SEARCH HERE

Friday 1 October 2021

ಮೂಲಂಗಿ raddish


 ಮೂಲಂಗಿಯ ಬಗ್ಗೆ ನಮ್ಮಲ್ಲಿ ಹೆಚ್ಚಿನವರಿಗೆ ಇರುವ ಅಸಡ್ಡೆ.

🌸🍀🌸🍀🌸🍀🌸🍀🌸🍀🌸

ಇದು ಅಗ್ಗವಾಗಿ ದೊರಕುತ್ತದೆ ಎಂಬ ಕಾರಣಕ್ಕೇ ಹೆಚ್ಚಿನವರ ಅಸಡ್ಡೆಗೆ ಗುರಿಯಾಗಿದೆ. ವಾಸ್ತವದಲ್ಲಿ, ಮೂಲಂಗಿ ಒಂದು ಅದ್ಭುತವಾದ ಆರೋಗ್ಯಕರ ತರಕಾರಿಯಾಗಿದೆ. ಇದನ್ನು ಹಸಿಯಾಗಿ ಸೇವಿಸುವ ಜೊತೆಗೇ ಸಾಂಬಾರ್ ಮೊದಲಾದವುಗಳಲ್ಲಿ ಬೇಯಿಸಿ, ಆಲೂ ಪರೋಟದಂತೆಯೇ ಮೂಲೀ ಪರಾಟ ಎಂಬ ರೊಟ್ಟಿಯಂತೆಯೂ, ಸರಳವಾಗಿ ಬೇಳೆಯೊಟ್ಟಿಗೆ ಬೇಯಿಸಿ ಧಿಡೀರನೇ ತಯಾರಿಸಬಹುದಾದ ತೊವ್ವೆಗಳ ರೂಪದಲ್ಲಿಯೂ ಸೇವಿಸಬಹುದು. ಆಲುಗಡ್ಡೆಯೊಂದಿಗೂ ಮೂಲಂಗಿ ಚೆನ್ನಾಗಿ ಬೆರೆಯುವ ಕಾರಣ ಇನ್ನೂ ಹಲವಾರು ಖಾದ್ಯಗಳನ್ನು ತಯಾರಿಸಬಹುದು.

​ಮೂಲಂಗಿ ಬಣ್ಣ

ಮೂಲಂಗಿ ಸಾಮಾನ್ಯವಾಗಿ ಬಿಳಿ ಬಣ್ಣದಲ್ಲಿದ್ದರೂ ಇತರ ಬಣ್ಣಗಳಲ್ಲಿಯೂ ದೊರಕುತ್ತದೆ. ಕೆಂಪು, ಹಳದಿ, ನೇರಳೆ, ಬಿಳಿ-ಕೆಂಪು ಮಿಶ್ರಿತ ಬಣ್ಣ, ಹಸಿರು ಮೊದಲಾದ ಬಣ್ಣಗಳಲ್ಲಿ ದೊರಕುತ್ತದೆ. Daikon ಎಂಬ ತಳಿಯ ಬಿಳಿ ಮೂಲಂಗಿ ಸಾಮಾನ್ಯವಾಗಿ ಉದ್ದ ಮತ್ತು ದೊಡ್ಡದಾಗಿದ್ದರೆ ಉಳಿದವು ಚಿಕ್ಕ ಬೀಟ್ರೂಟಿನ ಆಕಾರದಲ್ಲಿರುತ್ತವೆ. ಅಪರೂಪಕ್ಕೆ ಕಪ್ಪು ಬಣ್ಣಕ್ಕೆ ಅತಿ ಹತ್ತಿರವಾಗಿರುವ ಗಾಢನೀಲಿ ಬಣ್ಣದ ಮೂಲಂಗಿಗಳೂ ದೊರಕುತ್ತವೆ. ಇದರ ರುಚಿ ಕೊಂಚವೇ ಖಾರವಾಗಿರುವ ಕಾರಣ ಹಲವರಿಗೆ ಇದು ಹಿಡಿಸುವುದಿಲ್ಲ. ಆದರೆ ಇದರಲ್ಲಿರುವ ಅದ್ಭುತವಾದ ಆರೋಗ್ಯಕರ ಗುಣಗಳು ಮಾತ್ರ ಈ ತರಕಾರಿಯನ್ನು ಅತಿ ಮಹತ್ವದ್ದಾಗಿಸುತ್ತದೆ.

​ಹಲವಾರು ಪ್ರಯೋಜನಗಳಿವೆ

1.ಮೂಲಂಗಿಯ ಸೇವನೆಯಿಂದ ಹಲವಾರು ಪ್ರಯೋಜನಗಳಿವೆ. ಉದಾಹರಣೆಗೆ ಯಕೃತ್ ಮತ್ತು ಜಠರದ ಕಲ್ಮಶಗಳನ್ನು ನಿವಾರಿಸುವ ಮೂಲಕ ಈ ಅಂಗಗಳನ್ನು ಸ್ವಚ್ಛತೆಗೊಳಿಸುತ್ತದೆ. ಕಾಮಾಲೆ ಅಥವಾ ಹಳದಿ ರೋಗ (ಜಾಂಡೀಸ್) ಎದುರಾದರೆ ಕಪ್ಪು ಮೂಲಂಗಿಯ ರಸವನ್ನು ಕುಡಿಸುವುದು, ಇದರ ಎಲೆ ಮತ್ತು ತರಕಾರಿಯನ್ನು ತಿನ್ನಿಸುವುದು ಭಾರತದಲ್ಲಿ ಬಹಳ ಹಿಂದಿನಿಂದ ನಡೆದುಬಂದ ಚಿಕಿತ್ಸಾ ಕ್ರಮವಾಗಿದೆ. ಇದರಲ್ಲಿರುವ ಪೋಷಕಾಂಶಗಳು ದೇಹಕ್ಕೆ ಹಳದಿ ಬಣ್ಣ ಬರಲು ಕಾರಣವಾಗಿರುವ ಹೆಚ್ಚಿನ ಪ್ರಮಾಣದ ಬಿಲಿರುಬಿನ್ (bilirubin) ಎಂಬ ರಾಸಾಯನಿಕವನ್ನು ನಿವಾರಿಸಲು ನೆರವಾಗುತ್ತದೆ. ಅಷ್ಟೇ ಅಲ್ಲ, ರಕ್ತ ಶುದ್ಧೀಕರಣಗೊಳಿಸಲು, ಥೈರಾಯ್ಡ್ ಗ್ರಂಥಿಯ ಕಾರ್ಯಕ್ಷಮತೆ ಉಡುಗಿಸುವುದನ್ನು (ಹೈಪೋಥೈರಾಯ್ಡಿಸಂ) ಸರಿಪಡಿಸುವುದು ಸಹಾ ಮೂಲಂಗಿಯ ಇನ್ನೊಂದು ಹೆಗ್ಗಳಿಕೆಯಾಗಿದೆ. ಇದರಲ್ಲಿರುವ ಗಂಧಕದ ಅಂಶವೇ ಈ ಗುಣಕ್ಕೆ ಕಾರಣವಾಗಿದೆ. ಬನ್ನಿ, ಈ ಸರಳ, ಸಮೃದ್ಧ ತರಕಾರಿಯ ಸೇವನೆಯಿಂದ ಲಭಿಸುವ ಇತರ ಪ್ರಯೋಜನಗಳನ್ನು ಅರಿಯೋಣ.

2.​ಕೆಂಪು ರಕ್ತಕಣಗಳನ್ನು ರಕ್ಷಿಸುತ್ತದೆ

ನಮ್ಮ ರಕ್ತದಲ್ಲಿರುವ ಕೆಂಪು ರಕ್ತಕಣಗಳಿಗೆ ಎದುರಾಗುವ ಘಾಸಿಯನ್ನು ನಿಯಂತ್ರಿಸಿ ಕಣಗಳ ನಷ್ಟವಾಗುವಿಕೆಯಿಂದ ತಡೆಯುತ್ತದೆ. ತನ್ಮೂಲಕ ರಕ್ತದ ಆಮ್ಲಜನಕವನ್ನು ಕೊಂಡೊಯ್ಯುವ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ.

3.ಅಧಿಕವಾದ ಕರಗುವ ಮತ್ತು ಕರಗದ ನಾರಿನಂಶ

ಮೂಲಂಗಿಯನ್ನು ನಿತ್ಯವೂ ಸಾಲಾಡ್ ರೂಪದಲ್ಲಿ ನೀವು ಅದನ್ನು ಸೇವಿಸುತ್ತಿದ್ದರೆ, ನಿಮಗೆ ಜೀರ್ಣಕ್ರಿಯೆಯ ಅಥವಾ ಮಲಬದ್ದತೆಯ ತೊಂದರೆ ಎದುರಾಗದು. ಏಕೆಂದರೆ ಇದರಲ್ಲಿ ಸಮೃದ್ದ ಪ್ರಮಾಣದಲ್ಲಿ ಕರಗುವ ಮತ್ತು ಕರಗದ ನಾರಿನಂಶಗಳಿವೆ. ಇವು ಜೀರ್ಣಕ್ರಿಯೆಯನ್ನು ಸುಲಭಗೊಳಿಸುವ ಜೊತೆಗೇ ಪಿತ್ತರಸದ ಉತ್ಪಾದನೆಯನ್ನು ನಿಯಂತಿಸುವ ಮೂಲಕ ಯಕೃತ್ ಮತ್ತು ಪಿತ್ತಕೋಶಗಳನ್ನು ರಕ್ಷಿಸುತ್ತದೆ. ಅಷ್ಟೇ ಅಲ್ಲ, ಈ ನಾರಿನಂಶಗಳು ಜೀರ್ಣಾಂಗದಲ್ಲಿ ಸಾಕಷ್ಟು ನೀರಿನಂಶವನ್ನು ಉಳಿಸಿಕೊಂಡು ಮಲಬದ್ದತೆಯಾಗದಂತೆ ತಡೆಯುತ್ತವೆ.

4​.ಹೃದಯವನ್ನು ರಕ್ಷಿಸುತ್ತದೆ

ಮೂಲಂಗಿಗಳಲ್ಲಿ ಉತ್ತಮ ಪ್ರಮಾಣದ ಆಂಥೋಸೈಯಾನಿನ್ (anthocyanins) ಗಳಿವೆ. ಇವು ಹೃದಯದ ಕಾರ್ಯಕ್ಷಮತೆ ಸರಿಯಾದ ಕ್ರಮದಲ್ಲಿರಲು ನೆರವಾಗುತ್ತವೆ. ತನ್ಮೂಲಕ ಹೃದಯಸಂಬಂಧಿ ಕಾಯಿಲೆಗಳಿಂದ ರಕ್ಷಿಸುತ್ತವೆ. ಇದರಲ್ಲಿರುವ ಅಧಿಕ ಪ್ರಮಾಣದ ವಿಟಮಿನ್ ಸಿ, ಫೋಲಿಕ್ ಆಮ್ಲ ಮತ್ತು ಫ್ಲೇವನಾಯ್ಡುಗಳೂ ಹೃದಯದ ಆರೋಗ್ಯವನ್ನು ವೃದ್ದಿಸುತ್ತವೆ.

5.​ರಕ್ತದೊತ್ತಡವನ್ನು ನಿಯಂತ್ರಿಸುತ್ತದೆ

ಮೂಲಂಗಿ ನಿಮ್ಮ ದೇಹಕ್ಕೆ ಅಗತ್ಯ ಪ್ರಮಾಣದ ಪೊಟ್ಯಾಸಿಯಮ್ ಅನ್ನು ಸಹ ಒದಗಿಸುತ್ತದೆ, ಇದು ನಿಮ್ಮ ರಕ್ತದೊತ್ತಡವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ ಮತ್ತು ನಿಮ್ಮ ರಕ್ತದ ಪರಿಚಲನೆಯನ್ನು ನಿಯಂತ್ರಣದಲ್ಲಿ ಇರಿಸುತ್ತದೆ, ವಿಶೇಷವಾಗಿ ನೀವು ಅಧಿಕ ರಕ್ತದೊತ್ತಡದಿಂದ ಬಳಲುತ್ತಿದ್ದರೆ ಮೂಲಂಗಿ ನಿಮಗೆ ಅಗತ್ಯವಾದ ಆಹಾರವಾಗಿದೆ.. ಆಯುರ್ವೇದದ ಪ್ರಕಾರ, ಮೂಲಂಗಿಯು ರಕ್ತವನ್ನು ತಂಪುಗೊಳಿಸುವ ಪರಿಣಾಮವನ್ನು ಬೀರುತ್ತದೆ.

6.​ರೋಗನಿರೋಧಕ ಶಕ್ತಿಯನ್ನು ಉತ್ತಮಗೊಳಿಸುತ್ತದೆ

ಮೂಲಂಗಿಯಲ್ಲಿ ಅಧಿಕ ಪ್ರಮಾಣದ ವಿಟಮಿನ್ ಸಿ ಇರುವ ಕಾರಣದಿಂದ ಇದು ನೆಗಡಿ ಮತ್ತು ಕೆಮ್ಮು ಎದುರಾಗುವುದನ್ನು ರಕ್ಷಿಸುತ್ತದೆ ಮತ್ತು ನಿಮ್ಮ ದೇಹದ ರೋಗನಿರೋಧಕ ಶಕ್ತಿಯನ್ನು ಉತ್ತಮಗೊಳಿಸುತ್ತದೆ. ಆದರೆ ನೀವು ಇದನ್ನು ನಿಯಮಿತವಾಗಿ ಸೇವಿಸಬೇಕು. ಇದು ಹಾನಿಕಾರಕ ಫ್ರೀ ರ್‍ಯಾಡಿಕಲ್ ಅಂಬ ಕಣಗಳು, ಉರಿಯೂತ ಎದುರಾಗುವಿಕೆ ಮತ್ತು ಆರಂಭಿಕ ವಯಸ್ಸಾಗುವಿಕೆಯನ್ನೂ ನಿಯಂತ್ರಿಸುವ ಮೂಲಕ ಆರೋಗ್ಯವನ್ನು ಕಾಪಾಡುತ್ತದೆ.

7.​ರಕ್ತನಾಳಗಳನ್ನು ಬಲಪಡಿಸುತ್ತದೆ

ಮೂಲಂಗಿಯ ಪ್ರಯೋಜನಗಳಲ್ಲಿಯೇ ಇದು ಮುಖ್ಯವಾಗಿದೆ. ರಕ್ತನಾಳಗಳನ್ನು ಬಲಪಡಿಸುವ ಅಂಗಾಶವಾದ ಕೊಲ್ಯಾಜೆನ್ (collagen) ಉತ್ಪಾದನೆಯಲ್ಲಿ ಮೂಲಂಗಿ ಪ್ರಮುಖ ಪಾತ್ರ ವಹಿಸುತ್ತದೆ, ಇದು ನಮ್ಮ ರಕ್ತನಾಳಗಳನ್ನು ಬಲಪಡಿಸುತದೆ ಮತ್ತು ಅಪಧಮನಿಕಾಠಿಣ್ಯ ಅಥವಾ ರಕ್ತನಾಳಗಳು ಪೆಡಸಾಗುವ ತೊಂದರೆಯ (atherosclerosis) ಸಾಧ್ಯತೆಯನ್ನೂ ಕಡಿಮೆ ಮಾಡುತ್ತದೆ.

8.​ಜೀವ ರಾಸಾಯನಿಕ ಕ್ರಿಯೆಯನ್ನು ಬೆಂಬಲಿಸುತ್ತದೆ

ಈ ತರಕಾರಿಯ ಸೇವನೆಯಿಂದ ಜೀವ ರಾಸಾಯನಿಕ ಕ್ರಿಯೆ ಉತ್ತಮಗೊಂಡು ನಿಮ್ಮ ಜೀರ್ಣಾಂಗ ವ್ಯವಸ್ಥೆಗೆ ಮಾತ್ರವಲ್ಲ, ಆಮ್ಲೀಯತೆ, ಸ್ಥೂಲಕಾಯ, ವಾಯುಪ್ರಕೋಪ ಸಮಸ್ಯೆಗಳು ಮತ್ತು ವಾಕರಿಕೆಗಳನ್ನು ಸರಿಪಡಿಸಲೂ ಸಹ ಸಹಾಯ ಮಾಡುತ್ತದೆ.

9.​ಪೋಷಕಾಂಶಗಳಿಂದ ಸಮೃದ್ಧವಾಗಿದೆ

ಕೆಂಪು ಮೂಲಂಗಿಗಳಲ್ಲಿ ವಿಟಮಿನ್ ಇ, ಎ, ಸಿ, ಬಿ 6, ಮತ್ತು ಕೆ ಸಮೃದ್ಧವಾಗಿವೆ. ಪ್ರತಿಯೊಂದು ಪೋಷಕಾಂಶವೂ ನಮ್ಮ ದೇಹಕ್ಕೆ ಒಂದಲ್ಲಾ ಒಂದು ಬಗೆಯಲ್ಲಿ ಪ್ರಯೋಜನಕಾರಿಯಾಗಿವೆ.

10.​ತ್ವಚೆಯನ್ನೂ ಉತ್ತಮಗೊಳಿಸುತ್ತದೆ

ನೀವು ಪ್ರತಿದಿನ ಮೂಲಂಗಿ ರಸವನ್ನು ಕುಡಿಯುವ ಅಭ್ಯಾಸ ಹೊಂದಿದ್ದರೆ ಇದು ತ್ವಚೆಯ ಆರೋಗ್ಯವನ್ನು ಉತ್ತಮವಾಗಿ ಕಾಪಾಡುತ್ತದೆ ಹಾಗೂ ಅಗತ್ಯ ಪೋಷಕಾಂಶಗಳಾದ ವಿಟಮಿನ್ ಸಿ, ಸತು ಮತ್ತು ರಂಜಕಗಳನ್ನು ಒದಗಿಸುತ್ತದೆ. ಜೊತೆಗೆ ಇದು ಚರ್ಮ ಒಣಗುವಿಕೆ, ಮೊಡವೆ, ಕೀವುಗುಳ್ಳೆಗಳನ್ನು ಮತ್ತು ದದ್ದುಗಳು ಎದುರಾಗದೇ ಇರುವಂತೆ ಕಾಪಾಡುತ್ತದೆ. ನಿಮ್ಮ ಮುಖವನ್ನು ಶುದ್ಧೀಕರಿಸಲು ನೀವು ಮೂಲಂಗಿಯನ್ನು ಅರೆದು ತಯಾರಿಸಿದ ಲೇಪವನ್ನೂ ತ್ವಚೆಗೆ ಹಚ್ಚಿಕೊಳ್ಳಬಹುದು. ಮತ್ತು ನೀವು ಇದನ್ನು ನಿಮ್ಮ ಕೂದಲಿಗೆ ಹಚ್ಚಿದರೆ, ಇದು ತಲೆಹೊಟ್ಟನ್ನು ನಿವಾರಿಸಲು, ಕೂದಲು ಉದುರುವುದನ್ನು ತಡೆಯಲು ನೆರವಾಗುತ್ತದೆ. ಅಷ್ಟೇ ಅಲ್ಲ, ಕೂದಲ ಬುಡಗಳಿಗೂ ಇಳಿದು ಕೂದಲ ಬುಡಗಳನ್ನು ದೃಢಗೊಳಿಸುವ ಮೂಲಕ ಕೂದಲ ಉದುರುವಿಕೆಯನ್ನು ತಡೆಯುತ್ತದೆ.

11.​ನಿರ್ಜಲೀಕರಣದಿಂದ ರಕ್ಷಿಸುತ್ತದೆ

ವಿಶೇಷವಾಗಿ ಬೇಸಿಗೆಯಲ್ಲಿ ತ್ವಚೆಯಿಂದ ಹೆಚ್ಚಿನ ನೀರಿನಂಶ ನಷ್ಟವಾಗುತ್ತಿದ್ದಾಗ, ದೇಹಕ್ಕೆ ಹೆಚ್ಚಿನ ನೀರಿನಂಶ ನೀಡುವ ಆಹಾರಗಳನ್ನು ಹೆಚ್ಚಾಗಿ ಸೇವಿಸುವುದು ಜಾಣತನ. ಮೂಲಂಗಿ ಇಂತಹ ಒಂದು ಆಹಾರವಾಗಿದ್ದು ಇದರಲ್ಲಿರುವ ಸಮೃದ್ಧವಾದ ನೀರಿನಂಶ ದೇಹ ನಿರ್ಜಲೀಕರಣಕ್ಕೆ ಒಳಗಾಗದಂತೆ ತಡೆಯುತ್ತದೆ.

12.​ಕೆಂಪು ಮೂಲಂಗಿ ಪೌಷ್ಟಿಕಾಂಶಗಳ ಮೂಲ

ಕೆಂಪು ಮೂಲಂಗಿಯಲ್ಲಿ ಕಂಡು ಬರುವ ಹೇರಳವಾದ ವಿಟಮಿನ್ ' ಸಿ ', ವಿಟಮಿನ್ ' ಬಿ9 ', ನಾರಿನ ಅಂಶ, ಪೊಟ್ಯಾಶಿಯಂ ಅಂಶ ಮತ್ತು ಮ್ಯಾಗ್ನಿಷಿಯಂ ಅಂಶ ದೇಹದ ರೋಗ ನಿರೋಧಕ ವ್ಯವಸ್ಥೆಯನ್ನು ಸದಾ ಚುರುಕಾಗಿ ಕಾರ್ಯ ನಿರ್ವಹಿಸುವಂತೆ ನೋಡಿಕೊಳ್ಳುವುದು ಮಾತ್ರವಲ್ಲದೆ ನಮ್ಮ ನರ ಮಂಡಲದ ವ್ಯವಸ್ಥೆಯನ್ನು ಅಚ್ಚುಕಟ್ಟಾಗಿ ಕಾಪಾಡುತ್ತದೆ.

ಯಾವುದೇ ಬಗೆಯ ಆಕ್ಸಿಡೇಟಿವ್ ಒತ್ತಡ ಉಂಟಾಗದಂತೆ ನೋಡಿಕೊಂಡು ನಮ್ಮ ದೇಹದಲ್ಲಿನ ಕ್ಯಾನ್ಸರ್ ಜೀವ ಕೋಶಗಳನ್ನು ನಾಶ ಪಡಿಸಿ ಹಲವು ಬಗೆಯ ಕ್ಯಾನ್ಸರ್ ರೋಗಳನ್ನು ನಿವಾರಣೆ ಮಾಡುವ ಅದ್ಭುತ ಶಕ್ತಿ ಪಡೆದಿದೆ.

13.​ಕೆಂಪು ಮೂಲಂಗಿಯಲ್ಲಿ ಸಲ್ಫರ್ ಅಂಶವಿದೆ

ಸಾಧಾರಣವಾಗಿ ನಾವು ಪ್ರತಿ ದಿನ ಸೇವಿಸುವ ಎಲ್ಲಾ ಬಗೆಯ ತರಕಾರಿಗಳಲ್ಲಿ ಸಲ್ಫರ್ ಅಂಶ ಕಂಡು ಬರುವುದಿಲ್ಲ. ಆದರೆ ಮೂಲಂಗಿಗಳಲ್ಲಿ ಸಲ್ಫರ್ ಅಂಶ ಇರುವುದರಿಂದ ನಮ್ಮ ಹೊಟ್ಟೆ ಹಸಿವು ಹೆಚ್ಚಾಗಿ ಸದಾ ತಾಜಾ ಆಹಾರವನ್ನು ಸೇವಿಸಲು ಪ್ರೇರೇಪಿಸುತ್ತದೆ.

ಇದರಿಂದ ನಮ್ಮ ದೇಹದಲ್ಲಿ ಜೀರ್ಣಾಂಗ ವ್ಯವಸ್ಥೆಗೆ ಸಂಬಂಧ ಪಟ್ಟ ಕೆಲವು ಹಾರ್ಮೋನುಗಳು ಬಿಡುಗಡೆಗೊಂಡು ನಾವು ಸೇವಿಸಿದ ಯಾವುದೇ ಆಹಾರ ಸರಿಯಾಗಿ ಜೀರ್ಣವಾಗಿ ನಮಗೆ ತಕ್ಷಣ ಶಕ್ತಿ ಮತ್ತು ಸದೃಡತೆ ಒದಗುತ್ತದೆ

14.​ಜೀರ್ಣ ಪ್ರಕ್ರಿಯೆ ನಿಧಾನಗೊಳ್ಳುತ್ತದೆ

ಕೆಲವೊಮ್ಮೆ ನಾವು ಸೇವಿಸಿದ ಆಹಾರ ಬಹಳ ಬೇಗನೆ ಜೀರ್ಣವಾಗುವ ಪ್ರಕ್ರಿಯೆಯನ್ನು ಮುಗಿಸಿ ಕರುಳಿನ ಭಾಗದಲ್ಲಿ ತಲುಪುತ್ತದೆ.

ಈ ಸಮಯದಲ್ಲಿ ಆಹಾರದಲ್ಲಿನ ಎಲ್ಲಾ ಪೌಷ್ಟಿಕ ಸತ್ವಗಳು ನಮ್ಮ ದೇಹ ಸೇರಲು ಕಷ್ಟವಾಗುತ್ತದೆ. ಇದರಿಂದ ನಾವು ಎಷ್ಟೇ ಬಗೆಯ ಪೌಷ್ಟಿಕ ಸತ್ವಗಳನ್ನು ಒಳಗೊಂಡ ಆಹಾರವನ್ನು ಸೇವಿಸಿದರೂ ಕೂಡ ಅಪೌಷ್ಟಿಕತೆಯ ಸಮಸ್ಯೆ ನಮ್ಮನ್ನು ಕಾಡುತ್ತದೆ.

15.​ಕೆಂಪು ಮೂಲಂಗಿ ಚರ್ಮ ಸ್ನೇಹಿ

ನಾವು ಹೆಚ್ಚು ಹೊತ್ತು ಬಿಸಿಲಿನಲ್ಲಿ ಕಾಲ ಕಳೆದಷ್ಟು ಸೂರ್ಯನ ಅತಿ ನೇರಳೆ ಕಿರಣಗಳಿಂದ ನಮ್ಮ ದೇಹದ ಚರ್ಮದ ಮೇಲೆ ಅಲ್ಲಲ್ಲಿ ಕೆಂಪು ಬಣ್ಣದ ಕಲೆಗಳು ಉಂಟಾಗಿ ಚರ್ಮ ಸುಟ್ಟು ಹೋದಂತಹ ಅನುಭವ ಉಂಟಾಗುತ್ತದೆ.

ಈ ಸಮಯದಲ್ಲಿ ನಾವು ಔಷಧಿ ಅಂಗಡಿಗಳಲ್ಲಿ ಸಿಗುವ ರಾಸಾಯನಿಕ ಭರಿತ ಆಯಿಂಟ್ಮೆಂಟ್ ಗಳನ್ನು ಹಚ್ಚುವುದರಿಂದ ಪರಿಹಾರ ಕಾಣುತ್ತೇವೆ ಎಂದರೆ ಅದು ಕೇವಲ ತಾತ್ಕಾಲಿಕ ಮಾತ್ರ.

ಆದರೆ ನೈಸರ್ಗಿಕವಾಗಿ ನಮಗೆ ನಿಜವಾದ ಆರೋಗ್ಯ ಪ್ರಯೋಜನಗಳು ಸಿಗುವ ಕೆಂಪು ಮೂಲಂಗಿಯಲ್ಲಿ ನಮ್ಮ ಕೋಮಲ ತ್ವಚೆಯ ಸೌಂದರ್ಯವನ್ನು ಹಾಗೂ ಮೃದುತ್ವವನ್ನು ಕಾಪಾಡುವ ಅದ್ಭುತ ಗುಣ ಲಕ್ಷಣಗಳಿವೆ. ಸಾಧ್ಯವಾದಷ್ಟು ಇದರ ಉಪಯೋಗ ಪಡೆದುಕೊಳ್ಳುವುದು ಒಳ್ಳೆಯದು.

16.​ಕೆಂಪು ಮೂಲಂಗಿಯ ದಿನ ನಿತ್ಯದ ಬಳಕೆ ಹೇಗೆ ?

ಕೆಂಪು ಮೂಲಂಗಿಯ ಪ್ರತಿಯೊಂದು ಭಾಗವೂ ಕೂಡ ನಮಗೆ ಉಪಯೋಗವಾಗುತ್ತದೆ ಎಂದು ಯಾವುದೇ ಅನುಮಾನವಿಲ್ಲದೆ ಹೇಳಬಹುದು. ಮೇಲಿನ ಹಲವು ಆರೋಗ್ಯ ಪ್ರಯೋಜನಗಳು

17.ಕೆಂಪು ಮೂಲಂಗಿ ಇಂದ ಲಭ್ಯವಾದರೆ, ಅದರ ಎಲೆಗಳಿಂದ ನಮ್ಮ ದೇಹಕ್ಕೆ ಕಬ್ಬಿಣದ ಅಂಶ ವಿಟಮಿನ್ ಅಂಶಗಳು ಮತ್ತು ಕೆಲವು ಪೌಷ್ಟಿಕ ಸತ್ವಗಳು ಸಿಗುತ್ತವೆ ಎಂದು ಹೇಳಬಹುದು. ನಾವು ತಯಾರುಮಾಡುವ ತರಕಾರಿ ಸಲಾಡ್ ಗಳಲ್ಲಿ ಕೆಂಪು ಮೂಲಂಗಿ ಸೊಪ್ಪನ್ನು ಬಳಕೆ ಮಾಡಿ ಸೇವಿಸಬಹುದು.

(ಸಂಗ್ರಹಿಸಿದ್ದು) 

***


ಬಿಪಿ, ಹೃದಯ ರೋಗದ ಸಮಸ್ಯೆ ಇದ್ದವರು, ಮೂಲಂಗಿ ಜಾಸ್ತಿ ಸೇವಿಸಬೇಕಂತೆ!

🍁🍁🍁🍀🍀🍀🍀🌸🍁🍁🍁

ಬಿಳಿ ಮೂಲಂಗಿಯಲ್ಲಿರುವ ಪೋಷಕಾಂಶಗಳು ಕಣ್ಣಿನ ಆರೋಗ್ಯಕ್ಕೆ ಉತ್ತಮವಾಗಿವೆ. ಚಳಿಗಾಲದ ಬೆಳೆಯಾಗಿರುವ ಮೂಲಂಗಿಯನ್ನು ಸಾಕಷ್ಟು ಸೇವಿಸುವ ಮೂಲಕ ಕಣ್ಣಿನ ಆರೋಗ್ಯ ಉತ್ತಮಗೊಳಿಸಬಹುದು


ಬಿಳಿ ಮೂಲಂಗಿಯನ್ನು ಸಾಮಾನ್ಯವಾಗಿ ಸಾಂಬಾರ್ ಮತ್ತು ಪಲ್ಯ ಮಾಡಲು ಹೆಚ್ಚಾಗಿ ಬಳಸುತ್ತಾರೆ. ಆದರೆ ಇದನ್ನು ಹಸಿಯಾಗಿಯೂ ಸೇವಿಸಬಹುದು. ಈ ಮೂಲಕ ಮೂಲಂಗಿಯಲ್ಲಿರುವ ಅಧಿಕ ಪ್ರಮಾಣದ ಆಂಟಿ ಆಕ್ಸಿಡೆಂಟುಗಳು, ಪೊಟ್ಯಾಶಿಯಂ, ರಂಜಕ, ಮೆಗ್ನೀಶಿಯಂ, ಕ್ಯಾಲ್ಸಿಯಂ, ಕಬ್ಬಿಣ, ಮ್ಯಾಂಗನೀಸ್ ಹಾಗೂ ಕರಗದ ನಾರುಗಳ ಗರಿಷ್ಟ ಪ್ರಯೋಜನವನ್ನು ಪಡೆಯಬಹುದು.


ಚಳಿಗಾಲದಲ್ಲಿ ಕೋಸಿನ ಹಾಗೂ ನೆಲದಡಿಯಲ್ಲಿ ಬೆಳೆಯುವ ಗಡ್ಡೆಗಳು ಹೆಚ್ಚಾಗಿ ಲಭಿಸುತ್ತವೆ. ಕ್ಯಾರೆಟ್, ಎಲೆಕೋಸು, ಬಿಳಿ ಮೂಲಂಗಿ ಹಾಗೂ ಹಸಿಯಾಗಿ ಸೇವಿಸಬಹುದಾದ ಸೊಪ್ಪುಗಳು ಹಾಗೂ ತರಕಾರಿಗಳು ಹೆಚ್ಚಿನ ಪ್ರಮಾಣದಲ್ಲಿ ಲಭಿಸುತ್ತವೆ.


ಲಭ್ಯವಿರುವ ಈ ತರಕಾರಿಗಳನ್ನು ಆದಷ್ಟೂ ಮಟ್ಟಿಗೆ ಆಹಾರದಲ್ಲಿ ಅಳವಡಿಸಿಕೊಂಡು ಇವುಗಳ ಪೋಷಕಾಂಶಗಳ ಪ್ರಯೋಜನ ಪಡೆಯುವುದೇ ಜಾಣತನವಾಗಿದೆ. ಈ ಪಟ್ಟಿಯಲ್ಲಿ ಬಿಳಿ ಮೂಲಂಗಿ ಪ್ರಮುಖ ಸ್ಥಾನ ಪಡೆಯುತ್ತದೆ.


​ಮೂಲಂಗಿ ಸೇವನೆಯ ಪ್ರಯೋಜನಗಳು


ಮೂಲಂಗಿಯ ಸೇವನೆಯಿಂದ ರಕ್ತದ ಒತ್ತಡ ಕಡಿಮೆಯಾಗುವುದನ್ನು ಗಮನಿಸಲಾಗಿದೆ ಹಾಗೂ ಇದೇ ಕಾರಣಕ್ಕೆ ಅಧಿಕ ರಕ್ತದ ಒತ್ತಡವಿರುವ ವ್ಯಕ್ತಿಗಳಿಗೆ ಹೇಳಿ ಮಾಡಿಸಿದಂತಹ ಆಹಾರವಾಗಿದೆ.

ಜೊತೆಗೇ ಇದರ ಪೋಷಕಾಂಶಗಳು ರೋಗ ನಿರೋಧಕ ಶಕ್ತಿಯನ್ನು ವೃದ್ದಿಸಲು ಹಾಗೂ ರಕ್ತನಾಳಗಳನ್ನು ಬಲಗೊಳಿಸಲೂ ನೆರವಾಗುತ್ತವೆ.

ಮೂಲಂಗಿಯನ್ನು ಸಾರು, ಸಾಂಬಾರ್, ಪಲ್ಯ, ಬೇಯಿಸಿ ಪರೋಟ ಮಾಡುವ ಮೂಲಕ ಮೊದಲಾದ ಹಲವು ಬಗೆಯಲ್ಲಿ ಸೇವಿಸಬಹುದಾದರೂ ಹಸಿಯಾಗಿ ತಿನ್ನುವ ಮೂಲಕ ಗರಿಷ್ಟ ಪ್ರಯೋಜನವನ್ನು ಪಡೆಯಬಹುದು. ಬನ್ನಿ, ಮೂಲಂಗಿಯ ಸೇವನೆಯಿಂದ ಲಭಿಸುವ ಪ್ರಯೋಜನಗಳು ಯಾವುವು ಎಂಬುದನ್ನು ನೋಡೋಣ...


​ರಕ್ತದ ಒತ್ತಡವನ್ನು ನಿಯಂತ್ರಣದಲ್ಲಿ ಇರಿಸುತ್ತದೆ


ರಕ್ತದ ಒತ್ತಡ ಕಡಿಮೆಯಾದರೂ ತೊಂದರೆ, ಹೆಚ್ಚಾದರೂ ತೊಂದರೆ. ಬಿಳಿ ಮೂಲಂಗಿಯಲ್ಲಿರುವ ಪೊಟ್ಯಾಶಿಯಂ ಮತ್ತು ಇತರ ಪೋಷಕಾಂಶಗಳು ರಕ್ತದ ಒತ್ತಡವನ್ನು ಆರೋಗ್ಯಕರ ಮಿತಿಯಲ್ಲಿರಿಸಲು ನೆರವಾಗುವ ಕಾರಣದಿಂದಲೇ ರಕ್ತದ ಒತ್ತಡಕ್ಕೆ ಅತ್ಯುತ್ತಮ ಆಹಾರ ಎಂಬ ಅನ್ವರ್ಥನಾಮವನ್ನು ಪಡೆದಿದೆ.

ರೋಗ ನಿರೋಧಕ ಶಕ್ತಿಯನ್ನು ಉತ್ತಮಗೊಳಿಸುತ್ತದೆ: ಬಿಳಿ ಮೂಲಂಗಿಯಲ್ಲಿರುವ ವಿಟಮಿನ್ ಸಿ ರೋಗ ನಿರೋಧಕ ಶಕ್ತಿಯನ್ನು ಬಲಪಡಿಸುವ ಗುಣ ಹೊಂದಿದೆ.

ಈ ಮೂಲಕ ಸಾಮಾನ್ಯ ಶೀತ, ಜ್ವರ, ಕೆಮ್ಮು ಮೊದಲಾದ ವೈರಸ್ಸುಗಳ ಮೂಲಕ ಎದುರಾಗುವ ಸೋಂಕುಗಳು ಎದುರಾಗದಂತೆ ರಕ್ಷಿಸುತ್ತದೆ. ಅಲ್ಲದೇ ಬಾವು ಮತ್ತು ಉರಿಯೂತ ಎದುರಾಗಿದ್ದರೆ ಮೂಲಂಗಿಯ ಸೇವನೆಯಿಂದ ಶೀಘ್ರವೇ ಗುಣವಾಗುತ್ತದೆ.


​ಹೃದಯದ ಆರೋಗ್ಯವನ್ನು ಉತ್ತಮಗೊಳಿಸುತ್ತದೆ


ಮೂಲಂಗಿಯ ಸೇವನೆಯಿಂದ ಹೃದಯದ ಆರೋಗ್ಯವೂ ಉತ್ತಮಗೊಳ್ಳುವುದನ್ನು ಗಮನಿಸಲಾಗಿದೆ. ಇದರಲ್ಲಿರುವ ಆಂಥೋಸೈಯಾನಿನ್ ಎಂಬ ಪೋಷಕಾಂಶಗಳಿಗೆ ಹೃದಯದ ಸ್ನಾಯುಗಳನ್ನು ಬಲಪಡಿಸುವ ಗುಣವಿದೆ.

ನಿತ್ಯವೂ ಮೂಲಂಗಿಯನ್ನು ಸಾಲಾಡ್ ರೂಪದಲ್ಲಿ ಸೇವಿಸುತ್ತಾ ಬರುವ ಮೂಲಕ ಹೃದಯದ ಆರೋಗ್ಯ ಉತ್ತಮವಾಗಿರುತ್ತದೆ. ಮೂಲಂಗಿಯಲ್ಲಿ ಉತ್ತಮ ಪ್ರಮಾಣದ ಫ್ಲೇವನಾಯ್ಡುಗಳು, ಫೋಲಿಕ್ ಆಮ್ಲ ಹಾಗೂ ಪೊಟ್ಯಾಶಿಯಂ ಇವೆ, ಇವು ರಕ್ತದಲ್ಲಿ ಆಮ್ಲಜನಕದ ಮಟ್ಟವನ್ನು ಕಾಯ್ದುಕೊಂಡು ಹೃದಯದ ಆರೋಗ್ಯ ಉತ್ತಮವಾಗಿರಲು ನೆರವಾಗುತ್ತವೆ.


​ರಕ್ತನಾಳಗಳನ್ನು ಬಲಪಡಿಸುತ್ತದೆ


ಮೂಲಂಗಿಯಲ್ಲಿ ಉತ್ತಮ ಪ್ರಮಾಣದ ಕೊಲ್ಯಾಜೆನ್ ಎಂಬ ಪೋಷಕಾಂಶವಿದೆ. ಇದು ರಕ್ತನಾಳಗಳನ್ನು ಬಲಪಡಿಸಲು ನೆರವಗುತ್ತದೆ. ತನ್ಮೂಲಕ ರಕ್ತನಾಳಗಳು ಪೆಡಸಾಗುವ ಅಥೆರೋಸ್ಕ್ಲೆರೋಸಿಸ್ ಎಂಬ ಸ್ಥಿತಿ ಎದುರಾಗುವುದರಿಂದ ರಕ್ಷಿಸುತ್ತದೆ.

ಜೀವ ರಾಸಾಯನಿಕ ಕ್ರಿಯೆಯನ್ನು ಚುರುಕುಗೊಳಿಸುತ್ತದೆ: ಮೂಲಂಗಿಯ ಸೇವನೆಯಿಂದ ಜೀರ್ಣಾಂಗಗಳು ಉತ್ತಮವಾಗಿ ಕಾರ್ಯನಿರ್ವಹಿಸಲು ಸಾಧ್ಯವಾಗುತ್ತದೆ.

ಮೂಲಂಗಿಯನ್ನು ನಿತ್ಯದ ಆಹಾರದಲ್ಲಿ ಸಾಲಾಡ್ ರೂಪದಲ್ಲಿ ಸೇವಿಸುತ್ತಾ ಬರುವ ಮೂಲಕ ಜೀರ್ಣಾಂಗಗಳು ಉತ್ತಮವಾದ ಆರೋಗ್ಯದಲ್ಲಿರುತ್ತವೆ. ಆಮ್ಲೀಯತೆ, ಸ್ಥೂಲಕಾಯ, ಗ್ಯಾಸ್ಟ್ರಿಕ್ ತೊಂದರೆಗಳು, ವಾಕರಿಕೆ ಮೊದಲಾದ ತೊಂದರೆಗಳು ಎದುರಾಗುವ ಸಾಧ್ಯತೆ ಅಪಾರವಾಗಿ ಕಡಿಮೆಯಾಗುತ್ತದೆ.

ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿಗಳು ಮತ್ತು ವಿಧಾನಗಳು ಪೂರಕ ಮಾಹಿತಿಯಷ್ಟೇ ಹೊರತು ಇದನ್ನೇ ಚಿಕಿತ್ಸೆಯ / ಔಷಧಿ / ಆಹಾರಕ್ರಮದ ರೂಪದಲ್ಲಿ ಅನ್ವಯಿಸಿಕೊಳ್ಳುವ ಮುನ್ನ ನಿಮ್ಮ ವೈದ್ಯರ ಸಲಹೆ ಪಡೆಯಿರಿ.

(ಮಾಹಿತಿ ಸಂಗ್ರಹ) 

***

No comments:

Post a Comment