ರುದ್ರ ಮಂತ್ರಗಳು,
ಹಾಗೂ ಚಮಕ ಮಂತ್ರಗಳು
ಮತ್ತು Mathematics.:-
Maths ನಮ್ಮ daily life ನಲ್ಲಿ ಹೇಗೆ ಹಾಸುಹೊಕ್ಕಾಗಿ ಇದೆಯೋ, ಅದೇರೀತಿ ನಮ್ಮ ಸನಾತನ ಧಾರ್ಮಿಕ ವಿಧಿವಿಧಾನಗಳಲ್ಲೂ ಹಾಸುಹೊಕ್ಕಾಗಿದೆ.
ಒಂದು ಸರಳ ಉದಾಹರಣೆಯನ್ನು ತೆಗೆದುಕೊಳ್ಳುವುದಾದರೆ ರುದ್ರ ಪಠಣ.
ಅದು ಪರಶಿವನನ್ನು ಆರಾಧಿಸುತ್ತ ಆಶೀರ್ವಾದ ಬೇಡುವ ಸ್ತೋತ್ರ.
ರುದ್ರದಲ್ಲಿ ಒಟ್ಟು 11 ಅನುವಾಕಗಳು ಇವೆ.
ರುದ್ರದ ನಂತರ ಪಠಿಸುವ ’ಚಮಕ’ದಲ್ಲೂ ಒಟ್ಟು 11 ಭಾಗಗಳಿವೆ.
ಒಂದು ಸರ್ತಿ ರುದ್ರ ಮತ್ತು ಚಮಕಗಳನ್ನು ಪಠಿಸುವುದಕ್ಕೆ ದೈನಂದಿನ ’ನ್ಯಾಸ’ ಎಂದು ಹೆಸರು.
ವಿಶೇಷ ದಿನಗಳಲ್ಲಿ ಒಂದಕ್ಕಿಂತ ಹೆಚ್ಚು ಸರ್ತಿ ರುದ್ರಪಠಣ ನಡೆಯುತ್ತದೆ.
ಒಟ್ಟು 11 ಸರ್ತಿ ಪಠಿಸುವ ಪದ್ಧತಿಯಿದೆ.
ಹೀಗೆ 11 ಸರ್ತಿ ಪಠಿಸುವಾಗ ರುದ್ರದ ಒಂದು ಆವರ್ತನ ಮುಗಿಸಿ ಚಮಕದ ಒಂದು ಭಾಗ (ಹನ್ನೊಂದರಲ್ಲಿ ಒಂದು) ಪಠಿಸುತ್ತಾರೆ.
ರುದ್ರದ ಇನ್ನೊಂದು ಆವರ್ತನ ಮುಗಿಸಿದ ಮೇಲೆ ಚಮಕದ ಇನ್ನೊಂದು ಭಾಗ.
ಹೀಗೆ ಒಟ್ಟು 11 ಸರ್ತಿ ರುದ್ರವನ್ನು, ಮತ್ತು ಒಂದು ಸರ್ತಿ ಇಡೀ ಚಮಕವನ್ನು ಪಠಿಸುವುದಕ್ಕೆ "ಏಕಾದಶಿನೀ" ಎಂದು ಹೆಸರು.
ಅಂತಹ 11 ಏಕಾದಶಿನೀಗಳನ್ನು,
(ಅಂದರೆ 11X11 = 121 ಸರ್ತಿ ರುದ್ರವನ್ನು ಮತ್ತು 11 ಸರ್ತಿ ಚಮಕವನ್ನು)
ಪಠಿಸುವುದಕ್ಕೆ ’ಲಘುರುದ್ರ’ ಎನ್ನುತ್ತಾರೆ.
11 ಲಘುರುದ್ರಗಳು (ಅಂದರೆ 11X11X11 = 1331 ಸರ್ತಿ ರುದ್ರವನ್ನು ಮತ್ತು 121 ಸರ್ತಿ ಚಮಕವನ್ನು) ಪಠಿಸುವುದಕ್ಕೆ ’ಮಹಾರುದ್ರ’ ಎನ್ನುತ್ತಾರೆ.
11 ಮಹಾರುದ್ರಗಳು (ಅಂದರೆ 11X11X11X11 = 14641 ಸರ್ತಿ ರುದ್ರವನ್ನು, 1331 ಸರ್ತಿ ಚಮಕವನ್ನು) ಪಠಿಸುವುದಕ್ಕೆ ’ಅತಿರುದ್ರ’ ಎನ್ನುತ್ತಾರೆ.
’ಚಮಕ’ದಲ್ಲಿ ಮೊದಲ 10 ಅನುವಾಕಗಳಲ್ಲಿ ಮನುಷ್ಯನ ಆತ್ಮತೃಪ್ತಿ ಮತ್ತು ಸಂತೋಷಕ್ಕಾಗಿ ಏನು ಬೇಕೋ ಅವೆಲ್ಲವನ್ನೂ ಪರಮೇಶ್ವರನ ಬಳಿ ಪ್ರಾರ್ಥಿಸುವ ಮಂತ್ರಗಳಿವೆ.
ಆದರೆ, ಚಮಕದ 11ನೇ ಅನುವಾಕವು ಅತಿ ವಿಶಿಷ್ಟವಾದುದು.
ಅದರಲ್ಲಿ ಭಕ್ತನು ತನಗೆ ’ಏನು’ ಬೇಕು ಎಂದು ಕೇಳುವುದಿಲ್ಲ, ಬದಲಿಗೆ ’ಎಷ್ಟು’ ಪ್ರಮಾಣದಲ್ಲಿ ಬೇಕು ಎಂದು ಕೇಳಿಕೊಳ್ಳುತ್ತಾನೆ.
ಮೊದಲು 1 ರಿಂದ 33ರವರೆಗಿನ ಬೆಸ ಸಂಖ್ಯೆಗಳನ್ನು ಉಚ್ಚರಿಸಿ ಅಷ್ಟು ಪ್ರಮಾಣದಲ್ಲಿ ಬೇಕು ಎನ್ನುತ್ತಾನೆ.
ಆಮೇಲೆ 4 ರಿಂದ ಆರಂಭಿಸಿ 48ರವರೆಗೆ, ನಾಲ್ಕರ ಅಪವರ್ತ್ಯಗಳನ್ನು ಉಚ್ಚರಿಸಿ ಅಷ್ಟು ಪ್ರಮಾಣದಲ್ಲಿ ಬೇಕು ಎನ್ನುತ್ತಾನೆ.
ಸಂಸ್ಕೃತ ಸಂಖ್ಯೆಗಳ ರೂಪದಲ್ಲಿ ಮಂತ್ರವು ಹೀಗೆ ಇದೆ.:-
"ಏಕಾ ಚ ಮೇ
ತಿಸ್ರಶ್ಚ ಮೇ
ಪಂಚ ಚ ಮೇ
ಸಪ್ತ ಚ ಮೇ
ನವ ಚ ಮ
ಏಕಾದಶ ಚ ಮೇ
ತ್ರಯೋದಶ ಚ ಮೇ
ಪಂಚ ದಶ ಚ ಮೇ
ಸಪ್ತ ದಶ ಚ ಮೇ
ನವ ದಶ ಚ ಮ
ಏಕವಿಗ್೦ಶತಿಶ್ಚ ಮೇ
ಪಂಚವಿಗ್೦ಶತಿಶ್ಚ ಮೇ
ಸಪ್ತವಿಗ್೦ಶತಿಶ್ಚ ಮೇ
ನವವಿಗ್೦ಶತಿಶ್ಚ ಮ
ಏಕ ತ್ರಿಗ್೦ಶಚ್ಚ ಮೇ
ತ್ರಯಸ್ತ್ರಿಗ್೦ಶಚ್ಚ ಮೇ ||
ಚತಸ್ರಶ್ಚ ಮೇ
ಅಷ್ಟೌ ಚ ಮೇ
ದ್ವಾದಶ ಚ ಮೇ
ಷೋಡಶ ಚ ಮೇ
ವಿಗ್೦ಶತಿಶ್ಚ ಮೇ
ಚತುರ್ವಿಗ್೦ಶತಿಶ್ಚ ಮೇ
ಅಷ್ಟಾವಿಗ್೦ಶತಿಶ್ಚ ಮೇ
ದ್ವಾತ್ರಿಗ್೦ಶಚ್ಚ ಮೇ
ಷಟ್ತ್ರಿಗ್೦ಶಚ್ಚ ಮೇ ಚತ್ವಾರಿಗ್೦ಶಚ್ಚ ಮೇ
ಚತುಶ್ಚತ್ವಾರಿಗ್೦ಶಚ್ಚ ಮೇ
ಅಷ್ಟಾಚತ್ವಾರಿಗ್೦ ಶಚ್ಚ ಮೇ ||"
ಕನ್ನಡದಲ್ಲಿ ಹೇಳುವುದಾದರೆ -
"ನನಗೆ 1, 3, 5, 7 ,9, 11, 13,.... 27, 29, 31, 33 ಬೇಕು.
ಹಾಗೆಯೇ 4, 8,12,16, 20, 24..... 40, 44, 48 ಬೇಕು" ಎಂದು.
ಆದರೆ ಈ ಸಂಖ್ಯೆಗಳ ಗೂಢಾರ್ಥ ಏನು?
1 = ಪ್ರಕೃತಿ
3 = ಸತ್ವ, ರಜೋ, ತಮೋ ಗುಣಗಳು.
5 = ಭೂಮಿ, ನೀರು, ಅಗ್ನಿ, ವಾಯು, ಆಕಾಶ ಎಂಬ ಪಂಚಭೂತಗಳು
7 = ಐದು ಜ್ಞಾನೆಂದ್ರಿಯಗಳು ಹಾಗೂ ಮನಸ್ಸು ಮತ್ತು ಬುದ್ಧಿ.
9 = ನವರಂಧ್ರಗಳು
11 = ಹತ್ತು ಪ್ರಾಣಗಳು ಮತ್ತು ಸುಶುಮ್ನ ನಾಡಿ.
13 = ದೇವತೆಗಳು.
15 = ಮನುಷ್ಯದೇಹದಲ್ಲಿನ ನಾಡಿಗಳು.
17 = ಮನುಷ್ಯದೇಹದಲ್ಲಿನ ಅಂಗಾಂಗಗಳು.
19 = ಔಷಧೀಯ ಗಿಡಮೂಲಿಕೆಗಳು.
21 = ಮನುಷ್ಯದೇಹದ ಅತಿಮುಖ್ಯ ಭಾಗಗಳು.
23 = ಕಾಯಿಲೆಗಳನ್ನು ನಿಯಂತ್ರಿಸುವ ದೇವತೆಗಳು.
25 = ಸ್ವರ್ಗದಲ್ಲಿನ ಅಪ್ಸರೆಯರು.
27 = ಗಂಧರ್ವರು.
29 = ನಭೋಮಂಡಲ ದೇವತೆಗಳು.
31 = ಪ್ರಪಂಚಗಳು.
33 = ಕೋಟಿ ದೇವತೆಗಳು
4ರ ಅಪವರ್ತ್ಯಗಳು:--
4 = ಧರ್ಮ, ಅರ್ಥ, ಕಾಮ, ಮೋಕ್ಷ.
8 = ನಾಲ್ಕು ವೇದಗಳು ಮತ್ತು ನಾಲ್ಕು ಉಪವೇದಗಳು
12 = ಆರು ವೇದಾಂಗಗಳು ಮತ್ತು ಆರು ಶಾಸ್ತ್ರಗಳು.
16 = ದೇವರಿಂದ ಲಭಿಸಬೇಕಾದ ಜ್ಞಾನ
20 = ಮಹಾಭೂತಗಳು
24 = ಗಾಯತ್ರೀ ಛಂದಸ್ಸಿನಲ್ಲಿರುವ ಅಕ್ಷರಗಳು
28 = ಊಷ್ಣಿಕ್ ಛಂದಸ್ಸಿನಲ್ಲಿರುವ ಅಕ್ಷರಗಳು
32 = ಅನುಷ್ಟುಪ್ ಛಂದಸ್ಸಿನಲ್ಲಿರುವ ಅಕ್ಷರಗಳು
36 = ಬೃಹತೀ ಛಂದಸ್ಸಿನಲ್ಲಿರುವ ಅಕ್ಷರಗಳು
40 = ಪಂಕ್ತೀ ಛಂದಸ್ಸಿನಲ್ಲಿರುವ ಅಕ್ಷರಗಳು
44 = ತ್ರಿಷ್ಟುಪ್ ಛಂದಸ್ಸಿನಲ್ಲಿರುವ ಅಕ್ಷರಗಳು
48 = ಜಗತಿ ಛಂದಸ್ಸಿನಲ್ಲಿರುವ ಅಕ್ಷರಗಳು
ಕೆಲವು ವಿಜ್ಞಾನಿಗಳು ಈ ಸಂಖ್ಯೆಗಳನ್ನು ಮನುಷ್ಯ ದೇಹದಲ್ಲಿನ ಡಿಎನ್‌ಎ ಯುಗ್ಮಗಳ ಸಂಖ್ಯೆಗಳೊಂದಿಗೆ ತಳುಕುಹಾಕುತ್ತಾರೆ.
1 ರಿಂದ 33ರವರೆಗಿನ ಬೆಸಸಂಖ್ಯೆಗಳನ್ನು ಉಚ್ಚರಿಸಿರುವುದು 33,000 ಮೈಟೋಕಾಂಡ್ರಿಯಲ್ ಡಿಎನ್‌ಎ ಯುಗ್ಮಗಳನ್ನೂ (Base pairs),
4ರಿಂದ 48ರವರೆಗಿನ ಅಪವರ್ತ್ಯಗಳು 48 ದಶಲಕ್ಷ ನ್ಯೂಕ್ಲಿಯರ್ ಬೇಸ್ ಡಿಎನ್‌ಎಗಳನ್ನೂ ಪ್ರತಿನಿಧಿಸುತ್ತವೆ ಎನ್ನುತ್ತಾರೆ.
ಈ ಡಿಎನ್‌ಎ ಯುಗ್ಮಗಳು ಮನುಷ್ಯನ ದೈಹಿಕ ಉಚ್ಛ್ರಾಯಸ್ಥಿತಿಗೆ ಮೂಲಾಧಾರ ಎನ್ನುವುದನ್ನು ಜೀವವಿಜ್ಞಾನಿಗಳೂ ಪ್ರತಿಪಾದಿಸಿದ್ದಾರೆ.
ನಮ್ಮ ಪುರಾತನ ಹಿಂದೂಗಳ ಬುದ್ಧಿ ಶಕ್ತಿಯ Power ನಂಬಲಸಾಧ್ಯ..!!
ವೇದ ಉಪನಿಷತ್ ಮಂತ್ರಗಳ ಅರ್ಥ, ಜನಸಾಮಾನ್ಯರಿಗೆ ಯಾಕೆ Tough ಎಂಬುದು ಈಗ ಅರ್ಥವಾಯಿತಲ್ಲವೇ..
जय नरसिम्हा
***
No comments:
Post a Comment