SEARCH HERE

Friday, 1 October 2021

ಕುಲದೈವ ಮನೆ ದೇವರು

 ಇಷ್ಟದೈವ, ಆರಾಧ್ಯ ದೈವ, ಕುಲದೈವ, ಮನೆ ದೇವರು, ದೈವಗಳು


ಇಷ್ಟದೈವ                                                                                       ನಾವು ಮನಃ ಪೂರ್ವಕವಾಗಿ ಮೆಚ್ಚಿ ನಂಬಿ ಆರಾಧಿಸುವ ದೇವರು.


ನಮ್ಮ ಮನಸ್ಸಿನ ಎಲ್ಲಾ ಇಷ್ಟಾರ್ಥಗಳನ್ನು ಪೂರೈಸುವ ದೈವವೇ ಇಷ್ಟದೈವ. ಇಷ್ಟ ದೈವವು ಕೇವಲ ಈ ಜನ್ಮಕ್ಕೆ ಮಾತ್ರ ಮೀಸಲಾಗಿರುವುದು.


 ಆರಾಧ್ಯ ದೈವ


ಆರಾಧ್ಯದೈವವೆಂದರೆ ಜನ್ಮ ಜನ್ಮಗಳಲ್ಲೂ ಆತ್ಮ ಸಮರ್ಪಣಾಭಾವದಿಂದ ಆರಾಧಿಸುವುದು.


ಈ ದೈವವು ಆತ್ಮಕ್ಕೆ ಸಂಬಂಧಪಟ್ಟಿದ್ದು, ನಾನು ಯಾರು ? ಎಂಬುದನ್ನು ತಿಳಿಸುವ ದೈವ. ಸೃಷ್ಟಿಯಲ್ಲಿ ಜನಿಸಿದ ಮೊದಲ ಜನ್ಮದಿಂದ ಹಿಡಿದು ಕೊನೆಯ ಜನ್ಮದವರೆಗೂ ನಮ್ಮ ಆತ್ಮದಲ್ಲಿ ಬೇರೆತಿರುವಂತಹ ದೈವ. ಈ ದೈವದಿಂದ ಸೃಷ್ಟಿಯಲ್ಲಿ ನಾವು ಏನು ಬೇಕಾದರೂ ಹೊಂದಬಹುದು.


ಕುಲದೈವ                                                                                                                                               ಏಳು ತಲೆಮಾರಿನಿಂದ ಆರಾಧಿಸಿಕೊಂಡು ಬಂದ‌ ದೇವರು.


ಒಬ್ಬ ವ್ಯಕ್ತಿಗೆ ಒಂದು ದೈವ ಸಾಕ್ಷಾತ್ಕಾರವಾಯಿತು ಅಂದರೆ ಅದರ ಪ್ರಭಾವ ಎಷ್ಟರ ಮಟ್ಟಿಗೆ ಇರುತ್ತದೆ ಎಂದರೆ ಆ ವ್ಯಕ್ತಿಯ ಏಳು ತಲೆಮಾರಿನ ವರೆಗೂ ಇರುತ್ತದೆ. ಅಲ್ಲಿಂದ ಎಲ್ಲಾ ಪೀಳಿಗೆಗಳು ಆ ದೈವವನ್ನು ಕುಲದೈವ ವೆಂದು ಆರಾಧಿಸುತ್ತಾ ಬರುತ್ತಾರೆ. ಅದರ ಪ್ರಭಾವವನ್ನು ವಂಶದ ಮೇಲೆ ಪ್ರಬಲವಾಗಿ  ಬೇರೂರಿರುವ ಕಲ್ಪವೃಕ್ಷದ ಹಾಗೆ ವಂಶವನ್ನು ರಕ್ಷಿಸಲೆಂದು ಆರಾಧಿಸುತ್ತಾರೆ.

ಆ ಕುಲದೈವದ ಆರಾಧನೆಯಿಂದ ವಂಶಕ್ಕೆ ಒದಗಿಬರುವ ಆಪತ್ತುಗಳನ್ನು ತಡೆಯುವ ಶಕ್ತಿ ಇರುತ್ತದೆ. ಮತ್ತು ವಂಶವನ್ನು ಉದ್ದಾರದೆಡೆಗೆ ಕೊಂಡೊಯ್ಯುತ್ತದೆ.


ಮನೆದೇವರು


ಮನೆ ದೇವರು ಎಂದರೆ ಅದು ಮೂರು ತಲೆಮಾರಿನವರಿಗೆ ಮಾತ್ರ ಇರುತ್ತದೆ. ಈ ಮನೆದೇವರನ್ನು ಕುಲದೇವರೆಂದು ಆರಾಧಿಸುವ ಮನೆಯನ್ನು ನಾವು ನೋಡಬಹುದು ಅವರು ಹಲವು ದೈವವನ್ನು ಮೊರೆಹೋಗುತ್ತಾರೆ.

                                                                                               ಜಾತಕ ರೀತಿಯಲ್ಲಿ         ‌                                                                                         ಇನ್ನು ಲಗ್ನ, ಪಂಚಮ, ನವಮ ಸ್ಥಾನಕ್ಕೆ ಸಂಬಂಧಿಸಿದ ದೈವವನ್ನು ಆರಾಧಿಸುವುದು, ಈಗಿನ ಜನ್ಮದ ಪ್ರಾರಬ್ಧ ಕರ್ಮ ಗಳ ಮುಕ್ತಿಗಾಗಿ ಆರಾಧಿಸುತ್ತಾರೆ.


ತೃತೀಯ, ಅಷ್ಟಮ, ದ್ವಾದಶ ಸ್ಥಾನದ ದೇವತೆಗಳನ್ನು ಹಿಂದಿನ ಜನ್ಮಗಳ ಸಂಚಿತ ಕರ್ಮ ಗಳ ಮುಕ್ತಿಗಾಗಿ ಆರಾಧಿಸುತ್ತಾರೆ.


ಚತುರ್ಥ ಮತ್ತು ಸಪ್ತಮ ದ ದೇವತೆಗಳನ್ನು ಭವಿಷ್ಯದ ಆಗಾಮಿ ಕರ್ಮ ಫಲಗಳಿಗಾಗಿ ಆರಾಧಿಸುತ್ತಾರೆ.

No comments:

Post a Comment