SEARCH HERE

Friday 1 October 2021

ಗಂಟಲಿನ ಕಫ

 ಗಂಟಲಿನ ಕಫ

 ನಿವಾರಣೆಗೆ ಉಪಾಯಗಳು* 


●ಕಫದ ಸಮಸ್ಯೆಯಿದ್ದರೆ ಬಿಸಿ ನೀರಲ್ಲಿ ಉಪ್ಪು ಹಾಕಿ ದಿನಕ್ಕೆ ಎರಡು-ಮೂರು ಬಾರಿ ಙ ಬಾಯಿ ಮುಕ್ಕಳಿಸಿ, ಇದರಿಂದ ಗಂಟಲಿನ ಕಫ ಕರಗುತ್ತದೆ.


●ನಿರಂತರ ಕಫದ ಸಮಸ್ಯೆ ಕಾಡುತ್ತಿದ್ದರೆ ನಿಂಬೆ ಹಣ್ಣಿನ ರಸಕ್ಕೆ ಕಪ್ಪು ಉಪ್ಪು ಅಥವಾ ಸೈಂಧವ ಉಪ್ಪು ಸೇರಿಸಿ. ಅದರೊಂದಿಗೆ ಕರಿಮೆಣಸಿನ ಪುಡಿ ಮಿಶ್ರಣ ಮಾಡಿ ಆ ರಸವನ್ನು ಸೇವಿಸಿದ್ರೆ ಕಫದ ಸಮಸ್ಯೆ ನಿವಾರಣೆಯಾಗುತ್ತದೆ.


●ಕಫ ಕರಗಲು ಹಸಿ ಶುಂಠಿ ಕಷಾಯ ಮಾಡಿ ಅದಕ್ಕೆ ಜೇನುತುಪ್ಪ ಸೇರಿಸಿ ದಿನಕ್ಕೆ 3 - 4 ಬಾರಿ ಸೇವಿಸಿ. ಇದರಿಂದ ಶೀಘ್ರದ ಕಫ ಕರಗುವುದು.


●ಅರಿಶಿನ ಪುಡಿಯನ್ನು ಬಿಸಿ ನೀರಿನಲ್ಲಿ ಕಲಸಿ ಕುಡಿಯುತ್ತಿರುವುದರಿಂದ ಕೂಡ ಕಫದ ಸಮಸ್ಯೆ ಶಮನವಾಗುತ್ತದೆ.


●ಹಸಿ ಶುಂಠಿಯನ್ನು ಕುದಿಸಿ ಅದಕ್ಕೆ ಚಕ್ಕೆ ಸೇರಿಸಿ ಕಷಾಯ ಮಾಡಿ ದಿನಕ್ಕೆ 2-3 ಬಾರಿ ಕುಡಿಯುವುದರಿಂದ ಸಹ ಕಫದ ಸಮಸ್ಯೆ ನಿವಾರಣೆಯಾಗುತ್ತದೆ.


●ಜೇನುತುಪ್ಪಕ್ಕೆ ಕರಿಮೆಣಸಿನ ಪುಡಿ ಮಿಶ್ರ ಮಾಡಿ ದಿನಕ್ಕೆ 3-4 ಬಾರಿ ಸೇವಿಸುವುದರಿಂದ ಸಹ ಗಂಟಲ ಕಫ ಕರಗುತ್ತದೆ.


●ಹಸಿ ಕ್ಯಾರೆಟ್ನ್ನು ಗಟ್ಟಿ ಜ್ಯೂಸ್‌ ಆಗಿಸಿ ಅದಕ್ಕೆ ಜೇನುತುಪ್ಪ ಸೇರಿಸಿ ಕುಡಿಯುವುದರಿಂದ ಸಹ ಗಂಟಲಿನ ಕಫ ನಿವಾರಣೆಯಾಗುತ್ತದೆ.


●ಒಣ ಶುಂಠಿ, ಕರಿಮೆಣಸು ಹಾಗೂ ಬೆಲ್ಲ ಸೇರಿಸಿ ಕಷಾಯ ಮಾಡಿ ಕುಡಿಯುವುದರಿಂದ ಸಹ ಕಫ ಸಮಸ್ಯೆಗೆ ಪರಿಹಾರ ಕಾಣಬಹುದು.


●ಬೆಳ್ಳುಳ್ಳಿ ಮತ್ತು ಜೇನು ಮಿಕ್ಸ್ ಮಾಡಿ ತಿನ್ನಿ

ಹೀಗೆ ಮಾಡುತ್ತಾ ಬಂದರೆ ಕೆಮ್ಮು ಕಡಿಮೆಯಾಗುವುದು. ಒಂದು ವೇಳೆ 3 ವಾರವಾದರೂ ಕೆಮ್ಮು ಕಡಿಮೆಯಾಗದಿದ್ದರೆ ವೈದ್ಯರ ಭೇಟಿ ಮಾಡಿ.


●ಮೂಗು ಕಟ್ಟಿದ್ದರೆ ಹಬೆ ತೆಗೆದುಕೊಳ್ಳಿ

ದಿನಕ್ಕೆ ಎರಡು ಬಾರಿ ಬಿಸಿ ನೀರಿನ ಹಬೆ ತೆಗೆದುಕೊಂಡರೆ ಕೆಮ್ಮು ಶೀತ ಕಡಿಮೆಯಾಗುವುದು. ಹೀಗೆ ಹಬೆ ತೆಗೆದುಕೊಳ್ಳುವಾಗ 2 ಹನಿ ನೀಲಗಿರಿ ಎಣ್ಣೆ ಹಾಕಿದರೆ ಒಳ್ಳೆಯದು.

***


No comments:

Post a Comment