SEARCH HERE

Friday 1 October 2021

ಜಾಯಿಕಾಯಿ

 ಜಾಯಿಕಾಯಿಯಲ್ಲಿರುವ ಈ ಆರೋಗ್ಯ ಗುಣಗಳು ನಿಮಗೆ ಗೊತ್ತೇ?

❇️🌿🌿🌻🌻❇️🌿🌿🌻🌿❇️

ವಿಶ್ವದೆಲ್ಲೆಡೆಯಲ್ಲಿ ಜನಪ್ರಿಯವಾಗಿರುವಂತಹ ಜಾಯಿಕಾಯಿಯು ಹಲವಾರು ಆರೋಗ್ಯ ಲಾಭಗಳನ್ನು ನೀಡುವುದು. ಇದರಲ್ಲಿ ವಿವಿಧ ರೀತಿಯ ವಿಟಮಿನ್ ಗಳು, ಖನಿಜಾಂಶಗಳು ಮತ್ತು ಉರಿಯೂತ ಶಮನಕಾರಿ, ಬ್ಯಾಕ್ಟೀರಿಯಾ ವಿರೋಧಿ, ಸೂಕ್ಷ್ಮಾಣು ವಿರೋಧಿ ಗುಣಗಳು ಇವೆ. ರಕ್ತದಲ್ಲಿನ ಸಕ್ಕರೆ, ಅಧಿಕರ ರಕ್ತದೊತ್ತಡ, ಕೊಲೆಸ್ಟ್ರಾಲ್ ನಿಯಂತ್ರಿಸುವಲ್ಲಿ ಜಾಯಿಕಾಯಿಯು ತುಂಬಾ ಪರಿಣಾಮಕಾರಿ ಆಗಿರುವುದು. ಇದರಲ್ಲಿ ಒತ್ತಡ ಹಾಗೂ ಆತಂಕ ಕಡಿಮೆ ಮಾಡುವ ಗುಣಗಳು ಇವೆ.


ಜಾಯಿಕಾಯಿಯಿಂದ ಸಿಗುವ ಲಾಭಗಳ ಬಗ್ಗೆ ತಿಳಿಯೋಣ…


1. ಕ್ಯಾನ್ಸರ್ ಅಪಾಯವನ್ನು ತಗ್ಗಿಸಲು ನೆರವಾಗುವುದು

2. ಹಲ್ಲುನೋವು ನಿವಾರಕವಾಗಿ ಜಾಯಿಕಾಯಿ

3. ವಾಕರಿಕೆ ಸಮಸ್ಯೆ ನಿವಾರಿಸುತ್ತೆ ಜಾಯಿಕಾಯಿಯನ್ನು ಜೇನುತುಪ್ಪದೊಂದಿಗೆ ಸೇವಿಸೋದ್ರಿಂದ ವಾಕರಿಕೆ ಸಮಸ್ಯೆ ನಿವಾರಣೆಯಾಗುತ್ತೆ..

4. ನರಮಂಡಲದ ಆರೋಗ್ಯ ಜಾಯಿಕಾಯಿ ಎಣ್ಣೆಯನ್ನು ಜೀರ್ಣಕ್ರಿಯೆ ಸಮಸ್ಯೆಗೆ ಹೆಚ್ಚಾಗಿ ಬಳಸಲಾಗುತ್ತೆ. ಆದ್ರೆ ಇದು ನರವ್ಯೂಹ ಸರಿಯಾಗಿ ಕಾರ್ಯ ನಿರ್ವಗಿಸುವಂತೆಯೂ ನೋಡಿಕೊಳ್ಳುತ್ತೆ. ಹಾಗಾಗಿ ದೇಹದ ಡಯಟ್‌ ಸಿಸ್ಟಮ್‌ ಸರಿಯಾಗಿರುವಂತೆಯೂ ನೋಡಿಕೊಳ್ಳುತ್ತೆ

5. ನಿಮಗೆ ಬಹಳ ದಿನಗಳಿಂದ ಅಜೀರ್ಣತೆ ಮತ್ತು ಮಲಬದ್ಧತೆ, ಅಥವಾ ಬೆಳಗಿನ ಸಮಯದಲ್ಲಿ ವಾಕರಿಕೆ ಹಾಗೆ ವಾಂತಿಯ ಸಮಸ್ಯೆ ಕಾಡುತ್ತಿದ್ದರೆ ಅದಕ್ಕೆ ಕಾರಣ ನೀವು ಅನುಸರಿಸುತ್ತಿರುವ ಆಹಾರ ಪದ್ಧತಿಯೇ ಆಗಿರುತ್ತದೆ. ಏಕೆಂದರೆ ಈಗಿನ ಆಹಾರ ಪದ್ಧತಿಯಲ್ಲಿ ಯಾವುದೇ ಸತ್ವಗಳು ಸೇರಿರುವುದಿಲ್ಲ.


6. ಬದಲಿಗೆ ಆರೋಗ್ಯವನ್ನು ಹಾಳು ಮಾಡುವ ಹಾಗೂ ಹೊಟ್ಟೆಗೆ ಸಂಬಂಧ ಪಟ್ಟ ಸಮಸ್ಯೆಗಳನ್ನು ಹೆಚ್ಚು ಮಾಡುವ ಆಹಾರಗಳೇ ಎಲ್ಲ ಕಡೆ ಇರುತ್ತವೆ.


7. ಮನೆಯಲ್ಲಿ ಕೂಡ ಇವುಗಳ ಅಭ್ಯಾಸ ಎಲ್ಲರಲ್ಲೂ ಮುಂದುವರೆದಿರುವುದರಿಂದ ಜೀರ್ಣಾಂಗಕ್ಕೆ ಸಂಬಂಧ ಪಟ್ಟ ಸಮಸ್ಯೆಗಳು ಸಾಮಾನ್ಯ ಎಂದು ಹೇಳಬಹುದು.


8. ನಿಮ್ಮ ಗ್ಯಾಸ್ಟಿಕ್ ಸಮಸ್ಯೆಯನ್ನು ಸುಲಭವಾಗಿ ಪರಿಹಾರ ಮಾಡುವ ಗುಣ ಲಕ್ಷಣಗಳು ಜಾಯಿಕಾಯಿ ಯಲ್ಲಿ ಕಂಡು ಬರುತ್ತವೆ. ನಿಮ್ಮ ವಾಂತಿ ಮತ್ತು ಬೇರೆ ಸಮಸ್ಯೆಯನ್ನು ಕೂಡ ಜಾಯಿಕಾಯಿ ಅತ್ಯಂತ ತ್ವರಿತವಾಗಿ ಪರಿಹಾರ ಮಾಡುತ್ತದೆ.

(ಸಂಗ್ರಹಿಸಿದ್ದು) 

***


No comments:

Post a Comment