SEARCH HERE

Tuesday 30 November 2021

ಕಾಷ್ಟಮೌನ ತಪಸ್ಸು

ಕಾಷ್ಟಮೌನ....ತಪಸ್ಸು

ಅಂದರೇನು


ಕಾಷ್ಠ = ಕಟ್ಟಿಗೆ

ಇಲ್ಲಿ ಕಾಷ್ಠ ಮೌನ ಅಂತ ಹೇಳಿದ್ದರ ತಾತ್ಪರ್ಯ ಇಷ್ಟೇ

ಕಟ್ಟಿಗೆಯಂತೆ ಜಡವಾಗಿರೋದು

ಇದರರ್ಥ ಲೌಕಿಕ  ಹರಟೆಗಳನ್ನಾಡದೇ ಯಾವುದೇ ಪರಿಸ್ಥಿತಿಯಲ್ಲಿಯೂ ಕೂಡ

ಲೌಕಿಕ ಅರ್ಥಾತ್ ಸಂಸಾರದಲ್ಲಿ ಬರತಕ್ಕಂಥ ಯಾವುದೇ ರೀತಿಯ ವ್ಯವಹಾರಗಳನ್ನೂ ಮಾಡದೇ ಕೇವಲ ಕೇವಲ ಅಲೌಕಿಕವಾಗಿ ಅರ್ಥಾತ್ ಭಗವತ್ಪರ ಚಿಂತನೆ ಅಂದ್ರೆ ಪಾಠ ಪ್ರವಚನ ಅಧ್ಯಯನ ಅಧ್ಯಾಪನ ಇಂಥ ಸಂದರ್ಭದಲ್ಲಿ ಮಾಡುತ್ತ ಕಾಲ ಕಳೆಯೋದನ್ನೇ ಕಾಷ್ಠಮೌನ ಅಂತ ಕರೆಯೋದು

ಕಾಷ್ಠಮೌನವಾಗಿರೋದು ಒಂದು ದೊಡ್ಡ ತಪಸ್ಸೇ ಆಗಿದೆ...

ಉದಾಹರಣೆಗೆ ನಮ್ಮ ಶ್ರೀ ಪಾದಂಗಳವರು ಮಹಿಷಿ ಮತ್ತು ಹೊಳೆನರಸೀಪುರದಲ್ಲಿ ೪೮ ದಿನಗಳಮಟ್ಟಿಗೆ ಕಾಷ್ಠಮೌನದಿಂದ ಇದ್ದರೆಂದು ಕೇಳಿದ ಸ್ಮರಣೆ

ಯರಗೋಳದಲ್ಲಿ ಶ್ರೀ ಸತ್ಯಪ್ರಮೋದ ಶ್ರೀ ಪಾದಂಗಳವರು ಹೀಗೆ ತಪಸ್ಸು ಮಾಡಿದ್ದರೆಂದು ಕೇಳಿದ್ದು

ಒಟ್ಟಾರೆ ಲೌಕಿಕದಿಂದ ಸಂಪೂರ್ಣವಾಗಿ ಹೊರಗಿದ್ದು

ಕೇವಲ ಆಧ್ಯಾತ್ಮಿಕ (ಅಲೌಕಿಕ) ವಾಗಿ ಸಂಕಲ್ಪಪೂರ್ವಕವಾಗಿ ಆ ರೀತಿಯಲ್ಲಿ ಕಾಷ್ಠಮೌನವೆಂಬ ಘೋರವಾದ ಅತ್ಯಂತ ಶ್ರೇಷ್ಠ ತಮವಾದ ತಪಸ್ಸನ್ನು ಆಚರಿಸುವ ಮೂಲಕ ತಮ್ಮ ಆತ್ಮೋದ್ಧಾರವನ್ನು ಉನ್ನತ ಸಾಧನೆಯ ಮೂಲಕ ಮಾಡಿಕೊಳ್ಳುವರಲ್ಲದೇ ಶಿಷ್ಯಂದಿರಿಗೆ ಹೆಚ್ಚಿನ ಪಾಠಗಳನ್ನು ಸತತವಾಗಿ ಹೇಳಿಕೊಡುವ ಮೂಲಕ ಅವರಿಗೆ ಹೆಚ್ಚಿನ ಜ್ಞಾನಾರ್ಜನೆಯಾಗುವಂತೆ ಅನುಗ್ರಹಿಸುತ್ತಾರೆ


ಕಾಷ್ಠಮೌನ ವೆಂಬ ತಪಸ್ಸು ಅತ್ಯಂತ ಶ್ರೇಷ್ಠವಾದುದು ಸಾಧನೆಗೆ ಅತ್ಯಂತ ಪೂರಕವಾದುದು..


ಇನ್ನೊಂದು ವಿಚಾರ ಹಾಗೇ ಸುಮ್ಮನೆ ಹೇಳ್ತಾಯಿದ್ದೀನಿ

ದಂಡವತ್ ಪ್ರಣಾಮಗಳು

ಅಂತ ಹೇಳಿದ್ದನ್ನು ನಾವು ಸಾಮಾನ್ಯವಾಗಿ ಕೇಳಿರ್ತೇವೆ

ಇಲ್ಲಿ ದಂಡವತ್ ಅನ್ನೋದು

ಕಟ್ಟಿಗೆಯಂತೆ ಎಂಬರ್ಥದಲ್ಲಿ

ಅರ್ಥಾತ್ ದಂಡದಂತೆ ಅಂದ್ರೆ ದಂಡ ಯಾವ ರೀತಿಯಲ್ಲಿ ನಿಶ್ಚೇಷ್ಟಿತವಾಗಿ ( ಕೈಕಾಲು ಅಲ್ಲಾಡಿಸದೇ) ಹ್ಯಾಗೆ ಬಿದ್ದಿರ್ತದೆಯೋ 

ಅದೇ ರೀತಿಯಲ್ಲಿ ಸಾಷ್ಟಾಂಗ ಪೂರ್ವಕವಾಗಿ ಮನಸ್ಸು ಶಿರ ಸಹಿತ ದೇಹವನ್ನು ( ಉದ್ದಂಡ)

ನೆಲದ ಮೇಲೆ ಬೀಳಿಸೋದು ಅರ್ಥಾತ್ ನಮಸ್ಕಾರ ಮಾಡೋದು ಎಂಬರ್ಥದಲ್ಲಿ 

ಅರ್ಥಾತ್ ಇನ್ನೂ ಸೂಕ್ಷ್ಮವಾಗಿ ಹೇಳೋದಾದ್ರೇ ಶರಣಾಗತರಾಗಿ 

ನನ್ನದೆಲ್ಲವನ್ನೂ ನಿಮಗೆ ಅರ್ಪಿಸಿದ್ದೀನಿ ಸಮರ್ಪಿಸಿದ್ದೀನಿ

ಅನ್ನೋ ಅರ್ಥದಲ್ಲಿ ....

ದೇಹ ಬುದ್ಧಿ ಮನಸ್ಸುಗಳಿಂದ ಮಾಡುವ‌ ನಮಸ್ಕಾರವೇ ದಂಡವತ್ ಪ್ರಣಾಮ ಎಂಬರ್ಥದಲ್ಲಿ ...


ಯಥಾಮತಿ ಸೇವಾರೂಪದಲ್ಲಿ

ಕೇವಲ ವಾಕ್ ಶುದ್ಧಿಗಾಗಿ ಅತ್ಯಲ್ಪ ಪ್ರಯತ್ನ ಅಷ್ಟೇ...

ತಪ್ಪಿದ್ದಲ್ಲಿ ತಿಳಿದವರು ದಯವಿಟ್ಟು ಮನ್ನಿಸಿ..☺️

 ‌(received in WhatsApp)

***


ಕಾಷ್ಠಮೌನ

ಶ್ರೀ ವಿಜಯಪ್ರಭುಗಳ ವಾಕ್ಯವನ್ನು , ಹರಿದಾಸರು ತೋರಿದ ಮಾರ್ಗದರ್ಶನವನ್ನೂ ನೋಡೋಣ.. 


ಮೌನ ವ್ರತ ಮತ್ತು ಕಾಷ್ಠಮೌನ ವ್ರತ  ಎಂದು ಎರಡು ವಿಧವಾದವು.

ವ್ಯತ್ಯಾಸವಿಷ್ಟೇ, ಕಾಷ್ಠಮೌನ ವ್ರತದಲ್ಲಿ ಇಂಗಿತದಿಂದಲೂ, ಸಂಙ್ಞೆಗಳ ಮೂಲಕವೂ, ಯಾವುದೇ ರೀತಿಯಿಂದಲೂ ತನ್ನ ಅಭಿಪ್ರಾಯಗಳನ್ನು, ಮಾತುಗಳನ್ನು ತಿಳಿಸತಕ್ಕದ್ದಲ್ಲ.  ಕೇವಲ ಶಾಸ್ತ್ರಾಧ್ಯನ, ಪಾಠ ಇತ್ಯಾದಿಗಳು ಮಾತ್ರ ಮಾಡುವುದು ಇರ್ತದ. 

ವೈಯುಕ್ತಿಕ, ಲೌಕಿಕ ಹೀಗೇ ಯಾವುದೂ ಅಂದರೆ ಯಾವುದೂ ಇರಂಗಿಲ್ಲ. ಇದೇ ಕಾಷ್ಠ ಮೌನ ವ್ರತ ಅಂದರೆ...


ಮುಖ್ಯವಾಗಿ  ಮನನ ಮಾಡುವುದು ಮೌನ. ಏನು ಮನನ ಅಂದರೆ -  ತತ್ವಗಳ ಮನನ, ಪರಮಾತ್ಮನ ಸ್ಮರಣೆ, ಧ್ಯಾನ ಮುಂತಾದುಗಳು...

ಮತ್ತೊಂದು ನೀವು ಹೇಳಿದ ಶಬ್ಧ ತಪಸ್ಸು....  ಮೌನ ಮತ್ತು ಕಾಷ್ಠಮೌನವೂ ಒಂದು ತಪಸ್ಸು. 


ತಪಸ್ಸು ಅಂದರೆ ಪರಮಾತ್ಮನ ಕುರಿತು ಧ್ಯಾನ ಮಾಡುವುದು ಅಂತರ್ಥ.... 

ತಪ ಅಂದರೆ- 

ತಪ ಸಂತಾಪೇ, ತಪ ಐಶ್ವರ್ಯೇ, ತಪ ದಾಹೇ, ತಪ ಆಲೋಚನೇ ಹೀಗೇ ನಾನಾರ್ಥಗಳು ಇದ್ದವೆ . 


ದೈಹಿಕವಾಗಿ ದೇಹವನ್ನು ಪರಮಾತ್ಮನ ಮತ್ತು ಭಗವದ್ಭಕ್ತರ  ಒಳಿತಿಗಾಗಿ, ಪ್ರೀತಿಗಾಗಿ ಯಾವುದೇ ಆಮಿಷಗಳಿಲ್ಲದೇ ನಿಯಮದಿಂದ  ದಂಡಿಸಿ ಕರ್ಮಮಾಡುವುದು ದೈಹಿಕವಾದ ತಪಸ್ಸು... 


ಯಾವುದೋ ತಪ್ಪನ್ನು ಮಾಡಿ, ಮನವರಿಕೆಯಾಗಿ ಪ್ರಾಯಶ್ಚಿತ್ತ ಮತ್ತು ಪಶ್ಚಾತ್ತಾಪ ರೂಪದಲ್ಲಿ ದೇಹವನ್ನು ಶಾಸ್ತ್ರಕ್ಕೆ ಅನುಗುಣವಾಗಿ ನಿಯಮನ ಅಥವಾ ದಂಡಿಸುವುದು ತಪಸ್ಸು( ತಪ ಸಂತಾಪೇ, ತಪ ದಾಹೇ)... . 


ಮತ್ತೊಂದು ಸತತವಾಗಿ ಯಾವುದೇ ಕಾರ್ಯ ಮಾಡ್ತಿರಲಿ, ಯಾವುದೇ ಸ್ಥಿತಿಯಲ್ಲಿರಲಿ ಪರಮಾತ್ಮನ, ಶಾಸ್ತ್ರದ, ತತ್ವಗಳನ್ನು ಮನನ ರೂಪದಲ್ಲಿ ಆಲೋಚನೆ ಮಾಡುವುದು ತಪಸ್ಸು. ( ತಪ ಆಲೋಚನೇ). 


ಹೀಗೇ ತಪಸ್ಸು ಅನ್ನೋದು ದೈಹಿಕ, ಮಾನಸಿಕ ಎರಡರಿಂದಲೂ ಆಚರಿಸಬೇಕು. ಇದು ತಪಸ್ಸು ಅನಿಸಿಕೊಳ್ತದೆ.


ನಮ್ಮೆಲ್ಲರಿಗೂ ಪರಮಪೂಜ್ಯ ಗುರುಗಳು, ನಮಗಾಗಿಯೇ ಹುಟ್ಟಿಬಂದ ಶ್ರೀಮದಾನಂದತೀರ್ಥ ಭಗವತ್ಪಾದಾಚಾರ್ಯರು ಸಹ ಬದರೀ ಕ್ಷೇತ್ರದಲ್ಲಿ ಕಾಷ್ಠಮೌನ ವ್ರತದ ಜೊತೆ ಅಷ್ಟೂ ದಿನಗಳು ಉಪವಾಸ ವ್ರತವನ್ನೂ ಆಚರಿಸಿದರು ಎಂದು ಶ್ರೀ ಮಧ್ವವಿಜಯದಲ್ಲಿ ಉಲ್ಲೇಖವಿದೆ. 

ಹದಿನಾಲ್ಕು ಲೋಕಗಳನ್ನು ತಮ್ಮ ಅಂಗೈಯಲ್ಲಿ ಇಟ್ಟುಕೊಂಡಿರುವ ಅಗಾಧವಾದ ಸಾಮರ್ಥ್ಯವುಳ್ಳ, ಜಗತ್ತಿನ ಸಕಲ ಜೀವಚರಾಚರರ( ಗಿಡಮರಬಳ್ಳಿಗಳ, ಪ್ರಾಣಿ ಪಕ್ಷಿ, ಮಾನವರ, ದೇವತೆಗಳ, ಗಂಧರ್ವರ, ಋಷಿಗಳ ಇತ್ಯಾದಿ ಸರ್ವ ಜೀವರ ) ಚೇಷ್ಟಾಪ್ರದರಾದ ಶ್ರೀ ವಾಯುದೇವರು ಇಂದು ಶ್ರೀಮದಾಚಾರ್ಯರಾಗಿ ಅವತರಿಸಿದಾಗ ಕಾಷ್ಠಮೌನ ವ್ರತದಲ್ಲಿ ನಿಶ್ಚೇಷ್ಠಿತರಾಗಿದ್ದಾರೆ ಎಂದು ದೇವತೆಗಳೇ ಆಶ್ಚರ್ಯ ಪಡುವಂತಹಾ ಕಾಷ್ಠಮೌನ ನಮ್ಮ ಶ್ರೀಮದಾಚಾರ್ಯರದ್ದು ಅಲ್ಲವೆ.....


ಅದನ್ನೇ ಮುಂದೆವರೆಸಿಕೊಂಡು ಕಾಷ್ಠಮೌನ ಅನ್ನೋದು ಬಹಳ ಬಹಳ ಕಷ್ಟವಾದದ್ದು. ಈಗಾಗಲೇ ತಿಳಿಸಿದಂತೆ ಶ್ರೀ ಸತ್ಯಪ್ರಮೋದ ತೀರ್ಥರು ಮತ್ತು ಅದಮಾರು ಹಿರಿಯ ಶ್ರೀಗಳು, ಪಲಿಮಾರು ಶ್ರೀಗಳವರು ಇವರು ನಮ್ಮ ಕಣ್ಣ ಮುಂದೆ ಇದ್ದವರು ಕಾಷ್ಠಮೌನ ವ್ರತ ಆಚರಿಸಿದ್ದಾರೆ. ನಾವೆಲ್ಲರೂ ನೋಡಿಯೇ ಇದ್ದೇವೆ.


ರೋಗಾನುಭವವೆಲ್ಲಾ ಉಗ್ರ ತಪವು- ಶ್ರೀವಿಜಯದಾಸಾರ್ಯರು


ರೋಗ ಎಂದರೆ ವ್ಯಾಧಿ, ಜಾಡ್ಯ ಅಂತ ಅರ್ಥ. 

ರೋಗ ಅಥವಾ ವ್ಯಾಧಿಯು ನಾಲ್ಕು‌ವಿಧ.

1.ಆಗಂತುಕ 2. ಶಾರೀರ 3. ಮಾನಸ 4. ಸ್ವಾಭಾವಿಕ


1.ಅಪಘಾತದಿಂದ ಉಂಟಾಗುವ ರೋಗವು ಆಗಂತುಕ.

 

2. ಆಹಾರ ಪಾನೀಯಗಳ ದೋಷದ ಕಾರಣ ವಾತ ಪಿತ್ತ ಕಫ ಶೋಣಿತಾದಿಗಳ ವೈಷಮ್ಯದಿಂದ ಉಂಟಾಗುವುದು ಶಾರೀರ.


3. ಕೋಪ ದುಃಖ ಭಯ ಈರ್ಷ್ಯೆ ಮಾತ್ಸರ್ಯ ಕಾಮ ಲೋಭ ಮುಂತಾದವುಗಳು ಮಾನಸವ್ಯಾಧಿಗಳು.


4. ಹಸಿವು, ಬಾಯಾರಿಕೆ, ಮುಪ್ಪು, ನಿದ್ರೆ ಮೊದಲಾದವುಗಳು ಸ್ವಾಭಾವಿಕವ್ಯಾಧಿಗಳು.


ಇವುಗಳು ಒಟ್ಟಾಗಿ ಕೆಲವು ಜನ್ಮಾಂತರಗಳಿಂದಲೂ ಕೆಲವು ಕರ್ಮಗಳಿಂದಲೂ ಕೆಲವು ಎರಡರಿಂದಲೂ ಉಂಟಾಗುತ್ತವೆ. 


ಜನ್ಮಾಂತರದಿಂದ ಬಂದ ರೋಗವು ಆದಿ ಎನೆಸಿದರೆ ಈ ಜನ್ಮದಿಂದ  ಮಾಡಿದ ಕರ್ಮದಿಂದ  ಬಂದ ರೋಗಕ್ಕೆ ವ್ಯಾಧಿ ಎನ್ನುತ್ತಾರೆ. 


 ವ್ಯಾಧಿಯು ತಪ್ಪಸ್ಸಿನಂತೆ ಎನ್ನುವ ಶೃತಿಯ ವಾಕ್ಯದಂತೆ -  ಶ್ರೀವಿಜಯದಾಸಾರ್ಯರು ರೋಗಾನುಭವವೆಲ್ಲಾ ಉಗ್ರ ತಪವು ಎಂದು ಹೇಳಿದ್ದಾರೆ.‌ ತಪ ಶಬ್ಧದ ಅರ್ಥ ಮತ್ತೊಮ್ಮೆ ನೋಡುವುದಾದರೆ

ತಪ ಅಂದರೆ ಮೊದಲ ಅರ್ಥ ತಪ ಸಂತಾಪೇ ಅಂತ ಒಂದು ಅರ್ಥ. ಅಂದರೆ ತಾಪವನ್ನುಂಟುಮಾಡುವುದು,  ಸುಡುವುದು ಅಂತ.

ಎರಡನೆಯ ಅರ್ಥ ತಪ ಅಂದರೆ ತಪ ಐಶ್ವರ್ಯೇ ಅಂದರೆ ದೇಹವನ್ನು ನಿಯಮದಿಂದ ದಂಡಿಸಿ ತಪಸ್ಸು/ಧ್ಯಾನ  ಮಾಡುವುದು.


ಮೂರನೆಯ  ಅರ್ಥ  ತಪ- ದಾಹೇ ಅಂದರೆ ದಹಿಸು, ಸುಡು. 


ನಾಲ್ಕನೆಯ ಅರ್ಥ ತಪ-ಆಲೋಚನ ಅಂದರೆ ವಿಚಾರ ಮಾಡುವುದು, ಮನನ ಮಾಡುವುದು.


ತಪ ಶಬ್ಧಕ್ಕೆ ಹೀಗೆ  ನಾನಾ ಅರ್ಥಗಳು. 


ಅನುಭವ ಎಂದರೆ ಬುದ್ಧಿ, ಜ್ಞಾನ, ತಿಳುವಳಿಕೆ, ಮನವರಿಕೆಯಾದದ್ದು, ಮನಸ್ಸಿಗೆ ಚೆನ್ನಾಗಿ ತಿಳಿದಿರುವುದು ಹೀಗೆ ಅನೇಕಾರ್ಥಗಳಿವೆ. 


ಕಲಿಯುಗದಲ್ಲಿ ಸಾಧನೆ ಮಾಡುವುದೇ ದೊಡ್ಡ ಕಷ್ಟ. ಅದರಲ್ಲಿಯೂ ತಪಸ್ಸಂತೂ ಅಸಾಧ್ಯವೇ ಸರಿ. ಮನುಷ್ಯನಿಗೆ ರೋಗ ಬಂದಾಗ ಎಲ್ಲೂ ಹೋಗದೇ ಒಂದೇ ಕಡೆ ಇರ್ತ್ತಾನೆ. ಆ ಸಮಯವನ್ನಾದರೂ ತಪಸ್ಸೂ ಎಂದು ಅನುಸಂಧಾನ ಮಾಡು, ಆ ರೀತಿ ಮಂಚದ ಮಲಗಿಯಾದರೂ ಬಿಡದೆ ಪರಮಾತ್ಮನ ಸ್ಮರಣೆ  ಎಂದು ಶ್ರೀವಿಜಯಪ್ರಭುಗಳು ನಮಗೆ ತಿಳಿಸಿಕೊಡ್ತಾರೆ... 


ಯಾವುದೇ ಕಷ್ಟ ಬಂದರೂ ನಾಮ ಸ್ಮರಣೆ ಬಿಡತಕ್ಕದ್ದಲ್ಲ,  ಕಷ್ಟ ಬಂದಾಗ ಇದು ನೀನು ಕೊಟ್ಟಿದ್ದಿ ಸ್ವಾಮೀ ಅಂತ ಸ್ವೀಕಾರ ಮಾಡಿ ಆ ಕಷ್ಟ ಕೊಡುವುದರ ಮೂಲಕ ದೇವರು ನಮ್ಮ ಪಾಪವನ್ನು ಕಡಿಮೆ ಮಾಡ್ತಿದ್ದಾನೆ ಎಂದೇ ತಿಳಿಯಬೇಕು..

ನಾವು ಶ್ರೀ ವಿಜಯರಾಮಚಂದ್ರವಿಠಲರ ಜೀವನ ಚರಿತ್ರೆಯಲ್ಲಿ ಮೈಸೂರಿನ ಒಬ್ಬ ಶ್ರೇಷ್ಠ ಬ್ರಾಹ್ಮಣರ ವಿಷಯ ಕೇಳಿದ್ದೆವೆ. ಆ ಬ್ರಾಹ್ಮಣ ತನಗೆ ಕಾಲಿಗೆ ಹುಳಬಿದ್ದದ್ದನ್ನು ಮೈಸೂರಿನ ಮಹಾರಾಜ ವೈದ್ಯರ ಮೂಲಕ ಸರಿಪಡಿಸಿ , ಕಾಲಿನ ರಣದಿಂದ  ಆ ಹುಳಗಳನ್ನು ತೆಗದರೂ,  ಆ ಬ್ರಾಹ್ಮಣ ಆ ಹುಳಗಳನ್ನ ಮತ್ತೆ ಆ ವ್ರಣದ ಮೇಲೆ ಅಂದರೆ ಆ ಗಾಯದ ಮೇಲೆ ಹಾಕಿಕೊಂಡು ತನ್ನ ಪಾಪವನ್ನು ಕಳೆಯಲಿಕ್ಕೇನೆ ದೇವರು ಈ ಕಷ್ಟ ಕೊಟ್ಟಾರ ಅಂತ ಅದನ್ನ ಸ್ವೀಕಾರ ಮಾಡ್ತಾರೆ... ಮತ್ತೆ ಇಂತಹವುವೇ ಪ್ರಸಂಗಗಳು ಶ್ರೇಷ್ಠ ದಾಸಾರ್ಯರ ಎಲ್ಲರ ಜೀವನದಲ್ಲಿಯೂ ಕಾಣ್ತೇವೆ. ಶ್ರೀ ಪಂಡಿತ ಮಾಧವೇಶಾಚಾರ್ಯರು ಕಾಲುಗಳನ್ನ ಕಳೆದುಕೊಂಡರೂ ಸಹ  ಜೀವನಪರ್ಯಂತ ಹರಿಯ ಸ್ಮರಣೆ ಬಿಡಲಿಲ್ಲ.  ಕಣ್ಣು ಕಾಣದ ಶ್ರೀ ಕಾಶೀದಾಸರೂ ಸಹ ತಮ್ಮ ಜೀವನವನ್ನು ಹರಿದಾಸ ಸಾಹಿತ್ಯದ ಸೇವೆಗೇ ಸಮರ್ಪಣೆ ಮಾಡಿದ್ದಾರೆ.  ಇಂಥಹ ಉದಾಹರಣೆಗಳು ನಮ್ಮ ಹರಿದಾಸ ಶ್ರೇಷ್ಠರ ಜೀವನದಲ್ಲಿ ಅನೇಕ. ಆ ಮಹಾನುಭಾವರ ಹಾದಿಯಲ್ಲಿ ನಡೆದು. ಬಿಡದೆ ಹರಿಯ ನಾಮಸ್ಮರಣೆ ಜೀವದ ಭಕ್ತಿಯಿಂದ ಮಾಡೋಣ...


ನಾದನೀರಾಜನದಿಂ ದಾಸಸುರಭಿ 

***



ಕಾಷ್ಠಮೌನ

ಕಾಷ್ಠ ಮೌನ ಒಂದು ವ್ರತ. ಇದನ್ನು ಮಧ್ವಾಚಾರ್ಯರು ಅನಂತ ಮಠ ದಲ್ಲಿ 48 ದಿನ ಮಾಡಿದರು. ಕೊನೆಯ ದಿನ ರಾತ್ರಿ ಶ್ರೀ ವೇದವ್ಯಾಸ ದೇವರು ಬಂದು ಆಚಾರ್ಯರನ್ನು ದೊಡ್ಡ ಬದರಿಗೆ ಬರಲು ಆಜ್ಞೆ ಮಾಡುತ್ತಾರೆ. ಮರು ದಿನ ಆಚಾರ್ಯರು ತಮ್ಮ ಅನುಯಾಯಿಗಳಿಗೆ ಹಿತೋಪದೇಶ ಮಾಡಲು ಬದರಿ ಕ್ಷೇತ್ರದ ಮಹಿಮೆ ಈ ಕೆಳಗಿನ ಶ್ಲೋಕ ರಚಿಸಿ ತಿಳಿಸಿದ್ದಾರೆ

"ನೇದೃಶಂ ಸ್ಥಲಮಲಂ ಶಮಲಘ್ನಂ 

ನಾಶ್ಯ ತೀರ್ಥ ಸಲಿಲಸ್ಶ ಸಮಂ ವಾಃ

ನಾಸ್ತಿ ವಿಷ್ಣು ಸದೃಶಂ ನನು ದೈವಂ

ನಾಸ್ಮದುಕ್ತಿ ಸದೃಶಂ ಹಿತ ರೂಪಮ್ "


ಈ ಶ್ಲೋಕದ ಅರ್ಥ ಹೀಗಿದೆ:

ಚೆನ್ನಾಗಿ ಪಾಪವನ್ನು ನಾಶ ಮಾಡತಕ್ಕ ಈ ಬದರೀಕ್ಷೇತ್ರಕ್ಕೆ 

ಸಮಾನವಾದ ಮತ್ತೊಂದು ಪುಣ್ಯ ಸ್ಥಳವಿಲ್ಲ. ಈ ಭಾಗೀರಥೀ ತೀರ್ಥರೂಪ ಜಲಕ್ಕೆ ಸಮಾನವಾದ ಬೇರೆ ಜಲವಿಲ್ಲ."

ಈ ಉಲ್ಲೇಖ ಸುಮಧ್ವವಿಜಯದ ಆರನೇ ಸರ್ಗದಲ್ಲಿ ಹೇಳಲಾಗಿದೆ.



ಹರೇ ಶ್ರೀನಿವಾಸ

ಕಾಷ್ಟ ಮೌನದ ಬಗ್ಗೆ ಈಗಾಗಲೇ ಅದ್ಭುತ ಅಪೂರ್ವವಾದ ವಿವರಣೆ ಬಂದಿವೆ..

ಇದರ ಬಗ್ಗೆ ಮೌನ ಮಾಡದೆ ತುಸು ತೊದಲು ನುಡಿ ಆದರೂ ಆಗಲಿ ಅಂತ ಪ್ರಯತ್ನ..


ಶ್ರೀಮದಾನಂದತೀರ್ಥಭಗವತ್ಪಾದಾಚಾರ್ಯರು ಅನಂತಮಠ ಅಂದರೆ ಬದರಿ ನಾರಾಯಣ ಸನ್ನಿಧಾನದಲ್ಲಿ ಆಚರಿಸಿ ತೋರಿಸಿದ 48 ದಿನಗಳ ಕಾಷ್ಟ ಮೌನ ಹಾಗೂ ಉಪವಾಸ.

ನಿತ್ಯತುಷ್ಟ ಹರಿತೋಷವಿಶೇಷಂ ಚಿಂತಯನ್


ಪರಮ ಪ್ರಸನ್ನ ಆಗಿರುವ ಶ್ರೀ ಹರಿ ಮತ್ತಷ್ಟು ಒಲಿಯಲಿ ಅಂತ..


48 ದಿನಗಳ ಉಪವಾಸ ಸೇರಿ ಕಾಷ್ಟ ಮೌನ ನಂತರ ಶ್ರೀ ವೇದವ್ಯಾಸ ದೇವರು ಅನಂತಪ್ರಕಾಶದಿಂದ ಕಂಗೊಳಿಸುತ್ತ ದರ್ಶನ ಕೊಟ್ಟು ತಮ್ಮ ಆಶ್ರಮಕ್ಕೆ ಬರಲು ಹೇಳುತ್ತಾರೆ.. ಅಲ್ಲಿಯವರಿಗೆ ಪ್ರಕಾಶ ಮಾತ್ರ ಕಾಣಿಸ್ತದೆ..


ಮೌನವ್ರತ ದಲ್ಲಿ..

ವಾಚಿಕ.. ಇಂದ್ರಿಯ ಕಾಷ್ಟ ಸುಷುಪ್ತ ಅಂತ 4 ವಿಧ

ಯಾವಾಗಲೂ ಮಾತು ಮಾತು ಮಾತುಗಳ ಮಧ್ಯೆ ಬದುಕುವ ನಾವು ಮೌನದ ಮಹತ್ವ ಅರಿಯಬೇಕು.. ಯಾವಾಗಲೂ ತಿಂಡಿ ಖಾದ್ಯ ಬಯಸುವ ನಾವು.. ಬಾಯಿಗೆ ತಿನ್ನದಿರುವ .. ಮಾತನಾಡದಿರುವ ವ್ರತ ಬಗ್ಗೆ ತಿಳಿಯಲು ಪ್ರಯತ್ನ ಮಾಡಬೇಕು..


ಕನಿಷ್ಠ ಊಟದ ಸಮಯ ಮಾತನಾಡಬಾರದು ಸ್ನಾನದ ಸಮಯ ಮಾತನಾಡಬಾರದು.. ಸಂಧ್ಯಾ ಪೂಜಾ ಸಮಯ ಮಾತನಾಡಬಾರದು.. ಇದು ಪ್ರಾಥಮಿಕ ಮೌನವ್ರತ


ಪ್ರಸ್ತುತ ಕಾಷ್ಟ ಮೌನ..

ದೇಹವನ್ನು ಕಟ್ಟಿಗೆ ಹಾಗೆ.. ನಿರ್ವಿಕಾರ ಚಿತ್ತವಾಗಿ ಇಟ್ಟುಕೊಂಡು..

ಜ್ವರತಾಪ ಗಮನಿಸದೆ.. ಕರ್ಮೇಂದ್ರಿಯ ನಿಯಂತ್ರಣ..

ಜ್ಞಾನೇಂದ್ರಿಯ ಉದ್ದೀಪನದಿಂದ ಭಗವಂತನಲ್ಲಿ ಮನಸ್ಸನ್ನು ಏಕತ್ರ ಗೊಳಿಸಬೇಕು.

ಯಥಾಮತಿ ಪ್ರಯತ್ನ

🙇🏻‍♀🙏🙇🏻‍♀🙏



 ಮೌನ ವ್ರತ ಮಾಡಬೇಕು ಅನ್ನೋದು ವೇದೋಕ್ತವಾದುದು

ಯಾವ ಯಾವ ಸಂದರ್ಭಗಳಲ್ಲಿ ಅನ್ನೋದು ಇನ್ನೂ ವಿಶೇಷವಾದುದು ಅದರಲ್ಲಿಯೂ ಯಾಕೆ ಅಂತ ಅದರ ಉದ್ದೇಶ ತಿಳಿದು ಮಾಹಾತ್ಮ್ಯ ಜ್ಞಾನಪೂರ್ವಕವಾಗಿ ಶ್ರದ್ಧಾಭಕ್ತಿಯಿಂದ ಭಗವಂತನ ಪ್ರೇರಣೆ ಪ್ರೀತಿಗಾಗಿ ಎಂದು ಅನುಸಂಧಾನದಿಂದ ಅನುಷ್ಠಾನಿಸಿ ಮಾಡಿದ ಪ್ರತಿಯೊಂದು ಕರ್ಮವನ್ನೂ ಭಗವಂತನಿಗೆ ಸಮರ್ಪಿಸೋದೇನಿದೆ ಅದೇ ನಿಜವಾದ ಅರ್ಥದಲ್ಲಿ

 ಮೌನ ವ್ರತ ಅಂತ ಕರೆಸಿಕೊಳ್ತದೆ

ಮೌನ ಇದರರ್ಥ ಕೇವಲ ಬಾಯಿಮುಚ್ಚಿಕೊಂಡಿರುವುದು ಎಂಬರ್ಥದಲ್ಲಿ ಸರ್ವಥಾ ಸರ್ವದಾ ಶಾಸ್ತ್ರ ಹೇಳಿಲ್ಲ

ಯಾವುದೇ ಕರ್ಮಗಳನ್ನು ಮಾಡುವಾಗಲೂ ಕೇವಲ ಕೇವಲ ಭಗವತ್ಪರವಾದ ಚಿಂತನೆಯೇ ನಡೆಯಬೇಕೆಂಬುದು ಮೂಲ ಉದ್ದೇಶ ಮಹತ್ವಪೂರ್ಣವಾದುದು

ಸರ್ವ ಶಬ್ದವಾಚ್ಯನಾದ ಭಗವಂತನಲ್ಲಿ ಸಮನ್ವಯವಾಗಬೇಕೆಂಬುದರಲ್ಲಿ ಮುಖ್ಯ ತಾತ್ಪರ್ಯ

ಇದರಲ್ಲಿ ಲೌಕಿಕ ಹಾಳುಹರಟೆಗಳು ಕೆಲಸಕ್ಕೆ ಬಾರದ್ದು ಸರ್ವಥಾ ಸಲ್ಲದು ಎಂಬರ್ಥದಲ್ಲಿ ಯತಿವರೇಣ್ಯರೂ ದಾಸವರೇಣ್ಯರೂ ಶಾಸ್ತ್ರಗ್ರಂಥಗಳ ಮೂಲಕ ಮತ್ತು ಪದ

ಪದ್ಯಸುಳಾದಿಗಳ ದ್ವಾರಾ ತಿಳಿಸಿಕೊಟ್ಟು ಮಹದುಪಕಾರ ಮಾಡಿದ್ದಾರೆ 


ಸ್ನಾನಮಾಡುವಾಗ ಮೌನ ಅರ್ಥಾತ್ ಮಾತನಾಡಬಾರದು

ಎಂದು ಶಾಸ್ತ್ರಹೇಳ್ತದೆ 

ಇದರರ್ಥ  ಲೌಕಿಕ ಹರಟೆ ಸಿನೇಮಾ ಪದ ಅಂಥ ಇಂಥ ಹಾಳು ಮಾತುಗಳು ಸರ್ವಥಾ ಸಲ್ಲದು ಅಂತ ಅರ್ಥ ಅಷ್ಟೇ

ಆದರೇ ಸಂಕಲ್ಪಪೂರ್ವಕ ಅರ್ಥಾನುಸಂಧಾನದಿಂದ ಗಂಗಾ ಭಾಗೀರಥಿ ಸ್ತೋತ್ರ 

ಹರಿಕಥಾಮೃತಸಾರೋಕ್ತ ಸ್ನಾನಕ್ಕೆ ಸಂಬಂಧಿಸಿದ ಪದ್ಯಗಳನ್ನು ಅವಶ್ಯವಾಗಿ ಹೇಳಿ ಸ್ನಾನ ಮಾಡೋದರಿಂದ ವಿಶೇಷ ಪುಣ್ಯಪ್ರಾಪ್ತಿಯಿದೆ

ಅಂದ್ರೆ ಲೌಕಿಕ ವಿಷಯಗಳ ಅರ್ಥದಲ್ಲಿ ಮೌನ 

ಅಲೌಕಿಕವಾಗಿ ಸ್ತೋತ್ರಮಂತ್ರ ಅರ್ಥಾನುಸಂಧಾನ ಇವೆಲ್ಲವನ್ನೂ ಮಾಡಿ ಸ್ನಾನ ಎಂಬ ಯಜ್ಞ ವನ್ನು ಭಗವಂತನಿಗೆ ಸಮರ್ಪಣೆ ಮಾಡಬೇಕೆಂಬುದರಲ್ಲಿ ಮುಖ್ಯ ತಾತ್ಪರ್ಯ

ಸ್ನಾನ ಮಾಡುವಾಗ ಲೌಕಿಕ ಹರಟೆಗಳನ್ನಾಡಿದರೇ ...

ದೇಹದ ಕಾಂತಿ ವರ್ಚಸ್ಸು ಓಜಸ್ಸುಗಳನ್ನು ವರುಣದೇವರು

ಅವರಂತರ್ಗತ ವಾಯುದೇವರು ಇನ್ನೂ ಮುಖ್ಯವಾಗಿ ಹೇಳಬೇಕೆಂದರೆ ಇವರೆಲ್ಲರ ಅಂತರ್ಗತನಾದ ಮತ್ಸ್ಯರೂಪಿ ಪರಮಾತ್ಮನು ಹರಣ ಮಾಡಿ ಕಳೆಹೀನ ಕಾಂತಿಹೀನನನ್ನಾಗಿ

ಮಾಡಿಬಿಡ್ತಾನೆ ಎಂಬುದು ಮುಖ್ಯ ಆಂತರ್ಯ ...


ಅದೇ ರೀತಿಯಲ್ಲಿ ಊಟ

ಎಂಬ ಯಜ್ಞ ಮಾಡುವಾಗಲೂ ಇದೇ ರೀತಿಯಲ್ಲಿ  ಇದೊಂದು ವೈಶ್ವಾನರ ಯಜ್ಞ ಎಂದು 

ಸಂಕಲ್ಪಿಸಿ ಅನುಸಂಧಾನದಿಂದ 

ಯಜ್ಞವನ್ನು ( ಊಟವನ್ನು )

 ಪೂರೈಸಿ ಭಗವಂತನಿಗೆ ಸಮರ್ಪಿಸಬೇಕು 

ಕವಳೆ ಕವಳೆ ಗೋವಿಂದನ ಸ್ಮರಣೆ ಮಾಡಬೇಕೆಂಬುದರಲ್ಲಿ ಮುಖ್ಯ ತಥ್ಯವಿದೆ

ಗೋವಿಂದ ನ ಸ್ಮರಣೆಗೆ 

ಗೋವುಗಳನ್ನು ಪಾಲನ ಮಾಡಿ ಅವುಗಳಿಗೆ ಸಂಬಂಧಿಸಿದ ಹಾಲು ಮೊಸರು ಬೆಣ್ಣೆ ತುಪ್ಪ ಮೊದಲಾದ ಪದಾರ್ಥಗಳ ಸೇವನೆ ಮಾಡುವಾಗ ಗೋಪಾಲ( ಗೋವುಗಳ ಪಾಲನೆ) ಮಾಡತಕ್ಕಂಥ ಗೋವಿಂದನ ಸ್ಮರಣೆ ಕಡ್ಡಾಯವಾಗಿ ಮಾಡಲೇಬೇಕು


ಇನ್ನೊಂದು ಮುಖ್ಯವಾಗಿ ಸಾಮಾನ್ಯವಾಗಿ ಹೇಳ್ತಾಯಿರೋದನ್ನು ಕೇಳಿದ್ದೇವೆ

ಭೋಜನ ಕಾಲೇ ಸೀತಾಕಾಂತ ಸ್ಮರಣೆ ಜೈ ಜೈ ರಾಮ

ಸೀತಾಕಾಂತ ಅರ್ಥಾತ್ ಶ್ರೀರಾಮಚಂದ್ರದೇವರ ಸ್ಮರಣೆಯನ್ನೂ ವಿಶೇಷವಾಗಿ ಕಡ್ಡಾಯವಾಗಿ ಮಾಡಲೇಬೇಕು

ಅಯೋಧ್ಯೆಯಿಂದ ಶ್ರೀ ರಾಮಚಂದ್ರದೇವರು ಇನ್ನೇನು

ತಮ್ಮ ಅವತಾರಕಾಲವನ್ನು ಸಮಾಪ್ತಿ ಮಾಡುವ ಕೆಲವೇ ದಿನಗಳ ಪೂರ್ವದಲ್ಲಿ ದೂರ್ವಸ ಋಷಿಗಳು ಅಯೋಧ್ಯೆಗೆ ಬಂದು

ರಾಮದೇವರಲ್ಲಿ ಹಸಿವೆಯಾಗಿದೆ ಊಟಕ್ಕೆ ಬಡಿಸು ಎಂದು ಕೇಳಿ

ಅಡಿಗೆ ಮೊದಲೇ ಮಾಡಿಟ್ಟದ್ದು

ಹಾಕುವದಾದರೇ ಬೇಡವೆಂದೂ

ಇನ್ನು ಮೇಲೆ ಅಡಿಗೆಮಾಡಿ ಹಾಕ್ತೀನಿ ಅನ್ನುವದಾಗಿದ್ದರೂ ಬೇಡವೆಂದೂ ಹೇಳಿದಾಗ

ಶ್ರೀ ರಾಮಚಂದ್ರ ದೇವರು

ಅವರನ್ನು ಎಲೆಯ ಮುಂದೆ ಕೂರಿಸಿ ತಮ್ಮ ಬಲ ಹಸ್ತವನ್ನು

ಅವರ ಎಲೆಯ ಮುಂದೆ ಚಾಚಿ

ಖಾದ್ಯ ಭಕ್ಷ್ಯ ಲೇಹ್ಯ ಪೇಯ

ಎಲ್ಲವನ್ನೂ ಸೃಷ್ಟಿಸಿ ಈಗ ಸಾವಧಾನವಾಗಿ ಊಟ ಮಾಡಿ ಎಂದು ಕೃಪಾದೃಷ್ಟಿಯಿಂದ ನೋಡಿ ಅನುಗ್ರಹಿಸಿದ

ಅಚಿಂತ್ಯಾದ್ಭುತ ಶಕ್ತಿಯುಳ್ಳ ಭಗವಂತನಿಗೆ ಇದ್ಯಾವುದೂ ಆಶ್ಚರ್ಯವಲ್ಲ

ಸಂದರ್ಭವನ್ನು ಸ್ಮರಣಿಸಿ ನಾವು ಕೂಡ ಊಟ ಎಂಬ ಯಜ್ಞ ಅರ್ಥಾತ್ ವೈಶ್ವಾನರ ಯಜ್ಞ

ವನ್ನೂ ಹೀಗೆ ಅನುಸಂಧಾನಿಸಿ ಸಮರ್ಪಿಸಬೇಕೆಂಬುದರಲ್ಲಿ 

ಮುಖ್ಯ ತಾತ್ಪರ್ಯ

ದೂರ್ವಾಸರು ಕೊಟ್ಟ ಅದ್ಭುತ ಸಂದೇಶ ಶ್ರೀ ರಾಮಚಂದ್ರನ ಪ್ರೀತ್ಯರ್ಥವಾಗಿ ಎಂಬುದು ಮುಖ್ಯ ಆಂತರ್ಯ ಅಷ್ಟೇ...

ಊಟ ಮಾಡುವಾಗ ಮಾತನಾಡಿದರೇ ಯಮಧರ್ಮ ದೇವರು ಅಂತರ್ಗತ ಮುಖ್ಯವಾಗಿ ರಾಮಚಂದ್ರದೇವರೇ ಆಯುಷ್ಯವನ್ನು ಹರಣ ಮಾಡ್ತಾರೆ


ಇನ್ನು ಯಾಗ ಯಜ್ಞ ನಡೆದ ಕಾಲಕ್ಕೂ ಕಡ್ಡಾಯವಾಗಿ ಮಾತನಾಡಲೇಬಾರದು ಎಂದು ಶಾಸ್ತ್ರ ವಿಧಿಸುತ್ತದೆ 

ಯಾಗ ಯಜ್ಞ ಎಂಬೋದು 

ಅಗ್ನಿದೇವರ ದ್ವಾರಾ ಇಂದ್ರದೇವರಿಗೆ ಮತ್ತು

ಉಳಿದೆಲ್ಲ 

ದೇವತೆಗಳಿಗೆ ವಾಯುದೇವರಿಗೆ ಅಂತರ್ಗತ ಮುಖ್ಯವಾಗಿ ಭಗವಂತನಿಗೆ ಪ್ರೀತಿಯಾಗಲಿ

ಎಂಬ ಉದ್ದೇಶದಿಂದ ಹವಿಸ್ಸುಗಳನ್ನು ಹಾಕುವ ಮೂಲಕ ಭಗವಂತನಿಗೆ ಸಮರ್ಪಣೆ ಮಾಡುವ ಒಂದು ಮುಖ್ಯವಾದ ಪ್ರಕ್ರಿಯೆ

ಇದರಿಂದ ಸಮೃದ್ಧಿಯಾದ ಮಳೆ 

ಮಳೆಯಿಂದ ಬೆಳೆ 

ಬೆಳೆಯಿಂದ ಜೀವರ ಸಂತಾನಾಭಿವೃದ್ಧಿಗೆ ಕಾರಣವಾಗಿ

   ಆರೋಗ್ಯವೂ ವೃದ್ಧಿಯಾಗುವುದರಲ್ಲಿ ಸಂದೇಹವಿಲ್ಲ


ಸಂಪತ್ತು ಅಭಿವೃದ್ಧಿಗಾಗಿ ಭಗವಂತನನ್ನು ಉದ್ದೇಶಿಸಿ ಮಾಡುವ ಯಾಗ ಯಜ್ಞಗಳಲ್ಲಿ

ಹಾಳುಹರಟೆಯಾಡುವುದರಿಂದ

ಇಂದ್ರದೇವರು ಅಂತರ್ಗತ ವಾಯುದೇವರು ಅಂತರ್ಗತ ಮುಖ್ಯವಾಗಿ ಯಜ್ಞನಾಮಕ ಭಗವಂತನು ಅಸಂತುಷ್ಟನಾಗಿ

ಸಂಪತ್ತನ್ನು ಹರಣ ಮಾಡುವನು

ಸಂಪತ್ತಿಗಾಗಿ ಮಾಡುವ ಯಜ್ಞವನ್ನು ವಿಧ್ಯುಕ್ತವಾಗಿ ಮಾಡದಿದ್ದರೇ ಇರುವ ಸಂಪತ್ತನ್ನೂ ಕೂಡ ಹರಣ ಮಾಡ್ತಾನೆ ಅಷ್ಟೇ

ಕಾರಣ ಕೇವಲ ಭಗವಂತನ ಪ್ರೇರಣೆ ಪ್ರೀತ್ಯರ್ಥವಾಗಿ ವಿಧ್ಯು‌ಕ್ತವಾಗಿ ಮಾಡಿದ ಯಜ್ಞವು ಸಫಲವಾಗಿ ಪ್ರಸಾದ ಅರ್ಥಾತ್ ಅನುಗ್ರಹ ಪ್ರಾಪ್ತಿಯಾಗಬೇಕಾದರೇ ಯಜ್ಞ ನಡೆದ ಸಂದರ್ಭದಲ್ಲಿ ಮಾತನಾಡಲೇ ಬಾರದು

ಭಗವತ್ಪರವಾದ ವೇದೋಕ್ತವಾದ ಮಂತ್ರ ಸ್ತೋತ್ರ

ಗಳ ಶ್ರವಣವನ್ನು ಕಡ್ಡಾಯವಾಗಿ ಮಾಡಲೇಬೇಕು


ಒಟ್ಟಾರೆ ಪ್ರಯತ್ನಪೂರ್ವಕವಾಗಿಯಾದರೂ ಯಥಾರ್ಥವಾದದ್ದನ್ನು ಅನುಸಂಧಾನಿಸಿ ಸಾಧ್ಯವಾದಷ್ಟು ಭಗವಂತನ ಅನುಗ್ರಹಕ್ಕೆ ಪಾತ್ರರಾಗಲು ಪ್ರಯತ್ನಿಸಿ ಸಾಧನ ಶರೀರವನ್ನು ಸಾರ್ಥಕಗೊಳಿಸುವತ್ತ ನಮ್ಮ ಗುರಿ ಧ್ಯೇಯ ವಾಗಬೇಕೆಂಬುದರಲ್ಲಿ ಮುಖ್ಯ ತಥ್ಯವಿದೆ 


ತಪ್ಪುಗಳನ್ನು ದಯವಿಟ್ಟು ಮನ್ನಿಸಿ ಯಥಾರ್ಥವಾದದ್ದನ್ನು

 ಮಾತ್ರ ಸ್ವೀಕರಿಸಿ...☺️

ನಂದೇನದೋ ಸ್ವಾಮಿ ನಿಂದೇ ಇದೆಲ್ಲವೂ

🙏🙇‍♀️ ಶ್ರೀನಿವಾಸ ದಯಾನಿಧೇ

***

No comments:

Post a Comment