SEARCH HERE

Tuesday 1 January 2019

pitru paksha shraddha ಪಿತೃ ಪಕ್ಷ ಶ್ರಾದ್ಧ bhadrapada krishna paksha




why shraddha explained here




ಪಕ್ಷಮಾಸದಲ್ಲಿ ಪಿತೃಗಳ ಸಂಪ್ರೀತಿಗಾಗಿ ಮಹಾಸ್ವಾಮಿಗಳವರು ಅನುಗ್ರಹಪೂರ್ವಕವಾಗಿ ನೀಡಿರುವ ವಿಷ್ಣುಪಾದ ಸ್ತೋತ್ರ


Contact list for online shraddha performance in home 

********

Related Topics
Pind Daan-->  PINDA DAAN IMPORTANCE

Do it yourself--> PITRU PAKSHA DO IT YOURSELF

Tarpana--->  ತರ್ಪಣ tarpana

 Pitru Patti-->       pitrugala patti        











ಪಕ್ಷವೆಂದರೇನು ?

ಭಾದ್ರಪದ ಬಹುಳ ಪಾಡ್ಯದಿಂದ ಅಮಾವಾಸ್ಯೆಯ ತನಕ 15 ದಿನಗಳ ಈ ಕಾಲವನ್ನು “ಪಿತೃ ಪಕ್ಷ” “ಪಕ್ಷಮಾಸ” ಎನ್ನುತ್ತಾರೆ.
ಯಾವ ಶ್ರಾದ್ಧಾಧಿಕಾರಿಗಳು ಈ ಅವಧಿಯಲ್ಲಿ ಶ್ರಾದ್ಧವನ್ನು ಮಾಡುತ್ತಾರೋ ಅವರಿಗೆ ಪಿತೃಗಳು ಜ್ಞಾನ, ಭಕ್ತಿ, ಸಂಪತ್ತು ಮೊದಲಾದ ಆಶೀರ್ವಾದ ಮಾಡುತ್ತಾರೆ. ಮಾಡದವರಿಗೆ ಶಾಪವನ್ನು ನೀಡುತ್ತಾರೆ. ಪಿತೃಗಳ ಶಾಪದಿಂದ ವಂಶಾಭಿವೃದ್ಧಿ ಆಗುವುದಿಲ್ಲ.
ಮಹಾಭಾರತ ಪುರಾಣದ ಪ್ರಕಾರ ಕರ್ಣ ಯುದ್ಧದಲ್ಲಿ ಹತನಾದಾಗಿ, ಸ್ವರ್ಗ ಸೇರಿದಾಗ ಅವನಿಗೆ ಬಂಗಾರ ಮತ್ತು ಆಭರಣಗಳನ್ನು ಆಹಾರವಾಗಿ ನೀಡಲಾಯಿತು. ಆದರೆ ಕರ್ಣನಿಗೆ ಬೇಕಾಗಿದ್ದು ನಿಜವಾದ ಆಹಾರ.  ಇದರಿಂದ ಬೇಸತ್ತ ಕರ್ಣ ಇಂದ್ರನಲ್ಲಿ ಕೇಳುತ್ತಾನೆ.  ಆಗ ಇಂದ್ರ ಹೇಳುತ್ತಾನೆ “ನೀನು ನಿನ್ನ ಪೂರ್ವಿಕರಿಗೆ ಅವರ ಶ್ರಾದ್ಧದಲ್ಲಿ ಅನ್ನವನ್ನು ದಾನವಾಗಿ ನೀಡಿಲ್ಲ.  ಜೀವಮಾನ ಪೂರ್ತಿ ಬೇಕಾದಷ್ಟು ಬಂಗಾರಾದಿ ಆಭರಣಗಳನ್ನು ದಾನವಾಗಿ ನೀಡಿದ್ದೇ. ಅದಕ್ಕಾಗಿ ನಿನಗೆ ನಿಜವಾದ ಆಹಾರ ದೊರಕುತ್ತಿಲ್ಲ”.  ತನಗೆ ತನ್ನ ಪೂರ್ವಜರ ಬಗ್ಗೆ ಏನೂ ಗೊತ್ತಿಲ್ಲದಿದ್ದರಿಂದ ಯಾವ ಶ್ರಾದ್ಧವನ್ನು ಮಾಡಲಾಗಿಲ್ಲ ಎಂದು ಕರ್ಣ ಹೇಳುತ್ತಾನೆ.  ಇದಕ್ಕಾಗಿ ಅವನಿಗೆ ವಿಶೇಷವಾಗಿ ಪರಿಹಾರ ರೂಪವಾಗಿ ೧೫ ದಿನಗಳ ಕಾಲ ಭೂಲೋಕಕ್ಕೆ ಹೋಗಿ ಶ್ರಾದ್ಧ ಮಾಡಿ ಅವರ ನೆನಪಿನಲ್ಲಿ ಆಹಾರವನ್ನು ದಾನ ಮಾಡಲು ಅನುಮತಿ ನೀಡುತ್ತಾರೆ.  ಆ ಕಾಲಕ್ಕೆ ಪಕ್ಷಮಾಸವೆನ್ನುತ್ತಾರೆ.

ಮಹಾಲಯ ಅಂದರೆ – “ಮಹಾ” – ದೊಡ್ಡ “ಲಯ” – ನಾಶ – ಸಮುದ್ರ ಮಥನ ಸಂದರ್ಭದಲ್ಲಿ ಬಹಳ ಋಷಿಗಳು ಮತ್ತು ದೇವತೆಗಳು ದೈತ್ಯರಿಂದ ಸಂಹರಿಸಲ್ಪಟ್ಟರು.  ಈ ಋಷಿಗಳು ನಮ್ಮ ಪೂರ್ವಜರಾಗಿದ್ದುದರಿಂದ ಅವರ ನೆನಪಿನಲ್ಲಿ ಮಹಾಲಯ ಪಕ್ಷವವನ್ನು ಆಚರಿಸುತ್ತೇವೆ.  ಅದುವೇ ಸರ್ವಪಿತೃ ಅಮಾವಾಸ್ಯೆ.

ಪಿತೃಗಳಿಗೆ ತಿಲ ತರ್ಪಣವೇಕೆ ?
ಎಳ್ಳುಗಳ ಅಭಿಮಾನಿ ದೇವತೆ ಸೋಮ (ಚಂದ್ರ).  ಅವು ಅವನ ವೃದ್ಧಿಗೂ ಕಾರಾಣವಾಗಿವೆ.  ಅವನೇ ಪಿತೃಗಳಿಗೆ ಆಧಾರ.  ಪಿತೃಲೋಕ ಚಂದ್ರನ ಮೇಲ್ಭಾಗದಲ್ಲಿದೆ.  ಚಂದ್ರನ ಕಲೆಗಳೆ ಪಿತೃಗಳಿಗೆ ಆಹಾರ.  ಆದ್ದರಿಂದ ಚಂದ್ರನಿಗೆ ಪ್ರಿಯವಾದ ಎಳ್ಳು ಪಿತೃದೇವತೆಗಳಿಗೂ ಪ್ರಿಯವಾಗಿವೆ.    ಭೂಮಿಯಲ್ಲಿ ಸೂರ್ಯನ ಚಲನೆಗೆ ಅನುಗುಣವಾಗಿ ರಾತ್ರಿ ಹಗಲಾಗುವಂತೆ ಪಿತೃಲೋಕದಲ್ಲೂ ಸೂರ್ಯನ ಚಲನೆಗೆ ಕಾರಣವಾಗಿವೆ.  ಭೂಮಿಯಲ್ಲಿ 24 ಘಂಟೆಗೆ ಒಂದು ದಿನವಾದರೆ ಚಂದ್ರನಲ್ಲಿ 15 ದಿನ ಹಗಲು 15 ದಿನ ರಾತ್ರಿಯಾದರೆ ೧ ದಿನವಾಗುವುದು.  ಶುಕ್ಲಪಕ್ಷದ ಅಷ್ಟಮಿಯಿಂದ ಕೃಷ್ನಪಕ್ಷದ ಅಷ್ಟಮಿಯವತೆಗೆ ಪಿತೃಗಳಿಗೆ ರಾತ್ರಿಯಾದರೆ, ಕೃಷ್ಣಪಕ್ಷದ ಅಷ್ಟಮಿಯಿಂದ ಶುಕ್ಲ ಪಕ್ಷದ ಅಷ್ಟಮಿಯವರೆಗೆ ಹಗಲು.  ಅಂದರೆ ನಮ್ಮ ಒಂದು ತಿಂಗಳು ಪಿತೃಗಳಿಗೆ ಒಂದು ದಿನ.  ಆಗ ಪಿತೃಗಳಿಗೆ ಅಮಾವಾಸ್ಯೆ ನಡು ಮಧ್ಯಾಹ್ನವೆನಿಸುತ್ತದೆ.  ಆದ್ದರಿಂದ ಅಮಾವಾಸ್ಯೆಯಂದು ಪಿತೃಗಳಿಗೆ ತಿಲ ತರ್ಪಣಕ್ಕೆ ಮಹತ್ವ.  ದಕ್ಷಿಣಾಯಣದ ಕನ್ಯಾಮಾಸದಲ್ಲಿ ಸೂರ್ಯನು ಭೂಮಿಗೆ ಅತಿ ಸಮೀಪದಲ್ಲಿರುವುದರಿಂದ ಪಿತೃಪಕ್ಷದಲ್ಲಿ ತರ್ಪಣ ಶ್ರಾದ್ಧಕ್ಕೆ ಹೆಚ್ಚಿನ ಮಹತ್ವವಿದೆ.


Q – Who has to do paksha? ಯಾರು ಪಕ್ಷವನ್ನು ಮಾಡಬೇಕು ?

Answer – All those who have lost their fathers must do Paksha. ಯಾರಿಗೆ ತಂದೆಯಿಲ್ಲವೋ ಅವರೆಲ್ಲ ಮಾಡಬೇಕು.  ತಾಯಿ ಮೃತರಾಗಿದ್ದು ತಂದೆ ಜೀವಂತವಿದ್ದರೆ ಅವರು ಪಕ್ಷವನ್ನು ಮಾಡುವಂತಿಲ್ಲ. ತಾಯಿಗಾಗಿ ಅವಿಧವಾನವಮಿ ಮಾಡಬೇಕು.  

ಪ್ರಶ್ನೆ : ತಂದೆ ಸತ್ತ ವರ್ಷದಲ್ಲಿ ಪಕ್ಷವನ್ನು ಆಚರಿಸಬೇಕೆ ?

ಉತ್ತರ : ಇಲ್ಲ.  ತಂದೆ ಸತ್ತ ಮೇಲೆ ಒಂದು ವರ್ಷದ ಪರ್ಯಂತ ಅವರಿಗೆ ಪಕ್ಷವನ್ನು ಮಾಡುವಂತಿಲ್ಲ.  ಎರಡನೇ ವರ್ಷದಿಂದ ಆಚರಿಸಬೇಕು.

Q – Where Paksha/Shradha to be done? ಪಕ್ಷವನ್ನು ಎಲ್ಲಿ ಮಾಡಬೇಕು ?
Answser –  ಪಿತೃ ಕಾರ್ಯವನ್ನು ಯಾವುದಾದರೂ ಕ್ಷೇತ್ರದಲ್ಲಿ ಹೋಗಿ ಮಾಡುವುದು ಉತ್ತಮ.  ಅಥವಾ ನಮ್ಮ ಮನೆಗಳಲ್ಲೇ ಮಾಡುವುದು.  ಈಗಿನ ಕಾಲದಲ್ಲಿ ಮನೆಗಳಲ್ಲಿ ಮಾಡುವುದು ಮಡಿ ಮೈಲಿಗೆ ದೃಷ್ಟಿಯಿಂದ ಅನಾನುಕೂಲವಿರುವವರು ಸಮೀಪದ ಯಾವುದಾದರೂ ರಾಯರ ಮಠಗಳಲ್ಲಿ ಅಥವಾ ಅನುಕೂಲವಿರುವಲ್ಲಿ ಮಾಡಬಹುದು.  It is better to do it in a kshetra. If not possible atleast in your house. Now-a-days, because of non availability of requirements for Shradha in house, (eg – Fuel, water) it can be done in Rayara Mutts also.

Q – What are the Items required for Paksha ? ಪಕ್ಷವನ್ನು ಆಚರಿಸಲು ಬೇಕಾದ ಪದಾರ್ಥಗಳು ಯಾವುವು ?

ಉತ್ತರ : ಅಗ್ಗಿಷ್ಟಿಕೆ, ಇದ್ದಿಲು/ಸೌದೆ, ದರ್ಬೆ, ಅಕ್ಕಿ, ಹರಿನಿವೇದಿತ, ರಮಾ ನಿವೇದಿತವಾದ ಅನ್ನ, ತುಪ್ಪ, ಮೊಸರು, ಜೇನುತುಪ್ಪ, ಎಳ್ಳು, ನೀರು, ತುಳಸಿ ದಳ, ಪವಿತ್ರ, ವಿಷ್ಣುಪಾದ, ಬಾಳೆ ಎಲೆ, ಹಣ್ಣುಗಳು, ಪಂಚಪಾತ್ರೆ, ಉದ್ಧರಣೆ, ವಿಳ್ಳೆದೆಲೆ, ಅಡಿಕೆ, ಯಥಾಶಕ್ತಿ ದಕ್ಷಿಣೆ, ಯಜ್ಞೋಪವೀತ, ಗೋಪೀಚಂದನ,

(ಶ್ರಾದ್ಧ ಕಾಲದಲ್ಲಿ ಅನವಶ್ಯಕ ಮಾತು ಬೇಡ, ಕೋಪತಾಪಗಳಿಗೆ ಅವಕಾಶ ಕೊಡದಿರಿ)

Aggistike, Charcoal,  Dharbe (Kusa grass), plain rice, Rice (nivedita annam),  ghee, curds, honey, milk,  Black Sesame, water, Tulsi Leaves, Pavitra (Made of darbha), Vishnu padam (Foot print of Sri Maha Vishnu), Plantain Leaves, Fruits, Panchapatre, Uddrane, Villedele, Adike, Dakshine., yajnOpaveeta, gopichandana, donne.    During Shraddha time, better avoid conversation with other relations, mobile calls.

Steps for Shraddha/Paksha –
Achamana, Pavitradharana, punarachamana, Yavodaka, tilodaka, Amantrana for darbe brahmanaru, paada prakshalana, Asana, arghya, antaryaami pooja, Avaahana, gandha, mandala, paatraasadana, darbe brahmana bhojana, pinda pradana, pinda pooja, bhojana niyama, pinda visarjana, brahmana visarjana,  brahmana suvasini bhoori bhojana sankalpa, brahmana bhojana, taking ashirvaada from brahmanaas,   yajamaana bhojana, telling krishnarpana.




Specified dates for Paksha – ಪಕ್ಷವನ್ನು ಎಂದು ಆಚರಿಸಬೇಕು ?
ಉತ್ತರ: ಭಾದ್ರಪದ ಮಾಸದ ಕೃಷ್ಣ ಪಕ್ಷದ ಪಾಡ್ಯದಿಂದ ಅಮಾವಾಸ್ಯೆವರೆಗೆ ಪಕ್ಷವನ್ನು ಅನುಕೂಲವಿರುವವರು ಪ್ರತಿನಿತ್ಯ ಅಥವಾ ಕನಿಷ್ಟ ಒಂದು ದಿನ ಮಾಡತಕ್ಕದ್ದು. ಒಂದು ದಿನ ಮಾಡುವವರು ಸಾಮಾನ್ಯವಾಗಿ ತಮ್ಮ ತಂದೆಯ ನಿಧನರಾದ ದಿನದಂದು ಮಾಡುವ ಸಂಪ್ರದಾಯ.  ಉದಾಹರಣೆಗೆ: ತಂದೆ ಶುಕ್ಲ ಪಕ್ಷದ ದ್ವಿತೀಯ ಅಥವಾ ಕೃಷ್ಣ ಪಕ್ಷದ ದ್ವಿತೀಯಾದಂದು ಮೃತರಾಗಿದ್ದಾರೆ ಪಕ್ಷ ಮಾಸದ ದ್ವಿತೀಯಾದಂದು ಮಾಡತಕ್ಕದ್ದು ಅಥವಾ ಆ ಹದಿನೈದು ದಿನಗಳಲ್ಲಿ ನವಮಿ, ಏಕಾದಶಿ, ದ್ವಾದಶಿ, ಚತುರ್ದಶಿ ದಿನ ಬಿಟ್ಟು ಉಳಿದ ದಿನ ಮಾಡಬಹುದು.  ಅಕಸ್ಮಾತ್ ತಂದೆ ನವಮಿ, ಏಕಾದಶಿ,  ದ್ವಾದಶಿ ಅಥವಾ ಚತುರ್ದಶಿ ದಿನದಂದು ಮೃತರಾಗಿದ್ದರೆ ಕೂಡ ಈ ನಾಲ್ಕು ದಿನಗಳ ಬಿಟ್ಟು ಬೇರೆ ದಿನಗಳಲ್ಲಿ ಮಾಡಬೇಕು.

ಅಕಸ್ಮಾತ್ ಪಕ್ಷಮಾಸದಲ್ಲಿ ಅನಾನುಕೂಲವಿರುವವರು ತುಲಾ ಮಾಸದಲ್ಲಿ ಅಂದರೆ ಸೂರ್ಯ ತುಲಾ ರಾಶಿಯಲ್ಲಿ ಇರುವ ಸಮಯದಲ್ಲಿ ಮಾಡುವ ಸಂಪ್ರದಾಯ ಇದೆ.

Actually Paksha has to be done on all the 15 days.  (On Ekadashi without rice). Atleast Tila tarpana must be given on all the days during paksha maasa.  If one is not able to do paksha on all the days, they have to select a day, usually the day of his father’s death day. Suppose his father has died on Dwiteeya, then on Dwiteeya day itself shraddha to be done.  If it is inconvenient for him to do it on Dwiteeya, then he can do it on any day other day except the following days – Navami (meant for Avidhava – for those have died as muthaide), Ekadashi (Upavasa), Dwadashi (meant for Yathigalu), Chaturdashi (Ghata Chaturdashi – meant for accident victims).  They can do it on other days. For those who have died on Pournami day, Paksha to be done paadya or other convenient day.

If during this entire period, it is not possible to do the paksha, then you can do it during  Thula maasam i.e. When Surya enters Tula rashi 

NO MAHALAYA SHRADDHA DURING THE MRUTHA VARSHA – Until the completion of one year of the death, No Mahalaya shradda to be performed for the deceased.


ನರಹರಿ ಸುಮಧ್ವ
***
Mahalaya Paksha Part 2
ಮಹಾಲಯ ಪಕ್ಷ - ಭಾಗ ೨


ದರ್ಬೆಯನ್ನು “ಪವಿತ್ರ” ಎಂದು ಏಕೆ ಕರೆಯುತ್ತಾರೆ ?

ದರ್ಬೆ, ಕುಶ, ಬರ್ಹಿ, ಇವುಗಳು ಪವಿತ್ರ ದರ್ಬೆಯ ವಿವಿಧ ನಾಮಗಳು.  ಒಮ್ಮೆ ಗರುಡನು  ತನ್ನ ತಾಯಿಯಾದ ವಿನುತೆಗೆ, ಸರ್ಪಗಳ ತಾಯಿಯಾದ ಕದೃವಿನಿಂದ ಮುಕ್ತಿ  ಪಡೆಯಲು, ದೇವೇಂದ್ರನಿಂದ ಅಮೃತವನ್ನು ಪಡೆದು ಅದನ್ನು ಸರ್ಪಗಳಿಗೆ ನೀಡುವುದಕ್ಕಾಗಿ ಸ್ನಾನ ಮಾಡಿ ಶುದ್ಧವಾಗಿ ಬರಲು ಹೇಳುತ್ತಾನೆ. ಮತ್ತು ಆ‌ ಸರ್ಪಗಳು ಪುನಃ: ಬರುವವರೆಗೂ ಅಮೃತವನ್ನು ದರ್ಬೆಮೇಲೆ ಇಟ್ಟಿರುತ್ತಾನೆ.  ಅಷ್ಟರಲ್ಲಿ ದೇವೇಂದ್ರನು ಬಂದು  ಅಮೃತವನ್ನು ಹೊತ್ತುಕೊಂಡು ಹೋಗುವಾಗ ಅಮೃತದ ಒಂದು ಬಿಂದು ದರ್ಬೆಯ ಮೇಲೆ ಬೀಳುತ್ತದೆ.  ಆದ್ದರಿಂದ ದರ್ಬೆಯು ಶುದ್ಧವಾಗಿದೆ ಮತ್ತು ಪವಿತ್ರವೆನಿಸಿದೆ.

 

Q  – Why Darbe is called as pavitra ?

Answer – Darbe, Kusha, Barhi, Pavitra are the different names used for the darbe.  Once, Garuda, brought Amruta from Devendra to save his mother from the daasya of Kadru the mother of Snakes,  and told them to come with purify to take the amruta.   As told by Garuda, the snakes went for purification through snaana.  Before they could turn, Indra snatched the Amruta, which was kept on the Darbe.   While taking Amruta, a drop of Amruta fell on the Darbe, which made it pavitra.  That is why it is called as Pavitra.


ಶ್ರಾದ್ಧದಲ್ಲಿ “ಕಾಕ ಬಲಿ” ಏಕೆ?

ಕಾಕಬಲಿ ಎಂದರೆ ಕಾಗೆಗಳಿಗೆ ಅನ್ನ ನೀಡುವುದು. ಮೃತ ವ್ಯಕ್ತಿಯ ಸಲುವಾಗಿ ಶ್ರಾದ್ಧ ಸಂದರ್ಭದಲ್ಲಿ ಕಾಕಬಲಿ ನೀಡುವ ವಾಡಿಕೆ ಇದೆ. ಹಿಂದೆ ರಾವಣನ ಕಾಲದಲ್ಲಿ ಸೂರ್ಯವಂಶದ ರಾಜ ಮರುತ್ ಬೃಹಸ್ಪತಿಯ ಸಹೋದರನಾದ ಸಂವರ್ತನೆಂಬ ಋಷಿಯ ಪೌರೋಹಿತ್ಯದಲ್ಲಿ ಒಂದು ಯಜ್ಞವನ್ನು ನಡೆಸಿದ. ರಾವಣನಿಗೆ ಹೆದರಿದ ದೇವತೆಗಳು ಒಬ್ಬೊಬ್ಬರೂ ಒಂದೊಂದು ಪಕ್ಷಿಯ ರೂಪ ತಾಳಿ ಮರುತನ ಯಜ್ಞಕ್ಕೆ ಬಂದರು. ದೇವೇಂದ್ರ ನವಿಲಿನ ರೂಪದಲ್ಲಿ, ಬ್ರಹ್ಮನು ಹಂಸರೂಪದಿಂದ, ಯಮನು ಕಾಗೆ ರೂಪದಿಂದ ಬಂದರು. ಹೀಗೆ ಗೌಪ್ಯತೆ ಯಿಂದ ಪಕ್ಷಿ ಪ್ರಾಣಿ ರೂಪದಿಂದ ಬಂದ ದೇವತೆಗಳು ಆ ಪಕ್ಷಿ ಪ್ರಾಣಿಗಳಿಗೆ ಒಂದೊಂದು ವರ ನೀಡಿದರು. ಯಮದೇವರು ಕಾಗೆಗಳಿಗೆ ದೀರ್ಘಾಯುಷ್ಯ ನೀಡಿದರು. ಆದ್ದರಿಂದಲೇ ಕಾಗೆಗಳಿಗೆ ರೋಗ ಭಯವಿಲ್ಲ. ಅಸಹಜ ಸಾವು ಬಂದರೆ ಮಾತ್ರ ಅವುಗಳ ಸಾವು.

ಯಮದೇವರು ಮತ್ತೊಂದು ವರವನ್ನು ನೀಡಿದರು. ” ನನ್ನ ಲೋಕದಲ್ಲಿರುವ ಪಿತೃಗಳು ಕಾಗೆಗಳು ಸ್ವೀಕರಿಸುವ ಶ್ರಾದ್ಧದ ಉಚ್ಚಿಷ್ಟ ಪಿಂಡದಿಂದ ತೃಪ್ತರಾಗುವರು”. ಆ ಕಾರಣದಿಂದ ಕಾಕಬಲಿ ಮೂಲಕ ಪಿಂಡವನ್ನು ಇಡುತ್ತಾರೆ.

Shraddha Phala – ಶ್ರಾದ್ಧದ ಫಲ

By doing Shraddha/Paksha pitru devategalu will be satisfied.  Pitrantargata Srihari will be pleased.  We, people of the 21st century will ask “What will we get by doing shraddha/paksha?”

ಪಿತಾ ದದಾತಿ ಸತ್ಪುತ್ರಾನ್ ಗೋಧನಾನಿ ಪಿತಾಮಹ: |

ಧನದಾತಾ ಭವೇತ್ಸೋಪಿ ಯಸ್ತಸ್ಯ ಪ್ರಪಿತಾಮಹ: |

ದದ್ಯಾದ್ವಿಪುಲಮನ್ನಾದ್ಯಂ ವೃದ್ಧಸ್ತು ಪ್ರಪಿತಾಮಹ: |

ತೃಪ್ತಾ: ಶ್ರಾದ್ಧೇನ ತೇ ಸರ್ವೇ ದತ್ವಾ ಪುತ್ರಸ್ಯ ವಾಂಛಿತಂ ||

पिता ददाति सत्पुत्रान् गोधनानि पितामह: ।

धनदाता भवेत्सोपि यस्तस्य प्रपितामह: ।

दद्याद्विपुलमन्नाद्यं वृद्धस्तु प्रपितामह: ।

तृप्ता: श्राद्धेन ते सर्वे दत्वा पुत्रस्य वांछितं ।

 

pitaa dadaati satputraan gOdhanaani pitaamaha: |

dhanadaataa bhavEtsOpi yastasya prapitaamaha: |

dadyaadvipulamannaadyam vRuddhastu prapitaamaha: |

tRuptaa: shraaddhEna  tE sarvE datvaa putrasya vaanCitam|

By doing the shraddha/paksha, father will bless you with satputraas (good yogya children).  Your Pitamaha, i.e., grand father will bless you with go-dhana (cow-wealth), Prapitamaha (Great grand father – ಮುತ್ತಜ್ಜ) will bless with property and wealth.  They also bless us with Food, shelter, wealth, grains, etc.


ಮುಂದುವರಿಯುವುದು......

ನರಹರಿ ಸುಮಧ್ವ
**
Mahalaya Paksha Part ೩
ಮಹಾಲಯ ಪಕ್ಷ - ಭಾಗ ೩
part ೩ 

Q. Who are Dwadasha Pitrugalu?

ದ್ವಾದಶ ಪಿತೃಗಳು ಯಾರು ?

Dwadasha Pitrugalu means 12 pitrugalu, viz.,

a.  Pitruvarga (ಪಿತೃವರ್ಗ) – pitru traya – Pitru, pitaamaha, prapitaamaha. ತಂದೆ ; ತಾತ; ಮುತ್ತಾತ

b.  Matruvarga (ಮಾತೃವರ್ಗ) – matru traya – Matru, Pitamahi, prapitaamahi  ತಾಯಿ ; ಅಜ್ಜಿ ; ಮುತ್ತಜ್ಜಿ ( ಅಂದರೆ ತಾಯಿ; ತಂದೆಯ ತಾಯಿ; ತಾತನ ತಾಯಿ)

c.  Maataamaha varga – maataamaha, maatu:pitaamaha; maatu:prapitaamaha
ತಾಯಿಯ ತಂದೆ ; ತಾಯಿಯ ತಂದೆಯ ತಂದೆ ; ತಾಯಿಯ ತಾತ


d.  Maataamahi varga – maataamahi, maatu:pitaamahi; maatu:prapitaamahi
ತಾಯಿಯ ತಾಯಿ; ತಾಯಿಯ ತಾಯಿಯ ತಾಯಿ; ತಾಯಿಯ ಅಜ್ಜಿ

------------++-----+++ ------

ಯಾರ್ಯಾರು ಯಾವ ಯಾವ ರೂಪದಲ್ಲಿ

Paternal Side (Father’s side pitrugalu)

Pithram (Father) (vasu roopam) ತಂದೆ – ವಸುರೂಪ

Pithamaham (Grand Father – Father’s father) (rudra roopam) ತಂದೆಯ ತಂದೆ  – ಪಿತಾಮಹ – ರುದ್ರ ರೂಪ

Prapithamaham (Great Grand Father- Father’s paternal grand father) (Aditya roopam) – ಪ್ರಪಿತಾಮಹ – ತಂದೆಯ ತಾತ (ತಂದೆಯ ತಂದೆಯ ತಂದೆ) - ಪ್ರಪಿತಾಮಹ - ಆದಿತ್ಯ ರೂಪ



Maatharam (Mother) (vasu roopam) – ತಾಯಿ – ಮಾತರಂ (ವಸು ರೂಪ)

Pitamahim – (Grand Mother. i.e., father’s mother) (Rudra Roopam) – ತಂದೆಯ ತಾಯಿ (ಪಿತಾಮಹಿ)  ರುದ್ರರೂಪ

Prapithamahim (Great Grand Mother- Fathers paternal Grand Mother) (aditya roopam)

 ಪ್ರಪಿತಾಮಹಿಂ – ತಂದೆಯ ತಂದೆಯ ತಾಯಿ – ಆದಿತ್ಯರೂಪ


 Saapatni Janani (Step Mother, if any)(vasu roopam) ಮಲತಾಯಿ
 Maternal Side (Mother’s side Pitrugalu)

8. Maataram (Mother)(vasu roopam) ತಾಯಿ – ವಸುರೂಪ
9. Maatamaham (Grand Father-Mother’s father) (vasu roopam) ತಾಯಿಯ ತಂದೆ - ರುದ್ರರೂಪ

10. Maathu Pitamaham (Great Grand Father-Mother’s paternal grand father)(rudraroopam) – 

11. Maathu Prapithamaham (Great Great Grand Father-Mother’s paternal G.Grand father)(Aditya roopam) ಆದಿತ್ಯ ರೂಪ 


12. Maatamahim (Mother’s mother)
13. Maathu Pitaamahim (Mothers paternal grand mother)
14. Maathu Prapithamahim (Mother’s paternal Great Grand Mother)

ಉಳಿದ ಪಿತೃಗಳು 

Other Pitrugalu –

Atma Pathnim (Wife/wives) ಹೆಂಡತಿ
Tanayaadi – Sutham (son/s) ಮಗ
Bhratharam (brother/s) ಸಹೋದರ
Tatpatneem (brother’s wife/s) ಸಹೋದರನ ಹೆಂಡತಿ (ಅತ್ತಿಗೆ, ನಾದಿನಿ)
Pithravyam  (Father’s brothers) ತಂದೆಯ ಅಣ್ಣತಮ್ಮಂದಿರು
Tatpatneem (uncle’s wife/s) ತಂದೆಯ ಅಣ್ಣತಮ್ಮಂದಿರ ಹೆಂಡತಿ/ಯರು
Mathula (Maternal Uncle/s) ಸೋದರ ಮಾವ
Tatpatneem (Their wife/s) ಸೋದರ ಮಾವನ ಹೆಂಡತಿ
Putram ( ಮಗ )
Putrim (Self daughter) ಮಗಳು
Tadbhartaaram (Her husband – Jamaatha) ಅಳಿಯ
Dauhitharam (Daughter’s son) ಮೊಮ್ಮಗ (ಮಗಳ ಮಗ)
Atma Bhagini (Sister/s) ಸಹೋದರಿ
Tadbhartaaram (Her husband) ಸಹೋದರಿಯ ಗಂಡ – ಭಾವ
Tatputram (Her sons – Bhagineeyam) ಸಹೋದರಿಯ ಮಕ್ಕಳು
Pithruswasa (Father’s sister) ತಂದೆಯ ಸಹೋದರಿ
Tatpatneem (Her husband) ತಂದೆಯ ಸಹೋದರಿಯ ಗಂಡ
Maathuswasa (Mother’s sister) ತಾಯಿಯ ಸಹೋದರಿ
Tatpateem (Her husband) ತಾಯಿಯ ಸಹೋದರಿಯ ಗಂಡ
Jaayaapita (Father-in-law)
jaamaata (Mother-in-law)
Shalaka/Bhavuka (Brother-in-law) ಹೆಂಡತಿಯ ಅಣ್ಣತಮ್ಮಂದಿರು
Tatpatneem (Their wife/wives)
Gurum (Vidya Guru)
Tatpatneem (Guru patnee)
Achaaryam (Purohit/priest)
Tatpatneem (His spouce/s)
Shishyam (Disciple)
Aptam (Friend)
ಇಲ್ಲಿ ಮೇಲೆ ಕೊಟ್ಟಿರುವ ಲಿಸ್ಟಿನಲ್ಲಿ ಮೃತರಾದವರಿಗೆ ಮಾತ್ರ ಪಿಂಡವನ್ನು ಇಡಬೇಕು.

ಅಕಸ್ಮಾತ್ ಮೃತರಾದ ಬಂಧುಗಳ ಹೆಸರು ಗೊತ್ತಿಲ್ಲದಿದ್ದರೆ ಗಂಡಸಾದರೆ ಯಜ್ಞಪ್ಪ ಎಂದೂ ಹೆಂಗಸಾದರೆ ಯಜ್ಞಮ್ಮ ಎಂದೂ ಪಿಂಡ/ತರ್ಪಣ ಕೊಡಬೇಕು.  ಗೋತ್ರ‌ ಗೊತ್ತಿಲ್ಲದಿದ್ದರೆ ಕಾಶ್ಯಪ ಗೋತ್ರ ಎನ್ನಬೇಕು.

If name is not known Yagnamma for ladies and Yagnappa for gents to be used.If Gotra is not known, then Kashyapa Gotra to be used.  For Gents Gotram and for women Gotraam to be used. For Gents’ name “Sharmanam” and for ladies “Daam” to be added.

Rigvedees must tell their name first, followed by gotra, then roopa. Yajurvedees must tell their gotra, followed by name and roopa

ನರಹರಿ ಸುಮಧ್ವ
***
On the Shraddha/Paksha Day, we must follow some practices :

a.   We must not brush our teeth

b.  We must not eat taamboola

c.  We must not take oil bath

d.  On shraddha day, we must observe brahmacharya

e.  Medicines to be used only if it is inevitable.

f.  Rathri bhojana nishiddha

g. Previous day night also bhojana nishiddha

h. After completion of pooja, we must take nirmalya only.

i.  Theertha can be taken only after completion of shraddha, giving it to brahmana suvasiniyaru.

j.  Only one meals per day during entire paksha maasa for those who are not having father.

k. Morning, Sandhyavandana, Pooja to be done, then only Tarpana to be given

l.  Tarpana to be given from Nirmalya Tirtha

m. Tila Tarpana to be given with Pavitra dharana or atleast nirmalya tulasi.

Mahalaya Maasa ಮಹಾಲಯ ಮಾಸ

Bhadrapada Krishna Paadya to Amavasye  period is also called as Mahalaya Paksha Maasa.   Maha – great laya, i.e., destruction.  It is said that during one of the wars between Devategalu and daityarugalu, during Bhadrapada Bahula Maasa, many devataas and Rishigalu had died. These devategalu and rishis are like our forefathers and it was during Mahalaya that these Devategalu  and Rishis had died. This is why this period is called as Mahalaya.
***



 ಕಾಕ ಬಲಿ " ಎಂದರೆ = ಕಾಗೆಗಳಿಗೆ ಅನ್ನ ನೀಡುವುದು ಎಂದು ಅರ್ಥ!

ಮೃತನಾದ ವ್ಯಕ್ತಿಯ ಸಲುವಾಗಿ 10ನೇ ದಿನ ಈ ಕಾಕ ಬಲಿ ಇಡುವುದುಂಟು.

ಕಾಗೆ ಆ ಬಲಿಯನ್ನು ಮುಟ್ಟದಿದ್ದರೆ ಅಥವಾ ತಿನ್ನದಿದ್ದರೆ ಮೃತನಾದ ವ್ಯಕ್ತಿಗೆ ತೃಪ್ತಿಯಾಗಲಿಲ್ಲ ಎಂದು ಭಾವಿಸುವುದುಂಟು.

ಹಾಗಾದರೆ..

ಕಾಗೆಗೆ - ಪಿತೃಗಳಿಗೆ ಸಂಬಂಧ ಉಂಟೆ?

ಎಂಬುದಕ್ಕೆ ಉತ್ತರ ಇಲ್ಲಿದೆ.

ಶ್ರೀ ರಾಮಾಯಣ ಉತ್ತರಕಾಂಡದಲ್ಲಿ ಒಂದು ಪ್ರಸಂಗ...

ಸೂರ್ಯವಂಶದ ಕ್ಷತ್ರೀಯ ವೀರ " ಮರುತ್ ". ಅವನು ಶ್ರೀ ಬೃಹಸ್ಪತಿಯ ಸಹೋದರನಾದ ಶ್ರೀ ಸಂವರ್ತನೆಂಬ ಬ್ರಹ್ಮರ್ಷಿಯ ಪೌರೋಹಿತ್ಯದಲ್ಲಿ ದೊಡ್ಡ ಯಜ್ಞವೊಂದನ್ನು ನಡೆಸಿದ.

ಅದು ರಾವಣನ ಕಾಲ! ಅವನಿಗೆ ಹೆದರಿದ ದೇವತೆಗಳು ಒಬ್ಬೊಬ್ಬರು ಒಂದೊಂದು ಪಕ್ಷಿಯ ರೂಪ ತಾಳಿ ಮರುತ್ತನ ಯಜ್ಞಕ್ಕೆ ಬಂದರು!

ಶ್ರೀ ಬ್ರಹ್ಮದೇವರು " ಹಂಸ " ರೂಪದಲ್ಲಿ;ಶ್ರೀ ದೇವೇಂದ್ರ " ನವಿಲು " ರೂಪದಲ್ಲಿ;ಶ್ರೀ ಯಮಧರ್ಮರಾಜರು " ಕಾಗೆ " ಯ ರೂಪದಲ್ಲಿ ಬಂದರು!

ಹೀಗೆ ಯಜ್ಞದಲ್ಲಿ ಭಾಗವಹಿಸಿದ ಅವರು ತಮ್ಮ ಗೌಪ್ಯತೆಗೆ ಕಾರಣವಾದ ಆ ಪಕ್ಷಿ ಪ್ರಾಣಿಗಳಿಗೆ ಒಂದೊಂದು ವರ ನೀಡಿದರು.

ಶ್ರೀ ಯಮಧರ್ಮರಾಜರು ಕಾಗೆಗಳಿಗೆ ದೀರ್ಘಾಯುಷ್ಯವನ್ನು ನೀಡಿದರು. ಯಾವ ರೋಗ ಭಯವೂ ಕಾಗೆಗಳಿಗೆ ಇಲ್ಲ. ಮನುಷ್ಯನು ಕೊಂದರಷ್ಟೇ ಅವುಗಳಿಗೆ ಮರಣ ಬರುತ್ತದೆ.

ಶ್ರೀ ಯಮಧರ್ಮರಾಜರು ಕಾಗೆಗಳಿಗೆ ಇನ್ನೊಂದು ವರವನ್ನು ನೀಡಿದರು...

ಯೇ ಚ ಮದ್ವಿಷಯಸ್ಥಾವೈ ಮಾನವಾ ಕ್ಷುಧಯಾರ್ದಿತಾಃ ।

ತ್ವಯಿ ಭಕ್ತೇ ಸುತೃಪ್ತಾಸ್ತೇ ಭವಿಷ್ಯಂತಿ ಸ ಬಾಂಧವಾ: ।।

ನನ್ನ ಲೋಕದಲ್ಲಿರುವ ಪಿತೃಗಳು, ನೀವು ( ಕಾಗೆಗಳು ) ಅನ್ನವನ್ನು ಸ್ವೀಕರಿಸಿದರೆ ಆ ಮೂಲಕ ಸಂತೃಪ್ತರಾಗುತ್ತಾರೆ. ಈ ಕಾರಣದಿಂದ " ಕಾಕ ಬಲಿ " ಯ ಮೂಲಕ ಪಿತೃಗಳು ತೃಪ್ತರಾಗುವರೆಂಬ ನಂಬಿಕೆ ರೂಢಿಯಲ್ಲಿ ಬಂದಿದೆ.

ಆಚಾರ್ಯ ನಾಗರಾಜು ಹಾವೇರಿ
***


Bhadrapada maasa krishna paksha is known as Pitrupaksha.  This time period is exclusively for pitrukaaryas. No festivals utsavas celebrations are observed. 

Daana, Brahmana bhojana in the name of pitrus is highly meritorious during this time period. 

Tila tarpana along with pinda pradana shraaddha in the name of pitrus give pitrus trupti.

"Shraddhaya iti Shraddhah"

That which is done with high devotion is called Shraddha. 

Pitru ganas are the devatas that are invited for Shraaddha. Their duty is to transfer all the offerings to the respective forefathers of karta (doer) of shraaddha.. Irrespective of the lokas in which the forefathers may be.

Pitru devatas are Vasu Rudra Aditya devatas. Presiding bhagavat roopas are PRADYUMNA, SANKARSHANA, VAASUDEVA

They are invoked inside a brahmana and pooja/upacharas are offered by mentioning the names gotra of respective forefathers. 

(If gotra of forefathers is not known the one can say Kashyap gotra and then continue. If name is not known then one can say Yagnyappa/Yagnyamma.)

Vishwe devatas  (devatas who belong to19th kaksha of taratamya) have task of inviting Pitru devatas. Without the presence of Vishwe devatas, Pitru devatas  cannot be invited.

Presiding bhagavat roopa for vishwe devatas are ANIRUDDHA, NARAYANA.

They are also invoked inside a brahmana and pooja/upacharas are offered 

Nowadays these Pitru devatas and Vishwe devatas are invoked inside a darbha due to desha kaala paristhiti and is in accordance with shastras.

Aim of Shraaddha is to please and seek blessings of Pitru antargata Vayu antargata MADHWA VALLABHA JANARDHANA VAASUDEVA


Shri Krishnaarpamanstu.

*******

Remember this
Adya Sri  Bhagavatha maha purushasya  Vishnor Agnaya  pravarthamanasya  Adhya Brahmana  Dweethiya parardhe  Swetha  Varaha kalpe  Vaivaswatha manvanthare  ashta vimsathi thame  kali yuge  prathame padhe ,jambu dweepe , Bharatha varshe,  Bharatha Khande , Mero Dakshine Parswe , Sakabdhe  asmin varthamane  vyvaharike
 Prabhavadeenam sashtya samvatsaranam madhye   ......   Nama samvatsare  , dakshina ayane,  rithou,  bhadrapada mase,   Krishna  pakshe   ,   Adhya  .........      Punya thithou    ....... vasra yukthayam  ......   nakshatra yukthayam      Shubha yoga –Shubha karana,  Evam guna viseshana visishtayam  asyam  .......      Punya thithou....

***********

Q  – Why Darbe is called as pavitra?

Answer – Darbe, Kusha, Barhi, Pavitra are the different names used for the darbe.  Once, Garuda, brought Amruta from Devendra to save his mother from the daasya of Kadru the mother of Snakes,  and told them to come with purify to take the amruta.   As told by Garuda, the snakes went for purification through snaana.  Before they could turn, Indra snatched the Amruta, which was kept on the Darbe.   While taking Amruta, a drop of Amruta fell on the Darbe, which made it pavitra.  That is why it is called as Pavitra.

Q – Why one has to do shraadha/paksha?
ಪ್ರಶ್ನೆ – ಶ್ರಾದ್ಧವನ್ನು / ಪಕ್ಷವನ್ನು ಏಕೆ ಮಾಡಬೇಕು?

Answer – Having born on shresta karma bhoomi bharatha, one has to get discharged from mainly four Runaas viz., Pitru Runa, Deva Runa, Rushi Runa and Acharya Runa. Pitru Runa can be discharged in the following ways – by getting a male child, by maataa-pitru seva, and by performing pitru yagna.

Why Paksha will be observed during this period – for pitru devategalu, one month of Human period is equal to one day, and shukla paksha is the day and Krishna paksha is the night for them. What we are giving as Thila Tarpana and Pinda pradhana during the said period will be sufficient for them throughout the year. That is why one is performing Paksha during the period.   The rituals performed during 15 days of the Mahalaya are considered important and considered equal to that being performed in holy places like Gaya.  Offerings made to the Pitru devategalu during this fortnight reach them directly as ordained by Lord Yama. Offerings reach all departed souls, whether they are directly related to those offering them or not.  Thila or sesame seeds tarpana and pinda pradhana or rice ball offerings are made to departed ancestors during the fortnight. The food offerings reach the dead through the rays of the sun.

Q – Who has to do paksha?

Answer – All those who have lost their fathers must do Paksha.

Q – Where Paksha/Shradha to be done?
Answser – It is better to do it in a kshetra. If not possible atleast in your house. Now-a-days, because of non availability of requirements for Shradha in house, (eg – Fuel, water) it can be done in Rayara Mutts also.

Q – What are the Items required for Paksha ?
Aggistike, Charcoal,  Dharbe (Kusa grass), plain rice, Rice (nivedita annam),  ghee, curds, honey, milk,  Black Sesame, water, Tulsi Leaves, Pavitra (Made of darbha), Vishnu padam (Foot print of Sri Maha Vishnu), Plantain Leaves, Fruits, Panchapatre, Uddrane, Villedele, Adike, Dakshine., yajnOpaveeta, gopichandana, donne.    During Shraddha time, better avoid conversation with other relations, mobile calls.

Steps for Shraddha/Paksha –
Achamana, Pavitradharana, punarachamana, Yavodaka, tilodaka, Amantrana for darbe brahmanaru, paada prakshalana, Asana, arghya, antaryaami pooja, Avaahana, gandha, mandala, paatraasadana, darbe brahmana bhojana, pinda pradana, pinda pooja, bhojana niyama, pinda visarjana, brahmana visarjana,  brahmana suvasini bhoori bhojana sankalpa, brahmana bhojana, taking ashirvaada from brahmanaas,   yajamaana bhojana, telling krishnarpana.

Specified dates for Paksha –
Actually Paksha has to be done on all the 15 days.  (On Ekadashi without rice). Atleast Tila tarpana must be given on all the days during paksha maasa.  If one is not able to do paksha on all the days, they have to select a day, usually the day of his father’s death day. Suppose his father has died on Dwiteeya, then on Dwiteeya day itself shraddha to be done.  If it is inconvenient for him to do it on Dwiteeya, then he can do it on any day other day except the following days – Navami (meant for Avidhava – for those have died as muthaide), Ekadashi (Upavasa), Dwadashi (meant for Yathigalu), Chaturdashi (Ghata Chaturdashi – meant for accident victims).  They can do it on other days. For those who have died on Pournami day, Paksha to be done paadya or other convenient day.

If during this entire period, it is not possible to do the paksha, then you can do it during  Thula maasam i.e. When Surya enters Kanya rashi (upto Ashwayuja bahuLa panchami ) .

NO MAHALAYA SHRADDHA DURING THE MRUTHA VARSHA – Until the completion of one year of the death, No Mahalaya shradda to be performed for the deceased.

 Shraddha Phala – ಶ್ರಾದ್ಧದ ಫಲ
By doing Shraddha/Paksha pitru devategalu will be satisfied.  Pitrantargata Srihari will be pleased.  We, people of the 21st century will ask “What will we get by doing shraddha/paksha?”

ಪಿತಾ ದದಾತಿ ಸತ್ಪುತ್ರಾನ್ ಗೋಧನಾನಿ ಪಿತಾಮಹ: |
ಧನದಾತಾ ಭವೇತ್ಸೋಪಿ ಯಸ್ತಸ್ಯ ಪ್ರಪಿತಾಮಹ: |
ದದ್ಯಾದ್ವಿಪುಲಮನ್ನಾದ್ಯಂ ವೃದ್ಧಸ್ತು ಪ್ರಪಿತಾಮಹ: |
ತೃಪ್ತಾ: ಶ್ರಾದ್ಧೇನ ತೇ ಸರ್ವೇ ದತ್ವಾ ಪುತ್ರಸ್ಯ ವಾಂಛಿತಂ ||

पिता ददाति सत्पुत्रान् गोधनानि पितामह: ।
धनदाता भवेत्सोपि यस्तस्य प्रपितामह: ।
दद्याद्विपुलमन्नाद्यं वृद्धस्तु प्रपितामह: ।
तृप्ता: श्राद्धेन ते सर्वे दत्वा पुत्रस्य वांछितं ।

pitaa dadaati satputraan gOdhanaani pitaamaha: |
dhanadaataa bhavEtsOpi yastasya prapitaamaha: |
dadyaadvipulamannaadyam vRuddhastu prapitaamaha: |
tRuptaa: shraaddhEna  tE sarvE datvaa putrasya vaanCitam|

By doing the shraddha/paksha, father will bless you with satputraas (good yogya children).  Your Pitamaha, i.e., grand father will bless you with go-dhana (cow-wealth), Prapitamaha (Great grand father – ಮುತ್ತಜ್ಜ) will bless with property and wealth.  They also bless us with Food, shelter, wealth, grains, etc.

Question – Whether pitru devates will come to our house on that Shraddha/Paksha Day?

Yes.  They will come.  Pitruantargata Vasurudra Adityas antargata pradyumna sankarshana Vasudeva Roopi paramathma will come in Vaayu roopa, watch shraddha karma, eat and will be pleased (if done with proper achara vichara).  If shraddha not done in a particular house, pitru devates will wait till suryasta, and leave the house with hungry and thirsty, and also curse his family members.

ಪಿತೃಯಜ್ಞ ದಿನೇಪ್ರಾಪ್ತೆ, ಗೃಹದ್ವಾರಂ ಸಮಾಶ್ರಿತಾ:
ವಾಯುಭೂತಾ: ಪ್ರವಾಂಛಂತಿ, ಶ್ರಾದ್ಧಂ ಪಿತೃಗಣಾನೃಣಾಂ |
ಯಾವದಸ್ತಮಯಂ ಭಾನೋ: ಕ್ಷುತ್ಪಿಪಾಸಾ ಸಮಾಕುಲಾ: |
ನಿಶ್ವಸ್ವ ಸುಚಿರಂ ಯಾಂತಿ ಗರ್ಹಯಂತಿ ಸ್ವವಂಶಜ: |

पितृयज्ञ दिनेप्राप्तॆ, गृहद्वारं समाश्रिता:वायुभूता: प्रवांछंति, श्राद्धं पितृगणानृणां ।
यावदस्तमयं भानो: क्षुत्पिपासा समाकुला: । निश्वस्व सुचिरं यांति गर्हयंति स्ववंशज: ।

pitRuyajna dinEpraapte, gRuhadvaaram samaashritaa:vaayubhUtaa:
pravaanchaanti, shraaddham pitRugaNaanRuNaam |
yaavadastamayam bhaanO: kShutpipaasaa samaakulaa: |
nishvasva suchiram yaanti garhayanti svavamshaja: |

ಧನದಾತಾ ಭವೇತ್ಸೋಪಿ ಯಸ್ತಸ್ಯ ಪ್ರಪಿತಾಮಹ: |
ದದ್ಯಾದ್ವಿಪುಲಮನ್ನಾದ್ಯಂ ವೃದ್ಧಸ್ತು ಪ್ರಪಿತಾಮಹ: |
ತೃಪ್ತಾ: ಶ್ರಾದ್ಧೇನ ತೇ ಸರ್ವೇ ದತ್ವಾ ಪುತ್ರಸ್ಯ ವಾಂಛಿತಂ ||

Maha Bharani Shraddha – ಮಹಾಭರಣಿ ಶ್ರಾದ್ಧ 
Paksha done on Mahabharani shraddha day is of high importance.  This is observed during Bhadrapada Krishna paksha, on the day on which Bharani Nakshatra is there.   Even if you have are doing paksha on some other day also, this also Paksha must be done.

Vyateepata Shraddha – ವ್ಯತೀಪಾತ ಶ್ರಾದ್ಧ

Paksha done on Vyateepata shraddha day is also of high importance.  This is observed during Bhadrapada Krishna paksha, on the day on which Vyateepata Yoga is observed.    Even if you have are doing paksha on some other day also, this also Paksha must be done.

Avidhava Navami ಅವಿಧವಾ ನವಮಿ ಶ್ರಾದ್ಧ

Vidhava means Widow. “Avidhava” means not a Widow -Sumangali. Avidhava Navami in the context of Pitru Paksham is the day on which cermonies/rituals are to be performed for those Women (Mothers) who died as Sumangali. It should be performed by the son/s on the Navami tithi day during Pithru Paksha. Avidha Navami is followed by those who have lost their mothers and their father is alive.  They have to do it on Bhadrapada Krishna Navami day.  They have to invite Mutthaide-Brahmana Dampatigalu. Give them marada baagina (ಮರದ ಬಾಗಿನ) containing all saumangala items like haridra, kumkuma, coconut, rice, dalls, blouse peace, villedele, adike, dakshine, if possible sarry, blousepiece, etc..  On this day, pinda pradhana to be done.  Atleast tila tarpana to be done.  Here during Avidhava navami, unlike paksha (wherein all the forefathers will be called), only his mother/mother’s in law and great grand mother will be called and panda pradhana will be done.

Kapila Shashti yoga – ಕಪಿಲ  ಷಷ್ಟಿ ಯೋಗ

If Bhadrapada Masa Krishna paksha Shasti tithi falls on Sunday or Tuesday ., and if on that day Vyatipata yoga is there and Rohini Nakshatr is there it is called as KAPILA SHASTI YOGA.    On this day, we must do the archana of Surya and do the daana of kapila dhenu.  Shraddha done on this day will have more punya.

Yati Mahalaya ಯತಿಮಹಾಲಯ 

Bhadrapada Bahula Dwadashi is meant for Yathigalu.  On this day, hastodaka will be given to all the Yatigalu who have entered Vrundavana.  On this day, Paksha for other pitrugalu and forefathers not to be done.  This day is exclusively reserved for Yathigalu.

The reason for performing the Shraddha for Sanyaasis and saints is that they have preserved and passed on the knowledge of sanatharma dharma and had done great service to the society.  We have to do yathi dwadashi shraddha to get ourselves free from Yati Runa, that is why it is called as “Yati Dwadashi”.  These Yatigalu having prepared so many shastra granthaas, vyaakyaanaanaas, Teeka granthaas have helped us a lot in learning ancient granthaas.  So, we have Runa to them  – Yati Runa.  That is why we have do Yati Mahalaya.

This shraaddha to be done by Yatiputraaas only.  Who are Yatiputraas?  Those who have grantha/shastra runa from the yatigalu are termed as “yati putraas”. Yati Shraadda does not mean that we need to give pinda pradhana to yatigalu. This is anna santarpana/hastodaka to yatigalu in the forkm of bhojana to brahmana suvasini santarpane.

Those who are doing daily paksha shraddha can do it on Yathi Mahalaya Dwadashi also.

Trayodashi Shraaddha – ತ್ರಯೋದಶಿ ಶ್ರಾದ್ಧ
Shraaddha done on Bhadrapada Bahula Trayodashi will please the forefathers and keep them happy with five hundred years.  On this day, if it has Makha Nakshatra and Surya in Hasta Nakshatra, it is called as “Gajachchaaya Yoga or Vaivaswathee Gajachchaaya”.  Shraaddha done on Bhadrapada Bahula Trayodashi will fetch him punya equal to Gaya Shraddha.  Those who are having male child not to do pinda shraddha on Trayodashi day, he has to do only sankalpa shraddha. If he does, the jysta putra will die. The shraddha done on this day fetches punya equal to Gaya shraddha.

Ghata Chaturdashi – ಘಾತ ಚತುರ್ದಶಿ
Bhadrapada Krishna Chaturdashi –

ಪ್ರತಿಪತ್ ಪ್ರಭೃತಿಷ್ವೇಕಾಂ ವರ್ಜಯಿತ್ವಾ ಚತುರ್ದಶೀಂ |
ಶಸ್ತ್ರೇಣ ತು ಹತಾ ಯೇ ವೈ ತೇರ್ಭ್ಯಸ್ತತ್ರ ಪ್ರದೀಯತೇ |

This day is meant for  those who have passed away due to accidents or those who met with unnatural death like snake bites, accidents, suicide, war, and other natural calamities, etc.  The day is known as Ghata Chaturdashi.  There is a strong belief that the souls of these people who had an unnatural death, like death due to weapons, poison, Snake bite, etc., will be wandering around and do not rest in peace.   Others not to do paksha on this day.  The tithi is meant for Accidental victims only.  For those who are doing “Sakrunmahaalaya”. that is shraddha on only a particular day of the paksha maasa, they need not do it on this day.  However for those who are doing paksha daily, they can do it on this day also.  Even in case of pitru having dead on Chaturdashi day, Paksha not to be performed on this day.  However general shraddha to be performed on the death day.

Please note :

1. This Ghata Chaturdashi does not apply to those who have died by deha tyaaga (self death) through entering agni, jumping in water due to ill health, shastra reethya, or a lady doing “sahagamana” .  They are not considered as “Ghaata”.  As such, Paksha not to be performed for these people.

2.  This paksha for “Ghata” to be performed for only those victims only and not for others.  If for pitamahadees also paksha performed on this day, the punya will be taken away by rakshaas.  If all the three pitru – pitamaha – prapitamaha are dead due to “Ghata” (shastra), then for all the three Ghata chaturdashi paksha to be performed.


Q – During Shradha Srihari will be there in how many roopas in the kartru and bhoktru?

Answer – Janardhana roopa will be there 3555 roopas

Q – How to do the the chintana of Srihari during Shradha?

1. Swaaha – Mayapathi Vasudeva will give trupthi to devategalu

2. Swadhaa – Jayapathi Sankarshana will give trupthi to devategalu

3. Khadya, Peya, Lehya, ChoShya, – Kruthipathi pradyumna will give trupti to devategalu

4. TruNaadi – Shanthipathi anirudda will give trupti to devategalu.

Q -What is Shannavathi Shradda ? –

Answer – Shraadhaas done on some specific days – There are 96 shraadaas to be done in a year. They are :-

12 Amavaasye
12 Vaidhruthi
14 manvaadi
12 vyatipaata
4 yugaadi
15 Mahalaya
12 Sankramana
15 Ashtaka

(bhadrapada Bahula saptami, astami, navami, Margashira bahula saptami, astami, navami Pushya Bahula saptami, astami, navami, Magha bahula saptami, astami, navami, Palguna bahula saptami, astami, navami) –  TOTAL 96 roopa of paramathma will be there in these 96 shraadhaas.
***

Ghata Chaturdashi – ಘಾತ ಚತುರ್ದಶಿ

Bhadrapada Krishna Chaturdashi –


ಪ್ರತಿಪತ್ ಪ್ರಭೃತಿಷ್ವೇಕಾಂ ವರ್ಜಯಿತ್ವಾ ಚತುರ್ದಶೀಂ |

ಶಸ್ತ್ರೇಣ ತು ಹತಾ ಯೇ ವೈ ತೇರ್ಭ್ಯಸ್ತತ್ರ ಪ್ರದೀಯತೇ |


This day is meant for  those who have passed away due to accidents or those who met with unnatural death like snake bites, accidents, suicide, war, and other natural calamities, etc. 


 The day is known as Ghata Chaturdashi.  There is a strong belief that the souls of these people who had an unnatural death, like death due to weapons, poison, Snake bite, etc., will be wandering around and do not rest in peace.   Others not to do paksha on this day.  The tithi is meant for Accidental victims only.  For those who are doing  Sakrunmahaalaya . that is shraddha on only a particular day of the paksha maasa, they need not do it on this day.  However for those who are doing paksha daily, they can do it on this day also.  Even in case of pitru having dead on Chaturdashi day, Paksha not to be performed on this day.  However general shraddha to be performed on the death day.


Please note :


1. This Ghata Chaturdashi does not apply to those who have died by deha tyaaga (self death) through entering agni, jumping in water due to ill health, shastra reethya, or a lady doing “ sahagamana ” .  They are not considered as “ Ghaata ”.  As such, Paksha not to be performed for these people.


2.  This paksha for “ Ghata ” to be performed for only those victims only and not for others.  For doing paksha for  pitamahadees also paksha performed on this day, the punya will be taken away by rakshaas. 

 If all the three pitru – pitamaha – prapitamaha are dead due to “Ghata” (shastra), then for all the three Ghata chaturdashi paksha to be performed.

- Narahari Sumadhwa

***

 

************


ಮಹಾಲಯ ಪಕ್ಷ ವಿಶೇಷ 

" ಮಹಾಲಯ ಪಕ್ಷಾರಂಭ 

" ಶ್ರಾದ್ಧ ವಿಚಾರ "

" ಶ್ರಾದ್ಧದಲ್ಲಿ ಅಗ್ನಿಗೆ ಆಹುತಿ "

ನಿಮಿಷರಾಜನು ಶ್ರಾದ್ಧ ಪ್ರಾರಂಭಿಸಿದ ನಂತರ ಎಲ್ಲಾ ಮಹರ್ಷಿಗಳೂ ಶ್ರಾದ್ಧ ವಿಧಿಗೆ ಅನುಸಾರವಾಗಿ " ಪಿತೃಯಜ್ಞ " ಮಾಡಲು ಆರಂಭಿಸಿದರು. ಹೀಗೆ ಶ್ರಾದ್ಧ ಮಾಡುವವರ ಸಂಖ್ಯೆ ಬೆಳೆದಂತೆ ದೇವತೆಗಳೂ ಮತ್ತು ಪಿತೃಗಳೂ ಅಜೀರ್ಣ ರೋಗದಿಂದ ಪೀಡಿತರಾದರು.

ಅತಿಯಾದ ಶ್ರಾದ್ಧಾನ್ನದಿಂದ ಪೀಡಿತರಾದ ಅವರು ಅಜೀರ್ಣ ರೋಗೋಪಾಯವನ್ನು ಕಂಡುಕೊಳ್ಳಲು ಸೋಮನ ಬಳಿಗೆ ಹೋಗಿ ಅವನಲ್ಲಿ ತಮ್ಮ ಅಜೀರ್ಣ ರೋಗದ ಕುರಿತು ತಿಳಿಸಿ ನಿವಾರಣೋಪಾಯ ಕೇಳಿದರು.

ಆಗ ಸೋಮನು...

ದೇವತೆಗಳೇ! ನೀವು ಶ್ರೇಯಸ್ಸನ್ನು ಬಯಸುವವರಾಗಿದ್ದರೆ, ಈಗಲೇ ಬ್ರಹ್ಮ ಭವನಕ್ಕೆ ಹೋಗಿ ಶ್ರೀ ಚತುರ್ಮುಖ ಬ್ರಹ್ಮದೇವರನ್ನು ಪ್ರಾರ್ಥಿಸಿರಿ.

ಎಂದನು. ಸೋಮನು ತಿಳಿಸಿದಂತೆ ದೇವತೆಗಳು ಮೇರು ಶಿಖರದಲ್ಲಿ ವಿರಾಜಮಾನರಾದ ಶ್ರೀ ಬ್ರಹ್ಮದೇವರ ಬಳಿಗೆ ಬಂದು ತಮ್ಮ ಕಷ್ಟವನ್ನು ನಿವೇದಿಸಿದರು.

" ಪೂಜ್ಯರೇ! ನಾವು ಅಪಾರವಾದ ಶ್ರಾದ್ಧಾಣ್ಣವನ್ನು ಉಂಡು ಅಜೀರ್ಣ ರೋಗದಿಂದ ಕಷ್ಟ ಪಡುತ್ತಿದ್ದೇವೆ. ನಮ್ಮ ವಿಷಯದಲ್ಲಿ ಕೃಪೆ ತೋರಬೇಕು " ಎಂದರು.

ಆಗ ಶ್ರೀ ಚತುರ್ಮುಖ ಬ್ರಹ್ಮದೇವರು....

ದೇವ, ಪಿತೃಗಳಿಗೆ ನನ್ನ ಸಮೀಪದಲ್ಲಿರುವ ಆ ಅಗ್ನಿದೇವನು ಶ್ರೇಯಸ್ಸನ್ನು ಉಂಟು ಮಾಡುತ್ತಾನೆ!

ಎಂದು ಹೇಳಲು ಅಗ್ನಿಯು ದೇವತೆಗಳನ್ನು ಸಂತೈಸುತ್ತಾ...

ಮಹಾಭಾರತ ಅನುಶಾಸನ ಪರ್ವದಲ್ಲಿ.....
ಸಹಿತಾಸ್ತಾತ ಭೋಕ್ಷ್ಯಾಮೋ ನಿವಾಪೇ ಸಮುಪಸ್ಥಿತೇ ।
ಜರಯಿಷ್ಯಥ ಚಾಪ್ಯನ್ನಂ ಮಯಾಸರ್ಥಂ ಸಂಶಯಃ ।।

ದೇವ ಪಿತೃಗಳೇ! ಶ್ರಾದ್ಧದ ಸಮಯದಲ್ಲಿ ನಾವೆಲ್ಲರೂ ಸೇರಿಯೇ ಭೋಜನವನ್ನು ಮಾಡೋಣ! ನಮ್ಮೊಡನೆ ಭೋಜನ ಮಾಡುವ ನೀವು ಶ್ರಾದ್ಧನ್ನವನ್ನು ಅರಿಗಿಸಿಕೊಳ್ಳುವಿರಿ. ಇದರಲ್ಲಿ ಸಂಶಯವಿಲ್ಲ!

ಆಗ್ನಿಯ ಈ ಮಾತನ್ನು ಕೇಳಿ ಪಿತೃ ದೇವತೆಗಳು ನಿಶ್ಚಿಂತರಾದರು. ಈ ಕಾರಣದಿಂದ ಶ್ರಾದ್ಧ ಕಾಲದಲ್ಲಿ ಅಗ್ನಿಗೆ ಆಹುತಿ ಕೊಡುವುದು ವಾಡಿಕೆಯಾಗಿ ಬಂತು.

ಆಹುತಿ ಕೊಡುವ ಕ್ರಮ....
ಸೋಮಾಯೇತಿ ಚ ವಕ್ತವ್ಯ೦ ತಥಾ ಪಿತೃಮತೇತಿ ಚ ।
ಪಿಂಡ ಪ್ರಧಾನ ಮಾಡುವ ಮೊದಲು ಅಗ್ನಿಗೂ ಹಾಗೂ ಸೋಮನಿಗೂ ಆಹುತಿಯನ್ನು ಕೊಡಬೇಕು ಮಂತ್ರ.....

ಅಗ್ನಏ ಕಾವ್ಯವಾಹನಾಯ ಸ್ವಧಾ ನಮಃ ।
ಸೋಮಾಯ ಪಿತೃಮತೇ ಸ್ವಧಾ ನಮಃ ।।

ಹೀಗೆ ಅಗ್ನಿಗೆ ಹವಿರ್ಭಾಗವನ್ನು ಕೊಟ್ಟು ನಂತರ ಪಿತೃಗಳಿಗೆ ಪಿಂಡಪ್ರದಾನ ಮಾಡಬೇಕು. ಅಂಥಹ ಪಿಂಡವನ್ನು ಬ್ರಹ್ಮ ರಾಕ್ಷಸರು ದೂಷ್ಯವನ್ನಾಗಿ ಮಾಡುವುದಿಲ್ಲ. ಓಡಿ ಹೋಗುತ್ತಾರೆ. ನಂತರ ಮೊದಲು ತಂದೆಗೆ ಪಿಂಡ ಪ್ರದಾನವನ್ನು ಮಾಡಬೇಕು. ನಂತರ ಪಿತಾಮಹನಿಗೆ, ತದನಂತರ ಪ್ರಪಿತಾಮಹನಿಗೆ ಪಿಂಡ ಪ್ರದಾನ ಮಾಡಬೇಕು. ಇದನ್ನೇ " ಶ್ರಾದ್ಧವಿಧಿ " ಎನ್ನುತ್ತಾರೆ.

ಶ್ರಾದ್ಧದಲ್ಲಿ ಒಂದೊಂದು ಪಿಂಡವನ್ನು ಇಡುವಾಗಲೂ ಏಕಾಗ್ರಚಿತ್ತದಿಂದ ಮನಸ್ಸಿನಲ್ಲಿ " ಗಾಯತ್ರೀ ಮಂತ್ರ " ವನ್ನು ಉಚ್ಛರಿಸುತ್ತಿರಬೇಕು.

" ದರ್ಭೆಯು ಹಾಸುವ ಕ್ರಮ "

" ಶ್ರೀ ಯೋಗಿ ಯಾಜ್ಞವಲ್ಕ್ಯರ ವಚನ "

ಅಪಾ೦ ಹ್ಯಪೂರ್ವವನ್ಮ೦ತ್ರೈರಾಸ್ತೀರ್ಯ ಚ ಕುಶಾನ್ಬಹೂನ್ ।
ಪಾಗ್ರಗ್ರೇಷು ಸುರಾನ್ ಸಮ್ಯಗ್ದಕ್ಷಿಣಾಗ್ರೇಷು ವೈ ಪಿತ್ರೂನ್ ।।

ದರ್ಭೆಯ ತುದಿಯನ್ನು ಪೂರ್ವಾಭಿಮುಖವಾಗಿ ಹಾಸಿ ದೇವತೆಗಳನ್ನು ದಕ್ಷಿಣಾಭಿಮುಖವಾಗಿ ಹಾಸಿ ಪಿತೃಗಳನ್ನೂ ಉದ್ಧೇಶಿಸಿ ಆಯಾ ಮಂತ್ರಗಳಿಂದ ತರ್ಪಣವನ್ನು ಕೊಡಬೇಕು!!

" ಶುಚಿಯಾದ ಭೂಮಿಯಿಲ್ಲದಿರುವಾಗ ಜಲದಲ್ಲಿ ತರ್ಪಣವನ್ನು ಕೊಡಬೇಕು "

" ಶ್ರೀ ವಿಷ್ಣು ವಚನ "

ಯತ್ರಾಶುಚಿ ಸ್ಥಲಂ ವಾ ಸ್ಯಾದುದಕೇ ದೇವತಾಃ ಪಿತ್ರೂನ್ ।
ತರ್ಪಯೇತ್ತು ಯಥಾ ಕಾಮಮಪ್ಸು ಸರ್ವಂ ಪ್ರತಿಷ್ಠಿತಮ್ ।।

ಯಾವ ಸ್ಥಳದಲ್ಲಿ ಭೂಮಿಯು ಅಶುಚಿಯಾಗಿದೆಯೋ ಆ ಸ್ಥಳದಲ್ಲಿ ದೇವತೆಗಳಿಗೂ, ಪಿತೃಗಳಿಗೂ ನೀರಿನಲ್ಲೇ ತರ್ಪಣವನನ್ನು ಕೊಡಬಹುದು. ನೀರಿನಲ್ಲಿಯೇ ಎಲ್ಲ ಸನ್ನಿಧಾನವೂ ಇರುತ್ತದೆ.

" ಶ್ರೀ ಕಾರ್ಷ್ಣಾಜಿನಿ ವಚನ "

ದೇವತಾನಾ೦ ಪಿತ್ರೂಣಾ೦ ಚ ಜಲೇ ದದ್ಯಾಜ್ಜಲಾಂಜಲೀಮ್ ।
ಅಸಂಸ್ಕೃತಪ್ರಮೀತಾನಾ೦ ಸ್ಥಾನೇ ದದ್ಯಾಜ್ಜಲಂ ಪುನಃ ।।

ದೇವತೆಗಳಿಗೂ, ಪಿತೃಗಳಿಗೂ ನೀರಿನಲ್ಲಿ ತರ್ಪಣವನ್ನು ಕೊಡಬೇಕು. ಕೆಲವರು ಸತ್ತಾಗ ಅವರಿಗೆ ಅಗ್ನಿ ಸಂಸ್ಕಾರವು ನಡೆದಿರುವುದಿಲ್ಲ. ಅವರಿಗೆ ಭೂಮಿಯಲ್ಲಿ ಒಂದೇ ಒಂದು ತರ್ಪಣವನ್ನು ಕೊಡಬೇಕು.

" ಅಸಂಸ್ಕೃತ ಪ್ರಮೀತರಿಗೆ ಕೊಡುವ ತರ್ಪಣಕ್ಕೆ ಮಂತ್ರ "

ಅಗ್ನಿದಗ್ಧಾಶ್ಚ ಯೇ ಜಾತಾ ಯೇ ವಾ ದಗ್ಧಾ: ಕುಲೇ ಮಮ ।
ಭೂಮೌ ದತ್ತೇನ ತೋಯೇನ ತೃಪ್ತಾ ಯಾಂತು ಪರಾಂ ಗತಿಮ್ ।।

" ಶ್ರಾದ್ಧ ಕುರಿತು ಮತ್ತಷ್ಟು ಮಾಹಿತಿ "

ಪಿಂಡ ಪ್ರದಾನ ಮೊದಲು ಅದರ ಬುಡದಲ್ಲಿ ಹಾಸಲು ತುದಿ ಇರುವ ೧೦೧ ಅಥವಾ ೬೪ ದರ್ಭೆಗಳು ಬೇಕು. ಇದಕ್ಕೆ " ಹಾಸು " ಎಂದು ಹೆಸರು.

ಪವಿತ್ರಕ್ಕೆ ೩ ದರ್ಭೆ, ತುದಿಯಿರುವ ಮೊಂಡು ದರ್ಭೆ ಬಳಸದಿರುವುದು ಒಳಿತು. ತುಂಡು ದರ್ಭೆಗಳಿಗೂ ತುದಿ ಇರಲೇಬೇಕು.

ಶ್ರಾದ್ಧದಲ್ಲಿ ಒಟ್ಟು 5 ಪವಿತ್ರಗಳ ಧಾರಣೆ ಇದೆ.

1. ಆರಂಭದಲ್ಲಿ 1 ಪವಿತ್ರ ಧಾರಣೆ, ಪಾದಪ್ರಕ್ಷಾಲನ ನಂತರ ವಿಸರ್ಜನೆ.

2. ಪಾದ ಪ್ರಕ್ಷಾಲನ ಬಳಿಕ ಮತ್ತೊಂದು ಪವಿತ್ರ ಧಾರಣೆ. ಪಿಂಡ ಆಘ್ರಾಣದ ತರುವಾಯ ವಿಸರ್ಜನೆ.

3. ಆಘ್ರಾಣವಾದ ಮೇಲೆ ಇನ್ನೊಂದು ಪವಿತ್ರ ಧಾರಣೆ ಉಚ್ಚಷ್ಟ ಪಿಂಡ ಪ್ರದಾನ ನಂತರ ವಿಸರ್ಜನೆ

4. ಉಚ್ಚಷ್ಟ ಪಿಂಡ ಪ್ರದಾನ ನಂತರ ಮತ್ತೊಂದು ಪವಿತ್ರ ಧಾರಣೆ ಇದು ಶ್ರಾದ್ಧಾಂತ್ಯದಲ್ಲಿ ವಿಸರ್ಜನೆ.

5. ಕೃಷ್ಣಾರ್ಪಣ ನಂತರ ಇನ್ನೊಂದು ಪವಿತ್ರ ಧಾರಣೆ ಅದು ಪರಿಹನಿ ತರ್ಪಣ ನಂತರ ವಿಸರ್ಜನೆ.

6. ವಿಶ್ವೇ ದೇವಸ್ಥನಾದಲ್ಲಿರುವ ಪವಿತ್ರ -

"ತುದಿಯಿರುವ ೨ ದರ್ಭೆಯ ಋಷಿ ಗಂಟಿನ ಪವಿತ್ರ "

7. ಪಿತೃ ದೇವತೆಗಳ ಆವಾಹನಕ್ಕಾಗಿ ಪವಿತ್ರ....

ತುದಿಯಿರುವ ೨ ದರ್ಭೆ ನೇರವಾಗಿ, ತಲೆ ಕೆಳಗಾಗಿ ೧ ದರ್ಭೆ ಹೀಗೆ ಒಟ್ಟು ೩ ದರ್ಭೆಯ ಋಷಿ ಗಂಟಿನ ಪವಿತ್ರ.

8. ಪಿಂಡ ತಯಾರಿಸುವ ಕ್ರಮ....

ಎಳ್ಳು - ಅನ್ನ - ಕಲಶದ ನೀರು - ಹಾಲು - ಮೊಸರು - ಬೆಲ್ಲ - ಜೇನುತುಪ್ಪ - ತುಪ್ಪ ಈ ೮ ದ್ರವ್ಯಗಳನ್ನು ಸೇರಿಸಬೇಕು.

ತಿಲಮನ್ನಂ ಚ ಪಾನೀಯಂ ಪಯೋದಧಿಗುಡಂ ತಥಾ ।
ಮಧುಸರ್ಪಿಸ್ಸಮಾಯುಕ್ತ೦ ಅಷ್ಟಾಂಗಂ ಪಿಂಡ ಲಕ್ಷಣಮ್ ।।

9. ಶ್ರಾದ್ಧದ ವಿಸರ್ಜಿತ ಪಿಂಡವನ್ನು ನೆಲದಲ್ಲಿ ಹೂಳಬಹುದು. ನದೀ ತೀರದಲ್ಲಿ ಮಾಡಿದಾಗ ಹರಿಯುವ ನದೀ ಪ್ರವಾಹದಲ್ಲಿ ಬಿಡಬಹುದು.

" ಗೋವುಗಳಿಗೆ ತಿನ್ನಿಸುವುದು ಪರಮ ಶ್ರೇಷ್ಠ "

10. ಚಟಕದ ಬ್ರಾಹ್ಮಣರ ಎಲೆಗೆ ಬಡಿಸಿದ ಅನ್ನವನ್ನು ...

ನೆಲದಲ್ಲಿಯೇ ಹೂಳಬೇಕು.
ಹಸುಗಳಿಗೆ ಕೊಡಬಾರದು.
ನದಿಯಲ್ಲಿಯೂ ಹಾಕಬಾರದು.
ಪಿಂಡದೊಂದಿಗೆ ಸೇರಿಸಬಾರದು.
ಪಿಂಡದ ಜೊತೆಯಲ್ಲಿ ಭೂ ಸ್ಥಾಪನೆ ಮಾಡಬಾರದು.

11.ಜಲಚರ ಪ್ರಾಣಿಗಳು ಪಿಂಡವನ್ನು ತಿಂದರೆ ಪರವಾಗಿಲ್ಲ. ನಾಯಿ ಮಾತ್ರ ಮುಟ್ಟಬಾರದು. ಶ್ರಾದ್ಧ ಹಾಳಾಗುತ್ತದೆ.

12. ಬಾಳೆ ಹಣ್ಣು ಪ್ರಶಸ್ತ.

13. ಸುವರ್ಣಗಡ್ಡೆ, ಶ್ಯಾಮೆಗಡ್ಡೆ, ಹಾಗಲಕಾಯಿ, ಬಾಳೆಕಾಯಿ, ದಿಂಡು, ಸೌತೆಕಾಯಿ, ನೆಲ್ಲಿಕಾಯಿ ಮತ್ತು ಗೋಧಿಗೆ ಸಂಬಂಧಿಸಿದ ಪದಾರ್ಥಗಳು ಶ್ರೇಷ್ಠ. ಉದ್ದು, ರವೇ, ಹೆಸರು ಗೆ ಸಂಬಂಧಪಟ್ಟ ಪದಾರ್ಥಗಳೂ, ಶಿರಾ - ಪೂರಿ ಮುಂತಾದವುಗಳು ಶ್ರಾದ್ಧದಲ್ಲಿ ಮಾಡಬೇಕು.

14. ಕಡಲೆಬೇಳೆಯಿಂದ ಮಾಡುವ ಮೈಸೂರು ಪಾಕ್, ಲಾಡು, ಹೋಳಿಗೆ ಮಾಡಬಾರದು. ಜಿಲೇಬಿ, ಜಹಾಂಗೀರ್ ಮುಂತಾದ ಸುತ್ತಿ ಸುತ್ತಿ ಮಾಡುವ ಭಕ್ಷ್ಯಗಳು ಪ್ರಶಸ್ತವಲ್ಲ.

15. ಪೂರ್ವದಲ್ಲಿ ಧರ್ಮ ಪಿಂಡದ ಹೊರ ಭಾಗದಲ್ಲಿ ಪಿತೃ ಷೋಡಶೀ ಪಿಂಡಗಳನ್ನೂ, ಪಶ್ಚಿಮದಲ್ಲಿ ಧರ್ಮ ಪಿಂಡದ ಹೊರ ಭಾಗದಲ್ಲಿ ಮಾತೃ ಷೋಡಶೀ ಪಿಂಡಗಳನ್ನೂ ಇಡಬೇಕು. ಇದೆ ಸ್ಥಂಡಿಲದಲ್ಲಿ ೧ ರಿಂದ ೧೨ರ ವರೆಗೆ ಆಯಾ ಸ್ಥಾನದಲ್ಲಿ ಅರ್ಘ್ಯ ಕೊಟ್ಟು ಉಳಿದವರಿಗೆಲ್ಲ ದಕ್ಷಿಣದಲ್ಲಿ ೧ ದೊನ್ನೆಯಲ್ಲಿಯೇ ಅರ್ಘ್ಯ ಕೊಡಬೇಕು.

" ಭೋಜನದಲ್ಲಿ ಯಾವ ಸ್ಥಾನಕ್ಕೆ ಯಾರು? "

ಪಿತೃ ಸ್ಥಾನಕ್ಕೆ ಮೃತರ ಅಳಿಯ ( ಮಗಳ ಗಂಡ ), ತಂಗಿಯ ಗಂಡ, ಮಗಳ ಮಗ, ಭಾವಮೈದುನರು - ಇವರಲ್ಲಿ ಯೋಗ್ಯರಾಗಿದ್ದಲ್ಲಿ ಕೂಡಿಸಬಹುದು. ಶ್ರೋತ್ರೀಯ ಬಂಧುವಾಗಿದ್ದರೆ ಬಹಳ ಶ್ರೇಷ್ಠ!!\

ವಿಶ್ವೇ ದೇವಸ್ಥಾನಕ್ಕೆ ಶ್ರೋತ್ರೀಯ ವಿದ್ವಾಂಸರು ಅವಶ್ಯ!!

" ವಿಶೇಷ ವಿಚಾರ "

ಈ ಮಹಾಲಯ ಪಕ್ಷದಲ್ಲಿ ಸರ್ವ ಪಿತೃಗಳೂ ಬಂದಿರುತ್ತಾರೆ. ಅವರ ಪ್ರೀತಿಗಾಗಿ ಭಕ್ತಿ ಶ್ರದ್ಧೆಗಳಿಂದ ಪಿಂಡ ಪ್ರದಾನ ಮಾಡಲೇಬೇಕು. ಒಂದುವೇಳೆ ಪಿಂಡಪ್ರದಾನ ಮಾಡದಿದ್ದರೆ ಅವರ ಆಗ್ರಹಕ್ಕೆ ಪಾತ್ರರಾಗುವದಂತೂ ನಿಶ್ಚಯ ಮತ್ತು ಅಭಿವೃದ್ಧಿ ಆಗುವುದಿಲ್ಲ! ಆದ್ದರಿಂದ ಪಿತೃಗಳ ಉದ್ಧಿಶ್ಯ ಪಿಂಡ ಪ್ರದಾನ ಮಾಡಿ ಪಿತೃಗಳ ಅನುಗ್ರಹ ಪಾತ್ರರಾಗಿ ವೃದ್ಧಿ ಹೊಂದುವುದು.

ಆಚಾರ್ಯ ನಾಗರಾಜು ಹಾವೇರಿ
ಗುರು ವಿಜಯ ಪ್ರತಿಷ್ಠಾನ

****

ಪಿತೃ ಯಜ್ಞ

 ನಾವು ಯಾಕಾಗಿ ಪಿತೃಪಕ್ಷವನ್ನು ಆಚರಿಸಬೇಕು.. ಯಾಕೆ ಪಿಂಡಪ್ರಧಾನ ಮಾಡುತ್ತೇವೆ ಮತ್ತು  ಬ್ರಾಹ್ಮಣ ಭೋಜನ ದಕ್ಷಿಣೆ ದಾನ ಕೊಡಬೇಕು? ತಿಳಿಯೋಣ.. ಪ್ರತಿಯೊಬ್ಬ ಮಗನ ಕರ್ತವ್ಯ ಪಕ್ಷಮಾಸದಲ್ಲಿ ಮೃತಪಿತೃಗಳನ್ನುದ್ದೇಶಿಸಿ ಪಕ್ಷವನ್ನು ಮಾಡುವುದು , ಅವರು ನಿಮಗೆ ಅಧಿಕಾರ ,ಅಂತಸ್ತು , ಐಶ್ವರ್ಯ , ಹಣ ಆಸ್ತಿ ಕೊಟ್ಟಿಲ್ಲ  ಎಂದು ಯೋಚಿಸಬೇಡಿ. ಜನ್ಮ ಕೊಟ್ಟ ಋಣವನ್ನಾದರೂ ನೀವು ತೀರಿಸಲೇಬೇಕು.. ನೀವು ಕೊಟ್ಟ ಅನ್ನ ದಿಂದ ನಿಮ್ಮ ಮುಂದಿನ ಪೀಳಿಗೆ ಅಭಿವೃದ್ಧಿ ಹೊಂದುತ್ತದೆ. ಶೃದ್ಧೆಯಿಂದ ಮಾಡಿ . ಅದಕ್ಕೇ ಹೇಳುವದು ಶ್ರದ್ಧೆಯಿಂದ ಮಾಡಿದರೆ ಅದು ಶ್ರಾದ್ಧ. ಭಕ್ತಿಯಿಂದ ಮಾಡಿದರೆ  ಪೂಜಾ  ಫಲ ದೊರೆಯದೇ ಇರದು... ಖಂಡಿತಾ ಫಲವಿಹುದು ವಿಶ್ವಾಸೋ ಫಲದಾಯಕಃ।...

1 ಅಗ್ನೌ ಕರಣೇನ ದೇವಸ್ಥಾಃ.....ಅಂದರೆ ತನ್ನ ಪಿತೃಗಳು ದೇವತೆಗಳಾಗಿ  ದೇವಲೋಕದಲ್ಲಿದ್ದರೆ, ಅವರಿಗೆ ಅಗ್ನೌ ಕರಣಾಕ್ಯ  ಅನ್ನದಿಂದ ತೃಪ್ತಿಯಾಗುತ್ತದೆ..(ಅಗ್ನಿಯಲ್ಲಿ ಹಾಕುವ ಆಹುತಿಗಳಿಂದ.)

2 ಸ್ವರ್ಗಸ್ಥಾಃ  ವಿಪ್ರಭೋಜನೇ.  ತನ್ನ ಪಿತೃಗಳು ಸ್ವರ್ಗದಲ್ಲಿದ್ದರೆ  ಬ್ರಾಹ್ಮಣರ ಭೋಜನ ರೂಪ ಅನ್ನದಿಂದ ಅವರಿಗೆ ತೃಪ್ತಿ ಯಾಗುತ್ತದೆ..

3 ಯಮಸ್ಥಾ ಪಿಂಡದಾನೇನ.. .... ತನ್ನ ಪಿತೃಗಳು ಯಮಲೋಕದಲ್ಲಿದ್ದರೆ ,ಪಿಂಡ ಪ್ರಧಾನರೂಪವಾದ ಅನ್ನದಿಂದ ಅವರಿಗೆ ತೃಪ್ತಿ ಯಾಗುತ್ತದೆ.

4 ನರಕೇ ವಿಕಿರೇಣ ತು...‌.. ತನ್ನ ಪಿತೃಗಳು ನರಕಲೋಕದಲ್ಲಿದ್ದರೆ , ವಿಕಿರಾಕ್ಯ ಅನ್ನದಿಂದ ಅವರಿಗೆ ತೃಪ್ತಿಯಾಗುತ್ತದೆ.

5 ಉಚ್ಛಿಷ್ಟೇನ    ಪಿಶಾಚಾಶ್ಚ....ತನ್ನ ಪಿತೃಗಳು ಪಿಶಾಚಿಗಳಾಗಿದ್ದರೆ...‌  ಉಚ್ಛಿಷ್ಟ ಅನ್ನದಿಂದ ಅವರಿಗೆ ತೃಪ್ತಿ ಯಾಗುತ್ತದೆ.

6 ಅಸುರಾ ಭೂರಿ ಭೋಜನಾತ್.....‌ತನ್ನ ಪಿತೃಗಳು ಅಸುರರಾಗಿದ್ದರೆ ,ಭೂರಿ ಭೋಜನದಿಂದ ಅವರಿಗೆ ತೃಪ್ತಿ ಯಾಗುತ್ತದೆ...

7ದಕ್ಷಿಣೇನ  ಮನುಷ್ಯಾದ್ಯಾಃ ..... ತನ್ನ ಪಿತೃಗಳು ಮನುಷ್ಯರಾಗಿ  ಜನಿಸಿದ್ದ ಕಾಲಕ್ಕೂ ಅಥವಾ ಯಾವುದೇ ಯೋನಿಯಲ್ಲಿ  ಜನಿಸಿದ್ದರೂ ದಕ್ಷಿಣಾಕ್ಯ ಅನ್ನ ದಿಂದ  ಅವರಿಗೆ ತೃಪ್ತಿ ಯಾಗುತ್ತದೆ....
 ಅದಕ್ಕಾಗಿ ಪಿತೃಗಳ  ಸಂತೋಷಕ್ಕಾಗಿ  ಪಿತೃ ಪಕ್ಷದಲ್ಲಿ  ಪಿಂಡಪ್ರಧಾನ ಮಾಡಿ ಬ್ರಾಹ್ಮಣ ರಿಗೆ ಭೋಜನ ದಕ್ಷಿಣೆ ದಾನ ಅನ್ನದಾನ ಇತರ ಶಕ್ತ್ಯನುಸಾರ ದಾನ ಕೊಡಬೇಕು ....
 ಭಾದ್ರಪದ ಬಹುಳ ಪಾಡ್ಯದಿಂದ ಅಮಾವಾಸ್ಯೆಯ ತನಕ ೧೫ ದಿನಗಳ ಈ ಕಾಲವನ್ನು "ಪಿತೃ ಪಕ್ಷ" "ಪಕ್ಷಮಾಸ" ಎನ್ನುತ್ತಾರೆ.   
ಯಾವ ಶ್ರಾದ್ಧಾಧಿಕಾರಿಗಳು ಈ ಅವಧಿಯಲ್ಲಿ  ಶ್ರಾದ್ಧವನ್ನು ಮಾಡುತ್ತಾರೋ ಅವರಿಗೆ ಪಿತೃಗಳು ಜ್ಞಾನ, ಭಕ್ತಿ, ಸಂಪತ್ತು ಮೊದಲಾದವುಗಳನ್ನಿತ್ತು ಆಶೀರ್ವಾದ ಮಾಡುತ್ತಾರೆ. ಪಕ್ಷಶ್ರಾದ್ಧವನ್ನು  ಮಾಡದವರಿಗೆ  ಶಾಪವನ್ನು ನೀಡುತ್ತಾರೆ.  ಪಿತೃಗಳ ಶಾಪದಿಂದ ವಂಶಾಭಿವೃದ್ಧಿ ಆಗುವುದಿಲ್ಲ. ಹುಟ್ಟಿದರೂ ಅಂಗ ವಿಕಲರಾಗಿಯೋ ನಮಗೆ ಹೊರೆಯಾಗಿಯೋ ಹುಟ್ಟಬಹುದು.

ಮಹಾಭಾರತ ಪುರಾಣದ ಪ್ರಕಾರ ಕರ್ಣ ಯುದ್ಧದಲ್ಲಿ ಹತನಾದಾಗಿ, ಸ್ವರ್ಗ ಸೇರಿದಾಗ ಅವನಿಗೆ ಬಂಗಾರ ಮತ್ತು ಆಭರಣಗಳನ್ನು ಆಹಾರವಾಗಿ ನೀಡಲಾಯಿತು. ಆದರೆ ಕರ್ಣನಿಗೆ ಬೇಕಾಗಿದ್ದು ನಿಜವಾದ ಆಹಾರ.  ಇದರಿಂದ ಬೇಸತ್ತ ಕರ್ಣ ಇಂದ್ರನಲ್ಲಿ ಕೇಳುತ್ತಾನೆ.  ಆಗ ಇಂದ್ರ ಹೇಳುತ್ತಾನೆ “ನೀನು ನಿನ್ನ ಪೂರ್ವಿಕರಿಗೆ ಅವರ ಶ್ರಾದ್ಧದಲ್ಲಿ ಅನ್ನವನ್ನು ದಾನವಾಗಿ ನೀಡಿಲ್ಲ.  ಜೀವಮಾನ ಪೂರ್ತಿ ಬೇಕಾದಷ್ಟು ಬಂಗಾರಾದಿ ಆಭರಣಗಳನ್ನು ದಾನವಾಗಿ ನೀಡಿದ್ದೆ. ಅದಕ್ಕಾಗಿ ನಿನಗೆ ನಿಜವಾದ ಆಹಾರ ದೊರಕುತ್ತಿಲ್ಲ”.  ತನಗೆ ತನ್ನ ಪೂರ್ವಜರ ಬಗ್ಗೆ ಏನೂ ಗೊತ್ತಿಲ್ಲದಿದ್ದರಿಂದ ಯಾವ ಶ್ರಾದ್ಧವನ್ನು ಮಾಡಲಾಗಿಲ್ಲ ಎಂದು ಕರ್ಣ ಹೇಳುತ್ತಾನೆ.  ಇದಕ್ಕಾಗಿ ಅವನಿಗೆ ವಿಶೇಷವಾಗಿ ಪರಿಹಾರ ರೂಪವಾಗಿ ೧೫ ದಿನಗಳ ಕಾಲ ಭೂಲೋಕಕ್ಕೆ ಹೋಗಿ ಶ್ರಾದ್ಧ ಮಾಡಿ ಅವರ ನೆನಪಿನಲ್ಲಿ ಆಹಾರವನ್ನು ದಾನ ಮಾಡಲು ಅನುಮತಿ ನೀಡುತ್ತಾರೆ.  ಆ ಕಾಲಕ್ಕೆ ಪಕ್ಷಮಾಸವೆನ್ನುತ್ತಾರೆ.

ಮಹಾಲಯ ಅಂದರೆ – “ಮಹಾ” – ದೊಡ್ಡ “ಲಯ” – ನಾಶ – ಸಮುದ್ರ ಮಥನ ಸಂದರ್ಭದಲ್ಲಿ ಬಹಳ ಋಷಿಗಳು ಮತ್ತು ದೇವತೆಗಳು ದೈತ್ಯರಿಂದ ಸಂಹರಿಸಲ್ಪಟ್ಟರು.  ಈ ಋಷಿಗಳು ನಮ್ಮ ಪೂರ್ವಜರಾಗಿದ್ದುದರಿಂದ ಅವರ ನೆನಪಿನಲ್ಲಿ ಮಹಾಲಯ ಪಕ್ಷವವನ್ನು ಆಚರಿಸುತ್ತೇವೆ.  ಅದುವೇ ಸರ್ವಪಿತೃ ಅಮಾವಾಸ್ಯೆ.ಮತ್ತು ಮಹಾಲಯ ಶ್ರಾದ್ಧ.
***



ಶ್ರಾದ್ಧ ಮತ್ತುಪಕ್ಷಮಾಸ 

ಪ್ರಿಯಾ ಪ್ರಾಣೇಶ ಹರಿದಾಸ

ಮೊದಲು ಶ್ರಾದ್ಧದ ಹಿನ್ನಲೆ ತಿಳುದುಕೊಳ್ಳೋಣ . ಬ್ರಹ್ಮವೈವತ್ವ ಪುರಾಣ , ಹರಿವಂಶ ಪುರಾಣ, ಗರುಡ ಪುರಾಣ,ವಾಯು ಪುರಾಣ, ನಾರದೀಯ ಪುರಾಣ, ಸ್ಕಂದ ಪುರಾಣ, ಪದ್ಮ ಪುರಾಣ, ಇವುಗಳನ್ನೆಲ್ಲಾ ಅಧ್ಯಯನ ಮತ್ತು ವಿಶ್ಲೇಷಣೆ , ಶ್ರೇಷ್ಠ ದಾಸರಾದ ಜಗನ್ನಾಥ ದಾಸರು "ಹರಿಕಥಾಮೃತ ಸಾರದಲ್ಲಿನ "14 ನೇ ಸಂಧಿ ಯಾದ "ಪಿತೃಗಣ" ಸಂಧಿಯಲ್ಲಿ ಬರೆದಿದ್ದಾರೆ .

ಇದರ ಮೂಲ ಪ್ರಾಂಭವಾದದ್ದು ಮಾಹಾಭಾರತದಲ್ಲಿ. ವೇದವ್ಯಾಸರು ಇದರ ವಿವರಣೆಯನ್ನು "ಹರಿವಂಶ" ಪುರಾಣದ , "ವಿಷ್ಣು ಪರ್ವ" ದಲ್ಲಿ 16 ರಿಂದ 24 ಅಧ್ಯಾಯವರೆಗೆ ಹೇಳಿದ್ದಾರೆ .

ಒಮ್ಮೆ ಭೀಷ್ಮಾಚಾರ್ಯರರು ತಂದೆಯಾದ ಶಂತುವಿನ ಶ್ರಾದ್ಧ ಮಾಡಿ ಆಚಾರ್ಯರ ನಿರ್ದೇಶನದಂತೆ ನೆಲಕ್ಕೆ ದರ್ಬೆ ಮೇಲೆ ಪಿಂಡ ಇಡಲು ಮುಂದಾದಾಗ , ಭೂಮಿಯಿಂದ ಆಭರಣ ಸಹಿತ ಕೈಗಳು ಮೇಲೆ ಬಂದವಂತೆ ಆಗ ಭೀಷ್ಮಾಚಾರ್ಯರರು ತಮ್ಮ ತಂದೆಯ ಕೈಗಳನ್ನು ಗುರ್ತಿಸಿದರು , ಅಷ್ಟರಲ್ಲೇ ಅಶರೀರವಾಣಿ ಮೂಲಕ ನಿಮ್ಮ ತಂದೆಯಾದ ಶಂತನು ನಾನು , ಸ್ವತಃಹ ಬಂದಿದ್ದೇನೆ , ಪಿಂಡಗಳನ್ನು ನೆಲಕ್ಕೆ ಇಡದೆ ನನ್ನ ಕೈಗಳಲ್ಲೇ ಕೊಡು ಅಂದಾಗ ,
ಭೀಷ್ಮಾಚಾರ್ಯರರು ಶಾಸ್ತ್ರದ ವಿರುದ್ಧ ನಾನು ಈ ಕೆಲಸ ಮಾಡಲಾರೆ , ನನ್ನನ್ನು
ಕ್ಷಮಿಸಿ ಅನ್ನುತ್ತಾನೆ .ಆಗ ಶಂತನು ,
ಭೀಷ್ಮಾಚಾರ್ಯರರಿಗೆ ನಿನ್ನ ಈ ಶ್ರದ್ಧೆಯಿಂದ ಮಾಡಿದ ಶ್ರಾದ್ಧ ನನಗೆ ಬಹಳ ಮೆಚ್ಚಗೆ ಆಯಿತು .ನಾನು ವರ ಕೋಡಬೇಕೆಂದಿರುವೆ , ಅಂದಾಗ
ಭೀಷ್ಮಾಚಾರ್ಯರರು ನನಗೆ ಯಾವ ಮೋಹ , ಲೋಭ ಗಳಿಲ್ಲ , ಆದರೆ ನನಗೆ ಶ್ರಾಧ್ದದ ಹಿಂದಿನ ಉದ್ದೇಶ ಹೇಳಿ ಅನ್ನುತ್ತಾನೆ .ಆಗ ಶಂತನು ಹೇಳಲು ನಾನು ಸಮರ್ಥನಲ್ಲಾ ಇಷ್ಟರಲ್ಲೇ ಮಾರ್ಕಂಡೇಯ್ಯ ಋಷಿಗಳು ಬರುತ್ತಾರೆ. ಇವರು ಪರಮಾತ್ಮನ ಪ್ರಳಯ ಕಾಲ ನೋಡಿರುವರು , ಜ್ಞಾ ನಿಗಳು , ಅವರಿಗೆ ನಿನ್ನ ಉದ್ದೇಶ ಹೇಳಿ ತಿಳಿದುಕೊ ಎಂದು ಅದೃಶ್ಯನಾಗುತ್ತಾನೆ

ಸ್ವಲ್ಪ ಹೊತ್ತಿನಲ್ಲೇ ಮಾರ್ಕಂಡೇಯ್ಯ ಋಷಿಗಳು ಬಂದರು .ತಮ್ಮ ಮನದ ಇಂಗಿತವನ್ನು ಋಷಿಗಳ ಹತ್ತಿರ ಹೇಳಿದಾಗ , ನನಗೆ ಬ್ರಹ್ಮ ದೇವರು ನಿನ್ನ ಮನದ ಇಂಗಿತ ಹೇಳಿ ಕಳಿಸಿರುವರು ಎಂದು ಹೇಳಿದರು .

ಶ್ರಾದ್ಧದ ಏ0ದರೇನು ?

ಪಿತೃ ದೇವತೆಗಳು , ಮೂಲ ಚತುರ್ಮುಖ ಬ್ರಹ್ಮ ದೇವರ ಮಕ್ಕಳು . ದೇವಲೋಕದ ದೇವತೆಗಳು, ಗಂಧರ್ವರು, ಯಕ್ಷರರು, ಕಿನ್ನರರು ಶ್ರದ್ಧೆಯಿಂದ ಮಾಡುವ
ಅರ್ಚನೆಯನ್ನು ಪಿತೃಗಳ ಅಂತರ್ಯಾಮಿಯಾದ ಪರಮಾತ್ಮನನ್ನು
ಪೂಜಿಸುವುದೇ "ಶ್ರಾದ್ಧ" ಎನ್ನುವರು .
ಮಾನವರು ಮಾಡಿದಂತಹ ಶ್ರಾದ್ಧದಲ್ಲಿ
ಅವರು ಕೊಡತಕ್ಕಂತಹ "ಸ್ವಾಧ್ಧಾ" ವನ್ನು
ತಗೆದುಕೊಂಡು ಹೋಗಿ, ತಂದೆ , ತಾತಾ, ಮುತ್ತಾತ , ಅಜ್ಜಿ , ಮುತ್ತಜ್ಜಿ ಇವರಿಗೆ ತಗೆದುಕೊಂಡು ಹೋಗಿ ಮುಟ್ಟಿಸುತ್ತಾರೆ .
ಅವರು ಯಾವುದೇ ಯೋನಿಗಳಲ್ಲಿ ಹುಟ್ಟಿದರು , ಅವರು ಹುಟ್ಟಿದ ಯೋನಿಗೆ ಅನುಸಾರವಾಗಿ ಮಾರ್ಪಾಡಿಸಿ ಅನ್ನವನ್ನು ಮುಟ್ಟಿಸುವ ಕಾರ್ಯ ಈ ಪಿತೃ ದೇವತೆಗಳ ಕೆಲಸ . ಇದೆ ಶ್ರಾದ್ಧದ ಅರ್ಥ ಮತ್ತು ಉದ್ದೇಶ .

ಶ್ರಾಧ್ದದಲ್ಲಿ 5 ಪ್ರಕಾರಗಳು

1)ಸಪಿಂಡಿಕರಣ ಶ್ರಾದ್ಧ :-
ಇದು ಮರಣದ 12 ನೇ ದಿನದಲ್ಲಿ ಪಿಂಡದಲ್ಲಿ ಕಾಮ ಮತ್ತು ಕಾಲ ಎಂಬ ದೇವತೆಗಳು ಪ್ರವೇಶ ಪ್ರವೇಶ ಮಾಡುತ್ತಾರೆ .

2) ನಾಂದಿ ಶ್ರಾದ್ಧ :-
ಇದು ಮಂಗಳ ಕಾರ್ಯದಲ್ಲಿ ಹಿರಿಯರ ಸ್ಮರಣೆಯಲ್ಲಿ ಮಾಡುವ ಶ್ರಾಧ್ದ. ಸತ್ಯ ಮತ್ತು ವಸು ದೇವತೆಗಳು.

3) ಇಷ್ಟ ಶ್ರಾದ್ಧ :-
ಜ್ಞಾನಿಗಳು , ಯತಿಗಳು ಬಂದಾಗ ಪಿತೃಗಳಿಗೆ ಉದ್ದೇಶವಾಗಿ ಮಾಡುವ ಶ್ರಾದ್ಧ. ಕ್ರತು ಮತ್ತು ದಕ್ಷ ದೇವತೆಗಳು.

4) ನೈಮಿತ್ತಿಕ ಶ್ರಾದ್ಧ :-
ಇದು ಕ್ಷೇತ್ರಗಳಲ್ಲಿ ಮತ್ತು ಪಕ್ಷ ಮಾಸದಲ್ಲಿ ಮಾಡುವ ಶ್ರಾಧ್ದ.ಧೂರಿ ಮತ್ತು ವಿಲೋಚನ ದೇವತೆಗಳು.

5) ಕಾಲ ಶ್ರಾದ್ಧ :-
ಪಿತೃಗಳು ಮರಣ ಹೊಂದಿದ ತಿಥಿ ಯನ್ನು, ಪ್ರತಿ ಸಾ0ವತ್ಸರದಲ್ಲಿ ಬರುವ ಅದೇ ತಿಥಿಗೆ ಮಾಡುವಶ್ರಾದ್ಧ .ಪುರೂರವ ಮತ್ತು ಆದ್ರ೯ವ ದೇವತೆಗಳು .

ಮನುಷ್ಯ ತೀರಿ ಹೋದಮೇಲೆ ಅವರ ಸ್ಮರಣೆಯಲ್ಲಿ ಷಣ್ಣವತಿ ಶ್ರಾಧ್ದ ಮಾಡಬೇಕು . "ಷಣ್ಣವತಿ " ಎಂದರೆ ಸಂಸ್ಕೃತದಲ್ಲಿ 96 ಎಂದರ್ಥ . ಅಂದರೆ ವರ್ಷದಲ್ಲಿ 96 ಶ್ರಾದ್ಧಗಳನ್ನು ಮಾಡಬೇಕು .

ವರ್ಷದಲ್ಲಿ ಬರುವ ಷಣ್ಣವತಿ ಶ್ರಾದ್ಧಗಳು

1) ಮನ್ವಾದಿಗಳಲ್ಲಿ - 14
2)ಮಹಾಲಯ - 16
3) ಯುಗಾದಿಗಳು - 04
4) ಸಂಕ್ರಮಣ - 12
5) ದರ್ಶಗಳು - 12
6) ವ್ಯತಿಪಾತಗಳು - 13
7) ವೈಧೃತಿಗಳು - 13
8) ತ್ರಿಸ್ರೋಷ್ಟಕಗಳು - 12
ಒಟ್ಟಾರೆಯಾಗಿ ಇವೆ 96 ಷಣ್ಣವತಿ ಶ್ರಾದ್ಧ ಗಳು .

ಆದರೆ ನಾವು ಹಾಗೆ ಮಾಡುವುದಿಲ್ಲ . ಕೇವಲ ವರ್ಷದಲ್ಲಿ ಎರಡು ಶ್ರಾಧ್ದ ಮಾಡುತ್ತೇವೆ .1) ಪ್ರತಿ ಸಂವತ್ಸರದ ತಿಥಿಯಂದು ಮಾಡುವ
"ಕಾಲ್ ಶ್ರಾದ್ಧ " 2) ಇನ್ನು ಪಕ್ಷಮಾಸದಲ್ಲಿ ಮಾಡುವ " ಪಿತೃ ಪಕ್ಷ ".

ಇನ್ನು ಪಕ್ಷ ಮಾಸದ ಪೌರಾಣಿಕ ಹಿನ್ನೆಲೆ ತಿಳಿದುಕೊಳ್ಳೋಣ .ಯುದ್ಧದಲ್ಲಿ ಅರ್ಜುನ ಕೈಯಿಂದ ಕರ್ಣನ ಮೃತ್ಯುವಾದಾಗ , ಅವನ ಆತ್ಮ ಸ್ವರ್ಗಕ್ಕೆ ಹೋಗುವಾಗ ಅವನಿಗೆ ಕೇವಲ ಚಿನ್ನ , ಬೆಳ್ಳಿ ಸಿಗುತ್ತೆ ಅನ್ನ ಸಿಗುವದಿಲ್ಲ , ಆಗ ಕರ್ಣನು ನೊಂದುಕೊಂಡು ಯಮಧರ್ಮರಾಯನಿಗೆ ಕೇಳುತ್ತಾನೆ . ನಾನು ಭೂಮಿಯಲ್ಲಿದ್ದಾಗ ಬೇಕಾದಷ್ಟು ದಾನ ಧರ್ಮ ಮಾಡಿರುವೆ ನನಗೇಕೆ ಈ ಗತಿ ಎಂದು ಕೇಳಿದಾಗ , ಆಗ ಯಮಧರ್ಮರಾಯ ಹೇಳುತ್ತಾನೆ , ನೀನು ಎಲ್ಲವನ್ನು ದಾನ ಮಾಡಿದ್ದಿಯಾ ಆದರೆ ಅನ್ನದಾನ ಮತ್ತು ಪಿತೃ ಕರ್ಮ ಮಾಡಲಾರದಕ್ಕೆ ಈ ಸ್ಥಿತಿ ನಿನಗೆ ಬಂದಿದೆ ಎಂದು ಹೇಳುತ್ತಾನೆ . ಮಾತೇನು ಇದಕ್ಕೆ ಪರಿಹಾರ ಅಂದಾಗ , ನಿನಗೆ ಭಾದ್ರಪದ ಹುಣ್ಣಿಮೆಯಿಂದ ಅಮಾವಾಸ್ಯೆವರೆಗೆ
( ಮಹಾಲಯ ಅಮಾವಾಸ್ಯೆ) ಸಮಯ ಕೊಡುತ್ತೇನೆ , ಅಷ್ಟರಲ್ಲಿ ನೀನು ಅನ್ನದಾನ , ವಸ್ತ್ರದಾನ ಮಾಡಿ ಮತ್ತು ಪಿತೃ ತರ್ಪಣ ಕೊಟ್ಟು ಬಾ ಆಗ ನಿನಗೆ ಸ್ವರ್ಗದಲ್ಲಿ ಅನ್ನ ಸಿಗುತ್ತೆ ಎಂದು ಹೇಳುತ್ತಾನೆ .ಅದೇ ರೀತಿ ಕರ್ಣನು ಈ ಹದಿನೈದು ದಿನಗಳಲ್ಲಿ ಎಲ್ಲ ಕಾರ್ಯ ಮಾಡಿ ಸ್ವರ್ಗಕ್ಕೆ ಹೋದಾಗ ಅನ್ನ ಸಿಗುತ್ತದೆ .

#ಪಕ್ಷಮಾಸ #ನಿಯಮ.

ಈ ನೈಮಿತ್ತಿಕ ಶ್ರಾಧ್ದದಲ್ಲಿ ಬರುವ ಪಕ್ಷಮಾಸದಲ್ಲಿ ಮಾಡುವ ಶ್ರಾಧ್ದವೆ "ಪಿತೃ ಪಕ್ಷ " ಅನ್ನುತ್ತಾರೆ . ಇಲ್ಲಿ ಸರ್ವ ಪಿತೃಗಳನ್ನು ಸ್ಮರಿಸಿ ತರ್ಪಣ ಬಿಡುತ್ತಾರೆ . ಇದರ ದೇವತೆ ಧೂರಿ ಮತ್ತು ವಿಲೋಚನ. ಇಲ್ಲಿ ಮೂರು ತಲೆಮಾರಿನ ಪಿತೃಗಳ ಸ್ಮರಣೆ ಮಾಡಿ ಸಾಮುಹಿಕವಾಗಿ ತಿಲ್ ,ಜಲ್, ತರ್ಪಣ , ಪಿಂಡ ಬಿಡುವುದೇ ಪಿತೃ ಪಕ್ಷ ಅಥವಾ ಮಹಾಲಯ ಪಕ್ಷ ಎನ್ನುತ್ತಾರೆ .ಈ ಮೂರು ತಲೆಮಾರಿನವರ ಆತ್ಮಗಳು ಇದು ಸೂಕ್ಷ್ಮ ಶರೀರ ಇರುವದರಿಂದ ಭೂಮಿ ಮತ್ತು ಸ್ವರ್ಗ ದ ಮಧ್ಯದಲ್ಲಿ ಇರುತ್ತಾರೆ . ಈ ಶ್ರಾದ್ಧ ಕಾಲದಲ್ಲಿ ಜನಾರ್ಧನ ರೂಪಿಯಾದ ಪರಮಾತ್ಮನು 3555 ರೂಪಗಳಲ್ಲಿ ಇರುತ್ತಾನೆ .

ಹಾಗೆ ಪರಮಾತ್ಮನ ಪಂಚ ರೂಪಗಳಾದ ಅನಿರುಧ್ದ , ಪ್ರದ್ಯುಮ್ನ , ಸಂಕರ್ಷಣ , ವಾಸುದೇವ , ನಾರಾಯಣ ಹೀಗೆ ಐದು ರೂಪಗಳಲ್ಲಿ ಇರುತ್ತಾನೆ .

ಇನ್ನು ಜಗನ್ನಾಥ ದಾಸರು ಹರಿಕಥಾಮೃತಸಾರ "ಭೋಜನ ಸಂಧಿಯಲ್ಲಿನ 21 ನೇ ನುಡಿಯಲ್ಲಿ ಹೇಳಿರುವಂತೆ ಶ್ರಾಧ್ದಗತ ಭಗವದ್ರೂಪಗಳಲ್ಲಿ "ಅನಿರುಧ್ದ ರೂಪಿಯಾದ ಪರಮಾತ್ಮನು ತ್ರಿನವತಿ (93) ರೂಪಗಳಿಂದ ( ವಸುಗಳು - 08 ರೂಪಗಳು, ರುದ್ರರಲ್ಲಿ - 11ರೂಪಗಳು,, ಆದಿತ್ಯರಲ್ಲಿ - 12 ರೂಪ ಗಳು ಹೀಗೆ ಕೂಡಿಸಿ ಒಟ್ಟಾರೆ 31 ರೂಪಗಳನ್ನು ಆಗುತ್ತದೆ . ಅನಿರುಧ್ದ , ಪ್ರದ್ಯುಮ್ನ , ಸಂಕರ್ಷಣ ಎಂಬ 3 ನಾಮಗಳಿಂದ ಗುಣಿಸಿದಾಗ 93 ರೂಪಗಳು ಆಗುತ್ತದೆ .) ಇದಕ್ಕೆ ತ್ರಿನವತಿ ರೂಪ ಎನ್ನುವರು. ಸಂಸ್ಕೃತದಲ್ಲಿ ತ್ರಿನವತಿ ಎಂದರೆ 93 ಎಂದರ್ಥ . ಶ್ರಾಧ್ದ ಮಾಡುವ ಯಜಮಾನನಲ್ಲಿ ಈ ವಸು,ಆದಿತ್ಯ, ರುದ್ರರ ಮೂಲಕ ಪಿತೃಗಳಿಗೆ ಪ್ರದ್ಯುಮ್ನ ರೂಪದಿಂದ ಅನ್ನನಾಗಿರುತ್ತಾನೆ .
ಸಂಕರ್ಷಣ ರೂಪದಿಂದ ದೇವಭಾಗ ಮತ್ತು ಪಿತೃಭಾಗ ಎಂದು ವಿಭಾಗ ಮಾಡುತ್ತಾನೆ . ನಿತ್ಯಾನಂದನಾದ ಭಗವಂತನು ತುರ್ಯ ನಾಮಕನಾಗಿ ವಾಸುದೇವನ ಮೂಲಕ ತಾನು ಉಂಡು , ಸಕಲರಿಗೂ ಉಣಿಸುವನು .

ಇನ್ನು ಭೋಜನ ಸಂಧಿಯ 22 ನೇ ನುಡಿಯಲ್ಲಿ ಹೇಳಿರುವ ಪ್ರಕಾರ
"ಷಣ್ಣವತಿ " ನಾಮಕನಾಗಿ ವಸು , ಮುಕ್ಕಣ್ಣ(ರುದ್ರ), ಭಾಸ್ಕರಲ್ಲಿ ನಿಂತು ತನಗೆ ಶರಣು ಬಂದವರ ಜನರನ್ನು ನಿತ್ಯದಲ್ಲಿ ಕಾಪಾಡ್ತಾ , ಅವರ ಪುಣ್ಯ ಕರ್ಮ ಸ್ವೀಕರಿಸಿ ಪಿತೃಗಳಿಗೆ ಸುಖವ ನೀಡುತ್ತಾನೆ .

#ಭಗವಂತನ #ಷಣ್ಣವತಿ(96) #ರೂಪಗಳ

ವಸುಗಳು 8 , ಏಕಾದಶ ರುದ್ರರು 11,
ದ್ವಾದಶ ಆದಿತ್ಯರು 12 , ಹಾಗೆಯೇ ಒಟ್ಟಾರೆಯಾಗಿ ಕೂಡಿಸಿದಾಗ 31 ರೂಪಗಳನ್ನು , ವೈಕಾರಿಕ , ತೈಜಸ , ತಾಮಸ , ಎಂಬ ಗುಣಗಳಿಂದ ಗುಣಿಸಿದಾಗ 93 ಬರುತ್ತದೆ , ಮತ್ತೆ ಈ ಮೇಲಿನ 3 ಗುಣಗಳು ಕೂಡಿಸಿದಾಗ ಷಣ್ಣವತಿ(96) ಆಗುತ್ತದೆ . ಹೀಗೆ ಭಗವಂತನನ್ನು ಚಿಂತಿಸಬೇಕು .

ಹೀಗೆ ಸಪ್ತಾನ್ನಗಳಾದ ( 7 ತರಹದ ಅನ್ನ )
ಮನಸ್ಸು , ವಾಕ್ , ಪ್ರಾಣ , ಬಲಿ , ಹೋಮ , ಹಾಲು ಇವೆ

#ಸಪ್ತಾನ್ನಗಳು .

1)"ಸ್ವಾಹಾ ಮಾಯಾಪತಿ " ವಾಸುದೇವ ಅನ್ನ ಕಲ್ಪಿಸಿ ದೇವತೆಗಳಿಗೆ ಬಡಿಸುವನು.

2 ) " ಸ್ವಾಧ್ಧಾ ಜಯಾಪತಿ ಸಂಕರುಷಣ ಅನ್ನ ಕಲ್ಪಿಸಿ ಪಿತೃಗಳಿಗೆ ತೃಪ್ತಿ ಪಡಿಸುತ್ತಾನೆ.

3 ) ಕೃತಿ ಪತಿ ಪ್ರದ್ಯುಮ್ನ ಚತುರ್ವಿಧ ರಸಗಳಲ್ಲಿ ಅನ್ನ ಕಲ್ಪಿಸಿ ಮನುಷ್ಯರಿಗೆ ತೃಪ್ತಿ
ಪಡಿಸುವನು .

4) ಶಾಂತಿ ಪತಿ ಅನಿರುಧ್ದನು ಅನ್ನ ಕಲ್ಪಿಸಿ ಪಶುಗಳಿಗೆ ತೃಪ್ತಿ ಪಡಿಸುವನು .

5 ) ಮಾಯಾಪತಿ ವಾಸುದೇವನಿಂದ ಈ ಸಪ್ತಾನ್ನಗಳ ಮೂಲಕ ತಾನು ಉಂಡು ಸಕಲರಿಗೂ ಉಣಿಸುವನು .

ಹಾಗೆಯೇ ಈ ಹದಿನೈದು ದಿನಗಳಲ್ಲಿ ಮುತೈದೆ ತೀರಿ ಹೋದಲ್ಲಿ ನವಮಿ ತಿಥಿಯಂದು " ಅವಿಧವಾ ನವಮಿ " ಅಂತ ವಂಶದಲ್ಲಿ ಯತಿ ಆಗಿ ಹೋದವರಿಗೆ ದ್ವಾದಶಿ ಅಂದು " ಯತಿ ದ್ವಾದಶಿ "ಅಂತಾ ಅಪಘಾತಗಳಲ್ಲಿ ತೀರಿ ಹೋದವರಿಗೆ ಚತುರ್ದಶಿ ತಿಥಿಯಲ್ಲಿ
" ಘಾತ ಚತುರ್ದಶಿ" ತರ್ಪಣ ನೀಡಬೇಕಾಗುತ್ತದೆ . ಈ ಮಾಸದೊಳೊಗೆ ಅನಾನುಕೂಲತೆಯಿಂದ ಆಚರಿಸಲಾಗದಿದ್ದರೆ ತುಲಾ ಮಾಸ ಮುಗಿಯುವದೊರೊಳಗೆ
ಆಚರಿಸಬೇಕು .

ಹೀಗೆ ಸರ್ವಾಂತರ್ಯಾಮಿಯಾದ
ಪರಮಾತ್ಮನು ಎಲ್ಲದರಲ್ಲೂ ಇದ್ದು ಕಾರ್ಯ ಮಾಡಿಸುವನು . ಅವರಅವರ ಸುಕರ್ಮವನ್ನು ಸ್ವೀಕರಿಸಿ ಸಕಲ ಜೀವರಾಶಿಗಳಿಗೂ ಮತ್ತು ಪಿತೃಗಳಿಗೂ
ಸುಖವಿನಿತ್ತು ಎಲ್ಲ ಕಾಲದಲ್ಲಿಯೂ ಕಾರುಣ್ಯ ಸಾಗರನಾದ ಪರಮಾತ್ಮಾ ಕಾಯುತ್ತಿರುವನು .

ಶ್ರೀಕೃಷ್ಣಾರ್ಪಣಮಸ್ತು

***********



" ಶ್ರಾದ್ಧದಲ್ಲಿ ರಜತ ಪಾತ್ರೆಯ ವಿಶೇಷತೆ "

ಶ್ರಾದ್ಧ ಕರ್ಮಕ್ಕೆ ಉಪಯೋಗಿಸುವ ಪಾತ್ರೆಗಳು ಬೆಳ್ಳಿಯದ್ದೇ ಆಗಿರಬೇಕು.

ಬೆಳ್ಳಿಯು ಶ್ರೀ ರುದ್ರದೇವರ ಕಣ್ಣಿನಿಂದ ಹುಟ್ಟಿದೆ.

ಪಿತೃಗಳಿಗೆ ಈ ಧಾತುವು ಅತ್ಯಂತ ಪ್ರಿಯವಾಗಿದೆ.

ದೇವ ಬ್ರಾಹ್ಮಣರಿಗೆ ದಕ್ಷಿಣೆ ಕೊಡುವಾಗ ಸುವರ್ಣವನ್ನು ಕೊಟ್ಟರೇ, ಪಿತೃಗಳಿಗೆ " ತತ್ತುಲ್ಯ೦ ರಜತಂ " ಎಂಬಂತೆ ಬೆಳ್ಳಿಯನ್ನು ಕೊಡುವುದುಂಟು.

ಪಿತೃಗಳಿಗೆ ಅನ್ನ ನಿದರ್ಶನ ಮಾಡುವಾದ " ರಜತಮಯ ಪಾತ್ರೇ ಸ್ಥಿತಮನ್ನಂ " ಎಂದು ಹೇಳಲಾಗುತ್ತದೆ.

ಆದ್ದರಿಂದ ಪಿತೃ ಕಾರ್ಯಗಳಿಗೆ ರಜತ ಪಾತ್ರೆಗಳು ಅವಶ್ಯ ಮತ್ತು ಅನಿವಾರ್ಯ.

ಈ ಪಿತೃ ಕಾರ್ಯಗಳಲ್ಲಿ ಬೇಕಾದಷ್ಟು ಬೆಳ್ಳಿಯ ಪಾತ್ರಗಳನ್ನೂ ಸಂಗ್ರಹ ಮಾಡುವಷ್ಟು ಯೋಗ್ಯತೆ ಇಲ್ಲದಿದ್ದರೆ ಒಂದಾದರೂ ಬೆಳ್ಳಿಯ ಪಾತ್ರಯನ್ನಿಟ್ಟು ಪಿತೃ ಕಾರ್ಯವನ್ನು ನಡೆಸಬೇಕು.

ಶ್ರಾದ್ಧ ಕರ್ಮದಲ್ಲಿ ಉಪಯೋಗಿಸಿದ ವಸ್ತುಗಳಲ್ಲಿ ಸ್ವಲ್ಪ ಕಬ್ಬಿಣದ ಅಂಶವಿದ್ದರೂ ಪಿತೃಗಳು ಶ್ರಾದ್ಧದಲ್ಲಿ ಕೊಡಲ್ಪಟ್ಟ ಅನ್ನ ಜಲಾದಿಗಳನ್ನು ಸ್ವೀಕರಿಸದೇ ಆ ಸ್ಥಳದಿಂದ ಓಡಿ ಹೋಗುತ್ತಾರೆ.

" ಪದ್ಮ ಪುರಾಣದ ನಾಗರಖಂಡ " ದಲ್ಲಿ...
ಅಯಸೋ ದರ್ಶನಾದೇವ ಪಿತರೋ ವಿದ್ರವಂತಿ ಹಿ ।।

ಎಲ್ಲಾ ಪಿತೃಗಳ ಪ್ರೀತ್ಯರ್ಥವಾಗಿ ಬೆಳ್ಳಿಯ ಪಾತ್ರೆ ಅಥವಾ ಬೆಳ್ಳಿ ಮಿಶ್ರಿತವಾದ ಪಾತ್ರೆಯಲ್ಲಿ " ಸ್ವಧಾ ಪಿತೃಭ್ಯ: " ಎಂದು ಹೇಳಿ ಮಾಡಲ್ಪಟ್ಟ ಶ್ರಾದ್ಧವು ಪಿತೃಗಳಿಗೆ ತೃಪ್ತಿಯನ್ನುಂಟು ಮಾಡುತ್ತದೆ.

ಸರ್ವೇಷಾ೦ ರಜತಂ ಪಾತ್ರಮಥವಾ ರಜತಾನ್ವಿತಮ್ ।
ದತ್ತಂ ಸ್ವಧಾ೦ ಪುರೋಧಾಯ ಶ್ರಾಧ್ಧ೦ ಪ್ರೀಣಾತಿ ವೈ ಪಿತ್ರೂನ್ ।।

" ನಾರದೀಯ ಪುರಾಣದನ್ವಯ ಶ್ರಾದ್ಧದಲ್ಲಿ ತುಳಸಿಯ ಮಹತ್ವ "

ಪ್ರತಿಯೊಂದು ದಾನ ಕೊಡುವಾಗಲೂ, ಶ್ರಾದ್ಧದಲ್ಲಿ ಯವೋದಕ - ತಿಲೋದಕಗಳನ್ನು ಬಿಡುವಾಗಲೂ, ದತ್ತ ಮಾಡುವಾಗಲೂ, ತಾಂಬೂಲ - ದಕ್ಷಿಣೆಗಳನ್ನು ಕೊಡುವಾಗಲೂ ತುಳಸೀ ದಳವನ್ನು ಸೇರಿಸಿಕೊಂಡೇ ಕೊಡಬೇಕು.

ತುಳಸೀ ಗಂಧ ಮಾತ್ರೇಣ ಪಿತರಃ ತುಷ್ಟಿಮಾಪ್ನುಯು: ।
ಪ್ರಯಾಂತಿ ಮುಕ್ತಿ ಮಾರ್ಗೇಣ ತತ್ಪದಂ ಚಕ್ರಪಾಣಿನಃ ।।

ಪರಮಾತ್ಮನಿಗೆ ಅರ್ಪಿಸಿರುವ ತುಳಸಿಯ ವಾಸನೆಯಿಂದ ಮಾತ್ರವೇ ಪಿತೃಗಳು ಸಂತೋಷವನ್ನು ಹೊಂದುತ್ತಾರೆ. ಚಕ್ರಪಾಣಿಯಾದ ಶ್ರೀಮಹಾವಿಷ್ಣುವಿನ ಲೋಕವನ್ನೂ ಮುಕ್ತಿ ಮಾರ್ಗದಿಂದ ಹೋಗಿ ಸೇರುತ್ತಾರೆ.

ತುಳಸೀ ಶ್ರಾದ್ಧ ಕಾಲೇ ತು ದತ್ವಾ ಶಿರಸಿಧಾರಿತೇ ।
ದಾತಾ ಭೋಕ್ತಾ ಪಿತಾ ತಸ್ಯ ವಿಷ್ಣು ಲೋಕೇ ಮಹೀಯತೇ ।।

ಶ್ರಾದ್ಧ ಕಾಲದಲ್ಲಿ ಕರ್ತೃವು ಕೊಟ್ಟ ತುಳಸಿಯನ್ನು ( ಅದನ್ನು ) ಭೋಕ್ತೃವು ತಲೆಯಲ್ಲಿ ಧರಿಸುವುದರಿಂದ ಕರ್ತೃ, ಕರ್ತೃವಿನ ತಂದೆ ಅಥವಾ ತಾಯಿ ಮತ್ತು ಭೋಜನ ಮಾಡಿದವರು ಮುಂದೆ ವಿಷ್ಣು ಲೋಕದಲ್ಲಿ ಪ್ರಕಾಶಿತರಾಗಿರುತ್ತಾರೆ.

ಪಿತೃ ಪಿಂಡಾರ್ಚನಂ ಶ್ರಾದ್ಧೇ ಯೈ: ಕೃತಂ ತುಳಸೀದಲೈ: ।
ತರ್ಪಿತಾ ಪಿತರಸ್ತೈಶ್ಚ ಯಾವಚ್ಚ೦ದ್ರಾರ್ಕ ಮೇದಿನೀ ।।

ಶ್ರಾದ್ಧದಲ್ಲಿ ಯಾರಿಂದ ಪಿತೃ ಪಿಂಡಗಳ ಅರ್ಚನವು ತುಲಸೀದಳಗಳಿಂದ ಮಾಡಲ್ಪಡುತ್ತದೆಯೋ ಅವರಿಂದ ಎಲ್ಲಿಯವರೆಗೂ ಚಂದ್ರ ಸೂರ್ಯಗಳು ಭೂಮಿಗಳಿರುತ್ತವೆಯೋ ಅಲ್ಲಿಯ ವರೆಗೂ ಪಿತೃಗಳು ಸಂತುಷ್ಟರಾಗಿರುವಂತೆ ಮಾಡಲ್ಪಡುತ್ತದೆ.

" ನಾರದೀಯ ಪುರಾಣದನ್ವಯ ವಸ್ತ್ರ - ಜನಿವಾರದ ಮಹತ್ವ "

ವಾಸೋsಸಿ ಸರ್ವ ದೈವತ್ಯಂ ಸರ್ವ ದೇವೈರಭಿಷ್ಟುತಮ್ ।
ವಸ್ತ್ರಾಭಾವೇ ಕ್ರಿಯಾ ನಶ್ಯಾತ್ ಯಜ್ಞ ದಾನಾದಿಕಾ: ಕ್ವಚಿತ್ ।
ತಸ್ಮಾದ್ವಸ್ತ್ರಾಣಿ ದೇಯಾನಿ ಶಾದ್ಧ ಕಾಲೇ ವಿಶೇಷತಃ ।।

ವಸ್ತ್ರವಾದರೋ ಎಲ್ಲಾ ದೇವತೆಗಳ ಸಾನ್ನಿಧ್ಯವನ್ನು ಹೊಂದಿರುವುದು. ಎಲ್ಲಾ ದೇವತೆಗಳಿಂದಲೂ ಸ್ತುತಿಸಲ್ಪಟ್ಟಿರುವುದು. ಕೆಲೆವೆಡೆ ಯಜ್ಞ ದಾನಾದಿ ಕ್ರಿಯೆಗಳು ವಸ್ತ್ರದಾನ ಮಾಡದುದರಿಂದ ನಷ್ಟವಾಗುತ್ತದೆ. ಆದ್ದರಿಂದ ಶ್ರಾದ್ಧ ಕಾಲದಲ್ಲಿ ವಿಶೇಷವಾಗಿ ವಸ್ತ್ರಗಳನ್ನು ಕೊಡಬೇಕು.

ಆಚ್ಚಾದನಂ ತು ಯೋ ದದ್ಯಾತ್ ಅಹತಂ ಶ್ರಾದ್ಧ ಕರ್ಮಣಿ ।
ಆಯು: ಶ್ರೀ: ಕಾಮಂ ಐಶ್ವರ್ಯ೦ ರೂಪಂ ಚ ಲಭತೇ ಧ್ರುವಮ್ ।।

ಶ್ರಾದ್ಧ ಕರ್ಮದಲ್ಲಿ ಬ್ರಾಹ್ಮಣರಿಗೆ ಯಾವನು ಉತ್ತಮವಾದ ವಸ್ತ್ರವನ್ನು ಕೊಡುತ್ತಾನೆಯೋ; ಅವನು ನಿಶ್ಚಯವಾಗಿಯೂ ದೀರ್ಘ ಕಾಲದ ಆಯುಷ್ಯವನ್ನೂ, ಸಂಪತ್ತನ್ನೂ, ತನ್ನ ಇಷ್ಟವಾದ ಧನ ಕನಕವನ್ನೂ, ಸಕಲೈಶ್ವರ್ಯಗಳನ್ನೂ, ತೇಜಸ್ಸಿನಿಂದ ರೂಪವನ್ನೂ ಹೊಂದುತ್ತಾನೆ.

ಉತ್ತಮವಾದ ವಸ್ತ್ರವನ್ನು ತಗೆದುಕೊಡಲು ಹಣದ ಸೌಕರ್ಯ ಇಲ್ಲದವರು ತಮ್ಮ ಶಕ್ತಿಗನುಗುಣವಾಗಿ ವಸ್ತ್ರಕ್ಕೆ ಪ್ರತಿಯಾಗಿ ಕೇವಲ ಹಣವನ್ನಾದರೂ ದಾನ ಮಾಡಬೇಕು.

ಯಜ್ನೋಪವೀತಂ ವೈ ದದ್ಯಾತ್ ಶ್ರಾದ್ಧ ಕಾಲೇಷು ಧರ್ಮವಿತ್ ।
ಪಾವನಂ ಸರ್ವ ವಿಪ್ರಾಣಾ೦ ಬ್ರಹ್ಮ ದಾನಸ್ಯ ತತ್ಫಲಂ ।।

ಧರ್ಮವನ್ನರಿತವನು ಎಲ್ಲಾ ವಿಪ್ರರನ್ನು ಶುದ್ಧಿಗೊಳಿಸಿವ ಜನಿವಾರವನ್ನು ಶ್ರಾದ್ಧ ಕಾಲದಲ್ಲಿ ಕೊಡಬೇಕು. ಅದರಿಂದ ಸರ್ವ ವ್ಯಾಪಿಯಾದ ಪರಬ್ರಹ್ಮನನ್ನೇ ಅಂದರೆ ವಿಶ್ವದಲ್ಲಿರುವ ಎಲ್ಲಾ ವಸ್ತುಗಳನ್ನೂ ದಾನ ಮಾಡಿದ ಫಲ ಉಂಟಾಗುತ್ತದೆ.

ಗುರು ವಿಜಯ ಪ್ರತಿಷ್ಠಾನ
ಸಂಗ್ರಹ-ಶ್ರೀ ಕೃಷ್ಣ ಮೂರ್ತಿ ಊರ್ಡಿಗೆರೆ

********


ಭಾದ್ರಪದ ಕೃಷ್ಣಪಕ್ಷವನ್ನು ಪಿತೃಪಕ್ಷವೆಂದು ಕರೆಯುತ್ತಾರೆ. ಈ ಪಕ್ಷದಲ್ಲಿ ಶ್ರಾದ್ಧವನ್ನು ಮಾಡುವದೂ ಪಿತೃತರ್ಪಣವನ್ನು ಅನುಷ್ಠಿಸುವದೂ ಪಿತೃಗಳಿಗೆ ತೃಪ್ತಿಯನ್ನುಂಟುಮಾಡುತ್ತದೆ ಎಂದು ಹಿಂದುಗಳ ನಂಬಿಕೆ. 

ವೇದಗಳಲ್ಲಿ ದೇವಯಾನ, ಪಿತೃಯಾನ ಎಂಬ ಎರಡು ಕರ್ಮಗತಿಗಳನ್ನು ವರ್ಣಿಸಿರುತ್ತದೆ. ಉಪಾಸಕರಾದವರು ದೇವಲೋಕಗಳಿಗೆ ಹೋಗಿ ಅಲ್ಲಿ ದೇವತೆಗಳ ಸಾಮಿಪ್ಯ, ಸಾಲೋಕ್ಯ, ಸಾಯುಜ್ಯ - ಎಂಬ ಫಲಗಳನ್ನು ಅನುಭವಿಸುತ್ತಾರೆ. ಕರ್ಮಿಗಳಾದವರು ಪಿತೃಲೋಕಕ್ಕೆ ಹೋಗಿ ಅಲ್ಲಿ ತಮ್ಮ ತಮ್ಮ ಕರ್ಮಕ್ಕೆ ಅನುಗುಣವಾಗಿ ಫಲವನ್ನು ಅನುಭವಿಸುತ್ತಾರೆ - ಹೀಗೆಂಬುದು ಶಾಸ್ತ್ರಕಾರರ ಹೇಳಿಕೆ. 

ಪಿತೃಗಳಿಗೆ ತೃಪ್ತಿಯಾಗಲೆಂದು ಶ್ರದ್ಧೆಯಿಂದ ಮಾಡುವ ನಿಯತಕಾಲಿಕ ಕರ್ಮವನ್ನು ಶ್ರಾದ್ಧವೆಂದು ಕರೆಯುತ್ತಾರೆ; ಎಳ್ಳುನೀರುಗಳನ್ನು ಪಿತೃತೃಪ್ತ್ಯರ್ಥವಾಗಿ ಬಿಡುವ ಕರ್ಮವನ್ನು ತರ್ಪಣವೆನ್ನುತ್ತಾರೆ. ಶಕ್ತನಾದವನು ಪಿತೃಪಕ್ಷದಲ್ಲಿ ಪ್ರತಿದಿನವೂ ಶ್ರಾದ್ಧವನ್ನು ಮಾಡಿ ತರ್ಪಣವನ್ನು ಕೊಡಬೇಕು; ಅಶಕ್ತರಾದವರು ಗೊತ್ತಾದ ಒಂದು ದಿನವಾದರೂ ಈ ಕರ್ಮವನ್ನು ಮಾಡಬೇಕು. ಈ ಶ್ರಾದ್ಧಕ್ಕೆ ಮಹಾಲಯವೆಂಬ ಹೆಸರು ಬಂದಿರುತ್ತದೆ. ಈ ಪಕ್ಷವನ್ನು ಮಹಾಲಯ ಪಕ್ಷವೆಂದು ಕರೆಯುವ ವಾಡಿಕೆಯೂ ಇದೆ. 
 ಪಿತೃಗಳಿಗೆಂದು ಶ್ರಾದ್ಧವನ್ನು ಮಾಡಿದರೆ, ತರ್ಪಣವನ್ನು ಕೊಟ್ಟರೆ ಅವರಿಗೆ ಅದು ತೃಪ್ತಿಯನ್ನು ಹೇಗೆ ಮಾಡುತ್ತದೆ? ಶ್ರಾದ್ಧಕರ್ಮಗಳಲ್ಲಿ ಮಾಡುವ ಹೋಮ, ಬ್ರಾಹ್ಮಣ ಭೋಜನ, ಪಿಂಡಪ್ರದಾನ, ತರ್ಪಣ - ಇವುಗಳು ಈ ಲೋಕದಲ್ಲಿ ಆಗುವದರಿಂದ ಅವುಗಳ ಫಲವು ಪಿತೃಗಳು ಎಲ್ಲಿದ್ದರೂ ಅವರಿಗೆ ಮುಟ್ಟುವದೆಂದು ನಂಬುವದು ಹೇಗೆ? ಆ ಪಿತೃಗಳು ಬೇರೊಂದು ಜನ್ಮವನ್ನು ಪಡೆದಿದ್ದರೆ ಶ್ರಾದ್ಧಕ್ಕೆ ಯಾವ ಪ್ರಯೋಜನವಾಗುವದು? - ಎಂದು ಕೆಲಸವರು ಯುಕ್ತಿಪ್ರಧಾನವಾದ ಪ್ರಶ್ನೆಗಳನ್ನು ಮಾಡುತ್ತಿರುತ್ತಾರೆ. ಈ ಪ್ರಶ್ನೆಗಳಿಗೆ ಪ್ರತ್ಯಕ್ಷಾದಿ ಪ್ರಮಾಣಗಳಿಂದ ಸಮಾಧಾನಕರವಾದ ಉತ್ತರವನ್ನು ಹೇಳುವದು ಕಷ್ಟ ಏಕೆಂದರೆ ಕರ್ಮಗಳಿಗೆ ಇಲ್ಲಿಯೇ ಅನುಭವಾರೂಡವಾದ ಫಲವಾಗುತ್ತದೆ ಎಂದು ಶಾಸ್ತ್ರದಲ್ಲಿ ಹೇಳಿರುವದಿಲ್ಲ. ಆದ್ದರಿಂದ ಇಲ್ಲಿ ಪ್ರಶ್ನೆಗಳೇ ಅಸಂಬದ್ಧ ಎಂದು ಹೇಳಬೇಕಾಗುತ್ತದೆ. ಆದರೆ ಕರ್ಮಗಳಿಗೆ ಅದೃಷ್ಟವಾದ ಫಲವೂ ಆಗಬಹುದೆಂಬುದನ್ನು ನಂಬುವದಕ್ಕೆ ತಕ್ಕಷ್ಟು ಕಾರಣವು ಇದ್ದೇ ಇದೆ. ಗಿಡಗಳಿಗೆ ಗೊಬ್ಬರ, ನೀರು - ಮುಂತಾದವನ್ನು ಹಾಕಿದರೆ ಅವುಗಳು ಪುಷ್ಟಿಯಾದ ರುಚಿಯಾದ ಹಣ್ಣುಗಳನ್ನೂ ಸುಗಂಧಯುತವಾದ ಹೂಗಳನ್ನೂ ಬಿಡುವದು ನಮಗೆಲ್ಲ ತಿಳಿದಿದೆ; ಆದರೆ ಗೊಬ್ಬರ ನೀರುಗಳಲ್ಲಿ ಈ ಸುಫಲಗಳನ್ನೂ ಸುಗಂಧವನ್ನೂ ಕೊಡುವ ಶಕ್ತಿ ಹೇಗೆ ಬಂದಿತು? ಎಂಬ ಪ್ರಶ್ನೆಗೆ ಉತ್ತರವನ್ನು ಯಾರು ತಾನೆ ಹೇಳಬಲ್ಲರು? ಮನುಷ್ಯನು ತನಗೆ ಬೇಕಾದ ಆಹಾರವನ್ನು ತಿನ್ನುತ್ತಾನೆ; ಅವನ ಶರೀರವು ರಕ್ತಮಾಂಸಾದಿಗಳಿಂದ ಕೂಡಿಕೊಂಡು ಬುದ್ಧಿಶಕ್ತಿಯ ಬೆಳವಣಿಗೆಗೂ ಆ ಆಹಾರವೂ ಹೇಗೆ ಕಾರಣವಾಗುವದೆಂಬುದನ್ನು ಯಾರು ತಾನೆ ಹೇಳಲಾರರು? ಪರಮೇಶ್ವರನ ಸೃಷ್ಟಿಯಲ್ಲಿ ಅತ್ಯಂತವಿಲಕ್ಷವಾದ ಕಾರಣಗಳಿಂದ ಅತ್ಯಂತ ವಿಲಕ್ಷಣ ಕಾರ್ಯಗಳು ಆಗುತ್ತಿರುವದು ನಮ್ಮೆಲ್ಲರ ಅನುಭವದಲ್ಲಿಯೂ ಇದೆ. ನಾವು ಕೊಟ್ಟ ಪಿಂಡವನ್ನು ಶ್ರಾದ್ಧಾನ್ನವನ್ನೂ ಹೋಮಾದಿಯನ್ನೂ ತರ್ಪಣಗಳನ್ನೂ ನಮ್ಮ ಪೂರ್ವಜರಾದ ಪಿತೃಗಳಿಗೆ ಹೀಗೆಯೇ ಒಂದಾನೊಂದು ಅದೃಷ್ಟಕ್ರಮದಿಂದ ತಲುಪಿಸುವ ಏಪಾಡನ್ನು ಕೆಲವರು ಪಿತೃದೇವತೆಗಳು ಮಾಡುತ್ತಾರೆಂದು ಸ್ಮೃತಿಗಳಲ್ಲಿ ಹೇಳಿರುತ್ತದೆ. 
 ಶ್ರಾದ್ಧದಲ್ಲಿ ನಾವು ಮಾಡುವ ಅನ್ನದಾನತಿಲತರ್ಪಣಾದಿಗಳಿಂದ ನಮಗೂ ಫಲವುಂಟು. ತಿಲವು ಭಗವಂತನ ಮನಸ್ಸಿನಿಂದಲೂ ಕುಶವು ಆತನ ಪ್ರಾಣದಿಂದಲೂ ಉಂಟಾಗಿರುವವೆಂದು ಪುರಾಣವಚನವಿದೆ. ಕರ್ಮಗಳಲ್ಲಿ ಅವುಗಳ ಪ್ರಯೋಗದಿಂದ ನಮ್ಮ ಮನಃಪ್ರಾಣಗಳಿಗೆ ಒಂದಾನೊಂದು ಸಂಸ್ಕಾರವಾಗುವದೆಂದು ಇದರಿಂದ ಸೂಚಿತವಾಗುತ್ತದೆ. ಪಿತೃಪಿತಾಮಹಾದಿಗಳಿಗೇ ಅಲ್ಲದೇ "ನಾನು ಕೊಡುವ ತರ್ಪಣದಿಂದ ಜಲಚರ, ಭೂಚರ, ವಾಯುಚರಜಂತುಗಳಿಗೆಲ್ಲ ತೃಪ್ತಿಯಾಗಲಿ"! ಎಂಬ ಭಾವನೆಯಿಂದ ತರ್ಪಣವನ್ನು ಕೊಡುವ ಮನೋಭಾವನೆಯಲ್ಲಿ ಎಂಥ ಸರ್ವಭೂತಪ್ರೇಮವು ಅಡಗಿರುತ್ತದೆ! ಶ್ರಾದ್ಧಾಂತದಲ್ಲಿ ನಾವು ಮಾಡುವ ಪ್ರಾರ್ಥನೆಯನ್ನು ಮನದಂದರೆ ಆಗ ಕರ್ಮಿಗಳ ಮನೋಭಾವವು ಹೇಗಿರುವದೆಂಬುದರ ಅರಿವು ಸ್ವಲ್ಪಮಟ್ಟಿಗೆ ಆಗಬಹುದಾಗಿದೆ; "ಪಿತೃಗಳು ಪ್ರಸನ್ನರಾಗಲಿ! ನಮ್ಮ ಗೋತ್ರವು ಬೆಳೆಯಲಿ! ನಮ್ಮ ದಾತೃಗಳು ಅಭಿವೃದ್ಧಿಯನ್ನೈದಲಿ! ವೇದಗಳೂ ಸಂತತಿಯೂ ಮುನ್ನಡೆಯಲಿ ! ನಮ್ಮ ಶ್ರದ್ಧೆಯು ಎಂದಿಗೂ ಸಡಿಲವಾಗದಿರಲಿ ! ನಮ್ಮಲ್ಲಿ ದಾನದ್ರವ್ಯವು ಹೆಚ್ಚುತ್ತಿರಲಿ ! ನಮ್ಮಲ್ಲಿ ಅನ್ನವು ಹೆಚ್ಚುತ್ತಿರಲಿ ! ಅತಿಥಿಗಳು ನಮಗೆ ದೊರಕುತ್ತಿರಲಿ ! ನಮ್ಮಲ್ಲಿ ಯಾಚನೆಗೆ ಬರುವವರು ಇರಲಿ, ನಾವು ಯಾರಲ್ಲಿಯೂ ಯಾಚನೆಮಾಡದಿರುವಂತಾಗಲಿ !"

ನಮ್ಮ ಹಿರಿಯರಲ್ಲಿ ಶ್ರದ್ಧಾಭಕ್ತಿಗಳನ್ನೂ ಸಂಸ್ಕೃತಿಯಲ್ಲಿ ಹೆಮ್ಮೆಯನ್ನೂ ಅಭ್ಯುದಯದಲ್ಲಿ ಆಶಾಪ್ರತೀಕ್ಷೆಗಳನ್ನೂ ಹೆಚ್ಚಿಸುವ ಶ್ರಾದ್ಧಕರ್ಮವನ್ನು ನೆನಪಿಗೆ ತರುವ ಪಿತೃಪಕ್ಷಕ್ಕೆ ಜಯಕಾರವಿರಲಿ!.
ಸಂಗ್ರಹ-ಶ್ರೀ ಗಿರೀಶ್ ಶರ್ಮ

ತಿಳಿದುಕೊಳ್ಳಿ
ಪಿತೃಪಕ್ಷ ಯಾರು ಆಚರಿಸಬೇಕು..?
ನಮ್ಮಲ್ಲಿ ಮೊದಲಿನಿಂದ ಮಾಡಿಲ್ಲ , ಈಗ ಮಾಡಬಹುದಾ..?
ತುಂಬಾ ಜನ MAIL ಲಿ ಈ ಪ್ರಶ್ನೆ ಕೇಳಿದ್ದಾರೆ.

ಇದು ವ್ರತ ಅಲ್ಲ ಕರ್ತವ್ಯ, ನಮ್ಮ ಹಿರಿಯರಿಗೆ ನಾವು ಕೊಡುತ್ತಿರುವ ಒಂದು ರೀತಿಯ ಧನ್ಯವಾದನೂ ಹೌದು, ಅವರಿಗೆ ಆಹಾರನೂ ಹೌದು..!

ಪಿತೃದೋಷ ಹೋಗಲಿಕ್ಕೆ ಇರುವ ದಾರಿಯೂ ಹೌದು, ಪಿತೃಗಳು ಸದಾ ನಮ್ಮನ್ನು ಗಮನಿಸುತ್ತಿರುತ್ತಾರಂತೆ.


ಈ ಸಮಯದಲ್ಲಿ ನಾವು ಅವರಿಗೆ ಸತ್ಕಾರ ಮಾಡಲೇಬೇಕು..!


ಅವರು ಉಪವಾಸವಿದ್ದು ಶಪಿಸಿದ್ದೇ ಆದರೆ, ನಮಗೆ ಶಾಪ ತಪ್ಪಿದ್ದಲ್ಲ, ಸಂತಾನವಾಗುವುದಿಲ್ಲ, ಮಕ್ಕಳ ಏಳಿಗೆ ಇಲ್ಲ, ಎಷ್ಟೇ ದುಡಿದರೂ ಮೇಲೆ ಬರಲಾಗುವುದಿಲ್ಲ.. ಇತ್ಯಾದಿ..

ವೈದಿಕ ಮಾಡ್ತಿವಿ, ಈಗಲೂ ಕೊಡಬೇಕಾ ಅಂತಾ..

ವೈದಿಕ ಮಾಡ್ತಿರಾ ಅಣ್ಣ ಒಂದು ಕಡೆ, ತಮ್ಮ ಒಂದು ಕಡೆ..!

ಅಥವಾ

ಎಲ್ಲೋ ಹೋಗಿ ಮಾಡಿಕೊಂಡು ಬರೋದು, ಕೆಲವು ಕಡೆ ಎರಡು ಮೂರು ವೈದಿಕ ಒಂದೇ ದಿನ ಮಾಡಿ, ಭಕ್ಷ್ಯ ಎಲ್ಲಾ ಒಂದೇ ಮಾಡಿರ್ತಾರೆ..!

ಅಥವಾ

ಬ್ರಾಹ್ಮಣಾರ್ಥಕ್ಕೆ ಕುಳಿತುಕೊಳ್ಳುವವರು ಒಂದು ಪಕ್ಷದಲ್ಲಿ ಒಂದು ಸಾರಿ ಮಾತ್ರ ಕುಳಿತುಕೊಳ್ಳಬೇಕು, ತುಂಬಾ ತಿಳಿದವರು ಮೂರು ತಿಂಗಳಿಗೆ ಒಂದು ಸಾರಿ ಮಾತ್ರ ಕುಳಿತುಕೊಳ್ಳುವರು, ಆದರೆ ಕೆಲವರು ದಿನಾ ಅದೇ ವೃತ್ತಿ ಅಥವ ಎರಡು ಮೂರು ಬಾರಿ ಕುಳಿತುಕೊಳ್ಳೋದಾಗುತ್ತೆ..

ಅಥವಾ

ಪಿತೃಶೇಷ ಪ್ರಸಾದವನ್ನು ನೈವೇದ್ಯ ನಂತರ ಅಲ್ಲೇ ಮನೆಯವರಿಗೆ ಎಲ್ಲಾ ಹಂಚಬೇಕು, ಬೇರೆ ಭಕ್ಷ್ಯದ ಜೊತೆ ಬೆರೆಸಬಾರದು, ಅದು ಪ್ರಸಾದ ಎನಿಸಿಕೊಳ್ಳುವುದಿಲ್ಲ..!

ಅಥವಾ

ಪಿತೃಶೇಷವನ್ನು ಸಂಬಂಧಿಕರಿಗೆ ಮಾತ್ರ ಕೊಡಬೇಕು, ಬೇರೆಯವರಿಗೆ ಕೊಟ್ಟರೆ ಅದೂ ಒಂದು ದೋಷವಾಗುತ್ತದೆ..

ಇತ್ಯಾದಿ ತುಂಬಾ ಇದೆ, ನಾವು ಇಂಥ ತಪ್ಪು ಸಾಮಾನ್ಯವಾಗಿ ಮಾಡೇ ಇರ್ತೀವಿ..

ಅದಕ್ಕಾಗಿಯೇ "ಪಿತೃಪಕ್ಷ" ಆಚರಣೆಯನ್ನು ಎಲ್ಲರ ಮನೆಯಲ್ಲಿ, ಎಲ್ಲರೂ ಮಾಡಬೇಕು..!


ಇದು ಕರ್ತವ್ಯವಾದ್ದರಿಂದ ಖಂಡಿತಾ ಮಾಡಲೇಬೇಕು, ಮೊದಲಿನಿಂದ ಮಾಡಿರಲಿ ಮಾಡಿರದೇ ಇರಲಿ ಮಾಡಲೇಬೇಕು..!

@GIRISH SHARMA@

*********




*******


ಶ್ರಾದ್ಧದ ಮಹತ್ವ 
" ಶ್ರಾದ್ಧ " ಯೆಂದರೆ...
" ಶ್ರದ್ಧಯಾ ಕ್ರೀಯತೇ ಕರ್ಮ ಇತಿ ಶ್ರಾದ್ಧಮ್ " - ಶ್ರದ್ಧೆಯಿಂದ ಆಚರಿಸುವ ಕಾರ್ಯವೇ " ಶ್ರಾದ್ಧ " ಎಂದು ಕರೆಸಿಕೊಳ್ಳುತ್ತದೆ. ಅತ್ಯಂತ ನಿಷ್ಠೆಯಿಂದ ಪಿಂಡ ಪ್ರದಾನ ಮಾಡಿ ಪಿತೃ ದೇವತೆಗಳ ಅಂತರ್ಯಾಮಿಯಾದ ಶ್ರೀ ಜನಾರ್ದನ ರೂಪಿ ಭಗವಂತನನ್ನು ತೃಪ್ತಿ ಪಡಿಸಬೇಕು. ಇದರಿಂದ ತನ್ನ ಪಿತೃಗಳಿಗೆ ಸದ್ಗತಿಯು ದೊರೆಯಲಿದೆಯೆಂದು ಪ್ರಾರ್ಥಿಸಬೇಕು.
ಕರ್ಮಭೂಮಿ ಯೆನಿಸಿದ ಈ ಭರತ ಖಂಡದ ಸನಾತನ ಧರ್ಮಗಳಲ್ಲಿ " ಶ್ರಾದ್ಧ " ಕರ್ಮವು ಮುಖ್ಯವಾಗಿದೆ. ಇದು ಅತ್ಯಂತ ಶ್ರೇಯಸ್ಕರವಾದ ಕರ್ಮವಾಗಿದೆ. ಇದನ್ನು " ಪಿತೃ ಯಜ್ಞ " ಎಂದು ಕರೆಯುತ್ತಾರೆ.
" ಬ್ರಹ್ಮಾಂಡ ಪುರಾಣ " ದಲ್ಲಿ...
ಪಿತೃನ್ಯೂದ್ಧಿಶ್ಯ ವಿಪ್ರೇಭ್ಯೋ ದತ್ತಾಂ ಶ್ರಾದ್ಧಮುದಾಹೃತಮ್ ।।

ನಮ್ಮ ಜನ್ಮಕ್ಕೆ ಕಾರಣರಾಗಿ, ನಮ್ಮನ್ನು ಹೆತ್ತು - ಹೊತ್ತು - ಸಾಕಿ - ಸಲುಹಿ ನಮ್ಮ ಉದ್ಧಾರಕ್ಕೆ ಶ್ರಮಿಸಿ, ನಮ್ಮನ್ನಗಲಿ ಹೋದ ತಂದೆ - ತಾಯಿ - ಹಿರಿಯರು ಮುಂತಾದವರನ್ನು ಸ್ಮರಿಸಿ, ಅವರನ್ನು ಕುರಿತು ಶ್ರದ್ಧೆಯಿಂದ ಅನ್ನ - ಜಲಾದಿಗಳನ್ನು ಕೊಡುವ ಪಿತೃ ಕಾರ್ಯಕ್ಕೆ " ಶ್ರಾದ್ಧ " ಎಂದು ಹೆಸರು.

" ಶ್ರಾದ್ಧ ಕಲ್ಪಲತಾ " ದಲ್ಲಿ....

ಪಿತೃನುದ್ಧಿಶ್ಯೇನ ಶ್ರದ್ಧಯಾ ತ್ಯಕ್ತಸ್ಯ ದ್ರವ್ಯಸ್ಯ ।
ಬ್ರಾಹ್ಮಣೈರ್ಯತ್ಸ್ವೀಕರಣಂ ತತ್ ಶ್ರಾದ್ಧಮ್ ।।

ಪಿತೃಗಳನ್ನುದ್ಧೇಶಿಸಿ ಶ್ರದ್ಧೆಯಿಂದ ಕೊಡಲ್ಪಟ್ಟ ದ್ರವ್ಯವನ್ನು ಬ್ರಾಹ್ಮಣರು ಸ್ವೀಕರಿಸುವುದಕ್ಕೆ " ಶ್ರಾದ್ಧ " ಎಂದು ಹೆಸರು.

ಒಟ್ಟಿನಲ್ಲಿ ಶ್ರದ್ಧೆಯಿಂದ ತನಗೆ ಪ್ರಿಯವಾದ ಭೋಜ್ಯವನ್ನು ತನ್ನ ಪಿತೃಗಳನ್ನುದ್ಧೇಶಿಸಿ ಕೊಡುವ " ಪಿಂಡ ಪ್ರದಾನ " ಕ್ರಿಯೆಗೆ " ಶ್ರಾದ್ಧ " ಎಂದು ಹೆಸರು.

ಇಲ್ಲಿ ಕೆಲವರು ಪ್ರಶ್ನೆ ಮಾಡುವುದುಂಟು...

ನಮ್ಮನ್ನಗಲಿ ಹೋದ ಪಿತೃಗಳಿಗೆ ನಾವು ಕೊಡುವ ಜಲಾಂಜಲಿ - ಪಿಂಡ ಪ್ರಧಾನದಿಂದ ತೃಪ್ತಿಯಾಗುವುದು ಹೇಗೆ? ಅವರಿಗೆ ನಾವು ಕೊಟ್ಟಿದ್ದು ತಲುಪುವುದು ಹೇಗೆ?

ಇದಕ್ಕೆ ಉತ್ತರ ಹೀಗಿದೆ...

ನಾವು ಕೊಟ್ಟ ಅನ್ನವನ್ನು ಅಂದರೆ...

ಅದರ ಸಾರ ಭಾಗವನ್ನು ವಸು - ರುದ್ರ - ಆದಿತ್ಯ ತದಂತರ್ಗತ ಭಾರತೀ ರಾಮಣ ಮುಖ್ಯಪ್ರಾಣಾಂತರ್ಗತ ಪ್ರದ್ಯುಮ್ನ - ಸಂಕರ್ಷಣ - ವಾಸುದೇವ ರೂಪಿ ಭಗವಂತನು 

**********

ಬಹಳ ದಿನಗಳ ಹಿಂದೆ ಒಂದು ಪ್ರಶ್ನೆ ಕೇಳಿದ್ದರು. ಭಾದ್ರಪದ ಕೃಷ್ಣಪಕ್ಷವೇ ಪಿತೃಪಕ್ಷ ಎಂದು ಯಾಕೆ ಹೇಳಲ್ಪಡುತ್ತದೆ. ಇದಕ್ಕೆ ಯಾವುದಾದರೂ ಪುರಾಣದ ಕಥೆಗಳು ಇವೆಯೋ ಎಂದು.


ಬಹಳ ಉಪಯುಕ್ತವಾದ ಪ್ರಶ್ನೆಯನ್ನೇ ಕೇಳಿದ್ದರು.


ಈ ಪಿತೃಪಕ್ಷದ ಬಗ್ಗೆ ಸ್ಕಂದಪುರಾಣದಲ್ಲಿ ನಾಗರಖಂಡದ ಭಾಗದಲ್ಲಿ ಬಹಳ ವಿವರವಾದ ವಿಚಾರವಿದೆ.


ಆನರ್ತನೆಂಬ ರಾಜನು ಭರ್ತೃಯಜ್ಞನೆಂಬ ಋಷಿಯನ್ನು ಕುರಿತು ಶ್ರಾದ್ದದ ಬಗ್ಗೆ, ಪಿತೃಪಕ್ಷದ ಬಗ್ಗೆ ಅಂದು ನಡೆಸುವ ಶ್ರಾದ್ದದ ಕುರಿತು ಪ್ರಶ್ನೆಯನ್ನು ಮಾಡುತ್ತಾನೆ.


ಆಗ ಭರ್ತೃಯಜ್ಞನು ಹೀಗೆ ಉತ್ತರವನ್ನು ಕೊಡುತ್ತಾನೆ. ಹಿಂದೆ ಬ್ರಹ್ಮನು ಅಗ್ನಿಷ್ವಾತ್ತರು, ಬರ್ಹಿಷದರು, ಸೋಮಪರು, ಆಜ್ಯಪರು, ರಶ್ಮಿಪರು, ಉಪಹೂತರು, ಆಯಂತುನರು ಶ್ರಾದ್ದಭುಜರು, ನಾಂದೀಮುಖರು ಎಂದು ಒಂಬತ್ತು ಮಂದಿ ಪಿತೃ ದೇವತೆಗಳನ್ನು ಸೃಷ್ಟಿಮಾಡಿದನು. ಅದರಲ್ಲಿ ನಾಂದೀಮುಖರನ್ನು ಬಿಟ್ಟು ಉಳಿದ ಎಂಟು ಪಿತೃಗಳನ್ನು ವಸು, ರುದ್ರ, ಆದಿತ್ಯ ರು ಮತ್ತು ಅಶ್ವಿನೀ ದೇವತೆಗಳು ಸಂತೃಪ್ತಿಪಡಿಸುತ್ತಾರೆ. ಆದ್ದರಿಂದ ಬ್ರಹ್ಮದೇವರು ಈ ವಸ್ವಾದಿಗಳನ್ನೂ ಪಿತೃಗಳೆಂದು ಕರೆದಿರುವರು.


ಮನುಷ್ಯರಾಗಿ ಹುಟ್ಟಿದ ತಂದೆ ತಾಯಂದಿರು ಸತ್ತಮೇಲೆ ಪಾಪದ ಫಲದಿಂದ ನರಕವನ್ನೂ, ಪುಣ್ಯದ ಫಲದಿಂದ ಸ್ವರ್ಗವನ್ನೂ ಪಡೆಯುತ್ತಾರೆ. ಹೀಗೆ ಸ್ವರ್ಗವನ್ನು ಪಡೆದ ಮರ್ತ್ಯಪಿತೃಗಳಲ್ಲಿ ಎರಡು ವಿಧ. ಸುಖೀ ಪಿತೃಗಳು ಹಾಗೂ ಅಸುಖೀ ಪಿತೃಗಳು ಎಂದು. ಅದರಲ್ಲಿ ಸ್ವರ್ಗದಲ್ಲಿದ್ದರೂ ಕೂಡ ಯಾರು ಸುಖವನ್ನು ಹೊಂದುತ್ತಿರಲಿಲ್ಲವೋ ಅವರು ಅಸುಖೀ ಪಿತೃಗಳು. ಯಾರಿಗೆ ಭೂಮಿಯಲ್ಲಿ ಮಕ್ಕಳು ಶ್ರಾದ್ದ, ತರ್ಪಣ ಇತ್ಯಾದಿಗಳನ್ನು ಮಾಡುವುದಿಲ್ಲವೋ ಅವರು ಹಸಿವು ಮತ್ತು ಬಾಯಾರಿಕೆಗಳಿಂದ ಪೀಡಿತರಾಗಿ ಅಸುಖಿಗಳಾಗಿದ್ದರು.


ಒಮ್ಮೆ ಸ್ವರ್ಗಕ್ಕೆ ಬಂದ ಅಗ್ನಿಷ್ವಾತ್ತಾದಿ ಪಿತೃಗಳನ್ನು ನೋಡಿ ನಾನಾ ರೀತಿಯ ಸ್ತೋತ್ರಗಳಿಂದ ಅವರನ್ನು ಸ್ತುತಿಸಿದರು. ಆಗ ಪ್ರೀತರಾದ ಆ ಪಿತೃಗಳು ವರವನ್ನು ಬೇಡಲು ಹೇಳುತ್ತಾರೆ. ಆಗ ಈ ಮನುಷ್ಯ ಪಿತೃಗಳು ನಾವು ಸ್ವರ್ಗವಾಸಿಗಳಾದರೂ ಕೂಡ ನಮಗೆ ಹಸಿವು ನೀರಡಿಕೆಗಳನ್ನು ಪರಿಹರಿಸಲು ಆಗುತ್ತಿಲ್ಲ. ನಮ್ಮ ವಂಶಜರು ಯಾರೂ ಶ್ರಾದ್ದವನ್ನು ಮಾಡುತ್ತಿಲ್ಲ ಹಾಗಾಗಿ ನಮಗೆ ಈ ಹಸಿವು ಮತ್ತು ಬಾಯಾರಿಕೆಗಳಿಂದ ಮುಕ್ತಿಯನ್ನು ಕೊಡಿಸಿರಿ ಎಂದು ಹೇಳಿದರು. ಆಗ ಪಿತೃ ದೇವತೆಗಳೂ ಕೂಡ ನಮಗೂ ಇಂದ್ರಾದಿ ದೇವತೆಗಳು ತರ್ಪಣ ನೀಡಿದರೆ ಮಾತ್ರ ಆಹಾರ. ಇಲ್ಲದಿದ್ದರೆ ನಮಗೂ ಉಪವಾಸವೇ. ಕೆಲವೊಮ್ಮೆ ದೇವತೆಗಳು ಸ್ಥಾನ ಭ್ರಷ್ಟರಾದರೆ ನಮಗೆ ಯಾವುದೇ ಆಹಾರವು ಲಭಿಸುವುದಿಲ್ಲ. ಆದ್ದರಿಂದ ನೀವು ನಿಮ್ಮ ವಂಶಜರು ನೀಡುವ ಕವ್ಯಭಾಗದಲ್ಲಿ ಒಂದು ಅಂಶವನ್ನು ನಮಗೆ ನೀಡಿದರೆ ನಮಗೂ ಶಾಶ್ವತವಾಗಿ ಆಹಾರವು ಲಭಿಸಿದಂತಾಗುವುದು. ಆಗ ನಾವು ನಿಮಗೆ ಉಪಕಾರ ಮಾಡುತ್ತೇವೆ ಎಂದು ಹೇಳುತ್ತಾರೆ. ಅದಕ್ಕೆ ಇವರು ಒಪ್ಪಿಗೆ ಸೂಚಿಸಿದರು. ಆಗ ಪಿತೃ ದೇವತೆಗಳು ಇವರನ್ನು ಕರೆದುಕೊಂಡು ಬ್ರಹ್ಮದೇವರಲ್ಲಿ ಹೋಗಿ ನಮಗಿಬ್ಬರಿಗೂ ಮನುಷ್ಯರಿಂದ ಶಾಶ್ವತವಾಗಿ ಆಹಾರ ಸಿಗುವ ವ್ಯವಸ್ಥೆ ಮಾಡಿ ಎಂದು ಪ್ರಾರ್ಥಿಸಿದರು.


ಆಗ ಬ್ರಹ್ಮದೇವರು ಪಿತೃ, ಪಿತಾಮಹ, ಪ್ರಪಿತಾಮಹ ಈ ಮೂವರ ಉದ್ದೇಶದಿಂದ ಕೊಡುವ ಪಿಂಡಪ್ರಧಾನದಿಂದ ಬ್ರಹ್ಮದೇವರ ಪರ್ಯಂತ ಪಿತೃಗಳು ತೃಪ್ತರಾಗುತ್ತಾರೆ ಎಂದು ಹೇಳಿದರು.


*ತಸ್ಮಾದಹಂ ಕರಿಷ್ಯಾಮಿ ಸುಖೋಪಾಯಂ ಶರೀರಿಣಾಮ್।ಯೇನ ಸಂತರ್ಪಿತಾ ಯೂಯಂ ಪರಾಂ ತೃಪ್ತಮವಾಪ್ಸ್ಯಥ॥ಪಿತುಃ ಪಿತಾಮಹಸ್ಯೈವ ತತ್ಪಿತುಶ್ಚ ತತಃಪರಮ್।ಸಮುದ್ದೇಶೇನ ದತ್ತೇನ ಬ್ರಾಹ್ಮಣೇಭ್ಯಃ ಪ್ರಭಕ್ತಿತಃ॥ಸರ್ವೇಷಾಂ ಸ್ಯಾತ್ ಪರಾ ತೃಪ್ತಿಃ ಯಾವನ್ಮಾಂ ಪಿತರೋಧುನಾ॥*


ಎಂದು. ಹೀಗೆ ಸ್ವಲ್ಪ ದಿನಗಳವರೆಗೆ ಮನುಷ್ಯರು ಶ್ರಾದ್ದವನ್ನು ಮಾಡುತ್ತಿದ್ದರು. ನಂತರ ಸ್ವಲ್ಪ ದಿನ ಕಳೆದಂತೆ ಮನುಷ್ಯರು ಇದನ್ನು ಉದಾಸೀನ ಮಾಡಲು ಪ್ರಾರಂಭಿಸಿದರು. ಆಗ ಮತ್ತೆ ಈ ಪಿತೃಗಳು ಎಲ್ಲರೂ ಬ್ರಹ್ಮದೇವರನ್ನು ಪ್ರಾರ್ಥನೆ ಮಾಡಿದರು. ಆಗ ಬ್ರಹ್ಮದೇವರು ನಿಮಗಾಗಿ ನಾನು ಒಂದು ಉಪಾಯವನ್ನು ಮಾಡುತ್ತೇನೆ. ನಿಮಗೆ ಸಂಪೂರ್ಣ ತೃಪ್ತಿಯೂ ಆಗಬೇಕು. ಮನುಷ್ಯರಿಗೆ ಕಮ್ಮಿ ಸಮಯದಲ್ಲಿ, ಕಡಿಮೆ ಖರ್ಚಿನಲ್ಲಿ ಅಧಿಕ ಪುಣ್ಯ ಬರುವ ಕರ್ಮವು ಆಗಿರಬೇಕು. ಅಂತಹ ಒಂದು ಉಪಾಯವನ್ನು ಹೇಳುತ್ತೇನೆ ಎಂದು ಹೇಳಿ ಈ ರೀತಿಯಾದ ಪರಿಹಾರವನ್ನು ಸೂಚಿಸುತ್ತಾರೆ.


ಸೂರ್ಯನ ಸಹಸ್ರ ಕಿರಣಗಳು ಯಾವಾಗ ನಿಮ್ಮ ಲೋಕವನ್ನು ತಲುಪುವುದೋ ಅಂದು ಚಂದ್ರನು ಅದರಲ್ಲಿ ವಾಸಮಾಡಿರುವನೋ ಆ ದಿನಕ್ಕೆ ಅಮಾವಾಸ್ಯೆ ಎಂದು ಹೆಸರು. ಆ ದಿನಗಳಲ್ಲಿ ಯಾರು ಶ್ರಾದ್ದ ತರ್ಪಣಗಳಿಂದ ನಿಮ್ಮನ್ನು ಸಂತೋಷಗೊಳಿಸುತ್ತಾರೋ ಅವರಿಗೆ ನೀವು ಎಲ್ಲಾ ರೀತಿಯ ಅನುಗ್ರಹಗಳನ್ನು ಮಾಡಿ. ನಿಮಗಾದರೋ ಅದರಿಂದ ಒಂದು ತಿಂಗಳು ಸಂಪೂರ್ಣ ತೃಪ್ತಿಯಾಗಲಿ ಎಂದು ಅನುಗ್ರಹಿಸಿದನು.


ಸ್ವಲ್ಪ ಸಮಯದ ನಂತರ ಮನುಷ್ಯರು ಇದನ್ನೂ ಸಹ ಸರಿಯಾಗಿ ಮಾಡುತ್ತಿರಲಿಲ್ಲ. ಆಗ ಮತ್ತೆ ಪಿತೃಗಳೆಲ್ಲರೂ ಬ್ರಹ್ಮದೇವರ ಬಳಿ ಹೋಗಿ ಪರಿಹಾರವನ್ನು ಬೇಡುತ್ತಾರೆ. ಅವರು ಈ ಪರಿಹಾರ ಬೇಡಿದ ದಿನ ಸೂರ್ಯನು ಕನ್ಯಾ ಮಾಸದಲ್ಲಿ ಇದ್ದ ಆಷಾಢದಿಂದ ಐದನೇಯ ಪಕ್ಷವಾದ ಭಾದ್ರಪದ ಕೃಷ್ಣಪಕ್ಷವಾಗಿತ್ತು.


*ಬ್ರಹ್ಮಾ ಪ್ರತೋಷಿತಸ್ತೈಶ್ಚ ವಿಧಾಯ ವಿವಿಧಂ ತಪಃ।ಕೃಷ್ಣಪಕ್ಷೇ ವಿಶೇಷೇಣ ನಭಸ್ಯೇ ಮಾಸಿ ಸಂಸ್ಥಿತೇ॥*


ಆದ್ದರಿಂದ ಬ್ರಹ್ಮದೇವರು ಈ ರೀತಿಯಾಗಿ ವರವನ್ನು ಕೊಡುತ್ತಾರೆ.


*ಯುಷ್ಮದರ್ಥಂ ಮಯೋಪಾಯಶ್ಚಿಂತಿತಃ ಪಿತರೋ ಲಘುಃ ।ಯೇನ ತೃಪ್ತಿಂ ಪರಾಂ ಯೂಯಂ ಗಮಿಷ್ಯಥ ಪಿತ್ರ್ಯೀಶ್ವರಾಃ॥ಅಮಾವಾಸ್ಯೋದ್ಭವಂ ಶ್ರಾದ್ದಮಲಬ್ಧ್ವಾಽಪಿ ಚ ವತ್ಸರಮ್।ಯಥಾ ಮಮ ಪ್ರಸಾದೇನ ತಚ್ಛೃಣುಧ್ವಂ ಸಮಾಹಿತಾಃ ॥ಆಷಾಢ್ಯಾಃ ಪಂಚಮೇ ಪಕ್ಷೇ ಕನ್ಯಾಸಂಸ್ಥೇ ದಿವಾಕರೇ ।ಮೃತಾಽಹನಿ ಪುನರ್ಯೋ ವೈ ಶ್ರಾದ್ದಂ ದಾಸ್ಯತಿ ಮಾನವಃ॥ತಸ್ಯ ಸಂವತ್ಸರಂ ಯಾವತ್ ತೃಪ್ತಾಃ ಸ್ಯುಃ ಪಿತರಾಃ ಧ್ರುವಮ್।ಏವಂ ಜ್ಞಾತ್ವಾ ಕರಿಷ್ಯಂತಿ ಪ್ರೇತಪಕ್ಷೇ ನರಾ ಭುವಿ ॥ಶ್ರಾದ್ಧಂ ಯೂಯಂ ನ ಸಂದೇಹೋ ಭವಿಷ್ಯಥ ಸುತರ್ಪಿತಾಃ।ವರ್ಷಾಂತೇ (ವರ್ಷಋತ್ವಂತೇ) ಶ್ರಾದ್ದ ಮೇಕಂ ಹಿ ಪ್ರಕರಿಷ್ಯಂತಿ ಮಾನವಾಃ।ಯೇನಾಽಖಿಲಂ ಭವೇದ್ವರ್ಷಂ ಯುಷ್ಮಾಕಂ ಪ್ರೀತಿರುತ್ತಮಾಃ॥*


ಎಂದು ಬ್ರಹ್ಮದೇವರು ವರವನ್ನು ಕೊಡುತ್ತಾರೆ. ಹೀಗೆ ಪಿತೃಗಳು ಹಾಗೂ ಪಿತೃ ದೇವತೆಗಳು ಯಾವ ಮಾಸದ ಪಕ್ಷದಂದು ವರ್ಷವಿಡೀ ತೃಪ್ತರಾಗುವಂತಹ ವರವನ್ನು ಪಡೆದರೋ ಆ ಮಾಸದ ಆ ಪಕ್ಷದಲ್ಲಿ ತನ್ನ ತಂದೆ ಗತಿಸಿದ ದಿನದಂದು ಶ್ರಾದ್ದವನ್ನು ಮಾಡಿದರೆ ಪಿತೃಗಳು ವರ್ಷವಿಡೀ ಸುಖದಿಂದ ಇರುತ್ತಾರೆ. ಈ ನಿಟ್ಟಿನಲ್ಲಿ ಭಾದ್ರಪದ ಕೃಷ್ಣಪಕ್ಷವೇ ಪಿತೃಪಕ್ಷ ಎಂದು ಪ್ರಸಿದ್ಧವಾಗಿದೆ.


ಇನ್ನು ಬೇರೆ ಪುರಾಣದಂತೆ ದಕ್ಷಿಣಾಯನವು ಪಿತೃಗಳಿಗೆ ಹಗಲಾಗಿದೆ. ಭಾದ್ರಪದ ಮಾಸವು ಕುತಪ ಕಾಲವಾದ್ದರಿಂದ ಆ ಕಾಲದಲ್ಲಿ ಸೂರ್ಯನ ಕಿರಣಗಳು ನೇರವಾಗಿ ಪಿತೃ ಲೋಕವನ್ನು ಸ್ಪರ್ಶಿಸುವುದರಿಂದ ಅಂದು ನಾವು ಕೊಡುವ ಪಿಂಡದ ಸಾರಭಾಗವು ಸೂರ್ಯನ ಕಿರಣಗಳ ಮೂಲಕ ಪಿತೃ ದೇವತೆಗಳನ್ನು ತಲುಪಿ ಅವರ ಅನುಗ್ರಹವಾಗುವುದು.


ಶ್ರೀ ಶಮ್.

|| ಶ್ರೀಮನ್ಮೂಲರಾಮೋ ವಿಜಯತೇ ||
|| ಶ್ರೀಗುರುರಾಜೋ ವಿಜಯತೇ ||
"ಶ್ರಾದ್ಧಕರ್ಮದಲ್ಲಿ ಪಿತೃಗಳಿಗೆ ಪಿಂಡಮಾಧ್ಯಮದಲ್ಲಿ ಆರಾಧನೆ ಏಕೆ?"
ಶ್ರಾದ್ಧಕರ್ಮದಲ್ಲಿ *ಪಿತೃ*ಗಳಿಗೆ ಅಂದರೆ, *ಪಿತೃ,ಪಿತಾಮಹ,ಪ್ರಪಿತಾಮಹ*ರನ್ನು ಕರಿತು ಮೂರು ಪಿಂಡಗಳನ್ನು ಇಟ್ಟು ಪೂಜಿಸುವುದು ರೂಢಿಯಲ್ಲಿ ಬಂದಿದೆ.ಇದರ ಹಿನ್ನಲೆಯನ್ನು *ಶ್ರೀಮನ್‍ಮಹಾಭಾರತ ಶಾಂತಿಪರ್ವ*ದಲ್ಲಿ ತಿಳಿಸಿದ್ದಾರೆ.
ಹಿಂದೆ ನಾರದರು ದೇವಕಾರ್ಯವನ್ನು ಪೊರೈಸಿ ಪಿತೃಕಾರ್ಯದಲ್ಲಿ ತೊಡಗಿದ್ದರು ಆ ಸಮಯದಲ್ಲಿ ಅವರು *ನರನಾರಾಯಣ*ರನ್ನು ಕುರಿತು ಶ್ರಾದ್ಧದಲ್ಲಿ ಪಿಂಡಾರಾಧನೆಯ ಬಗ್ಗೆ ಪ್ರಶ್ನೆ ಕೇಳುವರು.
ದೇವತೆಗಳು ಮೊದಲು ನೆಲದ ಮೇಲೆ ದರ್ಭೆಗಳನ್ನು ಹಾಸಿ ನಂತರ ಅವುಗಳ ಮೇಲೆ ಮೂರು ಪಿಂಡಗಳನ್ನು ಇಟ್ಟು ಪೂಜಿಸುತ್ತಿದ್ದುದರ ಕಾರಣವೇನು? ಪಿತೃಸಂಜ್ಞೆ ಯನ್ನು ಹೇಗೆ ಪಡೆದರು?
"ಇದಕ್ಕೆ ಉತ್ತರವಾಗಿ ನರನಾರಾಯಣರು ಹೇಳುತ್ತಾರೆ" -
ನಾರದನೇ ಕೇಳು ! ಹಿಂದೆ ಗೋವಿಂದನು ನಷ್ಟವಾಗಿ ಹೋಗಿದ್ದ ಸಾಗರಗಳಿಂದ ಸುತ್ತುವರಿಯಲ್ಪಟ್ಟಿರುವ ಈ ಭೂಮಿಯನ್ನು ವರಹರೂಪ ಧರಿಸಿ ಬೇಗನೆ ಮೇಲಕ್ಕೆತ್ತಿದ್ದನು.ಲೋಕಹಿತದ ಕಾರ್ಯವನ್ನು ಆರಂಭಿಸಿದ ಆ ಭಗವಂತನು ಭೂಮಿಯನ್ನು ಉದ್ಧಾರಮಾಡಿ ಸ್ವಸ್ಥಾನವನ್ನು ಸ್ಥಾಪಿಸಿದನು.ಆಗ ಸೂರ್ಯನು ಹಗಲಿನ ಮಧ್ಯ ಭಾಗಕ್ಕೆ ಬಂದು ಮಾಧ್ಯಾಹಿಕ ಕಾಲವು ಪ್ರಾಪ್ತವಾಗಲು,ವರಾಹ ರೂಪೀ ಭಗವಂತನು ತನ್ನ ಕೋರೆ ಹಲ್ಲುಗಳಿಗೆ ಮತ್ತಿಕೊಂಡಿದ್ದ ಮಣ್ಣಿನಿಂದ ಮೂರು ಪಿಂಡಗಳನ್ನು ಮಾಡಿ ನೆಲದ ಮೇಲೆ ದರ್ಭೆ ಹಾಸಿ ಅದರ ಮೇಲೆ ಮೂರು ಪಿಂಡಗಳನ್ನು ಸ್ಥಾಪಿಸಿ ತನ್ನನ್ನೇ ಉದ್ದೇಶಿಸಿ ಆ ಪಿಂಡಗಳಲ್ಲಿ ಪಿತೃಗಳನ್ನು ಆವಾಹಿಸಿ ಮಾಡಿ ಯಥಾ ವಿಧಿಯಾಗಿ ಪೂಜಿಸಿದನು.
ತ್ರೀನ್ ಪಿಂಡಾನ್ ನ್ಯಸ್ಯವೈ ಪೃಥ್ವ್ಯಾಂ ಪೂರ್ವಂ ದತ್ವಾ ಕುಶಾನಿತಿ |
ಕಥಂ ತು ಪಿಂಡಸಂಜ್ಞಾಂ ತೇ ಪಿತರೋ ಲೇಭಿರೇ ಪುರಾ ||
(ಶ್ರೀಮನ್‍ಮಹಾಭಾರತ ಶಾಂತಿ ಪರ್ವ 345 ಅಧ್ಯಾಯ)
ಪ್ರಾಪ್ತೇ ಚಾಹ್ನಿಕಕಾಲೇ ತು ಮಧ್ಯದೇಶಗತೇ ರವೌ |
ದಂಷ್ಟ್ರಾವಿಲಗ್ನಾತ್ ತ್ರೀನ್ ಪಿಂಡಾತ್ ವಿಧಾಯ ಸಹಸಾ ಪ್ರಭು ||
ಸ್ನಾಪಯಾಮಾಸ ವೈಪೃಥ್ವ್ಯಾಂ ಕುಶಾನಾಸ್ತೀರ್ಯ ನಾರದ |
ಸ ತೇಷು ಆತ್ಮಾನಮುದ್ದಿಶ್ಯ ಪಿತ್ರ್ಯಂ ಚಕ್ರೇ ಯಥಾವಿಧಿ ||
(ಶ್ರೀಮನ್‍ಮಹಾಭಾರತ ಶಾಂತಿ ಪರ್ವ 345 ಅಧ್ಯಾಯ)
"ಈ ಮೂರು ಪಿಂಡಗಳ ಮೇಲೆ ಅಪಸವ್ಯದಿಂದ ತನ್ನ ದೇಹದಿಂದಲೇ ಹುಟ್ಟಿದ ಎಳ್ಳುಗಳಿಂದ ಪ್ರೋಕ್ಷಿಸಿ ಪಿಂಡ ಪೂಜೆಯ" ವಿಷಯದಲ್ಲಿ ಒಂದು ನಿಯಮವನ್ನು ಸ್ಥಾಪಿಸುವ ಸಲುವಾಗಿ ವರಾಹ ರೂಪಿಯು ಹೀಗೆ ಹೇಳಿದನು.
ನಾನೇ ಎಲ್ಲ ಲೋಕಗಳ ಸೃಷ್ಟಿಕರ್ತನಾಗಿದ್ದೇನೆ.ನಾನು ಯಾವಾಗ *ಪಿತೃದೇವತೆ*ಗಳನ್ನು ಸೃಷ್ಟಿಸಲು ಆರಂಭಿಸಿದೆನೋ ಮತ್ತು ಇತರ ಪಿತೃಕಾರ್ಯ ವಿಧಿಗಳನ್ನು ಯೋಚಿಸುತ್ತಿದ್ದೆನೋ ಆ ಕ್ಷಣದಲ್ಲಿ *ನನ್ನ ಕೋರೆಹಲ್ಲುಗಳಿಂದ ಮೂರು ಪಿಂಡಗಳು ದಕ್ಷಿಣ ದಿಕ್ಕಿಗೆ ಭೂಮಿಯ ಮೇಲೆ ಬಿದ್ದವು*.ಆದ್ದರಿಂದ *ಈ ಮೂರು ಪಿಂಡಗಳು ಪಿತೃಸ್ವರೂಪಗಳೇ* ಆಗಿದೆ.
ಅಹಂ ಹಿ ಪಿತರಃ ಸ್ರಷ್ಟುಮುದ್ಯತೋ ಲೋಕಕೃತ್ ಸ್ವಯಮ್ |
ಯಸ್ಯ ಚಿಂತಯತಃ ಸದ್ಯಃ ಪಿತೃಕಾರ್ಯ ವಿಧೀನ್ ಪರಾನ್ ||
ದಂಷ್ಟ್ರಾ ಧರಣೀಂ ಪಿಂಡಾಸ್ತಸ್ಮಾತ್ ಪಿತರ ಏವ ತೇ ||
(ಶ್ರೀಮನ್‍ಮಹಾಭಾರತ ಶಾಂತಿ ಪರ್ವ 345 ಅಧ್ಯಾಯ)
ದೇಹರಹಿತರಾದ ಪಿತೃಗಳು ಪಿಂಡಾಕಾರವನ್ನು ಧರಿಸುತ್ತಾರೆ.ನನ್ನಿಂದ ಸೃಷ್ಟರಾದ ಪಿಂಡರೂಪದಲ್ಲಿರುವ ಈ ಮೂವರು ಸನಾತನ ಪಿತೃಗಳಾಗಲಿ.
ತ್ರಯೋ ಮೂರ್ತಿ ವಿಹೀನಾ ವೈ ಪಿಂಡಮೂರ್ತಿಧರಾಸ್ತ್ವಿಮೇ |
ಭವಂತು ಪಿತರೋ ಲೋಕೇ ಮಯಾ ಸೃಷ್ಟಾಃ ಸನಾತನಾಃ ||
(ಶಾಂತಿ ಪರ್ವ)*
ಈ ವಿಶ್ವದಲ್ಲಿ ನನ್ನಿಂದ ಅಧಿಕನಾದವನು ಯಾರೂ ಇಲ್ಲ. ಸಾಕ್ಷಾತ್ ನನ್ನಿಂದ ಪೂಜೆ ಮಾಡಲ್ಪಡುವವನು ಯಾವನಿದ್ದಾನೆ? ಈ ಪ್ರಪಂಚದಲ್ಲಿ ನನಗೆ ತಂದೆ ಯಾರು? ಎಲ್ಲರಿಗೂ ಪಿತಾಮಹನಾಗಿರುತ್ತೇನೆ.ಪಿತಾಮಹನಿಗೂ ನಾನೇ ತಂದೆಯಾಗಿದ್ದೇನೆ.ಈ ಜಗತ್ತಿಗೆ ನಾನೇ ಕಾರಣನಾಗಿದ್ದೇನೆ.
ಕೋ ವಾ ಮಮ ಪಿತಾ ಲೋಕೇ ಅಹಮೇವ ಪಿತಾಮಹ |
ಪಿತಾಮಹ ಪಿತಾ ಚೈವ ಅಹಮೇವಾತ್ರಕಾರಣಮ್ ||
(ಶಾಂತಿ ಪರ್ವ)*
ಹೀಗೆ ಸಂದೇಶ ನೀಡಿದೆ.*ವರಾಹರೂಪೀ ಭಗವಂತ*ನ ಸಂದೇಶಕ್ಕನುಸಾರವಾಗಿ *ಪಿತೃಗಳು ಪಿಂಡದಲ್ಲಿದ್ದು ಕೊಂಡು ಪೂಜೆ*ಯನ್ನು ಸ್ವೀಕರಿಸುವರು.
ಏಷಾ ತಸ್ಯ ಸ್ಥಿತಿರ್ವಿಪ್ರ ಪಿತರಃ ಪಿಂಡ ಸಂಸ್ಥಿತಾಃ |
ಲಭಂತೇ ಸತತಂ ಪೂಜಾಂ ವೃಷಾಕಪಿವಚೋ ಯಥಾ ||
ಪಿತೃ ಪಿತಾಮಹಶ್ಚೈವ ತಥೈವ ಪ್ರಪಿತಾಮಹ |
ಅಹಮೇವಾತ್ರ ವಿಜ್ಞೇಯಸ್ತ್ರಿಷು ಪಿಂಡೇಷು ಸಂಸ್ಥಿತಃ ||
(ಶಾಂತಿ ಪರ್ವ)*
ಶ್ರಾದ್ಧಕರ್ಮದಲ್ಲಿ ವರಾಹರೂಪೀ ಭಗವಂತನು ಪಿಂಡಪ್ರದಾನ ಕ್ರಿಯೆಯ ಮೂಲಕ ಪಿತೃಗಳ ಆರಾಧನೆಯನ್ನು ನಡೆಸಲು ಸಂದೇಶ ನೀಡಿದ ಪ್ರಯುಕ್ತ ಅವನನ್ನು ಕೂಡ ಅವಶ್ಯವಾಗಿ ಶ್ರಾದ್ಧ ದಿನದಂದು ಪೂಜಿಸಬೇಕು.ಇದರಿಂದ ಅವನ ಪ್ರೀತಿ ಉಂಟಾಗುವುದು ನಿಶ್ಚಿತ.
*********


" ಮಹಾಲಯ ಪಕ್ಷ ವಿಶೇಷ "

" ಶ್ರಾದ್ಧದಲ್ಲಿ ಬರುವ ಕೆಲವು ಶಬ್ದಗಳ ಅರ್ಥ ವಿಶೇಷಗಳು "

1. ಸಂಕಲ್ಪ = " ಸಂಕಲ್ಪ: ಕರ್ಮ ಮಾನಸಂ " ಉಕ್ತಿಯಂತೆ ಇಂಥಹ ಕರ್ಮ ಮಾಡುತ್ತೇನೆಂದು ಮನಸ್ಸಿನಿಂದ ನಿಶ್ಚಯಿಸಿ ಉಚ್ಛಾರ ಮಾಡುವುದು!

2. ಕ್ಷಣ = ದೇವ - ಪಿತೃ ಸ್ಥಾನಗಳಲ್ಲಿರುವ ಬ್ರಾಹ್ಮಣರಿಗೆ ಆಮಂತ್ರಣ ಕೊಡುವುದು " ಕ್ಷಣ " ಎನ್ನಿಸುತ್ತದೆ.
3. ಮಧುಮತೀ ಜಪ = ಮಧುವಾತಾ ಋತಾಯತೇ ಮಂತ್ರದ ೩ ಋಕ್ಕುಗಳನ್ನು ಜಪಿಸುವುದು.
4. ಕುಶ = ದರ್ಭೆ
5. ಯುವ = ಅಕ್ಕಿ ಕಾಳು
6. ತಿಲ = ಕರಿ ಎಳ್ಳು
7. ಭೃಂಗರಾಜ = ಗರಗದ ಸೊಪ್ಪು
8. ನವೀತಿ = ಜನಿವಾರವನ್ನು ಮಾಲಾಕಾರವಾಗಿ ಹಾಕಿಕೊಳ್ಳುವುದು
9. ಪ್ರಾಚೀನಾವೀತಿ = ಜನಿವಾರವು ಬಲ ಹೆಗಲ ಮೇಲಿದ್ದು ಎಡಗೈ ಕೆಳಗೆ ಇರುವಂತೆ ಅಪಸವ್ಯ ಹಾಕಿಕೊಳ್ಳುವುದು. ಇಂದು " ಪಿತೃ ಅರ್ಚನೆ " ಮಾಡುವಾಗ ಇರಬೇಕಾದುದು.
10. ಸವ್ಯ = ಜನಿವಾರವು ಎಡ ಹೆಗಲ ಮೇಲಿರುವ ಬಲಗೈ ಕೆಳಗೆ ಇರುವಂತೆ ಹಾಕಿ ಕೊಳ್ಳುವುದು
11. ದರ್ಭ ಪತ್ರ = ತುಂಡು ಮಾಡಿದ ದರ್ಭೆಗಳು
12. ಕೂರ್ಚ = ಏಳು ( ೭ ) ದರ್ಭೆಗಳಿಂದ ಕೂಡಿಸಿ ಮಾಡಿದ ಸಾಧನ. ಇದು ಪಿಂಡಪ್ರಧಾನದಲ್ಲಿ ಅತಿ ಮುಖ್ಯವಾದುದು.
13. ಪಾಣಿ ಹೋಮ = ಬ್ರಾಹ್ಮಣರ ಕೈಯಲ್ಲಿ ಹೋಮ ಮಾಡುವುದು
14. ವಿಕಿರ = ದೇವ - ಪಿತೃ ಬ್ರಾಹ್ಮಣರ ಎಲೆಯ ಮುಂಭಾಗದಲ್ಲಿ ನೀರು ಹಾಕಿ ಅನ್ನವನ್ನು ಉದುರಿಸುವುದು.
15. ಪಾರ್ವಣ = " ತ್ರಯಾಕೃತಂ ಪಾರ್ವಣಂ " ಎಂಬ ಉಕ್ತಿಯಂತೆ ಪಿತೃ, ಪಿತಾಮಹ, ಪ್ರಪಿತಾಮಹ ಈ ಮೂವರಿಗೆ ಕೊಡಲ್ಪಟ್ಟ ಪಿಂಡಗಳಿಗೆ " ಪಾರ್ವಣ " ಎಂದು ಕರೆಯುತ್ತಾರೆ.
16. ಪಾತ್ರೋಚ್ಚಾಲನ = ದೇವ, ಪಿತೃ ಬ್ರಾಹ್ಮಣರ ಭೋಜನಾನಂತರ ಉಚ್ಛಿಷ್ಟದ ಎಲೆಗಳನ್ನು ತೆಗೆದು ಬಿಡುವುದು.
17. ಬ್ರಹ್ಮಾರ್ಪಣ = ಶ್ರಾದ್ಧದಲ್ಲಿ ದೇವ, ಪಿತೃ ಬ್ರಾಹ್ಮಣರ ಉದ್ಧಿಶ್ಯವಾಗಿ ಕೊಡುವ ಅನ್ನವನ್ನು ಕೃಷ್ಣಾರ್ಪಣ ಪೂರ್ವಕ ಅರ್ಪಿಸುವುದು.
18. ಅಷ್ಟಾರ್ಘ್ಯ ಪದಾರ್ಥಗಳು = ಕುಶ ಪುಷ್ಪ ತಿಲ ವ್ರೀಹಿ ಕ್ಷೀರದಧ್ಯಾಜ್ಯಸರ್ಷಪಾ: । - ದರ್ಭೆ, ತುಳಸೀ ( ಹೂ ). ಎಳ್ಳು, ಅಕ್ಕಿ, ಹಾಲು, ಮೊಸರು, ತುಪ್ಪ, ಬಿಳಿ ಸಾಸುವೆ!
19. ಬ್ರಹ್ಮದಂಡ = ದಕ್ಷಿಣೆ - ದರ್ಭೆ - ಎಳ್ಳು ಇವುಗಳನ್ನು ತಟ್ಟೆಯಲ್ಲಿ ಹಾಕಿರುವುದು.
20. ಶಕಲ = ಎರಡು ಉದ್ದವಾದ ದರ್ಭೆಗಳು.

ಇದು, ಪಿತೃ ಪಕ್ಷದಲ್ಲಿ ಪಿತೃಗಳಿಗೆ ತರ್ಪಣ ಕೊಡುವವರಿಗೆ ಮಾತ್ರ.
( ಬಂಧುಗಳು, ಸ್ನೇಹಿತರು, ಇತರ ಆತ್ಮೀಯರಿಗೂ ತರ್ಪಣ ಕೊಡಬಹುದು)

ಸಂಗ್ರಹ -ಶ್ರೀ ಗುರುರಾಜ ರಾವ್
*******



Following is by Nagaraju Haveri

" ಮಹಾಲಯ ಪಕ್ಷ ಸರ್ವರೂ ಮಾಡಲೇಬೇಕಾದ ಅತ್ಯವಶ್ಯ ಕರ್ತವ್ಯ "
ಪಿತೃ ಋಣ ಪರಿಹಾರಕ್ಕಾಗಿ ಮಾತಾ ಪಿತೃಗಳ ವಾರ್ಷಿಕ ಶ್ರಾದ್ಧವೆಂದಷ್ಟೇ ತಿಳಿಯದೆ ತನಗೆ ಸಂಬಂಧ ಪಟ್ಟ ಮೃತ ಜೀವಿಗಳ ಮಹಾಲಯಾದಿಗಳಿಂದ ತೃಪ್ತಿ ಪಡಿಸುವುದೂ ಋಣ ಪರಿಕಾರಕ್ಕೆ ಕಾರಣವಾಗುವುದು. ಆತ್ಮ ಸಂಬಂಧಿಗಳು ಎಂದರೆ....

ಪಿತಾ ಚ ತತ್ಪಿತಾ ಯಶ್ಚ ತತ್ಪಿತಾಮಹ ಏವ ಚ ।
ಮಾತಾ ಪಿತಾಮಹೀ ಚೈವ ತಥೈವ ಪ್ರಪಿತಾಮಹೀ ।।

ಮಾತಾಮಹಃ ಸಪತ್ನಿಕಃ ತತ್ಪಿತಾ ತತ್ಪಿತಾಮಹ: ।
ಪಿತೃರ್ಭ್ರಾತಾ ಕನಿಷ್ಟೋ ವಾ ಆತ್ಮಭ್ರಾತಾ ಕನಿಷ್ಠಕಃ ।।

ಪುತ್ರ: ಪಿತೃಭಗಿನ್ಯಶ್ಚ ಮಾತುಲೋ ಮಾತೃ ಭಾಗಿನೀ ।
ಸ್ವಜಾಮಯಶ್ಚ ಭಾರ್ಯಾ ಚ ಭಗಿನ್ಯಶ್ಚಾಥ ಪುತ್ರಿಕಾ ।।

ಶ್ವಶುರೋ ಭಾವುಕಶ್ಚೈವ ಸ್ನುಷಾ ಶ್ಯಾಲಶ್ಚ ವೈ ಗುರು: ।
ಆಚಾರ್ಯಾ: ಸ್ವಾಮಿಮಿತ್ರೇ ಚ ಏಕತ್ರಿ೦ಶದುದಾಹೃತಾಃ ।।

ಮೇಲ್ಕಂಡವರೆಲ್ಲರೂ ನಮ್ಮ ರಕ್ತ ಸಂಬಂಧಿಗಳು. ಬದುಕಿದ್ದಾಗ ಮಾತ್ರ ಸಂಬಂಧಿಗಳೆಂದು ತಿಳಿಯದೆ ಅವರು ಮೃತ ಪಟ್ಟ ಮೇಲೆಯೂ ಪಿತೃ ದೇವತೆಗಳ ಅಧೀನದಲ್ಲಿರುವ ಅವರನ್ನು ತೃಪ್ತಿ ಪಡಿಸಬೇಕು.

ಪ್ರತಿ ವರ್ಷದ ಭಾದ್ರಪದ ಕೃಷ್ಣ ಪಕ್ಷವು ವಿಶೇಷ ಪರ್ವದಿನವೆನಿಸುತ್ತದೆ.

" ವೃದ್ಧ ಮನು ಸ್ಮೃತಿ "

ಆಷಾಢೀಮವಧೀ೦ ಕೃತ್ವಾ ಪಂಚಮಂ ಪಕ್ಷಮಾಶ್ರಿತಾಃ ।
ಕಾಂಕ್ಷ೦ತಿ ಪಿತರಃ ಕ್ಲಿಷ್ಟಾ: ಅನ್ನಮಪ್ಯನ್ವಹಂ ಜಲಮ್ ।।

ಆಷಾಢ ಹುಣ್ಣಿಯೇಮ ಬಳಿಕ ಐದನೇ ಪಕ್ಷದ ದಿನಗಳಲ್ಲಿ ಪಿತ್ರಾದಿಗಳು ತಮ್ಮ ಬಂಧುಗಳಿಂದ ಅನ್ನೋದಕವನ್ನು ಅಪೇಕ್ಷೆ ಪಡುತ್ತಾರೆ.

" ಬೃಹದ್ಗಾರುಡ "

ಪಕ್ಷ ಮಾಸೇ ಯಮಃ ಪ್ರೇತಾನ್ ಪಿತ್ರೂ೦ಶ್ಚಾಪಿ ಯಮಾಲಯಾತ್ ।
ವಿಸರ್ಜಯತಿ ಮಾನುಷ್ಯೇ ನಿರಯಸ್ಥಾ೦ಶ್ಚ ಕಾಶ್ಯಪ ।।

ಈ ಪಕ್ಷ ಮಾಸದಲ್ಲಿ ಶ್ರೀ ಯಮಧರ್ಮರಾಜರು ಪಿತ್ರಾದಿಗಳನ್ನೆಲ್ಲಾ ನರಕಾದಿ ಯಾವುದೇ ದುರ್ಗತಿ ಸ್ಥಾನದಲ್ಲಿದ್ದರೂ ಮನುಷ್ಯ ಲೋಕಕ್ಕೆ ಕಳುಹಿಸುತ್ತಾರೆಂದು ಬೃಹತ್ ಗರುಡ ಪುರಾಣದಲ್ಲಿ ಉಲ್ಲೇಖವಿದೆ.

" ಹೇಮಾದ್ರಿ ಸ್ಮೃತ +"

ಆಷಾಡ್ಯಾ: ಪಂಚಮೇ ಪಕ್ಷೇ ಕನ್ಯಾ ಸಂಸ್ಥೇ ದಿವಾಕರೇ ।
ಯೋ ವೈ ಶ್ರಾದ್ಧ೦ ನರಃ ಕುರ್ಯಾದೇಕಸ್ಮಿನ್ನಪಿ ವಾಸರೇ ।
ತಸ್ಯ ಸಂವತ್ಸರಂ ಯಾವತ್ಸಂತೃಪ್ತಾ: ಪಿತರೋ ಧ್ರುವಮ್ ।।

" ಮಾರ್ಕಂಡೇಯ ಸ್ಮೃತಿ "

ಕನ್ಯಾಗತೇ ಸವಿತರಿ ದಿನಾನಿ ದಶ ಪಂಚ ಚ ।
ಪಾರ್ವಣೇನೇಹ ವಿಧಿನಾ ಶ್ರಾದ್ಧ೦ ತತ್ರ ವಿಧೀಯತೇ ।।

" ನಾರದೀಯ ಸ್ಮೃತಿ "

ಪಕ್ಷ ಶ್ರಾದ್ಧ೦ ಯದಾ ಕುರ್ಯಾತ್ತರ್ಪಣಂ ತು ದಿನೇ ದಿನೇ ।
ಸಕೃನ್ಮಹಾಲಯೇ ಚೈವ ಪರೇsಹನಿ ತಿಲೋದಕಮ್ ।।

" ನಾಗರಖಂಡ ಸ್ಮೃತಿ "

ಯಾ ತಿಥೀರ್ಯಸ್ಯ ಮಾಸಸ್ಯ ಮೃತಹೇ ತು ಪ್ರವರ್ತಿತಾ ।
ಸಾ ತಿಥಿ: ಪಿತೃಪಕ್ಷೇ ತು ಪೂಜನೀಯಾ ಪ್ರಯತ್ನತಃ ।।

" ಮಹಾಭಾರತ "

ಯಾವಶ್ಚ ಕನ್ಯಾತುಲಯೋ: ಕ್ರಮಾದಾಸ್ತೇ ದಿವಾಕರಃ ।
ಶೂನ್ಯ೦ ಪ್ರೇತಪುರಂ ತಾವದ್ವೃಶ್ಚಿಕ೦ ಯಾವದಾಗತಃ ।।

ವಿಶೇಷ ವಿಚಾರ :

ಕೆಲವೊಬ್ಬರು ತಮ್ಮ ಮನೆಯಲ್ಲಿ ಆಚರಣೆಗೆ ಬಂದಿಲ್ಲವೆಂತಲೂ, ನಮ್ಮ ಮನೆಯಲ್ಲಿ ಒಂದಿಬ್ಬರು ಸಂನ್ಯಾಸಿಗಳಾಗಿದ್ದಾರೆಂತಲೂ ಹೇಳಿಕೊಳ್ಳುತ್ತಾ " ಪಕ್ಷ ಮಾಸ " ದಲ್ಲಿ ಪಿಂಡ ಪ್ರದಾನ ಮಾಡುವುದಿಲ್ಲ. ಇದು ಸರಿಯಲ್ಲ. ಅವರ ಪಿತೃಗಳು ನರಕದಲ್ಲಿ ಬಿದ್ದು ಕಷ್ಟಗಳನ್ನು ಪಡುತ್ತಾರೆ. ಇದರಿಂದ ಅವರ ಪಿತೃಗಳ ಆಗ್ರಹಕ್ಕೆ ಪಾತ್ರರಾಗಿ ಇಹದಲ್ಲಿ ಅನೇಕ ಕಷ್ಟಗಳನ್ನು - ಅವಮಾನಗಳನ್ನು ಅನುಭವಿಸಿ ಮುಂದೆ ನರಕದಲ್ಲಿ ಬಿದ್ದು ಕೊಳೆಯುತ್ತಾರೆ. ಈ ವಿಷಯವು " ಬೋಧಾಯನ - ಹಾರಿತ ಮತ್ತು ಅನೇಕ ಸ್ಮೃತಿ " ಗಳು ಸ್ಪಷ್ಟ ಪಡಿಸಿವೆ.


ಆದ್ದರಿಂದ ಪಕ್ಷ ಮಾಸದಲ್ಲಿ ಪಕ್ಷ ಶ್ರಾದ್ಧ ಮಾಡದವರು, ಶುದ್ಧ ಮನಸ್ಕರಾಗಿ, ಹಿರಿಯರಲ್ಲಿ ಗೌರವದಿಂದಲೂ, ಶ್ರದ್ಧಾ ಭಕ್ತಿಗಳಿಂದಲೂ " ಸರ್ವ ಪಿತೃ ಅಮಾವಾಸ್ಯೆ " ಯಂದು ಆದರೂ ಮಹಾಲಯ ಪಕ್ಷಾಂಗವಾಗಿ ಪಿಂಡ ಪ್ರದಾನ ಮಾಡಿ, ತರ್ಪಣ ಕೊಟ್ಟು ನಿಮ್ಮ ಪಿತೃಗಳ ಅನುಗ್ರಹಕ್ಕೆ ಪಾತ್ರರಾಗಿ ಅಭಿವೃದ್ಧಿ ಹೊಂದುವುದು!!
******


ಪಿತೃ ಪಕ್ಷ, ಪಕ್ಷದ ಮಹತ್ವ, ಪೂಜಾ ವಿಧಾನ 

ಹಿಂದೂ ಧರ್ಮದಲ್ಲಿ ಹಿರಿಯರು ಹಾಗೂ ಪೂಜ್ಯರಿಗೆ ಶ್ರದ್ಧಾಂಜಲಿ ಸಲ್ಲಿಸುವ, ನಮ್ಮ ಪ್ರೀತಿಪಾತ್ರರು ನಮ್ಮನ್ನು ತೊರೆದಾಗ ಅವರ ಆತ್ಮಕ್ಕೆ ಪ್ರಾರ್ಥನೆ ಸಲ್ಲಿಸಲು ವಿಶೇಷ ಸಮಯ ಪಿತೃ ಪಕ್ಷ. ಹದಿನಾರು ದಿನಗಳ ಈ ಪಿತೃ ಪಕ್ಷದ ಅವಧಿಯಲ್ಲಿ ಮೃತರ ಆತ್ಮಕ್ಕೆ ನೆಮ್ಮದಿ ಸಿಗಲಿ, ಅವರ ಪುನರ್ಜನ್ಮ ಮತ್ತು ಶಾಶ್ವತವಾಗಿ ಈ ವಿಶ್ವದಿಂದ ಮುಕ್ತ ಹರಿವಿಗೆ ತರ್ಪಣವನ್ನು ನೀಡುವುದು ಪದ್ಧತಿ. 

ಶ್ರದ್ಧಾ ಪೂಜೆ ವೇಳೆ ಈ ನಿಯಮಗಳನ್ನು ತಪ್ಪದೇ ಪಾಲಿಸಿ ಏನಿದು ಪಿತೃಪಕ್ಷ?

 ಅಕಾಲಿಕವಾಗಿ ಮೃತಪಟ್ಟವರ ಸಾವು ನಮಗೆ ನೋವು ಮತ್ತು ಸಂಕಟಗಳನ್ನು ನೀಡುತ್ತದೆ ಹಾಗೂ ಅವರ ದೇಹವು ಸಾಯುತ್ತದೆ ಆದರೆ ಆತ್ಮಗಳು ಸಾಯುವುದಿಲ್ಲ ಎಂದು ಹೇಳಲಾಗುತ್ತದೆ. ಈ ಬ್ರಹ್ಮಾಂಡದ ಕೊನೆಯವರೆಗೂ ಆತ್ಮಗಳು ಇರುತ್ತವೆ ಮತ್ತು ಯಾರಾದರೂ ಅಕಾಲಿಕ ಮರಣದಿಂದ ಸತ್ತರೆ ಹೊಸ ಜನ್ಮದ ರೂಪದಲ್ಲಿ ಇನ್ನೊಂದು ಜನ್ಮವನ್ನು ತೆಗೆದುಕೊಳ್ಳಲು ಮುಕ್ತರಾಗಬೇಕು ಎಂಬ ನಂಬಿಕೆ ಇದೆ. ಅತೃಪ್ತ ಆತ್ಮವು ತನ್ನ ಕುಟುಂಬ ಸದಸ್ಯರಿಗಿಂತ ಹೆಚ್ಚು ನೋವಿನಿಂದ ಕೂಡಿದೆ ಆದ್ದರಿಂದ ಈ ಅಮರ ಪ್ರಪಂಚದಿಂದ ಅದನ್ನು ಪುನರುಜ್ಜೀವನಗೊಳಿಸುವ ಜವಾಬ್ದಾರಿ ಅವರ ಕುಟುಂಬ ಸದಸ್ಯರ ಮೇಲಿದೆ. ಹಿಂದೂ ಧರ್ಮದಲ್ಲಿ, ನಮ್ಮ ಆಪ್ತರು ನಮ್ಮನ್ನು ತೊರೆದಾಗ ಅವರ ಆತ್ಮಕ್ಕೆ ಪ್ರಾರ್ಥನೆ ಸಲ್ಲಿಸಲು 13 ದಿನಗಳಲ್ಲಿ ಪೂಜೆ ಸಲ್ಲಿಸುವ ಪದ್ಧತಿ ಇದೆ. ಆದರೆ ಒಬ್ಬ ವ್ಯಕ್ತಿಯು ಅಕಾಲಿಕ ಮರಣವನ್ನು ಅನುಭವಿಸಿದಾಗ, 13 ದಿನಗಳ ಪ್ರಕ್ರಿಯೆಗೆ ಸಲಹೆ ನೀಡಲಾಗುವುದಿಲ್ಲ. ಜನರು ಚಂದ್ರಗ್ರಹಣದಲ್ಲಿ ಅಂದರೆ ಭಾದ್ರಪದ ತಿಂಗಳಲ್ಲಿ ಅಂದರೆ ಕೃಷ್ಣ ಪಕ್ಷ ತಿಂಗಳ ದ್ವಿತೀಯಾರ್ಧದಲ್ಲಿ ಪಿತೃ ಪಕ್ಷ ಪೂಜೆಯನ್ನು ಮಾಡುತ್ತಾರೆ. 15 ಚಂದ್ರ ದಿನಗಳನ್ನು ಪ್ರಥಮ, ದ್ವಿತೀಯ, ತೃತೀಯ, ಚತುರ್ಥಿ, ಪಂಚಮಿ, ಷಷ್ಠಿ, ಸಪ್ತಮಿ, ಅಷ್ಟಮಿ, ನವಮಿ, ದಶಮಿ, ಏಕಾದಶಿ, ದ್ವಾದಶಿ, ತ್ರಯೋದಶಿ, ಚತುರ್ದಶಿ, ಅಮವಾಸ್ಯೆ ಎಂದು ಕರೆಯಲಾಗುತ್ತದೆ. ಪಿತೃ ಪಕ್ಷ ಪೂಜೆಯ ಮಹತ್ವ ಗರುಡ ಪುರಾಣದ ಪ್ರಕಾರ, ಒಬ್ಬ ವ್ಯಕ್ತಿಯ ಸಾವಿನ ಮೊದಲ ವರ್ಷದಲ್ಲಿ ಶ್ರಾದ್ಧ ಆಚರಣೆಗಳನ್ನು ಮಾಡಲು ಸೂಚಿಸಲಾಗಿದೆ ಏಕೆಂದರೆ ಸಾವಿನ ನಂತರ ಒಂದು ವರ್ಷದ ನಂತರ ಅವರಿಗೆ ತಿನ್ನಲು ಆಹಾರ ಪಡೆಯುತ್ತಾರೆ. ಮೊದಲ ವರ್ಷದಲ್ಲಿ ಈ ಪಿತೃಪಕ್ಷದಲ್ಲಿ ನಾವು 13 ದಿನಗಳ ಕಾಲ ಆಹಾರ ನೀಡಬೇಕು ಎಂದು ನಂಬಲಾಗಿದೆ. ಒಬ್ಬ ವ್ಯಕ್ತಿಯು 13 ದಿನಗಳ ನಿರ್ಗಮನ ಮಾಡಿದಾಗ ಅದರ ಕುಟುಂಬದ ಸದಸ್ಯರು ಅಂತ್ಯ ಸಂಸ್ಕಾರವನ್ನು ಮಾಡುತ್ತಾರೆ ಮತ್ತು ಅವರಿಗೆ ಆಹಾರವನ್ನು ನೀಡಲಾಗುತ್ತದೆ. 13 ದಿನಗಳ ನಂತರ ಆತ್ಮವು ತನ್ನ ಪ್ರಯಾಣವನ್ನು ಆರಂಭಿಸುತ್ತದೆ ಮತ್ತು ಹನ್ನೊಂದು ತಿಂಗಳಲ್ಲಿ ಯಮಲೋಕವನ್ನು ತಲುಪುತ್ತದೆ ಮತ್ತು ಕೊನೆಯ ಒಂದು ತಿಂಗಳಲ್ಲಿ ಅವರು ಯಮನ ಆಸ್ಥಾನವನ್ನು ತಲುಪುತ್ತಾರೆ. ಆಗ ಮಾತ್ರ ಅವನಿಗೆ ತಿನ್ನಲು ಆಹಾರ ಸಿಗುತ್ತದೆ. ಈ ಕಾರಣದಿಂದ ಶ್ರಾದ್ಧ ಮಾಡುವುದು ಬಹಳ ಮುಖ್ಯ ಎನ್ನಲಾಗುತ್ತದೆ. ಮಹಾಲಯ ಅಮಾವಾಸ್ಯೆ ಎಂದು ಕರೆಯಲ್ಪಡುವ ಅಮವಾಸ್ಯೆಯು ಅಗಲಿದ ಆತ್ಮಗಳಿಗೆ ಸಮರ್ಪಿತವಾಗಿದೆ. ನೀವು ಈ ದೇಹವನ್ನು ತೊರೆದಾಗ ಪುರೂರವ, ವಿಶ್ವದೇವ ಎಂಬ ದೇವತೆಗಳಿಂದ ಇನ್ನೊಂದು ಜಗತ್ತಿಗೆ ಮಾರ್ಗದರ್ಶನ ಪಡೆಯುತ್ತೀರಿ. ಅವರು ಬಂದು ನಿಮ್ಮನ್ನು ಒಂದು ಹಂತದಿಂದ ಇನ್ನೊಂದು ಹಂತಕ್ಕೆ ಮಾರ್ಗದರ್ಶನ ಮಾಡುತ್ತಾರೆ. ಮಹಾಲಯ ಅಮಾವಾಸ್ಯೆಯು ನೀವು ಅಗಲಿದ ಎಲ್ಲ ಆತ್ಮಗಳನ್ನು ನೆನಪಿಸಿಕೊಂಡು ಅವರಿಗೆ ಧನ್ಯವಾದಗಳನ್ನು ಅರ್ಪಿಸುವ ಮತ್ತು ಅವರಿಗೆ ಶಾಂತಿಯನ್ನು ಬಯಸುವ ದಿನವಾಗಿದೆ. ಪುರಾತನ ಸಂಪ್ರದಾಯದ ಪ್ರಕಾರ ಕುಟುಂಬದ ಸದಸ್ಯರು ಎಳ್ಳು ಮತ್ತು ಅಕ್ಕಿಯನ್ನು ತೆಗೆದುಕೊಂಡು ತಮ್ಮ ಪೂರ್ವಜರನ್ನು ಪ್ರಾರ್ಥಿಸುತ್ತಾ 'ನೀವು ತೃಪ್ತರಾಗಿರಬಹುದು, ನೀವು ತೃಪ್ತರಾಗಿರಬಹುದು, ನೀವು ತೃಪ್ತರಾಗಬಹುದು'. ಇದನ್ನು ಮೂರು ಬಾರಿ ಹೇಳಿ ಮತ್ತು ನಂತರ ಅವರು ಸ್ವಲ್ಪ ಎಳ್ಳಿನ ಕಾಳುಗಳನ್ನು ನೀರಿನಲ್ಲಿ ಬಿಡುತ್ತಾರೆ. ಈ ಆಚರಣೆಯ ಮಹತ್ವವೆಂದರೆ ಅಗಲಿದವರಿಗೆ ಹೇಳುವುದು - ನಿಮ್ಮ ಮನಸ್ಸಿನಲ್ಲಿ ಇನ್ನೂ ಕೆಲವು ಆಸೆಗಳಿದ್ದರೆ, ಅವು ಎಳ್ಳಿನಂತೆ ಎಂದು ತಿಳಿಯಿರಿ. ಅವು ಗಮನಾರ್ಹವಲ್ಲ, ಅವುಗಳನ್ನು ಬಿಡಿ. ನಾವು ನಿಮಗಾಗಿ ಅವುಗಳನ್ನು ನೋಡಿಕೊಳ್ಳುತ್ತೇವೆ. ನೀವು ಮುಕ್ತ, ಸಂತೋಷ ಮತ್ತು ತೃಪ್ತರಾಗಿರುತ್ತೀರಿ ಎಂದು ಹೇಳುವ ಪದ್ಧತಿ ಇದೆ. ತರ್ಪಣ ಎಂದರೆ ಅಗಲಿದವರಿಗೆ ತೃಪ್ತಿಯನ್ನು ತರುವುದು. ಅವರಿಗೆ ತೃಪ್ತಿ ಮತ್ತು ಮುಂದೆ ಸಾಗುವಂತೆ ಹೇಳಲು ಇದನ್ನು ಮಾಡಲಾಗುತ್ತದೆ. ನೀರು ಪ್ರೀತಿಯ ಸಂಕೇತ. ಯಾರಿಗಾದರೂ ನೀರು ಕೊಡುವುದು ಎಂದರೆ ಪ್ರೀತಿಯನ್ನು ನೀಡುವುದು. ಮಹಾಲಯ ಅಮಾವಾಸ್ಯೆಯ ಮಹತ್ವ ಮಹಾಲಯ ಅಮವಾಸ್ಯೆಯು ಪಿತೃ ಪಕ್ಷದ ಅಂತ್ಯ ಎನ್ನಲಾಗುತ್ತದೆ. ಇದು ಸರ್ವಪತ್ರಿ ಅಮಾವಾಸ್ಯೆ ಅಥವಾ ಸರ್ವಪಿತೃ ಮೋಕ್ಷ ಅಮವಾಸ್ಯೆ ಎಂದೂ ಕರೆಯಲ್ಪಡುವ ಪ್ರಮುಖ ದಿನವಾಗಿದೆ. ಈ ದಿನದಂದು ದುರ್ಗಾ ದೇವಿಯು ಭೂಮಿಗೆ ಇಳಿಯುತ್ತಾಳೆ ಎಂದು ನಂಬಲಾಗಿದೆ. ಪೂರ್ವಜರ ಸಾವಿನ ಸಮಯ, ದಿನಾಂಕ ಮತ್ತು ಸ್ವಭಾವವನ್ನು ಲೆಕ್ಕಿಸದೆ ಶ್ರಾದ್ಧವನ್ನು ಮಾಡುವ ಮೂಲಕ ಒಬ್ಬನು ತನ್ನ ಪೂರ್ವಜರಿಗೆ ಕರ್ತವ್ಯವನ್ನು ಪೂರೈಸುವ ದಿನ ಇದು. ಇದು ಒಂದು ರೀತಿಯ ಪರ್ವಾಣ ಶ್ರಾದ್ಧ. ಈ ದಿನ ಶ್ರಾದ್ಧ, ತರ್ಪಣವನ್ನು ಮಾಡಲಾಗುತ್ತದೆ. ಈ ದಿನವು ಎಲ್ಲಾ ಪೂರ್ವಜರು ಅಥವಾ ಕುಟುಂಬದ ಸದಸ್ಯರಿಗೆ ಅಪರಾ ಕರ್ಮವನ್ನು ಮಾಡಲು ಸೂಕ್ತವಾಗಿದೆ. ಒಂದು ವೇಳೆ ಪಿತೃಪಕ್ಷದ ಇತರ ಎಲ್ಲ ದಿನಗಳಲ್ಲಿ ಆಚರಣೆಗಳನ್ನು ಮಾಡಲು ಸಾಧ್ಯವಾಗದಿದ್ದರೆ, ಮಹಾಲಯ ಅಮಾವಾಸ್ಯೆಯಂದು ಇದನ್ನು ಮಾಡಬಹುದು. ಕೆಲವರು ಕುಟುಂಬ ಸದಸ್ಯರು ಸಮಾಧಿ ಸ್ಥಳಕ್ಕೆ ಭೇಟಿ ನೀಡಿ ಅದನ್ನು ಸ್ವಚ್ಛಗೊಳಿಸುವುದು ಮತ್ತು ಪಿತೃ ಪಕ್ಷ ಪೂಜೆ ಮಾಡುವುದು ಮತ್ತು ಆ ದಿನ ಮೃತರನ್ನು ಸಮಾಧಾನಪಡಿಸಲು ವಿವಿಧ ಆಹಾರ ಪದಾರ್ಥಗಳನ್ನು ನೀಡುವುದು ಸಾಮಾನ್ಯವಾಗಿದೆ.
***

ಶ್ರಾದ್ಧ ಕರ್ಮದ ಉದ್ದೇಶವೇನು?
ಮರಣಾನಂತರ ಜೀವಿಗೆ ತನ್ನ ಕರ್ಮಾನುಸಾರ ಸ್ವರ್ಗವೋ, ನರಕವೋ ಪ್ರಾಪ್ತಿ. ಸ್ವರ್ಗವಾದರೆ ಮೋಕ್ಷ, ಅಮರತ್ವ. ಪುನರ್ಜನ್ಮವಿಲ್ಲವೆಂದು ನಂಬಿಕೆ. ಅವರಿಗೆ ಶ್ರಾದ್ಧಕರ್ಮಗಳಲ್ಲಿನ ತರ್ಪಣಗಳು ಏಕೆ ಬೇಕು? ನರಕವಾದರೆ ಪಾಪದ ಫಲ ಅನುಭವಿಸಿದ ನಂತರ ಪುನರ್ಜನ್ಮ. ಯಾವುದೋ ರೂಪದಲ್ಲಿ ಬೇರೆಯಲ್ಲಿಯೋ ಜನ್ಮ ಪಡೆದ ಪಿತೃಗಳಿಗೆ ನಾವು ಪಿಂಡಪ್ರದಾನ ಮಾಡುವುದರ ಅವಶ್ಯಕತೆಯೇನು? ದೇಹತ್ಯಾಗದ ನಂತರ ಆತ್ಮ ಪರಮಾತ್ಮನಲ್ಲಿ ಐಕ್ಯವಾದ ಮೇಲೆ ಜೀವಿಯ ಆತ್ಮಕ್ಕೆ ಪ್ರತ್ಯೇಕ ಅಸ್ತಿತ್ವವೆಲ್ಲಿದೆ? ಹೀಗಾಗಿ ಇಲ್ಲಿಯೂ ಶ್ರಾದ್ಧದ ಪ್ರಮೇಯವೇನು? 
ಸಾಮಾನ್ಯವಾಗಿ ವೈದಿಕ ಸಮಾಜದಲ್ಲಿ ಆಸಕ್ತರಿಗೆ ಪಿತೃಶ್ರಾದ್ಧಾದಿ ಕಾರ್ಯ ಒಂದು ಕರ್ತವ್ಯವೆಂತಲೂ, ಅದನ್ನು ಶ್ರದ್ಧೆಯಿಂದ ಮಾಡಬೇಕೆಂತಲೂ ನಂಬಿಕೆಯಿದೆ. ಇದು ಸಾರ್ಥಕ ನಂಬಿಕೆ. ತಲತಲಾಂತರದಿಂದ ಆಚರಿಸಿಕೊಂಡು ಬರುತ್ತಿದ್ದಾರೆ ಆಸ್ತಿಕ ಜನರು. ಆದರೆ ಆಚರಣೆಗಳನ್ನು ನೋಡಿ ಹೀಗೆಳೆಯುವ, ನಿಂದೆ ಮಾಡುವ ವರ್ಗವೂ ಇದೆ. ಇದೇಕೆ ಮಾಡಬೇಕು? ಇದರಿಂದೇನು ಉಪಯೋಗ? ಎಂದು ಹಾಸ್ಯ ಮಾಡುವ ಜನರಿಗೂ ಕೊರತೆ ಇಲ್ಲ. ಅವರಿಗೆ ಉತ್ತರಿಸುವ ಉದ್ದೇಶವೂ ನನ್ನದಲ್ಲ. ಆಸ್ತಿಕರಾದ ಜನರಿಗೆ ಅವರ ಪಿತೃಭಕ್ತಿಯ ಜೊತೆಯಲ್ಲಿ ಶ್ರದ್ಧೆ ಹೆಚ್ಚಾಗಲಿ ಎನ್ನುವ ಉದ್ದೇಶದಿಂದ ಶ್ರಾದ್ಧ ಸಾಫಲ್ಯತೆಯ ಕುರಿತು ಈ ಎರಡು ಮಾತನ್ನು ಬರೆಯುತ್ತಿದ್ದೇನೆ. ಇದನ್ನು ಓದಿದ ಪಿತೃಭಕ್ತಿ ಪರಾಯಣರಾದ ಶ್ರದ್ಧಾಳುಗಳು ಇನ್ನೂ ಹೆಚ್ಚಿನ ಶ್ರದ್ಧೆಯಿಂದ ತಮ್ಮ ತಂದೆತಾಯಿಯರ ಮೃತತಿಥ ಅಥವಾ ಪುಣ್ಯತಿಥಿ ಆಚರಿಸೋಣ. 

ಪಿತೃಶ್ರಾದ್ಧದ ಮುಖ್ಯ ಉದ್ದೇಶವೇನು?
ಇಲ್ಲಿ ಪಿತೃವೆಂದರೆ ಯಾರು? ಯಾವುದು? ಅದೇಕೆ ಗೌರವಾನ್ವಿತ ಹಾಗೂ ಪೂಜನೀಯವಾಯ್ತು? ಅದು ವ್ಯಕ್ತಿಯೇ? ದೇಹವೇ? ಶಕ್ತಿಯೇ? ತತ್ವವೇ? ಚಿಂತಿಸೋಣ.
ಸಾಮಾನ್ಯವಾಗಿ ಸೂತ್ರಕಾರರ ಅಭಿಮತದಂತೆ ಪಿತೃ ಎಂಬುದು ಒಂದು ಸ್ಥಾನ, ಹುದ್ದೆ. ಅದಕ್ಕೆ ಅದರದ್ದೇ ಆದ ಜವಾಬ್ದಾರಿ, ಬದ್ಧತೆ ಇರುತ್ತದೆ. ಅದನ್ನು ಹುಟ್ಟಿದ ಪ್ರತಿಯೊಂದು ಜೀವಿಯೂ ಹೊಂದಲೇ ಬೇಕಾದ ಹುದ್ದೆ. ಅದನ್ನು ಪಡೆಯಲು, ಜವಾಬ್ದಾರಿಯುತವಾಗಿ ನಿರ್ವಹಿಸಲು ಅಸಮಾನ್ಯ ಜ್ಞಾನವು ಬೇಕು. ಆ ಜ್ಞಾನವು ಅನುಭವದಿಂದ ಮಾತ್ರ ಪ್ರಾಪ್ತವಾಗುವಂತಹದ್ದು. ಕಲಿಕೆಯಿಂದ ಬರುವಂತಹದ್ದಲ್ಲ. ಅಂತಹಾ ಹುದ್ದೆಯನ್ನು ಅಲಂಕರಿಸಿದ್ದಾರೆ ನಮ್ಮ ಭೌತಿಕ ವ್ಯಾವಹಾರಿಕ ಪ್ರಪಂಚದ ಪಿತೃಗಳು. ಅಂದರೆ ಭಾವನಾತ್ಮಕ ತಂದೆಯೆಂದು ಅರ್ಥ. ವ್ಯಕ್ತಿಗತವಾಗಿ ಆ ಸ್ಥಾನವನ್ನು ಸಮರ್ಥವಾಗಿ ಅವರು ನಿರ್ವಹಿಸಿದ್ದಾರೆ ಎಂದು ಹೇಳುವ ಅರ್ಹತಾ ಪತ್ರವೇ ನಾವು. ಹಾಗಿದ್ದಾಗ ಅವರ ನಿರ್ವಹಣೆಯಲ್ಲಿ ಅನರ್ಹರು ಎಂದರೆ ನಾವು ಅನರ್ಹರು ಎಂದೇ ಅರ್ಥ.

ಅಂತಹಾ ಪಿತೃಸ್ಥಾನ ಪಟ್ಟವು ಪ್ರತಿಯೊಬ್ಬ ಜೀವಿಯೂ ಬಯಸಿ ಪಡೆಯುವ ಪಟ್ಟ. ಅದರ ಮಹತ್ವವೆಷ್ಟಿರಬಹುದು ಚಿಂತಿಸಿ? ಅದನ್ನು ಪಡೆದು ನಿರ್ವಹಿಸಿ, ಯಶಸ್ವಿಯಾಗಿ ನಮ್ಮನ್ನು ಈ ಲೋಕಕ್ಕೆ, ಸಮಾಜಕ್ಕೆ ಕೊಟ್ಟು ತಾವು ತೇರ್ಗಡೆಯಾಗಿ ವಿರಮಿಸಿದ ತಂದೆತಾಯಿಯ ಸ್ಥಾನ ಪೂಜಾರ್ಹವಲ್ಲವೇ ಚಿಂತಿಸಿ? ಅಂತಹಾ ಸ್ಥಾನವನ್ನು ಗೌರವಿಸುವುದು ಧರ್ಮವಲ್ಲವೇ? ಇದು ಶ್ರಾದ್ಧದ ಹಿನ್ನಲೆಯಲ್ಲಿರುವ ಮಾನವೀಯ ಧರ್ಮ.

ಇನ್ನು ಮೃತಾನಂತರ ಪುನರ್ಜನ್ಮ. ಅವರಿಗೇಕೆ ತರ್ಪಣ? ಪಿಂಡಪ್ರಧಾನ ಎಂಬ ಪ್ರಶ್ನೆಗಳಿವೆ. ಜನರೇ, ಈ ದೃಷ್ಟಿಯಿಂದ ಚಿಂತಿಸಬೇಕು – ತಂದೆಯು ಮೃತನಾಗುವುದಿಲ್ಲ, ದೇಹ ಮಾತ್ರ ನಾಶವಾಗಿದೆ. ತಂದೆಯು ಪುನರ್ಜನ್ಮ ಪಡೆದಿಲ್ಲ, ಆತ್ಮವು ಮಾತ್ರ ಪಡೆದಿದೆ. ತಂದೆ ಎಂಬ ಸ್ಥಾನ ಅಸ್ತಿತ್ವ ಕಳೆದುಕೊಳ್ಳುವುದಿಲ್ಲ, ತಂದೆಯಾಗಿಯೇ ಉಳಿದಿರುತ್ತಾರೆ. ಆತ್ಮವು ಮಾತ್ರ ಪುನರ್ಜನ್ಮ ಪಡೆದು ಹುಟ್ಟಿಬರಬಹುದು. ಆದರೆ ಅದು ಪ್ರಾಣಿಯಾಗಿ ಹುಟ್ಟಿತು ಎಂದು ಯಾರೂ ಪ್ರಸಕ್ತಕಾಲದ ವಿಳಾಸ ಹೇಳುವಾಗ ತನ್ನ ತಂದೆಯು ಪ್ರಾಣಿಯಾಗಿ ಪುನರ್ಜನ್ಮ ಪಡೆದಿದ್ದಾರೆ ಎಂದು ಗೊತ್ತಿದ್ದರೂ ತಾನು ಪ್ರಾಣಿಯ ಮಗನೆಂದು ತನ್ನ ಹೆಸರಿನ ಮುಂದೆ ಸೇರಿಸಿಕೊಳ್ಳುವುದಿಲ್ಲ. ಪುನರ್ಜನ್ಮ ಸಿಕ್ಕಿದೆಯೋ, ಬಿಟ್ಟಿದೆಯೇ ಅದು ಬೇರೆಯ ವಿಚಾರ. ಈ ಶ್ರಾದ್ಧವನ್ನು ಮಾಡಬೇಕಾದ ಮಗನು ಬದುಕಿರುವವರೆಗೆ, ತಂದೆ ಎಂಬ ಭಾವನಾತ್ಮಕ ಅಸ್ತಿತ್ವವು ಪುನರ್ಜನ್ಮ ಪಡೆಯುವುದಿಲ್ಲ. ಆ ಪಟ್ಟ ಈ ಮಗನಿಗೆ ಸಿಗದೇ ಇರಬಹುದು. ಅಲ್ಲಿಂದ ಮುಂದೆ ಹುಟ್ಟಿದ ಆ ಮಗನಿಂದ ಶ್ರಾದ್ಧವಿಲ್ಲ, ಬೇಕಿಲ್ಲ. ಆದರೆ ತಂದೆಯ ಸ್ಥಾನ ನಿರ್ವಹಿಸಿದ ಈ ಬ್ರಹ್ಮಚಾರೀ ಮಗನನ್ನಾದರೂ ಈ ಭೂಮಿಗೆ ಕೊಟ್ಟ ತಂದೆಯು ತನ್ನ ಸ್ಥಾನ ನಿರ್ವಹಣೆ ಮಾಡಿದ್ದಾರೆ. ಅಲ್ಲಿಯವರೆಗೆ ಶ್ರಾದ್ಧ ಸಾಧುವೇ, ಸತ್ಯವೇ, ನ್ಯಾಯವೇ ಆಗಿರುತ್ತದೆ. ಅದು ಈ ಮಗನ ಅಸ್ತಿತ್ವವನ್ನು ಉಳಿಸಿಕೊಡುತ್ತದೆ ನೆನಪಿರಲಿ.

ಇಲ್ಲಿಯವರೆಗೆ ಪಿತೃಸ್ಥಾನ ಮತ್ತು ಮಗನ ಕರ್ತವ್ಯ ನಿರ್ವಹಣೆ. ಪ್ರತೀ ಜೀವಿಯೂ ಒಂದೊ ತಂದೆಯಾಗಿ ಅಥವಾ ತಾಯಿಯಾಗಿ ಸಾಫಲ್ಯತೆ ಕಾಣುವ ನಮ್ಮ ಆಧ್ಯಾತ್ಮಿಕ, ದೈವೀಕ ನೆಲೆಗಟ್ಟಿನ ಸಮಾಜ ಜೀವನದ ಪರಮೋನ್ನತ ಪದವಿ ತಂದೆ-ಯಾ- ತಾಯಿ. ಈ ಪದವಿಗಾಗಿ ಪ್ರತೀಜೀವಿಯೂ ಹಾರೈಸುತ್ತದೆ. ಅಂತಹಾ ಪದವಿ ಆಕಾಂಕ್ಷೆಯಾದ ಪ್ರತೀಜೀವಿಯೂ ಆ ಸ್ಥಾನವನ್ನು ಶ್ರದ್ಧೆಯಿಂದ ಗೌರವಿಸಿದರೆ ನಿಸ್ತಂತುವಾಗಿ ವಂಶ ಬೆಳೆಯುತ್ತದೆ. ಇಲ್ಲವಾದರೆ ಮುಂದೆ ಸಂತಾನ ಲಭ್ಯವಿಲ್ಲದೆ ವಂಶ ನಿಂತು ಹೋಗಬಹುದು. ಆದ್ದರಿಂದ ಶ್ರಾದ್ಧ, ತರ್ಪಣ, ಪ್ರತಿಯೊಬ್ಬರ ಮುಖ್ಯ ಕರ್ತವ್ಯ. ಅದು ಆ ಸ್ಥಾನವನ್ನು ಗೌರವಿಸಿದಂತೆ. 
ಕಚ್ಚಾಡುವ ಮನೆ, ಕಾದಾಡುವ ಮಕ್ಕಳು, ಅಶಾಂತಿ-ಅತೃಪ್ತಿಯ ಗೃಹವಾಸ, ಇವೆಲ್ಲವುಗಳಿಗೆ ಕಾರಣ "ಪಿತೃಶಾಪ" ಎನ್ನುತ್ತದೆ ಜ್ಯೋತಿಃಶಾಸ್ತ್ರ. ಪಿತೃಕಾರ್ಯಗಳು ಸರಿಯಾಗಿ ನಡೆಯದಿದ್ದರೆ ಮೇಲ್ಕಂಡ ಸ್ಥಿತಿ ಏರ್ಪಡುತ್ತದೆ ಎಂದರ್ಥ. 
ಸಂವತ್ಸರ ಪೂರ್ತಿ ಪಿತೃದೇವತೆಗಳು ಸಂತುಷ್ಟರಾಗಿರಬೇಕಾದರೆ ಭಾದ್ರಪದಮಾಸದ ಕೃಷ್ಣಪಕ್ಷದಲ್ಲಿ ಪಿತೃಗಳನ್ನು ಎಲ್ಲರೂ ನೆನೆಯಬೇಕು .

ಪಿತೃಪ್ರಾರ್ಥನೆ : 
ಅಮೂರ್ತಾನಾಂ ಸುಮೂರ್ತಾನಾಂ ಪಿತೃಣಾಂ ದೀಪ್ತತೇಜಸಾಮ್ | 
ನಮಸ್ಯಾಮಿ ಸದಾ ಭಕ್ತ್ಯಾ ಧ್ಯಾಯಿನಾಂ ಯೋಗಚಕ್ಷುಸಾಮ್ || 
ದೇವತಾಭ್ಯಃ ಪಿತೃಭ್ಯಶ್ಚ ಮಹಾಯೋಗಿಭ್ಯ ಏವ ಚ | 
ನಮಃ ಸ್ವಧಾಯೈ ಸ್ವಾಹಾಯೈ ನಿತ್ಯಮೇವ ನಮೋ ನಮಃ

ಪ್ರಶಾಂತಭಟ್ ಕೋಟೇಶ್ವರ🙏
****

🌷ಪಿತೃಗಣಗಳು-ಪರಿಚಯ 🌷
         
       || ಸಂಚಿಕೆ-1 ||

ಪೀಠಿಕೆ-

ಪಿತೃಗಳು ಎಂಬ ಹೆಸರಿನ ಒಂದು ಗಣವಿರುತ್ತದೆ .ಅವರು ಬ್ರಹ್ಮದೇವರ ಮಕ್ಕಳು .ಅವರನ್ನು ದೇವತೆಗಳು ,ಮನುಷ್ಯರು ಎಲ್ಲರೂ ಪೂಜಿಸುತ್ತಾರೆ ಇವರನ್ನು ಕುರಿತು ಶ್ರಾದ್ಧ ಮಾಡಿದರೆ ಮೃತರಾದ ಜೀವರು ಎಲ್ಲಿದ್ದರೂ ಅವರಿಗೆ ತೃಪ್ತಿಯುಂಟಾಗುವಂತೆ ಮಾಡುತ್ತಾರೆ ಅದು ಹೇಗೆ ? ಎಂದರೆ ಮೃತರಾದವರ ನಾಮಗೋತ್ರಗಳನ್ನು ಹೇಳಿ  ಪಿಂಡಪ್ರಧಾನ ಮಾಡಿದರೆ ಪಿತೃದೇವತೆಗಳು ,ಆ ಮೃತರಾದ ಜೀವರು ಯಾವ ಯೋನಿಯಲ್ಲಿದ್ದರೂ ಅವರಿಗೆ ಯೋಗ್ಯವಾದ  ಆಹಾರವನ್ನು ತಲುಪಿಸಿ ತೃಪ್ತಿಪಡಿಸುತ್ತಾರೆ . ಹೇಗೆಂದರೆ ಪಿತೃಗಳು ದೇವಲೋಕದಲ್ಲಿದ್ದರೆ ಅವರಿಗೆ ಅಮೃತರೂಪದಲ್ಲಿ ಮುಟ್ಟಿಸುತ್ತಾರೆ .ಪಿತೃಗಳು ಮನುಷ್ಯರಾಗಿ ಹುಟ್ಟಿದರೆ ಒಳ್ಳೆಯ ಅನ್ನದ ರೂಪದಲ್ಲಿ ,,ಪಶುರೂಪದಲಿದ್ದರೆ ಹುಲ್ಲಾಗಿ ,ಪಕ್ಷಿರೂಪದಲ್ಲಿದ್ದರೆ ಕಾಳಿನರೂಪದಲ್ಲಿ ಸರ್ಪವಾಗಿದ್ದರೆ ವಾಯುರೂಪದಲ್ಲಿ ,ಅದನ್ನು ಮುಟ್ಟಿಸುತ್ತಾರೆ . ಇದರಿಂದ ಶ್ರಾದ್ಧ ಮಾಡಿದವರಿಗೆ ಆ ಪಿತೃಗಳು ಹರಸುತ್ತಾರೆ  ,ಶ್ರಾದ್ಧ ಕರ್ತೃವಿಗೆ  ಮಕ್ಕಳು ,ಸಂಪತ್ತು ಇತ್ಯಾದಿಗಳು ಲಭ್ಯವಾಗುತ್ತವೆ .
***

ಪಿತೃಗಣಗಳು -ಪರಿಚಯ |🌷
               || ಸಂಚಿಕೆ-2 ||

ಶ್ರೀಹರಿವಂಶದಲ್ಲಿ ಪಿತೃದೇವತೆಗಳ ಕಥೆ ಬಂದಿದೆ
ಪೂರ್ವದಲ್ಲಿ ಬ್ರಹ್ಮದೇವರು ದೇವತೆಗಳನ್ನು ಸೃಷ್ಟಿಮಾಡಿದರು .ದೇವತೆಗಳೆಲ್ಲರೂ ತಮ್ಮನ್ನು ಪೂಜಿಸುವರೆಂಬ ಭಾವನೆ ಅವರಿಗಿತ್ತು . ಆದರೆ ದೇವತೆಗಳು ಬ್ರಹ್ಮಧೇವರನ್ನು ಪೂಜಿಸುವುದನ್ನು.ಬಿಟ್ಟು. ಇಂದ್ರಿಯ ಸುಖದಲ್ಲಿ ಆಸಕ್ತರಾಗಿ ಇದ್ದುಬಿಟ್ಟರು . ಆಗ  ಬ್ರಹ್ಮದೇವರು ಅವರಿಗೆ ಶಾಪಕೊಟ್ಟರು .ಶಾಪದ ಫಲವಾಗಿ ದೇವತೆಗಳು ಜ್ಞಾನಹೀನರಾದರು ದೇವತೆಗಳು ಜ್ಞಾನಹೀನರಾಗಲು ಅವರನ್ನು ಅನುಸರಿಸಿ ಇದ್ದವರೆಲ್ಲರೂ ಜ್ಞಾನಹೀನರಾಗಿಬಿಟ್ಟರು . ತರುವಾಯ ದೇವತೆಗಳು ಬ್ರಹ್ಮಧೇವರನ್ನು ನಮಸ್ಕರಿಸಿ ಕ್ಷಮೆ ಯಾಚನೇಮಾಡಿದರು ಮತ್ತು ಜ್ಞಾನವನ್ನು ಅನಗ್ರಹಿಸಲು ಬೇಡಿಕೊಂಡರು . ಆಗ ಬ್ರಹ್ಮದೇವರು ದೇವತೆಗಳಿರಾ ! ನೀವು ಪ್ರಾಯಶ್ಚಿತ್ತ ಮಾಡಿಕೊಳ್ಳಬೇಕು .ನಿಮ್ಮ ಮಕ್ಕಳ ಹತ್ತಿರ ಹೋಗಿ ಕೇಳಿರಿ ಅವರು ಹೇಳಿದಂತೆ  ಪ್ರಾಯಶ್ಚಿತ್ತ ಮಾಡಿಕೊಂಡು ಜ್ಞಾನವನ್ನು ಪಡೆಯಿರಿ ಎಂದರು .

ದೇವತೆಗಳು ತಮ್ಮಮಕ್ಕಳ ಹತ್ತಿರ ಹೋದರು .ಆ ದೇವತೆಗಳ ಮಕ್ಕಳು  ಪ್ರಾಯಶ್ಚಿತ್ತವನ್ನು ಹೇಳಿ ವಿಸ್ತಾರವಾಗಿ ಉಪದೇಶಿಸಿ ಮಕ್ಕಳೇ ಹೋಗಿ ಬನ್ನಿ ಎಂದರು ಇದನ್ನು ಕೇಳಿ ದೇವತೆಗಳಿಗೆ ಅವಮಾನವೇನಿಸಿತು . ಕೋಪವು ಬಂದಿತು ನಮಗೆ  ಮಕ್ಕಳಾಗಿ ಹುಟ್ಟಿ ತಂದೆಗಳಾದ ನಮ್ಮನ್ನು ಮಕ್ಕಳೇ ಎಂದು ಸಂಭೋದನೆ ಮಾಡಿದಿರಲ್ಲ ಇದು ಸರಿಯಲ್ಲ ಎಂದು ಕೊಂಡು ಮನಸ್ಸಿನಲ್ಲಿ ನೊಂದುಕೊಂಡರು . ಬ್ರಹ್ಮದೇವರು ದೇವತೆಗಳೇ ಜ್ಞಾನವನ್ನು ಯಾರು ಉಪದೇಶಿಸಿದವರೋ ಅವರು ತಂದೆ ಎನ್ನಿಸುತ್ತಾರೆ .ನಿಮ್ಮ ಮಕ್ಕಳು ಪ್ರಾಯಶ್ಚಿತ್ತವನ್ನು ಉಪದೇಶಿಸಿ. ನಿಮಗೆ ಜ್ಞಾನವನ್ನು ನೀಡಿದ್ದಾರೆ ಆದ್ದರಿಂದ ಅವರು ನಿಮಗೆ ತಂದೆಗಳಾಗುತ್ತಾರೆ ಎಂದು ಹೇಳಿದರು .

ಜನೀತಾ ಚೋಪನೇತಾ ಚ ಯಸ್ತು ವಿದ್ಯಾಂ ಪ್ರಯಚ್ಛತಿ |
ಅನ್ನದಾತ ಭಯತ್ರಾತ ಪಂಚೈತೇ ಪಿತರಃ ಸ್ಮೃತಾಃ ||

ಈ ಕಾರಣದಿಂದ ಅವರು ನಿಮ್ಮನ್ನು ಮಕ್ಕಳೇ ಎಂದು ಸಂಭೋದಿಸಿರುವುದು ಸರಿಯೇ ನಿಮ್ಮ ಮಕ್ಕಳು ನಿಮಗೆ ಉಪದೇಶಿಸಿ ವಿದ್ಯೆ ನಿಡಿದ ಕಾರಣ ಅವರು ಪಿತೃಗಳು ಎಂದು ಕರೆಯಲ್ಪಡುತ್ತಾರೆ .

ದೇವತೆಗಳು ಬ್ರಹ್ಮದೇವರ ಮಾತನ್ನು ಕೇಳಿ ಅವರಿಗೆ ನಮಸ್ಕರಿಸಿ ತಮ್ಮ ಮಕ್ಕಳ ಹತ್ತಿರ ಬಂದು ನಡೆದ ವಿಷಯವನ್ನು ತಿಳಿಸಿ ಅವರಿಗೆ ನೀವು ಇನ್ನು ಮುಂದೆ ಪಿತೃ ದೇವತೆಗಳು ಎಂದು ಪ್ರಸಿದ್ದರಾಗಿರೆಂದುಹೇಳಿ ಅಲ್ಲಿಂದ ಹೊರಟುಹೋದರು .

ಈ ಪಿತೃದೇವತೆಗಳನ್ನು ಉದ್ದೇಶಿಸಿ ಶ್ರಾದ್ಧವನ್ನು ಮಾಡುವುದರಿಂದ ಉತ್ತಮ ಫಲಗಳನ್ನು ಪಡೆಯಬಹುದು .

          || ಶ್ರೀಕೃಷ್ಣಾರ್ಪಣಮಸ್ತು ||

ಶ್ರೀಐತರೇಯ....
***
ಪಿತೃಗಣಗಳು-ಪರಿಚಯ
              || ಸಂಚಿಕೆ-3 ||

ಪಿತೃಗಳು ಏಳುಗಣದವರು  ಇರುತ್ತಾರೆ ವೈರಾಜ ,ಅಗ್ನಿಷ್ವಾತ್ತ ,ಬರ್ಹಿಷದ ,ಹೆಸರುಳ್ಳ ಮೂರುಗಣದ ಪಿತೃಗಳು ಸೂಕ್ಷ್ಮ ದೇಹವುಳ್ಳವರು . ಸುಕಾಲ ,ಅಂಗಿರಸ ,ಸುಸ್ವಧಾ ,ಮತ್ತು ಸೋಮಪ ಹೆಸರುಳ್ಳ ನಾಲ್ಕುಗಣದ ಪಿತೃಗಳು ಸ್ಥೂಲದೇಹ.ವುಳ್ಳವರು .

ವೈರಾಜ ಹೆಸರಿನ ಪಿತೃಗಳು ಮೊದಲಗಣದವರು ಇವರು ವಿರಾಜ ಎಂಬ ಪ್ರಜಾಪತಿಯ ಮಾನಸಪುತ್ರರು ಇವರಿಗೆ ಮೇನಾ ಎಂಬ ಮಾನಸಕನ್ಯೆ ಹುಟ್ಟಿದಳು ಇವಳು ಹೀಮವಂತನಿಗೆ ಪತ್ನಿಯಾದಳು ಇವಳ ಮಗನೇ ಮೈನಾಕ .ಮೇನೆಯಲ್ಲಿ ಹೀಮವಂತನಿಂದ ಅಪರ್ಣಾ ,ಏಕಪರ್ಣಾ , ಮತ್ತು ಏಕಪಾಟಲಾ ಎಂಬ ಮೂರು ಕನ್ಯೆಯರು ಜನಿಸಿದರು ಈ ಮೂವರು ಕನ್ಯೆಯರು ದೇವದಾನವರಿಂದ ಅಸಾಧ್ಯವಾದ ಕಠಿಣ ತಪಸ್ಸನ್ನು ಆಚರಿಸುತ್ತಿದ್ದರು . ಏಕಪರ್ಣಿಯು ಒಂದೇ  ಒಂದು ಎಲೆಯನ್ನು ತಿಂದು ತಪಸ್ಸು ಮಾಡುತಿದ್ದಳು  ಏಕಪಾಟಲೆಯು ಒಂದೇ  ಪುಷ್ಪವನ್ನು  ತಿಂದು ತಪಸ್ಸು ಮಾಡುತ್ತಿದ್ದಳು . ಅಪರ್ಣೆಯು ಉಪವಾಸದಿಂದ ತಪಸ್ಸು ಮಾಡುತ್ತಿದ್ದಳು .ಇವಳನ್ನು ನೋಡಿ. ತಾಯಿಯು ದುಃಖದಿಂದ ಉಮಾ ಎಂದು ತಡೆದಳು ಉ=ಎಲೆ ಮಗಳೇ,ಮಾ= ತಪಸ್ಸು ಮಾಡಬೇಡ . ಈ ರೀತಿಯಾಗಿ ಅವಳನ್ನು ಸಂಭೋದಿಸಿದ ಪ್ರಯುಕ್ತ ಅಪರ್ಣೆಗೆ ಉಮಾ ಎಂದು ಹೆಸರೀಡಲಾಯಿತು ಈ ಮೂವರು ಪುತ್ರಿಯರಲ್ಲಿ ಉಮಾದೇವಿ ಶ್ರೇಷ್ಠಳು ಇವಳು  ರುದ್ರ (ಶಿವ) ದೇವರಿಗೆ ಪತ್ನಿಯಾದಳು ಏಕಪರ್ಣಿಯು ದೇವಳರಪತ್ನಿಯಾದಳು  ಏಕಪಾಟಲೆಯು ಜೈಗಿಷವ್ಯರ ಪತ್ನಿಯಾದಳು .

ಮುಂದಿನಸಂಚಿಕಯಲ್ಲಿ ಅಗ್ನಿಷ್ವಾತ್ತ  ಎಂಬ ಎರಡನೆ ಪಿತೃಗಣದವರ ಬಗ್ಗೆ ತಿಳಿದುಕೊಳ್ಳೋಣ .

        || ಮುಂದುವರಿಯುತ್ತದೆ  ||
          || ಶ್ರೀಕೃಷ್ಣಾರ್ಪಣಮಸ್ತು ||

ಶ್ರೀಐತರೇಯ....
***
ಪಿತೃಗಣಗಳು-ಪರಿಚಯ
              || ಸಂಚಿಕೆ-4 ||

 ಅಗ್ನಿಷ್ವಾತ್ತ  ಎಂಬ ಹೆಸರಿನ ಪಿತೃಗಳು ಎರಡನೆಯ. ಗಣದವರು . ಇವರು ಸೋಮಪದ ಎಂಬ ಲೋಕದಲ್ಲಿ ಇರುತ್ತಾರೆ . ಇವರು ಮರೀಚಿ ಋಷಿಗಳ ಮಕ್ಕಳು .ಇವರನ್ನು ದೇವತೆಗಳು ಪೂಜಿಸುತ್ತಾರೆ . ಇವರಿಗೆ ಅಚ್ಛೋದಾ  ಎಂಬ ಮಗಳುಹುಟ್ಟಿದಳು .ಇವಳು ನದಿ ದೇವತೆಯು .ಇವಳಿಂದ ಅಚ್ಛೋದಾ ಎಂಬ ಸರೋವರವು ನಿರ್ಮಾಣವಾಯಿತು . ಹುಟ್ಟಿದಾರಾಭ್ಯ ಇವಳು ತಂದೆಯನ್ನು ತಿಳಿದಿರಲಿಲ್ಲ .ಒಂದು ದಿನ ಆಕಾಶದಲ್ಲಿ ವಿಮಾನವೊಂದನ್ನು ನೋಡಿದಳು . ಆ ವಿಮಾನದಲ್ಲಿ ಅದ್ರಿಕಾ ಎಂಬ ಅಪ್ಸರಾ ಸ್ತ್ರಿಯು ಕುಳಿತಿದ್ದಳು ಅವಳ ಜೋತೆ ಉಪರಿಚರ ಎಂಬ ವಸುರಾಜ ಕುಳಿತಿದ್ದನು . ಹೀಗೆ ವಿಮಾನದಲ್ಲಿ ಕುಳಿತು ಹೋಗುತ್ತಿದ್ದ ವಸುರಾಜನನ್ನು ನೋಡಿ ಇವನೇ ನನ್ನ ತಂದೆ ಎಂದು ತಿಳಿದಳು .ಇನ್ನೊಬ್ಬ ಪುರುಷನನ್ನು ತನ್ನ ತಂದೆ ಎಂದು ತಿಳಿದ ಪ್ರಯುಕ್ತ ಯೋಗಭ್ರಷ್ಟಳಾಗಿ ಕೆಳಗೆ ಬಿದ್ದಳು .ಹೀಗೆ ಅವಳು ಕೆಳಗೆ ಬೀಳುತ್ತಿರುವಾಗ  ಅತಿಸೂಕ್ಷ್ಮವಾದ ಮೂರು ವಿಮಾನಗಳನ್ನು ನೋಡಿದಳು .ಆ ವಿಮಾನಗಳಲ್ಲಿ ಕುಳಿತಿರುವ ತನ್ನ ಪಿತೃಗಳನ್ನು ನೋಡಿ ನೋಡಿ ಕೂಡಲೇ ಕೈಯೆತ್ತಿ  ಸ್ವಾಮಿ ನನ್ನನ್ನು ರಕ್ಷಿಸಿರಿ ,ರಕ್ಷಿಸಿರಿ ಎಂದು ಬೇಡಿಕೊಂಡಳು  . ಅವರು ಮಗಳೇ ಹೆದರಬೇಡ ಎಂದು ಸಂತೈಸಿದರು . ಅವಳು ಆಕಾಶದಲ್ಲೇ ನಿಂತಳು . ನಂತರ ಇವರೇ ತನ್ನ ಪಿತೃಗಳು ಎಂದು ಖಾತ್ರಿಯಾಯಿತು . ಆ ಪಿತೃಗಳು ಮಗಳೇ ! ನೀನು ಆಜ್ಞಾನದಿಂದ ಒಬ್ಬ ಸಾಮನ್ಯಮನುಷ್ಯನನ್ನು ತಂದೆಯೆಂದು ಭಾವಿಸಿರುವ ಪ್ರಯುಕ್ತ .ನೀನು ಯೋಗಭ್ರಷ್ಟಳಾಗಿ ಬೀಳುತ್ತಿರುವಿ ಹೆದರಬೇಡ ನೀನು ವಸುರಾಜನಿಗೆ ಮಗಳಾಗಿ ಹುಟ್ಟುವಿ . ಈ ಅದ್ರಿಕೆಯು ಮೀನಾಗಿ ಹುಟ್ಟುಲಿದ್ದಾಳೆ . ಮೀನಿನ  ಹೊಟ್ಟೆಯಿಂದ ನೀನು ಹುಟ್ಟಿಬರುವಿ. ನಂತರ  ಭೂಮಿಯಲ್ಲಿ ಪರಾಶರ ಋಷಿಗಳನ್ನು ಹೊಂದಿ ಸಾಕ್ಷಾತ್ ಭಗವಂತನನ್ನು ವೇದವ್ಯಾಸ ರೂಪದಿಂದ ಮಗನನ್ನಾಗಿ ಪಡೆಯುವಿ ಮತ್ತು ಶಂತನು ಮಹಾರಾಜನನ್ನು ವಿವಾಹ ಮಾಡಿಕೊಂಡು ಚಿತ್ರಾಂಗದ ಮತ್ತು ವಿಚೀತ್ರವಿರ್ಯ ಎಂಬ ಇಬ್ಬರು ಮಕ್ಕಳನ್ನು ಪಡೆಯುವಿ .ನಂತರ ಶಂತನು ಮಹಾರಾಜನನ್ನು ಮದುವೆಯಾಗಿ ಇಬ್ಬರು ಮಕ್ಕಳನ್ನು ಪಡೆದು ಉತ್ತಮ ಲೋಕಹೊಂದಿದಳು .

ಮುಂದಿನ ಸಂಚಿಕೆಯಲ್ಲಿ ಬರ್ಹಿಷದ ಎಂಬ ಮೂರನೆಯ ಗಣದವರ ಬಗ್ಗೆ ತಿಳಿದುಕೊಳ್ಳೊಣ .

        || ಮುಂದುವರಿಯುತ್ತದೆ  ||
          || ಶ್ರೀಕೃಷ್ಣಾರ್ಪಣಮಸ್ತು ||

ಶ್ರೀಐತರೇಯ....
****

ಶ್ರಾದ್ಧದಂದು ಕಾಗೆಗಳಿಗೆ ಆಹಾರ ನೀಡುವುದು ಯಾಕೆ ಗೊತ್ತಾ? 

 ನಾವು ಎಲ್ಲಿಂದ ಬಂದಿದ್ದೇವೆ? ಮರಣದ ನಂತರ ಎಲ್ಲಿಗೆ ಸೇರುತ್ತೇವೆ.. ಇಂತಹ ಪ್ರಶ್ನೆಗಳು ಹುಟ್ಟಿದಾಗಿನಿಂದಲೂ ನಮ್ಮ ಮನಸ್ಸಿನಲ್ಲಿ ಹೆಚ್ಚಾಗಿ ಕಾಡುತ್ತಲೇ ಇರುತ್ತವೆ. ಆದರೆ ಹಿರಿಯರು ಇದಕ್ಕೆ ಕೊಡುವ ಉತ್ತರ ಕಾಗೆ.. ಹೌದು, ನಾವು ಸತ್ತ ಮೇಲೆ ಕಾಗೆಗಳಾಗುತ್ತೇವೆ ಎಂಬ ಮಾತು ಹೇಳುವುದನ್ನು ಕೇಳಿರುತ್ತೀರಿ. ಭಾರತವನ್ನು ಹೊರತುಪಡಿಸಿ, ಪ್ರಾಚೀನ ಸಂಸ್ಕೃತಿಗಳು ಮತ್ತು ನಾಗರಿಕತೆಗಳಲ್ಲಿ ಇನ್ನೂ ಕೆಲವು ದೇಶಗಳಲ್ಲಿ ಕಾಗೆಗಳಿಗೆ ವಿಶೇಷ ಸ್ಥಾನವನ್ನು ನೀಡಲಾಗಿದೆ. ಕೆಲವು ಹಬ್ಬಗಳ ಸಮಯದಲ್ಲಿ ಅವುಗಳಿಗೆ ಆಹಾರವನ್ನು ನೀಡಿ, ಪೂಜ್ಯನೀಯ ದೃಷ್ಟಿಯಿಂದ ನೋಡುವುದುಂಟು. ಅಂತಹ ಒಂದು ಸಮಯವೆಂದರೆ, ಪಿತೃಪಕ್ಷ ಕಾಲ. ಹಾಗಾದ್ರೆ ಈ ಸಂದರ್ಭದಲ್ಲಿ ಕಾಗೆಗಳಿಗೆ ಆಹಾರ ಏಕೆ ನೀಡಲಾಗುತ್ತದೆ ಎಂಬುದನ್ನು ಇಲ್ಲಿ ನೋಡೋಣ.

ಕಾಗೆಗಳಿಗೆ ಪ್ರಾಮುಖ್ಯತೆ ಏಕೆ ನೀಡಲಾಗುತ್ತದೆ?: 

1. ಹ್ಯುಗಿನ್ ಮತ್ತು ಮುನಿನ್ ಎನ್ನುವ ತಳಿಗೆ ಕಾಗೆಗಳ ಬಗ್ಗೆ ನಾರ್ಸ್ ಪುರಾಣದಲ್ಲಿ ಉಲ್ಲೇಖಿಸಲಾಗಿದ್ದು, ಇವುಗಳನ್ನು ದೇವರ ಉತ್ಸಾಹದ ಸಂಕೇತವೆಂದು ವಿವರಿಸಲಾಗಿದೆ. 

2. ಗ್ರೀಕ್ ಪುರಾಣದಲ್ಲಿ, ಕಾಗೆಗಳನ್ನು ಅದೃಷ್ಟದ ಸಂಕೇತವೆಂದು ಪರಿಗಣಿಸಲಾಗಿದ್ದು, ಇದನ್ನು ದೇವರ ಸಂದೇಶವಾಹಕಗಳು ಮತ್ತು ವಿಶ್ವದ ಸೃಷ್ಟಿಕರ್ತರಲ್ಲಿ ಒಬ್ಬರು ಎಂದು ಹೇಳಲಾಗಿದೆ.

ಪಿತೃ ಪಕ್ಷದ ಸಮಯದಲ್ಲಿ ಕಾಗೆಗೆ ಆಹಾರ ನೀಡುವ ಮಹತ್ವ:

 ಶ್ರಾದ್ಧ ಅಥವಾ ಪಿತೃ ಪಕ್ಷವು 2021ರಲ್ಲಿ ಸೆಪ್ಟೆಂಬರ್ 20ರಂದು ಆರಂಭವಾಗಲಿದ್ದು, ಮುಂದಿನ ಹದಿನಾರು ದಿನಗಳ ಕಾಲ ಇರಲಿದೆ. ಶ್ರಾದ್ಧದ ಮೊದಲನೇ ದಿನವೇ ಪೌರ್ಣಮಿ ಶ್ರಾದ್ಧವಾಗಿರುತ್ತದೆ. ಧರ್ಮಗ್ರಂಥಗಳ ಪ್ರಕಾರ, ಪಿತೃ ಪಕ್ಷದಂದು ಶ್ರಾದ್ಧ ಮಾಡುವುದು ಅತ್ಯಂತ ಅವಶ್ಯಕವಾಗಿದೆ. ನಾವು ಪಿತೃ ಪಕ್ಷದ ಸಮಯದಲ್ಲಿ ಸರಿಯಾದ ಸಂಸ್ಕಾರಗಳೊಂದಿಗೆ ಶ್ರಾದ್ಧ ಸಂಸ್ಕಾರಗಳನ್ನು ನಡೆಸದಿದ್ದರೆ, ನಮ್ಮ ಪೂರ್ವಜರಿಗೆ ಶಾಂತಿ ಸಿಗುವುದಿಲ್ಲ ಮತ್ತು ಅವರ ಆತ್ಮಗಳು ಈ ಪ್ರಪಂಚದಲ್ಲಿ ಸುತ್ತಾಡುತ್ತವೆ ಎಂದು ನಂಬಲಾಗಿದೆ. ಶ್ರಾದ್ಧ ಅವಧಿಯಲ್ಲಿ ಕಾಗೆಗಳನ್ನು ಪೂರ್ವಜರ ಸಂಕೇತವೆಂದು ಪರಿಗಣಿಸಲಾಗುತ್ತದೆ, ಅದಕ್ಕಾಗಿಯೇ ಕಾಗೆಗಳಿಗೆ ಆಹಾರವನ್ನು ನೀಡಲಾಗುತ್ತದೆ

ಗರುಡ ಪುರಾಣದಲ್ಲಿ ಕಾಗೆ ಬಗ್ಗೆಯಿರುವ ಕಥೆ: 

ಗರುಡ ಪುರಾಣದಲ್ಲಿ ಕಾಗೆಯನ್ನು ಯಮರಾಜನ ಸಂದೇಶವಾಹಕ ಎಂದು ಹೇಳಲಾಗಿದೆ. ಶ್ರದ್ಧಾ ದಿನಗಳಲ್ಲಿ, ಕಾಗೆಗೆ ಆಹಾರ ನೀಡುವುದು ಒಂದು ಪ್ರಸಿದ್ಧ ಸಂಪ್ರದಾಯ ಮತ್ತು ಅದರ ಅಡಿಯಲ್ಲಿ ಹಸುವಿಗೆ ಆಹಾರವನ್ನು ಇಡಲಾಗುತ್ತದೆ ಎಂದು ನಂಬಲಾಗಿದೆ. ಕಾಗೆಯು ಆ ಆಹಾರವನ್ನು ಸ್ವೀಕರಿಸಿದರೆ, ಪೂರ್ವಜರು ಆಹಾರವನ್ನು ತೆಗೆದುಕೊಂಡಿದ್ದಾರೆ ಎಂದರ್ಥ. ಯಮನು ಒಮ್ಮೆ ಪ್ರಸಿದ್ಧ ರಾಜ ಮಾರುತಿಯ ಯಜ್ಞದ ಸಮಯದಲ್ಲಿ ಕಾಗೆಗೆ ವರವನ್ನು ನೀಡಿರುವುದರಿಂದ ಇಂದು ನಾವು ಕಾಗೆಗಳಿಗೆ ಪಿತೃ ಪಕ್ಷದಲ್ಲಿ ಪ್ರಮುಖವಾಗಿ ಆಹಾರವನ್ನು ನೀಡಲಾಗುತ್ತಿದೆ. ಯಮನು ಯಜ್ಞದ ಸಮಯದಲ್ಲಿ ಕಾಗೆಗಳನ್ನು ಕುರಿತು ನಿಮ್ಮನ್ನು ಪಿತೃ ಪಕ್ಷದ ಸಮಯದಲ್ಲಿ ಪೂಜಿಸುವಂತಾಗಲಿ. ಪಿತೃಗಳಿಗೆ ಸಲ್ಲಿಸಿದ ಆಹಾರಗಳು ನಿಮ್ಮ ಮೂಲಕ ಪಿತೃಗಳಿಗೆ ಸೇರುವಂತಾಗಲಿ ಎಂದು ವರವನ್ನು ನೀಡುತ್ತಾನೆ. ಆದ್ದರಿಂದ ಪಿತೃಪಕ್ಷದಂದು ಕಾಗೆಗಳಿಗೆ ಆಹಾರ ನೀಡಲಾಗುತ್ತದೆ.

ರಾಮ ಮತ್ತು ಸೀತೆಯ ವಿಚಾರದಲ್ಲಿ ಕಾಗೆ: 

ಕಾಗೆಗೆ ಸಂಬಂಧಿಸಿದ ಮತ್ತೊಂದು ದಂತಕಥೆಯ ಪ್ರಕಾರ, ಇಂದ್ರನ ಮಗನಾದ ಜಯಂತನು ಸೀತಾ ದೇವಿಯ ಮೇಲೆ ಆಕರ್ಷಿತನಾಗಿ ಆಕೆಯನ್ನು ಪಡೆಯಲು ಹಸುವಿನ ರೂಪವನ್ನು ತೆಗೆದುಕೊಂಡು ಸೀತೆಯ ಬಳಿ ಬರುತ್ತಾನೆ. ಸೀತೆಯಲ್ಲಿ ತನ್ನ ಪ್ರೇಮವನ್ನು ಹೇಳಿಕೊಂಡಾಗ ಸೀತೆ ಜಯಂತನನ್ನು ತಿರಸ್ಕರಿಸುತ್ತಾಳೆ. ಇದರಿಂದ ಕೋಪಗೊಂಡ ಜಯಂತನು ಸೀತೆಯ ಮೇಲೆ ಹಲ್ಲೆ ಮಾಡಲು ಮುಂದಾಗುತ್ತಾನೆ. ಆಗ ಶ್ರೀರಾಮನು ಅವನನ್ನು ಬ್ರಹ್ಮಾಸ್ತ್ರದಿಂದ ಬಲವಾಗಿ ಹೊಡೆದನು. ಸ್ವಲ್ಪ ಸಮಯದ ನಂತರ, ಜಯಂತ ತನ್ನ ತಪ್ಪನ್ನು ಅರಿತುಕೊಂಡು, ರಾಮನಲ್ಲಿ ಕ್ಷಮೆಯಾಚಿಸಿದನು. ಭಗವಾನ್ ರಾಮನಿಗೆ ಪರಿಶುದ್ಧ ಹೃದಯವಿದ್ದುರಿಂದ ಆತನು ಅವನನ್ನು ಕ್ಷಮಿಸಿ, ಅವನಿಗೊಂದು ವರ ನೀಡಿದನು. ಅದೇನೆಂದರೆ, ಪಿತೃಪಕ್ಷದ ಸಮಯದಲ್ಲಿ ನಿಮಗೆ ಆಹಾರವನ್ನು ನೀಡಲಾಗುವುದು ಮತ್ತು ನಿಮ್ಮ ದೈವಿಕ ಬೆಂಬಲದ ಮೂಲಕ ನಿನ್ನ ಪೂರ್ವಜರಿಗೆ ಶ್ರಾದ್ಧದ ದಿನಗಳಲ್ಲಿ ಸ್ವರ್ಗದಲ್ಲಿ ಆಹಾರವನ್ನು ನೀಡಲಾಗುವುದು ಎಂಬ ವರ ನೀಡಿ ಆಶೀರ್ವದಿಸಿದನು.
*****

following article is from – ಪಂಡಿತ ಶ್ರೀ. ದೀನಾನಾಥಜಿ ಶಾಸ್ತ್ರೀ, ಸಾರಸ್ವತ (ಆಧಾರ : ಮಾಸಿಕ ಕಲ್ಯಾಣ,  ಆಗಸ್ಟ್ ೧೯೯೯)

ಹಿಂದೂ ಧರ್ಮಕ್ಕನುಸಾರ ಮಾಡಲಾಗುವ ಶ್ರಾದ್ಧದ ವೈಜ್ಞಾನಿಕತೆ 


ಪಿತೃಪಕ್ಷದಲ್ಲಿನ ಶ್ರಾದ್ಧ 

ಹಿಂದೂ ಧರ್ಮದಲ್ಲಿ ಹೇಳಿದಂತೆ ಈಶ್ವರಪ್ರಾಪ್ತಿಯ ಮೂಲಭೂತ ಸಿದ್ಧಾಂತಗಳಲ್ಲಿ ಒಂದೆಂದರೆ ದೇವಋಣ, ಋಷಿಋಣ, ಪಿತೃಋಣ ಹಾಗೂ ಸಮಾಜಋಣ ಈ ನಾಲ್ಕೂ ಋಣಗಳನ್ನು ತೀರಿಸುವುದು. ಇವುಗಳಲ್ಲಿ ಪಿತೃಋಣವನ್ನು ತೀರಿಸಲು ಶ್ರಾದ್ಧ ಮಾಡುವುದು ಅಗತ್ಯವಾಗಿರುತ್ತದೆ. ಇತರ ಸಂಸ್ಕಾರಗಳಂತೆಯೇ ಶ್ರಾದ್ಧ ಸಂಸ್ಕಾರವೂ ಅತ್ಯಾವಶ್ಯಕವಾಗಿದೆ.

೧. ಪಿತೃಲೋಕ

ಇದು ಚಂದ್ರಲೋಕದ ಹಿಂಭಾಗದಲ್ಲಿದೆ, ಎಂದು ಶಾಸ್ತ್ರದಲ್ಲಿ ಹೇಳಲಾಗಿದೆ.

೨. ಪಿತೃಗಳ ಹಗಲು ಹಾಗೂ ರಾತ್ರಿ

ವಿಧೂರ್ಧ್ವಭಾಗೇ ಪಿತರೋ ವಸನ್ತಃ ಸ್ವಾಧಃ ಸುಧಾದೀಧಿತಿಮಾಮನನ್ತಿ |
ಪಶ್ಯನ್ತಿ ತೇಽರ್ಕಂ ನಿಜಮಸ್ತಕೋರ್ಧ್ವೇ ದರ್ಶೇ ಯತೋಽಸ್ಮಾದ್ದ್ಯುದಲಂ ತದೈಷಾಮ್ ||
– ಸಿದ್ಧಾನ್ತಶಿರೋಮಣಿ, ಗೋಲಾಧ್ಯಾಯ, ತ್ರಿಪ್ರಶ್ನವಾಸನಾ, ಶ್ಲೋಕ ೧೩

ಅರ್ಥ : ಚಂದ್ರನ ಹಿಂಭಾಗದಲ್ಲಿ ಪಿತೃಗಳ ನಿವಾಸವಿರುತ್ತದೆ.  ಪಿತೃಗಳ ಕೆಳಭಾಗದಲ್ಲಿ ಚಂದ್ರನ ತೇಜವಿರುತ್ತದೆ. ಅಮಾವಾಸ್ಯೆಯಂದು (ಚಂದ್ರನು ಪೃಥ್ವಿ ಹಾಗೂ ಸೂರ್ಯನ ಮಧ್ಯದಲ್ಲಿರುತ್ತಾನೆ. ಆಗ ಪಿತೃಗಳ ಜೊತೆಗೆ ತಲೆಯ ಮೇಲೆ ಚಂದ್ರನು ಬಂದಿರುತ್ತಾನೆಂದು, ಅಮಾವಾಸ್ಯೆಯು ಪಿತೃಗಳ ಮಧ್ಯಾಹ್ನದ ಸಮಯವಾಗಿರುತ್ತದೆ. (ಹುಣ್ಣಿಮೆಯಂದು ಚಂದ್ರ ಹಾಗೂ ಸೂರ್ಯನ ನಡುವೆ ಪೃಥ್ವಿ ಇರುತ್ತದೆ. ಆದ್ದರಿಂದ ಚಂದ್ರಲೋಕದಲ್ಲಿ ಮಧ್ಯ ರಾತ್ರಿಯಾಗಿರುತ್ತದೆ.)

೩. ಪಿತೃಗಳ ಮಧ್ಯಾಹ್ನ

ಪಿತ್ರ್ಯೇ ರಾತ್ರ್ಯಹನೀ ಮಾಸಃ ಪ್ರವಿಭಾಗಸ್ತು ಪಕ್ಷಯೋಃ |
ಕರ್ಮಚೇಷ್ಟಾಸ್ವಹಃ ಕೃಷ್ಣ ಶುಕ್ಲಃ ಸ್ವಪ್ನಾಯ ಶರ್ವರೀ ||
– ಮನಸ್ಮೃತಿ ಅಧ್ಯಾಯ ೧, ಶ್ಲೋಕ ೬೬

ಅರ್ಥ : ಅಮಾವಾಸ್ಯೆಯಂದು ಚಂದ್ರ ಹಾಗೂ ಸೂರ್ಯನು ಒಂದೇ ರಾಶಿಯಲ್ಲಿರುತ್ತಾರೆ.  ಸೂರ್ಯನು ಆಗ ಸರಿಯಾಗಿ ಚಂದ್ರನ ಮೇಲಿರುತ್ತಾನೆ. ಆ ಸಮಯವೆಂದರೆ ಪಿತೃಗಳಿಗೆ ಮಧ್ಯಾಹ್ನವಾಗಿರುತ್ತದೆ.

೩ ಅ. ಅಮಾವಾಸ್ಯೆಯಂದು ಪಿತೃಗಳಿಗೆ ಭೋಜನ ನೀಡುವ ಮಹತ್ವ : ಅಮಾವಾಸ್ಯೆಯಂದು ಚಂದ್ರ ಹಾಗೂ ಸೂರ್ಯ ಒಂದೇ ರಾಶಿಯಲ್ಲಿರುವುದರಿಂದ ಪ್ರತೀ ಅಮಾವಾಸ್ಯೆಗೆ ಪಿತೃಗಳಿಗೆ ಬ್ರಾಹ್ಮಣರ ಮಾಧ್ಯಮದಿಂದ ಅನ್ನ ಅಥವಾ ಭೋಜನ ನೀಡುವುದರಿಂದ ಪಿತೃಗಳಿಗೆ ಪ್ರತಿದಿನ ಮಧ್ಯಾಹ್ನ ಭೋಜನ ನೀಡಿದಂತೆ ಆಗುತ್ತದೆ.

೪. ತಿಥಿಗಳ ಸಂಬಂಧ ಚಂದ್ರನೊಂದಿಗಿರುತ್ತದೆ;  ಆದ್ದರಿಂದ ಅಮಾವಾಸ್ಯೆಗೆ ಪಿತೃಗಳ ಮಧ್ಯಾಹ್ನ ಹಾಗೂ ಹುಣ್ಣಿಮೆಯಂದು ಪಿತೃಗಳಿಗೆ ಮಧ್ಯರಾತ್ರಿಯಾಗಿರುತ್ತದೆ.

೫. ಪಿತೃಗಳು ಸೂಕ್ಷ್ಮ ಆತ್ಮಸ್ವರೂಪದಲ್ಲಿರುತ್ತಾರೆ;  ಆದ್ದರಿಂದ ಅವರಿಗೆ ಭೋಜನವೂ ಸೂಕ್ಷ್ಮವಾಗಿಯೇ ಬೇಕಾಗಿರುತ್ತದೆ.

೬. ದೇವತೆಗಳಿಗೆ ಅಗ್ನಿಯ ಮಾಧ್ಯಮದಿಂದ ಹವಿಸ್ಸನ್ನು ಸಮರ್ಪಿಸಿದ ಬಳಿಕ ಆಗುವ ಪ್ರಕ್ರಿಯೆ !

ದೇವತೆಗಳು ಸೂಕ್ಷ್ಮವಾಗಿರುತ್ತಾರೆ;  ಆದ್ದರಿಂದ ಅವರಿಗೂ ಸೂಕ್ಷ್ಮ ಭೋಜನವೇ ಬೇಕಾಗಿರುತ್ತದೆ.  ನಾವು ಶಾಸ್ತ್ರಕ್ಕನುಸಾರ ದೇವತೆಗಳ ಮುಖ ಸ್ವರೂಪವಾಗಿರುವ ಅಗ್ನಿಯನ್ನು ಮಾಧ್ಯಮವಾಗಿಸಿಕೊಂಡು ಸ್ಥೂಲದಲ್ಲಿನ ಹವಿಸ್ಸನ್ನು ಸ್ವಾಹಾಕಾರ ಮಾಡಿ ಅಗ್ನಿಯಲ್ಲಿ ಸಮರ್ಪಿಸುತ್ತೇವೆ. ಅಗ್ನಿಯು ಆ ಅನ್ನವನ್ನು ಸೂಕ್ಷ್ಮ ಮಾಡಿ ಸ್ವತಃ ಶಾಂತವಾಗಿ ಸೂಕ್ಷ್ಮವಾಗುತ್ತದೆ. ಅಗ್ನಿಯನ್ನು ಮಹಾಗ್ನಿಯು ಆಕರ್ಷಿಸುತ್ತದೆ ಹಾಗೂ ಮಹಾಗ್ನಿಯನ್ನು ಸೂಕ್ಷ್ಮ ಹವಿಸ್ಸಿನೊಂದಿಗೆ ಸೂರ್ಯನು ಸೆಳೆದುಕೊಳ್ಳುತ್ತಾನೆ. ಸೂರ್ಯನು ಅದರಿಂದ ಸೂಕ್ಷ್ಮ ಅನ್ನವನ್ನು ತೆಗೆದುಕೊಂಡು ಸಂಬಂಧಪಟ್ಟ ಸೂಕ್ಷ್ಮ ದೇವತೆಗಳಿಗೆ ನೀಡುತ್ತಾನೆ. ಇದರಿಂದ ದೇವತೆಗಳು ತೃಪ್ತರಾಗುತ್ತಾರೆ. ದೇವತೆಗಳು ತೃಪ್ತರಾಗುವುದರಿಂದ ಅವರ ಅಂಗವಾಗಿರುವ ಜಗತ್ತು ಕೂಡ ತೃಪ್ತವಾಗುತ್ತದೆ;  ಏಕೆಂದರೆ ಅವರೇ ಜಗತ್ತಿನ ಸ್ವಾಮಿ ಹಾಗೂ ಸಂರಕ್ಷಕರಾಗಿರುತ್ತಾರೆ.

೭. ಸೂಕ್ಷ್ಮೀಕೃತ ಅನ್ನ ಸಿಗುವುದರ ಮಹತ್ವ

೭ ಅ. ಜೀವನದಲ್ಲಿ ವ್ಯಕ್ತಿಗಳಿಗೆ ಸೂಕ್ಷ್ಮದಲ್ಲಿನ ಅನ್ನ ಸಿಗದಿದ್ದರೆ ಶರೀರದಲ್ಲಿ ತೊಂದರೆಯು ಪ್ರಾರಂಭವಾಗುತ್ತದೆ : ನಮ್ಮ ಆತ್ಮಕ್ಕೆ ಒಂದು ವೇಳೆ ಸ್ಥೂಲದಿಂದ ಸೂಕ್ಷ್ಮೀಕೃತ ಅನ್ನ ಸಿಗದಿದ್ದರೆ ಆಗ ಆ ಆತ್ಮಸ್ವಾಮಿಕ
ಶರೀರದಲ್ಲಿ (ಶರೀರದ ಸ್ವಾಮಿ ಆತ್ಮವಾಗಿರುವುದು) ತೊಂದರೆ ಪ್ರಾರಂಭವಾಗುತ್ತದೆ,  ಅಂದರೆ ಶರೀರವು ದುರ್ಬಲ ಹಾಗೂ ಅಸ್ವಸ್ಥವಾಗುತ್ತದೆ.
೭ ಆ. ದೇವತೆಗಳಿಗೆ ಸೂಕ್ಷ್ಮೀಕೃತ ಅನ್ನ ಸಿಗದಿದ್ದರೆ ಅತಿವೃಷ್ಟಿ, ಅನಾವೃಷ್ಟಿ ಇತ್ಯಾದಿ ತೊಂದರೆಗಳು ಪ್ರಾರಂಭವಾಗುವುದು :  ದೇವತೆಗಳಿಗೆ ಸೂಕ್ಷ್ಮೀಕೃತ ಅನ್ನ ಸಿಗದಿದ್ದರೆ ಅವರ ದೇವಸ್ವಾಮಿಕ ಜಗತ್ತಿನಲ್ಲಿ (ಜಗತ್ತಿನಲ್ಲಿ ದೇವರ ರಾಜ್ಯಭಾರವಿರುವುದು) ಅತಿವೃಷ್ಟಿ, ಅನಾವೃಷ್ಟಿ, ಪ್ರವಾಹ, ಬರಗಾಲ ಇತ್ಯಾದಿ ತೊಂದರೆ ಗಳು ಪ್ರಾರಂಭವಾಗುತ್ತದೆ. ಇದರಿಂದಲೂ ಸೃಷ್ಟಿಯು ಕಾಂತಿಹೀನವಾಗುತ್ತದೆ.
೭ ಇ. ಪಿತೃಗಳಿಗೆ ಸೂಕ್ಷ್ಮ ಅನ್ನ ಸಿಗದಿದ್ದರೆ ಕುಟುಂಬ ಸ್ವರೂಪ ಶರೀರದಲ್ಲಿ ತೊಂದರೆಗಳು ಪ್ರಾರಂಭ ವಾಗುವುದು : ಒಂದು ವೇಳೆ ಮೃತರಾದ ಬಳಿಕ ಸೂಕ್ಷ್ಮಗೊಂಡ ನಮ್ಮ ಪಿತೃಗಳಿಗೆ ಸೂಕ್ಷ್ಮ ಅನ್ನ ಸಿಗದಿದ್ದರೆ ಅವರ ಕುಟುಂಬರೂಪಿ ಶರೀರದಲ್ಲಿ ತೊಂದರೆ ಪ್ರಾರಂಭವಾಗುತ್ತದೆ ಹಾಗೂ ಕುಟುಂಬವು ಕಳೆಗುಂದಿದಂತಾಗುತ್ತದೆ.

೮. ಬ್ರಾಹ್ಮಣ ಭೋಜನ ನೀಡಿದ ಬಳಿಕ ಆ ಅನ್ನವು ಪಿತೃಗಳ ವರೆಗೆ ತಲುಪುವ ಪ್ರಕ್ರಿಯೆ

೮ ಅ. ಜ್ಞಾನವೃದ್ಧ ಹಾಗೂ ತಪೋವೃದ್ಧ ಬ್ರಾಹ್ಮಣರ ಮುಖದಿಂದ ಅವರ ಜಠರಾಗ್ನಿಗೆ ಆಹುತಿ ನೀಡುವುದು

ವಿಧ್ಯಾತಪಃ ಸಮೃದ್ಧೇಶು ಹುತಂ ವಿಪ್ರಮುಖಾಗ್ನಿಶು |
ಮನುಸ್ಮೃತಿ, ಅಧ್ಯಾಯ  ೩ ಶ್ಲೋಕ ೯೮

ಅರ್ಥ : ಜ್ಞಾನವೃದ್ಧ ಹಾಗೂ ತಪೋವೃದ್ಧ ರಾಗಿರುವ ಬ್ರಾಹ್ಮಣರ ಮುಖದಿಂದ ಅವರ ಜಠರಾಗ್ನಿಗೆ ಆಹುತಿ ನೀಡುವುದು.

೮ ಆ. ಅಗ್ನಿಯ ಮುಖದಿಂದ ದೇವತೆಗಳು ಹಾಗೂ ಪಿತೃಗಳು ತಮ್ಮ ಅನ್ನವನ್ನು ಗ್ರಹಣ ಮಾಡುವುದು

ಯಸ್ಯಾಸ್ಯೇನ ಸದಾಶ್ನನ್ತಿ ಹವ್ಯಾನಿ ತ್ರಿದಿವೌಕಸಃ |
ಕವ್ಯಾನಿ ಚೈವ ಪಿತರಃ ಕಿ ಭೂತಮಧಿಕಂ ತತಃ ||
– ಮನುಸ್ಮೃತಿ, ಅಧ್ಯಾಯ  ೧,  ಶ್ಲೋಕ ೯೫

ಅರ್ಥ : ಅಗ್ನಿಯ ಮುಖದಿಂದ ದೇವತೆಗಳು ಹಾಗೂ ಪಿತೃಗಳು ತಮ್ಮ ಅನ್ನವನ್ನು ಗ್ರಹಣ ಮಾಡುತ್ತಾರೆ.

೮ ಇ. ಬ್ರಾಹ್ಮಣರ ಉದರಾಗ್ನಿಯಲ್ಲಿ ಪಿತೃಗಳ ಹೆಸರಿನಲ್ಲಿ ನೀಡಿರುವ ಅನ್ನವನ್ನು ಪಿತೃಗಳು ಗ್ರಹಣ ಮಾಡುವ ಸೂಕ್ಷ್ಮ ಪ್ರಕ್ರಿಯೆ : ಬ್ರಾಹ್ಮಣರ ಉದರಾಗ್ನಿಯಲ್ಲಿ ಪಿತೃಗಳ ಹೆಸರಿನಲ್ಲಿ ನೀಡಿರುವ ಅನ್ನವನ್ನು ಅವರ ವೈಶ್ವಾನರ ಅಗ್ನಿಯು ಸೂಕ್ಷ್ಮವಾಗಿಸುತ್ತದೆ. ಆ ಅಗ್ನಿಯನ್ನು ಮಹಾಗ್ನಿಯು ಆಕರ್ಷಿಸುತ್ತದೆ ಹಾಗೂ ಅದನ್ನು ಸೂಕ್ಷ್ಮಅನ್ನಸಹಿತ ಸೂರ್ಯನು  ಸೆಳೆದುಕೊಳ್ಳುತ್ತಾನೆ. ಸೂರ್ಯನ ವರೆಗೆ ತಲುಪಿದ ಆ ಸೂಕ್ಷ್ಮ ಅನ್ನವನ್ನು ಸೂರ್ಯನ ಸುಶುಮ್ನಾ ಕಿರಣಗಳ ಮೂಲಕ ಚಂದ್ರನು ಸೆಳೆದುಕೊಳ್ಳುತ್ತಾನೆ. ನಂತರ ಆ ಅನ್ನದ ಮೇಲಿರುವ ನಮ್ಮ ಸೂಕ್ಷ್ಮ ಪಿತೃಗಳು ಅದನ್ನು ಸೆಳೆದುಕೊಳ್ಳುತ್ತಾರೆ. ಅನ್ನದಿಂದ ತೃಪ್ತರಾದ ಪಿತೃಗಳು ನಮ್ಮ ಕುಟುಂಬದ ಸಂರಕ್ಷಕರೆಂಬ ಸಂಬಂಧದಿಂದ ಸುಖಸಮೃದ್ಧಿ ನೀಡುತ್ತಾರೆ.

೮ ಈ. ಶ್ರಾದ್ಧ-ಭೋಕ್ತ ಬ್ರಾಹ್ಮಣನ ಅಗ್ನಿಯು ಮಂದ ವಾಗಬಾರದೆಂದು ಧರ್ಮಶಾಸ್ತ್ರದಲ್ಲಿ ಅವನಿಗೆ ಅನೇಕ ನಿಯಮಗಳನ್ನು ಹಾಕಿರುವುದು : ಶ್ರಾದ್ಧ-ಭೋಕ್ತ ಬ್ರಾಹ್ಮಣನ ಅಗ್ನಿ ಮಂದವಾಗಬಾರದೆಂದು ಮತ್ತು ಅದರಿಂದ ಮಹಾಗ್ನಿಯವರೆಗೆ ತಲುಪಿಸಲು ಯಾವುದೇ  ಅಡಚಣೆ ಬರಬಾರದೆಂದು; ಧರ್ಮಶಾಸ್ತ್ರದಲ್ಲಿ ಶ್ರಾದ್ಧ-ಭೋಕ್ತ ಬ್ರಾಹ್ಮಣರಿಗೆ ಅನೇಕ ನಿಯಮ ಗಳನ್ನು ಹಾಕಿಕೊಡಲಾಗಿದೆ. ಬ್ರಾಹ್ಮಣನಿಗೆ ಆ ದಿನ ರಾತ್ರಿ ಮೈಥುನ ನಿಷಿದ್ಧ ಎಂದು ಹೇಳಲಾಗಿದೆ,  ಇದು ಅದರಲ್ಲಿನ ಗೂಢ (ರಹಸ್ಯ)ವಾಗಿದೆ. ವೇದಶಾಸ್ತ್ರ ಪಾರಂಗತ ಸದಾಚಾರಿ ಬ್ರಾಹ್ಮಣರಲ್ಲಿಯೇ ಈ ಅಗ್ನಿಯಿರುತ್ತದೆ. ಉಳಿದ ಬ್ರಾಹ್ಮಣರಲ್ಲಿನ ಉದರಾಗ್ನಿಗೆ ಅಗ್ನಿದೇವ (ಭವಿಷ್ಯಪುರಾಣ, ಬ್ರಾಹ್ಮಪರ್ವ, ಅಧ್ಯಾಯ ೧೩, ಶ್ಲೋಕ ೩೬) ಎಂದು ಹೇಳದೇ ಭಸ್ಮೀಭೂತ, ಎಂದು ಹೇಳಲಾಗಿದೆ.

ನಶ್ಯನ್ತಿ ಹವ್ಯಕವ್ಯಾನಿ ನರಾಣಾಮ್ ಅವಿಜಾನತಾಮ್  |
ಭಸ್ಮೀಭೂತೇಶು ವಿಪ್ರೇಶು ಮೋಹಾತ್ ದತ್ತಾನಿ ದಾತೃಭಿಃ  ||
– ಮನುಸ್ಮೃತಿ, ಅಧ್ಯಾಯ ೩,  ಶ್ಲೋಕ ೯೭

ಅರ್ಥ : ಅಪಾತ್ರರಾಗಿರುವ ಭಸ್ಮೀಭೂತ ಬ್ರಾಹ್ಮಣ ರಿಗೆ ಅವಿವೇಕದಿಂದ ದಾನ ನೀಡಿರುವ ಹವಿಸ್ಸು (ದೇವರಿಗೋಸ್ಕರದ ಆಹುತಿ) ಹಾಗೂ ಕವ್ಯಗಳು (ಪಿತೃಗಳಿಗೋಸ್ಕರ ಆಹುತಿ) ನಾಶವಾಗುತ್ತವೆ.

ಬ್ರಾಹ್ಮಣಸ್ತವನಧಿಯಾನಸ್ತೃಣಾಗ್ನಿರಿವ  ಶಾಮ್ಯತಿ  |
ತಸ್ಮೈ ಹವ್ಯಂ ನ ದಾತವ್ಯಂ ನಹಿ ಭಸ್ಮನಿ ಹೂಯತೆ ||
– ಮನುಸ್ಮೃತಿ, ಅಧ್ಯಾಯ ೩, ಶ್ಲೋಕ ೧೬೮

ಅರ್ಥ : ವೇದಗಳ ಅಧ್ಯಯನ ಮಾಡದಿರುವ ಬ್ರಾಹ್ಮಣರ ಅಗ್ನಿಯು (ತೇಜ) ಹುಲ್ಲಿನ ಅಗ್ನಿಯಂತೆ ತಕ್ಷಣ ಶಾಂತವಾಗುತ್ತದೆ. ಆದ್ದರಿಂದ ಅಂತಹ ಬ್ರಾಹ್ಮಣರಿಗೆ ಹವಿಸ್ಸನ್ನು ನೀಡಬಾರದು;  ಏಕೆಂದರೆ ಯಾರೂ ಭಸ್ಮಕ್ಕೆ ಆಹುತಿ ನೀಡುವುದಿಲ್ಲ. ಇದಾಯಿತು ಮಾಸಿಕ ಶ್ರಾದ್ಧದ ರಹಸ್ಯ !

೯. ಪಿತೃಲೋಕದಿಂದ ಬೇರೆಕಡೆಗೆ ಹೋಗಿರುವ, ಅಂದರೆ ಪುನರ್ಜನ್ಮ ಪಡೆದಿರುವ ಪಿತೃಗಳಿಗೆ ನಿತ್ಯ-ಪಿತೃಗಳ ಮೂಲಕ ಸೂಕ್ಷ್ಮ ಅನ್ನವು ತಲುಪಿಸಲಾಗುವುದು

ಕ್ಷಯಾಹ ತಿಥಿಯಂದೂ ಶ್ರಾದ್ಧವನ್ನು ಮಾಡುತ್ತಾರೆ; ಏಕೆಂದರೆ ಪಿತೃಗಳು ಚಂದ್ರಲೋಕದಲ್ಲಿ ಆ ತಿಥಿಯಂದು ಅದೇ ಸ್ಥಾನದಲ್ಲಿ ಸ್ಥಿತರಾಗಿರುತ್ತಾರೆ. ಒಂದು ವೇಳೆ ಅವರು ಪಿತೃಲೋಕದಿಂದ ಬೇರೆ ಕಡೆಗೆ ಹೋಗಿದ್ದರೆ, ಅಂದರೆ ಅವರ ಪುನರ್ಜನ್ಮ ವಾಗಿದ್ದರೂ ನಮ್ಮ ನಿತ್ಯ-ಪಿತೃಗಳಾದ ವಸು, ರುದ್ರ ಹಾಗೂ ಆದಿತ್ಯ ಆ ಅನ್ನವನ್ನು ಪ್ರಾಪ್ತ ಮಾಡಿ ಕೊಂಡು ಅದರ ಫಲವನ್ನು ಪಿತೃಗಳ ವರೆಗೆ ತಲುಪಿಸುತ್ತಾರೆ; ಆದ್ದರಿಂದ ನಾವು ಪಿತಾ, ಪಿತಾಮಹ, ಪ್ರಪಿತಾಮಹರನ್ನು ಅನುಕ್ರಮವಾಗಿ ವಸು, ರುದ್ರ, ಆದಿತ್ಯರ ಸ್ವರೂಪದಲ್ಲಿ ಸಂಕಲ್ಪಗೊಳಿಸುತ್ತೇವೆ. ನಾವು ನಮ್ಮ ಪಿತೃಗಳಿಗೆ ಆ ಕವ್ಯ (ಪಿತೃಗಳಿಗೆ ನೀಡಲಾಗುವ ಅನ್ನಪಿಂಡ) ಎಂಬ ನಿತ್ಯ-ಪಿತೃಗಳ ಮೂಲಕ ಕಳುಹಿಸುತ್ತೇವೆ, ಎಂದು ಇದರ ಅರ್ಥವಾಗುತ್ತದೆ. ಅವರು ಸರ್ವಜ್ಞರಾಗಿರುವುದರಿಂದ ಆ ಅನ್ನಕ್ಕೆ ತತ್ತಧ್ಯೋನಿ ಮಾಡಿ, ಅಂದರೆ ಉಪಯುಕ್ತ ಮಾಡಿ ಆಯಾ ಪಿತೃಗಳಿಗೆ ಕಳುಹಿಸುತ್ತಾರೆ.

೧೦. ಪಾರ್ವಣ ಶ್ರಾದ್ಧ ಅಂದರೆ ಪಿತೃಗಳ ಹಬ್ಬವಾಗಿದ್ದು ಪಿತೃಗಳು ಯಾವುದೇ ಸಮಯದಲ್ಲಿ ಭೋಜನ ಮಾಡಬಹುದು.

ಈಗ ಶಾರದಿಕ ಶ್ರಾದ್ಧದ ರಹಸ್ಯವನ್ನು ತಿಳಿದುಕೊಳ್ಳೋಣ.

ಶಾರದಿಕ ಶ್ರಾದ್ಧಕ್ಕೆ ಪಾರ್ವಣ ಶ್ರಾದ್ಧ ಎಂದು ಹೇಳುತ್ತಾರೆ.  ಪ್ರತೀ ಅಮಾವಾಸ್ಯೆಯ ಅಪರಾಹ್ನದ ಸಮಯದಲ್ಲಿ ನಾವು ಮೃತ ಪಿತೃಶ್ರಾದ್ಧ ಮಾಡುವುದರಿಂದ ಸ್ಥೂಲದಿಂದ ಸೂಕ್ಷ್ಮವಾದ ಪಿತೃಗಳಿಗೆ ಪ್ರತಿದಿನ ಮಧ್ಯಾಹ್ನದ ಸಮಯದಲ್ಲಿ ಅವರ ಸೂಕ್ಷ್ಮ ಅಂಶ ಪ್ರಾಪ್ತವಾಗುತ್ತದೆ. ಶಾರದಿಕ ಶ್ರಾದ್ಧ ಅಥವಾ ಪಾರ್ವಣ ಶ್ರಾದ್ಧದ ದಿನವೆಂದರೆ ಪಿತೃಗಳಿಗೆ ಹಬ್ಬವೇ ಆಗಿರುತ್ತದೆ. ಈ ದಿನಗಳಂದು ಪಿತೃಗಳು ಯಾವುದೇ ಸಮಯದಲ್ಲಿ ಭೋಜನ ಮಾಡುತ್ತಾರೆ, ಉದಾ. ಕೃಷ್ಣಜನ್ಮದ ಉತ್ಸವದ ದಿನದಂದು ಭಕ್ತರಿಗೆ ನಡುರಾತ್ರಿಯಲ್ಲಿಯೂ ಭೋಜನ ಪ್ರಾಪ್ತವಾಗುತ್ತದೆ, ಅದೇ ರೀತಿ ಅಶ್ವಯುಜ ಮಾಸದಲ್ಲಿ ಪಿತೃಗಳ ಹಬ್ಬದ ದಿನವಾಗಿರುವುದರಿಂದ ಅವರಿಗೆ ಈ ದಿನದಂದು ಮಧ್ಯಾಹ್ನಕ್ಕಿಂತ ಬೇರೆ ಸಮಯದಲ್ಲಿಯೂ ಭೋಜನ ಸಿಗುತ್ತದೆ. ಈ ದಿನದಂದು ಚಂದ್ರನು ಪೃಥ್ವಿಗೆ ಸಮೀಪವಿರುತ್ತಾನೆ.

೧೧. ಮನುಷ್ಯ ಹಾಗೂ ಪಿತೃಗಳ ಕಾಲ

ಮನುಷ್ಯನ ಸಮಯ ಪಿತೃಲೋಕದಲ್ಲಿನ ಸಮಯ
೧ ತಾಸು ೨ ನಿಮಿಷಗಳು
ಒಂದು ದಿನ ೪೮ ನಿಮಿಷಗಳು
೩೦ ದಿನ ೨೪ ಗಂಟೆಗಳ ಹಗಲು-ರಾತ್ರಿ
೧೧ ಅ. ಮನುಷ್ಯನ ಶುಕ್ಲ ಹಾಗೂ ಕೃಷ್ಣ ಪಕ್ಷ ಹಾಗೂ ಪಿತೃಗಳ ಪಕ್ಷದ ವೇಳಾಪಟ್ಟಿ

ಸಮಯ ಘಂಟೆಗಳು ಹಾಗೂ ನಿಮಿಷಗಳು
೧. ಶುಕ್ಲತಿಥಿ
ಮಧ್ಯಾಹ್ನ ೧೨:೪೮
೧:೩೬
೨:೨೪
೩:೧೨
ಅಪರಾಹ್ನ ೪:೦೦
೪:೪೮
೫:೩೬
ಸಾಯಂಕಾಲ ೬:೨೪
೭:೧೨
೧೦ ರಾತ್ರಿ ೮೮.೦೦
೧೧ ೮.೪೮
೧೨ ೯.೩೬
೧೩ ೧೦.೨೪
೧೪ ೧೧:೧೨
೧೫ (ಹುಣ್ಣಿಮೆ) ಮಧ್ಯರಾತ್ರಿ ೧೨:೦೦
ಸಮಯ ಘಂಟೆಗಳು ಹಾಗೂ ನಿಮಿಷಗಳು
೨. ಕೃಷ್ಣತಿಥಿ
ಮಧ್ಯರಾತ್ರಿ
೧೨:೪೮
೨:೨೪
೩:೧೨
ಅಪರಾಹ್ನ ೪:೦೦
೪:೪೮
೫:೩೬
ಪ್ರಾತಃ ಸಮಯ ೬:೨೪
೭:೧೨
೧೦ ದಿನ ೮:೦೦
೧೧ ೮:೪೮
೧೨ ೯:೩೬
೧೩ ೧೦:೨೪
೧೪ ೧೧:೧೨
೧೫ ಮಧ್ಯಾಹ್ನ ೧೨

ಇದು ಮೃತಕ ಶ್ರಾದ್ಧದ ರಹಸ್ಯವಾಗಿದೆ, ವಿರೋಧಕರು ಇದನ್ನು ತಿಳಿದುಕೊಳ್ಳದೇ ಅಜ್ಞಾನಿಗಳಂತಿದ್ದು ತಮ್ಮ ಅಲ್ಪಬುದ್ಧಿಯನ್ನು ದರ್ಶಿಸುತ್ತಾರೆ. ಅಗ್ನಿಯು ಪಿತೃಲೋಕದಲ್ಲಿನ ಪಿತೃಗಳಿಗೆ ಸೂಕ್ಷ್ಮ ಹವ್ಯವನ್ನು ಸಮರ್ಪಿಸುತ್ತದೆ.  ಇದಕ್ಕೆ ಕೆಳಗೆ ನೀಡಿದ ವೇದಮಂತ್ರವೂ ಸಾಕ್ಷಿಯಾಗಿದೆ.

ಯೇ ಅಗ್ನಿದಗ್ಧಾ ಯೇ ಅನಗ್ನಿದಗ್ಧಾ ಮಧ್ಯೆ
ದಿವಃ ಸ್ವಧಯಾ ಮಾದಯನ್ತೇ |
ತ್ವಂ ತಾನ್ ವೇತ್ಥ ಯದಿ ತೆ ಜಾತವೇದಃ  ಸ್ವಧಯಾ
ಯಜ್ಞಂ ಸ್ವಧಿತಿಂ  ಜುಶನ್ತಾಮ್ ||
– ಅಥರ್ವವೇದ,  ಕಾಂಡ ೧೮, ಸೂಕ್ತ ೨ ಮಂತ್ರ ೩೫

ಅರ್ಥ : ಮೃತ್ಯುವಿನ ಬಳಿಕ ಅಗ್ನಿಸಂಸ್ಕಾರವಾಗಿರುವ ಹಾಗೂ ಆಗದಿರುವ, ಹೀಗೆ ಇಂದಿನ ತನಕ ನಮ್ಮ ಯಾರೆಲ್ಲಾ ಪಿತೃಗಳು ಆಗಿ ಹೋದರೋ, ಅವರು ನಾವು ಮಾಡಿದ ಪಿಂಡದಾನದಿಂದ ಅಥವಾ ತರ್ಪಣದಿಂದ ತೃಪ್ತರಾಗುತ್ತಾರೆ. ಅಗ್ನಿದೇವನಿಗೆ ಆ ಎಲ್ಲಾ ಪಿತೃಗಳ  ಪರಿಚಯವಿದೆ.  ಹೇ ಅಗ್ನಿದೇವಾ,  ನಾವು ಮಾಡುತ್ತಿರುವ ಈ ಯಜ್ಞಾದಿ ಕಾರ್ಯ (ಪಿತೃಗಳ ತನಕ ತಲುಪಲಿ ಹಾಗೂ ಅವರಿಗೆ ಅವರ ಪಾಲು) ಗ್ರಹಿಸಲು ಸಾಧ್ಯವಾಗಲಿ.

೧೨. ವೇದ ಹಾಗೂ ಶ್ರಾದ್ಧ ಇವುಗಳಲ್ಲಿ ಬಂದಿರುವ ಪಿತೃ ಶಬ್ದವು ಮೃತ-ಪಿತೃವಾಚಕವಾಗಿರುವುದು

ಪಿತೃಣಾಂ ಲೋಕಮಪಿ ಗಚ್ಛನ್ತು ಯೇ ಮೃತಾಃ  |
– ಅಥರ್ವವೇದ, ಕಾಂಡ ೧೨, ಸೂಕ್ತ ೨, ಮಂತ್ರ ೪೫

ಅರ್ಥ : ಯಾರು ಮೃತರಾಗಿರುವರೋ,  ಅವರು ಪಿತೃಲೋಕಕ್ಕೆ ಹೋಗಲಿ.

೧೩. ಮಂತ್ರ ಹಾಗೂ ಸಹಾಯಕ ಘಟಕಗಳಿಂದ ಸಾಮಗ್ರಿಗಳಲ್ಲಿ ಆಕರ್ಷಣೆ ಮತ್ತು ವಿಕರ್ಷಣ ಶಕ್ತಿಯು ನಿರ್ಮಾಣವಾಗುವುದು ಹಾಗೂ ಅದು ಚಂದ್ರಕಾಂತಮಣಿಯಂತೆ ಯಂತ್ರವಾಗುವುದು

ಆ ಮಂತ್ರದಲ್ಲಿನ ಸಹಾಯಕ ಘಟಕವು ಹಾಲು, ತುಪ್ಪ, ಅಕ್ಕಿ, ಜೇನು, ಎಳ್ಳು, ಬೆಳ್ಳಿ, ದರ್ಭೆ, ತುಳಸೀದಳ, ನೀರು ಹಾಗೂ ಮಾಡಿರುವ ಸಂಕಲ್ಪವಿರುತ್ತದೆ. ಪಿತೃಗಳ ಪ್ರತಿನಿಧಿಯಾಗಿ ಮಗ ಅಥವಾ ಮೊಮ್ಮಗನು ಈ ಪದಾರ್ಥಗಳನ್ನು ಸ್ಪರ್ಶಿಸಿ ಅಲ್ಲಿಯೇ ಕುಳಿತುಕೊಳ್ಳುತ್ತಾನೆಂದು ಈ ಎಲ್ಲ ಸಾಮಗ್ರಿಗಳು ಚಂದ್ರಕಾಂತ ಮಣಿಯಂತೆ ಯಂತ್ರ ವಾಗುತ್ತದೆ. ಅವುಗಳಲ್ಲಿ ಆಕರ್ಷಣ ಹಾಗೂ ವಿಕರ್ಷಣ ಶಕ್ತಿಯು ನಿರ್ಮಾಣವಾಗುತ್ತದೆ.

೧೪. ಯಜ್ಞೋಪವೀತವನ್ನು ಬಲ ಭುಜದಲ್ಲಿಡುವುದರ ಅವಶ್ಯಕತೆ

ಪಿತೃಕರ್ಮದ ಸಮಯದಲ್ಲಿ ಯಜ್ಞೋಪವೀತ ವನ್ನು (ಜನಿವಾರ) ಬಲ ಭುಜದಲ್ಲಿ ಧರಿಸುವುದು ಅಗತ್ಯವಾಗಿದೆ.  ಅದರ ಹಿಂದಿನ ಕಾರಣಗಳನ್ನು ಈ ಕೆಳಗೆ ನೀಡಲಾಗಿದೆ.

ಅ. ಶಾರೀರಿಕ ಹಾಗೂ ಮಾನಸಿಕ ಶಕ್ತಿಗಳ ದಿಕ್ಕು ಪಿತೃಲೋಕದಿಂದ ದಕ್ಷಿಣದ ಕಡೆ (ಬಲ ಬದಿಗೆ (ಟಿಪ್ಪಣಿ ೧)) ಹೋಗುವುದಿರುತ್ತದೆ.  ಈ ಶಕ್ತಿಗೆ ಯಜ್ಞೋಪವೀತವು ವೇಗ ನೀಡುವುದು
ಆ.  ಶಾರೀರಿಕ ಹಾಗೂ ಮಾನಸಿಕ ಶಕ್ತಿಯನ್ನು ಸೂರ್ಯ ಕಿರಣಗಳೊಂದಿಗೆ ಒಂದು ದಿಕ್ಕಿಗೆ (ಬಲ ಬದಿಗೆ (ಟಿಪ್ಪಣಿ ೧)) ಕಳುಹಿಸುವುದು.
ಇ. ವೈದಿಕ ವಿಧಿಯಂತೆ ಅವಿಗುಣ (ದೋಷರಹಿತ) ಕರ್ಮದ ಮಾಧ್ಯಮದಿಂದ ವಿಶುದ್ಧ ಅಪೂರ್ವದ ನಿರ್ಮಾಣವಾಗಿ,  ಅಂದರೆ ಅವರ ವಾಸನೆಯನ್ನು ತೃಪ್ತಗೊಳಿಸಿ ದಕ್ಷಿಣ ದಿಕ್ಕಿಗೆ (ಬಲ ಬದಿಗೆ (ಟಿಪ್ಪಣಿ ೧)) ಇರುವ ಪಿತೃಲೋಕದಲ್ಲಿರುವ ಪಿತೃಗಳ ತನಕ ಆ ಶಕ್ತಿಯು ತಕ್ಷಣ ತಲುಪಿಸುವುದು (ಟಿಪ್ಪಣಿ ೧ – ವಿಜ್ಞಾನಿಗಳು ಧಾರ್ಮಿಕ ವಿಧಿ ಮಾಡುವವರು ಪೂರ್ವಕ್ಕೆ ಮುಖ ಮಾಡಿ ಕುಳಿತುಕೊಂಡಿದ್ದಾರೆ, ಎಂದು ಗಮನದಲ್ಲಿಟ್ಟು ದಕ್ಷಿಣ ಬದಿ ಎಂಬ ಶಬ್ದವನ್ನು ಬಲಗಡೆ ಎಂಬ ಅರ್ಥದಲ್ಲಿ ತೆಗೆದುಕೊಂಡಿದ್ದಾರೆ; ಏಕೆಂದರೆ ಪೂರ್ವಾಭಿಮುಖವಾಗಿರುವಾಗ ಬಲಗೈ ಬದಿಯಲ್ಲಿ ದಕ್ಷಿಣ ದಿಕ್ಕು ಬರುತ್ತದೆ. ಆದ್ದರಿಂದ ಸಂಸ್ಕೃತ ದಲ್ಲಿ ಬಲ ಬದಿಗೆ ದಕ್ಷಿಣ ದಿಕ್ಕು ಎಂದು ಹೇಳಲಾಗುತ್ತದೆ. ಮೇಲೆ ಉಲ್ಲೇಖ ಮಾಡಿರುವ ದಕ್ಷಿಣ ಶಬ್ದವು ದಿಶಾವಾಚಕವಾಗಿದೆ. ಇದಕ್ಕೆ ಬಲಬದಿಗೆ ಎಂದು ಅರ್ಥ ತೆಗೆದುಕೊಳ್ಳಲು ಆಗುವುದಿಲ್ಲ.) ಇದರಲ್ಲಿ ಪಿತೃಗಳಿಗೂ ಆವಾಹನೆಯಿರುತ್ತದೆ; ಆದ್ದರಿಂದ ಅವರ ನಿದ್ರೆಯ ಸಮಯದಲ್ಲಿ ಅವರನ್ನು ಕರೆಯಬಾರದು.  ಅವರ ನಿದ್ರೆಯ ಕಾಲಾವಧಿಯು ಶುಕ್ಲ ಪಕ್ಷವಾಗಿರುತ್ತದೆ. ಶಾರದಿಕ ಪಾರ್ವಣ ಶ್ರಾದ್ಧ ಹಾಗೂ ಕ್ಷಯಾಹ ತಿಥಿಗಳನ್ನು ಬಿಟ್ಟು ಅವರು ನಿದ್ರಾವಸ್ಥೆಯಲ್ಲಿರುತ್ತಾರೆ. ಆದ್ದರಿಂದ ಅವರು ನಮ್ಮ ಆವಾಹನೆಯನ್ನು ಕೇಳಿಸಿಕೊಳ್ಳುವುದಿಲ್ಲ. ಬ್ರಾಹ್ಮಣರು ಮಾಧ್ಯಮವಾಗಿರುವುದರಿಂದ ಪಿತೃಗಳು ಕೆಲವೊಮ್ಮೆ ತಮ್ಮ ಉಪದೇಶವನ್ನೂ ಅವರ ಮಾಧ್ಯಮದಿಂದ ಹೇಳುತ್ತಾರೆ.  ಆದ್ದರಿಂದ ನಮ್ಮ ಅನೇಕ ಇಚ್ಛೆ ಆಕಾಂಕ್ಷೆಗಳು (ಮನೋಕಾಮನೆಗಳು) ಈಡೇರುತ್ತದೆ.
************



ಕಾಗೆ ಜನ್ಮ 

ಹಿರಿಯ ಕಂಚಿ ಶ್ರೀಗಳಲ್ಲಿ ಭಕ್ತನೊಬ್ಬ ಪ್ರಶ್ನಿಸಿದನಂತೆ._
" ಸ್ವಾಮೀಜಿ, ನಾವೇಕೆ ಮಹಾಲಯದ ಸಂದರ್ಭ ಕಾಗೆಗಳಿಗೆ ಉಣಬಡಿಸಿ
ಉಪಚರಿಸುತ್ತೇವೆ? ನಮ್ಮ ಪಿತೃಗಳು ಕಾಗೆಗಳ ರೂಪದಲ್ಲಿರುತ್ತಾರ? ಅವರೇಕೆ
ಕಾಗೆಗಳಂಥ ಹೀನ ಜನ್ಮ ತಾಳಬೇಕು?
ಇನ್ಯಾವುದೇ ಶ್ರೇಷ್ಠ ಹಕ್ಕಿಯಾಗಕೂಡದೆ?

ಸ್ವಾಮೀಜಿ ನಸುನಕ್ಕು ಹೇಳಿದರು...

" ಕಾಗೆಯನ್ನು ನಾವು ಕಾಕಾ ಅಂತ ಕರೆಯುತ್ತೇವೆ.ಬೇರಾವುದೇ ಹಕ್ಕಿಯನ್ನು ಅದು ಕೂಗುವ ದನಿಯಿಂದ ಕರೆಯುವ ರೂಢಿ ಇಲ್ಲ. ಗಿಳಿಯನ್ನೂ ಕೀಕೀ ಅನ್ನೆವು.

ಕಾ ಅಂದರೆ ಕಾಪಾಡು ಎಂದರ್ಥ. ನಮ್ಮ ಹಿರಿಯರನ್ನು ಕರೆದು, "ರಕ್ಷಿಸಿ" ಎಂದು ಬೇಡಿಕೊಳ್ಳುವೆವು.

ಕಾಗೆ ಸುಲಭವಾಗಿ ಕಾಣ ಸಿಗುತ್ತದೆ. ಅದಕ್ಕೇ ಕೀಳು ದರ್ಜೆ ಅನ್ನುತ್ತೇವೇನೊ. ಏನು ಕೊಟ್ಟರೂ ತಿನ್ನುತ್ತದೆ. ಅದೊಂದು ಸುಂದರ ಹಕ್ಕಿ ಕೂಡ. ಯಾಕೆ ಗೊತ್ತೆ?

ಸರಿಯಾಗಿ ಬ್ರಾಹ್ಮೀ ಮುಹೂರ್ತದಲ್ಲಿ ಎದ್ದೇಳುವ ಹಕ್ಕಿ ಅದೊಂದೇ. ಸದಾ ಮಂಕಾಗಿರುವ ಕೋಳಿಯೂ ತಡವಾಗಿ ಕೂಗುವುದು.

ಬ್ರಾಹ್ಮೀ ಮುಹೂರ್ತದಲ್ಲಿ ನೀವು ಧ್ಯಾನ ಮಾಡಲು ಅದು ಪ್ರೇರಣೆ.

ಆಹಾರ ಸಿಕ್ಕಿದರೆ ಅದು ತನ್ನ ಬಳಗವನ್ನೇ ಕರೆಯುತ್ತದೆ.

ಸಂಜೆಯಾದಾಗ ತನಗೆ ಆಹಾರ ಕರುಣಿಸಿದ ದೇವರಿಗೆ ಕಾಕಾ ಎಂದು ಧನ್ಯವಾದ ಹೇಳುತ್ತದೆ.

ಶಾಸ್ತ್ರವನ್ನು ಅನುಸರಿಸುವ ಕಾಗೆ ಸಂಜೆ ಆದ ನಂತರ ಆಹಾರ ಮುಟ್ಟದು. ಈ ಉತ್ತಮ ಸಂಪ್ರದಾಯವನ್ನು ಪಾಲಿಸುವ ಜನರು ವಿರಳವಾಗುತ್ತಿದ್ದಾರೆ. ಆದ್ದರಿಂದಲೇ ಇವುಗಳನ್ನು ಪಿತೃ ರೂಪಿಗಳೆಂದು ಕಾಣುತ್ತಾರೆ.

ದಿನಾ ಕಾಗೆಗೆ ಆಹಾರ ಕೊಟ್ಟು ನೋಡಿ.ತುಂಬ ಖುಶಿ ಪಡುತ್ತದೆ. ನೀವೂ ಸಂತೃಪ್ತಿ ಹೊಂದುತ್ತೀರಿ. 
****

read ಓದಿರಿ-> ಪಕ್ಷಮಾಸದ ಚಿಂತನೆ


ನಿಜವಾಗಿಯೂ ಪಿತೃಕಾರ್ಯ, ಪಿತೃಪಕ್ಷವೆಂದರೇನು ?






*******

ಮಾಘ ಅಮಾವಾಸ್ಯಾದಂದು ಧನಿಷ್ಠಾ ನಕ್ಷತ್ರವಿದ್ದರೆ:-  ಇದಕ್ಕೆ ಯಾವುದೇ ರೂಢ ಹೆಸರು ಇಲ್ಲ.
ಆದರೆ ಪ್ರಮಾಣಗಳಲ್ಲಿ (ವಿಷ್ಣುಪುರಾಣ-ವರಾಹಪುರಾಣ) ಇದರ ಬಗ್ಗೆ ಮಹತ್ತ್ವವನ್ನು ಹೀಗೆ ಹೇಳಿದ್ದಾರೆ -

माघासिते पञ्चदशी कदाचिदुपैति योगं यदि वारुणेन ।
ऋक्षेण कालः परमः पितॄणां न त्वल्पपुण्यैर्द्विज लभ्यतेऽसौ ।। १३.४५ ।।

काले धनिष्ठा यदि नाम तस्मिन् भवेत्तु विप्रेन्द्र सदा पितृभ्यः ।
दत्तं जलान्नं प्रददाति तृप्तिं वर्षायुतं तत्कुलजैर्मनुष्यैः ।। १३.४६ ।।

तत्रैव चेद् भाद्रपदास्तु पूर्वाः काले तदा यैः क्रियते पितृभ्यः ।
श्राद्धं परा तृप्तिमुपेत्य तेन युगं समग्रं पितरः स्वपन्ति ।।

ಮಾಘಮಾಸ ಆಮಾವಾಸ್ಯಾದಂದು -----
1. ಶತಭಿಷಾ ನಕ್ಷತ್ರ - ಪಿತೃಗಳಿಗೆ ತೃಪ್ತಿ - ಅಲ್ಪಪುಣ್ಯದಿಂದ ಸಿಗುವುದಿಲ್ಲ.

2. ಧನಿಷ್ಠಾ ನಕ್ಷತ್ರ - ಪಿತೃಗಳಿಗೆ ತೃಪ್ತಿ - ಹತ್ತುಸಾವಿರ ವರ್ಷದವರೆಗೆ ತೃಪ್ತಿ.

3. ಪೂರ್ವಾಭಾದ್ರಪದಾ ನಕ್ಷತ್ರ - ಪಿತೃಗಳಿಗೆ ತೃಪ್ತಿ - ಒಂದು ಯುಗದವರೆಗೆ ತೃಪ್ತಿ.


ಇದಲ್ಲದೇ ಅಮಾವಾಸ್ಯೆಗೆ ಸಂಬಂಧ ಪಟ್ಟ ಇನ್ನೂ ಕೆಲವು ಯೋಗಗಳು ಹೀಗಿವೆ -

अमावास्यां भवेद्वारो यदा भूमिसुतस्य वै । जाह्नवीस्नानमात्रेण गोसहस्रफलं लभेत् ॥ वी.मि
ಸರ್ವಮಾಸದ ಅಮಾವಾಸ್ಯಾ - ಮಂಗಳವಾರ - ಗಂಗಾಸ್ನಾನ - ಗೋಸಹಸ್ರದಾನದ ಫಲ.

अमा सोमेन भौमेन गुरुणा रविणा तथा । तत्तीर्थं पुष्करं नाम सूर्यग्रहशताधिकम् ॥ वी.मि
अमा सोमेन भौमेन गुरुणा रविणा तथा । तत्पर्व पद्मकं नाम सूर्यग्रहशताधिकम् ॥ स्मृ.मु
ಸರ್ವಮಾಸದ ಅಮಾವಾಸ್ಯಾ - ಸೋಮವಾರ, ಮಂಗಳವಾರ, ಗುರುವಾರ, ರವಿವಾರ- ಪುಷ್ಕರ ಅಥವಾ ಪದ್ಮಕ ಯೋಗ - ನೂರುಸೂರ್ಯಗ್ರಹಣದ ಪುಣ್ಯ.

कृते तु गुरुणा युक्ता त्रेतायां भौमसंयुता । द्वापरे रवियुक्ता सा पुण्या सोमयुता कलौ । 
रविवारयुता पुण्या कलावपि च कीर्तिता ।। स्मृ.मु
ಕಲಿಯುಗದಲ್ಲಿ - ಸರ್ವಮಾಸ ಅಮಾವಾಸ್ಯಾ - ಸೋಮವಾರ, ರವಿವಾರ - ಪುಷ್ಕರ ಅಥವಾ ಪದ್ಮಕ ಯೋಗ - ನೂರುಸೂರ್ಯಗ್ರಹಣದ ಪುಣ್ಯ.

अमावास्या यदा मैत्रविशाखाऋक्षयोगिनी । श्राद्धे पितृगणस्तृप्तिं तद��



अमावास्या यदा मैत्रविशाखाऋक्षयोगिनी । श्राद्धे पितृगणस्तृप्तिं तदाप्नोत्यष्टवार्षिकीम् ॥
ಸರ್ವಮಾಸದ ಅಮಾವಾಸ್ಯಾ - ವಿಶಾಖಾ ಅಥವಾ ಅನುರಾಧಾ - ಎಂಟು ವರ್ಷದ ಶ್ರಾದ್ಧದ ಫಲ.

अमावास्या यदा पुष्ये रौद्रर्क्षे वा पुनर्वसौ । द्वादशाब्दीं तथा तृप्तिं प्रयान्ति पितरोऽर्च्चिताः ॥ वी.मि
ಸರ್ವಮಾಸದ ಅಮಾವಾಸ್ಯಾ - ಪುಷ್ಯ, ಆರ್ದ್ರಾ, ಪುನರ್ವಸು - 12 ವರ್ಷದ ಶ್ರಾದ್ಧದ ಫಲ.

वासवाजैकपादर्क्षे पितॄणां तृप्तिमिच्छता । वारुणे वाऽऽप्यदैवत्ये देवानामपि दुर्ल्लभा || वी.मि
ಸರ್ವಮಾಸದ ಅಮಾವಾಸ್ಯಾ - ಧನಿಷ್ಠಾ, ಪೂರ್ವಾಭಾದ್ರಪದಾ, ಶತಭಿಷಾ, ಪೂರ್ವಾಷಾಢಾ- ದೇವನಾಮಪಿ ದುರ್ಲಭಾ.

अमार्कपातश्रवणैर्युक्ता चेत्पुष्यमाघयोः । अर्धोदयः स विज्ञेयः कोटिसूर्यग्रहैः समः ॥ दिवैव योगः शस्तोऽयं न तु रात्रौ कदाचन । वी.मि
ಮಾಘ ಮತ್ತು ಪೌಷ ಅಮಾವಾಸ್ಯಾ - ರವಿವಾರ+ಶ್ರವಣಾ+ವ್ಯತೀಪಾತ - ಅರ್ಧೋದಯ- ಸ್ನಾನ, ದಾನ, ಶ್ರಾದ್ಧ- ಕೋಟಿಸೂರ್ಯಗ್ರಹ.

ಯಾರು ಯಾರಿಗೆ ಯಾವುದು ಯಾವುದು ಆಗತ್ತೋ ಅವುಗಳನ್ನು ನೋಡಿ ಮಾಡಿ.

**********


Amavasya Day

ಶ್ರೀಂ ಶ್ರೀ ಕಂ ಕಪಿಲಾಯ ನಮಃ
ದೇವಕಾರ್ಯಾದಪಿ ಮುನೇ ಪಿತೃಕಾರ್ಯಂ ವಿಶಿಷ್ಟ್ಯತೇ 

ಎಂಬ ಶ್ರೀಮದ್ ವೇದವ್ಯಾಸದೇವರ ವಾಕ್ಯದಂತೆ, ದೇವಕಾರ್ಯಕ್ಕಿಂತಲೂ ಪಿತೃಕಾರ್ಯ ವಿಶೇಷವಾದದ್ದು. ದೇವರ ಪೂಜೆ ಇತ್ಯಾದಿಗಳನ್ನು ಖಂಡಿತಾ ಶ್ರದ್ಧೆಯಿಂದಲೇ ಮಾಡಬೇಕು. ಆದರೆ ಪಿತೃಕಾರ್ಯಗಳಲ್ಲಿ ಇನ್ನೂ ಅಧಿಕವಾದ ಶ್ರದ್ಧೆ ಇರಲೇಬೇಕು. 
ಶ್ರದ್ಧೆಯಿಂದ ಮಾಡುವುದೇ ಶ್ರಾದ್ಧ 

ಈ ಮಹಾಲಯದ ಸಂದರ್ಭದಲ್ಲಿ ಅಪರಪಕ್ಷದ ಈ ಸಂದರ್ಭದಲ್ಲಿ ಎಲ್ಲ ಪಿತೃಗಳಿಗೆ ಪ್ರಿಯವಾದ 96 ಶ್ರಾದ್ಧಗಳ ನಿಯಾಮಕನಾದ, ಅಂತರ್ಗತನಾದ ಷಣ್ಣವತಿ ನಾಮಕ ಪರಮಾತ್ಮನ ವಿಶೇಷ ರೂಪಗಳ ಸ್ಮರಣೆ ಮಾಡುವಂತಾಗಲಿ.

ಷಣ್ಣವತಿ ನಾಮಕನಾದ ಪರಮಾತ್ಮನು ವಸು ರುದ್ರ,ಆದಿತ್ಯರಲ್ಲಿ ನೆಲೆಸಿ ತನ್ನ ಭಕ್ತರು ಪ್ರತಿನಿತ್ಯ ಶ್ರದ್ಧೆಯಿಂದ, ಭಕ್ತಿಯಿಂದ,  ಕಲ್ಮಷರಹಿತನಾಗಿ ಮಾಡುವ ಪುಣ್ಯ ಕರ್ಮಗಳನ್ನು ಸ್ವೀಕರಿಸುವನಾಗಿದ್ದಾನೆ. ಅದರಿಂದ ಪಿತೃಗಳಿಗೆ ಸುಖವನ್ನು ನೀಡುವನಾಗಿದ್ದಾನೆ.

ಇಂದು ವಿಶೇಷವಾಗಿ
ಶ್ರೀ ವಿಜಯ ಪ್ರಭುಗಳ ಪೈತೃಕ ಸುಳಾದಿ,  ಶ್ರೀ ಮಾನವಿ ಪ್ರಭುಗಳ  ಪಿತೃಗಣಸಂಧಿ  ಪಾರಾಯಣ ನಮ್ಮಿಂದ ಆಗುವಂತಾಗಲಿ ಎಂದು ಭಕ್ತಿಯಿಂದ ಬೇಡೋಣ..

ಹಾಗೆಯೇ ಶ್ರೀಮದಾಚಾರ್ಯರ ನೇರ ಶಿಷ್ಯರಾದ ಶ್ರೀಮನ್ ಮಾಧವತೀರ್ಥ ಗುರುಸಾರ್ವಭೌಮರ ಮಧ್ಯಾರಾಧನೆಯ ಶುಭಸ್ಮರಣೆಗಳು..

ಪಿತೃಗಳ ಎಲ್ಲರ ಅನುಗ್ರಹ ಸದಾ ನಮಗಿರಲಿ ಎಂದು , ಶ್ರೀಮನ್ ಮಾಧವತೀರ್ಥ ಗುರುಸಾರ್ವಭೌಮರ ಅನುಗ್ರಹ ಸದಾ ನಮಗಾಗಲಿ ಎಂದು ಪ್ರಾರ್ಥನೆ ಮಾಡುತ್ತಾ..


ನಾದನೀರಾಜನದಿಂ ದಾಸಸುರಭಿ  🙏🏽'
****

ಏಕೆ ಈ 15 ದಿನಗಳನ್ನೇ ಪಿತೃಪಕ್ಷ ಎನ್ನುತ್ತಾರೆ ?*

ಚಾಂದ್ರಮಾನ ಕಾಲ ಗಣನೆ ಪದ್ಧತಿಯಲ್ಲಿ ಒಂದು ತಿಂಗಳ ಎರಡು 15 ದಿನಗಳ ಅವಧಿಗಳನ್ನು ಪಕ್ಷ ಎಂದು ಕರೆಯುತ್ತಾರೆ. ಪೂರ್ಣಿಮೆಯಲ್ಲಿ ಕೊನೆಗೊಳ್ಳುವ ಅವಧಿಯು ಶುಕ್ಲ ಪಕ್ಷ ಎಂದೂ ಅಮಾವಾಸ್ಯೆಯಲ್ಲಿ ಕೊನೆಗೊಳ್ಳುವ ಅವಧಿಯು ಕೃಷ್ಣ ಪಕ್ಷ ಎಂದೂ ಕರೆಯಲ್ಪಡುತ್ತದೆ. ಭಾದ್ರಪದ ಮಾಸದ ಕೃಷ್ಣ ಪಕ್ಷಕ್ಕೆ ಪಿತೃ ಪಕ್ಷ ಎಂದು ಹೆಸರು ಮತ್ತು ಈ ಪಕ್ಷದ ಅಮಾವಾಸ್ಯೆಯು ಮಹಾಲಯ ಅಮಾವಾಸ್ಯೆ ಎಂದು ಕರೆಯಲ್ಪಟ್ಟು ಉಳಿದ ಅಮಾವಾಸ್ಯೆಗಳಿಗಿಂತ ವಿಶೇಷವಾಗಿ ಆಚರಿಸಲ್ಪಡುತ್ತದೆ.

*ಏಕೆ ಈ 15 ದಿನಗಳನ್ನೇ ಪಿತೃಪಕ್ಷ ಎನ್ನುತ್ತಾರೆ ಮತ್ತು ಈ ಪಿತೃ ಪಕ್ಷಕ್ಕೆ ಏಕೆ ಇಷ್ಟು ಮಹತ್ವ ?*

ಇದಕ್ಕೆ ಎರಡು ಕಾರಣಗಳಿವೆ: ಈ ಪಕ್ಷದಲ್ಲಿಆಚರಿಸುವ ಪಿತೃ ಕಾರ್ಯಗಳು ಪಂಚ ಮಹಾ ಯಜ್ಞಗಳಲ್ಲಿ ಒಂದಾಗಿರುವುದರಿಂದ ಈ ಪಕ್ಷಕ್ಕೆ ಒಂದು ಮಹತ್ವವುಂಟು.

*ಪಂಚ ಮಹಾಯಜ್ಞ *…
ಪಂಚ ಮಹಾಯಜ್ಞ ಎಂದರೇನು ?
ಮಹರ್ಷಿ ಸಂಸ್ಕೃತಿಯಲ್ಲಿ ಭಗವಂತನನ್ನು ಆರಾಧಿಸುವ ವಿಧಾನಗಳಲ್ಲಿ ನೇರವಾಗಿ ಭಗವಂತನನ್ನೇ ಆರಾಧಿಸುವುದು ಒಂದು ಬಗೆಯಾದರೆ, ಅವನ ಅನುಗ್ರಹ ನಮ್ಮವರೆವಿಗೆ ಹರಿದು ಬರುವ ದ್ವಾರಗಳನ್ನು ಆರಾಧಿಸಿ ತನ್ಮೂಲಕ ನಮ್ಮ ಆರಾಧನೆ ಭಗವಂತನಿಗೆ ತಲಪುವ ಹಾಗೆ ಮಾಡುವುದು ಮತ್ತೊಂದು ವಿಧಾನ. ಈ ಎರಡನೆಯ ವಿಧಾನದಲ್ಲಿ, ಮನುಷ್ಯನ ಪೋಷಣೆ, ರಕ್ಷಣೆಗಾಗಿ ಭಗವಂತನ ಅನುಗ್ರಹ ಹರಿದು ಬರುವ 5 ದ್ವಾರಗಳನ್ನು ಗೌರವಿಸುವುದು ಅಥವಾ ಪೂಜಿಸುವುದು ಪಂಚಮಹಾಯಜ್ಞಗಳೆನ್ನಿಸಿಕೊಳ್ಳುತ್ತದೆ.

ಒಬ್ಬ ಮನುಷ್ಯ ಹುಟ್ಟಿ, ಬೆಳೆದು ಸಾರ್ಥಕ ಜೀವನ ನಿರ್ವಹಿಸಲು ಆತನಿಗೆ ಅನೇಕ ವಿಧವಾದ ಪೋಷಣೆ, ಸಹಕಾರಗಳು ಅವಶ್ಯಕವಾಗಿದ್ದು ಭಗವಂತನ ಅನುಗ್ರಹದಿಂದ ದೊರೆಯುತ್ತದೆ. ಒಂದು ಮಗು ಹುಟ್ಟಿದೊಡನೆಯೇ ಅದಕ್ಕೆ ಯಾರೂ ಹೇಳಿಕೊಡದಿದ್ದರೂ ತನ್ನದೇ ಸಹಜ ಪ್ರೇರಣೆಯಿಂದ ಸ್ತನ್ಯಪಾನ ಮಾಡುತ್ತದೆ. ನಂತರ ತಾನಾಗಿಯೇ ನೋಡುವುದು, ನಡೆಯುವುದು, ಮಾತಾನಾಡುವುದನ್ನೆಲ್ಲಾ ಕಲಿತುಕೊಳ್ಳುತ್ತದೆ. ಮಾತನ್ನು ಕಲಿಯುವಾಗ ಸುತ್ತಮುತ್ತಲಿನ ಜನರ ಮಾತನ್ನು ಕೇಳುತ್ತಾ ಮಾತನ್ನು ಕಲಿತರೂ ಕಲಿಯುವಿಕೆಯು ಆಗುವುದು ತನ್ನೊಳಗೇ ಇರುವು ಸಹಜ ಪ್ರವೃತ್ತಿಯ ದೆಸೆಯಿಂದಲೇ ಹೊರತು ಒಬ್ಬ ವ್ಯಕ್ತಿ ಕಲಿತಿರುವ ಅಥವಾ ಆಡುವ ಅಷ್ಟೂ ಮಾತನ್ನು ಯಾರೂ ಹೊರಗಡೆಯಿಂದ ಹೇಳಿಕೊಡಲಿಕ್ಕಾಗುವುದಿಲ್ಲ.

ಈ ಉದಾಹರಣೆಯನ್ನು ವಿಸ್ತರಿಸಿ ಗಮನಿಸಿದಾಗ, ನಮ್ಮ ಎಲ್ಲಾ ಇಂದ್ರಿಯ ಮನಸ್ಸುಗಳ ಕಾರ್ಯನಿರ್ವಹಣೆ ನಮ್ಮೊಳಗಿನ ಪ್ರೇರಣೆಯಿಂದಲೇ ನಡೆಯುತ್ತಿರುತ್ತದೆ. ನಮ್ಮೊಳಗೇ ಶಕ್ತಿ ರೂಪದಲ್ಲಿದ್ದು, ಇಂದ್ರಿಯ ಮನಸ್ಸುಗಳಿಗೆ ಪ್ರೇರಣೆ ನೀಡುವವರನ್ನು ದೇವತೆಗಳು ಎನ್ನುತ್ತೇವೆ. ದೇವತೆಗಳು ಭಗವಂತನ ಅನುಗ್ರಹ ಹರಿಯಲು ಇರುವ ಒಂದು ದ್ವಾರ ಮತ್ತು ಇವರಿಗೆ ಕೃತಜ್ಞತೆ ಸಲ್ಲಿಸುವ ನಾನಾ ವಿಧಗಳನ್ನು ದೇವ ಯಜ್ಞ ಎನ್ನುತ್ತೇವೆ. ಇದೇ ರೀತಿ, ಒಬ್ಬ ವ್ಯಕ್ತಿ ತನ್ನ ಸಾಮಾಜಿಕ ಜೀವನದಲ್ಲಿ ನಾನಾ ಪಾತ್ರ ವಹಿಸಿದರೂ, ತನ್ನ ಮಕ್ಕಳ ವಿಷಯಕ್ಕೆ ಬಂದಾಗ ಅತನಲ್ಲಿಮತ್ತು ಆಕೆಯಲ್ಲಿ ತಂದೆತನ ಮತ್ತು ತಾಯಿತನ ಇರುತ್ತದೆ.

ಈ ತಂದೆತನ, ತಾಯ್ತನದ ಪ್ರವೃತ್ತಿ ಒಬ್ಬ ವ್ಯಕ್ತಿಯಲ್ಲಿ ಉಂಟಾಗುವುದು ಆತನ ಒಳಗೇ ಇರುವ ಪಿತೃ ದೇವತೆಗಳೆಂಬ ಶಕ್ತಿಗಳಿಂದ. ಒಬ್ಬ ಮನುಷ್ಯ ಹುಟ್ಟಿದ ನಂತರ ಆತನ ಅಥವಾ ಆಕೆಯ ಪಾಲನೆ, ಪೋಷಣೆಯನ್ನು ಪಿತೃದೇವತೆಗಳು ಪ್ರತ್ಯಕ್ಷವಾಗಿ ತಂದೆ, ತಾಯಿಯ ರೂಪದಲ್ಲೂ, ಪರೋಕ್ಷವಾಗಿ ದೇಹದೊಳಗೆ ಶಕ್ತಿರೂಪದಲ್ಲೂ ನೀಡುತ್ತಿರುತ್ತಾರೆ. ಇವರಿಗೆ ಕೃತಜ್ಞತೆ ಸಲ್ಲಿಸುವುದನ್ನು ಪಿತೃಯಜ್ಞ ಎನ್ನುತ್ತಾರೆ. ಹೀಗೆಯೇ ಒಬ್ಬ ಮನುಷ್ಯನ ಜ್ಞಾನ ಸಾಧನೆಗೆ ಋಷಿಗಳು ಹೊರಗಿನಿಂದಲೂ, ಒಳಗಿನಿಂದಲೂ ಕಾರಣರಾಗಿರುತ್ತಾರೆ ಮತ್ತು ಇವರಿಗೆ ಕೃತಜ್ಞತೆ ಸಲ್ಲಿಸುವುದನ್ನು ಬ್ರಹ್ಮ ಯಜ್ಞ ಅಥವಾ ಜ್ಞಾನ ಯಜ್ಞ ಎನ್ನುತ್ತಾರೆ. ಇದಲ್ಲದೇ ಒಬ್ಬ ಮನುಷ್ಯ ಸಮರ್ಥ ಜೀವನ ನಡೆಸುವಲ್ಲಿಅನೇಕ ಮನುಷ್ಯರ ಪರಿಶ್ರಮ ಪಾತ್ರ ವಹಿಸಿರುತ್ತದೆ.

ಒಬ್ಬ ವ್ಯಕ್ತಿ ಒಂದು ಹೊತ್ತಿನ ಆಹಾರ ಸೇವನೆ ಮಾಡಬೇಕಾದರೆ ಹಲವರ ಪಾತ್ರವಿರುತ್ತದೆ.ಇದೇ ರೀತಿಯಲ್ಲಿ ನಮ್ಮ ವಸತಿ, ಬಟ್ಟೆ, ಶಿಕ್ಷಣ, ಮನೋರಂಜನೆ, ಸಂಪಾದನೆ ಮುಂತಾದ ಪ್ರತಿ ಕ್ಷೇತ್ರದಲ್ಲೂ ಅನೇಕಾನೇಕ ಮನುಷ್ಯರ ಪರಿಶ್ರಮ ಪಾತ್ರ ವಹಿಸಿರುತ್ತದೆ. ಇದಕ್ಕೆ ಪ್ರತಿಕ್ರಿಯೆಯಾಗಿ ಅತಿಥಿ ಸತ್ಕಾರದ ಮೂಲಕ ಮನುಷ್ಯರನ್ನು ಸತ್ಕರಿಸುವುದು ಮನುಷ್ಯ ಯಜ್ಞವೆನಿಸಿಕೊಳ್ಳುತ್ತದೆ. ಹೀಗೆಯೇ ಪಶು ಪಕ್ಷಿಗಳೂ ಸಹ ನಮ್ಮ ಪಾಲನೆ ಪೋಷಣೆಗೆ ಕಾರಣವಾಗಿರುತ್ತದೆ. ಪಶುಪಕ್ಷಿಗಳಿಗೆ ಆಹಾರ ನೀಡುವುದನ್ನು ಭೂತ ಯಜ್ಞ ಎನ್ನುತ್ತಾರೆ. ಹೀಗೆ ಭಗವಂತನ ಪೋಷಣೆ ನಮಗೆ ತಲಪುವ ದ್ವಾರಗಳಲ್ಲಿ 5 ಮುಖ್ಯ ದ್ವಾರಗಳಾದ - ದೇವತೆಗಳು, ಪಿತೃಗಳು, ಋುಷಿಗಳು, ಮನುಷ್ಯರು ಮತ್ತು ಪಶುಪಕ್ಷಿಗಳನ್ನು ಅರಾಧಿಸುವುದನ್ನು, ಸತ್ಕರಿಸುವುದನ್ನು ಪಂಚ ಮಹಾ ಯಜ್ಞಗಳೆಂದು ಕರೆಯುತ್ತಾರೆ. ಈ ಐದರಲ್ಲಿಒಂದಾಗಿರುವುದರಿಂದ ಪಿತೃ ಯಜ್ಞಕ್ಕೆ ಒಂದು ಮಹತ್ವ.

2. ಎರಡನೆಯದಾಗಿ, ಈ ಹದಿನೈದು ದಿನಗಳಿಗೆ ಕಾಲದ ದೃಷಿಯಿಂದಲೂ ಒಂದು ಮಹತ್ವ ಉಂಟು. ಹೇಗೆ ಒಂದು ದಿನದಲ್ಲಿ ರಾತ್ರಿ ಕಾಲ ನಿದ್ರೆಗೂ, ಹಗಲು ಪ್ರವೃತ್ತ ಜೀವನಕ್ಕೂ ಮತ್ತು ಸಂಧ್ಯಾ ಕಾಲ ಭಗವಂತನ ಆರಾಧನೆಗೂ ಸೂಕ್ತವಾಗಿದೆಯೋ ಹಾಗೆಯೇ ಒಂದು ವರ್ಷದ ಕೆಲವು ದಿನಗಳಲ್ಲಿ ಕೆಲವು ದೇವತೆಗಳ ಅನುಗ್ರಹವು ವಿಶೇಷವಾಗಿ ಹರಿಯುತ್ತಿದ್ದು ಆಯಾ ದೇವತೆಯ ವಿಶೇಷ ಆರಾಧನೆಗೆ ಪ್ರಶಸ್ತ ಎಂದು ಪರಿಗಣಿಸಲ್ಪಡುತ್ತದೆ. ಈ ವಿಶೇಷ ದಿನಗಳನ್ನು ಪರ್ವ ಅಥವಾ ಹಬ್ಬ ಎಂದು ಆಯಾ ದೇವತೆಯ ಹೆಸರಿನಿಂದ, ರಾಮ ನವಮೀ, ಕೃಷ್ಣಾಷ್ಟಮಿ, ಗಣೇಶ ಚತುರ್ಥಿ ಮೊದಲಾಗಿ ಕರೆಯುತ್ತಾರೆ. ಈ ನೇರದಲ್ಲಿ ಪಿತೃ ದೇವತೆಗಳ ಸಾನ್ನಿಧ್ಯ ವಿಶೇಷವಾಗಿ ಕೂಡಿ ಬಂದು ಅವರ ಅನುಗ್ರಹ ಹರಿಯುವುದಕ್ಕೆ ವಿಶೇಷವಾಗಿರುವ ಅವಧಿ ಎಂದರೆ ಈ ಪಿತೃ ಪಕ್ಷ. ಈ ಕಾಲಾವಧಿಯಲ್ಲಿ ಪಂಚ ಮಹಾ ಯಜ್ಞಗಳಲ್ಲೊಂದಾದ ಪಿತೃ ಯಜ್ಞದ ಆಚರಣೆ ವಿಶೇಷ ಫಲವನ್ನು ನೀಡುವುದರಿಂದ ಪಿತೃ ಪಕ್ಷವು ಮಹತ್ವವನ್ನು ಪಡೆಯುತ್ತದೆ.
****

🕉️ ಓಂ ಶ್ರೀ ಗುರುಭ್ಯೋ ನಮಃ 🕉️ ‌    ‌                ‌                                  ‌                                                                     
ಅವಿಧವಾ ನವಮೀ ಶ್ರಾದ್ಧ: ಇದರ ಮಹತ್ವ ಹಾಗೂ ವಿಶೇಷತೆಗಳೇನು? 
 ‌                                                                                                                        ಪಿತೃಪಕ್ಷದ ಒಂಭತ್ತನೇ ದಿನ ಅಂದರೆ ನವಮಿಯಂದು ಮಾಡುವ ಸಂಸ್ಕಾರವೇ ಅವಿಧವಾ ನವಮೀ ಶ್ರಾದ್ಧ. ಪತಿಗಿಂತ ಮೊದಲೇ ನಿಧನ ಹೊಂದಿದ ಸ್ತ್ರೀಯರ ಶ್ರಾದ್ಧವನ್ನು ಈ ದಿನ ಮಾಡಲಾಗುತ್ತದೆ.
    
ತಾಯಿತಂದೆ, ಪೂರ್ವಜರ ಹಾಗೂ ಸಂಬಂಧಿಕರ ಮರಣೋತ್ತರ ಪ್ರಯಾಣವು ಸುಖಕರವಾಗಿರಲಿ ಹಾಗೂ ಅವರಿಗೆ ಸದ್ಗತಿಯು ಸಿಗಲೀ ಎಂದು ಮಾಡುವ ಸಂಸ್ಕಾರಕ್ಕೆ ಶ್ರಾದ್ಧ ಎನ್ನುತ್ತಾರೆ. ಶ್ರಾದ್ಧಕರ್ಮಗಳಲ್ಲಿನ ಮಂತ್ರೋಚ್ಛಾರಗಳಲ್ಲಿ ಪಿತೃಗಳಿಗೆ ಗತಿ ನೀಡುವ ಸೂಕ್ಷ್ಮಶಕ್ತಿ ಇದ್ದು, ಶ್ರಾದ್ಧಕರ್ಮಗಳಲ್ಲಿ ಪಿತೃಗಳಿಗೆ ಹವಿರ್ಭಾಗವನ್ನು ಕೊಡುವುದರಿಂದ ಅವರು ಸಂತುಷ್ಟರಾಗುತ್ತಾರೆ.

ಭಾದ್ರಪದ ಮಾಸದ ಕೃಷ್ಣ ಪಕ್ಷವನ್ನು ಪಿತೃಪಕ್ಷ ಎಂದು ಕರೆಯುತ್ತಾರೆ ಹಾಗೂ ಈ ಪಕ್ಷದ ಅಮಾವಾಸ್ಯೆಯನ್ನು 'ಮಹಾಲಯ ಅಮಾವಾಸ್ಯೆ' ಎಂದೂ ಕರೆಯುತ್ತಾರೆ. ಈ ಪಕ್ಷದಲ್ಲಿ ಆಚರಿಸುವಂತಹ ಪಿತೃ ಕಾರ್ಯಗಳು ಪಂಚ ಮಹಾ ಯಜ್ಞಗಳಲ್ಲಿ ಒಂದಾಗಿರುವುದರಿಂದ ಪಿತೃಪಕ್ಷಕ್ಕೆ ಬಹಳ ಮಹತ್ವವನ್ನು ನೀಡಲಾಗುತ್ತದೆ.

ಪಿತೃಪಕ್ಷದ ಒಂಭತ್ತನೇ ದಿನ ಅಂದರೆ ನವಮಿಯಂದು ಮಾಡುವ ಸಂಸ್ಕಾರವೇ ಅವಿಧವಾ ನವಮೀ ಶ್ರಾದ್ಧ. ಪತಿಗಿಂತ ಮೊದಲೇ ನಿಧನ ಹೊಂದಿದ ಸ್ತ್ರೀಯರ ಶ್ರಾದ್ಧವನ್ನು ಈ ದಿನ ಮಾಡಲಾಗುತ್ತದೆ. ಕರ್ನಾಟಕ, ಆಂಧ್ರಪ್ರದೇಶ, ಗುಜರಾತ್‌, ಮಹಾರಾಷ್ಟ್ರಗಳಲ್ಲಿ ಅವಿಧವಾ ನವಮೀ ಶ್ರಾದ್ಧವನ್ನು ಭಾದ್ರಪದ ಕೃಷ್ಣಪಕ್ಷದ ನವಮಿಯಂದು ಮಾಡಿದರೆ, ಉತ್ತರ ಭಾರತದ ಕಡೆ ಅಶ್ವಿನ್‌ ಕೃಷ್ಣಪಕ್ಷದಂದು ಮಾಡುತ್ತಾರೆ. 

ಅವಿಧವಾ ನವಮೀ ಶ್ರಾದ್ಧದ ಮಹತ್ವ

ಅವಿಧವಾ ಎಂದರೆ ' ವಿಧವೆಯಲ್ಲದವರು' ಅಂದರೆ 'ಸುಮಂಗಲಿ' ಎಂದರ್ಥ. ಅವಿಧವಾ ನವಮೀ ಶ್ರಾದ್ಧವನ್ನು ಸುಮಂಗಲಿಯಾಗಿ ಮರಣಿಸಿದ ಸ್ತ್ರೀಗೆ ಮಾಡಲಾಗುತ್ತದೆ. ಈ ಆಚರಣೆಯು ಮರಣಾನಂತರ ಸ್ತ್ರೀಯ ಆತ್ಮಕ್ಕೆ ಶಾಂತಿಯನ್ನು ನೀಡುತ್ತದೆ ಹಾಗೂ ಮಡಿದ ಸ್ತ್ರೀಯು ತನ್ನ ವಂಶಕ್ಕೆ ಆಶೀರ್ವಾದ ಮಾಡುತ್ತಾಳೆ ಎಂಬ ನಂಬಿಕೆ ಇದೆ. ಅವಿಧವಾ ನವಮೀ ಆರಾಧನೆ ಕಾಲದಲ್ಲಿ ಮಾತೃಃ, ಪಿತಾಮಹಿಃ, ಪ್ರಪಿತಾಮಹಿಃ ಅಂದರೆ ತಾಯಿ - ಅಜ್ಜಿ(ತಂದೆಯ ಅಜ್ಜಿ) ಮತ್ತು ಮುತ್ತಜ್ಜಿ(ತಂದೆಯ ಅಜ್ಜಿ) ಈ ಮೂರು ಜನ ಮಾತೆಯರಿಗೆ ನವಮಿಯಂದು ಆರಾಧನೆ ಮಾಡಲಾಗುತ್ತದೆ. 

ನವಮಿಯ ದಿನ ಬ್ರಹ್ಮಾಂಡದಲ್ಲಿ ಪೃಥ್ವಿ ಮತ್ತು ಆಪತತ್ವಗಳಿಗೆ ಸಂಬಂಧಿಸಿದ ರಜೋಗುಣ ಶಿವಲಹರಿಗಳು ಅಧಿಕವಾಗಿರುತ್ತದೆ. ಈ ಲಹರಿಗಳಿಂದಾಗಿ ಶ್ರಾದ್ಧದಿಂದ ಪ್ರಕ್ಷೇಪಿತವಾಗುವ ಮಂತ್ರೋಚ್ಛಾರಯುಕ್ತ ಲಹರಿಗಳನ್ನು ಶಿವರೂಪದಲ್ಲಿ ಗ್ರಹಿಸುವ ಸೂಕ್ಷ್ಮಬಲವು ಆಯಾಯ ಮುತ್ತೈದೆಯರ ದೇಹಗಳಿಗೆ ಪ್ರಾಪ್ತವಾಗುತ್ತದೆ. ಈ ದಿನ ಮುತ್ತೈದೆಯರಲ್ಲಿರುವ ಶಕ್ತಿತತ್ವವು ಸೂಕ್ಷ್ಮಶಿವತತ್ವದೊಂದಿಗೆ ಬೇಗನೆ ಸಂಯೋಗವಾಗುವುದರಿಂದ ಮುತ್ತೈದೆಯರ ದೇಹವು ಕೂಡಲೇ ಮುಂದಿನ ಗತಿಗೆ ಹೋಗುತ್ತದೆ.

ಈ ಶ್ರಾದ್ಧದ ಕುರಿತು ಎರಡು ವಿವಾದಗಳಿವೆ, ಮೊದಲನೆಯದಾಗಿ ಅವಿಧವಾ ನವಮಿಯ ಶ್ರಾದ್ಧದಲ್ಲಿ ಫಾತಚತುರ್ದಶಿಯ ಶ್ರಾದ್ಧದಂತೆ ಏಕೋದ್ದಿಷ್ಟ ಶ್ರಾದ್ಧವನ್ನೇ ಮಾಡಬೇಕು, ಪಾರ್ವಣವನ್ನು ಮಾಡಬಾರದು ಎನ್ನುವುದು ಒಂದಾದರೆ, ಎರಡನೆಯದಾಗಿ ಗಂಡ ಬದುಕಿರುವವರೆಗೆ ಅವಿಧವಾ ನವಮೀ, ಗಂಡ ಸತ್ತ ಬಳಿಕ ಅವಿಧವಾನವಮಿ ಮಾಡಲು ಬರುವುದಿಲ್ಲ ಎನ್ನುವ ವಿವಾದವಿದೆ

ಏಕೋದ್ದಿಷ್ಟ: ಏಕೋದ್ದಿಷ್ಟ ಎಂದರೆ ಯಾರ ಕುರಿತು ಶ್ರಾದ್ಧವಿರುತ್ತದೆಯೋ ಅವರಿಗೆ ಮಾತ್ರ ಶ್ರಾದ್ಧ. ಕೇವಲ ಒಂದೇ ಪಿಂಡವನ್ನಿಟ್ಟು ಶ್ರಾದ್ಧ ಮಾಡುವುದು. ಅಂದರೆ ಮುತ್ತೈದೆಯಾಗಿ ಯಾರು ಸತ್ತಿದ್ದಾರೋ ಅವರಿಗೆ ಮಾತ್ರ ಶ್ರಾದ್ಧ. ಸರಳವಾಗಿ ಹೇಳುವುದಾದರೆ ಒಂದು ಪಿಂಡವನ್ನಿಟ್ಟು ಒಬ್ಬರಿಗೆ ಮಾತ್ರ ಶ್ರಾದ್ಧ ಮಾಡುವುದು.

ಪಾರ್ವಣ ಎಂದರೆ ಸತ್ತಿರುವ ಮುತ್ತೈದೆ, ಅವರ ಅತ್ತೆ(ಅಂದರೆ ಮಗ ತಾಯಿಯ ಶ್ರಾದ್ಧ ಮಾಡುತ್ತಿದ್ದರೆ, ತಾಯಿ, ಅಜ್ಜಿ, ಮುತ್ತಜ್ಜಿ) ಈ ಮೂರೂ ಜನರಿಗೂ ಶ್ರಾದ್ಧವನ್ನು ಮಾಡಲಾಗುತ್ತದೆ. ಅಂದರೆ ಸತ್ತ ವ್ಯಕ್ತಿಯ ತಂದೆ(ಅತ್ತೆ) ಅವರ ತಂದೆ(ಅತ್ತೆ) ಈ ಮೂರೂ ಜನರಿಗೆ ಮೂರು ಪಿಂಡಗಳನ್ನು ಸಮರ್ಪಿಸಿ ಶ್ರಾದ್ಧ ಮಾಡುವುದು ಪಾರ್ವಣ.

ಶ್ರೀ ವಾದಿರಾಜರು ಹೇಳುವ ಪ್ರಕಾರ, ಧರ್ಮಶಾಸ್ತ್ರದ ಆಚರಣೆಗಳನ್ನು ಯುಕ್ತಿಯಿಂದ ನಿರ್ಧರಿಸಬಾರದು ಎಂದು, ಆದರೆ ಅವಿಧವಾನವಮಿಯ ವಿಷಯದಲ್ಲಿ ಧರ್ಮಸಿಂಧುವಿನಲ್ಲಿಯೂ ಸಹ ಕೇವಲ ಯುಕ್ತಿಯಿಂದಲೇ ಆಚರಣೆಯನ್ನು ಸಾಧಿಸಲಾಗಿದೆ. ಈ ದಿನವೂ ಕೂಡ ಧರ್ಮಶಾಸ್ತ್ರವನ್ನು ಓದದೆಯೇ ಜನ ಕೇವಲ ಯುಕ್ತಿಯಿಂದ ಇದರ ಕುರಿತು ಮಾತನಾಡುತ್ತಾರೆ.

ಯುಕ್ತಿಯ ಪ್ರಕಾರ ಘಾತಚತುರ್ದಶಿಯಂದು ಒಂದೇ ಪಿಂಡವನ್ನಿಟ್ಟು ಶ್ರಾದ್ಧ ಮಾಡಬೇಕು ಎಂಬ ವಿಧಿ ಇದೆ. ಯಾರು ದುರ್ಮರಣ ಹೊಂದಿರುತ್ತಾರೆಯೋ ಅವರಿಗೆ ಮಾತ್ರ ಶ್ರಾದ್ಧ. ಹಾಗೆ ನಮ್ಮ ತಾಯಿ ಮಾತ್ರ ಮುತ್ತೈದೆಯಾಗಿ ಸಾವನ್ನು ಪಡೆದಿರಬಹುದು, ಆದರೆ ನಮ್ಮ ಅಜ್ಜಿಗೆ ಆ ರೀತಿಯಲ್ಲಿ ಸಾವು ಬಂದಿಲ್ಲದಿರಬಹುದು. ಪಾರ್ವಣವಾದರೆ ಮೂರೂ ಜನರಿಗೂ ಪಿಂಡವನ್ನಿಡಲೇಬೇಕು. ಆಗ ಅಜ್ಜಿ, ಮುತ್ತಜ್ಜಿಯರು ಮುತ್ತೈದೆಯಾಗಿ ಸಾವನ್ನು ಪಡೆಯದೇ ಇದ್ದರೆ ನಾವು ಮಾಡುವ ಶ್ರಾದ್ಧ 'ಅವಿಧವಾ'ನವಮಿ ಹೇಗಾಗುತ್ತದೆ ಎನ್ನುವುದು.

ಹಾಗಾದರೆ ತಾಯಿ, ಅಜ್ಜಿ, ಮುತ್ತಜ್ಜಿ ಮೂರು ಜನ ಮುತ್ತೈದೆ ಸಾವನ್ನು ಪಡೆದಿದ್ದರೆ ಆಗ ಅವಿಧವಾನವಮಿಯನ್ನು ಪಾರ್ವಣದ ರೀತಿಯಲ್ಲಿ ಮಾಡಬಹುದೇ ಎಂದರೆ ಅದನ್ನೂ ಅವರು ಒಪ್ಪುವುದಿಲ್ಲ, ಕಾರಣ ಅವಿಧವಾನವಮಿ ಗಂಡ ಬದುಕಿರುವರೆಗೆ ಮಾತ್ರ, ಗಂಡ ಸತ್ತ ಬಳಿಕ ಅವಿಧವಾನವಮಿ ಮಾಡುವ ಹಾಗಿಲ್ಲ ಎಂದು. ಅಂದರೆ ತಂದೆ ಬದುಕಿದ್ದಾರೆ, ತಾಯಿ ತೀರಿಕೊಂಡಿದ್ದಾರೆ, ತಾಯಿಯ ಅವಿಧವಾ ನವಮೀ ಶ್ರಾದ್ಧವನ್ನು ಮಗ ಮಾಡುತ್ತಾನೆ. ಮುಂದೊಂದು ದಿನ ತಂದೆ ತೀರಿಹೋಗುತ್ತಾರೆ. ಆ ಬಳಿಕ ಮಗ ತಾಯಿಯ ಅವಿಧವಾ ನವಮೀಯ ಶ್ರಾದ್ಧವನ್ನು ಮಾಡುವ ಹಾಗಿಲ್ಲವೆನ್ನುವುದು ವಿವಾದ.

ಹೀಗಾಗಿ ತಾಯಿ, ಅಜ್ಜಿ, ಮುತ್ತಜ್ಜಿ ಮೂರೂ ಜನ ಮುತ್ತೈದೆಯರಾಗಿ ಸಾವನ್ನು ಪಡೆದಿದ್ದರೂ, ಅಜ್ಜ ಮುತ್ತಜ್ಜರು ಸತ್ತು ಹೋಗಿರುತ್ತಾರೆಯಾದುದರಿಂದ ಅವರಿಗೆ ಅವಿಧವಾನವಮಿಯ ಶ್ರಾದ್ಧವನ್ನು ಮಾಡಲಾಗುವುದಿಲ್ಲ. ಅದಕ್ಕಾಗಿ ಏಕೋದ್ದಿಷ್ಟ ಅಂದರೆ ಒಂದು ಪಿಂಡವನ್ನು ಒಬ್ಬರಿಗೆ ಮಾತ್ರ ಇಟ್ಟು ಶ್ರಾದ್ಧ ಮಾಡಬೇಕು, ಪಾರ್ವಣವನ್ನಲ್ಲ ಎನ್ನುವುದು ವಿವಾದದ ಸಾರಾಂಶ.

ಅವಿಧವಾ ನವಮಿ ಎನ್ನುವುದು ಪೂರ್ಣವಾಗಿ ಮಹಾಲಯದ ಅಂಗವಲ್ಲ. ಇದನ್ನು ಮೂಲತಃ ಅನ್ವಷ್ಟಕಾ ಶ್ರಾದ್ಧ ಎನ್ನುತ್ತಾರೆ. ಅಷ್ಟಕಾ ಎಂದರೆ ಅಷ್ಟಮಿಯಂದು ಮಾಡುವ ಶ್ರಾದ್ಧ. ಅನ್ವಷ್ಟಕಾ ಶ್ರಾದ್ಧವೆಂದರೆ ನವಮಿಯಂದು ಮಾಡುವ ಶ್ರಾದ್ಧ. ಮಹಾಲಯದಲ್ಲಿ ಬರುವ ನವಮಿಯಂದು ಮಾಡುವ ಅನ್ವಷ್ಟಕಾಶ್ರಾದ್ಧಕ್ಕೆ ಅವಿಧವಾನವಮೀ ಎಂದು ಹೆಸರು.

ಅಷ್ಟಕಾಶ್ರಾದ್ಧಗಳಲ್ಲಿ ಪಾರ್ವಣದ ರೀತಿಯಲ್ಲೇ ಶ್ರಾದ್ಧ ಮಾಡುತ್ತಾರೆ. ಅನ್ವಷ್ಟಕಾಶ್ರಾದ್ಧದಲ್ಲಿ ಕೂಡ ಮೂರು ಪಿಂಡಗಳನ್ನಿಟ್ಟೇ ಶ್ರಾದ್ಧ ಮಾಡಬೇಕು. ಮಾರ್ಗಶೀರ್ಷ, ಪುಷ್ಯ, ಮಾಘ ಮತ್ತು ಫಾಲ್ಗುಣಗಳಲ್ಲಿ ತಾಯಿಗೆ ಮುತ್ತೈದೆ ಸಾವು ಬರದಿದ್ದರೂ ಶ್ರಾದ್ಧವನ್ನು ಮಾಡಬೇಕು. ಭಾದ್ರಪದದಲ್ಲಿ ಮಾತ್ರ ತಾಯಿ ಮುತ್ತೈದೆಯಾಗಿ ಸತ್ತಿದ್ದರೆ ಆ ದಿನ ಸುವಾಸಿನಿಯರನ್ನು ಕರೆಯಿಸಿ, ಭೋಜನವನ್ನು ಮಾಡಿಸಿ, ಸೌಭಾಗ್ಯ ಪದಾರ್ಥಗಳನ್ನು ದಾನ ಮಾಡಿ ಶ್ರಾದ್ಧ ಮಾಡಬೇಕು.

ಇನ್ನೊಂದು ವಿವಾದವೆಂದರೆ, ಮುತ್ತೈದೆ ಸಾವು ಪಡೆದವರಿಗೆ ಗಂಡ ಸತ್ತ ನಂತರ ಅವಿಧವಾನವಮಿ ಇಲ್ಲ ಎನ್ನುವ ವಿವಾದ. ಜೀವದ ಸಂಬಂಧವನ್ನು ತೆಗೆದುಕೊಂಡರೆ ಜೀವಗಳಿಗೆ ಸಾವೇ ಇಲ್ಲ. ಹೀಗಾಗಿ ದೇಹದ ಮುತ್ತೈದೆ ಸಾವು ಎನ್ನುವ ಗುಣ ಆ ದೇಹದ ಶಾಶ್ವತ ಗುಣವಾಯಿತು ಎನ್ನಲಾಗುತ್ತದೆ. 

ಪ್ರಹ್ಲಾದ ಮುಂದೆ ಎಷ್ಟು ಜನ್ಮ ಎತ್ತಿದರೂ ಮುಂದೊಂದು ದಿನ ಅವನ ದೇಹ ವಿನಾಶವಾದರೂ ಅವನ ಆ ಜನ್ಮದ 'ಹಿರಣ್ಯಕಶಿಪುವಿನ ಮಗ' ಎಂಬ ಗುಣ ಹೇಗೆ ಹೋಗುವುದಿಲ್ಲವೋ ಹಾಗೆ ''ಗಂಡನಿಗಿಂತ ಮೊದಲೇ ಸತ್ತದ್ದು'' ಎಂಬ ಗುಣವೂ ಹೋಗುವುದಿಲ್ಲ. ವೈಧವ್ಯ ಎಂದರೆ ಗಂಡ ಸತ್ತ ಬಳಿಕವೂ ಬದುಕಿರುವುದು, ಅದು ಆಕೆಗೆ ಅನ್ವಯವಾಗುವುದಿಲ್ಲ. ಹೀಗಾಗಿ ಒಮ್ಮೆ ಮುತ್ತೈದೆಯಾಗಿ ಸತ್ತರೆ ಮಗ ತಾನು ಸಾಯುವವರೆಗೆ ಆಕೆ ಅವಿಧವಾನವಮೀ ಶ್ರಾದ್ಧವನ್ನು ಮಾಡಲೇಬೇಕು. ಒಂದು ಶ್ರಾದ್ಧ ನಿಲ್ಲುವುದು ಅದನ್ನು ಮಾಡುವ ಕರ್ತೃ ಸತ್ತಾಗ ಮಾತ್ರ . ಬೇರೆ ಯಾವ ಸಂದರ್ಭದಲ್ಲಿಯೂ ಸಹ ಶ್ರಾದ್ಧ ನಿಲ್ಲುವುದಿಲ್ಲ. 

ಹೀಗಾಗಿ ಯಾವ ಕಾರಣದಿಂದಲೂ ಗಂಡ ಸತ್ತ ಬಳಿಕ ಅವಿಧವಾನವಮೀ ಶ್ರಾದ್ಧವನ್ನು ನಿಲ್ಲಿಸಬೇಕೆಂಬ ನಿಯಮ ಒಪ್ಪಲು ಸಾಧ್ಯವಿಲ್ಲ. ಅದನ್ನು ಮಾಡುವ ಕರ್ತೃ ಇರುವವರೆಗೆ ಆ ಶ್ರಾದ್ಧವನ್ನು ಮಾಡಬೇಕು. ಅವಿಧವಾನವಮೀ ಅನ್ವಷ್ಟಕಾಶ್ರಾದ್ಧವಾದ್ದರಿಂದ ಆ ಶ್ರಾದ್ಧದ ದಿನ ತಾಯಿ, ಅಜ್ಜಿ, ಮುತ್ತಜ್ಜಿ ಮೂರೂ ಜನರಿಗೂ ಪಿಂಡವನ್ನಿಟ್ಟು ಶ್ರಾದ್ಧವನ್ನು ಮಾಡಬೇಕು. ಏಕೋದ್ದಿಷ್ಟ ಶ್ರಾದ್ಧವನ್ನು ಮಾಡಬಾರದು.

ಅವಿಧವಾನವಮಿಯ ವಿಶೇಷತೆ
ಈ ಶ್ರಾದ್ಧದಲ್ಲಿ ಮುತ್ತೈದೆಯರನ್ನು ಭೋಜನಕ್ಕೆ ಆಹ್ವಾನಿಸಬೇಕು
ಆಮಂತ್ರಿತರಾದ ಮುತ್ತೈದೆಯರಿಗೆ ಅರಿಶಿನ, ಕುಂಕುಮ, ಸೀರೆ, ಕುಪ್ಪಸ ಮುಂತಾದ ಸೌಭಾಗ್ಯ ಪದಾರ್ಥಗಳನ್ನು ಬಾಗಿನ ನೀಡಬೇಕು.
ಅವಿಧವಾ ನವಮೀಯಲ್ಲಿ ಪಿತೃಶ್ರಾದ್ಧಕ್ಕೆ ಸಿದ್ಧಪಡಿಸುವ ರವೆ ಉಂಡೆ ಮತ್ತು ವಡೆಗಳನ್ನು ನಿಷೇಧಿಸಲಾಗಿದೆ.
ಸಾಧ್ಯವಾದಲ್ಲಿ ಬೆಳ್ಳಿ, ಬಂಗಾರದ ಆಭರಣಗಳನ್ನು ವಿಷ್ಣುಭಕ್ತರಾದ ಶ್ರೇಷ್ಠಗುಣಗಳ ಮುತ್ತೈದೆಯರಿಗೆ ದಾನ ನೀಡಿ ಜನ್ಮವಿತ್ತ ತಾಯಿಗೆ ಜನ್ಮಜನ್ಮಗಳಲ್ಲಿಯೂ ಸಕಲ ಸೌಭಾಗ್ಯವಿರಲಿ ಎಂದು ಪ್ರಾರ್ಥಿಸಬೇಕು.
ಅವಿಧವಾ ನವಮಿಯನ್ನು ಹಬ್ಬವೆಂದೇ ಪರಿಗಣಿಸಲಾಗುವುದರಿಂದ ಹಬ್ಬದ ಅಡುಗೆ ಎಂದರೆ, ಬೇಸನ್‌ ಲಡ್ಡು, ಜಿಲೇಬಿ, ಹೋಳಿಗೆ, ಶ್ಯಾವಿಗೆ ಪಾಯಸ, ಮಂಡಿಗೆ ಹಾಗೂ ಬೂಂದಿ ಲಾಡು ಮಾಡಲಾಗುತ್ತದೆ.
ಅವಿಧವಾ ನವಮಿ ಶ್ರಾದ್ಧದಲ್ಲಿ ತಾಯಿಯ ಪಿಂಡಕ್ಕೆ ಅರಿಶಿನ ಕುಂಕುಮಗಳನ್ನು ಅರ್ಪಿಸುವ ಪದ್ಧತಿಯೂ ಇದೆ. ‌     ‌      ‌      ‌     ‌    ‌       ‌                               ‌ 
*****

ಶ್ರದ್ಧೆಯಿಂದ ಶ್ರಾದ್ಧ - " ಶ್ರದ್ಧಾಯತ್ರ ವಿದ್ಯತೇ ತತ್ ಶ್ರಾದ್ಧಮ್ " ಶ್ರದ್ಧೆಯಿಂದ, ಅಚಲವಾದ ನಂಬಿಕೆಯಿಂದ ಮಾಡುವ ಕಾರ್ಯ !
ಪ್ರತಿಯೊಬ್ಬ ಮನುಷ್ಯನೂ ಜನನದಿಂದಲೇ ಪಡೆದುಕೊಂಡು ಬಂದಿರುವ ಮೂರೂ ಋಣಗಳಾದ ದೇವಋಣ, ಋಷಿಋಣ ಮತ್ತು ಪಿತೃಋಣ ಗಳಲ್ಲಿ ಪಿತೃ ಋಣದಿಂದ ಮುಕ್ತನಾಗಲು ಶ್ರಾದ್ಧಾಚರಣೆಯು ಮುಖ್ಯ ಸಾಧನೆಯಾಗಿದೆ. ಪಿತೃ ಋಣವನ್ನು ತಿರಿಸದೆ, ದೇವ ಋಣ, ಋಷಿ ಋಣಗಳು ತಿರುವುದಿಲ್ಲ. ನಾವು ಜೀವಂತವಾಗಿರುವವರೆಗೂ ಪಿತೃಋಣ ತಿರಿಸಬೇಕೆಂದರೆ, ನಾವು ಪಿತೃಗಳಿಗೆ ಕಾಲ ಕಾಲಕ್ಕೆ ತಕ್ಕಂತೆ ಶ್ರಾದ್ಧ ಮಾಡಿದರೆ ನಮ್ಮ ವಂಶದ ಶ್ರೇಯೋಭಿವೃದ್ಧಿಯಾಗುತ್ತದೆ. ಈ ಶ್ರಾದ್ಧ ಕರ್ಮವನ್ನು ಶೃತಿ,ಸ್ಮೃತಿ ಮತ್ತು ನಮ್ಮ ಪುರಾಣಗಳು ತಿಳಿಸಿದ ವಿಧಿಯಿಂದ ಅನುಸರಿಸಬೇಕು.
ಪ್ರೇತತ್ವ ನಿವೃತ್ತಿಗಾಗಿ...ನವ ಶ್ರಾದ್ಧಗಳನ್ನೂ ಮತ್ತು ೧೬ ಮಾಸಿಕಗಳನ್ನೂ ಮಾಡಬೇಕು.ಈ ದಶಾಹ ವಿಧಿಯಲ್ಲಿ ಯಾವುದೇ ಕಾಲಕ್ಕೂ ನಿಷಿದ್ಧ ಪದಾರ್ಥಗಳನ್ನು ಪಿಂಡದಲ್ಲಿ ಮಿಶ್ರ ಮಾಡಬಾರದು. ಒಂದುವೇಳೆ ನಿಷಿದ್ಧ ಪದಾರ್ಥಗಳನ್ನು ಉಪಯೋಗಿಸಿದಲ್ಲಿ ಯುಗ ಪರ್ಯಂತ ಪ್ರೇತ ಜನ್ಮದಿಂದ ಮುಕ್ತಿ ಹೊಂದದೆ ಪ್ರೇತ ಜನ್ಮದಲ್ಲೇ ಕೊಳೆಯುತ್ತದೆ. ಅಲ್ಲದೆ ಪ್ರಾಯಶ್ಚಿತ್ತವೇ ಇಲ್ಲ!!
" ಶ್ರಾದ್ಧ ಕರ್ಮದಲ್ಲಿ ನಿಷಿದ್ಧ ಪದಾರ್ಥಗಳು "
ಶ್ರೀ ವೇದವ್ಯಾಸ ಪ್ರಣೀತ ಶ್ರೀಮನ್ಮಹಾಭಾರತದ ಅನುಶಾಸನ ಪರ್ವದಲ್ಲಿ..
ಅಶ್ರಾದ್ಧೇ ಯಾನಿ ಧಾನ್ಯಾನಿ ಕ್ರೋಧವಾ: ಪುಲಕಾಸ್ತಾಥಾ ।
ಹಿಂಗುದ್ರವ್ಯೆಷು ಪಾಲಾಂಡುಂ ವೃಂತಕ ಲಸುನಂ ತಥಾ ।।
ಸೌಭಾಂಜನ: ಕೋವಿದಾರಸ್ತಥಾ ಗೃ೦ಜನಕಾದಯಃ ।
ಕೂಷ್ಮಾ೦ಡಜಾತ್ಯಲಾಬು೦ ಚ ಕೃಷ್ಣ೦ ಲವಣಮೇಚಚ ।।
ಇಂಗು - ಈರುಳ್ಳಿ - ಬೆಳ್ಳುಳ್ಳಿ - ಬದನೇಕಾಯಿ - ನುಗ್ಗೆಕಾಯಿ - ಕೆಂಚನಾಳದ ಕಾಯಿ - ಗಜ್ಜರಿ - ಬೂದುಗುಂಬಳ ಸೋರೆಕಾಯಿ - ಕರಿ ಉಪ್ಪು ಮುಂತಾದವುಗಳನ್ನು ಶ್ರಾದ್ಧದಲ್ಲಿ ಉಪಯೋಗಿಸಬಾರದೆಂದು ಅಖಿಲಾಂಡಕೋಟಿ ಬ್ರಹ್ಮಾಂಡನಾಯಕರಾದ ಶ್ರೀ ಭಗವಾನ್ ವೇದವ್ಯಾಸದೇವರು ಹೇಳಿದ್ದಾರೆ.
ನವ ಶ್ರಾದ್ಧವೆಂದರೆ...
ಪ್ರಥಮ - ತೃತೀಯ - ಪಂಚಮ - ಸಪ್ತಮ - ನವಮ ಹೀಗೆ ೧೦ ದಿವಸಗಳಲ್ಲಿ ಮಾಡುವ ವಿಷಮ ಶ್ರಾದ್ಧಗಳಿಗೆ " ನವ ಶ್ರಾದ್ಧ " ಎನ್ನುತ್ತಾರೆ.
ನವ ಶ್ರಾದ್ಧ ಮಾಡದೇ ಪ್ರೇತತ್ವ ನಿವೃತ್ತಿಯಾಗುವುದಿಲ್ಲ.
ನವ ಶ್ರಾದ್ಧ; ತ್ರಿಪಕ್ಷ ಶ್ರಾದ್ಧ; ಮಾಸಿಕ; ಷಣ್ಮಾಸಿಕಾ ಇವು ಮಾಡದ ಪುತ್ರನ ಪಿತೃಗಳು ಅಧೋಗತಿ ಹೊಂದುವರು.
10 ದಿನಗಳಲ್ಲಿ ಮಾಡುವ ಪ್ರೇತ ಶ್ರಾದ್ಧದಲ್ಲಿ ಪಿತೃ ಶಬ್ದ ಹೇಳದೆ " ಪ್ರೇತ " ಯೆಂದು ಮಂತ್ರವಿಲ್ಲದೆ ಎಳ್ಳು ಹಾಕಬೇಕು.
ಪ್ರೇತ ಶಬ್ದದಿಂದ " ಪಾಣಿ ಹೋಮ ಮಾಡಬೇಕು.
ಪ್ರೇತ ಸ್ಥಾನದಲ್ಲಿ ಬಳಿ ನೀಡಿ ಅಸ್ಥಿಗಳನ್ನು ಹಾಲಿನಿಂದ ತೊಳೆದು ಬಿಳಿ ವಸ್ತ್ರದಿಂದ ಸುತ್ತಿ ಮಡಿಕೆಯಲ್ಲಿ ಹಾಕಿ ಭೂಮಿಯಲ್ಲಿ ಸ್ಥಾಪಿಸಬೇಕು. ನಂತರ ೧೦ ದಿನದೊಳಗೆ ಗಂಗೆಯಲ್ಲಿ ಹಾಕಿದರೆ ಗಂಗೆಯಲ್ಲಿ ಮರಣವಾದಂತೆ. ಯಾರ ಆಸ್ತಿಯು ಗಂಗೆಯಲ್ಲಿ ಬೀಳುವದೋ ಅವನಿಗೆ ಸ್ವರ್ಗಲೋಕ ಲಭಿಸುತ್ತದೆ.
ಮಾಸಿಕ 16 ಇರುತ್ತದೆ.
ಆದ್ಯ - ಊನ - ದ್ವಿತೀಯಾ - ತೃತೀಯಾ - ಚತುರ್ಥ - ಪಂಚಮ - ಷಷ್ಠ - ಊನ ಷಣ್ಮಾಸಿಕ - ಸಪ್ತಮ - ಅಷ್ಟಮ - ನವಮ - ದಶಮ - ಏಕಾದಶ - ದ್ವಾದಶ - ಊನಾಬ್ಧಿಕ - ಆಬ್ಧಿಕ.
11ನೇ ದಿನ ಏಕೋದಿಷ್ಟ ಶ್ರಾದ್ಧ ಮಾಡಬೇಕು. ಈ ಶ್ರಾದ್ಧದಿಂದ ಪ್ರೇತನಿಗೆ ಯಮ ಮಾರ್ಗದಲ್ಲಿ ನಡೆಯುವ ಶಕ್ತಿ ಬರುತ್ತದೆ.
ಪ್ರೇತನು ಪರವಿತ್ತಾಪಹಾರ - ಪರ ಕಲತ್ರ ಅಪಹಾರ ಮಾಡಿದ್ದಾರೆ " ನವ ಶ್ರಾದ್ಧ " ದಿಂದ ಪರಿಹೃತವಾಗುತ್ತದೆ.
12ನೇ ದಿನದ ಶ್ರಾದ್ಧದಿಂದ " ಯಂತ್ರ ನರಕ " ದಿಂದ ಬಿಡುಗಡೆ ಹೊಂದುತ್ತದೆ.
ಮಾಸಿಕ ಶ್ರಾದ್ಧ ಮಾಡುವುದರಿಂದ " ಸೂರ್ಮಿ " ಎಂಬ ನರಕದಿಂದ ಪಾರಾಗುವನು. ( ಸೂರ್ಮಿ ನರಕ ಅಂದರೆ ಚೆನ್ನಾಗಿ ಕಾದಿರುವ ತಾಮ್ರದ ಸ್ತ್ರೀ ಬೊಂಬೆಯನ್ನು ಆಲಂಗಿಸುತ್ತಾ ಕಾದ ಮಂಚದ ಮೇಲೆ ಮಲಗಬೇಕು ).
ತ್ರೈಪಕ್ಷಿಕ ಶ್ರಾದ್ಧದಿಂದ " ಸಾರಮೇಯಾದನ " ಎಂಬ ನರಕದಿಂದ ಪಾರಾಗುವನು. ( ಈ ನರಕದಲ್ಲಿ ಕಬ್ಬಿಣದಂತೆ ಗಟ್ಟಿಯಾಗಿ ಕೋರೆ ಹಲ್ಲುಗಳಿರುವ " ನಾಯಿ " ಗಳು ಪ್ರೇತನ ಪೃಷ್ಠ ಮಾಂಸವನ್ನೇ ಅಪೇಕ್ಷಿಸಿ ಕಿತ್ತು ತಿನ್ನುತ್ತದೆ ).
2ನೇ ಮಾಸಿಕ ಶ್ರಾದ್ಧದಿಂದ " ಲೋಹಚಂಚು ಕಾಗೆ " ಗಳಿಂದ ಕಾಟವಿರುವುದಿಲ್ಲ.
3ನೇ ಮಾಸಿಕ ಶ್ರಾದ್ಧದಿಂದ " ಶಾಲ್ಮಲೀ " ಮೊದಲಾದ ನರಕದಿಂದ ಪಾರು ಮಾಡುತ್ತದೆ.
4ನೇ ಮಾಸಿಕ ಶ್ರಾದ್ಧದಿಂದ " ರೌರವ ನರಕ " ದಿಂದ ಮುಕ್ತರಾಗುತ್ತಾರೆ.
5ನೇ ಮಾಸಿಕ ಶ್ರಾದ್ಧದಿಂದ " ಕುಂಭೀಪಾಕ " ನರಕ ಪರಿಹಾರ.
6ನೇ ಮಾಸಿಕ ಶ್ರಾದ್ಧದಿಂದ " ವೈತರಣೀ " ಯಿಂದ ಬಿಡುಗಡೆ.
7ನೇ ಮಾಸಿಕ ಶ್ರಾದ್ಧ " ಸಂವರ್ತಕ ನರಕ " ದಿಂದ ಪಾರು ಮಾಡುತ್ತದೆ.
8ನೇ ಮಾಸಿಕ ಶ್ರಾದ್ಧ " ಸಂದಂಶ " ನರಕದಿಂದ ಪಾರು ಮಾಡುತ್ತದೆ.
9ನೇ ಮಾಸಿಕ ಶ್ರಾದ್ಧ " ಅಗ್ನಿಕೂಟ " ಎಂಬ ನರಕದಿಂದ ಉದ್ಧಾರ ಮಾಡುತ್ತದೆ.
ಗುರು - ತಂದೆ - ತಾಯಿ - ಅನ್ನ ನೀಡಿದ ಸ್ವಾಮಿ ಇವರುಗಳಿಗೆ ದ್ರೋಹ ಮಾಡಿದವರು ಉರಿಯುತ್ತಿರುವ ಕೆಂಡ ರಾಶಿಗಳಲ್ಲಿ ಮುಳುಗುತ್ತಾರೆ. 10ನೇ ಮಾಸಿಕ ಶ್ರಾದ್ಧ ಮಾಡುವುದರಿಂದ ಇದಕ್ಕೆ ಸ್ವಲ್ಪ ತೃಪ್ತಿ.
ದೊದ್ದವರು - ಸ್ವಾಮಿಗಳು ಬಂದಾಗ ಅವರಿಗೆ ಸಿಗದೇ ತಲೆ ಮರೆಸಿಕೊಳ್ಳುವ ವ್ಯಕ್ತಿಗಳು ಕಾದಿರುವ ಮರಳಿನಿಂದ ತುಂಬಿರುವ ನರಕದಲ್ಲಿ ಬಿದ್ದು ಸುತ್ತು ಬೆಂದು ಹೋಗುತ್ತಾರೆ. 12ನೇ ಮಾಸಿಕ ಶ್ರಾದ್ಧದಿಂದ ಇದಕ್ಕೆ ಮುಕ್ತಿ.
ಸಪಿಂಡೀ ಕರಣವಾಗುವ ವರೆಗೂ ಪ್ರೇತತ್ವ ಹೋಗುವುದಿಲ್ಲ " ಯಾವತ್ ಸಪಿಂಡೀತಾ ನೈವಾ ತಾವತ್ ಪ್ರೇತಃ ಸ ತಿಷ್ಠತಿ "
ಧರ್ಮಿಷ್ಠರಾಗಿದ್ದರೂ ಸಪಿಂಡೀ ಆಗದೆ ಪ್ರೇತತ್ವ ತೊಲಗದು " ಅಪಿ ಧರ್ಮ ಸಮೋಪೇತಃ ತಪಸ್ಯಾಪಿ ಸಮನ್ವಿತಃ "
ವಿಶೇಷ ವಿಚಾರ :
ಮೃತನಾಗಿ ಪ್ರೇತತ್ವವನ್ನು ಹೊಂದಿದ ಚೇತನನೂ ಮೊದಲನೆಯ ದಿನ ಸ್ಥೂಲ ದೇಹವನ್ನು ಬಿಟ್ಟು ಕೇವಲ ಸೂಕ್ಷ್ಮ ದೇಹದಿಂದ ಕೂಡಿದವನಾಗಿ ಮೊದಲಿನ 10 ದಿನಗಳಲ್ಲಿ ಕೊಡಲ್ಪಟ್ಟ ಪಿಂಡ ಬಲಿಗಳಿಂದ ಉತ್ಪನ್ನವಾದ ಪೂರ್ಣವಾದ ಪ್ರೇತ ದೇಹದಿಂದ ಕೂಡಿದವನಾಗಿ ಅತ್ಯಧಿಕವಾದ ಹಸಿವಿನಿಂದ " ಏಕೋದಿಷ್ಟ ಶಾದ್ಧಾನ್ನ " ಗಳನ್ನು ಭುಂಜಿಸಿ; ೧೨ನೇ ದಿನವೂ ಕರ್ತೃವಿನ ಮನೆಯ ಬಾಗಿಲಲ್ಲೇ ನಿಂತು ಅವನಿಂದ ಕೊಡಬಹುದಾದ ಶ್ರಾದ್ಧನ್ನವನ್ನು ಎದುರು ನೋಡುತ್ತಿರುತ್ತದೆ.
13ನೇ ದಿನದಿಂದ ಹಗಲೂ ರಾತ್ರಿ ಸೇರಿ ಪ್ರತಿದಿನವೂ 247 ಯೋಜನಗಳಷ್ಟು ನಡೆದು ವರ್ಷದ ಕೊನೆಯಲ್ಲಿ " ಶ್ರೀ ಯಮಧರ್ಮರಾಜ " ರ ಆಸ್ಥಾನವನ್ನು ಸೇರುತ್ತದೆ. ( ಮೃತ ವ್ಯಕ್ತಿಯ ವಾಯು ಶರೀರ ನಗ್ನವಾಗಿರುತ್ತದೆ )
ಇಡೀ ವರ್ಷ ಹಸಿವು ದಾಹಗಳಿರುವುದರಿಂದ ಅವುಗಳಿಗೆ ಪುತ್ರನು ವರ್ಷಾಬ್ಧಿಕ ಪರ್ಯಂತ ಒಂದು ವರ್ಷ ಕಾಲ ಪ್ರತಿನಿತ್ಯವೂ ತಪ್ಪದೆ ಪಾತ್ರೆ ಅಥವಾ ಉಡಕುಂಭ ಸಹಿತ ( ಸೋದಕುಂಭ ) ಶ್ರಾದ್ಧವನ್ನು ಮಾಡಲೇಬೇಕು.
ನನ್ನನ್ನು ( ಪ್ರೇತ ) ದುಃಖದಿಂದ ಪಾರು ಮಾಡುವ ಪುತ್ರರು ಅಥವಾ ಬಂಧುಗಳಾದರೂ ಇದ್ದಾರೆಯೇ ಎಂದು ಚಿಂತಿಸುತ್ತಾ " ಯಮಪುರಿ " ಗೆ ಕಾಲಿಡುತ್ತದೆ.
ಆದ್ದರಿಂದ ಮೃತ ಜೀವಿಗೆ ಪುತ್ರಾದಿಗಳು ತಪ್ಪದೆ ಶ್ರದ್ಧೆಯಿಂದ ಶ್ರಾದ್ಧಾನವನ್ನೂ - ಜಲ ದಾನಗಳನ್ನು ಕೊಟ್ಟು ತಮ್ಮ ಪಿತೃಗಳನ್ನು ತೃಪ್ತಿ ಪಡಿಸಿ ಅವರ ಪರಮಾನುಗ್ರಹಕ್ಕೆ ಪಾತ್ರರಾಗುವುದು!!
ಆಧಾರ: ಗರುಡ ಪುರಾಣ
 
 ಕೃಷ್ಣಾರ್ಪಣಮಸ್ತು
(ಸತ್ಸಂಗ ಸಂಗ್ರಹ)
****

ದಾನ - ವರದಾನ 🌹
    ಮಾನವನ ಬಳಿಯಿರುವ ಪ್ರತಿಯೊಂದು ವಸ್ತು ಭಗವಂತನ ಆಡಳಿತಕ್ಕೆ ಒಳಪಟ್ಟಿರುವುವು .ಪ್ರತಿಯೊಂದು ವಸ್ತುವಿನಲ್ಲಿ ಆ ಭಗವಂತ ಸಾನಿಧ್ಯವಿದೆ .ಆದ್ದರಿಂದ ಶ್ರೀಹರಿಯ ಪ್ರೀತ್ಯರ್ಥವಾಗಿ ಯೋಗ್ಯರಿಗೆ ವಸ್ತುಗಳನ್ನು ನೀಡುವುದೇ ದಾನ ಎನಿಸುತ್ತದೆ .ತನಗಾಗಿ ಅನ್ನ ಬೇಯಿಸಿಕೊಂಡು ತಿನ್ನುವವನು ಕೇವಲ ಪಾಪವನ್ನೆ ತಿನ್ನುವನು ಎಂದು ಶಾಸ್ತ್ರ ಹೇಳುತ್ತದೆ .ಕೇವಲ ಇಂದ್ರಿಯ ಸುಖಕ್ಕಾಗಿ ಅವನ ಬದುಕು ವ್ಯರ್ಥಎಂದು ಶ್ರೀಕೃಷ್ಣ ಹೇಳಿದ್ದಾನೆ .ಯೋಗ್ಯರಿಗೆ ದಾನ ನೀಡಿದಾಗ ಅವನಿಗೆ ಭೋಗಿಸುವ ಹಕ್ಕು.ಮಧ್ವಾವತಾರವಾದಾಗ  ಮಗು ವಸುದೇವನಿಗೆ ಹಾಲು ಕುಡಿಯಲೆಂದೇ ಮುಡಿಲ್ಲಾಯರು ಒಂದು ಹಸುವನ್ನೇ ದಾನ ಮಾಡಿದರು .ಅದರ ಫಲವಾಗಿ ಮೋಕ್ಷಕ್ಕೆ ಸಾಧನವಾಗುವ ತತ್ತ್ವಜ್ಞಾನವನ್ನೇ ಪಡೆದರಂತೆ .ದ್ರೌಪದಿಯಿಂದ ಅನ್ನದಾನ ಸ್ವೀಕರಿಸಿದ ಭಿಕ್ಷುವು ಕಲಿಯುಗದಲ್ಲಿ ಮಧ್ವಾಚಾರ್ಯರ ಗುರುಗಳೆಂದು ಕೀರ್ತಿಪಡೆದರು .ಶ್ರೀರಾಮಚಂದ್ರನು ವನವಾಸದಲ್ಲಿ ಕಾಡುಮೇಡು ಅಲೆಯುತ್ತಿರುವಾಗ ಎಷ್ಟು ತಿರುಗಿದರೂ ಹಣ್ಣು ಹಂಪಲು ಸಿಗಲಿಲ್ಲವಂತೆ .ಆಗ ರಾಮನು ಲಕ್ಷ್ಮಣನಿಗೆ ಹೇಳುತ್ತಾನೆ  ಪ್ರಾಯಶಃ ನಾವು ಹಿಂದಿನ ಜನ್ಮದಲ್ಲಿ ಏನೂ ದಾನ ಮಾಡಿಲ್ಲ ಎಂದು ತೋರುತ್ತದೆ .ಅದಕ್ಕಾಗಿಯೇ ನಮಗೆ ಈ ಹಸಿರು ಕಾಡಿನಲ್ಲೂ ನಮ್ಮ ಹಸಿವು ನೀಗುವ ಹಣ್ಣು ಸಿಗತ್ತಿಲ್ಲ ಎಂದು 

3
   ಹಿಂದಿನ ಜನ್ಮದಲ್ಲಿ ಮಾಡಿದ ದಾನದಿಂದ ಈ ಜನ್ಮದಲ್ಲಿ ನಿಮ್ಮ ಬಳಿ ತುಂಬಾ ಧನವಿದೆ .ದಾನ ನೀಡುವ ಮಕ್ಕಳನ್ನು ದೇವತೆಗಳೂ ಪೂಜಿಸುತ್ತಾರೆ . ಯಾರು ಹಾಸಿಗೆ ಹಿಡಿದ ತಂದೆಗಾಗಿ ಒಳ್ಳೆಯದಾಗಲಿ ಎಂದು ದಾನವನ್ನು ತಂದೆಯ ಕೈಯಿಂದ ಕೊಡಿಸುವವನೆ ಸುಪುತ್ರನೆನಿಸುವನು .ಹಣ ತಂದೆಯದಾದರೂ ಸರಿ ಸತ್ಪಾತ್ರರನ್ನು ಹುಡುಕಿ ತಂದು ಕೊಡಿಸಿದ್ದು ಮಗನಲ್ಲವೇ ? ಹೀಗಾಗಿ ಅವನ ಮಕ್ಕಳು, ಮೊಮ್ಮಕ್ಕಳು  ಕುಟುಂಬ ತಾನೂ ಸಹ ಪುನೀತನೇ ಆಗುವನು .ಮಕ್ಕಳು ಮೊಮ್ಮಕ್ಕಳು ಸಹೋದರರು ಮಿತ್ರರು ಸಗೊತ್ರದ ಸಂಬಂಧಿಗಳು ಸಾಯುವವನಿಗಾಗಿ ಅಥವಾ ಸತ್ತವನಿಗಾಗಿ ದಾನ ಮಾಡಿಸದಿದ್ದರೆ ಅವರೆಲ್ಲರೂ ಬ್ರಹ್ಮಹತ್ಯೆಯ ಭಾಗಿಗಳಗುವರು .ತಂದೆಗಾಗಿ ದಾನಮಾಡಿದರೆ ನೂರು ಪಟ್ಟು ತಾಯಿಗಾಗಿ ಸಾವಿರ ಪಟ್ಟು , ತಂಗಿಗಾಗಿ ದಾನಮಾಡಿದರೆ ಹತ್ತು ಸಾವಿರ ಪಟ್ಟು ಸೋದರನ ಸದ್ಗತಿಗಾಗಿ ದಾನಮಾಡಿದರೆ ಅನಂತ ಪುಣ್ಯವಿದೆ .ಆದ್ದರಿಂದ ತನ್ನ ಸ್ವತ್ತುನ್ನು ತನಗೆ ಸ್ಮರಣೆ ಇರುವಾಗ ಯೋಗ್ಯರಿಗೆ ದಾನಮಾಡಬೇಕು ಧನಕ್ಕೆ ಮೂರು ದಾರಿ ದಾನ  -ಭೋಗ -ನಾಶ  ಯಾರು ದಾನಮಾಡುವುದಿಲ್ಲವೋ ಅವನಿಗೆ ಭೋಗ ಇನ್ನೊಂದು ದಾರಿ , ಆ ಭೋಗವು ಒದಗಿ ಬಾರದಿದ್ದರೆ ನಾಶವೇ ಧನಕ್ಕೆ ನಿಶ್ಚಿತವಾದ ದಾರಿ .ದೇವರನ್ನು ಪ್ರಾರ್ಥಿಸಿದರೂ ಸಹ ಹಿಂದಿನ ಜನ್ಮದಲ್ಲಿ ಕೊಟ್ಟಿದ್ದರೆ ಸಿಕ್ಕೀತು ! ಇಲ್ಲವಾದರೆ ಸಿಗದು !

2
    ಶ್ವೇತಮಹಾರಾಜನು ಅನೇಕ ಯಜ್ಞ ಯಾಗಗಳನ್ನು ಮಾಡಿದರೂ ಅನ್ನದಾನ ಮಾಡಲಿಲ್ಲ.ಅವನು ಮಾಡಿದ ಸತ್ಕರ್ಮದಿಂದಾಗಿ ಸ್ವರ್ಗಕ್ಕೆ ಹೋದ.ಆದರೇನು ಸ್ವರ್ಗದಲ್ಲಿ ಅವನಿಗೆ ಅನ್ನ ಸಿಗದೆ ಕಂಗಾಲಾದನು .ಅದಕ್ಕಾಗಿ ಅವನು ತನ್ನ ದೇಹದ ಮಾಂಸವನ್ನೇ ತಿಂದು ಬದುಕುತ್ತಿದ್ದ ಎಂದು ರಾಮಾಯಣದಲ್ಲಿ ಬರುತ್ತದೆ .ಹೇಮಾಂಗ ಎಂಬ ರಾಜ ಸುವರ್ಣ ರಜತಗಳನ್ನು ದಾನ ಮಾಡಿದ ಆದರೆ ನೀರನ್ನು ನೀಡಲಿಲ್ಲ.ಆದ್ದರಿಂದ ಅವನಿಗೆ ಹಲ್ಲಿಯ ಜನ್ಮವೇ ಬಂದಿತು.
     ಕುಚೇಲನು ಶ್ರೀಕೃಷ್ಣನಿಗೆ ನೀಡಿದ ಹಿಡಿ ಅವಲಕ್ಕಿ ಅವನಿಗೆ ಹಿಡಿದಿಡಲಾಗದಷ್ಟು ಭಾರೀ ಸಂಪತ್ತು ತಂದಿತು. ಬಲಿಯು ವಾಮನನಿಗೆ ನೀಡಿದ ಮೂರು ಹೆಜ್ಜೆ ಭೂಮಿದಾನ ಬಲಿಯನ್ನು ಮುಂದಿನ ಕಲ್ಪದಲ್ಲಿ ಇಂದ್ರಪದವಿಗೆ ಏರಿಸಿತು."ದಾನಕ್ಕಿಂತ ದೊಡ್ಡದಿಲ್ಲ ದಾನ ಮಾಡಿ ಕೆಟ್ಟವರಿಲ್ಲ "
ಎಂಬ ಗಾದೆಯ ಮಾತೇ ಇದೆ .ಶ್ರೀಹರಿ ಪ್ರೀತ್ಯರ್ಥವಾಗಿ ಮಾಡಿದ ದಾನ ಅನಂತ ಫಲದಾಯಕವಾಗಿದೆ .ಆದ್ದರಿಂದ ಕೃತಯುಗದಲ್ಲಿ ಧ್ಯಾನ, ತ್ರೇತಾಯುಗದಲ್ಲಿ ಯಜ್ಞ , ದ್ವಾಪರದಲ್ಲಿ ಪರಿಚರಣೆ ಸೇವೆ ಪ್ರಮುಖವಾದರೆ ಕಲಿಯುಗದಲ್ಲಿ ದಾನವೇ ಪ್ರಮುಖ .ಆ ದಾನದಿಂದ ಬ್ರಾಹ್ಮಣರ ಬಾಯಿಯಿಂದ ಬಂದ ಹಾರೈಕೆಯ ಮಾತು ವರದಾನವಾಗಿ ಕಷ್ಟಗಳನ್ನು ಕಳೆಯುವುದರಲ್ಲಿ ಸಂದೇಹವಿಲ್ಲ .

4
1     ಮೃತವ್ಯಕ್ತಿಗಾಗಿ ನೀಡಬೇಕಾದ ದಾನಗಳು
                     ..........
 1 ಗೋದಾನ 2 ಎಳ್ಳು  3 ಸುವರ್ಣ 4 ಭೂಮಿ 5ತುಪ್ಪ 6 ವಸ್ತ್ರ 7 ಸಪ್ತಧಾನ್ಯಗಳು  8 ಬೆಲ್ಲ 9 ಬೆಳ್ಳಿ 10 ಉಪ್ಪು
2.    ಮರಣ ಸಮಯದಲ್ಲಿರುವವರು ನೀಡಬೇಕಾದ
                     ದಾನಗಳು.
1 ಎಳ್ಳು 2 ಲೋಹ.  (ಕಬ್ಬಿಣದ ಪಾತ್ರೆ ಆಯುಧ ಬಾಣಲೆ )
3 ಚಿನ್ನ  4 ಹತ್ತಿ  5 ಉಪ್ಪು  6 ಸಪ್ತ ಧಾನ್ಯಗಳು 7 ಭೂಮಿ 
8 ಗೋವು 
 3     ಇವುಗಳು ಸಹ ಯಮಲೋಕ ತಾರಕ 
1 ಅನ್ನದಾನ 2 ಜಲದಾನ 3 ಗೋದಾನ  4 ಭೂದಾನ 5 ಶಯ್ಯಾದಾನ  6 ಪಾದರಕ್ಷೆ 7 ಛತ್ರಿ  8 ಆಸನ 
4.     ಬದುಕಿರುವವರು ನೀಡಬೇಕಾದ ದಾನಗಳು 
1 ಗೋದಾನ 2 ತಿಲದಾನ 3 ಭೂಮಿದಾನ  4 ಸ್ವರ್ಣ  ದಾನ 5 ತುಪ್ಪದಾನ 6 ವಸ್ತ್ರದಾನ 7 ಧಾನ್ಯದಾನ  8 ಬೆಳ್ಳಿ ದಾನ  9 ಧನದಾನ  10 ಅನ್ನದಾನ  11 ಜಲದಾನ  12 ಗ್ರಂಥದಾನ  13 ಕಲಶದನ  14 ಬೀಸಣಿಕೆ ದಾನ  15 ತಾಂಬೂಲ 16 ಗೋಪಿಚಂದನ  17 ಅಭಯದಾನ ಇತ್ಯಾದಿಗಳು.
ಮಧ್ವೆಶಾರ್ಪಣಮಸ್ತು 
(ಕೃಪೆ ಶ್ರೀ ವಿಶ್ವನಂದತೀರ್ಥರು)
***


Related Topics

Pind Daan-->  PINDA DAAN IMPORTANCE

Do it yourself--> PITRU PAKSHA DO IT YOURSELF

Tarpana--->  ತರ್ಪಣ tarpana

*******                                  
27 aug 2020
ಪಿತೃ ಪಕ್ಷ 
ಇದೇ ಬರುವ ಸೆಪ್ಟೆಂಬರ್ 2ನೇ ತಾರೀಖಿನಿಂದ ಮಹಾಲಯ ಪಕ್ಷ ಮಾಸ ಆರಂಭ ವಾಗಲಿದೆ. ಇದೇ ಸಂಧರ್ಭದಲ್ಲಿ ಶ್ರೀ ತುಳಸಿ ಮಠದ ವಿಶಾಲವಾದ ವಾಮನ ಭವನ ದಲ್ಲಿ ಪಿತೃಪಕ್ಷದ ವ್ಯವಸ್ಥೆ ಮಾಡಲಾಗಿದೆ.ಇದರ ಜೊತೆ Covid 19 ಸರ್ಕಾರದ ನಿಯಮಾನುಸಾರ  ಪಕ್ಷ ಮಾಡಲು ಇಚ್ಛೆ ಇರುವವರು.
 ದಯವಿಟ್ಟು ಸಂಪರ್ಕಿಸಿ
ಮೊದಲು ಬಂದವರಿಗೆ ಆದ್ಯತೆ.
7th ಮಹಾಭರಣಿ ಶ್ರಾದ್ಧ 
11th ಅವಿಧಾವ ನವಮಿ. 
13th ಏಕಾದಶಿ. 
14th ಯತಿ ದ್ವಾದಶಿ.. 
16th ಘಾತ ಚತುರ್ದಶಿ. 
17th ಮಹಾಲಯ ಅಮಾವಾಸ್ಯ. 
ಮುರುಳಿಧರ.ಎನ್.
+91 96202 72679 
ತುಳಸಿ ಮಠ 
ಅಗರ villege 
Off ಕನಕಪುರ ರೋಡ್ 
ಬೆಂಗಳೂರು
***************

ಪಕ್ಷ ಮಾಸದ ವಿವರ 
೦೨ - ೯ - ೨೦೨೦ ರಿಂದ ಪ್ರಾರಂಭವಾಗಿ  ೧೭ - ೦೯ - ೨೦೨೦ ರ ವರೆಗೆ.

02:09:20 - ಪ್ರತಿಪದಾ
03:09:20 - ದ್ವಿತಿಯಾ
04:09:20 - ತೃತೀಯಾ
05:09:20 - ಶೂನ್ಯ
06:09:20 - ಚತುರ್ಥಿ
07:09:20 - ಪಂಚಮಿ ( ಮಹಾಭರಣಿ )
08:09:20 - ಷಷ್ಠಿ
09:09:20 - ಸಪ್ತಮಿ
10:09:20 - ಅಷ್ಟಮೀ  
11:09:20 - ಅವಿಧವಾ ನವಮಿ
12:09:20 - ದಶಮಿ
13:09:20 - ಶ್ರಾದ್ಧ ಭಾವ
14:09:20 - ಏಕಾದಶೀ, ದ್ವಾದಶೀ, ಯತಿದ್ವಾದಶೀ
15:09:20 - ತ್ರಯೋದಶೀ
16:09:20 - ಘಾತಚತುರ್ದಶೀ
17:09:20 - ಸರ್ವಪಿತೃ ಶ್ರಾದ್ಧ
ಸಂಗ್ರಹ ~

ಗುರುರಾಜಾಚಾರ್ಯ ಕೃ. ಪುಣ್ಯವಂತ
***********

how to do tila tarpana on grahana day etc



year 2021
ಪಿತೃ ಪಕ್ಷ ಎಂದಿನಿಂದ ಆರಂಭ

ಈ ವರ್ಷದ ಪಿತೃಪಕ್ಷ ಎಂದಿನಿಂದ ಆರಂಭವಾಗಲಿದೆ, ಯಾವ ದಿನ ಪೂಜೆಗೆ ಮಹತ್ವ ಎಂಬುದರ ಸವಿವರ ಮಾಹಿತಿಯನ್ನು ನಿಮಗೆ ನೀಡಲಿದ್ದೇವೆ: 

ಪಿತೃಪಕ್ಷದ ದಿನಾಂಕ ಮತ್ತು ದಿನದ ಮಹತ್ವ ಈ ವರ್ಷ ಅಂದರೆ 2021ನೇ ಸಾಲಿನಲ್ಲಿ ಸೆಪ್ಟೆಂಬರ್‌ 20ರಿಂದ (ಸೋಮವಾರ) ಅಕ್ಟೋಬರ್‌ 6ರವರೆಗೆ (ಬುಧವಾರ) ಪಿತೃಪಕ್ಷವಿದೆ. ಸರ್ವ ಪಿತೃ ಶ್ರಾದ್ಧ/ಅಮವಾಸ್ಯೆ ಅಥವಾ ಮಹಾಲಯ ಅಮಾವಾಸ್ಯೆಯನ್ನು ಅಂತಿಮ ದಿನ ಅಂದರೆ 6ನೇ ಅಕ್ಟೋಬರ್‌ 2021 ರಂದು ಬುಧವಾರ ಆಚರಿಸಲಾಗುತ್ತದೆ.  

ಇದೆ ದಿನಾಂಕ ದಿನ ತಿಥಿ ಶ್ರದ್ಧಾ ದಿನಾಂಕ - ದಿನ - ತಿಥಿ - ಶ್ರದ್ಧಾ 20-09- 2021 - ಸೋಮವಾರ - ಶುಕ್ಲ ಪೂರ್ಣಿಮಾ -ಪೂರ್ಣಿಮಾ ಶ್ರಾದ್ಧ 21- 09-2021 - ಮಂಗಳವಾರ - ಕೃಷ್ಣ ಪ್ರತಿಪಾದ - ಪ್ರತಿಪಾದ ಶ್ರಾದ್ಧ 22- 09-2021 - ಬುಧವಾರ - ಕೃಷ್ಣ ದ್ವಿತೀಯ - ದ್ವಿತೀಯ ಶ್ರದ್ಧಾ 23-09-2021 - ಗುರುವಾರ - ಕೃಷ್ಣ ತೃತೀಯ - ತೃತೀಯ ಶ್ರಾದ್ಧ 24- 09-2021 - ಶುಕ್ರವಾರ - ಭರಣಿ ನಕ್ಷತ್ರ - ಮಹಾ ಭರಣಿ 24-09-2021 - ಶುಕ್ರವಾರ - ಕೃಷ್ಣ ಚತುರ್ಥಿ - ಚತುರ್ಥಿ ಶ್ರಾದ್ಧ 25-09- 2021 - ಶನಿವಾರ - ಕೃಷ್ಣ ಪಂಚಮಿ - ಪಂಚಮಿ ಶ್ರಾದ್ಧ 26-09-2021 - ಭಾನುವಾರ - ಕೃಷ್ಣ ಷಷ್ಠಿ - ಷಷ್ಠಿ ಶ್ರದ್ಧಾ 28-09-2021 - ಮಂಗಳವಾರ - ಕೃಷ್ಣ ಸಪ್ತಮಿ - ಸಪ್ತಮಿ ಶ್ರಾದ್ಧ 29-09-2021 - ಬುಧವಾರ - ಕೃಷ್ಣ ಅಷ್ಟಮಿ - ಅಷ್ಟಮಿ ಶ್ರಾದ್ಧ 30-09-2021 - ಗುರುವಾರ - ಕೃಷ್ಣ ನವಮಿ - ನವಮಿ ಶ್ರಾದ್ಧ 01-10-2021 - ಶುಕ್ರವಾರ - ಕೃಷ್ಣ ದಶಮಿ - ದಶಮಿ ಶ್ರಾದ್ಧ 02-10-2021 - ಶನಿವಾರ - ಕೃಷ್ಣ ಏಕಾದಶಿ - ಏಕಾದಶಿ ಶ್ರಾದ್ಧ 03-10-2021 - ಭಾನುವಾರ - ಮಾಘ ನಕ್ಷತ್ರ - ಮಾಘ ಶ್ರದ್ಧಾ 03-10-2021 - ಭಾನುವಾರ - ಕೃಷ್ಣ ದ್ವಾದಶಿ - ದ್ವಾದಶಿ ಶ್ರದ್ಧಾ 04-10-2021 - ಸೋಮವಾರ - ಕೃಷ್ಣ ತ್ರಯೋದಶಿ - ತ್ರಯೋದಶಿ ಶ್ರದ್ಧಾ 05-10-2021 - ಮಂಗಳವಾರ - ಕೃಷ್ಣ ಚತುರ್ದಶಿ - ಚತುರ್ದಶಿ ಶ್ರದ್ಧಾ 06-10-2021 - ಬುಧವಾರ - ಕೃಷ್ಣ ಅಮಾವಾಸ್ಯೆ - ಸರ್ವ ಪಿತೃ ಅಮಾವಾಸ್ಯೆ ಪಿತೃಪಕ್ಷ  ಪೂರ್ವಜರ ಆತ್ಮಶಾಂತಿ

 ಅಮಾವಾಸ್ಯೆ ಶ್ರದ್ಧಾ ಮುಹೂರ್ತ 6ನೇ ಅಕ್ಟೋಬರ್‌ ಬುಧವಾರ ಮಹಾಲಯ ಅಮಾವಾಸ್ಯೆ ಆಚರಿಸಲಾಗುತ್ತಿದೆ. ಕುತುಪ್‌ ಮೂಹೂರ್ತ : ಬೆಳಿಗ್ಗೆ 11.45 ರಿಂದ ಮಧ್ಯಾಹ್ನ 12.32 ರೋಹಿಣಿ ಮುಹೂರ್ತ: ಮಧ್ಯಾಹ್ನ 12.32 ರಿಂದ 1.19 ಅಪರಾಹ್ನ ಮುಹೂರ್ತ: ಮಧ್ಯಾಹ್ನ 1.19 ರಿಂದ 3.40 ಅಮಾವಾಸ್ಯೆ ತಿಥಿ ಆರಂಭ: ಅಕ್ಟೋಬರ್‌ 5ರಂದು ಸಂಜೆ 7.04 ರಿಂದ ಅಮಾವಾಸ್ಯೆ ತಿಥಿ ಅಂತ್ಯ: ಅಕ್ಟೋಬರ್‌ 6ರಂದು ಸಂಜೆ 4.34 ರವರೆಗೆ ಪಿತೃ ಪಕ್ಷ 
***

" ಶ್ರಾದ್ಧದಲ್ಲಿ ರಜತ ಪಾತ್ರೆಯ ವಿಶೇಷತೆ "

🕉️ಶ್ರಾದ್ಧ ಕರ್ಮಕ್ಕೆ ಉಪಯೋಗಿಸುವ ಪಾತ್ರೆಗಳು ಬೆಳ್ಳಿಯದ್ದೇ ಆಗಿರಬೇಕು.

🕉️ಬೆಳ್ಳಿಯು ಶ್ರೀ ರುದ್ರದೇವರ ಕಣ್ಣಿನಿಂದ ಹುಟ್ಟಿದೆ.

🕉️ಪಿತೃಗಳಿಗೆ ಈ ಧಾತುವು ಅತ್ಯಂತ ಪ್ರಿಯವಾಗಿದೆ.

🕉️ದೇವ ಬ್ರಾಹ್ಮಣರಿಗೆ ದಕ್ಷಿಣೆ ಕೊಡುವಾಗ ಸುವರ್ಣವನ್ನು ಕೊಟ್ಟರೇ, ಪಿತೃಗಳಿಗೆ " ತತ್ತುಲ್ಯ೦ ರಜತಂ " ಎಂಬಂತೆ ಬೆಳ್ಳಿಯನ್ನು ಕೊಡುವುದುಂಟು.

🕉️ಪಿತೃಗಳಿಗೆ ಅನ್ನ ನಿದರ್ಶನ ಮಾಡುವಾದ " ರಜತಮಯ ಪಾತ್ರೇ ಸ್ಥಿತಮನ್ನಂ " ಎಂದು ಹೇಳಲಾಗುತ್ತದೆ.

🕉️ಆದ್ದರಿಂದ ಪಿತೃ ಕಾರ್ಯಗಳಿಗೆ ರಜತ ಪಾತ್ರೆಗಳು ಅವಶ್ಯ ಮತ್ತು ಅನಿವಾರ್ಯ.

🕉️ಈ ಪಿತೃ ಕಾರ್ಯಗಳಲ್ಲಿ ಬೇಕಾದಷ್ಟು ಬೆಳ್ಳಿಯ ಪಾತ್ರಗಳನ್ನೂ ಸಂಗ್ರಹ ಮಾಡುವಷ್ಟು ಯೋಗ್ಯತೆ ಇಲ್ಲದಿದ್ದರೆ ಒಂದಾದರೂ ಬೆಳ್ಳಿಯ ಪಾತ್ರಯನ್ನಿಟ್ಟು ಪಿತೃ ಕಾರ್ಯವನ್ನು ನಡೆಸಬೇಕು.

🕉️ಶ್ರಾದ್ಧ ಕರ್ಮದಲ್ಲಿ ಉಪಯೋಗಿಸಿದ ವಸ್ತುಗಳಲ್ಲಿ ಸ್ವಲ್ಪ ಕಬ್ಬಿಣದ ಅಂಶವಿದ್ದರೂ ಪಿತೃಗಳು ಶ್ರಾದ್ಧದಲ್ಲಿ ಕೊಡಲ್ಪಟ್ಟ ಅನ್ನ ಜಲಾದಿಗಳನ್ನು ಸ್ವೀಕರಿಸದೇ ಆ ಸ್ಥಳದಿಂದ ಓಡಿ ಹೋಗುತ್ತಾರೆ.

" ಪದ್ಮ ಪುರಾಣದ ನಾಗರಖಂಡ " ದಲ್ಲಿ...
ಅಯಸೋ ದರ್ಶನಾದೇವ ಪಿತರೋ ವಿದ್ರವಂತಿ ಹಿ ।।

🕉️ಎಲ್ಲಾ ಪಿತೃಗಳ ಪ್ರೀತ್ಯರ್ಥವಾಗಿ ಬೆಳ್ಳಿಯ ಪಾತ್ರೆ ಅಥವಾ ಬೆಳ್ಳಿ ಮಿಶ್ರಿತವಾದ ಪಾತ್ರೆಯಲ್ಲಿ " ಸ್ವಧಾ ಪಿತೃಭ್ಯ: " ಎಂದು ಹೇಳಿ ಮಾಡಲ್ಪಟ್ಟ ಶ್ರಾದ್ಧವು ಪಿತೃಗಳಿಗೆ ತೃಪ್ತಿಯನ್ನುಂಟು ಮಾಡುತ್ತದೆ.

ಸರ್ವೇಷಾ೦ ರಜತಂ ಪಾತ್ರಮಥವಾ ರಜತಾನ್ವಿತಮ್ ।
ದತ್ತಂ ಸ್ವಧಾ೦ ಪುರೋಧಾಯ ಶ್ರಾಧ್ಧ೦ ಪ್ರೀಣಾತಿ ವೈ ಪಿತ್ರೂನ್ ।।

" ನಾರದೀಯ ಪುರಾಣದನ್ವಯ ಶ್ರಾದ್ಧದಲ್ಲಿ ತುಳಸಿಯ ಮಹತ್ವ "

🕉️ಪ್ರತಿಯೊಂದು ದಾನ ಕೊಡುವಾಗಲೂ, ಶ್ರಾದ್ಧದಲ್ಲಿ ಯವೋದಕ - ತಿಲೋದಕಗಳನ್ನು ಬಿಡುವಾಗಲೂ, ದತ್ತ ಮಾಡುವಾಗಲೂ, ತಾಂಬೂಲ - ದಕ್ಷಿಣೆಗಳನ್ನು ಕೊಡುವಾಗಲೂ ತುಳಸೀ ದಳವನ್ನು ಸೇರಿಸಿಕೊಂಡೇ ಕೊಡಬೇಕು.

ತುಳಸೀ ಗಂಧ ಮಾತ್ರೇಣ ಪಿತರಃ ತುಷ್ಟಿಮಾಪ್ನುಯು: ।
ಪ್ರಯಾಂತಿ ಮುಕ್ತಿ ಮಾರ್ಗೇಣ ತತ್ಪದಂ ಚಕ್ರಪಾಣಿನಃ ।।

🕉️ಪರಮಾತ್ಮನಿಗೆ ಅರ್ಪಿಸಿರುವ ತುಳಸಿಯ ವಾಸನೆಯಿಂದ ಮಾತ್ರವೇ ಪಿತೃಗಳು ಸಂತೋಷವನ್ನು ಹೊಂದುತ್ತಾರೆ. ಚಕ್ರಪಾಣಿಯಾದ ಶ್ರೀಮಹಾವಿಷ್ಣುವಿನ ಲೋಕವನ್ನೂ ಮುಕ್ತಿ ಮಾರ್ಗದಿಂದ ಹೋಗಿ ಸೇರುತ್ತಾರೆ.

ತುಳಸೀ ಶ್ರಾದ್ಧ ಕಾಲೇ ತು ದತ್ವಾ ಶಿರಸಿಧಾರಿತೇ ।
ದಾತಾ ಭೋಕ್ತಾ ಪಿತಾ ತಸ್ಯ ವಿಷ್ಣು ಲೋಕೇ ಮಹೀಯತೇ ।।

🕉️ಶ್ರಾದ್ಧ ಕಾಲದಲ್ಲಿ ಕರ್ತೃವು ಕೊಟ್ಟ ತುಳಸಿಯನ್ನು ( ಅದನ್ನು ) ಭೋಕ್ತೃವು ತಲೆಯಲ್ಲಿ ಧರಿಸುವುದರಿಂದ ಕರ್ತೃ, ಕರ್ತೃವಿನ ತಂದೆ ಅಥವಾ ತಾಯಿ ಮತ್ತು ಭೋಜನ ಮಾಡಿದವರು ಮುಂದೆ ವಿಷ್ಣು ಲೋಕದಲ್ಲಿ ಪ್ರಕಾಶಿತರಾಗಿರುತ್ತಾರೆ.

ಪಿತೃ ಪಿಂಡಾರ್ಚನಂ ಶ್ರಾದ್ಧೇ ಯೈ: ಕೃತಂ ತುಳಸೀದಲೈ: ।
ತರ್ಪಿತಾ ಪಿತರಸ್ತೈಶ್ಚ ಯಾವಚ್ಚ೦ದ್ರಾರ್ಕ ಮೇದಿನೀ ।।

🕉️ಶ್ರಾದ್ಧದಲ್ಲಿ ಯಾರಿಂದ ಪಿತೃ ಪಿಂಡಗಳ ಅರ್ಚನವು ತುಲಸೀದಳಗಳಿಂದ ಮಾಡಲ್ಪಡುತ್ತದೆಯೋ ಅವರಿಂದ ಎಲ್ಲಿಯವರೆಗೂ ಚಂದ್ರ ಸೂರ್ಯಗಳು ಭೂಮಿಗಳಿರುತ್ತವೆಯೋ ಅಲ್ಲಿಯ ವರೆಗೂ ಪಿತೃಗಳು ಸಂತುಷ್ಟರಾಗಿರುವಂತೆ ಮಾಡಲ್ಪಡುತ್ತದೆ.

" ನಾರದೀಯ ಪುರಾಣದನ್ವಯ ವಸ್ತ್ರ - ಜನಿವಾರದ ಮಹತ್ವ "

ವಾಸೋsಸಿ ಸರ್ವ ದೈವತ್ಯಂ ಸರ್ವ ದೇವೈರಭಿಷ್ಟುತಮ್ ।
ವಸ್ತ್ರಾಭಾವೇ ಕ್ರಿಯಾ ನಶ್ಯಾತ್ ಯಜ್ಞ ದಾನಾದಿಕಾ: ಕ್ವಚಿತ್ ।
ತಸ್ಮಾದ್ವಸ್ತ್ರಾಣಿ ದೇಯಾನಿ ಶಾದ್ಧ ಕಾಲೇ ವಿಶೇಷತಃ ।।

🕉️ವಸ್ತ್ರವಾದರೋ ಎಲ್ಲಾ ದೇವತೆಗಳ ಸಾನ್ನಿಧ್ಯವನ್ನು ಹೊಂದಿರುವುದು. ಎಲ್ಲಾ ದೇವತೆಗಳಿಂದಲೂ ಸ್ತುತಿಸಲ್ಪಟ್ಟಿರುವುದು. ಕೆಲೆವೆಡೆ ಯಜ್ಞ ದಾನಾದಿ ಕ್ರಿಯೆಗಳು ವಸ್ತ್ರದಾನ ಮಾಡದುದರಿಂದ ನಷ್ಟವಾಗುತ್ತದೆ. ಆದ್ದರಿಂದ ಶ್ರಾದ್ಧ ಕಾಲದಲ್ಲಿ ವಿಶೇಷವಾಗಿ ವಸ್ತ್ರಗಳನ್ನು ಕೊಡಬೇಕು.

ಆಚ್ಚಾದನಂ ತು ಯೋ ದದ್ಯಾತ್ ಅಹತಂ ಶ್ರಾದ್ಧ ಕರ್ಮಣಿ ।
ಆಯು: ಶ್ರೀ: ಕಾಮಂ ಐಶ್ವರ್ಯ೦ ರೂಪಂ ಚ ಲಭತೇ ಧ್ರುವಮ್ ।।

🕉️ಶ್ರಾದ್ಧ ಕರ್ಮದಲ್ಲಿ ಬ್ರಾಹ್ಮಣರಿಗೆ ಯಾವನು ಉತ್ತಮವಾದ ವಸ್ತ್ರವನ್ನು ಕೊಡುತ್ತಾನೆಯೋ; ಅವನು ನಿಶ್ಚಯವಾಗಿಯೂ ದೀರ್ಘ ಕಾಲದ ಆಯುಷ್ಯವನ್ನೂ, ಸಂಪತ್ತನ್ನೂ, ತನ್ನ ಇಷ್ಟವಾದ ಧನ ಕನಕವನ್ನೂ, ಸಕಲೈಶ್ವರ್ಯಗಳನ್ನೂ, ತೇಜಸ್ಸಿನಿಂದ ರೂಪವನ್ನೂ ಹೊಂದುತ್ತಾನೆ.

🕉️ಉತ್ತಮವಾದ ವಸ್ತ್ರವನ್ನು ತಗೆದುಕೊಡಲು ಹಣದ ಸೌಕರ್ಯ ಇಲ್ಲದವರು ತಮ್ಮ ಶಕ್ತಿಗನುಗುಣವಾಗಿ ವಸ್ತ್ರಕ್ಕೆ ಪ್ರತಿಯಾಗಿ ಕೇವಲ ಹಣವನ್ನಾದರೂ ದಾನ ಮಾಡಬೇಕು.

ಯಜ್ನೋಪವೀತಂ ವೈ ದದ್ಯಾತ್ ಶ್ರಾದ್ಧ ಕಾಲೇಷು ಧರ್ಮವಿತ್ ।
ಪಾವನಂ ಸರ್ವ ವಿಪ್ರಾಣಾ೦ ಬ್ರಹ್ಮ ದಾನಸ್ಯ ತತ್ಫಲಂ ।।

🕉️ಧರ್ಮವನ್ನರಿತವನು ಎಲ್ಲಾ ವಿಪ್ರರನ್ನು ಶುದ್ಧಿಗೊಳಿಸಿವ ಜನಿವಾರವನ್ನು ಶ್ರಾದ್ಧ ಕಾಲದಲ್ಲಿ ಕೊಡಬೇಕು. ಅದರಿಂದ ಸರ್ವ ವ್ಯಾಪಿಯಾದ ಪರಬ್ರಹ್ಮನನ್ನೇ ಅಂದರೆ ವಿಶ್ವದಲ್ಲಿರುವ ಎಲ್ಲಾ ವಸ್ತುಗಳನ್ನೂ ದಾನ ಮಾಡಿದ ಫಲ ಉಂಟಾಗುತ್ತದೆ.

✍🏻 ಸಂಗ್ರಹ-ಶ್ರೀ ಕೃಷ್ಣ ಮೂರ್ತಿ ಊರ್ಡಿಗೆರೆ
***

ಪಿಂಡ ದಾನ ಮಾಡುವ ಪವಿತ್ರ ಸ್ಥಳಗಳು
ಪಿತೃ ಪಕ್ಷದಲ್ಲಿ ಪಿಂಡ ದಾನ ಮಾಡುವಾಗ ಎಲ್ಲಾ ಸ್ಥಳಗಳಲ್ಲೂ ಪಿಂಡ ದಾನ ಮಾಡಲಾಗುವುದಿಲ್ಲ. ಕೆಲವೊಂದು ಪವಿತ್ರ ಸ್ಥಳಗಳಲ್ಲಿ ಪಿಂಡವನ್ನು, ಶ್ರಾದ್ಧಾ ಕಾರ್ಯಗಳನ್ನು ಮಾಡಲಾಗುತ್ತದೆ.

🌸ಪಿಂಡ ದಾನ ಮಾಡುವ ಪ್ರಮುಖ ಸ್ಥಳಗಳಾವುವು ಗೊತ್ತೇ🌸

🪷ಬ್ರಹ್ಮಕಪಾಲ ಘಾಟ್

🌹ಉತ್ತರಾಖಂಡದಲ್ಲಿರುವ ಬ್ರಹ್ಮಕಪಾಲ ಘಾಟ್ ಕೂಡ ಶ್ರಾದ್ಧಾ ಮತ್ತು ಪಿಂಡ ದಾನ ಕರ್ಮಗಳಿಗೆ ಅತ್ಯಂತ ಮಹತ್ವವನ್ನು ಹೊಂದಿದೆ. ಈ ಸ್ಥಳದಲ್ಲಿ ಶಿವನು ಬ್ರಹ್ಮ ಹತ್ಯೆ ದೋಷದಿಂದ ಮುಕ್ತಿಯನ್ನು ಪಡೆದನೆಂಬ ಉಲ್ಲೇಖವಿದೆ. ಅಷ್ಟು ಮಾತ್ರವಲ್ಲ, ಈ ಸ್ಥಳ ಮಹಾಭಾರತದೊಂದಿಗೂ ಕೂಡ ಸಂಬಂಧವನ್ನು ಹೊಂದಿದೆ. ಮಹಾಭಾರತ ಯುದ್ಧದ ನಂತರ ಪಾಂಡವರು ನಾವು ಮಾಡಿದ ಪಾಪಗಳಿಗೆ ಮುಕ್ತಿಯನ್ನು ಪಡೆಯಲು ಇಲ್ಲಿ ಪೂಜೆಯನ್ನು ನಡೆಸಿದ್ದರು. ಬ್ರಹ್ಮಕಪಾಲ ಘಾಟ್ ಬದ್ರಿನಾಥದ ಬಳಿಯಿರುವ ಅಲಕಾನಂದ ತೀರದಲ್ಲಿದೆ.

🌹ಕಾಶಿ:

ಎಂಬುವುದು ದೇವಾದಿ ದೇವ ಮಹಾದೇವನ ಸ್ಥಳ. ಇದು ಭಾರತದ ಪ್ರಮುಖ ಧಾರ್ಮಿಕ ಸ್ಥಳಗಳಲ್ಲಿ ಒಂದಾಗಿದೆ. ಶ್ರದ್ಧಾ ಕರ್ಮ ಮತ್ತು ಪಿಂಡ ದಾನ ಮಾಡುವುದಕ್ಕಾಗಿ ದೂರದಿಂದ ಜನರು ಇಲ್ಲಿಗೆ ಆಗಮಿಸುತ್ತಾರೆ. ಚಿತಾಭಸ್ಮವನ್ನು ಬಿಡಲು, ಸತ್ತ ವ್ಯಕ್ತಿಗಳ ಮೂಳೆಯನ್ನು ನೀರಿನಲ್ಲಿ ಹರಿ ಬಿಡಲು ಮತ್ತು ಶ್ರಾದ್ಧಾ ಕ್ರಮಗಳನ್ನು ಮಾಡಲು ಇಲ್ಲಿ ಸಂಪೂರ್ಣ ಅವಕಾಶವನ್ನು ನೀಡಲಾಗಿದೆ. ನಂಬಿಕೆಗಳ ಪ್ರಕಾರ, ಕಾಶಿಯಲ್ಲಿ ಸತ್ತವರು ನರಕ ಅಥವಾ ಯಮಲೋಕಕ್ಕೆ ಹೋಗುವುದಿಲ್ಲ. ಬದಲಾಗಿ, ಅವರು ಸ್ವರ್ಗವನ್ನು ಸೇರುತ್ತಾರೆನ್ನುವ ನಂಬಿಕೆಯಿದೆ.

🪷ಮೇಘಂಕರ :

🌸ಬ್ರಹ್ಮಪುರಾಣ ಸೇರಿದಂತೆ ಅನೇಕ ಪುರಾಣಗಳಲ್ಲಿ ಶ್ರಾದ್ಧಾ ಮತ್ತು ಪಿಂಡ ದಾನ ಕಾರ್ಯಗಳಿಗೆ ಮಹಾರಾಷ್ಟ್ರದ ಮೇಘಂಕರ ಕೂಡ ಪವಿತ್ರವಾದ ಸ್ಥಳವೆಂದು ಉಲ್ಲೇಖಿಸಲಾಗಿದೆ. ಮೇಘಂಕರವು ಭಗವಾನ್ ವಿಷ್ಣುವಿಗೆ ಸಂಬಂಧಿಸಿದ ಪವಿತ್ರ ಸ್ಥಳವಾಗಿದೆ. ಈ ಪವಿತ್ರ ಸ್ಥಳದಲ್ಲಿ ಶ್ರಾದ್ಧಾವನ್ನು ಮಾಡುವುದರಿಂದ ಆ ವ್ಯಕ್ತಿಯ ಎಲ್ಲಾ ಪಾಪ - ಕರ್ಮಗಳು ದೂರಾಗುವುದು ಮತ್ತು ಮೋಕ್ಷದ ದಾರಿಯು ಸಿಗುವುದೆನ್ನುವ ನಂಬಿಕೆಯಿದೆ.

🪷ಗಂಗಾ, ಯಮುನಾ ಮತ್ತು ಸರಸ್ವತಿಯ ಸಂಗಮ :

🌹ಗಂಗಾ, ಯಮುನಾ ಮತ್ತು ಸರಸ್ವತಿಯು ಸಂಗಮವಾಗುವ ಸ್ಥಳದಲ್ಲಿ ಪಿಂಡ ದಾನ ಮಾಡುವುದು ಅತ್ಯಂತ ಪವಿತ್ರವೆಂದು ಪರಿಗಣಿಸಲಾಗಿದೆ. ಎಲ್ಲಾ ತೀರ್ಥಯಾತ್ರೆಯ ರಾಜನೆಂದೇ ಪ್ರಸಿದ್ಧಿಯನ್ನು ಪಡೆದ ಪ್ರಯಾಗರಾಜದಲ್ಲಿ ಪ್ರತಿ ವರ್ಷ ಪಿತೃ ಪಕ್ಷದ ಸಮಯಕ್ಕೆ ದೊಡ್ಡ ಜಾತ್ರೆಯೇ ನಡೆಯುತ್ತದೆ. ಜನರು ದೂರದ ಊರಿನಿಂದ ಈ ಸ್ಥಳಕ್ಕೆ ಭೇಟಿ ನೀಡಿ ಪೂರ್ವಜರ ಆತ್ಮಕ್ಕೆ ಶಾಂತಿಯನ್ನು ಕೋರುತ್ತಾರೆ. ಈ ಸ್ಥಳದಲ್ಲಿ ಸೃಷ್ಟಿಕರ್ತ ಬ್ರಹ್ಮನು ಸೃಷ್ಟಿ ನಿರ್ಮಾಣದ ಕಾರ್ಯ ಮುಗಿದ ನಂತರ ಇಲ್ಲಿ ದೊಡ್ಡ ಯಜ್ಞವನ್ನು ಮಾಡಿದನೆಂಬ ನಂಬಿಕೆಯಿದೆ. ಭಗವಾನ್ ವಿಷ್ಣು ಈ ಪವಿತ್ರ ಸ್ಥಳದ ಅಧಿಪತಿಯಾಗಿದ್ದಾನೆ.

🪷ಮಥುರಾ :

🌹ಶ್ರೀಕೃಷ್ಣನ ಜನ್ಮ ಸ್ಥಳವಾದ ಮಥುರಾದಲ್ಲೂ ಶ್ರಾದ್ಧಾ ಕರ್ಮ ಮತ್ತು ಪಿಂಡ ದಾನ ಮಾಡುವುದು ಅತ್ಯಂತ ಶ್ರೇಷ್ಟವಾಗಿದೆ. ಈ ಸ್ಥಳವನ್ನು ಪುರಾಣದಲ್ಲಿ ಅತ್ಯಂತ ಶ್ರೇಷ್ಟವೆಂದು ಹೇಳಲಾಗಿದೆ. ಶ್ರೀಕೃಷ್ಣನಿಗೆ ಸಂಬಂಧಿಸಿದ ಅನೇಕ ಧಾರ್ಮಿಕ ಸ್ಥಳಗಳನ್ನು ಇಲ್ಲಿ ನಾವು ನೋಡಬಹುದು. ಮಥುರಾದಲ್ಲಿ ಪೂರ್ವಜರಿಗೆ ಅಥವಾ ಪಿತೃಗಳಿಗೆ ತರ್ಪಣವನ್ನು ನೀಡುವುದರಿಂದ ಅವರ ಆತ್ಮವು ಶಾಂತಿಯಿಂದಿರುತ್ತದೆ ಮತ್ತು ಕೃಷ್ಣನ ಆಶೀರ್ವಾದ ಪಡೆದುಕೊಳ್ಳುವರು ಎನ್ನುವ ನಂಬಿಕೆಯಿದೆ.

🪷ಗಯಾ :

🌹ಕರ್ನಾಟಕದಲ್ಲಿನ ಲಕ್ಷ್ಮಣಬಾಣ ಕೂಡ ಪಿಂಡ ದಾನಕ್ಕೆ ಹೆಸರುವಾಸಿಯಾದ ಸ್ಥಳವಾಗಿದೆ. ಈ ಸ್ಥಳದಲ್ಲಿ ಭಗವಾನ್ ಶ್ರೀ ರಾಮನು ತನ್ನ ತಂದೆ ದಶರಥನ ಶ್ರಾದ್ಧಾ ಕರ್ಮವನ್ನು ಮಾಡಿದನೆಂಬ ಉಲ್ಲೇಖವಿದೆ. ಪಿಂಡ ದಾನ ಮಾಡುವುದರಿಂದ ಮರಣ ಹೊಂದಿದ ವ್ಯಕ್ತಿಗಳ ಆತ್ಮವು ಜನನ ಮತ್ತು ಮರಣ ಬಂಧನದಿಂದ ಮುಕ್ತಿಯನ್ನು ಪಡೆಯುತ್ತದೆ ಎನ್ನುವ ನಂಬಿಕೆಯಿದೆ. ಇನ್ನು ಕೆಲವೊಂದು ನಂಬಿಕೆಗಳ ಪ್ರಕಾರ, ಭಗವಾನ್ ರಾಮನು ತನ್ನ ತಾಯಿ, ಪತ್ನಿ ಸೀತೆ ಮತ್ತು ಲಕ್ಷ್ಮಣನೊಂದಿಗೆ ಗಯಾದಲ್ಲಿ ತಂದೆಗೆ ಪಿಂಡ ದಾನ ಮಾಡಿದನೆಂದು ಹೇಳಲಾಗುತ್ತದೆ.

🪷ಹಂಸ ಕುಂಡ ಮತ್ತು ರೇತಸ ಕುಂಡ :

🌹ಕೇದಾರನಾಥದಲ್ಲಿನ ಹಂಸ ಕುಂಡ ಮತ್ತು ರೇತಸ ಕುಂಡದಲ್ಲಿ ಪಿಂಡ ದಾನ ಮಾಡುವುದರಿಂದ ಮರಣ ಹೊಂದಿದ ಆತ್ಮಗಳಿಗೆ ಮೋಕ್ಷ ದೊರೆಯುವುದೆನ್ನುವ ನಂಬಿಕೆಯಿದೆ. ಮೋಕ್ಷವಿಲ್ಲದೇ ಅಲೆದಾಡುತ್ತಿರುವ ಆತ್ಮಗಳಿಗೆ ಇಲ್ಲಿ ಮೋಕ್ಷವನ್ನು ನಿಡಲಾಗುವುದು. ಈ ಸ್ಥಳದಲ್ಲಿ ಶ್ರಾದ್ಧಾ ಕರ್ಮಗಳನ್ನು, ಪಿಂಡ ದಾನವನ್ನು ಮಾಡಬಹುದಾಗಿದೆ. ಅಯೋಧ್ಯೆಯಲ್ಲಿ ಪಿಂಡ ದಾನ ಮಾಡುವುದನ್ನು ಕೂಡ ಶ್ರೇಷ್ಟವೆಂದು ಪರಿಗಣಿಸಲಾಗುತ್ತದೆ. ಸಪ್ತಪುರಿಗಳಲ್ಲಿ ಅಯೋಧ್ಯೆಯನ್ನು ಮೊದಲ ಪುರಿಯೆಂದು ಗೌರವಿಸಲಾಗುವುದು. ಅಯೋಧ್ಯೆ ಪುರಿಯಲ್ಲಿ ಪಿಂಡ ದಾನ ಮಾಡುವುದರಿಂದ ಪಿತೃಪೂಜೆ ಮಾಡುವುದರಿಂದ ಪಿತೃಗಳು ಆಶೀರ್ವಾದವನ್ನು ಪಡೆದುಕೊಳ್ಳುವರು.
***
*ಪಿತೃ ಪಕ್ಷ : ಈ ತಪ್ಪುಗಳನ್ನು ಮಾಡಿದರೆ ಪಿತೃ ದೋಷ ಖಚಿತ..! ಈ ತಪ್ಪುಗಳಿಂದ ದೂರಿವಿರಿ*

 ಭಾದ್ರಪದ ಮಾಸದ ಶುಕ್ಲ ಪಕ್ಷದ ಹುಣ್ಣಿಮೆ ದಿನದಿಂದ ಅಮಾವಾಸ್ಯೆಯವರೆಗೆ ಪಿತೃ ಪಕ್ಷ ಇರುವುದು. ಈ 15 ದಿನಗಳಲ್ಲಿ, ನಮ್ಮ ಪಿತೃಗಳನ್ನು ಸ್ಮರಿಸುತ್ತಾ, ಪೂರ್ವಜರ ಆತ್ಮಗಳಿಗೆ ತರ್ಪಣೆಯನ್ನು ನೀಡುತ್ತಾ, ಶ್ರಾದ್ಧ ಕರ್ಮ ಮತ್ತು ದಾನವನ್ನು ಮಾಡುವ ಮೂಲಕ ತೃಪ್ತಿ ನೀಡಲು ಪ್ರಯತ್ನಿಸುತ್ತೇವೆ. ಈ ದಿನಗಳಲ್ಲಿ ಪೂರ್ವಜರು ಭೂಮಿಗೆ ಬರುತ್ತಾರೆ ಎಂದು ಹೇಳಲಾಗುತ್ತದೆ. ಇಂತಹ ಸನ್ನಿವೇಶದಲ್ಲಿ, ಅವರ ಶ್ರಾದ್ಧವನ್ನು ಸರಿಯಾಗಿ ಮಾಡದಿದ್ದರೆ, ಪೂರ್ವಜರು ಕೋಪಗೊಂಡು ಅತೃಪ್ತರಾಗಿ ಹಿಂತಿರುಗುತ್ತಾರೆ. ಅವರು ತಮ್ಮ ವಂಶಸ್ಥರನ್ನು ಶಪಿಸುತ್ತಾರೆ. ಅದೇ ಸಮಯದಲ್ಲಿ, ಅವರಿಗೆ ಸಂತೋಷವನ್ನು ನೀಡಿದರೆ ನಮ್ಮನ್ನು ಆಶೀರ್ವದಿಸುತ್ತಾರೆ. ಶ್ರಾದ್ಧ ಮಾಡುವ ಮೂಲಕ ಒಬ್ಬರಿಗೆ ಪಿತ್ರ ದೋಷ ಎದುರಾಗುವುದಿಲ್ಲ ಎನ್ನುವ ನಂಬಿಕೆಯಿದೆ. ಆದರೆ ಪಿತೃ ಪಕ್ಷದ ಸಮಯದಲ್ಲಿ ಕೆಲವು ವಿಷಯಗಳನ್ನು ನೋಡಿಕೊಳ್ಳುವುದು ಅಗತ್ಯವಾಗಿದೆ. ಪೂಜೆಯ ಕೆಲವು ನಿಯಮಗಳಿವೆ, ಶ್ರಾದ್ಧವನ್ನು ಸರಿಯಾಗಿ ಮಾಡಿದರೆ, ಪೂರ್ವಜರು ಸಂತೋಷದಿಂದ ಹಿಂತಿರುಗುತ್ತಾರೆ. ಪಿತೃ ಪಕ್ಷದಲ್ಲಿ ಪಾಲಿಸಬೇಕಾದ ನಿಯಮಗಳಾವುವು..?
                                                        *​ಪಿತೃ ಪಕ್ಷದಲ್ಲಿ ಶ್ರಾದ್ಧ ಸಮಯ*

ಪಿತೃ ಪಕ್ಷದಲ್ಲಿ ಯಾವಾಗಲೂ ಮಧ್ಯಾಹ್ನದ ಸಮಯವನ್ನು ನೋಡಿಕೊಂಡು ಶ್ರಾದ್ಧವನ್ನು ಮಾಡಬೇಕು ಎಂದು ಶಾಸ್ತ್ರದಲ್ಲಿ ಹೇಳಲಾಗಿದೆ. ಬ್ರಾಹ್ಮಣರಿಗೆ ಆಹಾರ ನೀಡುವ ಸಮಯ ಮಧ್ಯಾಹ್ನವಾಗಿರಬೇಕು. ಪಿತೃ ಪೂಜೆಗೆ ಈ ಸಮಯ ಅತ್ಯುತ್ತಮವೆಂದು ನಂಬಲಾಗಿದೆ. ಇದರ ಹೊರತಾಗಿ, ಪಂಚಬಲಿ ಭೋಗವನ್ನು ಸಹ ನೀಡಬೇಕು. ಈ ಸಮಯದಲ್ಲಿ, ಹಸುಗಳಿಗೆ, ಕಾಗೆಗಳಿಗೆ, ನಾಯಿಗಳಿಗೆ, ದೇವರುಗಳಿಗೆ ಮತ್ತು ಇರುವೆಗಳಿಗೆ ನೈವೇದ್ಯವನ್ನು ಅರ್ಪಿಸಬೇಕು.

*​ಪಿತೃ ಪಕ್ಷದಲ್ಲಿ ಬಳಸುವ ಪಾತ್ರೆ*

ಪಿತೃ ಪಕ್ಷದ ಸಮಯದಲ್ಲಿ ಬ್ರಾಹ್ಮಣರಿಗೆ ನೀಡುವ ಆಹಾರ ಮತ್ತು ಪಾತ್ರೆಗಳು ಎಂದಿಗೂ ಕಬ್ಬಿಣದಿಂದ ಮಾಡಿರಬಾರದು. ಈ ಸಮಯದಲ್ಲಿ ಕಬ್ಬಿಣದ ಪಾತ್ರೆಗಳನ್ನು ಬಳಸುವುದರಿಂದ ಕುಟುಂಬದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ ಎಂದು ಹೇಳಲಾಗುತ್ತದೆ. ಇದನ್ನು ಮಾಡುವುದರಿಂದ, ಆರ್ಥಿಕ ಬಿಕ್ಕಟ್ಟು ಹೆಚ್ಚಾಗುತ್ತದೆ ಮತ್ತು ಜನರ ನಡುವಿನ ಸಂಘರ್ಷವೂ ಹೆಚ್ಚಾಗುತ್ತದೆ.

*​ಇವುಗಳನ್ನು ಮಾಡಬೇಡಿ*

ಯಾರಾದರೂ ಮನೆಯಲ್ಲಿ ಶ್ರಾದ್ಧ ಮಾಡುತ್ತಿರುವಾಗ ಅಥವಾ ನೀವು ಆಹಾರಕ್ಕಾಗಿ ಬೇರೆಯವರ ಮನೆಗೆ ಹೋಗುತ್ತಿರುವಾಗ ದೇಹದ ಯಾವುದೇ ಭಾಗದಲ್ಲಿ ಎಣ್ಣೆಯನ್ನು ಹಚ್ಚಬೇಡಿ. ಇದರೊಂದಿಗೆ ಪಾನ್ ಕೂಡ ತಿನ್ನಬಾರದು. ಪಿತೃ ಪಕ್ಷದ ಸಮಯದಲ್ಲಿ ಸುಗಂಧ ದ್ರವ್ಯವನ್ನು ಹಚ್ಚುವುದನ್ನು ಶಾಸ್ತ್ರಗಳಲ್ಲಿ ನಿಷೇಧಿಸಲಾಗಿದೆ. ಇದು ಮಾತ್ರವಲ್ಲ, ಈ ದಿನಗಳಲ್ಲಿ ಕೂದಲು ಮತ್ತು ಗಡ್ಡ ತೆಗೆಯುವುದನ್ನು ಕೂಡ ನಿಷೇಧಿಸಲಾಗಿದೆ.

*​ಶುಭ ಕಾರ್ಯ ನಿಷೇಧಿಸಲಾಗಿದೆ*
                                                                     ಶಾಸ್ತ್ರಗಳ ಪ್ರಕಾರ, ಪಿತೃ ಪಕ್ಷದ ಸಮಯದಲ್ಲಿ ಯಾವುದೇ ಶುಭ ಕಾರ್ಯಗಳನ್ನು ಮಾಡಬಾರದು. ಈ ದಿನಗಳಲ್ಲಿ ಒಬ್ಬರ ಆತ್ಮದ ಧ್ವನಿಯನ್ನು ಕೇಳುವ ಮೂಲಕ ಪೂರ್ವಜರನ್ನು ನೆನಪಿಸಿಕೊಳ್ಳಬೇಕು ಎಂದು ಹೇಳಲಾಗಿದೆ.

*​ಮನೆಗೆ ಬಂದವರನ್ನು ಸತ್ಕರಿಸಿ*
            ‌       ‌                                                                                                                                                                                                       ಪಿತೃ ಪಕ್ಷದ ಸಮಯದಲ್ಲಿ ಯಾವುದೇ ವ್ಯಕ್ತಿಯನ್ನು ಅಗೌರವಿಸಬಾರದು. ಈ ಸಮಯದಲ್ಲಿ, ಯಾವುದೇ ಭಿಕ್ಷುಕ ಅಥವಾ ಯಾವುದೇ ಪ್ರಾಣಿಯು ನಿಮ್ಮ ಮನೆಯ ಮುಂದೆ ಬಂದರೆ, ಅವುಗಳನ್ನು ಖಾಲಿ ಕೈಯಲ್ಲಿ ಕಳುಹಿಸಬಾರದು. ಅಲ್ಲದೇ, ಯಾರಾದರೂ ನಿಮ್ಮ ಬಳಿ ಸಹಾಯ ಕೇಳಿದರೆ, ಸಾಧ್ಯವಾದಷ್ಟು ಸಹಾಯ ಮಾಡಿ. ಈ ದಿನಗಳಲ್ಲಿ ಪೂರ್ವಿಕರು ನಿಮ್ಮ ಮನೆಗೆ ಯಾವುದೇ ರೂಪದಲ್ಲಿ ಬರಬಹುದು ಎನ್ನುವ ನಂಬಿಕೆಯಿದೆ.
****

ಮಘಾ ನಕ್ಷತ್ರ
ಮಘಾನಕ್ಷತ್ರಕ್ಕೆ ಪಿತೃದೇವತೆಗಳು
ನಿಯಾಮಕರಾದ್ದರಿಂದ ಆ ನಕ್ಷತ್ರವನ್ನು ಪೈತ್ರಕ, 
ಪಿತ್ರರ್ಕ್ಷ ಎಂದು ಕರೆಯುತ್ತಾರೆ. ಪಿತೃಗಳಿಗೆ ಅತ್ಯಂತ
ಪ್ರಿಯವಾದ ನಕ್ಷತ್ರ. 
ಮಘಾನಕ್ಷತ್ರ ಇರುವ ತ್ರಯೋದಶಿಯಂದು ಪಕ್ಷ
ಮಾಡುವದು ಮಹಾಫಲವನ್ನು ನೀಡುತ್ತದೆ, 
ಗಜಚ್ಛಾಯಾಶ್ರಾದ್ಧದ ಫಲವನ್ನು ನೀಡುತ್ತದೆ
ಎಂದು ಶಾಸ್ತ್ರಗಳು ತಿಳಿಸುತ್ತವೆ. 
*ಆದರೆ, ಮಕ್ಕಳಿರುವವರು, ಮಕ್ಕಳಾಗುವ
ಸಾಧ್ಯತೆ ಇರುವವರು ಸರ್ವಥಾ ಮಘಾ ನಕ್ಷತ್ರ
ಇರುವ ತ್ರಯೋದಶಿಯಂದು ಪಕ್ಷ
ಮಾಡಬಾರದು. ಮತ್ತು ಶುಕ್ರವಾರವೂ ಪಕ್ಷಕ್ಕೆ
ನಿಷಿದ್ದ. ಹೀಗಾಗಿ ಈ ದಿವಸ ಪಕ್ಷ ಸಲ್ಲದು.*

ಆದರೆ, ಗಂಡು ಮಕ್ಕಳು ಇಲ್ಲದವರು, ಮುಂದೆ
ಮಕ್ಕಳಾಗುವ ಸಾಧ್ಯತೆ ಇಲ್ಲದವರು ಮಾತ್ರ
ಮಘಾನಕ್ಷತ್ರದಲ್ಲಿ ಶ್ರಾದ್ಧ ಮಾಡಬೇಕು. 
ಹೀಗಾಗಿ ಗಂಡು ಮಕ್ಕಳಿಲ್ಲದೇ ಇರುವವರು, 
ಮತ್ತು ಮಕ್ಕಳಾಗುವ ಸಾಧ್ಯತೆಯೇ ಇಲ್ಲದವರು ಮಘಾನಕ್ಷತ್ರದಲ್ಲಿ ಶ್ರಾದ್ಧ
ಮಾಡುವದರಿಂದ ಅವರ ಪಿತೃಗಳಿಗೆ
ಶಾಶ್ವತವಾದ ತೃಪ್ತಿಯುಂಟಾಗುತ್ತದೆ. 
ಕರ್ತೃವಿಗೂ ಸಹ ಮರಣಾನಂತರ ವಿಶೇಷ
ಸದ್ಗತಿಯುಂಟಾಗುತ್ತದೆ.
ನಮಗೆ ಮಕ್ಕಳಿಲ್ಲ, ಶ್ರಾದ್ಧ ಮಾಡುವವರಿಲ್ಲ, 
ನಮ್ಮಿಂದ ನಮ್ಮ ವಂಶ ನಿಂತುಹೋಯಿತು, 
ಮುಂದೆ ನಮಗೆ ನಮ್ಮ ಪಿತೃಗಳಿಗೆ ಪಿಂಡ
ಪ್ರದಾನ ಮಾಡುವವರು ಇಲ್ಲ ಎಂದು
ಕೊರಗುವವರಿಗೆ ಈ ಮಘಾಯುಕ್ತ
ತ್ರಯೋದಶಿ ವರದಾನ. 
ಈಯೋಗ ಪ್ರತೀವರ್ಷ ದೊರೆಯುವದಿಲ್ಲ. 
ಹೀಗಾಗಿ ಮಕ್ಕಳಿಲ್ಲದೇ ಇರುವವರು, ಅಥವಾ
ಹೆಣ್ಣು ಮಕ್ಕಳಿದ್ದು, ಗಂಡು ಮಕ್ಕಳಿಲ್ಲದೇ
ಇರುವವರು ಮಹಾಪ್ರಯತ್ನ ಪಟ್ಟು ಈ ದಿವಸ
ಪಕ್ಷವನ್ನು ಮಾಡಬೇಕು. 
ಸಮಗ್ರ ಕುಲ ಇದರಿಂದ ತೃಪ್ತವಾಗುತ್ತದೆ. ಈ
ದಿವಸದ ಶ್ರಾದ್ಧದಲ್ಲಿ ಸಮೃದ್ಧವಾಗಿ ಶುದ್ಧವಾದ
ಜೇನುತುಪ್ಪವನ್ನು ಬಳಸಬೇಕು. ಅಕ್ಷಯತೃಪ್ತಿ.
***


Pitru Stotra
pitru stotra

****

ಪಿತೃಗಳನ್ನು ಮತ್ತು ಅವರ ಪೂರ್ವಿಕರನ್ನು ನೆನಪಿಸಿಕೊಳ್ಳುವುದು ಪ್ರತಿಯೊಬ್ಬರ ಕರ್ತವ್ಯ. ಹಿರಿಯರು ಹಾಕಿದ ಗೆರೆಯಲ್ಲಿಯೇ ನಡೆಯಬೇಕೆಂದೇನೂ ಅಲ್ಲ. ಆದರೆ, ಅವರು ತೋರಿಸಿದ ಸನ್ಮಾರ್ಗ ಹಾಗೂ ತಮ್ಮನ್ನು ಭೂಮಿಗೆ ಕರೆ ತರುವಂತೆ ಮಾಡಿದ ಅವರಿಗೆ ಥ್ಯಾಂಕ್ಸ್ ಹೇಳು ಈ ಪದ್ಧತಿ

ಪುದಿತಿ ನರಕವ್ಯಾಖ್ಯಾಃ ದುಃಖಂ ಚ ನರಕಂ ವಿದುಃ ।
ಪುದಿತ್ರಾಣಾತ್ತತಃ ಪುತ್ರಂ 
ಹೇಚ್ಚಂತಿ ಪರತ್ರ ಚ ।।

ಶ್ರುತಿಯಲ್ಲಿಯೂ ತಂದೆಗೆ (Father) ಒಳ್ಳೆಯ ಲೋಕಗಳನ್ನು ಸಂಪಾದಿಸಿ ಕೊಡುವವನು ಪುತ್ರನೆಂದೂ.
ಪುತ್ರಃ ಪಿತ್ರೇ ಲೋಕಕೃತ್ ಜಾತವೇದಾಃ ।। - ತೈತ್ತಿರೇಯ ಬ್ರಾಹ್ಮಣ

ಆದ್ದರಿಂದ ತಂದೆ ತಾಯಿಗಳ ಶ್ರಾದ್ಧ ಮಾಡುವ ಅಧಿಕಾರ ಪುತ್ರನಿಗೆ (ಮಗನಿಗೆ) ಮಾತ್ರ ಶ್ರುತಿ - ಸ್ಮೃತಿಗಳು ಅಧಿಕಾರವನ್ನು ನೀಡಿದೆ.

ಆಷಾಢದ ಹುಣ್ಣಿಮೆಯಿಂದ ಐದನೇ ಪಕ್ಷ ಅಂದರೆ ಭಾದ್ರಪದ ಕೃಷ್ಣ ಪಕ್ಷವು ಪಂಚಮ. ಇದಕ್ಕೆ ಅಪರ ಪಕ್ಷವೆಂದೂ, ಪಿತೃ ಪಕ್ಷವೆಂದೂ, ಮಹಾಲಯ (Mahalaya) ಪಕ್ಷವೆಂದೂ ಪ್ರಸಿದ್ಧ. ಈ ಅವಧಿಯಲ್ಲಿ ಕನ್ಯಾ ರಾಶಿಯಲ್ಲಿ ರವಿಯಿದ್ದರೆ ಇನ್ನೂ ವಿಶೇಷ. ಈ ಸಮಯದಲ್ಲಿ ಪಿತೃಗಳು ತಮ್ಮವರಿಂದ ಪಿಂಡದಾನ, ತಿಲೋದಕಗಳನ್ನು ನಿರೀಕ್ಷೆ ಮಾಡಿರುತ್ತಾರೆ. ಯಾರು ಶ್ರದ್ಧೆಯಿಂದ ಈ ಅವಧಿಯಲ್ಲಿ ಪಿತೃ ಆರಾಧನೆ ಮಾಡುವರೋ ಅವರಿಗೆ ಸಂತೃಪ್ತರಾದ ಪಿತೃಗಳು ಆಯುಷ್ಯ, ಸಂತಾನ, ಐಶ್ವರ್ಯ (Prosperity), ಜ್ಞಾನ (Knowledge), ಭಕ್ತಿ (Devotion), ವೈರಾಗ್ಯಗಳು (Detachement) ಆಗಲೆಂದು ಆಶೀರ್ವಾದ ಮಾಡುತ್ತಾರೆ.

ಈ ಮಹಾಲಯ ಪಕ್ಷದಲ್ಲಿ ಪ್ರತಿನಿತ್ಯವೂ ಪಿತೃ ದೇವತೆಗಳ ತೃಪ್ತ್ಯರ್ಥ ಶ್ರಾದ್ಧವನ್ನು ಮಾಡಬೇಕು. ಅದಕ್ಕೆ ಶಕ್ಯವಿಲ್ಲದಿದ್ದಲ್ಲಿ ಒಂದು ದಿನವಾದರೂ ಶ್ರಾದ್ಧವನ್ನು ಪಿಂಡ ಪ್ರದಾನ ಪೂರ್ವಕ ಮಾಡಲೇಬೇಕು. ಪ್ರತಿನಿತ್ಯ ಶ್ರಾದ್ಧದ ಪ್ರತಿನಿಧಿಯಾಗಿ ತಿಲ ತರ್ಪಣವನ್ನು ಕೊಡಲೇಬೇಕು. ಯಾರು ಈ ಕಾಲದಲ್ಲಿ ಪಿತೃಗಳಿಗೆ ಪಿತೃ ತರ್ಪಣ, ಪಿಂಡ ದಾನಗಳನ್ನು ಸಮರ್ಪಿಸುವುದಿಲ್ಲವೋ ಅವರಿಗೆ ಪಿತೃಗಳು ನಿರಾಶರಾಗಿ ಶಾಪವನ್ನು ಕೊಟ್ಟು ಹೋಗುವರು. ಪಿತೃ ಕೋಪವು ನಮ್ಮ ಭವಿಷ್ಯದ ಭಾಗ್ಯವನ್ನೂ, ವಂಶಾಭಿವೃದ್ಧಿಯನ್ನೂ ತಡೆಗಟ್ಟುವುದು. ಪಿತೃ ಪ್ರಸಾದವಿದ್ದರೇ ಮಕ್ಕಳು, ಮೊಮ್ಮಕ್ಕಳು ಎಲ್ಲರೂ ಪಿತೃಗಳ ಶುಭ ಹರಿಕೆಯಿಂದ ಆರೋಗ್ಯ, ಆಯುಷ್ಯಗಳನ್ನು ಪಡೆದು ಜೀವನದಲ್ಲಿ ಪ್ರಗತಿಯನ್ನು ಹೊಂದುವರು..

ಶ್ರಾದ್ಧದಲ್ಲಿ ಹಾಗೂ ತಿಲ ತರ್ಪಣ ದಲ್ಲಿ ದಾನದ  ವೈಶಿಷ್ಟ್ಯ  ಆಚ್ಚಾದನಂ ತು ಯೋ ದದ್ಯಾತ್ ಅಹತಂ ಶ್ರಾದ್ಧ ಕರ್ಮಣೀ ।
ಆಯುಃ ಶ್ರೀಃ ಕಾಮಂ ಐಶ್ವರ್ಯಂ ರೂಪಂ ಚ ಲಭತೇ ಧ್ರುವಮ್ ।।

ಶ್ರಾದ್ಧ ಕರ್ಮ ಹಾಗೂ ತಿಲಾ ತರ್ಪಣ ದಲ್ಲಿ ಬ್ರಾಹ್ಮಣರಿಗೆ ಯಾವನು ದಾನವನ್ನು ನೀಡುವಾಗ.. ತುಳಸಿ.ಯನ್ನು ಇಟ್ಟು...ಉತ್ತಮವಾದ ದಾನಗಳು.. ಹೊಸ ವಸ್ತ್ರ .(New Cloth) ಕೊಡುತ್ತಾನೆಯೋ, ಅವನು ನಿಶ್ಚಯವಾಗಿಯೂ ದೀರ್ಘಕಾಲದ ಆಯುಷ್ಯವನ್ನೂ (Long Life), ಸಂಪತ್ತನ್ನೂ, ತನ್ನ ಇಷ್ಟವಾದ ಧನ ಕನಕಾದಿ ಸಕಲೈಶ್ವರ್ಯಗಳನ್ನೂ; ತೇಜಸ್ಸಿನಿಂದ ಕೂಡಿದ ಒಳ್ಳೆಯ ರೂಪವನ್ನೂ ಹೊಂದುತ್ತಾನೆ!

ಸರ್ವ ಪಿತರಂತರ್ಯಾಮಿ  ಪ್ರಾಣಸ್ಥ ಶ್ರೀಲಕ್ಷ್ಮೀಜನಾರ್ದನ ಪ್ರಿಯತಾಂ....
***

ಪಿತೃಪಕ್ಷದ ಹದಿನೈದು  ದಿನಗಳಲ್ಲಿ ಯಾವುದಾದರೂ ಒಂದು ದಿನ ಮಾತ್ರ ಪಿಂಡಪ್ರದಾನದೊಂದಿಗೆ ಮಾಡುವ ಶ್ರಾದ್ಧವನ್ನು ಸಕೃನ್ಮಹಾಲಯ ಎನ್ನಲಾಗುತ್ತದೆ .

ಸಕೃನ್ಮಹಾಲಯ  ಯಾವುದಾದರೊಂದು ದಿನ ಮಾಡುವುದಲ್ಲ ,
ಮೃತ ತಿಥಿಯಲ್ಲಿಯೇ ಮಾಡಬೇಕು .
ಉದಾಹರಣೆ .... ಮಾಘ ಶುಕ್ಲ ಪಂಚಮಿ
 ಮೃತ ತಿಥಿಯಾದರೆ 
ಪಿತೃಪಕ್ಷದ ಪಂಚಮಿಯಂದು ಮಾಡಬೇಕು.
ಇದಕ್ಕೆ ವಾರ ನಕ್ಷತ್ರಾದಿ ಯಾವ ನಿಷೇಧವೂ ಇಲ್ಲ .
ಏಕೆಂದರೆ  ಮೃತ್ಯು ತಿಥಿಶ್ರೇಷ್ಠ.
ಮೃತತಿಥಿಯಂದು ಅನಾನುಕೂಲವಾಗಿದ್ದು ಬೇರೆ ದಿನ ಮಾಡುವುದಾದರೆ ಭರಣಿ ನಕ್ಷತ್ರ (ಯಮನ ನಕ್ಷತ್ರ)ದಂದು 
ಅಥವಾ  ಮಹಾಲಯ ಅಮಾವಾಸ್ಯೆಯಂದು ಮಾಡಬಹುದು.
***

ಸುಮಧ್ವ ಸೇವಾ Sumadhwa Seva:
Ghata Chaturdashi – by narahari sumadhwa
ಘಾತ ಚತುರ್ದಶಿ

Bhadrapada Krishna Chaturdashi –
ಪ್ರತಿಪತ್ ಪ್ರಭೃತಿಷ್ವೇಕಾಂ ವರ್ಜಯಿತ್ವಾ ಚತುರ್ದಶೀಂ |
ಶಸ್ತ್ರೇಣ ತು ಹತಾ ಯೇ ವೈ ತೇರ್ಭ್ಯಸ್ತತ್ರ ಪ್ರದೀಯತೇ |

ಘಾತ ಚತುರ್ದಶಿ ಶ್ರಾದ್ಧವನ್ನು ಭಾದ್ರಪದ ಮಾಸದ ಕೃಷ್ಣ ಪಕ್ಷದ ಚತುರ್ದಶಿ ದಿನದಂದು ಆಚರಿಸಲಾಗುತ್ತದೆ.

ಭಾದ್ರಪದ ಕೃಷ್ಣ ಚತುರ್ದಶಿ ದಿನದಂದೇ ಮೃತರಾದವರಿಗೆ ಅಂದು ಕಾಲಶ್ರಾದ್ಧ ಮಾಡಬೇಕು.  ಪಕ್ಷ ಮಾಡುವಂತಿಲ್ಲ.


ಘಾತ ಚತುರ್ದಶಿ ಶ್ರಾದ್ಧ ಯಾರನ್ನು ಕುರಿತು ಮಾಡಬೇಕು ?
- ಅಪಘಾತದಲ್ಲಿ ಮೃತರಾದವರಿಗಾಗಿ, ಆತ್ಮಹತ್ಯೆ ಮಾಡಿಕೊಂಡವರಿಗಾಗಿ,  ಹತ್ಯೆಗೊಳಗಾದವರಿಗಾಗಿ,  ಯುದ್ಧದಲ್ಲಿ ಪ್ರಾಣತ್ಯಾಗ ಮಾಡಿದವರು, ಇತ್ಯಾದಿ ಕಾರಣದಿಂದ ಮೃತರಾದವರ ಕುರಿತು ಮಾಡುವ ಶ್ರಾದ್ಧ.    

ಇಲ್ಲಿ ಪ್ರತ್ಯೇಕವಾಗಿ ಅಂತಹವರಿಗೇ ಶ್ರಾದ್ಧ ಮಾಡತಕ್ಕದ್ದು.    ಈ ದಿನ ಬೇರೆ ಯಾರೂ ಪಕ್ಷ ಶ್ರಾದ್ಧ ಮಾಡತಕ್ಕದ್ದಲ್ಲ.

ಆದರೆ ಪಕ್ಷ ಮಾಸ ಪೂರ್ತಿ ಪಕ್ಷ ಶ್ರಾದ್ಧ ಮಾಡುವವರು ಈ ದಿನ ಕೂಡ ಪಕ್ಷ ಮಾಡತಕ್ಕದ್ದು.  

ತಂದೆ ಚತುರ್ದಶಿ ದಿನ ಮೃತರಾಗಿದ್ದರೂ ಅವರ ಪಕ್ಷ ಘಾತ ಚತುರ್ದಶಿ ದಿನ ಮಾಡುವಂತಿಲ್ಲ.  ಬೇರೆ ಸೂಕ್ತ ದಿನ ಮಾಡಬೇಕು.  

ಘಾತ ಚತುರ್ದಶಿ ದಿನದಂದೇ ಮೃತರಾದವರಿಗೆ ಸಾಂವತ್ಸರಿಕ ಶ್ರಾದ್ಧ ಮಾಡತಕ್ಕದ್ದು.  

ಸಹಗಮನ ಮಾಡಿದವರು, ಅಗ್ನಿಯಲ್ಲಿ ಪ್ರವೇಶಿಸಿ ಆತ್ಮಹತ್ಯೆ ಮಾಡಿಕೊಂಡವರು, ಅನಾರೋಗ್ಯದಿಂದ ಗುರುಹಿರಿಯರ ಅಪ್ಪಣೆಯಂತೆ ಅಗ್ನಿ ಅಥವಾ ನೀರಿನಲ್ಲಿ ಆತ್ಮಾಹುತಿ ಮಾಡಿಕೊಂಡವರು "ಘಾತರು" ಎನಿಸುವುದಿಲ್ಲ.  ಅಂತಹವರಿಗೆ ಘಾತ ಚತುರ್ದಶಿ ದಿನ ಪಕ್ಷ ಮಾಡಬೇಕಿಲ್ಲ.

This day is meant for  those who have passed away due to accidents or those who met with unnatural death like snake bites, accidents, suicide, war, and other natural calamities, etc.  The day is known as Ghata Chaturdashi.  There is a strong belief that the souls of these people who had an unnatural death, like death due to weapons, poison, Snake bite, etc., will be wandering around and do not rest in peace.   Others not to do paksha on this day.  The tithi is meant for Accidental victims only.  For those who are doing “Sakrunmahaalaya”. that is shraddha on only a particular day of the paksha maasa, they need not do it on this day.  However for those who are doing paksha daily, they can do it on this day also.  Even in case of pitru having dead on Chaturdashi day, Paksha not to be performed on this day.  However general shraddha to be performed on the death day.
Please note :
1. This Ghata Chaturdashi does not apply to those who have died by deha tyaaga (self death) through entering agni, jumping in water due to ill health, shastra reethya, or a lady doing “sahagamana” .  They are not considered as “Ghaata”.  As such, Paksha not to be performed for these people.
2.  This paksha for “Ghata” to be performed for only those victims  and not for others.  If for pitamahadees also paksha performed on this day, the punya will be taken away by rakshaas.  If all the three pitru – pitamaha – prapitamaha are dead due to “Ghata” (shastra), then for all the three Ghata chaturdashi paksha to be performed.

Ghata Chaturdashi – ಘಾತ ಚತುರ್ದಶಿ
Bhadrapada Krishna Chaturdashi –

ಪ್ರತಿಪತ್ ಪ್ರಭೃತಿಷ್ವೇಕಾಂ ವರ್ಜಯಿತ್ವಾ ಚತುರ್ದಶೀಂ |
ಶಸ್ತ್ರೇಣ ತು ಹತಾ ಯೇ ವೈ ತೇರ್ಭ್ಯಸ್ತತ್ರ ಪ್ರದೀಯತೇ |

ಘಾತ ಚತುರ್ದಶಿ - ಅಪಘಾತದಲ್ಲಿ ಮೃತರಾದವರು, ಪ್ರಾಣಿಗಳಿಂದ ಹತರಾದವರು,  ಯುದ್ಧದಲ್ಲಿ ಪ್ರಾಣತ್ಯಾಗ ಮಾಡಿದವರು, ಇತ್ಯಾದಿ ಕಾರಣದಿಂದ ಮೃತರಾದವರ ಕುರಿತು ಮಾಡುವ ಶ್ರಾದ್ಧ.    ಇಲ್ಲಿ ಪ್ರತ್ಯೇಕವಾಗಿ ಅಂತಹವರಿಗೇ ಶ್ರಾದ್ಧ ಮಾಡತಕ್ಕದ್ದು.    ಈ ದಿನ ಬೇರೆ ಯಾರೂ ಪಕ್ಷ ಶ್ರಾದ್ಧ ಮಾಡತಕ್ಕದ್ದಲ್ಲ.

ಆದರೆ ಪಕ್ಷ ಮಾಸ ಪೂರ್ತಿ ಪಕ್ಷ ಶ್ರಾದ್ಧ ಮಾಡುವವರು ಈ ದಿನ ಕೂಡ ಪಕ್ಷ ಮಾಡತಕ್ಕದ್ದು.  

ತಂದೆ ಚತುರ್ದಶಿ ದಿನ ಮೃತರಾಗಿದ್ದರೂ ಅವರ ಪಕ್ಷ ಘಾತ ಚತುರ್ದಶಿ ದಿನ ಮಾಡುವಂತಿಲ್ಲ.  ಬೇರೆ ಸೂಕ್ತ ದಿನ ಮಾಡಬೇಕು.  

ಘಾತ ಚತುರ್ದಶಿ ದಿನದಂದೇ ಮೃತರಾದವರಿಗೆ ಸಾಂವತ್ಸರಿಕ ಶ್ರಾದ್ಧ ಮಾಡತಕ್ಕದ್ದು.  

ಸಹಗಮನ ಮಾಡಿದವರು, ಅಗ್ನಿಯಲ್ಲಿ ಪ್ರವೇಶಿಸಿ ಆತ್ಮಹತ್ಯೆ ಮಾಡಿಕೊಂಡವರು, ಅನಾರೋಗ್ಯದಿಂದ ಗುರುಹಿರಿಯರ ಅಪ್ಪಣೆಯಂತೆ ಅಗ್ನಿ ಅಥವಾ ನೀರಿನಲ್ಲಿ ಆತ್ಮಾಹುತಿ ಮಾಡಿಕೊಂಡವರು "ಘಾತರು" ಎನಿಸುವುದಿಲ್ಲ.  ಅಂತಹವರಿಗೆ ಘಾತ ಚತುರ್ದಶಿ ದಿನ ಪಕ್ಷ ಮಾಡಬೇಕಿಲ್ಲ.
****

Yati Mahalaya ಯತಿಮಹಾಲಯ 
#Yathi #Dwadashi*
🌺🌺🌺🌺🌺🌺
ಭಾದ್ರಪದ ಬಹುಳ ದ್ವಾದಶಿ ತಿಥಿಯನ್ನು ಯತಿಗಳಿಗೆ ಮೀಸಲಾಗಿಟ್ಟಿದ್ದಾರೆ.  ಅಂದು ಯಾರೂ ಪಕ್ಷ ಮಾಡುವಂತಿಲ್ಲ. 
ಆದರೆ ಪಕ್ಷ ಮಾಸ ಪೂರ್ತಿ ಪಕ್ಷ ಮಾಡುವ ಸಂಕಲ್ಪ ಮಾಡಿರುವವರು ಮಾಡಬಹುದು. 

 ಅದೇ ದಿನ ತಂದೆ ತಾಯಿಯ ಶ್ರಾದ್ಧವಿದ್ದರೆ ಶ್ರಾದ್ಧ ಮಾಡಬಹುದು.   ಆದರೆ ಪಕ್ಷ ಮಾಡುವಂತಿಲ್ಲ.  

ಯತಿಮಹಾಲಯರಂದು ಯತಿಗಳಿಗೂ ಪಿಂಡಪ್ರದಾನ ಮಾಡಬೇಕಾ ?

ಇಲ್ಲ. ಅವರಿಗೆ ಎಂದಿನಂತೆ ಹಸ್ತೋದಕ ನೀಡಬೇಕು. ಈ ದಿನ ಸಮಸ್ತ ಗತಿಸಿದ ಯತಿಗಳಿಗೂ ಹಸ್ತೋದಕ ನೀಡಬೇಕು.  

ಶ್ರೀ ಪದ್ಮನಾಭ ತೀರ್ಥರು (ಆನೆಗೊಂದಿ)
ಶ್ರೀ ನರಹರಿ ತೀರ್ಥರು (ಹಂಪಿ)
ಶ್ರೀ ಮಾಧವತೀರ್ಥರು (ಮಣ್ಣೂರು)
ಶ್ರೀ ಅಕ್ಷೋಭ್ಯತೀರ್ಥರು (ಮಳಖೇಡ)
ಶ್ರೀ ಜಯತೀರ್ಥರು (ಮಳಖೇಡ)
ವಿದ್ಯಾಧಿರಾಜತೀರ್ಥರು
ಕವೀಂದ್ರತೀರ್ಥರು (ಆನೆಗೊಂದಿ)
ವಾಗೀಶತೀರ್ಥರು (ಆನೆಗೊಂದಿ)
ರಾಮಚಂದ್ರ ತೀರ್ಥರು (ಮಳಖೇಡ) ವಿಭುದೇಂದ್ರತೀರ್ಥರು (ತಿರುನಲ್ವೇಲಿ) ವಿದ್ಯಾನಿಧಿತೀರ್ಥರು (ಮಳಖೇಡ)
ಬ್ರಹ್ಮಣ್ಯತೀರ್ಥರು (ಅಬ್ಬೂರು)
ಶ್ರೀಪಾದರಾಜರು (ಮುಳಬಾಗಿಲು)
ಶ್ರೀ ವ್ಯಾಸರಾಜರು (ಆನೆಗೊಂದಿ)
ಶ್ರೀ ವಾದಿರಾಜರು (ಸೋಂದಾ)
ಶ್ರೀ ಸುರೇಂದ್ರತೀರ್ಥರು (ಮಧುರೈ)
ಶ್ರೀ ವಿಜಯೀಂದ್ರತೀರ್ಥರು (ಕುಂಭಕೋಣಂ)
ಶ್ರೀ ಸುಧೀಂದ್ರ ತೀರ್ಥರು (ಆನೆಗೊಂದಿ)
ಶ್ರೀ ರಘೋತ್ತಮರು (ತಿರುಕೋಯಿಲೂರು)
ಶ್ರೀ ರಾಘವೇಂದ್ರತೀರ್ಥರು 
(ಮಂತ್ರಾಲಯ)
+

ಹೀಗೆ ಎಲ್ಲಾ ಪರಂಪರೆಯ ಯತಿಗಳಿಗೂ / ಅಥವಾ ನಿಮ್ಮ ನಿಮ್ಮ ಮಠದ ಪರಂಪರೆಯ ಯತಿಗಳ ಸ್ಮರಣೆ ಪೂರ್ವಕ ಹಸ್ತೋದಕ ನೀಡಬೇಕು. 

ಯತಿಗಳಿಗೆ ತರ್ಪಣ ಕೊಡಬೇಕಾ ?
ಇಲ್ಲ. ಹಸ್ತೋದಕ ಮಾತ್ರ.

ಹಸ್ತೋದಕ ಯಾವಾಗ ಕೊಡಬೇಕು

ನೈವೇದ್ಯ
ರಮಾ ನೈವೇದ್ಯ
ಬ್ರಹ್ಮ ವಾಯುಗಳಿಗೆ ನೈವೇದ್ಯ
ಗರುಡ ಶೇಷರಿಗೆ ನೈವೇದ್ಯ
ವೈಶ್ವದೇವ

ನಂತರ ಹಸ್ತೋದಕ ಯತಿಗಳ ತಾರತಮ್ಯ ಪ್ರಕಾರ (ಯತಿಗಳ ವೃಂದಾವನ ಪ್ರವೇಶ ಕ್ರಮದಲ್ಲಿ)

ಯತಿ ಹಸ್ತೇ ಜಲಂ ದದ್ಯಾತ್ 
ಭೈಕ್ಷ್ಯಂ ದದ್ಯಾತ್ ಪುನರ್ಜಲಂ !
ತದನ್ನಂ ಮೇರುಣಾ ತುಲ್ಯಂ
ತಜ್ಜಲಂ ಸಾಗರೋಪಮಂ!

ಯತಿಗಳ ಕೈಯಲ್ಲಿ ಜಲವನ್ನು ಹಾಕಿ ನಂತರ ಭಿಕ್ಷೆಯನ್ನು ಹಾಕಬೇಕು. ನಂತರ ಜಲವನ್ನು ಕೊಡಬೇಕು. ಭಿಕ್ಷೆಗಾಗಿ ನೀಡಿದ ಅನ್ನವು ಮೇರು ಪರ್ವತಕ್ಕೆ ಭೋಜನ ಹಾಕಿದ ಪುಣ್ಯ ಸಮ.

ವಟೌ ತು ಸಮದತ್ತಂ ಸ್ಯಾತ್
ಗೃಹಸ್ತೇ ದ್ವಿಗುಣಂ ಭವೇತ್ !
ವಾನಪ್ರಸ್ಥೇ ಶತಗುಣೌ 
ಯತೌ ದತ್ತಂ ಅನಂತಕಂ !

ಬ್ರಹ್ಮಚಾರಿಗೆ ಭೋಜನ ಹಾಕಿದರೆ ಸಮಸಮ ಫಲ ಬರುತ್ತದೆ. ಅಂದರೆ ನಾವು ಏನು ದಾನ ನೀಡುತ್ತೇವೋ ಅದರ ಫಲ ಬರುತ್ತದೆ.    ಗೃಹಸ್ಥನಿಗೆ ನೀಡಿದರೆ ಎರಡು ಪಟ್ಟು ಫಲ ಬರುತ್ತದೆ. ವಾನಪ್ರಸ್ಥನಲ್ಲಿ ನೀಡಿದರೆ ನೂರು ಪಟ್ಟು ಹೆಚ್ಚು ಫಲ ಬರುತ್ತದೆ.
ಆದರೆ ಒಬ್ಬ ಯತಿಗೆ ಭೋಜನ ಮಾಡಿಸಿದರೆ ಅನಂತ ಫಲ ಪ್ರಾಪ್ತಿಯಾಗುತ್ತದೆ.  ಅದಕ್ಕೇ ಯತಿಗಳ ಭಿಕ್ಷೆ ಮಾಡಿಸುವುದು.

ಯತಿರ್ಯತ್ರ ಗೃಹೇ ಭುಂಕ್ತೇ
ತತ್ರ ಭುಂಕ್ತೇ ಹರಿಸ್ವಯಂ !
ಹರಿರ್ಯತ್ರ ಗೃಹೇ ಭುಂಕ್ತೇ 
ತತ್ರ ಭುಂಕ್ತೇ ಜಗತ್ರಯಂ !

ಒಬ್ಬ ಯತಿಗೆ ಭೋಜನ ಮಾಡಿಸಿದರೆ ಹರಿ ಅವರಲ್ಲಿದ್ದು ತಾನುಣ್ಣುವನು. ಯಾರ ಮನೆಯಲ್ಲಿ ಹಿರಿ ಯತಿಯಲ್ಲಿದ್ದು ತಾನು ಭುಂಜಿಸುವನೋ ಆ ಮನೆಯಲ್ಲಿ ಮೂರು ಲೋಕವೇ ತಿಂದಂತಾಗುತ್ತದೆ.

ಅದಕ್ಕೇ ಮನೆಯಲ್ಲಿ ಯತಿಗೆ ಭೋಜನ ಮಾಡಿಸಲಾಗದಿದ್ದಾಗ ಮಠಗಳಲ್ಲಿ ಹಸ್ತೋದಕಕ್ಕೆ ಸೇವೆ ಕೊಡುತ್ತಾರೆ.

ನಿತ್ಯ ಯತಿಗಳಿಗೆ ಹಸ್ತೋದಕ ನೀಡಬೇಕು. ಕನಿಷ್ಠ ಇಂದಾದರೂ ಹಸ್ತೋದಕ ನೀಡಿ.

ಯತಿಗಳಿಗೆ ಏಕೆ ಹಸ್ತೋದಕ ನೀಡಬೇಕು -.   ಯತಿಗಳು ನಮ್ಮ ಸನಾತನ ಪರಂಪರೆಯ ಎತ್ತಿಹಿಡಿದು ಶಿಷ್ಯ ಪರಂಪರೆಯ ಪರವಾಗಿ ಸಮಸ್ತ ಜಗತ್ತಿಗೇ ಕಲ್ಯಾಣವನ್ನು ಪ್ರಾರ್ಥಿಸುತ್ತಾರೆ.  ಹಲವಾರು ಟೀಕಾ ಟಿಪ್ಪಣಿಗಳ , ವ್ಯಾಖ್ಯಾನಗಳ ರಚಿಸಿ ನಮಗೆ ವೇದವ್ಯಾಸರ ಬ್ರಹ್ಮ ಸೂತ್ರಾದಿಗಳ ಅರ್ಥವಾಗುವಂತೆ ಮಾಡಿರುತ್ತಾರೆ.  ಉಪದೇಶಾಮೃತ ನೀಡಿ ನಮ್ಮನ್ನು ಉದ್ಧಾರ ಮಾಡಿರುತ್ತಾರೆ. ಅದಕ್ಕಾಗಿ ನಮಗೆ ಯತಿಋಣ ವಿರುತ್ತದೆ.  ಅದಕ್ಕಾಗೇ ಯತಿಗಳಿಗೆ ಹಸ್ತೋದಕ ನೀಡಬೇಕು.

Bhadrapada Bahula Dwadashi is meant for Yathigalu.  On this day, hastodaka will be given to all the Yatigalu who have entered Vrundavana.  On this day, Paksha for other pitrugalu and forefathers not to be done.  This day is exclusively reserved for Yathigalu.

The reason for performing the Shraddha for Sanyaasis and saints is that they have preserved and passed on the knowledge of sanatharma dharma and had done great service to the society.  We have to do yathi dwadashi shraddha to get ourselves free from Yati Runa, that is why it is called as “Yati Dwadashi”.  These Yatigalu having prepared so many shastra granthaas, vyaakyaanaanaas, Teeka granthaas have helped us a lot in learning ancient granthaas.  So, we have Runa to them  – Yati Runa.  That is why we have do Yati Mahalaya.

 

This shraaddha to be done by Yatiputraaas only.  Who are Yatiputraas?  Those who have grantha/shastra runa from the yatigalu are termed as “yati putraas”. Yati Shraadda does not mean that we need to give pinda pradhana to yatigalu. This is anna santarpana/hastodaka to yatigalu in the form of bhojana to brahmana suvasini santarpane.

Those who are doing daily paksha shraddha can do it on Yathi Mahalaya Dwadashi also.

ನರಹರಿ ಸುಮಧ್ವ
ಸುಮಧ್ವ ಸೇವಾ
****






2 comments:

  1. ಈ ಎಲ್ಲ ಲೇಖನಗಳು ಉಪಯುಕ್ತವೆಂದು ತೋರುತ್ತದೆ. ಇವುಗಳನ್ನು ಪ್ರಕಟಿಸಿದ್ದಕ್ಕಾಗಿ ಹೃತ್ಪೂರ್ವಕ ಧನ್ಯವಾದಗಳು

    ReplyDelete