🌷ಮನುಸ್ಮೃತಿ ಅಧ್ಯಾಯ-2🌷
ಗುರು ಸನ್ನಿಧಿಯಲ್ಲಿ ಶಿಷ್ಯನು ಹೇಗಿರಬೇಕೆಂಬುದನ್ನು ತಿಳಿಸುತ್ತಾ ---
ಚೋದಿತೋ ಗುರುಣಾ ನಿತ್ಯಮಪ್ರಚೋದಿತ ಏವ ವಾ|
ಕುರ್ಯಾದಧ್ಯಯನೇ ಯತ್ನಮಾಚಾರ್ಯಸ್ಯ ಹಿತೇಷು ಚ ||191||
----ಗುರುಕುಲದಲ್ಲಿದ್ದಮೇಲೆ ಗುರುಗಳು "ಮಾಡು" ಎಂದು ಹೇಳಿದರೂ ಸರಿ , ಹೇಳದಿದ್ದರೂ ಸರಿ ನಿತ್ಯವೂ ತನ್ನ ಅಧ್ಯಯನದಲ್ಲಿ ತೊಡಗುತ್ತಾ ಅವರಿಗೆ ಹಿತಕರವಾದ ಕಾರ್ಯವನ್ನೇ ಮಾಡಬೇಕು.
ಶರೀರಂ ಚೈವ ವಾಚಂ ಚ ಬುದ್ಧೀಂದ್ರಿಯಮನಾಂಸಿ ಚ|
ನಿಯಮ್ಯ ಪ್ರಾಂಜಲಿಸ್ತಿಷ್ಠೇದ್ವೀಕ್ಷಮಾಣೋ ಗುರೋರ್ಮುಖಮ್||192||
------ ಪಾಠದ ಸಮಯದಲ್ಲಿ ಶಿಷ್ಯನು ಗುರುಸನ್ನಿಧಿಯಲ್ಲಿ ನಿಂತಕೊಂಡೇ ತನ್ನ ದೇಹ , ಮನಸ್ಸು , ಬುದ್ಧಿ , ವಾಣಿ ಹಾಗೂ ಇಂದ್ರಿಯಗಳನ್ನು ನಿಯಂತ್ರಿಸಿಕೊಂಡು ಗುರುಗಳ ಮುಖವನ್ನೇ ವೀಕ್ಷಿಸುತ್ತಿರಬೇಕು.
ನಿತ್ಯಮುದ್ಧೃತಪಾಣಿಃ ಸ್ಯಾತ್ಸಾಧ್ವಾಚಾರಃ ಸುಸಂಯತಃ|
ಆಸಾತಾಮಿತಿ ಚೋಕ್ತಃ ಸನ್ನಾಸೀತಾಭಿಮುಖಂ ಗುರೋಃ||193||
---- ಉತ್ತರೀಯದಿಂದ ತನ್ನ ತೋಳನ್ನೆತ್ತಿಕೊಂಡು ಶಿಷ್ಟಾಚಾರವನ್ನು ಪಾಲಿಸುತ್ತಾ ಸದಾಚಾರ ಯುಕ್ತದಿಂದ ನಿಂತುಕೊಂಡವನು ಯಾವಾಗ ಗುರುಗಳು "ಕುಳಿತುಕೋ" ಎಂದು ಹೇಳಿದಾಗಲೇ ಆ ಗುರುಗಳ ಸಮ್ಮುಖದಲ್ಲಿ ಕುಳಿತುಕೊಳ್ಳಬೇಕು ಎಂಬುದಾಗಿ.
***
ಹೀನಾನ್ನವಸ್ತ್ರ ವೇಷಃ ಸ್ಯಾತ್ಸರ್ವದಾ ಗುರುಸನ್ನಿಧೌ|
ಉತ್ತಿಷ್ಠೇತ್ಪ್ರಥಮಂ ಚಾಸ್ಯ ಚರಮಂ ಚೈವ ಸಂವಿಶೇತ್||194||
---- ಯಾವಾಗಲೂ ಗುರುಗಳ ಸನ್ನಿಧಿಯಲ್ಲಿ ಶಿಷ್ಯನ ಅನ್ನ-ವಸ್ತ್ರ ಮತ್ತು ಅಲಂಕಾರಗಳು ಆ ಗುರುವಿಗಿಂತ ಕಡಿಮೆ ದರ್ಜೆಯದಾಗಿರಬೇಕು. ಅಲ್ಲದೇ ಪ್ರಾತಃಕಾಲ ಗುರುವಿಗಿಂತ ಬೇಗ ಏಳಬೇಕು ಮತ್ತು ರಾತ್ರಿ ಗುರುಗಳು ಮಲಗಿದ ನಂತರವೇ ಮಲಗಬೇಕು ಎಂಬುದಾಗಿ.
**
ಶಿಷ್ಯನಾದವನು ಗುರುಗಳೊಂದಿಗೆ ಹೇಗೆ ವಿನಮ್ರವಾಗಿ ವರ್ತಿಸಬೇಕೆಂಬುದನ್ನು ಈ ಕೆಳಗಿನ ಶ್ಲೋಕಗಳಿಂದ ತಿಳಿಸುತ್ತಾರೆ---
ಪ್ರತಿಶ್ರವಣಸಂಭಾಷೇ ಶಯಾನೋ ನ ಸಮಾಚರೇತ್|
ನಾಸೀನೋ ನ ಚ ಭುಂಜಾನೋ ನ ತಿಷ್ಠನ್ನ ಪರಾಙ್ಮುಖಃ||195||
---- ಶಿಷ್ಯನಾದವನು ಮಲಗಿಕೊಂಡು, ಆಸನದಲ್ಲಿ ಕುಳಿತುಕೊಂಡು , ಊಟ ಮಾಡುವಾಗ ಅಲ್ಲದೇ ಗುರುವಿಗೆ ಬೆನ್ನು ಮಾಡಿಕೊಂಡು ನಿಂತು ಅಲ್ಲಿಂದಲೇ ಗುರುವಿನೊಡನೆ ಸಂಭಾಷಣೆಯನ್ನು ಮಾಡಬಾರದು.
ಆಸೀನಸ್ಯ ಸ್ಥಿತಃ ಕುರ್ಯಾದಭಿಗಚ್ಛಂಸ್ತು ತಿಷ್ಠತಃ|
ಪ್ರತ್ಯುದ್ಗಮ್ಯ ತ್ವಾವ್ರಜತಃ ಪಶ್ಚಾದ್ಧಾವಂಸ್ತು ಧಾವತಃ||196||
----- ಗುರುಗಳು ಕುಳಿತಿದ್ದರೆ ಶಿಷ್ಯನು ಎದ್ದು ನಿಂತು , ಗುರುಗಳು ನಿಂತಿದ್ದರೆ ಶಿಷ್ಯನು ಬಳಿಬಂದು ನಿಂತು , ಗುರುಗಳು ಬರುತ್ತಿದ್ದರೆ ಅವರೆದುರು ನಡೆದುಹೋಗಿ , ಗುರುಗಳು ಧಾವಿಸುತ್ತಾ ಹೋಗುತ್ತಿದ್ದರೆ ಅವರನ್ನು ಹಿಂಬಾಲಿಸಿ ಓಡಿಹೋಗಿಯೇ ಅವರ ಆಜ್ಞೆಯನ್ನು ಪರಿಪಾಲಿಸಬೇಕು.
ಪರಾಙ್ಮುಖಸ್ಯಾಭಿಮುಖೋ ದೂರಸ್ಥಸ್ಯೈತ್ಯ ಚಾಂತಿಕಮ್|
ಪ್ರಣಮ್ಯ ತು ಶಯಾನಸ್ಯ ನಿದೇಶೇ ಚೈವ ತಿಷ್ಠತಃ||197||
----- ಗುರುಗಳು ಬೆನ್ನು ಮಾಡಿಕೊಂಡು ಮಾತನಾಡುವಾಗ ಅವರೆದುರು ಹೋಗಿ , ಗುರುಗಳು ದೂರದಿಂದ ಮಾತನಾಡಿಸಿದರೆ ಸಮೀಪಕ್ಕೆ ಅಭಿಮುಖವಾಗಿ ಹೋಗಿ , ಗುರುಗಳು ಮಲಗಿಕೊಂಡು ಮಾತನಾಡಿಸಿದರೆ ಅವರಿಗೆ ನಮಸ್ಕರಿಸುತ್ತಾ , ಗುರುಗಳು ಸಮೀಪದಿಂದ ಮಾತನಾಡಿಸಿದರೆ ತಲೆತಗ್ಗಿಸಿ ನಿಂತು ಮಾತನಾಡುವುದನ್ನು ಶಿಷ್ಯನಾದವನು ರೂಢಿಸಿಕೊಳ್ಳಬೇಕು.
***
ನೀಚಂ ಶಯ್ಯಾಸನಂ ಚಾಸ್ಯ ಸರ್ವದಾ ಗುರುಸನ್ನಿಧೌ|
ಗುರೋಸ್ತು ಚಕ್ಷುರ್ವಿಷಯೇ ನ ಯಥೇಷ್ಟಾಸನೋ ಭವೇತ್||198||
---- ಶಿಷ್ಯನ ಹಾಸಿಗೆ ಮತ್ತು ಆಸನಗಳು ಗುರುಗಳ ಸನ್ನಿಧಿಯಲ್ಲಿ ಗುರುಗಳಿಗಿಂತ ಕೆಳಗಿರಬೇಕು. ಅಲ್ಲದೇ ಗುರುಗಳೆದುರು ಕಾಲುಚಾಚಿಕೊಂಡು ಕುಳಿತುಕೊಂಡಿರಬಾರದು.
ನೋದಾಹರೇದಸ್ಯ ನಾಮ ಪರೋಕ್ಷಮಪಿ ಕೇವಲಮ್|
ನ ಚೈವಾಸ್ಯಾನುಕುರ್ವೀತ ಗತಿಭಾಷಿತಚೇಷ್ಟಿತಮ್||199||
------ ಗುರುಗಳನ್ನು ಆಚಾರ್ಯ ಎಂಬುದಾಗಿ ಸಂಬೋಧಿಸುತ್ತಾ , ಇನ್ನೊಬ್ಬರೆದುರು ಅವರನ್ನು ಪರಿಚಯಿಸುವಾಗ ಅವರ ಹೆಸರಿನ ಮುಂದೆ ಆಚಾರ್ಯ ಎಂಬ ಪದವನ್ನು ಸೇರಿಸದೇ ಹೇಳಬಾರದು. ಅಲ್ಲದೇ ಅವರ ನಡೆ-ನುಡಿಗಳನ್ನು ಯಾವ ಕಾಲಕ್ಕೂ ಅನುಕರಣೆ ಮಾಡಬಾರದು.
***
ಗುರುಗಳ ನಿಂದನೆ ಮಾಡಿದರೆ ಶಿಷ್ಯನು ಹೇಗೆ ಪ್ರತಿಕ್ರಿಯಿಸಬೇಕು ಎಂಬುದರ ಕುರಿತು--
ಗುರೋರ್ಯತ್ರ ಪರೀವಾದೋ ನಿಂದಾ ವಾsಪಿ ಪ್ರವರ್ತತೇ|
ಕರ್ಣೌತತ್ರ ಪಿಧಾತವ್ಯೌ ಗಂತವ್ಯಂ ವಾ ತತೋsನ್ಯತಃ||200||
---- ಎಲ್ಲಿ ಗುರುಗಳ ನಿಂದೆ-ದೂಷಣೆ ನಡೆಯುತ್ತದೆಯೋ ಅಲ್ಲಿ ಶಿಷ್ಯನು ಕಿವಿಮುಚ್ಚಿಕೊಳ್ಳಬೇಕು , ಇಲ್ಲವೇ ಆ ಸ್ಥಳದಿಂದ ದೂರಹೋಗಬೇಕು.
ಪರೀವಾದಾತ್ಖರೋ ಭವತಿ ಶ್ವಾ ವೈ ಭವತಿ ನಿಂದಕಃ|
ಪರಿಭೋಕ್ತಾ ಕೃಮಿರ್ಭವತಿ ಕೀಟೋ ಭವತಿ ಮತ್ಸರೀ||201||
--- ಗುರುವನ್ನು ಶಿಷ್ಯನೇ ಬೈದರೆ ಮುಂದೆ ಕತ್ತೆಯಾಗಿ , ನಿಂದಿಸಿದರೆ ನಾಯಿಯಾಗಿಯೂ ಜನ್ಮತಾಳುವನು. ಮತ್ತು ಗುರು ಧನವನ್ನು ಅಪಹರಿಸಿದರೆ ಕ್ರಿಮಿಯಾಗಿಯೂ , ಮತ್ಸರ ಪಟ್ಟರೆ ಕೀಟವಾಗಿಯೂ ಜನ್ಮತಾಳುವನು.
ದೂರಸ್ಥೋ ನಾರ್ಚಯೇದೇನಂ ಕ್ರುದ್ಧೋ ನಾಂತಿಕೇ ಸ್ತ್ರೀಯಾಃ|
ಯಾನಾಸನಸ್ಥಶ್ಚೈವ್ಯೆನಮವರುಹ್ಯಾಭಿವಾದಯೇತ್||202||
----- ಗುರುಗಳು ದೂರದಲ್ಲಿರುವಾಗ , ಸಿಟ್ಟಾದಾಗ , ಯಾವುದೋ ಕಾರ್ಯ ನಿಮಿತ್ತವಾಗಿ ಸ್ತ್ರೀಯರ ಬಳಿಯಿರುವಾಗ ಅವರನ್ನು ಆ ಸಮಯದಲ್ಲಿ ಪೂಜಿಸಬಾರದು. ಶಿಷ್ಯನು ವಾಹನದ ಮೇಲೆ ಅಥವಾ ಆಸನದ ಮೇಲಿದ್ದರೆ ಅದರಿಂದ ಇಳಿದೇ ಗುರುಗಳಿಗೆ ಅಭಿವಂದಿಸಬೇಕು ಎಂಬುದಾಗಿ.
**
ಪ್ರತಿವಾತೇsನುವಾತೇ ಚ ನಾಸೀತ ಗುರುಣಾ ಸಹ|
ಅಸಂಶ್ರವೇ ಚೈವ ಗುರೋರ್ನ ಕಿಂಚಿದಪಿ ಕೀರ್ತಯೇತ್||203||
---- ಗುರುಗಳ ಉಸಿರಿನ ಗಾಳಿ ತನಗೆ ತಾಕುವಂತೆ , ತನ್ನುಸಿರಿನ ಗಾಳಿ ಗುರುಗಳಿಗೆ ತಾಕುವಂತೆ ಶಿಷ್ಯನು ಯಾವತ್ತೂ ಕುಳಿತುಕೊಳ್ಳಬಾರದು. ತುಸು ಅಂತರವಿರಬೇಕು. ಅಲ್ಲದೇ ಗುರುಗಳ ಹಿಂದುಗಡೆ ಅವರಿಗೆ ಕೇಳದಂತೆ ಮಾತನ್ನಾಡಬಾರದು.
ಗೋsಶ್ವೋಷ್ಪ್ರಯಾನಪ್ರಾಸಾದಸ್ರಸ್ತರೇಷು ಕಟೇಷು ಚ|
ಆಸೀತ ಗುರುಣಾ ಸಾರ್ಧಂ ಶಿಲಾಫಲಕನೌಷು ಚ ||204||
---- ಎತ್ತು-ಕುದುರೆ -ಒಂಟೆಗಳು ಎಳೆಯುವ ಎಲ್ಲಾ ಬಂಡಿಗಳಲ್ಲಿ , ಉಪ್ಪರಿಗೆ ಗಳಲ್ಲಿ , ಶಿಲಾತಲಗಳಲ್ಲಿ , ಚಾಪೆಗಳಲ್ಲಿ , ಬಂಡೆಯ ಮೇಲೆ , ನೌಕೆಯಲ್ಲಿ , ಮರದ ಹಲಗೆಯಲ್ಲಿ ಗುರುಗಳ ಜೊತೆಗೆ ಕುಳಿತುಕೊಳ್ಳಬಹುದು.
ಗುರೋರ್ಗುರೌ ಸನ್ನಿಹಿತೇ ಗುರುವದ್ವೃತ್ತಿಮಾಚರೇತ್|
ನ ಚಾನಿಸೃಷ್ಟೋ ಗುರುಣಾ ಸ್ವಾನ್ ಗುರೂನಭಿವಾದಯೇತ್||205||
---- ತನ್ನ ಗುರುವಿನ ಗುರುವು ಬಂದಾಗ ಶಿಷ್ಯನಾದವನು ತನ್ನ ಗುರುವಿನ ಜೊತೆ ವರ್ತಿಸುವಂತೆಯೇ ವರ್ತಿಸಬೇಕು. ಮತ್ತು ತನ್ನ ಮನೆಯ ಹಿರಿಯ…
**
ಶ್ರೇಯಃಸು ಗುರುವದ್ವೃತ್ತಿಂ ನಿತ್ಯಮೇವ ಸಮಾಚರೇತ್|
ಗುರುಪುತ್ರೇಷು ಚಾರ್ಯೇಷು ಗುರೋಶ್ಚೈವ ಸ್ವಬಂಧುಷು||207||
-- ಗುರುಪುತ್ರರು , ಗುರುಗಳ ಬಂಧುಗಳು , ಶ್ರೇಷ್ಟ ವ್ಯಕ್ತಿಗಳು ತನ್ನ ಮನೆಯ ಹಿರಿಯರು ಹಾಗೂ ತಪಸ್ವಿಗಳು-ಜ್ಞಾನಿಗಳ ಇವರ ಜೊತೆಗೆ ತನ್ನ ಗುರುಗಳ ಜೊತೆ ವರ್ತಿಸುವಂತೆಯೇ ವರ್ತಿಸಬೇಕು.
ಬಾಲಃ ಸಮಾನಜನ್ಮಾ ವಾ ಶಿಷ್ಯೋ ವಾ ಯಜ್ಞಕರ್ಮಣಿ|
ಅಧ್ಯಾಪಯನ್ ಗುರುಸುತೋ ಗುರುವನ್ಮಾನಮರ್ಹತಿ||208||
----- ಗುರು ಪುತ್ರನು ಬಾಲಕನಾಗಿರಲಿ , ಸಮಾನವಯಸ್ಕನಾಗಿರಲಿ , ತನಗೆ ಶಿಷ್ಯನೇ ಆಗಿರಲಿ ಯಜ್ಞಕರ್ಮವನ್ನು ಬಲ್ಲವನಾಗಿದ್ದು ಇತರರಿಗೆ ವೇದಾಧ್ಯಯನವನ್ನು ಮಾಡಿಸುತ್ತಿದ್ದರೂ ಒಟ್ಟಿನಲ್ಲಿ ಅವನು ಯಜ್ಞಕಾರ್ಯಗಳಲ್ಲಿ ಗುರುಗಳಷ್ಟೇ ಪೂಜಾರ್ಹನು. ತಾತ್ಪರ್ಯ ಗುರು ಪುತ್ರನು ತನ್ನ ಗುರುವಿಗೆ ಸಮಾನನು ಎಂಬುದಾಗಿ.
**
ಉತ್ಸಾದನಂ ಚ ಗಾತ್ರಾಣಾಂ ಸ್ನಾಪನೋಚ್ಛಿಷ್ಟಭೋಜನೇ|
ನ ಕುರ್ಯಾದ್ಗುರು ಪುತ್ರಸ್ಯ ಪಾದಯೋಶ್ಚಾವನೇಜನಮ್||209||
---- ನೋಡೀ ಗುರು ಪುತ್ರನಿಗೆ ಗೌರವ ಕೊಡಬೇಕು ನಿಜ ಹಾಗಂತ ಅವನ ಮೈತಿಕ್ಕುವುದು , ಸ್ನಾನ ಮಾಡಿಸುವುದು , ಅವನ ಊಟಮಾಡಿದ ನಂತರ ಉಳಿದದ್ದನ್ನು ಊಟಮಾಡುವುದು , ಪಾದಪೂಜೆ ಇತ್ಯಾದಿಗಳನ್ನು ಮಾಡಕೂಡದು.
ಗುರುವತ್ಪ್ರತಿಪೂಜ್ಯಾಃ ಸ್ಯುಃ ಸವರ್ಣಾ ಗುರುಯೋಷಿತಃ|
ಆಸವರ್ಣಾಸ್ತು ಸಂಪೂಜ್ಯಾಃ ಪ್ರತ್ಯುತ್ಥಾನಾಭಿವಾದನ್ಯೆಃ||210||
---- ಗುರು ಪತ್ನಿಯರು ಸವರ್ಣೀಯರಾಗಿದ್ದರೆ ಅವರೂ ಸಹ ಗುರುಗಳಷ್ಟೇ ಪೂಜ್ಯರು. ಆದರೆ ಅನ್ಯಜಾತಿಯವರಾಗಿದ್ದರೆ ಅವರಿಗೆ ಎದ್ದುನಿಂತು ನಮಸ್ಕರಿಸುವ ಮೂಲಕ ಗೌರವಿಸಿದರೆ ಸಾಕು.
ಅಭ್ಯಂಜನಂ ಸ್ನಾಪನಂ ಚ ಗಾತ್ರೋತ್ಸಾಧನಮೇವ ಚ|
ಗುರುಪತ್ನ್ಯಾ ನ ಕಾರ್ಯಾಣಿ ಕೇಶಾನಾಂ ಚ ಪ್ರಸಾಧನಮ್||211||
--- ಗುರು ಪತ್ನಿಯರನ್ನು ಗುರುವಿನಂತೆ ಕಾಣಬೇಕು ನಿಜ ಹಾಗಂತ ಅವರಿಗೆ ಅಭ್ಯಂಗ ಮಾಡಿಸುವುದು , ಸ್ನಾನ ಮಾಡಿಸುವುದು , ಮೈ ಉಜ್ಜುವುದು , ಕೂದಲು ಬಾಚುವುದು , ಹೂ ಮುಡಿಸುವುದು ಇತ್ಯಾದಿಗಳನ್ನು ಮಾಡಕೂಡದು ಎಂಬುದಾಗಿ.
**
ಗುರುಪತ್ನೀ ತು ಯುವತಿರ್ನಾಭಿವಾದ್ಯೇಹ ಪಾದಯೋಃ|
ಪೂರ್ಣವಿಶಂತಿವರ್ಷೇಣ ಗುಣದೋಷೌ ವಿಜಾನತಾ||212||
---- ಗುರು ಪತ್ನಿಯು ಪ್ರಾಯದವರಾಗಿದ್ದರೆ 20 ವರ್ಷಗಳು ತುಂಬಿದ ಶಿಷ್ಯನು ನಮಸ್ಕಾರದ ಗುಣ-ದೋಷಗಳನ್ನರಿತು ಅವರ ಪಾದಗಳನ್ನು ಮುಟ್ಟಿ ನಮಸ್ಕರಿಸಬಾರದು ಎಂಬುದಾಗಿ.
**
ಸ್ಮೃತಿ ಕಾರರು ಬಹಳ ಸೂಕ್ಷ್ಮ ವಿಚಾರವನ್ನು ಈ ಕೆಳಗಿನ ಶ್ಲೋಕಗಳಲ್ಲಿ ಹೇಳುತ್ತಿದ್ದಾರೆ ---
ಕಾಮಂ ತು ಗುರುಪತ್ನೀನಾಂ ಯುವತೀನಾಂ ಯುವಾ ಭುವಿ|
ವಿಧಿವದ್ವಂದನಂ ಕುರ್ಯಾತ್ ಅಸಾವಹಮಿತಿ ಬ್ರುವನ್||216||
------ ಗುರು ಪತ್ನಿಯು ಪ್ರಾಯದ ತರುಣಿಯಾಗಿದ್ದರೆ ತರುಣನಾದ ಶಿಷ್ಯನು ಅವಳಿಗೆ ಪಾದ ಮುಟ್ಟಿ ನಮಸ್ಕರಿಸಬಾರದು. ನೆಲವನ್ನು ಮುಟ್ಟಿ ದೂರದಿಂದಲೇ ತನ್ನ ನಾಮಧೇಯವನ್ನು ಹೇಳಿಕೊಂಡು ನಮಸ್ಕರಿಸಬೇಕು.
ವಿಪ್ರೋಷ್ಯ ಪಾದಗ್ರಹಣಮನ್ವಹಂ ಚಾಭಿವಾದನಮ್|
ಗುರುದಾರೇಷು ಕುರ್ವೀತ ಸತಾಂ ಧರ್ಮಮನುಸ್ಮರನ್||217||
--- ಆದರೆ ದೂರದ ಪ್ರಯಾಣ ಮಾಡಿ ಮರಳಿ ಬಂದಾಗ ಮಾತ್ರವೇ ಧರ್ಮವನ್ನು ಸ್ಮರಿಸಿಕೊಂಡು ಗುರುಪತ್ನಿಗೆ ಪಾದ ಮುಟ್ಟಿ ನಮಸ್ಕರಿಸಬಹುದು. ಆದರೆ ನಿತ್ಯದಲ್ಲಿ ಮಾತ್ರ ದೂರದಿಂದಲೇ ನಮಸ್ಕರಿಸುವುದು ಸಾಕು ಎಂಬುದಾಗಿ.
**
ಯಥಾ ಖನನ್ ಖನಿತ್ರೇಣ ನರೋ ವಾರ್ಯಧಿಗಚ್ಛತಿ|
ತಥಾ ಗುರುಗತಾಂ ವಿದ್ಯಾಂ ಶುಶ್ರೂಷುರಧಿಗಚ್ಛತಿ||218||
------ ಭೂಮಿಯನ್ನು ಗುದ್ದಲಿಯಿಂದ ಆಳವಾಗಿ ಬಗೆದಾಗ ಹೇಗೆ ನೀರು ದೊರೆಯುತ್ತದೆಯೋ ಅದರಂತೆ ಪ್ರಗಾಢವಾಗಿ ಗುರುಸೇವೆ ಮಾಡಿದ ವ್ಯಕ್ತಿಗೆ ವಿದ್ಯೆಯು ದೊರೆಯುತ್ತದೆ ಎಂಬುದಾಗಿ.
**
ಮುಂಡೋ ವಾ ಜಟಿಲೋ ವಾ ಸ್ಯಾದಥವಾ ಸ್ಯಾಚ್ಛಿಖಾಜಟಃ|
ನೈನಂ ಗ್ರಾಮೇsಭಿನಿಮ್ಲೋಚೇತ್ ಸೂರ್ಯೋನಾಭ್ಯುದಿಯಾತ್ ಕ್ವಚಿತ್||219||
----- ಬ್ರಹ್ಮಚಾರಿಯು ಕೇಶಮುಂಡನ- ಜಡೆ - ಜುಟ್ಟು ಬಿಡಬಹುದು. ಮತ್ತು ಸೂರ್ಯೋದಯ , ಸೂರ್ಯಾಸ್ತದ ಸಮಯದಲ್ಲಿ ಮಲಗಲೇಬಾರದು ಎಂಬುದಾಗಿ.
ತಂ ಚೇದಭ್ಯುದಿಯಾತ್ಸೂರ್ಯಃ ಶಯಾನಂ ಕಾಮಚಾರತಃ|
ನಿಮ್ಲೋಚೇದ್ವಾಪ್ಯ ವಿಜ್ಞಾನಾಜ್ಜಪನ್ನುಪವಸೇದ್ದಿನಮ್||220||
---- ಹಾಗೇನಾದರೂ ಆ ಸಮಯದಲ್ಲಿ ಬ್ರಹ್ಮಚಾರಿಯು ಅಜ್ಞಾನವಶಾತ್ ಆ ಕಾಲದಲ್ಲಿ ಮಲಗಿದ್ದೇ ಆದರೆ ಹಗಲು ಉಪವಾಸ ಮಾಡಿ ಗಾಯತ್ರೀ ಮಂತ್ರವನ್ನು ಜಪಿಸಬೇಕು ಎಂಬುದಾಗಿ.
**
ಆಚಮ್ಯ ಪ್ರಯತೋ ನಿತ್ಯಮುಭೇ ಸಂಧ್ಯೇ ಸಮಾಹಿತಃ|
ಶುಚೌ ದೇಶೇ ಜಪನ್ ಜಪ್ಯಮುಪಾಸೀತ ಯಥಾ ವಿಧಿ||222||
---- ಬ್ರಹ್ಮಚಾರಿಯಾದವನು ಪ್ರತಿನಿತ್ಯ ಆಚಮನ ಮಾಡಿ ಶುಚಿಯಾದ ಸ್ಥಳದಲ್ಲಿ ಹೋಗಿ ವಿಧಿ ಪ್ರಕಾರವಾಗಿ ಪ್ರಾತಃ - ಸಾಯಂ- ಸಂಧ್ಯಾಕಾಲಗಳಲ್ಲಿ ಗಾಯತ್ರೀ ಮಂತ್ರವನ್ನು ಜಪಿಸುತ್ತಾ ಮಂತ್ರೋಪಾಸನೆ ಮಾಡಬೇಕು.
**
ಯದಿ ಸ್ತ್ರೀ ಯದ್ಯವರಜಃ ಶ್ರೇಯಃ ಕಿಂಚಿತ್ಸಮಾಚರೇತ್|
ತತ್ಸರ್ವಮಾಚರೇದ್ಯುಕ್ತೋ ಯತ್ರ ವಸ್ಯ ರಮೇನ್ಮನಃ||223||
----- ಸ್ತ್ರೀ ಅಥವಾ ಪುರುಷನು ಒಂದು ವೇಳೆ ಶ್ರೇಯಸ್ಕರವಾದ ಕೆಲಸವನ್ನು ಮಾಡುತ್ತಿದ್ದರೆ ಅದನ್ನು ಮಾಡಲು ತನ್ನ ಮನಸ್ಸು ಒಪ್ಪಿದ್ದೇ ಆದಲ್ಲಿ ಅದು ನಿಷಿದ್ಧವಲ್ಲದಿದ್ದರೆ ಅದನ್ನು ನಿರಾತಂಕವಾಗಿ ಆಚರಿಸಬಹುದಾಗಿದೆ.
ಧರ್ಮೋರ್ಥಾವುಚ್ಯತೇ ಶ್ರೇಯಃ ಕಾಮಾರ್ಥೌ ಧರ್ಮ ಏವ ಚ |
ಅರ್ಥ ಏವೇಹ ವಾ ಶ್ರೇಯಸ್ತ್ರೀವರ್ಗ ಇತಿ ತು ಸ್ಥಿತಿಃ||224||
--------- ಕೆಲವರು ಧರ್ಮ ಮಾತ್ರ , ಕೆಲವರು ಅರ್ಥ ಮಾತ್ರ , ಕೆಲವರು ಧರ್ಮ ಮತ್ತು ಅರ್ಥಗಳೆರಡೂ ಶ್ರೇಯಸ್ಸನ್ನುಂಟು ಮಾಡುತ್ತವೆಯೆಂದು ಹೇಳುತ್ತಾರೆ. ಆದರೆ ಧರ್ಮ ಅರ್ಥ ಮತ್ತು ಕಾಮ ಇವು ಮೂರರ ಪರಸ್ಪರ ಹೊಂದಾಣಿಕೆಯೇ ಸುಖಕರವು ಶ್ರೇಯಸ್ಕರವು ಎಂಬುದಾಗಿ.
**
ಆಚಾರ್ಯಶ್ಚ ಪಿತಾ ಚೈವ ಮಾತಾ ಚ ಪೂರ್ವಜಃ|
ನಾರ್ತೇನಾಪ್ಯವಮಂತವ್ಯಾ ಬ್ರಾಹ್ಮಣೇನ ವಿಶೇಷತಃ||225||
--- ಮಂತ್ರೋಪದೇಶ ಮಾಡುವ ಆಚಾರ್ಯ, ತಂದೆ-ತಾಯಿ , ಅಣ್ಣನನ್ನು ಎಂತಹ ವಿಷಮಪರಿಸ್ಥಿತಿಯಲ್ಲೂ ಪ್ರಾಜ್ಞನಾದವನು ವಿಶೇಷವಾಗಿ ಬ್ರಾಹ್ಮಣನು ಅವಮಾನಿಸಬಾರದು.
ಆಚಾರ್ಯೋ ಬ್ರಾಹ್ಮಣೋ ಮೂರ್ತಿಃ ಪಿತಾ ಮೂರ್ತಿಃ ಪ್ರಜಾಪತೇಃ|
ಮಾತಾ ಪೃಥಿವ್ಯಾ ಮೂರ್ತಿಸ್ತು ಭ್ರಾತಾ ಸ್ವೋ ಮೂರ್ತಿರಾತ್ಮನಃ||226||
----- ಏಕೆಂದರೆ ಮಂತ್ರೋಪದೇಶ ಮಾಡುವ ಆಚಾರ್ಯನು ಸಾಕ್ಷಾತ್ ಪರಬ್ರಹ್ಮನ ಸ್ವರೂಪ , ತಂದೆ-ತಾಯಿ ಪ್ರಜಾಪತಿ -ಭೂಮಾತೆಯ ಸ್ವರೂಪ ಮತ್ತು ಅಣ್ಣನು ತನ್ನದೇ ಆತ್ಮಸ್ವರೂಪನಾಗಿರುತ್ತಾನೆ ಎಂಬುದಾಗಿ.
**
ಯಂ ಮಾತಾಪಿತರೌ ಕ್ಲೇಶಂ ಸಹೇತೇ ಸಂಭವೇ ನೃಣಾಮ್|
ನ ತಸ್ಯ ನಿಷ್ಕೃತಿಃ ಶಕ್ಯಾ ಕರ್ತುಂ ವರ್ಷಶತೈರಪಿ||227||
----- ಮಕ್ಕಳ ಜನನ ಹಾಗೂ ಅವರ ಜೀವನದ ವಿಷಯದಲ್ಲಿ ತಂದೆ-ತಾಯಿಗಳು ಅನುಭವಿಸುವ ನಾನಾ ವಿಧದ ಕಷ್ಟಗಳ ಋಣವನ್ನು ತೀರಿಸಲು ನೂರು ವರ್ಷಗಳಾದರೂ ನಮಗೆ ಸಾಧ್ಯವಿಲ್ಲ ಎಂಬುದಾಗಿ.
**
ತಯೋರ್ನಿತ್ಯಂ ಪ್ರಿಯಂ ಕುರ್ಯಾದಾಚಾರ್ಯಸ್ಯ ಚ ಸರ್ವದಾ|
ತೇಷ್ಟೇವ ತ್ರಿಷು ತುಷ್ಟೇಷು ತಪಃ ಸರ್ವಂ ಸಾಮಾಪ್ಯತೇ||228||
---- ತಂದೆ-ತಾಯಿ , ಆಚಾರ್ಯರು , ಗುರುಗಳನ್ನು ಗೌರವಿಸುತ್ತಾ ಅವರು ಯಾವಾಗಲೂ ಸಂತೃಪ್ತಿಯಿಂದ ಇರುವಂತೆ ನೋಡಿಕೊಳ್ಳಬೇಕು. ಇವರೆಲ್ಲರನ್ನು ಸಂತೋಷಪಡಿಸುವ ವ್ಯಕ್ತಿಗೆ ಸರ್ವತಪಸ್ಸಿನ ಸಿದ್ಧಿಯು ಲಭಿಸುತ್ತದೆ ಎಂಬುದಾಗಿ.
**
ತಂದೆ ತಾಯಿ ಗುರುಗಳ ಮಹತ್ವವನ್ನು ತಿಳಿಸುತ್ತಿದ್ದಾರೆ ---
ತೇಷಾಂ ತ್ರಯಾಣಾಂ ಶುಶ್ರೂಷಾ ಪರಮಂ ತಪ ಉಚ್ಯತೇ|
ನ ತೈರಭ್ಯನನುಜ್ಞಾತೋ ಧರ್ಮಮನ್ಯಂ ಸಮಾಚರೇತ್||229||
---- ತಂದೆ , ತಾಯಿ ಹಾಗೂ ಗುರು ಈ ಮೂವರ ಸೇವೆಯೇ ಶ್ರೇಷ್ಟ ತಪಸ್ಸು. ಅವರ ಅಪ್ಪಣೆಯಿಲ್ಲದೇ ಯಾವ ಬೇರೆ ಧರ್ಮವನ್ನು ಆಚರಿಸಲೇಬಾರದು.
ತ ಏವ ಹಿ ತ್ರಯೋ ಲೋಕಾಸ್ತ ಏವ ತ್ರಯ ಆಶ್ರಮಾಃ |
ತ ಏವ ಹಿ ತ್ರಯೋ ವೇದಾಸ್ತ ಏವೋಕ್ತಾಸ್ತ್ರಯೋsಗ್ನಯಃ||230||
---- ಏಕೆಂದರೆ ಅವರೇ ಲೋಕತ್ರಯವನ್ನು ಅನುಗ್ರಹಿಸುವವರು , ಅವರೇ ಬ್ರಹ್ಮಚರ್ಯಾದಿ ಆಶ್ರಮತ್ರಯವನ್ನು ನೀಡುವವರು , ಅವರೇ ವೇದತ್ರಯವನ್ನು ದಯಪಾಲಿಸುವವರು , ಹಾಗೂ ಅವರೇ ಆಹವನೀಯಾದಿ ಅಗ್ನಿತ್ರಯದ ಫಲವನ್ನು ಕೊಡುವಂತಹವರಾಗಿದ್ದಾರೆ.
**
ಪಿತಾ ವೈ ಗಾರ್ಹಪತ್ಯೋಗ್ನಿರ್ಮಾತಾsಗ್ನಿರ್ದಕ್ಷಿಣಃ ಸ್ಮೃತಃ|
ಗುರುರಾಹನೀಯಸ್ತು ಸ್ವಾಗ್ನಿತ್ರೇತಾ ಗರೀಯಸೀ||231||
---- ತಂದೆ , ತಾಯಿ ಮತ್ತು ಗುರುಗಳ ಶ್ರೇಷ್ಟತೆಯನ್ನು ಮುಂದುವರೆಸುತ್ತಾ ---
ತಂದೆಯು ಗಾರ್ಹಪತ್ಯವೆಂಬ ಅಗ್ನಿ ಸ್ವರೂಪನು , ತಾಯಿಯು ದಕ್ಷಿಣಾಗ್ನಿಸ್ವರೂಪಳು ಮತ್ತು ಗುರುವು ಆಹವನೀಯ ಅಗ್ನಿಸ್ವರೂಪನು. ಹೀಗೆ ಇವರು ಸಾಕ್ಷಾತ್ ಅಗ್ನಿದೇವತೆಗಳಿಗಿಂತಲೂ ಶ್ರೇಷ್ಠರು ಎಂಬುದಾಗಿ.
ತ್ರಿಷ್ವಪ್ರಮಾದ್ಯನ್ನೇತೇಷು ತ್ರೀಲ್ಲೋಕಾನ್ ವಿಜಯೇದ್ ಗೃಹೀ|
ದೀಪ್ಯಮಾನಃ ಸ್ವವಪುಷಾ ದೇವವದ್ದಿವಿ ಮೋದತೇ||232||
----- ಈ ಮೇಲೆ ಹೇಳಿದಂತೆ ಈ ಮೂವರಲ್ಲೂ (ತಂದೆ ತಾಯಿ ಗುರು) ತಪ್ಪಿ ನಡೆಯದ ಗೃಹಸ್ಥನು ಮೂರು ಲೋಕಗಳನ್ನು ಜಯಿಸುತ್ತಾನೆ. ದಿವ್ಯವಾದ ಕಾಂತಿಯುತವಾದ ಶರೀರವನ್ನು ಹೊಂದಿ ದೇವಲೋಕದಲ್ಲೂ ಆನಂದವನ್ನನುಭವಿಸುತ್ತಾನೆ ಎಂಬುದಾಗಿ.
**
*ಯಾವತ್ತ್ರಯಸ್ತೇ ಜೀವೇಯುಸ್ತಾವನ್ನಾನ್ಯಂ ಸಮಾಚರೇತ್|*
*ತೇಷ್ಟೇನ ನಿತ್ಯಂ ಶುಶ್ರೂಷಾಂ ಕುರ್ಯಾತ್ಪ್ರಿಯಹಿತೇ ರತಃ||235||*
---- ತಾಯಿ ತಂದೆ ಗುರು ಎಲ್ಲಿಯವರೆಗೆ ಅವರು ಬದುಕಿರುತ್ತಾರೋ ಅವರಲ್ಲಿ ಮುಖ್ಯವಾಗಿ ಭಕ್ತಿ-ಸೇವೆ ಮಾಡುವುದೇ ಮುಖ್ಯವು. ಇದನ್ನು ಬಿಟ್ಟು ಯಾವ ಧರ್ಮವನ್ನಾಚರಿಸಕೂಡದು. ಅವರನ್ನು ಮೊದಲು ಸುಖದಿಂದಿಡುವುದೇ ಧರ್ಮವಾಗಿದೆ.
*ತೇಷಾಮನುಪರೋಧೇನ ಪಾರತ್ರ್ಯಂ ಯದ್ಯದಾಚರೇತ್|*
*ತತ್ತನ್ನಿವೇದಯೇತ್ತೇಭ್ಯೋ ಮನೋವಚನಕರ್ಮಭಿಃ||236||*
----- ಬೇರೆ ಯಾವ ಧರ್ಮ ಮಾಡಿದರೂ ಅವರ ಅಪ್ಪಣೆ ಪಡೆದೇ ಸಾಧ್ಯಾಂತವಾಗಿ ಅವರಿಗೆ (ತಾಯಿ-ತಂದೆ -ಗುರು) ನಿವೇದನೆ ಮಾಡಬೇಕು.
*ತ್ರಿಷ್ಟೇತೇಷ್ಟಿಕೃತ್ಯಂ ಹಿ ಪುರುಷಸ್ಯ ಸಾಮಾಪ್ಯತೇ|*
*ಏಷ ಧರ್ಮ಼ಃ ಪರಃ ಸಾಕ್ಷಾದುಪಧರ್ಮೋsನ್ಯ ಉಚ್ಯತೇ||237||*
---ಒಟ್ಟಾರೆ ತಾತ್ಪರ್ಯವಿಷ್ಟೇ ಈ ಮೇಲಿನ ಮೂವರಲ್ಲಿ ಮಾಡುವ ಸೇವೆಯೇ ಸರ್ವೋತ್ತಮ ಅಥವಾ ಶ್ರೇಷ್ಟ ಧರ್ಮವು ಎಂಬುದಾಗಿ.
**
*ಶ್ರದ್ಧಾಧಾನಃ ಶುಭಾಂ ವಿದ್ಯಾಮಾದದೀತಾವರಾದಪಿ|*
*ಅಂತ್ಯಾದಪಿ ಪರಂ ಧರ್ಮಂ ಸ್ತ್ರೀರತ್ನಂ ದುಷ್ಕುಲಾದಪಿ||238||*
----- ಶ್ರದ್ಧಾವಂತ ನಾದವನು ಶುಭಕರವಾದ ವಿದ್ಯೆಯನ್ನು ಶೂದ್ರನಿಂದಲಾದರೂ ಸಂಪಾದಿಸಿಕೊಳ್ಳಬೇಕು. ದಿವ್ಯವಾದ ಧರ್ಮೋಪದೇಶವನ್ನು ಅರ್ಹನಾದ ಅಂತ್ಯಜನಿಂದಲಾದರೂ ಸಹ ಸ್ವೀಕಾರ ಮಾಡಬೇಕು. ಕೆಳ ಜಾತಿಯಲ್ಲಿ ಹುಟ್ಟಿದರೂ ಶ್ರೇಷ್ಟಳಾದ ಸ್ತ್ರೀಯಾಗಿದ್ದರೆ ಅವಳನ್ನೂ ಸಹ ಸ್ವೀಕರಿಸಬಹುದು ಎಂಬುದಾಗಿ.
*ವಿಷಾದಪ್ಯಮೃತಂ ಗ್ರಾಹ್ಯಂ ಬಾಲಾದಪಿ ಸುಭಾಷಿತಮ್|*
*ಅಮಿತ್ರಾದಪಿ ಸದ್ವೃತ್ತಂ ಅಮೇಧ್ಯಾದಪಿ ಕಾಂಚನಮ್||239||*
----- ವಿಷದ ಮಧ್ಯದಿಂದಲಾದರೂ ಸರಿ ಅದರಲ್ಲಿನ ಅಮೃತವನ್ನೂ , ಚಿಕ್ಕಬಾಲಕನಿಂದಾದರೂ ಸರಿ ಅವನಿಂದ ಹಿತವಚನವನ್ನು , ಶತೃವಾದರೂ ಸರಿ ಅವನಿಂದ ಒಳ್ಳೆಯ ನಡತೆಯನ್ನು ಹಾಗೂ ಹೊಲಸಿನಿಂದಾದರೂ ಸರಿ ಬಂಗಾರವನ್ನು ಪಡೆದುಕೊಳ್ಳಬೇಕು.
*"""""""""""""🙏🏾"""""""""""""""*
🌷ಮನುಸ್ಮೃತಿ-ಅಧ್ಯಾಯ-2🌷*
*""""""""""""🔥""""""""""""""*
*ಸ್ತ್ರೀಯೋ ರತ್ನಾನ್ಯಥೋ ವಿದ್ಯಾ ಧರ್ಮಃ ಶೌಚಂ ಸುಭಾಷಿತಮ್|*
*ವಿವಿಧಾನಿ ಚ ಶಿಲ್ಪಾನಿ ಸಮಾದೇಯಾನಿ ಸರ್ವತಃ||240||*
---- ಸ್ತ್ರೀಯರು , ರತ್ನಗಳು , ವಿದ್ಯೆ , ಧರ್ಮ , ಶೌಚ , ಸುಭಾಷಿತಗಳು , ಶಿಲ್ಪಗಳು ಇವು ಎಲ್ಲಿದ್ದರೂ ಸಹ ಅವನ್ನು ಪಡೆದುಕೊಳ್ಳಲು ಮುಂದಾಗಬೇಕು.
*ಅಬ್ರಾಹ್ಮಣಾದಧ್ಯಯನಮಾಪತ್ಕಾಲೇ ವಿಧೀಯತೇ|*
*ಅನುವ್ರಜ್ಯಾ ಚ ಶುಶ್ರೂಷಾ ಯಾವದಧ್ಯಯನಂ ಗುರೋಃ||241||*
---- ಆಪತ್ಕಾಲದಲ್ಲಿ ಮಾತ್ರ ಅಬ್ರಾಹ್ಮಣ ಗುರುವಿನಿಂದ ಓದು ಕಲಿಯಬೇಕು. ಹಾಗೂ ಆ ಓದು ಪೂರೈಸುವವರೆಗೆ ಮಾತ್ರ ಅವನಲ್ಲಿ ಗುರು ಭಾವವನ್ನು ಹೊಂದಿ ಸೇವೆ ಮಾಡಬೇಕು. ಆನಂತರ ಮಾಡಬಾರದು.
*ನಾಬ್ರಾಹ್ಮಣೇ ಗುರೌ ಶಿಷ್ಯೋ ವಾಸಮಾತ್ಯಂತಿಕಂ ವಸೇತ್|*
*ಬ್ರಾಹ್ಮಣೇ ಚಾನನೂಚಾನೇ ಕಾಂಕ್ಷನ್ಗತಿಮನುತ್ತಮಾಮ್|||242||*
---- ಉತ್ತಮವಾದ ದಿವ್ಯ ಗತಿಯನ್ನು ಹೊಂದಲು ಅಪೇಕ್ಷಿಸುವ ವ್ಯಕ್ತಿಯು ಅಬ್ರಾಹ್ಮಣನಾದ ಗುರುವಿನ ಸನ್ನಿಧಿಯಲ್ಲಿ ಹಾಗೂ ವೇದ-ವಿದ್ವಾಂಸನಲ್ಲದ ಬ್ರಾಹ್ಮಣನ ಬಳಿಯಲ್ಲಿ ದೀರ್ಘಕಾಲದ ತನಕ ವಾಸ ಮಾಡಬಾರದು ಅಂದರೆ ಕೊನೆತನಕ ಇರಬಾರದು ಎಂಬುದಾಗಿ.
***
*ಯದಿ ತ್ವಾತ್ಯಂತಿಕಂ ವಾಸಂ ರೋಚಯತ ಗುರೋಃ ಕುಲೇ|*
*ಯುಕ್ತಃ ಪರಿಚರೇದೇನಮಾಶರೀರವಿಮೋಕ್ಷಣಾತ್||243||*
-- ಗುರುಕುಲದಲ್ಲಿಯೇ ಕೊನೆತನಕ ವಾಸಿಸಲಿಚ್ಛಿಸುವ ನೈಷ್ಠಿಕ ಬ್ರಹ್ಮಚಾರಿಯು ಬದುಕಿರುವವರೆಗೂ ಗುರುಸೇವೆ ಮಾಡುತ್ತಿರಬೇಕು.
*ಆಸಮಾಪ್ತೇಃ ಶರೀರಸ್ಯ ಯಸ್ತು ಶುಶ್ರೂಷತೇ ಗುರುಮ್|*
*ಸ ಗಚ್ಛತ್ಯಂಜಸಾ ವಿಪ್ರೋ ಬ್ರಹ್ಮಣಃ ಸದ್ಮ ಶಾಶ್ವತಮ್||244||*
---- ಏಕೆಂದರೆ ಕೊನೆತನಕ ಗುರುಸೇವೆ ಮಾಡುವ ಶಿಷ್ಯನಿಗೆ ಶಾಶ್ವತವಾದ ಬ್ರಹ್ಮಲೋಕವು ದೊರೆಯುತ್ತದೆ.
*ನ ಪೂರ್ವಂ ಗುರವೇ ಕಿಂಚಿದುಪಕುರ್ವೀತ ಧರ್ಮವಿತ್|*
*ಸ್ನಾಸ್ಯಂಸ್ತು ಗುರುಣಾsಜ್ಞಪ್ತಃ ಶಕ್ತ್ಯಾ ಗುರ್ವರ್ಥಮಾಹರೇತ್||245||*
----- ವಿದ್ಯಾಭ್ಯಾಸ ಸಮಯದಲ್ಲಿ ಶಿಷ್ಯನು ಯಾವುದೇ ಗುರು ಕಾಣಿಕೆ- ದಕ್ಷಿಣೆ ಸಲ್ಲಿಸಬಾರದು. ಆದರೆ ಗುರುವಿನ ಅಪ್ಪಣೆಪಡೆದು ಮನೆಗೆ ಮರಳುವ ಮುನ್ನ ತನ್ನ ಶಕ್ತ್ಯಾನುಸಾರ ಗುರುದಕ್ಷಿಣೆ-ಕಾಣಿಕೆಯನ್ನು ಸಲ್ಲಿಸಬೇಕು.
*""""""""""""""🙏🏾""""""""""""*
*🌷ಮನುಸ್ಮೃತಿ🌷*
*ಕ್ಷೇತ್ರಂ ಹಿರಣ್ಯಂ ಗಾಮಶ್ವಂ ಛತ್ರೋಪಾನಹಮಾಸನಮ್|*
*ಧಾನ್ಯಂ ಶಾಕಂ ವಾಸಾಂಸಿ ಗುರವೇ ಪ್ರೀತಿಮಾವಹೇತ್||246||*
---- ಗುರುಗಳಿಗೆ ಭೂಮಿ , ಬಂಗಾರ , ಗೋವು , ಕುದುರೆ , ಕೊಡೆ, ಪಾದರಕ್ಷೆ , ಆಸನ , ಧಾನ್ಯ, ತರಕಾರಿ , ವಸ್ತ್ರಾದಿಗಳನ್ನು ಯಥಾಶಕ್ತಿ ಪ್ರೀತಿಪುರಸ್ಸರವಾಗಿ ಸಮರ್ಪಿಸಬೇಕು.
*ಆಚಾರ್ಯೇ ತು ಖಲು ಪ್ರೇತೇ ಗುರುಪುತ್ರೇ ಗುಣಾನ್ವಿತೇ |*
*ಗುರುದಾರೇ ಸಪಿಂಡೇ ವಾ ಗುರುವದ್ವೃತ್ತಿಮಾಚರೇತ್||247||*
---- ಗುರುವು ಮರಣ ಹೊಂದಿದರೆ ಗುಣವಂತ ನಾದ ಗುರುಪುತ್ರನಲ್ಲಿ ಅಥವಾ ಗುರು ಪತ್ನಿಯಲ್ಲಿ , ಇವರಿಬ್ಬರೂ ಇಲ್ಲದಿದ್ದಲ್ಲಿ ಗುರುವಿನ ಕುಟುಂಬದಲ್ಲಿ ಶಿಷ್ಯನು ಸೇವೆ ಸಲ್ಲಿಸುತ್ತಾ ಇರಬಹುದು.
*ಏತೇಷ್ವವಿದ್ಯಮಾನೇಷು ಸ್ನಾನಾಸನವಿಹಾರವಾನ್|*
*ಪ್ರಯುಂಜಾನೋsಗ್ನಿಶುಶ್ರೂಷಾಂ ಸಾಧಯೇದ್ದೇಹಮಾತ್ಮನಃ||248||*
----- ಗುರು ಅಥವಾ ಗುರುವಿನ ಕುಟುಂಬದವರು , ಸಂಬಂಧಿಕರು ಯಾರೂ ಇರದ ಪಕ್ಷದಲ್ಲಿ ಗುರುವಿನ ಅಗ್ನಿಯ ಬಳಿ ಸ್ನಾನ, ಆಸನ , ವಿಹಾರ ಇತ್ಯಾದಿಗಳನ್ನು ಪೂರೈಸುತ್ತಾ , ಅಗ್ನಿಪರಿಚರ್ಯೇ ಮಾಡುತ್ತಾ ತನ್ನ ದೇಹವನ್ನು ತಪದಲ್ಲಿ ತೊಡಗಿಸಬೇಕು.
*ಏವಂ ಚರತಿ ಯೋ ವಿಪ್ರೋ ಬ್ರಹ್ಮಚರ್ಯಮವಿಪ್ಲುತಃ|*
*ಸ ಗಚ್ಛತ್ಯುತ್ತಮಸ್ಥಾನಂ ನ ಚೇಹಾಜಾಯತೇ ಪುನಃ||249||*
---- ಈ ಮೇಲಿನ ರೀತಿಯಾಗಿ ಯಾವ ಬ್ರಾಹ್ಮಣನು ನಿರಂತರ ಹೀಗೆ ಬ್ರಹ್ಮಚರ್ಯವನ್ನು ಕಾಯ್ದುಕೊಂಡು ವೃತನಿಷ್ಠನಾಗಿ ಗುರುಸೇವೆ ಯನ್ನು ಮಾಡುತ್ತಾನೆಯೋ ಅವನು ಉತ್ತಮವಾದ ಬ್ರಹ್ಮ ಸಾಯುಜ್ಯವನ್ನು ಹೊಂದುತ್ತಾನೆ ಮತ್ತು ಸಂಸಾರದಲ್ಲಿ ಮತ್ತೆ ಜನ್ಮ ಹೊಂದುವುದಿಲ್ಲ ಎಂಬುದಾಗಿ.
*ಮನುಸ್ಮೃತಿ ದ್ವಿತೀಯಾಧ್ಯಾಯ ಸಮಾಪ್ತಿ*
*""""""""""""🔥""""""""""""""*