SEARCH HERE

Friday 1 October 2021

ಬೇಲ

 ಬೇಲ

ಬೇಲದ ಎಲ್ಲಾ ಭಾಗಗಳು- ಬೇರು, ಎಲೆ, ಕಾಂಡ, ಹಣ್ಣು ಮತ್ತು ಬೀಜದ ಬೀಜಗಳು ವಿವಿಧf ರೋಗಗಳ ಚಿಕಿತ್ಸೆಯಲ್ಲಿ ಉಪಯೋಗ ಮಾಡಲಾಗುತ್ತದೆ.

: ಆಸ್ತಮಾ ವಿರೋಧಿ ಗುಣಲಕ್ಷಣಗಳಿಂದ ಕೂಡಿದ ಬೇಲದ ಹಣ್ಣು, ನೆಗಡಿ, ಕೆಮ್ಮು ಮತ್ತು ಜ್ವರ ರೋಗಲಕ್ಷಣಗಳಿಗೆ ಚಿಕಿತ್ಸೆ ನೀಡುವಲ್ಲಿ ಹೆಚ್ಚಿನ  ಪ್ರಯೋಜನ ನೀಡುತ್ತದೆ. ಬ್ರಾಂಕೈಟಿಸ್ ಮತ್ತು ಆಸ್ತಮಾ ಪರಿಸ್ಥಿತಿಗಳಿಗೆ ಚಿಕಿತ್ಸೆ ನೀಡಲು ಸಹ ಇದು ಮುಖ್ಯವಾಗುತ್ತದೆ.

  ಬೇಲದ ಹಣ್ಣಿನ ಪಾನಕ ಅತಿಸಾರವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಅತಿಸಾರ  ಸೋಂಕಿನ ವಿರುದ್ಧ ಹೋರಾಡುವಲ್ಲಿ ಪ್ರಮುಖ ಪಾತ್ರವಹಿಸುತ್ತದೆ.

ತುರಿಕೆ ಮತ್ತು ತಲೆಹೊಟ್ಟು ಮುಂತಾದ ವಿವಿಧ  ಕೂದಲಲಿನ ಸಮಸ್ಯೆಗೆ ಇದರ ಸೋಪ್ಪಿನ ಕಷಾಯ ದಲ್ಲಿ ತಲೆತೊಳೆದರೆ ಉತ್ತಮ ಪರಿಣಾಮ ಕಾರಿ.

 ಚರ್ಮದ ದದ್ದು ಮತ್ತು ತುರಿಕೆಶಗಳಿಗೂ ಇದು ಪ್ರಯೋಜನಕಾರಿ.

: ಇದು ಮಲಬದ್ಧತೆಯನ್ನು ಉಂಟುಮಾಡುವ  ಗುಣಗಳನ್ನು ಹೊಂದಿದೆ.ಹೆಚ್ಚಾದರೆ ಆಮಾಅತಿಸಾರ ಉಂಟಾಗುತ್ತದೆ.

ಬೇಸಿಗೆಯಲ್ಲಿ ಇದರ ಪಾನಕ ಬಾಯಾರಿಕೆ ,ಆಯಾಸ, ತಲೆತಿರುಗುವಿಕೆ ಯನ್ನು ಗುಣಪಡಿಸುತ್ತದೆ.

ತೊಕ್ಕು.....ಮುಂತಾದ ಅಹಾರದಲ್ಲಿ ಬಳಸಬಹುದಾದ ಬೇಲ ಅಹಾರವೂ ಔಷಧಿ ಯೂ ಹೌದು.

***


No comments:

Post a Comment