SEARCH HERE

Friday, 25 June 2021

SIR census 2026

 census from June 30, 2026 in karnataka


https://voters.eci.gov.in/



ವಿಧಾನ ಸಭಾ ಕ್ಷೇತ್ರ/ವಾರ್ಡ್ ವಾರ್ಡ್ ಸಂಖ್ಯೆ ಖಾತೆ ಸಂಖ್ಯೆ

​ಆಸ್ತಿ ವಿಧ (ಖಾಲಿ/ನಿವಾಸ/ವಾಣಿಜ್ಯ)

​ಆಸ್ತಿ ಸಂಖ್ಯೆ (ವಾರ್ಡ್)

​ಸರ್ವೇ ನಂಬರ್

​ಸೊಸೈಟಿ/ಅಪಾರ್ಟ್ಮೆಂಟ್ ಹೆಸರು

​ಸೊಸೈಟಿ/ಅಪಾರ್ಟ್ಮೆಂಟ್ ಕಟ್ಟಿರುವ ಮಾಲೀಕ ನಿವೇಶನ ಸಂಖ್ಯೆ (ಲಭ್ಯವಿದ್ದಲ್ಲಿ)

​ಸದರಿ ಮನೆ

​ಸದರಿ ಕಟ್ಟಿರುವ ಮಾಲೀಕ ನಿವೇಶನ ಸಂಖ್ಯೆ (ಲಭ್ಯವಿದ್ದಲ್ಲಿ)

​ದೊಡ್ಡ ಮನೆ

​ದೊಡ್ಡ ಮನೆ ಕಟ್ಟಿರುವ ಮಾಲೀಕ ನಿವೇಶನ ಸಂಖ್ಯೆ (ಲಭ್ಯವಿದ್ದಲ್ಲಿ)

***











*SIR ಪ್ರಕ್ರಿಯೆಯಲ್ಲಿ ಮ್ಯಾಪಿಂಗ್ ಕಾರ್ಯ ಸಂಪೂರ್ಣಗೊಳ್ಳಲು BLOಗಳು ಮನೆಮನೆಗೆ ತೆರಳಿ Enumeration form ಕೊಡುತ್ತಾರೆ. Enumeration form ತುಂಬುವುದು ಹೇಗೆ ಎಂದು ಈ ವೀಡಿಯೊ ಮೂಲಕ ತಿಳಿದುಕೊಳ್ಳಿ. Enumeration form ತುಂಬಿದವರು ಮಾತ್ರ ಮತದಾರರ ಪಟ್ಟಿಯಲ್ಲಿ ಉಳಿದುಕೊಳ್ಳುತ್ತಾರೆ ಹಾಗೂ Enumeration form ತುಂಬದೇ ಇರುವವರು ಮತದಾರರ ಪಟ್ಟಿಯಿಂದ ಹೊರಗೆ ಉಳಿಯುತ್ತಾರೆ ಎಂಬುದು ಎಲ್ಲರ ಗಮನದಲ್ಲಿ ಇರಲಿ.*

filling SIR form


filling SIR form


filling SIR form

how to fill the SIR form


🗳️ ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆ (SIR) ಕುರಿತು ಸಾರ್ವಜನಿಕರಿಗೆ ಮಹತ್ವದ ಮಾಹಿತಿ


ರಾಜ್ಯದಾದ್ಯಂತ ಜೂನ್ 30 ರಿಂದ ಜುಲೈ 29 ರವರೆಗೆ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (Special Intensive Revision - SIR) ನಡೆಯಲಿದೆ. ಈ ಅವಧಿಯಲ್ಲಿ ಬೂತ್ ಮಟ್ಟದ ಅಧಿಕಾರಿಗಳು (BLO) ನಿಮ್ಮ ಮನೆಗಳಿಗೆ ಭೇಟಿ ನೀಡಿ ಮತದಾರರ ಮಾಹಿತಿಯನ್ನು ಪರಿಶೀಲಿಸಲಿದ್ದಾರೆ.


ನಾಗರಿಕರಾಗಿ ನೀವು ಮಾಡಬೇಕಾದದ್ದು:


✅ BLO ಅಧಿಕಾರಿಗಳು ಮನೆಗೆ ಬಂದಾಗ ಅವರಿಗೆ ಸೌಜನ್ಯದಿಂದ ಸಹಕರಿಸಿ.


✅ ಅವರು ಕೇಳುವ ಅಗತ್ಯ ದಾಖಲೆಗಳನ್ನು (ಅನ್ವಯಿಸುವಂತೆ) ಸಿದ್ಧವಾಗಿಟ್ಟುಕೊಂಡು ಒದಗಿಸಿ.


✅ ಅವರು ನೀಡುವ ಎರಡು ಅರ್ಜಿಗಳನ್ನು ಸಂಪೂರ್ಣವಾಗಿ ಭರ್ತಿ ಮಾಡಿ, ಸರಿಯಾಗಿ ಸಹಿ ಮಾಡಿ ಸಲ್ಲಿಸಿ.


✅ ಸಲ್ಲಿಸಿದ ಅರ್ಜಿಯ ಸ್ವೀಕೃತಿ ಪ್ರತಿಯನ್ನು ತಪ್ಪದೇ ನಿಮ್ಮ ಬಳಿ ಸುರಕ್ಷಿತವಾಗಿ ಇಟ್ಟುಕೊಳ್ಳಿ. ಇದು ಮುಂದಿನ ದಿನಗಳಲ್ಲಿ ಅಗತ್ಯವಾಗಬಹುದು.


SIR ಯಾಕೆ ಮುಖ್ಯ?


👉 ಮತದಾರರ ಪಟ್ಟಿಯನ್ನು ನಿಖರ ಮತ್ತು ನವೀಕೃತವಾಗಿಡಲು.


👉 ಅರ್ಹ ಮತದಾರರ ಹಕ್ಕುಗಳನ್ನು ರಕ್ಷಿಸಲು.


👉 ನಕಲಿ, ನಕಲು ಅಥವಾ ಅನರ್ಹ ದಾಖಲೆಗಳ ಆಧಾರದ ಮೇಲೆ ಹೆಸರು ಸೇರ್ಪಡೆಗೊಂಡಿರುವ ಪ್ರಕರಣಗಳನ್ನು ಪತ್ತೆಹಚ್ಚಲು.


👉 ಮತದಾರರ ಪಟ್ಟಿಯ ವಿಶ್ವಾಸಾರ್ಹತೆ ಮತ್ತು ಪಾರದರ್ಶಕತೆಯನ್ನು ಹೆಚ್ಚಿಸಲು.


ನಿಮ್ಮ ಒಂದು ಸಹಕಾರ – ಪ್ರಜಾಪ್ರಭುತ್ವಕ್ಕೆ ದೊಡ್ಡ ಬಲ.


ಮತದಾನದ ಹಕ್ಕು ಪ್ರತಿಯೊಬ್ಬ ಪ್ರಜೆಯ ಅಮೂಲ್ಯ ಹಕ್ಕು. ಆದ್ದರಿಂದ ಈ ಪರಿಷ್ಕರಣೆ ಪ್ರಕ್ರಿಯೆಯಲ್ಲಿ ಪ್ರತಿಯೊಬ್ಬರೂ ಜವಾಬ್ದಾರಿಯುತವಾಗಿ ಭಾಗವಹಿಸಿ, ಅಧಿಕಾರಿಗಳಿಗೆ ಅಗತ್ಯ ಸಹಕಾರ ನೀಡಿ.


ಜಾಗೃತ ನಾಗರಿಕರಾಗಿ ನಿಮ್ಮ ಹಕ್ಕನ್ನು ಕಾಪಾಡಿ – SIR ಪ್ರಕ್ರಿಯೆಗೆ ಸಂಪೂರ್ಣ ಸಹಕಾರ ನೀಡಿ.


🚩🙏

ಎಂ.ಜಿ. ರವಿಶಂಕರ್

ಸಂಚಾಲಕರು – ಸೋಶಿಯಲ್ ಮೀಡಿಯಾ ಹಾಗೂ ಸಾಮಾಜಿಕ ಜಾಲತಾಣ

OBC, BJP, ಮೈಸೂರು ನಗರ ಜಿಲ್ಲೆಗಮನಿಸಿ: ಮೇಲಿನ ಪಠ್ಯವು SIR ಪರಿಷ್ಕರಣೆಗೆ ಸಂಬಂಧಿಸಿದ ಸಾಮಾನ್ಯ ಅರಿವು ಮೂಡಿಸುವ ಉದ್ದೇಶದಿಂದ ರಚಿಸಲಾಗಿದೆ. ಪ್ರಕ್ರಿಯೆ, ದಾಖಲೆಗಳು ಅಥವಾ ಅರ್ಹತಾ ನಿಯಮಗಳ ಕುರಿತು ಅಧಿಕೃತ ಚುನಾವಣಾ ಅಧಿಕಾರಿಗಳ ಸೂಚನೆಗಳನ್ನೇ ಅನುಸರಿಸಿ.

***

*SIR 2026 – ಪ್ರಮುಖ ಮತ್ತು ಅಗತ್ಯ ಮಾಹಿತಿಗಳು:*

------------------------------------------------------------------

(ಪ್ರಶ್ನೆ ಮತ್ತು ಉತ್ತರಗಳ ರೂಪದಲ್ಲಿ)


ಪ್ರಶ್ನೆ: SIR ಎಂದರೇನು?

ಉತ್ತರ: ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (Special Intensive Revision).


ಪ್ರಶ್ನೆ: SIR ಅನ್ನು ಯಾರು ನಡೆಸುತ್ತಾರೆ?

ಉತ್ತರ: ಭಾರತದ ಚುನಾವಣಾ ಆಯೋಗ.


ಪ್ರಶ್ನೆ: SIR ನ ಪೂರ್ಣ ರೂಪ ಏನು?

ಉತ್ತರ: Special Intensive Revision (ವಿಶೇಷ ತೀವ್ರ ಪರಿಷ್ಕರಣೆ).


ಪ್ರಶ್ನೆ: SIR ಸಮಯದಲ್ಲಿ ಯಾವ ಸಂದರ್ಭಗಳಲ್ಲಿ ಮತದಾರರ ಪಟ್ಟಿಯಿಂದ ಹೆಸರು ತೆಗೆದುಹಾಕಬಹುದು?

ಉತ್ತರ:

* ಮರಣ ಹೊಂದಿರುವವರು.

* ಎರಡು ಕಡೆ ಮತದಾರರಾಗಿ ನೋಂದಾಯಿಸಿರುವವರು.

* ಪ್ರಸ್ತುತ ವಿಳಾಸದಲ್ಲಿ ವಾಸಿಸದವರು.

* ಮ್ಯಾಪಿಂಗ್ ಅಥವಾ ಲಿಂಕಿಂಗ್ ಮಾಡಿಸದವರು.


ಪ್ರಶ್ನೆ: ಮ್ಯಾಪಿಂಗ್ ಎಂದರೇನು?

ಉತ್ತರ: ಮತದಾರರನ್ನು ಮನೆ, ಕುಟುಂಬ ಮತ್ತು ಮತಗಟ್ಟೆಗೆ ಸಂಪರ್ಕಿಸುವ ಪ್ರಕ್ರಿಯೆ.


ಪ್ರಶ್ನೆ: ಎಲ್ಲ ಮತದಾರರಿಗೂ ಮ್ಯಾಪಿಂಗ್ ಕಡ್ಡಾಯವೇ?

ಉತ್ತರ: ಹೌದು. 2025 ರವರೆಗೆ ಮತದಾರರ ಪಟ್ಟಿಯಲ್ಲಿರುವ ಎಲ್ಲರಿಗೂ ಮ್ಯಾಪಿಂಗ್ ಅಥವಾ ಲಿಂಕಿಂಗ್ ಕಡ್ಡಾಯವಾಗಿದೆ.


ಪ್ರಶ್ನೆ: ಮ್ಯಾಪಿಂಗ್ ಮಾಡಿಸದಿದ್ದರೆ ಏನಾಗುತ್ತದೆ?

ಉತ್ತರ: SIR 2026 ರ ಮತದಾರರ ಪಟ್ಟಿಯಿಂದ ಹೆಸರು ತೆಗೆದುಹಾಕಬಹುದು.


ಪ್ರಶ್ನೆ: 2026 ರ ಪಟ್ಟಿಯಿಂದ ಹೆಸರು ತೆಗೆದುಹಾಕಲ್ಪಟ್ಟಿದ್ದರೆ ಮತ್ತೆ ಸೇರಿಸಿಕೊಳ್ಳಲು ಏನು ಮಾಡಬೇಕು?

ಉತ್ತರ:

* 01-07-1987 ರ ಮೊದಲು ಜನಿಸಿದವರು ನಿಗದಿತ ದಾಖಲೆಗಳಲ್ಲಿ ಯಾವುದಾದರೂ ಒಂದನ್ನು ನೀಡಬೇಕು.

* 01-07-1987 ರಿಂದ 02-12-2004 ರೊಳಗೆ ಜನಿಸಿದವರು ತಮ್ಮ ದಾಖಲೆ ಹಾಗೂ ತಂದೆ ಅಥವಾ ತಾಯಿಯ ದಾಖಲೆ ನೀಡಬೇಕು.

* 03-12-2004 ರ ನಂತರ ಜನಿಸಿದವರು ತಮ್ಮ ಹಾಗೂ ತಂದೆ-ತಾಯಿಯ ಎರಡೂ ದಾಖಲೆಗಳನ್ನು ನೀಡಬೇಕು.


ಪ್ರಶ್ನೆ: 40 ವರ್ಷ ಅಥವಾ ಅದಕ್ಕಿಂತ ಹೆಚ್ಚು ವಯಸ್ಸಿದ್ದು, 2002 ರ ಮತದಾರರ ಪಟ್ಟಿಯಲ್ಲಿ ಹೆಸರು ಇಲ್ಲದವರು ಏನು ಮಾಡಬೇಕು?

ಉತ್ತರ: ಅಗತ್ಯ ದಾಖಲೆಗಳನ್ನು ಸಿದ್ಧವಾಗಿಟ್ಟುಕೊಳ್ಳಬೇಕು.


ಪ್ರಶ್ನೆ: 2002 ರ ಪಟ್ಟಿಯಲ್ಲಿ ಹೆಸರು ಇದ್ದು, ಮ್ಯಾಪಿಂಗ್ ಆಗಿದ್ದರೆ ದಾಖಲೆ ನೀಡಬೇಕೇ?

ಉತ್ತರ: ಇಲ್ಲ.


ಪ್ರಶ್ನೆ: ತಂದೆ ಅಥವಾ ತಾಯಿಯ ಮೂಲಕ Progeny ಲಿಂಕಿಂಗ್ ಮಾಡಿಸಿಕೊಂಡಿದ್ದರೆ ದಾಖಲೆ ಬೇಕೇ?

ಉತ್ತರ: ಇಲ್ಲ.


ಪ್ರಶ್ನೆ: Progeny ಎಂದರೆ ಯಾರು?

ಉತ್ತರ: 2002 ರ ಪಟ್ಟಿಯಲ್ಲಿ ಹೆಸರು ಇಲ್ಲದಿದ್ದರೂ, ತಂದೆ ಅಥವಾ ತಾಯಿಯೊಂದಿಗೆ ಲಿಂಕ್ ಮಾಡಲ್ಪಟ್ಟ ವ್ಯಕ್ತಿ.


ಪ್ರಶ್ನೆ: 2002 ರ ಪಟ್ಟಿಯಲ್ಲಿ ಹೆಸರು ತಪ್ಪಿದ್ದರೂ 2025 ರ ಪಟ್ಟಿಯಲ್ಲಿ ಸರಿಯಾಗಿದ್ದರೆ ಯಾವ ಮಾಹಿತಿಯ ಆಧಾರದಲ್ಲಿ ಕಾರ್ಡ್ ಸಿದ್ಧವಾಗುತ್ತದೆ?

ಉತ್ತರ: 2025 ರ ಪಟ್ಟಿಯ ಮಾಹಿತಿಯ ಆಧಾರದಲ್ಲಿ.


ಪ್ರಶ್ನೆ: 2025 ರ ಪಟ್ಟಿಯಲ್ಲಿ ಹೆಸರು ತಪ್ಪಿದ್ದರೆ ಮ್ಯಾಪಿಂಗ್ ನಂತರ ತಿದ್ದುಪಡಿ ಮಾಡಿಸಬಹುದೇ?

ಉತ್ತರ: ಹೌದು.


ಪ್ರಶ್ನೆ: ಮತದಾರರ ಪಟ್ಟಿಯ ಮ್ಯಾಪಿಂಗ್ ಎಲ್ಲಿಗೆ ಹೋಗಿ ಮಾಡಿಸಬೇಕು?

ಉತ್ತರ: 2025 ರ ಮತದಾರರ ಪಟ್ಟಿಯಿರುವ ಪ್ರದೇಶದ BLO ಬಳಿ.


ಪ್ರಶ್ನೆ: 2025 ರ ಪಟ್ಟಿಯಲ್ಲಿ ವಿಳಾಸ ತಪ್ಪಿದ್ದರೆ ಏನಾಗಬಹುದು?

ಉತ್ತರ: ಹೆಸರು ಪಟ್ಟಿಯಿಂದ ತೆಗೆದುಹಾಕಬಹುದು. ಆದ್ದರಿಂದ ಸರಿಯಾದ ವಿಳಾಸಕ್ಕೆ ವರ್ಗಾವಣೆ ಮಾಡಿಸಿಕೊಳ್ಳಿ.


ಪ್ರಶ್ನೆ: ವಿವಾಹಿತ ಮಹಿಳೆಯ ಮ್ಯಾಪಿಂಗ್ ಎಲ್ಲಿ ನಡೆಯುತ್ತದೆ?

ಉತ್ತರ: ಪತಿಯ ಮನೆಯಲ್ಲಿ ಅಥವಾ 2025 ರಲ್ಲಿ ಮತದಾರರಾಗಿ ನೋಂದಾಯಿತವಾಗಿರುವ ಸ್ಥಳದಲ್ಲಿ.


ಪ್ರಶ್ನೆ: ವಿವಾಹಿತ ಮಹಿಳೆಯ ಮ್ಯಾಪಿಂಗ್‌ಗೆ ಯಾರ ಮತದಾರರ ವಿವರ ಬೇಕು?

ಉತ್ತರ: ತಂದೆ ಅಥವಾ ತಾಯಿಯ ವಿವರ.


ಪ್ರಶ್ನೆ: ಪತಿಯ ಮತದಾರರ ವಿವರದಿಂದ ಪತ್ನಿಯ ಮ್ಯಾಪಿಂಗ್ ಮಾಡಬಹುದೇ?

ಉತ್ತರ: ಇಲ್ಲ.


ಪ್ರಶ್ನೆ: 2002 ರ ನಂತರ ಮತದಾರರಾದವರು ಯಾರೊಂದಿಗೆ ಲಿಂಕ್ ಮಾಡಿಸಬಹುದು?

ಉತ್ತರ: ತಂದೆ, ತಾಯಿ, ಅಜ್ಜ ಅಥವಾ ಅಜ್ಜಿ ಇವರಲ್ಲಿ ಯಾರೊಂದಿಗಾದರೂ.


ಪ್ರಶ್ನೆ: ಒಬ್ಬರೇ ವಾಸಿಸುವ ಮತದಾರರು ಸ್ವತಃ ಮ್ಯಾಪಿಂಗ್ ಮಾಡಿಸಬಹುದೇ?

ಉತ್ತರ: ಹೌದು, ಆದರೆ ಅಗತ್ಯ ದಾಖಲೆಗಳನ್ನು ಸಲ್ಲಿಸಬೇಕು.


ಪ್ರಶ್ನೆ: BLO ಎಂದರೇನು?

ಉತ್ತರ: Booth Level Officer (ಮತಗಟ್ಟೆ ಮಟ್ಟದ ಅಧಿಕಾರಿ).


ಪ್ರಶ್ನೆ: BLO ಮನೆಗೆ ಯಾವಾಗ ಬರುತ್ತಾರೆ?

ಉತ್ತರ: ಮ್ಯಾಪಿಂಗ್ ಹಾಗೂ Enumeration Form ನೀಡಲು.


ಪ್ರಶ್ನೆ: BLO ಮನೆಗೆ ಬರದಿದ್ದರೆ ಏನು ಮಾಡಬೇಕು?

ಉತ್ತರ: ಅವರ ಕಚೇರಿಗೆ ಹೋಗಿ ಸ್ವತಃ ಮ್ಯಾಪಿಂಗ್ ಮಾಡಿಸಿಕೊಳ್ಳಬೇಕು.


ಪ್ರಶ್ನೆ: Claim ಎಂದರೇನು?

ಉತ್ತರ: ಕರಡು ಮತದಾರರ ಪಟ್ಟಿಯಲ್ಲಿ ಹೆಸರು ಇಲ್ಲದಿದ್ದರೆ ಹೆಸರು ಸೇರಿಸಲು ಸಲ್ಲಿಸುವ ಅರ್ಜಿ.


ಪ್ರಶ್ನೆ: ಕರ್ನಾಟಕದಲ್ಲಿ SIR ನ ಕೊನೆಯ ದಿನಾಂಕ ಯಾವುದು?

ಉತ್ತರ: ಚುನಾವಣಾ ಆಯೋಗದ ಪ್ರಕಟಣೆಯ ಪ್ರಕಾರ.


ಪ್ರಶ್ನೆ: Enumeration Form ಎಂದರೇನು?

ಉತ್ತರ: ಮ್ಯಾಪಿಂಗ್ ನಂತರ BLO ನೀಡುವ ಮುದ್ರಿತ ನಮೂನೆ.


ಪ್ರಶ್ನೆ: Enumeration Form ಸಿಕ್ಕ ನಂತರ ಏನು ಮಾಡಬೇಕು?

ಉತ್ತರ: ಖಾಲಿ ಕಾಲಂಗಳನ್ನು ಭರ್ತಿ ಮಾಡಿ, ಬಿಳಿ ಹಿನ್ನೆಲೆಯ ಹೊಸ ಫೋಟೋ ಅಂಟಿಸಿ BLO ಗೆ ಸಲ್ಲಿಸಬೇಕು.


ಪ್ರಶ್ನೆ: Enumeration Form ಸಲ್ಲಿಸದಿದ್ದರೆ ಏನಾಗುತ್ತದೆ?

ಉತ್ತರ: ಮ್ಯಾಪಿಂಗ್ ಪೂರ್ಣವಾಗದಿದ್ದರೆ ಹೆಸರು ತೆಗೆದುಹಾಕಬಹುದು.


ಪ್ರಶ್ನೆ: ಮನೆಯ ಮತದಾರ ಹೊರಗಿದ್ದರೆ ಕುಟುಂಬದ ಸದಸ್ಯರು ಸಹಿ ಮಾಡಬಹುದೇ?

ಉತ್ತರ: ಹೌದು.


ಪ್ರಶ್ನೆ: ಮ್ಯಾಪಿಂಗ್ ನಂತರ BLO ಯಾವುದೇ ರಸೀದಿ ನೀಡುತ್ತಾರೆಯೇ?

ಉತ್ತರ: ಇಲ್ಲ.


ಪ್ರಶ್ನೆ: 2002 ರ ಪಟ್ಟಿಯಲ್ಲಿ ಸ್ಪೆಲ್ಲಿಂಗ್ ತಪ್ಪಿದ್ದು, 2025 ರ ಪಟ್ಟಿಯಲ್ಲಿ ಸರಿಯಾಗಿದ್ದರೆ ಸಮಸ್ಯೆಯೇ?

ಉತ್ತರ: ಇಲ್ಲ.


ಪ್ರಶ್ನೆ: ವಿಳಾಸ ಬದಲಾವಣೆ ಹಾಗೂ ತಿದ್ದುಪಡಿ ಎರಡೂ ಇದ್ದರೆ ಮೊದಲು ಏನು ಮಾಡಬೇಕು?

ಉತ್ತರ: ಮೊದಲು ವಿಳಾಸ ಬದಲಾವಣೆ, ನಂತರ ತಿದ್ದುಪಡಿ.


ಪ್ರಶ್ನೆ: ಎರಡನ್ನೂ ಒಂದೇ ಸಮಯದಲ್ಲಿ ಮಾಡಬಹುದೇ?

ಉತ್ತರ: ಇಲ್ಲ.


ಪ್ರಶ್ನೆ: ಮತದಾರರ ಪಟ್ಟಿಯಲ್ಲಿನ ಎಲ್ಲಾ ವಿವರಗಳು ಸರಿಯಾಗಿದ್ದರೆ ಏನು ಮಾಡುವುದು ಉತ್ತಮ?

ಉತ್ತರ: ಬಿಳಿ ಹಿನ್ನೆಲೆಯ ಹೊಸ ಫೋಟೋ ಅಪ್‌ಡೇಟ್ ಮಾಡಿಸಿಕೊಳ್ಳುವುದು ಉತ್ತಮ.


ಪ್ರಶ್ನೆ: ಫೋಟೋ ಅಥವಾ ತಿದ್ದುಪಡಿ ಎಲ್ಲಿ ಮಾಡಿಸಬೇಕು?

ಉತ್ತರ: ಆನ್‌ಲೈನ್ ಮೂಲಕ ಅಥವಾ ಸೈಬರ್ ಸೆಂಟರ್‌ನಲ್ಲಿ.


ಪ್ರಶ್ನೆ: ಮತದಾರರ ಪಟ್ಟಿಯಲ್ಲಿ ಹೆಸರು ಇದ್ದು Voter ID Card ಇಲ್ಲದಿದ್ದರೆ ಏನು ಮಾಡಬೇಕು?

ಉತ್ತರ: ಆನ್‌ಲೈನ್ ಮೂಲಕ ಕಾರ್ಡ್ ಡೌನ್‌ಲೋಡ್ ಮಾಡಬಹುದು. ಆದರೆ ಆಧಾರ್ ಮಾಹಿತಿಯೊಂದಿಗೆ ಹೊಂದಿಕೆಯಾಗಿರಬೇಕು.


ಪ್ರಶ್ನೆ: ಮತದಾರರ ಪಟ್ಟಿಯ ವಿವರಗಳು ಆಧಾರ್‌ನೊಂದಿಗೆ ಹೊಂದಿಕೆಯಾಗದಿದ್ದರೆ ಏನು ಮಾಡಬೇಕು?

ಉತ್ತರ: ತಿದ್ದುಪಡಿ ಮಾಡಿಸಬೇಕು.


ಪ್ರಶ್ನೆ: Voter ID Card ಇದೆ ಆದರೆ ಮತದಾರರ ಪಟ್ಟಿಯಲ್ಲಿ ಹೆಸರು ಇಲ್ಲದಿದ್ದರೆ?

ಉತ್ತರ: ತಕ್ಷಣ ಹೊಸ ಮತದಾರ ನೋಂದಣಿ ಮಾಡಿಸಬೇಕು.


ಪ್ರಶ್ನೆ: ಹೊಸ ಮತದಾರರಾಗಿ ನೋಂದಣಿ ಮಾಡಿಸಿಕೊಳ್ಳಲು ಕನಿಷ್ಠ ವಯಸ್ಸು ಎಷ್ಟು?

ಉತ್ತರ: 18 ವರ್ಷ.


ಪ್ರಮುಖ ಸೂಚನೆ


ಹೆಚ್ಚಿನ ಮಾಹಿತಿಗಾಗಿ ನಿಮ್ಮ ಪ್ರದೇಶದ BLO, ಚುನಾವಣಾ ಅಧಿಕಾರಿ ಅಥವಾ ಸಂಬಂಧಿತ ತಜ್ಞರನ್ನು ಸಂಪರ್ಕಿಸಿ.


ಅಗತ್ಯ ದಾಖಲೆಗಳನ್ನು ಮುಂಚಿತವಾಗಿ ಸಿದ್ಧವಾಗಿಟ್ಟುಕೊಳ್ಳಿ, ಅಗತ್ಯ ಬಂದಾಗ ತೊಂದರೆ ಆಗದಂತೆ ನೋಡಿಕೊಳ್ಳಿ.

***

ಆತ್ಮೀಯ ಎಲ್ಲಾ ವೃತ್ತಿಬಾಂಧವ್ಯದ ಮತದಾರರೇ ಈ ಕೆಳಕಂಡ ಲಿಂಕನ್ನು ಉಪಯೋಗಿಸಿ 

https://play.google.com/store/apps/details?id=in.gov.eci.app

ECINET nalli

ನೀವೇ 2002ರ ಪಟ್ಟಿಗೆ ಮ್ಯಾಪನ್ನು ಮಾಡಿಕೊಳ್ಳುವುದು


Self-enumeration between 1st April to 15 April 2026 Dear Residents, Phase 1 of Census 2027 is now open between April 1st to and April 15. All citizens are requested to complete the self enumeration at https://se.census.gov.in/. Please note, it is one enumeration per household. Upon submission of enumeration, you will receive an unique SE ID. Please store this number. From 15th April to 15th May 2026 , the enumerators will visit all houses. Please provide the above SE ID and confirm. You may refer to the self-enumeration screens at https://www.baf.org.in/docs/1577_Census2027_SelfEnumerationScreens Phase 2 of the Census will be conducted during February 2027 All resident families are requested to complete the online census enumeration before 15 April 2026 https://se.census.gov.in/

No comments:

Post a Comment