ಹೋಮಗಳು
ಯಾವ ಮನೋಕಾಮನೆಗಳಿಗೆ ಯಾವ ಯಾವ ಹೋಮಗಳನ್ನು ಮಾಡಬೇಕು?
೧. ಗಣಹೋಮ
ಎಲ್ಲಾ ಕಷ್ಟಗಳನ್ನು ಮತ್ತು ಕಾರ್ಯದಲ್ಲಿ ಬರುತ್ತಿರುವ ವಿಘ್ನಗಳನ್ನು ನಿವಾರಣೆಗೊಳಿಸಲು.
೨. ವಲ್ಲಭ ಗಣಪತಿ ಹೋಮ
ಗಣಪತಿ ಅನುಗ್ರಹ ಪ್ರಾಪ್ತಿಗಾಗಿ.
೩. ಶ್ರೀ ಶಕ್ತಿ ಗಣಪತಿ ಹೋಮ
ಗಣಪತಿ ಅನುಗ್ರಹ ಪ್ರಾಪ್ತಿಗಾಗಿ.
೪. ಶೀಘ್ರ ವಿವಾಹ ಪ್ರಾಪ್ತಿಗಾಗಿ
ಹರಿದ್ರಾ ಗಣಪತಿ ಹೋಮ
ಬಾಲ ಗಣಪತಿ ಹೋಮ
ತ್ರೈಲೋಕ್ಯ ಮೋಹನ ಗಣಪತಿ ಹೋಮ
ಜಾತಕದಲ್ಲಿ ಸೂಚಿಸಿದಂತೆ, ವಿವಾಹವಾಗುವಲ್ಲಿ ಬರುವ ವಿಘ್ನನಿವಾರಣೆಗೆ ಆಚರಿಸಬೇಕು.
೫. ಲಕ್ಷ್ಮೀಗಣಪತಿ ಹೋಮ
ಲಕ್ಷ್ಮಿ ಪ್ರಾಪ್ತಿಗಾಗಿ ಆಚರಿಸಬೇಕು.
೬. ಚಿಂತಾಮಣಿ ಗಣಪತಿ ಹೋಮ
ಮನಸ್ಸಿನ ಎಲ್ಲಾ ಕಾಮನೆಗಳನ್ನು ಪಡೆಯಲು ಈ ಹೋಮ ಮಾಡಬೇಕು.
೭. ವಿದ್ಯಾ ಪ್ರಾಪ್ತಿಗಾಗಿ
ಮೇಧಾ ಗಣಪತಿ ಹೋಮ
ಬುದ್ಧಿ ಗಣಪತಿ ಹೋಮ
ಸಿದ್ಧಿ ಗಣಪತಿ ಹೋಮ
ಅಷ್ಟ ದ್ರವ್ಯ ಗಣಹೋಮ
ಜಾತಕದ ಸೂಚನೆಯಂತೆ ಆಚರಿಸಬೇಕು.
೮. ಸಾಲದ ಬಾಧೆ ನಿವಾರಣೆಗೆ
ಋಣ ಹರಣ ಗಣಪತಿ ಹೋಮ
ಕ್ಷಿಪ್ರ ಗಣಪತಿ ಹೋಮ
ಸ್ವರ್ಣ ಗಣಪತಿ ಹೋಮ
ಸಂಕಟಹರ ಗಣಪತಿ ಹೋಮ
ಗುರುಗಳ ಆದೇಶದಂತೆ ಆಚರಿಸಬೇಕು.
೯. ವಿನಾಯಕ ಶಾಂತಿ
ಮಾಡುತ್ತಿರುವ ಕಾರ್ಯದಲ್ಲಿ ವಿಘ್ನ ಬರದಿರಲೆಂದು ಈ ಹೋಮವನ್ನು ಆಚರಿಸಬೇಕು.
೧೦. ವಿದ್ಯಾ ಪ್ರಾಪ್ತಿಯಲ್ಲಿ ಬರುತ್ತಿರುವ ದೋಷ ನಿವಾರಣೆಗಾಗಿ
ವಾಕ್ ಸರಸ್ವತಿ ಹೋಮ
ನೀಲಾ ಸರಸ್ವತಿ ಹೋಮ
ದಕ್ಷಿಣಾ ಮೂರ್ತಿ ಹೋಮ
ಗುರುಗಳ ಅನುಮತಿಯಂತೆ ಆಚರಿಸಬೇಕು.
೧೧. ಗ್ರಹ ಬಾಧೆಯಿಂದ ಜೀವನದಲ್ಲಿ ಬರುವ ರೋಗ ಪೀಡಾ ಪರಿಹಾರಕ್ಕಾಗಿ ಮತ್ತು ಅಕಾಲ ಮೃತ್ಯು ನಿವಾರಣೆಗಾಗಿ ಮಾಡಬೇಕಾದ ಹೋಮಗಳು
ಮಹಾ ಮ್ರತ್ಯುಂಜಯ ಹೋಮ
ಅಮೃತ ಮ್ರತ್ಯುಂಜಯ ಹೋಮ
ಅಭಯಾಯುಷ್ಯ ಹೋಮ
ಉಗ್ರ ನರಸಿಂಹ ಹೋಮ
ದೂರ್ವಾ ಮೃತ್ಯುಂಜಯ ಹೋಮ
ಆಯುಷ್ಯ(ಚರು)ಹೋಮ
೧೨. ವಿರೋಧಿಗಳು ಮಾಡುವ ಮಂತ್ರ, ತಂತ್ರ,ಯಂತ್ರಾದಿ ದುಷ್ಕರ್ಮ ಉಚ್ಛಾಟನೆಗಾಗಿ,ರಕ್ಷೆಗಾಗಿ
ಮಹಾ ಸುದರ್ಶನ ಹೋಮ
ಅಘೋರಾಸ್ತ್ರ ಹೋಮ
ಪ್ರತ್ಯಂಗಿರಾ ಹೋಮ
ಬಗಲಾಮುಖಿ ಹೋಮ
ಶರಭೇಶ್ವರ ಹೋಮ
ಶೂಲಿನಿ ದುರ್ಗಾ ಹೋಮ
ದತ್ತಾತ್ರೇಯ ಮಾಲಾಮಂತ್ರ ಹೋಮ
ಆಂಜನೇಯ ಮಂತ್ರ ಹೋಮ
೧೩. ಮಹಾಲಕ್ಷ್ಮಿ ಅನುಗ್ರಹ ಪ್ರಾಪ್ತಿ ಮತ್ತು ಉದ್ಯೋಗ, ವ್ಯವಹಾರ ಜಯ ಪ್ರಾಪ್ತಿಗಾಗಿ .
ಶ್ರೀಸೂಕ್ತ ಹೋಮ
ಲಕ್ಷ್ಮೀ ಹೋಮ(ಕಮಲದ ಹೂವಿನಿಂದ)
ಲಕ್ಷ್ಮಿ ನೃಸಿಂಹ ಹೋಮ
ಲಕ್ಷ್ಮಿ ನಾರಾಯಣ ಹೃದಯ ಹೋಮ
ಕುಬೇರ ಲಕ್ಷ್ಮೀ ಹೋಮ
ಚಂಡಿಕಾ ಹೋಮ(ನವ,ಶತ,ಸಹಸ್ರ)
೧೪. ರೋಗ ನಿವೃತ್ತಿಗಾಗಿ ಮಾಡಬೇಕಾದ ಹೋಮಗಳು
ಧನ್ವಂತರಿ ಹೋಮ
ಅಪಸ್ಮಾರ ದಕ್ಷಿಣಾಮೂರ್ತಿ ಹೋಮ
ನವಗ್ರಹ ಹೋಮ(ಪ್ರತ್ಯೇಕ ಗ್ರಹಶಾಂತಿ)
ಸುಬ್ರಹ್ಮಣ್ಯ ಹೋಮ
ಜಾತಕದಲ್ಲಿ ಸೂಚಿಸಿದಂತೆ ರೋಗಕ್ಕೆ ಅನುಸಾರವಾಗಿ ಮಾಡಬೇಕು.
೧೫. ಸ್ತ್ರೀ ಮತ್ತು ಪುರುಷರ ವಿವಾಹಕ್ಕೆ ಬರುತ್ತಿರುವ ಅಡ್ಡಿ, ಆತಂಕಗಳ ನಿವಾರಣೆಯಾಗಿ ಶೀಘ್ರ ವಿವಾಹ ಪ್ರಾಪ್ತಿಯಾಗಲು ಮಾಡಬೇಕಾದ ಹೋಮ
ಉಗ್ರ ನೃಸಿಂಹ ಹೋಮ(೨೮ ಸಾವಿರ ಜಪ ಮಾಡಬೇಕು)
ಸ್ವಯಂವರ ಪಾರ್ವತಿ ಹೋಮ(೧೦ ಸಾವಿರ ಜಪ ಮಾಡಬೇಕು)
ಬಾಣೇಶಿ ಹೋಮ(೧೦ ಸಾವಿರ ಜಪ ಮಾಡಬೇಕು)
ಅಶ್ವಾರೂಢ ಪಾರ್ವತಿ ಹೋಮ(೧೦ ಸಾವಿರ ಜಪ ಮತ್ತು ಹೋಮ ಮಾಡಬೇಕು)
*******
No comments:
Post a Comment