ತಂತ್ರಭಾಗದಲ್ಲಿ ಬಾಗ್ಯದ ಲಕ್ಷ್ಮಿ ಬಾರಮ್ಮ - ರಾಶಿಗ್ರಹಗಳ ತಾಂತ್ರಾಧಿ ರಹಸ್ಯಯುಕ್ತ ಬಾಗ್ಯಲಕ್ಷ್ಮಿ ಹಣದ ವಿಚಾರ
⚛ ಮೇಷ ರಾಶಿ ಮೇಷ ರಾಶಿಯವರಿಗೆ ಕುಜ ಅಧಿಪತಿ ಕೆಂಪು ವರ್ಣ ಬಟ್ಟೆಯಲ್ಲಿ ನಾಲ್ಕು ರತಿ ಹವಳವನ್ನು ಕೆಂಪು ರೇಷ್ಮೆ ವಸ್ತ್ರ ಬಟ್ಟೆದಲ್ಲಿ ಸುತ್ತಿ ನಿಮ್ಮ ಬಳಿ ಇಟ್ಟುಕೊಳ್ಳಬೇಕು ತೊಗರಿ ಕಾಳು ತೆಗೆದುಕೊಂಡು ಹಸುವಿಗೆ ಪೂಜೆ ಮಾಡಿ ತಿನ್ನಿಸ ಬೇಕು ಈ ಮಂತ್ರವನ್ನು ೧೦೮ ಬಾರಿ ೪೮ ದಿನ ಪಠಿಸಬೇಕು...
ಓಂ ನಮೋ ಭಗವತೇ ಸರ್ವೇಶ್ವರಾಯಾ ಶ್ರೀ ಪತಯೇ ನಮಃ
⚛ ವೃಷಭ ರಾಶಿ ವೃಷಭ ರಾಶಿಯವರಿಗೆ ಅಧಿಪತಿ ಶುಕ್ರ ಬಿಳಿ ರೇಷ್ಮೆ ಬಟ್ಟೆಯಲ್ಲಿ ಶುಕ್ರವಾರದಂದು ಬಿಳಿ ಮುತ್ತನ್ನು ಕಟ್ಟಿ ನಿಮ್ಮ ಬಳಿ ಇಟ್ಟುಕೊಳ್ಳಬೇಕು
ಗುರುವಾರದಂದು ಕಡಲೇಕಾಳು ದಾನ ಮಾಡಿ..
ಓಂ ಐಂ ಶ್ರೀಂ ಹ್ರೀಂ ಕಮಲೇ ಕಮಲಾಲೇ ಪ್ರಸಿದ ಪ್ರಸಿದ ವೈಶ್ರಣಾಯಾ ಶ್ರೀ ಮಹಾಲಕ್ಷ್ಮಿಯೇ ನಮಃ
🕉 ಮಿಥುನ ರಾಶಿ ಮಿಥುನ ರಾಶಿಗೆ ಅಧಿಪತಿ ಬುಧಗ್ರಹ ಹಸಿರು ರೆಶ್ಮೆ ಬಟ್ಟೆಯಲ್ಲಿ ಪಚ್ಚೆಯನ್ನು ಕಟ್ಟಿ ನಿಮ್ಮ ಬಳಿ ಇಟ್ಟುಕೊಳ್ಳಬೇಕು
ತಾಮ್ರದ ಚೊಂಬಿನಲ್ಲಿ ನೀರು ಅರಿಶಿನ ಕುಂಕುಮ ಗಂಧ ಚೂರ್ಣ ಮಿಶ್ರಣ ಮಾಡಿ ಸೋಮವಾರ ದೇವರ ಮನೆಯಲ್ಲಿ ಸ್ಥಾಪಿಸಿ ಅದನ್ನು ಬುಧವಾರದಂದು ಹಸಿರು ಗಿಡಕ್ಕೆ ಚೆಲ್ಲಬೇಕು...
ಈ ರೀತಿ ವಾರಕ್ಕೊಮ್ಮೆ ಮಾಡುತ್ತಿರಬೇಕು..
ದಿನ ನಿತ್ಯವೂ ಈ ಮಂತ್ರ ಜಪಿಸಿ
ಓಂ ಯಕ್ಷ ರಾಜಾಯಾವಿದ್ಮಹೇ ಲಂಕಾಧಿಶ್ವರ ವಿದ್ವಮಹಿ ತನ್ನ ಕುಬೇರಯಾ ಪ್ರಚೋದಯಾತ್
⚛ ಕಟಕ ರಾಶಿ
ಕಟಕ ರಾಶಿಯವರು ಆಗ್ನೇಯ ದಿಕ್ಕಿಗೆ ಮುಖ ಮಾಡಿಕೊಂಡು ಶುಭದಿನ ಅಥವಾ ಹುಣ್ಣಿಮೆಯ ದಿನದಂದು ಬಿಳಿ ರೇಷ್ಮೆ ಬಟ್ಟೆಯಲ್ಲಿ ಬಿಳಿಯ ಮುತ್ತನ್ನು ತೆಗೆದುಕೊಂಡು ಮೊಸರಿನಲ್ಲಿ ತೊಳೆದು ಅದನ್ನು ಬಟ್ಟೆಯಲ್ಲಿ ಕಟ್ಟಿ ನಿಮ್ಮ ಬಳಿ ಗುಪ್ತವಾಗಿ ಇಟ್ಟುಕೊಳ್ಳಿ ..
ಓಂ ಕುಭೇರಾಯಾ ವೈಶ್ರವಣಾಯಾ ನಮಃ
🕉 ಸಿಂಹ ರಾಶಿ
ಸಿಂಹ ರಾಶಿಯವರು ಪೂರ್ವಾಭಿಮುಖವಾಗಿ ನಿಂತು ಕೆಂಪು ರೇಷ್ಮೆ ಬಟ್ಟೆಯಲ್ಲಿ ರೂಬಿ ಮತ್ತು ಹವಳವನ್ನು ನಿಮ್ಮ ಗಂಟು ಕಟ್ಟಿ ನಿಮ್ಮ ಬಳಿ ಅಥವಾ ನಿವೊ ಮಲಗುವ ಹಾಸಿಗೆಯಲ್ಲಿ ಇಟ್ಟುಕೊಳ್ಳಿ
ಹದಿನಾರು ಭಾನುವಾರ ರವೆಯಿಂದ ಮಾಡಿದ ಪದಾರ್ಥವನ್ನು ಆಕಳಿಗೆ ತಿಳಿಸಿ
ಓಂ ಶ್ರೀಂ ಹ್ರೀಂ ಕ್ಲಿಂ ಶ್ರೀಂ ಮಹಾಲಕ್ಷ್ಮಿ ಅಗಚ್ಚ ಆಗಚ್ಚ ಮಮ ಗೃಹೇ ಹ್ರೀಂ ನಮಃ
🕉 ಕನ್ಯಾ ರಾಶಿ
ಬುಧವಾರದಂದು ಹಸಿರು ರೇಷ್ಮೆ ಬಟ್ಟೆಯಲ್ಲಿ ಪಚ್ಚೆಯನ್ನು ಕಟ್ಟಿ ನಿಮ್ಮ ಬಳಿ ಇಟ್ಟುಕೊಳ್ಳಿ ಉತ್ತರಾಭಿಮುಖವಾಗಿ ನಿಂತು ಮಾಡಿ ...
ಈ ಮಂತ್ರ ಜಪಿಸುತ್ತಿರಿ
ಓಂ ನಮೋ ಕುಬೇರಾಯ ಶಾಶ್ವತಯಾ ನಿತ್ಯಾಯಾ ನಿತ್ಯ ಯೋಗಾನಂದ ಪರಮಾತ್ಮನೇ ನಮಃ
⚛ ತುಲಾ ರಾಶಿ
ತುಲಾ ರಾಶಿಯವರು ಪೊರ್ವಾಭಿಮುಖವಾಗಿ ಕುಳಿತುಕೊಂಡು ಬಿಳಿ ರೇಷ್ಮೆ ಬಟ್ಟೆಯಲ್ಲಿ ವಜ್ರವನ್ನು ಕಟ್ಟಿ ನಿಮ್ಮ ಬಳಿ ಇಟ್ಟುಕೊಳ್ಳಬೇಕು
೧೬ ಶುಕ್ರವಾರದಂದು ಆರು ಹಿಡಿ ಅವರೆ ಕಾಳನ್ನು ಪೂಜೆ ಮಾಡಿ ಆಕಳಿಗೆ ತಿನ್ನಿಸಬೇಕು..
ಓಂ ಶ್ರೀ ವಜ್ರದೇಹಾಯ ಪುಲಸ್ಯ ಪುತ್ರಾಯ ವೈ ಶ್ರವಣಾಯಾ ನಮಃ
🕉 ವೃಶ್ಚಿಕ ರಾಶಿ
ವೃಶ್ಚಿಕ ರಾಶಿಯವರು ಕೆಂಪು ರೇಷ್ಮೆ ಬಟ್ಟೆಯಲ್ಲಿ ಕೆಂಪು ಹವಳವನ್ನು ಕಟ್ಟಿ ನಿಮ್ಮ ಬಳಿ ಇಟ್ಟುಕೊಳ್ಳಬೇಕು
ಪ್ರತಿ ಮಂಗಳವಾರದಂದು ಒಂಬತ್ತು ಹಿಡಿ ತೊಗರಿ ಕಾಳನ್ನು ಹಸುವಿಗೆ ತಿನ್ನಿಸಿ ಸುಬ್ರಮಣ್ಯನ ಪೂಜೆ ಮಾಡಿ
ಓಂ ಶ್ರೀ ವೇದಲಕ್ಷ್ಮಿ ಸಮಘೋಷಾಯಾ ವೈಶ್ರವಣಾಯಾ ರತ್ನ ಸಿಂಹಾಸನಾಯಾ ನಮಃ
🕉 ಧನಸ್ಸು ರಾಶಿ
ಧನಸ್ಸು ರಾಶಿಯವರು ಹಳದಿ ರೇಷ್ಮೆ ಬಟ್ಟೆಯಲ್ಲಿ ಪುಷ್ಪರಾಗ ಹರಳನ್ನು ಗಂಟು ಕಟ್ಟಿ ನಿಮ್ಮ ಬಳಿ ಇಟ್ಟುಕೊಳ್ಳಿ .
ಮೂರು ಹಿಡಿ ಕಡಲೆ ಕಾಳನ್ನು ಗುರುವಾರದಂದು ಆಕಳಿಗೆ ತಿನ್ನಿಸುತ್ತಾ ಬನ್ನಿ
ಓಂ ಐಂ ಹ್ರೀಂ ಶ್ರೀಂ ಜೇಷ್ಟಾಲಕ್ಷ್ಮಿ ಸ್ವಯಂಭುವೇ ಹ್ರೀಂ ಜೇಷ್ಟಾಯೇ ನಮಃ
🕉 ಮಕರ ರಾಶಿ
ನೀಲಿ ರೇಷ್ಮೆ ಬಟ್ಟೆಯಲ್ಲಿ ಇಂದ್ರ ನೀಲವನ್ನು ಕಟ್ಟಿ ನಿಮ್ಮ ಬಳಿ ಇಟ್ಟುಕೊಳ್ಳಬೇಕು
ಈ ಮಂತ್ರದಿಂದ ಪ್ರತಿನಿತ್ಯ ಬನ್ನಿ ಮರ ಸುತ್ತಬೇಕು
ಓಂ ಆಂ ವೈ ಶ್ರವಣಾಯಾ ಉದ್ವರ್ತನಾಯೇ ಉದ್ದಾರಿಣೇ ನಮಃ
⚛ ಕುಂಭ ರಾಶಿ
ಕುಂಭ ರಾಶಿಯವರು ನೀಲಿ ರೇಷ್ಮೆ ಬಟ್ಟೆಯಲ್ಲಿ ೪ ರತಿ ಇಂದ್ರ ನೀಲವನ್ನು ಕಟ್ಟೆ ನಿಮ್ಮ ಬಳಿ ಇಟ್ಟುಕೊಳ್ಳಿ
ನಿಮ್ಮ ಮನೆಯ ನಾಲ್ಕು ಮೂಲೆಯಲ್ಲಿ ಅಥವಾ ನೀವೊ ಮಲಗುವ ಕೋಣೆಯ ನಾಲ್ಕು ಮೂಲೆಯಲ್ಲಿ ಸಣ್ಣ ಸಣ್ಣದಾದ ನಾಲ್ಕು ಮಡಿಕೆಗಳನ್ನು ಇಟ್ಟು ಅದಕ್ಕೆ ನೀರು ತುಂಬಿ ಬಿಳಿ ಹೂವುಗಳನ್ನು ಹಾಕಿ ಅದನ್ನು ಪ್ರತಿನಿತ್ಯ ಬದಲಿಸುತ್ತಿರಬೇಕು
ಓಂ ಶ್ರೀಂ ಹ್ರೀಂ ಕ್ಲೀಂ ಲಕ್ಷ್ಮಿ ದೇವೈ ನಮಃ
⚛ ಮೀನ ರಾಶಿ
ಮೀನ ರಾಶಿಯವರು ಹಳದಿ ರೇಷ್ಮೆ ಬಟ್ಟೆಯಲ್ಲಿ ಪುಷ್ಪರಾಗ ಹರಳನ್ನು ಕಟ್ಟಿ ನಿಮ್ಮ ಬಳಿ ಇಟ್ಟುಕೊಳ್ಳಬೇಕು
ಪ್ರತಿ ಗುರುವಾರ ಗುರುದತ್ತನ ದರ್ಶನ ಮಾಡಬೇಕು
ಓಂ ದ್ರಾಂ ದ್ರಿಂ ದ್ರೊಂ ದ್ರೇಂ ದೇಹಿ ಶ್ರೀ ಶ್ರೀ ಧನೇಶ್ವರಾಯಾ ಧನಂಜಯಾ ನಮಃ ...
ಸರಳ ಪರಿಹಾರ
*****
No comments:
Post a Comment