SEARCH HERE

Friday, 1 October 2021

ಅನಂತನ ಹುಣ್ಣಿಮೆ ಭಾದ್ರಪದ ಹುಣ್ಣಿಮೆ bhadrapada pournima

 ಅನಂತನ ಹುಣ್ಣಿಮೆ 🌸🤍




🌟 ಹಿಂದೂ ಧರ್ಮದಲ್ಲಿ ಹುಣ್ಣಿಮೆಗೆ ವಿಶೇಷ ಮಹತ್ವವಿದೆ. ಈ ದಿನ ಪವಿತ್ರ ನದಿಗಳ ಸ್ನಾನ, ದಾನ ಮತ್ತು ಧ್ಯಾನ ಮಾಡುವುದರಿಂದ ಪುಣ್ಯ ಫಲಗಳು ಪ್ರಾಪ್ತಿಯಾಗುತ್ತವೆ ಎಂದು ಶಾಸ್ತ್ರಗಳಲ್ಲಿ ಹೇಳಲಾಗಿದೆ. ಹಾಗೆ ನೋಡಿದರೆ ವರ್ಷದಲ್ಲಿ 12 ಹುಣ್ಣಿಮೆಗಳು ಬರುತ್ತವೆ ಮತ್ತು ಹುಣ್ಣಿಮೆಯ ದಿನ ಪೂರ್ಣ ಚಂದ್ರೋದಯ ಗೋಚರಿಸುತ್ತದೆ. ಹುಣ್ಣಿಮೆಯ ದಿನದಂದು ಚಂದ್ರದೇವನನ್ನು ಪೂಜಿಸುವುದರಿಂದ ಅಪೇಕ್ಷಿತ ಫಲವನ್ನು ಪಡೆದುಕೊಳ್ಳಬಹುದು.


🌸 ಅನಂತನ ಹುಣ್ಣಿಮೆ 🌸


🌟 bhadrapada hunnime is ಅನಂತನ ಹುಣ್ಣಿಮೆ ಇದನ್ನು ಜೋಕುಮಾರನ ಹುಣ್ಣಿಮೆ ಎಂತಲೂ ಕರೆಯುವರು. ಅನಂತನ ಹುಣ್ಣಿಮೆ ಅಥವಾ ಜೋಕುಮಾರನ ಹುಣ್ಣಿಮೆಯ ದಿನ ಜೋಕುಮಾರನ ತಿಥಿಯ ರೂಪದಲ್ಲಿ ಗ್ರಾಮದ ಎಲ್ಲರೂ ಹಬ್ಬ ಆಚರಿಸುತ್ತಾರೆ. ತುಂಬು ಫಸಲಿನ ಹೊಲಗಳಿಗೆ "ಹಸಿರಂಬಲಿ" ಮತ್ತು "ಹಾಲಂಬಲಿ" ಎಂಬ ಚೆರಗವನ್ನು ಚೆಲ್ಲುತ್ತಾರೆ. ಫಸಲನ್ನು ಪೂಜಿಸಿ ಎಡೆಯಿಟ್ಟು ನಮಿಸುತ್ತಾರೆ.


🌟 ಪ್ರತೀ ತಿಂಗಳು ಪೂರ್ಣಿಮಾ ದಿನವನ್ನು ಅಥವಾ ಪೌರ್ಣಮಿಯನ್ನು ಆಚರಿಸಲಾಗುತ್ತದೆ. ಪ್ರತಿ ತಿಂಗಳ ಶುಕ್ಲ ಪಕ್ಷದ ಕೊನೆಯ ತಿಥಿಯನ್ನು ಪೂರ್ಣಿಮಾ ಎಂದು ಕರೆಯಲಾಗುತ್ತದೆ. ಚಂದ್ರನ ಗಾತ್ರದಲ್ಲಿ ಕಡಿಮೆಯಾಗುವ ದಿನವನ್ನು ಕೃಷ್ಣ ಪಕ್ಷ ಮತ್ತು ಚಂದ್ರನ ಗಾತ್ರವು ಹೆಚ್ಚಾಗುವ ದಿನವನ್ನು ಶುಕ್ಲ ಪಕ್ಷವೆಂದು ಕರೆಯಲಾಗುತ್ತದೆ. ಚಂದ್ರನ ಗಾತ್ರವು ಸಂಪೂರ್ಣ ಕಡಿಮೆಯಾದಾಗ ಅದನ್ನು ಅಮಾವಾಸ್ಯೆ ಎಂದು ಮತ್ತು ಚಂದ್ರನ ಗಾತ್ರವು ಸಂಪೂರ್ಣ ಹೆಚ್ಚಾದಾಗ ಅದನ್ನು ಹುಣ್ಣಿಮೆಯೆಂದು ಅಥವಾ ಪೌರ್ಣಮಿಯೆಂದು ಕರೆಯಲಾಗುತ್ತದೆ.



🌟 ಈ ದಿನ ಜನರು ಮುಂಜಾನೆ ಬೇಗ ಎದ್ದು, ಸ್ನಾನ ಮಾಡಿ ಶುದ್ಧವಾದ ಬಟ್ಟೆಯನ್ನು ಧರಿಸುತ್ತಾರೆ.


🌟 ನಂತರ ದೇವರ ಮುಂದೆ ಕುಳಿತು ಉಪವಾಸವನ್ನು ಮಾಡುವುದಾಗಿ ಪ್ರತಿಜ್ಞೆಯನ್ನು ತೆಗೆದುಕೊಳ್ಳುತ್ತಾರೆ.


🌟 ಈ ದಿನ ಸಂಪೂರ್ಣ ಪೂಜಾ ವಿಧಿಗಳನ್ನು ಆಚರಿಸುವ ಮೂಲಕ ಭಗವಾನ್‌ ವಿಷ್ಣು, ಶಿವ, ಎಲ್ಲಾ ದೇವರುಗಳನ್ನು ಮತ್ತು ಕುಲದೇವರನ್ನು ಪೂಜಿಸಿ, ಹೂವುಗಳನ್ನು, ಹಣ್ಣುಗಳನ್ನು, ಧೂಪವನ್ನು, ದೀಪವನ್ನು ಬೆಳಗಲಾಗುತ್ತದೆ.


🌟 ಈ ದಿನಕ್ಕೆ ಸಂಬಂಧಿಸಿದ ಕಥೆಗಳನ್ನು ಓದಿ. ದೇವರಿಗೆ ಆರತಿಯನ್ನು ಮಾಡಬೇಕು.

***

ಭಾದ್ರಪದ ಮಾಸದಲ್ಲಿ ಬರುವ ಹುಣ್ಣಿಮೆಯ ಮಹತ್ವವೇನು? 

ಭಾದ್ರಪದ ಮಾಸದಲ್ಲಿ ಬರುವ ಹುಣ್ಣಿಮೆಯ ದಿನವನ್ನು ಹಿಂದೂ ಪಂಚಾಂಗದ ಪ್ರಕಾರ ಭಾದ್ರಪದ ಹುಣ್ಣಿಮೆಯೆಂದು ಆಚರಿಸುತ್ತಾರೆ. ಭಾರತದಲ್ಲಿ ಹಿಂದೂಗಳು ಚಂದ್ರಮಾನ ಪದ್ಧತಿಯ ಪಂಚಾಂಗವನ್ನು ಅನುಸರಿಸುತ್ತಾರೆ. ಅವರ ಮಾಸಗಳು ಸೌರಮಾನ ಪದ್ಧತಿಯ ಪಂಚಾಂಗದಿಂದ ವಿಭಿನ್ನವಾಗಿರುತ್ತದೆ. ಭಾದ್ರಪದ ಮಾಸವು ಶ್ರಾವಣ ಮತ್ತು ಕಾರ್ತಿಕ ಮಾಸಗಳ ಮಧ್ಯೆ ಬರುತ್ತದೆ. ಈ ಮಾಸದಲ್ಲಿ ಮುಂಗಾರು ಮಳೆಯು ಕಡಿಮೆಯಾಗುತ್ತಾ ಹೋಗುತ್ತದೆ. ಹಿಂದೂ ಪಂಚಾಂಗದಲ್ಲಿ ಪ್ರತಿ ಮಾಸದಲ್ಲಿಯೂ ಒಂದು ಹುಣ್ಣಿಮೆ ಮತ್ತು ಒಂದು ಅಮಾವಾಸ್ಯೆ ಇರುತ್ತದೆ. ಹುಣ್ಣಿಮೆ ರಾತ್ರಿಯು ಹಿಂದೂ ಪುರಾಣಗಳಲ್ಲಿ ಸಾಕಷ್ಟು ಮಹತ್ವವನ್ನು ಹೊಂದಿದೆ. ಭಾದ್ರಪದ ಮಾಸದ ಹುಣ್ಣಿಮೆ ‘ಹುಣ್ಣಿಮೆಯ ರಾತ್ರಿ'ಯೆಂದು ಸಾಕಷ್ಟು ಪ್ರಾಮುಖ್ಯತೆಯನ್ನು ಹೊಂದಿದೆ. ಭಾದ್ರಪದ ಮಾಸದ ಹುಣ್ಣಿಮೆಯು ಇಂತಹ ವಿಶೇಷ ದಿನ ಏಕೆಂಬುದರ ಬಗ್ಗೆ ಈ ಕೆಳಗೆ ಕೆಲವು ವಿಚಾರಗಳನ್ನು ತಿಳಿಸಿದ್ದೇವೆ


ಭಗವಾನ್ ಮಹಾವಿಷ್ಣುವಿನ ಮಾಸ ಭದ್ರಾ ಮಾಸವು ಭಗವಾನ್ ವಿಷ್ಣುವಿಗೆ ವಿಶೇಷವೆಂದು ಪರಿಗಣಿಸಲಾಗಿದೆ. ಈ ಕಾರಣದಿಂದಲೇ ಭಗವಾನ್ ವಿಷ್ಣುವನ್ನು ಭಾದ್ರಪದ ಮಾಸದ ಹುಣ್ಣಿಮೆಯಂದು ಪೂಜಿಸುತ್ತಾರೆ. ವಿಶೇಷವಾಗಿ ವಿಷ್ಣುವಿನ ಮತ್ತೊಂದು ರೂಪವಾದ 'ಸತ್ಯನಾರಾಯಣ' ನ ಪೂಜೆಯನ್ನು ಭಾದ್ರಪದ ಹುಣ್ಣಿಮೆಯಂದು ಮಾಡುತ್ತಾರೆ. ಸತ್ಯನಾರಾಯಣ ಅನೇಕ ಜನರು ಭಾದ್ರಪದ ಮಾಸದ ಹುಣ್ಣಿಮೆಯಂದು ಸತ್ಯನಾರಾಯಣನ ಪೂಜೆಯ ವ್ಯವಸ್ಥೆ ಮಾಡುತ್ತಾರೆ. ಗೃಹಪ್ರವೇಶ ಅಥವಾ ಹೊಸಮನೆಗೆ ಪ್ರವೇಶಮಾಡುವುದಕ್ಕೆ ಅಂದಿನ ದಿನ ಒಂದು ಬಹಳ ವಿಶೇಷವಾದ ದಿನವೆಂದು ಪರಿಗಣಿಸುತ್ತಾರೆ. ಭಗವಾನ್ ಸತ್ಯನಾರಾಯಣನಿಗೆ ಹಣ್ಣು, ಹಾಲು, ಜೇನುತುಪ್ಪ ಮತ್ತು ಸಕ್ಕರೆಗಳನ್ನು ನೈವೇದ್ಯ ಮಾಡುತ್ತಾರೆ. ಪೂಜೆಯ ನಂತರ ಅನೇಕ ಮನೆಗಳಲ್ಲಿ 'ಸತ್ಯನಾರಾಯಣ ಕಥೆ' ಪಠಣ ಮಾಡುತ್ತಾರೆ. ನಿಮ್ಮನ್ನು ಯಾರಾದರೂ ಸತ್ಯನಾರಾಯಣನ ಪೂಜೆ ಮತ್ತು ಕಥೆಗೆ ಅಹ್ವಾನಿಸಿದರೆ ನೀವು ಎಷ್ಟೇ ಬಿಡುವಿಲ್ಲದ ಕೆಲಸನಿರತರಾಗಿದ್ದರೂ ಸಹಾ ಅಹ್ವಾನವನ್ನು ನಿರಾಕರಿಸಬಾರದೆಂಬ ಸಾಮಾನ್ಯ ನಂಬಿಕೆಯಿದೆ.

ಪವಿತ್ರ ಸ್ನಾನ ಭಾದ್ರಪದ ಮಾಸದ ಹುಣ್ಣಿಮೆಯಂದು ಯಾವುದಾದರೂ ಪವಿತ್ರ ನದಿಯಲ್ಲಿ ಸ್ನಾನ ಮಾಡಿದರೆ ಭಗವಾನ್ ವಿಷ್ಣುವಿನ ಅಶೀರ್ವಾದ ಪಡೆಯುತ್ತೀರಿ ಎಂಬ ನಂಬಿಕೆಯಿದೆ. ಹಿಂದೂ ಧರ್ಮದ ಪ್ರಕಾರ ಗಂಗ, ಯಮುನಾ, ನರ್ಮದಾ, ಇತ್ಯಾದಿ ಇವುಗಳು ಕೆಲವು ಪವಿತ್ರ ನದಿಗಳು. ದಾನಮಾಡುವುದು ಅಂದಿನ ದಿನ ವಸ್ತುಗಳನ್ನು ಕೊಡುಗೆಯಾಗಿ ಕೊಡಲು ಮತ್ತು ಧನ ಸಹಾಯಮಾಡಲು ಬಹಳ ಒಳ್ಳೆಯ ದಿನ. ನೀವು ಪವಿತ್ರ ಸ್ನಾನ ಮಾಡಿದ ನಂತರ ಬಟ್ಟೆ, ಆಹಾರ ಮತ್ತು ಧನವನ್ನು ಬಡವರಿಗೆ ದಾನಮಾಡಿದರೆ ನಿಮಗೆ ಒಳ್ಳೆಯ 'ಕರ್ಮ' ದೊರೆಯುವುದು ಎಂಬ ನಂಬಿಕೆಯಿದೆ. ನೀವು ಮಾಡಿದ ದಾನಗಳಿಂದ ನೀವು ಭಗವಾನ್ ವಿಷ್ಣುವಿನ ಆಶೀರ್ವಾದವನ್ನು ಪಡೆಯುವಿರಿ.ಇವೇ ಭಾದ್ರಪದ ಮಾಸದ ಹುಣ್ಣಿಮೆಯ ಕೆಲವು ಮುಖ್ಯ ವಿಶೇಷಗಳು. ನಿಮಗೆ ಮುಂದೆ ಒಳ್ಳೆಯದಿನಗಳು ಬರಲೆಂದು ಆಶಿಸಿ ಈ ಕ್ರಿಯಾವಿಧಿಗಳನ್ನು ಅನುಸರಿಸಿ.


ಧನ್ಯವಾದಗಳು

ಸಂಗ್ರಹಣೆ

***


No comments:

Post a Comment