ಶೇಂಗಾ ಉಪಯೋಗಗಳು
ಶೇಂಗಾದಲ್ಲಿದೆ ಪುರುಷರ ಮತ್ತು ಮಹಿಳೆಯರ ಆರೋಗ್ಯದ ಗುಟ್ಟು :
ನೆನೆಸಿದ ಶೇಂಗಾ ಮತ್ತು ಬೆಲ್ಲದ ಪ್ರಯೋಜನಗಳ ಬಗ್ಗೆ ಇಂದು ನಾವು ನಿಮಗಾಗಿ ತಂದಿದ್ದೇವೆ. ಏಕೆಂದರೆ ಬೆಲ್ಲ ಜೊತೆ ನೆನೆಸಿದ ಶೇಂಗಾ ಸೇವಿಸುವುದರಿಂದ ದೇಹವನ್ನು ಅನೇಕ ಗಂಭೀರ ಕಾಯಿಲೆಗಳಿಂದ ರಕ್ಷಿಸುತ್ತದೆ. ವಾಸ್ತವವಾಗಿ, ಶೇಂಗಾ ಮತ್ತು ಬೆಲ್ಲ ಎರಡೂ ಹೆಚ್ಚಿನ ಪ್ರಮಾಣದ ಫೈಬರ್ ಅನ್ನು ಹೊಂದಿರುತ್ತವೆ, ಇದು ಹೊಟ್ಟೆಯ ಕಾಯಿಲೆಗಳನ್ನು ಸುಲಭವಾಗಿ ನಿವಾರಿಸುತ್ತದೆ. ಇದರೊಂದಿಗೆ, ಚಯಾಪಚಯ ಕ್ರಿಯೆಯನ್ನು ಸುಲಭವಾಗಿ ವೇಗಗೊಳಿಸುವಂತಹ ಗುಣಲಕ್ಷಣಗಳನ್ನು ಹೊಂದಿವೆ. ಇದರೊಂದಿಗೆ ನೀವು ಶಕ್ತಿಯನ್ನು ಪಡೆಯುತ್ತೀರಿ ಮತ್ತು ದೇಹದ ತೂಕ ಕಡಿಮೆ ಮಾಡಲು ಸಹಾಯ ಮಾಡುತ್ತದೆ.
ಕಡಲೆಕಾಯಿಯಲ್ಲಿ ಏನು ಕಂಡುಬರುತ್ತದೆ :
ಮೊದಲನೆಯದಾಗಿ, ಶೇಂಗಾ(Peanuts)ದಲ್ಲಿ ಏನಿದೆ ಎಂದು ನೋಡೋಣ. ದೇಹಕ್ಕೆ ಬಹಳ ಮುಖ್ಯವೆಂದು ಪರಿಗಣಿಸಲಾದ ಪ್ರೋಟೀನ್, ಕೊಬ್ಬು, ಜೀವಸತ್ವಗಳು, ಫೈಬರ್, ಆಂಟಿಆಕ್ಸಿಡೆಂಟ್ಗಳು ಮತ್ತು ಕ್ಯಾಲ್ಸಿಯಂನಂತಹ ಅಗತ್ಯವಾದ ಖನಿಜಗಳಲ್ಲಿ ಕಡಲೆಕಾಯಿಗಳು ಕಂಡುಬರುತ್ತವೆ.
ಕಡಲೆಕಾಯಿ ತಿನ್ನುವುದರ ಪ್ರಯೋಜನಗಳು :
1. ರಕ್ತದಲ್ಲಿನ ಸಕ್ಕರೆಯನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ:
ಶೇಂಗಾ ಅಪರ್ಯಾಪ್ತ ಕೊಬ್ಬನ್ನು ಹೊಂದಿರುತ್ತವೆ, ಇದು ಇನ್ಸುಲಿನ್(Insulin) ಸೂಕ್ಷ್ಮತೆಯನ್ನು ಸುಧಾರಿಸಲು ಸಹಾಯ ಮಾಡುತ್ತದೆ. ಇದನ್ನು ನಿಯಮಿತವಾಗಿ ಸೇವಿಸುವುದರಿಂದ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ತುಂಬಾ ಸುಲಭವಾಗುತ್ತದೆ.
2. ರಕ್ತಹೀನತೆ ನಿವಾರಣೆಗೆ :
ನೆನೆಸಿದ ಶೇಂಗಾ ಬೇಸಿಗೆಯಲ್ಲಿಯೂ ತಿನ್ನಬೇಕು. ನೆನೆಸಿದ ಶೇಂಗಾ ಸೇವಿಸುವುದರಿಂದ ದೇಹದಲ್ಲಿನ ಕಬ್ಬಿಣದ ಕೊರತೆಯನ್ನು ನಿವಾರಿಸುತ್ತದೆ, ಇದು ದೇಹದಲ್ಲಿನ ರಕ್ತ(Blood)ದ ಕೊರತೆಯನ್ನು ತೆಗೆದುಹಾಕುತ್ತದೆ ಮತ್ತು ರಕ್ತ ಪರಿಚಲನೆ ಚೆನ್ನಾಗಿರುತ್ತದೆ.
3. ಚರ್ಮವನ್ನು ಆರೋಗ್ಯಕ್ಕೆ ಶೇಂಗಾ :
ಚರ್ಮ(Skin)ವನ್ನು ಹೊಳೆಯುವಂತೆ ಮಾಡಲು ಕಡಲೆಕಾಯಿ ಸಹಕಾರಿಯಾಗಿದೆ. ಇದು ಒಮೆಗಾ 6 ಕೊಬ್ಬನ್ನು ಹೊಂದಿರುತ್ತದೆ, ಇದು ಚರ್ಮಕ್ಕೆ ತುಂಬಾ ಪ್ರಯೋಜನಕಾರಿಯಾಗಿದೆ.
4. ಮಲಬದ್ಧತೆಯ ಸಮಸ್ಯೆಯನ್ನು ನಿವಾರಿಸಲು ಶೇಂಗಾ :
ನಿಮಗೆ ಮಲಬದ್ಧತೆ(Loose Motion) ಸಮಸ್ಯೆ ಇದ್ದರೆ ವಾರಕ್ಕೆ 100 ಗ್ರಾಂ ಶೇಂಗಾ ತಿನ್ನಿರಿ. ಹೀಗೆ ಮಾಡುವುದರಿಂದ, ಶೇಂಗಾದಲ್ಲಿರುವ ಅಂಶಗಳು ನಿಮ್ಮ ಹೊಟ್ಟೆಗೆ ಸಂಬಂಧಿಸಿದ ಎಲ್ಲಾ ಸಮಸ್ಯೆಗಳಿಗೆ ಪರಿಹಾರ ನೀಡುತ್ತದೆ ಮತ್ತು ಮಲಬದ್ಧತೆ ಸಮಸ್ಯೆ ದೂರವಾಗುತ್ತದೆ.
5. ದೇಹಕ್ಕೆ ಶಕ್ತಿ ಪಡೆಯಲು ಶೇಂಗಾ :
ಬಾದಾಮಿ(Badami) ಮತ್ತು ಮೊಟ್ಟೆ ಸೇವನೆಯಿಂದ ದೇಹಕ್ಕೆ ಶಕ್ತಿ ದೊರೆಯುವಂತೆ. ಅದೇ ರೀತಿ ಶೇಂಗಾ ತಿನ್ನುವುದರಿಂದ ನಿಮ್ಮ ದೇಹಕ್ಕೆ ಶಕ್ತಿಯನ್ನು ನೀಡುತ್ತದೆ.
ಪುರುಷರು ಮತ್ತು ಮಹಿಳೆಯರ ಆರೋಗ್ಯಕ್ಕೆ ಶೇಂಗಾ :
ಪುರುಷರು(Men) ಮತ್ತು ಮಹಿಳೆಯರಲ್ಲಿ ಲೈಂಗಿಕ ಹಾರ್ಮೋನುಗಳು ಪ್ರತಿದಿನ ಕಡಲೆಕಾಯಿಯನ್ನು ತಿನ್ನುವುದರಿಂದ ಸಮತೋಲನಗೊಳ್ಳುತ್ತದೆ. ಇದು ನಿಮ್ಮ ಲೈಂಗಿಕ ಜೀವನವನ್ನು ಉತ್ತಮ ಸ್ಥಿತಿಯಲ್ಲಿರಿಸುತ್ತದೆ.
ಯಾವ ಸಮಯದಲ್ಲಿ ಶೇಂಗಾ ಸೇವಿಸಬೇಕು :
ನೀವು ದಿನ ರಾತ್ರಿ(Night) ಮಲಗುವ ಮೊದಲು ಶೇಂಗಾವನ್ನ ನೀರಿನಲ್ಲಿ ನೆನೆಯಲು ಇಡಬೇಕು ಎಂದು ಆರೋಗ್ಯ ತಜ್ಞರು ಹೇಳುತ್ತಾರೆ, ಇದರಿಂದ ಅದರಲ್ಲಿರುವ ಪಿತ್ತರಸವನ್ನು ಬಿಡುತ್ತದೆ. ಅವುಗಳನ್ನ ಬೆಳಿಗ್ಗೆ ನೀವು ಉಪಾಹಾರಕ್ಕೆ ಮೊದಲು ಅಥವಾ ಅದರೊಂದಿಗೆ ತಿನ್ನಬಹುದು. ರಾತ್ರಿ ಶೇಂಗಾ ಸೇವಿಸಬಾರದು. ಏಕೆಂದರೆ ಕಡಲೆಕಾಯಿ ಜೀರ್ಣಿಸಿಕೊಳ್ಳಲು ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ.
****
important
ಶೇಂಗಾ ತಿಂದು ನೀರು ಕುಡಿತೀರಾ. ಹಾಗಿದ್ರೆ ಈ ಸತ್ಯ ಮೊದಲು ತಿಳಿದುಕೊಳ್ಳಿ.ಹಾಯ್ ಹಲೋ ನಮಸ್ಕಾರ ಎಲ್ಲರಿಗೂ ಶೇಂಗಾ ನಮ್ಮ ದೇಹಕ್ಕೆ ಖಂಡಿತವಾಗಿಯೂ ತುಂಬಾನೆ ಒಳ್ಳೆಯದು. ಇದರಲ್ಲಿ ಪ್ರೊಟೀನ್ ಇರುತ್ತೆ ನಮಗೆ ಫೈಬರ್ ಅಥವಾ ನಾರಿನಾಂಶ ಸಿಗುತ್ತದೆ. ಇದರಿಂದಾಗಿ ದೇಹ ಬೆಚ್ಚಗೆ ಇರುವುದಕ್ಕೆ ಇದು ಹೆಲ್ಪ್ ಮಾಡುತ್ತದೆ. ಹಾಗೇನೆ ಸ್ಟ್ರೆಸ್ ಅಥವಾ ಮಾನಸಿಕ ಒತ್ತಡವನ್ನು ಕಡಿಮೆ ಮಾಡಿಕೊಳ್ಳುವುದಕ್ಕೆ ಕೂಡ ತುಂಬಾನೇ ಹೆಲ್ಪ್ ಆಗುತ್ತೆ. ಈ ಶೇಂಗಾ. ಹಾಗೇನೆ ಗರ್ಭಿಣಿ ಸ್ತ್ರೀಯರಿಗೆತುಂಬಾನೆ ಒಳ್ಳೆಯದು ಇದರಲ್ಲಿ ಫಾಲಿಕ್ ಆಸಿಡ್ ಸಿಗುತ್ತೆ ನಮಗೆ. ಸೋ ನ್ಯಾಚುರಲ್ ಫಾಲಿಕ್ ಆಸಿಡ್ ಅಂತಾನೆ ಹೇಳಬಹುದು. ನಾವು ಶೇಂಗಾವನ್ನು ಬಳಸುವುದರಿಂದ ನಮಗೆ ಸಿಗುತ್ತದೆ. ಹಾಗೆಯೇ ನಮ್ಮ ಕಣ್ಣುಗಳಿಗೆ ಮೂಲೆಗಳಿಗೆ ಎಲ್ಲದಕ್ಕೂ ಕೂಡ ತುಂಬಾನೆ ಒಳ್ಳೆಯದು ಈ ಶೇಂಗಾ. ಆದರೆ ಈ ಶೇಂಗಾ ತಿಂದು ನೀರು ಕುಡಿಯಬಾರದು ಇಮ್ಮಿಡಿಯೆಟ್ಲಿ. ನಮಗೆ ಯಾವಾಗಲೂ ಎಲ್ಲರೂ ಹೇಳುತ್ತಿರುತ್ತಾರೆ. ಹಾಗಾದ್ರೆ ಯಾಕೆ ಶೇಂಗಾ ತಿಂದ ತಕ್ಷಣ ನೀರನ್ನು ಕುಡಿಯಬಾರದು. ಕುಡಿದರೆ ಏನು ಪ್ರಾಬ್ಲಮ್ ಆಗುತ್ತೆ ಅನ್ನುವುದನ್ನುಇವತ್ತಿನ ಮಾಹಿತಿ ನಿಮಗೆ ತಿಳಿಸಿ ಕೊಡುತ್ತಿದ್ದೇನೆ. ಈ ಮಾಹಿತಿಯನ್ನು ಮಿಸ್ ಮಾಡದೆ ಕೊನೆಯ ತನಕ ಓದುವುದನ್ನು ಮರೆಯಬೇಡಿ.ನಾರ್ಮಲಿ ಶೇಂಗಾ ದಲ್ಲಿ ಕೊಬ್ಬಿನ ಪ್ರಮಾಣ ಜಾಸ್ತಿ ಇರುತ್ತೆ ಅಲ್ವಾ. ಖಂಡಿತವಾಗಿಯೂ ಒಳ್ಳೆಯ ಕೊಬ್ಬು. ಆದರೆ ನಾವು ಶೇಂಗಾ ತಿಂದ ತಕ್ಷಣವೇ ನೀರು ಕುಡಿಯುವುದರಿಂದ ಅದರಲ್ಲಿ ಇರುವಂತಹ ಕೊಬ್ಬು ನಮಗೆ ಬೊಜ್ಜ ಆಗಿ ಕನ್ವರ್ಟ್ ಆಗುತ್ತದೆ. ಎಣ್ಣೆ ಮತ್ತು ನೀರು ಮಿಕ್ಸ್ ಆದಾಗ ನಮ್ಮ ದೇಹದಲ್ಲಿ ಅದು ಬಜ್ಜಿ ನತರ ಶೇಖರಣೆಯಾಗುತ್ತದೆ. ಇದರಿಂದಾಗಿ ತೂಕ ಜಾಸ್ತಿ ಆಗಬಹುದು. ತೂಕದ ಜೊತೆಗೆ ಬೊಜ್ಜಿನ ಸಮಸ್ಯೆ ಎಲ್ಲವೂ ಕೂಡ ಕಾಡುವುದಕ್ಕೆ ಸ್ಟಾರ್ಟ್ ಆಗುತ್ತದೆ.ಇನ್ನು ತುಂಬಾ ಜನರಿಗೆ ಗೊತ್ತಿರುವ ಹಾಗೆ ಶೇಂಗಾ ಸ್ವಲ್ಪ ಉಷ್ಣ ಪ್ರಭಾವವನ್ನು ಬೀರುತ್ತದೆ. ನಮ್ಮ ದೇಹದಲ್ಲಿ ಉಷ್ಣತೆ ಜಾಸ್ತಿ ಮಾಡುವಂತಹ ಅಂಶ ಇದೆ ಇದರಲ್ಲಿ. ಹಾಗೇನೆ ನೀರು ತುಂಬಾನೇ ತಂಪು ನಮ್ಮ ದೇಹಕ್ಕೆ. ಅದರಿಂದಾಗಿ ಉಷ್ಣ ತಂಪು ಎರಡನ್ನು ಜೊತೆ ಜೊತೆಯಲ್ಲಿ ನಾವು ಯೂಸ್ ಮಾಡಿದ್ದಾಗ ನಾವು ಬಳಸಿದಾಗ ಏನು ಆಗುತ್ತದೆ. ಬೇರೆ ಬೇರೆ ರೀತಿಯ ಇನ್ಸ್ಪೆಕ್ಷನ್ಸ್ ಎಲ್ಲವೂ ಕೂಡ ಆಗಬಹುದು. ಅಲರ್ಜಿ ತರ ಆಗಬಹುದು. ಇನ್ನು ಕೆಲವರಿಗೆ ಶೀತ ಗಂಟಲು ಕಿರಿಕಿರಿ ಹಾಗೇನೆ ಒಣಕೆಮ್ಮು ತರ ಎಲ್ಲಾ ಆಗುವುದು ಎಲ್ಲ ಕೂಡ ಸ್ಟಾರ್ಟ್ ಆಗಬಹುದು ಶೇಂಗಾ ತಿಂದ ತಕ್ಷಣ ನೀರು ಕುಡಿದರೆ.
***
No comments:
Post a Comment