SEARCH HERE

Tuesday, 1 January 2019

ಭೋಗಿ ಹಬ್ಬ bhogi habba dakshinayana last day in january










Know contents of Bagina
click 
    ಮರದ ಬಾಗಿನ 

**********

ಭೋಗಿ ಅಂದರೆ ಏನು ? ಭೋಗಿ ಆಚರಿಸುವ ಹಿನ್ನಲೆ ಏನು? ಅದರ ಫಲಗಳೇನು ? ಭೋಗಿ ಕೊಡುವ ಸಾಮಗ್ರಿಗಳು ಯಾವವು ?


ದಕ್ಷಿಣಾಯಣದ ಕೊನೆಯ ದಿನ. ಮಾರನೇಯ ದಿನ ಸೂರ್ಯ ತನ್ನ ಪಥವನ್ನು ಬದಲಿಸುತ್ತಾನೆ . ಅಂದರೆ ಸೂರ್ಯ ಧನು ರಾಶಿಯಿಂದ ಮಕರ ರಾಶಿಗೆ ಪ್ರವೇಶಿಸಿದಾಗ ಉತ್ತರಾಯಣದ ಪರ್ವ ಕಾಲ ಶುರುವಾಗುತ್ತದೆ...‌ ಅದಕ್ಕೆ ನಾವು ದಕ್ಷಿಣಾಯಣದ ಕೊನೆಯ ದಿನ ಮತ್ತು ಧನುರ್ಮಾಸದ ಕೊನೆಯ ದಿನವನ್ನು ನಾವು ಭೋಗಿ ಅಂತ ಹೇಳತೇವೆ . ಎನು ನಾವು ಧನುರ್ಮಾಸದ ಒಂದು ತಿಂಗಳ ಪೂರ್ಣ ದೇವರಿಗೆ ಹುಗ್ಗಿ ನೈವೇದ್ಯ ವನ್ನು ಸುರ್ಯೋದಯ ಒಳಗೆ ಮಾಡಿರತೇವೆ, ಕೊನೆಯ ದಿನ ಆ ಎಲ್ಲ ಸಾಮಗ್ರಿಗಳನ್ನು ಒಂದು ಮುತ್ತೈದೆಯನ್ನ ಕರೆದು ಮರದ ಬಾಗಿಣ ರೂಪದಲ್ಲಿ ಕೊಡುವದೇ ಭೋಗಿ. ನೆನಪಿಟ್ಟು ಕೊಳ್ಳಿ ನೀವು ಧನುರ್ಮಾಸದಲಿ ಒಂದಿನಾನೂ ಭಗವಂತನಿಗೆ ಹುಗ್ಗಿ ನೈವೇದ್ಯ ಮಾಡಿಲ್ಲದಿದ್ದರೆ ನಿಮಗೆ ಭೋಗಿ ಕೊನೆಯ ಅವಕಾಶ , ಆ ದಿನ ಭೋಗಿಯನ್ನು ಕೊಟ್ಟು ದೇವರಿಗೆ ಹುಗ್ಗಿ ನೈವೇದ್ಯ ಮಾಡಿ ಇಲ್ಲದಿದ್ದರೆ ದಾರಿದ್ರ್ಯತೆಗೆ ನಾವೇ ದಾರಿ ಮಾಡಿ ಕೊಟ್ಟಂತೆ. ಭಗವಂತ ನಮಗೆ ಎಲ್ಲ ರೀತಿಯ ಸೌಕರ್ಯಗಳನ್ನು ಕೊಟ್ಟಾಗ ಒಂದು ತುತ್ತು ಭಗವಂತನ ಹೆಸರು ಹೇಳದೆ ತಿಂದರೆ ಅದು ಪಾಪಾನೇ ಸರಿ , ಆದ್ದರಿಂದ ಭೋಗಿಯನ್ನು ಕೊಡಿ ಭೋಗಿ ಕೊಡುವದರಿಂದ ದಾರಿದ್ರ್ಯ ದೂರವಾಗುತ್ತೆ.. ಅಲ್ಲದೇ ಪಿತೃಗಳು ಕೂಡಾ ತೃಪ್ತಿಯಾಗುತ್ತಾರೆ...
ಮರದ ಬಾಗಿಣವನ್ನು ಕೊಡುವಾಗ ಒಂದು ವಿಷಯ ನೆನಪಿಟ್ಟುಕೊಳ್ಳಿ . ಆದಷ್ಟು ಮುಟ್ಟು ಮೈಲಿಗೆ ಪಾಲಿಸುವಂತ ಮತ್ತು ಮನೆಯಲ್ಲಿ ಪೂಜೆ ಅಡುಗೆ ನೈವೇದ್ಯ ಮಾಡುವಂತವರಿಗೆ ಕೊಡಿ . ... ಆ ದಿನ ಮರದ ಬಾಗಿನವನ್ನು ಸುರ್ಯೋದಯ ಒಳಗೆ ಕೊಟ್ಟು ಹೆಣ್ಣು ಮಕ್ಕಳು ಎಣ್ಣೆ ಅರಿಶಿನ ಹಚ್ಚಿಕೊಂಡು ತಲೆ ಸ್ನಾನ ಮಾಡಬೇಕು. ಆದಿನ ಮುತ್ತೈದೆಯರು ಕಣ್ಣಿಗೆ ಕಾಡಿಗೆ ಸಿಂಧೂರ ಬಳೆ ಎಲ್ಲ ಅಲಂಕಾರಗಳನ್ನು ಪತಿಯ ಆಯುಷ್ಯ ಅಭಿವೃದ್ಧಿ ಬಯಸುವವರು ಆ ಎಲ್ಲ ಅಲಂಕಾರ ವಸ್ತುಗಳನ್ನು ಧರಿಸಬೇಕು .ಇದು ಶಾಸ್ತ್ರ ಸಮ್ಮತ.....‌ ಇನ್ನು ಯಾವ ರೀತಿ ಮರದ ಬಾಗಿಣ ಕೊಡಬೇಕು ಯಾವ ಯಾವ ವಸ್ತುಗಳನ್ನು ಇಟ್ಟು ಕೊಡಬೇಕು ಪಟ್ಟಿ ಇದೆ ನೋಡಿ...‌‌.. ಮರದ ಬಾಗಿಣ ಕೊಡುವಾಗ ಮರವನ್ನು ರಂಗೋಲಿ ಹಾಕಿ ಇಡಬೇಕು... ಮತ್ತು ತುಪ್ಪದ ದೀಪ ಗೆಜ್ಜೆವಸ್ತ್ರ ನೈವೇದ್ಯ ಕ್ಕೆ ಸಕ್ಕರೆ ಎಲ್ಲ ಸಾಮಗ್ರಿಗಳನ್ನು ಮರದ ಪೂಜೆಗೆ ಸಿದ್ಧಗೊಳಿಸಿ....ಮತ್ತೆ ಎನಾದರೂ ತಿಳಿಯದಿದ್ದಲ್ಲಿ ಖಂಡಿತಾ ಕೇಳಿ.
-ವೀಣಾ ಜೋಶಿ..
****

ಭೋಗಿ #ಹಬ್ಬ – by sri narahari sumadhwa

 ಭೋಗಿ ಹಬ್ಬವು ಸಂಕ್ರಾಂತಿ ಆಚರಣೆಯ ಮೊದಲ ಹಬ್ಬವಾಗಿದೆ.  ಈದಿನ‌ ದೇವೇಂದ್ರನನ್ನು ಪೂಜಿಸುವುದು ವಾಡಿಕೆ ಏಕೆಂದರೆ ದೇವೇಂದ್ರನು ಮಳೆಯ ದೇವತೆ. ಭೂಮಿಗೆ ಸುಭಿಕ್ಷ ಬರಲಿ ಎಂದು ಕೇಳುತ್ತಾ ಈ ಹಬ್ಬವನ್ನು ಆಚರಿಸುತ್ತಾರೆ. ಈದಿನ ನಮ್ಮ ಮನೆಯನ್ನು ಸ್ವಚ್ಛಗೊಳಿಸಿ, ತಳಿರುತೋರಣದಿಂದ ಅಲಂಕಾರ ಮಾಡುತ್ತಾರೆ. ಮನೆಯ ಮುಂದೆ ಸೆಗಣಿಯಿಂದ ಸಾರಿಸುತ್ತಾರೆ.  ಈದಿನ ಸಿಹಿಗುಂಬಳ ಕಾಯಿಯ ಪಲ್ಯ, ರೊಟ್ಟಿ ಮಾಡುತ್ತಾರೆ.

ಹೆಣ್ಣು ಮಕ್ಕಳು ಯೋಗ್ಯರಾದ ಮುತ್ತೈದೆಯರಿಗೆ ಮರದ ಬಾಗಿನ ಕೊಡತಕ್ಕದ್ದು.

ಮೊರದ ಬಾಗಿನದಲ್ಲಿ ಇಡತಕ್ಕಂತಹ ವಸ್ತುಗಳು :
ಅಕ್ಕಿ, ಬೇಳೆಗಳು, ಎಳ್ಳು, ಉಪ್ಪು, ಹುಣಿಸೇ ಹಣ್ಣು, ದೇವರ ದೀಪಕ್ಕೆ ಉಪಯೋಗಿಸುವ ಬತ್ತಿಗಳು, ಬೆಲ್ಲ, ಧನಿಯ, ಜೀರಿಗೆ, ಲವಂಗ, ಮೆಣಸು, ಇಂಗು, ಎಣ್ಣೆ, ತುಪ್ಪ, ಕೊಬ್ಬರಿ, ಅರಿಶಿಣ, ಕುಂಕುಮ, ಅನಿಷಿದ್ಧ ಹಣ್ಣುಗಳು, ತರಕಾರಿ, ಹಾಲು, ಮೊಸರು, ಬಾಚಣಿಕೆ, ಬಿಚ್ಚೋಲೆ, ಕರಿಮಣಿ, ಕುಪ್ಪಸದ ಕಣ, ಕನ್ನಡಿ, ಬಳೆ, ಕಾಡಿಗೆ, ವಿಳ್ಳೇದೆಲೆ, ಅಡಕೆ, ದಕ್ಷಿಣೆ.
ಇದೆಲ್ಲವನ್ನೂ ಸಿದ್ಧಪಡಿಸಿ, ದೀಪವನ್ನು ಹಚ್ಚಿ, ದೇವರ ಮುಂದಿಟ್ಟು, ದೇವರಿಗೆ ಸಮರ್ಪಿಸಿ, ಆಹ್ವಾನಿತ ಮುತ್ತೈದೆಯ ಪಾದ ಪೂಜೆ ಮಾಡಿ, ಪೂರ್ವಾಭಿಮುಖವಾಗಿ ಮಣೆ ಅಥವಾ ಚಾಪೆಯ ಮೇಎ ಕೂಡಿಸಿ, (ಬರೀ ನೆಲದ ಮೇಲ ಕೂಡಿಸಬೇಡಿ), ಕುಂಕುಮ ಕೊಟ್ಟು, ಅರಿಶಿನ ಕೊಟ್ಟು, ತಲೆ ಬಾಚಿ, ಹೂವು ಮುಡಿಸಿ, ಕಣ್ಣಿಗೆ ಕಾಡಿಗೆ ಹಚ್ಚಿ, ಕನ್ನಡಿಯಿಂದ ಅವರ ಮುಖವನ್ನು ತೋರಿಸಿ, ವಿಳ್ಳೇದೆಲೆ ಆದಕೆ ದಕ್ಷಿಣೆ ಕೊಟ್ಟು, ಕೊಡುವವರ ಸೆರಗು ಮತ್ತು ಪಡೆದುಕೊಳ್ಳುವವರ ಸೆರಗು ಮೊರದ ಬಾಗಿನದ ಮೇಲೆ ಹರಡಿ ಮೂರು ಬಾರಿ ತೂಗಿ, ದಾನ ಕೊಟ್ಟು, ನಂತರ ಮೊರದ ಬಾಗಿನದ ಮೇಲಿನ ಮೊರವನ್ನು ತೆಗೆದು ಮುತ್ತೈದೆಗೆ ತೋರಿಸಬೇಕು. ನಂತರ ಮುತ್ತೈಗೆ ನಮಸ್ಕರಿಸಿ ಆಶೀರ್ವಾದ ಪಡೆಯಬೇಕು

ಮರದ ಬಾಗಿನ ಕೊಡುವವರು ಹೇಳತಕ್ಕದ್ದು :
ರಾಮಪತ್ನೀ ಮಹಾಭಾಗೇ ಪುಣ್ಯಮೂರ್ತೇ ನಿರಾಮಯೇ |
ಮಯಾದತ್ತಾನಿ ಶೂರ್ಪಾಣಿ ತ್ವಯಾ ಸ್ವೀಕೃತಾ ಜಾನಕೀ |

ಮರದ ಬಾಗಿನ ಪಡೆಯುವವರು ಹೇಳತಕ್ಕದ್ದು :
ರಾಮಪತ್ನೀ ಮಹಾಭಾಗೇ ಪುಣ್ಯಮೂರ್ತೇ ನಿರಾಮಯೇ |
ತ್ವಯಾ ದತ್ತಾನಿ ಶೂರ್ಪಾಣಿ ಮಯಾ ಸ್ವೀಕೃತಾ ಜಾನಕೀ |

Bhogi is the first festival day of Sankranthi and is celebrated with the worship of Devendra, the God of Rains. Lord Indra is worshiped for the providing satisfactory harvest, thereby bringing plenty and prosperity to the land.  On Bhogi day, we clean our homes and throw unwanted things.  This is usually celebrated the day prior to Sankranthi/pongal, usually on 13th or 14th of January every year. On Bhogi Festival day, usually the following  Rituals are performed.
Cleaning the house and decoration of the house with mango leaves and plantains.
House is also cleaned with cow dung {ಸೆಗಣಿ}.  { Daily we have to clean our house with cow dung}.
On this day, rotti to be made of sihigumbala kayi (ಸಿಹಿಗುಂಬಳ).   Even Palya (ಪಲ್ಯ) also to be made of ಸಿಹಿಗುಂಬಳ (sihigumbala).   In Tamilnadu, they  celebrate with great enthusiasm.During evening, elachi hannu (ಎಲಚಿ ಹಣ್ಣು ) will be poured and arathi to be done to children below 5 years of age.
ಮರದ ಬಾಗಿನ (marada baagina) to be given to muthaideyaru.

Sumadhwa seva
***




No comments:

Post a Comment