ಪ್ರದಕ್ಷಿಣೆಯ ಮಹತ್ವ ಫಲ
ಭಗವಂತನಲ್ಲಿ ಜಾತಿ ಧರ್ಮ ಯಾವುದೇ ಭೇದ ಭಾವ ಇಲ್ಲ.ಅಚಾರ ಅನುಷ್ಠಾನಗಳೊಂದಿಗೆ. ಪ್ರದಕ್ಷಿಣೆ ಮಾಡಿ ದೇವರ ದರ್ಶನ ಮಾಡಿದರೆ ಅನಂತವಾದ ಪುಣ್ಯವು ಪ್ರಾಪ್ತಿಯಾಗುತ್ತದೆ. ಪ್ರದಕ್ಷಿಣೆ ಮಾಡುವುದರಿಂದ ಅಲ್ಲಿರುವ ದೇವರ ಪ್ರದಕ್ಷಿಣೆ ಮಾಡಿದ ಪುಣ್ಯ ಸಿಗುವುದರೊಂದಿಗೆ ವಾಯು ವಿಹಾರ ಹಾಗೂ ವ್ಯಾಯಾಮ ಮಾಡಿದಂತೆ ಆಗುವುದು.
ಪ್ರದಕ್ಷಿಣೆ ಎಷ್ಟು ಬಾರಿ ಮಾಡಿದರೆ ಏನು ಫಲ ?.
1. ಐದು ಬಾರಿ ಪ್ರದಕ್ಷಿಣೆ ಮಾಡಿದರೆ - ಜಯವಾಗುತ್ತದೆ.
2. ಏಳು ಬಾರಿ ಪ್ರದಕ್ಷಿಣೆ ಮಾಡಿದರೆ - ಶತ್ರು ಪರಾಜಯಕ್ಕಾಗಿ.
3. ಒಂಬತ್ತು ಬಾರಿ ಪ್ರದಕ್ಷಿಣೆ ಮಾಡಿದರೆ - ಪುತ್ರ ಪ್ರಾಪ್ತಿಗಾಗಿ.
4. ಹನ್ನೂಂದು ಬಾರಿ ಪ್ರದಕ್ಷಿಣೆ ಮಾಡಿದರೆ - ಆಯುಷ್ಯ ವೃದ್ಧಿಗಾಗಿ.
5. ಹದಿಮೂರು ಬಾರಿ ಪ್ರದಕ್ಷಿಣೆ ಮಾಡಿದರೆ - ಪ್ರಾರ್ಥನೆ ಸಿದ್ಧಿಗಾಗಿ.
6. ಹದಿನೈದು ಬಾರಿ ಪ್ರದಕ್ಷಿಣೆ ಮಾಡಿದರೆ - ಧನ ಪ್ರಾಪ್ತಿಗಾಗಿ.
7. ಹದಿನೇಳು ಬಾರಿ ಪ್ರದಕ್ಷಿಣೆ ಮಾಡಿದರೆ - ಧನ ವೃದ್ಧಿಗಾಗಿ.
8. ಹತ್ತೊಂಭತ್ತು ಬಾರಿ ಪ್ರದಕ್ಷಿಣೆ ಮಾಡಿದರೆ - ರೋಗ ನಿವಾರಣೆಗಾಗಿ.
ಪ್ರದಕ್ಷಿಣೆಯ ಫಲ ಯಾವ ಹೊತ್ತಿನಲ್ಲಿ ಹೇಗೇ ?.
1. ಬೆಳ್ಳಗೆ ಸಮಯದಲ್ಲಿ - ರೋಗ ನಿವಾರಣೆಗಾಗಿ.
2. ಮಧ್ಯಾಹ್ನದ ಸಮಯದಲ್ಲಿ - ಇಷ್ಟಾರ್ಥ ಸಿದ್ಧಿಗಾಗಿ.
3. ಸಂಜೆ ಸಮಯದಲ್ಲಿ - ಪಾಪ ವಿಮೋಚನೆಗಾಗಿ.
4. ರಾತ್ರಿ ಸಮಯದಲ್ಲಿ - ಮೋಕ್ಷ ಸಿದ್ಧಿಗಾಗಿ.
***
No comments:
Post a Comment