ದೇವಸ್ಥಾನಕ್ಕೆ ಹೋದಾಗ ಸಾಮಾನ್ಯವಾಗಿ ಮಾಡುವ ತಪ್ಪುಗಳು ಯಾವುದು ?*
ನೀವು ಯಾವುದೇ ದೇವಸ್ಥಾನಕ್ಕೆ ಹೋದರೂ ಮೊದಲಿಗೆ ದೇವರ ಮುಂದೆ ಇರುವ ಧ್ವಜಸ್ತಂಭವನ್ನು ದರ್ಶನ ಮಾಡಬೇಕು.
ಶಿವಾಲಯಕ್ಕೆ ಹೋಗಿದ್ದಾಗ ಮೊದಲಿಗೆ ನವಗ್ರಹವನ್ನು ಪ್ರದಕ್ಷಿಣೆ ಮಾಡಿಕೊಂಡು ಕಾಲನ್ನು ತೊಳೆದು ನಂತರ ಶಿವದರ್ಶನ ಪಡೆಯಬೇಕು. ಇದು ಶಿವಸ್ಯಾರ್ಧಾ ಅಂತ ಪ್ರದಕ್ಷಿಣೆಯ ನಿಯಮ.
ವಿಷ್ಣು ಆಲಯಕ್ಕೆ ಹೋಗಿದ್ದಾಗ ಮೊದಲಿಗೆ ವಿಷ್ಣು ದೇವರ ದರ್ಶನ ಮಾಡಿ ನಂತರ ಬೇರೆ ದೇವರ ದರ್ಶನ ಪಡೆಯಬೇಕು, ಹಾಗೆಯೇ ಮೊದಲಿಗೆ ದೇವರ ಪಾದವನ್ನು ದರ್ಶನ ಮಾಡಿದ ನಂತರ ವಿಗ್ರಹದ ದರ್ಶನ ಪಡೆಯಬೇಕು.
ಎಷ್ಟು ಪ್ರದಕ್ಷಿಣೆ ಹಾಕಬೇಕೆಂದರೆ.
ವಿನಾಯಕನಿಗೆ – 1
ಈಶ್ವರನಿಗೆ – 3
ಹೆಣ್ಣು ದೇವತೆಗಳಿಗೆ – 4
ವಿಷ್ಣು ಮೂರ್ತಿಗೆ – 4
ಆಲದ ಮರಕ್ಕೆ – 7
ಅರಳಿ ಮರ 🌲 6
ಸುಬ್ರಹ್ಮಣ್ಯ ಸ್ವಾಮಿಗೆ 6
ಶಿವನಿಗೆ ಅಭಿಷೇಕ, ಸೂರ್ಯನಿಗೆ ನಮಸ್ಕಾರ,
ವಿಷ್ಣುವಿಗೆ ಅಲಂಕಾರ, ವಿನಾಯಕನಿಗೆ ನೈವೇದ್ಯ, ಹೆಣ್ಣು ದೇವತೆಗಳಿಗೆ ಕುಂಕುಮ ಅರ್ಚನೆ ಅಂದರೆ ತುಂಬಾ ಇಷ್ಟ ಶಿವಲಿಂಗಕ್ಕೆ ಮತ್ತು ನಂದೀಶ್ವರ ಮಧ್ಯದಲ್ಲಿ ಸಾಮಾನ್ಯ ಮನುಷ್ಯರು ನಡೆಯಬಾರದು.
ದೇವಸ್ಥಾನಕ್ಕೆ ಹೋಗಿದ್ದಾಗ ವಿಗ್ರಹಕ್ಕೆ ನೇರವಾಗಿ ನಿಂತುಕೊಂಡು ನಮಸ್ಕಾರ, ಸ್ತ್ರೋತ್ರ ಹೇಳಬಾರದು ಪಕ್ಕದಲ್ಲಿ ನಿಂತು ಕೈ ಜೋಡಿಸಿ ನಮಸ್ಕಾರ ಮಾಡಬಾರದು, ಪುರುಷರು ದೇವರಿಗೆ ಸಾಷ್ಟಂಗ ನಮಸ್ಕಾರ ಮಾಡಬಹುದು, ಆದರೆ ಸ್ತ್ರೀಯರು ಮಾಡಬಾರದು, ಅರ್ಧ ಮಂಡಿ ಊರಿ ಹಣೆಯನ್ನು ನೆಲಕ್ಕೆ ತಾಗುವಂತೆ ನಮಸ್ಕಾರ ಮಾಡಬೇಕು. ಸ್ತ್ರೀಯರು ದೇವಾಲಯದಲ್ಲಿ ಓಂಕಾರ ಜಪಿಸಬಾರದು.
ಭಾನುವಾರ ಸೂರ್ಯನ ದೇವಸ್ಥಾನ,
ಸೋಮವಾರ ಈಶ್ವರ ಮತ್ತು ಗೌರಿಯ ದೇವಸ್ಥಾನ, ಮಂಗಳವಾರ ಸುಬ್ರಹ್ಮಣ್ಯ ಸ್ವಾಮಿ, ಆಂಜನೇಯ ಸ್ವಾಮಿ
ಬುಧವಾರ ವಿನಾಯಕ ಮತ್ತು ಅಯ್ಯಪ್ಪ ಸ್ವಾಮಿ,
ಗುರುವಾರ ಸಾಯಿಬಾಬ ಮತ್ತು ದತ್ತಾತ್ರೇಯ ಸ್ವಾಮಿ, ಶುಕ್ರವಾರ ಹೆಣ್ಣು ದೇವರುಗಳು,
ಶನಿವಾರ ವೆಂಕಟೇಶ ಸ್ವಾಮಿ ಮತ್ತು ವೈಷ್ಣವ ಮತ್ತು ಆಂಜನೇಯ
ದೇವಾಲಯಗಳಿಗೆ ದರ್ಶನ ಮಾಡಿದರೆ ಒಳ್ಳೆಯದು.
ನಾವು ದೇವಸ್ಥಾನಕ್ಕೆ ಹೋಗಿದ್ದಾಗ ಈ ನಿಯಮಗಳನ್ನು ಭಕ್ತಿ ಶ್ರದ್ಧೆ ಇಂದ ಪಾಲಿಸಿದರೆ ಸಾಕ್ಷಾತ್ ಆ ಭಗವಂತನು ನಮ್ಮ ಹಿಂದೆಯೇ ನಮ್ಮ ಮನೆಗೆ ಬರುವುದು ಖಂಡಿತಾ.
No comments:
Post a Comment