕಿಟಿಪಾರ್ಟಿ ನಡೀತಿತ್ತು. ಗಂಡಂದಿರಿಗೆ I LOVE YOU ಅಂತ ಹೇಳಿದರೆ ಎಷ್ಟು ಚೆಂದ ಅಲ್ಲ್ವಾ ಅಂತ ಮಾತು ಬಂದಿತು. ನೀವು ಆ ತರಹ ಹೇಳಿ ಎಷ್ಟು ದಿನ ಆಯ್ತು ಎಂದು ಒಬ್ಬರಿಗೊಬ್ಬರು ಕೇಳಿಕೊಂಡರು. ಒಬ್ಬೊಬ್ಬರದೂ ಒಂದೊಂದು ತರಹದ ಉತ್ತರ ಬಂತು. ಹಾಗಾದರೆ  ಸರಿ ಈಗಲೇ ಎಲ್ಲರೂ ನಮ್ಮ ಗಂಡಂದಿರಿಗೆ ಮೆಸೇಜ್ ಕಳುಹಿಸೋಣ, ಏನು ಪ್ರತಿಕ್ರಿಯೆ ಬರುತ್ತದೆ ನೋಡೋಣ.... ತುಂಬಾ ರೊಮಾಂಟಿಕ್ ಪ್ರತಿಕ್ರಿಯೆಗೆ ಬಹುಮಾನ ಅಂತ ತೀರ್ಮಾನಿಸಿದರು . ಪ್ರತಿಯೊಬ್ಬರು ತಂತಮ್ಮ ಗಂಡಂದಿರ ಮೊಬೈಲಿಗೆ

I LOVE YOU ಮೆಸೇಜ್ ಕಳುಹಿಸಿದರು.

ಸ್ವಲ್ಪ ಸಮಯದ ನಂತರ ಆ HUSBANDS  ಕಡೆಯಿಂದ ಬಂದ ಪ್ರತಿಕ್ರಿಯೆಗಳಲ್ಲಿ ಕೆಲವನ್ನು ಕೊಟ್ಟಿದೆ.ಓದಿ ಓದಿ.

Husband 1 :

SWEETY... ತಲೆ ಕೆಟ್ಟುಗಿಟ್ಟು ಹೋಗಿಲ್ಲ ತಾನೇ ನಿನಗೆ ? 

Husband 2 : 

ಸರಿ ಬಿಡು ಇವತ್ತೂ ಅಡುಗೆ ಮಾಡಿಲ್ವಾ ?

Husband 3 : 

Darling, 

ಈ ತಿಂಗಳ ಮನೆ ಖರ್ಚಿನ ದುಡ್ಡು ಮುಗಿದೋಯ್ತಾ?

Husband 4 :

ಏಕೆ ಏನಾಯ್ತು ? ಏನ್ ವಿಷಯ ?

Husband 5 :

ಏನು ನೀನು ಕನಸು ಕಾಣ್ತಾ ಇದೀಯೋ,, ಅಥವಾ ನನಗೇ ಭ್ರಮೇನೋ?

Husband 6;:

ಮುಂದಿನ ವಾರದ ನಿನ್ನ ತಂಗಿ ಮದುವೇಗೆ ಹೊಸಾ ಒಡವೆ ಸೆಟ್ ಬೇಕಾ ?.... ಅದಕ್ಕೇ ಈ ಮಸಾಜಾ?

Husband 7 :: 

ಇಲ್ಲಿ ಆಫೀಸಲ್ಲಿ ನಂದೇ ನಂಗಾಗಿದೆ... ಟೆನ್ಷನ್ನಲ್ಲಿ ಸಾಯ್ತಿದೀನಿ.... ನಿಂದೊಂದು ಬೇರೆ ಗೋಳು ಏನೇ ಇದು ದರಿದ್ರದ ಮೆಸೇಜು.

Husband 8 :

ಲೇ ನಿನಗೆಷ್ಟು ಸರ್ತಿ ಬಡುಕೊಂಡ್ರೂ ಆ ಕಿತ್ತೋದ್ ಸೀರಿಯಲ್ಗಳ್ನ ನೋಡೋದು ಬಿಡಲ್ವಲ್ಲೆ .... ಆ ಕಚಡಾ ನೋಡಿ ಇಂಥಾ ಮೆಸೇಜ್ ಥೂ.

Husband 9::

ಹೂಂ ,,,, ಯಾರಿಗೆ ಗುದ್ದಿದೆಯೆ  ನನ್ನ ಕಾರು ,, ಏನು ಒಂದೈವತ್ತು ಸಾವಿರಕ್ಕೆ ತಂದಾ ತಲೆಗೆ,,, ನನ್ ಕಾರು ಮುಟ್ಟಬೇಡ ಅಂತ ಎಷ್ಟು ಸಲ ಹೇಳಿದೀನಿ.. ಹೂಂ ಎಲ್ಲಿದೀಯ ಬೊಗಳು 😳

Husband 10 : 

ಏನ್ ತಾಯೀ ಇದು  ನಿನ್ನ ಗೋಳು? ಇವತ್ತೂ, ಹುಡುಗರನ್ನ ಸ್ಕೂಲಿಂದ ನಾನೇ ಕರಕೊಂಡ್ ಬರ್ಬೇಕು ತಾನೇ ?

ಕೊನೆಯ ಹಾಗೂ ಅದ್ಭುತ ಪ್ರತಿಕ್ರಿಯೆ ::::

Husband :: 11

ಯಾರ್ರೀ ಇದು ? ನನ್ನ ಹೆಂಡತಿ ಫೋನಿಂದ ಮೆಸೇಜ್ ಕಳಿಸ್ತಿರೋದು?

***


ಕನ್ನಡ ತರಗತಿ*ಗೆ ಬಂದ *AEO* ಪ್ರಥಮ ಬೆಂಚಿನ ಸತೀಶನಿಗೆ  ಪ್ರಶ್ನೆ ಕೇಳಿದರು.!

🏹🏹🏹🏹🏹🏹

*ಶ್ರೀರಾಮನ 🏹ಬಿಲ್ಲನ್ನು ಮುರಿದವನಾರು...??"*🏹

ಇದನ್ನು ಕೇಳಿದ ಸತೀಶ ಅಳುತ್ತಾ.. *"ನಾನಲ್ಲ ಸಾರ್ ನಾನಲ್ಲ."* ಎಂದನು...!!

😫😬🙄🏹🙄😬😩

ಉತ್ತರ ಕೇಳಿದ *AEO* ಟೀಚರ್ ಮುಖವನ್ನು ದಿಟ್ಟಿಸುತ್ತ .."ಟೀಚರ್.!ಏನಿದು...?"😟

*ಟೀಚರ್:* ಛೆ.ಛೆ!..ಇವನು ಆ ರೀತಿ ಮಾಡೋನಲ್ಲ ಸಾರ್..!! ಇವನು ಒಳ್ಳೆಯ ಹುಡುಗ. ಇವನನ್ನು ನಾನು ಚೆನ್ನಾಗಿ ಬಲ್ಲೆ..!

😇😇😩😫😇😇

😠ಸಿಟ್ಟಿನಿಂದ AEO, *HM*ನ್ನು ಕರೆಸಿದರು..!!

"ಹೇ ಏನಿದು.? ಶ್ರೀರಾಮನ ಬಿಲ್ಲನ್ನು ಮುರಿದವನಾರೆಂದು ಈ ಕ್ಲಾಸಿನ ಮಕ್ಕಳಿಗೆ ಬಿಡಿ. ಟೀಚರಿಗೂ ತಿಳಿದಿಲ್ಲ."

😠😠😡😠😠

*HM:* "ಅದು..ಸಾರ್.. ಈ ಕ್ಲಾಸಿನ ಮಕ್ಕಳಾಗಿರಲಿಕ್ಕಿಲ್ಲ. 6ನೇ ತರಗತಿ' ಯವರಾಗಿರಬಹುದು.. ಅವರೇ ಇದನ್ನೆಲ್ಲ. ಮಾಡಿರಬಹುದು.

😬😬😳😬😬

*AEO:* ಶಾಲೆಯನ್ನು ಬಂದ್ ಮಾಡಲು ನಿರ್ದೇಶಿಸಿ ಬರೆದರು..!

😨HM ಮೆನೇಜರನ್ನು ಕರೆಸಿದರು. ಮನೇಜರ್ AEOನೊಂದಿಗೆ....

*"🙏🏾ದಯವಿಟ್ಟು ಶಾಲೆ ಬಂದ್ ಮಾಡಿಸಬೇಡಿ ಸಾರ್..🙏🏿"*

ಮುರಿದಿರುವ 🏹ಬಿಲ್ಲಿನ ಹಣ ಎಷ್ಟಾದರೂ ನಾನು ಕೊಡುತ್ತೇನೆ..!!

😰😰😭😰😰

*AEO😡* ಸಿಟ್ಟಿನಿಂದ *ಶಿಕ್ಷಣ ಮಂತ್ರಿ* ಬಳಿ ಹೋದರು..ಶಾಲೆಯಲ್ಲಿ ನಡೆದ ವಿಷಯ ತಿಳಿಸಿದರು..!!

*ಶಿಕ್ಷಣ ಮಂತ್ರಿಗಳು:* ಏಯ್ ಮಕ್ಕಳು ಅಂದ ಮೇಲೆ ತರ್ಲೆಗಳು ಇದ್ದೇ ಇರುತ್ತಾರೆ. ಅದು ಗೊತ್ತಿದ್ದೂ ಶ್ರೀ ರಾಮ ಯಾಕೆ ಅಲ್ಲಿ ಬಿಲ್ಲು🏹 ತಗೊಂಡು ಹೋಗಿದು

😳😳😱😳😳

*AEO ತಲೆ ಮೇಲೆ ಕೈ ಇಟ್ಟುಕೊಂಡು ಸೀದ #CM# ಸಿದ್ರಾಮಣ್ಣ ಬಳಿ ಹೋದರು*...!

😇😇😰😭😇😇

*CM :*  ನನಗೆ ಇದರ ಬಗ್ಗೆ ಮಾಹಿತಿ ಇಲ್ಲಾ..! ಸುಮ್ ಸುಮ್ನೆ ರಿಯಾಕ್ಸನ್  ಕೊಡಕಾಗಲ್ಲ... ಇದೆಲ್ಲಾ ಬಿಜೆಪಿಯವರ ಕಿತಾಪತಿ ಕೆಲಸ..  ಯಾವ ಬಿಲ್ಲು ಮುರಿದಿಲ್ಲ ಏನೂ ಇಲ್ಲ, ಬಿಜೆಪಿಯವರು ಸುಮ್ ಸುಮ್ನೆ ಬೊಗಳೆ ಬಿಡ್ತಾರೆ... ಹೇಳಿದ್ನಲ , ನೊ ರಿಯಾಕ್ಸನ್. ಒಂದು ವೇಳೆ ಬಿಲ್ಲು  ಮುರಿದಿದ್ರೆ ಸೂಕ್ತ ತನಿಖೆ ನೆಡೆಸಿ ಬಿಲ್ಲು🏹 ಮುರಿದಿದ್ದು ಯಾರು ಅಂತ ಕಂಡು ಹಿಡಿದು ಎಷ್ಟೇ ದೊಡ್ಡ ವ್ಯಕ್ತಿ ಆಗಿದ್ದರೂ ಕಾನೂನು ರೀತಿ ಕ್ರಮ ಕೈಗೊಳ್ಳುತ್ತೇವೆ..!

***

lokasabha election fever


ಬಿಜೆಪಿ ಗುಪ್ತ  ಮೂಲಗಳಿಂದ:

ಮೋದಿ ಸ್ವಲ್ಪ  ಗರಂ  ಆಗಿದ್ದಾರಂತೆ…

ಯಾರ  ಮಾತನ್ನೂ  ಕೇಳುತ್ತಿಲ್ಲವಂತೆ…

NDA ಗೆ  400 ಕ್ಕಿಂತ  ಒಂದೇ  ಒಂದು  ಸೀಟು  ಕಡಿಮೆ  ಬಂದರೂ  ತಾನು  PM  ಆಗುವುದಿಲ್ಲ;  ನೀವು  ಯಾರನ್ನು  ಬೇಕಿದ್ದರೂ  ಮಾಡಿಕೊಳ್ಳಿ  ಎಂದು  ಖಡಾಖಂಡಿತವಾಗಿ  ಹೇಳಿದ್ದಾರಂತೆ…

ಕಂಗಾಲಾದ  RSS ನವರು  plan B  ರೆಡಿ  ಮಾಡಿದ್ದಾರಂತೆ:

400 ಕ್ಕಿಂತ  ಕಡಿಮೆ  ಬಂದಲ್ಲಿ  ಯೋಗಿ ಯವರನ್ನು  PM ಮಾಡುವುದು ಅಂತ…

ಇದನ್ನು  ಹೇಗೋ ತಿಳಿದ ಕೆಲವರು RSS ನವರಗಿಂತಲೂ  ಜಾಸ್ತಿ  ಕಂಗಾಲಾಗಿ  - ಹೇಗಾದರೂ  ಮಾಡಿ  ಮೋದಿಯವರಿಗೆ  400 ಸೀಟು  ಕೊಡಿಸುವ  ಪಣ  ತೊಟ್ಟಿದ್ದಾರಂತೆ…

ಇದೀಗ  ಬಂದ  ಸುದ್ದಿ…

***

ಈವತ್ತಿನಿಂದ ಚುನಾವಣಾ ನೀತಿ ಸಂಹಿತೆ ಪ್ರಾರಂಭವಾಗುವುದರಿಂದ🫢


ಎಲ್ಲಾ ಕೆರೆಗಳ ಮೇಲೆ ಹದ್ದಿನ ಕಣ್ಣು ಇಡಲಾಗಿದೆ "ತಾವರೆ ಹೂ 🪷ಅರಳದಂತೆ ಆದೇಶಿಸಲಾಗಿದೆ

ಎಲ್ಲಾ ಮಠಗಳಿಗೂ ಸುತ್ತೋಲೆ       ಹೊರಡಿಸಲಾಗಿದೆ ಒಂದೇ ✋🏽ಕೈಯಿಂದ ಭಕ್ತರನ್ನು  🙌🏽 ಹರಸುವಂತಿಲ್ಲ

ಎಲ್ಲಾ ಹೊಲ ಗದ್ದೆ ಮಾಲಿಕರಿಗೂ ಆದೇಶ ರವಾನಿಸಲಾಗಿದೆ  ಯಾವುದೇ ಕಾರಣಕ್ಕೂ ಹೆಣ್ಣು 👩🏽‍🦰ಮಕ್ಕಳ ತಲೆಮೇಲೆ ತೆನೆ 🌾ಹೊರಸುವಂತಿಲ್ಲ.

ಚುನಾವಣೆ ಮುಗಿಯೂವರೆಗೂ ಯಾರೂ ಪೊರಕೆ 🧹ಬಳಸುವಂತಿಲ್ಲ

***

***


😂🤣😱🏹😱😂🤣

🫢😂😃🫢😂😃🫢😂😃🫢😂😃

***

truth

 ಸೈಕಲ್ ನಡೆಸುವವರಿಂದ ದೇಶದ ಅರ್ಥವ್ಯವಸ್ಥೆಗೆ (GDP)  ಹಾನಿ

🤣(ಇದನ್ನು ಯಾರು ಹೇಳಿದರೆಂದು ನಾನು ಹೇಳುವುದಿಲ್ಲ).🤣

"ನಿಮಗಿದು ಹಾಸ್ಯಾ‌ಸ್ಪದ ವೆನಿಸುವುದೇ? ಆದರೆ ಇದು ಸತ್ಯ."

ಸೈಕಲ್ ನಡೆಸುವವನಿಂದ ದೇಶಕ್ಕೆ ಆಪತ್ತು. ಏಕೆಂದರೇ...

🔴ಅವನು ಗಾಡಿ ಖರೀದಿಸುವುದಿಲ್ಲ.

🔴ಅವನು ಸಾಲ ಪಡೆಯುವುದಿಲ್ಲ.

🔴ಅವನು ಗಾಡಿಯ ವಿಮೆ ಮಾಡಿಸುವುದಿಲ್ಲ.

🔴ಅವನು ತೈಲ ಖರೀದಿಸುವುದಿಲ್ಲ.

🔴ಅವನು ಗಾಡಿಯ ಸರ್ವೀಸಿಂಗ್ ಮಾಡಿಸುವುದಿಲ್ಲ.

🔴ಅವನು ಹಣ ನೀಡಿ ಪಾರ್ಕಿಂಗ್ ಮಾಡಿಸುವುದಿವಲ್ಲ.

🔴ಅವನು ಹೆಲ್ಮೆಟ್,ಲೈಸೆನ್ಸ್ ಇಲ್ಲದಕ್ಕೆ ದಂಡ ಕಟ್ಟುವುದಿಲ್ಲ.

ಮತ್ತು

🔴ಅವನು ದಪ್ಪಗಾಗುವುದಿಲ್ಲ!!!

ಹೌದ್ರೀ...ಇದು ಸತ್ಯ. 

ಒಬ್ಬ ಆರೋಗ್ಯಪೂರ್ಣ ವ್ಯಕ್ತಿ ಅರ್ಥವ್ಯವಸ್ಥೆಗೆ ಮಾರಕ,ಏಕೆಂದರೆ ಅವನು ಔಷಧಿ ಖರೀದಿಸಲಾರ.

ಅವನು ದವಾಖಾನೆ,ಚಿಕಿತ್ಸೆಗೆ ಹೋಗಲಾರ.ಅದು GDP ಗೆ ಯೋಗದಾನ ನೀಡಲಾರ.

ಇದರ ಜೊತೆಗೆ ಒಬ್ಬ Fast Food ಅಂಗಡಿಯವ 30 ಉದ್ಯೋಗ ಸೃಷ್ಟಿ ಮಾಡುವನು.

10 ಹೃದಯ ಚಿಕಿತ್ಸಕ

10 ದಂತ ಚಿಕಿತ್ಸಕ

10 ತೂಕ ಕಡಿಮೆ ಮಾಡುವವ.

 ಸೂಚನೆ :-

ನಡೆಯುವವರು ಇವರಿಗಿಂತ ಖತರ್ನಾಕ್ ಇರುವರು.

ಏಕೆಂದರೆ ನಡೆಯುವವರು ಸೈಕಲ್ಲನ್ನೂ ಖರೀದಿಸಲಾರರು.

🤣😃

***

ಇದನ್ನು ಓದೀ...ನಿಮಗೆ ತಮಾಷಿಗೆ ಬರೆದಿರುವೆ ಅನ್ನಿಸುವುದಾ ಆದರೂ ಪರಮಸತ್ಯ ಅರ್ಥಮಾಡಿಕೊಳ್ಳಿ ಬೇರೆಯವರಿಗೂ ಅರ್ಥಮಾಡಿಸಿ*😜😜

○ ನೀವು ಹಾಳಾಗಲೇಬೇಕಾದರೆ.....

ಮದ್ಯ , ಜೂಜು ಅಥವಾ ಮೋಹ ಪಾಶಕ್ಕೆ ಸಿಲುಕಲೇಬೇಕು ಎಂದೇನಿಲ್ಲ .....!

2024ರಲ್ಲಿ ನೀವು  ಕಾಂಗ್ರೆಸ್‌ಗೆ ಮತ ಹಾಕಿದರೆ ಸಾಕು....!

🤣🤣🤣

○ *ಪ್ರೇತ ಪಿಶಾಚಿಗಳನ್ನು ನೋಡಿರುವೆಯೆನ್ನುವವನು ಹುಚ್ಚನಲ್ಲ!

     ರಾಹುಲ್ ಗಾಂಧಿಯೊಳಗೆ ಈ ದೇಶದ ಭವಿಷ್ಯ ಕಾಣುವವನು ಹುಚ್ಚ!*

🤭🙃

○ "ಭಾರತ ರತ್ನ" ದ ಅಪಹಾಸ್ಯ ಶುರುವಾಗಿದ್ದು ನೆಹರೂ ಚೀನಾದೊಂದಿಗೆ ಯುದ್ಧದಲ್ಲಿ ಸೋತ ಅನಂತರವೂ  ತನಗೆ ತಾನೇ ಭಾರತ ರತ್ನ ವನ್ನು ಕೊಟ್ಟುಕೊಂಡಿದ್ದು!

🤔🤔

○ ನಿಮ್ಮ ಒಂದು ತಪ್ಪು ಓಟು* ನಿಮ್ಮ ಮನೆ ಬಾಗಿಲಿಗೆ ಭಯೋತ್ಪಾದಕರನ್ನು ತರಬಹುದು *.... 

   ಮತ್ತು ನಿಮ್ಮ ಸರಿಯಾದ ಓಟು* ಅವರನ್ನು ಗಡಿಯಲ್ಲೇ ನಾಶಮಾಡಬಲ್ಲದು.....!*

🙃🤪😜

○ ಜೀವನವೂ  ನಿಮ್ಮದು ಮತ್ತು ನಿರ್ಧಾರವೂ ಸಹ ನಿಮ್ಮದೇ!!🤔🤔🤔🤔

"ಪ್ರಿಯಾಂಕಾ" ವಿಶ್ವದ ಮೊದಲ ಅಂತಹ ನಾಯಕಿ....

ಈಕೆಯ "ತವರುಮನೆ" ಮತ್ತು "ಸೇರಿರುವಮನೆ" ಎರಡೂ ನ್ಯಾಯಾಲಯದ  ಜಾಮೀನಿನ ಮೇಲೆ ಜೀವಿಸುತ್ತಿದ್ದಾರೆ.😂😆

😇

○ ಆದರೆ ಈಗಲೂ ಅವರ ಪಕ್ಷವು "ಚೌಕಿದಾರ ಕಳ್ಳ!"* ಎಂಬ ಘೋಷಣೆಗಳನ್ನು ಕೂಗುತ್ತಿದೆ.

🤭🙃😂

○ ಬಾಬರ್ನ ಅಪ್ಪ  ಉಜ್ಬೇಕಿಸ್ತಾನ್...

ತಾಯಿ ಮಂಗೋಲಿಯಾ...

ಆತ ನಿಧನನಾಗಿದ್ದು  ಅಫ್ಘಾನಿಸ್ತಾನದಲ್ಲಿ ... ಮತ್ತು ಆತನ  ಸಮಾಧಿ ಕಾಬೂಲ್‌ನಲ್ಲಿ ... ಆದರೆ ... "ಅವರಿಗೆ ಅಯೋಧ್ಯೆಯಲ್ಲಿ ಬಾಬರಿ ಮಸೀದಿ ಬೇಕು"... ? ಕುತೂಹಲಕಾರಿ ವಿಷಯವೆಂದರೆ * ಕಾಂಗ್ರೆಸ್ ಮೊದಲಿನಿಂದಲೂ ಸಹ ಅದನ್ನೇ ಬೆಂಬಲಿಸುತ್ತಿದೆ *

😇😇😇😇

○ ಅಂತಹ ಕಲಿಯುಗವು ಮುಂದೆ  ಬರಲಿದೆ ಎಂದು ಶ್ರೀರಾಮಚಂದ್ರ ಹೇಳಿದ್ದರು...!

* ಆತನ ಮನೆತನದ ಪೂರ್ವಜರು ಮ್ಲೇಚ್ಛರ ರೀತಿ ನೀತಿಗಳನ್ನು ಅಳವಡಿಸಿಕೊಂಡರು. ಆತನನ್ನು ಹೆತ್ತವರು ಚರ್ಚ್‌ನಲ್ಲಿ ಮದುವೆಯಾಗಿ ಇವನನ್ನು ಹೆತ್ತರು. ಮತ್ತು ... ಐವತ್ತು ವರ್ಷಗಳ ಅನಂತರ ಮಗನನ್ನು "ಬ್ರಾಹ್ಮಣ" ಎಂದು ಕರೆಯುತ್ತಾರೆ...!!*

😇😇😇😇

○ ಧರ್ಮ ಬದಲಾಯಿಸಿದರು, ಮನೆತನ ಬದಲಾಯಿತು...!

"ಅಜ್ಜನನ್ನು ಸಮಾಧಿಯಲ್ಲಿ ಹೂಳಲಾಗಿದೆ

 * ಆದರೆ ಮೊಮ್ಮಗ ಮಾತ್ರ ದತ್ತಾತ್ರೇಯಗೋತ್ರದ ಬ್ರಾಹ್ಮಣನಾದ!!"*

😇😇😇😇

○ ಆ ಕಾಂಗ್ರೆಸ್ ಕೂಡ ಇಂದೂ ಆ ಹಳ್ಳಿಯ ತಾಯಿಯು ಮಗನಿಗೆ ಬರೆದ ಪತ್ರ ಓದಿ ಕಣ್ಣೀರು ಹಾಕಿದೆ...ಅದರಲ್ಲಿ...ತಾಯಿ ಬರೆದಿದ್ದಾಳೆ 

“ಈಗ ನೀನು ಹಳ್ಳಿಗೆ ಬಾ ಮಗಾ... ದೇಶದ ಬಿಜೆಪಿ ಸರ್ಕಾರದಲ್ಲಿ *ಹಳ್ಳಿಯ ರಸ್ತೆಗಳು ಡಾಮರು ಆಗಿವೆ...!

ಮತ್ತು ವಿದ್ಯುತ್ ಕೂಡ ಹೋಗುವುದಿಲ್ಲ...!

ಸೊಸೆಯನ್ನೂ ಊರಿಗೇ ಕರೆತಂದು ಬಿಡು  ಮಗಾ...

ಈಗ ಪಕ್ಕ ಮನೆಯಾಗಿದೆ,  ಶೌಚಾಲಯವೂ ಪಕ್ಕಾ ಆಗಿದೆ!!"

😅😅

○ ಇಂದಿರಾಗೆ ಇಬ್ಬರು ಗಂಡು ಮಕ್ಕಳಿದ್ದರು...

ಒಬ್ಬ ಸರ್ಕಾರವನ್ನು ನಡೆಸಲು ಇಷ್ಟಪಡುತ್ತಿದ್ದ, ಆದರೆ ಆತ  ವಿಮಾನವನ್ನು ಓಡಿಸುವಾಗ ಸಾಯಲ್ಪಟ್ಟ - ಸಂಜಯ್ ಗಾಂಧಿ

ಮತ್ತೊಬ್ಬ ಮಗನಿಗೆ ವಿಮಾನ ನಡೆಸುವುದೆಂದರೆ ಒಲವು 

ಆದರೆ ಸರ್ಕಾರ ನಡೆಸುವಾಗಲೇ  ಸಾಯಲ್ಪಟ್ಟ - ರಾಜೀವ್ ಗಾಂಧಿ...!!*

⛳️⛳️

○ ಈಗ ಮತ್ತೊಂದು ವಿಪರ್ಯಾಸ ನೋಡಿ...

ಇಂದಿರಾಗೆ ಇಬ್ಬರು ಸೊಸೆಯರಿದ್ದಾರೆ...

* ಒಬ್ಬಳಿಗೆ ಮಂಗಗಳನ್ನು ಸಾಕುವುದು ಇಷ್ಟ, ಆದರೆ ಆಕೆ ಸರ್ಕಾರವನ್ನು ನಡೆಸಬೇಕು - ಮೇನಕಾ ಗಾಂಧಿ

* ಮತ್ತೊಬ್ಬಳಿಗೆ ಸರ್ಕಾರ ನಡೆಸುವ ಆಸೆ, ಆದರೆ ಆಕೆ ಮಂಗನನ್ನು  ಸಾಕಬೇಕು--??

ನಾನು ಖಂಡಿತಾ ಹೆಸರು ಹೇಳುವುದಿಲ್ಲ 

⛳️⛳️

○ ಮನೆಯ ಹೊರಗೆ ನಿಂಬೆಹಣ್ಣು,  ಮೆಣಸಿನಕಾಯಿ ಕಟ್ಟಿ ನೇತು ಹಾಕಿದರೆ  ಮನೆಯ ಹೊರಗೆ ನೇತು ಹಾಕಿದರೆ ದೆವ್ವ, ಪ್ರೇತ ಪಿಶಾಚಿಗಳು ಬರುವುದಿಲ್ಲ ಎಂದು ಹೇಳಲಾಗುತ್ತದೆ...

ಮತ್ತು ಮನೆಯ ಹೊರಗೆ ಆಲೂಗಡ್ಡೆ ನೇತು ಹಾಕಿದರೆ ಕಾಂಗ್ರೆಸ್ಸಿಗರು ಕೂಡಾ  ಬರುವುದಿಲ್ಲ.

ಏಕೆಂದರೆ ಆಲೂಗಡ್ಡೆಯನ್ನು ಚಿನ್ನ ಮಾಡಿಕೊಡಿ ಎಂದು ತಮಗೆ ದುಂಬಾಲು ಬೀಳುತ್ತಾರೆಂದು ಅವರು ಚೆನ್ನಾಗಿ ಅರ್ಥಮಾಡಿಕೊಂಡಿದ್ದಾರೆ...

⛳️⛳️

○ ಮಾಯಾವತಿಗೆ ತಾನು ಅಳಬೇಕೋ ನಗಬೇಕೋ ಅರ್ಥವಾಗುತ್ತಿಲ್ಲ*

11,000 ಕೋಟಿ ರೂಪಾಯಿ  ವಾಪಸ್ ನೀಡುವಂತೆ ಸುಪ್ರೀಂ ಕೋರ್ಟ್ ಆದೇಶನೀಡಿದೆ...* ಆ ಪ್ರಕರಣವನ್ನು ದಾಖಲಿಸಿದ್ದು ಅಖಿಲೇಶ್..!!

⛳️⛳️

○ * ಈಗ ಸದ್ಯ ಪ್ರಿಯಾಂಕಾ ಮುಂದೆ 4 ಸವಾಲುಗಳಿವೆ...*

1. ಸಹೋದರನನ್ನು ಉಳಿಸುವುದೇ?

2. ಗಂಡನನ್ನು ಉಳಿಸುವುದೇ?

3. ಕಾಂಗ್ರೆಸ್ ಉಳಿಸುವುದೇ?

ಅಥವಾ...

4. ಶಶಿ ತರೂರ್‌ನಿಂದ ತನ್ನನ್ನು  ರಕ್ಷಿಸಿಕೊಳ್ಳುವುದೇ?

⛳️⛳️

○ ಒಂದು ಕಾಲವಿತ್ತು  ಜನರು ಚಳುವಳಿ ಮಾಡುತ್ತಿದ್ದರು* ಮತ್ತು   ನಾಯಕರು ಮನೆಯಲ್ಲಿ ಕುಳಿತು ತಮಾಷೆ ನೋಡುತ್ತಿದ್ದರು*

ಆದರೆ ಇಂದು ಮೋದಿಯವರು ಭ್ರಷ್ಟ ನಾಯಕರು ಚಳುವಳಿ ಮಾಡಿ ದಿಗ್ಬ್ರಾಂತರಾಗುವಂತಹ ಪರಿಸ್ಥಿತಿ ನಿರ್ಮಾಣ ಮಾಡಿದ್ದಾರೆ,*

* ಮತ್ತು ಸಾರ್ವಜನಿಕರು ಶಾಂತವಾಗಿ ಕುಳಿತು ಮನೆಯಲ್ಲಿ ಆನಂದಿಸುತ್ತಿದ್ದಾರೆ !!*

ಇದನ್ನು ಒಳ್ಳೆಯ  ದಿನಗಳು  ಎನ್ನುತ್ತಾರೆ!!

⛳️⛳️

○ ವಿಶ್ವದ ನಾಯಕರು ಮೋದಿಯನ್ನು ನೋಡಿ ಆನಂದಪಡುತ್ತಾರೆ, ಮೋದಿಯಿಂದಲೇ ಭಾರತದ ವಿಪಕ್ಷ ನಾಯಕರಿಗೆ ಹುಚ್ಚುಹಿಡಿದಿದೆ!!

ಇದರಲ್ಲಿ ಅನುಮಾನವೇ ನಿಮಗೆ!!

⛳️⛳️

○ ಮೂಲ ಕಾಗ್ರೆಸ್ಸಿನಿಂದಲೇ ಒಡೆದು ಹೋಗಿ ಸ್ವಂತ ಪಕ್ಷವನ್ನು ಕಟ್ಟಿಕೊಂಡವರನ್ನು ಫೆವಿಕಾಲ್ ನಿಂದ  ಸೇರಿಸಲಾಗುವುದಿಲ್ಲ...*

ಆದರೆ ಮೋದಿ ಭಯವೇ ಎಲ್ಲರನ್ನೂ ಒಂದಾಗಿ ಸೇರಿಸಿದೆ!!  

⛳️⛳️

○ * ದೇಶದ ಕಾವಲುಗಾರನಿಗೇ ಓಟು ಹಾಕಲು ಯಾರೂ  ಖಚಿತಮಾಡಿಕೊಂಡಿರಲಿಲ್ಲ* 

ಆದರೆ ಎಲ್ಲ ಕಳ್ಳರೂ ಒಗ್ಗೂಡಿ  ಬರುತ್ತಿರುವುದನ್ನು ಕಂಡು ದೇಶಕ್ಕೆ  ಕಾವಲುಗಾರನನ್ನು ಇಟ್ಟುಕೊಳ್ಳುವುದು ಅಗತ್ಯ ಎಂದು ಪ್ರತಿಜ್ಞೆ ಮಾಡಿದೆ.*

⛳️⛳️

○ ರಾಷ್ಟ್ರ ದ್ರೋಹಿಗಳ ಕೋಟೆಗಳು ರಾಷ್ಟ್ರೀಯತೆಯ ಕೋವಿಯಿಂದ ಕುಸಿದುಬಿದ್ದವು...

* ಹಾವು - ಮುಂಗುಸಿ ಒಂದಾಯಿತು ಮೋದಿ ನಿಮ್ಮ ಭಯದಿಂದ !!*

ದೇಶವನ್ನು ಮಾರುವವರು ಒಂದಾಗಬಹುದು, ಹಾಗಾದರೆ ದೇಶವನ್ನು ಉಳಿಸುವವರು ಏಕೆ ಒಂದಾಗಬಾರದು?

⛳️⛳️

○ 77 ರಲ್ಲಿ  ತುರ್ತುಪರಿಸ್ಥಿತಿ  ಹೇರಿಕೆ ,

   * 84 ರಲ್ಲಿ ಸಿಖ್ ನರಸಂಹಾರ*, 

   * 90 ರಲ್ಲಿ ಕಾಶ್ಮೀರಿ ಹಿಂದೂಗಳ  ನರಮೇಧ!!*

ಅಲ್ಲಿಯವರೆಗೆ ಭಾರತದ  ಸಂವಿಧಾನ ಸುರಕ್ಷಿತವಾಗಿತ್ತು.

* ಈ 7 ವರ್ಷಗಳಲ್ಲಿ ದೇಶಕ್ಕೆ ಮಾರಕರಾಗಿದ್ದ  1300 ಉಗ್ರರ ಹತ್ಯೆ*

* ಈಗ ಭಾರತದ ಸಂವಿಧಾನ ಅಪಾಯದಲ್ಲಿದೆಯೇ?*

⛳️⛳️

○ ಕಾಂಗ್ರೆಸಿಗರು  ದುರ್ಗಾ ಮಾತೆಯ ಅವತಾರ ಎಂದು  ಹೇಳುತ್ತಿರುವ ಆ ಪ್ರಿಯಾಂಕಾ ವಾಡ್ರಾಳ ಮಕ್ಕಳ ಹೆಸರು 'ರೆಹಾನ್ ಮತ್ತು ಮರಿಯಾ'.

ಎಲ್ಲವನ್ನೂ  ಯೋಚಿಸಿ ಹೇಳೀ...!!

⛳️⛳️

○ ಮೋದಿಯವರನ್ನು  ವಿರೋಧಿಸುವ 22 ಪಕ್ಷಗಳ ಒಟ್ಟು ಕುಟುಂಬದ ಆಸ್ತಿ ಕೇವಲ 300 ಲಕ್ಷ ಕೋಟಿ ರೂ.,* 

ಇದು ದೇಶದ 10 ವರ್ಷಗಳ ಬಜೆಟ್ ಆಗಿದೆ.

ಇದನ್ನೇ ನಿಮಗೆಲ್ಲಾ  ಹೇಳೋಣ ಎಂದು ಯೋಚಿಸಿದೆ...

⛳️⛳️

○ 2004 ರಲ್ಲಿ ಒಮ್ಮೆ ತಪ್ಪು ಮಾಡಿದ್ದಕ್ಕೆ ಇಡೀ ದೇಶವು  10 ವರ್ಷಗಳ ಕಾಲ ಧ್ವನಿಯೇ ಇಲ್ಲದ  ಮೂಕ ಪ್ರಧಾನಿಯನ್ನು ಪಡೆಯಬೇಕಾಯಿತು 

ಈ ಬಾರಿ ಮತ್ತೆ ತಪ್ಪು ಮಾಡಿದರೆ ಬುದ್ಧಿಯೇ  ಇಲ್ಲದ ಪ್ರಧಾನಿ ಸಿಗುತ್ತಾರೆ !! ನಿಧಾನವಾಗಿ ಯೋಚಿಸಿ ಅರ್ಥಮಾಡಿಕೊಳ್ಳೀ....*

⛳️⛳️

○ *ಅಭಿವೃದ್ಧಿ ಹುಚ್ಚು ಹೆಚ್ಚಾದರೆ ದೇಶಕ್ಕೆ ಒಳ್ಳೆಯದು, * 

   ಆದರೆ ಹುಚ್ಚು ಅಭಿವೃದ್ಧಿಯಾಗಲಾರದು...

   ನಮೋಗೆ ಮತ ಹಾಕಬಹುದು,

   ಆದರೆ ಜೋಕರ್ ಗೆ  ಅಲ್ಲ..*

***

ಒಂದು ಸಲ✈️ನಲ್ಲಿ5 ಜನ ಪ್ರಯಾಣ ಮಾಡ್ತಾ ಇದ್ದರು. ಸಚೀನ್. ಅಂಬಾನಿ, Siddaramayya, ಮೋದಿ & 1ಚಿಕ್ಕ ಹುಡುಗಿ. ಆಕಸ್ಮಿಕವಾಗಿ ಇಂಜನಿನಲ್ಲಿ ತೊಂದರೆ ಕಾಣಿಸಿತು.ಅದರಲ್ಲಿ ಇದ್ದದ್ದು 4 ಪ್ಯಾರಾಚೂಟ್ ಮಾತ್ರ.

ಸಚೀನ್- ನಾನು ಮಹಾನ್ ಕ್ರಿಕೆಟಿಗ ಅಂತ ಹೇಳಿ 1 ಪ್ಯಾರಾಚೂಟ ಕಟ್ಟಿಕೊಂಡು ಹಾರಿಬಿಟ್ಟ.

ಅಂಬಾನಿ-ನಾನು ಭಾರತದಲ್ಲಿ ಅತಿ ಶ್ರೀಮಂತ ಅಂತ ಹೇಳಿ1ಪ್ಯಾರಾಚೂಟ್ ಕಟ್ಟಿಕೊಂಡು ಹಾರಿಬಿಟ್ಟ.

Siddaramayya- ನಾನು ಈ ದೇಶದ ಮಹಾನ್ ವ್ಯಕ್ತಿ ಅಂತ ಹೇಳಿಅವನೂ1ಪ್ಯಾರಾಚೂಟ ಕಟ್ಟಿಕೊಂಡು ಹಾರಿಬಿಟ್ಟ.

ಮೋದಿಜೀ- ಬಾಲಕಿಗೆ ನೀನು ಈ ದೇಶದ ಭವಿಷ್ಯ.ನೀನು 1ಪ್ಯಾರಾಚೂಟ ಕಟ್ಟಿಕೊಂಡು ಹಾರು ಎಂದ.

ಆಗ ಬಾಲಕಿ 2 ಪ್ಯಾರಾಚೂಟ ಇವೆ.

Sidaramaya ಪ್ಯಾರಾಚೂಟ್ ಅಂತ ತಿಳಿದು ನನ್ನ ಸ್ಕೂಲ್ ಬ್ಯಾಗ ಹಾಕಿಕೊಂಡು ಜಿಗಿದ ಅಂದಳು😄😃

***

"ರೀ ಬರೋವಾಗ ಮೊಸರು ತರ್ತೀರಾ..ಮನೇಲಿರೋ ಮೊಸರು ಮೂರು ದಿನ ಹಿಂದಿದು..ತುಂಬಾ ಹುಳಿಯಾಗಿದೆ"

"ಹೌದಾ....ಹಾಗಾದ್ರೆ ಅದನ್ನ ಏನು ಮಾಡ್ತೀಯೆ?"

"ಏನು ಮಾಡೋದು? ತಿಪ್ಪೆಗೆ ಚೆಲ್ಲೋದು..ಅಷ್ಟೆ..."

"ಅಮ್ಮ ಹೇಳ್ತಿದ್ಲು..ಮೊಸರನ್ನ ಹೊರಗೆ ಚೆಲ್ಲಬಾರದು ಅಂತ. ಏನಾದರೂ ಮಾಡು...."

"ಏನು ಮಾಡಲಿ..ಮಜ್ಜಿಗೆ ಮಾಡಿದರೆ ಹುಳಿ ಹುಳಿ.. ಬಾಯಲ್ಲಿಡೋಕಾಗಲ್ಲಾ..."

"ಒಂದ್ಕೆಲ್ಸಾ ಮಾಡು ಮಜ್ಜಿಗೆ ಹುಳಿ ಮಾಡು.. ತಿನ್ನೋಕೂ ರುಚಿಯಾಗಿರುತ್ತೆ. ಅನ್ನಕ್ಕೂ ಜೊತೆಯಾಗುತ್ತೆ..."

"ಗುಡ್ ಐಡಿಯಾ...ಹೇಗೂ ಹೊರಗೆ ಹೋಗ್ತಿದ್ದೀರಾ..ಒಂದಷ್ಟು ಸಾಮಗ್ರಿ ಹೇಳ್ತೆನೆ, ಬರೆದುಕೊಂಡು ಬಿಡಿ"

"ಸರಿ..ಹೇಳು..."

"ಊ....ಕೊತ್ತಂಬರಿ ಸೊಪ್ಪು.. ಕರಿಬೇವು, ಶುಂಠಿ...ಹಾ..ಒಂದು ತೆಂಗಿನ ಕಾಯಿ...ಓಂಕಾಳು...."

"ಹೂ...ಬರೆದಾಯ್ತು...ಹೊರಡ್ಲಾ.."

"ಇನ್ನೂ ಇದೆ ತಡೀರಿ....ಒಂದು
ಬೂದುಗುಂಬಳಕಾಯಿ..."

"ಬೂದು ಗುಂಬಳಕಾಯಿನಾ? ಅದ್ಯಾಕೆ?"

"ಮತ್ತೆ ಮಜ್ಜಿಗೆ ಹುಳಿ ಏನು ಬೆಂಡೆಕಾಯಲ್ಲಿ ಮಾಡೋಕಾಗುತ್ತಾ? ತರ್ತಾ ದೊಡ್ದೆ ತನ್ನಿ. ಹೋಳು, ಗೀಳು ತರಬೇಡಿ...ತೆರೆದಿಟ್ಟದ್ದು ಚೆನ್ನಾಗಿರೋಲ್ಲಾ .."

"ಆಯ್ತಾ...ಹೊರಡಲಾ?"

"ಊ..ಸ್ವಲ್ಪ ತಡೀರಿ...ರೀ ಒಂದೆ ಕುಂಬಳಕಾಯಿ ತರಬಾರದಂತೆ, ಅಜ್ಜಿ ಹೇಳ್ತಾ ಇದ್ರು. ತರೋದು ತರ್ತೀರಾ ಎರಡು ಕುಂಬಳಕಾಯಿ..ದೊಡ್ಡದು ತನ್ನಿ. ಹೇಗೂ ದೊಡ್ಡ ಕುಂಬಳಕಾಯಿ ತರ್ತೀದ್ದೀರಾ ಅಷ್ಟನ್ನೂ ಮಜ್ಜಿಗೆ ಹುಳಿಗೆ ಹಾಕೋಕೆ ಆಗುತ್ತಾ? ಒಂದು ಕೆಲಸಾ ಮಾಡಿ, ಒಂದೆರಡು ಕೆಜಿ ಸಕ್ಕರೆ, ಒಂದು ಕೆಜಿ ನಂದಿನಿ ತುಪ್ಪ, ಕಾಲು ಕಾಲು ಕೆಜಿ ದ್ರಾಕ್ಷಿ, ಗೋಡಂಬಿ, ಏಲಕ್ಕಿ...."

"ಇದೆಲ್ಲಾ ಮಜ್ಜಿಗೆ ಹುಳಿಗೆ ಹಾಕ್ತಾರೆಯೆ?"

"ಛೆ..ಹುಳಿಗೆ ಅಲ್ರೀ..ಕಾಶಿಹಲ್ವಾ ಮಾಡೋಕೆ. ಕುಂಬಳಕಾಯಿ ಒಡೆದು ಹಾಗೆ ಇಡಬಾರದು.. ಅಪಶಕುನ.."

"ಇಷ್ಟೆ ಸಾಕಾ?"

"ಸ್ವಲ್ಪ ತಡೀರಿ...ಒಂದು ನಾಲ್ಕು ಸೇರು ಭತ್ತದರಳು, ಎಂಟೋ ಹತ್ತೋ ನಿಂಬೆಹಣ್ಣು, ಒಳ್ಳೆ ಎಳೆಗಾಯಿ ಹಸಿ ಮೆಣಸು, ಎಸ್ ಎಸ್ ಪಿ ಇಂಗು ತನ್ನಿ.. ಘಮಘಮಾಂತ ಇರುತ್ತೆ..."

"ಕಾಶೀಹಲ್ವಾಕೆ ಇಂಗು ಹಾಕ್ತಾರೇನೆ?"

"ಥೋ..ನಿಮ್ಮ ಬುದ್ಧಿಗಿಷ್ಟು...ಹಲ್ವಾಕೆ ಯಾರಾದ್ರೂ ಇಂಗು ಹಾಕ್ತಾರೇನ್ರೀ..ಇದು ಅರಳುಸಂಡಿಗೆಗೆ. ಕುಂಬಳಕಾಯಿ ತರ್ತಿದ್ದೀರಾ ಸಂಡಿಗೆ ಮಾಡದಿದ್ರೆ ಹೇಗೆ ಹೇಳಿ?..."

"ಈಗಲಾದರೂ ಹೊರಡಲಾ?"

"ಏನೋ ನೆನಪಿಗೆ ಬರ್ತಿದೆ ತಡೀರಿ...ಹಾ...ನೆನಪಾಯ್ತು ಒಂದು ಪಡವಲಕಾಯಿಯನ್ನೂ ತನ್ನಿ. ಮಜ್ಜಿಗೆ ಹುಳಿಗೆ ಕುಂಬಳಕಾಯಿ ಜೊತೆ ಒಳ್ಳೆ ಕಾಂಬಿನೇಷನ್ನು...ಜೊತೆಗೆ ಒಂದರ್ಧ ಕೆಜಿ ಒಳ್ಳೆ ನುಣುಪಾದ ಕಡ್ಲೆಹಿಟ್ಟೂ ತನ್ನಿ... ಹೇಗೂ ಪಡವಲಕಾಯಿ ತರ್ತಿದ್ದೀರಾ ಬೊಂಡಾ ಮಾಡದಿದ್ರೆ ಹೇಗೆ ಹೇಳಿ? ಹಾ...ಅಡುಗೆ ಸೋಡಾನೂ, ರಿಫೈಂಡ್ ಎಣ್ಣೆನೂ ತನ್ನಿ, ಕಡಲೆಕಾಯಿದಲ್ಲಾ, ಸೂರ್ಯಕಾಂತಿದು..."

"ಸರಿ..ಹೊರಟೆ..."

"ಇದೇನು ಹೊರ ಬಾಗಿಲಿರೋದು ಆ ಕಡೆ...ಈ ಕಡೆಗೆಲ್ಲಿ ಹೊರಟಿರಿ..."

"ನಾನು ಹೊರಗೆ ಹೋಗ್ತಿಲ್ಲ, ಅಡುಗೆ ಮನೆಗೆ ಹೋಗ್ತಿದ್ದೀನಿ"

"ಯಾಕೆ? ಮಾರ್ಕೇಟಿಗೆ ಹೋಗಲ್ವಾ?"

"ನಿನ್ನ ಮಾರ್ಕೆಟ್ ಮನೆ ಹಾಳಾಗ. ಬಟ್ಟಲು ಹುಳಿ ಮಜ್ಜಿಗೆಗೆ ನೂರಾರು ರೂಪಾಯಿ ಖರ್ಚುಮಾಡಬೇಕಾ? ಬಂದ ಪಾಪ ಬರಲಿ.. ನಾನೆ ಆ ಮಜ್ಜಿಗೆನಾ ತಿಪ್ಪೆಗೆ ಸುರೀತೆನೆ...."

"ರೀ...ಮತ್ತೆ ನೀವೆ ಹೇಳಿದಿರಿ....."

"ಹೇಳಿದೆ..ಬುದ್ಧಿ ಇಲ್ಲದೆ. ಹುಳಿ ನನಗೆ ಆಗೋದಿಲ್ಲ .. ಅಸಿಡಿಟಿ...."

🙄🙄🙄🙄🙄🙄🙄
***


ಡುಂಡಿರಾಜರ ಹನಿಗವನ ಮಳೆ!!! 😃😃⛈🌧

ಬ್ಯಾಂಕಿನಲ್ಲಿ ಕ್ಯಾಶ್ ಕೌಂಟರಿನ

ಚೆಲುವೆಯ

ಸೌಂದರ್ಯದತ್ತ

ಹರಿದ ನೋಟ,

ಗಮನಿಸಲಿಲ್ಲ

ಅವಳು ಕೊಟ್ಟ

ಹರಿದ ನೋಟ! 

😂😂

ಶನಿದೇವರಿಗೆ ಶಮೀ ಪತ್ರೆ

ವಿಷ್ಣುವಿಗೆ ತುಳಸಿ ಪತ್ರೆ

ಈಶ್ವರನಿಗೆ ಪ್ರಿಯವಂತೆ 

ಬಿಲ್ವ ಪತ್ರೆ

ಯಮನಿಗೆ ಸರಕಾರಿ

ಆಸ್-ಪತ್ರೆ

😉😀

ನದಿ ದಾಟಲು

ತೆಪ್ಪ ಇರಬೇಕು.

ಸಂಸಾರ

ಶರಧಿ ದಾಟಲು

ತೆಪ್ಪಗಿರಬೇಕು 

😷🤐😜

ಬಡವರಿಗೆ ಸದಾ

ಹೊಟ್ಟೆ ಹೊರೆವ

ಚಿಂತೆ.

ಶ್ರೀಮಂತರಿಗೆ

ಹೊಟ್ಟೆ

ಹೊರುವ ಚಿಂತೆ

😂😀

ಅದ್ಭುತವಾಗಿತ್ತು

ಅಧ್ಯಕ್ಷರ ಭಾಷಣ

ವಿಷಯ,  ಶೈಲಿ, ಭಾಷೆ

ಎಲ್ಲವೂ ಚೆನ್ನ.

ಆದರೂ ನೋಡಬೇಕಾಗಿತ್ತು

ಒಮ್ಮೆಯಾದರೂ

ತಮ್ಮ ವಾಚನ್ನ

😂😂

ಆರಂಭದಲ್ಲಿ

ಹೇಳುತ್ತಾರೆ

ಎರಡೇ ಎರಡು ಮಾತು.

ಮುಗಿಸುವಾಗ

ಆಗುವುದೇ ಬೇರೆ

ಎರಡೂ ಕಿವಿ ತೂತು! 

😂😂

ಗೆಳೆಯಾ ಒಪ್ಪಿದೆ,

ನೀನು ನುಡಿದರೆ

ಮುತ್ತಿನ ಹಾರದಂತೆ.

ಆದರೂ ತುಸು

ಎಚ್ಚರ ವಹಿಸು

ಎಂಜಲು ಹಾರದಂತೆ! 

😁😂

ವಯಸ್ಸಾದರೂ

ಹೆಂಗಸರು

ಗಂಡಸರನ್ನು ಕಂಡರೆ

ನಾಚ್ಕೊತಾರೆ.

ಗಂಡಸರು

ಬೋಳು ತಲೆ

ಬಾಚ್ಕೋತಾರೆ !

🙆‍♂🤭🙊🤓

  ಮರೆಯಲು ಯತ್ನಿಸಿದರೂ 

  ಮತ್ತೆ ಮತ್ತೆ ನೆನಪಾಗುವುದು 

  ಮಾಜಿ ಪ್ರೇಯಸಿಯ ಸವಿನುಡಿ 

  ಚೀಟಿಯಲ್ಲಿ ಬರೆದಿಟ್ಟರೂ 

  ಮರೆತು ಹೋಯಿತು ಮಡದಿ 

ತರಲು ಹೇಳಿದ್ದ ಕಾಫಿಪುಡಿ. .!!!

😅😂😅

****

ಗಂಡನ ಕರ್ತವ್ಯಗಳು / ಸೂತ್ರಗಳು.  

1. ಗ್ಯಾಸ್ ಮೇಲಿಟ್ಟ ಕುಕ್ಕರ್ ಮೂರು ಸಿಟಿ ಹೊಡೆದ ನಂತರ ಓಡಿ ಬಂದು ಗ್ಯಾಸ್ ಒಲೆ ಆರಿಸುವುದು.

2. ಕಾಯಿಸಲಿಟ್ಟ ಹಾಲು ಉಕ್ಕಿ ಬರುತ್ತಿರುವುದು ಕಂಡ ತಕ್ಷಣ ಓಡಿ ಹೋಗಿ ಒಲೆ ಆರಿಸುವುದು.         

3. ಡೋರ್ ಬೆಲ್ ಅಟೆಂಡ್ ಮಾಡುವುದು. 

4. ಅಟ್ಟದಲ್ಲಿರುವ ಸಾಮಾನುಗಳನ್ನು ಇಳಿಸಿ ಕೊಡುವುದು.                   

5. ಗಟ್ಟಿಯಾಗಿ ಮುಚ್ಚಿರುವ ದಿನಸಿ ಡಬ್ಬಿಗಳ ಮುಚ್ಚಳ ತೆಗೆದು ಕೊಡುವುದು.                         

6. ಸಾಸ್ ಮತ್ತು ಜಾಮ್ ಬಾಟ್ಲಿ ಮುಚ್ಚಳಗಳನ್ನು ತೆಗೆದು ಕೊಡುವುದು.                        

7. ಮನೆಯಲ್ಲಿನ ಹಲ್ಲಿ, ಜಿರಳೆ ಇತ್ಯಾದಿ 'ಭಯಂಕರ' ಪ್ರಾಣಿಗಳನ್ನು ಹೊಡೆದು ಹೊರಗೆ ಹಾಕುವುದು.

8. ಪ್ರತಿ ಬಾರಿ ಗ್ಯಾಸ್ ಸಿಲಿಂಡರ್ ಖಾಲಿಯಾದಾಗ, ಬದಲಾಯಿಸಿ ಕೊಡುವುದು.       

9. ಹೇಳಿದಾಗ ಮಾತ್ರ ಮಕ್ಕಳ ಮೇಲೆ ಗದರುವುದು ಮತ್ತು ಅವರನ್ನು ಸಂಭಾಳಿಸುವುದು.                  

10. ಬಾಗಿಲಲ್ಲಿ ಬಿದ್ದಿರುವ ಪೇಪರ್ ತರುವುದು, ತಂದ ತಕ್ಷಣ ಓದುವುದು ಮತ್ತು ಪದಬಂಧ ಕಾಲಂ ಅನ್ನು ತುಂಬದೇ ಹಾಗೇ ಬಿಡುವುದು.     

11. ಮನೆಯಿಂದ ಹೊರಗೆ ಬಿದ್ದರೆ ಮುಗಿತು ಖಬರೇ ಇರುವುದಿಲ್ಲ ಎಂಬ ಮಾತನ್ನು ದಿನ ನಿತ್ಯ ಕೇಳಿಸಿಕೊಳ್ಳುವುದು. 

12. ಬಟ್ಟೆಗಳನ್ನು ಇಸ್ತ್ರಿ ಮಾಡುವುದು, ಇಲ್ಲಾ ಮಾಡಿಸಿ ತಂದು ಕೊಡುವುದು.                 

13. ಬ್ಯಾಂಕ್ ವ್ಯವಹಾರ ಮತ್ತು ಇತರ ಬಿಲ್ ತುಂಬುವ ಕೆಲಸ ಮಾಡುವುದು.                         

14. ತಿಂಗಳ ಸಾಮಾನಿನ ಚೀಲ ಅಂಗಡಿಯಿಂದ ತಾವೇ ಹೊತ್ತು ತರುವುದು.                          

15. ಶಾಪಿಂಗ್ ಮಾಡುವಾಗ ಎಷ್ಟೇ ಹೊತ್ತಾದರೂ ಕಿರಿ ಕಿರಿ ಮಾಡದೇ, ಹೆಂಡತಿ ಹಿಂದೆ ಹಿಂದೆ ಬರುವುದು ಮತ್ತು ಖರೀದಿ ಮಾಡಿದಾಗ ಮರು ಮಾತನಾಡದೆ ಸುಮ್ಮನೆ ಹಣ ಪಾವತಿಸುವುದು.                         

16. ಅತ್ತೆ ಮನೆಯ ನೆಂಟರು ಬಂದಾಗ ಮನೆಯ ಹೆಚ್ಚಿನ  ಕೆಲಸಗಳನ್ನು ನಿಭಾಯಿಸಿ, 'ಗುಡ್ ಬಾಯ್' ಎಂದು ಎನಿಸಿಕೊಳ್ಳುವುದು.         

17. ಮನೆಯ ಸಣ್ಣ ಪುಟ್ಟ ಎಲೆಕ್ಟ್ರಿಕಲ್ ಮತ್ತು ಪ್ಲಂಬಿಂಗ್ ಕೆಲಸ ಮಾಡುವುದು.                

18. ನೆಲದ ಮೇಲಿಂದ ಅಥವಾ ಮಂಚದ ಮೇಲಿಂದ ಕೆಳಗೆ ಜಾರಿಬಿದ್ದು ಮೂರು ತುಂಡಾಗಿರುವ ರಿಮೋಟ್ ಅನ್ನು ರಿಪೇರಿ ಮಾಡಿ ಮೊದಲಿನಂತೆ ಇಡುವುದು.           

19. ಮನೆಯಲ್ಲಿ ಕಾರು, ಸ್ಕೂಟರ್ ಇತ್ಯಾದಿ ಇದ್ದಲ್ಲಿ, ಡ್ರೈವಿಂಗ್ ಕಾರ್ಯ ನಿರ್ವಹಿಸುವುದು.                      

20. ಮನೆಯಲ್ಲಿ ವಾಹನ ಇಲ್ಲದಿದ್ರೆ, ತನ್ನ ಮೊಬೈಲ್ ನಿಂದ ಆನ್ಲೈನ್ ಬುಕ್ ಮಾಡಿ ಕೊಡುವುದು.

ಕೊನೆಯದಾಗಿ, 'ಈ ಮನೆಯಲ್ಲಿ ದಿನವಿಡೀ ಎಲ್ಲಾ ಕೆಲಸಾನೂ ನಾನೊಬ್ಬಳೇ  ಮಾಡಿ ಸಾಯಬೇಕು, ಒಬ್ಬರಾದರೂ ಸಹಾಯಕ್ಕೆ ಸಿಗೋದಿಲ್ಲ, ಯಾರೂ ನನಗೆ ಹೆಲ್ಪ್ ಮಾಡುವುದಿಲ್ಲ' ಎನ್ನುವ ವಾಕ್ಯವನ್ನು ಎಷ್ಟು ಸಲವಾದರೂ ಶಾಂತ ರೀತಿಯಿಂದ ಕೇಳಿಸಿಕೊಳ್ಳುವುದು.

***

SEEMS MARRIAGES ARE MADE WITH VEGETABLE CHARACTERS -

👩‍❤️‍👩

ಹುಡುಗನ ತಾಯಿ :  ನೋಡಿ..ನಮ್ ಮನೆಗ್ ಬರೋ ಸೊಸೆ ಹೀಗೇ ಇರ್ಬೇಕು ಅಂತ ಜಾಸ್ತಿ ಏನು ಎಕ್ಸ್ಪೆಕ್ಟೇಷನ್ನು ಇಲ್ಲ.. ನಮ್ಮದು ಜಾಯಿಂಟ್ ಫ್ಯಾಮಿಲಿ.. ನಮ್ ಹುಡುಗನಿಗೆ ಅಮ್ಮ ಅಪ್ಪ ಅಂದ್ರೆ ಬೆಂಡೆಕಾಯಿ ಲೋಳೆ ಥರ.. ತುಂಬಾ attachmentu. ಬರೋ ಸೊಸೆಗೆ ಹುಣಸೆ ಹುಳಿ ಥರ ಒಡಕು ಬುದ್ಧಿ ಇರಬಾರದು.. ಮೆಣಸಿನಕಾಯಿ ಥರ ಖಾರವಾದ್ ಮಾತ್ ಇರಬಾರದು.. ಸಾಸಿವೆ ಸಿಡಿದ ಹಾಗೆ ಚಟಪಟ ಅಂತ ಮಾತಾಡ್ಕೊಂಡ್, ಓಡಾಡ್ಕೊಂಡ್ ಇರ್ಬೇಕು.. ಒಟ್ನಲ್ಲಿ ಆಲೂಗೆಡ್ಡೆ, ಬಟಾಣಿ ಥರ ಎಲ್ಲಾರ್ ಜೊತೆ ಹೊಂದಿಕೊಂಡ್ ಹೋಗಬೇಕು..ಇಷ್ಟೇ..

ಹುಡುಗಿಯ ಅಮ್ಮ: ನಮಗೂ ಅಷ್ಟೇ , ಜಾಸ್ತಿ ಏನೂ ನಿರೀಕ್ಷೆ ಇಲ್ಲ.. ಜಾಯಿಂಟ್ ಫ್ಯಾಮಿಲಿ ಅಂತೀರಾ..  ಅಳಿಯ ಈರುಳ್ಳಿ ಥರ ನನ್ ಮಗಳ ಕಣ್ಣಲ್ಲಿ ನೀರ್ ಹಾಕ್ಸೊನ್ ಆಗಿರಬಾರದು..ಆಮೇಲೆ..

ಹುಡುಗಿ: ಅಮ್ಮ..ಬೆಳ್ಳುಳ್ಳಿ ಥರ ಸುಲೀತಿದ್ದ ಹಾಗೆ ಮೂಗ್ ಮುಚ್ಕೊಂಡ್ ಓಡಿ ಹೋಗೋ ಥರ ಇರಬಾರದು.ಹೀಗೆಲ್ಲ ಅರ್ದಂಬರ್ಧ ಗಡ್ಡ  ಬಿಟ್ಟುಕೊಂಡು ಹಲಸಿನಕಾಯಿ ಸಿಪ್ಪೆ  ಥರ ಮುಳ್ಳು ಮುಳ್ಳಾಗಿರಬಾರ್ದು  ಅಂತ ಹೇಳಮ್ಮ..

ಹುಡುಗ: ಏನಂದ್ರಿ..! ನಿಮ್ಮನ್ ನೀವ್ ಅಲ್ಫಾನ್ಸೋ  ಮಾವಿನಹಣ್ಣು ಅಂದುಕೊಂಡ್ ಹಾಗಿದೆ.. ಕನ್ನಡಿ ನೋಡ್ಕೊಳ್ಳಿ..ಡ್ರಾಗನ್ ಫ್ರೂಟ್ ಥರ ಇದೀರಾ ಮುಖ ಎಲ್ಲ ಪಿಂಪಲ್ಸ್..

ಹುಡುಗಿ ತಾಯಿ : ಅಯ್ಯೋ ಬಿಡಿಪ್ಪ..ಅವಳಿಗೆ ಹುಡುಗು ಬುದ್ಧಿ.. ಇವೆಲ್ಲಾ ಬಿಡಿ..ನಮಗೆ ಎಲ್ಲಕ್ಕಿಂತ  ಮುಖ್ಯವಾಗಿ ಅಳಿಯ ಆಗ್ ಬರೋನು ಸೋರೆಕಾಯಿ ಥರ ಸಪ್ಪೆಸಪ್ಪೆಯಾಗಿ, ಸ್ವಂತ್ ಬುದ್ಧಿ,ಗುಣ ಏನೂ ಇಲ್ಲದೇ ಇರೋನ್ ಆಗಿರಬಾರದು.. ಸೀಸನಲ್ ಅವರೆಕಾಳಿನ ಥರ ಜೊತೆಗೆ ಏನಿರಲಿ ಬಿಡಲಿ, ಸ್ವಂತ ಸೊನೆಯಿಂದ ಕೂಡಿ ಘಮಘಮ ಅನ್ನೋ ಥರ ಸಂಸಾರ ನಡೆಸ್ಕೊಂಡ್ ಹೋದ್ರೆ ಸಾಕು ! 

ಬ್ರೋಕರ್: ಹೀಗೇ ಬಿಟ್ರೆ ಇವರಿಬ್ಬರು ಇಲ್ಲೇ ಬಿಸಿಬೇಳೆಬಾತ್ ಮಾಡಿ ಮುಗಿಸೋ ತರ ಇದೆ..ಆದಷ್ಟು ಬೇಗ ನನ್ ಕಮಿಷನ್ ವಸೂಲಿ ಮಾಡ್ಕೊಂಡ್ ಜಾಗ ಖಾಲಿ ಮಾಡ್ಬೇಕು..ಕರ್ಮ !

#ಸಂಮ್ಯಾರೇಜಸ್ಆರ್ಮೇಡ್ಇನ್_ಕಿಚನ್ 🙊🙊🏃

****



***

 food eating

ಊಟ ಮಾಡೋದಕ್ಕೆ ಬ್ಯಾಟಿಂಗ್ ಅನ್ನಬಹುದಾದ್ರೆ 

ಅಡುಗೆ ಮಾಡಿ ಬಡಿಸೋದಕ್ಕೆ ಬೌಲಿಂಗ್ ಮತ್ತು 

ಪಾತ್ರೆ ತೊಳೆಯೋದಕ್ಕೆ ಫೀಲ್ಡಿಂಗ್ ಅನ್ನಬಹುದೆ..

ಹಾಗೆಯೇ...

ಊಟ ಮಾಡುವಾಗ ಹಿಂದೆ ನಿಂತಿರ್ತಾರಲ್ಲ ಮುಂದಿನ ಪಂಕ್ತೀಗೆ ಕಾಯ್ಕೊಂಡು. ಅವರದು ಒಂಥರ ವಿಕೆಟ್‌ ಕೀಪಿಂಗ್.

ಎಲೆ ಹಾಕಿ ನೀರು ಚುಮುಕಿಸೋದು ಪಿಚ್  ಪ್ರಿಪರೇಶನ್ (ಕ್ಯುರೇಟರ್).

ಬಡಿಸೋರು ಮತ್ತು ಸಾರಿಸೋರು ಫೀಲ್ಡಿಂಗ್ ತಂಡದವರು.

ಮದುವೆ ಊಟಗಳಲ್ಲಿ ವಧು-ವರರ ನಾದಿನಿಯರು-ವೈಯ್ಯಾರಿಯರು ಬಣ್ಣ ಬಣ್ಣದ ವೇಷಧರಿಸಿ ಬ್ಯಾಟಿಂಗ್ ಮಾಡ್ತಾ ಇರುವವರ ಉಭಯ ಕುಶಲೋಪರಿ ಮಾತಾಡ್ತಾ ಖುಷಿ ಖುಷಿಯಾಗಿ "ಬ್ಯಾಟಿಂಗ್ ಚೆನ್ನಾಗಿ ಮಾಡಿ" ಅಂತ ಹುರಿದುಂಬಿಸುತ್ತಾ ಪಾಸಾಗ್ತಾರಲ್ಲಾ ಅವರನ್ನ ಯಾರ್ ಅನ್ಕೊಂಡಿದೀರಾ...

ಅವರೇ Cheer girls...😁

ಸುದೀರ್ಘವಾದ ಬಾಳೆ ಎಲೆ ಹಾಕಿ ಬಡಿಸುವ ಪಂಕ್ತಿಯ ಊಟಗಳು ಟೆಸ್ಟ್ ಮ್ಯಾಚು..

ಬಫೆ ಅಂದ್ರೆ ಟ್ವೆಂಟಿ ಟ್ವೆಂಟಿ....😜😜😜

ಬಡಿಸುವಾಗ ಕೈ ಅಡ್ಡ ಹಿಡಿದರೆ LBW. ಅಲ್ಲಲ್ಲಾ... HBW. 😁

ಊಟ ಮಾಡುವಾಗ ಮಧ್ಯದಲ್ಲಿ ನೆತ್ತಿಗೆ ಹತ್ತಿದರೆ batsman retired hurt ಅನ್ನಬಹುದೇನೋ.

ಈ ಫೋಸ್ಟ್ ಓದಿ ಕಾಮೆಂಟ್ ಬರಿಯೋರೆಲ್ಲ ಅಂಪೈರ್ಸ.  ಸುಮ್ಮನೆ ಓದ್ಕೊಂಡ್ ಏನೂ ಆ ಊ ಅನ್ನದೆ ತೆಪ್ಪಗಿರೋರೆಲ್ಲಾ ಸ್ಪೆಕ್ಟೇಟರ್ಸ..😂😂

Share ಮಾಡುವವರು ಪತ್ರಿಕಾ/ಮಾಧ್ಯಮ ವರದಿಗಾರರು.

ಅದ್ಸರಿ.. ಆದರೆ.. ಇಲ್ಲಿ ಬ್ಯಾಟಿಂಗ್ ಮಾಡೋರನ್ನು ಔಟ್ ಮಾಡೋದು ಹೇಗೆ...? 

ಜಾಸ್ತಿ ಬಡಿಸಿ ಅಷ್ಟೇ...(ವಾಟ್ಸಾಪ್)

😂😜😂😜😂

***


पति - सुनो

पत्नी - हां

पति - यही सोच रहा हूं की तुम हमेशा सही हो 

पत्नी - हां

पति - और मैं हमेशा गलत 

पत्नी - ठीक है, तुम हमेशा होते हो 

पति - अगर मैं बोलूं तो तुम सही हो, क्या मैं गलत हूं ? 

पत्नी - ?

पति - क्या मैं गलत हूं ?

पत्नी - ???

***

No comments:

Post a Comment