SEARCH HERE

Monday 12 April 2021

ಶಿವರಂಜಿನಿ ಯಾರು shivaranjini

ಶಿವರಂಜಿನಿ ಯಾರೆಂಬ ಪ್ರೆಶ್ನೆ ಗೆ ಉತ್ತರ

" ಸಮುದ್ರ  ಮಥನ  "  ಕಾಲದಲ್ಲಿ  ಶ್ರೀ  ಮನ್  ನಾರಾಯಣನು  ಮೋಹಿನಿ  ರೂಪ  ಧರಿಸಿ  ಅಮೃತ  ವನ್ನು  ಅಂಚಿದನು .

ಆ  ಸಮಯ ದಲ್ಲಿ  ವಿಷ  ಕುಡಿದು  ಅಮಲಿನಲ್ಲಿದ  ಶಿವನಿಗೆ  ಶ್ರೀ  ಮನ್  ನಾರಾಯಣನ  ಮೋಹಿನಿ  ರೂಪವನ್ನು  ನೋಡಲಾಗಲಿಲ್ಲ .

ನಾರದರು  ಎಲ್ಲಾ  ದೇವತೆಗಳು  ಋಷಿಗಳು  ಶ್ರೀ  ಮನ್  ನಾರಾಯಣನ  ಆ  ರೂಪವನ್ನು  ಕೊಂಡಾಡ  ತೊಡಗಿದಾಗ  ಶಿವನು  ತಾನು  ಆ ರೂಪವನ್ನು  ನೋಡಲಾಗಲಿಲ್ಲವಲ್ಲಾ  ಎನಿಸಿ  ಶ್ರೀಮನ್  ನಾರಾಯಣನನ್ನು  ತನಗಾಗಿ  ಒಮ್ಮೆ  ಮೋಹಿನಿ  ರೂಪ  ಧರಿಸುವಂತೆ  ಕೇಳಿ  ಕೊಂಡನು .

ನಾರಾಯಣನು  ಮುಂದೆ  ನಿಮಗಾಗಿ  ಒಂದು  ಸಾರಿ  ಆ  ರೂಪ  ಧರಿಸುವುದಾಗಿ  ತಿಳಿಸಿದನು .

ಶಿವನು  ಪಾರ್ವತಿಯ  ಜೊತೆ  ಆನಂದದಲ್ಲಿರುವ  ಸಮಯವನ್ನು  ನೋಡಿ  ನಾರಾಯಣನು  ಮೋಹಿನಿ  ರೂಪದಲ್ಲಿ  ಕಾಣಿಸಿ  ಕೊಂಡನು .

ಮೋಹಿನಿಯನ್ನು  ನೋಡಿದ  ಶಿವನು  ಆ  ರೂಪ  ಲಾವಣ್ಯಕ್ಕೆ  ಮರುಳಾಗಿ  ಆಕೆಯನ್ನು  ಪಡೆಯುವ  ಸಲುವಾಗಿ  ತನ್ನ  ಪಕ್ಕ  ಇದ್ದ  ಪಾರ್ವತಿಯನ್ನು  ಮರೆತು  ಮೋಹಿನಿಯ  ಹಿಂದೆ  ಹಿಂದೆ  ಸಾಗ  ತೊಡಗಿದನು .

ಈ  ಸಮಯದಲ್ಲಿ  ಶಿವನಿಂದ  ಪಂಚ  ಲೋಹಗಳ  ಉತ್ಪತ್ತಿಯಾಯಿತು .

ಶ್ರೀಮನ್  ನಾರಾಯಣನು  ಮೂಲ  ರೂಪಕ್ಕೆ  ಬಂದನು.  ಶಿವನ ಮುಂದೆ ಕಾಣಿಸಿಕೊಂಡ
ಈ  ಮೋಹಿನಿ  ರೂಪಕ್ಕೆ "  ಶಿವ  ರಂಜಿನಿ  " ಎಂದು  ಕರೆಯುತ್ತಾರೆ.
*****


No comments:

Post a Comment